Tuesday, 30 April 2019

vidyapayonidhi teertharu tirumakudlu 1997 matha vyasaraja mutt yati 38 bhadrapada bahula dashami ವಿದ್ಯಾಪಯೋನಿಧಿ ತೀರ್ಥರು

*




sushmeendra vidyapayonidhi vignananidhi


info from madhwamruta.org--->

Sri. Vidyapayonidhi Theertha

period 1969 - 1997

Poorvashrama Name  –  Poornabhodacharya

Ashrama guru             –  Sri Vidya Prasanna Theertha

Ashrama Shishya         –  Sri Vidya Vachaspati Theertha

Aradhana                     – Bhadrapada Bahula Dashami

Vrundavana Place      – Tirumakoodalu



ಶ್ರೀಕೃಷ್ಣಚರಣಾಂಭೋಜಯುಗಳಾಸಕ್ತಮಾನಸಾನ್
ವಿದ್ಯಾಪಯೋನಿಧಿಗುರೂನ್ ವಂದೇಽಹಂ ಬುದ್ಧಿಶುದ್ಧಯೇ
SrIkRuShNacaraNAMbhOjayugaLAsaktamAnasAn
vidyApayOnidhigurUn vaMdE&haM buddhiSuddhayE

Sri Vidyapayonidhi Theertha took Ashrama from Sri Vidya Prasanna Theertha and is Thirty Eighth saint from Madhwacharya.


He took guroopadesha during Upanayana from Sri Vidya Varidhi Theertha. He did vedadhyayana and was doing pourohitya in Poorvashrama. He celebrated Sri Vyasaraja’s pancha shatamanotsava in many places. Mutt’s official publication ‘Tatva Chandrika’ started during his time. He started gurukulas in various places like Bangalore, Srirangam etc.
After handing over mahasamsthana to Sri VidyaVachaspati Theertha, he entered Vrundavana at Tirumakoodalu.

*************




Sri. Vidyapayonidhi Theertha
During his upanayana, guru upadEsha was done by shri vidyAvAridhi tIrtharu. He had done vEdAdhyAna and was doing paurOhita in his pUrvAsharama. 

He celebrated vyAsarAja gurusArvaboumaru's pancha shatamAnOtsava in many places. The maTA's official magazine, Tatva Chandrika, was started during his tenure. He also shifted the mUla brindAvana of shri lakshmIvallabha tIrtharu from bELUr to T. Narasipura. 

He established 20 branches of the maTa across various places.
***


ಶ್ರೀಂ ಶ್ರೀ ಕಂ ಕಪಿಲಾಯ ನಮಃ

ಶ್ರೀಕೃಷ್ಣಚರಣಾಂಭೋಜ ಯುಗಳಾಸಕ್ತಮಾನಸಾನ್/
ವಿದ್ಯಾಪಯೋನಿಧಿಗುರೂನ್ ವಂದೇಽಹಂ ಬುದ್ಧಿಶುದ್ಧಯೇ//

ಇಂದು ಶ್ರೀಮದ್ವ್ಯಾಸರಾಜ ಮಠ ಸೋಸಲೆಯ ಮಹಾನ್ ಯತಿಗಳಾದ ಶ್ರೀ ವಿದ್ಯಾಪ್ರಸನ್ನತೀರ್ಥರ ಶಿಷ್ಯರೂ, ಶ್ರೀ ವಿದ್ಯಾವಾಚಸ್ಪತಿತೀರ್ಥರ ಗುರುಗಳು ಆದ, ಮಹಾ ಸಂಸ್ಥಾನಪೂಜಾವೈಭವ ನೋಡಿದರೆ ಪಯೋನಿಧಿತೀರ್ಥರ ವರೆಗೆ ಅಂತಲೇ ಸ್ತುತಿಸಲ್ಪಟ್ಟವರಾದ, ತಿರುಮಕೂಡಲಿನಲ್ಲಿ ಸೋಸಲೆ ವ್ಯಾಸರಾಜ ಮಠದ ಭವ್ಯವಾದ ಭವನವನ್ನು ನಿರ್ಮಾಣ ಮಾಡಿ ಶೇಷಚಂದ್ರಿಕಾಚಾರ್ಯರಿಗೆ ಸಮರ್ಪಣೆ ಮಾಡಿದವರಾದ, ಅಲ್ಲದೇ ನಮ್ಮ ನೆಲ್ಲೂರು,ತಿರುಪತಿ,ಬಳ್ಳಾರಿ ಮೊದಲಾದ ಅನೇಕ ಕಡೆಗಳಲ್ಲಿ ವ್ಯಾಸರಾಜಮಠದ ನಿರ್ಮಾಣ ಮಾಡಿಸಿ, ಚಂದ್ರಿಕಾ ಗುರುಕುಲವನ್ನು ಸ್ಥಾಪನೆ ಮಾಡಿದವರಾದ, ತತ್ವಚಂದ್ರಿಕಾ ಎನ್ನುವ ಮಾಸಪತ್ರಿಕೆಯನ್ನು ಆರಂಭಿಸಿದವರಾದ,  ಅಖಿಲಭಾರತ ಮಾಧ್ವಮಂಡಲಿಗೆ ಹತ್ತು ವರ್ಷದ ಕಾಲ ಪೋಷಕರಾಗಿ ಸೇವೆ ಮಾಡಿ, ಮಠತ್ರಯಗಳ ಸಖ್ಯಕ್ಕಾಗಿ ಕೃಷಿ ಮಾಡಿದವರಾದ, ವಿರಕ್ತಿ ಶಿಖಾಮಣಿಗಳಾದ,ಜ್ಞಾನ ಸಂಪನ್ನರಾದ, ನಾ ಕಂಡ ಗುರುಗಳು  ಶ್ರೀ ವಿದ್ಯಾಪಯೋನಿಧಿತೀರ್ಥರ ಆರಾಧನಾ ಮಹೋತ್ಸವ, ತಿರುಮಕೂಡಲು, ತಿ. ನರಸೀಪುರ, ಮೈಸೂರಿನಲ್ಲಿ... ಶ್ರೀ ಗುರುಗಳ ಅನುಗ್ರಹ ಸದಾಕಾಲ ನಮ್ಮ ಎಲ್ಲರಮೇಲೆ ಇರಲೆಂದು ಅವರಲ್ಲಿ ಭಕ್ತಿಯಿಂದ  ಪ್ರಾರ್ಥನೆ ಮಾಡುತ್ತಾ ....

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽

***


ಶ್ರೀಗುರುಭ್ಯೋ ನಮಃ 
ಮುನಿತ್ರಯರಿಂದ ಅಲಂಕೃತವಾದ ಏಕಮಾತ್ರ ಪೀಠವೆಂದು ಖ್ಯಾತವಾದ ಶ್ರೀಮದ್ವ್ಯಾಸರಾಜ ಮಹಾಸಂಸ್ಥಾನವು ಅನೇಕ ಮಹಿತಾತ್ಮರಾದ, ತಪೋನಿಧಿಗಳಾದ ಯತಿಗಳ ಪರಂಪರೆಯನ್ನು ಹೊಂದಿರುವುದು ಸರ್ವವೇದ್ಯವೇ, ಇಂತಹ ಪರಂಪರೆಯಲ್ಲಿ ಉದಿಸಿದ ಅನರ್ಘ್ಯರತ್ನವೇ ಶ್ರೀ ಶ್ರೀ ವಿದ್ಯಾಪಯೋನಿಧಿ ತೀರ್ಥ ಶ್ರೀಪಾದಂಗಳವರು. ಸಾಕ್ಷಾತ್ಕೃತಭಗವತ್ತತ್ವರಾಗಿ ಅಲೌಕಿಕ ಆನಂದವನ್ನನುಭವಿಸಿ ಅದನ್ನು ಕೀರ್ತನೆಗಳ ಮೂಲಕ ವ್ಯಕ್ತೀಕರಿಸಿ ಧನ್ಯರಾದ ಶ್ರೀವಿದ್ಯಾಪ್ರಸನ್ನ ತೀರ್ಥ ಶ್ರೀಮಚ್ಚರಣರ ವರಕುಮಾರರಾಗಿ ಶ್ರೀಮಠದ ಪೀಠವನ್ನೇರಿದ ಇವರು ಮಾಡಿದ ಕಾರ್ಯಗಳು ಅನಿತರಸಾಧಾರಣ, ನಿರಂತರ ಸಂಚಾರ ಇವರ ವೈಶಿಷ್ಟ್ಯ, ಶ್ರೀಮಠದ ಶಿಷ್ಯರೊಂದಿಗೆ ಆತ್ಮೀಯ ಸಂಬಂಧವನ್ನಿರಿಸಿಕೊಂಡಿದ್ದ ಶ್ರೀಗಳವರು ಶಿಷ್ಯವಾತ್ಸಲ್ಯಕ್ಕೆ ಪ್ರತೀಕರಾಗಿದ್ದವರು. ಅನೂಚಾನವಾದ ಶ್ರೀಮಠದ ಸತ್ಸಂಪ್ರದಾಯವನ್ನು ಪಾಲಿಸಿ, ಶ್ರೀವ್ಯಾಸರಾಜರ ಕಾಲದ ವೈಭವವನ್ನು ತೋರಿದ ಕೀರ್ತಿ ಶ್ರೀಪಾದಂಗಳವರದ್ದು, ಇವರು ನಡೆಸುತ್ತಿದ್ದ ದರ್ಬಾರ್ ವೈಭವವನ್ನು ಮರೆಯುವುದೆಂತು? ನವರತ್ನ ಮಂಟಪದಲ್ಲಿ ಇವರು ಮಾಡುತ್ತಿದ್ದ ಶ್ರೀಮನ್ಮೂಲಗೋಪಾಲಕೃಷ್ಣದೇವರ ಪೂಜಾವೈಭವವನ್ನು ನೋಡಿದವರು ಇಂದಿಗೂ ಸ್ಮರಿಸುವದನ್ನು ಕಾಣಬಹುದು, ಆದ್ದರಿಂದಲೇ ಇವರನ್ನು ಸಮಕಾಲೀನ ಪಂಡಿತರು ಶ್ರೀವ್ಯಾಸಮುಷ್ಟಿಗೋಪಾಲಕೃಷ್ಣಪೂಜಾಧುರಂಧಂ
ತಂ ಬುಧಾನವರಂ ವಿದ್ಯಾಪಯೋನಿಧಿಗುರುಂ ಭಜೆ 
ಎಂಬುದಾಗಿ ಸ್ತುತಿಸಿರುವರು. ಪೂಜಾಕಾಲದಲ್ಲಿನಇವರ ತನ್ಮಯತೆ, ದರ್ಬಾರ್ ಸಮಯದಲ್ಲಿನ ಇವರ ರಾಜಗಾಂಭೀರ್ಯ, ಗುರುಗಳ ವಿಷಯದಲ್ಲಿ ಇವರಿಗಿದ್ದ ವಿನಯ, ವಿದ್ವಜ್ಜನರಲ್ಲಿ ಔದಾರ್ಯ. ದೀನರಲ್ಲಿ ಅನುಕಂಪೆ, ಇವೆಲ್ಲ ಗುಣಗಳೂ ಇವರ ಮಾಹಾತ್ಮ್ಯವನ್ನು ಸೂಚಿಸುತ್ತಿದ್ದವು. ಶ್ರೀಮಠದ ವೈಶಿಷ್ಟ್ಯವಾದ ಅನ್ನದಾನವನ್ನು ಉತ್ತಮರೀತಿಯಲ್ಲಿ ಮಾಡಿದ ಕೀರ್ತಿ ಇವರದ್ದು. ಊರೂರಿಗೆ. ಗ್ರಾಮಗ್ರಮಗಳಿಗೆ ಅನ್ನದಾನಗೈದ ಕಥೆಗಳನ್ನು ಆಯಾ ಊರಿನ ಹಿರಿಯರು ಹೇಳುವರು, ಮಂತ್ರಸಿದ್ಧಿಯ ವಿಷಯವಾಗಿ ಹೇಳಲು ಹೊರಟರೆ ಪುಟಗಳು ಸಾಲವು. ನೆಮ್ಮದಿಯಿಂದ ಬದುಕುತ್ತಿರುವ ಸಾವಿರಾರು ಕುಟುಂಬಗಳೇ ಸಾಕ್ಷಿ. ಇಂತಹ ವ್ಯಕ್ತಿತ್ವವನ್ನು ನಾವು ದರ್ಶಿಸಿರುವೆವು ಎಂಬುದೇ ನಮ್ಮ ಪುಣ್ಯ,  ಶ್ರೀವ್ಯಾಸರಾಜ ಮಹಾಸಂಸ್ಥಾದ ಕೀರ್ತಿಯನ್ನು ತಮ್ಮ ಕಾಲಾವಧಿಯಲ್ಲಿ ಉತ್ತುಂಗಕ್ಕೆ ಒಯ್ದು. ಶ್ರೀಮಠದ ಮೇಲೆ, ಶ್ರೀಗುರುಪರಂಪರೆಯ ಮೇಲೆ ಶಿಷ್ಯವರ್ಗಕ್ಕೆ ನಿಷ್ಠೆಯನ್ನೂ, ಭಕ್ತಿಯನ್ನೂ ಹೆಚ್ಚಿಸಿ. ತ್ರಿಮಕುಟ ಕ್ಷೇತ್ರದಲ್ಲಿ ಶ್ರೀಶೇಷಚಂದ್ರಿಕಾಚಾರ್ಯರ ದಿವ್ಯಸನ್ನಿಧಾನದಲ್ಲಿ ವೃಂದಾವನ್ನು ಪ್ರವೇಶಿಸಿ ಇಂದಿಗೂ ಭಕ್ತರನ್ನು ಅನುಗ್ರಹಿಸುತ್ತಿರುವ ಶ್ರೀವಿದ್ಯಾಪಯೋನಿಧಿ ತೀರ್ಥ ಶ್ರೀಪಾದಂಗಳವರು ತಮ್ಮ ಅಂತರ್ಯಾಮಿಯ ಅನುಗ್ರಹ ಬಲದಿಂದ ನಮ್ಮ ಅಜ್ಞಾನವನ್ನು ಕಳೆದು ತತ್ವಜ್ಞಾನದ ಸವಿಯನ್ನುಣಿಸಲಿ ಎಂದು ಶ್ರೀಪಾದಂಗಳವರ ಆರಾಧನಾ ಪರ್ವಕಾಲದಲ್ಲಿ ನಾವೆಲ್ಲರೂ ಭಕ್ತಿಯಿಂದ ಪ್ರಾರ್ಥಿಸೋಣ
ಶ್ರೀಕೃಷ್ಣಚರಣಾಂಭೋಜಯುಗಳಾಸಕ್ತಮಾನಸಾನ್|
ವಿದ್ಯಾಪಯೋನಿಧಿಗುರೂನ್ ವಂದೇಹಂ ಬುದ್ಧಿಶುದ್ಧಯೇ||
  ಶ್ರೀಕೃಷ್ಣಾರ್ಪಣಮಸ್ತು

                      ಮರುತಾಚಾರ್ಯ
*******
" ಶ್ರೀ ವ್ಯಾಸರಾಜ ಮಠದ ಧ್ರುವತಾರೆ - ಶ್ರೀ ವಿದ್ಯಾ ಪಯೋನಿಧಿ ತೀರ್ಥರು "
" ಈದಿನ ಪ್ರಾತಃ ಸ್ಮರಣೀಯ ಶ್ರೀ ವಿದ್ಯಾ ಪಯೋನಿಧಿ ತೀರ್ಥರ ಆರಾಧನಾ ಮಹೋತ್ಸವ - ತಿರುಮಕೂಡಲು "
ಹೆಸರು : ವೇದ ವಿದ್ಯಾ ವಿಶಾರದ ಶ್ರೀ ಪೂರ್ಣಬೋಧಾಚಾರ್ಯರು 
ತಂದೆ : ಶ್ರೀ ಕೃಷ್ಣ ನರಸಿಂಹಾಚಾರ್ಯರು 
ತಾಯಿ : ಸಾಧ್ವೀ ಸತ್ಯಭಾಮಾ 
ಜನನ : ಕ್ರಿ ಶ 14.07.1922 
ಶ್ರೀ ಜಯತೀರ್ಥರ ಆರಾಧನಾ ದಿನವಾದ ಆಷಾಢ ಬಹುಳ ಪಂಚಮೀ ಯಂದು ಜನಿಸಿದ ಗುರುಗಳು ವಿಜಯಶೀಲರಾಗಿ ಮೆರೆದ ಮಹನೀಯರು ಪರಮಪೂಜ್ಯ ಶ್ರೀ ವಿದ್ಯಾ ಪಯೋನಿಧಿ ತೀರ್ಥ ಶ್ರೀಪಾದಂಗಳವರು. 
ಶ್ರೀ ವಿದ್ಯಾ ವಾರಿಧಿ ತೀರ್ಥರಿಂದ " ಶ್ರೀ ವಿದ್ಯಾ ಪಯೋನಿಧಿ ತೀರ್ಥರು ಮತ್ತು ಶ್ರೀ ವಿದ್ಯಾ ವಾಚಸ್ಪತಿ ತೀರ್ಥರಿಬ್ಬರೂ ಒಂದೇ ದಿನ ಉಪನಯನ " ಕಾಲದಲ್ಲಿ ಬ್ರಹ್ಮೋಪದೇಶ ಪಡೆದ ಮಹನೀಯರು. 
ಮುಂದೆ ಇವರಿಬ್ಬರೂ ಶ್ರೀ ವ್ಯಾಸರಾಜ ಮಠದ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯದಲ್ಲಿ ಗುರು - ಶಿಷ್ಯರಾಗಿ ಮೆರೆದರು. 
ಆಶ್ರಮ ಗುರುಗಳು : ಶ್ರೀ ವಿದ್ಯಾ ಪ್ರಸನ್ನ ತೀರ್ಥರು 
ಆಶ್ರಮ ನಾಮ : ಶ್ರೀ ವಿದ್ಯಾ ಪಯೋನಿಧಿ ತೀರ್ಥರು 
ಆಶ್ರಮ ಶಿಷ್ಯರು : ಶ್ರೀ ವಿದ್ಯಾ ವಾಚಸ್ಪತಿ ತೀರ್ಥರು 
ವೇದಾಂತ ಸಾಮ್ರಾಜ್ಯಾಧಿಪತ್ಯ : ಕ್ರಿ ಶ 1969 - 1997
ಅಂಕಿತ : ಪಯೋನಿಧಿ 
" ಅಭಿವೃದ್ಧಿ ಕಾರ್ಯಗಳು "
1. ಶ್ರೀರಂಗ ಮತ್ತು ಬೆಂಗಳೂರಿನಲ್ಲಿ " ಚಂದ್ರಿಕಾ ಗುರುಕುಲ " ವನ್ನು ಸ್ಥಾಪಿಸಿದರು. 
2. ಶ್ರೀ ವ್ಯಾಸರಾಜ ಮಠದ " ತತ್ತ್ವ ಚಂದ್ರಿಕಾ ಮಾಸ ಪತ್ರಿಕೆ " ಯನ್ನು ಪ್ರಾರಂಭ ಮಾಡಿದರು. 
3. ನಾಡಿನಲ್ಲಿ ಮಾಧ್ವ ಅನಾಥ ಮಕ್ಕಳನ್ನು ಸಾಕಿ - ಸಲುಹಿ - ಸಮಾಜದಲ್ಲಿ ಅವರಿಗೊಂದು ಉತ್ತಮ ಸ್ಥಾನ ಸಿಗುವಂತೆ ಮಾಡಿದ ಕೀರ್ತಿ ಪರಮಪೂಜ್ಯ ಶ್ರೀ ಗುರುಗಳಿಗೆ ಸೇರುತ್ತದೆ. 
" ಮಹಿಮೆಗಳು "
ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಿದ್ಯಾ ಪಯೋನಿಧಿ ತೀರ್ಥರ ಮೇಲೆ ಶ್ರೀ ಹರಿ ವಾಯು ವ್ಯಾಸರಾಜರ ಮತ್ತು ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಪರಮಾನುಗ್ರಹ ಅಧಿಕವಾಗಿತ್ತು. 
ಪರಮಪೂಜ್ಯರು ಏನೇ ನುಡಿದರೂ ಶ್ರೀ ಹರಿವಾಯು ಗುರುಗಳು ತಕ್ಷಣ ನೆರವೇರಿಸುತ್ತಿದ್ದರು. 
ಉದಾಹರಣೆಗೆ... 
1. ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಿದ್ಯಾ ಪಯೋನಿಧಿ ತೀರ್ಥರ  ಬಳಿ ಬಂದು ರೋಗ ಬಾಧೆಗಳನ್ನು ಹೇಳಿ ಪ್ರಾರ್ಥಿಸಿಕೊಂಡಾಗ... 
ಗುರುಗಳು " ಅಂಗಾರ ಮಂತ್ರಿಸಿ ಕೊಟ್ಟು - ಅಂಗರವನ್ನು ಸಾಣೆಕಲ್ಲಿನ ಮೇಲೆ ತೇಯ್ದು ನೀರಲ್ಲಿ ಕಳಿಸಿ ಕುಡಿ ಆರೋಗ್ಯ ಸರಿಹೊತ್ತದೆ " ಎಂದು ಹೇಳಿ ಕೊಡುತ್ತಿದ್ದರು. 
2. ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಿದ್ಯಾ ಪಯೋನಿಧಿ ತೀರ್ಥರು " ಕಾಯಿ ಸ್ವಾಮಿಗಳೆಂದೇ " ಪ್ರಸಿದ್ಧಿ ಆಗಿದ್ದರು. 
ಅವರು ಪ್ರತಿದಿನ ಸಾಯಂಕಾಲ ದರ್ಬಾರಿನಲ್ಲಿ ಕುಳಿತಾಗ ಅನೇಕ ಭಕ್ತರಿಗೆ ಅವರ ಪ್ರಾರ್ಥನೆಯಂತೆ ಕಾಯನ್ನು ಮಂತ್ರಿಸಿ ಕೊಡುತ್ತಿದ್ದರು - ಅದರಿಂದ ಅವರು ಅಭಿವೃದ್ಧಿ ಕಾಣುತ್ತಿದ್ದರು. 
3. ಒಂದುಬಾರಿ ಸಂಚಾರ ಕ್ರಮದಲ್ಲಿ ಶ್ರೀ ವ್ಯಾಸರಾಜ ಪ್ರತಿಷ್ಠಿತ ಶ್ರೀ ನರಸಿಂಹ - ಶ್ರೀ ಮುಖ್ಯಪ್ರಾಣದೇವರ ಪರಮ ಪವಿತ್ರ ಸನ್ನಿಧಾನ - ಹೂವಿನ ಹಡಗಳಿಗೆ ದಿಗ್ವಿಜಯ ಮಾಡಿಸಿದಾಗ್ಗೆ ಅಲ್ಲಿಯ ಶ್ರೀಮಠದ ಶಿಷ್ಯರಾದ ಡಾ ।। ಫಣಿರಾಜ್ ಎಂಬುವರ ಮನೆಗೆ ಬಂದಾಗ - ಗುರುಗಳು ಬಂದಾರೆ ಎಂಬ ಆತುರದಲ್ಲಿ ನೋಡದೆ ವಿದ್ಯುತ್ಚ್ಛಕ್ತಿ ವೈರನ್ನು ಮುಟ್ಟಿದ್ದಾರೆ - ತಕ್ಷಣ ಕರೆಂಟ್ ಶಾಕ್ ಹೊಡೆದು ನೇರವಾಗಿ ಗುರುಗಳ ಪಾದದ ಮೇಲೆ ಬಿದ್ದಿದ್ದಾರೆ - ಗುರುಗಳು ಅವರನ್ನು ಮೇಲಕ್ಕೆತ್ತಿ ಅಪಮೃತ್ಯು ಪರಿಹಾರವಾಯಿತು ಎಂದು ಹೇಳಿ ಫಲ ಮಂತ್ರಾಕ್ಷತೆ ಕೊಟ್ಟು ಅನುಗ್ರಹಿಸಿದರು. 
4. ನನ್ನ ಪ್ರೀತಿಯ ಪ್ರಾತಃ ಸ್ಮರಣೆಯ ಪರಮಪೂಜ್ಯ ಶ್ರೀ ರಘುಪ್ರೇಮ ತೀರ್ಥರ ಪೂರ್ವಾಶ್ರಮ ಮೊಮ್ಮಕ್ಕಳಾದ ಶ್ರೀ ನಾರಾಯಣಾಚಾರ್ಯರ  ಮೇಲೆ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಿದ್ಯಾ ಪಯೋನಿಧಿ ತೀರ್ಥರ ಕಾರುಣ್ಯಾತಿಶಯ ಹೇಳತೀರದು. 
ಶ್ರೀ ಆಚಾರ್ಯರೂ ಕೂಡಾ ಕರೆಂಟ್ ಶಾಕ್ ನಿಂದ ಅವರಿಗೆ ಕೂಡಲೂ ಆಗುತ್ತಿರಲಿಲ್ಲ - ಮಾರನೇ ದಿನ ಶ್ರೀ ಆಚಾರ್ಯರ " ಗೃಹ ಪ್ರವೇಶ " ಕಾರ್ಯಕ್ರಮ. 
ಹಿಂದಿನ ದಿನ ರಾತ್ರಿ ಶ್ರೀ ಗುರುಗಳು ಹೂವಿನ ಹಡಗಲಿಗೆ ಬಂದಿದ್ದಾರೆ - ಶ್ರೀ ಗುರುಗಳು ಆಚಾರ್ಯರನ್ನು ಕರೆದು ವಿಚಾರ ಮಾಡಿ - ಅವರ ಮಕ್ಕಳಾದ ಶ್ರೀ ಶ್ರೀನಿವಾಸಾಚಾರ್ಯರನ್ನು ಕರೆದು " ಒಂದು ತಾಮ್ರದ ತಂಬಿಗೆಯಲ್ಲಿ ನೀರನ್ನು ತರಿಸಿ - ಅಭಿಮಂತ್ರಿಸಿ ಕೊಟ್ಟು ಕುಡಿಯಲು ಹೇಳಿದಾಗ - ಆಚಾರ್ಯರು ಆ ನೀರನ್ನು ಕುಡಿದು ಮಾರನೇ ದಿನ ಗೃಹ ಪ್ರವೇಶ ಕಾರ್ಯಕ್ರಮದ ಹೋಮಾದಿಗಳಲ್ಲಿ ಕುಳಿತು ನೆರವೇರಿಸಿದರು. 
ಶ್ರೀ ಶ್ರೀಗಳವರ ಪೂಜಾ - ಭಿಕ್ಷೆ ಮುಗಿದು ಶ್ರೀ ಶ್ರೀಗಳವರು ಅಲ್ಲಿಂದ ಹೋದ ಮೇಲೆ ಶ್ರೀ ಆಚಾರ್ಯರಿಗೆ ಪುನಃ ಯಥಾ ಪ್ರಕಾರ ಬಾಧೆಯುಂಟಾಗಿ ಅವರು ಸಂಪೂರ್ಣ ಆರೋಗ್ಯವಂತರಾಗಲು 15 ದಿನಗಳು ಆಯಿತ ಎಂದು ಶ್ರೀ ಶ್ರೀನಿವಾಸಾಚಾರ್ಯರು ಶ್ರೀ ಗುರುಗಳು ತಮ್ಮ ತಂದೆಯ ಮೇಲೆ ತೋರಿದ ಕಾರುಣ್ಯವನ್ನು ಹೇಳಿದರು. 
ಈಗ ಶ್ರೀ ನಾರಾಯಣಾಚಾರ್ಯರು ಹೂವಿನ ಹಡಗಲಿಯ ಶ್ರೀ ನರಸಿಂಹ - ಶ್ರೀ ಮುಖ್ಯಪ್ರಾಣದೇವರ ಸೇವೆಯಲ್ಲಿ ನಿರುತರಾಗಿದ್ದಾರೆ. 
ಕೂಡಲೂ ಆಗದ ಶ್ರೀ ನಾರಾಯಣಾಚಾರ್ಯನ್ನು ಕೂಡುವಂತೆ ಮಾಡಿ - ಹೋಮಾದಿಗಳು ಮಾಡುವ ಶಕ್ತಿ ನೀಡಿದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಿದ್ಯಾ ಪಯೋನಿಧಿ ತೀರ್ಥರಮಂತ್ರಸಿದ್ಧಿ ಹೇಗಿತ್ತು ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲವಲ್ಲವೇ? 
ವೃಂದಾವನ ಪ್ರವೇಶ : ಭಾದ್ರಪದ ಬಹುಳ ದಶಮೀ [ 25.09.1997 ]
ವೃಂದಾವನ ಸ್ಥಳ : ತಿರುಮಕೂಡಲು 
ಶ್ರೀ ಕೃಷ್ಣ ಚರಣಾಂಭೋಜ 
ಯುಗಳಾಸಕ್ತ ಮಾನಸಮ್ ।
ವಿದ್ಯಾಪಯೋನಿಧಿ ಗುರೂನ್ 
ವಂದೇsಹಂ ಬುದ್ಧಿಶುದ್ಧಯೇ ।।
****

1
   ವ್ಯಾಸರಾಜ ಪರಂಪರೆಯ ಶತಮಾನ ಸಂತರು 
         ಶ್ರೀ ವಿದ್ಯಾಪಯೋನಿತೀರ್ಥರು - ಶತಮಾನ ಸಂಭ್ರಮ 
     ಭಾರತದ ಧಾರ್ಮಿಕ ಪರಂಪರೆಯ ಗೌರಿಶಂಕರ ವ್ಯಾಸರಾಜಮಠ. ಈ ಪರಂಪರೆಗೆ ಒಂದು ದಿವ್ಯಭವ್ಯ ಇತಿಹಾಸವಿದೆ. ಅಂತಹ ಶ್ರೀವಿದ್ಯಾಪಯೋನಿತೀರ್ಥರ ಐತಿಹಾಸಿಕ ಸಾಧನೆಗಳ ಚಿರಸ್ಮರಣೀಯ ಸಂಭ್ರಮ ಈ ಶತಮಾನೋತ್ಸವ. ಅವರ ಕಾಲವೆಂದರೆ ಶ್ರೀಮಠದ ಧವಳಕೀರ್ತಿಯ ಕಾಲ. ವ್ಯಾಸರಾಜರ ರಾಜದರ್ಬಾರಿನ ವೈಭವ ವಿಜೃಂಭಣೆಯ ಪುನರುತ್ಥಾನವಾದದ್ದು ಪಯೋನಿಧಿಗಳ ಕಾಲದಲ್ಲಿ. ವ್ಯಾಸರಾಜಮಠದ ಸಂಪ್ರದಾಯ ಪ್ರವರ್ತಕರಾದ ಕಂಬಾಲೂರು ರಾಮಚಂದ್ರಾಚಾರ್ಯರ ನಂತರ ಆ ಶ್ರೇಷ್ಠ ಸಂಪ್ರದಾಯದ ಅದ್ಭುತ ಪುನರುದ್ಧೀಪನ ಮಾಡಿದವರು ಪಯೋನಿಧಿತೀರ್ಥರು. ಪಯೋನಿಧಿಗಳ  ಆಡಳಿತಾವಧಿ ಎಂದರೆ ವ್ಯಾಸರಾಜರ ಪರಂಪರೆಯಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬಹುದಾದ ಅದ್ಭುತಕಾಲ. ಪೂರ್ವಾಶ್ರಮದಲ್ಲಿ ಪೌರೋಹಿತ್ಯದ ಮೂಲಕ ಜನಮನ್ನಣೆಗೆ ಪಾತ್ರರಾದರು. ಅವರ ಪೂರ್ವಾಶ್ರಮದ ತಂದೆ ಧರ್ಮಶಾಸ್ತ್ರದಲ್ಲಿ ಪ್ರಗತಿ, ಪಾಂಡಿತ್ಯ ಪಡೆದಿದ್ದರು. 
          ಅವರ ಧೈರ್ಯ, ಆತ್ಮಸ್ಥೆರ್ಯ, ಆತ್ಮವಿಶ್ವಾಸ, ತೇಜಸ್ಸು, ವರ್ಚಸ್ಸುಗಳು ಅದ್ಭುತ, ಅದ್ಭುತ. ಅವರಿಗೆ 8ನೇ ವರ್ಷದ ಬಾಲ್ಯದಲ್ಲಿ ಉಪನಯನವಾದ ನಂತರ ವ್ಯಾಸರಾಜ ಮಠಾಧೀಶರಾಗಿದ್ದ ವಿದ್ಯಾವಾರಿಧಿಗಳು ತಿರುಮಕೂಡಲಿನಲ್ಲಿ ಗುರೂಪದೇಶ ಮಾಡಿದರು. ಮುಂದೆ ನಂಜನಗೂಡಿನಲ್ಲಿ ಸಮಗ್ರ ವೇದಾಭ್ಯಾಸ ಮಾಡಿದರು. ಪ್ರಸನ್ನತೀರ್ಥರಿಂದ ಶಾಸ್ತ್ರಗ್ರಂಥಗಳ ಅಭ್ಯಾಸ ಮಾಡಿದರು. 1967 ರಲ್ಲಿ ಒಂದು ಘಟನೆ ಸೀತಾಪತಿ ಅಗ್ರಹಾರದಲ್ಲಿ ಶ್ರೀಸುಶಮಿಂದ್ರತೀರ್ಥರು ಬಂದಿದ್ದರು. ಪೂರ್ಣಾಚಾರ್ಯರು ಅಲ್ಲಿಗೆ ಹೋದರು. ಸ್ವಾಮಿಗಳು ಆಗ ತಾನೇ ಅಚ್ಯುತನ ಬಳಿ ಕನಸು ಕಂಡದ್ದು ಹೇಳುತ್ತಿದ್ದೆ. ಬೆಳಗಿನ ಜಾವದ ಕನಸಿನಲ್ಲಿ ನನಗೆ ನೀವು ವ್ಯಾಸರಾಜ ಸಿಂಹಾಸನದಲ್ಲಿ ಸ್ವಾಮಿಗಳು ಉಪನ್ಯಾಸ ಮಾಡುತ್ತಿದ್ದುದ್ದನ್ನು ಕಣ್ಣಾರೆ ಕಂಡೆ. ಅದು ನಿಜವಾಗಲಿ ಎಂದು ಫಲಮಂತ್ರಾಕ್ಷತೆ ನೀಡಿದರು. ಮುಂದೆ ಹಾಗೆ ಆಯಿತು. ಪ್ರಸನ್ನತೀರ್ಥರು ಮುಂದೆ ಫಲಮಂತ್ರಾಕ್ಷತೆ ನೀಡಿ, ಪ್ರಣವ ಮಂತ್ರೋಪದೇಶ ನೀಡಿ 'ಶ್ರೀವಿದ್ಯಾಪಯೋನಿಧಿ ತೀರ್ಥರು' ಎಂಬ ಅಭಿದಾನ ನೀಡಿ ಹೊಸದೊಂದು ಪರಂಪರೆಯನ್ನೇ ಸೃಷ್ಟಿಸಿದರು. ಪಯೋನಿಧಿಗಳ  ಚಾತುರ್ಮಾಸ್ಯವು ಒಂದು ಇತಿಹಾಸವೇ ಸರಿ. ನವವೃಂದಾವದಲ್ಲಿ ಯಾವ ಸೌಕರ್ಯ ಸೌಲಭ್ಯಗಳೂ ಇಲ್ಲದ ಕಾಲದಲ್ಲಿ ಅಲ್ಲಿ ಚಾತುರ್ಮಾಸ್ಯ ಮಾಡಿ ಶ್ರೀವ್ಯಾಸರಾಜರ ಪರಮಾನುಗ್ರಹಕ್ಕೆ ಪಾತ್ರರಾದರು. ಪ್ರತಿ ಚಾತುರ್ಮಾಸ್ಯದಲ್ಲಿಯೂ ಒಂದೊಂದು ಅದ್ಭುತ ಅಚ್ಚರಿಗಳ ನಿರ್ಮಾಣ ಮಾಡುತಿದ್ದರು. 'ತತ್ವಚಂದ್ರಿಕಾ' ಪತ್ರಿಕೆಯನ್ನು ಪ್ರಾರಂಭಿಸಿದರು.
 2
   ಪಯೋನಿಧಿಗಳು ಬದರಿಗೆ ಹೋದಾಗ ಬದರಿ ನಾರಾಯಣನ ಸನ್ನಿದಾನದಲ್ಲೇ ಸಂಸ್ಥಾನ ಪೂಜೆ ಮಾಡಿ ಹೊಸ ಇತಿಹಾಸವನ್ನೇ ನಿರ್ಮಿಸಿದರು. ಪಯೋನಿಧಿಗಳು ಮಾಡುತ್ತಿದ್ದ ಪೂಜೆಯನ್ನು ನೋಡಲು ದೇಶದ ನಾನಾ ಭಾಗಗಳಿಂದ ಜನ ಬಂದು ನೋಡಿ ಸಂಭ್ರಮಿಸುತ್ತಿದ್ದರು. ಎಸ್ಟೋ ಸಲ ಅವರ ಪೂಜೆ ನೋಡಿದರೂ ಮತ್ತೆ ಮತ್ತೆ ನೋಡುವಂತಹ ಪೂಜೆ. ಗೋಪಾಲಕೃಷ್ಣ, ಪಟ್ಟಾಭಿರಾಮ, ವ್ಯಾಸಮುಷ್ಠಿ ದಿಗ್ವಿಜಯ ಪಟ್ಟಾಭಿರಾಮದೇವರು, ಯೋಗಾಲಕ್ಷ್ಮೀನರಸಿಂಹದೇವರು, ಸಂತಾನಗೋಪಾಲಕೃಷ್ಣ ದೇವರುಗಳನ್ನು ಪರಿಪರಿಯಾಗಿ ಪೂಜಿಸಿ ಭಕ್ತರಿಗೆ ಪಯೋನಿಧಿಗಳು ಮಂತ್ರ ನೀಡಿ ಅನುಗ್ರಹಿಸುತ್ತಿದ್ದರು. ಪ್ರತಿ ಮಧ್ವನವಮಿಯನ್ನು ಕರ್ನೂಲಿನಲ್ಲಿ ಆಚರಿಸಿ ಅದ್ಭುತ ಸಭಾ ಕಾರ್ಯಕ್ರಮ ನಡೆಸಿ ವಿದ್ವತ್ ಸಮ್ಮೇಳನಗಳನ್ನು ನಡೆಸುತ್ತಿದ್ದರು. ತಿರುವಾಂಕೂರಿನಲ್ಲಿ ಶೇಷಚಂದ್ರಾಚಾರ್ಯ ಭವನವನ್ನು ಅವರೇ ಅಲ್ಲಿ ನಿಂತು ಕಟ್ಟಿಸಿದರು. ಪಯೋನಿಧಿಗಳ ತುಲಾಭಾರ ಎಂದರೆ ಹಿಡಿ ಹಿಡಿ ತುಂಬಿ ತುಂಬಿ ಆ ಅಭಿಷೇಕದ ನಾಣ್ಯಗಳನ್ನು ಎಲ್ಲರಿಗೂ ನೀಡುತ್ತಿದ್ದರು. ಕೊಟ್ಟಷ್ಟು ಅವರಿಗೆ ತೃಪ್ತಿ ಇರುತ್ತಿರಲಿಲ್ಲ. ಮತ್ತೀಕೆರೆಯಲ್ಲಿ ಹರಿದಾಸ ಸಮ್ಮೇಳನವಾದಾಗ ಹರಿಕಥಾಮೃತಸಾರಗ್ರಂಥಕ್ಕೆ ನಡದೇ ಬಂದರು. ಮೈಮರೆತು ಹಾಡುತ್ತಾ, ಮೆರವಣಿಗೆಯ ಮುಂಚೂಣಿಯಲ್ಲಿ ಅವರು ಬರುತ್ತಿರುವುದನ್ನು ಕಂಡ ಸಹಸ್ರಾರು ಭಕ್ತರು ಆನಂದಭಾಷ್ಪ ಸುರಿಸಿದರು. ಸಂಗೀತ ಸಮ್ಮೇಳನಗಳನ್ನು ವ್ಯವಸ್ಥೆ ಮಾಡುತ್ತಿದ್ದರು. ನನಗೆ ಸಾಹಿತ್ಯ ಸಂಶೋಧನಾ ವಾಚಸ್ಪತಿ ಎಂಬ ಪ್ರಶಸ್ತಿ ನೀಡಿ ಅನುಗ್ರಹಿಸಿದ್ದನ್ನು ನಾನು ಹೇಗೆ ಮರೆಯಲಿ. 1994 ರಲ್ಲಿ ನಾನು ಹರಿದಾಸಪ್ರಚಾರಕ್ಕಾಗಿ ಅಮೆರಿಕಾಕ್ಕೆ ಹೋಗಿ ಬರಬೇಕೆಂದುಕೊಂಡಾಗ, ಮಠಕ್ಕೆ ಕರೆಸಿ ಮಂತ್ರಾಕ್ಷತೆ ನೀಡಿ ಯಶಸ್ಸು, ಶ್ರೇಯಸ್ಸು ಎರಡೂ ನಿನ್ನದಾಗಿರುತ್ತದೆ ಶುಭವಾಗಲಿ ಹೋಗಿ ಬಾ ಎಂದು ಆಶೀರ್ವದಿಸಿ ಕಳುಹಿಸಿಕೊಟ್ಟರು. ಹರಿದಾಸ ಸಾಹಿತ್ಯಕ್ಕೆ ಅಪಾರ ಪ್ರೋತ್ಸಾಹ ನೀಡಿದರು. ವಿದ್ಯಾಪ್ರಸನ್ನತೀರ್ಥರ ಕೃತಿಗಳನ್ನು, ವಿದ್ಯಾರತ್ನಾಕರ ಸ್ತೋತ್ರ ಹಾಗೂ ಕೃತಿಗಳನ್ನು ಶ್ರೀಮಠದಿಂದ ಪ್ರಕಟಮಾಡಿದರು. ತಾವೇ ಸ್ವತಃ 'ವ್ಯಾಸರಾಜ ಅಷ್ಟೋತ್ತರ ಶತನಾಮಾವಳಿ'ಯನ್ನು ರಚಿಸಿ ಸ್ವಾಮಿಗಳು ಪ್ರಕಟಿಸಿದರು. ಒಂಟಿಕೊಪ್ಪಲು ಪಂಚಾಂಗಕರ್ತೃಗಳಿಂದ ಜೋತಿಷ್ಯ ಶಾಸ್ತ್ರ ಬರೆಸಿ ಸ್ವಾಮಿಗಳು ಪ್ರಕಟಿಸಿದರು. ಶ್ರೀವಿದ್ಯಾಶ್ರೀಶತೀರ್ಥರ ಪೂರ್ವಾಶ್ರಮದಲ್ಲಿ 125 ವರ್ಷಗಳ ಕಾಲ ನಿರಂತರ ಪ್ರವಚನದ ವ್ಯವಸ್ಥೆ ಮಾಡುತ್ತಿದ್ದರು.
3
    ವ್ಯಾಸರಾಜರ, ಶೇಷಚಂದ್ರಾಚಾರ್ಯರ, ರತ್ನಾಕರತೀರ್ಥರ, ಪ್ರಸನ್ನತೀರ್ಥರ ಆರಾಧನಾ ಸಂಧರ್ಭಗಳಲ್ಲಿ ಅಭೂತಪೂರ್ವ ವಿದ್ವತ್ ಸಭೆಗಳನ್ನು ವ್ಯವಸ್ಥೆ ಮಾಡಿದರು. 'ಚಂದ್ರಿಕಾ ಗುರುಕುಲ' ಪ್ರಾರಂಭಿಸಿ, ಕರ್ನುಲು ಶ್ರೀನಿವಾಸಾಚಾರ್ಯರು, ಮಾನಕರಿ ಶ್ರೀನಿವಾಸಚಾರ್ಯರಂತಹ ಘನ ವಿದ್ವಾಂಸರನ್ನು ಅಲ್ಲಿ ತಯಾರು ಮಾಡಿದರು. ವ್ಯಾಸರಾಜರಿಗೆ ತಮ್ಮನ್ನು ತಾವೂ ಸಮರ್ಪಣೆ ಮಾಡಿಕೊಂಡಿದ್ದರು, ಮಹಾಸ್ವಾಮಿಗಳಾಗಿದ್ದರು  ವಿದ್ಯಾಪಯೋನಿಧಿಗಳು. ಮಾಗಡಿ ರಂಗನಾಥಾಚಾರ್ಯರು, ಗೌಡಿಗೆರೆ ಗೋಪಾಲಕೃಷ್ಣಾಚಾರ್ಯರು, ಜಯತೀರ್ಥಾಚಾರ್ಯರು, ಡಿ. ಪ್ರಹ್ಲಾದಾಚಾರ್ಯರು, ಕಂಬಾಲೂರಿನ ಮರೆತೇಶಾಚಾರ್ಯರಂತಹ ಅತಿರಥ ಮಹಾರಥ ಆಸ್ಥಾನ ವಿದ್ವಾಂಸುರುಗಳಿಂದ ವ್ಯಾಸರಾಜಮಠ ನಿಜವಾದ ವಿದ್ಯಾಮಠವಾಗಿ ಶೋಭಿಸುತ್ತಿತ್ತು. ಪಯೋನಿಧಿಗಳ ಕಾಲದಲ್ಲಿ ವ್ಯಾಸರಾಜಮಠಕ್ಕೆ ಒಂದು ಘನತೆಯನ್ನು, ವಿಶಿಷ್ಟ ಸ್ಥಾನಮಾನಗಳನ್ನು, ಅಖಂಡಕೀರ್ತಿಯನ್ನು, ಶ್ರೇಷ್ಠ ಸಂಪ್ರದಾಯವನ್ನು ತಂದುಕೊಟ್ಟ ಪೂಜ್ಯ ಶ್ರೀ ವಿದ್ಯಾಪಯೋನಿಧಿತೀರ್ಥರು ವ್ಯಾಸರಾಜಮಠದ ಬಾನಿನಲ್ಲಿ ಕಾಮನಬಿಲ್ಲಾಗಿ, ವರ್ಣರಂಜಿತ ಅಧ್ಯಾಯವಾಗಿ ಕಂಗೊಳಿಸಿದ ಶತಮಾನದ ಸಂತರು. 

-ವಿದ್ಯಾವಾಚಸ್ಪತಿ ಡಾ||ಅರಳುಮಲ್ಲಿಗೆ ಪಾರ್ಥಸಾರಥಿ
***





Darbar by shri vidyApayOnidhi tIrtha shripAdangaLavaru


No comments:

Post a Comment