Tuesday 30 April 2019

brahmanya teertharu 1467 abbur matha vyasaraja mutt yati 11 vaishakha bahula ekadashi ಬ್ರಹ್ಮಣ್ಯ ತೀರ್ಥರು 1467



pic-mukhyaprana, brahmanya and mritika of vyasaraja



this yati also belongs to other mutt/s
Shri Brahmanya Teertharu  11
Period - 1460 - 1467
Poorvashrama name - Narasimha
Ashrama Gurugalu - Purushottama Teertharu
Ashrama Shishyaru - Vyasa Teertharu or Vyasarajaru
Aradhana - Vaishakha Bahula Ekadashi
Vrindavana - Abbur beside Kanva River, Chennapatna

info from sumadhwaseva.com--->


ಕಂಸಧ್ವಂಸಿಪದಾಂಭೋಜ ಸಂಸಕ್ತೋ ಹಂಸಪುಂಗವ: |
ಬ್ರಹ್ಮಣ್ಯಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ ||

Kamsadhwamsi padaambhOja samsaktO hamsapungava: |
brahmaNyagururaajaakYO vartataam mama maanasE |
(ಶ್ರೀ ವ್ಯಾಸರಾಜರು – ತಾತ್ಪರ್ಯಚಂದ್ರಿಕಾದಲ್ಲಿ)  (Sri vyasarajaru in Tatparya chandrika)
ಸಮುತ್ಸಾರ್ಯತಮ:ಸ್ತೋಮಂ ಸನ್ಮಾರ್ಗ ಸಂಪ್ರಕಾಶ್ಯಚ |
ಸದಾ ವಿಷ್ಣುಪದಾಸಕ್ತಂ ಸೇವೇ ಬ್ರಹ್ಮಣ್ಯಭಾಸ್ಕರಮ್ ||
samutsaaratama:stOmam sanmaarga samprakaashyacha |
sadaavishNupadaasaktam sEvE brahmaNya bhaaskaram|
(ಶ್ರೀ ವ್ಯಾಸರಾಜರು – ನ್ಯಾಯಾಮೃತದಲ್ಲಿ)
It is Sri Brahmanya Tirtharu who was responsible for the birth, growth, vidya, ashrama of Sri Vyasarajaru.    He was born with the name Narasimha.  Sri Purushottama Tirtharu gave the sanyasa to Brahmanya Tirtharu as per swapna soochana.
Miracles by Brahmanya Thirtharu –
Birth of Sri Vysarajaru – 
Once when Brahmanya Tirtharu was on tour in Bannur, Raamacharya, an aged brahmin died on his way to Gangasnaana.  Ramacharya’s wife wanted to do “Sahagamana” with her husband and came to Swamiji for seeking Brahmanya Tirtha Seer’s permission for doing so.  But Brahmanya Thirtharu, even before her seeking permission told her “Dheerga sumangalee bhava”., “suputravatee bhava”.  On seeing all the pandits were surprised that a widow is being blessed with the boon of dheerga sumangalitva.  Then they appraised him of the situation.  But Swamiji told “It is told by Gopalakrishna Devaru, and he will survive and he will be shataayushi and would have two children”.  Saying this, Swamiji gave her “mantrodaka”As soon as she came near the dead body of her husband she did the “prokshana” of Mantrodaka given by the seer and Ramachar got up as if he is getting up from sleep.   Afterwards, Sri Vyasarajaru was born to the aged parents and he was handed over to the Mutt.
Malur –  
Once there lived a king named Thimmarasa.  He had a son named Sarangadhara.  When Sarangadhara’s mother died, Thimmarasa, even though he was aged, he married another Rajakumari.  But Rajakumari as she was young, she was not happy with the marriage.  She wanted to have Sarangadhara (her husband’s first wife’s son) for her sexual satisfaction.  When Sarangadhara rejected her request, she told her husband that Sarangadhara tried to rape her.  Then the king ordered his servants to cut his son into pieces and throw him in the Kanva River.  The servants obeyed the kings orders.   Sri Brahmanya Tirtharu happened to visit the Kanva river for his “ahneeka” and he saw the Prince cut into pieces.  Realising the facts, Swamiji did the “abhimantrana” of Mruthike on the body of the prince and he gradually developed his legs and arms and he was a normal boy after wards.  It is the same place which is called as Malur named after the incident. He did the “Bara Parihara” (Famine relief) in Vijaya nagar kingdom by chanting Parjanya JapaHe did the “Nrusimha Dwajastamba” stapane in BrahmanyapuraHe did the pratistapane of Mukyaprana in Brahmanyapura alongwith Sreepadarajaru and Sri Vyasarajaru.

Around Channapatna/Abbur –
ABBUR- The Brindhavana of Sri Brahmanya Thirtharu across the KANVA RIVER and surrounded by green fields there emerges a calm serine village ABBUR, the divine resting place of Sri Brhmanya Thirtharu.
Abbur is around 70 kms from Bangalore on the Bangalore-Mysore Highway. Bus facility is very good , Train facility, to Channapatna from Mysore, Bangalore, Mandya, Maddur, etc.If you take a bus going to Mysore from Bangalore, get down at Chanapatna and from there take an auto to Abbur. It is around 6Km from Chanapatna on the way to Kanva reservoir. Also there is local bus from Chanapatna to Abbur.  For Araadhana, special taxies/buses will be there from Channapatna.

In Channapatna – there is Vyasaraja Mutt.
Other visiting places near Abbur-
1.  Malur – It is about 2 kms from Channapatna, where u can see Malur Aprameya temple
2.  Purushottama Guhe – It is about 3 kms from Abbur, where Purushottama Thirtharu entered the cave and he never returned.  It is believed that he is still there doing tapassu.
3. Kambada Narasimha devaru – in Brahmanya pura
4. Mukhyaprana devaru –  Kengal Hanumantharaya  – Vyasaraja prathistita

read more here 

Brahmanya Thirtharu – Jeevana Charitre – click

Brahmanya Thirtha – Mangalastakam – click

Brahmanya Thirtha – Stuti – click

Brahmanyathirtha Pancharathnamalika Stotra by Vyasarajaru – click


********

info from madhwamrutha.org--->


The credit of giving Sri Vyasaraja Gurusarvabhouma to this world who is responsible for spreading of dwaitha philosophy to all the four corners of India goes to Sri Brahmanya Theertha. He comes in the direct lineage of Sri Madhwacharya and is Eleventh saint from Madhwacharya. Below is his brief introduction.

In these days where one sees the effects of Kali age predominant even in sacred precincts and selfishness and smallness of mind seem to rule the times, it may be difficult to think of a time when giants like Sri Brahmanya Theertha ruled the kingdom of God. This great personality believed to be an incarnation of Surya shone with brilliance in the fifteenth century and left posterity with the invaluable gift of Sri Vyasaraja – philosopher, administrator, sage and scholar – who has been unequalled in the Vedanta realms. Sri Brahmanya Theertha’s Punyadina falls on Vaishakha Bahula Ekadashi. He entered his final abode Vrundavana in 1467 AD in Abbur, near Channapattana on the Bangalore – Mysore highway.

Not much has been recorded of his life history. Some facts are available from his “Vijaya” composed by Sri Srinivasa Theertha, who is a descendant of the order. His father was Ramacharya with the nickname of Poogavana (areca farm). Possibly he owned one. Sri Brahmanya was born in Narahari kshethra on the banks of the Cauvery and was named Narasimha.  The boy was sent to Sri Purushottama Theertha at the young age of 7 after his Upanayana samskara. Sri Purushottama was next in line to Sri Jayadhwaja whose name is preserved for posterity for his founding of the Dwaitha School in the north, especially in Navadvipa (modern Bengal). ISKON followers call his name as Jayadharma.

Narasimha was a precocious pupil with great intelligence, devotion to God and disinterest in the affairs of the world. Sri Purushottama theertha had already received some indications in dreams about his pupil. The education of Narasimha was completed in a short while and he was also given the oaths of Asceticism and called Brahmanya Theertha by his Guru.  Very soon the latter entered a cave near Abbur and disappeared from human view. A miracle attributed to Sri Brahmanya Theertha was that when he sprinkled some consecrated water on cold cooked food after Puja, it became fresh and hot.
There was a rich and pious Brahmin who had started on a pilgrimage to Banaras. His location is not clearly specified, but it is said that he also lived on the shore of Cauvery river (Called Marudvrudha in the Rgveda).  Unfortunately, he died suddenly after getting fever. His wife who wanted to commit Sati along with her husband (they were childless at the time) came to beg permission of Sri Brahmanya Theertha, the worshipper of Narasimha deity given to him by his Guru. Sri Brahmanya Theertha blessed the widow – “Dheergha sumangalee bhava” – Be happy as a wife in wedded bliss for a long time. When she told him that she was no longer having a husband, Sri Brahmanya Theertha told her – do not worry. Your husband is not dead, but is still alive. He gave her holy water with incantations, which when applied to the dead body of the husband brought him back to life, as if nothing had happened. As per the Swamiji’s desire, the first born of this couple was given even as a young baby, to him. This baby was received on a golden plate and fed with the milk used for Abhisheka of the Lord. The baby, who grew up into the great Vyasaraja, was given his Upanayana Samskara at the age of 5 and took the oath of asceticism at the age of 7.  Though Sri Brahmanya Theertha himself was greatly learned as described by his own disciple and successor Sri Vyasaraja, he was sent for his studies to Sri Sripadaraja at Mulbagal.  He became famous for his erudition, scholarship, great qualities of complete disinterest in personal factors and became the fountain head of learning for Tatvavada in his time.
In the mean while Sri Brahmanya Theertha received the idol of Vittala as a result of a dream indication, from where it was buried in the ground. He went to Karnataka capital (possibly Srirangapattana) and on being requested by the king and people of the state, which was suffering from drought, brought back copious rains. The grateful kingdom gave the ascetic a village called Brahmanyapuri.  After handing over his reign to the worthy successor, he entered in to Samadhi in Abbur.
When the Abbur Matha was being renovated and improved for the facility of devotees in the last few years, it appears that there was an idea to cover his Vrundavana also along with the rest of the area. However, Sri Brahmanya Theertha directed the reigning pontiff to leave it uncovered as at present – possibly because he is believed to be the incarnation of the Sun. Even in the prayer sloka given below seems to hint at this fact. Even today, a large number of devotees visit his Vrundavana and attain their desires by prayers and Seva at his feet.
His great disciple Sri Vyasaraja has composed the following slokas about his Guru.
kaMsadhvaMsipadAMbhOja saMsaktOhaMsapuMgavaH
brahmaNyagururAjAkhyO vartatAM mama mAnasE

samutsAryatama:stOmam sanmArga saMprakAshyacha

sadAviShNupadaasaktam sEvE brahmaNya bhaaskaram
The simple meanings of these two slokas are as follows:
May Sri Brahmanya Theertha the great ascetic who is always immersed in the lotus feet of the destroyer of the evil Kamsa (Krishna) always remain in my mind.

Worship and serve the great Brahmanya Theertha who is like the Sun which destroys darkness (of the mind) and shows the way (to Moksha) and who is always interested in the Lotus feet of Vishnu. (In the case of the Sun analogy, Vishnu pada means the sky).

After handing over mahasamsthana to Sri Vyasa Theertha (famous Sri Vyasaraja Theertha), he entered Vrundavana at Abbur.

**********

Shri 1008 Shri Brahmanya Gurugalu was third descendant from Sri Rajendra Tirtha in the line senior of disciples coming from Sri Vidyadhiraja Tirtha It was to the blessings of Brahmanya Tirtha that the parents of Vyasa Tirtha, (Brahmanya Tirtha's disciples), owed the birth of their children notably Sri Vyasa Tirtha (B.N.K. Sharma. 1961. History of the Dvaita School of Vedanta. page 460.).

Shri Brahmanya Tirtha's kArya ksethta was Abbur in Karnataka State.


The Yuvaraja of Channa patna had lost his legs on account of the mischief of the Junior MaharaNi. He took shelter at the feet of Sri


Brahmanyathirtha. He used to apply his pada Mruththika daily and in course of time got his legs back. He came to power and requested the saint to accept something as a token of gratitude. The saint did not want anything except the idol of Sri Vital kept in the Treasury. Even now this Idol is being pronounced as "BrhamaNya KaraaRchitha Sri Vittala Devaru" (J H B Acharya, 1977, "Haridasaru" )

Dhyana Sloka:


Kamsa Dwamsi PadhaamBhoja


Samsaktho Hamsa PungavaH|


Bramhanyathirtha Guru RajaaKhyo

Varthane Mama Maanase!


He was the third descendant from Sripad Rajendra Tirtha in the line senior of disciples coming from Sripad Vidyadhiraja Tirtha. I could find very little on his life, save and except where it  says that it was due to the blessings of Brahmanya Tirtha that the parents of Vyasa Tirtha, (Brahmanya Tirtha's disciples), owed the birth of their children notably Sripad Vyasa Tirtha(B.N.K. Sharma. 1961. History of the Dvaita School of Vedanta. page 460.).

As his permanent residence, Brahmanya Tirtha lived mostly at Cannapatna or Abbur in Karnataka State (B. Venkobarao. Vy-carita, Page 26.) There he had a Mutt of his own which later he was to entrust to his disciple Sridhar Tirtha. This Mutt which still survives today is called the Kundapur Mutt. His other disciple was the famous Sripad Vyasa Tirtha. 


 Brahmanya Tirtha's only accredited literary work was a 'gloss' on the Tatparya of Jaya Tirtha. However, even this is challenged as not entirely well founded, mostly because his disciple Vyasa Tirtha made no reference to it anywhere! 


 It is so unfortunate that these great devotees lives have slipped into obscurity, whether it was by their choice out of humility or just the influence of time. I guess now we will never really know. The Lord has his plan.


The Mutt lists give his demise as 1467 AD., this is accepted by the Vy-carita(B. Venkobarao, Vy-carita, introduction.). "It is however open to many objections. In the first plce, it gives his disciple Vyasa Tirtha a pontificial sway of over 70 years, which is too long. It also bestows on the latter a life of over 90 years which is not corroborated by other evidences. Venkoborao himself refers (pp. cxiv-cxv) to a tradion according to which Brahmanya died soon after a famine. On page 100 of his Forgotten Empire, Sewell says that 'about the 1475., the was a terrible famine in the Deccan and in the country of the Telugus, which lasted for two years(Also Ferishta, C. Scott edn. i, 162., S.I. I., page 227.). Venkobarao himself refers to two such famines which broke out in the years 1423-1425 and 1472-1474.,(Dharwar Gazetter, pp. 404-406.). The second one, it will be seen, syncronises with the date mentioned by Sewell. It is manifestly impossible that Brahmanya Tirtha could have died in the first famine. The date is too early for him. We have therefore to assume that it was after the famine of 1475-1476., that he died. The event, thus, cannot be placed earlier than 1476."(B.N.K. Sharma. 1961. History of the Dvaita School of Vedanta. page 460.).


On that sad note we push on to the next in line. Sadness turns to jubilation as we remember the increadible life of the disciple of Brahmanya Tirtha, Sripad Vyasa Tirtha. 

Abbur is a village in the southern state of Karnataka, India. 

It is located in the Channapatna taluk of Bangalore Rural district in Karnataka.  You have to get down at Channapatna and need to take rural bus to Abbur Village.  This place is a religious place for all madhwa brahmins. Yathi Brahmanya Theertha's moola vrundavan is located in this place apart from Yogapattika Sri Lakshminarasimha temple. The village is holy place situated on the banks of river Kanwa.

*******



Sri Brahmanya Theertharu was born in Nrihari kshethra on the banks of the Cauvery and was named Narasimha. The boy was sent to Sri Purushotthama Theertharu at the young age of 7 after his Upanayana samskara. Sri Purushotthama Theertharu was next in line to Sri Jayadhwaja Theertharu whose name is preserved for posterity for his founding of the Dvaita school in the north, specially in Navadvipa (modern Bengal). ISKON followers call his name as Jayadharma.



Narasimha was a precocious pupil with great intelligence, devotion to God and disinterest in the affairs of the world. Sri Purushotthama Theertharu had already received some indications in dreams about his pupil. The education of Narasimha was completed in a short while and he was also given the oaths of Asceticism and called Sri Brahmanya Theertharu by his Guru. Very soon the latter entered a cave near Abbur and disappeared from human view. A miracle attributed to Sri Brahmanya Theertharu was that when he sprinkled some consecrated water on cold cooked food after Puja, it became fresh and hot.



There was a rich and pious Brahmin who had started on a pilgrimage to Banaras. His location is not clearly specified, but it is said that he also lived on the shore of Cauvery river (Called Marudvrudha in the Rigveda). Unfortunately, he died suddenly after getting fever. His wife who wanted to commit Sathi along with her husband (they were childless at the time) came to beg permission of Sri Brahmanya Theertharu, the worshipper of Nrusimha deity given to him by his Guru. Sri Brahmanya Theertharu blessed the widow - "Dheergha sumangalee bhava" - Be happy as a wife in wedded bliss for a long time. When she told him that she was no longer having a husband, Sri Brahmanya Theertharu told her - do not worry. Your husband is not dead, but is still alive. He gave her holy water with incantations, which when applied to the dead body of the husband brought him back to life, as if nothing had happened. As per the Swamiji's desire, the first born of this couple was given even as a young baby, to him. This baby was received on a golden plate and fed with the milk used for Abhisheka of the Lord. The baby who grew up into the great Sri Vyasaraja Theertharu, was given his Upanayana Samskara at the age of 5 and took the oath of asceticism at the age of 7. Though Sri Brahmanya Theertharu himself was greatly learned as described by his own disciple and successor Sri Vyasaraja Theertharu, he was sent for his studies to Sri Sripadaraja Theertharu at Mulbagal. He became famous for his erudition, scholarship, great qualities of complete disinterest in personal factors and became the fountain head of learning for Tatvavada in his time.


In the mean while Sri Brahmanya Theertharu received the idol of Vittala as a result of a dream indication, from where it was buried in the ground. He went to Karnataka capital (possibly Srirangapattana) and on being requested by the king and people of the state, which was suffering from drought, brought back copious rains. The grateful kingdom gave the ascetic a village called Brahmanyapuri. After handing over his reign to the worthy successor, he entered in to Samadhi in Abbur.

When the Abbur Matha was being renovated and improved for the facility of devotees in the last few years, it appears that there was an idea to cover his Vrindavana also along with the rest of the area. However, Sri Brahmanya Theertharu directed the reigning pontiff to leave it uncovered as at present - possibly because he is believed to be the incarnation of the Sun. Even in the prayer shloka given below seems to hint at this fact. Even today, a large number of devotees visit his Vrindavana and attain their desires by prayers and Seva at his feet.


********


info is from FB madhwanet--->

He is sUryAmsha sambhUtaru. 

shri purushOtama tIrtharu gave the sanyAsa to the brahmachari narasimha as per swapna sUchane and named him brahmaNya tIrtharu. 

Birth of vyAsarAjaru:

Once when brahmaNya tIrtharu was on tour in Bannur, rAmAchArya, an aged brahmin had died. rAmAchAryA's wife wanted to do “sahagamana” with her husband and came to Swamiji for seeking permission for doing so. But brahmaNya tIrtharu, even before her seeking permission told her “dhIrga sumangalI bhava”., “suputravatI bhava”. On seeing this all the pandits were surprised that a widow is being blessed with the boon of dhIrga sumangalitva. Then they appraised swAmIji of the situation. But swAmIji said, “It is told by gOpalakrishna dEvaru, and her husband will survive and he will be shatAyushi and would have two children". Saying this, Swamiji gave her “mantrOdaka”. As soon as she came near the dead body of her husband she did the “prOkshaNa” of mantrOdaka given by the seer, rAmAchAr got up as if he was getting up from sleep. Afterwards, shri  vyAsarAjaru was born to the aged parents and he was handed over to the maTa. vAsarAjaru was brought up by shri brahmaNya tIrtharu himself right from birth. Post initial education and sanyAsa diksha, he sent vyAsarAjaru to shripAdarAjaru for further studies as shri shripAdarAjaru was running a University at muLabAgilu. 

shri shripAdarAjaru was a younger cousin of shri brahmaNya tIrtharu. Their mothers were sisters.

How malUrU near channapaTTaNa got its name:

Once there lived a king named thimmarAsa. He had a son named sArangadhAra. When sArangadhAra's mother died, thimmarAsa, even though he was aged, married another Rajakumari. But rAjakumari, as she was young, was not happy with the marriage. She wanted to have an unholy relationship with sAranghadAra. When sArangadhAra rejected her request, she told her husband that sArangadhAra tried to misbehave with her. Then the king ordered his servants to cut his son's legs and hands, tie him and throw him into the kaNva River. The servants obeyed the kings orders. shri brahmaNya tIrtharu was doing “ahnIka” on the river banks and he saw the prince floating. Realising the facts, swAmIji did the “abhimantraNa” of mruthike on the body of the prince and he gradually developed his legs and arms and he became normal again. That place hence came to be called "moLeta kAlUrU". Now it is known as malUru. 

The "ambEgAl krishNa" in the apramEya temple in maLUru was installed by shri vyAsarAjaru. Purandara dAsaru composed "ADisidaL yashOda..." on this diety. There is a reference to apramEya swAmy in the song. He is the main diety in the temple. 

brahmaNya tIrtharu did the “Bara Parihara” (Famine relief) in Vijayanagar kingdom by chanting Parjanya Japa.

He did the “narasimha dwajastambha” sthApane in Brahmanyapura, which is near channapaTTaNa. He did the pratisTApane of mukhyaprANa in Brahmanyapura along with shri  shripAdarAjaru and shri vyAsarAjaru. He also built a tank for storing drinking water for the villagers. Both praNadEvaru and the tank can be seen in the village today.

Has written commentary on tatva prakAshika. 

shri guru gOvinda viTTala dAsaru has composed a dEvaranAmA on shri brahmaNya tIrtharu.

shri vyAsarAjaru in tAtparya chandrika extolled his gurugaLu  with the following shLOka. 

samutsAryatama:stOmam 
sanmArga samprakAshyacha |
sadA vishNupadAsaktam 
sEvE brahmaNya bhAskaram ||


shri brahmaNya tIrtha guruvAntargata, maharudradeva guruvAntargata, shri bhArathiramana mukhyaprANantargata, rukmiNi sathyabhAma samEta shri mUla gOpAlakrishNa dEvara pAdAravindakke gOvindA gOvindA...

Shri krishNArpaNamastu....

*******





Abbur 2.11.18








******


*******
#ಸೇವೇ #ಬ್ರಹ್ಮಣ್ಯಭಾಸ್ಕರಮ್

  #ಸೂರ್ಯಾಂಶ #ಸಂಭೂತರಾದ #ಶ್ರೀ೧೦೮ಶ್ರೀ #ಶ್ರೀಬ್ರಹ್ಮಣ್ಯತೀರ್ಥರ #ಆರಾಧನಾ.
ಮಾಧ್ವ ಪರಪರಂಪರೆಯಲ್ಲಿ ಬಂದಂತವರು ಶ್ರೀಬ್ರಹ್ಮಣ್ಯತೀರ್ಥರ ಹೆಸರು ಕೇಳದವರು ಯಾರು ಇಲ್ಲ ಎಂದು ಹೇಳಬಹುದು. "ಮಾಧ್ವ ಪರಂಪರೆಯಲ್ಲಿ ಬಂದ ಅಪರೋಕ್ಷ ಜ್ಞಾನಿಗಳಲ್ಲಿ 🌞ಸೂರ್ಯಾಂಶ ಸಂಭೂತರಾದ🌞 ಶ್ರೀಬ್ರಹ್ಮಣ್ಯತೀರ್ಥರು."  ಅವರ ಸ್ತೋತ್ರದಲ್ಲೇ ಹೇಳುವಂತೆ ..
"ಸೇವೇ ಬ್ರಹ್ಮಣ್ಯಭಾಸ್ಕರಮ್ ||" ಭಕ್ತಿಯಿಂದ ಶ್ರೀಬ್ರಹ್ಮಣ್ಯತೀರ್ಥರ ಸೇವೆಯನ್ನು ಮಾಡಿದರೆ ಸೂರ್ಯನಂತೆ ಅತಿ ಶೀಘ್ರದಲ್ಲಿ ಪ್ರಸನ್ನರಾಗಿ ಅವರ ಇಚ್ಛೆಯನ್ನು ಪೂರೈಸುವರು. ನಮಗೆ ಶ್ರೀವ್ಯಾಸರಾಜರು ಎಂಬ ದಿವ್ಯ "ಗ್ರಂಥ ರತ್ನ-ತ್ರಯಕಾರರಾದ [ಚಂದ್ರಿಕಾ, ನ್ಯಾಯಾಮೃತಾ ಮತ್ತು ತರ್ಕತಾಂಡವಾ] ; ಕಾಮಧೇನೂ, ಚಿಂತಾಮಣಿಯನ್ನೂ ಕೊಟ್ಟಂತಹ ಶ್ರೀ೧೦೮ಶ್ರೀ ಶ್ರೀವ್ಯಾಸರಾಜರ ಗುರುಗಳು *ಶ್ರೀ೧೦೮ಶ್ರೀ ಶ್ರೀಬ್ರಹ್ಮಣ್ಯತೀರ್ಥರು".

ಕಂಸಧ್ವಂಸಿಪದಾಂಭೋಜ ಸಂಸಕ್ತೋ ಹಂಸಪುಂಗವಃ|
ಬ್ರಹ್ಮಣ್ಯಗುರುರಾಜಾಖ್ಯೋ
ವರ್ತತಾಂ ಮಮ ಮಾನಸೇ||
 
ಜನ್ಮನಾಮ : ನರಸಿಂಹ 
ಜನ್ಮಸ್ಥಳ : ಅಬ್ಬೂರು., ಕಣ್ವಮುನಿಗಳ ತಪೋಭೂಮಿ 
ಆಶ್ರಮ ಗುರುಗಳು : ಶ್ರೀ೧೦೮ಶ್ರೀ ಶ್ರೀಪುರುಷೋತ್ತಮತೀರ್ಥರು 
ಆಶ್ರಮ ಶಿಷ್ಯರು : ಶ್ರೀ೧೦೮ಶ್ರೀ ಶ್ರೀವ್ಯಾಸರಾಜರು 
ವೇದಾಂತ ಸಾಮ್ರಾಜ್ಯದ ಕಾಲ : [1443  ರಿಂದ 1467.]
ವೃಂದಾವನ ಸ್ಥಳ : ಅಬ್ಬೂರು 
ಬ್ರಹ್ಮಣ್ಯತೀರ್ಥರ ಪರಂಪರೆಯಲ್ಲಿ ಅವರ ಪ್ರಶಿಷ್ಯರಾದ ಶ್ರೀ೧೦೮ಶ್ರೀ ಶ್ರೀಶ್ರೀನಿವಾಸತೀರ್ಥರು ಶ್ರೀಬ್ರಹ್ಮಣ್ಯತೀರ್ಥರ ಜೀವನ ಚರಿತ್ರೆಯ "ಶ್ರೀಬ್ರಹ್ಮಣ್ಯತೀರ್ಥ ವಿಜಯ" ಎಂಬ ಕಾವ್ಯವನ್ನು ರಚಿಸಿದ್ದಾರೆ .ಅದರಿಂದ ಕೆಲವೊಂದು ಮಾಹಿತಿಗಳನ್ನು ನೋಡೋಣ. 
ಪೂರ್ವಾಶ್ರಮದ ಇವರ ತಂದೆ ಶ್ರೀರಾಮಾಚಾರ್ಯರು .
ಇವರು ಪೂಗವನ ವಂಶ  - ಇವರ ಆರಾಧ್ಯದೈವ ಶ್ರೀನರಸಿಂಹ. ಆ ನರಸಿಂಹನ ಅನುಗ್ರಹ ಪ್ರಸಾದದಿಂದ ಅವರಿಗೆ ಒಬ್ಬ ಸುಪುತ್ರ ಜನಿಸುತ್ತಾರೆ, ಆ ಮಗುವಿಗೆ  ಕುಲದೈವ ನರಸಿಂಹನ ಹೆಸರನ್ನೇ ಇಡುತ್ತಾರೆ. ಬಾಲ್ಯದಲ್ಲೇ ತಮ್ಮ ಮನೆಯಲ್ಲಿ ಇದ್ದ ಆಚಾರ್ಯರ ಗ್ರಂಥಗಳನ್ನು ಅಭ್ಯಾಸ ಮಾಡುವಷ್ಟು ಶ್ರೀರಾಮಾಚಾರ್ಯರು ನರಸಿಂಹಾಚಾರ್ಯರಿಗೆ ಮಾರ್ಗದರ್ಶನ ಮಾಡಿಸಿರುತ್ತಾರೆ.  ಮುಂದೆ ಎಂಟನೇ ವರ್ಷದಲ್ಲಿ ಉಪನಯನ ಮಾಡಿ ಹೆಚ್ಚಿನ ಅಭ್ಯಾಸಕ್ಕಾಗಿ ಶ್ರೀಪುರುಷೋತ್ತಮ ತೀರ್ಥರಲ್ಲಿ ಕಳುಹಿಸುತ್ತಾರೆ.  ತರ್ಕ., ಮೀಮಾಂಸಾ., ಶ್ರೀಮನ್ನ್ಯಾಯಸುಧಾ ಮುಂತಾದ ಗ್ರಂಥಗಳಲ್ಲಿ ಪರಿಣತಿನಂತರ ಈ ಶ್ರೀನರಸಿಂಹಚಾರ್ಯಾರೇ ಹಂಸನಾಮಕನ ಪರಂಪರೆಯ ಪೂರ್ವಮಠಾದಿ ಶ್ರೀ೧೦೮ಶ್ರೀ ಶ್ರೀರಾಜೇಂದ್ರತೀರ್ಥರ ಪೀಠಕ್ಕೆ ಸೂಕ್ತ ವ್ಯಕ್ತಿ  ಎಂದು ಗುರುಗಳು ನಿರ್ಧರಿಸುತ್ತಾರೆ.

ಅಂದೇ ರಾತ್ರಿ ಶ್ರೀ೧೦೮ಶ್ರೀ ಶ್ರೀಪುರುಷೋತ್ತಮತೀರ್ಥರಿಗೆ ಸ್ವಪ್ನ ಸೂಚನೆಯಾದಂತೆ ತಮ್ಮ ಪ್ರಿಯ ಶಿಷ್ಯ ನರಸಿಂಹನಿಗೆ ತಮ್ಮ ಪೀಠದ ಉತ್ತರಾಧಿಕಾರಿಯಾಗಿ ನೇಮಿಸಲು ಸೂಚನೆಯಾಯಿತು. ನಂತರ ಅವರಿಗೆ ಸಂನ್ಯಾಸಾಶ್ರಮವಿತ್ತು  "ಶ್ರೀಬ್ರಹ್ಮಣ್ಯತೀರ್ಥ" ಎಂಬ ಆಶ್ರಮ ನಾಮಕರಣ ಮಾಡಿರುತ್ತಾರೆ. 
ಆಶ್ರಮಾನಂತರ ಶ್ರೀ೧೦೮ಶ್ರೀ ಶ್ರೀಪುರುಷೋತ್ತಮತೀರ್ಥರು ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸಲು ನಿಶ್ಚಯಿಸಿ ಅಬ್ಬೂರು ಸಮೀಪದ ಬೆಟ್ಟದ ಗುಹೆಯೊಂದರಲ್ಲಿ ಪ್ರವೇಶಿಸಿದರು. ಇಂದಿಗೂ ಆ ಗುಹೆಗೆ "ಪುರುಷೋತ್ತಮ ಗುಹೆ / 🐅 ಹುಲಿ ಗುಹೆ." ಎಂದೇ ಹೆಸರು .ಅವರ ಬೃಂದಾವನವಿಲ್ಲಾ ಆ ಗುಹೆಗೆ ಪೂಜೆ.  ಇಂದಿಗೂ ಗ್ರಾಮಸ್ಥರು ಹೇಳುವ ಪ್ರಕಾರ ಶ್ರೀಪುರುಷೋತ್ತತೀರ್ಥರನ್ನು "ಹುಲಿ ಸ್ವಾಮಿಗಳು" ಎಂದು ಕರೆಯುತ್ತಾರೆ. ಆಗಿನ ಕಾಲದಲ್ಲಿ ಶ್ರೀ೧೦೮ಶ್ರೀ ಶ್ರೀಬ್ರಹ್ಮಣ್ಯತೀರ್ಥರಿಗೆ ಏನಾದರೂ ಸಂದೇಹ ಉಂಟಾದಲ್ಲಿ ಶ್ರೀ೧೦೮ಶ್ರೀ ಶ್ರೀಪುರುಷೋತ್ತಮತೀರ್ಥರನ್ನು ಸ್ಮರಿಸಲು, ಹುಲಿಯ ಮೇಲೆ ಕುಳಿತು ಮಠಕ್ಕೆ ಬಂದು ಶಾಸ್ತ್ರಸಂದೇಹಗಳನ್ನು ನಿವಾರಣೆ ಮಾಡುತ್ತಿದ್ದರಂತೆ. 

"ಶ್ರೀಬ್ರಹ್ಮಣ್ಯತೀರ್ಥರು ಪ್ರತಿದಿನ ಕಣ್ವನದಿಯಲ್ಲಿ ಮೂರು ಹೊತ್ತು ಸ್ನಾನ ಪ್ರಣವ ಮಂತ್ರ ಜಪ, ಶಿಷ್ಯರಿಗೆ ಪಾಠ-ಪ್ರವಚನ ನಡೆಸುತ್ತಿದ್ದರು.  ತಮ್ಮ ಶಿಷ್ಯರು ಮಧುಕರ ವೃತ್ತಿಯಿಂದ [ಅಂದರೆ ಆ ಕಾಲದಲ್ಲಿ ಮಠದ ಪರಿಕಲ್ಪನೆ ಇರಲಿಲ್ಲ , ಶ್ರೀವ್ಯಾಸರಾಜರ ಕಾಲದಿಂದ ಮಠ ಎಂಬ ಪರಿಕಲ್ಪನೆ ಬಂದಿದ್ದು].ತಂದ ಪಕ್ವಾನ್ನವನ್ನು ಪುನಃ ಕಣ್ವ ನದಿಯಲ್ಲಿ ತೊಳೆಸಿ , ಪುನಃ ಅವರು ತೀರ್ಥ ಪ್ರೋಕ್ಷಿಸಲು ಬಿಸಿ ಬಿಸಿಯಾಗಿ ಸುವಾಸನಾ ಭರಿತ ಪಕ್ವಾನ್ನವಾಗಿಸಿ  ಶ್ರೀನರಸಿಂಹ ಮತ್ತು ಪಟ್ಟದ ದೇವರಿಗೆ ಸಮರ್ಪಿಸಿ ಶಿಷ್ಯರೊಂದಿಗೆ ಭಿಕ್ಷಾ ಸ್ವೀಕರಿಸುತ್ತಿದ್ದರು. ಹೀಗೆ ಸದಾ ತಪಸ್ಸಿನಲ್ಲಿ ಕಾಲ ಕಳೆಯುತ್ತಿದ್ದರು."

"ಶ್ರೀಬ್ರಹ್ಮಣ್ಯತೀರ್ಥರು ಶ್ರೀಹರಿ ಪೂಜೆಗೂ ಮುನ್ನ ಕಲಶ ಪೂಜೆ ಮಾಡಲು ಅಲ್ಲಿ ಪ್ರತ್ಯಕ್ಷ ದೇವತಾ ಸನ್ನಿಧಾನ ಬರುತ್ತಿತ್ತು. ಪ್ರತ್ಯಕ್ಷ ದೇವತಾ ರೂಪ ದರ್ಶನ ಮಾಡಿ ಅಭಿಮಂತ್ರಿಸಿ ಸಾನಿಧ್ಯವಾಗಿದ್ದರಿಂದ ಅವರ ಶಿಷ್ಯರಿಗೆ ಆ ಕಲಶಗಳನ್ನು ಎತ್ತಲೂ ಆಗುತ್ತಿರಲಿಲ್ಲ."

ಹೀಗೆ ಮುಂದೆ ದಿಗ್ವಿಜಯ ಸಂಚಾರ, ವಾದಿ-ವಿಜಯ, ಸಜ್ಜನೋದ್ಧಾರ, ಮಧ್ವಮತ ಪ್ರಚಾರ ಇವೆ ಮೊದಲಾದ ಮುಖ್ಯಕಾರ್ಯಗಳಾಗಿತ್ತು ಇವರ ದಿನಚರಿ.  ಒಮ್ಮೆ ತಮ್ಮ ಯಾತ್ರೆಯ ವೇಳೆ ವಿಜಯನಗರ ಸಾಮ್ರಾಜ್ಯಕ್ಕೆ ಹೋಗುತ್ತಾರೆ, ಅಲ್ಲಿನ ದೇವಾಲಯದಲ್ಲಿ ಸ್ವರ್ಣ-ಪೀಠದಲ್ಲಿ ಪೂಜೆಯನ್ನು ನೆರವೇರಿಸಿದರು. ಆ ವೇಳೆಗೆ ಅಲ್ಲಿನ ಜನರೆಲ್ಲಾ ಬಂದು ಈ ಸ್ಥಳದಲ್ಲಿ ಹಲವಾರು ವರುಷಗಳಿಂದ ಅನಾವೃಷ್ಟಿಯಾಗಿದೆ. ನಾವು ಮಾಡಿದ ಜಪಹೋಮಾದಿಗಳೆಲ್ಲಾ ವ್ಯರ್ಥವಾಗಿದೆ ,ಅದರ ಪರಿಹಾರಕ್ಕಾಗಿ ತಾವು ಈ ಕ್ಷಾಮವನ್ನು ಪರಿಹರಿಸಬೇಕೆಂದು ಕೇಳಿದಾಗ ಶ್ರೀಬ್ರಹ್ಮಣ್ಯತೀರ್ಥರು ಶ್ರೀಹರಿಯನ್ನು ಪ್ರಾರ್ಥಿಸಿ ತಮ್ಮ ಶಿಷ್ಯರಿಂದ ಪರ್ಜನ್ಯ ಜಪವನ್ನು ಮಾಡಿಸಿದರು. ಜನಗಳಿಗೆ ಅಚ್ಚರಿಯೋ ಅಚ್ಚರಿ, ಒಂದು ತೊಟ್ಟು ನೀರಿಲ್ಲದ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತು. ಬರಪ್ರದೇಶವು ಸುಭಿಕ್ಷವಾಯಿತು. 
ಶ್ರೀವ್ಯಾಸರಾಜರ ಜನನ 
ಅಬ್ಬೂರಿನಲ್ಲಿ ಶ್ರೀಬ್ರಹ್ಮಣ್ಯತೀರ್ಥರು ವಾಸವಾಗಿದ್ದ ಸಮಯದಲ್ಲಿ ಒಂದೊಮ್ಮೆ ಷಾಷ್ಠಿಕ ಕುಲೋತ್ಪನ್ನರಾದ ಓರ್ವ ಬ್ರಾಹ್ಮಣ ತನ್ನ ಪತ್ನಿಸಹಿತ ಕಾಶೀಯಾತ್ರೆಗೆ ಹೊರಟಿದ್ದರು. ಮಾರ್ಗ ಮಧ್ಯ ಆಯಾಸದಿಂದ ಜ್ವರ ಬಂದು  ಜ್ವರ ಹೆಚ್ಚಾಗಿ ಮೃತರಾಗಲು, ಆ ಭಾರ್ಯೆ ದುಃಖಿತರಾಗಿ ಪತಿಯೊಂದಿಗೆ ಸಹಗಮನ ಮಾಡಲು ಸಿದ್ಧಳಾಗಿ ಗುರುಗಳು ಅಪ್ಪಣೆ ಪಡೆದು ಬರಲು ಅವರಿಗೆ  ಪ್ರಣಾಮ ಮಾಡಿದಳು. ಅವರು "ದೀರ್ಘಸುಮಂಗಲೀ ಭವ" ಎಂದು ಆಶೀರ್ವದಿಸಿದರು. ನಂತರ ಮತ್ತೊಮ್ಮೆ ನಮಸ್ಕಾರ ಮಾಡಲು "ಸುಪುತ್ರವತೀ ಭವ" ಎಂದು ಆಶೀರ್ವದಿಸಿದರು. ಅವರ ಶಿಷ್ಯರು ಎಲ್ಲರೂ ಶ್ರೀಬ್ರಹ್ಮಣ್ಯತೀರ್ಥರಲ್ಲಿ ಈಗಾಗಲೇ ಅವಳ ಪತಿ ಮೃತನಾಗಿದ್ದಾನೆ ಎನ್ನಲು, ನನ್ನ ಬಾಯಿಂದ ಎಂದೂ ಭಗವಂತನು ಸುಳ್ಳಾಡಿಸಲಾರ ಹಾಗಾಗಿ ಶ್ರೀಹರಿಯೇ ಹೇಳಿಸಿದ್ದಾನೆ ಎಂದ ಮೇಲೆ ಅವಶ್ಯವಾಗಿ ಅವಳ ಪತಿಯು ಬದುಕಿದ್ದಾರೆ ಎಂದು ತೀರ್ಥ ಪ್ರೋಕ್ಷಿಸಲು ಹೇಳಿದರು., ಆಮೇಲೆ ಮೊದಲಿನಂತೆ ಎದ್ದು ಕುಳಿತರು ಆ ಬ್ರಾಹ್ಮಣ."

ತದನಂತರ ಶ್ರೀಬ್ರಹ್ಮಣ್ಯತೀರ್ಥರು ಇವರಿಗೆ ನಿಮಗೆ ಮುಂದೆ ಸತ್ಪುತ್ರರು ಜನಿಸುತ್ತಾರೆ, ಮೊದಲ ಪುತ್ರನನ್ನು ನೀವು ಭೂ-ಸ್ಪರ್ಶ ವಿಲ್ಲದೇ ಮಠಕ್ಕೆ ಕೊಡಬೇಕು ಎನ್ನಲು ಅವರು ಒಪ್ಪಿ ನಂತರ ಪ್ರಸವ ಸಮಯದಲ್ಲಿ ಶ್ರೀಮಠದಿಂದ ಸ್ವರ್ಣ ಹರಿವಾಣವನ್ನು ಕಳುಹಿಸಿ ಭೂಸ್ಪರ್ಶವಿಲ್ಲದಂತೆ ಆ ಮಗುವನ್ನು ಶ್ರೀಮಠಕ್ಕೆ ತಂದು ಮೊದಲು ಕಣ್ವನದಿಯಲ್ಲಿ ತೊಳೆದು ;  ನಂತರ  ಮತ್ಸ್ಯಸಾಲಿಗ್ರಾಮಾದಿಗಳಿಗೆ ಅರ್ಪಿಸಿದ ಪವಿತ್ರ ಜಲ ಮತ್ತು ಕ್ಷೀರವನ್ನು  ಆ ಮಗುವಿಗೆ ಪ್ರಾಶನಮಾಡಿಸುತ್ತಾರೆ. 
ಕೆಲವು ವರ್ಷಗಳವರೆಗೂ ಆ ಸ್ಥಳವನ್ನು  "ಶ್ವೇತಶೀಲಾಹ್ರದ  ಅಥವಾ ಬಿಳಿಕಲ್ಲು ಮಡು" ಎಂದು ಕರೆಯುತ್ತಿದ್ದರು ಮತ್ತು ತೋರಿಸುತ್ತಿದ್ದರು. ನಗರೀಕರಣದಲ್ಲಿ ಇಂದು ಆ ಸ್ಥಳವನ್ನು ನಾವು ಕಳೆದು ಕೊಂಡಿದ್ದೇವೆ.
 ಮಧ್ವಮತಾನುಯಾಯಿಗಳಿಗೆ ಪ್ರಕೃಷ್ಟವಾದ ಸಂತೋಷವನ್ನುಂಟು ಮಾಡುವ ಸಲುವಾಗಿ ಸಾಕ್ಷಾತ್ ಶ್ರೀಪ್ರಹ್ಲಾದರಾಜರೇ ಅವತರಿಸಿ ಬಂದು ಮುಂದೆ ಶ್ರೀಬ್ರಹ್ಮಣ್ಯತೀರ್ಥರಿಂದ ಸಂನ್ಯಾಸದೀಕ್ಷೆ ಪಡೆದು ಸಕಲ ಅನ್ಯಮತಸ್ಥರಿಗೆ ಸಿಂಹಸ್ವಪ್ನರಾದ ಶ್ರೀವ್ಯಾಸರಾಜರಾಗಿರುತ್ತಾರೆ. 
ಮುಂದೆ ಶ್ರೀಬ್ರಹ್ಮಣ್ಯತೀರ್ಥರ ಪೂರ್ವಾಶ್ರಮ ಚಿಕ್ಕಮ್ಮನ ಮಗನಾದ ಶ್ರೀಲಕ್ಷ್ಮೀನಾರಾಯಣ ಮುನಿಗಳಾಗಿದ್ದ ಶ್ರೀಪಾದರಾಜರಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಳುಹಿಸುತ್ತಾರೆ.

ಮುಂದೆ ಇವರಿಂದ ಹೊಸ ಕ್ಷೇತ್ರ ಮಳೂರು ನಿರ್ಮಾಣವಾಯಿತು ಚಿಕ್ಕಗಂಗವಾಡಿಯ ರಾಜ ತಿಮ್ಮರಸು ಎಂಬ ರಾಜನಿಗೆ ಸಾರಂಗಧರ ಎಂಬ ಪುತ್ರನಿದ್ದ ನೋಡಲು ತರುಣ, ಆದರೆ ಇವನ ಮಲತಾಯಿ ಇವನನ್ನು ಕಾಮಿಸಲು ಸಾರಂಗಧರ ಒಪ್ಪದಿದ್ದಾಗ ಆ ಮಲತಾಯಿ ಇವನನ್ನು ನನ್ನ ಕಾಮಿಸಿದ ಎಂದು ಹೇಳಿ ಇವನ ಕೈಕಾಲುಗಳನ್ನು ಕತ್ತರಿಸುತ್ತಾಳೆ. 
"ಆದರೆ ಶ್ರೀಬ್ರಹ್ಮಣ್ಯತೀರ್ಥರ ದಯೆಯಿಂದ ಪುನಃ ಆ ಸಾರಂಗಧರನಿಗೆ ಕೈಕಾಲು  ಬರುತ್ತದೆ. ಆದರಿಂದ ಕೈಕಾಲು ಮೊಳೆತ ಊರು  ಮಾಳೂರು ಎಂದು ಆಯಿತು." 
ತಿಮ್ಮರಸು ರಾಜ ಅರ್ಧರಾಜ್ಯವನ್ನು ಕೊಡಬೇಕೆಂದು ನಿರ್ಧರಿಸಿದಾಗ ಶ್ರೀಬ್ರಹ್ಮಣ್ಯತೀರ್ಥರೇ ನಿರಾಕರಿಸಿದರು. 
ಮುಂದೆ ಶ್ರೀವ್ಯಾಸರಾಜರ ಕಾಲದಲ್ಲಿ ಕೃಷ್ಣದೇವರಾಯ ಶ್ರೀವ್ಯಾಸರಾಜರಿಗೆ ಗುರುಗಳ ಕಾಣಿಕೆ ಎಂದು 32-ಗ್ರಾಮಗಳನ್ನು ಕೊಡಲು ಅದನ್ನು ಶ್ರೀವ್ಯಾಸರಾಜರು ಅಲ್ಲಿದ್ದ ಮೂವತ್ತೆರಡು ಪಂಡಿತರಿಗೆ ಕೊಟ್ಟು, ಒಂದು ಗ್ರಾಮಕ್ಕೆ ಬ್ರಹ್ಮಣ್ಯಪುರ ಎಂದು ಹೆಸರಿಡುತ್ತಾರೆ, ಅದು ಇಂದಿಗೂ ಅದೇ ಹೆಸರಿನಲ್ಲಿ ಇರುವುದು ನಮ್ಮ ಮಧ್ವ ಪರಂಪರೆಯ ಹೆಮ್ಮೆ. ಮೊದಲು  ಅದೇ ಕ್ಷೇತ್ರದಲ್ಲಿ ಶ್ರೀಬ್ರಹ್ಮಣ್ಯತೀರ್ಥರು, ಶ್ರೀಶ್ರೀಪಾದರಾಜರು ಮತ್ತು ಶ್ರೀವ್ಯಾಸರಾಜರು ಸೇರಿ ಮುಖ್ಯಪ್ರಾಣದೇವರ ಪ್ರತಿಷ್ಠೆ ಮಾಡಿದ್ದಾರೆ.
ವಿಠಲ ಬೆಟ್ಟ ಮತ್ತು ಖಾದ್ರಿ ನರಸಿಂಹಸ್ತಂಭ ಇವರ ಕಾಲದಲ್ಲೇ ನಿರ್ಮಾಣವಾಗಿದ್ದು. 
ವ್ಯಾಸರಾಜರು ತಮ್ಮ 📜ನ್ಯಾಯಾಮೃತ ಮತ್ತು 📜ತಾತ್ಪರ್ಯ ಚಂದ್ರಿಕಾ ಗ್ರಂಥಗಳಲ್ಲಿ ಶ್ರೀ೧೦೮ಶ್ರೀ ಶ್ರೀಬ್ರಹ್ಮಣ್ಯತೀರ್ಥರನ್ನು ಸ್ತುತಿಸಿದ್ದಾರೆ.   

ಶ್ರೀ೧೦೮ಶ್ರೀ ಶ್ರೀಶ್ರೀನಿವಾಸತೀರ್ಥರು ಶ್ರೀಬ್ರಹ್ಮಣ್ಯತೀರ್ಥ ವಿಜಯ ಮತ್ತು ಮಂಗಳಾಷ್ಟಕ ರಚಿಸಿದ್ದಾರೆ. 
ಅಬ್ಬೂರಿನಲ್ಲಿ ಬ್ರಾಹ್ಮಣ ರೂಪಿಯಾದ ಹರಿಯಿಂದ ಸ್ವಪ್ನಚೋದಿತರಾಗಿ ಭೂಮಿಯಲ್ಲಿ ಹೂತು ಹೋಗಿದ್ದ ವಿಠಲನ ವಿಗ್ರಹ ತೆಗೆಸಿ ಆ ವಿಠಲ ಮೂರ್ತಿಯನ್ನು ಪೂಜಿಸುತ್ತಾ ಶ್ರೀಗಳು ಶಿಷ್ಯರೊಂದಿಗೆ  ಸಂಚಾರಮಾಡುತ್ತಾರೆ. 
ಹೀಗೆ ಅನೇಕ ಮಹಿಮೆಯನ್ನು ತೋರಿದ ಭಜಕರಿಗೆ ಕಾಮಿತಪ್ರದರಾದ ಶ್ರೀಬ್ರಹ್ಮಣ್ಯಯತಿ ಪುಂಗವರು ಶ್ರೀವ್ಯಾಸರಾಜರನ್ನು ವೇದಾಂತ ಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕಗೈದು., ವೈಶಾಖ ಬಹುಳ ಏಕಾದಶಿಯಂದು  ಶ್ರೀಹರಿಪಾದವನ್ನು ಅಲಂಕರಿಸಲು ತಮ್ಮ   *"ಅರ್ಯಮ್ಣೇ ವಿಲಿಯತ್ " ಸ್ವರೂಪದಲ್ಲಿ ಲೀನರಾದರು ".

"|| ಶ್ರೀ ಶ್ರೀಬ್ರಹ್ಮಣ್ಯತೀರ್ಥಾಯ ನಮಃ ||" 
ಎಂಬ ಅಷ್ಟಾಕ್ಷರ ಮಂತ್ರದಿಂದ ದುರ್ಲಭವಾದದ್ದು ಯಾವುದೂ ಇಲ್ಲ. ಶ್ರೀ೧೦೮ಶ್ರೀ ಶ್ರೀಶ್ರೀನಿವಾಸತೀರ್ಥರು ಶ್ರೀಬ್ರಹ್ಮಣ್ಯತೀರ್ಥರ ಸೇವೆಯಿಂದ  ಅನೇಕ ಪುಣ್ಯದ ರಾಶಿಗಳು ಬರುತ್ತವೆ ಮತ್ತು ಸೂರ್ಯ ಹೇಗೆ ಪ್ರಸನ್ನನಾಗಿ ಅತಿ ಶೀಘ್ರದಲ್ಲಿ ಆರೋಗ್ಯದಾಯಕನೋ ಹಾಗೇ ಇವರು ಅತಿ ಶೀಘ್ರದಲ್ಲಿ ವರಗಳನ್ನು ಕರುಣಿಸುತ್ತಾರೆ ಎಂದು ಕೊಂಡಾಡಿರುತ್ತಾರೆ. 
 " || ಶ್ರೀ ಶ್ರೀಬ್ರಹ್ಮಣ್ಯತೀರ್ಥಾಯ ನಮಃ || "
ಈ ಮಂತ್ರ ಜಪದಿಂದ ಸಕಲ ಅನಿಷ್ಟಗಳ ನಿವಾರಣೆಯನ್ನು ಹೇಳಿದ್ದಾರೆ. ಅವರ ಸೇವೆಯಿಂದ ರೋಗಿಯು ರೋಗರಹಿತನಾಗುವನು, ಅಪುತ್ರನು ಪುತ್ರವಂತನಾಗುವನು, ಯಾರು-ಯಾರು ಯಾವ-ಯಾವ ಬೇಡಿಕೆಗಳನಿಟ್ಟರೂ ಅವರವರ ಮನೋಬಯಕೆ ಶ್ರೀಬ್ರಹ್ಮಣ್ಯತೀರ್ಥರಿಂದ ಅನುಗ್ರಹೀತವಾಗುವುದು. ಲಕ್ಷೋಪಲಕ್ಷ ಜನ ಇವರ ಮಹಿಮೆ ತಿಳಿದಿದ್ದಾರೆ. 
"🌞ಸೂರ್ಯದೇವರೇ🌞" ಶ್ರೀಬ್ರಹ್ಮಣ್ಯತೀರ್ಥ ಯತಿ-ರೂಪದಿಂದ ಧರೆಗಿಳಿದು ನೃಸಿಂಹ ಸೇವಾಸಕ್ತರಾಗಿ ಕಾಮಿತಾರ್ಥಫಲಗಳನ್ನು ಕೊಡುವಂತಹಾ ಚಿಂತಾಮಣಿಯಾಗಿರುತ್ತಾರೆ. ನಮಗೂ ಸಮಸ್ತ ಸನ್ಮಂಗಳವನ್ನುಂಟು ಮಾಡಲಿ ಮತ್ತು ಇವರ ಬೃಂದಾವನ ಸಂದರ್ಶನದಿಂದ ಪಾಪ ಸಮೂಹ ದೂರವಾಗಿ ಭಗವಜ್ಞಾನ, ಭಕ್ತಿ, ವೈರಾಗ್ಯ ದ್ವಾರಾ ಮೋಕ್ಷವು ಕರಗತವಾಗಲಿ. 
|| ಶ್ರೀಮಧ್ವೇಶಾರ್ಪಣಮಸ್ತು ||
*****

ಶ್ರೀ ವಿಠ್ಠಲ ಪ್ರಸೀದತು 
ಎಲ್ಲ ಸಮೂಹದ  ಸದಸ್ಯರಿಗೂ ಅಬ್ಬುರಿನ ಯತಿಗಳಾದ ಶ್ರೀ ಬ್ರಹ್ಮಣ್ಯತೀರ್ಥರ ಆರಾಧನೆಯ ಪ್ರಯುಕ್ತ ಗುರು ಸ್ಮರಣೆಗಳು .
ಶ್ರೀ ಬ್ರಹ್ಮಣ್ಯ ಗುರುಗಳನ್ನು ವೈರಾಗ್ಯದಲ್ಲಿ ಸನಕಾದಿಗಳು ,ವಿವೇಕದಲ್ಲಿ ಬೃಹಸ್ಪತಿಗಳಂತೆ 
ಭಕ್ತಿಯಲ್ಲಿ ಶುಕಮುನಿಯಂತೆ ಮಾತೃ ವಾತ್ಸಲ್ಯದಲ್ಲಿ ಶ್ರೀವ್ಯಾಸರಾಯನ್ನು ಪೊರೆದವರೆಂದು ಭಕ್ತ ಕೋಟಿ ಕೊಂಡಾಡುತ್ತಾರೆ
ಇಂತ ಗುರುಗಳ ಪವಿತ್ರವಾದ ಆರಾಧನೆದಿನ ಇಂದು . ಆ ನಿಮಿತ್ತ  ಒಂದು ಗುರುವಂದನೆ .
ಅಬ್ಬುರಿನ ರಘುನಾಥಚಾರ್ಯ , ನಾರಾಯಣಾಚಾರ್ಯ  ಎಂಬ ಇಬ್ಬರು ಸೋದರ ಸಂಬಂಧಿಗಳ  ದೋಹಿತ್ರ ಸಂತತಿಯಲ್ಲಿ ಮಹಿಮಾನ್ವಿತರಾದ ಯತಿಗಳು ಬೆಳಕಿಗೆ ಬಂದರು . ಪ್ರಸ್ತುತ ನಾರಾಯಣಾಚಾರ್ಯರ ಮಗಳನ್ನು ರಾಮಾಚಾರ್ಯ ಎಂಬುವರ ಪುತ್ರ ನರಸಿಂಹಾಚಾರ್ಯರಿಗೆ ಕೊಡಲಾಗಿತ್ತು .
ನರಸಿಂಹದೇವರ ವರಪ್ರಸಾದದಿಂದ ಜನಿಸಿದ ಪುತ್ರ ಅವರು . ಮುಂದೆ ವೈರಾಗ್ಯ ಹೊಂದಿ ಶ್ರೀಬ್ರಹ್ಮಣ್ಯ ತೀರ್ಥರೆಂದೆನಿಸಿದರು .
ತಂದೆ ರಾಮಾಚಾರ್ಯರು ಉಪನಯನ ನಂತರ 
ವಿದ್ಯಾಭ್ಯಾಸಕ್ಕಾಗಿ ಪುರುಷೋತ್ತಮ ತೀರ್ಥರಲ್ಲಿ ಕಳುಹಿಸಿದ್ದರು . ನರಸಿಂಹಚಾರ್ಯರು  ಪುರುಷೋತ್ತಮ ತೀರ್ಥರಿಂದ ಆಶ್ರಮ ಸ್ವೀಕರಿಸಿ ಬ್ರಹ್ಮಣ್ಯ ತೀರ್ಥರೆನಿಸಿದರು .
ಸೂರ್ಯಾಂಶರೆಂದು ಎಲ್ಲರು ಅವರನ್ನು ಕೊಂಡಾಡುತ್ತಾರೆ.ಅವರ ಅಂತರಂಗದ  ಭಕ್ತಿ ಬಹಳ ಪ್ರಸಿದ್ದಿ . ತೋರಿಕೆಯ ಭಕ್ತಿಯೇ ಎಲ್ಲೆಲ್ಲೂ ವ್ಯಾಪಿಸಿರುವಾಗ ಅವರ ಪೂಜಾಕ್ರಮದಬಗ್ಗೆ ಒಂದು ಮಾಹಿತಿ . ಅವರಪೂಜೆ ಬಹಳ ಕ್ಷಿಪ್ರಗತಿಯಲ್ಲಿ ಮುಗಿಯುತ್ತಿತ್ತು . ಧ್ಯಾನದಲ್ಲೇ ಬಹಳಹೊತ್ತು ಕಳೆಯುತ್ತಿದ್ದ ಅವರನ್ನು ಕುಹಕಿಗಳು “ಸ್ವಾಮಿಗಳ ಪೂಜೆ ಚುಟುಕಿನಲ್ಲಿ ಚಪ್ಪರವೇದ್ದಷ್ಟೇ ಕ್ಷಿಪ್ರ”ಎಂದು ಲೇವಡಿಮಾಡಿದ್ದರು 
ಸ್ವಾಮಿಗಳು ಅಯ್ಯೋ ಅಜ್ಞಾನಿಗಳೇ  ಎಂದುಕೊಂಡು , ಎಡಬಲ ಸೇವೆಯ ಒಬ್ಬನನ್ನು ಕರೆದು “ನಾವು ವೃದ್ಧರಿದ್ದೇವೆ ನಮಗೆ  ಕಲಶೋಧಕವನ್ನು ಶಂಖದಲ್ಲಿ ಹಾಕಲು ಶಕ್ತಿಯಿಲ್ಲ  ನೀನೆ ಆ ಕೆಲಸಮಾಡು ಎಂದುಹೇಳಿದರು .  ಅವನು ಎಷ್ಟು ಪ್ರಯತ್ನ ಮಾಡಿದರು ಕಲಶವನ್ನು ಅಲ್ಲಾಡಿಸಲು ಸಾಧ್ಯವಾಗಲಿಲ್ಲ . ಆಗ ಆವ್ಯಕ್ತಿ ಆಕ್ಷೇಪಿಸಿದವರ ಪರವಾಗಿ ಕ್ಷಮೆ ಕೇಳಿದ . ಸ್ವಾಮಿಗಳು ನಕ್ಕು ತಮ್ಮ ಕಿರುಬೆರಳಿಂದ ಕಲಶೋಧಕವನ್ನು ಶಂಖದಲ್ಲಿ  ಹಾಕಿದರು . ಎಲ್ಲರು ಆಶ್ಚರ್ಯ ಪಟ್ಟಾಗ , ಸ್ವಾಮಿಗಳು ಹೇಳಿದರು , “ ನಾವು
ಶ್ರೀಹರಿಯ ಪರಿವಾರದೇವತೆಗಳನ್ನು ಆಯಾಸಾಮಗ್ರಿಗಳಲ್ಲಿ ಸನ್ನಿಹಿತರಾಗುವಂತೆ ಪ್ರಾರ್ಥಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತೇವೆ , ಅವರೇ ಆ ವಸ್ತುಗಳಲ್ಲಿ ಸನ್ನಿತರಾಗಿ ಸ್ವಾಮಿ ಪೂಜೆ ಮಾಡುವುದರಿಂದ ನಮ್ಮ ಪೂಜೆ ಕ್ಷಿಪ್ರವಾಗಿರುತ್ತದೆ “ ಎಂಬ ಧಿವ್ಯ ಸಂದೇಶ ಕೊಟ್ಟವರು .
ಬದರಿ ನಾರಾಯಣ ದರ್ಶನಕ್ಕೆ ಹೋದಾಗ ತಮಗೊಬ್ಬರು ಶಿಷ್ಯನನ್ನು ದಯಪಾಲಿಸು ಎಂದು
ಕೇಳಿ ಕೊಂಡಿದ್ದರ  ಫಲ  ಭಗವಂತ ದಯಪಾಲಿಸಿದ್ದು ಶ್ರೀ ವ್ಯಾಸರಾಜರಂತ ಮಹಿಮಾನ್ವಿತರನ್ನು .  ಬದರಿ ಕ್ಷೇತ್ರದಿಂದ ಬರುವಾಗ ಸಾತೇನಹಳ್ಳಿ ಎಂಬಲ್ಲಿ ಆ ಊರಿನ ಜನರ ಕೋರಿಕೆಯಂತೆ ಶ್ರೀ ಮುಖ್ಯಪ್ರಾಣರನ್ನು  ಪ್ರತಿಷ್ಠೆಮಾಡಿದರು .ಮುಂದೆ ಬಾಲಕ  ಯತಿರಾಜನನ್ನು ಮಾತೃವಾತ್ಸಲ್ಯದಿಂದ ಬೆಳೆಸಿ ಉಪನಯನಮಾಡಿ ಶ್ರೀಪಾದರಾಜಯತಿವರ್ಯರಲ್ಲಿ  ವಿದ್ಯಾಭ್ಯಾಸ ಕೊಡಿಸಿದರು . ವಿದ್ಯಾಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಅಬ್ಬುರಿನಿಂದ ಮುಳುಬಾಗಲಿಗೆ ಬಂದಿದ್ದವರು ಬ್ರಹ್ಮಣ್ಯ ತೀರ್ಥರು ಅಸ್ವಸ್ಥರಾಗಿದ್ದರೆಂದು ತಿಳಿಸಿ ಅವರನ್ನು ಗುರುಗಳ ದರ್ಶನಕ್ಕೆ ಕರೆದುಕೊಂಡು ಹೋದರು .
ಶ್ರೀ ಬ್ರಹ್ಮಣ್ಯ ತೀರ್ಥರು,  ತಮ್ಮ ಆಶ್ರಮ ಶಿಷ್ಯರನ್ನು  ನೋಡಿ ಸಂತೋಷಪಟ್ಟರು . ಶ್ರೀವ್ಯಾಸರಾಜರು ಅಲ್ಲಿಯೇ ಕೆಲವುಕಾಲ ಗುರುಗಳಸೇವೆಯಲ್ಲಿ ತೊಡಗಿದರು . ಗುರುಗಳು ಮಧ್ವಮತ ಸಿದ್ದಂತವನ್ನು ಎಲ್ಲೆಡೆ ಸಾರುವಂತೆ ಉಪದೇಶಿಸಿ ಹಾಗೆಯೇ ವಾಗ್ದಾನ ಮಾಡಿಸಿಕೊಂಡರು . ವೈಶಾಖ ಬಹುಳ  ದಶಮಿ  ೧೪೭೮ನೆ ಇಸವಿ 
ಶ್ರೀವ್ಯಾಸರಾಜರಿಗೆ ಸಂಸ್ಥಾನ ಒಪ್ಪಿಸಿ ಮರುದಿನ ಏಕಾದಶಿಯಂದು ಸಂಸ್ಥಾನಪೂಜೆ ಮಾಡಿ 
ಹರಿಪಾದದಲ್ಲಿ ಲೀನವಾದರು ಶ್ರೀ ಬ್ರಹ್ಮಣ್ಯ
ಗುರುರಾಯರು .ಇಂದಿಗೂ ಬೃಂದಾವನದಲ್ಲಿದ್ದು 
ಭಕ್ತರ ಭವರೋಗವನ್ನು ಕಳೆಯುತ್ತಿದ್ದಾರೆ ಸೂರ್ಯಾಂಶ ಸಂಭೂತರು .
ಶ್ರೀ ವ್ಯಾಸರಾಜರು ತಮ್ಮ ಗುರುಗಳನ್ನು.    “ಸಮುತ್ಸಾರ್ಯ  ತಮಸ್ತೋಮಮ್ ಸನ್ಮಾರ್ಗಮ್ 
 ಸದಾ ವಿಷ್ಣು ಪಾದಾಸಕ್ತಮ್ 
ಸೇವೆ ಬ್ರಹ್ಮಣ್ಯ ಭಾಸ್ಕರಂ “ ಎಂದು ತಮ್ಮ “ನ್ಯಾಯಾಮೃತ “ ದಲ್ಲಿ ಸ್ತುತಿಸಿದ್ದಾರೆ .  ಇದರ ಅರ್ಥ “ಅಜ್ಞಾನದಿಂದ ಕತ್ತಲೆಯನ್ನು ದೂರಮಾಡುವ ನಿಶ್ಚಯ ಜ್ಞಾನವೆಂಬ ಸರಿಯಾದ ಮಾರ್ಗವನ್ನು ತೋರಿಸುವ , ಗಗನದಲ್ಲಿ ಸಂಚರಿಸುವ ಸೂರ್ಯನನ್ನು ಹೋಲುವ ಶ್ರೀವಿಷ್ಣುಪಾದ ಭಜಕರಾದ  ಬ್ರಹ್ಮಣ್ಯ ತೀರ್ಥರನ್ನು ಸದಾ ಸೇವಿಸುತ್ತೇನೆ .” ಹಾಗೆ ಅವರ ಚರಮ ಶ್ಲೋಕ “ ಕಂಸ ದ್ವoಸಿ  ಪದಾಂಭೋಜಸಂಸಕ್ತೋ
ಹಮ್ಸಪುಂಗವಃ ಬ್ರಹ್ಮಣ್ಯ ಗುರುರಾಜಾಖ್ಯೋ ವರ್ತತಾಂ ಮಮಮಾನಸೇ “.                      ಶ್ರೀಕೃಷ್ಣನ ಪಾದಕಮಲಗಳಲ್ಲಿ ಆಸಕ್ತರಾದ ಯತಿಶ್ರೇಷ್ಠರಾದ  ಬ್ರಹ್ಮಣ್ಯ ತೀರ್ಥಗುರುಗಳು ಸದಾ ನನ್ನ ಮನಸ್ಸಿನಲ್ಲಿರಲಿ “ಎಂದು ಭಾವ .
ಒಂದು ಚಾರಿತ್ರಿಕ ಸಂಗತಿಯಂತೆ , ಶ್ರೀವ್ಯಾಸರಾಜ ಯತಿಗಳು ತಮ್ಮ ಗುರುಗಳಿದ್ದ ಅಬ್ಬೂರನ್ನು “ಬ್ರಹ್ಮಣ್ಯಪುರಿ “ ಎಂದು ಹೆಸರಿಟ್ಟು ಬ್ರಾಹ್ಮಣರಿಗೆ ದಾನ ಮಾಡಿದರೆಂದು ಇತಿಹಾಸ ಇದೆ .
            ||ನಾಹಂ ಕರ್ತಾ ಹರಿಃ ಕರ್ತಾ||
           ||ಶ್ರೀಕೃಷ್ಣಾರ್ಪಣಮಸ್ತು ||
***********


info from sumadhwaseva.com--->
ಮಾಧ್ವ ಪರಂಪರೆಯಲ್ಲಿ ಕಂಡು ಬಂದ ಮಹಾ ಶ್ರೇಷ್ಠ ಯತಿಗಳ ಯಾದಿಯಲ್ಲಿ ಕಾಣುವ ಶ್ರೀ ವ್ಯಾಸರಾಜರನ್ನು ಗುರುತಿಸಿ ಆಶ್ರಮ ನೀಡಿದವರೇ ಅಬ್ಬೂರಿನ ಬ್ರಹ್ಮಣ್ಯತೀರ್ಥರು.  ಆಚಾರ್ಯ ಮಧ್ವರ ಪರಂಪರೆಯಲ್ಲಿ ಶ್ರೀಪದ್ಮನಾಭತೀರ್ಥ, ನರಹರಿತೀರ್ಥ, ಮಾಧವತೀರ್ಥರು ಮತ್ತು ಅಕ್ಷೋಭ್ಯತೀರ್ಥರು, ನಂತರ ಜಯತೀರ್ಥರು, ವಿಧ್ಯಾಧಿರಾಜರು, ರಾಜೇಂದ್ರತೀರ್ಥರು, ಜಯಧ್ವಜತೀರ್ಥರನಂತರ ಪುರುಷೋತ್ತಮತೀರ್ಥರಿಂದ ಅಶ್ರಮ ಸ್ವೀಕರಿಸಿದ ಮಹಾನುಭಾವರೇ ಬ್ರಹ್ಮಣ್ಯತೀರ್ಥರು.  ಬ್ರಹ್ಮಣ್ಯತೀರ್ಥರ ಕಾಲ ೧೪೪೩ರಿಂದ ೧೪೬೭.  ನರಸಿಂಹನೆಂಬ ಜನ್ಮನಾಮದಿಂದ ಅಬ್ಬೂರಿನಲ್ಲಿ ಜನಿಸಿ,  ೮ನೇ ವಯಸ್ಸಿನಲ್ಲಿ ಉಪನಯನಗೊಂಡು, ಶ್ರೀ ಪುರುಷೋತ್ತಮತೀರ್ಥರಿಗೆ ಸ್ವಪ್ನಸೂಚಿತವಾಗಿ ನರಸಿಂಹನಿಗೆ ಸನ್ಯಾಸವನ್ನು ನೀಡಿ “ಬ್ರಹ್ಮಣ್ಯತೀರ್ಥ”ರೆಂದು ಪ್ರಸಿದ್ಧರಾದರು.

ರಾಗ – ಕಲ್ಯಾಣಿ    ತಾಳ – ಛಾಪುತಾಳ
ವೃಂದಾವನ ನೋಡಿರೋ  ನೀವೆಲ್ಲಾ  |
ಆನಂದವನ್ನೆ ಪೊಂದಿರೊ | ಪ |
ರಾಮಾಚಾರ್ಯರ ಪುತ್ರರೋ ಅವರು ಮಾಮನೋಹರ ನೃಹರಿ ದೂತರೋ
ಜನ್ಮ ಅಷ್ಟಕೆ ಬ್ರಹ್ಮಚರ್ಯ ಪೊಂದಿ ಬ್ರಹ್ಮವಿದ್ಯೆಯ ಪಡೆದರೋ |
ಪ್ರೇಮದಿಂದಲಿ ಬಂದು ತಾವ್ ಪುರುಷೋತ್ತಮತೀರ್ಥರ ಸಾರ್ದರೋ | ೧ |
ಕಾಯಜಪಿತನ ತಾನ್ವೊಲಿಸಿ ದೇಶಂಗಳ ಪ್ರೀಯದಿಂದಲಿ ಸಂಚರಿಸಿ |
ಮಾಯಾರಮಣನೂ ಜೀವನೂ ಒಂದೆಂಬ ಮಾಯಾವಾದಿಗಳ ತರಿದು |
ವಾಯುಮತ ಪ್ರೀತಿಯಲಿ ಅರುಹುತ ಪ್ರಿಯ ಅಬ್ಬೂರಲಿ ನೆಲಿಸಿದ | ೨ |
ವಿಟ್ಟಲ ನೃಹರಿ ಪೂಜೆಗೆ ನೇಮಿಸಿ ತಮ್ಮ ಪಟ್ಟ ಶಿಷ್ಯರು ವ್ಯಾಸತೀರ್ಥರ
ಅಟ್ಟಹಾಸದಿ ಸರ್ವಜಿತು ಸಂವತ್ಸರ ಕೃಷ್ಣ ಏಕಾದಶಿ ವೈಶಾಖ

ದಿಟ್ಟ ಗುರುಗೋವಿಂದ ವಿಠಲನ ದೃಷ್ಟಿಸಿ ತನು ಬಿಟ್ಟು ಪೊರಟನ | ೩ |
********



ಗುರುಗೋವಿಂದವಿಠಲರು


ಶ್ರೀ ಬ್ರಹ್ಮಣ್ಯ ತೀರ್ಥರು
ಪಾಲಿಸೊ ಗುರುವೆ ಬ್ರಹ್ಮಣ್ಯ | ತೀರ್ಥಕೇಳುವೆ ವರ ಸುರ ಮಾನ್ಯ ಪ
ಕಾಳೀಯ ರಮಣನ | ಲೀಲ ವಿನೋದವಕಾಲ ಕಾಲಕೆ ಸ್ಮರಿಪ | ಶೀಲಸನ್ಮನವ ಅ.ಪ.
e್ಞÁನ ದಾಯಕನಾಗಿ ಮೆರೆವಾ | ಸ್ಥಾನe್ಞÁನ ಮಂಟಪದೊಳು ಇರುವಾ |ಮೌನಿ ವರೇಣ್ಯರೆ ಆನತ ಸುರತರುದಾನವಾರಣ್ಯ ಕೃ | ಶಾನುವೆ ಪಾಲಿಸೊ 1
ಇಷ್ಟ ಜನರ ಪರಿಪಾಲಾ | ದಯದೃಷ್ಟಿಲಿ ಜನರಘ ಜಾಲಾ |ಸುಟ್ಟು ಭಸ್ಮೀ ಭೂತ | ಅಷ್ಟ ಸೌಭಾಗ್ಯದವಿಠ್ಠಲ ಚರಣೇಷ್ಟ | ಹೃಷ್ಟನ್ನ ಮಾಡೆನ್ನ 2
ರವ್ಯಂಶ ಸಂಭೂತ ನೆನಿಸೀ | ಸರಿತ್ಕಣ್ವ ತಟದಿ ನೀನು ನೆಲೆಸೀ |ಪವನಾಂತಸ್ಥ ಗುರು | ಗೋವಿಂದ ವಿಠಲನಸ್ತವನ ಮಾಳ್ಪರ ಕಾವ | ಭುವನ ಪಾವನ ದೇವ 3
*********


ಶ್ರೀವ್ಯಾಸತೀರ್ಥರಂತಹ ಲೋಕೋತ್ತರ ವಿದ್ವದ್ವಿಭೂತಿಯನ್ನು ಶ್ರೀವ್ಯಾಸ-ಮಧ್ವರ ಸಿದ್ಧಾಂತ ಪ್ರವರ್ಧನೆಗೆ ಸಮರ್ಪಿಸಿದ ಮಹಾತಪಸ್ವಿ ಶ್ರೀಬ್ರಹ್ಮಣ್ಯತೀರ್ಥರು. ಶ್ರೀವ್ಯಾಸರಾಜರೇ ತಮ್ಮ ಆಶ್ರಮಗುರುಗಳನ್ನು ಕುರಿತು " ಶುಭತಮ ಚರಿತರು, ಗುರುಗುಣ ಭರಿತರು, ಕಾಮಕ್ರೋಧಾದ್ಯತೀತರು, ಮಾದ್ಯನ್ಮಾಯಿಗಜೇಂದ್ರ ಪಂಚವದನ ಸದೃಶರು, ಶ್ರೀಮದ್ವಿಠ್ಠಲಪಾದಪದ್ಮಮಧುಪರು, ವಿಮಲವಾದ ಜ್ಞಾನ, ವಾಕ್ಸಿದ್ಧಿ, ವಾಕ್ ಶುದ್ಧಿ, ಮಂತ್ರಸಿದ್ಧಿ, ತಪಸ್ಸು, ಶಾಂತಿ, ದಾಂತಿ, ಉಪರತಿ, ತಿತಿಕ್ಷಾ ಮೊದಲಾದ ಗುಣಗಳಿಂದ ಭರಿತರು, ಬುಧಜನರಿಂದ ಶ್ಲಾಘ್ಯವಾದ ಗುಣವುಳ್ಳವರು" ಮೊದಲಾದ ಪದವೃಂದಗಳಿಂದ ಸ್ತುತಿಸುತ್ತಾರೆ ಎಂದರೆ ಶ್ರೀಬ್ರಹ್ಮಣ್ಯತೀರ್ಥರ ಮಹತಿ ಎಂತಹುದು ಎಂಬುದು ತಿಳಿಯುತ್ತದೆ. ಅಬ್ಬೂರು ಕ್ಷೇತ್ರದಲ್ಲಿ ಬೃಂದಾವನಸ್ಥಿತರಾಗಿ ಆಶ್ರಿತರ ಪಾಪಸಮೂಹವೆಂಬ ಧ್ವಾಂತವನ್ನು ಪರಿಹರಿಸುವ ಭಾಸ್ಕರನಂತಿರುವ, ವಿದ್ಯಾದಿ ಸಕಲ ಸಂಪತ್ತುಗಳನ್ನು ಅನುಗ್ರಹಿಸುತ್ತಾ ಪೊರೆಯುತ್ತಿರುವ ಶ್ರೀಬ್ರಹ್ಮಣ್ಯಭಾಸ್ಕರರು ನಮ್ಮ ಮನಸ್ಸಿನ ತಮವನ್ನು ಕಳೆದು ವ್ಯಾಸ-ಮಧ್ವರ ಸಿದ್ಧಾಂತದ ದರ್ಶನವನ್ನು ಮನದಲ್ಲಿ ಬೆಳಗಿಸಲಿ.
ಸಮುತ್ಸಾರ್ಯತಮ:ಸ್ತೋಮಂ ಸನ್ಮಾರ್ಗಂ ಸಂಪ್ರಕಾಶ್ಯ ಚ |
ಸದಾ ವಿಷ್ಣುಪದಾಸಕ್ತಂ ಸೇವೇ ಬ್ರಹ್ಮಣ್ಯಭಾಸ್ಕರಮ್ ||
#ಕಂಸಧ್ವಂಸಿಪದಾಂಭೋಜ #ಸಂಸಕ್ತೋ #ಹಂಸಪುಂಗವ: |
#ಬ್ರಹ್ಮಣ್ಯಗುರುರಾಜಾಖ್ಯೋ #ವರ್ತತಾಂ #ಮಮ #ಮಾನಸೇ ||
#ಇತಿ..#ಸದ್-#ಭಕ್ತವೃಂದ.
***



ಕಂಸಧ್ವಂಸಿ ಪದಾಂಬೋಜ ಸಂಸಕ್ತೋ ಹಂಸಪುಂಗವಃ/
ಬ್ರಹ್ಮಣ್ಯ ಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ//

ಶ್ರೀ ಬ್ರಹ್ಮಣ್ಯತೀರ್ಥರ ಆರಾಧನಾ ಮಹೋತ್ಸವ... (ಅಬ್ಬೂರು) ಶ್ರೀಮದ್ವ್ಯಾಸರಾಜ ಗುರುಸಾರ್ವಭೌಮರಂತಹಾ ಅಮೂಲ್ಯ ವಜ್ರವನ್ನು ನೀಡಿದಂತಹಾ, ಇವತ್ತಿಗೂ ಕಣ್ವತಟದಲ್ಲಿ ವೃಂದಾವನದಲ್ಲಿ ಕುಳಿತು ಬೇಡಿದವರಿಗೆ ಇಷ್ಟಾರ್ಥಗಳನ್ನು ತೀರಿಸುವುದಷ್ಟೇ ಅಲ್ಲದೇ ಆರೋಗ್ಯಾದಿಗಳನ್ನು ಪ್ರದಾನಮಾಡುವ ಮಹಾನ್ ಚೇತನರೂ, ಸೂರ್ಯಾಂಶ ಸಂಭೂತರೂ, ಶ್ರೀ ಪುರುಷೋತ್ತಮತೀರ್ಥರ ಶಿಷ್ಯರೂ, ಶ್ರೀ ರಾಜೇಂದ್ರತೀರ್ಥರ ವಿದ್ಯಾಶಿಷ್ಯರೂ, 
ನನಗೆ ಜೀವಪ್ರತಾತರೂ, ಸೇವೆ ಮಾಡಿದವರಿಗೆ ವರಗಳು ನೀಡುವ, ಶರಣಾಗತರ ಕಷ್ಟಗಳನ್ನು ಪರಿಹರಿಸಿ ಸಲಹುವ, ಮಕ್ಕಳಿಲ್ಲದವರಿಗೆ ಮಕ್ಕಳನ್ನು ಪ್ರಸಾದಿಸುತ್ತಿರುವ, ಏನೇ ಸಂಕಟ ಬಂದರೂ ಸೇವೆ ಮಾಡಿ,  ಆರಾಧನೆ ಮಾಡಿದವರನ್ನು , ತಮ್ಮನ್ನು ಬೇಡಿ ಬಂದವರನ್ನು ಸದಾ ಸದಾ ಸಲಹುತ್ತಿರುವ, ಜೀವಪ್ರದಾತರು, ಆರೋಗ್ಯ ಪ್ರದಾತರೂ  ಶ್ರೀ ಶ್ರೀ  ಬ್ರಹ್ಮಣ್ಯತೀರ್ಥ ಗುರುಸಾರ್ವಭೌಮರ ಅನುಗ್ರಹ ಸದಾ ಸದಾ ನಮ್ಮ ಎಲ್ಲರಿಗೂ ಇದ್ದು, ಆರೋಗ್ಯಾದಿ ಅಷ್ಟೈಶ್ವರ್ಯಗಳನ್ನು ನೀಡಿ ಕಾಪಾಡಲೀ ಹರಿಟೆ ,ಲೌಕಿಕಗಳನ್ನು (ಲೌಕಿಕ ನಾವು ಎಷ್ಟು ಇರ್ತಿವೋ, ( ಎಷ್ಟು ಹರಿಟೆ ಹೊಡಿತಿವೋ ಅಷ್ಟು ನಮ್ಮ ಜೀವದ ಸುತ್ತಲಿನ ಆವರಣ ಗೋಡೆಯಂತೆ ಬಲವತ್ತರವಾಗುತ್ತದೆ) ಅದು ಬಿಡುವಂತೆ, ನಿಜವಾದ ಸಾಧನಾ ಹಾದಿ ಹಿಡಿಯುವಂತೆ  ಶ್ರೀ ಬ್ರಹ್ಮಣ್ಯತೀರ್ಥರ ಗುರುಸಾರ್ವಭೌಮರು ಮಾಡಲಿ ಎಂದು  ಬೇಡಿಕೊಳ್ಳುತ್ತಾ, ಹಾಗೆಯೆ ದೇಶಕ್ಕೆ ಬಂದ ಈ ಘೋರ ಆಪತ್ತನ್ನು ಸೂರ್ಯಾಂಶಜರು ತಮ್ಮ ಜ್ಞಾನ ಕಿರಣಗಳಿಂದ ಸುಟ್ಟು ಹಾಕಲಿ ಎಂದು ಅವರಲ್ಲಿ ಪೂರ್ಣ ಜೀವದ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ ......

ಹಾಗೆಯೇ ಶ್ರೀ ಶ್ರೀಪಾದರಾಜಮಠದ 15 ನೇ ಶತಮಾನದ ಯತಿಗಳಾದ ಶ್ರೀ ಶ್ರೀಪತಿತೀರ್ಥರ ಆರಾಧನಾ ಮಹೋತ್ಸವ , ಮುಳಬಾಗಿಲು..

ಮಹಾನ್ ಯತಿದ್ವಯರು ನಮಗೆ ಸನ್ಮತಿ ನೀಡಲೀ ಸದಾ..

-Smt. Padma Sirish

ನಾದನೀರಾಜನದಿಂ ದಾಸಸುರಭಿ  🙏🏽
***

ಈ ಕೆಳಗಿನ ವಿಷಯಗಳು  ವ್ಯಾಸರಾಜರ ಹಾಗೂ ಶ್ರೀಪಾದರಾಜರ ಬಗ್ಗೆ ಇದೆ.  ಆದರೂ ಬ್ರಹ್ಮಣ್ಯ ತೀರ್ಥರ ಬಗ್ಗೆ ಬರೆದಿರುವುದರಿಂದ ಇಲ್ಲಿ ವಿವರಿಸಲಾಗಿದೆ.  

ಶ್ರೀಪಾದರಾಜರು ಮತ್ತು ಬ್ರಹ್ಮಣ್ಯ ತೀರ್ಥರ ಸಂಬಂಧ - ಮುಳುಬಾಗಿಲು ಶ್ರೀಪಾದರಾಜರ ವಿದ್ಯಾಪೀಠದಲ್ಲಿ ಅಧ್ಯಯನಮಾಡಲು ನಾನಾ ಕಡೆಗಳಿಂದ ವಿದ್ಯಾರ್ಥಿಗಳು ಬರತೊಡಗಿದರು. ಹೀಗೆ ಬಂದ ವಿದ್ಯಾರ್ಥಿಗಳಲ್ಲಿ ಅತ್ಯಂತ ಮುಖ್ಯರಾದವರು – ವ್ಯಾಸತೀರ್ಥರು. ಇವರು ವಿದ್ಯಾಭ್ಯಾಸಕ್ಕೆ ಬಂದಾಗ ಶ್ರೀಪಾದರಾಜರಿಗೆ ೫೪ ವರ್ಷ ವಯಸ್ಸು. 

ಬೆಂಗಳೂರು ಜಿಲ್ಲೆಯ ಚನ್ನಪಟ್ಟಣಕ್ಕೆ ಸಮೀಪದಲ್ಲಿ ಅಬ್ಬೂರು ಎಂಬ ಗ್ರಾಮವಿದೆ. ಇಲ್ಲಿ ಮಹಾತಪಸ್ವಿಗಳಾದ ಬ್ರಹ್ಮಣ್ಯ ತೀರ್ಥರೆಂಬ ಯತಿಗಳಿದ್ದರು. ಈ ಬ್ರಹ್ಮಣ್ಯತೀರ್ಥರು ಶ್ರೀಪಾದರಾಜರ ತಾಯಿಯ ಅಕ್ಕನ, ಅಂದರೆ ದೊಡ್ಡಮ್ಮನ ಮಗ. ಬ್ರಹ್ಮಣ್ಯತೀರ್ಥರ ಸಾಕು ಮಗನೇ ವ್ಯಾಸಯೋಗಿ. 

ಶ್ರೀಪಾದರಾಜರ ಬಳಿ ವಿದ್ಯಾಭ್ಯಾಸಕ್ಕೆಂದು ಬ್ರಹ್ಮಣ್ಯತೀರ್ಥರು ವ್ಯಾಸಯೋಗಿಯನ್ನು ಕಳುಹಿಸಿ ಕೊಟ್ಟಿದ್ದರು. ಸುಮಾರು ಹನ್ನೆರಡು ವರ್ಷಗಳ ಕಾಲ ವ್ಯಾಸಯೋಗಿಗಳು ಶ್ರೀಪಾದರಾಜರಲ್ಲಿ ವಿದ್ಯಾರ್ಜನೆ ಮಾಡಿದರು.

ವ್ಯಾಸಯೋಗಿಗಳ ವಿದ್ಯಾಭ್ಯಾಸ ನಡೆಯುತ್ತಿದ್ದ ಸಮಯ ದಲ್ಲಿ ಒಮ್ಮೆ ಒಂದು ವಿಚಿತ್ರ ಪ್ರಸಂಗ ನಡೆಯಿತು ಎಂದು ಹೇಳುತ್ತಾರೆ. ಗುರುಗಳು ಹೇಳಿ ಕೊಟ್ಟ ಪಾಠವನ್ನೇ ಗಾಢವಾಗಿ ಮನನಮಾಡುತ್ತಿದ್ದ ವ್ಯಾಸಯೋಗಿಗೆ ನಿದ್ರೆ ಹತ್ತಿತು. ಎಲ್ಲೋ ಹೊಂಚು ಹಾಕುತ್ತಿದ್ದ ಒಂದು ಹೆಬ್ಬಾವು ವ್ಯಾಸಯೋಗಿ ಮಲಗಿದ್ದ ಗುಹೆಗೆ ನುಗ್ಗಿ, ವ್ಯಾಸಯೋಗಿಯನ್ನು ಕಾಲಕಡೆಯಿಂದ ನುಂಗುತ್ತಿತ್ತು. ಇನ್ನಿತರ ಶಿಷ್ಯರು ಇದನ್ನು ಕಂಡು ಹೌಹಾರಿದರು. ಕೂಡಲೆ ಗುರುಗಳಿಗೆ ಸುದ್ದಿ ಮುಟ್ಟಿಸಿದರು. ಶ್ರೀಪಾದರಾಜರು ಬಂದು ನೋಡು ತ್ತಾರೆ, ಮಹಾಸರ್ಪವೊಂದು ವ್ಯಾಸಯೋಗಿಯನ್ನು ಬಾಯ್ತೆರೆದು ನುಂಗುತ್ತಿದೆ. ಕೂಡಲೆ ಸರ್ಪದೊಡನೆ ಅದರ ಭಾಷೆಯಲ್ಲಿಯೇ ಮಾತನಾಡ ತೊಡಗಿದರು. ಸರ್ಪ ಮೆಲ್ಲಗೆ ಹಿಂಜರಿಯುತ್ತಾ ಹಾಗೆಯೇ ಬಿಟ್ಟು ಹೋಯಿತು. ತನ್ನ ಭಾಷೆಯಲ್ಲಿಯೇ ತನ್ನನ್ನು ಮಾತ ನಾಡಿಸಿದ್ದು ಸರ್ಪಕ್ಕೆ ಸಂತೋಷವಾಯಿತಂತೆ. ಈ ಪ್ರಸಂಗವನ್ನು ಶ್ರೀನಿತೀರ್ಥ ಎಂಬವರು ತಾವು ಬರೆದಂತಹ ‘ಶ್ರೀಪಾದರಾಜಾಷ್ಟಕ’ ಎಂಬ ಶ್ಲೋಕದಲ್ಲಿ ವರ್ಣನೆ ಮಾಡಿದ್ದಾರೆ :



‘ಶ್ರೀವ್ಯಾಸರಾಜ ಪಣಿಬಂಧ ನಿವಾರಕಾಯ ತದ್ಭಾಷಯೈವ ಫಣಿರಾಜ ಸಂತೋಷಕಾಯ ಶ್ರೀಮತ್ಸುರತ್ನ ಖಚಿತೋದ್ವಲ ಕುಂಡಲಾಯ ಶ್ರೀಪಾದರಾಜ ಗುರುವೇ ನಮಃ ಶುಭಾಯ’ ಬಹು ಆದರದಿಂದ ಶಿಷ್ಯ ವ್ಯಾಸತೀರ್ಥರಿಗೆ ಶ್ರೀಪಾದರಾಜರು ಸಕಲ ಶಾಸ್ತ್ರಗಳನ್ನು ಬೋಸಿದರು. ಈ ಶಿಷ್ಯನೋ ಮಹಾಮೇಧಾವಿ. 



ಶಿಕ್ಷಣ ಮುಗಿದ ಮೇಲೆ ಶ್ರೀಪಾದರಾಜರು ಶಿಷ್ಯ ವ್ಯಾಸರಾಜ ರೊಡನೆ ಮೊದಲು ಭೇಟಿ ಕೊಟ್ಟಿದ್ದು ಚನ್ನಪಟ್ಟಣದ ಸಮೀಪದಲ್ಲಿರುವ ಅಬ್ಬೂರಿಗೆ. ವಿದ್ಯಾಪ್ರೌಢಿಮೆಯಿಂದ ತೇಜಃಪುಂಜನಾದ ವ್ಯಾಸಯೋಗಿಯನ್ನು ತಾವೇ ಸ್ವತಃ ಬ್ರಹ್ಮಣತೀರ್ಥರಿಗೆ ಒಪ್ಪಿಸಿಕೊಡುವುದು ಶ್ರೀಪಾದರಾಜರ ಅಪೇಕ್ಷೆಯಾಗಿತ್ತು. ಬ್ರಹ್ಮಣ್ಯತೀರ್ಥರ ಸಾಕುಮಗ ನಲ್ಲವೇ ವ್ಯಾಸರಾಜರು? 

ಶಿಷ್ಯನ ಮೇಲೆ ಶ್ರೀಪಾದರಾಜ ರಿಗೆ ಅದೆಷ್ಟು ಪ್ರೀತಿಯೆಂದರೆ ‘ಇದಿರದಾವನು ನನಗೀ ಧರೆಯೊಳು ಪದುಮನಾಭನ ದಾಸ ಪರಮೋಲ್ಲಾಸ’ ಎಂದು ತಾವೇ ತಮ್ಮ ಶಿಷ್ಯನನ್ನು ಕುರಿತು ಕೀರ್ತನೆಯೊಂದನ್ನು ರಚಿಸಿದ್ದಾರೆ. ಗುರುವಿನಿಂದಲೇ ಹೊಗಳಿಸಿಕೊಳ್ಳು ವಂತಹ ಪುಣ್ಯ, ಮಹಿಮೆ, ವಿದ್ವತ್ತು, ಸಚ್ಚಾರಿತ್ರ  ವ್ಯಾಸರಾಜರದು.
*****



ಶ್ರೀವ್ಯಾಸತೀರ್ಥರಂತಹ ಲೋಕೋತ್ತರ ವಿದ್ವದ್ವಿಭೂತಿಯನ್ನು ಶ್ರೀವ್ಯಾಸ-ಮಧ್ವರ ಸಿದ್ಧಾಂತ ಪ್ರವರ್ಧನೆಗೆ ಸಮರ್ಪಿಸಿದ ಮಹಾತಪಸ್ವಿ ಶ್ರೀಬ್ರಹ್ಮಣ್ಯತೀರ್ಥರು. ಶ್ರೀವ್ಯಾಸರಾಜರೇ ತಮ್ಮ ಆಶ್ರಮಗುರುಗಳನ್ನು ಕುರಿತು " ಶುಭತಮ ಚರಿತರು, ಗುರುಗುಣ ಭರಿತರು, ಕಾಮಕ್ರೋಧಾದ್ಯತೀತರು, ಮಾದ್ಯನ್ಮಾಯಿಗಜೇಂದ್ರ ಪಂಚವದನ ಸದೃಶರು, ಶ್ರೀಮದ್ವಿಠ್ಠಲಪಾದಪದ್ಮಮಧುಪರು, ವಿಮಲವಾದ ಜ್ಞಾನ, ವಾಕ್ಸಿದ್ಧಿ, ವಾಕ್ ಶುದ್ಧಿ, ಮಂತ್ರಸಿದ್ಧಿ, ತಪಸ್ಸು, ಶಾಂತಿ, ದಾಂತಿ, ಉಪರತಿ, ತಿತಿಕ್ಷಾ ಮೊದಲಾದ ಗುಣಗಳಿಂದ ಭರಿತರು, ಬುಧಜನರಿಂದ ಶ್ಲಾಘ್ಯವಾದ ಗುಣವುಳ್ಳವರು" ಮೊದಲಾದ ಪದವೃಂದಗಳಿಂದ ಸ್ತುತಿಸುತ್ತಾರೆ ಎಂದರೆ ಶ್ರೀಬ್ರಹ್ಮಣ್ಯತೀರ್ಥರ ಮಹತಿ ಎಂತಹುದು ಎಂಬುದು ತಿಳಿಯುತ್ತದೆ. ಅಬ್ಬೂರು ಕ್ಷೇತ್ರದಲ್ಲಿ ಬೃಂದಾವನಸ್ಥಿತರಾಗಿ ಆಶ್ರಿತರ ಪಾಪಸಮೂಹವೆಂಬ ಧ್ವಾಂತವನ್ನು ಪರಿಹರಿಸುವ ಭಾಸ್ಕರನಂತಿರುವ, ವಿದ್ಯಾದಿ ಸಕಲ ಸಂಪತ್ತುಗಳನ್ನು ಅನುಗ್ರಹಿಸುತ್ತಾ ಪೊರೆಯುತ್ತಿರುವ ಶ್ರೀಬ್ರಹ್ಮಣ್ಯಭಾಸ್ಕರರು ನಮ್ಮ ಮನಸ್ಸಿನ ತಮವನ್ನು ಕಳೆದು ವ್ಯಾಸ-ಮಧ್ವರ ಸಿದ್ಧಾಂತದ ದರ್ಶನವನ್ನು ಮನದಲ್ಲಿ ಬೆಳಗಿಸಲಿ.
ಸಮುತ್ಸಾರ್ಯತಮ:ಸ್ತೋಮಂ ಸನ್ಮಾರ್ಗಂ ಸಂಪ್ರಕಾಶ್ಯಚ |
ಸದಾ ವಿಷ್ಣುಪದಾಸಕ್ತಂ ಸೇವೇ ಬ್ರಹ್ಮಣ್ಯಭಾಸ್ಕರಮ್ ||
*******

year 2021
ಶ್ರೀಂ ಶ್ರೀ ಕಂ ಕಪಿಲಾಯ ನಮಃ

    ವೈಶಾಖ ಬಹುಳ ದಶಮೀ

ಕಂಸಧ್ವಂಸಿ ಪದಾಂಭೋಜ ಸಂಸಕ್ತೋ ಹಂಸಪುಂಗವಃ/
ಬ್ರಹ್ಮಣ್ಯ ಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ//

ಇಂದಿನಿಂದ ನಾಲ್ಕು ದಿನದ ವರೆಗೆ ಶ್ರೀ ಬ್ರಹ್ಮಣ್ಯತೀರ್ಥರ ಆರಾಧನಾ ಮಹೋತ್ಸವ... (ಅಬ್ಬೂರು)

ಶ್ರೀಮದ್ವ್ಯಾಸರಾಜ ಗುರುಸಾರ್ವಭೌಮರಂತಹಾ ಅಮೂಲ್ಯ ವಜ್ರವನ್ನು ನೀಡಿದಂತಹವರು, ವಾದಿಗಳಿಗೆ ಸಿಂಹದಂತಿರುವವರು, ಪರಮ ವೈರಾಗ್ಯ ಗುಣೋಪೇತರೂ, ನಮ್ಮನ್ನು ಕಾಪಾಡುವುದಕ್ಕೇ ಹುಟ್ಟಿಬಂದ ಸೂರ್ಯದೇವರು,
ಇವತ್ತಿಗೂ ಕಣ್ವತಟದಲ್ಲಿ ವೃಂದಾವನದಲ್ಲಿ ಕುಳಿತು ಬೇಡಿದವರಿಗೆ ಇಷ್ಟಾರ್ಥಗಳನ್ನು ತೀರಿಸುವುದಷ್ಟೇ ಅಲ್ಲದೇ ಆರೋಗ್ಯಾದಿಗಳನ್ನು ಪ್ರದಾನಮಾಡುವ ಮಹಾನ್ ಚೇತನರೂ, ಸೂರ್ಯಾಂಶ ಸಂಭೂತರಾದ, ಶ್ರೀ ಪುರುಷೋತ್ತಮತೀರ್ಥರ ಶಿಷ್ಯರೂ, ಶ್ರೀ ರಾಜೇಂದ್ರತೀರ್ಥರ ವಿದ್ಯಾಶಿಷ್ಯರೂ, 
ಸೇವೆ ಮಾಡಿದವರಿಗೆ ವರಗಳು ನೀಡುವ, ಶರಣಾಗತರ ಕಷ್ಟಗಳನ್ನು ಪರಿಹರಿಸಿ ಸಲಹುವ, ಮಕ್ಕಳಿಲ್ಲದವರಿಗೆ ಮಕ್ಕಳನ್ನು ಪ್ರಸಾದಿಸುತ್ತಿರುವ, ಏನೇ ಸಂಕಟ ಬಂದರೂ ಸೇವೆ ಮಾಡಿ,  ಆರಾಧನೆ ಮಾಡಿದವರನ್ನು , ತಮ್ಮನ್ನು ಬೇಡಿ ಬಂದವರನ್ನು ಸದಾ ಸದಾ ಸಲಹುತ್ತಿರುವ, ನನ್ನ ಜೀವಪ್ರದಾತರು, ಆರೋಗ್ಯ ಪ್ರದಾತರೂ  ಶ್ರೀ ಶ್ರೀ  ಬ್ರಹ್ಮಣ್ಯತೀರ್ಥ ಗುರುಸಾರ್ವಭೌಮರ ಅನುಗ್ರಹ ಸದಾ ಸದಾ ನಮ್ಮ ಎಲ್ಲರಿಗೂ ಇದ್ದು, ಆರೋಗ್ಯಾದಿ ಅಷ್ಟೈಶ್ವರ್ಯಗಳನ್ನು ನೀಡಿ ಕಾಪಾಡಲೀ ..

ಹಾಗೆಯೆ ದೇಶಕ್ಕೆ ಬಂದ ಈ ಘೋರ ಆಪತ್ತನ್ನು ಸೂರ್ಯಾಂಶಜರು ತಮ್ಮ ಜ್ಞಾನ ಕಿರಣಗಳಿಂದ ಸುಟ್ಟು ಹಾಕಲಿ ಎಂದು ಅವರಲ್ಲಿ ಪೂರ್ಣ ಜೀವದ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ ......

ಮತ್ತೆ.. ಶ್ರೀ ಶ್ರೀಪಾದರಾಜಮಠದ 15 ನೇ ಶತಮಾನದ ಯತಿಗಳಾದ ಶ್ರೀ ಶ್ರೀಪತಿತೀರ್ಥರ ಆರಾಧನಾ ಮಹೋತ್ಸವ , ಮುಳಬಾಗಿಲು..
****

ವೈಶಾಖ ಬಹುಳ ಏಕಾದಶೀ/ದ್ವಾದಶೀ 

ಶ್ರೀ ಸೂರ್ಯಾಂಶ ಸಂಭೂತರೂ,  ಭಕ್ತರಭೀಷ್ಟಗಳನ್ನು ಈಡೇರಿಸಲೆಂದೇ ಕಣ್ವ ನದೀ ತೀರದಲ್ಲಿ ನೆಲಸಿದವರಾದ ಶ್ರೀ ಬ್ರಹ್ಮಣ್ಯತೀರ್ಥ ಗುರುಸಾರ್ವಭೌಮರ
ಮಧ್ಯಾರಾಧನಾ ಪರ್ವದಿನವೂ

ಮಾಧ್ವರು ಎಂದು ಹುಟ್ಟಿಬಂದವರಿಗೆ ಪರಿಚಯದ  ಅವಶ್ಯಕತೆಯೇ ಇಲ್ಲದಂತಹಾ ಮಹಾನ್ ಚೇತನರಿವರು. ವಾಯುದೇವರ ಮೂರವತಾರಗಳಲ್ಲಿನ ಕೊನೆಯ ಅವತಾರವಾದ ಶ್ರೀಮದಾಚಾರ್ಯರ  ಪರಂಪರೆಯಲ್ಲಿ ಬಂದ ಯತಿಕುಲೋತ್ತಮರು ಶ್ರೀ ಬ್ರಹ್ಮಣ್ಯತೀರ್ಥ ಗುರುಸಾರ್ವಭೌಮರು.  ಶ್ರೀ ರಾಜೇಂದ್ರತೀರ್ಥರ ಪೂರ್ವಾಧಿಮಠದ ಪರಂಪರೆಯಲ್ಲಿ ಬಂದವರಾದ ಯತಿವರೇಣ್ಯರು. 

ಸ್ವಯಂ ಪ್ರಲ್ಹಾದರಾಜರೇ ಇಡೀ ವಿಜಯಗರದ ಸಾಮ್ರಾಜ್ಯದ ರಾಜನಾದ ಕೃಷ್ಣದೇವರಾಯನನ್ನು ಕಾಪಾಡಲು, ರಾಜ್ಯವನ್ನು ಸಂರಕ್ಷಿಸಲು, ಶ್ರೀಮದಾಚಾರ್ಯರ ಗ್ರಂಥಗಳಿಗೆ ವ್ಯಾಖ್ಯಾನ ವಜ್ರಗಳಾದ ವ್ಯಾಸತ್ರಯಗಳನ್ನು ನೀಡುವವರಾದ ಶ್ರೀ ವ್ಯಾಸರಾಜ ಗುರುಸಾರ್ವಭೌಮರಾಗಿ ಹುಟ್ಟಿಬರುವಾಗ, ಅವರಿಗೆ ಗುರುಗಳಾಗಿ ಜ್ಞಾನವನ್ನು ಪ್ರಸಾದಿಸಲು ಬಂದ ಯತಿ ದ್ವಯರಲ್ಲಿ ಒಬ್ಬರಿವರು. ಆ ಚಂದ್ರಿಕಾಚಾರ್ಯರನ್ನೂ ಶಿಷ್ಯರನ್ನಾಗಿ ಪಡೆಯಲು ಬದರಿಯಲ್ಲಿ ನಾರಾಯಣನನ್ನು ಬೇಡಿದವರಾಗಿರ್ತಾರೆ. 

ಬನ್ನೂರಿನ ಓರ್ವ ರಾಮಾಚಾರ್ಯರ  ಮಡದಿ ಸಹಗಮನ ಮಾಡಲು ಅನುಜ್ಞ ಬೇಡಲು ಬಂದಾಗ ಸೌಮಾಂಗಲ್ಯವನ್ನು ನೀಡುವುದಲ್ಲದೇ, ಸಂತಾನವಾಗುತ್ತದೆ ಎಂದು ನುಡಿದ ಸೂರ್ಯದೇವರಿವರು. ಹಾಗೆ ಹುಟ್ಟಿದ ಮಗುವನ್ನು ಭೂ ಸ್ಪರ್ಶ ಮಾಡಿಸದೇ ಹರಿವಾಣದಲ್ಲಿ ತರಿಸಿ, ಆ ಸಣ್ಣ ಕೂಸನ್ನ ಕಣ್ವನದಿಯಲ್ಲಿ ಮಿಂದೇಳಿಸಿ, ಪ್ರತೀದಿನ ತಮ್ಮ ಆರಾಧ್ಯ ದೈವವಾದ ಶ್ರೀ ವೇಣುಗೋಪಾಲನಿಗೆ ಅಭಿಷೇಕ ಮಾಡಿದ ಕ್ಷೀರವನ್ನುಣಿಸಿ ವೇದಾಂತ ಸಾಮ್ರಾಜ್ಯದ ಉತ್ತರಾಧಿಕಾರಿಯನ್ನಾಗಿ ಮಾಡಿದ ಮಹಾನ್ ಗುರುಗಳು ಶ್ರೀ ಬ್ರಹ್ಮಣ್ಯತೀರ್ಥ ಗುರುಸಾರ್ವಭೌಮರು.. 

ನಂತರ ತಮ್ಮ ಪೂರ್ವಾಶ್ರಮದ ಅನುಜರಾದ ಧೃವಾಂಶ ಸಂಭೂತರಾದ ಶ್ರೀ ಶ್ರೀಪಾದರಾಜರ ಬಳಿ ತಮ್ಮ ಪ್ರೀತಿಯ ಶಿಷ್ಯರಾದ ಶ್ರೀಮಚ್ಚಂದ್ರಿಕಾಚಾರ್ಯರನ್ನು ವಿದ್ಯೆ ಕಲಿಯಲು ಕಳಿಸುತ್ತಾರೆ. 
(ಪ್ರಹ್ಲಾದರಾಜರ ಅವತಾರಿಗಳಾದ ಶ್ರೀ ವ್ಯಾಸರಾಜ ಗುರುಸಾರ್ವಭೌಮರಿಗೆ ಯತಿದ್ವಯರ ಅನುಗ್ರಹವಾಗಬೇಕೆಂದು ಪರಮಾತ್ಮನ ಸಂಕಲ್ಪದ ಫಲವಿದು).

ತಪೋಸಂಪನ್ನರೂ,  ಇಂದಿಗೂ ಅಬ್ಬೂರು ಕ್ಷೇತ್ರದ ಬೆಟ್ಟದಮೇಲಿನ ಗುಹೆಯಲ್ಲಿ ತಪವನ್ನಾಚರಿಸುತ್ತಿರುವ ಶ್ರೀ ಪುರುಷೋತ್ತಮತೀರ್ಥರ ಕರಕಮಲಸಂಜಾತರು ಶ್ರೀ ಬ್ರಹ್ಮಣ್ಯತೀರ್ಥ ಗುರುಸಾರ್ವಭೌಮರು. ಮಹಾನ್ ಚೇತನರು,  ವೈರಾಗ್ಯ ಮೂರ್ಧನ್ಯರು, ಇಡೀ ಭಾರತದ ಎಲ್ಲ ಕ್ಷೇತ್ರಗಳ ಸಂಚಾರ ಮಾಡಿ ಅಲ್ಲಿನ ದುರ್ವಾದಿಗಳನ್ನು ನಿಗ್ರಹ ಮಾಡಿದ ವಾದಿಸಿಂಹರು ಇವರು. ಈ ವಿಷಯವನ್ನು ಶ್ರೀಮಚ್ಚಂದ್ರಿಕಾಚಾರ್ಯರು ತಮ್ಮ ಬ್ರಹ್ಮಣ್ಯತೀರ್ಥ ಪಂಚರತ್ನಮಾಲಿಕಾ ಸ್ತೋತ್ರದಲ್ಲಿ ಘಂಟಾಘೋಶವಾಗಿ ತಿಳಿಸಿ ದಾಖಲಿಸಿ ಇಟ್ಟಿದ್ದಾರೆ. ಹೀಗೆ ಸಂಚಾರತ್ವೇನ ವಿಜಯನಗರ ಸಾಮ್ರಾಜ್ಯವನ್ನು  ಸೇರಿ,  ಅಲ್ಲಿದ್ದ  ಕ್ಷಾಮವನ್ನು ದೂರಮಾಡಿ ಮಳೆಯನ್ನು ಸುರಿಸ್ತಾರೆ..

ಶ್ರೀಬ್ರಹ್ಮಣ್ಯತೀರ್ಥರು ಸಾತನೂರಿನಲ್ಲಿ ಮಾಡಿದ ಪರಮಾನುಗ್ರಹ ಎಷ್ಟೆಂದರೆ ಈಗಲೂ ಸಾವಿರಾರು ಭಕ್ತರು ಅದರ ಫಲ ಪಡೆದು ಅನಗ್ರಹೀತರಾಗುತ್ತಿದ್ದಾರೆ.
ಅಲ್ಲಿಯ ಪ್ರಾಣದೇವರು ಶಾಂತೇಶ ಅಂತ ಪ್ರಸಿದ್ಧಿ. ( ಈ ಪ್ರಾಣದೇವರು ಬಹುಷಃ ಪುರಾತನ ವಾಗಿದ್ದು ಶ್ರೀಬ್ರಹ್ಮಣ್ಯತೀರ್ಥರು ಮತ್ತು ಶ್ರೀವ್ಯಾಸರಾಜರು ಇದನ್ನು ಪುನರ್ ಪ್ರತಿಷ್ಠಾಪಿಸಿದ್ದಿರಬಹುದು). ಆಗಿನ ಕಾಲದಲ್ಲಿ ಆ ಊರಲ್ಲಿ ತುಂಬಾ ವರ್ಷಗಳಿಂದ ಮಳೆಯಾಗದೆ ಜನ ತತ್ತರಿಸುತ್ತಿದ್ದಾಗ, ಅಲ್ಲಿಯ ಜನ ಊರಿನ ಬ್ರಾಹ್ಮಣರನ್ನು ದಯವಿಟ್ಟು ಇನ್ನೂ ಸ್ವಲ್ಪ ದಿನಗಳಲ್ಲಿ ಮಳೆ ಬರುವಂತೆ ಏನಾದರೂ ಹೋಮ, ಹವನ, ಜಪಾದಿಗಳನ್ನು ಮಾಡಬೇಕೆಂತಲೂ ಪ್ರಾರ್ಥಿಸಿ , ಆಗಲೂ ಮಳೆಯಾಗದಿದ್ದರೆ ತಾವೆಲ್ಲಾ ಊರು ಬಿಟ್ಟು ಹೋಗುವುದಾಗಿ ಹೇಳಿದರು. ಅಲ್ಲಿಯ ಬ್ರಾಹ್ಮಣರು ವಿಶೇಷವಾಗಿ ಜಪತಪಾದಿಗಳನ್ನು ಮಾಡುತ್ತಾ ,ಭಗವಂತನನ್ನು ದಾರಿ ತೋರಿಸು ಎಂದು ಪ್ರಾರ್ಥಿಸುತ್ತಿದ್ದಾಗ, ಆ ಕರಾಳ ಕತ್ತಲ ದಿನಗಳಲ್ಲಿ ಉದಯಿಸಿಬಂದ ಸೂರ್ಯನಂತೆ ಸೂರ್ಯಾಂಶ ಸಂಭೂತರಾದ ನಮ್ಮ ಶ್ರೀಬ್ರಹ್ಮಣ್ಯತೀರ್ಥರ ಆಗಮನವಾಯಿತು. ಭಕ್ತರಿಗೆ ಅವರನ್ನು ದರ್ಶಿಸಿದ ಕ್ಷಣಮಾತ್ರದಲ್ಲಿ   ಕವಿದಿದ್ದ ಚಿಂತೆ, ಭಯಗಳೆಲ್ಲವೂ ದೂರವಾಯಿತು. ಆಗ ಭಕ್ತಾದಿಗಳು ಭಕ್ತಿಯಿಂದ ವಂದಿಸಿ,ಆ ಊರಿಗೆ ಇರುವ ತೊಂದರೆಯನ್ನು ನಿವಾರಿಸಿ ಎಲ್ಲರನ್ನೂ ಉದ್ಧರಿಸಬೇಕೆಂದು ಕೇಳಿಕೊಂಡರು. ಕರುಣಾಳುಗಳಾದ ಶ್ರೀಬ್ರಹ್ಮಣ್ಯತೀರ್ಥರು ಅವರ ಪ್ರಾರ್ಥನೆಯನ್ನು ಮನ್ನಿಸಿ ಆ ಊರಿನಲ್ಲೆ ಜಪ ತಪ ಪಾಠ ಪ್ರವಚನಾದಿಗಳನ್ನು ಮಾಡುತ್ತಾ, ಮಳೆಯನ್ನು ಬರಿಸುವಂತೆ ವಿಶೇಷವಾಗಿ ತಮ್ಮ ಗುರುಗಳ, ಪರಂಪರೆಯಲ್ಲಿ ಬಂದ ಸಕಲ ಯತಿಗಳನ್ನೂ, ವಾಯುದೇವರನ್ನೂ, ಮೂಲ ಗೋಪಾಲ ಕೃಷ್ಣ, ಪಟ್ಟಾಭಿರಾಮ ದೇವರನ್ನೂ ವಿಶೇಷವಾಗಿ ಧ್ಯಾನಿಸುತ್ತಾ, ಪ್ರಾರ್ಥಿಸುತ್ತಿದ್ದರು.ಕೆಲವೇ ದಿನಗಳಲ್ಲಿ ಆ ಊರಿನಲ್ಲಿ ಮಾತ್ರವಲ್ಲದೇ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಮಳೆಯಾಗಿ ಜನರು ಹರ್ಷಸಾಗರದಲ್ಲಿ ಮುಳುಗಿ ಸಂತೋಷ ಪಟ್ಟು ಗುರುಗಳಿಗೆ ಭಕ್ತಿಯಿಂದ ನಮಸ್ಕರಿಸಿ, ಈ ಅಸಾಧ್ಯವಾದ, ಅಗಾಧವಾದ ಮಹಿಮೆಯನ್ನು ಕೊಂಡಾಡಿದರು. 
ಇದರ ಜೊತೆ ಶ್ರೀಬ್ರಹ್ಮಣ್ಯತೀರ್ಥರು ಆ ಊರಿನ ಒಬ್ಬ ಬ್ರಾಹ್ಮಣನಿಗೆ ಒಂದು ರಹಸ್ಯ ಮಂತ್ರೋಪದೇಶ ಕೊಟ್ಟು ಮತ್ತು ಅದರ ಜೊತೆಗೆ ಕೆಲವು ಔಷಧಿಗಳನ್ನು ಹೇಳಿಕೊಟ್ಟು, ಸಂತಾನವಿಲ್ಲದವರು  ಯಾರೇ ಈ ಕ್ಷೇತ್ರಕ್ಕೆ ಬಂದು ಶಾಂತೇಶನನ್ನು ದರ್ಶಿಸಿ ನಿಮ್ಮನ್ನು ಕೇಳುತ್ತಾರೋ ಅವರಿಗೆ ಈ ಔಷಧಿಯನ್ನು ಕೊಡಬೇಕೆಂದು, ಮುಖ್ಯಪ್ರಾಣದೇವರು ಅವರಿಗೆ ಖಂಡಿತವಾಗಿಯೂ ಸಂತಾನವನ್ನು ಕರುಣಿಸುತ್ತಾನೆಂತಲೂ ಅನುಗ್ರಹಿಸಿದರು. 
ಗುರುಗಳು  ಆ ದಿನ ಪ್ರಸಾದಿಸಿದ ಆ ಸಿದ್ಧಿಯು ಈಗಲೂ ಆ ವಂಶಸ್ಥರಲ್ಲಿದ್ದು, ಪ್ರತಿ ವಿಜಯದಶಮಿಯ ದಿನ ಮಾತ್ರ ಸಂತಾನಕ್ಕಾಗಿ ಔಷಧಿಯನ್ನು ಕೊಡಲಾಗುತ್ತದೆ. ಸುಮಾರು 1500 ಭಕ್ತರು ಆದಿನ ಅಲ್ಲಿ ಬಂದು ಭಕ್ತಿಯಿಂದ ಶಾಂತೇಶನನ್ನು ದರ್ಶಿಸಿ ಆ ಔಷಧವನ್ನು ಸ್ವೀಕರಿಸಿ ಫಲಗಳನ್ನು ಪಡೆಯುತ್ತಿದ್ದಾರೆ. ಜಾತಿ  ಮತಗಳ ಭೇದವಿಲ್ಲದೇ ಎಲ್ಲರೂ ( ಹಿಂದೂ, ಮುಸ್ಲಿಂ ಮಹಿಳೆಯರೂ) ಔಷದಿ ಪಡೆಯುತ್ತಾರೆ. ಅಷ್ಟೇ ಅಲ್ಲದೇ ಆ ಊರಿನ ಸುತ್ತಮುತ್ತಲಿನ  ಜಾನುವಾರುಗಳಿಗೂ ಆ ಔಷಧಿಯನ್ನು ಕೊಡಿಸುತ್ತಾರೆ.

ಇದಲ್ಲವೇ ಶ್ರೀಬ್ರಹ್ಮಣ್ಯತೀರ್ಥರ ಪರಮ ಕಾರುಣ್ಯ...

ಹೀಗೆ ತಾವು ಸಂಚಾರ ಮಾಡಿದ ಎಲ್ಲ ಕಡೆ ಕ್ಷೇತ್ರಸ್ಥ ಮೂರ್ತಿಗಳ ದರ್ಶನದ , ಶ್ರೀಮನ್ ಮಧ್ವಮತದ ಪ್ರಚಾರ,  ವಾದಿ ನಿಗ್ರಹ, ದೀನ ಜನರ ಉದ್ಧಾರ ಇವೆಲ್ಲವೂ ಬಿಡದೆ ಮಾಡುತ್ತಾ ತಮ್ಮ ಕಾರ್ಯಕ್ಷೇತ್ರವಾದ ಅಬ್ಬೂರಿಗೆ ಬಂದು ಶ್ರೀಮಚ್ಚಂದ್ರಿಕಾಚಾರ್ಯರಿಗೆ  ಪಟ್ಟವನ್ನಿತ್ತು, ವೈಶಾಖ ಬಹಳ ಏಕಾದಶಿಯ ದಿನ ಅವತಾರವನ್ನು ಮುಗಿಸಿ ತೆರಳಿದ್ದಾರೆ.. 

ಇಂದಿಗೂ ಆ ವೃಂದಾವನಕ್ಕೆ ಪ್ರದಕ್ಷಿಣೆ ಬಂದವರ, ದರ್ಶನ ಪಡೆದವರ, ಸೇವೆ ಮಾಡಿದವರ ಎಲ್ಲ ಕಷ್ಮಲಗಳನ್ನೂ ಕಳೆದು ಅವರಿಗೆ ಸುಖವನ್ನಿತ್ತು, ಜ್ಞಾನ ಭಕ್ತಿ ವೈರಾಗ್ಯಗಳನ್ನು ಬೆಳೆಸುವವರಾಗಿದ್ದಾರೆ. 

ಅಬ್ಬೂರು ಕ್ಷೇತ್ರ ಮಾಧ್ವರ ಪರಮ ಪವಿತ್ರವಾದ ಕ್ಷೇತ್ರಗಳಲ್ಲಿ ಮುಖ್ಯವಾದ ಕ್ಷೇತ್ರವಾಗಿದೆ.  ದರ್ಶನಾಕಾಂಕ್ಷಿಗಳಾದರೂ ಅದು ಶ್ರೀ ಬ್ರಹ್ಮಣ್ಯತೀರ್ಥ ಗುರುಸಾರ್ವಭೌಮರ ಒಪ್ಪಿಗೆಯನಂತರ ಮಾತ್ರ ದರ್ಶನ ಸಾಧ್ಯ, ನಮ್ಮ ಪಾಪಕರ್ಮಗಳು ಸ್ವಲ್ಪ ಮಾತ್ರವೂ ದೂರವಾಗಿದ್ದಾಗ ಮಾತ್ರ ಗುರುಗಳ ವೃಂದಾವನ ದರ್ಶನ ಪ್ರಾಪ್ತವಾಗುವುದೇ ಹೊರತು, ನಾನು ದರ್ಶನ ಮಾಡ್ತೇನೆ,  ನಾನು ಅಬ್ಬೂರಿಗೆ ಹೋಗಿ ಬರ್ತೇನೆ ಅಂದರೆ ಅದು ಸಾಧ್ಯವಾಗದ ವಿಷಯವೆನ್ನುವುದು ಸತ್ಯ ಮತ್ತು ಅನುಭವಿಸಿದವರ ಅಭಿಪ್ರಾಯವೂ ಕೂಡ. 

ಶ್ರೀಕ್ಷೇತ್ರ ಅಬ್ಬೂರಿನಲ್ಲಿ ಶ್ರೀ ಬ್ರಹ್ಮಣ್ಯತೀರ್ಥರ ಆರಾಧನೆಯೂ ಮೂರುದಿನದ ಕಾಲ (ಏಕಾದಶಿಯೂ) ಅತ್ಯದ್ಭುತವಾದ ರೀತಿಯಲ್ಲಿ ನಡೆಯುತ್ತದೆ.  ಸಾವಿರಾರು ಜನ ಭಕ್ತ ಜನರ ಮಧ್ಯದಲ್ಲಿ,  ಯತಿಗಳ ಆಧ್ವರ್ಯದಲ್ಲಿ,  ಭಜನೆ,  ಸ್ತೋತ್ರ, ಪುರಾಣಾದಿಗಳು ನಡೆಸುತ್ತಾ, ವಿಜೃಂಭಣೆಯಿಂದ ಆರಾಧನಾ ಸಂಭ್ರಮ ನಡೆಯುತ್ತದೆ.  

ಆರಾಧನೆ ಸಮಯವಲ್ಲದೇ ಇದ್ದರೂ ಪ್ರತೀದಿನ ಭಕ್ತರ ಸಂದೋಹವು ತುಂಬಿ ಕಾಣ್ತದೆ. ವಿಶೇಷವಾಗಿ ಸೂರ್ಯದೇವರ ಅವತಾರವಾದುದ್ದರಿಂದ ಭಾನುವಾರ ವಿಶೇಷವಾಗಿ ಭಕ್ತರು ದರ್ಶನಕ್ಕೆ ಬರ್ತಾರೆ. ಅಲ್ಲಿ ಸಂಪ್ರದಾಯದ ವಸ್ತ್ರಧಾರಣೆ ಮಾಡಿದವರಿಗೆ ಮಾತ್ರ ದರ್ಶನಕ್ಕೆ ಪ್ರವೇಶ. ಆಧುನಿಕ ವಸ್ತ್ರಗಳು ಧರಿಸಿದವರಿಗೆ ದರ್ಶನ ನಿಷಿದ್ಧ. ಈ ಕಡ್ಡಾಯವು ನಿಜಕ್ಕೂ  ಶ್ಲಾಘನೀಯ.   ನಮ್ಮ ಮಾಧ್ವರಿಗೆ ಮುಖ್ಯವಾದ ಎಲ್ಲ ಕ್ಷೇತ್ರಗಳಲ್ಲಿ ಈ ರೀತಿಯ ಕಡ್ಡಾಯವನ್ನು ಅನುಸರಿಸುವ ಪದ್ಧತಿ ಬರುವುದು ಉತ್ತಮ ಎಂದು ನನ್ನ ಅಭಿಪ್ರಾಯ.  ಆಗ ಮಾತ್ರ ನಾವು ನಮ್ಮ ಸಂಪ್ರದಾಯವನ್ನು ಗೌರವಿಸಲೂ ಸಾಧ್ಯ.

ಶ್ರೀ ಬ್ರಹ್ಮಣ್ಯತೀರ್ಥರ ಅನುಗ್ರಹ ಪಡೆದವರು ಲಕ್ಷಾಂತರ ಜನ ಇದ್ದಾರೆ. ಮಕ್ಕಳು ಇಲ್ಲದೇ ಇದ್ದ ಗಂಡ ಹೆಂಡತಿ ಬಂದು ಗುರುಗಳ ವೃಂದಾವನ ಪ್ರದಕ್ಷಿಣೆ ಮಾಡಿ ಮೂರು ದಿನ ಸೇವೆ (ತೆಂಗಿನಕಾಯಿಯನ್ನು ಅಭಿಮಂತ್ರಿಸಿ  ಸಂಕಲ್ಪದಿಂದ ) ಮಾಡಿದಾಗ ಉತ್ತಮ ಸಂತಾನ ಪಡೆದದ್ದೂ ಸಾವಿರಾರು ಜನರ ಅನುಭವವೂ. ಮತ್ತೆ ಕಣ್ಣು ಸರಿಯಿಲ್ಲದವರಿಗೆ ಕಣ್ಣಿನ ದೃಷ್ಟಿಯನ್ನು ಸರಿಪಡಿಸಿದ ಸೂರ್ಯ ದೇವರೇ ಇವರು. ಆರೋಗ್ಯದ, ಸಂಸಾರದ ಗೊಂದಲ ಯಾವುದೇ ಸಮಸ್ಯೆ ಇರಲಿ ನೀವೇ ರಕ್ಷ ಎಂದು ಬೇಡಿ ಬಂದವರನ್ನು ತಾಯಿಯಂತೆ ಕೈ ಹಿಡಿದು ಕಾಪಾಡುತ್ತಿರುವ ಕರುಣಾಳುಗಳು ಶ್ರೀ ಬ್ರಹ್ಮಣ್ಯತೀರ್ಥ ಗುರುಸಾರ್ವಭೌಮರು. 

ಶ್ರೀಮಚ್ಚಂದ್ರಿಕಾಚಾರ್ಯರು ತಿಳಿಸಿದಂತೆ, ಇವರ ವೃಂದಾವನ ದರ್ಶನ ಪಾವನವೂ,  ಮೃತ್ತಿಕಾ ಧಾರಣೆ ಜೀವನದ ಉಧ್ಧಾರವೂ, ಸೇವೆ ಎಲ್ಲ ಕಷ್ಟಗಳ ನಾಶದ ಮಾರ್ಗವೂ ಆಗಿದೆ ಎನ್ನುವುದು ಮನದಾಳದ,  ಅನುಭವದ, ಎಲ್ಲರ ಆತ್ಮವಿಶ್ವಾಸದ ನಿದರ್ಶನವಾಗಿದೆ. 

ಇಂತಹಾ ಮಹಾನ್ ಗುರುಗಳನ್ನು ಪ್ರತೀದಿನವೂ ಸ್ಮರಣೆಮಾಡುವುದರೊಂದಿಗೆ,  ಆರಾಧನಾ ಸಮಯದಲ್ಲಿ ವಿಶೇಷವಾಗಿ ಸ್ಮರಿಸಿ ಅವರ ಪರಮ ಕಾರುಣ್ಯಕ್ಕೆ ಪಾತ್ರರಾಗಬೇಕೆಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತೇನೆ.

ಸಮುತ್ಸಾರ್ಯತಮಃ ಸ್ತೋಮಮ್ ಸನ್ಮಾರ್ಗಂ ಸಂಪ್ರಕಾಶ್ಯಚ/
ಸದಾ ವಿಷ್ಣುಪದಾಸಕ್ತಂ ಸೇವೇ ಬ್ರಹ್ಮಣ್ಯಭಾಸ್ಕರಮ್// ಎಂದು ಶ್ರೀ ಬ್ರಹ್ಮಣ್ಯತೀರ್ಥ ಗುರುಸಾರ್ವಭೌಮರನ್ನು ಶ್ರೀಮಚ್ಚಂದ್ರಿಕಾಚಾರ್ಯರು ಸ್ತುತಿಸಿದರೆ..

ಶ್ರೀ ಸಾಗರಕಟ್ಟೆ ಮಠದ ಪ್ರಪ್ರಥಮ ಯತಿಗಳಾದ ಶ್ರೀ ಪ್ರದ್ಯುಮ್ನತೀರ್ಥರು ಸಹ ಕನ್ನಡದಲ್ಲಿ  ನರಹರಿ ಅಂಕಿತದಿಂದ ಶ್ರೀ ಬ್ರಹ್ಮಣ್ಯತೀರ್ಥರನ್ನು ಸ್ತುತಿಸಿದ್ದಾರೆ.

ಹರಿದಾಸ ವರೇಣ್ಯರಾದ, ಶ್ರೀ ಜಗನ್ನಾಥ ದಾಸಾರ್ಯರ ತಂದೆಯವರು ಶ್ರೀ ನರಸಿಂಹ ವಿಠಲರು, ಶ್ರೀ ಗೋಪಾಲದಾಸಾರ್ಯರು ತಮ್ಮ ಕೃತಿಗಳಿಂದ ಸ್ತುತಿಮಾಡಿದ್ದಾರೆ. ಶ್ರೀ ತಂದೆವೆಂಕಟೇಶವಿಠಲರೂ, ಶ್ರೀ ಪ್ರಸನ್ನ ಶ್ರೀನಿವಾಸ ದಾಸರು, ಮೈಸೂರಿನ ಹರಿದಾಸ ಕವಿಕುಲತಿಲಕರಾದ ಶ್ರೀ ಗುರುಗೋವಿಂದವಿಠಲರು ಶ್ರೀ ಬ್ರಹ್ಮಣ್ಯತೀರ್ಥ ಗುರುಸಾರ್ವಭೌಮರ ಕುರಿತು ಸ್ತುತಿಪದಗಳು ರಚನೆ ಮಾಡಿದ್ದಾರೆ. ಶ್ರೀ ಗುರುಗೋವಿಂದವಿಠಲರು ಶ್ರೀ ಗುರುಗಳ ಇಡೀ ಜೀವನವನ್ನು ದರ್ಪಣದಂತೆ ದೀರ್ಘಕೃತಿಯನ್ನು ರಚಿಸಿದ್ದಾರೆ. ಇಂತಹ ಮಹಾನ್ ಗುರುಗಳ ಕಟಾಕ್ಷ ವೀಕ್ಷಣೆ ನಮ್ಮ ಮೇಲೆ ಸ್ವಲ್ಪಮಾತ್ರವಿದ್ದರೂ ನಮ್ಮ ಜೀವನದಲ್ಲಿ  ಜ್ಞಾನದ ಸೂರ್ಯ ಬೆಳಕನ್ನು ತುಂಬಿದಂತೆಯೇ.. 

ಶ್ರೀ ಬ್ರಹ್ಮಣ್ಯತೀರ್ಥರ ಪಾದಪದ್ಮಗಳನ್ನು  ಗಟ್ಟಿಯಾಗಿ ಹಿಡಿದು ಅವರ ಸ್ಮರಣೆ ಕ್ಷಣಕ್ಷಣಕ್ಕೂ ಬಿಡದೆ ನಮ್ಮಿಂದ ಮಾಡುವಂತಾಗಲೀ ಎಂದು ಅವರಲ್ಲಿ ಅವರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಗೋಪಾಲಕೃಷ್ಣನಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ... 

ಕಂಸಧ್ವಂಸಿ ಪದಾಂಭೋಜ ಸಂಸಕ್ತೋ ಹಂಸಪುಂಗವಃ/
ಬ್ರಹ್ಮಣ್ಯ ಗುರುರಾಜಾಖ್ಯೋ ವರ್ತತಾಂ ಮಮಮಾನಸೇ//
-Smt. Padma Sirish
ನಾದನೀರಾಜನದಿಂ ದಾಸಸುರಭಿ
***


ವೈಶಾಖ ಕೃಷ್ಣ ಏಕಾದಶೀ- ಶ್ರೀಬ್ರಹ್ಮಣ್ಯತೀರ್ಥಗುರುಸಾರ್ವಭೌಮರ ಆರಾಧನಾ ಪರ್ವಕಾಲ- ಶ್ರೀವ್ಯಾಸರಾಜಗುರುಸಾರ್ವಭೌಮರಂತಹ ವಿಶ್ವಮಾನ್ಯರನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ ಪುಣ್ಯಚರಿತರು ಶ್ರೀಬ್ರಹ್ಮಣ್ಯತೀರ್ಥರು. ಇಂತಹ ಮಹನೀಯರ ಆರಾಧನಾ ಸಂದರ್ಭದಲ್ಲಿ ಶ್ರೀಬ್ರಹ್ಮಣ್ಯತೀರ್ಥರ ಶಿಷ್ಯಾಗ್ರಣಿಗಳಾದ ಶ್ರೀವ್ಯಾಸರಾಜರು ತಮ್ಮ ಗುರುಗಳನ್ನು ಕುರಿತು ತಮ್ಮ ಹೃದಯಾಂತರಾಳದಿಂದ ಮಾಡಿದ ಸ್ತುತಿ ʼಪಂಚರತ್ನಮಾಲಿಕಾಸ್ತೋತ್ರಮ್‌ʼ. ಅಸದಳವಾದ ಭಕ್ತಿಭಾವದಿಂದ, ಭಕ್ತ್ಯತಿಶಯಗಳಿಂದ ಭರಿತವಾದ ಈ ಸ್ತೋತ್ರ ಶ್ರೀಬ್ರಹ್ಮಣ್ಯತೀರ್ಥರ ಭೌಮ ವ್ಯಕ್ತಿತ್ವವನ್ನು ಪರಿಚಯ ಮಾಡಿಕೊಡುವಂತಹ ಅಪೂರ್ವ ಕೃತಿಯಾಗಿದೆ. ಶ್ರೀವ್ಯಾಸರಾಜರು ತಮ್ಮ ಗುರುಗಳಾದ ಶ್ರೀಬ್ರಹ್ಮಣ್ಯತೀರ್ಥರನ್ನು "ಶುಭತಮಚರಿತರು, ಶ್ರೀಸಹಿತನಾದ ಶ್ರೀಹರಿಯನ್ನು ಸದಾ ಸೇವಿಸುವವರು, ಶಾಂತರು, ದಾಂತರು, ಮಹಾತ್ಮರು, ನಿರ್ಮಲವಾದಂತಹ ಜ್ಞಾನ, ವಾಕ್ಸಿದ್ಧಿ, ವಾಕ್‌ ಶುದ್ಧಿ, ತಪಸ್ಸು, ಉಪರತಿ, ತಿತಿಕ್ಷಾ ಮೊದಲಾದಂತಹ ಶ್ರೇಷ್ಠಗುಣಗಳಿಂದ ಕೂಡಿದವರು ಎಂಬುದಾಗಿ ವರ್ಣಿಸುತ್ತಾರೆ. ನಂತರ ದುರ್ಮತಿಗಳೊಂದಿಗೆ ಎಂದಿಗೂ ಸಂಬಂಧವನ್ನು ಹೊಂದದಿರುವರು, ದುರ್ವಾದಿಗಳನ್ನು ಗೆದ್ದವರೂ, ಪಾಪವೆಂಬ ಸಮುದ್ರವನ್ನು ದಾಟಿಸುವವರು, ಧೀರರೂ, ಭೂಸುರರಿಂದ ಸದಾ ಶ್ಲಾಘ್ಯರು, ಸದಾ ಸ್ತುತ್ಯವಾದ ಜ್ಞಾನವನ್ನು ಉಳ್ಳವರೂ ಆದ ಶ್ರೀಬ್ರಹ್ಮಣ್ಯತೀರ್ಥರು ಮಾಯಾವಾದಿಗಳೆಂಬ ಗಜಗಳಿಗೆ ಪಂಚಾನನ ಸದೃಶರು, ಅಸದೃಶವಾದ ಕೀರ್ತಿಗೆ ಭಾಜನರು, ಶ್ರೀವಿಠ್ಠಲದೇವರ ಪಾದಗಳೆಂಬ ಪದ್ಮಗಳಿಗೆ ಮಧುಪರು, ಸರ್ವೇಷ್ಟಪ್ರದರೂ, ದಯಾಗುಣಭರಿತುರ, ಜ್ಞಾನಾದಿಉಜ್ವಲವಾದ ಭಾಗ್ಯವನ್ನು ಹೊಂದಿದವರು ಎಂದು ತಮ್ಮ ಗುರುಗಳನ್ನು ಶ್ರೀವ್ಯಾಸರಾಜರು ಕೊಂಡಾಡಿದ್ದಾರೆ. ತುರೀಯಾಶ್ರಮ ದ್ಯೋತಕವಾದ ಕಾಷಾಯವಸ್ತ್ರವನ್ನು ಧರಿಸಿ, ತುಲಸೀ, ಪದ್ಮಾಕ್ಷಾದಿ ಮಾಲೆಗಳಿಂದ ಭೂಷಿತರಾದ ಶ್ರೀಬ್ರಹ್ಮಣ್ಯತೀರ್ಥರು ಅಜ್ಞಾನ, ಅಘಗಳನ್ನು ಪರಿಹರಿಸುವ ಮಹಾ ಸಾಮರ್ಥ್ಯವುಳ್ಳವರು. ಶ್ರೀಬ್ರಹ್ಮಣ್ಯತೀರ್ಥರಾದರೋ ಸದಾ ಮೃದುವಚನಗಳನ್ನು ಆಡುವಂತಹವರು. ತಮ್ಮ ಭಕ್ತಿ, ಜ್ಞಾನಾದಿಗುಣಗಳಿಂದ ಅನುಪಮವಾದ ಸೌಂದರ್ಯವನ್ನು ಹೊಂದಿರುವವರು, ಆರ್ತರನ್ನು ಸಂತೈಸುವಲ್ಲಿ ಸದಾರತರು, ಜ್ಞಾನಿಗಳಾದ ಮುನಿಗಳಿಂದ ಸ್ತೂಯಮಾನರಾದ ಮಹನೀಯರು. ವೈಷ್ಣವರಿಗೆ ಸದಾ ಅನುಕೂಲರು, ದಯಾಲುಗಳು, ಸದಾ ಮಂದಸ್ಮಿತರಾದವರೆಂದು ತಮ್ಮ ಗುರುಗಳನ್ನು ಎಷ್ಟು ಸ್ತುತಿಸಿದರೂ ಶ್ರೀವ್ಯಾಸರಾಜರಿಗೆ ತೃಪ್ತಿಯಿಲ್ಲ. ತಮ್ಮ ಗುರುಗಳ ಮಹಿಮೆಯನ್ನು, ವ್ಯಕ್ತಿತ್ವವನ್ನು ಕೊಂಡಾಡಿ ನಂತರ ಶ್ರೀವ್ಯಾಸರಾಜರು ಶ್ರೀಬ್ರಹ್ಮಣ್ಯತೀರ್ಥರ ಬೃಂದಾವನ ದರ್ಶನದಿಂದ ಪ್ರಾಪ್ತವಾಗುವ ಸಂಪದಗಳನ್ನು, ಪರಿಹಾರವಾಗುವ ದೋಷಗಳನ್ನು ವರ್ಣಿಸುತ್ತಾರೆ. ಅಬ್ಬೂರು ಕ್ಷೇತ್ರದಲ್ಲಿರುವ ಶ್ರೀಬ್ರಹ್ಮಣ್ಯತೀರ್ಥರ ಬೃಂದಾವನದರ್ಶನ ಮಾತ್ರದಿಂದಲೇ ಪಾಪಗಳು ಕ್ಷಣಮಾತ್ರದಲ್ಲಿ ಕ್ಷಯವಾಗುತ್ತವೆ. ಬೃಂದಾವನದ ಮೃತ್ತಿಕಾಧಾರಣ ಮಾತ್ರದಿಂದಲೇ ತಾಪತ್ರಯಗಳು ಧ್ವಂಸವಾಗುತ್ತವೆ. ಶ್ರೀಬ್ರಹ್ಮಣ್ಯತೀರ್ಥರ ಬೃಂದಾವನಸೇವೆಯಿಂದ ಭೂಮಿಯಲ್ಲಿರುವ ಜನರು ಜ್ಞಾನವನ್ನು, ಸುಖವನ್ನು ಪಡೆಯುವರು ಮಾತ್ರವಲ್ಲದೇ ಸರ್ವಾರಿಷ್ಟಗಳ ನಿವೃತ್ತಿಯನ್ನೂ ಹೊಂದುವರು. ಕುಷ್ಟರೋಗಗಳೇ ಮೊದಲಾದ ವ್ಯಾಧಿಗಳನ್ನು ಪರಿಹರಿಸುವ ವೈದ್ಯಾಧಿನಾಥರು, ಭೂತ, ಪ್ರೇತ, ಗ್ರಹಗಳ ಬಾಧೆಯನ್ನು ಪರಿಹಾರಮಾಡುವ ಮಹಾನ್‌ ಮಂತ್ರಸಿದ್ಧರಾದ ಮುನೀಂದ್ರರು ಶ್ರೀಬ್ರಹ್ಮಣ್ಯತೀರ್ಥರು ಸರ್ವಾಭೀಷ್ಟಪ್ರದಾತರಾದ ಶ್ರೀಬ್ರಹ್ಮಣ್ಯತೀರ್ಥಗುರು ಸಾರ್ವಭೌಮರು ಗುರುಕುಲತಿಲಕರು ಎಂದು ಮನದುಂಬಿ ನುಡಿಯುತ್ತಾರೆ. ತಮ್ಮ ಮಹೋನ್ನತವಾದ ʼತಾತ್ಪರ್ಯಚಂದ್ರಿಕಾʼ ಕೃತಿಯಲ್ಲಿ "ಕಂಸಧ್ವಂಸಿಪದಾಂಭೋಜಸಂಸಕ್ತೋ ಹಂಸಪುಂಗವ:, ಬ್ರಹ್ಮಣ್ಯಗುರುರಾಜೋಖ್ಯೋ ವರ್ತತಾಂ ಮಮ ಮಾನಸೇ" ಎಂದು ಶ್ರೀಬ್ರಹ್ಮಣ್ಯ ತೀರ್ಥರನ್ನು ನುತಿಸುವ ಶ್ರೀವ್ಯಾಸರಾಜರು, ತಮ್ಮ ಮತ್ತೊಂದು ಮಹತ್ತ್ವದ ಕೃತಿ ʼನ್ಯಾಯಾಮೃತʼ ದಲ್ಲಿ ʼಸಮುತ್ಸಾರ್ಯ ತಮ:ಸ್ತೋಮಂ ಸನ್ಮಾರ್ಗಂ ಸಂಪ್ರಕಾಶ್ಯಚ ಸದಾವಿಷ್ಣುಪದಾಸಕ್ತಂ ಸೇವೇ ಬ್ರಹ್ಮಣ್ಯಭಾಸ್ಕರಮ್"‌ ಎಂಬುದಾಗಿ ಜಗತ್ತನ್ನು ಬೆಳಗುವ ಮಹಾಶಕ್ತಿ ಶ್ರೀಸೂರ್ಯದೇವನೇ ಬ್ರಹ್ಮಣ್ಯತೀರ್ಥರ ರೂಪದಲ್ಲಿ ಅವತರಿಸಿ ಶ್ರೀಕಂಸಧ್ವಂಸಿ ಯಾದ ಶ್ರೀಕೃಷ್ಣನ, ಶ್ರೀಮಧ್ವಮುನಿಗಳ ಸೇವೆಯ ವ್ಯಾಜದಿಂದ ಭೂಮಿಯಲ್ಲಿ ಅವತರಿಸಿದ ವಿಚಾರವನ್ನು ಸೂಚಿಸಿದ್ದಾರೆ. ಶ್ರೀಬ್ರಹ್ಮಣ್ಯಭಾಸ್ಕರರು ನಮ್ಮ ಬದುಕಿನಲ್ಲಿಯೂ ಕವಿದ, ಕವಿಯಬಹುದಾದ ತಮಸ್ಸನ್ನು ತೊಡೆದು ಶ್ರೀವೇದವ್ಯಾಸ-ಮಧ್ವರ ಸನ್ಮಾರ್ಗವನ್ನು ಪ್ರಕಾಶಿಸಲಿ. -ವೇಣುಗೋಪಾಲ ಬಿ.ಎನ್.‌
***


" ಶ್ರೀ ಬ್ರಹ್ಮಣ್ಯತೀರ್ಥ - 1"
" ಶ್ರೀ ಸೂರ್ಯಾಂಶ ಬ್ರಹ್ಮಣ್ಯತೀರ್ಥರು " 
" ದಿನಾಂಕ : 07.06.2021 ಸೋಮವಾರ - ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಬಹುಳ ದ್ವಾದಶೀ - ಶ್ರೀ ಬ್ರಹ್ಮಣ್ಯತೀರ್ಥರ ಆರಾಧನಾ ಮಹೋತ್ಸವ, ಅಬ್ಬೂರು " 
ಕಂಸಧ್ವಂಸಿ ಪದಾಂಭೋಜ 
ಸಂಸಕ್ತೋ ಹಂಸಪುಂಗವ ।
ಬ್ರಹ್ಮಣ್ಯ ಗುರುರಾಜಾಖ್ಯೋ 
ವರ್ತತಾಂ ಮಮ ಮಾಸಸೇ ।। 
ಶ್ರೀ ನರಸಿಂಹದಾಸರು ( ಶ್ರೀ ಜಗನ್ನಾಥದಾಸರ ತಂದೆ )... 
ರಾಗ : ಅಹರಿ ರಾಗ : ಏಕ 
ನಂಬಿದನೋ ಬ್ರಹ್ಮಣ್ಯತೀರ್ಥಾರ್ಯ ।
ಸನ್ನುತ ಚರಣ ಪಾವನ ಸುಚರ್ಯಾ ।। ಪಲ್ಲವಿ ।। 
ಘನ್ನ ಭವದ ಭಯವನ್ನು ಕಳೆದು । ಯತಿ ।
ರನ್ನ ಯೆನ್ನನು ಧನ್ಯನ ಮಾಡೋ ।। ಅ. ಪ ।। 
ಪುರುಷೋತ್ತಮ । ಸುತೀ ।
ರ್ಥರ ಪ್ರಿಯ ಸುಕುಮಾರ ।
ದುರಿತೌಘ ಜೀಮೂತ ಚಂಡ ಸಮೀರ ।
ಸುರರುಚಿ ತುಳಸೀ ಪಂಕಜಮಣಿ ಹಾರ ।।
ಧರಿಸಿ ಮೆರೆವೋ ದಿನಕರನವತಾರ ।
ಕರುಣದಿ ತವ ಶ್ರೀಕರ ಚರಣಾಂಬುಜ ।
ದರುಶನವ ಕೊಡು ಗುಣಗಣ ನಿಧಿಯೇ ।। ಚರಣ ।। 
ಸೇವಿಪ ಜನರಿಗೆ ದೇವತರುವೆನಿಪ ।
ಶ್ರೀವಿಠ್ಠಲ ತಾವರೆ ಮಧುಪಾ ।
ಕೋವಿದ ಜನರು ಸಂಭಾವಿಸಿ ಸ್ತುತಿಪ ।।
ಪಾವನ್ನ ಪಾದಾರ್ಚಿತ ಭಾವಜ ಮುನಿಪಾ ।
ಪಾವನ ಸುಮತನ ಜೀವರ ಚಂದ್ರನೆ ।
ಪಾವನ ಮತಿ ಕೊಡು ನೀ ಒಲಿದೆನಗೆ ।। ಚರಣ ।। 
ಹರಿಭಕ್ತಿ ವೈರಾಗ್ಯ ಪರತತ್ತ್ವಜ್ಞಾನ ।
ವರದ ಪಾಲಿಸು ಸರ್ವವಿದ್ಯಾ ಪ್ರವೀಣ । ನ ।
ರಸಿಂಹವಿಠ್ಠಲ ಶ್ರೀ ಹರಿ ಸನ್ನಿಧಾನ ।।
ಕರುಣಾಪಾತ್ರನೇ ದಿವ್ಯವರ ಪೂರ್ಣ ಜ್ಞಾನ ।
ಹರಿಗುರು ಭಜನ ತ್ವತ್ಪದ ವ್ಯಾಸಾರ್ಯರ ।
ಗುರುವೆಂದೆನಿಸಿದೆ ಧರೆಯೊಳು ಮೆರೆದೆ ।। ಚರಣ ।। 
ಕಣ್ವ ನದಿಯ ತೀರದಲ್ಲಿ ವಾಸ ಮಾಡಿರುವ - ಸಂಸೇವಿತರ ಪಾಪಗಳೆಂಬ ಉರುಗಕ್ಕೆ ಗರುಡ ಪಕ್ಷಿಯಂತಿರುವ; ಸಜ್ಜನ ವೃಂದಕ್ಕೆ ಆಶ್ಚರ್ಯಕರವಾದ ರೀತಿಯಲ್ಲಿ ಕಣ್ಣಿಗೆ ಹಬ್ಬದಂತಿರುವವರು ಶ್ರೀ ಬ್ರಹ್ಮಣ್ಯತೀರ್ಥರು! 
ಯಾರ ವೃಂದಾವನ ಸೇವೆಯಿಂದ ಭೂಮಿಯಲ್ಲಿ ಜನರು ಮಹಾತ್ಸೌಖ್ಯವನ್ನು ಹೊಂದುವರೋ - ಯಾರ ಪಾದೋದಕ ಪ್ರಾಶನವು ಸಕಲ ತೀರ್ಥ ಸಮೂಹಗಳ ಪುಣ್ಯವನ್ನು ತಂದು ಕೊಡುವರೋ  - ಅಂಥಹಾ ಬಂಗಾರದಂತೆ ಹೊಳೆಯುವ ಶರೀರ ಉಳ್ಳವರು ಶ್ರೀ ಬ್ರಹ್ಮಣ್ಯತೀರ್ಥರು! 
ಯಾರ { ಪುಣ್ಯ } ಮಹಿಮಾ ಕೀರ್ತನವೆಂಬ ಸುಧಾರಸದಿಂದ ತೃಪ್ತರಾದ ಮನಸ್ಸುಳ್ಳವರು ಯಾರೋ - ಯಾರ ಪಾದ ಪಂಕಜದ ವಿಶೇಷ ಸೇವೆಯಿಂದ ಪುಣ್ಯಗಳಿಕೆಯುಳ್ಳವರು ಯಾರೋ - ಯಾರ ಪ್ರೇಮ ಪೂರ್ಣವಾದ ಪ್ರಕಾಶಮಾನವಾದ ಕೃಪಾ ವೀಕ್ಷಣಕ್ಕೆ ಪಾತ್ರರು ಯಾರೋ -  ಅಂಥವರ ( ಶ್ರೀ ಬ್ರಹ್ಮಣ್ಯತೀರ್ಥರ ಭಕ್ತರ ) ಸಂದರ್ಶನವು ಕಲಿಕಲ್ಮಷವೆಂಬ ಪರ್ವತ ಭೇದನ ವಜ್ರಾಯುಧ ಸದೃಶವಾದುದು!! 
" ಶ್ರೀ ಬ್ರಹ್ಮಣ್ಯತೀರ್ಥರ ಸಂಕ್ಷಿಪ್ತ ಮಾಹಿತಿ " 
ಹೆಸರು : ಶ್ರೀ ನರಸಿಂಹಾಚಾರ್ಯ 
ತಂದೆ : ಶ್ರೀ ರಾಮಾಚಾರ್ಯ 
ವಂಶ : ಷಾಷ್ಟಿಕ 
ಅಂಶ : ಶ್ರೀ ಸೂರ್ಯದೇವರು 
ಕಕ್ಷೆ : 12 
ವಿದ್ಯಾ ಗುರುಗಳು : 
ಶ್ರೀ ರಾಜೇಂದ್ರತೀರ್ಥರು ಮತ್ತು ಶ್ರೀ ಪುರುಷೋತ್ತಮತೀರ್ಥರು 
ಆಶ್ರಮ ಗುರುಗಳು : ಶ್ರೀ ಪುರುಷೋತ್ತಮತೀರ್ಥರು 
ಆಶ್ರಮ ನಾಮ : ಶ್ರೀ ಬ್ರಹ್ಮಣ್ಯತೀರ್ಥರು
ವೇದಾಂತ ಸಾಮ್ರಾಜ್ಯಾಧಿಪತ್ಯ : ಕ್ರಿ ಶ 1460 - 1467 
" ಗ್ರಂಥಗಳು " 
1. ಬ್ರಹ್ಮಸೂತ್ರ ವ್ಯಾಖ್ಯಾನ 
2. ವಿಷ್ಣು ಸಹಸ್ರ ನಾಮ ವ್ಯಾಖ್ಯಾನ 
3. ವಿಷ್ಣು ತತ್ತ್ವ ನಿರ್ಣಯ ವ್ಯಾಖ್ಯಾನ 
4. ಈಶಾವಾಸ್ಯೋಪನಿಷದ್ವ್ಯಾಖ್ಯಾನ 
5. ಪ್ರಹ್ಲಾದ ಕೃತ ನೃಸಿಂಹ ಸ್ತೋತ್ರ ವ್ಯಾಖ್ಯಾನ 
6. ಶ್ರೀ ನಾರಾಯಣ ಪಂಡಿತಾಚಾರ್ಯ ಕೃತ " ನೃಸಸಿಂಹ ಸ್ತುತಿ ವ್ಯಾಖ್ಯಾನ "
7. ಭಗವದ್ಗೀತಾ ವ್ಯಾಖ್ಯಾನ 
8. ಶ್ರೀಮದ್ಭಾಗವತ ತಾತ್ಪರ್ಯ ನಿರ್ಣಯ ವ್ಯಾಖ್ಯಾನ [ ಭಾವಸಂಗ್ರಹಃ ]
ಆಶ್ರಮ ಶಿಷ್ಯರು : ಶ್ರೀ ವ್ಯಾಸರಾಜ ಗುರುಸಾರ್ವಭೌಮರು 
ಸಮಕಾಲೀನ ಯತಿಗಳು : ಶ್ರೀ ವಿಬುಧೇಂದ್ರತೀರ್ಥರು 
ಆರಾಧನೆ : ವೈಶಾಖ ಬಹುಳ ಏಕಾದಶೀ { ದ್ವಾದಶೀ }
ಬೃಂದಾವನ ಸ್ಥಳ : ಅಬ್ಬೂರು 
" ಶ್ರೀ ಬ್ರಹ್ಮಣ್ಯತೀರ್ಥರ ಅವತಾರ " 
ಭೂಮೌ ಭಾರತಖಂಡೇsತ್ರ 
ಚೋಲ ಭೂಜನನೀ ಧುನೀ ।
ಮರುಧ್ವೃಧಾಭಿಧಾ 
ಸ್ವರ್ಧುನೀವಾಘನಾಶಿನೀ ।। 
ತತ್ತಿರೇ ನೃಹರೇಃ ಕ್ಷೇತ್ರೇ 
ನೃಸಿಂಹಸ್ವರ್ದ್ರುಮಂ ದ್ವಿಜಃ ।
ಪಾದ ಪ್ರಪನ್ನ ದೇಯೇಷ್ಟ 
ಫಲ ಭಾರನತಂ ಶ್ರಿತಃ ।। 
ಸ ತು ರಾಮಾಚಾರ್ಯ ನಾಮಾ 
ಪೂಗಾರಾಮ ಕುಲೋದ್ಭವಃ ।
ಶ್ರೀ ನೃಸಿಂಹ ಪ್ರಸಾದೇನ ಸಭಾ-
ರ್ಯೋsಲ ಭವಾತ್ಮಜಮ್ ।। 
ಈ ಭೂಮಿಯಲ್ಲಿ, ಭರತಖಂಡದಲ್ಲಿ ಚೋಲ ಭೂಮತೆಯಾದ ( ಒಳ್ಳೆಯ ತಂಗಾಳಿಯಿಂದಲೇ ಅಭಿವೃದ್ಧಿ ಹೊಂದಿ ಜನರಿಗಾನಂದ ಕೊಡುವುದರಿಂದ ) "ಮರುಧ್ವೃಧಾ " ಎಂಬ ಹೆಸರಿನ - ಕಾವೇರಿ ನದಿಯು ಗಂಗೆಯಂತೆ ಪಾಪವನ್ನು ಪರಿಹರಿಸುತ್ತಾ ಶೋಭಿಸುತ್ತಿದೆ. 
ಈ ಕಾವೇರಿ ನದೀ ತೀರದ ಶ್ರೀ ನೃಸಿಂಹ ಕ್ಷೇತ್ರದಲ್ಲಿ - ತನ್ನ ಪಾದಾಶ್ರಿತರಿಗೆ ಅಭೀಷ್ಟ ಪ್ರಧಾನ ರೂಪ ಫಲ ಭಾರದಿಂದ ಬಗ್ಗಿರುವ " ಶ್ರೀ ನೃಸಿಂಹದೇವ " ರೆಂಬ ಕಲ್ಪವೃಕ್ಷವನ್ನು ಒಬ್ಬ ಬ್ರಾಹ್ಮಣನು ಆಶ್ರಯಿಸಿದ್ದನು. 
ಆ ಬ್ರಾಹ್ಮಣನ ಹೆಸರು " ರಾಮಾಚಾರ್ಯ " ನೆಂಬುದಾಗಿಯೂ - ಆತನು " ಪೂಗಾರಾಮ " ( ಅಡಿಕೆಯ ತೋಟ ) ಎಂಬ ಕುಲದಲ್ಲಿ ಜನಿಸಿದನು. 
ತನ್ನ ಭಾರ್ಯೆಯಿಂದ ಸಹಿತನಾದ ಆ ದ್ವಿಜನು ಶ್ರೀ ನೃಸಿಂಹದೇವರ ವರ ಪ್ರಸಾದದಿಂದ ಒಬ್ಬ ಪುತ್ರನನ್ನು ಪಡೆದನು. 
" ಉಪನಯನ " 
ಗರ್ಭಾಷ್ಟಮೇsಭ್ದೇ ಪೋತಂ 
ತಮುಪನೀಯ ದ್ವಿಜೋತ್ತಮಃ ।
ಪುರುಷೋತ್ತಮತೀರ್ಥಾರ್ಯ 
ನಿಕಟಂ ಪ್ರಾಹಿನೋದ್ವಟುಮ್ ।।
ಗರ್ಭವಾಸದ ಒಂದು ವರ್ಷವೂ ಸೇರಿಕೊಂಡು 8ನೆ ವಯಸ್ಸಿನಲ್ಲಿಯೇ ಆ ಹುಡುಗನಿಗೆ ಆ ದ್ವಿಜೋತ್ತಮ ಶ್ರೀ ರಾಮಾಚಾರ್ಯರು ಉಪನಯನ ಸಂಸ್ಕಾರವನ್ನು ನೆರವೇರಿಸಿ - ವಟುವಾದ ಶ್ರೀ ನರಸಿಂಹನನ್ನು ಶ್ರೀ ಪುರುಷೋತ್ತಮತೀರ್ಥರೆಂಬ ಪೂಜ್ಯರಾದ ಗುರುಗಳ ಬಳೆಗೆ ಕಳುಹಿಸಿದರು. 
" ದ್ವೈತ ವೇದಾಂತಾಧ್ಯಯನ " 
ಸ್ವತಃ ಸಂಪ್ರಾಪ್ತ ವಿದ್ಯಾಯ 
ಗುರೂಣಾಮುಪದೇಶನಮ್ ।
ಶಿಷ್ಟಾಚಾರಾವನಾಯಾ-
ಭೂದನ್ಯತೋ ನ ರವೇರ್ಹಿ ಭಾಃ ।। 
ಸ್ವಾಭಾವಿಕವಾಗಿಯೇ ಎಲ್ಲಾ ವಿದ್ಯೆಗಳನ್ನೂ ಬಲ್ಲ ಆ ವಟುವಿಗೆ ಗುರುಗಳ ಉಪದೇಶವು ಕೇವಲ ಶಿಷ್ಟಾಚಾರ ಪಾಲನೆಗೋಸ್ಕರವೇ ಆಯಿತು. 
ಸೂರ್ಯನಿಗೆ ಬೇರೊಂದರ ಸಹಾಯದಿಂದ ಪ್ರಕಾಶವಿಲ್ಲವಷ್ಟೇ? 
" ಶ್ರೀ ಬ್ರಹ್ಮಣ್ಯತೀರ್ಥರು ಸೂರ್ಯಾಂಶರು " 
" ಶ್ರೀ ವ್ಯಾಸರಾಜ ಗುರುಸಾರ್ವಭೌಮರು " ನ್ಯಾಯಾಮೃತ " ದಲ್ಲಿ... 
ಸಮುತ್ಸಾರ್ಯ ತಮಃಸ್ತೋಮಃ 
ಸನ್ಮಾರ್ಗ ಸಂಪ್ರಕಾಶ್ಯ ಚ ।
ಸದಾ ವಿಷ್ಣು ಪದಾಸಕ್ತಂ 
ಸೇವೆ ಬ್ರಹ್ಮಣ್ಯ ಭಾಸ್ಕರಮ್ ।। 
" ಶ್ರೀ ನರಸಿಂಹ ವಿರಚಿತ ಶ್ರೀ ಬ್ರಹ್ಮಣ್ಯತೀರ್ಥ ಸ್ತುತಿಃ "..... 
ಜಾತೋ ಭಾಸ್ಕರ ಏವ ಪೂಗವನಜಾದ್ ರಾಮಾನೃಸಿಂಹಾಖ್ಯಯಾಸೋsಪಿ 
ಶ್ರೀ ಪುರುಷೋತ್ತಮಾದ್ಯ-
ತಿರಭೂದ್ ಬ್ರಹ್ಮಣ್ಯತೀರ್ಥಾಭಿಧಃ ।
ಕರ್ನಾಟ೦ ಸ ಸುವೃಷ್ಟಿಭಿರ್ಮೃ-
ತಮಥೋಜ್ಜೀವ್ಯ ದ್ವಿಜಂ ಷಾಷ್ಟಿಕಂ
ಕೃತ್ವಾ ವ್ಯಾಸಮುನಿಂ ತತೋsಸ್ಯ 
ಸುತಕಂ ಲೇಭೇ ವನೇ ವಿಠ್ಠಲಮ್ ।। 
" ಪೂಗವನ " ವೆಂಬ ವಂಶದಲ್ಲಿ ಜನಿಸಿದ ಶ್ರೀ ರಾಮಚಾರ್ಯರಿಂದ " ಸೂರ್ಯದೇವನೇ " ನರಸಿಂಹನೆಂಬ ನಾಮದಿಂದ ಜನಿಸಿ - ಆತನೇ ಶ್ರೀ ಪುರುಷೋತ್ತಮತೀರ್ಥರಿಂದ ತುರ್ಯಾಶ್ರಮ ಸ್ವೀಕರಿಸಿ " ಬ್ರಹ್ಮಣ್ಯತೀರ್ಥ " ಎಂಬ ಹೆಸರನ್ನು ಪಡೆದನು. 
ಆ ಶ್ರೀ ಬ್ರಹ್ಮಣ್ಯತೀರ್ಥರು ಅನಾವೃಷ್ಟಿ ನಿಮಿತ್ತ ಮೃತಪ್ರಾಯವಾಗಿದ್ದ ಕರ್ಣಾಟ ದೇಶವನ್ನು ಚೆನ್ನಾಗಿ ಮಳೆಯಿಂದ ಉಜ್ಜೀವನ ಗೊಳಿಸಿದರು ಹಾಗೂ ಮೃತವಾಗಿದ್ದ ಷಾಷ್ಟಿಕ ಕುಲೋತ್ಪನ್ನನಾದ ದ್ವಿಜನನ್ನು ಬದುಕಿಸಿ ನಂತರ ಅವನ ಸುತನನ್ನು " ವ್ಯಾಸತೀರ್ಥ " ಮುನಿಯನ್ನಾಗಿಸಿದರು ಮತ್ತು ಆ ವನದಲ್ಲಿ ಶ್ರೀ ವಿಠ್ಠಲಮೂರ್ತಿ ವಿಗ್ರಹವನ್ನು ಪಡೆದರು. 
" ಶ್ರೀ ಶ್ರೀನಿವಾಸತೀರ್ಥರು " ...... 
ಶ್ರೀಮಾನತ್ರ ದಿವಾಕರಃ ಕರುಣಯಾ ಬ್ರಹ್ಮೌಘವಾಂಛಾ 
ಕೃತೇ ಶ್ರೀಮತ್ಪೂಗವನಾನ್ವವಾಯ-
ತಿಲಕಾದ್ರಾಮಾರ್ಯ ವಿಪ್ರೋತ್ತಮಾತ್ ।
ಲಬ್ಧ್ವಾ ಜನ್ಮ ನೃಸಿಂಹ ಸೇವನ ರತಃ 
ಕ್ಷೋಣೀ ಸುಚಿಂತಾಮಣಿಃ 
ಶ್ರೀ ಬ್ರಹ್ಮಣ್ಯ ಇತೀರಿತಃ ಸ 
ಭುವ ನಃ ಕುರ್ಯಾನ್ಮುನಿರ್ಮಂಗಲಮ್ ।। 
ಶ್ರೀ ಸೂರ್ಯದೇವನೇ ಈ ಭುವಿಯಲ್ಲಿ ಬ್ರಾಹ್ಮಣ ವೃಂದದ ಅಭೀಷ್ಟ ಸಿದ್ಧಿಗೋಸ್ಕರ - ಕರುಣೆಯಿಂದ ಶ್ರೀಮತ್ಪೂಗವನವೆಂಬ ವಂಶಕ್ಕೆ ತಿಲಕಪ್ರಾಯರಾದ ಶ್ರೀ ರಾಮಾಚಾರ್ಯರೆಂಬ ವಿಪ್ರೋತ್ತಮರಿಂದ ಜನವನ್ನು ಪಡೆದು - ಶ್ರೀ ನೃಸಿಂಹನ ಸೇವೆಯಲ್ಲಿ ಆಸಕ್ತರಾಗಿ - ಭೂಮಿಯಲ್ಲಿ ಚಿಂತಾಮಣಿಪ್ರಾಯರಾಗಿ - ಶ್ರೀ ಬ್ರಹ್ಮಣ್ಯತೀರ್ಥರೆಂಬುದಾಗಿ ಲೋಕದಲ್ಲಿ ಖ್ಯಾತರಾದರು. 
ಅಂಥಹಾ ಶ್ರೀ ಬ್ರಹ್ಮಣ್ಯತೀರ್ಥರು ಭೂಮಿಯಲ್ಲಿರುವ ನಮಗೆ ಮಂಗಳವನ್ನುಂಟು ಮಾಡಲಿ!! 
" ಶ್ರೀ ಶ್ರೀವಾಸತೀರ್ಥ ಕೃತ ಶ್ರೀ ಬ್ರಹ್ಮಣ್ಯತೀರ್ಥ ವಿಜಯಃ " ದಲ್ಲಿ.... 
ಭಾಸ್ವಂತಮಿವ ಭಾಂತಂ 
ಭಾಸ್ಕರಾಂಶಂ ಶುಭಾಕೃತಿಮ್ ।
ನೃಸಿಂಹವರಲಬ್ಧಂ ಶ್ರೀ -
ನೃಸಿಂಹಾಖ್ಯಂ ಪಿತಾsಕರೋತ್ ।। 
ಸೂರ್ಯನಂತೆ ಪ್ರಕಾಶಮಾನವಾದ - ಸೂರ್ಯಾಂಶ ಸಂಭೂತರೂ - ಮಂಗಳ ಸ್ವರೂಪರೂ - ಶ್ರೀ ನೃಸಿಂಹದೇವರ ವರ ಪ್ರಸಾದದಿಂದ ಪ್ರಾಪ್ತರೂ ಆದ ತನ್ನ ಮಗನಿಗೆ ಶ್ರೀ ನರಸಿಂಹರೆಂಬುದಾಗಿಯೇ ಜನಕನು ಹೆಸರಿಟ್ಟನು. 
" ಶ್ರೀ ಗಣೇಶಾಂಶ ಗೋಪಾಲದಾಸರು..... " 
ಅಂಬುಜ ಬಂಧು ಸನ್ನಿಭ ಸಾಧುಯೆನುತ । ಶ್ರೀ ।
ಕುಂಭಿಣಿ ಮುನಿರ್ವರ್ಯರ ।। ಆರ್ಯಾರಾ ।। 
" ಅಂಬುಜ ಬಂಧು ಸನ್ನಿಭ ಸಾಧು " 
" ಸೂರ್ಯ ಸಮಾನವಾದ ಯತಿ " ಅಂದರೆ.....
" ಸೂರ್ಯಂಶ ಸಂಭೂತರು ಶ್ರೀ ಬ್ರಹ್ಮಣ್ಯತೀರ್ಥ " ರೆಂದು ಸ್ಪಷ್ಟ ಪಡಿಸಿದ್ದಾರೆ. 
" ಮೈಸೂರಿನ ಶ್ರೀ ಗುರುಗೋವಿಂದದಾಸರು...... " 
ರವ್ಯಂಶ ಸಂಭೂತ ನೆನಿಸಿ । 
ಸರಿತ್ಕಣ್ವ ತಟದಿ ನೀನು ನೆಲಸೀ ।
ಪವನಾಂತಸ್ಯ ಗುರುಗೋವಿಂದವಿಠಲನ ।
ಸ್ತವನ ಮಾಳ್ಪರ ಕಾವ ।
ಭುವನ ಪಾವನ ದೇವ ।। 
ಆಚಾರ್ಯ ನಾಗರಾಜು ಹಾವೇರಿ 
ಗುರು ವಿಜಯ ಪ್ರತಿಷ್ಠಾನ
****
" ಶ್ರೀ ಬ್ರಹ್ಮಣ್ಯತೀರ್ಥ - 2 " 
" ಶ್ರೀ ಸೂರ್ಯಾಂಶ ಬ್ರಹ್ಮಣ್ಯತೀರ್ಥರು "
" ಜ್ಞಾನ ಭಕ್ತಿ ವೈರಾಗ್ಯದ ಸಾಕಾರಮೂರ್ತಿ ಶ್ರೀ ಸೂರ್ಯಾಂಶ ಬ್ರಹ್ಮಣ್ಯತೀರ್ಥರು " 
ವಿರಕ್ತೌ ಸನಕೋ ಬಾಲಃ 
ಪ್ರಜ್ಞಾಯಾಂ ಸ ಬೃಹಸ್ಪತೀ ।
ಹರಿ ಭಕ್ತೌ ಶುಕಾಚಾರ್ಯ ಇತಿ 
ಮೇನೇ ಗುರುರ್ವಟುಮ್ ।। 
ಈ ಬಾಲ ವಟುವು ವಿರಕ್ತಿಯಲ್ಲಿ ಸನಕನೂ; ಪ್ರಜ್ಞೆಯಲ್ಲಿ ಬೃಹಸ್ಪತಿಯೂ - ಹರಿಭಕ್ತಿಯಲ್ಲಿ ಶುಕಾಚಾರ್ಯನೆಂಬುದಾಗಿಯೂ ತಿಳಿದರು. 
" ಶ್ರೀ ಹರಿಯ ಆದೇಶ " 
ಸ್ವಪ್ನೇ ತವ ಶಿಷ್ಯೋsಯಂ 
ಭವಿತೇತಿ ದ್ವಿಜಾತ್ಮನಾ ।
ಬೋಧಿತೋ ಗುರುವರ್ಯೋsಮುಂ 
ಪಿತ್ರಾಜ್ಞಪ್ತಂ ವೃಧಾದ್ಯತಿಮ್ ।। 
ಈ ಬಾಲಕನು ನಿನ್ನ ಶಿಷ್ಯನೆಂಬುದಾಗಿ ಸ್ವಪ್ನದಲ್ಲಿ ಬ್ರಾಹ್ಮಣ ರೂಪಿಯಾದ ಶ್ರೀ ಹರಿಂದ ಬೋಧಿತರಾಗಿ ಶ್ರೀ ಪುರುಷೋತ್ತಮ ಗುರುವರೇಣ್ಯರು ತಂದೆಯಿಂದ ಅನುಮತಿಯನ್ನು ಸ್ವೀಕರಿಸಿದ ಆ ಬಾಲಕನನ್ನು ಯತಿಯನ್ನಾಗಿಸಿದರು. 
" ಶ್ರೀ ನರಸಿಂಹಾಚಾರ್ಯರು ಶ್ರೀ ಬ್ರಹ್ಮಣ್ಯತೀರ್ಥರಾಗಿ ವಿರಾಜಿಸಿದ್ದು " 
ಆಬಾಲ್ಯದ್ಬ್ರಾಹ್ಮಣೌಘೇsಸೌ 
ದಯಾಲುರಿತಿಮೌನಿನಾ ।
ಬ್ರಹ್ಮಣ್ಯತೀರ್ಥನಾಮ್ನಾ ಹಿ 
ಸಮಾಖ್ಯಾತೋ ರವಿದ್ಯುತಿಃ ।। 
ಇವರು ಬಾಲ್ಯದಿಂದಲೂ ಬ್ರಾಹ್ಮಣ ಸಮುದಾಯದಲ್ಲಿ ದಯಾಲುವಾದ ಕಾರಣ ಮೌನೀಶರಾದ ಶ್ರೀ ಪುರುಷೋತ್ತಮಯೋಗಿಗಳಿಂದ - ರವಿಯಂತೆ ದ್ಯುತಿಯುಳ್ಳ ಆ ಬಾಲಕನು " ಬ್ರಹ್ಮಣ್ಯತೀರ್ಥ " ಯೆಂಬ ನಾಮದಿಂದಲೇ ಕರೆಯಲ್ಪಟ್ಟರು.
" ವೇದಾಂತ ಸಾಮ್ರಾಜ್ಯಾಧಿಪತ್ಯ " 
ಶ್ರೀಮಧ್ವಯತಿ ಹಸ್ತಾಬ್ಜ 
ಸೇವಿತಾಂ ತತ್ಯುಲಕ್ರಮಾತ್ ।
ತಚ್ಛಿಷ್ಯ ಪೂಜಿತಾಂ ಶ್ರೀಮಜ್ಜಯ-
ಧ್ವಜ ಗುರೂತ್ತಮೈಃ ।। 
ಸ್ವಸ್ಮೈ ಪ್ರದತ್ತಾಂ ಗುರುರಾಣ್ನ್ರು
ಸಿಂಹ ಪ್ರತಿಮಾಂ ತಥಾ ।
ಸಾಂಸ್ಥಾನಸ್ಯಾsಧಿಪತ್ಯಂ ಚ 
ಬ್ರಹ್ಮಣ್ಯ ಯತಯೇ ದದೌ ।। 
ಶ್ರೀ ಮಧ್ವ ಯತಿಗಳ ಕರಾಬ್ಜದಿಂದ ಸೇವಿತರಾದ - ಅವರ ಯತಿ ಪರಂಪರೆಯಲ್ಲಿ ಬಂದಿರುವ ಶಿಷ್ಯರುಗಳಿಂದ ಪೂಜಿತವಾದ ಮತ್ತು ಶ್ರೀ ಜಯಧ್ವಜತೀರ್ಥ ಗುರುವರ್ಯರಿಂದ ತಮಗೆ ಕೊಡಲ್ಪಟ್ಟ ಶ್ರೀ ನೃಸಿಂಹದೇವರ ಪ್ರತಿಮೆಯನ್ನೂ ಹಾಗೂ ಸಂಸ್ಥಾನಾಧಿಪತ್ಯವನ್ನೂ ಗುರುಗಳಾದ ಶ್ರೀ ಪುರುಷೋತ್ತಮತೀರ್ಥರು ತಮ್ಮ ಪ್ರಿಯ ಶಿಷ್ಯರಾದ ಶ್ರೀ ಬ್ರಹ್ಮಣ್ಯತೀರ್ಥರಿಗೆ ವಹಿಸಿಕೊಟ್ಟರು. 
" ಶ್ರೀ ಪುರುಷೋತ್ತಮತೀರ್ಥರ ಗುಹಾ ಪ್ರವೇಶ " 
ಪುರುಷೋತ್ತಮಾರ್ಯ ಗುರುರಾಟ್ 
ಪ್ರವಿವೇಶ ಗುಹಾಂ ತಥಾ ।
ಪುರುಷೋತ್ತಮ ಗುಹೇತ್ಯೇವ 
ನಾಮ್ನಾ ಖ್ಯಾತಾsಧುನಾಪಿ ಸಾ ।। 
ಅನಂತರದಲ್ಲಿ ಪೂಜ್ಯರೂ - ಯತಿರಾಜರೂ ಆದ ಶ್ರೀ ಪುರುಷೋತ್ತಮತೀರ್ಥರು ಗುಹೆಯನ್ನು ಪ್ರವೇಶಿಸಿದರು. 
ಈ ಗುಹೆಯು ಈಗಲೂ ಶ್ರೀ ಪುರುಷೋತ್ತಮತೀರ್ಥರ ಗುಹೆಯೆಂಬ ಹೆಸರಿನಿಂದಲೇ ಪ್ರಸಿದ್ಧವಾಗಿದೆ. 
" ಶ್ರೀ ಬ್ರಹ್ಮಣ್ಯತೀರ್ಥರ ವೈಭವ " 
ರಾಗ : ಕಾಂಬೋಧಿ ತಾಳ : ಝಂಪೆ 
ನಿನ್ನ ಸೇವಿಸೆ ಬಂದೆ ನಾನು ।
ಯನ್ನ ಪೋಷಿಸಬೇಕೋ 
ಗುರುವರ್ಯ ನೀನು ।। ಪಲ್ಲವಿ ।। 
ಚಂದ್ರಿಕಾಚಾರ್ಯ ಪೂಜಿತನೆ ।
ಚಂದ್ರವಾದನ ಸುಜ್ಞಾನ ಭೂಷಿತನೆ ।
ಇಂದ್ರಾದಿ ವಂದ್ಯ ಪೂಜಿಪನೆ ।
ಇಂದೆನ್ನ ಕಾಯೋ 
ಸತ್ಕರುಣಾಸಾಗರನೆ ।। ಚರಣ ।। 
ಖಾಸ ಕುಷ್ಠ ನೇತ್ರ ರೋಗ ।
ಬ್ಯಾಸರದೆ ಕಳೆದು ಕಾಯ್ದೆ ನೀ ಬೇಗ ।
ವ್ಯಾಸ ಸೇವನ ಲಬ್ದ ಯೋಗ ।
ಶ್ರೀಶನ್ನ ತೋರಿಸೋ 
ಸುಜ್ಞಾನ ಪೂಗ ।। ಚರಣ ।। 
ಏರಿ ಶೇಷಾರ್ಯ ತನುಜರು ।
ತೋರಿದ ಬ್ರಹ್ಮಣ್ಯ 
ಗುರೋ ನಿಮ್ಮ ಚರಣ ।
ವಾರಿಸಿ ಬಹು ತಾಪಗಳನು ।
ಧೀರ ನೆನಿಸಬೇಕೋ 
ಸದ್ಗುರುರನ್ನ ।। ಚರಣ ।। 
ಈ ಪದದಲ್ಲಿ " ಇಂದ್ರಾದಿ ವಂದ್ಯ ಪೂಜಿಪನೆ " ಎಂಬ ಪದವನ್ನು ಶ್ರೀ ಏರಿ ಶೇಷಾಚಾರ್ಯರ ಮಕ್ಕಳಾದ ಶ್ರೀ ಏರಿ ವೆಂಕಟೇಶಾಚಾರ್ಯರು ಪ್ರಯೋಗಿಸಿದ್ದಾರೆ. 
ಅದರ ಅರ್ಥ ಹೀಗಿದೆ... 
ಇಂದ್ರಾದಿ ದೇವತೆಗಳಿಂದ ಸುತ್ಯನೂ - ನಮಸ್ಕೃತನೂ ಆದ ಶ್ರೀ ಹರಿಯನ್ನು ಪೂಜಿಪನೆ - 
ಎಂದು ಶ್ರೀ ಬ್ರಹ್ಮಣ್ಯತೀರ್ಥರನ್ನು ಸ್ತುತಿಸಿದ್ದಾರೆ. 
" ಕಾಮಪ್ರದರು " 
ಬ್ರಹ್ಮಣ್ಯತೀರ್ಥೋ ಭಗವತ್ಪ್ರ-
ಸಾದಾದವಾಪ್ತ 
ಸಂಪತ್ಪ್ರಕರಃ ಸುಧೀಂದ್ರಃ ।
ವಿಧೂತಪಾಪೋ ವಿಜಿತಾರಿವರ್ಗಃ 
ಸಂಸೇವ್ಯಮಾನಾಖಿಲಕಾಮದಶ್ಚ ।। 
ಶ್ರೀ ಬ್ರಹ್ಮಣ್ಯತೀರ್ಥ ಗುರುವರ್ಯರು! 
ಭಗವದನುಗ್ರಹದಿಂದ ಪಡೆದ ಸಂಪತ್ಸಮೂಹವುಳ್ಳವರೂ - ಜ್ಞಾನಿ ಶ್ರೇಷ್ಠರೂ - ಪಾಪ ರಹಿತರೂ; ಅರಿಷಡ್ವರ್ಗಗಳನ್ನು ಜಯಿಸಿದವರೂ - ಸಂಸೇವಿಸುವವರಿಗೆ ಅಖಿಲ ಇಷ್ಟಾರ್ಥಪ್ರದರೂ ಅಹುದು.
ಶ್ರೀ ಗೋಪಾಲದಾಸರು... 
ಅರ್ಥಿ ಕಲ್ಪದ್ರುಮ ಅನುಪಮ ಗುಣಭೌಮ ।
ಸಪ್ತ ಮಂಗಳ ಸಂನ್ನಿಭ ನಿತ್ಯ । ಪುರು ।
ಷೋತ್ತಮ ತೀರ್ಥೇ೦ದು ಮತಿ ಸೌಮ್ಯ ।
ಮತ್ತ ಪರ್ವತ ಕುಲಿಶಾ ಧೀರೇಶಾ ।। 
" ಮನೋಹರವಾದ ಆಕೃತಿ " 
ಬ್ರಹ್ಮಣ್ಯತೀರ್ಥಃ ಕಮನೀಯಗಾತ್ರಃ 
ಶರತ್ಸುಧಾಂಶೂಪಮಚಾರುವಕ್ತ್ರಃ ।
ಜಗದ್ವಿಚಿತ್ರಾಮಲಸಚ್ಚರಿತ್ರೋ ಗುರುಃ 
ಸಾ ಮಾಂ ಪಾತು ರಮೇಶ ಭಕ್ತಃ ।। 
ಮನೋಹರವಾದ ಆಕೃತಿಯುಳ್ಳ - ಶರಚ್ಚಂದ್ರನಂತಿರುವ ಸುಂದರ ಮುಖವುಳ್ಳ - ಜಗತ್ತಿನಲ್ಲಿ ಆಶ್ಚರ್ಯಕರವಾದ ಅಮಲ ಸಚ್ಚಾರಿತ್ರೆಯುಳ್ಳ -  ರಮೇಶ ಭಕ್ತರಾದ ಶ್ರೀ ಬ್ರಹ್ಮಣ್ಯತೀರ್ಥರು ನಮ್ಮನ್ನು ರಕ್ಷಿಸಲಿ.
ಶ್ರೀ ಗೋಪಾಲದಾಸರು..... 
ತಿದ್ದಿದ ಊರ್ಧ್ವಪುಂಡ್ರ । ಶ್ರೀ ।
ಮುದ್ರೆಗಳಿಂದ ಸಂಶುದ್ಧಾ ಮಂಗಳಗಾತ್ರರಾ ।
ಹೃದ್ರೋಗವಳಿದು ಸಂಸದ್ವಿದ್ಯಗಳನಿತ್ತು ।
ವುದ್ಧಾರ ಮಾಡಲೆಂದೂ ನಾ ಬಂದೂ ।। 
" ಶ್ರೀ ಕ್ಷೇತ್ರ ಅಬ್ಬೂರು ವಾಸಿಗಳು ".... 
ಜ್ಞಾನ ಮಂಡಪ ಭಾಗಸ್ಥ 
ಕಣ್ವನದ್ಯಾಃ ಸಮೀಪಗಮ್ ।
ಅಬ್ಬೂರು ಕ್ಷೇತ್ರೇ ಮಾಸಾದ್ಯ 
ನ್ಯವಸದ್ಯುತಿರಾಟ್ ತತಃ ।। 
ನಿಮಜ್ಜನ್ ಕಣ್ವ ಸರತಿ ತ್
ರಿಕಾಲಂ ಪ್ರಣವಂ ಜಪನ್ ।
ಬೋಧಯನ್ಮಧ್ವಸಿದ್ಧಾಂತ
ಮರ್ಹಯನ್ನ್ರುಹರಿಂ ಸದಾ ।। 
ಜ್ಞಾನ ಮಂಟಪವೆಂಬ ಪ್ರದೇಶದಲ್ಲಿ ಹರಿಯುತ್ತಿರುವ ಕಣ್ವ ನದಿಗೆ ಸಮೀಪದಲ್ಲಿ ಇರುವ ಅಬ್ಬೂರು ಕ್ಷೇತ್ರಕ್ಕೆ ಬಂದು ಯತಿರಾಜರಾದ ಶ್ರೀ ಬ್ರಹ್ಮಣ್ಯತೀರ್ಥರು ವಾಸಿಸಿದರು.
ಕಣ್ವ ನದಿಯಲ್ಲಿ ತ್ರಿಕಾಲ ಸ್ನಾನ - ಪ್ರಣವ ಜಪವನ್ನು ಮಾಡುತ್ತಾ  - ಮಧ್ವ ಸಿದ್ಧಾಂತವನ್ನು ಉಪದೇಶ ಮಾಡುತ್ತಾ ಸರ್ವದಾ ಶ್ರೀ ನೃಸಿಂಹದೇವರನ್ನು ಪೂಜಿಸುತ್ತಿದ್ದರು. 
" ಶಿಷ್ಯ ಸ್ವೀಕಾರ " 
ಪಂಚಮೇsಬ್ದೇ ತತ್ರ 
ವಿಪ್ರೈರುಪನೀತಂ ಚ ಸಪ್ತಮೇ ।
ಸಂನ್ಯಾಸಭಾಗಿನಂ ತೋಷಾದ್ 
ವ್ಯಾಸ ನಾಮಾನಮಾತನೋತ್ ।। 
ಐದನೇ ವಯಸ್ಸಿನಲ್ಲಿ ವಿಪ್ರರಿಂದ ಉಪನಯನ ಸಂಸ್ಕಾರವನ್ನು ಹೊಂದಿ -  ಏಳನೇ ವಯಸ್ಸಿನಲ್ಲಿ ಶ್ರೀ ಬ್ರಹ್ಮಣ್ಯತೀರ್ಥರಿಂದ ತುರ್ಯಾಶ್ರಮ ಸ್ವೀಕರಿಸಿದ ಆ ಬಾಲಕನನ್ನು " ವ್ಯಾಸತೀರ್ಥ " ಎಂಬ ನಾಮವುಳ್ಳವನನ್ನಾಗಿ ಮಾಡಿದರು. 
" ಶ್ರೀ ವಿಠ್ಠಲನ ಪರಮಾನುಗ್ರಹ " 
ಅಬ್ಬೂರು ಕ್ಷೇತ್ರೇ ಏವಾಸೌ ಭೂಮೌ 
ಲೀನತನುಂ ಹರಿಮ್ ।
ವಿಠ್ಠಲ೦ ಲಬ್ಧವಾನ್ ಸ್ವಪ್ನೇ 
ವಿಪ್ರಾತ್ಮ ಹರಿಚೋದಿತಃ ।। 
ಅಬ್ಬೂರು ಕ್ಷೇತ್ರದಲ್ಲೇ ಇದ್ದವರಾಗಿ; ಭೂಮಿಯಲ್ಲಿ ಮುಚ್ಚಿ ಹೋಗಿದ್ದ ಶ್ರೀ ವಿಠ್ಠಲನ ವಿಗ್ರಹವನ್ನು ಬ್ರಾಹ್ಮಣ ರೂಪಿ ಶ್ರೀ ಹರಿಯಿಂದ ಸ್ವಪ್ನ ಚೋದಿತರಾಗಿ ಪಡೆದರು. 
" ಶ್ರೀ ವ್ಯಾಸರಾಜ ಗುರುಸಾರ್ವಭೌಮರಿಗೆ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ " 
ಭೂಮೌ ವಾಸಮಲಂಕುರ್ವ-
ನ್ನಲಂಕರ್ತುಂ ಹರೇಃ ಪದಮ್ ।
ವೇದಾಂತ ರಾಜ್ಯ ಭೂಪಾಲಂ 
ಸ್ವಶಿಷ್ಯಮಕರೋತ್ತದಾ ।। 
ಶ್ರೀ ಸೂರ್ಯಾಂಶ ಸಂಭೂತರಾದ ಶ್ರೀ ಬ್ರಹ್ಮಣ್ಯತೀರ್ಥರು ಭೂಮಿಯಲ್ಲಿ ತಮ್ಮ ಅವತಾರ ಸಮಾಪ್ತಿ ಮಾಡಲು ಶ್ರೀ ಹರಿಯ ಸಂಕಲ್ಪಾನುಸಾರ ನಿಶ್ಚಯಿಸಿ ತಮ್ಮ ಪ್ರಿಯ ಶಿಷ್ಯರೂ - ಪಟ್ಟದ ಶಿಷ್ಯರೂ ಆದ ಶ್ರೀ ಪ್ರಹ್ಲಾದಾಂಶ ವ್ಯಾಸರಾಜ ಗುರುಸಾರ್ವಭೌಮರನ್ನು ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಿದರು. 
ಬ್ರಹ್ಮಣ್ಯಾರ್ಯಸ್ಯ ಶಿಷ್ಯೋsನ್ಯೋ 
ನೈವಾತೋ ವ್ಯಾಸಯೋಗಿನೇ ।
ವಿಠ್ಠಲಾರ್ಚಾಂ ನೃಸಿಂಹಾರ್ಚಾಂ 
ಪ್ರಸನ್ನಃ ಪ್ರದದೌ ಗುರುಃ ।। 
ಶ್ರೀ ಬ್ರಹ್ಮಣ್ಯತೀರ್ಥರಿಗೆ ಶ್ರೀ ವ್ಯಾಸರಾಜರಂಥಹಾ ಶಿಷ್ಯರು ಮತ್ತೊಬರಿರಲಿಲ್ಲ. 
ಆದ್ದರಿಂದ ಗುರುಗಳಾದ ಶ್ರೀ ಬ್ರಹ್ಮಣ್ಯತೀರ್ಥರು ಶ್ರೀ ವ್ಯಾಸರಾಜ ಗುರುಸಾರ್ವಭೌಮರಿಗೆ ಪ್ರಸನ್ನರಾಗಿ ಶ್ರೀ ವಿಠ್ಠಲನ ಮೂರ್ತಿಯನ್ನೂ - ಶ್ರೀ ನರಸಿಂಹದೇವರ ಮೂರ್ತಿಯನ್ನೂ ಕೊಟ್ಟರು. 
" ಸೂರ್ಯಾಸ್ತಂಗತ " 
ಶ್ರೀ ಗೋಪಾಲದಾಸರು...
ಕುಂದೇಂದು ಸರ್ವಮುನೀ ।
ವೃಂದಾನೊಡನೆ ಮಹಾ ।
ವೃಂದಾವನದಿ ಶೋಭಿಪಾ ।।
ತಂದೆ ನೀ ಸಲಹೆಮ್ಮ ಗೋಪಾಲವಿಠ್ಠಲ । ಸ ।
ನ್ನುತಿವರ ಪಾತ್ರರಾ ಪೂತಾತ್ಮರಾ ।। 
ವೈಶಾಖ ಕೃಷ್ಣ ಪಕ್ಷೇsಸಾ-
ವೇಕಾದಶ್ಯಾಂ ಗುರೂತ್ತಮಃ ।
ನಭೋಮಧ್ಯಗತೇsರ್ಯಮ್ಣಿ 
ಸ್ವರೂಪೇsಲೀಯತ ಪ್ರಭುಃ ।। 
ವೈಶಾಖ ಕೃಷ್ಣ ಪಕ್ಷ ಏಕಾದಶೀ ದಿವಸ ಸೂರ್ಯನು ನಭೋಮಧ್ಯಗತನಾಗಿರಲು - ಗುರೂತ್ತಮರಾದ ಶ್ರೀ ಬ್ರಹ್ಮಣ್ಯತೀರ್ಥರು ತಮ್ಮ ಮೂಲ ಸ್ವರೂಪದಲ್ಲಿ ಲೀನವಾದರು.
ಮಾಧವಸ್ಯಾ ಸಿತೇ ಪಕ್ಷೇ 
ಸಹಸ್ರಾಂಶು ತಿಥೌ ಗುರುಃ ।
ಬ್ರಹ್ಮಣ್ಯತೀರ್ಥಃ ಸ್ವರ್ಲೋಕಂ 
ಗತ್ವಾ ಸಪ್ತಾಶ್ವಮಾವಿಶಿತ್ ।। 
ವೈಶಾಖ ಮಾಸ ಕೃಷ್ಣ ಪಕ್ಷದ ಭಾನುವಾರ ತಿಥಿಯಲ್ಲಿ ಶ್ರೀ ಬ್ರಹ್ಮಣ್ಯತೀರ್ಥ ಗುರುರಾಜರು ಸ್ವರ್ಗ ಲೋಕವನ್ನು ಹೊಂದಿ ತಮ್ಮ ಮೂಲ ರೂಪವಾದ ( ಸಪ್ತಾಶ್ವ ) ಸೂರ್ಯನನ್ನು ಪ್ರವೇಶಿಸಿದರು. 
ಸೂರ್ಯಂಶತ್ವಾದ್ವಯಂ ಸಾಕ್ಷಾ-
ದ್ಗ್ರಾಮೇsಬ್ಬೂರುವರಾಭಿಧೇ ।
ವೃಂದಾವನಂ ಪ್ರವಿಶ್ಯೈವ 
ಸ್ಥಿತೋsದಾಪಿ ವಿರಾಜಿತೇ ।। 
ಹೀಗೆ ಸೂರ್ಯಾಂಶರಾದ ಕಾರಣ ಶ್ರೀ ಬ್ರಹ್ಮಣ್ಯತೀರ್ಥರು ಅಬ್ಬೂರು ಎಂಬ ಶ್ರೇಷ್ಠ ನಾಮವುಳ್ಳ ಗ್ರಾಮದಲ್ಲಿ ವೃಂದಾವನವನ್ನು ಪ್ರವೇಶ ಮಾಡಿ ಅದ್ಯಾಪಿ ವಿರಾಜಮಾನರಾಗಿದ್ದಾರೆ. 
ಅಬ್ಬೂರು ಕ್ಷೇತ್ರೇ ಭಾಗೇsಪಿ 
ಭಜತಾಂ ಕಮಿತಪ್ರದಃ ।
ಬ್ರಹ್ಮಣ್ಯಗುರುರಾಧ್ಯಾಸ್ತೇ 
ವೃಂದಾವನಮಿಹಾಂಶತಃ ।। 
ಅಬ್ಬೂರು ಕ್ಷೇತ್ರದಲ್ಲಿ ಭಜಿಸುವವರಿಗೆ ಕಾಮಿತಪ್ರದರಾದ - ಶ್ರೀ ಬ್ರಹ್ಮಣ್ಯತೀರ್ಥರು ಇಲ್ಲಿರುವ ವೃಂದಾವನವನ್ನು ಒಂದಂಶದಿಂದ ತಮ್ಮ ಅಧಿಷ್ಠಾನವನ್ನಾಗಿ ಮಾಡಿ ಕೊಂಡಿರುವರು!! 
" ಮಹಿಮೆಗಳು " 
1. ವೃಂದಾವನಾಂತರ್ಗರಾಗಿ ನೆಲೆಸಿರುವ ಶ್ರೀ ಬ್ರಹ್ಮಣ್ಯತೀರ್ಥರು ತಮ್ಮನ್ನು ನಂಬಿ ಬಂದ ಭಕ್ತರ ಮನೋಭೀಷ್ಟಗಳನ್ನು ಪೂರೈಸುವವರು. 
ಇದನ್ನು ಕಲ್ಪವೃಕ್ಷವೂ ಕೊಡಲಾರದು. 
2. ಶ್ರೀ ಬ್ರಹ್ಮಣ್ಯತೀರ್ಥರ ಸೇವೆಯಿಂದ ಕುಂಟನು ನಡೆಯುವನು. 
3. ಕೈ ಇಲ್ಲದವನು ಕೈ ಉಳ್ಳವನಾಗುವನು. 
4. ಕುಷ್ಠ ರೋಗಿಯು ತನ್ನ ರೋಗವನ್ನು ಪರಿಹರಿಸಿಕೊಳ್ಳುವನು. 
5. ಕಿವುಡನು ಸುಖವಾಗಿ ಕೇಳುವನು. 
6. ಮೂರ್ಛಾಶೀಲನು ಮೂರ್ಛೆಯಿಂದ ಬಿಡುಗಡೆ ಹೊಂದುವನು. 
7. ಅಪುತ್ರವಂತನು ಪುತ್ರವಂತನಾಗುವನು. 
8. ಯಾರ್ಯಾರು ಏನೇನನ್ನು ಬಯಸುವರೋ ಅವರೆಲ್ಲರ ಆಯಾ ಅಭೀಷ್ಟಗಳನ್ನು ಹೊಂದುವರು. 
" ಬ್ರಹ್ಮಣ್ಯತೀರ್ಥಾಯ ನಮಃ " 
ಎಂಬ ಅಷ್ಟಾಕ್ಷರ ಮಂತ್ರವನ್ನು ಓಂಕಾರ ಪೂರ್ವಕ ನಿತ್ಯವೂ ಜಪಿಸಿವವರಿಗೆ ಅಭೀಷ್ಟಗಳು ಕೈವಶವಾಗುವುದು. 
9. " ಬ್ರಹ್ಮಣ್ಯತೀರ್ಥಾಯ ನಮಃ " - ಈ ಮಂತ್ರದಿಂದ ಅಭಿಮಂತ್ರಿಸಿದ ಜಲವನ್ನು ಪಿಶಾಚಾದಿ ಗ್ರಹ ಪೀಡಿತರಿಗೆ ಪ್ರೋಕ್ಷಣೆ ಮಾಡಿದರೆ ಅವರಿಗೆ ಆ ಕ್ಷಣದಲ್ಲಿ ಪಿಶಾಚ ಗ್ರಹ ಪೀಡಾದಿಗಳು ನಿಶ್ಚಯವಾಗಿ ನಾಶವಾಗುವುದು. 
10. ಅಲ್ಲದೇ, ಯಾವ ಅಧಿಕಾರಿಗಳು ಗುರುವರ್ಯರಿಗೆ, ಶ್ರೀ ವಿಷ್ಣು ನಿವೇದಿತವಾದ ಹಾಲು - ಮೊಸರು - ತುಪ್ಪ - ಸಕ್ಕರೆ - ಹಣ್ಣು ಮೊದಲಾದ ಪದಾರ್ಥಗಳಿಂದ ಪಂಚಾಮೃತ ಸ್ನಾನ ಮಾಡಿಸುವರೋ ಅವರು ಸಮಸ್ತ ಅಭೀಷ್ಟಗಳನ್ನೂ ಹೊಂದುವರು. 
11. ವೃಂದಾವನ ಮುಂಭಾಗದಲ್ಲಿ ಸಾಲು ದೀಪಗಳನ್ನು ಸ್ಥಾಪನೆ ಮಾಡುವವನೂ ಶ್ರೀ ಹರಿಯಲ್ಲಿ ದೃಢ ಭಕ್ತಿವಂತನಾಗುವನೂ ಮತ್ತು ಶ್ರೀ ಹರಿಯ ಪ್ರಸಾದ ಪಾತ್ರನಾಗುವನು.
ಈ ವಿಷಯದಲ್ಲಿ ಸರ್ವೋತ್ತಮನಾದ ಶ್ರೀ ನರಸಿಂಹದೇವರೇ ಸಾಕ್ಷಿ.
ರಚನೆ :  ಆಚಾರ್ಯ ನಾಗರಾಜು ಹಾವೇರಿ 
ಮುದ್ರಿಕೆ : ವೆಂಕಟನಾಥ 
ಬ್ರಹ್ಮಣ್ಯ ಗುರುರಾಜಾ 
ಕಾಪಾಡೋ । ಪರ ।
ಬ್ರಹ್ಮನ ಸನ್ನಿಧಾನ ಪಾತ್ರಾ ।। 
ಅಬ್ಬೂರು ಪುರ ವಾಸಾ ।
ಅಂಬುಜಾಕ್ಷಿ ಪ್ರಿಯನೇ ।। 
ರಾಮಾರ್ಯ ಪುತ್ರರಾಗಿ 
ಜನಿಸಿ । ಮೂಲ ಪಟ್ಟಾಭಿ ।
ರಾಮನ ಅತಿ 
ಮೋದದಿಂದ ಅರ್ಚಿಸಿದ ।। 
ಸೂರ್ಯಾಂಶ ಬ್ರಹ್ಮಣ್ಯತೀರ್ಥಾ । ಗುರು ।
ವರ್ಯ ಆರೋಗ್ಯಭಾಗ್ಯ ನೀಡೋ ।। 
ನರಸಿಂಹ ನಾಮದಿ 
ಧರೆಯೊಳು ಅವತರಿಸಿ ।
ನರಹರಿ ವೆಂಕಟನಾಥನ 
ಪೂಜಿಪ ಯತಿಯೇ ।। 
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
****

"  ಶ್ರೀ ಬ್ರಹ್ಮಣ್ಯ ತೀರ್ಥ - 3 "
" ಶ್ರೀ ವ್ಯಾಸರಾಜರ ಕಣ್ಣಲ್ಲಿ ಶ್ರೀ ಬ್ರಹ್ಮಣ್ಯತೀರ್ಥರ ವೈಭವ " 
ವಂದೇ ಬ್ರಹ್ಮಣ್ಯತೀರ್ಥಂ ಶುಭತಮ
ಚರಿತಂ ಸೇವಿತ ಶ್ರೀ ಸಮೇತಂ
ಶಾಂತಂ ದಾಂತಂ ಮಹಾಂತಂ 
ಗುರು ಗುಣ ಭರಿತಂ ಯೋಗಿ ಸಂಗೈರುಪೇತಂ ।
ಕಾಮಕ್ರೋಧಾದ್ಯತೀತಂ ಕುಮತಿಭಿರಜಿತಂ 
ಕಲ್ಮಷಾ೦ಬೋಧಿಪೋತಮ್
ಧೀರಂ ಭೂದೇವಗೀತಂ ಶುಭಜನ 
ಮಹಿತಂ ಧನ್ಯಮಾನಂ ವಿನೀತಮ್ ।। 1 ।। 
ಶುಭತಮ ಚರಿತರಾದ - ಶ್ರೀ ಲಕ್ಷ್ಮೀ ನಾರಾಯಣನನ್ನು ಸೇವಿಸಿದವರೂ - ಶಾಂತರೂ - ದಾಂತರೂ - ಮಹಾತ್ಮರೂ - ಗುರು ಗುಣ ಭರಿತರೂ - ಯೋಗಿ ಸಮೂಹ ಸಮೇತರೂ - ಕಾಮ ಕ್ರೋಧಾದಿಗಳನ್ನು ಅತಿಕ್ರಮಿಸಿದವರೂ - ಕುಮತಿಗಳ ಸಂಬಂಧ ರಹಿತರೂ - ದುರ್ವಾದಿಗಳನ್ನು ಗೆದ್ದವರೂ - ಪಾಪಾ೦ಬುಧಿಯನ್ನು ದಾಟಿಸಲು ತೆಪ್ಪದಂತೆ ಇರುವವರೂ - ಧೀರರೂ - ಭೂಸುರರಿಂದ ಸ್ತುತಿಸಲ್ಪಡುವವರೂ - ಸುಜನರಿಂದ ಮಹಿತರೂ - ಶ್ಲಾಘ್ಯವಾದ ಜ್ಞಾನ ಉಳ್ಳವರೂ - ವಿನೀತರೂ ಆದ ಶ್ರೀ ಬ್ರಹ್ಮಣ್ಯತೀರ್ಥರನ್ನು ವಂದಿಸುತ್ತೇನೆ! 
ಮಾದ್ಯಾನ್ಮಾಯಿಗಜೇಂದ್ರ ಪಂಚವದನಃ 
ಪ್ರಖ್ಯಾತ ಕೀರ್ತಿರ್ಮಹಾನ್
ಶ್ರೀಮದ್ವಿಠ್ಠಲಪಾದಪದ್ಮ 
ಮಧುಪಃ ಸರ್ವೇಷ್ಟ ಚಿಂತಾಮಣಿ: ।
ನಿರ್ವ್ಯಾಜೋರುದಯಾಕಟಾಕ್ಷಲಸಿತೋ 
ಜ್ಞಾನಾದಿ ಭಾಗ್ಯೋಜ್ವಲ:
ಶ್ರೀಬ್ರಹ್ಮಣ್ಯಯತೀಂದ್ರ ಮಸ್ತಕಮಣಿ:
ಪಾಯಾದಪಾಯಾತ್ಸಮಾಮ್ ।। 2 ।। 
ಮದಿಸಿದ ಮಾಯಾವಾದಿಗಳೆಂಬ ಗಜೇಂದ್ರಗಳಿಗೆ ಸಿಂಹ ಸದೃಶರೂ - ಪ್ರಖ್ಯಾತ ಕೀರ್ತಿವಂತರೂ - ಉತ್ತಮರೂ - ಶ್ರೀ ವಿಠಲನ ಪಾದ ಕಮಲ ಭೃಂಗಾಯಮಾನರೂ - ಸರ್ವರ ಇಷ್ಟವನ್ನೂ ನೆರವೇರಿಸುವ ಚಿಂತಾಮಣಿಗಳೂ - ನಿರ್ವಾಜ್ಯವೂ ಮತ್ತು ಪೂರ್ಣವೂ ಆದ ಕೃಪಾ ಕಟಾಕ್ಷದಿಂದ ಶೋಭಿತರೂ - ಜ್ಞಾನದಿ ಸಂಪತ್ತುಗಳಿಂದ ಶೋಭಿತರೂ ಆದ ಶ್ರೀ ಬ್ರಹ್ಮಣ್ಯತೀರ್ಥ ಯತೀಂದ್ರ ಶಿರೋಮಣಿಗಳು ನನ್ನನ್ನು ಅಪಾಯಗಳಿಂದ ಪಾರು ಮಾಡಲಿ!! 
ಭಿಬ್ರತ್ಕಾಷಾಯಚೇಲಂ ವಿಲಸಿತ ತುಲಸೀ
ಪಂಕಜಾಕ್ಷಾದಿ ಮಾಲಮ್
ಧೂತಾಜ್ಞಾನಾಘಜಾಲಂ ಮೃಧು 
ವಚನ ಕಲಂ ಚಾರು ಸೌಂದರ್ಯಶೀಲಮ್ ।
ಆರ್ತತ್ರಾಣೈಕಲೋಲ೦ ಪ್ರಣತ 
ಮುನಿಕುಲಂ ವೈಷ್ಣವಾಗ್ರ್ಯಾನುಕೂಲಂ
ಬ್ರಹ್ಮಣ್ಯಾರ್ಯ೦ ದಯಾಲು೦ ಸ್ಮಿತಮುಖ 
ಕಮಲಂ ಸಾದರಂ ತಂ ಭಜೇSಲಮ್ ।। 3 ।। 
ಕಾಷಾಯ ವಸ್ತ್ರವನ್ನು ಧರಿಸಿರುವವರೂ - ಉತ್ತಮವಾದ ತುಳಸೀ ಮತ್ತು ಪ್ರಕಾಶಮಾನವಾದ ಕಮಲಕ್ಷ್ಯಾದಿ ಮಣಿ ಮಾಲೆಗಳನ್ನು ಧರಿಸಿರುವವರೂ - ಅಜ್ಞಾನ ಮತ್ತು ಪಾಪ ಜಾಲವನ್ನು ಪರಿಹರಿಸುವವರೂ - ಹಿತ ವಚನ ಕಲಾಭಿಜ್ಞರೂ - ಸ್ವಭಾವತಃ ಪರಮ ಸುಂದರರೂ - ಆರ್ತರನ್ನು ರಕ್ಷಿಸುವುದರಲ್ಲೇ ಪರಮಾಸಕ್ತಿಯುಳ್ಳವರೂ - ಮುನಿ ಸಮುದಾಯದಿಂದ ನಮಸ್ಕೃತರೂ - ವೈಷ್ಣವರಿಗೆ ಶ್ರೇಷ್ಠವಾದ ಸೌಕರ್ಯಕರರೂ - ಮಂದಹಾಸದಿಂದ ಕೂಡಿದ ಮುಖ ಕಮಲ ಉಳ್ಳವರೂ - ಅನುಗ್ರಹಕರರೂ ಆದ ಶ್ರೀ ಬ್ರಹ್ಮಣ್ಯತೀರ್ಥರನ್ನು ವಿಶೇಷ ಮರ್ಯಾದಾ ಪೂರ್ವಕ ಸಂಪೂರ್ಣ ಮನಸ್ಸಿನಿಂದ ಭಜಿಸುತ್ತೇನೆ!!! 
ಯದ್ವೃಂದಾವನ ದರ್ಶನೇನ ನಿತರಾಂ 
ಪಾಪಾನಿ ಯಾಂತಿ ಕ್ಷಯಮ್
ಯದ್ವೃಂದಾವನ ಮೃತ್ತಿಕಾ 
ಸುವಿಧೃತಾ ತಾಪತ್ರಯಧ್ವಂಸಿನೀ ।
ಯದ್ವೃಂದಾವನ ಸೇವಯಾ ಭುವಿ ಜನಃ 
ಪ್ರಾಪ್ನೋತಿ ವಿದ್ಯಾ೦ ಸುಖಂ
ಸರ್ವಾರಿಷ್ಟ ನಿವೃತ್ತಯೇSಸ್ತು 
ಸ ಚ ಮೇ ಬ್ರಹ್ಮಣ್ಯತೀರ್ಥೋ ಗುರು: ।। 4 ।। 
ಯಾರ ವೃಂದಾವನ ದರ್ಶನದಿಂದ ಪಾಪಗಳು ನಿಶ್ಯೇಷವಾಗಿ ನಾಶ ಹೊಂದುವುವೋ - ಯಾರ ವೃಂದಾವನ ಮೃತ್ತಿಕೆಯು ಭಕ್ತಿಯಿಂದ ಧರಿಸಲ್ಪಟ್ಟರೆ ತಾಪತ್ರಯಗಳನ್ನು ಧ್ವಂಸ ಮಾಡುವುದೋ - ಯಾರ ವೃಂದಾವನ ಸೇವೆಯಿಂದ ಭೂಮಿಯಲ್ಲಿ ಜನರು ವಿದ್ಯಾ ಸುಖಗಳನ್ನು ಹೊಂದುವರೋ ಅಂಥಹಾ ಶ್ರೀ ಬ್ರಹ್ಮಣ್ಯತೀರ್ಥ ಗುರುಗಳು ನನ್ನ ದುರದೃಷ್ಟಗಳನ್ನು ನಿವೃತ್ತಿ ಮಾಡಲಿ!!!! 
ಕುಷ್ಠಶ್ವೇತೋರುಗುಲ್ಮಕ್ಷಯ 
ಕಠಿಣತರ ವ್ಯಾಧಿವೈದ್ಯಾಧಿನಾಥೋ
ಭೂತಪ್ರೇತ ಗ್ರಹೋಚ್ಛಾಟನ ಕುಶಲ 
ಮಹಾಮಂತ್ರ ಮೂರ್ತಿರ್ಮುನೀಂದ್ರ: ।
ಸರ್ವಾಭೀಷ್ಟ ಪ್ರದಾತಾ ಸುಹೃದಯಃ
ಪುಣ್ಯ ಚಾರಿತ್ರ ನಾಮಾ
ಭೂಯಾದ್ಬ್ರಹ್ಮಣ್ಯತೀರ್ಥೋ ಗುರುಕುಲತಿಲಕೋ 
ಭೂಯಾಸೇ ಶ್ರೇಯಸೇ ಮೇ ।। 5 ।। 
ಕುಷ್ಠ - ಶ್ವೇತ - ಹೊಟ್ಟೆಯೊಳಗಿನ ಗಂಟು ಬೇನೆ [ Cancer ]  ಕ್ಷಯ ಮೊದಲಾದ ಕಠಿಣತರ ವ್ಯಾಧಿಗಳನ್ನು ನಾಶ ಪಡಿಸುವ ವೈದ್ಯ ಕುಲ ಗುರುಗಳಾದ - ಭೂತ ಪ್ರೇತ ಗ್ರಹಗಳನ್ನು ಓಡಿಸುವುದರಲ್ಲಿ ಸಮರ್ಥರಾದ - ಮಹಾ ಮಂತ್ರಗಳೇ ಮೂರ್ತಿವೆತ್ತಂತಿರುವ ಮುನೀಂದ್ರರೂ - ಸರ್ವಾಭೀಷ್ಟ ಪ್ರದಾತೃಗಳೂ - ಕರುಣಾ ಸಂಪೂರ್ಣ ಹೃದಯರೂ - ಪುಣ್ಯಕರವಾದ ನಡೆ ನುಡಿಗಳಲ್ಲಿ ಹೆಸರಾದವರೂ - ಸ್ವಯಂ ಸಂಶಯ ರಹಿತರಾಗಿ ಮತ್ತೊಬ್ಬರ ಸಂಶಯಗಳನ್ನು ನಿವಾರಿಸುವ ಜ್ಞಾನಿಗಳಿಗೆ ಭೂಷಣರೂ - ಗುರು ತಿಲಕರೂ ಆದ ಶ್ರೀ ಬ್ರಹ್ಮಣ್ಯತೀರ್ಥರು ನನ್ನ ಅಧಿಕವಾದ ಶ್ರೇಯಸ್ಸಿಗೆ ಕಾರಣವಾಗಲೀ!!!!! 
ಆಚಾರ್ಯ ನಾಗರಾಜು ಹಾವೇರಿ 
ಗುರು ವಿಜಯ ಪ್ರತಿಷ್ಠಾನ
***
" ಶ್ರೀ ಬ್ರಹ್ಮಣ್ಯತೀರ್ಥ - 4 "
" ಶ್ರೀ ಬ್ರಹ್ಮಣ್ಯತೀರ್ಥ ವೃಂದಾವನ ಬಂಧಃ "
[ ಬಂಧ ಶ್ಲೋಕ ವ್ಯಾಖ್ಯಾನಮ್ ]
ಕಂಸಧ್ವಂಸಿ ಪದಾಂಭೋಜ 
ಸಂಸಕ್ತೋ ಹಂಸಪುಂಗವಃ ।
ಬ್ರಹ್ಮಣ್ಯ ಗುರುರಾಜಾಖ್ಯೋ 
ವರ್ತತಾಂ ಮಮ ಮಾನಸೇ ।।
" ಬಂಧ ಲಕ್ಷಣಂ ತು "
ಚತುರಸ್ರೇ ಮಧ್ಯಕೋಣೇ 
ವೀಥೀತ್ರ ಯಮಧೋನಯೇತ್ ।
ತಿರ್ಯಗ್ವೀಥೀತ್ರಯಂ ಚಾಪಿ 
ನವ ಕೊಣಾನ್ ಪ್ರಸಾದಯೇತ್ ।।
ತದಧಸ್ತ್ರ್ಯ೦ಶವತ್ಕೋಣಂ 
ತದಧಸ್ತಾದ್ಬೃಹತ್ತಥಾ ।
ಸೋಪಾನಮೇಕಂ ತದಧಸ್ತ-
ಥೋಪರ್ಯೇಕ ಕೋಣಕಮ್ ।।
ತ್ರ್ಯ೦ಶಂ ತದೂರ್ಧ್ವಂ ಶೃಂಗಂ 
ಚ ಚತುರಸ್ತ್ರಂ ಲಿಖೇತ್ತತಃ ।
ಊರ್ಧ್ವದ್ವಿತೀಯ ಕೋಣಾದ್ಯ-
ಭಾಗಮಾರಾಭ್ಯ ವೈ ಲಿಖೇತ್ ।।
ಏಕೈಕಮಕ್ಷರಂ ತತ್ರ 
ದ್ವಿತೀಯೋsಪಿ ಚತುರ್ಥತಃ ।
ಷಷ್ಟೋಷ್ಟಮೇನ ದಶಮೋ 
ದ್ವಾದಶೇನ ಚತುರ್ದಶಃ ।।
ಷೋಡಶೇನ ಚ ವಿಂಶೇನ 
ತಥಾಷ್ಟದಶ ಏಕತಾನ್ । 
ದ್ವಾವಿಂಶಸ್ತು ಚತುರ್ವಿಂಶಾ-
ದೇಕತ್ವಂ ಭಜತೇ ಯಥಾ ।।
ವರ್ಣಮೇಕಂ ತು ಸೋಪಾನೇ 
ಮಧ್ಯವೀಥೀ ಷಡಕ್ಷರೈ: ।
ಉಪೇತಂ ವರ್ಣಮೇಕಂ ಚ 
ಶೃಂಗೇ ತತ್ರಾಂತಿಮಂ ಲಿಖೇತ್ ।
ಶ್ರೀ ವೃಂದಾವನಬಂಧೋsಯ-
ಮುದ್ಧೃತೋsನುಷ್ಪಭಾ ಜಯೇತ್ ।।
ಖಿನ್ನವಿನ್ನಃ ಜಪದ್ವೀಪ 
ಪೂತವಾತಮತಸ್ಥಿತಃ ।
ಶ್ರೀ ಬ್ರಹ್ಮಣ್ಯವ್ರತಗಣ್ಯೋs-
ಗಯೋಗವ್ರತ ತಪನ್ನವ ।। "
" ಹೇ ಖಿನ್ನವಿನ್ನಃ "
ದುಃಖಿತರಾದವರಿಂದ ಅಥವಾ ರೋಗ ಪೀಡಿತರಾದವರಿಂದ ಅಥವಾ ಸಂಸಾರ ಖೇದವನ್ನೂ ಹೊಂದಿರುವವರಿಂದ ತದ್ದುಃಖ ನಿವಾರಣೆಗೋಸ್ಕರ ಆಶ್ರಿತರಾದವರೇ ಅಥವಾ ಖೇದ ನಾಶಕರೆಂದು ವಿಚಾರಿತರಾದವರೇ... 
" ಜಪದ್ವೀಪ "
ಜಪ ಮಾಡತಕ್ಕ ತಪಸ್ವಿಗಳಲ್ಲಿ ಶ್ರೇಷ್ಠರಾದವರೇ ಅಥವಾ ತಮ್ಮನ್ನು ಕುರಿತು ಜಪವನ್ನು ಆಚರಿಸುವವರಿಗೆ ಜ್ಞಾನ ಕೀರ್ತ್ಯಾದಿ ಪ್ರಕಾಶಕರೇ ಅಥವಾ ತಮ್ಮನ್ನು ಕೃತು ಜಪ ಮಾಡತಕ್ಕವರಿಗೆ ತಮ್ಮ ಸ್ವರೂಪವನ್ನು ತೋರಿಸತಕ್ಕವರೇ... 
" ಪೂತವಾತಮತಸ್ಥಿತಃ "
ಪರಮ ಪವಿತ್ರವಾದ ಶ್ರೀ ಮುಖ್ಯಪ್ರಾಣಾವ ಭೂತರಾದ ಶ್ರೀಮನ್ಮಧ್ವಾಚಾರ್ಯರ ಮತದಲ್ಲಿ ಸಂಸ್ಥಿತರಾದವರೇ... 
" ಶ್ರೀ ಬ್ರಹ್ಮಣ್ಯ ವ್ರತಗಣ್ಯ "
ಶ್ರೀದೇವಿ ಸಹಿತನಾದ ವಿಷ್ಣ್ವಾಖ್ಯ ಪರಬ್ರಹ್ಮನಿಗೆ ಪ್ರೀತಿಕರವಾದ ಏಕಾದಶ್ಯುಪವಾಸ - ಹರಿ ಸರ್ವೋತ್ತಮತ್ತ್ವ ಸಾಧನಾದಿ ವ್ರತಗಳಿಂದ ತಾವು ಗಣನೀಯರೂ ಅಥವಾ ತಾದೃಶ ವ್ರತಾಚರಣೆಗಳಲ್ಲಿ ತಾವು ಅಗ್ರಗಣ್ಯರು... 
" ಅಗಯೋಗವೃತ "
ಅಚಲವಾದ ಧ್ಯಾನಯೋಗವೆಂಬ ವ್ರತವನ್ನು ಕೈಕೊಂಡವರೇ ಅಥವಾ " ಅ " ಕಾರ ವಾಚ್ಯನಾದ ಪರಮಾತ್ಮ ಸಂಬಂಧಿ ಯೋಗವೇ ವ್ರತವಾಗುಳ್ಳವರೇ.... 
" ತಪನ್ "
ತಪಸ್ಸನ್ನು ಮಾಡುವವರಾಗಿ ಅಥವಾ ಶತ್ರುಗಳನ್ನು ಪರಿತಪಿಸುವವರಾಗಿ ಅಥವಾ ವಾದಿಗಳನ್ನು ವಾದದಿಂದ ಜಯಸುವವರಾಗಿ ಅಥವಾ ಭಕ್ತರ ಪಾಪಗಳನ್ನು ನಾಶ ಪಡಿಸುವವರಾಗಿ.... 
" ಅವ " = ರಕ್ಷಿಸಿರಿ. 
" ತಪನ್ನಿತಿ ವಿಶೇಷಣಾತ್ ಸೂರ್ಯಾಂಶ 
ಸಂಭೂತತ್ತ್ವಂ ಧ್ವನ್ಯತೇ "
ಈ ಶ್ಲೋಕದಲ್ಲಿ " ತಪನ್ " ಯೆಂಬ ವಿಶೇಷಣದಿಂದ ಶ್ರೀ ಬ್ರಹ್ಮಣ್ಯತೀರ್ಥರು ಸೂರ್ಯಾಂಶ ಸಂಭೂತರೆಂದು ಧ್ವನಿತವಾಗುತ್ತದೆ. 
ಶ್ರೀ ವ್ಯಾಸರಾಜ ಗುರುಸಾರ್ವಭೌಮರು " ನ್ಯಾಯಾಮೃತ " ದಲ್ಲಿ.... 
ಸಮುತ್ಸಾರ್ಯತಮ:ಸ್ತೋಮಂ 
ಸನ್ಮಾರ್ಗ ಸಂಪ್ರಕಾಶ್ಯಚ ।
ಸದಾ ವಿಷ್ಣುಪದಾಸಕ್ತಂ 
ಸೇವೇ ಬ್ರಹ್ಮಣ್ಯಭಾಸ್ಕರಮ್ ।।
" ಶ್ರೀ ಗುರು ಗೋವಿಂದ ದಾಸರು - ಮೈಸೂರು "...... 
ವೃಂದಾವನ ನೋಡಿರೋ ನೀವೆಲ್ಲ ।
ವೃಂದಾವನ ನೋಡಿ । ಆ ।
ನಂದವನ್ನೆ ಪೊಂದಿರೊ ।। ಪಲ್ಲವಿ ।।
ರಾಮಾಚಾರ್ಯರ ಪುತ್ರರೋ ಅವರು ।
ಮಾಮನೋಹರ ನೃಹರಿ ದೂತರೋ ।
ಜನ್ಮ ಅಷ್ಟಕೆ ಬ್ರಹ್ಮಚರ್ಯ ಪೊಂದಿ ।
ಬ್ರಹ್ಮ ವಿದ್ಯೆಯ ಪಡೆದರೊ ।
ಪ್ರೇಮದಿಂದಲಿ ಬಂದು -
ತಾವು । ಪುರುಷೋ ।
ತ್ತಮರ ಸಾರ್ದರೊ ।। ಚರಣ ।।
 ಕಾಯಜ ಪಿತನ ತಾನ್ವೊಲಿಸಿ ದೇಶಂಗಳ ।
ಪ್ರಿಯದಿಂದಲಿ ಸಂಚರಿಸಿ ।
ಮಾಯಾ ರಮಣನೂ ಜೀವನೂ ಒಂದೆಂಬ ।
ಮಾಯಾವಾದಿಗಳ ತರಿದು ।
ವಾಯು ಮತ ಪ್ರೀತಿಯಲಿ ಅರುಹುತ ।
ಪ್ರಿಯ ಅಬ್ಬೂರಲಿ ನೆಲೆಸಿದ ।। ಚರಣ ।।
ವಿಠ್ಠಲ ನೃಹರಿ ಪೂಜೆಗೆ ನೇಮಿಸಿ ತಮ್ಮ ।
ಪಟ್ಟದ ಶಿಷ್ಯರು ವ್ಯಾಸತೀರ್ಥರ ।
ಅಟ್ಟಹಾಸದಿ ಸರ್ವಜಿತು ಸಂವತ್ಸರ ।
ಕೃಷ್ಣ ಏಕಾದಶೀ ವೈಶಾಖ ।
ದಿಟ್ಟ ಗುರು ಗೋವಿಂದ ವಿಠ್ಠಲನ ।
ದೃಷ್ಟಿಸಿ ತನು ಬಿಟ್ಟು ಪೊರಟನ ।। ಚರಣ ।। 
ಆಚಾರ್ಯ ನಾಗರಾಜು ಹಾವೇರಿ 
ಗುರು ವಿಜಯ ಪ್ರತಿಷ್ಠಾನ
****

5 june 2021
" ಶ್ರೀ ಬ್ರಹ್ಮಣ್ಯ ತೀರ್ಥರ ಪೂರ್ವಾರಾಧನೆ "
" ಬ್ರಹ್ಮಋಷಿ ಶ್ರೀ ಬ್ರಹ್ಮಣ್ಯ ತೀರ್ಥರು "
ಕಂಸಧ್ವಂಸಿ ಪದಾಂಭೋಜ 
ಸಂಸಕ್ತೋ ಹಂಸಪುಂಗವ ।
ಬ್ರಹ್ಮಣ್ಯ ಗುರುರಾಜಾಖ್ಯೋ 
ವರ್ತತಾಂ ಮಮ ಮಾಸಸೇ ।। 
ಉತ್ತರಾ ಪಥದಲ್ಲಿ ದ್ವೈತ ಧ್ವಜವನ್ನು ಗಗನದೆತ್ತರಕ್ಕೆ ಎತ್ತಿ ಹಾರಿಸಿದ ಶ್ರೀ ಜಯಧ್ವಜ ತೀರ್ಥರ ತರುವಾಯ ಶ್ರೀ ಪುರುಷೋತ್ತಮ ತೀರ್ಥರು ಶ್ರೀ ಸರ್ವಜ್ಞ ಸಂಹಾಸನವನ್ನು ಆರೋಹಣ ಮಾಡಿದರು. 
ಶ್ರೀ ಪುರುಷೋತ್ತಮ ತೀರ್ಥರ ಗುರುಗಳು ಮತ್ತು ಪರಮ ಗುರುಗಳಾದ ಶ್ರೀ ಜಯಧ್ವಜ ತೀರ್ಥರು ಮತ್ತು ಶ್ರೀ ರಾಜೇಂದ್ರ ತೀರ್ಥರು ಮಧ್ವ ಸಿದ್ಧಾಂತದಲ್ಲಿ ಅಸಾಧಾರಣವಾದ ಅಭಿನಿವೇಶ - ಅವೈದಿಕ ಮತಗಳನ್ನು ನಿರಾಕರಣ ಮಾಡಿ ಎಲ್ಲ ವಿಪಕ್ಷಿ ವಿದ್ವಾಂಸರನ್ನು ಗೆಲ್ಲುವ ಆವೇಶ - ಶ್ರೀ ಆನಂದತೀರ್ಥರ ಸಂದೇಶವನ್ನು ಜಗತ್ತಿನ ಮೂಲೆ - ಮೂಲೆಗೂ ಮುಟ್ಟಿಸುವ ಹೌಸು -ಹುಮ್ಮಸ್ಸು - ಹವ್ಯಾಸಗಳಿಂದ ಪ್ರೇರಿತರಾಗಿ ಉತ್ತರ ಹಿಂದೂಸ್ಥಾನಕ್ಕೆ ಹೋಗಿ ಅಲ್ಲಿಯೇ ನೆಲೆಸಿಬಿಟ್ಟರು. 
ಮತ - ಮಠಗಳ ಕಲಹ ಕೋಲಾಹಲದ ಕೇಂದ್ರ ಸ್ಥಳವೆಂದರೆ ದಕ್ಷಿಣ ದೇಶ. 
ಅದರಲ್ಲಿಯೂ ಇತ್ತ ಕಡೆ ತಲೆಯೆತ್ತಿ ರಾಜಾಶ್ರಯದ ಬಲದಿಂದ ತನ್ನ ಮತದ ಜಾಲವನ್ನು ಸುತ್ತೆಲ್ಲ ಹರಡುತ್ತಲಿರುವ ಅವೈದಿಕ ಮತಗಳ ಆಕ್ರಮಣದಿಂದಲೂ - ವರ್ಧಿಷ್ಣು ಪ್ರಭಾದಿಂದಲೂ ಎತ್ತಲೂ  ಹತ್ತಿಕ್ಕಿದಂತಾಗುತ್ತಿರುವ ದ್ವೈತ ಮತದ ನಿರಾಂತಕ ಪ್ರಸಾರಕ್ಕಾಗಿ ಎಷ್ಟು ಜನ ಸ್ವಾಮಿಗಳಿದ್ದರೂ ಕಡಿಮೆಯನ್ನುವಂತಿತ್ತು ಇಲ್ಲಿಯ ಪರಿಸ್ಥಿತಿ. 
ಅದಕ್ಕಾಗಿ ಶ್ರೀ ಪುರುಷೋತ್ತಮ ತೀರ್ಥರು ತಮ್ಮ ಮಹಾ ಸಂಸ್ಥಾನದ ವಾಸ್ತವ್ಯ ಕೇಂದ್ರವನ್ನು ಉತ್ತರದಿಂದ ಬದಲಿಸಿ ದಕ್ಷಿಣಕ್ಕೆ ತಂದರು. 
ಕಣ್ವ ನದೀ ತೀರದ ಅಬ್ಬೂರನ್ನು ತಮ್ಮ ಏಕಾಂತ ತಪಃ ಸಾಧನೆಗೆ ಬಹಳ ಚೆನ್ನಾಗಿದೆ ಎಂದು ಎನಿಸಿತು. 
ಆದುದರಿಂದ ಶ್ರೀ ಪುರುಷೋತ್ತಮ ತೀರ್ಥರು ಅಲ್ಲಿಯೇ ನೆಲೆಸಿ ಪಾಠ ಪ್ರವಚನ ತಪೋನುಷ್ಠಾನಗಳಲ್ಲಿ ನಿರತರಾದರು. 
ಶ್ರೀ ಪುರುಷೋತ್ತಮ ತೀರ್ಥರು ತಮ್ಮ ಅನಂತರ ಶ್ರೀ ಬ್ರಹ್ಮಣ್ಯ ತೀರ್ಥರೆಂಬ ಮಹಾ ಯೋಗಿಗಳಿಗೆ ಆಶ್ರಮವಿತ್ತು ಸಂಸ್ಥಾನವನ್ನು ಒಪ್ಪಸಿದರು.     
ಶ್ರೀ ಬ್ರಹ್ಮಣ್ಯ ತೀರ್ಥರು ಮಹಾ ವಿರಕ್ತರೂ - ವಾಕ್ ಶುದ್ಧಿ - ಮಂತ್ರ ಸಿದ್ಧಿ - ತಪಃ ಪ್ರಭಾವ - ದಿವ್ಯ ಜ್ಞಾನ ಮುಂತಾದ ಇವರ ಸದ್ಗುಣಗಳನ್ನು ಕಂಡು ಕೇಳಿದವರಿಗೆ ಇವರೊಬ್ಬ " ಮಹಾ ಬ್ರಹ್ಮರ್ಷಿ " ಗಳೆಂದು ತಿಳಿದು ಹೋಗುತ್ತಿತ್ತು. 
ಶ್ರೀ ಬ್ರಹ್ಮಣ್ಯ ತೀರ್ಥರು ನಿರಂತರವೂ ಶ್ರೀ ಕೃಷ್ಣ ಪರಮಾತ್ಮನ ಧ್ಯಾನದಲ್ಲಿಯೇ ನಿರತರಾಗಿರುತ್ತಿದ್ದರು. 
ಆದುದರಿಂದ ಶ್ರೀ ವ್ಯಾಸರಾಜ ಗುರುಸಾರ್ವಭೌಮರು - ಶ್ರೀ ಬ್ರಹ್ಮಣ್ಯ ತೀರ್ಥರನ್ನು " ಹಂಸ ಪುಂಗವ " ಎಂದು ಕರೆದಿದ್ದಾರೆ.  
ಶ್ರೀ ಚಂದ್ರಿಕಾಚಾರ್ಯರು ಶ್ರೀ ಬ್ರಹ್ಮಣ್ಯ ತೀರ್ಥರ ಶ್ರೀ ಕೃಷ್ಣ ಭಕ್ತಿಯೂ ಅತ್ಯುಚ್ಛ ಮಟ್ಟದ್ದಿತ್ತೆಂದು ತಮ್ಮ ಈ ಪ್ರಣಾಮ ಪದ್ಯದಲ್ಲಿ ಸೂಚಿಸಿದ್ದಾರೆ. 
ಕಂಸಧ್ವಂಸಿ ಪದಾಂಭೋಜ 
ಸಂಸಕ್ತೋ ಹಂಸಪುಂಗವಃ ।
ಬ್ರಹ್ಮಣ್ಯ ಗುರುರಾಜಾಖ್ಯೋ 
ವರ್ತತಾಂ ಮಮ ಮಾನಸೇ ।। 
ತೆರೆಯ ಮರೆಯ ಅರಿವಿನ ಆಗರದಂತೆ ಪ್ರಸಿದ್ಧಿ ಪರಾಙ್ಞುಖರಾಗಿ ಶ್ರೀ ಕೃಷ್ಣ ಪರಮಾತ್ಮನ ನಿರಂತರ ಧ್ಯಾನೋಪಾಸನಾಲೀನರಾಗಿರುವ ಶ್ರೀ ಬ್ರಹ್ಮಣ್ಯ ತೀರ್ಥ ಬ್ರಹ್ಮ ಋಷಿಗಳ ವಾಕ್ ಸಿದ್ಧಿಯ ಮಹಾ ಮಹಿಮೆಯು ಜಗತ್ತಿಗೆಲ್ಲ ಗೊತ್ತಾಗುವ ಒಂದು ಸಂದರ್ಭವು ಒದಗಿ ಬಂದಿತು. 
ಸಿದ್ಧ ಪುರುಷರಾದ ಶ್ರೀ ಬ್ರಹ್ಮಣ್ಯ ತೀರ್ಥರು ಒಂದು ದಿನ ಮೈಸೂರು ಜಿಲ್ಲೆಯ ಕಾವೇರಿ ನದಿಯ ದಂಡೆಯ ಮೇಲಿರುವ ಬನ್ನೂರು [ ವನ್ಹಿಪುರ ] ಯೆಂಬ ದಯಮಾಡಿಸಿದರು. 
ಶ್ರೀ ಬ್ರಹ್ಮಣ್ಯ ತೀರ್ಥ ಶ್ರೀಪಾದಂಗಳವರು ಊರ ಹೊರಗಿನ ದೇವಸ್ಥಾನದ ಪ್ರಾಕಾರದಲ್ಲಿ ಅಶ್ವತ್ಥ ವೃಕ್ಷದ ಕೆಳಗೆ ಶಿಷ್ಯರಿಗೆ ಪಾಠ ಹೇಳುತ್ತಾ ಕುಳಿತಿದ್ದರು     
ಆ ಸಂದರ್ಭದಲ್ಲಿ ದುಃಖದಗ್ಧಳಾದ ಓರ್ವ ಮಹಿಳೆ ಶೋಕಾವೇಗವನ್ನು ತಡೆಯಲಾರದೆ ಬಿಕ್ಕುತ್ತ ಬಂದು ಶ್ರೀ ಶ್ರೀಗಳವರಿಗೆ ನಮಸ್ಕಾರ ಮಾಡಿದಳು. 
ಒಂದವಳು ಮಹಿಳೆಯೆಂದು ಶ್ರೀ ಶ್ರೀಗಳವರು ಅವಳತ್ತ ಕಣ್ಣೆತ್ತಿ ಕೂಡಾ ನೋಡದೆ - ತಮ್ಮ ತಾಡವಾಲಿಯ ಪುಸ್ತಕದಲ್ಲಿಯೇ ದೃಷ್ಟಿ ಇಟ್ಟು ಎಲ್ಲರಿಗೂ ಹರಿಸುವಂತೆ.... 
ಶ್ರೀ ಬ್ರಹ್ಮಣ್ಯ ತೀರ್ಥರು :
" ದೀರ್ಘ ಸುಮಂಗಲೀ ಭವ "
ಯೆಂದು ಆಶೀರ್ವಾದ ಮಾಡಿದರು. 
" ಮಹಿಳೆ " 
ಶ್ರೀ ಬ್ರಹ್ಮಣ್ಯ ತೀರ್ಥರ ಆಶೀರ್ವಾದದ ವಚನವನ್ನು  ಕೇಳಿ ಆ ಹೆಣ್ಣು ಮಗಳ ದುಃಖದ ಕಟ್ಟೆ ಒಡೆದು ಅಳುವು ಒಟ್ಟರಿಸಿ ಬಂದಿತು - ಆ ಮಹಿಳೆ ದೊಡ್ಡ ಧ್ವನಿ ತೆಗೆದು ರೋದಿಸ ತೊಡಗಿದಳು. 
ಅಯ್ಯೋ ಸ್ವಾಮೀ !
ಇನ್ನೆಲ್ಲಿಯ ದೀರ್ಘ ಸುಮಂಗಲೀ !
ಈ ಪಾಪಿ ಜೀವಕ್ಕೆ ಆ ಮಾಂಗಲ್ಯವನ್ನು ಕಾಪಾಡಿಕೊಳ್ಳಲಿಕ್ಕೆ ಆಗಲಿಲ್ಲ. 
ಸ್ವಾಮೀ !
ತಾವು ಶಾಪಾನುಗ್ರಹ ಸಮರ್ಥರಾದ ಮಹಾ ಸ್ವಾಮಿಗಳು. 
ತಮ್ಮ ಬಾಯಿ ಹರಿಕೆಯಿಂದಾದರೂ .... 
" ನನ್ನ ಮಾಂಗಲ್ಯವು ಉಳಿಯಲಾರದೆ " 
ಎಂದು ಆಕ್ರೋಶ ಮಾಡಿದರು. 
ಈ ಆಕ್ರಂದನ ಧ್ವನಿಯನ್ನು ಕೇಳಿ... 
" ಶ್ರೀ ಬ್ರಹ್ಮಣ್ಯ ತೀರ್ಥರು "
ತಲೆ ಎತ್ತಿ ಆ ಮಹಿಳೆಯ ಕಡೆಗೆ ನೋಡಿದರು. 
" ಶ್ರೀ ಬ್ರಹ್ಮಣ್ಯ ತೀರ್ಥರ ವಾಕ್ ಸಿದ್ಧಿ "
" ದೀರ್ಘ ಸುಮಂಗಲೀ ಭವ "
ಬನ್ನೂರು ಗ್ರಾಮದಲ್ಲಿಯ ಕಾಶ್ಯಪ ಗೋತ್ರದ ಶ್ರೀ ರಾಮಾಚಾರ್ಯ ಓರ್ವ ಸದಾಚಾರಿ ಬ್ರಾಹ್ಮಣನು ಮರಣಕ್ಕೆ ತುತ್ತಾಗಿದ್ದನು. 
ಅವರ ಮಡದಿಯು ಪರಮ ಪತಿವ್ರತೆಯೂ - ಕಲಿಯುಗದ ಸಾವಿತ್ರಿಯೂ - ಅಭಿನವ ಅರಂಧತಿ. 
ಅವಳಿಗೆ ಪತಿಯ ವಿರಹ ತಾಳಲಿಕ್ಕಾಗಲಿಲ್ಲ - ಪತಿಯೊಡನೆ ಸಹಗಮನ ಮಾಡಬೇಕೆಂದು ಸಿದ್ಧಳಾಗಿದ್ದಳು - ಸತಿ ಹೋಗುವ ಮುನ್ನ ದೊಡ್ಡವರ ಅನುಜ್ಞೆಯನ್ನು ತೆಗೆದು ಕೊಳ್ಳುವದು ಸಂಪ್ರದಾಯ. 
ಆಕಸ್ಮಿಕವಾಗಿ ಅಂದು ಅಲ್ಲಿಗೆ ಮಹಾ ಯೋಗೀಶ್ವರರಾದ ಶ್ರೀ ಬ್ರಹ್ಮಣ್ಯ ತೀರ್ಥರು ಚಿತ್ತೈಸಿದ ವೃತ್ತಾಂತವು ಆ ಮಹಿಳೆಗೆ ತಿಳಿಯಿತು. 
ಸಹಗಮನಕ್ಕೆ ಮುನ್ನ ಇಂಥಾ ಇಂಥಾ ಪಾವನ ಪುರುಷರಿಗೆ ನಮಸ್ಕಾರ ಮಾಡಿ ಬರಬೇಕೆಂದು ಆ ಮಹಿಳೆ ಶ್ರೀ ಶ್ರೀಗಳಿದ್ದಲ್ಲಿಗೆ ಬಂದಳು. 
ಪಾಠ ಹೇಳುತ್ತಾ ಕುಳಿತ ಆ ತಪೋಯೋಗಿಗಳಿಗೆ ಮೂಕಶೋಕದಿಂದ ನಮನ ಮಾಡಿದಳು. 
ಪತಿಯನ್ನು ಕಳೆದುಕೊಂಡು ಅವನೊಡನೆ ಶರೀರವನ್ನು ಸುಟ್ಟುಕೊಂಡು ಸಾಯಲಿಕ್ಕೆ ಹೊರಟ ಸತೀಮಣಿಗೆ ಶ್ರೀ ಶ್ರೀಗಳವರು ಕೊಟ್ಟ ಆಶೀರ್ವಾದ..... 
" ದೀರ್ಘ ಸುಮಂಗಲೀ ಭವ " !
ಅವಳ ಮಾಂಗಲ್ಯವು ಹರಿದು ಮಸಣಗಟ್ಟಿಯನ್ನು ಕಂಡಾಗ ದೀರ್ಘ ಸುಮಂಗಲಿತ್ವ ಎಲ್ಲಿಂದ ಬರಬೇಕು?
ಸ್ವಾಮಿಗಳೇನೋ ನುಡಿದುಬಿಟ್ಟರು!
ಅದರಿಂದ ಆ ಸಾಧ್ವಿಯ ದುಃಖವು ಮತ್ತಿಷ್ಟು ಉಕ್ಕೇರಿ ಬಂದಂತಾಗಿ ಅವಳು ಮತ್ತೂ ಬಿಕ್ಕಿಸಿ ದುಃಖಿಸಹತ್ತಿದಳು. 
ಅದನ್ನು ಕೇಳಿ.... 
ಶ್ರೀ ಬ್ರಹ್ಮಣ್ಯ ತೀರ್ಥ ಮಹಾ ಯೋಗಿಗಳಿಗೆ ಅಂತಃಕರಣವು ಕರಗಿತು - ಅವರು ವಾತ್ಸಲ್ಯ ತುಂಬಿದ ಕಂಠದಿಂದ ಹೇಳಿದರು.... 
ಏನಮ್ಮಾ !
ನೀನು ಸಹಗಮನ ವೇಷವನ್ನು ತೊಟ್ಟು ನಮ್ಮನ್ನು ಅಪ್ಪಣೆ ಕೇಳಲು ಬಂದಾಗ - ನಮ್ಮ ಬಾಯಿಂದ " ದೀರ್ಘ ಸುಮಂಗಲೀ ಭವ " ಯೆಂದು ಆ ಸ್ವಾಮಿಯು ನುಡಿಸಿದನಲ್ಲ  - ನನ್ನಂಥಾ ಸಂನ್ಯಾಸಿಯ ಬಾಯಿಂದ ಆ ಮಾತನ್ನು ನುಡಿಸಿದ ಶ್ರೀ ಗೋಪಾಲಕೃಷ್ಣ ಪರಮಾತ್ಮನು... 
" ಸತ್ಯಂ ವಿಧಾತುಂ 
ನಿಜ ಭೃತ್ಯ ಭಾಷಿತಂ "
ಏನಾದರೂ ವಿಶೇಷ ಅನುಗ್ರಹವನ್ನು ಮಾಡುವನೋ ಏನೋ ! - ನೋಡೋಣ ಬನ್ನೀ - ಎಂದು ಹೇಳಿ ಶ್ರೀ ಶ್ರೀಪಾದರು.... 
ಅವಳ ಪತಿಯ ಶವವಿದ್ದಲ್ಲಿಗೆ ಬಂದರು - ಆ ಶವವನ್ನು ಒಂದು ಚಟ್ಟಕ್ಕೆ ಬಿಗಿದು ನಾಲ್ಕು ಜನ ಬ್ರಾಹ್ಮಣರು ಹೆಗಲ ಮೇಲೆ ಹೊತ್ತುಕೊಂಡು ನಡೆದಿದ್ದರು. 
ಸಹಗಮನ ಮಾಡಲಿರುವ ಆ ಮೃತ ಪುರುಷನ ಸತಿಯು ಶ್ರೀ ಶ್ರೀಗಳವರ ಅಪ್ಪಣೆ ತೆಗೆದುಕೊಂಡು ಬರುವುದನ್ನೇ ಎದುರು ನೋಡುತ್ತಾ ನಿಂತುಕೊಂಡಿದ್ದರು. 
ಸ್ವಯಂ ಶ್ರೀ ಶ್ರೀಗಳವರೇ ಇತ್ತ ಕಡೆಗೆ ಬರುತ್ತಲಿರುವುದನ್ನು ನೋಡಿ ಆ ಶವ ವಾಹಕರು ಸಂನ್ಯಾಸಿಗಳು ಶವವನ್ನು ನೋಡಬಾರದು ಎಂಬ ಧರ್ಮ ಶಾಸ್ತ್ರವನ್ನು ಬಲ್ಲವರಾದುದರಿಂದ ಸ್ಮಶಾನದ ಕಡೆಗೆ ಹೆಜ್ಜೆ ಹಾಕ ಹತ್ತಿದರು. 
ಆಗ ಸ್ವಯಂ ಶ್ರೀ ಶ್ರೀಗಳವರೇ ಕೂಗಿ ಕೈಮಾಡಿ ಅವರನ್ನು ನಿಲ್ಲಿಸಿದರು - ಆ ಶವವನ್ನು ಕೆಳಗೆ ಇಳಿಸಲು ಹೇಳಿದರು. 
ತಮ್ಮ ಕಮಂಡಲದಲ್ಲಿಯ ನೀರನ್ನು ತೆಗೆದುಕೊಂಡು " ಮೃತ ಸಂಜೀವನೀ " ಮಂತ್ರವನ್ನು ಹೇಳಿ ಪ್ರೋಕ್ಷಣೆ ಮಾಡಹತ್ತಿದರು. 
" ಔಷಧಂ ಜಾಹ್ನವೀ ತೋಯಂ 
ವೈದ್ಯೋ ನಾರಾಯಣೋ ಹರಿಃ "
ಎಂದು ಹೇಳಿ " ಶ್ರೀ ಧನ್ವಂತರಿ " ಯನ್ನು ಸ್ಮರಣೆ ಮಾಡಿ " ರಾಮ - ಕೃಷ್ಣ - ವೇದವ್ಯಾಸದೇವರ " ನಾಮಗಳನ್ನು ಉಚ್ಛರಿಸಿ " ಕಮಂಡಲುವಿನಲ್ಲಿಯ ತೀರ್ಥೋದಕವನ್ನು ಗೊಜ್ಜಲು ಹಗ್ಗ ಬಿಗಿದ ಆ ಹೆಣವು ಹರಿದಾಡ ತೊಡಗಿತು. 
ನೆರೆದ ಜನರೆಲ್ಲರೂ ತಮ್ಮ ಪಂಚ ಪ್ರಾಣಗಳನ್ನೂ ತಮ್ಮ ಕಣ್ಣು ತುದಿಗೆ ತಂದು ಈ ಕೌತುಕವನ್ನು ನಿರೀಕ್ಷಿಸುತ್ತಿದ್ದರು. 
ಶ್ರೀ ಶ್ರೀಗಳವರ ಮಂತ್ರೋಚ್ಛರಣೇ ಮತ್ತು ತೀರ್ಥೋದಕ ಪ್ರೋಕ್ಷಣೆಯಿಂದ ಮೃತರಾದ ಆ ಶ್ರೀ ರಾಮಾಚಾರ್ಯರು ಮೆಲ್ಲ ಮೆಲ್ಲನೆ ಕಣ್ಣು ತೆರೆದರು. 
ನೆರೆದವರೆಲ್ಲರೂ ಆ ಶವದ ಬಂಧನದ ಹಗ್ಗವನ್ನು ದರದರನೆ ಹರಿದರು.         
ಮೃತ ಶ್ರೀ ರಾಮಾಚಾರ್ಯರು ನಿದ್ದೆಯಿಂದ ಎಚ್ಚೆತ್ತವರಂತೆ ನಿದಾನವಾಗಿ ಎದ್ದು ಶ್ರ ಬ್ರಹ್ಮಣ್ಯ ತೀರ್ಥರಿಗೆ ದೀರ್ಘ ದಂಡ ಪ್ರಣಾಮಗಳನ್ನು ಅರ್ಪಿಸಿದರು. 
ಆನಂದ ಭರಿತಳಾದ ಆತನ ಮಡದಿಗಂತೂ ಮಾತೇ ಬಾರದಾಯಿತು. 
ಮೂಕ ಮುಗ್ದಳಾದ ಆ ಮಹಿಳೆ ಯಮಪುರದಿಂದ ಬದುಕಿ ಬಂದ ಗಂಡನನ್ನೊಮ್ಮೆ - ಸ್ವಾಮಿಗಳವರನ್ನೊಮ್ಮೆ ಎವೆ ಪಿಳು ಕಿಸದೆ ನಿಂತುಕೊಂಡಳು. 
ಕೂಡಿದ ಜನರೆಲ್ಲರೂ ಬನ್ನೂರು ರಾಮಾಚಾರ್ಯರ ಈ ಪುನರ್ಜನ್ಮದ ಕೌತುಕವನ್ನು ಕಣ್ಣಾರೆ ಕಂಡು ಶ್ರೀ ಸ್ವಾಮಿಗಳವರ ಹೆಸರಿನಿಂದ ಎಲ್ಲರೂ ಜಯ ಘೋಷ ಮಾಡಿದರು. 
ಅನಂತರ ಆ ದಂಪತಿಗಳು ಶ್ರೀ ಬ್ರಹ್ಮಣ್ಯ ತೀರ್ಥ ಮಹಾ ಯೋಗಿಗಳಿಗೆ ಪುನಃ ನಮಸ್ಕಾರ ಮಾಡಿದಾಗ ಆ ಸತೀ ಶಿರೋಮಣಿಗೆ ಶ್ರೀ ಬ್ರಹ್ಮಣ್ಯ ತೀರ್ಥ ಮಹಾ ಯೋಗಿಗಳು ... 
" ಪುತ್ರ ಸೌಭಾಗ್ಯವತೀ ಭವ " 
ಯೆಂದು ಆಶೀರ್ವಾದ ಮಾಡಿದರು. 
ನೆರೆದ ಜನರಿಗೆಲ್ಲ ಮತ್ತೂ ಕೌತುಕ !
ಶ್ರೀ ಶ್ರೀಗಳವರ ಪರಮಾನುಗ್ರಹದಿಂದ ಸತ್ತು ಹೋದ ಶ್ರೀ ರಾಮಾಚಾರ್ಯರು ಬದುಕಿ ಬಂದಿದ್ದೇನೋ ನಿಜ !
ಆದರೆ - ಮುಪ್ಪಿನ ಮುದುಕರಾದ ಜರಠ ದಂಪತಿಗಳಿಗೆ ಇನ್ನು ಮೇಲೆ ಸಂತಾನ ಪ್ರಾಪ್ತಿ ಎಂತಾಗುವದು!
ಆದರೆ ಶ್ರೀ ಶ್ರೀಗಳವರ ಮಾತೂ ಕೂಡಾ ಎಂದೂ ಹುಸಿ ಹೋಗುವಂತಾಹುದಲ್ಲ. 
ಅವರ ಆಶೀರ್ವಾದವನ್ನು ಕೇಳಿದ ಶ್ರೀ ರಾಮಾಚಾರ್ಯ ದಂಪತಿಗಳು ಒಬ್ಬರ ಮುಖವನ್ನು ಒಬ್ಬರು ನೋಡಿದರು. 
ಸ್ವಾಮಿಗಳ ಆಶೀರ್ವಾದದಿಂದ ಸತ್ತವರೇ ಮತ್ತೆ ಬದುಕಿ ಬಂದಾಗ - ಇದ್ದವರಿಗೆ ಮಕ್ಕಳಾಗುವದು ಏನಾಶ್ಚರ್ಯ! ಯೆಂಬ ಆತ್ಮ ವಿಶ್ವಾಸವು ಆ ಸಾಧ್ವೀಮಣಿಯ ಹೃದಯದಲ್ಲಿ ತುಂಬಿ ತುಳುಕುತ್ತಿತ್ತು. 
ಆದುದರಿಂದಲೇ ಶ್ರೀ ರಾಮಾಚಾರ್ಯರ ಪತ್ನಿ ಶ್ರೀ ಮಹಾ ಗುರುಗಳ ಆಶೀರ್ವಾದವನ್ನು ಕೇಳಿ ಮತ್ತೆ ಪತಿಯೊಡನೆ ಆ ಯತಿವರ್ಯರ ಪಾದ ಕಮಲಗಳಿಗೆ ನಮಸ್ಕಾರ ಮಾಡಿದಳು ಮತ್ತೆ ಅದೇ ಆಶೀರ್ವಾದ - 
" ಪುತ್ರ ಸೌಭಾಗ್ಯವತೀ ಭವ " !
ಆಗ ಶ್ರೀ ಶ್ರೀಗಳವರ ಆಶೀರ್ವಚನ ಕೇಳಿ ಶ್ರೀ ರಾಮಾಚಾರ್ಯರು ಬೆಕ್ಕಸ ಬೆರಗಾಗಿ ನಿಂತು ಕೊಂಡಿದ್ದರು. 
ಆಗ ಶ್ರೀ ಬ್ರಹ್ಮಣ್ಯ ತೀರ್ಥ ಮಹಾ ಸ್ವಾಮಿಗಳು ಸ್ನಿಗ್ಧ ದೃಷ್ಟಿಯಿಂದ.... 
ರಾಮಾಚಾರ್ಯ ನನ್ನ ಮಾತಿನ ಮೇಲೆ ಸಂದೇಹ ಬೇಡ. 
ನೀನು ಮರಣ ಹೊಂದಿದಾಗ ನಿನ್ನ ಮಡದಿಗೆ ನಾನು ಮಾಡಿದ ಸೌಭಾಗ್ಯ ಆಶೀರ್ವಚನವನ್ನು ಆ ನಮ್ಮ ಶ್ರೀ ಗೋಪಾಲಕೃಷ್ಣ ಪರಮಾತ್ಮನು ಸತ್ಯವನ್ನಾಗಿ ಮಾಡಿದ್ದಾನೆ. 
ಅಂದ ಬಳಿಕ ಈ ಸಂತಾನಾಶೀರ್ವಾದವನ್ನೂ ಕೂಡಾ ಸತ್ಯವನ್ನಾಗಿ ಮಾಡುವ ಹೊಣೆ ಆ ಶ್ರೀ ಹರಿಯ ಮೇಲೆಯೇ ಇದೆ. 
ಆದರೆ - ನೀವು ನನಗೀಗ ಒಂದು ವಚನ ಕೊಡಬೇಕು - " ನಿಮಗೆ ಹುಟ್ಟಿದ ಮೊದಲನೆಯ ಮಗುವನ್ನು ತಂದು ನನಗೆ ಒಪ್ಪಿಸಬೇಕು. 
" ಪೂರ್ವ ಪೂರ್ವಂ ದೇಹಿ ಮಹ್ಯಂ 
ದ್ವಿತೀಯೇನ ಸುಖಂ ವಸ "
ಪ್ರಥಮ ಪುತ್ರನನ್ನು ನನಗೆ ಕೊಟ್ಟು - ಮುಂದಿನ ಎರಡನೆಯ ಮಗನನ್ನು ನಿನ್ನ ವಂಶಾಭಿವೃದ್ಧಿಗೆ ಇಟ್ಟುಕೋ. 
ಮುಪ್ಪಿನ ಮುದುಕರಾಗುವ ವರೆಗೂ ಮಕ್ಕಳ ಮುಖವನ್ನೇ ನೋಡದ ಆ ಶ್ರೀ ರಾಮಾಚಾರ್ಯ ದಂಪತಿಗಳಿಗೆ ಶ್ರೀ ಶ್ರೀಗಳವರ ಮುಖದಿಂದ ಬಂದ ಸುಖಾಶೀರ್ವಾದವನ್ನು ಕೇಳಿ ತಮ್ಮ ಸೌಭಾಗ್ಯಕ್ಕೆ ಒಮ್ಮೆಲೆ ಶುಕ್ರದಶೆ ಬಂದಂತಾಯಿತು. 
ಜನ್ಮವೆಲ್ಲವೂ ಸಂತಾನದ ಚಿಂತೆಯಲ್ಲಿಯೇ ಕೊರಗಿ ಹೋದ ಅವರಿಗೆ ಒಂದಲ್ಲವಂತೆ ಎರಡು ಸಂತತಿಯನ್ನು ಆಶೀರ್ವದಿಸುವ ಸತ್ಯಸಂಧರಾದ ಶ್ರೀ ಶ್ರೀಗಳವರ ಹರಿಕೆಯು ಮತ್ತೆ ಆಶಾಂಕುರವನ್ನು ಹುಟ್ಟಿಸಿತು. 
ಆ ದಂಪತಿಗಳು ಆನಂದದಿಂದ ಶ್ರೀ ಶ್ರೀಗಳವರ ಕರಾರಿಗೆ ಒಪ್ಪಿಕೊಂಡು - ಅವರ ಆಶೀರ್ವಾದವನ್ನು ಪಡೆದು ಅವರಿಗೆ ಭಿಕ್ಷೆ - ಪಾದಪೂಜೆ ಮೊದಲಾದ ಮರ್ಯಾದೆಯನ್ನು ಮಾಡಿ ತಮ್ಮ ಸ್ಥಳಕ್ಕೆ ತೆರಳಿದರು. 
ಇಂಥಾ ಮಹಾನುಭಾವರ ಆಶೀರ್ವಚನವು ಅದೆಂತು ಸುಳ್ಳಾದೀತು. 
ವರುಷ ತುಂಬುವಷ್ಟರಲ್ಲಿ ಆ ರಾಮ ರಮಣಿಯು ಮುತ್ತಿನಂಥ ಒಂದು ಗಂಡು ಮಗುವನ್ನು ಹೆತ್ತಳು. 
ಆ ಕೂಸೇ ಮುಂದೆ ಶ್ರೀ ಬ್ರಹ್ಮಣ್ಯ ತೀರ್ಥರ ಪರಮಾನುಗ್ರಹದಿಂದ " ಶ್ರೀ ವ್ಯಾಸರಾಜ ಗುರುಸಾರ್ವಭೌಮರು [ ಶ್ರೀ ವ್ಯಾಸತೀರ್ಥ ] - ಶ್ರೀ ಚಂದ್ರಿಕಾಚಾರ್ಯ " ರೆಂಬ ಹೆಸರಿನಿಂದ ಜಗತ್ಪ್ರಸಿದ್ಧಿಯಾಯಿತು. 
ನೋಡಿದಿರಾ ಶ್ರೀ ಬ್ರಹ್ಮಣ್ಯ ತೀರ್ಥರ ಮಹಾ ಮಹಿಮೆಯನ್ನು !!
" ಋಷೀಣಾಂ ಪುನರಾದ್ಯಾನಾಂ 
ವಾಚಮರ್ಥೋನು ಧಾವತಿ "
ಯೆಂಬ ಕವಿ ಉಕ್ತಿಗೆ ಇಂಥಾ ಮಹಾನುಭಾವರೇ ಅಲ್ಲವೇ ಜೀವಂತ ದೃಷ್ಟಾಂತ !!!
ಹೀಗೆ ಶ್ರೀ ಬ್ರಹ್ಮಣ್ಯ ತೀರ್ಥ ಮಹಾ ಯೋಗಿಗಳು - ಮಹಾ ಬ್ರಹ್ಮ ಜ್ಞಾನಿಗಳಾಗಿ ಇಂಥಾ ಅನೇಕಾನೇಕ ಮಹಿಮೆಗಳನ್ನು ಮೆರೆದು - ಶಾಸ್ತ್ರೀಯ ಪ್ರಪಂಚದ ಸೀಮಾ ಪುರುಷರಾದ ಶ್ರೀ ವ್ಯಾಸರಾಜ ಗುರುಸಾರ್ವಭೌಮರಿಗೆ ವೇದಾಂತ ಸಾಮ್ರಾಜ್ಯದ ಭಾರವನ್ನು ವಹಿಸಿಕೊಟ್ಟು ಶ್ರೀ ಕ್ಷೇತ್ರ ಅಬ್ಬೂರಲ್ಲಿಯೇ ವೃಂದಾವನಸ್ಥರಾದರು. 
ಶ್ರೀ ಚಂದ್ರಿಕಾಚಾರ್ಯರಂಥಾ ಶಕ ಪುರುಷರನ್ನು ಮಾಧ್ವ ಸಮಾಜಕ್ಕೆ ಕಾಣಿಕೆಯಾಗಿ ನೀಡಿದ " ಬ್ರಹ್ಮಋಷಿ ಶ್ರೀ ಬ್ರಹ್ಮಣ್ಯತೀರ್ಥ " ರನ್ನು ಯಾರಾದರೂ ಬ್ರಾಹ್ಮಣರು ಎಂದಾದರೂ ಮರೆಯಬಹುದೇ? 
[ ಬ್ರಾಹ್ಮಣರು ಎಂದೆಂದಿಗೂ ಶ್ರೀ ಬ್ರಹ್ಮಣ್ಯ ತೀರ್ಥರನ್ನು ಮರೆಯಲಾರದು ಎಂದು ತಾತ್ಪರ್ಯ ]. 
ನಮೋ ಬ್ರಹ್ಮಣ್ಯ ದೇವಾಯ ।
ನಮೋ ಬ್ರಹ್ಮಣ್ಯ ಗುರುವೇ ।।
ಬ್ರಹ್ಮ ಜ್ಞಾನಿಗಳಾದ ಈ ಶ್ರೀ ಬ್ರಹ್ಮಣ್ಯ ತೀರ್ಥರ ಬಗೆಗೆ ಮಧ್ವರಾದ ನಾವು ಹೇಳುವುದಕ್ಕಿಂತ ವಿಮತೀಯ ಮತಿಮಾನ್ ಕವಿಯಾದ ಶ್ರೀ ಸೋಮನಾಥ ಪಂಡಿತನು ಹೇಳಿದುದನ್ನು ನೋಡಿದರೆ ಎಂಥವರಿಗೂ ಶ್ರೀ ಬ್ರಹ್ಮಣ್ಯ ತೀರ್ಥರ ವಿಷಯದಲ್ಲಿ ಭಕ್ತಿಯ ಉದ್ರೇಕವು ಆಗದೆ ಇರದು. 
" ವ್ಯಾಸಯೋಗಿಚರಿತ " ದಲ್ಲಿ..... 
ಬದ್ಧಮೂರ್ತಿಮಿವ ಮಧ್ವರಾದ್ಧಾಂತಂ ಮೂಲಕೋಶಮಿವ ಮಹಾ ತ್ರಾಣಾಂ,  ವೈ [ ಕಟಿ ] ಕ್ರಯಿಕಮಿವ ವೈಷ್ಣವಾಚಾರರತ್ನಾನಾಂ, ಖಲೀನಮಿವ ದುರ್ಲಲಿತೇಂದ್ರಿಯ ಘೋಟಕಾನ್, ನೀಡಮಿವ ನಿಯಮಶಕುಂತಾನಾಂ, ಚಂಕ್ರಮಣರಂಗಮಿವ ಷಡ್ ದರ್ಶನಾನಾಂ, ವಿಜಯಸ್ತಂಭಮಿವ ತತ್ತ್ವಜ್ಞಾನಸ್ಯ, ಲಲಿತಮಿಲಿತಾಕೃತಿತತ್ತಾದೃಶ ವೈಭವಂ ಯೋಗಿನಮೇನಮವಲೋಕ್ಯ ವಿಸ್ಮಯಕಬಲಿತಹೃದಯೋ ಭಕ್ತಾನುಕಂಪಿನಾ ವ್ಯಾಸದೇವೇನ ಸ್ವಪ್ನಸಮಯಾನುಗ್ರಹೀತಸ್ಯ ಮಹೀಯಸೋ ಬ್ರಹ್ಮಣ್ಯ ಶಬ್ದಸ್ಯಾಯಮೇವಾರ್ಥ ಇತಿ ಚೇತಸಾ ನಿಶ್ವಿಕಾಯ ।।                   
ಶ್ರೀ ಬ್ರಹ್ಮಣ್ಯ ತೀರ್ಥರು ಮೂರ್ತಿಮಂತ " ಮಧ್ವಸಿದ್ಧಾಂತ " ರಂತಿದ್ದರು. 
ಶ್ರೀ ಬ್ರಹ್ಮಣ್ಯ ತೀರ್ಥರಿಂದರೇ " ಮಹಾ ಮಂತ್ರಗಳ ಒಂದು ಕೋಶ ". 
ಶ್ರೀ ಮಹಾ ವಿಷ್ಣುವನ್ನು ಪ್ರಸನ್ನಗೊಳಿಸುವ " ಸದಾಚಾರವೆಂಬ ರತ್ನಗಳ ಮಣಿಕಾರ ". 
" ಇಂದ್ರಿಯಗಳೆಂಬ ಎಟ್ಟಿ ಕುದುರೆಗಳನ್ನು ಬಿಡಿ ಹಿಡಿಯುವ ಒಂದು ಕಡಿವಾಣ ". 
" ಯಮ ನಿಯಮ " ಗಳೆಂಬ " ಹಕ್ಕಿಗಳು ಬೀಡು ಬಿಟ್ಟ ಒಂದು ಗೂಡು ".    
" ಷಡ್ ದರ್ಶನಗಳು ಅಂಬೆಗಾಲಿಡುವ ಒಂದು ರಂಗಸ್ಥಳ [ ರಂಗಭೂಮಿ ] "
" ತತ್ತ್ವಜ್ಞಾನದ ಒಂದು ಗೆಲವು ಗಂಬ ".
ಇಂಥಾ ಗುಣ - ಅಂಥಾ ಆಕಾರಗಳು ಈ ಒಂದು ತಾಣದಲ್ಲಿ ಲಲಿತಮಿಲಿತವಾಗಿ ಮಧುರ ಮೇಲನವನ್ನು ಹೊಂದಿ ಈ ತರಹದ ಆಧ್ಯಾತ್ಮಿಕ ವೈಭವವನ್ನು ಉದ್ದೀಪನ ಗೈದಿದ್ದವು. 
ಈ ಮಹಾ ಯೋಗಿಗಳನ್ನು ನೋಡಿದಾಗ ಬಲ್ಲಣ ಸುಮತಿಗೆ ತನ್ನ ಕನಸಿನಲ್ಲಿ ಶ್ರೀ ವೇದವ್ಯಾಸ ದೇವರು ಬಂದು " ಬ್ರಹ್ಮಣ್ಯ ತೀರ್ಥ " ಯೆಂದು ಉಚ್ಛರಿಸಿದ ಶಬ್ದಕ್ಕೆ ಇವರೇ ಅರ್ಥ ಎಂದು ನಿಶ್ಚಯವಾಯಿತು. 
ಈ ಶ್ರೀ ಸೋಮನಾಥ ಕವಿಯ " ವ್ಯಾಸಯೋಗಿಚರಿತ " ಯೆಂಬ ಚಂಪೂ ಪ್ರಬಂಧದಲ್ಲಿಯ ಈ ಬಣ್ಣನೆಯನ್ನು ಓದಿದಾಗ ಶ್ರೀ ಬ್ರಹ್ಮಣ್ಯತೀರ್ಥರ ಬಗ್ಗೆ ಭಕ್ತ್ಯುದ್ರೇಕವಾಗಿ ಕೈಗಳು ಮುಗಿಯುತ್ತವೆ. 
ತಲೆ ಬಾಗುತ್ತದೆ. 
ಹೃದಯವು ತುಂಬಿ ಬರುತ್ತದೆ. 
ಶ್ರೀ ಗೋಪಾಲದಾಸರು...
ಕುಂದೇಂದು ಸರ್ವಮುನೀ ।
ವೃಂದಾನೊಡನೆ ಮಹಾ ।
ವೃಂದಾವನದಿ ಶೋಭಿಪಾ ।।
ತಂದೆ ನೀ ಸಲಹೆಮ್ಮ ಗೋಪಾಲವಿಠ್ಠಲ । ಸ ।
ನ್ನುತಿವರ ಪಾತ್ರರಾ ಪೂತಾತ್ಮರಾ ।। 
ವೈಶಾಖ ಕೃಷ್ಣ ಪಕ್ಷೇsಸಾ-
ವೇಕಾದಶ್ಯಾಂ ಗುರೂತ್ತಮಃ ।
ನಭೋಮಧ್ಯಗತೇsರ್ಯಮ್ಣಿ 
ಸ್ವರೂಪೇsಲೀಯತ ಪ್ರಭುಃ ।। 
ವೈಶಾಖ ಕೃಷ್ಣ ಪಕ್ಷ ಏಕಾದಶೀ ದಿವಸ ಸೂರ್ಯನು ನಭೋಮಧ್ಯಗತನಾಗಿರಲು - ಗುರೂತ್ತಮರಾದ ಶ್ರೀ ಬ್ರಹ್ಮಣ್ಯತೀರ್ಥರು ತಮ್ಮ ಮೂಲ ಸ್ವರೂಪದಲ್ಲಿ ಲೀನವಾದರು.   
ಆಚಾರ್ಯ ನಾಗರಾಜು ಹಾವೇರಿ  
ಗುರು ವಿಜಯ ಪ್ರತಿಷ್ಠಾನ
***
" " ಈ ಸುದಿನ ಬ್ರಹ್ಮ ಋಷಿ ಶ್ರೀ ಬ್ರಹ್ಮಣ್ಯ ತೀರ್ಥರ ಮಧ್ಯಾರಾಧನೆ "
" ಶ್ರೀ ಬ್ರಹ್ಮಣ್ಯ ತೀರ್ಥ ಚರಿತ ಸಂಗ್ರಹಃ "
ಏಕ ಶ್ಲೋಕೀ ಭಾಗವತ - ರಾಮಾಯಣಗಳಂತೆ ಈ ಕೃತಿಯೂ ಒಂದೇ ಶ್ಲೋಕದಲ್ಲಿ ಶ್ರೀ ಸೂರ್ಯಾಂಶ ಶ್ರೀ ಬ್ರಹ್ಮಣ್ಯ ತೀರ್ಥರ ಮಹತ್ವವನ್ನು ಹೆಚ್ಚಿಸುವ ಅನೇಕ ಘಟನೆಗಳ ಸಂಗ್ರಹ ರೂಪವಾಗಿದೆ. 
ನಿತ್ಯದಲ್ಲಿಯೂ ಪ್ರಾತಃ ಸ್ಮರಣೀಯರಾದ ಶ್ರೀ ಬ್ರಹ್ಮಣ್ಯ ತೀರ್ಥರ ವಿಸ್ತೃತ ಸ್ತೋತ್ರಗಳನ್ನು ಪಠಿಸಲು ಕಷ್ಟಕರವೆಂದು ತೋರಿಡಾ ಶ್ರೀ ಗುರುರಾಜರ ಭಕ್ತರಿಗೆ ಈ ಕೃತಿಯು ಮಹದುಪಕಾರ ಮಾಡಿದೆ. 
ಸಾಕ್ಷಾತ್ ಶ್ರೀ ಸೂರ್ಯದೇವನೇ ಶ್ರೀ ಬ್ರಹ್ಮಣ್ಯ ತೀರ್ಥರಾಗಿ ಅವತರಿಸಿದರೆಂದು ಏವಕಾರ ಪುರಸ್ಸರವಾಗಿ ನಿಶ್ಚಯ ಮಾಡಿರುವುದು ಈ ಕೃತಿಯ ವೈಶಿಷ್ಟ್ಯವಾಗಿದೆ. 
ಜಾತೋ ಭಾಸ್ಕರ ಏವ ಪೂಗವನ-
ಜಾದ್ರಾಮಾನೃಸಿಂಹಾಖ್ಯಯಾ ।
ಸೋSಪಿ ಶ್ರೀಪುರುಷೋತ್ತಮಮಾದ್ಯ-
ತಿರಭೂದ್ಬ್ರಹ್ಮಣ್ಯತೀರ್ಥಾಭಿಧಃ ।।
ಕರ್ಣಾಟ೦ ಸ ಸುವೃಷ್ಟಿಭಿರ್ಮೃತ-
ಮಥೋಜ್ಜೀವ್ಯದ್ವಿಜಂ ಷಾಷ್ಠಿಕಮ್ ।
ಕೃತ್ವಾ ವ್ಯಾಸಮುನಿಂ ತತೋSಸ್ಯ 
ಸುತಕಂ ಲೇಭೇ ವನೇ ವಿಠ್ಠಲಮ್ ।।               
ಶ್ರೀ ಸೂರ್ಯದೇವನೇ ಪೂಗವನವೆಂಬ ವಂಶದಲ್ಲಿ ಜನಿಸಿದ ಶ್ರೀ ರಾಮಾಚಾರ್ಯರಿಂದ " ನರಸಿಂಹ " ನೆಂಬ ನಾಮದಿ ಜನಿಸಿ - ಅವರೇ  ಶ್ರೀ ಪುರುಷೋತ್ತಮ ತೀರ್ಥರ ಆಶ್ರಮವನ್ನು ಸ್ವೀಕರಿಸಿ - " ಬ್ರಹ್ಮಣ್ಯ ತೀರ್ಥ " ರೆಂಬ ಹೆಸರನ್ನು ಪಡೆದರು.
ಆ ಶ್ರೀ ಬ್ರಹ್ಮಣ್ಯತೀರ್ಥರೇ - ಅನಾವೃಷ್ಟಿ ನಿಮಿತ್ತ ಮೃತಪ್ರಾಯನಾಗಿದ್ದ ಕರ್ನಾಟಕವನ್ನು ಚೆನ್ನಾಗಿ ಮಳೆಯಿಂದ ಉಜ್ಜೀವನಗೊಳಿಸಿದರು ಮತ್ತು ಮೃತನಾಗಿದ್ದ ಷಾಷ್ಠಿಕ ಕುಲೋತ್ಪನ್ನನಾಗಿದ್ದ ದ್ವಿಜನನ್ನು ಬದುಕಿಸಿ - ನಂತರ ನಂತರ ಆತನ ಸುತನನ್ನು " ವ್ಯಾಸತೀರ್ಥ " ಮುನಿಯನ್ನಾಗಿಸಿದರು ಮತ್ತು ವನದಲ್ಲಿ " ವಿಠ್ಠಲ" ವಿಗ್ರಹವನ್ನು ಪಡೆದರು.     
ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ.... 
ಜ್ಞಾನ ಮಂಟಪಖ್ಯ ಕಣ್ವ ನದೀ -
ತೀರದಿ ಶೋಭಿಪಾ ।
ಜ್ಞಾನಗಭೀರ ನರಹರಿಯ -
ದಾಸ ಬ್ರಹ್ಮಣ್ಯತೀರ್ಥಾ ।
ಜ್ಞಾನಪುಂಜ ವ್ಯಾಸತೀರ್ಥರ -
ಪಿತನೆಂದೆನಿಸಿದ ಇನಾಂಶನೇ   ।
ಜ್ಞಾನಜ್ಞಾತೃ ವೇಂಕಟನಾಥ ವಿಠ್ಠಲ-
ಪದಾರ್ಚಕ ಬ್ರಹ್ಮಣ್ಯತೀರ್ಥಾ ।।
ಆಚಾರ್ಯ ನಾಗರಾಜು ಹಾವೇರಿ 
ಗುರು ವಿಜಯ ಪ್ರತಿಷ್ಠಾನ
***
"  ಅಬ್ಬೂರು ಪುರಾಧೀಶ ಶ್ರೀ ಬ್ರಹ್ಮಣ್ಯ ತೀರ್ಥರ ಮಧ್ಯಾರಾಧನೆ "
" ಶ್ರೀ ಶ್ರೀನಿವಾಸ ತೀರ್ಥರ ವದನಾರವಿಂದದಲ್ಲಿ ಹೊರಹೊಮ್ಮಿದ ಶ್ರೀ ಬ್ರಹ್ಮಣ್ಯ ತೀರ್ಥರ ವೈಭವ "
ಶ್ರೀಮಾನತ್ರ ದಿವಾಕರಃ ಕರುಣಯಾ -
ಬ್ರಹ್ಮೌಘವಾಂಛಾಕೃತೇ 
ಶ್ರೀಮತ್ಪೂಗವನಾನ್ವವಾಯ-
ತಿಲಕಾದ್ರಾಮಾರ್ಯ ವಿಪ್ರೋತ್ತಮಾತ್ ।
ಲಬ್ಧ್ವಾ ಜನ್ಮ ನೃಸಿಂಹ ಸೇವನರತಃ -
ಕ್ಷೋಣೀಸುಚಿಂತಾಮಣಿ: 
ಶ್ರೀ ಬ್ರಹ್ಮಣ್ಯ ಇತೀರಿತಃ ಸ ಭುವಿ: ನಃ -
ಕುರ್ಯಾನ್ಮುನಿರ್ಮಂಗಲಮ್ ।। 1 ।।                
ಶ್ರೀ ಸೂರ್ಯದೇವನೇ ಈ ಭುವಿಯಲ್ಲಿ ಬ್ರಾಹ್ಮಣ ವೃಂದ ಅಭೀಷ್ಟ ಸಿದ್ಧಿಗೋಸ್ಕರ - ಕರುಣೆಯಿಂದ ಶ್ರೀಮತ್ಪೂಗವನ ವಂಶಕ್ಕೆ ತಿಲಕಪ್ರಾಯರಾದ ಶ್ರೀ ರಾಮಾಚಾರ್ಯರೆಂಬ ವಿಪ್ರೋತ್ತಮರಿಂದ ಜನ್ಮವನ್ನು ಪಡೆದು - ಶ್ರೀ ನೃಸಿಂಹನ ಸೇವೆಯಲ್ಲಿ ಆಸಕ್ತರಾಗಿ - ಭೂಮಿಯಲ್ಲಿ ಚಿಂತಾಮಣಿಪ್ರಾಯರಾಗಿ - ಶ್ರೀ ಬ್ರಹ್ಮಣ್ಯ ತೀರ್ಥರೆಂಬುದಾಗಿ ಲೋಕದಲ್ಲಿ ಪ್ರಖ್ಯಾತರಾದರು. 
ಅಂಥಹಾ ಶ್ರೀ ಬ್ರಹ್ಮಣ್ಯ ಮುನಿಗಳು ಭೂಮಿಯಲ್ಲಿರುವ ನಮಗೆ ಮಂಗಲವನ್ನು ಉಂಟು ಮಾಡಲಿ !
ಪೂರ್ವಂ ಶುಭ್ರತನು: ಕಲಾನಿಧಿರಸೌ -
ಲೀಢ್ಯಸ್ತಮೋಜಿಹ್ವಯಾ 
ಮಾಲಿನ್ಯಸ್ಯ ವಶೋ ಯದೀಯಯಶಸಾಂ -
ತ್ರೈಲೋಕ್ಯಗಾನಾಂ ಕರ್ಯೈ: ।
ಧಾವಲ್ಯಂ ಪುನರಾಪ್ತವಾನಪಿ -
ಹ್ರಸತ್ಯನ್ಯಪ್ರಭಾಲಾಭತಃ 
ಶ್ರೀ ಬ್ರಹ್ಮಣ್ಯ ಯತೀಶ್ವರಃ ಸ ಭುವಿ: -
ನಃ ಕುರ್ಯಾತ್ಪರಂ ಮಂಗಲಮ್ ।। 2 ।।
ಶುಭ್ರ ಶರೀರವುಳ್ಳ ಚಂದ್ರನೂ - ಮೊದಲಿಗೆ ಕತ್ತಲೆಯ ಜಿಹ್ವೆಯಿಂದ ಗ್ರಸಿತನಾಗಿದ್ದು ಮಾಲಿನ್ಯಕ್ಕೆ ವಶನಾಗಿ - ಮೂರ್ಲೋಕದಲ್ಲಿಯೂ ಹರಡಿರುವ ಯಶಸ್ಸುಳ್ಳ ಯಾವ ಈ ಶ್ರೀ ಬ್ರಹ್ಮಣ್ಯ ತೀರ್ಥರೆಂಬ ಸೂರ್ಯನ ಕಿರಣಗಳಿಂದಲೇ ಶುಭ್ರತ್ವವನ್ನು ಪಡೆದನು. 
ಹಾಗಿದ್ದಾಗ್ಯೂ ದಿನೇ ದಿನೇ ಕ್ಷಯಿಸುವನು. 
ಇದಕ್ಕೆ ಕಾರಣವೆಂದರೆ.... 
ಸ್ವಯಂ ಪ್ರಭೆಯಿಲ್ಲದೇ ಇನ್ನೊಬ್ಬರ ಪ್ರಭೆಯನ್ನು ಅವಲಂಬಿಸಿರುವುದು. 
ಭೂಮಿಯಲ್ಲಿ ಅಂಥಹಾ ಸ್ವಯಂ ಪ್ರಭಾವಂತರೂ ಮತ್ತು ಇತರರಿಗೆ ಪ್ರಭಾಪ್ರದರೂ ಎಂದು ಪ್ರಸಿದ್ಧರಾದ ಶ್ರೀ ಬ್ರಹ್ಮಣ್ಯ ಯತೀಶ್ವರರೂ ನಮಗೆ ಪರಮ ಮಂಗಲವನ್ನು ಉಂಟು ಮಾಡಲಿ !!
ಯದ್ವಾದಭಿಧಸಿಂಹನಾದಮತುಲಂ -
ವಾದೀಂದ್ರದಂತಾವಲಾ: 
ಶೃಣ್ವಂತಃ ದೂರತೋsಪಿ ಚಕಿತಾ -
ದಿಕ್ಯಂದರಂ ಪ್ರಾದ್ರವನ್ ।
ಸೋsಯಂ ಶ್ರೀ ಯತಿರಾಜ ಶೂರ -
ಮೃಗರಾಟ್ ವೃಂದಾವನೇ ಸಂವಸನ್
ಶ್ರೀ ಬ್ರಹ್ಮಣ್ಯವರಾಭಿಧಃ ಸ ಭುವಿ: ನಃ -
ಕುರ್ಯಾತ್ಪರಂ ಮಂಗಲಮ್ ।। 3 ।।
ಯಾರ ವಾದವೆಂಬ ಅತುಲ ಸಿಂಹನಾದವನ್ನು ಶ್ರವಣ ಮಾಡಿ - ವಾದೇಂದ್ರರೆಂಬ ಗಜಗಳು ದೂರದಿಂದಲೇ ಹೆದರಿ ದಿಕ್ಕುಗಳೆಂಬ ಗುಹೆಗಳನ್ನು ಕುರಿತು ಓಡುವವೋ - ಅಂಥಹಾ ಯತಿರಾಜ ಶೂರ ಸಿಂಹರಾಗಿರತಕ್ಕ ಶ್ರೀ ಬ್ರಹ್ಮಣ್ಯ ತೀರ್ಥರೆಂಬುವರು ವೃಂದಾವನದಲ್ಲಿ ವಾಸಿಸುತ್ತಾ ಭೂಮಿಯಲ್ಲಿರುವ ನಮಗೆ ಸನ್ಮಂಗಲವನ್ನು ಉಂಟು ಮಾಡಲಿ !!!  
ಯಸ್ಯ ಶ್ರೀಕರ ಪಂಕಜಾದೃತ -
ಮಹಾಮಂತ್ರಾಕ್ಷತೈ: ಸಾಧಿತಾಃ 
ಸರ್ವೇsಭೀಷ್ಟಚಯಾ: ಸುರದ್ರುಮ-
ವರೈರ್ದಾತುಂ ನ ಶಕ್ಯಾ ಹಿ ತೇ ।
ಯದ್ವೃಂದಾವನ ಮೃತ್ತಿಕಾ-
ಧೃತಿರಹೋ ಕ್ರೂರಗ್ರಹೋದ್ಭುಂಜಿಕಾ 
ಶ್ರೀ ಬ್ರಹ್ಮಣ್ಯ ಯತೀಶ್ವರಃ ಸ ಭುವಿ: ನಃ -
ಕುರ್ಯಾತ್ಪರಂ ಮಂಗಲಮ್ ।। 4 ।।
ಯಾರ ಸಂಪದ್ಯುಕ್ತವಾದ ಕರಕಮಲದಿಂದ ಅನುಗೃಹೀತ ಮಂತ್ರಾಕ್ಷತೆಗಳಿಂದ ಸಾಧಿತವಾದ ಸರ್ವಾಭೀಷ್ಟ ಸಮೂಹಗಳೇನುಂಟೋ - ಆ ಎಲ್ಲವನ್ನೂ ಕೊಡಲು ದೇವ ತರುಗಳಿಂದಲೂ ಶಕ್ಯವಿಲ್ಲ. 
ಯಾರ ವೃಂದಾವನಗತ ಮೃತ್ತಿಕಾ ಧಾರಣವು ಕ್ರೂರ ಗ್ರಹಗಳನ್ನೂ ಭಂಜನ ಮಾಡುವುದೇನು ಆಶ್ಚರ್ಯ !
ಅಂಥಹಾ ಶ್ರೀ ಬ್ರಹ್ಮಣ್ಯ ಯತೀಶ್ವರರು ಭೂಮಿಯಲ್ಲಿರುವ ನಮಗೆ ಉತ್ತಮ ಮಂಗಲವನ್ನು ಉಂಟು ಮಾಡಲಿ !!!!
ಶ್ರೀಭಾಸ್ವನಪರೋsಯಮಾಂತರ-
ತಮಸ್ತೋಮಸ್ಯ ಸಂಭೇದಕೋ 
ಗೋಭಿಶ್ಚತ್ರ ಸುವರ್ಣರಮ್ಯ-
ತನುಭಿ ಸಧ್ವಬ್ಧ ಸಂಹರ್ಷಕಃ ।
ಕಿಂಚಾತಿಗ್ಮರುಚಿರ್ಮನುಷ್ಯ -
ಸದೃಶಾಂ ಹರ್ಷೇಣ ದಶಾಕೃತಿ:
ಶ್ರೀ ಬ್ರಹ್ಮಣ್ಯ ಯತೀಶ್ವರಃ ಸ ಭುವಿ: ನಃ -
ಕುರ್ಯಾತ್ಪರಂ ಮಂಗಲಮ್ ।। 5 ।।
ಹೃದಯಾಂತಸ್ಥಿತವಾದ ತಮಸ್ಸಮೂಹವನ್ನು ಭೇದಿಸುವ ಇವರು - ಮತ್ತೂಬ್ಬ ಸಂಪದ್ಯುಕ್ತನಾದ ಸೂರ್ಯನೇ ಸರಿ !
ಆಶ್ಚರ್ಯಕರವಾದ ಹೊಂಬಣ್ಣದ ರಮ್ಯಾಕೃತಿಯುಳ್ಳ ಕಿರಣಗಳಿಂದ - ಸಾಧುಗಳೆಂಬ ಕಮಲಗಳಿಗೆ ವಿಕಾಸವನ್ನುಂಟು ಮಾಡುವವರೂ ಮತ್ತು ಇವರು ಮನುಷ್ಯರ ಕಣ್ಣಿಗೆ ಹರ್ಷದಿಂದ ನೋಡಲು ಯೋಗ್ಯವಾದ ಸ್ವರೂಪವುಳ್ಳ - ಶಾಂತ ತೇಜೋ ಮೂರ್ತಿಗಳು. 
ಇಂಥಹಾ ಶ್ರೀ ಬ್ರಹ್ಮಣ್ಯ ತೀರ್ಥ ಮಹಾ ಸ್ವಾಮಿಗಳು ನಮಗೆ ಅತ್ಯಂತ ಮಂಗಲವನ್ನು ಉಂಟು ಮಾಡಲಿ !!!!!
ಸಂಸಾರಂಬುನಿಧೌ ತರಂಗನಿಚಯೈ: -
ಸಂತಾಡಿತಾನಾಂ ಸತಾಮ್ 
ನಿತ್ಯಂ ಪಾರಮತಃ ಪರಂ ಮೃಗ-
ಯತಾಮಾಲಂಬನಾಪೇಕ್ಷಿಣಾಮ್ ।
ಜ್ಞಾನಾಭಿಖ್ಯದೃಡೋಡುಪೇನ -
ವಿಲಸನ್ ಸಂತಾರಕೋ ನಾವಿಕಃ 
ಶ್ರೀ ಬ್ರಹ್ಮಣ್ಯವರಾಭಿಧಃ ಸ ಭುವಿ: ನಃ -
ಕುರ್ಯಾತ್ಪರಂ ಮಂಗಲಮ್ ।। 6 ।।
ಸಂಸಾರವೆಂಬ ಸಮುದ್ರದಲ್ಲಿ ಅಲೆಗಳ ಸಮೂಹದ ಹೊಡೆತಕ್ಕೆ ಸಿಕ್ಕಿಬಿದ್ದು ನಿತ್ಯವೂ ಇದರಿಂದಾಚೆಯ ದಡವನ್ನು ಹುಡುಕುತ್ತಾ - ಆಶ್ರಯವನ್ನು ಅಪೇಕ್ಷಿಸುವ ಸಜ್ಜನರಿಗೋಸ್ಕರ - ಜ್ಞಾನವೆಂಬ ಹೆಸರಿಂದ ದೃಢವಾದ ತೆಪ್ಪದಿಂದ ದಾಟಿಸಲು ಸುಪ್ರಸಿದ್ಧ ನಾವಿಕನಂತಿರುವ ಶ್ರೀ ಬ್ರಹ್ಮಣ್ಯ ತೀರ್ಥ ಗುರುವರ್ಯರು ಭುವಿಯಲ್ಲಿರುವ ನಮಗೆ ಸನ್ಮಂಗಲವನ್ನು ಉಂಟು ಮಾಡಲಿ !!!!!! 
ಯದ್ವೃಂದಾವನಮಿಂದಿರೇಶ ಕರುಣಾ-
ವೃಂದಸ್ಯ ಸಂದಾಯಕಂ 
ಮಂದಾರದ್ರುಮಮವಜ್ಜನೇಷ್ಟ-
ನಿಚಯಂ ಸಂಪಾದಯತ್ಪಾವಕಮ್ ।
ಸಾಂದ್ರಾನಂದಕದಂಬಮೂರ್ತಿ-
ರುಚಿರಂ ಸದ್ವೃಂದ ಸಂಸೇವಿತಂ         
ಶ್ರೀ ಬ್ರಹ್ಮಣ್ಯವರಾಭಿಧಃ ಸ ಭುವಿ: ನಃ -
ಕುರ್ಯಾತ್ಪರಂ ಮಂಗಲಮ್ ।। 7 ।।
ಯಾರ ಪರಮ ಪವಿತ್ರವಾದ ವೃಂದಾವನವು ಶ್ರೀ ಇಂದಿರೇಶನ ಕರುಣಾ ಸಮೂಹವನ್ನು ಸಾಧಿಸಿ ಕೊಡುವುದೋ - ದೇವ ಮಂದಾರ ವೃಕ್ಷದಂತೆ ಜನಗಳ ಇಷ್ಟ ಸಮೂಹವನ್ನು ಸಂಪಾದಿಸಿ ಕೊಡುವುದೋ - ಪೂರ್ಣಾನಂದ ಸಮ್ಮೋಹನಾದ ಶ್ರೀ ಹರಿ ಪರಮಾತ್ಮನ ದಿವ್ಯ ಸನ್ನಿಧಾನದಿಂದ ಮನೋಹರವಾದುದೋ - ಆದುದರಿಂದಲೇ ಸಜ್ಜನ ವೃಂದದಿಂದ ಸಂಸೇವಿತವೋ ಅಂಥಹಾ ಶ್ರೀ ಬ್ರಹ್ಮಣ್ಯ ಯತಿವರರು ನಮಗೆ ಶುಭವನ್ನುಂಟು ಮಾಡಲಿ !!!!!!!
ಸೇವ್ಯಾ ಕಣ್ವನದೀ ಪವಿತ್ರ ಸಲೀಲಾ-
ರಾಮಾಪ್ರಮೇಯೋ ಹರಿಃ 
ಕ್ಷೇತ್ರಂ ಜ್ಞಾನ ಮಂಟಪಾಖ್ಯಮನಿಶಂ -
ಹ್ಯಬ್ಬೂರುನಾಮ್ನಾಸ್ತಿಯಾತ್ ।
ತದ್ರಮ್ಯಸ್ಥಲ ಭೂಷಣಂ -
ವರಗುರುರ್ವೃಂದಾವನಂ ತದ್ಗತಃ 
ಶ್ರೀ ಬ್ರಹ್ಮಣ್ಯ ಯತೀಶ್ವರಶ್ಚ ಸ ಭುವಿ: ನಃ -
ಕುರ್ಯಾತ್ಪರಂ ಮಂಗಲಮ್ ।। 8 ।।
ಸೇವಿಸಲು ಯೋಗ್ಯವಾದ ಪವಿತ್ರ ಜಲವುಳ್ಳ ಕಣ್ವನದೀ - ಶ್ರೀ ರಾಮ ಪ್ರಮೇಯ ಸ್ವಾಮಿ ಜ್ಞಾನ ಮಂಟಪಾಖ್ಯ ಅಬ್ಬೂರು ಕ್ಷೇತ್ರ - ಅಂಥಹಾ ರಮ್ಯಾ ಸ್ಥಳಕ್ಕೆ ಭೂಷಣವಾದ ವರಗುರು ಶ್ರೀ ಬ್ರಹ್ಮಣ್ಯ ತೀರ್ಥರ ವೃಂದಾವನ ಹಾಗೂ ಆ ವೃಂದಾವನದಲ್ಲಿ ಸಂಸ್ಥಿತರಾಗಿರುವ ಶ್ರೀ ಬ್ರಹ್ಮಣ್ಯ ತೀರ್ಥರು ಭೂಮಿಯಲ್ಲಿ ವಾಸಿಸುವ ನಮಗೆ ಉತ್ಕೃಷ್ಟವಾದ ಶುಭವನ್ನು ಉಂಟು ಮಾಡಲಿ !!!!!!!!
ಇತ್ಯೇದ್ವರ ಮಂಗಲಾಷ್ಟಕಮಿದಂ-
ಶ್ರೀ ಶ್ರೀನಿವಾಸೋದಿತಮ್ 
ಸರ್ವಾಭೀಷ್ಟಕರಂ ಪ್ರಭಾತ -
ಸಮಯೇ ಭಕ್ತ್ಯಾ ಪಠನ್ ಮಾನವಃ ।
ಮಾಂಗಲ್ಯಾಡಿ ಶುಭಕ್ರಿಯಾಸು ಚ -
ವದನ್ ಬ್ರಹ್ಮಣ್ಯ ಕಾರುಣ್ಯತಃ 
ಸುಜ್ಞಾನ ವಿವಿದಾರ್ಥ ಸಿದ್ಧಿಮಪಿ ಸ -
ಪ್ರಾಪ್ನೋತ್ಯಸೌ ಮಂಗಲಮ್ ।। 9 ।।
 ಈ ರೀತಿಯಾಗಿ ಶ್ರೀ ಶ್ರೀನಿವಾಸ ನಾಮಕನಿಂದ ವಿರಚಿತವಾದ - ಸರ್ವಾಭೀಷ್ಟಕರವಾದ ಈ ಮಂಗಳಾಷ್ಟಕವನ್ನು ಪ್ರಾತಃ ಕಾಲದಲ್ಲಿ ಭಕ್ತಿಯಿಂದ ಪಠಿಸುವ ಮಾನವನು ಹಾಗೂ ಮಾಂಗಲ್ಯ ಮಹೋತ್ಸವಾದಿ ಶುಭ ಕಾರ್ಯಗಳಲ್ಲಿ ಪಾರಾಯಣ ಮಾಡತಕ್ಕವನು ಶ್ರೀ ಬ್ರಹ್ಮಣ್ಯ ತೀರ್ಥರ ಕಾರುಣ್ಯದಿಂದ ಸುಜ್ಞಾನವನ್ನೂ - ವಿವಿಧ ಪುರುಷಾರ್ಥ ಸಿದ್ಧಿಯನ್ನೂ - ಪರಮ ಮಂಗಲವನ್ನೂ ಹೊಂದುವನು. 
" ಶ್ರೀ ಅಗ್ನಿದೇವರ ಅಂಶ ಸಂಭೂತರಾದ ಶ್ರೀ ಶ್ರೀನಿವಾಸ ತೀರ್ಥ ವಿರಚಿತ ಶ್ರೀ ಸೂರ್ಯಾಂಶ ಶ್ರೀ ಬ್ರಹ್ಮಣ್ಯ ತೀರ್ಥ ಮಂಗಳಾಷ್ಟಕ ಸಮಾಪ್ತವಾಯಿತು "
by ಆಚಾರ್ಯ ನಾಗರಾಜು ಹಾವೇರಿ 
     ಗುರು ವಿಜಯ ಪ್ರತಿಷ್ಠಾನ
***

No comments:

Post a Comment