Thursday, 30 September 2021

prahladavarada harivittalaru dasaru ಪ್ರಹ್ಲಾದವರದ ಹರಿವಿಠ್ಠಲರು ದಾಸರು

 ..

Name: Prahladavarada harivittalaru

Period:

Ankita: prahladavarada shreehari vittala


ಶ್ರೀ ಪ್ರಹ್ಲಾದವರದ ಹರಿವಿಠ್ಠಲರು 

ಹೆಸರು : ಶ್ರೀ ರಾಘವೇಂದ್ರರಾಯರು., ಬೆಂಗಳೂರು

ಅಂಕಿತ : ಪ್ರಹ್ಲಾದ ವರದ ಶ್ರೀ ಹರಿ ವಿಠ್ಠಲ

ಶ್ರೀ ರಾಘವೇಂದ್ರರಾಯರು ಉಭಯ ಭಾಷಾ ಕೋವಿದರು. ಇವರು ತಮ್ಮ ಇಡೀ ಜೀವಮಾನದಲ್ಲಿ ಒಂದು ಸಲವಾದರೂ ಏಕಾದಶೀ ವ್ರತ ಮತ್ತು ಏಕಾದಶೀ ಜಾಗರಣೆಯನ್ನು ಬಿಟ್ಟವರಲ್ಲ.

ಶ್ರೀ ರಾಘವೇಂದ್ರರಾಯರು ಶ್ರೀ ವಿಜಯರಾಯರ ಮತ್ತು ಶ್ರೀ ಮಂತ್ರಾಲಯ ಪ್ರಭುಗಳ ಅಂತರಂಗ ಭಕ್ತರು.

ಶ್ರೀ ರಾಯರ ಸ್ತೋತ್ರ ಪದ...

ರಾಗ : ದರ್ಬಾರಿ        ತಾಳ : ಆದಿ

ಬಾರೋ ಗುರು ರಾಘವೇಂದ್ರ -

ಸದ್ಗುಣಸಾಂದ್ರ ।। ಪಲ್ಲವಿ ।।

ಭಾವಜನಯ್ಯನ ಭಾವದಿ ಭಜಿಸುವ ।

ಕೋವಿದರರಸನೇ ಕಾಯೋ -

ದೇವನ ದೂತ ।। ಚರಣ ।।

ಸುಧೀಂದ್ರ ಯತಿವರ -

ಕರಕಮಲಜಕಂಜ ।

ಕುಧರಜ ತಟ ವಾಸ -

ಪರಮೇತೇಜ: ಪುಂಜ ।। ಚರಣ ।।

ಪ್ರಹ್ಲಾದ ವರದ ಶ್ರೀ-

ಹರಿ ವಿಠ್ಠಲಗೆ ಪ್ರೀಯ ।

ಆಹ್ಲಾದವೆಮಗಿತ್ತು ನಿರುತ 

ಪೊರೆಯೋ ಜೀಯ್ಯಾ ।। ಚರಣ ।।


ಇನ್ನೊಂದು ಪದ್ಯದಲ್ಲಿ...


ರಾಗ : ಕಾಂಬೋಧಿ     ತಾಳ : ಝ೦ಪೆ


ಧೀರೇಂದ್ರ ಸುಕರಾರ್ಚಿತ -

ಗುರು ರಾಘವೇಂದ್ರ ।। ಪಲ್ಲವಿ ।।


ನೀರದಪ್ರಕಾಶರವರ -

ವೃಂದಾವನಸ್ಥಿತ ।। ಅ ಪ ।।


ಸುಂದರ ಬದರಿಯಿಂದ -

ತಂದ ಶಿಲೆಯಿಂದ ।

ಚೆಂದಾಗಿ ರಚಿಸಿದ -

ವೃಂದಾವನದಿ ನಿಂತ ।। ಚರಣ ।।


ಮಂತ್ರಾಲಯಕೆ ಮಿಗಿಲು -

ತಂತ್ರವ ನಡೆಸುವ ।

ಯಂತ್ರವಾಹಕನ ದಾಸ -

ಶ್ರೀ ಗುರುರಾಜ ।। ಚರಣ ।।


ಮಂದಸ್ಮಿತಯುತ -

ಸುಂದರ ವಿಗ್ರಹ ।

ಮಂದ ಜನಕೆ ಆ-

ನಂದದಾಯಕ ।। ಚರಣ ।।


ತ್ರಿಷಣ ರೂಪನೆ ನಿತ್ಯ 

ಸುಫಲದಾಯಕನಾಗಿ ।

ಚಪಲತೆಯನು ಕಳೆದು -

ಅಪವರ್ಗ ಫಲವೀವೋ ।। ಚರಣ ।।

ನಿನ್ನ ಅಂತರ್ಯಾಮಿ 

ಘನ್ನ ಮಾರುತನೊಳು ।

ಚೆನ್ನಾಗಿ ಸೀತಾರಾಮರನ್ನ -

ನೀ ತೋರಿಸೋ ।। ಚರಣ ।।


ಫಣಿರಾಜ ಶಯನಗೆ -

ಮಣಿದು ಬಿನ್ನೈಸಿ ನಿತ್ಯ ।

ಬಣಗು ಸೇವಕರನ್ನು ಕ್ಷಣ -

ಬಿಡದೆಲೆ ಪೊರೆ ।। ಚರಣ ।।


ಪ್ರಹ್ಲಾದ ವರದ ಶ್ರೀ -

ಹರಿ ವಿಠ್ಠಲನ ಭಜಕ ।

ಸಹ್ಲಾದಾಗ್ರಜನಾದ -

ಪ್ರಹ್ಲಾದನವತಾರನೇ ।। ಚರಣ ।।

***


No comments:

Post a Comment