" ಶ್ರೀ ಮಧ್ವ ದೀಕ್ಷಾ - 1 "
" ಶ್ರೀಮನ್ಮಧ್ವಮತ ಸಿದ್ಧಾಂತ ದೀಕ್ಷಾಬದ್ಧರು ಶ್ರೀ ವನಮಾಲಿ ಮಿಶ್ರರು "
ಉತ್ತರ ಭಾರತದಲ್ಲಿ ಮಧ್ವ ಮತದ ಅಭ್ಯುದಯ ಹಾಗೂ ಪ್ರಸಾರಗಳಿಗೆ ಕಾರಣರಾದ ಕೆಲವು ವಿದ್ವದ್ವೈಷ್ಣವ ಚೇತನಗಳಲ್ಲಿ ಶ್ರೀ ವನಮಾಲಿ ಮಿಶ್ರರೂ ಒಬ್ಬರು.
ವೃಂದಾವನದ ಹತ್ತಿರ ತ್ರಿಯುಗ ಪುರದಲ್ಲಿ ಸುಪ್ರತಿಷ್ಠಿತವಾದ ಭಾರದ್ವಾಜ ಗೋತ್ರದ ಒಂದು ಬ್ರಾಹ್ಮಣ ಕುಟುಂಬದಲ್ಲಿ ಶ್ರೀ ವನಮಾಲಿ ಮಿಶ್ರರು ಜನಿಸಿದರು.
ಶ್ರೀ ವನಮಾಲಿ ಮಿಶ್ರರ ಕಾಲ : ಕ್ರಿ ಶ 1650 - 1720
ಶ್ರೀ ವನಮಾಲಿ ಮಿಶ್ರರು ಬಿಹಾರ ಮಾಧ್ವ ಮತಾನುಯಾಯಿಗಳಾದ ಗಯಾವಾಡರ ವಂಶದರಾಗಿರಬಹುದೆಂದು ವಿದ್ವಾಂಸರು ತರ್ಕಿಸಿದ್ದಾರೆ.
ಉತ್ತರಾದಿ ಮಠದ ಶ್ರೀ ವಿದ್ಯಾಧೀಶ ಶ್ರೀಪಾದಂಗಳವರ ಕಾಲದಿಂದಲೇ ಗಯಾ ಕ್ಷೇತ್ರದ ವಿಷ್ಣು ಪಾದದ ಅರ್ಚಕರು ಮಾಧ್ವರಾಗಿದ್ದೂ ಎಲ್ಲರಿಗೂ ತಿಳಿದ ವಿಷಯ.
ಶ್ರೀ ವನಮಾಲಿ ಮಿಶ್ರರು " ನಿಂಬಾರ್ಕ ಮತಾನುಯಾಯಿ " ಗಳೆಂದು - ಶ್ರೀ ದಾಸಗುಪ್ತರಂಥಾ ವಿಮರ್ಶಕ ಪಂಡಿತರು ಬರೆದದ್ದು ಸೋಜಿಗದ ಸಂಗತಿಯಾಗಿದೆ.
ಶ್ರೀ ವನಮಾಲಿ ಮಿಶ್ರರು ಬರೆದ ಅಥವಾ ಶ್ರೀ ವನಮಾಲಿ ಮಿಶ್ರರ ಮೇಲೆ ಗ್ರಂಥಗಳನ್ನು ನೋಡೊದರೆ - ಶ್ರೀ ವನಮಾಲಿ ಮಿಶ್ರರು.....
" ಅಪ್ಪಟ ಮಾಧ್ವರೆಂಬುದು "
ಯಾರಿಗಾದರೂ ತಿಳಿಯುವಂಥಾ ಮಾತು.
" ಗ್ರಂಥಗಳು "
1. ಲೀಲಾ ಪುರುಷೋತ್ತಮ ಶ್ರೀ ಕೃಷ್ಣ
2. ಶ್ರುತಿ ಸಿದ್ಧಾಂತ ಸಂಗ್ರಹಃ
3. ಮಧ್ವ ಮುಖಾಲಂಕಾರ
4. ಗೀತಾ ಗೂಢಾರ್ಥ ಚಂದ್ರಿಕಾ
5. ವೇದಾಂತ ಸಿದ್ಧಾಂತ ಸಂಗ್ರಹಃ
6. ಮಧ್ವಾಧ್ವ ಕಂಟಕೋದ್ಧಾರ
7. ತರಂಗಿಣೀ ಸೌರಭ
8. ನ್ಯಾಯಾಮೃತ ಸೌಗಂಧ್ಯಾ
ನ್ಯಾಯಾಮೃತಕ್ಕೆ ವ್ಯಾಖ್ಯಾನವಾಗಿಯೂ - ಅದ್ವೈತಸಿದ್ಧಿಗೆ ಖಂಡನವಾಗಿಯೂ....
ಶ್ರೀ ವಿಜಯೀ೦ದ್ರತೀರ್ಥರ ವಿದ್ಯಾ ಶಿಷ್ಯರೂ - ಶ್ರೀ ವ್ಯಾಸರಾಜ ಮಠದ ಶಿಷ್ಯರೂ ಆದ ವಿದ್ವಾನ್ ಶ್ರೀ ವ್ಯಾಸರಾಮಾಚಾರ್ಯರು [ ತರಂಗಿಣೀ ರಾಮಾಚಾರ್ಯರು ].....
" ನ್ಯಾಯಾಮೃತ ತರಂಗಿಣೀ "
ಯೆಂಬ ಗ್ರಂಥವನ್ನು ರಚಿಸಿದರು.
" ನ್ಯಾಯಾಮೃತ ತರಂಗಿಣೀ " ಗೆ ಖಂಡನವಾಗಿ ಶ್ರೀ ಬ್ರಹ್ಮಾನಂದ ಸರಸ್ವತಿಗಳು " ಗುರು ಮತ್ತು ಲಘು ಬ್ರಹ್ಮಾನಂದೀಯಾ " ಯೆಂಬ ಗ್ರಂಥವನ್ನು ರಚಿಸಿದರು - ಇವು ಅದ್ವೈತಸಿದ್ಧಿಗೆ ವ್ಯಾಖ್ಯಾನವಾಗಿಯೂ ಮತ್ತು ನ್ಯಾಯಾಮೃತ ತರಂಗಿಣೀಗೆ ಖಂಡನಾ ರೂಪವಾಗಿದೆ.
ಇದಾದನಂತರ ಶ್ರೀ ವನಮಾಲಿ ಮಿಶ್ರರು.....
" ಗುರು ಬ್ರಹ್ಮಾನಂದೀಯಾ " ಕ್ಕೆ ಖಂಡನಾ ರೂಪವಾಗಿ.....
" ನ್ಯಾಯಾಮೃತ ಸೌಗಂಧ್ಯ "
ಮತ್ತು
" ಲಘು ಬ್ರಹ್ಮಾನಂದೀಯಾ " ಕ್ಕೆ.....
" ತರರಂಗಿಣೀ ಸೌರಭ "
ಯೆಂಬ ಅತ್ಯದ್ಭುತ ಗ್ರಂಥಗವನ್ನು ರಚಿಸಿ ಶ್ರೀಮನ್ಮಧ್ವ ಸಿದ್ಧಾಂತಕ್ಕೆ ವೈಶಿಷ್ಟ್ಯ ಪೂರ್ಣಾವಾದ ಸೇವೆಯನ್ನು ಸಲ್ಲಿಸಿದ್ದಾರೆ.
ಮೇಲ್ಕಂಡ ಶ್ರೀ ವನಮಾಲಿ ಮಿಶ್ರರಿಂದ ರಚಿತವಾದ ಗ್ರಂಥಗಳನ್ನು ನೋಡಿದರೆ....
ಶ್ರೀ ವನಮಾಲಿ ಮಿಶ್ರರಿಗಿರುವ " ಮಧ್ವ ಸಿದ್ಧಾಂತ ದೀಕ್ಷೆಯನ್ನೂ - ಮತ ದಾರ್ಢ್ಯವನ್ನೂ - ಶ್ರದ್ಧಾ ಜಾಡ್ಯವನ್ನೂ ಎತ್ತಿ ತೋರುತ್ತವೆ.
ವಾಗ್ವಿಭೂತಿಗಳಿಂದ ದಕ್ಷಿಣದ ಕೊಂಕಣ ಪಟ್ಟಯ ಕರಾವಳಿ ಪ್ರಾಂತದಲ್ಲಿ ಜನಿಸಿದ.....
" ಶ್ರೀ ಮಧ್ವ ಮಹಾ ಮುನಿಗಳ ದ್ವೈತ ಸಿದ್ಧಾಂತವು ಬಂಗಾಲ ಉಪ ಸಾಗರದ ವರೆಗೂ ತನ್ನ ತತ್ತ್ವವಾದದ ಕಹಳೆಯನ್ನು ಮೊಳಗಿಸಿ ವಿಶ್ವ ಪ್ರತಿಷ್ಠಿತ ಸೌಕರ್ಯ " ಒದಗಿಸಿತು.
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
*****
No comments:
Post a Comment