shri gurubyO namaha...hari Om...
bhAdrapada bahuLa dwAdashi is the ArAdhane of shri yatirAja woDeyaru, biDi sanyAsigaLu in sOsale vyAsarAja maTa.
ArAdhane: bhAdrapada bahuLa dwAdashI
Brindavana: tumkuru
bEDi krishNa dEvara vigraha was worshipped by him. It was handed over to Sosale vyAsarAja maTa samsthana post his niryANa as per his orders. It can be seen in the daily pUje in the samsthAna even today.
He established the maTa at Tumakuru.
shri yatirAja wodeya varada gOvindA gOvindA...
shri krishnArpaNamastu...
***
ಶ್ರೀಗುರುಭ್ಯೋ ನಮಃ
ಶ್ರೀವ್ಯಾಸರಾಜ ಸಂಸ್ಥಾನದ ಶ್ರೀಪಾದಂಗಳವರಿಂದ ಮಹಾಸಂಸ್ಥಾನಪೂಜೆಯು ವೈಭವದಿಂದ ನಡೆಯುತ್ತಿದೆ. ನೆರೆದ ಭಕ್ತಸಮೂಹಕ್ಕೆ ಶ್ರೀಪಾದಂಗಳವರು ಸಂಸ್ಥಾನ ದೇವರುಗಳ ದರ್ಶನವನ್ನು ಮಾಡಿಸುತ್ತಿದ್ದಾರೆ, ಪದ್ಧತಿಯಂತೆ ಶ್ರೀಗಳು ಬಂಗಾರದ ಬೇಡಿಯಿಂದ ಕೂಡಿದ ಶ್ರೀಕೃಷ್ಣದೇವರ ದರ್ಶನವನ್ನು ಮಾಡಿಸುವಾಗ ಶಿಷ್ಯರು ಹೇಳುವರು ತುಮಕೂರು ಬೇಡಿ ಕೃಷ್ಣದೇವರು ಎಂದು, ಎಲ್ಲರಿಗೂ ಆಶ್ಚರ್ಯ! ಅರೆ ಇದೇನಿದು ಬೇಡಿ ಹಾಗೂ ಒಂದು ಊರನ್ನು ಹೆಸರಿಸುವ ಮೂಲಕ ಪ್ರತಿಮೆಯನ್ನು ಪರಿಚಯಿಸುತ್ತಿರುವರಲ್ಲ ಎಂದು, ಇದುವೇ ಆ ಪ್ರತಿಮೆಯ ವೈಶಿಷ್ಟ್ಯ, ಪರಂಪರೆಯ ಹೇಳಿಕೆಯಂತೆ, ಶ್ರೀವ್ಯಾಸರಾಜರ ಅನೇಕ ಸನ್ಯಾಸಿ ಶಿಷ್ಯರಲ್ಲಿ ಶ್ರೀಯತಿರಾಜ ಒಡೆಯರೂ ಒಬ್ಬರು, ಗುರುಗಳಿಂದ ಲಬ್ಧವಾದ ಶ್ರೀಕೃಷ್ಣ ಪ್ರತೀಕವನ್ನು ಪೂಜಿಸುತ್ತಾ ಅಂತೆಯೇ ಸಿದ್ಧಾಂತ ಪ್ರಚಾರವನ್ನು ಮಾಡುತ್ತಾ ತುಮಕೂರಿನಲ್ಲಿ ಪ್ರಬಲರಾಗಿದ್ದ ಜೈನರನ್ನು ವಾದದಲ್ಲಿ ಗೆಲಿದು ಮಠವನ್ನು ನಿರ್ಮಿಸಿ ವಾಸಿಸುತ್ತಿರಲು, ರಾತ್ರಿಕಾಲದಲ್ಲಿ ಕೃಷ್ಣನು ಇವರ ಮೈಮೇಲೆ ಓಡಾಡಿದಂಥ ಅನುಭವವಾಗತೊಡಗಿದಾಗ ಆ ದೇವದೇವನನ್ನು ಓಡಾಡದಂತೆ ಬಂಗಾರದ ಬೇಡಿಯಿಂದ ಬಂಧಿಸುವರು,( ಅನಿತರ ಸಾಧಾರಣ ಭಕ್ತಿಪಾಶಕ್ಕೆ ಪ್ರತೀಕ ಆ ಬಂಗಾರದ ಬೇಡಿ) ಪ್ರತಿಮಾಂತರ್ಗತ ಪರಮಾತ್ಮನನ್ನು ಅವರು ಒಲಿಸಿಕೊಂಡ ಪರಿ ಎಂಥವರಿಗೂ ಅಚ್ಚರಿ ಮೂಡಿಸುವಂಥದ್ದು, ಇಂಥ ಮಹಾನುಭಾವರು ತುಮಕೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ವಿಶೇಷವಾಗಿ ತತ್ವ ಪ್ರಸಾರವನ್ನು ನಡೆಸಿ ಅಂತ್ಯಕಾಲದಲ್ಲಿ ಶ್ರೀಕೃಷ್ಣ ಪ್ರತಿಮೆಯನ್ನೂ, ತುಮಕೂರಿನಲ್ಲಿ ತಾವು ನಿರ್ಮಿಸಿದ್ದ ಮಠವನ್ನೂ ಮಹಾಸಂಸ್ಥಾನಕ್ಕೊಪ್ಪಿಸಿ ವೃಂದಾವನ ಪ್ರವೇಶವನ್ನು ಮಾಡಿದರು, ಈ ಕಾರಣದಿಂದಲೇ ಇಂದಿಗೂ ಆ ಪ್ರತಿಮೆಯನ್ನು ಪರಿಚಯಿಸುವಾಗ ತುಮಕೂರು ಬೇಡಿ ಕೃಷ್ಣದೇವರು ಎಂದೇ ಹೇಳುವರು,, ತುಮಕೂರಿನ ಎಲ್ಲ ಆಸ್ತಿಕರು ಹೆಮ್ಮೆ ಪಡಬೇಕಾದ ವಿಷಯವಿದು, ದೇಶದಾದ್ಯಂತ ಶಿಷ್ಯವರ್ಗವನ್ನು ಹೊಂದಿರುವ ದೊಡ್ಡ ಸಂಸ್ಥಾನ ತನ್ನ ನಿತ್ಯಪೂಜಾಕಾಲದಲ್ಲಿ ಒಂದು ಊರಿನ ಹೆಸರನ್ನು ಹೇಳುವುದು ಅಪೂರ್ವವಲ್ಲವೇ?? ನಮ್ಮ ತುಮಕೂರಿಗೆ ಇತಿಹಾಸದಲ್ಲಿ ಶಾಶ್ವತವಾದ ಸ್ಥಾನವನ್ನೂ ಹಾಗೆಯೇ ಕೀರ್ತಿಯನ್ನು ತಂದುಕೊಟ್ಟ ಮಹಾನುಭಾವರಾದ ಶ್ರೀಯತಿರಾಜ ಒಡೆಯರಿಗೆ ನಾವು ಪ್ರತಿಯಾಗಿ ನೀಡುವುದೇನು? ನಮಸ್ಕಾರ ಒಂದನ್ನುಳಿದು..,,🙏🙏🙏 ಇಂಥ ಮಹಾನುಭಾವರ ಆರಾಧನಾ ಪರ್ವಕಾಲದಲ್ಲಿ ಅವರ ಅಂತರ್ಯಾಮಿಗೆ ಅನಂತ ನಮನಗಳು
ಮರುತಾಚಾರ್ಯ 16 sep 2020
*********
2020
***
ಶ್ರೀ ವ್ಯಾಸರಾಜ ಮಠದ ಪಂಡಿತರಾದ ಶ್ರೀ ಮರುತ್ ಆಚಾರ್ಯರು, ತುಮಕೂರು ಇವರ ಹಳೆಯ ಲೇಖನ
👇🏽👇🏽👇🏽👇🏽👇🏽👇🏽👇🏽

No comments:
Post a Comment