Friday 1 February 2019

pradyumna teertharu mysore matha sagarakatte vyasaraja mutt yati S 01 jyeshta amavasya ಪ್ರದ್ಯುಮ್ನ ತೀರ್ಥರು





Shri Pradyumna Theertharu 

jEshTa bahuLa amAvAsya is the ArAdhane of shri pradyumna tIrtharu, the founder of sagarakaTTe maTa.

ಶರಣ್ಯವಿಠಲಾಸಕ್ತ೦ ಪ್ರಜ್ಞಾಪೀಠಸ್ಥ ಸ್ಥಾಪಕಮ್ ।
ಪ್ರಮಾಣಜ್ಞ೦ ಪ್ರಮೇಯಜ್ಞ೦ ಪ್ರದ್ಯುಮ್ನಾಖ್ಯ ಗುರು೦ ಭಜೇ ।।

Shri Pradyumna Theertharu 

Founder of Sagarakatte Mutt Parampare

Ashrama Period 1920 - 1975

Ashrama Gurugalu – Sri Lakshmipriya Tirtharu, (Kundapura Vyasaraja Mutt)

Ashrama Shishyaru –  Sri Pragnaadhiraja Tirtharu

Vidya Gurugalu – Sri Vedanidhi Thirtharu of Sripadaraja Mutt, Mulabagil

(For some time he had studied under Sri Satyadhyana Thirtharu also)
brindAvana: krishnamurthy puram, mysore

Vidya Shishyarugalu –

He was a very good scholar and had taught many about Sarvamoola and other granthaas.

Late Sri Narasimha Murthachar 


Late Sri Sheshagiri Achar, and many more


He was a great scholar and had several grihasta shishyarus.

info from wikipedia-->
Shri Pradyumna Theertharu is the first pontiff of Sagarakatte Vyasaraja Mutt, Sagarakatte.  Shri Pradyumna Theertharu got his pontificate from Shri Lakshmipriya Theertharu of Kundapura Vyasaraja Mata. Shri Pradyumna Theertharu ascended the peeta in 1920. 

Shri Pradyumna Theertharu was a great scholar and was the son of Pt.Vekataramanacharya of Dharawad, Karnataka. The Sagarakatte parampare starts with Shri Pradyumna Theertharu. Shri Pradyumna Theertharu studied under Shri Vedanidhi Theertharu of Shri Padaraja MathaMulbagaland became an eminent scholar par excellence.

Shri Pradyumna Theertharu entered brundavan in 1975 (Jaishta Amavasya - Raakshasa Samvatsara) at Krishnamurthypuram, Mysore.

Shri Pradyumna Theertharu gave ashrama to Shri Pragnaadhiraja Theertharu (PD Kaarthika Shukla Navami) and the current peetadhipathi is Shri 1008 Shri Pragnadhirajendra Theertharu.


He was a great scholar and had several grihasta shishyarus. He was an antaranga bhaktaru of shri rAyaru. 

shri pradyumna tIrtha varada gOvindA gOvindA.

*******

Mutt Branches 


1. Main Branch  Krishnamurthypuram Mysore

The current pontiff –

Shri Pragnadhirajendra Thirtharu (1990 – 2010+) peetha tyaga


2.  Sagarakatte, KRS  – where one can find Gopalakrishna Devaru, Pranadevaru, and the Vrundavana of Sri Pragnaadhiraja Theertharu, his disciple (whose aradhana is on Karthika Shukla Navami) (1975-1990.  In 1990 he breated his last after having a snake bite)


3. Jayalakshmipuram, Mysore – Rayara Mutt is there

*****

year 2021

ಶರಣ್ಯವಿಠಲಾಸಕ್ತಂ ಪ್ರಜ್ಞಾಪೀಠಸ್ಥ ಸ್ಥಾಪಕಮ್ /
ಪ್ರಮಾಣಜ್ಞಂ ಪ್ರಮೇಯಜ್ಞಂ ಪ್ರದ್ಯುಮ್ನಾಖ್ಯ ಗುರುಮ್ ಭಜೇ //

 ಶ್ರೀ ಸಾಗರಕಟ್ಟೆ ಮಠದ ಸ್ಥಾಪಕರೂ, ತಪಸ್ಸಂಪನ್ನರೂ, ಪರಮ ವೈರಾಗ್ಯ ಪುರುಷರೂ, ಶ್ರೀಪಾದರಾಜಮಠದ ಶ್ರೀ ಮೇಧಾನಿಧಿತೀರ್ಥರ ವಿದ್ಯಾಶಿಷ್ಯರೂ, ರಾಯರ ಪರಮ ಭಕ್ತರೂ, ರಾಯರಿಂದಲೇ ಆಜ್ಞಪ್ತರಾಗಿ ಕುಂದಾಪುರ ವ್ಯಾಸರಾಜ ಮಠದ ಯತಿಗಳಾದ ಶ್ರೀ ಲಕ್ಷ್ಮೀಪ್ರಿಯತೀರ್ಥರಿಂದ ಆಶ್ರಮವನ್ನು ಸ್ವೀಕರಿಸಿದ ಮಹಾನ್ ಚೇತನರೂ, ಹರಿದಾಸ ಸಾಹಿತ್ಯದ ಸೇವೆಯನ್ನು ಅತ್ಯಂತ ಭಕ್ತಿಯಿಂದ ಮಾಡಿದವರೂ, ಕರ್ನಾಟಕ ಹರಿದಾಸ ಸೈಂಟಿಫಿಕ್ ರಿಸರ್ಚ್ ಸೆಂಟರ್ ಮತ್ತು ಅದರ ವಿದ್ಯಾ ಸಂಸ್ಥೆಗಳಿಗೆ ಆದಿಪುರುಷರಾಗಿದ್ದವರು, 
ನರಹರಿ ಅಂಕಿತದಿಂದ ಅನೇಕ ಪ್ರಮೇಯಗರ್ಭ ಕೃತಿಗಳನ್ನು ರಚನೆ ಮಾಡಿದವರೂ, ಅನೇಕ ಗೃಹಸ್ಥ ಶಿಷ್ಯರಿಗೆ ಮಾರ್ಗದರ್ಶಕರೂ ಇಂದಿಗೂ ಮೈಸೂರು ಸಾಗರಕಟ್ಟೆ ಮಠದಲ್ಲಿನ ವೃಂದಾವನದಲ್ಲಿ ರಾರಾಜಿಸುತ್ತಿರುವ ಮಹಾನ್ ಯತಿಪುಂಗವರಾದ ಶ್ರೀ ಪ್ರದ್ಯುಮ್ನತೀರ್ಥರ ಆರಾಧನಾ ಮಹೋತ್ಸವದ ಶುಭವಂದನೆಗಳು.. ಶ್ರೀ ಶ್ರೀಗಳ ಕೃಪಾಕಟಾಕ್ಷ ವೀಕ್ಷಣ ನಮ್ಮ ಎಲ್ಲರಲ್ಲಿ ಸದಾ ಸದಾ ಇರಲಿ ಎಂದು ಪ್ರಾರ್ಥನೆ ಮಾಡುತ್ತಾ 

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
***


write-up by Sri Nagaraju Haveri
" ಈದಿನ [ 09.07.2021 Friday ] ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಜ್ಯೇಷ್ಠ ಬಹುಳ ಅಮಾವಾಸ್ಯೆ - ಶುಕ್ರವಾರ  - ಶ್ರೀ ಜಗನ್ನಾಥದಾಸರ ಕಾರುಣ್ಯ ಪಾತ್ರರೂ - ಶ್ರೀ ರಾಯರ ಅಂತರಂಗ ಭಕ್ತರೂ - ಶ್ರೀ ಸಾಗರಕಟ್ಟೆ ಮಠಾಧೀಶರಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಪ್ರದ್ಯುಮ್ನತೀರ್ಥರ ಆರಾಧನಾ ಮಹೋತ್ಸವ., ಮೈಸೂರು " 
ರಚನೆ : ಶ್ರೀಯುತ ರಂಗನಾಥ ಭಾರಧ್ವಾಜ್
ಅಂಕಿತ :
ಗಜಗಹ್ವರದಲಿ ನೆಲೆನಿಂತ - ಶ್ರೀ ವ್ಯಾಸರಾಜ ಗುರುಸಾರ್ವಭೌಮರ ವರ ಪ್ರಸಾದಾಂಕಿತ " ವಿಜಯರಂಗ ವಿಠ್ಠಲ"
ಗುರುರಾಜರ ಸ್ಮರಿಸಿರೋ ।। ಪಲ್ಲವಿ ।।
ದುರಿತವ ಕಳೆದು ಸದ್ಗತಿಯ -
ಪಡೆವವರೆಲ್ಲ ।। ಅ ಪ ।।
ಪ್ರಿಯತೀರ್ಥ ಮುನಿಗಳ -
ಸಂಜಾತ ಇವ ।
ಅನಿಲದೇವನ ನಿಜ ಭಕುತ ।
ಪಾಮರರನು ಇವ -
ಪಾವನಗೊಳಿಸುವ ।
ಶ್ರೀ ಪ್ರದ್ಯುಮ್ನತೀರ್ಥರೆಂಬೋ -
ಪ್ರಿಯವಾದ ಪೆಸರುಳ್ಳ ।। ಚರಣ ।।
ಬ್ರಹ್ಮಣ್ಯ ಬ್ರಹ್ಮಾಣಿ ಪದಗಳ ಇವ ।
ಸದಾ ಸಂಸ್ಕರಿಸುತ ।
ಗುರು ಮಧ್ವರಾಯರ -
ಮತವ ಸಾಧಿಸುತ ।
ಭಾವಿರಾಯರೆಂಬೋ -
ರಘುಪತಿ ಪ್ರಿಯರ ।। ಚರಣ ।।
ಬ್ರಹ್ಮಣ್ಯತೀರ್ಥರ ಕಂದ ಇವ ।
ಬಂಕಾಪುರದಲ್ಲಿ ಮೆರೆವ ।
ಸೇವಿಪ ಜನರ -
ದುರ್ಬೋಧ ಪರಿಹರಿಸುತ ।
ವಿಜಯರಂಗ ವಿಠ್ಠಲನ -
ಹೃದಯದಿ ನೋಳ್ಪರ ।। ಚರಣ ।।
ಮೈಸೂರು ನಗರಕ್ಕೆ ಸುಮಾರು 15 ಮೈಲುಗಳ ದೂರದಲ್ಲಿರುವ " ಸಾಗರಕಟ್ಟೆ " ಯಲ್ಲಿ ಶ್ರೀ ಪ್ರದ್ಯುಮ್ನತೀರ್ಥರ ಮಹಾ ಪ್ರಯತ್ನದಿಂದ  " ಸಾಗರಕಟ್ಟೆ ಮಠ " ವು ಸ್ಥಾಪಿತವಾಯಿತು.
ಈ ಸಾಗರಕಟ್ಟೆಯು ಪಾವನವಾದ ಕಾವೇರಿ ಪರಿಸರದಲ್ಲಿರುವ ರಮಣೀಯ ಸ್ಥಳ.  ಈ ಸ್ಥಳವು ಶ್ರೀ ಗೋಪಾಲಕೃಷ್ಣಸ್ವಾಮಿ - ಶ್ರೀ ಮುಖ್ಯಪ್ರಾಣದೇವರು - ಶ್ರೀ ಚಂದ್ರಮೌಳೀಶ್ವರ ದೇವರ ಸಾನಿಧ್ಯದಿಂದ ಪಾವನ ಕ್ಷೇತ್ರವಾಗಿದೆ.
ಶ್ರೀ ಪ್ರದ್ಯುಮ್ನತೀರ್ಥರ ತಪೋಭೂಮಿಯಾದ್ದರಿಂದ ಸಾಗರಕಟ್ಟೆಗೆ ಒಂದು ಹೆಚ್ಚಿನ ಆಧ್ಯಾತ್ಮಿಕ ವಾತಾವರಣ ಉಂಟಾಗಿದೆ.
ಶ್ರೀ ಪ್ರದ್ಯುಮ್ನತೀರ್ಥರು ಬಹುಕಾಲ ಇಲ್ಲಿ ತಪಸ್ಸು ಮಾಡಿ ತಮ್ಮ ಮಠ ಸ್ಥಾಪಿಸಿದ್ದರಿಂದ ಇವರಿಗೆ " ಸಾಗರಕಟ್ಟೆ ಸ್ವಾಮಿ " ಗಳೆಂದೇ ಹೆಸರಾಗಿದೆ.
ಶ್ರೀ ಸಾಗರಕಟ್ಟೆ ಸ್ವಾಮಿಗಳೆಂದು ಪ್ರಸಿದ್ಧರಾದ ಶ್ರೀ ಪ್ರದ್ಯುಮ್ನತೀರ್ಥರು ಶ್ರೀ ಮಾಧ್ವರ ಇತ್ತೀಚಿನ ಆಧ್ಯಾತ್ಮಿಕ ರಂಗದ ಇತಿಹಾಸದಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ.
ಶ್ರೀ ಶ್ರೀಗಳವರು ತಮ್ಮ ತಪಸ್ಸು - ವೈರಾಗ್ಯ - ಪಾಂಡಿತ್ಯ - ಪ್ರಮೇಯಜ್ಞತೆಗಳಿಂದ ಅನೇಕ ಮಹಾ ಮೇಧಾವಿಗಳಿಗೆ ಮಾಧ್ವ ತತ್ತ್ವಜ್ಞಾನದ ಮಹಾದ್ವಾರವನ್ನು ತೋರಿ ಉದ್ಧಾರದ ರೀತಿಯನ್ನು ಹೇಳಿದ್ದಾರೆ.
ಒಳ್ಳೇ ಮೇಧಾವಿಗಳೆಂದು ಹೆಸರಾದ ಶ್ರೀ ಹೆಚ್ ಸುಬ್ಬರಾಯರಂಥಾವರಿಗೆ ಸನ್ಮಾರ್ಗದರ್ಶಿ ಮಹರ್ಷಿಗಳಾಗಿದ್ದಾರೆ.
ಶ್ರೀ ಪ್ರದ್ಯುಮ್ನತೀರ್ಥರು ಪೂರ್ವಾಶ್ರಮದಲ್ಲಿ ಧಾರವಾಡ ಜಿಲ್ಲೆಯ ಬಂಕಾಪುರ ಗ್ರಾಮಕ್ಕೆ ಸೇರಿದವರು.
ತಂದೆ : ಶ್ರೀ ವೆಂಕಟರಮಣಾಚಾರ್ಯರು
ತಾಯಿ : ಸಾಧ್ವೀ ಯಮುನಾಬಾಯಿ
ಹೆಸರು : ಶ್ರೀ ಗುರುರಾಜಾಚಾರ್ಯರು
" ಜನನ "
ಕ್ರಿ ಶ 1890ರ ವಿರೋಧಿಕೃತ್ ನಾಮ ಸಂವತ್ಸರ ಫಾಲ್ಗುಣ ಶುದ್ಧ ಪಂಚಮೀ ಸೋಮವಾರ ರಾತ್ರಿ ೧೦ ಘಂಟೆಗೆ.
ಅಂಕಿತ : ನರಹರಿ
ಇವರು ಇದೇ ಗ್ರಾಮದಲ್ಲಿ ಕ್ರಿ ಶ 1890ನೇ ಇಸ್ವಿಯಲ್ಲಿ ಜನಿಸಿದರು.
ತಂದೆ ಶ್ರೀ ಶ್ರೀ ವೆಂಕಟರಮಣಾಚಾರ್ಯರು - ಇವರೂ ಒಳ್ಳೇ ಸಾತ್ವಿಕರೂ, ಪ್ರಸಿದ್ಧ ಪುರಾಣಿಕರೂ, ಅತ್ಯಂತ ವೈರಾಗ್ಯಶಾಲಿಗಳೂ ಆಗಿದ್ದರು. ಅವರೂ ಕೊನೆಗೆ ಸಂನ್ಯಾಸಾಶ್ರಮ ಸ್ವೀಕರಿಸಿದ್ದರು.
ಶ್ರೀ ಪ್ರದ್ಯುಮ್ನತೀರ್ಥರಿಗೆ ವೈರಾಗ್ಯವು ರಕ್ತಗತವವಾಗಿಯೇ ಬಂದಿದೆ.
ಪೂರ್ವಾಶ್ರಮದ ಹೆಸರು : ಶ್ರೀ ಗುರುರಾಜಾಚಾರ್ಯರು.
ಮನೆಯಲ್ಲಿ ತಂದೆಯವರಲ್ಲೇ ವ್ಯಾಸಂಗ ಮಾಡಿ ಮುಂದೆ ಶ್ರೀ ಶ್ರೀಪಾದರಾಜ ಮಠದ ಶ್ರೀ ಮೇಧಾನಿಧಿ ತೀರ್ಥರಲ್ಲಿ ದ್ವೈತ ವೇದಾಂತವನ್ನು ಅಧ್ಯಯನ ಮಾಡಿದರು.
ಆಗಿನ ಕಾಲಕ್ಕೆ ತಕ್ಕಂತೆ ಚಿಕ್ಕ ವಯಸ್ಸಿನಲ್ಲೇ ವಿವಾಹ ಮಾಡಿಕೊಂಡು ಕೆಲವು ಕಾಲ ಗೃಹಸ್ಥ ಧರ್ಮವನ್ನು ಪರಿಪಾಲನೆ ಮಾಡಿ - ಮುಂದೆ ಸಂಸಾರದಲ್ಲಿ ಜಿಗುಪ್ಸೆಗೊಂಡು ಮನಸ್ಸಿನಲ್ಲಿ ಶಾಂತಿಯಿಲ್ಲದೆ ಕಾತರರಾಗಿ ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಶ್ರೀ ರಾಯರ ಸೇವೆಗೆ ಬಂದರು - ಅಲ್ಲಿ ಕೆಲ ದಿನಗಳು ಭಕ್ತಿ ಶ್ರದ್ಧೆಯಿಂದ ಸೇವೆ ಮಾಡಿದರು.
ಒಂದು ದಿನ ಸ್ವಪ್ನದಲ್ಲಿ ಇವರಿಗೆ ಶ್ರೀ ರಾಯರು ಸಂನ್ಯಾಸ ತಕ್ಕೊಳ್ಳಲಿಕ್ಕೆ ಆಜ್ಞೆ ಮಾಡಿದಂತಾಯಿತು.
ಶ್ರೀ ಕ್ಷೇತ್ರ ಮಂತ್ರಾಲಯದಿಂದ ಇವರು ನೇರವಾಗಿ ಕುಂದಾಪುರ ಶ್ರೀ ವ್ಯಾಸರಾಜ ಮಠಾಧೀಶರಾದ ಶ್ರೀ ಲಕ್ಷ್ಮೀಪ್ರಿಯ ತೀರ್ಥರಲ್ಲಿಗೆ ಬಂದು ವಿಧ್ಯುಕ್ತವಾಗಿ ಸಂನ್ಯಾಸಾಶ್ರಮವನ್ನು ತೆಗೆದುಕೊಂಡರು.
ಶ್ರೀ ಲಕ್ಷ್ಮೀಪ್ರಿಯ ತೀರ್ಥರು " ಶ್ರೀ ಪ್ರದ್ಯುಮ್ನತೀರ್ಥ " ರೆಂದು ನಾಮಕರಣ ಮಾಡಿ, ಪ್ರಣವೋಪದೇಶ ನೀಡಿ " ಪ್ರಜ್ಞಾಪೀಠ " ವೆಂಬ ಹೆಸರಿನಿಂದ ಸಂಸ್ಥಾನವನ್ನು ಸ್ಥಾಪಿಸಿ ನಿರಂತರ ನಡೆಯುವಂತೆ ಮಾಡಿರಿ " ಯೆಂದು ಆದೇಶ ಕೊಟ್ಟರು.
ಪಾಲಿಸೆಮ್ಮನು ತ್ರಿಜಗ ಪಾಲಿಸುವನೆ ।
ಎಲ್ಲ ಸುಖವನಿತ್ತು ಉದಧಿ
ಆಲಯ ಶರಣ್ಯ ವಿಟ್ಠಲ ।। ಪಲ್ಲವಿ ।।
ಹೃದಯಕಮಲ ಮಧ್ಯದಲಿ ।
ಮುದದಿ ಖಗವನೇರಿ ಚರಿಪ
ಯದುಕುಲಾಬ್ಧಿ ಜಾತ ಚಂದ್ರ ।
ವಿಧಿಶಿವಾದಿ ಉಡುಗಣಾರ್ಚಿತ ।। ಚರಣ
ದಿಟ್ಟಭಕ್ತ ಕೊಟ್ಟ ಇಟ್ಟಗೀ ।
ಮೆಟ್ಟಿನಿಂತಿ ಸಿಟ್ಟು ಇಲ್ಲದೆ ।
ಹೊಟ್ಟೆ ಮನೆಯ ಮಾಡಿಕೊಟ್ಟಿ ।
ಕೆಟ್ಟಮಾತು ನುಡಿದ ಚೈದ್ಯಗೆ ।। ಚರಣ ।।
ಕರಗಳನ್ನೆ ಕಟಿಯಲಿಟ್ಟು ।
ಶರಣುಬಂದ ಭಕ್ತಗೆ ಭವ ।
ಪರಿಮಿತಿಯ ತೋರಿ ನಿರುತ ।
ಪೊರೆಯುವಂಥ ಕರುಣನಿಧಿಯೇ  ।। ಚರಣ ।।
ಪುಂಡರೀಕ ವರದನೆಂದು ।
ಹಿಂಡುಭಕ್ತರು ಪೊಗಳುತಿಹರೊ ।
ಅಂಡಜಧ್ವಜ ನಿನ್ನ ಪಾದ ।
ಪುಂಡರೀಕ ತೋರಿಸಿನ್ನು  ।। ಚರಣ ।।
ಶ್ರೀ ನರಹರಿಯೆ ನಿನ್ನ ।
ಗಾನ ಮಾಡಲೆಷ್ಟು ಸಾಮ ।
ಗಾನಕೆ ನಿಲುಕದ ಮಹಿಮ ।
ಜ್ಞಾನ ಭಕ್ತಿ ಇತ್ತು ಬೇಗ ।। ಚರಣ ।।
ಮುಂದೆ ಶ್ರೀ ಪ್ರದ್ಯುಮ್ನತೀರ್ಥರು ದೇಶ ಸಂಚಾರ ಮಾಡುತ್ತಾ 1920ನೇ ಇಸ್ವಿ ಸುಮಾರಕ್ಕೆ ಕಾವೇರಿ ತೀರವಾದ ಸಾಗರಕಟ್ಟೆಗೆ ಬಂದು ಅಲ್ಲಿ ಚಾತುರ್ಮಾಸ್ಯಕ್ಕೆ ಕುಳಿತರು.
ಇಲ್ಲಿಯೇ ಸಾಗರಕಟ್ಟೆಯಲ್ಲಿ ಬಹು ಕಾಲ ಇದ್ದರು. ಈಗ ಮಠವಿರುವ ಸ್ಥಳವನ್ನು  ತಮಿಳುನಾಡಿನ ಸದ್ಗೃಹಸ್ಥನೊಬ್ಬನು ಶ್ರೀ ಶ್ರೀಗಳವರ ಮಹಿಮೆಯ ಪ್ರಭಾವದಿಂದ ಆ ಸ್ಥಳವನ್ನು ಇವರಿಗೆ ದಾನವಾಗಿ ಕೊಟ್ಟನು.
ಈ ಸ್ಥಳದಲ್ಲಿ ಶ್ರೀ ಪ್ರದ್ಯುಮ್ನತೀರ್ಥರು ಶ್ರೀ ಗೋಪಾಲಕೃಷ್ಣಸ್ವಾಮಿ - ಶ್ರೀ ಮುಖ್ಯಪ್ರಾಣದೇವರು - ಶ್ರೀ ಚಂದ್ರಮೌಳೀಶ್ವರ ದೇವಸ್ಥಾನಗಳನ್ನೂ - ಶ್ರೀ ಮಠವನ್ನೂ ಭಕ್ತರ ಸಹಕಾರದಿಂದ ಕಟ್ಟಿಸಿರುವರು.
ಸಾಗರಕಟ್ಟೆಯು ಬರುಬರುತ್ತಾ ಆಧ್ಯಾತ್ಮಿಕ ಕೇಂದ್ರವಾಗಿ ತತ್ತ್ವಬುಭುತ್ಸುಗಳ ಯಾತ್ರಾ ಸ್ಥಳವಾಯಿತು.
ಶ್ರೀ ಜಯಸಿಂಹಾಚಾರ್ಯರು - ಶ್ರೀ ಹೆಚ್ ಸುಬ್ಬರಾಯರು - ಶ್ರೀ ಅಕ್ಷೋಭ್ಯತೀರ್ಥಾಚಾರ್ಯರು ಮುಂತಾದ ಆಂಗ್ಲ ಭಾಷಾ ಕೋವಿದರು  - ಶ್ರೀ ಪ್ರದ್ಯುಮ್ನತೀರ್ಥರಲ್ಲಿ ಮಾಧ್ವ ತತ್ತ್ವಜ್ಞಾನದ ಪ್ರಾಥಮಿಕ ಪಾಠಗಳನ್ನು ಅಧ್ಯಯನ ಮಾಡಿದರು.
" ಹರಿಕಥಾಮೃತಸಾರ "
ನರಹರಿಯೆ ಪಾಲಿಸೊ ಮುನ್ನ ।
ತರಳ ಪ್ರಹ್ಲಾದನಂತೆನ್ನ -
ದುರಾಸೆ ಬಿಡಿಸಿ ನಿನ್ನ ।
ಚರಣದಲ್ಲಿ ಮನ ನಿರುತದಿ ನಿಲ್ಲಿಸಿ -
ಕರುಣವ ತೋರೋ  ।। ಪಲ್ಲವಿ ।।
ತರಳತ್ವದಿ ಬಹು -
ದುರುಳತನದಿ ದಿನ ।
ತೆರಳಿತು ಅರಿಯದೆ -
ದೇಹಂಭಾವದಲ್ಲಿ ।। ಚರಣ ।।
ಗುರುಕುಲವಾಸದಿ -
ಸರಿಯಾಗಿರದೆ ।
ಬರಿದೆ ಕಾಲಚರಿಸಿತು -
ಕ್ರೀಡೆಯಲಿ ।। ಚರಣ ।।
ಬರಲು ಯೌವ್ವನವು -
ಪರಸತಿಯಲಿ ಮನ ।
ನಿರುತದಿಂದಿರಸಿ ನಾ -
ಗರುವದಿ ಮೆರೆದೆ ।। ಚರಣ ।।
ಅನುದಿನದಲಿ ನ-
ವನವ ವಿಷಯದಿ ।
ಮನ ಕುಣಿ ಕುಣಿದು -
ಓಡುವುದಯ್ಯ ಹರಿಯೆ ।। ಚರಣ ।।
ಶ್ರೀ ನರಹರಿಯೆ -
ಇನಿತು ಘಾಸಿಸುವುದು ।
ಘನತೆಯೆ ನಿನಗಿದು -
ವನಜ ಕುವರನಯ್ಯ ।। ಚರಣ ।।
ಶ್ರೀ ಮಾನವಿ ಮುನಿಪುಂಗವರಾದ ಶ್ರೀ ಜಗನ್ನಾಥದಾಸವರ್ಯರಿಂದ ರಚಿತವಾದ ಶ್ರೀಮದ್ ಹರಿಕಥಾಮೃತಸಾರವೆಂದರೆ ಶ್ರೀ ಪ್ರದ್ಯುಮ್ನತೀರ್ಥರಿಗೆ ಪಂಚಪ್ರಾಣ.
ಹರಿಕಥಾಮೃತಸಾರದ ಪ್ರತಿಯೊಂದು ಅಕ್ಷರದ ಮಹತ್ವವನ್ನೂ ವಿಚಿತ್ರ ರೀತಿಯಲ್ಲಿ ವೇದ - ಉಪನಿಷದ್ ವಾಕ್ಯಗಳೊಂದಿಗೆ ಅನ್ವಯ ಮಾಡುವ ಅತ್ಯದ್ಭುತ ಚಾತುರ್ಯ ಶ್ರೀ ಶ್ರೀಗಳವರದಾಗಿತ್ತು.
ಕಾರಣ ಶ್ರೀಮದ್ ಹರಿಕಥಾಮೃತಸಾರ ಒಂದು ಪ್ರಮೇಯ ಪುಂಜ.
ವ್ಯಾಸ ಸಾಹಿತ್ಯದಲ್ಲಿಯೂ ಸಿಗಲಾರದ ಪ್ರಮೇಯಗಳನ್ನು ಶ್ರೀ ಜಗನ್ನಾಥದಾಸರು ಶ್ರೀಮದ್ ಹರಿಕಥಾಮೃತಸಾರದಲ್ಲಿ ಸೆರೆ ಹಿಡಿದಿದ್ದಾರೆ.
ಅಂಥಾ ಪ್ರಮೇಯ ಪುಂಜವಾದ ಗ್ರಂಥದ ಪ್ರತಿ ಅಕ್ಷರವೂ ಇವರ ನಾಲಿಗೆಯ ಮೇಲೆ ಹರಿದಾಡುತ್ತಿತ್ತು.
"  ಶ್ರೀ ಪ್ರದ್ಯುಮ್ನತೀರ್ಥರ ವ್ಯಕ್ತಿತ್ವ "
ಏನಿದು ರೂಪ ಶ್ರೀ ನರಹರೆ ।। ಪಲ್ಲವಿ ।।
ಏನಿದು ರೂಪವೋ ।
ಮನಸಿಜನಯ್ಯನೇ
ನೆನಿಸಿದವರ  । ಹೃ ।
ದ್ವನಜದೊಳ್ ಮೆರೆವುದೂ  ।। ಅ.ಪ ।।
ಮಾರನ ಪಿತನೆಂದು ।
ಕರೆಸಿ ಕೊಂಬುವನಿಗೆ
ಮೋರೆಯೊಳ್ ಮೂರು-
ಕಣ್ಣುಗಳ ಧರಿಸಿರುವುದು ।। ಚರಣ ।।
ಪರಮ ಶಾಂತನೆಂದು ।
ಮೆರೆಯುವೀ ಶ್ರುತಿಯೊಳು
ಕ್ರೂರ ರೂಪದಿಂದ ।
ನರರಿಗೆ ತೋರ್ಪುದು ।। ಚರಣ ।।
ವರ ವೈಜಯಂತಿ । ಯ ।
ರಳೊಳ್ ಧರಿಸುವಗೆ
ಕರುಳ ಹಾರವ ಧರಿಸಿ ।
ವರ ಶಬ್ದ ಮಾಳ್ವೊದು  ।। ಚರಣ ।।
ನಾನೇ ದೇವರು ಮತ್ತು ।
ಅನ್ಯರಿಲ್ಲೆಂಬುವ
ಕನಕ ಕಶ್ಯಪ ಮುಖ್ಯ ।
ದನುಜರ ಸೀಳ್ವುದು ।। ಚರಣ ।।
ತರಳ ಕರದಾಕ್ಷಣದಿ ।
ವರ ವೈಕುಂಠವ ಬಿಟ್ಟು ।
ನರಹರಿ ಎನಿಸಿ ನೀ ।
ಭರದಿ ಬಂದಿರುವುದು ।। ಚರಣ ।।
ಶ್ರೀ ಪ್ರದ್ಯುಮ್ನತೀರ್ಥರು" ಭೇಷ್ " ಯೆಂದರೆ ವೈಕುಂಠ ಪ್ರವೇಶಿಸಲು ಅರ್ಹತಾ ಚೀಟಿ ಪಡೆದಂತೆಯೇ ಸರಿ.
ಜ್ಞಾನ - ಭಕ್ತಿ - ವೈರಾಗ್ಯ ಕಣ್ಣಿಗೆ ಕಾಣಿಸುವುದಿಲ್ಲ - ಅದರ ಸ್ವರೂಪವೇ ಇವರ ಆಕೃತಿ.
ಕಲಿಯುಗದಲ್ಲಿಯೂ ಕೃತಯುಗದ ಧರ್ಮವನ್ನು ಆಚರಿಸಿದ ಮಹಾ ಮಹಿಮರು.
ಲಿಂಗಸೂಗೂರಿನ " ಸುಂದರ ವಿಠಲಾಂಕಿತ ಶ್ರೀ ಗೋರೆಬಾಳು ಹನುಮಂತರಾಯರು " ಕೂಡಾ ಇವರ ಪ್ರೀತ್ಯಾಸ್ಪದರು.
" ಮಹಾ ಮಹಿಮರು "
ಅಮ್ಮಾ ಲಕುಮಿದೇವಿ ।
ನಿಮ್ಮರಸನ ತೋರೆ
ಸುಮ್ಮನೆ ಬಿಡುವದು ।
ಸಮ್ಮತವೇ ನಿನಗೆ ।। ಪಲ್ಲವಿ ।।
ಹೆತ್ತ ಬಾಲರು । ಮಂದ ।
ಮತಿಗಳಾದರೆ ತಾಯಿ
ಸತ್ತು ಹೋಗಲಿ ಎಂದು ।
ಎತ್ತದೆ ಬಿಡುವೊಳೆ ।। ಚರಣ ।।
ನಿಮ್ಮ ಮಾತಿಗೆ ಹರಿ ।
ಸಮ್ಮತನಾಗುವ
ಕುಮತಿಗಳೆಣಿಸದೆ ।
ರಾಮ ಮೂರುತಿ ತೋರೆ  ।। ಚರಣ ।।
ಸಿಂಧುತನಯೆ ಎನ್ನ ।
ಬಂಧ ಬಿಡಿಸಿ ಬೇಗ ।
ನಂದ ಕಂದನ ಪಾದ ।
ಪೊಂದಿರುವಂತೆ ಮಾಡೆ  ।। ಚರಣ ।।
ತತ್ವೇಶರೆಲ್ಲರೂ ನಿ।
ತ್ಯಾಧೀನರು ನಿಮಗೆ
ಭೃತ್ಯಗೆ ನಿಜ ಹರಿ ।
ಭಕ್ತಿ ಕೊಡುವಂತೆ ಪೇಳೆ  ।। ಚರಣ ।।
ಎನ್ನಲಿರುವ ।
ಹೀನರೋಡಿಸಿ ಬೇಗ ।
ಪನ್ನಗಾಚಲವಾಸ ।
ಶ್ರೀ ನರಹರಿ ತೋರೆ  ।। ಚರಣ ।।
ಒಮ್ಮೆ ಶ್ರೀ ಪ್ರದ್ಯುಮ್ನತೀರ್ಥರು ಸೋದೆಯ ತಪೋವನಕ್ಕೆ ಹೋಗಿ ತಪವನ್ನು ಆಚರಿಸುತ್ತಾ ಇರಲು - ಆ ಏಕಾಂತ ಘೋರ ವಾತಾವರಣದಲ್ಲಿ ಇವರ ಸಮೀಪಕ್ಕೆ ಭಾರಿ ಚಿರತೆ ಬರಲು ಅಚಲರಾಗಿ ಮತ್ತು ಶಾಂತರಾಗಿ ಶ್ರೀ ಶ್ರೀಗಳು ನಗುತ್ತಾ ಆ ಮೃಗವನ್ನು ಸಮೀಪಿಸಿ ಕೈಯಲ್ಲಿದ್ದ ಅಂಗಾರವನ್ನು ಅದರ ಹಣೆಗೆ ಹಚ್ಚಲು ಅದು ಹಾಗೆಯೇ ಶಾಂತವಾಗಿ ಹಿಂತಿರುಗಿತು. 
ಶ್ರೀ ಪ್ರದ್ಯುಮ್ನತೀರ್ಥರು ಮೈಸೂರಿನ ಕೃಷ್ಣರಾಜಪುರದ ತಮ್ಮ ಸ್ವಂತ ಮಠದಲ್ಲಿ ಪಾಠ - ಪ್ರವಚನ - ಉಪನ್ಯಾಸ - ಉಪದೇಶ - ತಪಸ್ಸು ಮಾಡುತ್ತಾ ಶ್ರೀಮದಾಚಾರ್ಯರ ತತ್ತ್ವಜ್ಞಾನದ ನಂದಾ ದೀಪವನ್ನು ಹಚ್ಚಿ ಬೆಳಗುವಂತೆ ಮಾಡಿ ಜ್ಯೇಷ್ಠ ಬಹುಳ ಅಮಾವಾಸ್ಯೆಯ [ 1975 ] ಪರ್ವ ಕಾಲದಲ್ಲ ಮೋಕ್ಷಪ್ರದನಾದ ಶ್ರೀ ನಾರಸಿಂಹನ ಪಾದಾರವಿಂದ ಸೇರಿದರು.
ಶರಣ್ಯ ವಿಠಲಾಸಕ್ತ೦ 
ಪ್ರಾಜ್ಞಾಪೀಠಸ್ಯ ಸ್ಥಾಪಕಮ್ ।
ಪ್ರಮಾಣಜ್ಞ೦ ಪ್ರಮೇಯಜ್ಞ೦ 
ಪ್ರದ್ಯುಮ್ನಾಖ್ಯ ಗುರು೦ಭಜೇ ।।    
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
****



No comments:

Post a Comment