Sunday 10 February 2019

raghupraveera teertharu udupi matha palimaru mutt yati 25 ರಘುಪ್ರವೀರ ತೀರ್ಥರು

Sri Raghupraveera Theertha
Sri Raghupraveera Theertha is the 24th saint after Sri Hrishikesha Theertha in the guru parampare of Palimar mutt.
Poorvashrama Name :
Ashrama Guru : Sri Raghuvara Theertha
Ashrama Shishya : Sri Raghubhushana Theertha
Aradhana : Sravana Bahula Dwiteeya
Vrundavana/place of demise : Udupi
Sri Raghupraveera Theertha took Ashrama from Sri Raghuvara Theertha and ruled Peeta for about 30 years. Initially he took pilgrimage tour to Tirupati and had darshan of lord. He had learnt all Shastras in Arani samsthana and became expert in all Shastras. Later he went to Tirupati and had debate with great pundits like Dhanvantari Ramacharya and others, defeated them and was honoured by Arani samsthana. One Muslim Nawab by name Mohammad Raja offered swethachatra and got the blessings of swamiji.
He did 12 times Sudha mangala paata, Chandrika, Geetha Bhashya, Tantrasara, Tarka meemamsa to his disciples. He was famous for tapas Shakti, mantra Shakti, Yoga siddhi etc. he installed hanuman idol in Palimar. He wrote Hanuma-Bheema-Madhwa ashtottara shata Nama Stotra.
During his Paryaya time, one tiger killed a cow named ‘narmade’. That cow was very dear to swamiji as its milk was used for panchamrita Abhisheka to lord Krishna. Swamiji became very upset with this incident. Then he decided to do dhyaana by sitting in padmasana without even thinking of Pooja. Later the tiger came to main gate of the mutt and died. After hearing this news, swamiji stood up and did Krishna Pooja. For this reason he was called ‘Hulikonda Swamy’. As mark of this incident the tiger carving was laid on the top of his Vrundavana.
After handing over Peeta to Sri Raghubhushana Theertha he entered Vrundavana at Udupi.


****

 ಶ್ರೀ ಶ್ರೀ ರಘುಪ್ರವೀರತೀರ್ಥರೆಂಬ ಮಹಾಮಹಿಮರು, ಶ್ರೀ ಪಲಿಮಾರು ಪರಂಪರೆಯಲ್ಲಿ ಸುಮಾರು 400 ವರ್ಷಗಳ ಹಿಂದೆ ಇದ್ದವರು. ಅವರಿಗೆ ಸನ್ಯಾಸವಾದ ಆರಂಭದಲ್ಲಿ ಮಾತು ಸ್ವಲ್ಪಮಟ್ಟಿಗೆ ತೊದಲುತ್ತಿತ್ತಂತೆ. ತಮ್ಮ ಪರ್ಯಾಯದ ಅವಧಿ ಮುಗಿದ ನಂತರ ಘಟಿಕಾಚಲಕ್ಕೆ ತೆರಳಿ ಅಲ್ಲಿ ಶ್ರೀ ಮುಖ್ಯಪ್ರಾಣದೇವರ ವಿಶೇಷ ಸೇವೆ, ತಪಸ್ಸು, ಶ್ರೀ ಹರಿ ವಾಯುಸ್ತುತಿ ಪಠಣ ಮಾಡುತ್ತಾ  ಇದ್ದರಂತೆ. ಭಗವಂತನ ಸಂಕಲ್ಪ ಅರಿತ ಮುಖ್ಯಪ್ರಾಣದೇವರು ಸರಿಯಾದ ಕಾಲದಲ್ಲಿ ಸ್ವಪ್ನದಲ್ಲಿ ಆದೇಶ ಕೊಟ್ಟರಂತೆ... ಇಂತಹಾ ಸರೋವರದಲ್ಲಿ ನಾನಿದ್ದೇನೆ ನಾಳೆಯದಿನ ಸ್ನಾನ ಕಾಲದಲ್ಲಿ ನಿನಗೆ ಅನುಗ್ರಹವಾಗುತ್ತದೆಂದು..

ಅದರಂತೆ ಸ್ನಾನಕಾಲದಿ ದೊರೆತ ಆ ಪುಟ್ಟ ಹನುಮಂತ ದೇವರ ವಿಗ್ರಹವನ್ನು ಕೈಯಲ್ಲಿ ಹಿಡಿದ ತಕ್ಷಣ ಸುಸ್ಪಷ್ಟವಾಗಿ ಉಚ್ಚಾರಣೆ ಮಾಡುತ್ತಾ ಶ್ರೀ ವಿಷ್ಣುಸಹಸ್ರನಾಮ, ವಾಯುಸ್ತುತಿಗಳನ್ನು ಹೇಳುತ್ತಾ ಅಲ್ಲಿಂದ ಪಲಿಮಾರು ವರೆಗೂ ಮೆರವಣಿಗೆ ಮಾಡಿಕೊಂಡು ಪಾದಯಾತ್ರೆ ಮೂಲಕ ಬಂದು, ಆ ವಿಗ್ರಹದ ಜೊತೆಗೆ ಇನ್ನೊಂದು ವಿಗ್ರಹವನ್ನು ಮಾಡಿಸಿ ಎರಡನ್ನೂ ಪ್ರತಿಷ್ಟಾಪಿಸಿದರಂತೆ.


ಮುಂದಿನ ಪರ್ಯಾಯದಲ್ಲೊಮ್ಮೆ  ನಿತ್ಯ ಶ್ರೀಕೃಷ್ಣನಿಗೆ ಅಭಿಷೇಕಕ್ಕೆ ಹಾಲನ್ನು ನೀಡುತ್ತಿದ್ದ ಗೋವು ಮೇಯಲು ಹೋಗಿದ್ದು ಹಿಂದಿರುಗಿ ಬಾರದೆ ಇರಲು,, ರಾತ್ರಿಯಲ್ಲಾ ಭಗವಂತನ ಧ್ಯಾನಮಾಡುತ್ತಾ ಕುಳಿತರಂತೆ. ಆಗ ಆ ಹಸುವು ಹುಲಿರಾಯನಿಗೆ ಆಹಾರವಾಗಿದೆಯೆಂದು ತಿಳಿದು,  ಅದರ ಒಳಿತಿಗಾಗಿ ಪ್ರಾರ್ಥನೆ ಮಾಡಿದರಂತೆ... ಅಷ್ಟರಲ್ಲಿ ಎಲ್ಲಿಂದಲೋ ಆ ಹುಲಿಯು ಓಡಿಬಂದು ಮಠವನ್ನು ಪ್ರವೇಶಿಸಿತಂತೆ. ಶಿಷ್ಯರೆಲ್ಲರೂ ಭಯಭೀತರಾಗಿ ಓಡಿಹೋದರೂ ಸ್ವಾಮಿಗಳು ಅಲ್ಲಾಡದೇ ಕುಳಿತಿದ್ದರಂತೆ. ಆ ಹುಲಿಯು ಬಂದು ಈ ಶ್ರೀಗಳ ಮುಂದೆ ನೆಲದ ಮೇಲೆ ಬಿದ್ದು ಹೊರಳಾಡುತ್ತಾ ಪ್ರಾಣವನ್ನೇ ಬಿಟ್ಟಿತಂತೆ. ಎಷ್ಟೋ ಗೋಪಾಲಕರ ಗೋವನ್ನು ತಿಂದಿದ್ದ  ವ್ಯಾಘ್ರವು ಸತ್ತಿತೆಂದು ತಿಳಿದ ಊರಿನ ಜನತೆ ಇವರನ್ನು ಹುಲಿಕೊಂದ ಸ್ವಾಮಿಗಳೆಂದು ಕರೆದರಂತೆ. ಈಗಲೂ ಉಡುಪಿಯಲ್ಲಿ ಶ್ರೀ ಶ್ರೀ ರಘುಪ್ರವೀರತೀರ್ಥರ ವೃಂದಾವನದ ಮೇಲೆ ಒಂದು ಹುಲಿಯ ವಿಗ್ರಹವನ್ನು ಕಾಣಬಹುದು

***


No comments:

Post a Comment