Sunday 10 February 2019

hrishikesha teertharu matha palimaru mutt yati 02 magha shukla saptami ಹೃಷೀಕೇಶ ತೀರ್ಥರು

Sri Hrishikesha Theertha
Sri Hrishikesha Theertha is the 1st saint after Sri Hrishikesha Theertha in the guru parampare of Palimar mutt.


ವಿರೋಧಿಮಾಘಾರ್ಜುನಸಪ್ತಮೀತಿಥೌ ವರೋ
ಹೃಷೀಕೇಶಮುನಿಸ್ತಪಸ್ವಿನಾಂ
ಪುರುಪ್ರಬೋಧಾರ್ಯಕರಾಬ್ಜಸಂಭವೋ ಧರಾಸುತೇಶಾಂಘ್ರಿಸರೋಜಮೇಯಿವಾನ್
virOdhimAghArjunasaptamItithau varO h
RuShIkESamunistapasvinAM

puruprabOdhAryakarAbjasaMbhavO dharAsutESAMGrisarOjamEyivAn

Poorvashrama Name :
Ashrama Guru : Sri Madhwacharya
Ashrama Shishya : Sri Samatmesha Theertha
Aradhana : Magha Shudha Saptami
Vrundavana/place of demise : Kashi
gurugaLu: shri shrimadAnanda tIrtharu
shishyaru: shri samatmEsha tIrtharu
brindAvana: 1289, Triveni sangama, Prayaga

ಶ್ರೀಗುರುಭ್ಯೋ ನಮಃ ಶ್ರೀಹೃಷೀಕೇಶತೀರ್ಥರು ಮಾಘ-ಶುದ್ಧ-ಸಪ್ತಮೀ ಅಂದರೆ ರಥಸಪ್ತಮಿಯಂದು ಅಧೋಕ್ಷಜತೀರ್ಥರಂತೆ ಆಚಾರ್ಯರ ಮತ್ತೊರ್ವ ಶಿಷ್ಯರಾದ ಶ್ರೀಹೃಷೀಕೇಶತೀರ್ಥರ ಆರಾಧನೆಯ ಪರ್ವಕಾಲವೂ ಹೌದು. ಹಾಗಾಗಿ ಹೃಷೀಕೇಶತೀರ್ಥರು ನಿತ್ಯಸ್ಮರಣೀಯರಾದರೂ ವಿಶೇಷವಾಗಿ ಇಂದು ಸ್ಮರಿಸೋಣ. ಹೃಷೀಕೇಶತೀರ್ಥರ ಪುರ್ವಾಶ್ರಮದ ಚರಿತ್ರೆಗಳು ಲಭ್ಯವಿಲ್ಲ. ಆಶ್ರಮಾನಂತರದಲ್ಲಿಯೂ ಹೆಚ್ಚಿನ ಮಾಹಿತಿಯು ಸಿಗುವುದಿಲ್ಲ. ಆದರೆ ನಾರಾಯಣಪಂಡಿತಾಚಾರ್ಯರು ಒಂದೆರೆಡು ಮಹತ್ವದ ವಿಷಯಗಳನ್ನು ದಾಖಲಿಸಿದ್ದಾರೆ. ಕೇರಳದ ವಿಷ್ಣುಮಂಗಲದ ಸಭೆಯಲ್ಲಿ ಶ್ರೀಮದಾಚಾರ್ಯರು ಭಾಗವತಚರಿತ್ರೆಯನ್ನು ಹೇಳುವಾಗ ಶ್ರೀಮದಾಚಾರ್ಯರಿಗೆ ಅನುಗುಣವಾಗಿ ಭಾಗವತದ ಶ್ಲೋಕಗಳನ್ನು ಉತ್ತಮ ಕಂಠದಿಂದ ರಾಗದಿಂದ ಭಾವಪೂರ್ಣವಾಗಿ ಹೃಷೀಕೇಶತೀರ್ಥರು ಹಾಡುತ್ತಿದ್ದರು. अवदत्स कथां रथाङ्गपाणेर्भगवान्भागवते भवापहन्त्रीम्। अनुरूपगुणस्वरादिभाजा निजशिष्यप्रवरेण वाच्यमाने।। ಇಲ್ಲಿ ನಾರಾಯಣಪಂಡಿತಾಚಾರ್ಯರು ಹೇಳಿರುವ ಅನುರೂಪಗುಣಸ್ವರಾದಿಭಾಜಾ ಎಂಬ ವಿಶೇಷಣವು ಬಹಳ ಗಂಭೀರವಾದದ್ದು. ಇದನ್ನು ಅರ್ಥೈಸಿಕೊಳ್ಳಲು ವೈದಿಕೋಚ್ಚಾರಣಪ್ರಕ್ರಿಯೆಯ ಆಳವಾದ ಜ್ಞಾನ, ಹಾಗೂ ಸಂಗೀತದ ಜ್ಞಾನವಿರಬೇಕು. ಶ್ರೀಮದಾಚಾರ್ಯರ ರಾಗ-ಭಾವ-ಧ್ವನಿಗಳಿಗೆ ಸದೃಶವಾದ ರಾಗ-ಭಾವ-ಧ್ವನಿಗಳು ಹೃಷೀಕೇಶತೀರ್ಥರಿಗೆ ಇದ್ದವು ಎಂದರೆ ಅವರ ಧ್ವನಿ ಅವರ ಉಚ್ಚಾರಣೆ ಅವರ ಭಾವ ಹೇಗಿರಬಹುದು? ದೇವಾನಂದಕರವಾದ ಗುಣಗಳಿವು. ಪಂಡಿತಾಚಾರ್ಯರ ಮತ್ತೊಂದು ಮಾತು ನಿಜಶಿಷ್ಯಪ್ರವರೇಣ ಇದರ ವಿವರಣೆಯನ್ನು ತಾವೇ ವ್ಯಾಖ್ಯಾನದಲ್ಲಿ ಕೊಟ್ಟಿದ್ದಾರೆ ಶ್ರೀಹೃಷೀಕೇಶತೀರ್ಥೇನ ಎಂದು. ಇದು ಹೊಗಳಿಕೆಯ ಮಾತಲ್ಲ. ಹೃಷೀಕೇಶತೀರ್ಥರಲ್ಲಿದ್ದ ಮಹತಿಯಿದು. ಪದ್ಮನಾಭತೀರ್ಥರಿಗೆ ವೇದಪ್ರವಚನಾಚಾರ್ಯಶಿಷ್ಯ ಎಂಬಂತೆ ಇದು ಅವರ ಬಿರುದು ಕೂಡ. ಇದೇ ಮಾತೆ ಅಷ್ಟೋತ್ಕೃಷ್ಟ ಎಂಬ ರೂಪವನ್ನು ಪಡೆದು ಹೃಷೀಕೇಶತೀರ್ಥರ ಪರಂಪರೆಯಾದ ಪಲಿಮಾರುಮಠಕ್ಕೆ ಅಥವಾ ಅಲ್ಲಿಯ ಪೀಠಾಧಿಪತಿಗಳಿಗೆ ವಿಶೇಷಣವಾಗಿ ಹೇಳುವ ಕ್ರಮ ಬಂದಿದೆ. ಅಷ್ಟೋತ್ಕೃಷ್ಟಪಲಿಮಾರುಮಠ ಇತ್ಯಾದಿ. ಇದು ಕೇವಲ ಸಾಹಿತ್ಯ-ಸಂಪ್ರದಾಯಗಳನ್ನಾಧಾರಿಸಿದ ವಿಷಯವಲ್ಲ. ಶಾಸನದಲ್ಲೂ ದಾಖಲಾದ ವಿಷಯ. ವಿಜಯನಗರದ ರಾಜನಾದ ಹರಿಹರರಾಯನು ಉಡುಪಿಕೃಷ್ಣಮಠಕ್ಕೆ ನೀಡಿದ ದಾನವನ್ನು ಉಲ್ಲೇಖಿಸುವ ಶಾಸನದಲ್ಲಿ ಪಲಿಮಾರು ಮಠದ ವಿದ್ಯಾಮೂರ್ತಿತೀರ್ಥರಿಗೆ ಪ್ರಥಮೋತ್ಕರ್ಷೆಯ ಎಂಬ ವಿಶೇಷಣವನ್ನು ನೀಡಿ ಗೌರವಿಸಲಾಗಿದೆ. ಇದು ಹೃಷೀಕೇಶತೀರ್ಥರ ಮತ್ತೊಂದು ವೈಶಿಷ್ಟ್ಯ. ಹೃಷೀಕೇಶತೀರ್ಥರು ಎಲ್ಲ ಇಂದ್ರಿಯಗಳನ್ನೂ ತಮ್ಮ ವಶದಲ್ಲಿಟ್ಟುಕೊಂಡಿದ್ದರು. ಆದ್ದರಿಂದ ಇವರಿಗೆ ಹೃಷೀಕೇಶತೀರ್ಥ ಎಂಬ ಹೆಸರು ಅನ್ವರ್ಥವಾಗಿದೆ ಎನ್ನುತ್ತಾರೆ ಪಂಡಿತಾಚಾರ್ಯರು. वशीकृतहृषीकाश्च (ಈ ರೀತಿ ಪಂಡಿತಾಚಾರ್ಯರಿಂದ ಸ್ತುತ್ಯರಾದ ಹೃಷೀಕೇಶತೀರ್ಥರು 'ತಪ್ಪ ಬರೆದಿದ್ದಾರೆ, ಕೈತಪ್ಪು ಸಹಜ, ಬರವಣಿಗೆಯಲ್ಲಿ ಪ್ರಮಾದವಾಗಿದೆ, ಇದು ಸಹಜವೂ ಹೌದು' ಎಂಬ ಮಾತುಗಳನ್ನು ಪಂಡಿತಾಚಾರ್ಯರಲ್ಲಿ ವಿಶ್ವಾಸವಿರುವ ಯಾರಿಂದಲೂ ಸಹಿಸಲು ಸಾಧ್ಯವಿಲ್ಲ.) ಹೃಷೀಕೇಶತೀರ್ಥರು ಸಮಗ್ರಸರ್ವಮೂಲಗಳನ್ನು ಬರೆದಿಟ್ಟಿದ್ದಾರೆ ಎನ್ನುವುದು ಮತ್ತೊಂದು ಮಹಾವೈಶಿಷ್ಟ್ಯ. ಈ ವಿಷಯವು ಪರಂಪರೆಯಿಂದ, ತದನುಗುಣವಾದ ಇಂದಿಗೂ ಪಲಿಮಾರುಮಠದಲ್ಲಿ ಸಂರಕ್ಷಿತವಾದ ಹಸ್ತಪ್ರತಿಯಿಂದ ತಿಳಿಯುತ್ತದೆ. ಸತ್ಮಧರ್ಮತೀರ್ಥರ ಮಾತಿನಿಂದಲೂ ಇದು ಸೂಚಿತವಾಗುತ್ತದೆ. ಭಾಗವತದ ದಶಮಸ್ಕಂಧದ ವಿದಿತೋऽಸಿ ಭವಾನ್.. ಎಂಬ ಶ್ಲೋಕವ್ಯಾಖ್ಯಾನದಲ್ಲಿ ಭಾಧಾತುಪಾಠವನ್ನು ಉಲ್ಲೇಖಿಸಿ "ಇದೆಲ್ಲವೂ ಹೃಷೀಕೇಶತೀರ್ಥರು ಬರೆದಿಟ್ಟ ಧಾತುಪಾಠವನ್ನು ಅವಲಂಬಿಸಿ ಬರೆದದ್ದು" ಎಂದು ಬರೆಯುತ್ತಾರೆ. श्रीमदुडुपिश्रीकृष्णपादपद्माराधकहृषीकेशश्रीमच्चरणैः श्रीमध्वराजमुखकमलाच्छ्रुत्वा लिखितमेतद्धातुव्याख्यानमिति तत्सम्प्रदायाभिज्ञ(उक्त) मुखात् श्रुत्वा कृतेयं लेखा..। ಈ ಮಾತಿನಲ್ಲಿ ಹೃಷೀಕೇಶತೀರ್ಥರ ಬಗ್ಗೆ ಅವರ ಲೇಖನದ ಬಗ್ಗೆ ಸತ್ಯಧರ್ಮತೀರ್ಥರಿಗಿದ್ದ ಗೌರವವು ತಿಳಿಯುತ್ತದೆ. ಪ್ರಾಯ: ಗ್ರಂಥಗಳಲ್ಲಿ ಹೃಷೀಕೇಶತೀರ್ಥರ ಲೇಖನಸೇವೆಯನ್ನು ಉಲ್ಲೇಖಿಸಿದ್ದು ಇದೇ ಮೊದಲು ಎನಿಸುತ್ತದೆ. ______ ಹೃಷೀಕೇಶತೀರ್ಥರ ಕೃತಿ ಸಂಪ್ರದಾಯಪದ್ಧತಿ ಎಂಬ ಒಂದು ಪುಟ್ಟಕೃತಿಯನ್ನು ಹೃಷೀಕೇಶತೀರ್ಥರು ರಚಿಸಿದ್ದಾರೆ. ಶ್ರೀಮದಾಚಾರ್ಯರ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಆದರೂ ಸಾರರೂಪವಾಗಿ ನಿಖರವಾಗಿ ತಿಳಿಸಿದ ವಿಶಿಷ್ಟವಾದ ಕೃತಿ. ಐತಿಹಾಸಿಕವಾಗಿ ಇದಕ್ಕೆ ಬಹಳ ಮಹತ್ವವಿದೆ. ಈ ಕೃತಿಯು ಹೃಷೀಕೇಶತೀರ್ಥರಚಿತವಲ್ಲ ಎಂದೂ ಕೆಲವರು ವಾದಿಸಲಾರಂಭಿಸಿದ್ದಾರೆ. ಆದರೆ ಇದಕ್ಕೆ ಅವಕಾಶವಿಲ್ಲ. ಏಕೆಂದರೆ.... ಈ ಕೃತಿಯು ಹೃಷೀಕೇಶತೀರ್ಥರಚಿತವೆಂದು ನಿಶ್ಚಯಿಸಲು ಯಾವುದೇ ಬಾಧಕಗಳಿಲ್ಲ. ಸಾಧಕಪ್ರಮಾಣಗಳು ಇವೆ. ಆ ಸಾಧಕಪ್ರಮಾಣಗಳು ಇಂತಿವೆ.... ೧) ಪರಂಪರೆ ೨) ಸದ್ಧೃಷೀಕೇಶಮೇಘ: ಎಂದು ಕೊನೆಯ ಶ್ಲೋಕದಲ್ಲಿ ಕೃತಿಕಾರರ ಉಲ್ಲೇಖ. ೩) ಪ್ರಾಚೀನಹಸ್ತಪ್ರತಿ. ಈ ಹಸ್ತಪ್ರತಿಯು ಸಿಕ್ಕಿರುವುದು ಮತ್ತಷ್ಟು ಬಲ ಬಂದಿದೆ. ಹಾಗಾಗಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ. _______ ಉಪಾಸ್ಯಮೂರ್ತಿ ೧) ಶ್ರೀಮದಾಚಾರ್ಯರು ಸ್ಥಾಪಿಸಿದ ಕೃಷ್ಣನ ಪೂಜೆಯ ಸೌಭಾಗ್ಯವನ್ನು ಮೊದಲು ಪಡೆದಿದ್ದು ಹೃಷೀಕೇಶತೀರ್ಥರು. ೨) ಶ್ರೀಮದಾಚಾರ್ಯರು ಬಹುಸುಂದರವಾದ ಲಕ್ಷ್ಮಣ-ಹನುಮತ್-ಸೀತಾ-ಸಹಿತನಾದ ಕೋದಂಡರಾಮದೇವರನ್ನು ಸಂಸ್ಥಾನದ ಪ್ರತಿಮೆಯನ್ನಾಗಿ ನೀಡಿದ್ದಾರೆ. ಇಲ್ಲಿ ಹನುಮಂತದೇವರನ್ನೂ ನೀಡಿರುವುದು ವಿಶೇಷ. ೩) ನರ್ತನಕೃಷ್ಣದೇವರು. ಹೃಷೀಕೇಶತೀರ್ಥಕರಾರ್ಚಿತವೆಂದು ಮಠದಲ್ಲಿ ಹೇಳಲಾಗುತ್ತದೆ. ೪) ವೇದವ್ಯಾಸದೇವರು. ಪಲಿಮಾರುಗ್ರಾಮದಲ್ಲಿ ನಿತ್ಯ ಪೂಜೆಗೊಳ್ಳುತ್ತದೆ. ಇದು ಕೂಡ ಹೃಷೀಕೇಶತೀರ್ಥಕರಾರ್ಚಿತವೆಂದು ಹೇಳಲಾಗುತ್ತದೆ. ಬಹಳ ಜಾಗೃತ ಹಾಗೂ ಸುಂದರ ವಿಗ್ರಹ. ಇದಲ್ಲದೆ ಶ್ರೀಮದಾಚಾರ್ಯರು ಪೂಜಿಸಿದ ಅಷ್ಟಭುಜ ಲಕ್ಷ್ಮೀನಾರಾಯಣದೇವರು, ಕಾಂತಾವರ ಮಠದ ನರಸಿಂಹದೇವರು ಕೂಡ ಪಲಿಮಾರುಮಠದಲ್ಲಿ ನಿತ್ಯಪೂಜನೀಯರಾಗಿದ್ದಾರೆ. _______ ಇಂತಹ ಶ್ರೀಹೃಷೀಕೇಶತೀರ್ಥರು ತ್ರಿವೇಣಿಸಂಗಮಕ್ಷೇತ್ರವಾದ ಪ್ರಯಾಗದಲ್ಲಿ ಮಾಘಶುದ್ಧಸಪ್ತಮಿಯಂದು ಹರಿಪದವನ್ನು ಸೇರಿದರು. ಇಂತಹ ಶ್ರೀಹೃಷೀಕೇಶತೀರ್ಥರ, ಅವರ ಗುರುಗಳಾದ ಶ್ರೀಮದಾಚಾರ್ಯರ, ಅವರ ಅಂತರ್ಯಾಮಿಯಾದ ಪರಮಾತ್ಮನ ಅನುಗ್ರಹವು ಎಲ್ಲ ಸಜ್ಜನರ ಮೇಲೆ ನಿರಂತರವಾಗಿ ಇರಲಿ. - ಶ್ರೀನಿವಾಸ ಕೊರ್ಲಹಳ್ಳಿ

Sri Hrishikesha Theertha is believed to be the first and senior most pontiffs of the Udupi ashta mutts who were given Ashrama by Sri Madhwacharya. In Sumadhwa Vijaya, his name is mentioned as first in the sishya parampare of Sri Madhwacharya. Palimar mutt has got prominent place in Udupi ashta mutts as mentioned in kaifiyat. Paryaya starts with Palimar mutt only.
Sri Hrishikesha Theertha had made a first-hand written copy of entire “Sarvamula” of Sri Madhwacharya teachings & Siddhanta. Hand written manuscripts are still protected in Palimar mutt & it is published recently. He also composed “Sampradaya Paddathi” a small grantha contains the importance of acharyas avatara place Pajaka, childhood of Acharya, and the idols given to peethadhipathi’s of ashta mutts by acharya madhwa. It also tells about the greatness of Vishnutheertha (First Head of Sode mutt and was also Sri Madhwacharya’s brother before sanyasa) who is believed to come again to protect madhwa Siddhanta whenever it is in danger.
After initiating Ashrama to Sri Samatmesha Theertha, it is said that he entered Vrundavana at Kashi, but it needs to be confirmed after thorough research.
***
The direct disciple of Shrimad Ananda Teertha Bhagavadpaada, Shri Shri Hrishikesha Teertha was the first seer of Palimaru Matha. He was the senior most among the ascetic disciples of madhwAcharya. This has been documented by Narayana Panditacharya in Madhva Vijaya. He is called as a distinguished disciple. Panditacharya in his commentary on Bhavaprakaashika states
' Nija śiṣyapravarēṇa hr̥ṣīkēśatīrthēna'. Through this, we infer that Hrishikesha Teertha was a senior ascetic.
While Narayana Panditacharya speaks of Hrishikesha Teertha, he refers to him as vaśīkr̥tahr̥ṣīkāśca. Hr̥ṣīkā means senses; one who has gained control over them. Abstinence is a virtue that every individual should posess. This is more so in the case of ascetics. Since Hrishikesha Teertha had gained absolute control over his senses, him being named thus by Acharya was most appropriate. We also need to know that all of Acharya's disciples had restraint over their senses.

The distinction of Hrishikesha Teertha is documented thus in Madhva Vijaya. Avadat sa kathāṁ rathāṅgapāṇēḥ bhagavān bhāgavatē bhavāpahantrīm | anukūlaguṇasvarādibhājā nijaśiṣyapravarēṇa vācyamānē || When Shrimad Ananda Teertha Bhagavpaada gave discourses on Bhagavata that enunciates the glories of Rathaangapaani and serves as a remedy for the troubles of samsaaraa, Shri Hrishikesha Teertha used to sing the Bhagavata verses in a pleasing manner to match the profoundity, eminence and such other attributes in the tone of his guru.
Shri Hrishikesha Teertha was the eminent seer who has scripted Shrimadhacharya's Sarvamoola Granthas with his hands and preserved them. We can still see the palm leaf manuscripts written by him at Palimaru Matha. Palimaru Matha must be credited for preserving these hand written leaflets dated 800 years. This lesson written by Shri Hrishikesha Teertha, serves as the primary document for all of us.
The recital of Hrishikesha Teertha and the discourse of Shrimad Acharya - thus, Shri Hrishikesha Teertha was immensely fortunate to render recital alongside the discourse of Acharya.

Shri Madhvacharya bestowed his grace upon him by giving him immensely beautiful idols of Lord Ramachandra, Sita, Aanjaneya and Shri Lakshmana for his worship. Thus having undertaken several meritorious deeds during his lifetime, in Virodhi samvatsara, maagha shuddha saptami (Rrathasaptami) meditating upon Maadhava at Prayaga, Shri Hrishikesha Teertha completed his wordly journey. Information pertaining to this is recorded at the matha as below: Virōdhimāghārjunasaptamītithau varō hr̥ṣīkēśamunistapasvinām|
shri krishNArpaNamastu...
puruprabōdhāryakarābjasambhavō
dharāsutēśāṅghrisarōjamēyivān ||

shri hrishIkEsha tIrtha varada gOvindA gOvindA...
*******************


ಪೂಜ್ಯರಾದ ಆಚಾರ್ಯರು ಬಣ್ಣಿಸಿದರು ಭಾಗವತದ ಕಥೆಯನ್ನು;ಸಂಸಾರದಿಂದ ಪಾರು ಮಾಡುವ ಭಗವಂತನ ಕಥೆಯನ್ನು ;ಆಗ ಪುರಾಣದ ವಾಚನ ಮಾಡಿದರು ಅವರ ಹಿರಿಯ ಶಿಷ್ಯನಾದವರು,ಸ್ವರವಂತಿಕೆ ಮುಂತಾದ ಗುಣಗಳಿಂದ ಆಚಾರ್ಯರ ಕಂಠಕ್ಕೆ ಹೊಂದುವ ಶ್ರುತಿಯಲ್ಲಿ ಹಾಡಬಲ್ಲವರು

"ಅವದತ್ ಸ ಕಥಾಂ ರಥಾಂಗ-ಪಾಣೇಃ..ಭಗವಾನ್ ಭಾಗವತೇ ಭವಾಪ-ಹಂತ್ರೀಮ್..ಅನುಕೂಲ-ಗುಣ-ಸ್ವರಾದಿ-ಭಾಜಾ..ನಿಜ-ಶಿಷ್ಯ-ಪ್ರವರೇಣ ವಾಚ್ಯಮಾನೇ"
    (ಶ್ರೀಮಧ್ವವಿಜಯ)
     (ಅನುವಾದ-ಬನ್ನಂಜೆ)

ಮಧ್ವವಿಜಯದಲ್ಲಿ ಅಸ್ಪಷ್ಟವಾಗಿ ಹೇಳಿದ "ನಿಜಶಿಷ್ಯಪ್ರವರೇಣ"ಹಿರಿಯ ಶಿಷ್ಯ ಎನ್ನುವುದಕ್ಕೆ ನಾರಾಯಣ ಪಂಡಿತಾಚಾರ್ಯರೇ ಭಾವಪ್ರಕಾಶಿಕೆಯಲ್ಲಿ "ನಿಜಶಿಷ್ಯಪ್ರವರೇಣ ಹೃಷೀಕೇಶತೀರ್ಥೇನ"ಎಂದು ಸ್ಪಷ್ಟಪಡಿಸಿರುವರು....

ಶ್ರೀಹೃಷೀಕೇಶತೀರ್ಥರ ಸ್ವರಗಾಂಭೀರ್ಯ ಶ್ರೀಮಧ್ವಾಚಾರ್ಯರ ಸ್ವರ-ಗಾಂಭೀರ್ಯಗಳಿಗೆ ಹೋಲುವಂತಿತ್ತು..ಪ್ರವಚನ ಕಾಲದಲ್ಲಿ ಮೂಲಗ್ರಂಥಗಳ ವಾಚನಕ್ಕಾಗಿ ಆಚಾರ್ಯರು ಶ್ರೀಹೃಷೀಕೇಶತೀರ್ಥರನ್ನು ಆಯ್ದುಕೊಂಡಿದ್ದರು ಎನ್ನುವುದಾಗಿ ಇತಿಹಾಸ ತಿಳಿಸುತ್ತದೆ..ಹೀಗಾಗಿ  ಹೃಷೀಕೇಶತೀರ್ಥರು ಪಡೆದ ಭಾಗ್ಯ ಅತ್ಯಂತ ದೊಡ್ಡದು...ಇವತ್ತು ನಾವು ಗುರುತಿಸುವ  "ಪಲಿಮಾರು ಮಠದ" ಮೂಲಯತಿಗಳು...

ಮಾಧ್ವಸಮಾಜ ಎಂದೂ ಮರೆಯಬಾರದ ಹೃಷೀಕೇಶತೀರ್ಥರ ಇನ್ನೊಂದು ಸಾಧನೆಯೆಂದರೆ ಶ್ರೀಮದಾಚಾರ್ಯರ ಸರ್ವಮೂಲಗ್ರಂಥಗಳ ದಾಖಲೆ...ಎಲ್ಲ ಗ್ರಂಥಗಳು ಸಿಕ್ಕಿಲ್ಲವಾದರೂ ಸಿಕ್ಕಿದ ಗ್ರಂಥಗಳಲ್ಲಿ ಜನ್ಮಜನ್ಮಗಳಿಗೆ ಬೇಕಾದಷ್ಟು ಮುತ್ತುರತ್ನಗಳಿವೆ...ಮುತ್ತುರತ್ನಗಳ ಪರಿಚಯವಿರದ ಮಂದಿ ಮುತ್ತುರತ್ನಗಳನ್ನು ತಿರಸ್ಕರಿಸಿಬಿಟ್ಟಕೂಡಲೆ ಅದರ ಬೆಲೆ ಒಂದಿನಿತೂ ಕಡಿಮೆಯಾಗುವುದಿಲ್ಲ ತಾನೆ...?

 ಹೃಷೀಕೇಶತೀರ್ಥರನ್ನು ಆಳವಾದ ಅಧ್ಯಯನದ ಮೂಲಕ ಅರ್ಥೈಸಿಕೊಳ್ಳಲು ಪ್ರಯತ್ನಪಟ್ಟರೆ ಆನಂದಪಡುವುದಂತು ಸತ್ಯ...

ಹೃಷೀಕೇಶತೀರ್ಥರೆನ್ನುವ ಶಬ್ದ ಕೇಳಿದ ಕೂಡಲೆ ನೆನಪಾಗುವ ಇನ್ನೊಂದು ಹೆಸರೇ ಶ್ರೀಯುತ ಬನ್ನಂಜೆ ಗೋವಿಂದಾಚಾರ್ಯರು...ಶತಮಾನಗಳ ಕಾಲ ತಪಸ್ವಿಯಂತೆ ಒಳಗೆ ಕೂತಿದ್ದ ಹೃಷೀಕೇಶತೀರ್ಥರ(ಹಸ್ತಪ್ರತಿಯ)ನ್ನು ರಾತ್ರಿಹಗಲೆನ್ನದೆ ದೇಹಬುದ್ಧಿಗಳಿಗೆ ವಿಶ್ರಾಂತಿ ನೀಡದೆ ಅದನ್ನು ಸಂಶೋಧಿಸಿ ನಮ್ಮ ಕಾಲದ ಜನಕ್ಕೆ ಪರಿಚಯಿಸಿದ ಮಹಾತ್ಮರು..ಆಚಾರ್ಯರ ಕಾಲದ ಹೃಷೀಕೇಶತೀರ್ಥರಿಗೂ ಬನ್ನಂಜೆ ಆಚಾರ್ಯರಿಗೂ ಅದಾವ ಋಣಾನುಬಂಧವೋ ಆಚಾರ್ಯರೇ ಬಲ್ಲರು..ಹೃಷೀಕೇಶತೀರ್ಥರನ್ನು ನೀಡುವ ಮೂಲಕ ನಮಗಂತು ನೇರ ಆಚಾರ್ಯರ  ಸಂಪರ್ಕ ಸಿಗುವಂತೆ ಮಾಡಿದರು...ಇಂತಹ ಕೊಡುಗೆ ನೀಡಿದ ಆಚಾರ್ಯರಿಗೆ ಹಾಗೂ ಪಟ್ಟದ ದೇವರಾದ  ಶ್ರೀರಾಮನಂತೆಯೇ ಹಸ್ತಪ್ರತಿಯನ್ನು ಪೂಜಿಸಿ ಸಂರಕ್ಷಿಸಿ ಇಡಿಯ ಮಾಧ್ವಸಮಾಜವೇ ಹೆಮ್ಮೆ ಪಡುವಂತೆ ಮಾಡಿದ ಪಲಿಮಾರು ಮಠದ ಯತಿಪರಂಪರೆಗೆ ನಾವು ಎಂದೂ ಕೃತಜ್ಞರು...

ಶ್ರೀಮದಾಚಾರ್ಯರು ಬದರಿಗೆ ತೆರಳಿದ ನಂತರ ಹನ್ನೆರಡು ವರುಷಗಳ ಕಾಲ ಇಲ್ಲಿದ್ದು  ಕೊನೆಯ ದಿನಗಳಲ್ಲಿ ಗಂಗೆಯ ತಡಿಯಲ್ಲಿ ಸಾಧನೆ ಮಾಡಿ, ಸಾಧಕನ ಕೊನೆಯ ದಿನಗಳು ಹೇಗಿರಬೇಕೆಂದು ತೋರಿಸಿಕೊಟ್ಟು; ರಥಸಪ್ತಮಿಯ ದಿನದಂದು ತಮ್ಮನ್ನು ಗಂಗೆಯ ಮೂಲಕ ಗಂಗಾಜನಕನಿಗೆ ಅರ್ಪಿಸಿಕೊಂಡವರು ಶ್ರೀ ಹೃಷೀಕೇಶತೀರ್ಥರು..ಇಂತಹ ಹೃಷೀಕೇಶತೀರ್ಥರ ಆರಾಧನೆಯ ಪರ್ವಕಾಲ ಇವತ್ತು...ಶ್ರೀಮದಾಚಾರ್ಯರ ಸೇವೆಗಾಗಿ ಇಡಿಯ ಬದುಕನ್ನು ಮೀಸಲಿಟ್ಟ ಆ ಚೇತನಕ್ಕೆ ನಮನಗಳನ್ನರ್ಪಿಸುತ್ತಾ ಈ ಲೇಖನವನ್ನು ಆ ಚೇತನದ ಅಂತರ್ಯಾಮಿಗೆ ಅರ್ಪಿಸುತ್ತೇನೆ...

-ಕೃಷ್ಣಸಖ,ಮುದರಂಗಡಿ
*************


No comments:

Post a Comment