Wednesday, 20 February 2019

vishwapriya teertharu present pontiff matha adamaru mutt yati 33 ವಿಶ್ವಪ್ರಿಯ ತೀರ್ಥರು




Sri Vishwapriya Theertha (present pontiff)
Sri Viswapriya Theertha is the 32nd saint after Madhwacharya in the guru parampare of Adamaru mutt.
Poorvashrama Name : Sri Raghavendra Mucchintaya
Ashrama Guru : Sri Vibudhesha Theertha
********


Shri Vishwapriyateertharu

He born at Puttige, near Moodubidre in 1958. His parents are Shri Gururaj Mucchintaaya and Shreemati Lakshmi .
In 1966, His Upanayana took place at Tirumala. 
In the year 1972, Paridhaavi Samvatsara Vaishakha Bahula Panchami He took Ashrama from Paryaya Swamiji Shri Vibudheshateertharu and Swamiji gave Him Ashrama Name as "Shri Vishwapriyateertharu". 

Later, He studied Shastra Adhyana in Shri Vidyamanyateertha Swamiji of Shri Palimaru Mutt/Shri Bhandarkeri Mutt.
Shri Vidyadheeshateertharu of Shri Palimaru Mutt, Shri Sugunendrateertharu of Shri Puttige Mutt, Shri Vidyeshateertharu of Bhandarkeri Mutt also studied Shastra Adhyayana with Shri Vishwapriyateertharu in Shri Vidyamanyateertharu.
He did Shri Nyaya Sudha mangala in the year 1984 at Admar. 
One can observe tapassu, vairagya, nishthe,devotion to God in Him. 

His 1st Paryaya at Udupi Shri Krishna Mutt(1988-90):
Ashrama Guru Shri Vibudheshateertha Swamiji performed Paryaya by Shri Vishwapriyateertharu. 
Shri Vibudheshateertharu looked after renovation of Shri Krishna Mutt, construction of Bhojana Shale and other facilities. Shri Vishwapriyateertharu involved in Shri Krishna Pooje, Dharmika-Samskrutika Programs, Paatha-Pravachana's. During Paryaya Daily evening He delivered Pravachana on Shri Mahabharatha. 

His 2nd Paryaya at Udupi Shri Krishna Mutt(2004-06):
Shri Vishwapriyateertharu performed Paryaya Utsava independently by the order of Shri Vibudheshateertharu. 

His third Paryaya at Udupi Shri Krishna Mutt (2020-22):

Presently Adamaru Mutt is performing the pooja and overseeing all activities of Sri Krishna Mutt.  Shri Vishwapriyateertharu is the pontiff.

His works include:
Renovation of Silver Chariot, Continuation of 'Chinnara Santarpane' yojane started by Shri Palimaru Mutt Swamiji, re-construction of Shri Krishna Mutt Gopura and many more...

Shri Vishwapriyateertha Swamiji is well known for his achievements in spiritual sphere, He has enlightened thousands of people through his profound discourses, full of spiritual thoughts. 
**********

'ಸಾರಸ್ವತ ಸಾನ್ನಿಧ್ಯ'ಲೇಖನ ಮಾಲಿಕೆಯ ತೊಂಬತ್ತನೆಯ ಲೇಖನ-ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದಂಗಳವರು
ಸರಸವಾದ ಶೈಲಿಯಲ್ಲಿ ಶ್ರವಣಾನಂದಕರವಾಗುವಂತೆ 'ರಸೋ ವೈ ಸ:'ನಾದ ಸರಸಿಜನಾಭನ ಗುಣಗಳ ವಿನೂತನವಾದಂತಹ ಅನುಸಂಧಾನ ಪ್ರತಿಯೊಂದು ಪ್ರವಚನದಲ್ಲಿಯೂ ಮಾಡುವುದು ಸುಲಭಸಾಧ್ಯವಲ್ಲ. ಅಂತಹ ಗುಣಾನುಸಂಧಾನ ನಾಲಗೆಯ ಮೂಲಕ ವ್ಯಕ್ತವಾಗಬೇಕೆಂದರೆ, ಮನಸ್ಸು ಬಹುಕಾಲ ಅಂತಹ ಅನುಸಂಧಾನದಲ್ಲಿ ಲೀನವಾಗಿರಬೇಕು. ಅಂತಹ ಅಪರೂಪದ ಪ್ರವಚನಗಳಿಂದ ನಾಡಿನಾದ್ಯಂತ ಅಷ್ಟೇ ಯಾಕೆ ರಾಷ್ಟ್ರದಾದ್ಯಂತ ಖ್ಯಾತರಾದವರು ಅದಮಾರು ಮಠದ ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದಂಗಳವರು. "ಪ್ರವಚನದಲ್ಲಂತೂ ಇವರನ್ನು ಮೀರಿಸುವವರಿಲ್ಲ, ನಮ್ಮ ಗುರುಗಳಾದ ಶ್ರೀಶ್ರೀವಿದ್ಯಾಮಾನ್ಯತೀರ್ಥರೂ ಪ್ರವಚನ ನಡೆಸಬೇಕಾದ ಪ್ರಸಂಗವು ಬಂದಾಗ ಮೈಕನ್ನು ಮೊದಲು ಇವರ ಎದುರೇ ಇಡುವಷ್ಟೂ ಇವರ ಪ್ರವವನಗಳನ್ನು ಮೆಚ್ಚಿಕೊಂಡಿದ್ದರು. ದೊಡ್ಡವಿಷಯವನ್ನು ತುಂಬಾ ಚುಟುಕಾಗಿಯೂ, ಚಿಕ್ಕ ವಿಷಯವನ್ನೂ ತುಂಬಾ ವಿಸ್ತಾರವಾಗಿಯೂ ಹೇಳುವ ಸಾಮರ್ಥ್ಯ ಶ್ರೀಗಳವರಲ್ಲಿದೆ" ಎಂದು ಶ್ರೀವಿಶ್ವಪ್ರಿಯತೀರ್ಥರ ಸಹಾಧ್ಯಾಯಿಗಳೂ ಸ್ವತ: ಮಹಾವಿದ್ವಾಂಸರೂ ಆದ ಶ್ರೀವಿದ್ಯಾಧೀಶರು ಶ್ರೀವಿಶ್ವಪ್ರಿಯತೀರ್ಥರ ಪ್ರವಚನಗಳ ಬಗ್ಗೆ ನುಡಿದಿರುವ ಮಾತುಗಳನ್ನು ಗಮನಿಸಿದಾಗ ಶ್ರೀಗಳ ಪ್ರವಚನದ ವೈಶಿಷ್ಟ್ಯತೆ ಗೋಚರವಾಗುತ್ತದೆ. ಶ್ರೀಹರಿಕಥಾಮೃತಸಾರ, ಶ್ರೀರುಗ್ಮಿಣೀಶವಿಜಯ, ಭಾಗವತ, ಭಾರತ, ಶ್ರೀವಿಷ್ಣುಸಹಸ್ರನಾಮ ಚಿಂತನೆ ವಿಷಯ ಯಾವುದೇ ಇರಲಿ -ನಿತ್ಯನೂತನವಾದ ಮತ್ತು ಅಷ್ಟೇ ಶಾಸ್ತ್ರಸಮ್ಮತವಾದ ಪ್ರವಚನ ಶ್ರೀಗಳದು. ಸಮಕಾಲೀನ ವಿಷಯಗಳನ್ನೂ ಪುರಾಣಗಳೊಂದಿಗೆ ಅರ್ಥವತ್ತಾಗಿ ಬೆಸೆಯುವ ಶ್ರೀಗಳ ಕೌಶಲ ಅನ್ಯಾದೃಶ.
ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದಂಗಳವರು ಜನಿಸಿದ್ದು 1958ರ ಜೂನ್ ಮೂವತ್ತರಂದು. ತಂದೆ ಶ್ರೀಗುರುರಾಜ ಮುಂಚಿತ್ತಾಯ ಮತ್ತು ತಾಯಿ ಶ್ರೀಮತಿ ಲಕ್ಷ್ಮೀ ಮುಂಚಿತ್ತಾಯ. ಮೂಡಬಿದಿರೆಯಲ್ಲಿ ಜನಿಸಿದ ಶ್ರೀಗಳ ಪೂರ್ವಾಶ್ರಮದ ಹೆಸರು ರಾಘವೇಂದ್ರ ಮುಂಚಿತ್ತಾಯ. ಪುತ್ತಿಗೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ಶ್ರೀರಾಘವೇಂದ್ರ ಮುಂಚಿತ್ತಾಯರಿಗೆ 1/6/1972 ಅದಮಾರು ಪರ್ಯಾಯಕಾಲದಲ್ಲಿ ಸರ್ವಜ್ಞಪೀಠದಲ್ಲಿದ್ದ ಶ್ರೀವಿಬುಧೇಶತೀರ್ಥರು ಶ್ರೀವಿಶ್ವಪ್ರಿಯತೀರ್ಥರೆಂಬ ಆಶ್ರಮನಾಮದೊಂದಿಗೆ ತುರೀಯಾಶ್ರಮವನ್ನು ನೀಡಿದರು. ಶ್ರೀವಿಬುಧೇಶತೀರ್ಥರು ಮಠದ ಮೂಲಸ್ಥಳವಾದ ಅದಮಾರುವಿನಲ್ಲಿ ಸ್ಥಾಪಿಸಿದ ಆದರ್ಶಗುರುಕುಲದಲ್ಲಿ, ವಿದ್ಯೆಯ ಮೇರು ಪರ್ವತವೇ ಆಗಿದ್ದಂತಹ ಶ್ರೀವಿದ್ಯಾಮಾನ್ಯತೀರ್ಥರ ಬಳಿಯಲ್ಲಿ ತಮ್ಮ ವೇದಾಂತದ ಅಧ್ಯಯನವನ್ನು ಶ್ರೀವಿಶ್ವಪ್ರಿಯರು ಪ್ರಾರಂಭಿಸಿದರು. ಶ್ರೀವಿಶ್ವಪ್ರಿಯರ ಸಹಾಧ್ಯಾಯಿಗಳಾಗಿದ್ದವರು ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು, ಪಲಿಮಾರು ಮಠದ ಶ್ರೀವಿದ್ಯಾಧೀಶರು ಹಾಗೂ ಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥರು. 1984 ರಲ್ಲಿ ಶ್ರೀಮನ್ನ್ಯಾಯಸುಧಾ ಗ್ರಂಥದ ಮಂಗಳವನ್ನು ನೆರವೇರಿಸಿದ ಶ್ರೀವಿಶ್ವಪ್ರಿಯತೀರ್ಥರು ಐದಕ್ಕೂ ಹೆಚ್ಚು ಬಾರಿ ಸುಧಾಮಂಗಳವನ್ನು ನೆರವೇರಿಸಿದ್ದು, ಶ್ರೀಕರ್ನೂಲು ಶ್ರೀನಿವಾಸಾಚಾರ್ಯರು, ಶ್ರೀರಘೂತ್ತಮಾಚಾರ್ಯರು, ಶ್ರೀ ವಂಶೀಕೃಷ್ಣಾಚಾರ್ಯ ಪುರೋಹಿತರೇ ಮೊದಲಾದ ಅನೇಕ ವಿದ್ವಾಂಸರು ಶ್ರೀಗಳ ಬಳಿಯಲ್ಲಿ ಅಧ್ಯಯನ ಮಾಡಿದ್ದಾರೆ. 1988-90ರಲ್ಲಿ ಶ್ರೀವಿಬುಧೇಶತೀರ್ಥರು ಶ್ರೀವಿಶ್ವಪ್ರಿಯತೀರ್ಥರಿಂದಲೇ ಪರ್ಯಾಯವನ್ನು ನಡೆಸಲು ಸಂಕಲ್ಪಿಸಿದರು. ಶ್ರೀಮಧ್ವಭಗವತ್ಪಾದರ 750ನೆಯ ಜಯಂತಿ ಉತ್ಸವವೂ ಈ ಪರ್ಯಾಯಕಾಲದಲ್ಲಿಯೇ ನಡೆದಿದ್ದು ವಿಶೇಷ ಮಾತ್ರವಲ್ಲದೆ ಶ್ರೀವಿದ್ಯಾಮಾನ್ಯರ ಕನಸಾಗಿದ್ದ ವಜ್ರಕಿರೀಟವನ್ನೂ ಶ್ರೀಕೃಷ್ಣನಿಗೆ ಸಮರ್ಪಿಸಲಾಯಿತು. ಶ್ರೀಗಳು ಪ್ರತಿನಿತ್ಯವೂ ಮಹಾಭಾರತ ಕುರಿತು ಪ್ರವಚನ ನೀಡಿದ್ದು ಪ್ರಥಮ ಪರ್ಯಾಯದ ವಿಶೇಷ. 2004-2006ರ ಪರ್ಯಾಯವೂ 'ಪುರಾಣಪರ್ಯಾಯ'ವೆಂದೇ ಪ್ರಖ್ಯಾತವಾಗಿತ್ತು. ವಿದ್ವಾಂಸರು ಅಷ್ಟಾದಶಪುರಾಣಗಳನ್ನು ಕುರಿತು ನೀಡಿದ ಉಪನ್ಯಾಸಗಳು ಪರ್ಯಾಯದ ವಿಶೇಷ.  ಶ್ರೀ ವಿಶ್ವಪ್ರಿಯತೀರ್ಥರೂ ಎರಡುವರ್ಷಗಳ ಕಾಲವೂ ಶ್ರೀವಿಷ್ಣುಸಹಸ್ರನಾಮದ ಪ್ರತಿಯೊಂದು ನಾಮವನ್ನೂ ಕುರಿತು ನೀಡಿದ ಪ್ರವಚನ ಅತ್ಯದ್ಭುತ. ಶ್ರೀವಿಶ್ವಪ್ರಿಯತೀರ್ಥರು ನೀಡಿದ ಪ್ರವಚನಗಳು 'ವಿಶ್ವಪ್ರಿಯಟೀಕಾ' ಕನ್ನಡಟಿಪ್ಪಣಿಯ ಬೆಳಕಿನಡಿಯಲ್ಲಿ ಪ್ರಕಟಗೊಂಡಿದ್ದು, ಶ್ರೀವಾದಿರಾಜಗುರುಸಾರ್ವಭೌಮರ ಮಹಾಕಾವ್ಯ ಶ್ರೀರುಗ್ಮಿಣೀಶವಿಜಯ ಕ್ಕೆ ಶ್ರೀಗಳು ನೀಡಿದ ವ್ಯಾಖ್ಯಾನ ಮೂರು ಸಂಪುಟಗಳಲ್ಲಿ ಪ್ರಕಟಗೊಂಡಿದೆ. ಶ್ರೀವಿಶ್ವಪ್ರಿಯತೀರ್ಥರು ರಚಿಸಿದ ಲೇಖನಗಳು 'ಜ್ಞಾನಯಜ್ಞ' ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಗೊಂಡಿವೆ. ಶ್ರೀವಿಶ್ವಪ್ರಿಯತೀರ್ಥರು ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶಮೊದಲಾದೆಡೆಗಳಲ್ಲಿ ನೀಡಿರುವ ಪ್ರವಚನಗಳಂತೂ ಅಸಂಖ್ಯ. ತಮ್ಮ ಗುರುಗಳು ತಮ್ಮಿಂದ ಪರ್ಯಾಯವನ್ನು ನಡೆಸಿದ ರೀತಿಯಲ್ಲೇ, ಶಿಷ್ಯರಾದ ಶ್ರೀಈಶಪ್ರಿಯತೀರ್ಥರಿಗೆ ಮಾರ್ಗದರ್ಶಕರಾಗಿ ಅವರಿಂದ ಪರ್ಯಾಯವನ್ನು ನಡೆಸಲು ಅವಕಾಶನೀಡಿರುವ ಶ್ರೀವಿಶ್ವಪ್ರಿಯತೀರ್ಥರ ಶ್ರೀವೇದವ್ಯಾಸ-ಮಧ್ವರ ಸೇವೆ ನಿರಂತರವಾಗಿ ನಡೆಯಲಿ, ಶ್ರೀಗಳ ಅಧ್ಯಾತ್ಮ ಮಾರ್ಗದರ್ಶನ ನಾಡಿಗೆ ಚಿರಕಾಲ ದೊರೆಯಲಿ. ಶ್ರೀಕೃಷ್ಣ,ಮಧ್ವರು ಪ್ರೀತರಾಗಲಿ.  ವೇಣುಗೋಪಾಲ ಬಿ.ಎನ್.
*******

No comments:

Post a Comment