vaishAka shudha yEkAdashI is the ArAdhane of shri vidyAmAnya tIrtharu of bhanDArakEri and palimAru maTAs.
Sri Vidyamanya Theertha is the 29th saint after Sri Hrishikesha Theertha in the guru parampare of Palimar mutt.
Poorvashrama Name : Sri Narayana Tantri
Ashrama Guru : Sri Vibudhapriya Theertha (admar mutt)
Ashrama Shishya: Sri Vidyadheesha Theertha (Palimar mutt)
Sri Vidyesha Theertha (Bhandarkere mutt)
Vrundavana/place of demise : Palimar
Parampare:
palimAru maTa, #30 and bhandArakEri maTa, #31
palimAru maTa, #30 and bhandArakEri maTa, #31
Ashrama Period: 1925 - 2000 Born 1913
ब्रह्मचर्यहरिप्रीति सुविद्यावादशालिन: ।
इष्टदान् कष्टहलतर्न्न: विद्यामान्यान्मुनीन्नुम : ॥
श्रीमध्वसिद्धांत समर्थनैकदीक्षं सदैव प्रवचोsनुरक्तम् ।
विद्यातप:सिंधुमुदार विद्यामान्यं गुरूणां गुरुमानमामि ॥
ಬ್ರಹ್ಮಚರ್ಯಹರಿಪ್ರೀತಿ ಸುವಿದ್ಯಾವಾದಶಾಲಿನ: |
ಇಷ್ಟದಾನ್ ಕಷ್ಟಹಲತರ್ನ್ನ: ವಿದ್ಯಾಮಾನ್ಯಾನ್ಮುನೀನ್ನುಮ : ||
ಶ್ರೀಮಧ್ವಸಿದ್ಧಾಂತ ಸಮರ್ಥನೈಕದೀಕ್ಷಂ ಸದೈವ ಪ್ರವಚೋsನುರಕ್ತಮ್ |
ವಿದ್ಯಾತಪ:ಸಿಂಧುಮುದಾರ ವಿದ್ಯಾಮಾನ್ಯಂ ಗುರೂಣಾಂ ಗುರುಮಾನಮಾಮಿ ||
ಅನವದ್ಯಾತ್ಮಚಾರಿತ್ರ್ಯಂ ವಾದಿಖದ್ಯೋತಭಾಸ್ಕರಂ
ವಿದ್ಯಾಮಾನ್ಯಗುರುಂ ವಂದೇ ವಿದ್ಯಾವಿದ್ಯೋತಭಾಸ್ಕರಂ
anavadyAtmacAritryaM vAdikhadyOtabhAskaraM
vidyAmAnyaguruM vaMdE vidyAvidyOtabhAskaraM
Sri Vidyamanya Theertha took Ashrama from Sri Vibudhapriya Theertha of admar mutt and ruled Peeta for about 31 years (1969-2000). He is a great saint born to Smt Radhamma & Sri Ramakrishna Tantri. He got Upanayana in eight year. He has learnt under Satyadhyana Theertha of Uttaradhi mutt.
Initially he was initiated sanyasa by Vibudhapriya Theertha of admar mutt and later been made head of Bhandarkere mutt by Sri Vidyavarna Theertha who was the head of that mutt. When Sri Raghuvallabha Theertha of Palimar mutt relinquished sanyasa as well as Peeta in 1969, he took in charge of both Bhandarkere and Palimar mutt. Thus he became head of both the mutts from then onwards. He got an opportunity to do Udupi Krishna Pooja after becoming head of Palimar mutt. He is the only saint after Vishnu Theertha (Poorvashrama brother of Madhwacharya) to become head of 2 mutts. Vishnu Theertha was head of Sode and Subramanya mutt.
He was Vidya guru to many famous personalities, few include Sri Viswesha Theertha (Pejawar mutt), Sri Vidyadheesha Theertha (Palimar mutt), Sri Viswapriya Theertha (admar mutt), Sri Sugunendra Theertha (Puttige mutt), Sri Vidyesha Theertha (Bhandarkere mutt), Sri Vidyavallabha Theertha (Prayaga mutt), Lakshmindra Theertha (Kundapur mutt) etc. He was a good debater and excellent speaker. He wrote many Khandana Grantha’s on opposite schools of thought. Few include,
Adwaitattvasudha sameeksha
Tattvamartandavimarsha
Mayavadanirasakhyagranthanekarthamalika
He also wrote in Kannada like Gayatriya Gambhirya and Nastikya nirasha.
He did Kannada anuvada to tatva sankhyana, tatva viveka and khandana trayas.
He took initiative in publishing many old works of great saints. He published Vishnu Sahasranama in Kannada with detailed meaning to each name.
He tried to bring common ekadashi for all madhwas but could not succeed in achieving the same. He taught Sudha and Chandrika to many students. He was instrumental in renovating many of mutt branches. During his end he showed great regard to Sri Sushameendra Theertha of Rayara mutt. He took the hands of Sushameendra Theertha and kept on his head as he could see Rayaru in him. This incidence was romanchana.
After handing over Peeta to Sri Vidyadheesha Theertha he entered Vrundavana at Palimar.
****
info from sripalimarumatha.org--->
Shri Vidyamaanya Teertha was born on July 27th,1913 to a pious couple Shri Kuppanna Tantry and Smt.Radhamma at Ermaalu village of South Canara district in Karnataka.
His birth name was Narayana. Narayana received his initial education from his father who was held in high regard for his knowledge in dharma shastras and sampradaya. His upanayana was performed when he was 8 years old. He received mantropadesha from Shri Sudheendra Teertha. He went on to study at Shri M.S.P Mahapatashala which was run at the Ananteshwara Temple, Udupi during that period. At the age of 12, he was initiated into sainthood on November 5th, 1925 during Krodhana nama samvatsara by His Holiness Shri Vibuddhapriya Teertha of Adamaru Matha. Narayana was given the pranavopadesha and named Vidyamaanya Teertha. He was ordained as the 34th Pontiff of Shri Bhandarakeri Matha.
Shri Vidyamaanya Teertha’s thirst for knowledge was immense. He studied the preliminary Vedanta texts under Shri Vibuddhapriya Teertha for four years. Thereafter, under the tutelage of an eminent scholar Shri Inna Vasudevacharya he studied the Dashaprakarana, Dashopanishat and Tatvaprakaashika. He then went on to study the advanced texts of Vedanta such as Nyaya Sudha, Nyaayamrita, Tatparya Chandrika and Tarka Tandava under Shri Satyadhyana Teertha of Uttaradi Matha. After performing Shri Nyaya Sudha Mangala, Shri Satyadhyana Teertha is said to have addressed Shri Vidyamaanya Teertha and exclaimed “You have indeed become a jnaana bhandara (repository of knowledge)” owing to his erudition. Aged about 27 years, Shri Vidyamaanya Teertha thus completed his adhyayana.
Thereafter, for the remaining 60 years of his life, Shri Vidyamaanya Teertha went on to extensively propagate and create awareness about the tenets of Dvaita philosophy amongst a cross section of people across the country. His scholarly lectures on Vedanta in lucid language enabled him to connect with the common man. This won him thousands of devotees and the hitherto unknown Matha of Bhandarakeri became widely noted across states. During the course of his life, he went on to win several debates against the stalwarts of Advaita and Vishistadvaita and establish the Madhva siddhanta.
Shri Vidyamaanya Teertha has contributed enormously to the students of Madhva philosophy. The most notable amongst them is the establishment of Shri Madhva Raddhanta Samvardhaka Sabha in the year 1944 through which he invigorated innumerable students and scholars to study and propagate Dvaita Vedanta. The generous honorarium he awarded inspired them to attend the Sabha regularly and earn his appreciation by showcasing their erudition in Dvaita Vedanta. The establishment organized lectures, conducted debates and was instrumental in bringing out a publication called Dasha Prakarana that contained rare commentaries hitherto unpublished, as well as Sarvamoola with Hrishikesha Teertha Paata.
Another significant contribution of Shri Vidyamaanya Teertha has been his teaching and moulding of several Peetaadhipatis of impeccable rectitude and profound scholarship in Dvaita Vedanta. The foremost of his students is the revered present Peetaadhipati of Shri Pejavara Matha, Shri Vishwesha Teertha. He trained him rigorously from a tender age and shaped him into the great Dvaita philosopher and saintly person we see today. It was Shri Vidyamaanya Teertha who advised Shri Vishwesha Teertha to institute a Vidyapeeta to foster competent scholars in Dvaita Vedanta and allied shastras to preserve and promulgate the tradition for generations to come. Heeding the words of his guru, Poornaprajna Vidyapeeta saw the day of light in the year 1956.
Shri Krishna and Acharya Madhwa seemed pleased with the services rendered by Shri Vidyamaanya Theertha. He was anointed as the Pontiff of Shri Palimaru Matha (One of the Ashta Mathas) on February 3rd, 1969 and thus became the only seer to head two mathas simultaneously and to have worshipped Shri Krishna at Udupi.
In the year 1973, Shri Vidyamaanya Teertha made a pivotal decision to cancel all his tours and stay put at Adamaru village near Udupi. This decision was made in order to impart education in Dvaita Vedanta and allied shastras to four young sanyasins who were initiated into sanyasa to adorn the Peetas of four Mathas. For the next 10 years Shri Vidyamaanya Teertha taught and sculpted the four of them into excellent scholars and strong pillars of Dvaita siddhanta. These four gems are Shri Vishwapriya Teertha of Adamaru Matha, Shri Vidyadeesha Teetha of Palimaru Matha, Shri Sugunendra Teertha of Puttige Matha and Shri Vidyesha Teertha of Bhandarakeri Matha.
The literary works of Shri Vidyamaanya Teertha include Advaita Tattva Samiksha, Tattva Martanda Vimarsa, Mayavada Nirasaakhya Granthanekartha Malika, Madhwa Sidhanta
Shri Vidyamaanya Teertha has performed two paryayas at Shri Krishna Matha. During those paryayas, he has offered a gold cradle, a gold chariot and a diamond crown to Lord Krishna with the cooperation of his devotees.
Known as the Seer of the Century, the 88 year old Shri Vidyamaanya Teertha attained haripada on Suddha Ekadashi of Vaishakha Masa (May 14th, 2000). He was a great soul who will continue to be remembered for his saintly qualities, devout disposition, vast knowledge of the shastras and invaluable contribution to the preservation and propagation of Madhva philosophy.
***********
He was given sanyAsa in bhanDarakeri maTa by shri vibhudhapriya tIrtharu of adamAru maTa in 1925. He was 12 years old at that time. Shri vidyAmAnya tIrtharu studied under shri vibhudhapriya tIrtharu at ghaTikAchala until 1929 when shri vibhudhapriya tIrtharu attained brindAvana at ghatikachala. Later he continued his studies with satyadhyAna tIrtharu of uttarAdhi maTa.
In 1969, he was also inducted into palimAru maTA as pITAdhipathi when the incumbent pITAdhipathi abdicated the pITa.
In the year 1973, shri vidyAmAnya tIrtha made a pivotal decision to cancel all his tours and stay put at Adamaru village near Udupi. This decision was made in order to impart education in Dvaita Vedanta and allied shastras to four young sanyasins who were initiated into sanyAsa to adorn the pITAs of four Mathas. For the next 10 years shri vidyAmAnya tIrtha taught and sculpted the four of them into excellent scholars and strong pillars of Dvaita siddhanta. These four gems are Shri Vishwapriya tIrtha of Adamaru Matha, Shri Vidyadeesha tIrtha of Palimaru Matha, Shri Sugunendra tIrtha of Puthige Matha and Shri Vidyesha tIrtha of Bhandarakeri Matha.
shri vishvEsha tIrtha swAmIji of pEjAvara maTa is also his vidyA shishyaru.
The literary works of Shri Vidyamaanya tIrtharu include Advaita Tattva Samiksha, Tattva Martanda Vimarsa, Mayavada Nirasaakhya Granthanekartha Malika, Madhwa Siddhantha.
He had performed several miracles including bringing rain to drought hit area, curing people of ailments.
Till his last breath he advocated and fought to bring in a single uniform yEAdashI across all mAdhwa maTAs.
While he had his initial education in and around Udupi, later he continued his studies with satyadhyAna tIrtharU of uttarAdhi maTa.
While he had his initial education in and around Udupi, later he continued his studies with satyadhyAna tIrtharU of uttarAdhi maTa.
He attained brindAvana in 2000 and his mUla brindAvanA is at palimAru. There is a mrithika brindAvana at barkur bhanDarakeri maTa.
shri vidyAmAnya tIrtha guruvantargata, bhAratIramaNa mukhyaprAnantargata, sItA pate shri rAma dEvara pAdAravindakke gOvindA gOvindA...
shri krishNArpaNamastu...
*******
vaishAka shudha yEAdashI was the ArAdhanE of shri vidyAmAnya tIrtharU. It is being celebrated today.
He originally was given the sanyAsa in bhanDarakeri. maTA by shri vibhudhapriya tIrtharU in 1925. Later, in 1969, he was also inducted into palimAru maTA as pITAdhipathi when the incumbent pITAdhipathi abdicated the pITA.
While he had his initial education in and around Udupi, later he continued his studies with satyadhyAna tIrtharU of uttarAdhi maTa.
The current pITAdhipathis of puthige, palimAru, adamAr, bhanDarakeri maTAs are his shishyarus. Shri vishvEsha tIrtha swAmIji of pEjAvara maTa is also his shishyarU.
He had performed several miracles including bringing rain to drought hit area, curing people of ailments (including my father).
Once an astrologer studied his horoscope and identified his mUlarUpa and shared with the swamiji. Shri vidyAmAnyarU forbid the astrologer from revealing this to anyone else.
Till his last breath he advocated and fought to bring in a single uniform yEAdashI across all mAdhwa maTAs. It is hari chittha that he could not succeed in this.
He attained brindAvanA in 2000 and his brindAvanA is at palimAru.
Shri vidyAmAnya tIrtha gurubyO namaha...
Shri krishNArpaNamastu...
******
info from sumadhwaseva.com--->
to know more click here👇👇
****
ಪಲಿಮಾರು ಭಂಡಾರಿಕೇರೆ ಉಭಯ ಮಠಾಧೀಶ ಶ್ರೀ ವಿದ್ಯಾಮಾನ್ಯ ಗುರು ಸಮಾರಾಧನೆ.
ಪ್ರಾತಃ ಸ್ಮರಣೀಯ ಶ್ರೀ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರು .
ಮಾತಾಪಿತರು : ಶ್ರೀ ಕುಪ್ಪಣ್ಣ ತಂತ್ರಿಗಳು ಮತ್ತು ಶ್ರೀಮತಿ ರಾಧಮ್ಮ
ಜನ್ಮ ಸ್ತಳ - ಎರ್ಮಾಳು (ಉಡುಪಿಯಿಂದ ದಕ್ಷಿಣಕ್ಕೆ 13 ಮೈಲಿ)
ಜನ್ಮ ವರ್ಷ - 1913
ಜನ್ಮ ನಾಮ - ನಾರಾಯಣ
ಪ್ರಾಥಮಿಕ ವಿದ್ಯಾಬ್ಯಾಸ : ತಂದೆಗಳಿಂದ
ಉಪನಯನ - 8 ನೇ ವಯಸ್ಸಿನಲ್ಲಿ ,ಕ್ರೋದನ ನಾಮ ಸಂವತ್ಸರ (೦೫-೧೧-೧೯೨೫)
ಮಂತ್ರೋಪದೇಶ ನೀಡಿದ ಶತಾಯುಷಿ ಶ್ರೀ ಸುದೀಂದ್ರ ತೀರ್ಥರು.
ಆಶ್ರಮ ಗುರುಗಳು: ಶ್ರೀ ವಿಬುಧಪ್ರಿಯ ತೀರ್ಥರು
ಹೆಚ್ಚಿನ ವಿದ್ಯಾಬ್ಯಾಸ
೧. ಆಶ್ರಮ ಗುರುಗಳಾದ ಶ್ರೀ ವಿಬುಧಪ್ರಿಯ ತೀರ್ಥರಿಂದ ಮೂರು ವರ್ಷ ಕಾಲ
೨. ಶ್ರೀ ವಾಸುದೇವಾಚಾರ್ಯರಲ್ಲಿ - ದಶಪ್ರಕರಣಗಳು, ದಶೋಪನಿಷತ್ತು, ಮತ್ತು ತತ್ತ್ವಪ್ರಕಾಶಿಕಾ ಗ್ರಂಥಗಳ ಪಾಠ
೩. ಉತ್ತರಾಧಿಮಠದ ಶ್ರೀ ಸತ್ಯಧ್ಯಾನರಲ್ಲಿ - ಶ್ರೀಮನ್ನ್ಯಾಯಸುಧಾ, ತತ್ತ್ವಪ್ರಕಾಶಿಕಾ, ನ್ಯಾಯಾಮೃತ, ತರ್ಕತಾಂಡವ, ಗ್ರಂಥಗಳ ಪಾಠ.
ಗುರುಗಳಿಂದಲೇ ಪ್ರಶಸ್ತಿ : ವಿದ್ಯಾಬ್ಯಾಸವನ್ನು ಪೂರೈಸಿ ಹೊರಟ ಸಂದರ್ಭದಲ್ಲಿ ವಿದ್ಯಾಮಾನ್ಯರನ್ನು ಬಿಗಿದಪ್ಪಿ ಶ್ರೀ ಸತ್ಯಧ್ಯಾನ ತೀರ್ಥರು ಕೊಟ್ಟ ಹೊಗಳಿಕೆ " ನೀವು ವಿದ್ಯಾಭಂಡಾರ ಆಗಿರುವಿರಿ".
ಸುಧಾಮಂಗಳ : ಮೊದಲನೇ ಸುಧಾಮಂಗಳ ತಿರುಪತಿಯಲ್ಲಿ ಸತ್ಯಧ್ಯಾನರ ಸನ್ನಿಧಾನದಲ್ಲಿ, ಎರಡನೆಯದನ್ನು ಶ್ರೀರಂಗಂ ನಲ್ಲಿ ತಮ್ಮ ಚಾತುರ್ಮಾಸ್ಯ ಸಂದರ್ಭದಲ್ಲ್ಲಿ.
ಸಂನ್ಯಾಸ ಶಿಷ್ಯರು:
ಶ್ರೀ ಪೇಜಾವರ ಮಠ ವಿಶ್ವೇಶ ತೀರ್ಥರು
ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು
ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು
ಶ್ರೀ ಫಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು
ಶ್ರೀ ಭಂಡಾರುಕೇರಿ ಮಠದ ಶ್ರೀ ವಿದ್ಯೇಶ ತೀರ್ಥರು
ಈ ಐದು ಜನ ಸನ್ಯಾಸಿ ಶಿಷ್ಯರಿಗೆ ಹಲವಾರು ಸಂನ್ಯಾಸಿ ಶಿಷ್ಯರು, ಗೃಹಸ್ಥ ಶಿಷ್ಯರು ಇದ್ದಾರೆ. ಇಂದಿಗೂ ಶ್ರೀ ವಿದ್ಯಾಮಾನ್ಯರ ಶಿಷ್ಯ - ಪ್ರಶಿಷ್ಯರ ಸಂತತಿ ಬೆಳೆಯುತ್ತಿದೆ.
ವಾಗ್ಯುದ್ದದಲ್ಲಿ ವಿಜಯ
೧. 1940 ನೇ ಇಸವಿಯಲ್ಲಿ ಶ್ರೀ ತಾತಾಸುಬ್ಬರಾಯ ಶಾಸ್ತ್ರಿಗಳ ಜೊತೆ ವಾದವನ್ನು ನಡೆಸಿ ವಿಜಯಪ್ರದರಾದರು
೨. ಕಾಂಚಿಪೂರದಲ್ಲಿ ಕುಂಭಕೋಣದ ಕಾಮಕೋಟಿ ಶಂಕರಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ಅದ್ವೈತ ಸಭೆಯಲ್ಲಿ ಮಹಾಮಹೊಪಾದ್ಯಾಯ ಅನಂತ ಶಾಸ್ತ್ರಿ, ಶ್ರೀ ಸುಬ್ರಮಣ್ಯ ಶಾಸ್ತ್ರಿ ಮುಂತಾದವರ ಜೊತೆ ವಾಗ್ವಾದ - ಜಯ
೩. ಕಾಶಿಯಲ್ಲಿ 1958 ನೇ ಇಸವಿಯಲ್ಲಿ ಮಹಾಮಹೋಪಾಧ್ಯಾಯ ಗಿರಿಧರಶರ್ಮ ಚತುರ್ವೇದಿ ಇವರ ಅಧ್ಯಕ್ಷತೆಯಲ್ಲಿ ನಡೆದ ಅದ್ವೈತ ಸಭೆಯಲ್ಲಿ ಶ್ರೀಪಾದರ ವೈಶಿಷ್ಟ್ಯ ಮೆಚ್ಚಿ ಗೌರವಾರ್ಪಣೆ.
೪. ಶ್ರೀ ಅನಂತಕೃಷ್ಣ ಶಾಸ್ತ್ರಿಗಳು ಬರೆದ "ಅದ್ವೈತ ಸುಧಾ" ಎಂಬ ಶ್ರೀಮನ್ನ್ಯಾಯ ಸುಧಾ ಖಂಡನಾರೂಪವಾಗಿ " ಅದ್ವೈತ ತತ್ವಸುಧಾ ಸಮೀಕ್ಷಾ" ಎಂಬ ಗ್ರಂಥ ರಚನೆ
೫. ದಿಲ್ಲಿಯಲ್ಲಿ ದ್ವೈತಾದ್ವೈತ ಚರ್ಚೆಯ ಸಂದರ್ಭದಲ್ಲಿ ಶ್ರೀ ರಾಮಚಂದ್ರ ಶಾಸ್ತ್ರಿ ಮೊದಲಾದವರ ವಿರುದ್ದ ವಾಕ್ಯಾರ್ಥ ಮತ್ತು ವಿಜಯ
೬. ೧೯೮೯ರಲ್ಲಿ ಶ್ರೀ ವಿದ್ಯಾಮಾನ್ಯತೀರ್ಥರು ಅದ್ವೈತ ಮಠದ ಮೇಲೆ "ಅಚ್ಚೆದ್ಯ ಅಭೇದ್ಯ ಪ್ರಶ್ನೆಗಳು ಎಂಬ ಶೀರ್ಷಿಕೆಯಡಿ ಹತ್ತು ಪ್ರಶ್ನೆಗಳನ್ನೂ ಬರೆದರೂ. ಈ ಪ್ರಶ್ನೆಗಳಿಗೆ ಅದ್ವೈತಿಗಳು ಉತ್ತರಿಸಲು ಹೇಳಿ ತಾವೇ ಖುದ್ದಾಗಿ ಶೃಂಗೇರಿ ಹೊರಟರು. ಅಲ್ಲಿ ಅವರಿಂದ ಪ್ರಶ್ನೆಗಳಿಗೆ ಉತ್ತರಿಸಲಾಗಲಿಲ್ಲ.
೭. ದಿಲ್ಲಿಯಲ್ಲಿ ಅಷ್ಟಗ್ರಹಯೋಗದ ದುಷ್ಪರಿಣಾಮವಾಗಿ ಪರಿಹಾರಕ್ಕಾಗಿ ಶ್ರೀಪಾದರ ನೇತೃತ್ವದಲ್ಲಿ 12 ದಿನಗಳ "ವಿಶ್ವಕಲ್ಯಾಣಯಾಗ". ಇದರಲ್ಲಿ 700 ಕ್ಕೂ ಹೆಚ್ಚು ಜನ ಋತ್ವಿಜರು ಭಾಗವಹಿಸಿದ್ದರು.
ಮೊದಲ ಬದರಿಯಾತ್ರೆ.
ಕಾಶಿಯಿಂದ ಹರಿದ್ವಾರಕ್ಕೆ ತೆರಳಿದ ಶ್ರೀಪಾದರು ಅಲ್ಲಿಂದ 150 ಮೈಲು ಕಾಲುನಡಿಗೆಯಿಂದ ಭಾಷ್ಯ ಪಾರಾಯಣ ಮಾಡುತ್ತಾ ಬದರಿ ತಲುಪಿದರು.
ಮಧ್ವ ಶಾಸ್ತ್ರ ಕಲಿಯುವ ವಿದ್ಯಾರ್ಥಿಗಳಿಗಾಗಿ ಅವರ ಸಾಧನೆಗೆ ಸಹಾಯಹಸ್ತ
೧. ವಿದ್ಯಾರ್ಥಿ ಪರೀಕ್ಷೆ - ಯಥೇಚ್ಛ ಸಂಭಾವನೆ, ಶಾಸ್ತ್ರ ಪಾಠ- ಪ್ರವಚನಗಳಲ್ಲಿ ನಿರತರಾಗಿರುವ ವಿದ್ಯಾರ್ಥಿಗಳಿಗೆ ಉತ್ತೇಜನ.
೨ ಚರ್ಚಾಘೋಷ್ಠಿಗಳು
೩. ಗ್ರಂಥಧಾನ, ಪಾಠಗಳ ವ್ಯವಸ್ಥೆ
೪. ಗ್ರಂಥ ಪ್ರಕಾಶನ - ಶ್ರೀಪಾದರೆ ಸ್ವತಃ ಬರೆದಿರುವ "ದ್ವೈತಸ್ಯ ಅಪೂರ್ವತಾ", ಗಾಯತ್ರಿ ಗಾಂಭೀರ್ಯ, ತತ್ವ ಸಂಜ್ಯಾನ, ತತ್ವ ವಿವೇಕ, ಉಪಾದಿಖಂಡನ, ಮಾಯವಾದ ಖಂಡನ ಮೊದಲಾದ ಗ್ರಂಥಗಳ ಕನ್ನಡಾನುವಾದ ಪುಸ್ತಕಗಳು, ಶ್ರೀಮದಾಚಾರ್ಯರ ದಶಪ್ರಕರಣಗಳನ್ನೂ, ಶ್ರೀ ಜಯತೀರ್ಥರ ಟೀಕೆ ಹಾಗೂ ಅನೇಕ ವ್ಯಾಖ್ಯಾನಗಳೊಂದಿಗೆ ಲೇಖನ.
ಕಾಷ್ಠಮೌನ ವ್ರತ:
1961 ರಲ್ಲಿ ಬದರಿ ಕ್ಷೇತ್ರದಲ್ಲಿ ಶ್ರೀಗಳ ಜೊತೆಯಲ್ಲಿ ಮೂರು ಮಂದಿ ಮಾತ್ರ ಸಹಾಯಕರು. ಉಳಿದವರೆಲ್ಲ ಹರಿದ್ವಾರಕ್ಕೆ ಮರಳಿದರು. ಛತ್ರಒಂದರಲ್ಲಿ ಶ್ರೀಪಾದರ ವಾಸ. ಬೆಳಗಿನ ಜಾವ ನಾಲ್ಕು ಘಂಟೆಗೆ ಏಳುವುದು, ಬಾಹ್ಯ ಶೌಚಗಳನ್ನೂ ಪೂರೈಸುತ್ತಿದ್ದರು. ಭೋರ್ಗರೆವ ಅಲಕಾನಂದ ನದಿಯಲ್ಲಿ ಅವಗಾಹನ ಸ್ನಾನ. ಅನಂತರ ಗೀತಾಭಾಷ್ಯ, ಬ್ರಹ್ಮಸೂತ್ರ ಭಾಷ್ಯ ಪಾಠ, ಸಂಸ್ಥಾನ ಪೂಜೆ, ಮಧ್ಯಾಹ್ನ ಪುನಃ ಅಲಕನಂದದಲ್ಲಿ ಸ್ನಾನ ಹೀಗೆ ಹೆಚ್ಚು ಸಮಯ ಬದರಿಯಾತ್ರೆಯಲ್ಲಿ ಕಾಲ ಕಳೆದರು.
ಮಾಧ್ವ ಸಿದ್ದಾಂತಕ್ಕೆ ಬಹಳ ಕೊಡುಗೆಯನ್ನು ನೀಡಿದ ಮಹಾಮಹಿಮರು ಹೀಗೆ ವೈಶಾಖ ಶುದ್ದ ಏಕಾದಶಿ 14 - 05 - 2000 ರಂದು ಫಲಿಮಾರಿನಲ್ಲಿ ಶ್ರೀಗುರುಗಳು ಹರಿಪಾದವನ್ನು ಸೇರಿದರು.
ಶ್ರೀ ವಿದ್ಯಾಮಾನ್ಯರು ಮತ್ತು ಏಕಾದಶಿ
ಅಂದು ವಿಕ್ರಮ ಸಂವತ್ಸರ ಚೈತ್ರ ಕೃಷ್ಣ ದಶಮಿ ಶ್ರೀ ಪಾದರ ದೇಹಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು. ಆ ಅನಾರೋಗ್ಯದ ಪ್ರಭಾವದಿಂದ ಅವರಿಗೆ ಏನು ರುಚಿಸುತ್ತಿರಲಿಲ್ಲ. ಅವರು ಏನನ್ನು ತಿನ್ನುತಿರಲಿಲ್ಲ. ಆದರೆ ಅಂದು ದಶಮಿಯಾದ್ದರಿಂದ ಸ್ವಲ್ಪವಾದರೂ ಊಟ ಮಾಡಬೇಕಿತ್ತು. ಆದರು ಮಾಡಲಿಲ್ಲ. ಪೇಜಾವರ ಶ್ರೀಪಾದರ ಒತ್ತಾಯ, ಎಲ್ಲ ಶಿಷ್ಯರ ಒತ್ತಾಯ ಮತ್ತು ವೈದ್ಯರ ಒತ್ತಾಯದಿಂದ ಅಂದು ರಾತ್ರಿ ಒಂದು ಚಿಕ್ಕ ಇಡ್ಲಿಯ ತುಂಡನ್ನು ತಿಂದರು. ಸ್ವಲ್ಪ ಹಣ್ಣು, ಸ್ವಲ್ಪ ಹಾಲು ಕುಡಿದರು. ಎಲ್ಲರಿಗೂ ಸಮಾಧಾನವಾಯಿತು. ಆದರೆ ಅಂದು ರಾತ್ರಿಯ ಸರದಿಯಲ್ಲಿ ಶ್ರೀ ಕೊರ್ಲಹಳ್ಳಿ ವೆಂಕಟೇಶಚಾರ್ ಎಚ್ಚರದಲ್ಲಿದ್ದು ಶ್ರೀ ಪಾದರನ್ನು ನೋಡಿಕೊಳ್ಳುತ್ತಿದ್ದರು. ಸುಮಾರು ರಾತ್ರಿ 12 . 30 ರ ವೇಳೆಯಲ್ಲಿ ಶ್ರೀಪಾದರಿಗೆ ತಡೆಯಲಾರದಷ್ಟು ವಾಂತಿಯಾಯಿತು. ಅವರು ತಿಂದದ್ದೆಲ್ಲ ವಾಂತಿಯಾಯಿತು. ನಂತರ ಶಿಷ್ಯರು "ಸ್ವಲ್ಪ ಏಳ ನೀರನ್ನು ನೀಡಲೇ" ಎಂದಾಗ, ಹೂ ಎಂದರು. ಮಡಿಯಲ್ಲೇ ಶ್ರೀಪಾದರಿಗೆ ಕುಡಿಸಲು ತೊಡಗಿದಾಗ ಅಲ್ಲಿಯತನಕ ಸುಮ್ಮನಿದ್ದ ಶ್ರೀಗಳು ಇಂದು ಯಾವ ತಿಥಿ ಎಂದು ಕೇಳಿದರು. ನಿಜ ನುಡಿದರೆ ಶ್ರೀಗಳು ಸ್ವೀಕರಿಸುವುದಿಲ್ಲವೆಂದು ಭಾವಿಸಿ "ದಶಮಿ" ಎಂದರು. ವೆಂಕಟೇಶಚಾರ್ಯರು. ಆದರೆ ಆಗಲೇ ಏಕಾದಶಿ ತಿಥಿ ಪ್ರವೇಶ ವಾಗಿತ್ತು. ಸ್ವಾಮಿಗಳು ಮತ್ತೆ ಮತ್ತೆ ಎರಡು ಮೂರು ಬಾರಿ ಕೇಳಿದರು. ಆಗಲು ಅದೇ ಉತ್ತರ ನೀಡಿದರು. ಎಳನೀರನ್ನು ಒತ್ತಾಯವಾಗಿ ಕುಡಿಸಿದರು ಅದು ಗಂಟಲೊಳಗೆ ಹೋಗಲಿಲ್ಲ. ಹೊರಗೆ ಬಂತು. ಅವರು ಉಗುಳಿದರೂ. ಅದು ವೆಂಕಟರಮಣಾಚಾರ್ಯರಿಗೂ, ಗಿರೀಶನಿಗು ಬಿದ್ದಿತು. ಮರುದಿನ ಏಕಾದಶಿ. ಡಾಕ್ಟರ್ ಕೇಶವಾಚಾರ್ಯರಿಗೂ ವಾಂತಿಯ ವಿಷಯವನ್ನು ಹೇಳಿದಾಗ ಅವರು ಒಂದು ಮಾತ್ರೆಯನ್ನು ಪುಡಿ ಮಾಡಿ ಜೇನುತುಪ್ಪದೊಳಗೆ ಮಿಶ್ರಣಮಾಡಿ ಶ್ರೀಗಳಿಗೆ ನೀಡಲು ಉದ್ಯುಕ್ತರಾದರು. ಆಗಲು ಶ್ರೀಗಳು ಇಂದು ತಿಥಿಯೇನು ಎಂದು ಕೇಳಿದರು. ಆಗ ಬಲವಂತ ಮಾಡಿ ಬಾಯಿ ಯಲ್ಲಿ ಮಾತ್ರೆಯನ್ನು ಕೊಡಿಸಿದಾಗ ಅದು ಶ್ರೀಗಳ ಗಂಟಲಿನಲ್ಲಿ ಇಳಿಯಲಿಲ್ಲ. ಶ್ರೀಗಳಿಗೆ ಏಕಾದಶಿಯ ಅರಿವಾಗಿತ್ತು. ಆದ್ದರಿಂದಲೇ ಅವರು ನುಂಗಲಿಲ್ಲ. ಅವರು ಮುಂದಿನ ಏಕಾದಶಿಯಂದು 14 - 05 - 2000 ವೈಶಾಖ ಶುದ್ದ ಏಕಾದಶಿಯಂದು ಪೂರ್ಣ ಉಪವಾಸದಿಂದಿದ್ದು ಶ್ರೀಹರಿಯ ಪದವನ್ನು ಸೇರಿದರು. ಒಟ್ಟು 87 ವರ್ಷಗಳ ಕಾಲ ಎಲ್ಲ ಏಕಾದಶಿಗಳನ್ನೂ ಉಪವಾಸದಿಂದಲೇ ನಡೆಸಿದ್ದರು.
ಶ್ರೀಪಾದರು ಸಕಲ ಮಾದ್ವರು ಒಂದೇ ಏಕಾದಶಿಯನ್ನು ಆಚರಿಸಬೇಕು ಎಂದು ಎಲ್ಲ ಮಠಗಳ ಯತಿಗಳನ್ನು, ವಿದ್ವಾಂಸರನ್ನು ಕರೆಸಿ ಒಂದೇ ನಿಶ್ಚಿತ ಗಣಿತ ಅವಶ್ಯಕ, ಆರ್ಯ, ಧೃಕ್ ಮೊದಲಾದ ಸಿದ್ದಾಂತಗಳ ಗ್ರಂಥಗಳನ್ನೂ ದೇಶದ ವಿವಿಧ ಗ್ರಂಥಗಳನ್ನು ತರಿಸಿ ಪ್ರಯತ್ನಿಸಿದರೂ ಅದರಲ್ಲಿ ಯಶಸ್ವಿಯಾಗಲಿಲ್ಲ.
ಶ್ರೀ ರಂಗನ ಸನ್ನಿದಿಯಲ್ಲಿ ಸಹಸ್ರ ಚಂದ್ರ ದರ್ಶನ ಶಾಂತಿಯನ್ನು 1994 ರ ಅಕ್ಟೋಬರ್ 13 ರಂದು ಮಾಡಲಾಯಿತು.
ಶ್ರೀ ವಿದ್ಯಾಮಾನ್ಯರು - ಮತ್ತು ಅವರಿಂದ ಪವಾಡ ಸದೃಶ ಕಾರ್ಯಗಳು.
ಪವಾಡಗಳು:
೧. ಒಮ್ಮೆ ಶ್ರೀ ಪಾದರು ಗಂಗಾ ಸ್ನಾನಕ್ಕೆ ಹೋಗುವ ಮಾರ್ಗದಲ್ಲಿ, ಒಂದು ಊರಿನಲ್ಲಿ ಸಣ್ಣ ದೇವಸ್ತಾನದಲ್ಲಿ ತಂಗಿದ್ದರು. ಆಗ ಒಬ್ಬ ವನಿತೆ ತನಗೆ ಕುಷ್ಟರೋಗವಿರುವುದನ್ನು ಶ್ರೀಗಳಲ್ಲಿ ಭಿನ್ನವಿಸಿದಾಗ, ಶ್ರೀಪಾದರು ತಾವು ಮಂತ್ರಾಲಯದಿಂದ ತಂದಿದ್ದ ಮೃತ್ತಿಕೆಯನ್ನು ನೀಡಿ, ಅದನ್ನು ಹಚ್ಚಿಕೊಂಡು ತೀರ್ಥವನ್ನು ತೆಗೆದುಕೊಂಡರೆ ವಾಸಿಯಾಗುವುದೆಂದರು. ಅದನ್ನು ಪಡೆದ ಮಹಿಳೆ ಕೆಲವೇ ದಿನಗಳು ಹಚ್ಚಿಕೊಂಡಳು. ಶ್ರೀಪಾದರು ಅಷ್ಟರಲ್ಲಿ ಕಲ್ಕತ್ತಾ, ಗಂಗಾಸಾಗರ, ಸಂಗಮ ದರ್ಶನ ಸ್ನಾನ ಮಾಡಿ ಅದೇ ಉರಿನಲ್ಲಿ ಬಂದಾಗ ಆ ವನಿತೆ ಬಂದು ತನ್ನ ಕೈಯನ್ನು ತೋರಿಸಿ ಪೂರ್ಣ ಗುಣಮುಖವಾಗಿರುವುದನ್ನು ತಿಳಿಸಿದಳು.
೨. ಮೂಖ ವಾಗ್ಮಿಯಾದದ್ದು: ಬೆಂಗಳೂರಿನಲ್ಲಿ ಶ್ರೀಗಳು ಚಾತುರ್ಮಸ್ಯಕ್ಕೆ ಕೂತಿದ್ದಾಗ, ವಾಸುದೇವನೆಂಬ ಬೆಂಗಳೂರಿನ ಒಬ್ಬ ಶ್ರೀಮಂತರ ಪುತ್ರ ಹುಟ್ಟು ಮೂಕನಾಗಿದ್ದ. ಸ್ವಾಮಿಗಳು ಅವನಿಗೆ ನಿತ್ಯ ಪೂಜಾ ಕಾಲಕ್ಕೆ ಬಂದು ತೀರ್ಥ ಗಂಧಾದಿಗಳು ಸ್ವೀಕರಿಸಲು ಹೇಳಿದರು. ಅದರಂತೆ ಮೂರು ತಿಂಗಳು ಕಳೆದಾಗ, ಅವನ ಬಾಯಿಂದ "ಅಮ್ಮ" ಎಂಬ ಮಾತು ಬಂದಿತು. ನಂತರ ಇನ್ನು ಮೂರು ತಿಂಗಳು ಕಳೆದಂತೆ ಶ್ರೀಗಳು ಅವನಿಗೆ "ಪೂಜ್ಯಾಯ ರಾಘವೇಂದ್ರಾಯ" ಶ್ಲೋಕ ವನ್ನು ಹೇಳಿ ಉಪದೇಶಿಸಿದರು. ಆ ಬಾಲಕ ವಾಸುದೇವ ಈಗ ಚೆನ್ನಾಗಿ ಮಾತನಾಡಬಲ್ಲವನಾಗಿದ್ದಾನೆ.
೩. ಧಾರವಾಡದಲ್ಲಿ ಓರ್ವ ಭಕ್ತೆ ಶ್ರೀಮತಿ ಸೀತಾಬಾಯಿಗೆ ನಾಲಿಗೆಗೆ ರುಚಿಯೇ ಗೊತ್ತಾಗುತ್ತಿರಲಿಲ್ಲ, ಯಾವ ಔಷದ ಉಪಚಾರವೂ ಫಲಕಾರಿಯಾಗಿರಲಿಲ್ಲ. ಶ್ರೀಗಳು ಅವಳಿಗೆ ಧನ್ವಂತರಿಯನ್ನು ಸ್ಮರಿಸಿ " ಅಚ್ಚುತಾನಂತ ಗೋವಿಂದ ಸ್ಮೃತಿಯನ್ನು" ಶ್ಲೋಕವನ್ನು ಹೇಳಿ ಕಲ್ಲು ಸಕ್ಕರೆ ಯನ್ನು ನೀಡಿದರು. ಏಳು ದಿನದೊಳಗೆ ಅವಳಿಗೆ ನಾಲಿಗೆಗೆ ರುಚಿ ಬಂತು.
೪. ಬೆಂಗಳೂರಿನ ಶ್ರೀ ಎ ಎನ್ ನರಹರಿ ರಾವ್ ಅವರಿಗೆ ದುರ್ದೈವದಿಂದ 40 ರ ಹರೆಯದಲ್ಲಿ ಕ್ಯಾಟ್ರ್ಯಾಕ್ ಕಣ್ಣಿನ ಪೊರೆಯ ದೋಷದಿಂದ ಶಸ್ತ್ರ ಚಿಕಿತ್ಸೆಯಾಯಿತು. ಕೆಲವು ತಿಂಗಳ ಬಳಿಕ ಪುನಃ ಕಣ್ಣಿಗೆ ಪೋರೆ ಬಂದಿತು. ಆಗ ಶ್ರೀಗಳನ್ನು ಸಂಪರ್ಕಿಸಿದರು. ಶ್ರೀಪಾದರು ತಮ್ಮ ಕೃಪಾದೃಷ್ಟಿ ಬೀರಿ " ಘೃಣ ಸೂರ್ಯ" ಎಂಬ ಮಂತ್ರವನ್ನು ದಿನಕ್ಕೆ 108 ಬಾರಿ ಜಪಿಸಲು ಹೇಳಿದರು. ಶ್ರೀಗಳ ಆದೇಶದಂತೆ ನಿತ್ಯವೂ ತಮ್ಮ ಸಂಧ್ಯಾವಂದನೆಯ ನಂತರ ಜಪಿಸಿದರು, ಗುಣಮುಖವಾಯಿತು.
೫. ಸಂತಾನ ಭಾಗ್ಯ - ಗದುಗಿನ ಶ್ರೀ ನಾರಾಯಣರಾವ್ ದಂಪತಿಗಳಿಗೆ ಸಂತಾನ ಭಾಗ್ಯವನ್ನು ಕರುಣಿಸಿದ್ದಾರೆ.
೬ ಪ್ರೇತಬಾಧೆ ನಿವಾರಣೆ: ಆದೊನಿಯ ಶ್ರೀ ಹಾಲ್ವಿ ಹನುಮಂತರಾವ್ ಅವರ ಪತ್ನಿ ಶ್ರೀಮತಿ ವೆಂಕಮ್ಮನವರನ್ನು ಪ್ರೇತಬಾಧೆಯಿಂದ ವಿಮುಕ್ತಿಗೊಳಿಸಿದರು. ತಮ್ಮ ತಪಃ ಶಕ್ತಿಯಿಂದ.
ಮಳೆರಾಯ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರು
೧. ಮಳೆ ತರಿಸಿದ ವಿದ್ಯಾಮಾನ್ಯರು: 1940 ರಲ್ಲಿ ಶ್ರೀಗಳು ಗಯಾಕ್ಷೇತ್ರದಲ್ಲಿ ಚಾತುಮಾಸ್ಯ ಆಚರಿಸುತ್ತಿದ್ದರು. ಆ ಸಂದರ್ಭದಲ್ಲಿ ಓರ್ವ ವಿಧರ್ಮೀಯನು ಪಾದರಕ್ಷೆಗಳನ್ನು ದರಿಸಿ ದೇವಸ್ತಾನವನ್ನು ಪ್ರವೇಶಿಸಿದನು. ಆಗ ವಿಷ್ಣು ಪಾದದ ಅರ್ಚಕರಾದ ಗಯಾವಾಡರು ದೇವಸ್ತಾನದ ಅಶುಚಿಯ ಬಗ್ಗೆ ಚಿಂತಾಕ್ರಾಂತರಾದರು. ಅದರ ಪರಿಹಾರಕ್ಕಾಗಿ ಅವರು ಹಿರಿಯ ವಿದ್ವಾಂಸರಾಗಿದ್ದ ಗಯಾವಾಸಿಗಳಾಗಿದ್ದ ವರಖೇಡಿ ಪ್ರದ್ಯುಮ್ನಚಾರ್ಯರನ್ನು ಕೇಳಿದಾಗ ಅವರು ಶ್ರೀ ವಿದ್ಯಾಮಾನ್ಯರನ್ನು ಸೂಚಿಸಿದರು. ಎಲ್ಲರೂ ಶ್ರೀ ವಿದ್ಯಾಮಾನ್ಯರನ್ನು ಕೇಳಿದಾಗ ಶ್ರೀಪಾದರು ಪವಮಾನ ಸೂಕ್ತ ಅಭಿಷೇಕ ಹೋಮ ಮತ್ತು ಬ್ರಾಹ್ಮಣ ಸಂತರ್ಪಣೆಯನ್ನು ಮಾಡಬೇಕು ಇದರಿಂದ ಶುದ್ದಿಯಾಗುವುದು ಎಂದರು. ಅದರಂತೆ ವೇದಜ್ಞರಾದ ಬ್ರಾಹ್ಮಣರು ಪವಮಾನ ಸೂಕ್ತವನ್ನು ಪಾರಾಯಣ ಪ್ರಾರಂಬಿಸಿದರು ಸ್ವತಃ ಸ್ವಾಮಿಗಳು ವಿಷ್ಣು ಪಾದಕ್ಕೆ ಅಭಿಷೇಕವನ್ನು ನೆರವೇರಿಸಿದರು. ಈ ಸಮಯದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚಿನ ಬ್ರಾಹ್ಮಣ ಸುವಾಸಿನಿಯರು ಹರಿನಾಮ ಸಂಕೀರ್ತನೆಯನ್ನು ಮಾಡಿದರು. ಆ ಸಮಯದಲ್ಲಿ ಬಿಸಿಲಿದ್ದರು ಕೂಡಾ ಜೋರಾಗಿ ಮಳೆ ಬಂದಿತು. ಗಯಾದ ಜನರು ಎಂದೂ ಕಾಣದ ಮಳೆಯನ್ನೂ ಕಂಡರೂ. ಸ್ವಾಮಿಗಳಿಗೆ ವಿಶೇಷ ಜೈಕಾರವನ್ನು ಹಾಕಿದರು.ಸ್ವಾಮಿಗಳು ಇದೆಲ್ಲವೂ ಭಗವಂತನ ಕೃಪೆ ಎಂದು ಹೇಳಿದರು.
1998 ರಲ್ಲಿ ಶ್ರೀಗಳು ಪ್ರಯಾಗದಲ್ಲಿ ಮದ್ವಾರಾದ್ದಂಥ ಸಂವರ್ಧಕ ಸಭೆಯನ್ನು ಹಾಗೂ ಶ್ರೀ ಮಧ್ವನವಮಿಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಆನೇಕ ಪೀಠಾಧಿಪತಿಗಳು, ಆನೇಕ ಮತತ್ರಯ ಪಂಡಿತರು ಬಂದ್ದಿದ್ದರು. ಕೊನೆಯದಿಂದದಂದು ಗಜರಾಜಗಳ ಮೇಲೆ ರಜತ ಅಂಬಾರಿಯನ್ನಿಟ್ಟು ಅದರ ಮೇಲೆ ಶ್ರೀಮದಾಚಾರ್ಯರ ಭಾವಚಿತ್ರ, ಸರ್ವಮೂಲ ಗ್ರಂಥಗಳನಿಟ್ಟು ಹಾಗೂ ಶ್ರೀಪಾದರನ್ನು ಕುಳ್ಳಿರಿಸಿ ಭವ್ಯ ಮೆರವಣಿಗೆಯನ್ನು ಮಾಡುವ ಉದ್ದೇಶದಿಂದ ಸಿದ್ದತೆ ಬರದಿಂದ ನಡೆಯಿತು. ಆದರೆ ಆಕಾಶದಲ್ಲಿ ಕಪ್ಪನೆಯ ಮೋಡ ಮುಸುಕಿ ಮಳೆಯೂ ವ್ಯವಸ್ಥಾಪಕರನ್ನು ಹೆದರಿಸಿತು. ಆಗ ಎಲ್ಲರೂ ಶ್ರೀಗಳನ್ನು ಭೇಟಿಯಾಗಿ ಭಿನ್ನವಿಸಿದರು. ಶ್ರೀಗಳು " ಶ್ರೀಮದಾಚಾರ್ಯರ ಮೆರವಣಿಗೆಗೆ ಮಳೆ ಅಡ್ಡಿಯಾಗುವುದಿಲ್ಲ ಮೆರವಣಿಗೆ ಆರಂಭವಾಗಲಿ ಎಂದರು. ಅದರಂತೆ ಶೋಭಾಯಾತ್ರೆ ಜರುಗಿತು. ಮೆರವಣಿಗೆ ಮುಗಿದ ಕೂಡಲೇ ಮಳೆ ಆರಂಭವಾಯಿತು, ಶ್ರೀಗಳು ಹೇಳಿದ ಮಾತು ಸತ್ಯವಾಯಿತು.
೩. ಹೀಗೆ ಒಮ್ಮೆ ಉಡುಪಿಯಲ್ಲಿ ಶ್ರೀಗಳ ಪರ್ಯಾಯದ ಕೊನೆಯಲ್ಲಿ ಶ್ರೀಕೃಷ್ಣನಿಗೆ ಸುವರ್ಣ ರಥ ಸಮರ್ಪಣೆ ಮಾಡುವ ಸಂದರ್ಭ ಬೆಳಗಿನಿಂದ ಜೋರಾಗಿ ಮಳೆ ಸುರಿಯುತ್ತಿತ್ತು. ಕೃಷ್ಣನಿಗೆ ರಥ ಸಮರ್ಪಣೆ ಮಾಡುವ ಮುಹೂರ್ತ ಕೂಡಿ ಬಂತು ಎಲ್ಲರೂ ಶ್ರೀಗಳಲ್ಲಿ ಬಂದು ಆಚೆ ಮಳೆ ಸುರಿಯುತ್ತಿದೆ ಉತ್ಸವ ನಡೆಸಲು ಸಾದ್ಯವಿಲ್ಲವೆಂದು ಹೇಳಿದರು. ಆಗ ಶ್ರೀಗಳು ಪರವಾಗಿಲ್ಲ ಶ್ರೀ ಕೃಷ್ಣನ ಮತ್ತು ಮುಖ್ಯಪ್ರಾಣನ ಉತ್ಸವ ಮೂರ್ತಿಗಳನ್ನು ತನ್ನಿ ವರುಣದೇವ ಅಡ್ಡಿ ಮಾಡುವುದಿಲ್ಲವೆಂದು ಹೇಳಿದರು. ಹಾಗೆ ಉತ್ಸವ ಮೂರ್ತಿಗಳನ್ನು ತಂದಾಗ ತಕ್ಷಣ ಮಳೆ ನಿಂತಿತು.
ಹೀಗೆ ಹಲವಾರು ಪವಾಡಗಳನ್ನೂ ಶ್ರೀಗಳು ಮಾಡಿದ್ದಾರೆ ಇನ್ನು ಬಹಳಷ್ಟು ಪವಾಡಗಳು ಸಿಗುತ್ತವೆ.
ಹೀಗೆ ಶ್ರೀ ವಿದ್ಯಾಮಾನ್ಯ ತೀರ್ಥರನ್ನು ನೆನೆದ ದಿನವೇ ಸುದಿನ.
ಶ್ರೀಮಧ್ವೇಶಾರ್ಪಣಮಸ್ತು
**
ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀ ಪಾದಂಗಳವರು
ಮಾತಾಪಿತರು : ಶ್ರೀ ಕುಪ್ಪಣ್ಣ ತಂತ್ರಿಗಳು ಮತ್ತು ಶ್ರೀಮತಿ ರಾಧಮ್ಮ
ಜನ್ಮ ಸ್ತಳ - ಎರ್ಮಾಳು (ಉಡುಪಿಯಿಂದ ದಕ್ಷಿಣಕ್ಕೆ 13 ಮೈಲಿ)
ಜನ್ಮ ವರ್ಷ - 1913
ಜನ್ಮ ನಾಮ - ನಾರಾಯಣ
ಪ್ರಾಥಮಿಕ ವಿದ್ಯಾಬ್ಯಾಸ : ತಂದೆಗಳಿಂದ
ಉಪನಯನ - 8 ನೇ ವಯಸಿನಲ್ಲಿ ಕ್ರೋದನ ನಾಮ ಸಂವತ್ಸರ (೦೫-೧೧-೧೯೨೫)
ಮಂತ್ರೋಪದೇಶ ನೀಡಿದ ಶತಾಯುಷಿ ಶ್ರೀ ಸುದೀಂದ್ರ ತೀರ್ಥರು.
ಆಶ್ರಮ ಗುರುಗಳು: ಶ್ರೀ ವಿಬುಧಪ್ರಿಯ ತೀರ್ಥರು
ಹೆಚ್ಚಿನ ವಿದ್ಯಾಬ್ಯಾಸ
೧. ಆಶ್ರಮ ಗುರುಗಳಾದ ಶ್ರೀ ವಿಬುಧಪ್ರಿಯ ತಿರ್ಥರಿಂದ ಮೂರುವರ್ಷ ಕಾಲ
೨. ಶ್ರೀ ವಾಸುದೇವಚಾರ್ಯರಲ್ಲಿ - ದಶಪ್ರಕರಣಗಳು, ದೋಷಪನಿಷತ್ತು, ಮತ್ತು ತತ್ವಪ್ರಕಾಶಿಕಾ ಗ್ರಂಥಗಳ ಪಾಠ
೩. ಉತ್ತರಾಧಿಮಠದ ಶ್ರೀ ಸತ್ಯಧ್ಯಾನರಲ್ಲಿ - ಶ್ರೀಮನ್ನ್ಯಾಯಸುಧ, ತತ್ವಪ್ರಕಾಶಿಕಾ, ನ್ಯಾಯಮೃತ, ತರ್ಕತಾಂಡವ, ಗ್ರಂಥಗಳ ಪಾಠ.
ಗುರುಗಳಿಂದಲೇ ಪ್ರಶಸ್ತಿ : ವಿದ್ಯಾಬ್ಯಾಸವನ್ನು ಪೂರಿಸಿ ಹೊರಟ ಸಂದರ್ಭದಲ್ಲಿ ವಿದ್ಯಾಮಾನ್ಯರನ್ನು ಬಿಗಿದಪ್ಪಿ ಶ್ರೀ ಸತ್ಯಧ್ಯಾನ ತೀರ್ಥರು ಕೊಟ್ಟ ಹೊಗಳಿಕೆ " ನೀವು ವಿದ್ಯಾಭಂಡಾರ ಆಗಿರುವಿರಿ".
ಸುಧಾಮಂಗಳ : ಮೊದಲನೇ ಸುಧಾಮಂಗಳ ತಿರುಪತಿಯಲ್ಲಿ ಸತ್ಯಧ್ಯಾನರ ಸನ್ನಿದಾನದಲ್ಲಿ, ಎರಡನೇಯದನ್ನು ಶ್ರೀರಂಗಂ ನಲ್ಲಿ ತಮ್ಮ ಚಾತುರ್ಮಾಸ್ಯ ಸಂದರ್ಭದಲ್ಲ್ಲಿ.
ಸನ್ಯಾಸ ಶಿಷ್ಯರು:
ಶ್ರೀ ಪೇಜಾವರ ಮಠ ವಿಶ್ವೇಶ ತೀರ್ಥರು
ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು
ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೀ೦ದ್ರ ತೀರ್ಥರು
ಶ್ರೀ ಫಲಿಮಾರು ಮಠದ ಶ್ರೀ ವಿದ್ಯಾದೀಶ ತೀರ್ಥರು
ಶ್ರೀ ಭಂಡಾರುಕೇರಿ ಮಠದ ಶ್ರೀ ವಿದ್ಯೇಶ ತೀರ್ಥರು
ಈ ಐದು ಜನ ಸನ್ಯಾಸಿ ಶಿಷ್ಯರಿಗೆ ಹಲವಾರು ಸನ್ಯಾಸಿ ಶಿಷ್ಯರು, ಗೃಹಸ್ತ ಶಿಷ್ಯರು ಇದ್ದಾರೆ. ಇಂದಿಗೂ ಶ್ರೀ ವಿದ್ಯಮಾನ್ಯರ ಶಿಷ್ಯ - ಪ್ರಶಿಷ್ಯರ ಸಂತತಿ ಬೆಳೆಯುತ್ತಿದೆ.
ವಾಗ್ಯುದ್ದದಲ್ಲಿ ವಿಜಯ
೧. 1940 ನೇ ಇಸವಿಯಲ್ಲಿ ಶ್ರೀ ತಾತಸುಬ್ಬರಾಯ ಶಾಸ್ತ್ರಿಗಳ ಜೊತೆ ವಾದವನ್ನು ನಡೆಸಿ ವಿಜಯಪ್ರದರಾದರು
೨. ಕಾಂಚಿಪೂರದಲ್ಲಿ ಕುಂಭಕೋಣದ ಕಾಮಕೋಟಿ ಶಂಕರಾಚಾರ್ಯರ ಅದ್ಯಕ್ಷತೆಯಲ್ಲಿ ನಡೆದ ಅದ್ವೈತ ಸಭೆಯಲ್ಲಿ ಮಹಾಮಹೊಪಾದ್ಯಾಯ ಅನಂತ ಶಾಸ್ತ್ರಿ, ಶ್ರೀ ಸುಬ್ರಮಣ್ಯ ಶಾಸ್ತ್ರಿ ಮುಂತಾದವರ ಜೊತೆ ವಾಗ್ವಾದ - ಜಯ
೩. ಕಾಶಿಯಲ್ಲಿ 1958 ನೇ ಇಸವಿಯಲ್ಲಿ ಮಹಾಮೊಪಾದ್ಯಾಯ ಗಿರಿದರಶರ್ಮ ಚತುರ್ವೇದಿ ಇವರ ಅದ್ಯಕ್ಷತೆಯಲ್ಲಿ ನಡೆದ ಅದ್ವೈತ ಸಭೆಯಲ್ಲಿ ಶ್ರೀಪಾದರ ವೈಶಿಷ್ಟ್ಯ ಮೆಚ್ಚಿ ಗೌರವಾರ್ಪಣೆ.
೪. ಶ್ರೀ ಅನಂತಕೃಷ್ಣ ಶಾಸ್ತ್ರಿಗಳು ಬರೆದ "ಅದ್ವೈತ ಸುಧಾ" ಎಂಬ ಶ್ರೀಮನ್ನ್ಯಾಯ ಸುಧಾ ಖಂಡನಾರೂಪವಾಗಿ " ಅದ್ವೈತ ತತ್ವಸುಧಾ ಸಮೀಕ್ಷಾ" ಎಂಬ ಗ್ರಂಥ ರಚನೆ
೫. ದಿಲ್ಲಿಯಲ್ಲಿ ದ್ವೈಥಾದ್ವೈತ ಚರ್ಚೆಯ ಸಂದರ್ಭದಲ್ಲಿ ಶ್ರೀ ರಾಮಚಂದ್ರ ಶಾಸ್ತ್ರಿ ಪಂಗಡ ಮೊದಲಾದವರ ವಿರುದ್ದ ವಾಕ್ಯಾರ್ಥ ಮತ್ತು ವಿಜಯ
೬. ೧೯೮೯ರಲ್ಲಿ ಶ್ರೀ ವಿದ್ಯಾಮಾನ್ಯತೀರ್ಥರು ಅದ್ವೈತ ಮಠದ ಮೇಲೆ "ಅಚ್ಚೆದ್ಯ ಅಭೇದ್ಯ ಪ್ರಶ್ನೆಗಳು ಎಂಬ ಶೀರ್ಷಿಕೆಯಡಿ ಹತ್ತು ಪ್ರಶ್ನೆಗಳನ್ನೂ ಬರೆದರೂ. ಈ ಪ್ರಶ್ನೆಗಳಿಗೆ ಅದ್ವೈತಿಗಳು ಉತ್ತರಿಸಲು ಹೇಳಿ ತಾವೇ ಖುದ್ದಾಗಿ ಶೃಂಗೇರಿ ಹೊರಟರು. ಅಲ್ಲಿ ಅವರಿಂದ ಪ್ರಶ್ನೆಗಳಿಗೆ ಉತ್ತರಿಸಲಾಗಲಿಲ್ಲ.
೭. ದಿಲ್ಲಿಯಲ್ಲಿ ಅಷ್ಟಗ್ರಹಯೋಗದ ದುಷ್ಪರಿಣಾಮವಾಗಿ ಪರಿಹಾರಕ್ಕಾಗಿ ಶ್ರೀಪಾದರ ನೇತೃತ್ವದಲ್ಲಿ 12 ದಿನಗಳ "ವಿಶ್ವಕಲ್ಯಾಣಯಾಗ". ಇದರಲ್ಲಿ 700 ಕ್ಕೂ ಹೆಚ್ಚು ಜನ ಋತ್ವಿಜರು ಭಾಗವಹಿಸಿದ್ದರು.
ಮೊದಲ ಬದರಿಯಾತ್ರೆ.
ಕಾಶಿಯಿಂದ ಹರಿದ್ವಾರಕ್ಕೆ ತೆರೆಳಿದ ಶ್ರೀಪಾದರು ಅಲ್ಲಿಂದ 150 ಮೈಲು ಕಾಲುನಡಿಗೆಯಿಂದ ಭಾಷ್ಯ ಪಾರಾಯಣ ಮಾಡುತ್ತಾ ಬದರಿ ತಲುಪಿದರು.
ಮಧ್ವ ಶಾಸ್ತ್ರ ಕಲಿಯುವ ವಿದ್ಯಾರ್ಥಿಗಳಿಗಾಗಿ ಅವರ ಸಾಧನೆಗೆ ಸಹಾಯಹಸ್ತ
೧. ವಿದ್ಯಾರ್ಥಿ ಪರೀಕ್ಷೆ - ಯಥೆಚ್ಶ ಸಂಭಾವನೆ, ಶಾಸ್ತ್ರ ಪಾಠ- ಪ್ರವಚನಗಳಲ್ಲಿ ನಿರತರಾಗಿರುವ ವಿದ್ಯಾರ್ಥಿಗಳಿಗೆಉತ್ತೇಜನ.
೨ ಚರ್ಚಾಘೋಷ್ಟಿಗಳು
೩. ಗ್ರಂಥಧಾನ, ಪಾಠಗಳ ವ್ಯವಸ್ತೆ
೪. ಗ್ರಂಥ ಪ್ರಕಾಶನ - ಶ್ರೀಪಾದರೆ ಸ್ವತಹ ಬರೆದಿರುವ "ದ್ವೈತಸ್ಯ ಅಪೂರ್ವತಾ", ಗಾಯತ್ರಿ ಗಾಂಭೀರ್ಯ, ತತ್ವ ಸಂಜ್ಯಾನ, ತತ್ವ ವೀವೇಕ, ಉಪಾದಿಖಂಡನ, ಮಾಯವಾದ ಖಂಡನ ಮೊದಲಾದ ಗ್ರಂಥಗಳ ಕನ್ನಡಾನುವಾದ ಪುಸ್ತಕಗಳು, ಶ್ರೀಮದಾಚಾರ್ಯರ ದಶಪ್ರಕರಣಗಳನ್ನೂ, ಶ್ರೀ ಜಯತೀರ್ಥರ ಟೀಕೆ ಹಾಗು ಅನೇಕ ವ್ಯಾಕ್ಯನಗಳೊಂದಿಗೆ ಲೇಖನ.
ಕಾಷ್ಠಮೌನ ವ್ರತ:
1961 ರಲ್ಲಿ ಬದರಿ ಕ್ಷೇತ್ರದಲ್ಲಿ ಶ್ರೀಗಳ ಜೊತೆಯಲ್ಲಿ ಮೂರು ಮಂದಿ ಮಾತ್ರ ಸಹಾಯಕರು. ಉಳಿದವರೆಲ್ಲ ಹರಿದ್ವಾರಕ್ಕೆ ಮರಳಿದರು. ಛತ್ರಒಂದರಲ್ಲಿ ಶ್ರೀಪಾದರ ವಾಸ. ಬೆಳಗಿನ ಜಾವ ನಾಲ್ಕು ಘಂಟೆಗೆ ಏಳುವುದು, ಬಾಹ್ಯ ಶೌಚಗಳನ್ನೂ ಪೂರಿಸುತ್ತಿದ್ದರು. ಭೋರ್ಗರೆವ ಅಲಕಾನಂದ ನದಿಯಲ್ಲಿ ಅವಗಾಹನ ಸ್ನಾನ. ಅನಂತರ ಗೀತಾಭಾಷ್ಯ, ಬ್ರಹ್ಮಸೂತ್ರ ಭಾಷ್ಯ ಪಾಠ, ಸಂಸ್ತಾನ ಪೂಜೆ, ಮದ್ಯಾಹ್ನ ಪುನಃ ಅಲಕನಂದದಲ್ಲಿ ಸ್ನಾನ ಹೀಗೆ ಹೆಚ್ಚುಸಮಯ ಬದರಿಯಾತ್ರೆಯಲ್ಲಿ ಕಾಲ ಕಳೆದರು.
ಮಾದ್ವ ಸಿದ್ದಾಂತಕ್ಕೆ ಬಹಳ ಕೊಡುಗೆಯನ್ನು ನೀಡಿದ ಮಹಾಮಹಿಮರು ಹೀಗೆ ವೈಶಾಖ ಶುದ್ದ ಏಕಾದಶಿ 14 - 05 - 2000 ರಂದು ಫಲಿಮಾರಿನಲ್ಲಿ ಶ್ರೀಗುರುಗಳು ಹರಿಪಾದವನ್ನು ಸೇರಿದರು.
ಹೀಗೆ ಶ್ರೀ ವಿದ್ಯಾಮಾನ್ಯ ತಿರ್ಥರನ್ನು ನೆನೆದ ದಿನವೇ ಸುದಿನ.
ಸಂಗ್ರಹ ಕಾಪು ಲಕ್ಷ್ಮೀಕಾಂತ ತಂತ್ರಿ (ಕಮಲಾತನಯ )
***********
ಶ್ರೀಂ ಶ್ರೀ ಕಂ ಕಪಿಲಾಯ ನಮಃ
17 ನೇ ಶತಮಾನದ ಶ್ರೀಮದ್ಯಾಸರಾಜಮಠದ ಮಹಾನ್ ಯತಿಗಳು,
ಶ್ರೀಶ್ರೀನಾಥತೀರ್ಥರ ಶಿಷ್ಯರು, ( ಶ್ರೀಭಾಷ್ಯದೀಪಿಕಾಚಾರ್ಯರ ಶಿಷ್ಯರು)
ಶ್ರೀವಿದ್ಯಾಪತಿ ತೀರ್ಥರ ಗುರುಗಳು ಆದ ಶ್ರೀಮದ್ ವಿದ್ಯಾನಾಥತೀರ್ಥರ ಆರಾಧನಾ ಮಹೋತ್ಸವ ಇಂದು...
ವಾದಿಯೂಥಪಸಂದೋಹಗರ್ವಪಾತನಕೇಸರೀ/
ನೈಜನಾಥಿತದೋ ಭೂಯಾದ್ವಿದ್ಯಾನಾಥಗುರುಃ ಶ್ರಿಯೈ/
ಹಾಗೆಯೆ ಶ್ರೀ ವಿಭುಧಪ್ರಿಯತೀರ್ಥರ ಶಿಷ್ಯರು, ಜಗನ್ಮಾನ್ಯ ಯತಿಗಳು, ವಾಗ್ಯದ್ಧದಲ್ಲಿ ಪ್ರವೀಣರೂ ಈಗಿನಕಾಲದವರಿಗೆ ಪರಿಚಯದ ಆವಶ್ಯಕತೆಯೆ ಇಲ್ಲದ, ಸುಪರಿಚಿತ ಗುರುಗಳು, ಮಹಾನ್ ಯತಿಗಳು ಆದ ಶ್ರೀವಿದ್ಯಾಮಾನ್ಯತೀರ್ಥರ ಆರಾಧನಾ ಶುಭವಂದನೆಗಳು..
ರಾಯರ ಪರಮ ಭಕ್ತರು, ಶ್ರೀ ಗುರುಜಗನ್ನಾಥವಿಠಲರ ಪರಮ ಶಿಷ್ಯರು, ಶ್ರೀ ಶ್ರೀನಿವಾಸವಿಠಲರ ಪುತ್ರರು, ಶಿಷ್ಯರೂ ಆದ ಶ್ರೀ ಆರಣಿಯ ದಾಸಾರ್ಯರು ನನ್ನ ಮಾತಾಮಹರಾದ ಶ್ರೀ ಸತ್ಯವಿಜಯದಾಸರ ಆರಾಧನೆಯ ಶುಭಸ್ಮರಣೆಗಳು..
ಶ್ರೀ ಯತಿದ್ವಯರ, ಶ್ರೀ ದಾಸಾರ್ಯರ ಪರಮಾನುಗ್ರಹ ನಮ್ಮ ಎಲ್ಲರಮೇಲಿರಲಿ ಎಂದು ಪರಮಾತ್ಮನಲ್ಲಿ ಪ್ರಾರ್ಥನೆ ಮಾಡುತ್ತಾ..
***
ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀ ಪಾದಂಗಳವರು
ಮಾತಾಪಿತರು : ಶ್ರೀ ಕುಪ್ಪಣ್ಣ ತಂತ್ರಿಗಳು ಮತ್ತು ಶ್ರೀಮತಿ ರಾಧಮ್ಮ
ಜನ್ಮ ಸ್ತಳ - ಎರ್ಮಾಳು (ಉಡುಪಿಯಿಂದ ದಕ್ಷಿಣಕ್ಕೆ 13 ಮೈಲಿ)
ಜನ್ಮ ವರ್ಷ - 1913
ಜನ್ಮ ನಾಮ - ನಾರಾಯಣ
ಪ್ರಾಥಮಿಕ ವಿದ್ಯಾಬ್ಯಾಸ : ತಂದೆಗಳಿಂದ
ಉಪನಯನ - 8 ನೇ ವಯಸಿನಲ್ಲಿ ಕ್ರೋದನ ನಾಮ ಸಂವತ್ಸರ (೦೫-೧೧-೧೯೨೫)
ಮಂತ್ರೋಪದೇಶ ನೀಡಿದ ಶತಾಯುಷಿ ಶ್ರೀ ಸುದೀಂದ್ರ ತೀರ್ಥರು.
ಆಶ್ರಮ ಗುರುಗಳು: ಶ್ರೀ ವಿಬುಧಪ್ರಿಯ ತೀರ್ಥರು
ಹೆಚ್ಚಿನ ವಿದ್ಯಾಬ್ಯಾಸ
೧. ಆಶ್ರಮ ಗುರುಗಳಾದ ಶ್ರೀ ವಿಬುಧಪ್ರಿಯ ತಿರ್ಥರಿಂದ ಮೂರುವರ್ಷ ಕಾಲ
೨. ಶ್ರೀ ವಾಸುದೇವಚಾರ್ಯರಲ್ಲಿ - ದಶಪ್ರಕರಣಗಳು, ದೋಷಪನಿಷತ್ತು, ಮತ್ತು ತತ್ವಪ್ರಕಾಶಿಕಾ ಗ್ರಂಥಗಳ ಪಾಠ
೩. ಉತ್ತರಾಧಿಮಠದ ಶ್ರೀ ಸತ್ಯಧ್ಯಾನರಲ್ಲಿ - ಶ್ರೀಮನ್ನ್ಯಾಯಸುಧ, ತತ್ವಪ್ರಕಾಶಿಕಾ, ನ್ಯಾಯಮೃತ, ತರ್ಕತಾಂಡವ, ಗ್ರಂಥಗಳ ಪಾಠ.
ಗುರುಗಳಿಂದಲೇ ಪ್ರಶಸ್ತಿ : ವಿದ್ಯಾಬ್ಯಾಸವನ್ನು ಪೂರಿಸಿ ಹೊರಟ ಸಂದರ್ಭದಲ್ಲಿ ವಿದ್ಯಾಮಾನ್ಯರನ್ನು ಬಿಗಿದಪ್ಪಿ ಶ್ರೀ ಸತ್ಯಧ್ಯಾನ ತೀರ್ಥರು ಕೊಟ್ಟ ಹೊಗಳಿಕೆ " ನೀವು ವಿದ್ಯಾಭಂಡಾರ ಆಗಿರುವಿರಿ".
ಸುಧಾಮಂಗಳ : ಮೊದಲನೇ ಸುಧಾಮಂಗಳ ತಿರುಪತಿಯಲ್ಲಿ ಸತ್ಯಧ್ಯಾನರ ಸನ್ನಿದಾನದಲ್ಲಿ, ಎರಡನೇಯದನ್ನು ಶ್ರೀರಂಗಂ ನಲ್ಲಿ ತಮ್ಮ ಚಾತುರ್ಮಾಸ್ಯ ಸಂದರ್ಭದಲ್ಲ್ಲಿ.
ಸನ್ಯಾಸ ಶಿಷ್ಯರು:
ಶ್ರೀ ಪೇಜಾವರ ಮಠ ವಿಶ್ವೇಶ ತೀರ್ಥರು
ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು
ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೀ೦ದ್ರ ತೀರ್ಥರು
ಶ್ರೀ ಫಲಿಮಾರು ಮಠದ ಶ್ರೀ ವಿದ್ಯಾದೀಶ ತೀರ್ಥರು
ಶ್ರೀ ಭಂಡಾರುಕೇರಿ ಮಠದ ಶ್ರೀ ವಿದ್ಯೇಶ ತೀರ್ಥರು
ಈ ಐದು ಜನ ಸನ್ಯಾಸಿ ಶಿಷ್ಯರಿಗೆ ಹಲವಾರು ಸನ್ಯಾಸಿ ಶಿಷ್ಯರು, ಗೃಹಸ್ತ ಶಿಷ್ಯರು ಇದ್ದಾರೆ. ಇಂದಿಗೂ ಶ್ರೀ ವಿದ್ಯಮಾನ್ಯರ ಶಿಷ್ಯ - ಪ್ರಶಿಷ್ಯರ ಸಂತತಿ ಬೆಳೆಯುತ್ತಿದೆ.
ವಾಗ್ಯುದ್ದದಲ್ಲಿ ವಿಜಯ
೧. 1940 ನೇ ಇಸವಿಯಲ್ಲಿ ಶ್ರೀ ತಾತಸುಬ್ಬರಾಯ ಶಾಸ್ತ್ರಿಗಳ ಜೊತೆ ವಾದವನ್ನು ನಡೆಸಿ ವಿಜಯಪ್ರದರಾದರು
೨. ಕಾಂಚಿಪೂರದಲ್ಲಿ ಕುಂಭಕೋಣದ ಕಾಮಕೋಟಿ ಶಂಕರಾಚಾರ್ಯರ ಅದ್ಯಕ್ಷತೆಯಲ್ಲಿ ನಡೆದ ಅದ್ವೈತ ಸಭೆಯಲ್ಲಿ ಮಹಾಮಹೊಪಾದ್ಯಾಯ ಅನಂತ ಶಾಸ್ತ್ರಿ, ಶ್ರೀ ಸುಬ್ರಮಣ್ಯ ಶಾಸ್ತ್ರಿ ಮುಂತಾದವರ ಜೊತೆ ವಾಗ್ವಾದ - ಜಯ
೩. ಕಾಶಿಯಲ್ಲಿ 1958 ನೇ ಇಸವಿಯಲ್ಲಿ ಮಹಾಮೊಪಾದ್ಯಾಯ ಗಿರಿದರಶರ್ಮ ಚತುರ್ವೇದಿ ಇವರ ಅದ್ಯಕ್ಷತೆಯಲ್ಲಿ ನಡೆದ ಅದ್ವೈತ ಸಭೆಯಲ್ಲಿ ಶ್ರೀಪಾದರ ವೈಶಿಷ್ಟ್ಯ ಮೆಚ್ಚಿ ಗೌರವಾರ್ಪಣೆ.
೪. ಶ್ರೀ ಅನಂತಕೃಷ್ಣ ಶಾಸ್ತ್ರಿಗಳು ಬರೆದ "ಅದ್ವೈತ ಸುಧಾ" ಎಂಬ ಶ್ರೀಮನ್ನ್ಯಾಯ ಸುಧಾ ಖಂಡನಾರೂಪವಾಗಿ " ಅದ್ವೈತ ತತ್ವಸುಧಾ ಸಮೀಕ್ಷಾ" ಎಂಬ ಗ್ರಂಥ ರಚನೆ
೫. ದಿಲ್ಲಿಯಲ್ಲಿ ದ್ವೈಥಾದ್ವೈತ ಚರ್ಚೆಯ ಸಂದರ್ಭದಲ್ಲಿ ಶ್ರೀ ರಾಮಚಂದ್ರ ಶಾಸ್ತ್ರಿ ಪಂಗಡ ಮೊದಲಾದವರ ವಿರುದ್ದ ವಾಕ್ಯಾರ್ಥ ಮತ್ತು ವಿಜಯ
೬. ೧೯೮೯ರಲ್ಲಿ ಶ್ರೀ ವಿದ್ಯಾಮಾನ್ಯತೀರ್ಥರು ಅದ್ವೈತ ಮಠದ ಮೇಲೆ "ಅಚ್ಚೆದ್ಯ ಅಭೇದ್ಯ ಪ್ರಶ್ನೆಗಳು ಎಂಬ ಶೀರ್ಷಿಕೆಯಡಿ ಹತ್ತು ಪ್ರಶ್ನೆಗಳನ್ನೂ ಬರೆದರೂ. ಈ ಪ್ರಶ್ನೆಗಳಿಗೆ ಅದ್ವೈತಿಗಳು ಉತ್ತರಿಸಲು ಹೇಳಿ ತಾವೇ ಖುದ್ದಾಗಿ ಶೃಂಗೇರಿ ಹೊರಟರು. ಅಲ್ಲಿ ಅವರಿಂದ ಪ್ರಶ್ನೆಗಳಿಗೆ ಉತ್ತರಿಸಲಾಗಲಿಲ್ಲ.
೭. ದಿಲ್ಲಿಯಲ್ಲಿ ಅಷ್ಟಗ್ರಹಯೋಗದ ದುಷ್ಪರಿಣಾಮವಾಗಿ ಪರಿಹಾರಕ್ಕಾಗಿ ಶ್ರೀಪಾದರ ನೇತೃತ್ವದಲ್ಲಿ 12 ದಿನಗಳ "ವಿಶ್ವಕಲ್ಯಾಣಯಾಗ". ಇದರಲ್ಲಿ 700 ಕ್ಕೂ ಹೆಚ್ಚು ಜನ ಋತ್ವಿಜರು ಭಾಗವಹಿಸಿದ್ದರು.
ಮೊದಲ ಬದರಿಯಾತ್ರೆ.
ಕಾಶಿಯಿಂದ ಹರಿದ್ವಾರಕ್ಕೆ ತೆರೆಳಿದ ಶ್ರೀಪಾದರು ಅಲ್ಲಿಂದ 150 ಮೈಲು ಕಾಲುನಡಿಗೆಯಿಂದ ಭಾಷ್ಯ ಪಾರಾಯಣ ಮಾಡುತ್ತಾ ಬದರಿ ತಲುಪಿದರು.
ಮಧ್ವ ಶಾಸ್ತ್ರ ಕಲಿಯುವ ವಿದ್ಯಾರ್ಥಿಗಳಿಗಾಗಿ ಅವರ ಸಾಧನೆಗೆ ಸಹಾಯಹಸ್ತ
೧. ವಿದ್ಯಾರ್ಥಿ ಪರೀಕ್ಷೆ - ಯಥೆಚ್ಶ ಸಂಭಾವನೆ, ಶಾಸ್ತ್ರ ಪಾಠ- ಪ್ರವಚನಗಳಲ್ಲಿ ನಿರತರಾಗಿರುವ ವಿದ್ಯಾರ್ಥಿಗಳಿಗೆಉತ್ತೇಜನ.
೨ ಚರ್ಚಾಘೋಷ್ಟಿಗಳು
೩. ಗ್ರಂಥಧಾನ, ಪಾಠಗಳ ವ್ಯವಸ್ತೆ
೪. ಗ್ರಂಥ ಪ್ರಕಾಶನ - ಶ್ರೀಪಾದರೆ ಸ್ವತಹ ಬರೆದಿರುವ "ದ್ವೈತಸ್ಯ ಅಪೂರ್ವತಾ", ಗಾಯತ್ರಿ ಗಾಂಭೀರ್ಯ, ತತ್ವ ಸಂಜ್ಯಾನ, ತತ್ವ ವೀವೇಕ, ಉಪಾದಿಖಂಡನ, ಮಾಯವಾದ ಖಂಡನ ಮೊದಲಾದ ಗ್ರಂಥಗಳ ಕನ್ನಡಾನುವಾದ ಪುಸ್ತಕಗಳು, ಶ್ರೀಮದಾಚಾರ್ಯರ ದಶಪ್ರಕರಣಗಳನ್ನೂ, ಶ್ರೀ ಜಯತೀರ್ಥರ ಟೀಕೆ ಹಾಗು ಅನೇಕ ವ್ಯಾಕ್ಯನಗಳೊಂದಿಗೆ ಲೇಖನ.
ಕಾಷ್ಠಮೌನ ವ್ರತ:
1961 ರಲ್ಲಿ ಬದರಿ ಕ್ಷೇತ್ರದಲ್ಲಿ ಶ್ರೀಗಳ ಜೊತೆಯಲ್ಲಿ ಮೂರು ಮಂದಿ ಮಾತ್ರ ಸಹಾಯಕರು. ಉಳಿದವರೆಲ್ಲ ಹರಿದ್ವಾರಕ್ಕೆ ಮರಳಿದರು. ಛತ್ರಒಂದರಲ್ಲಿ ಶ್ರೀಪಾದರ ವಾಸ. ಬೆಳಗಿನ ಜಾವ ನಾಲ್ಕು ಘಂಟೆಗೆ ಏಳುವುದು, ಬಾಹ್ಯ ಶೌಚಗಳನ್ನೂ ಪೂರಿಸುತ್ತಿದ್ದರು. ಭೋರ್ಗರೆವ ಅಲಕಾನಂದ ನದಿಯಲ್ಲಿ ಅವಗಾಹನ ಸ್ನಾನ. ಅನಂತರ ಗೀತಾಭಾಷ್ಯ, ಬ್ರಹ್ಮಸೂತ್ರ ಭಾಷ್ಯ ಪಾಠ, ಸಂಸ್ತಾನ ಪೂಜೆ, ಮದ್ಯಾಹ್ನ ಪುನಃ ಅಲಕನಂದದಲ್ಲಿ ಸ್ನಾನ ಹೀಗೆ ಹೆಚ್ಚುಸಮಯ ಬದರಿಯಾತ್ರೆಯಲ್ಲಿ ಕಾಲ ಕಳೆದರು.
ಮಾದ್ವ ಸಿದ್ದಾಂತಕ್ಕೆ ಬಹಳ ಕೊಡುಗೆಯನ್ನು ನೀಡಿದ ಮಹಾಮಹಿಮರು ಹೀಗೆ ವೈಶಾಖ ಶುದ್ದ ಏಕಾದಶಿ 14 - 05 - 2000 ರಂದು ಫಲಿಮಾರಿನಲ್ಲಿ ಶ್ರೀಗುರುಗಳು ಹರಿಪಾದವನ್ನು ಸೇರಿದರು.
ಹೀಗೆ ಶ್ರೀ ವಿದ್ಯಾಮಾನ್ಯ ತಿರ್ಥರನ್ನು ನೆನೆದ ದಿನವೇ ಸುದಿನ.
ಸಂಗ್ರಹ ಕಾಪು ಲಕ್ಷ್ಮೀಕಾಂತ ತಂತ್ರಿ (ಕಮಲಾತನಯ )
***********
ವಿದ್ಯಾಮಾನ್ಯ ತೀರ್ಥರ ಮಂತ್ರಾಕ್ಷತೆ ಮತ್ತು ತೀರ್ಥದಿಂದ ಆದ ಪವಾಡಗಳು
೧. ಗಂಗಾಸ್ನಾಕ್ಕೆ ಹೋಗುವ ಸಂದರ್ಭದಲ್ಲಿ ಒಬ್ಬ ಕುಷ್ಠ (ಬಿಳಿ ತೊನ್ನು) ರೋಗವಿರುವ ಕನ್ಯೆ ಇವರಲ್ಲಿ ರೋಗಪರಿಹಾರಕ್ಕಾಗಿ ಪ್ರಾರ್ಥಿಸಲು, ತಾವು ಪೂಜಿಸುತ್ತಿದ್ದ ರಾಯರ ಮೃತ್ತಿಕೆ ಕೊಡಲು ಪುನಃ ಅವರು ಯಾತ್ರೆ ಮುಗಿಸಿ ಬರುವಾಗ ಆ ಕುಷ್ಠ ರೋಗ ಪರಿಹಾರವಾದದ್ದು.
೨. ಮೂಕ ವಾಗ್ಮಿ ಯಾದದ್ದು - ಬೆಂಗಳೂರಿನ ಚಾತುರ್ಮಾಸದಲ್ಲಿ ನಡೆದ ಘಟನೆ. ಪ್ರತಿನಿತ್ಯ ಪೂಜೆಯಾದ ಮೇಲೆ ಗಂಧ ಮತ್ತು ತೀರ್ಥಗಳ ಸ್ವೀಕಾರ ಮತ್ತು ಪೂಜ್ಯಾಯ ರಾಘವೇಂದ್ರ ಮಂತ್ರದಿಂದ ಅವನಿಗೆ ಮಾತು ಬಂದಿರುವುದು.
೩. ಅಚ್ಚುತಾನಂತ ಗೋವಿಂದ ಮಂತ್ರ ಉಪದೇಶದಿಂದ ವೃದ್ಧೆಗೆ ಬಂದಿದ್ದ ಬಾಯಿ ರುಚಿಸದೆ ಕೃಶಳಾಗಿದ್ದ ವೃದ್ಧೆಗೆ ಮಂತ್ರಾಕ್ಷತೆ ಮತ್ತು ಕಲ್ಲುಸಕ್ಕರೆಯಿಂದ ಅವಳ ನಾಲಿಗೆ ಮೊದಲಿನಂತೆ ರುಚಿಸಿ ಏಳು ದಿನದೊಳಗೆ ಮೊದಲಿನಂತೆ ಆಗಿದ್ದು
೪. ಸೂರ್ಯ ಆದಿತ್ಯ ಮಂತ್ರದಿಂದ ಕಣ್ಣಿನ ಪೂರೇ ಶಸ್ತ್ರಚಿಕಿತ್ಸೆ ಯಿಂದ ತೀರಾ ಮಂದವಾಗಿದ್ದ ದೃಷ್ಟಿ ಪುನಃ ಬಂದದ್ದು
೫. ಗದುಗಿನ ನಾರಾಯಣ ರಾವ್ ದಂಪತಿಗಳಿಗೆ ಸಂತಾನ ಭಾಗ್ಯ
೬. ಹಲವಾರು ಪ್ರೇತಭಾದೆ ನಿವೃತ್ತಿ ಕೇವಲ ಕೃಷ್ಣ ಮುಖ್ಯ ಪ್ರಾಣ ಮಂತ್ರದಿಂದ ಹಲವರಿಗೆ ವಿಘ್ನಗಳ ನಿವಾರಣೆ
೭ . ಒಮ್ಮೆ ದಂಪತಿಗಳು ಮುಂಬೈ ಯಿಂದ ಬಂದಿದ್ದರು ಅವರಲ್ಲಿ ಒಂದು ಸಮಸ್ಯೆ, ವೈದ್ಯರೇ ಅವರ ಮಗುವಿಗೆ ಮುಂದೆ ಚಿಕಿತ್ಸೆ ಫಲಕಾರಿಯಾಗುವುದಿಲ್ಲ ಎಂದಾಗ ಅವರ ಮಾತಾ ಪಿತರು ಗುರುಗಳ ದರ್ಶನ ಮತ್ತು ಮಂತ್ರಾಕ್ಷತೆಯಿಂದ ಬದುಕಿದ ಮಗು ಇಂದು ವೃತ್ತಿಯಲ್ಲಿ ವೈದ್ಯ ನಾಗಿದ್ದಾನೆ ಎಂದರೆ ನಂಬಲಸಾಧ್ಯ.
ಮಳೆ ತರಿಸಿದ ಮಹಾಸ್ವಾಮಿಗಳು
ಎಲ್ಲಾ ಶ್ರೀ ಹರಿಯಿಚ್ಚೆ ಎಂದ ಮಹಾಜ್ನ್ಯಾನಿಗಳು
೧. ಗಯಾದಲ್ಲಿ ಚಾತುರ್ಮಾಸ್ಯ ಸಂದರ್ಭ ಸುಡು ಬಿಸಲು, ಮಳೆಬರುವ ಯಾವ ಲಕ್ಷಣ ಇಲ್ಲ, ಅನ್ಯಧರ್ಮಿಯನೊಬ್ಬ ವಿಷ್ಣುಪಾದ ದೇವಾಲಯಕ್ಕೆ ಚಪ್ಪಲಿ ಹಾಕಿಕೊಂಡು ಪ್ರವೇಶಿಸಿದ, ದೇವಾಲಯ ಶುದ್ದಿ ಕಾರ್ಯ ಮಾಡಬೇಕು ಆದರೆ ಫಲ್ಗು ನದಿಯಲ್ಲಿ ನೀರಿಲ್ಲ, ಗಯಾವಾಡರು ಶ್ರೀಗಳಲ್ಲಿ ಪ್ರಾರ್ಥನೆ ಮಾಡಿದಾಗ ವರುಣ ಮಂತ್ರದಿಂದ ಮಳೆತರಿಸಿದ್ದು ಮತ್ತು ಫಲ್ಗು ನದಿ ತುಂಬಿದ್ದು.
೨. ಪ್ರಯಾಗದಲ್ಲಿ ಮಧ್ವರಾದ್ದಂತ ಸಂವರ್ದಿನಿ ಸಭೆ ಮತ್ತು ಮಧ್ವನವಮಿ ಸಂದರ್ಭ ಆಕಾಶದಲ್ಲಿ ಕಪ್ಪನೆ ಮೋಡ, ಅಲ್ಲಿನ ಜನರು ಸರ್ವಮೂಲ ಮತ್ತು ಆಚಾರ್ಯ ಮಧ್ವರ ಶೋಭಾಯಾತ್ರೆ, ಅಲ್ಲಿನ ವ್ಯವಸ್ಥಾಪಕರು ಶ್ರೀಗಳಲ್ಲಿ ಮಳೆಯ ಕಳವಳ ವ್ಯಕ್ತ ಪಡಿಸಿದಾಗ ಅವರು ಹೇಳಿದರು ಈ ಶೋಭಾಯಾತ್ರೆ ನಂತರ ಮಳೆ ಬರುತ್ತದೆ ಎಂದು, ಅದೇ ರೀತಿ ಶೋಭಾಯಾತ್ರೆಯ ನಂತರ ಜೋರಾಗಿ ಮಳೆ ಸುರಿಯಿತು.
೩. ದೆಹಲಿಯಲ್ಲಿ 1962 ರಲ್ಲಿ ಅಷ್ಟಗ್ರಹ ಯೋಗ ಆ ಸಂದರ್ಭದಲ್ಲೂ ಮಹಾಮಳೆ, ಗುರುಗಳಲ್ಲಿ ಪ್ರಾರ್ಥನೆ ಮಾಡಿದಾಗ ಮಂತ್ರಜಪದಿಂದ ಮತ್ತು ಭಗವಂತನಲ್ಲಿ ಭಿನ್ನಹ ಮಾಡಿದಾಗ, ಯಜ್ನ್ಯ ನಡೆಯುವ ಸಂದರ್ಭದಲ್ಲಿ ಮಳೆ ಸುರಿಯುವುದಿಲ್ಲ ಎಂದು ಹೇಳಿದರು, ಅದೇರೀತಿ ಯಜ್ನ್ಯ ಪೂರ್ಣವಾಗುವವರೆಗೂ ಮಳೆ ಇರಲಿಲ್ಲ, ಯಜ್ನ್ಯ ದಿಂದ ಪ್ರಸನ್ನನಾದ ವರುಣದೇವ ಎಲ್ಲರು ತಮ್ಮ ತಮ್ಮ ಊರಿಗೆ ತೆರಳಿದ ಮೇಲೆ ಮಳೆ ಸುರಿಸಿದ್ದ.
೪. ಉಡುಪಿ ಶ್ರೀ ಕೃಷ್ಣನಿಗೆ ತಮ್ಮ ಪರ್ಯಾಯ ಕಾಲದಲ್ಲಿ ಸುವರ್ಣ ರಥ ಸಮರ್ಪಣೆ ಮಾಡುವ ಸಂದರ್ಭ, ಇದ್ದಕ್ಕಿದ್ದ ಹಾಗೆ ಜೋರಾಗಿ ಮಳೆ ಸಂಜೆಯಾದರೂ ಮಳೆ ನಿಲ್ಲುತ್ತಿಲ್ಲ. ಆದರೆ ಅಂದೇ ರಥೋತ್ಸವ ಮಾಡಲೇ ಬೇಕು. ಉಡುಪಿಯಲ್ಲಿ ಸಂಭ್ರಮ ಮತ್ತು ಸಾವಿರಾರು ಜನರು ಸೇರಿದ್ದರು, ಎಲ್ಲರು ಶ್ರೀ ವಿದ್ಯಾಮಾನ್ಯರನ್ನು ಕುರಿತು ಕೇಳಿದಾಗ ಶ್ರೀ ಕೃಷ್ಣ ಮುಖ್ಯ ಪ್ರಾಣರು ರಥ ಏರುವವರೆಗೂ ಮಳೆ ನಿಲ್ಲುವುದಿಲ್ಲ ಏರಿದ ಕೂಡಲೇ ಮಳೆ ನಿಲ್ಲುತ್ತದೆ ಎಂದು ಹೇಳಿದಾಗ ಅದೇರೀತಿ ರಥ ಏರುವವರೆಗೂ ಸುರಿಯುತ್ತಿದ್ದ ಮಳೆ ನಿಂತು, ನಂತರ ಉತ್ಸವ ಮುಗಿದಕೂಡಲೇ ಪುನಃ ಪ್ರಾರಂಭವಾಯಿತು.
ಶ್ರೀ ವಿದ್ಯಾಮಾನ್ಯರ ಅಂತಿಮ ದಿನಗಳು
ವಿಕ್ರಮನಾಮ ಸಂವತ್ಸರ ಚೈತ್ರ ಮಾಸದ ಕೃಷ್ಣ ಪಕ್ಷದ ದಶಮಿ ಶ್ರೀಗಳ ಆರೋಗ್ಯ ಸ್ವಲ್ಪ ಹದಗೆಟ್ಟಿತ್ತು, ಪೇಜಾವರ ಶ್ರೀಗಳ ಮತ್ತು ವೈದ್ಯರ ಒತ್ತಾಯದಿಂದ ಅಂದಿನ ರಾತ್ರಿ ಸ್ವಲ್ಪ ಇಡ್ಲಿಯನ್ನು ತಿಂದಿದ್ದರು, ಮಧ್ಯರಾತ್ರಿ ಸುಮಾರು 12 . 30 ಹೊತ್ತಿಗೆ ವಾಂತಿಯಾಯಿತು, ಶ್ರೀ ಕೊರ್ಲಹಳ್ಳಿ ವೆಂಕಟೇಶ ಚಾರ್ಯರು ಅವರನ್ನು ನೋಡಿಕೊಳ್ಳುವ ಕೆಲಸವಾಗಿತ್ತು. ಬಹಳ ಸುಸ್ತಾಗಿದ್ದ ಕಾರಣ ಸ್ವಲ್ಪ ಎಳನೀರು ಕೊಡಲೇ ಎಂದು ಕೇಳಿದಾಗ ಇಂದು ಯಾವ ತಿಥಿ ಎಂದು ಕೇಳಿದರು. ನಿಜ ನುಡಿದರೆ ಸ್ವಾಮಿಗಳು ಸ್ವೀಕರಿಸುವುದಿಲ್ಲವೆಂದು ತಿಳಿದು ಇಂದು ದಶಮಿ ಎಂದೇ ಹೇಳಿದರು. ಒತ್ತಾಯವಾಗಿ ಕುಡಿಸಿದರು ಸ್ವಾಮಿಗಳು ಗಂಟಲೊಳಗೆ ಹೋಗಲಿಲ್ಲ, ಅಷ್ಟು ಏಕಾದಶಿ ಬಗೆಗಿನ ನಿಷ್ಠೆ ಯಾಗಿತ್ತು. ತಮ್ಮ ಜೀವಮಾನದಲ್ಲಿ ಸುಮಾರು 87 ವರ್ಷ ಏಕಾದಶಿ ಮಾಡಿದ್ದರು ಸುಮಾರು 2000 ಕ್ಕೂ ಹೆಚ್ಚು ಏಕಾದಶಿ ಮಾಡಿದ ಮಹಾತ್ಮರು. ಮುಂದೆ 14 - 05 - 2000 ವೈಶಾಖ ಶುದ್ಧ ಏಕಾದಶಿ ಮೋಹಿನಿ ಏಕಾದಶಿ ಯಂದೇ ಫಲಿಮಾರಿನಲ್ಲಿ ಈ ಲೋಕಿಕ ಕಾಯ ತ್ಯಜಿಸಿ ಶ್ರೀ ಹರಿಪಾದ ಸೇರಿದರು.
ಈ ಲೇಖನಕ್ಕೆ ಮಾರ್ಗದರ್ಶನ ನೀಡಿದ ಶ್ರೀ ಕೊರ್ಲಹಳ್ಳಿ ವೆಂಕಟೇಶಚಾರ್ಯರಿಗೆ ನಮನಗಳು
***
17 ನೇ ಶತಮಾನದ ಶ್ರೀಮದ್ಯಾಸರಾಜಮಠದ ಮಹಾನ್ ಯತಿಗಳು,
ಶ್ರೀಶ್ರೀನಾಥತೀರ್ಥರ ಶಿಷ್ಯರು, ( ಶ್ರೀಭಾಷ್ಯದೀಪಿಕಾಚಾರ್ಯರ ಶಿಷ್ಯರು)
ಶ್ರೀವಿದ್ಯಾಪತಿ ತೀರ್ಥರ ಗುರುಗಳು ಆದ ಶ್ರೀಮದ್ ವಿದ್ಯಾನಾಥತೀರ್ಥರ ಆರಾಧನಾ ಮಹೋತ್ಸವ ಇಂದು...
ವಾದಿಯೂಥಪಸಂದೋಹಗರ್ವಪಾತನಕೇಸರೀ/
ನೈಜನಾಥಿತದೋ ಭೂಯಾದ್ವಿದ್ಯಾನಾಥಗುರುಃ ಶ್ರಿಯೈ/
ಹಾಗೆಯೆ ಶ್ರೀ ವಿಭುಧಪ್ರಿಯತೀರ್ಥರ ಶಿಷ್ಯರು, ಜಗನ್ಮಾನ್ಯ ಯತಿಗಳು, ವಾಗ್ಯದ್ಧದಲ್ಲಿ ಪ್ರವೀಣರೂ ಈಗಿನಕಾಲದವರಿಗೆ ಪರಿಚಯದ ಆವಶ್ಯಕತೆಯೆ ಇಲ್ಲದ, ಸುಪರಿಚಿತ ಗುರುಗಳು, ಮಹಾನ್ ಯತಿಗಳು ಆದ ಶ್ರೀವಿದ್ಯಾಮಾನ್ಯತೀರ್ಥರ ಆರಾಧನಾ ಶುಭವಂದನೆಗಳು..
ರಾಯರ ಪರಮ ಭಕ್ತರು, ಶ್ರೀ ಗುರುಜಗನ್ನಾಥವಿಠಲರ ಪರಮ ಶಿಷ್ಯರು, ಶ್ರೀ ಶ್ರೀನಿವಾಸವಿಠಲರ ಪುತ್ರರು, ಶಿಷ್ಯರೂ ಆದ ಶ್ರೀ ಆರಣಿಯ ದಾಸಾರ್ಯರು ನನ್ನ ಮಾತಾಮಹರಾದ ಶ್ರೀ ಸತ್ಯವಿಜಯದಾಸರ ಆರಾಧನೆಯ ಶುಭಸ್ಮರಣೆಗಳು..
ಶ್ರೀ ಯತಿದ್ವಯರ, ಶ್ರೀ ದಾಸಾರ್ಯರ ಪರಮಾನುಗ್ರಹ ನಮ್ಮ ಎಲ್ಲರಮೇಲಿರಲಿ ಎಂದು ಪರಮಾತ್ಮನಲ್ಲಿ ಪ್ರಾರ್ಥನೆ ಮಾಡುತ್ತಾ..
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽***
||ಶ್ರೀ ವಿಠ್ಠಲ ಪ್ರಸೀದ ||
ವೈಶಾಖ ಶುದ್ಧ ಏಕಾದಶಿಯ ಶುಭ ಕಾಮನೆಗಳು .
ಇಂದು ಏಕಾದಶಿಯ ದಿನವನ್ನು ಆರಾಧನೆ
ಆಚರಿಸಿಕೊಳ್ಳುತ್ತಿರುವ ಶ್ರೀ ವಿದ್ಯಾ ಮಾನ್ಯ ಗುರುಗಳ ಸ್ಮರಣೆ ಮೂಲಕ ಆಚರಿಸೋಣ ,
ಮಾಧ್ವ ಪರಂಪರೆಯ ಅಸಂಖ್ಯಾತ ಶಿಷ್ಯ ಪ್ರಶಿಷ್ಯರನ್ನು ತಯಾರುಮಾಡಿದ ಅಮೂಲ್ಯ ಗ್ರಂಥಗಳನ್ನು ಮಾಧ್ವ ಸಮಾಜಕ್ಕೆ ಕೊಟ್ಟ ಉತ್ತರಾದಿ ಮಠದ ಶ್ರೀ ಸತ್ಯಧ್ಯಾನರ ಶಿಸ್ತಿನ ಗರಡಿಯಲ್ಲಿ ತಯಾರಾದ ಶಿಷ್ಯರು ಶ್ರೀ ವಿದ್ಯಾಮಾನ್ಯರು .
ಅವರ ಅನೇಕ ಸಂಸ್ಥಾನ ಪೂಜೆಗಳನ್ನು ನೋಡಿದ್ದ ನೆನಪುಗಳು ಈಗಲೂ ಕಣ್ಣಮುಂದೆ ಸುಳಿಯುತ್ತದೆ . ಗುರುಗಳಿಂದಲೇ ಜ್ಞಾನದ ಅಮೃತಪಾನ ವಾಗಿತ್ತು .
ಮಿತಭಾಷಿ ಆದರೆ ಪ್ರವಚನ ಮಾಡುವಾಗ ಶ್ರೋತೃಗಳಿಗೆ ಭಗವಂತನನ್ನು ವೈಕುಂಠದಿಂದ ಕರೆದುಕೊಂಡುಬಂದು ಕಣ್ಣ ಮುಂದೆ ನಿಲ್ಲಿಸಿಬಿಡುತ್ತಿದ್ದರು . ಪ್ರವಚನ ಮುಗಿದು ಕಣ್ಣು ಬಿಟ್ಟಾಗ ಇಲ್ಲಿಯೇ ಇದ್ದ ಶ್ರೀಹರಿ ಎಲ್ಲಿಗೆ ಹೋದ ಎನ್ನುವಂತಾಗುತ್ತಿತ್ತು .
ಒಮ್ಮೆ ಗುರುಗಳು ಸ್ನಾನಾದಿಗಳನ್ನು ಮುಗಿಸಿ ಪೂಜೆಗೆ ತಯಾರಾಗಿಬರುವಷ್ಟರಲ್ಲಿ ಎಡಬಲದ ಸಹಾಯಕ ಶಿಷ್ಯನೊಬ್ಬ ಮುಟ್ಟಿಬಿಟ್ಟ . ಮತ್ತೆ ಹೋಗಿ ಸ್ನಾನ ಮಾಡಿಕೊಂಡು ಬಂದರು . ಆಗಾಗಲೇ ಹೊತ್ತು ಮೀರಿತ್ತು . ಯಾರೋ ಕೇಳಿದರು ಸ್ವಾಮಿಗಳೇ “ಆ ಶಿಷ್ಯ ಮಡಿಯಲ್ಲಿದ್ದನಲ್ಲವೇ “ ಎಂದು . ಆಗ ಸ್ವಾಮಿಗಳು ಹೇಳಿದ ಮಾತು ಎಲ್ಲರು ನೆನಪಿನಲ್ಲಿಡಬೇಕಾದ್ದು , ಅವರು ಹೇಳಿದರು
“ ಅವನು ಮುಟ್ಟಿದಾಕ್ಷಣ ಕೊಂಚಕಾಲ ಕೋಪಕ್ಕೆ ವಶನಾಗಿಬಿಟ್ಟೆ ಅದಕ್ಕೋಸ್ಕರ ಸ್ನಾನಮಾಡಿ ಬಂದೆ “ ಎಂದರು ಈ ಮೂಲಕ ಅರಿಷಡ್ವರ್ಗಗಳು ಸೂತಕವನ್ನು ಕೊಡುವಂತಹುದು ಎಂದು ತೋರಿದ್ದರು ಮಹಾನುಭಾವರು . ತಮ್ಮ ಗುರುಗಳಂತೆ ಗೀತೆಯಬಗ್ಗೆ ಅಪಾರ ಜ್ಞಾನ ಅವರ ಪ್ರವಚನಗಳು ಅಪಾರ ಜನಪ್ರಿಯತೆ ಗಳಿಸಿತ್ತು.
ಶ್ರೀಮದಾಚಾರ್ಯರ ತತ್ವಗಳನ್ನು ಪ್ರತಿಪಾದಿಸುವಾಗ ತಮ್ಮನ್ನು ತಾವು ಮರೆಯುತ್ತಿದ್ದರು .
ಒಮ್ಮೆ ತುಮಕೂರಿನಲ್ಲಿ ಅವರ ಪ್ರವಚನ, ಶ್ರೋತೃಗಳು ಕಿಕ್ಕಿರಿದು ನೆರೆದಿದ್ದರು ಪ್ರವಚನ
ಮಾಡುತ್ತಾ ಅದ್ವೈತ ಖಂಡನೆ ಮಾಡುವಾಗ
ಶ್ರೀಮದಾಚಾರ್ಯರ ತತ್ವಗಳನ್ನು ಹೇಳುತ್ತಾ
ತಮ್ಮ ಮುಂದಿದ್ದ ಮೇಜನ್ನು ಕುಟ್ಟಿದರು , ಮೇಲೆ ಶ್ರೀಮದಾಚಾರ್ಯರ ಭಾವ ಚಿತ್ರಕ್ಕೆ ಹಾಕಿದ್ದ ಹಾರ ಯಾರೋ ಕತ್ತರಿಸಿದಂತೆ ಮಧ್ಯದ ಭಾಗ ತುಂಡರಿಸಿ ಅವರ ಕೊರಳಿಗೆ ಬಿತ್ತು . ಹರಿವಾಯುಗಳು ಅವರ ಪ್ರವಚನ ಮೆಚ್ಚಿದ್ದಕ್ಕೆ ದ್ಯೋತಕವಾಗಿ .
ಕೆಲವರು ಅವರ ಹೆತ್ತವರು ಆಶ್ರಮದ ದಿನ ಎಲ್ಲವನ್ನು ಹೇಳಿದ್ದಾರೆ . ಈಗ ಅವರ ಗೀತಾ
ಪ್ರವಚನದ ತುಣುಕನ್ನು ಹೇಳಲಿಚ್ಛಿಸುತ್ತೇನೆ .
ಅವರು ಹೇಳುತ್ತಾರೆ , ಅರ್ಜುನನನ್ನು ಕೆಲವರು
ನಮ್ಮಂತೆ ಅಜ್ಞಾನಿ ಎಂದು ತಿಳಿದಿದ್ದಾರೆ . ಆದರೆ
ಅರ್ಜುನ ದೇವೇಂದ್ರನ ಅವತಾರಿ . ದೇವತೆಗಳು
ಬ್ರಹ್ಮ ಪರೋಕ್ಷಿಗಳು ,ಹಾಗೆ ಅರ್ಜುನಕೂಡ. ಆದರೆ ಶ್ರೀಕೃಷ್ಣ ಇಂತವನಿಗೆ ತನ್ನ ಅಘಟಿತಘಟನಾ ಶಕ್ತಿಯಿಂದ ಅಜ್ಞಾನವನ್ನು ತಾತ್ಕಾಲಿಕವಾಗಿ ಸೃಷ್ಟಿಸಿ , ಉದಾಹರಣೆಗೆ
ಸೈoಧವನ ಸಂಹಾರ ಮಾಡುವ ದಿವಸ ಹಗಲನ್ನು ರಾತ್ರಿ ಮಾಡಿದಂತೆ ಸೃಷ್ಟಿಮಾಡಿದನೆಂದು ಹೇಳಬೇಕು . ಅಲ್ಲದೆ ಅವನ ನಿಮಿತ್ತ ದಿಂದ ಗೀತೋಪದೇಶ ವಾಗಬೇಕಿತ್ತು.
ಅವನಿಗೆ ಅಜ್ಞಾನವನ್ನು ಉಂಟುಮಾಡಿ ಅರ್ಜುನ
ಪ್ರಶ್ನೆಮಾಡುವಂತೆ ಮಾಡಿದನು ಶ್ರೀಕೃಷ್ಣ. ಗೀತೆಯ ಕೊನೆಯೆಯಲ್ಲಿ “ ನಷ್ಟೋ ಮೋಹಃ ಸ್ಮೃತಿರ್ಲಬ್ದಾ” ನನ್ನ ಮೋಹ ಹೋಯಿತು ನನಗೆ ಪೂರ್ವದ ಸ್ಮರಣೆ ಬರುತ್ತಿದೆ “ ಎಂದು ಹೇಳುತ್ತಾನೆ . ಪೂರ್ವದಲ್ಲಿ ತಿಳಿದಿದ್ದರೆ ತಾನೇ ಈಗ ಸ್ಮರಣೆಗೆ ಬರುವುದು ಎಂದು ಶ್ರೀಗಳ ಅಭಿಪ್ರಾಯ .
ಅವರು ಪ್ರವಚನ ಮಾಡುತ್ತಿದ್ದರೆ ನಾವೆಲ್ಲಾ ಮಂತ್ರಮುಗ್ಧರಾಗುತ್ತಿದ್ದೆವು .
ಅನೇಕ ಗ್ರಂಥಗಳನ್ನು ತಮ್ಮ ಮಠದಿಂದ ಪ್ರಕಾಶಗೊಳಿಸಿದರು . ಅದರಲ್ಲಿ ಪಂಡಿತ್ತೋತ್ತಮರಿಗೆ ಪ್ರೇರಣೆ ನೀಡಿ ವಿಷ್ಣು ಸಹಸ್ರನಾಮ ಭಾವಾರ್ಥ ಸಮೇತ ಮುಖ್ಯವಾದದ್ದು . ಬಿಡಿಗಡೆಯ ದಿನ ಗುರುಶಿಷ್ಯ ಸಂಬಂಧದ ವಿಷಯ ಮಾತನಾಡಿದರು .
ಶ್ರೀ ಸತ್ಯಧ್ಯಾನ ತೀರ್ಥರು ಅವರನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದರು . ಶ್ರೀ ವಿದ್ಯಾಮಾನ್ಯರ ಪ್ರಮುಖ ವಿದ್ಯಾ ಶಿಷ್ಯರು ಅನೇಕ ಯತಿಗಳ ಮಧ್ಯದಲ್ಲಿ ಶೋಭಿಸುತ್ತಿದ್ದ ಶ್ರೀ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಅಲ್ಲದೆ ಸುಬ್ರಮಣ್ಯ ಮಠಾಧಿಪತಿಗಳು , ಭಂಡಾರಕೇರಿ ಶ್ರೀಗಳು
ಪುತ್ತಿಗೆ ಶ್ರೀಗಳು , ಅದಮಾರು ಶ್ರೀಗಳು ಹಾಗು ತಮ್ಮದೇ ಮಠದ ಕಿರಿಯ ಪಟ್ಟದವರು . ಜೊತೆಗೆ ಅಸಂಖ್ಯಾತ ಗೃಹಸ್ಥ ಶಿಷ್ಯರು.
ಶ್ರೀ ವಿಷ್ಣುಸಹಸ್ರನಾಮದ ಪುಸ್ತಕದ ಮೊದಲ ಸಂಪುಟ ಬಿಡುಗಡೆ ಸಂದರ್ಭದಲ್ಲಿ ಗುರುಶಿಷ್ಯರ ಸಂಭಂದದ ಬಗ್ಗೆ ಅನೇಕ ಕಿವಿಮಾತುಗಳನ್ನಾಡಿದ್ದರು .
ಮುಂದೆ ಚಾತುರ್ಮಾಸವನ್ನು ಶ್ರೀನರಸಿಂಹ
ಕ್ಷೆತ್ರ ಘಟಿಕಾಚಲದಲ್ಲಿ ನಡೆಸಿದ್ದರು . ಬೆನ್ನು ಬಾಗಿದ್ದರು ದೇವರ ದರ್ಶನಕ್ಕೆ ಯುವಕರನ್ನು ನಾಚಿಸುವಂತೆ ಹೋಗಿಬರುತ್ತಿದ್ದರು . ಇವರ ಬಗ್ಗೆ ಶಿಷ್ಯರಾದ ಶ್ರೀ ಪೇಜಾವರ ಶ್ರೀಗಳು “ ಗುರುಗಳ ಮಹಿಮೆ ಪಾಂಡಿತ್ಯ ಸಾಧನೆ ಶಾಸ್ತ್ರ ಪ್ರವಚನ , ಪಂಡಿತರ ರಕ್ಷಣೆ ಜ್ಞಾನಪ್ರಸಾರ , ಆಚಾರ್ಯರ ಸಿದ್ದಾಂತದ ಸಮರ್ಥನೆ ಮುಂತಾದ ವಿಷಯಗಳಲ್ಲಿ ಇತಿಹಾಸ ನಿರ್ಮಿಸಿದ ಶಕಪುರುಷರು ಇವರು . ಇವರ ಉಪನ್ಯಾಸಗಳು ಅಮೂಲ್ಯ ವಿಷಯ ಸಂಗ್ರಹ “ ಎಂದು ಅಭಿಪ್ರಾಯ ಪಟ್ಟಿದ್ದಾರೆ . ಇಂತಹ ಯತಿಗಳ ಉಪನ್ಯಾಸ ಕಿವಿಯಾರೆ ಕೇಳಿದ , ಸಂಸ್ಥಾನ ಪೂಜೆಗಳ ಕಣ್ಣಾರೆ ಕಂಡ ಭಾಗ್ಯ ನನ್ನದು .
ಕೊನೆಯದಾಗಿ ಗುರುಗಳ ಒಂದು ಅಮರವಾಣಿ ಹೇಳಬೇಕೆಂದೆನಿಸುತ್ತದೆ ಈ ಪರಮ ಪವಿತ್ರವಾದ ಹರಿದಿನದಂದು ,
“ ಗುಣ ಪೂರ್ಣತೆಯನ್ನು ಹೇಳುವ ಶ್ರೀಮದಾನಂದ ತೀರ್ಥರು , ವಿಷ್ಣುಸಹಸ್ರ ನಾಮ ಸ್ತೋತ್ರಕ್ಕೆ ಏಕಮೇವ ಅಧಿಕಾರಿಗಳು “ ಎಂದು
ಅಪ್ಪಣೆ ಕೊಡಿಸಿದ್ದಾರೆ .
ಇಂಥ ಗುರುಗಳ ಚರಮ ಶ್ಲೋಕ. ಈರೀತಿ ಇದೆ
“ಬ್ರಹ್ಮಚರ್ಯ ಹರಿಪ್ರೀತಿ ಸುವಿದ್ಯವಾದಿ ಶಾಲಿನಃ , ಇಷ್ಟಧಾನ್ ಕಷ್ಟಹತ್ರೆರ್ನ:
ವಿದ್ಯಾಮಾನ್ಯನ್ಮುನೀನ್ನುಮ:
ವೈಶಾಖ ಶುದ್ಧ ಏಕಾದಶಿ ಸೌರ ೧೪-೫-೨೦೦೦ ರಲ್ಲಿ ಫಲಿಮಾರು ಕ್ಷೆತ್ರದಲ್ಲಿ ಬೃಂದಾವನಸ್ಥರಾದರು .
ನಾಹಂ ಕರ್ತಾ ಹರಿಃ ಕರ್ತಾ
|| ಶ್ರೀ ಕೃಷ್ಣಾರ್ಪಣ ಮಸ್ತು ||
**********
" ದ್ವೈತ ವೇದಾಂತ ವಿದ್ಯಾ ಕೋವಿದರೂ - ಶ್ರೀ ವಿಭುದಪ್ರಿಯ ತೀರ್ಥರ ಆಶ್ರಮ ಮತ್ತು ವಿದ್ಯಾ ಶಿಷ್ಯರು ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದಂಗಳವರು "
" ದಿನಾಂಕ : 24.05.21 - ಶ್ರೀ ರಾಯರ - ಶ್ರೀ ಮುಖ್ಯಪ್ರಾಣದೇವರ - ಶ್ರೀ ಕೃಷ್ಣ ಪರಮಾತ್ಮನ ಅಂತರಂಗ ಭಕ್ತರಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಿದ್ಯಾಮಾನ್ಯ ತೀರ್ಥರ ಆರಾಧನಾ ಮಹೋತ್ಸವ "
ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ......
ವಿದ್ಯಾಮಾನ್ಯರೇ ವಿಬುದಪ್ರಿಯರ ಸುತರೆ ।
ವಿದ್ಯಾಧೀಶರ ಪಿತ ವಿದ್ವದಾರ್ಯ ನಮೋ । ವಿ ।
ಬುಧೇಶರಿಂ ಮಧ್ವ ಶಾಸ್ತ್ರವನು ತಿಳಿದು ಚಂದದಿ ।।
ವಿಧಾತೃ ಪಿತ ವೇಂಕಟನಾಥ ಶ್ರೀ ಕೃಷ್ಣ ।
ಪದಾರ್ಚಕ ವಿದ್ಯಾಮಾನ್ಯರೆ ನಮೋ ನಮಃ ।।
" ಶ್ರೀ ವಿದ್ಯಾಮಾನ್ಯತೀರ್ಥರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ನಾರಾಯಣ ತಂತ್ರಿಗಳು
ತಂದೆ : ಶ್ರೀ ಕುಪ್ಪಣ್ಣ ತಂತ್ರಿಗಳು
ತಾಯಿ : ಸಾಧ್ವೀ ರಾಧಮ್ಮ
ಜನನ : ಕ್ರಿ ಶ 1913
ಜನ್ಮ ಸ್ಥಳ : ಎರ್ಮಾಳು
ಶ್ರೀ ಕುಪ್ಪಣ್ಣ ತಂತ್ರಿ ದಂಪತಿಗಳು ತಮ್ಮ ಪ್ರೀಯತ ಪುತ್ರ ಶ್ರೀ ನಾರಾಯಣ ತಂತ್ರಿಗಳಿಗೆ 8ನೇ ವಯಸಿನಲ್ಲಿ ಉಪನಯನ ಮಾಡಿದರು - ಅವರಿಗೆ ಶ್ರೀ ಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶತಾಯುಷಿಗಳಾದ ಶ್ರೀ ಸುದೀಂದ್ರ ತೀರ್ಥರಿಂದ ಮಂತ್ರೋಪದೇಶ ನಡೆಯಿತು.
ಆಶ್ರಮ ಗುರುಗಳು : ಶ್ರೀ ಅದಮಾರು ಮಠಾಧೀಶರಾದ ಶ್ರೀ ವಿಬುಧಪ್ರಿಯ ತೀರ್ಥರು
ಆಶ್ರಮ ನಾಮ : ಶ್ರೀ ವಿದ್ಯಾಮಾನ್ಯತೀರ್ಥರು
" ವಿದ್ಯಾ ಗುರುಗಳು "
1. ಆಶ್ರಮ ಗುರುಗಳಾದ ಶ್ರೀ ವಿಬುಧಪ್ರಿಯ ತಿರ್ಥರಿಂದ " ದ್ವೈತ ವೇದಾಂತ "
2. ಶ್ರೀ ವಾಸುದೇವಾಚಾರ್ಯರಲ್ಲಿ - ದಶಪ್ರಕರಣಗಳು, ದೋಷಪನಿಷತ್ತು, ಮತ್ತು ತತ್ವಪ್ರಕಾಶಿಕಾ ಗ್ರಂಥಗಳ ಪಾಠ
3. ಉತ್ತರಾದಿ ಮಠದ ಶ್ರೀ ಸತ್ಯಧ್ಯಾನರಲ್ಲಿ - ಶ್ರೀಮನ್ನ್ಯಾಯಸುಧಾ - ವ್ಯಾಸತ್ರಯ ಗ್ರಂಥಗಳು ಪಾಠ.
" ದ್ವೈತ ವೇದಾಂತ ಮಹಾ ವಿದ್ಯಾಲಯ ನಿರ್ಮಾಣ "
ಶ್ರೀ ಭಂಡಾರುಕೇರಿ ಮಠಾಧೀಶರಾದ ಪರಮಪೂಜ್ಯ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರು ಶ್ರೀ ವಿಬುಧೇಶ ತೀರ್ಥ ಶ್ರೀಪಾದಂಗಳವರಂಥಾ ಪ್ರಾಜ್ಞಪುಂಗವರ ಜ್ಞಾನ ಭಂಡಾರವನ್ನು ತಾವು ಪಡೆದು " ಭಂಡಾರುಕೇರಿ " ಯೆಂಬ ಹೆಸರನ್ನು ಸಾರ್ಥಕಗೊಳಿಸಿದ್ದಾರೆ.
ಶ್ರೀ ವಿದ್ಯಾಮಾನ್ಯ ತೀರ್ಥರು ಅಧ್ಯಯನವನ್ನು ಮುಗಿಸಿಕೊಂಡು ತಮ್ಮ ಸ್ವಗ್ರಾಮವಾದ " ಭಂಡಾರುಕೇರಿ " ಗೆ ಬಂದು ಅಲಿ ಒಂದು ವೇದಾಂತ ಮಹಾ ವಿದ್ಯಾಲಯವನ್ನೇ ಪ್ರಾರಂಭಿಸಿದರು.
ದೂರ ದೂರ ಊರುಗಳಿಂದ ನೂರಾರು ಜನ ಜ್ಞಾನಾರ್ಥಿ ವಿದ್ಯಾರ್ಥಿಗಳು ಅಲ್ಲಿಗೆ ಬಂದು ಈ ಜ್ಞಾನ ಮೇರುವಿನ ಪಾದದಡಿಯಲ್ಲಿ ನಿಂದು " ನ್ಯಾಯ ವೇದಾಂತಾದಿ ಗ್ರಂಥ " ಗಳನ್ನು ಅಧ್ಯಯನ ಮಾಡ ತೊಡಗಿದರು.
ಈ ವೇದಾಂತ ಗರಡಿಯಲ್ಲಿ ಅಧ್ಯಯನ ತಯಾರಾದ ಅನೇಕ ಜನ ವಿದ್ವತ್ತಲ್ಲಜರ ದೇಶದಲ್ಲಿ ಅಲ್ಲಲ್ಲಿ ನಿಂತು ಬಡವ ಬಲ್ಲಿದರೆಲ್ಲರಿಗೂ ಸುಧಾದಿ ಗ್ರಂಥಗಳನ್ನು ಈಗಲೂ ಪಾಠ ಹೇಳುತ್ತಿದ್ದಾರೆ.
ಶ್ರೀ ಭಂಡಾರುಕೇರಿ ಮಠಾಧೀಶರಾದ ಪರಮಪೂಜ್ಯ ಶ್ರೀಪಾದರು ಮಾಧ್ವ ಸಮಾಜಕ್ಕೆ ನೀಡಿದ ಚಿರ ಸ್ಮರಣೀಯವಾದ ಮಹಾರ್ಘ್ಯ ಕಾಣಿಕೆಯೆಂದರೆ ಶ್ರೀ ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು.
ಪ್ರೇಕ್ಷಾವತ್ ಪರಮಹಂಸ ಪುಂಗವರಾದ ಶ್ರೀ ವಿಶ್ವೇಶ ತೀರ್ಥರು ಕೂಡಾ ಶ್ರೀ ಭಂಡಾರುಕೇರಿ ಶ್ರೀಪಾದರ ಈ ವಿದ್ವನ್ನಿರ್ಮಾಣ ಕೇಂದ್ರದಲ್ಲಿ ಸಿದ್ಧರಾದ ಪ್ರಸಿದ್ಧ ಪ್ರಾಜ್ಞ ಪರಿವೃಢರಾಗಿದ್ದಾರೆ.
" ಸಂನ್ಯಾಸ ವಿದ್ಯಾ ಶಿಷ್ಯರು "
ಶ್ರೀ ಶ್ರೀ ವಿಶ್ವೇಶ ತೀರ್ಥರು ಪೇಜಾವರ ಮಠ - ಶ್ರೀ ವಿಶ್ವಪ್ರಿಯ ತೀರ್ಥರು ಅದಮಾರು ಮಠ - ಶ್ರೀ ಸುಗುಣೇಂದ್ರ ತೀರ್ಥರು ಪುತ್ತಿಗೆ ಮಠ - ಶ್ರೀ ವಿದ್ಯಾಧೀಶ ತೀರ್ಥರು ಪಲಿಮಾರು ಮಠ - ಶ್ರೀ ವಿದ್ಯೇಶ ತೀರ್ಥರು ಭಂಡಾರುಕೇರಿ ಮಠ.
ಡಾ ।। ಶ್ರೀ ಬನ್ನಂಜೆ ಗೋವಿಂದಾಚಾರ್ಯ - ಶ್ರೀ ಕೊರ್ಲಹಳ್ಳಿ ರಾಘವೇಂದ್ರಾಚಾರ್ಯರು - ಶ್ರೀ. ಪಿ.ಕೆ. ಹರಿದಾಸಾಚಾರ್ಯ - ಶ್ರೀ ಬಿ. ವಾದಿರಾಜಾಚಾರ್ಯರು - ಶ್ರೀ ಲಕ್ಷ್ಮೀ ನಾರಾಯಣ ಕೊಡಂಚ - ಮೊದಲಾದ ದ್ವೈತ ವಿದ್ವನ್ಮಣಿಗಳನ್ನು ತಯಾರು ಮಾಡಿದ ಕೀರ್ತಿ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಿದ್ಯಾಮಾನ್ಯತೀರ್ಥರಿಗೆ ಸಲ್ಲುತ್ತದೆ.
" ಮಧ್ವ ಸಿದ್ಧಾಂತ ಸ್ಥಾಪನೆ "
ಶ್ರೀ ಭಂಡಾರುಕೇರಿ ಶ್ರೀಪಾದರು 12 ವರ್ಷಗಳ ಕಾಲ ಊರು ಬಿಟ್ಟು ಪದ ಚಲನ ಮಾಡದೆ ಭಂಡಾರುಕೇರಿಯಲ್ಲಿಯೇ ಇದ್ದು ದ್ವಾದಶ ವಾರ್ಷಿಕ ಜ್ಞಾನ ಸತ್ರವನ್ನು ಅವಿಚ್ಛಿನ್ನವಾಗಿ ನೆರವೇರಿಸಿ ನೂರಾರು ಜನ ವಿದ್ವಾನ್ಸರನ್ನು ತಯಾರು ಮಾಡಿ - ಅನೇಕ ಜನ ಪೀಠಾಧಿಪತಿಗಳಿಗೆ ಪಾಠ ಹೇಳಿ ಅನಂತರ ದಿಗ್ವಿವಿಜಯಕ್ಕಾಗಿ ಹೊರಟರು.
ಕಾಶಿಯಿಂದ ರಾಮೇಶ್ವರದ ವರೆಗೆ ಎಲ್ಲ ಕಡೆಗೂ ಸಂಚರಿಸಿ - ಅದ್ವೈತ ವಿದ್ವಾಂಸರು ಇದ್ದಲಿಗೆ ಹೋಗಿ ಅವರ ಜೊತೆ ವಾದ ಮಾಡಿ ಗೆದ್ದು " ಮಧ್ವ ಮತದ ಜಯ ಧ್ವಜವನ್ನು ಎತ್ತಿ " ಮೆರೆಸಿದ್ದಾರೆ.
1. ಕಾಂಚಿಪೂರದಲ್ಲಿ ಕುಂಭಕೋಣದ ಕಾಮಕೋಟಿ ಶಂಕರಾಚಾರ್ಯರ ಅದ್ಯಕ್ಷತೆಯಲ್ಲಿ ನಡೆದ ಅದ್ವೈತ ಸಭೆಯಲ್ಲಿ ಮಹಾಮಹೊಪಾದ್ಯಾಯ ಶ್ರೀ ಅನಂತ ಶಾಸ್ತ್ರಿ - ಶ್ರೀ ಸುಬ್ರಮಣ್ಯ ಶಾಸ್ತ್ರಿ ಮುಂತಾದವರ ಜೊತೆ ವಾಗ್ವಾದ & ಜಯ
2. ಕಾಶಿಯಲ್ಲಿ 1958 ನೇ ಇಸವಿಯಲ್ಲಿ ಮಹಾಮೊಪಾದ್ಯಾಯ ಗಿರಿಧರ ಶರ್ಮ ಚತುರ್ವೇದಿ ಇವರ ಅದ್ಯಕ್ಷತೆಯಲ್ಲಿ ನಡೆದ ಅದ್ವೈತ ಸಭೆಯಲ್ಲಿ ಶ್ರೀಪಾದರ ವೈಶಿಷ್ಟ್ಯ ಮೆಚ್ಚಿ ಗೌರವಾರ್ಪಣೆ.
4. ಶ್ರೀ ಅನಂತ ಕೃಷ್ಣ ಶಾಸ್ತ್ರಿಗಳು ಬರೆದ " ನ್ಯಾಯಸುಧಾ ಖಂಡನಾಭಾಸಾ " ಕ್ಕೆ ಖಂಡನವನ್ನು ಬರೆದು ಬರೆದು - ಸ್ವತಃ ಶಾಸ್ತ್ರಿಗಳನ್ನು ಸಮಕ್ಷ ಕರೆಯಿಸಿ ಅವರ ಗ್ರಂಥದಲ್ಲಿಯ ವಿಧಾನಗಳನ್ನೆಲ್ಲ ಅಕ್ಷರಸಃ ಖಂಡಿಸಿ ಹಾಕಿದ್ದಾರೆ.
ಶ್ರೀ ವಿದ್ಯಾಮಾನ್ಯ ತೀರ್ಥರ ಈ ಗ್ರಂಥವು [ ಅದ್ವೈತ ತತ್ತ್ವ ಸುಧಾ ಸಮೀಕ್ಷಾ ] ಸಕಲ ವಿದ್ವನ್ಮಾನ್ಯತೆಯನ್ನು ಪಡೆದು ಮಧ್ವ ಶಾಸ್ತ್ರದ ಮೇಲ್ಮೆಯನ್ನು ಎತ್ತಿ ಹಿಡಿದು " ವೈಷ್ಣವ ವಾಙ್ಞಯ " ಕ್ಕೆ ಅಲಂಕಾರ ಪ್ರಾಯವಾಗಿದೆ.
" ಮಾಧ್ವರಾದ್ಧಾಂತ ಸಂವರ್ಧಿನೀ ಸಭಾ "
ಶ್ರೀ ವಿದ್ಯಾಮಾನ್ಯ ತೀರ್ಥರಿಗೆ ಮಧ್ವ ಸಿದ್ಧಾಂತವನ್ನು ಸರ್ವತ್ರಾಪಿ ಪ್ರಸಾರ ಮಾಡಬೇಕೆಂದು ಅತ್ಯುತ್ಕಟವಾದ ಅಪೇಕ್ಷೆ ಇದ್ದುದರಿಂದ ಅವರು " ಮಾಧ್ವರಾದ್ಧಾಂತ ಸಂವರ್ಧಿನೀ ಸಭೆ " ಯೆಂಬ ಸಂಸ್ಥೆಯನ್ನು ಸ್ಥಾಪಿಸಿದರು.
ಪ್ರತಿವರ್ಷವೂ ಮಧ್ವ ನವಮೀ ಕಾಲದಲ್ಲಿ ನಾಡಿನ ಪಂಡಿತರನ್ನೂ, ವಿದ್ಯಾರ್ಥಿಗಳನ್ನೂ ಬರ ಮಾಡಿಕೊಂಡು ಪರೀಕ್ಷೆ ಮಾಡಿ ವಿಫುಲವಾಗಿ ದಾನ ದಕ್ಷಿಣೆಗಳನ್ನು ಕೊಟ್ಟು ಗೌರವಿಸುತ್ತಿದ್ದರು.
ಈ ವಿದ್ವತ್ ಸಭೆಯ ಮುಖಾಂತರ ಅಲ್ಲಲ್ಲಿ ಪಾಠಶಾಲೆಗಳನ್ನಿಟ್ಟು ವಿದ್ವಾಂಸರನ್ನು ನಿಯಮಿಸಿ ಅವರಿಗೆ ಮಾಸಾಶನ - ವರ್ಷಾಶನಗಳನ್ನಿತ್ತು " ವೇದಾಂತ ವಿದ್ಯೆಯ ಸರ್ವತೋ ಮುಖ ಪ್ರಸಾರ " ಕ್ಕೆ ಸರ್ವ ವಿಧದಿಂದಲೂ ಪ್ರೋತ್ಸಾಹ ಕೊಟ್ಟ ಮಹನೀಯರು.
" ಗ್ರಂಥಗಳು "
ಈಶಾವಾಸ್ಯೋಪನಿಷತ್
ಗಾಯತ್ರೀ ಗಾಂಭೀರ್ಯ
ಅದ್ವೈತ ತತ್ತ್ವ ಸುಧಾ ಸಮೀಕ್ಷಾ
ತತ್ತ್ವ ಮಾರ್ತಾಂಡ ವಿಮರ್ಶಾ
ಮಾಯಾವಾದ ಶಿರಸಾಖ್ಯ ಗ್ರಂಥಾನೇಕಾರ್ಥ ಮಾಲಿಕಾ
ಮಧ್ವ ಸಿದ್ಧಾಂತ [ ದ್ವೈತಸ್ಯ ಅಪೂರ್ವತಾ ]
" ಗ್ರಂಥ ಪ್ರಕಾಶನ "
ಇದಲ್ಲದೆ ಈಶಾವಾಸ್ಯೋಪನಿಷತ್ - ಗಾಯತ್ರೀ ಗಾಂಭೀರ್ಯ ಮುಂತಾದ ಚಿಕ್ಕ ಚಿಕ್ಕ ಗ್ರಂಥಗಳನ್ನು ಬರೆದು ಪ್ರಕಾಶಿಸಿ - ವೇದ - ಶಾಸ್ತ್ರಗಳನ್ನು ತಿರುಳನ್ನು ತಿಳಿಯಾದ ಭಾಷೆಯಲ್ಲಿ ಪಾಮರರಿಗೆಲ್ಲ ಬೋಧವಾಗುವಂತೆ ಮಾಡಿದ್ದಾರೆ.
" ಪರ್ಯಾಯ "
ಶ್ರೀ ವಿದ್ಯಾಮಾನ್ಯ ತೀರ್ಥರು ಪಲಿಮಾರು ಮಠಾಧೀಶರಾಗಿ 02 ಶ್ರೀ ಕೃಷ್ಣ ಪರ್ಯಾಯ ಮಹೋತ್ಸವವನ್ನು ಆಚರಿಸಿದ್ದಾರೆ.
ಈ ಪರ್ಯಾಯಗಳಲ್ಲಿ ಶ್ರೀ ಶ್ರೀಪಾದರು - ಸ್ವರ್ಣ ಪಲ್ಲಕ್ಕಿ, ಸ್ವರ್ಣ ರಥ ಮತ್ತು ವಜ್ರ ಕಿರೀಟ ಮಾಡಿಸಿ ಜಗದೊಡೆಯನಾದ ಶ್ರೀ ಕೃಷ್ಣ ಪರಮಾತ್ಮನಿಗೆ ಅರ್ಪಿಸಿದ್ದಾರೆ.
" ಶ್ರೀ ರಾಯರ ಅಂತರಂಗ ಭಕ್ತರಾದ ಶ್ರೀ ಶ್ರೀಪಾದರ ವದನಾರವಿಂದದಲ್ಲಿ - ಶ್ರೀ ರಾಯರ ಮೃತ್ತಿಕಾ ಮಹಿಮೆ "
ಒಮ್ಮೆ ಶ್ರೀ ಪಾದರು ಗಂಗಾ ಸ್ನಾನಕ್ಕೆ ಹೋಗುವ ಮಾರ್ಗದಲ್ಲಿ - ಒಂದು ಊರಿನಲ್ಲಿ ಸಣ್ಣ ದೇವಸ್ತಾನದಲ್ಲಿ ತಂಗಿದ್ದರು.
ಆಗ ಒಬ್ಬ ಮಹಿಳೆ ಬಂದು ತನಗೆ ಕುಷ್ಟ ರೋಗವಿರುವುದನ್ನು ಶ್ರೀಗಳಲ್ಲಿ ಭಿನ್ನವಿಸಿದಾಗ - ಶ್ರೀಪಾದರು ತಾವು ಮಂತ್ರಾಲಯದಿಂದ ತಂದಿದ್ದ ಶ್ರೀ ರಾಯರ ಮೃತ್ತಿಕೆಯನ್ನು ನೀಡಿ - ಅದನ್ನು ಹಚ್ಚಿಕೊಂಡು - ತೀರ್ಥವನ್ನು ತೆಗೆದುಕೊಂಡರೆ ವಾಸಿಯಾಗುವುದೆಂದರು.
ಅದನ್ನು ಪಡೆದ ಮಹಿಳೆ ಕೆಲವೇ ದಿನಗಳು ಹಚ್ಚಿಕೊಂಡಳು.
ಶ್ರೀಪಾದರು ಅಷ್ಟರಲ್ಲಿ ಕಲ್ಕತ್ತಾ, ಗಂಗಾಸಾಗರ - ಸಂಗಮ ದರ್ಶನ ಸ್ನಾನ ಮಾಡಿ ಅದೇ ಉರಿನಲ್ಲಿ ಬಂದಾಗ ಆ ಮಹಿಳೆ ಬಂದು ತನ್ನ ಕೈಯನ್ನು ತೋರಿಸಿ ಪೂರ್ಣ ಗುಣಮುಖವಾಗಿರುವುದನ್ನು ತಿಳಿಸಿದಳು. [ ಈ ವಿಷಯವನ್ನು ಪರಮಪೂಜ್ಯ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದರು ತಮ್ಮ ಪ್ರವಚನದ್ಲಲಿ ಹೇಳಿದ್ದು ]
" ನಿರ್ಯಾಣ "
ಶ್ರೀ ವಿದ್ಯಾಮಾನ್ಯ ತೀರ್ಥರು ಮಾದ್ವ ಸಿದ್ದಾಂತಕ್ಕೆ ತಮ್ಮದೇ ಆದ ಸೇವೆಯನ್ನು ಭಕ್ತಿ ಶ್ರದ್ಧೆಗಳಿಂದ ಸಲ್ಲಿಸಿ - ತಮಗೆ ಇಷ್ಟವಾದ ಶ್ರೀ ಕೃಷ್ಣ ಪರಮಾತ್ಮನ ದಿನವಾದ - ವೈಶಾಖ ಶುದ್ದ ಏಕಾದಶಿ [ 14.05.2000 ] ರಂದು ಪಲಿಮಾರು ಗ್ರಾಮದಲ್ಲಿ ವೃಂದಾವನಸ್ಥರಾದರು.
ಶ್ರೀ ವಿದ್ಯಾಧೀಶ ತೀರ್ಥರು.....
ಬ್ರಹ್ಮಚರ್ಯಹರಿಪ್ರೀತಿ
ಸುವಿದ್ಯಾವಾದಶಾಲಿನ: ।
ಇಷ್ಟದಾನ್ ಕಷ್ಟಹರ್ತ್ರೇನ್ನಃ:
ವಿದ್ಯಾಮಾನ್ಯಾನ್ಮುನೀನ್ನುಮಃ :।।
" ಉಪ ಸಂಹಾರ "
ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ......
ವೀರ ವೈಷ್ಣವನೆ ವೈಷ್ಣವಾಗ್ರಗಣ್ನನ ಸಿದ್ಧಾಂತ ಸ್ಥಾಪಿಸಿ ।
ವೀರವ್ರತ ದಿನದಿ ವೀರ ವೇಂಕಟನಾಥನ ಪದ ಸೇರ್ದ ।।
ಮಾಧ್ವ ಮಹಾ ಮಂಡಲದ ಸತ್ವ ಪರೀಕ್ಷೆಯ ಪ್ರಸಂಗದಲ್ಲಿ ಅದರ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿ.....
ಸಮಾಜದಲ್ಲಿ, ಮಠ ಮಠಗಳಲ್ಲಿ - ಮಂಡಾಳ ಹಾಗೂ ಪೀಠಾಧಿಪತಿಗಳಲ್ಲಿ ಸ್ನೇಹ - ಸೌಹಾರ್ದ - ಸಾಮರಸ್ಯ ಸಂಬಂಧ ಸ್ಥಾಪನೆಗೆ ಕಾರಣ ಪುರುಷರಾಗಿದ್ದಾರೆ.
ಶ್ರೀ ವಿದ್ಯಾಮಾನ್ಯ ತೀರ್ಥರ ಪಾಂಡಿತ್ಯ - ಪ್ರತಿಭೆ - ವೈಷ್ಣವದೀಕ್ಷೆ - ಮಧ್ವ ಪ್ರಸಾರಾಕಾಂಕ್ಷೆ - ಪಂಡಿತ ಪಕ್ಷಪಾತ - ವಿದ್ಯಾರ್ಥಿ ವಾತ್ಸಲ್ಯ - ಧರ್ಮನಿಷ್ಠೆ - ಕರ್ಮಠಕರ್ಮಂದಿತೆ - ಕಾರುಣ್ಯ - ಸೌಜನ್ಯ - ಸಹೃದಯತೆ - ಶಿಷ್ಯ ಜನರ ಉದ್ದಿಧಿರ್ಪೆ ಮುಂತಾದ ಗುಣಗಳು ಒಂದೊಂದೂ ಅಸಾಮಾನ್ಯವಾಗಿವೆ.
ಅತ ಏವ ಜಗನ್ಮಾನ್ಯವೂ ಆಗಿವೆ.
ಶ್ರೀ ವಿದ್ಯಾಮಾನ್ಯ ತೀರ್ಥರ ಒಂದೊಂದು ಗುಣಗಳ ಮೇಲೆಯೂ - ಒಂದೊಂದು ಪುಸ್ತಕ ಬರೆಯುವಷ್ಟು ಗುಣಗಣ ಗಣಿಯಾಗಿದ್ದಾರೆ ಈ ಶ್ರೀ ಗುರೂತ್ತಮರು.
ಸಂಸ್ಕೃತ ಪಂಡಿತರಿಗೆಲ್ಲ ಶ್ರೀ ಭೋಜ ವಿಕ್ರಮ ರಾಜನಂತೆ ಉದಾರಾಶ್ರಯವಿತ್ತು - ಅವರ ಯೋಗಕ್ಷೇಮ ಚಿಂತನೆಯನ್ನು ಮಾಡಿದ ಶ್ರೀ ಶ್ರೀಪಾದರು....
" ವಿದ್ಯಾಮಾನ್ಯರೂ ಆಗಿದ್ದಾರೆ - ವಿದ್ವನ್ಮಾನ್ಯರೂ ಆಗಿದ್ದಾರೆ.
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****
ಅಸದಳವಾದ ವಿದ್ಯೆಯಿಂದ, ಅನುಪಮವಾದ ತಪಶ್ಚರ್ಯೆಯಿಂದ ವಿಶ್ವಮಾನ್ಯರಾದ ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದಂಗಳವರ ಆರಾಧನೆ ವೈಶಾಖ ಶುದ್ಧ ಏಕಾದಶಿ. ಶ್ರೀವಿದ್ಯಾಮಾನ್ಯತೀರ್ಥರ ಪುಣ್ಯಸ್ಮರಣೆಯಲ್ಲಿ.
'ಸು-ವರ್ಣ' ಗಳಿಂದ ವಾಸಿಷ್ಠ ಕೃಷ್ಣನನ್ನು, ಸುವರ್ಣದ ತೊಟ್ಟಿಲು, ಸುವರ್ಣ ರಥಗಳಲ್ಲಿ 'ಯಾದವಕೃಷ್ಣ' ನನ್ನು ಇಟ್ಟು ಪೂಜಿಸಿದ, ವಜ್ರಕಿರೀಟದಿಂದ ಕೃಷ್ಣನನ್ನು ಅಲಂಕರಿಸಿದ ವಿದ್ಯಾಮಾನ್ಯತೀರ್ಥರು ಯತಿಗಳ ಪರಂಪರೆ ಯಲ್ಲಿಯೂ ಸ್ವರ್ಣಸದೃಶ ವಾದಂತಹ ವ್ಯಕ್ತಿತ್ತ್ವ ವುಳ್ಳವರು. "ನೀವು ಖಂಡಿತವಾಗಿ ಜ್ಞಾನದ ಭಂಡಾರವೇ ಆಗಿದ್ದೀರಿ" ಎಂದು ವಿದ್ಯಾಗುರುಗಳಾದ ಶ್ರೀಸತ್ಯಧ್ಯಾನರು ಪ್ರಶಂಸಿಸಿದರೆ, 'ಮುಗಿಲೆತ್ತರದ ಪಾಂಡಿತ್ಯದವರು, ಮಗುವಿನಂಥ ಹೃದಯದವರು' ಎಂದು ಶ್ರೀಗಳ ವಿದ್ಯಾಶಿಷ್ಯ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಶ್ರೀವಿದ್ಯಾಮಾನ್ಯರ ವ್ಯಕ್ತಿತ್ವವನ್ನು ಮನದುಂಬಿ ವರ್ಣಿಸುತ್ತಾರೆ. 27-07-1913ರ ಪ್ರಮಾದಿ ಸಂವತ್ಸರದ ಆಷಾಢ ಕೃಷ್ಣ ನವಮಿಯಂದು, ಎರ್ಮಾಳಿನ ವಿದ್ವಾಂಸರಾದ ಶ್ರೀರಾಮಕೃಷ್ಣತಂತ್ರಿಗಳು (ಕುಪ್ಪಣ್ಣತಂತ್ರಿಗಳು) ಹಾಗೂ ಶ್ರೀಮತಿ ರಾಧಮ್ಮನವರ ಮಗನಾಗಿ ಜನಿಸಿದ ಶ್ರೀವಿದ್ಯಾಮಾನ್ಯರ ಪೂರ್ವಾಶ್ರಮದ ಹೆಸರು ನಾರಾಯಣ. ಶ್ರೀಪುತ್ತಿಗೆ ಮಠದ ಯತಿಗಳಾಗಿದ್ದ ಶತಾಯುಷಿ ಹಾಗೂ ಮಹಾತಪಸ್ವಿ ಶ್ರೀಸುಧೀಂದ್ರ ತೀರ್ಥರ ದಿವ್ಯಸಾನ್ನಿಧ್ಯದಲ್ಲಿ ಬಾಲಕ ನಾರಾಯಣನ ಉಪನಯನ. ನಂತರ ಭಂಡಾರಕೇರಿ ಮಠಾಧೀಶರಾಗಿದ್ದ ಶ್ರೀವಿದ್ಯಾರ್ಣವ ತೀರ್ಥರಿಗೆ ದೇಹಾಲಸ್ಯವಾದಂತಹ ಸಂದರ್ಭದಲ್ಲಿ, ಭಂಡಾರಕೇರಿಮಠಕ್ಕೆ ಉತ್ತರಾಧಿಕಾರಿಯ ನೇಮಕದ ಜವಾಬ್ಧಾರಿಯನ್ನು ಪರ್ಯಾಯಪೀಠಸ್ಥರಾಗಿದ್ದ ಶ್ರೀ ಅದಮಾರು ಮಠದ ಶ್ರೀವಿಬುಧಪ್ರಿಯತೀರ್ಥರಿಗೆ ಶ್ರೀವಿದ್ಯಾರ್ಣವರು ವಹಿಸಿದರು. ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಿನಿ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಅಧ್ಯಯನಮಾಡುತ್ತಿದ್ದ ಬಾಲಕ ನಾರಾಯಣ ತಂತ್ರಿಯೇ ಸೂಕ್ತ ಆಯ್ಕೆಯೆಂದು ಶ್ರೀವಿಬುಧಪ್ರಿಯರಿಗನ್ನಿಸಿತು. ನಾರಾಯಣನಿಗೆ ಪೀಠವಾಗುವ ಮುನ್ನವೇ ಶ್ರೀವಿದ್ಯಾರ್ಣವರು ಹರಿಪದವನ್ನು ಸೇರಿದ ಕಾರಣದಿಂದಾಗಿ, ದಿನಾಂಕ 5-11-1925ರ ಕಾರ್ತೀಕ ಕೃಷ್ಣಪಂಚಮಿಯಂದು, ಪರ್ಯಾಯ ಪೀಠಸ್ಥರಾಗಿದ್ದ ಶ್ರೀವಿಬುಧಪ್ರಿಯರೇ ಬಾಲಕ ನಾರಾಯಣನಿಗೆ ಪ್ರಣವೋಪದೇಶಮಾಡಿ, 'ಶ್ರೀವಿದ್ಯಾಮಾನ್ಯತೀರ್ಥ' ರೆಂಬ ಆಶ್ರಮನಾಮ ದೊಂದಿಗೆ ಭಂಡಾರಕೇರಿಯ ಮಠದ ಜವಾಬ್ದಾರಿಯನ್ನು ವಹಿಸಿದರು. ಶ್ರೀವಿಬುಧಪ್ರಿಯರಲ್ಲಿಯೇ ತಮ್ಮ ಅಧ್ಯಯನವನ್ನು ಮಾಡುತ್ತಿದ್ದ ಶ್ರೀವಿದ್ಯಾಮಾನ್ಯರು ಶ್ರೀವಿಬುಧಪ್ರಿಯರು ಕೆಲಕಾಲದಲ್ಲಿಯೇ ಬೃಂದಾವನಸ್ಥರಾದಾಗ, ವಿದ್ಯಾರ್ಜನೆಯ ಉದ್ದೇಶದಿಂದ ಆ ಕಾಲದ ಪ್ರಸಿದ್ಧ ವಿದ್ವಾಂಸರೂ, ಉತ್ತರಾದಿ ಮಠಾಧೀಶರೂ ಆದ ಶ್ರೀಸತ್ಯಧ್ಯಾನತೀರ್ಥ ಶ್ರೀಪಾದಂಗಳವರಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ತಮ್ಮ ಅಧ್ಯಯನದ ಅವಧಿಯಲ್ಲಿಯೇ ಉಳಿದ ವಿದ್ಯಾರ್ಥಿಗಳಿಗೆ ಪಾಠವನ್ನು ಮಾಡುತ್ತಿದ್ದ ಶ್ರೀವಿದ್ಯಾಮಾನ್ಯರಿಗೆ ಶ್ರೀಸತ್ಯಧ್ಯಾನರು ಶ್ರೀಮನ್ನ್ಯಾಯಸುಧಾ ಗ್ರಂಥದೊಂದಿಗೆ, ಶ್ರೀಮದಾಚಾರ್ಯರ 'ಅನುವ್ಯಾಖ್ಯಾನ' ವನ್ನು ಪಾಠಮಾಡಿ ಪರಮಪವಿತ್ರವಾದ ತಿರುಪತಿಯಲ್ಲಿ ಮಂಗಳ ಮಹೋತ್ಸವವನ್ನು ನೆರವೇರಿಸಿದರು. ಶ್ರೀಮನ್ನ್ಯಾಯಸುಧಾ ಗ್ರಂಥದ ಅಧ್ಯಯನ ಪೂರ್ಣವಾದ ನಂತರ, ಶ್ರೀಸತ್ಯಧ್ಯಾನರು ಶ್ರೀಚಂದ್ರಿಕಾಚಾರ್ಯರ 'ನ್ಯಾಯಾಮೃತ' ಗ್ರಂಥದ ಪಾಠವನ್ನು ಪ್ರಾರಂಭಿಸಿದರು. 'ನ್ಯಾಯಾಮೃತ' ದ ಅಧ್ಯಯನದ ಸಂದರ್ಭದಲ್ಲಿಯೇ, ಉಳಿದ ವಿದ್ಯಾರ್ಥಿಗಳಿಗೆ 'ನ್ಯಾಯಸುಧೆ' ಯ ಪಾಠವನ್ನು ಮಾಡುತ್ತಿದ್ದ ಮೇಧಾಶಕ್ತಿ ಶ್ರೀವಿದ್ಯಾಮಾನ್ಯರದು. 'ಚಂದ್ರಿಕಾ', 'ತರ್ಕತಾಂಡವ' ಮೊದಲಾದ ಉದ್ಗ್ರಂಥಗಳನ್ನೂ ಅಧ್ಯಯನಮಾಡಿದ ಶ್ರೀವಿದ್ಯಾಮಾನ್ಯರು, ವಿದ್ವತ್ಸಭೆಗಳಲ್ಲಿ ತಮ್ಮ ವಿದ್ಯಾವೈಭವದಿಂದ ಪರಮತೀಯರ ಆಕ್ಷೇಪಗಳಿಗೆ ಅತ್ಯಂತ ಸಮಂಜಸವಾದ, ಶಾಸ್ತ್ರಬದ್ಧವಾದ, ತರ್ಕಬದ್ಧವಾದಂತಹ ಉತ್ತರಗಳನ್ನು ನೀಡಿ ಅಸಾಧಾರಣ ಶಾಸ್ತ್ರವೇತ್ತರೆಂದು ವಿದ್ವನ್ಮಾನ್ಯರಾದರು. ಶ್ರೀಮಧ್ವಸಿದ್ಧಾಂತದ ಸಂವರ್ಧನೆಗಾಗಿ, 1943ರ ಮಧ್ವನವಮಿಯ ಶುಭ ಸಂದರ್ಭದಲ್ಲಿ 'ಮಾಧ್ವರಾದ್ಧಾಂತ ಸಂವರ್ಧಕ ಸಭಾ' ಪ್ರಾರಂಭಿಸಿದರು. ಮೊದಲಸಭೆಯ ಅಧ್ಯಕ್ಷರಾದವರು ಶ್ರೀವಿದ್ಯಾಮಾನ್ಯರ ಪ್ರಿಯಶಿಷ್ಯರಾದ, ಬಾಲಕರಾಗಿದ್ದರೂ, ತಮ್ಮ ತೀಕ್ಷ್ಣಮತಿಯಿಂದ, ಪ್ರಖರವಾದ ವಿದ್ವತ್ತಿನಿಂದ ವಿದ್ವತ್ಪ್ರಪಂಚದ ಗಮನಸೆಳೆಯುತ್ತಿದ್ದ ಶ್ರೀವಿಶ್ವೇಶತೀರ್ಥರು.
ವಿಶ್ವವಿಖ್ಯಾತರಾದ ಶ್ರೀಪೇಜಾವರ ಅಧೋಕ್ಷಜಮಠದ ಶ್ರೀವಿಶ್ವೇಶತೀರ್ಥರು, ಪಿ.ಕೆ.ಹರಿದಾಸಾಚಾರ್ಯರು, ಕೊಯಮತ್ತೂರು ಬಿ.ವಾದಿರಾಜಾಚಾರ್ಯರು, ಕಾಪು- ಹಯಗ್ರೀವಾಚಾರ್ಯರು, ಗುರುರಾಜ ಬಲ್ಲಾಳರು, ವೇಂಕಟರಮಣ ಐತಾಳರು, ಜಾಲಿಹಾಳ ರಾಘವೇಂದ್ರಾಚಾರ್ಯರು ಮೊದಲಾದ ಮಹಾವಿದ್ವಾಂಸರಿಗೆ ಮಾಧ್ವ ಉದ್ಗ್ರಂಥಗಳನ್ನು ಪಾಠ ಮಾಡಿದ, ಪಾಠ, ಪ್ರವಚನಗಳಲ್ಲಿ, ಮಧ್ವ ಸಿದ್ಧಾಂತ ಸ್ಥಾಪನೆಯಲ್ಲಿ ಅವಿರತವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀವಿದ್ಯಾಮಾನ್ಯತೀರ್ಥರಿಗೆ ಅಷ್ಟಮಠಗಳಲ್ಲಿ ಒಂದಾದ ಶ್ರೀಪಲಿಮಾರು ಹೃಷೀಕೇಶತೀರ್ಥ ಸಂಸ್ಥಾನಾಧಿಪತ್ಯದೊಂದಿಗೆ ತನ್ನ ಪೂಜೆಯನ್ನೂ ಮಾಡುವ ಮಹಾಭಾಗ್ಯವನ್ನು ಭೈಷ್ಮೀ, ಮಧ್ವ ಕರಾರ್ಚಿತನಾದ ಶ್ರೀಕೃಷ್ಣ ಕರುಣಿಸಿದ. ಶ್ರೀಪಲಿಮಾರು ಮಠಾಧೀಶರಾಗಿದ್ದ ಶ್ರೀರಘುವಲ್ಲಭತೀರ್ಥರು ಪೀಠತ್ಯಾಗಮಾಡಿದ ಸಂದರ್ಭದಲ್ಲಿ, ಭಂಡಾರಕೇರಿ ಮಠಾಧೀಶರಾಗಿದ್ದ ಶ್ರೀವಿದ್ಯಾಮಾನ್ಯರಿಗೆ ಪಲಿಮಾರು ಮಠದ ಅಧಿಪತ್ಯವೂ ಅದಕ್ಕಿಂತ ಹೆಚ್ಚಾಗಿ ಶ್ರೀಕೃಷ್ಣನನ್ನು ಮುಟ್ಟಿ ಪೂಜಿಸುವ ಮಹಾಭಾಗ್ಯ ಒಲಿದುಬಂದಿತು. ಈ ವಿಷಯವಾಗಿ ಅನೇಕ ಅಡಚಣೆಗಳನ್ನು ಎದುರಿಸಬೇಕಾದರೂ ಶ್ರೀಕೃಷ್ಣ, ಮುಖ್ಯಪ್ರಾಣರ ಅನುಗ್ರಹದಿಂದ ಅಡಚಣೆಗಳೆಲ್ಲವೂ ದೂರವಾಗಿ ಶ್ರೀಕೃಷ್ಣ, ಮುಖ್ಯಪ್ರಾಣರ ಸೇವೆಯನ್ನು ಶ್ರೀವಿದ್ಯಾಮಾನ್ಯರು ವಿಶೇಷವಾಗಿ ಮಾಡುವಂತಾಯಿತು. ಚಿನ್ನದ ತೊಟ್ಟಿಲು, ಚಿನ್ನದ ರಥಗಳನ್ನು, ವಜ್ರಕಿರೀಟವನ್ನು ಶ್ರೀಕೃಷ್ಣನಿಗೆ ಸಮರ್ಪಿಸಿದ ಮಹಾಭಾಗ್ಯ ಶ್ರೀವಿದ್ಯಾಮಾನ್ಯರಿಗೆ ದೊರೆಯಿತು. 1970 ಹಾಗೂ 1986ರಲ್ಲಿ ಎರಡು ಬಾರಿ ಸರ್ವಜ್ಞಪೀಠವನ್ನು ಅಲಂಕರಿಸಿದ ಶ್ರೀಗಳು ತಮ್ಮ ಪರ್ಯಾಯ ಕಾಲದಲ್ಲಿಯೂ ತತ್ತ್ವಜ್ಞಾನ ಪ್ರಸರಣಕ್ಕೆ ವಿಶೇಷವಾದಂತಹ ಒತ್ತನ್ನು ನೀಡಿದರು. ಪಲಿಮಾರು ಮಠಕ್ಕೆ ಶ್ರೀವಿದ್ಯಾಧೀಶ ತೀರ್ಥರನ್ನು, ಭಂಡಾರಕೇರಿ ಮಠಕ್ಕೆ ಶ್ರೀವಿದ್ಯೇಶ ತೀರ್ಥರನ್ನು ತಮ್ಮ ಉತ್ತರಾಧಿಕಾರಿಗಳಾಗಿ ನೇಮಿಸಿದ ಶ್ರೀವಿದ್ಯಾಮಾನ್ಯರು, ಈ ಇಬ್ಬರು ಶಿಷ್ಯರೊಂದಿಗೆ, ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು ಹಾಗೂ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥರಿಗೂ ಮಾಧ್ವವಾಙ್ಮಯದ ಉದ್ಗ್ರಂಥಗಳ ಪಾಠವನ್ನು ಮಾಡಿದರು. ಮಾತ್ರವಲ್ಲದೆ, ಈಗಾಗಲೇ ತಮ್ಮ ವಿದ್ಯಾಶಿಷ್ಯರಾಗಿದ್ದ ಶ್ರೀವಿಶ್ವೇಶತೀರ್ಥರೊಂದಿಗೆ ಈ ನಾಲ್ಕೂ ಜನ ಯತಿಗಳನ್ನೂ ಮಹಾತತ್ತ್ವವೇತ್ತರಾದ ಯತಿಗಳನ್ನಾಗಿ ಸಿದ್ಧಗೊಳಿಸಿದರು.
ಮಾಧ್ವವಾಙ್ಮಯಕ್ಕೆ ಮಹಾವಿದ್ವಾಂಸರನ್ನು, ಮಹಾವಿದ್ವಾಂಸರಾದ ಯತಿಗಳನ್ನು ಕೊಡುಗೆಯಾಗಿ ನೀಡಿದ ಶ್ರೀವಿದ್ಯಾಮಾನ್ಯರು ಮತ್ತೊಂದೆಡೆ ಉದ್ಗ್ರಂಥಗಳ ರಚನೆಯ ಮೂಲಕವೂ ಅನುಪಮವಾದಂತಹ ಕೊಡುಗೆಯನ್ನು ನೀಡಿದ್ದಾರೆ. ವಿಷ್ಣುಸಹಸ್ರನಾಮಕ್ಕೆ ಅಪೂರ್ವವಾದಂತಹ ಟಿಪ್ಪಣಿ, ಹರಿಸರ್ವೋತ್ತಮತ್ವ, ವಾಯು ಜೀವೋತ್ತಮತ್ವ, ಸಭಾಸಾರಸಂಗ್ರಹ, ಗಾಯತ್ರೀಗಾಂಭೀರ್ಯ, ಕೃಷ್ಣಾಷ್ಟಮೀ ವ್ರತ, ಗೀತಾಗಾಂಭೀರ್ಯ, ಧರ್ಮಾಚರಣೆಯ ಮಹತ್ತ್ವ, ಪರಮತೀಯ ವಿದ್ವಾಂಸ ರೊಬ್ಬರು ರಚಿಸಿದ ಗ್ರಂಥದ ಖಂಡನಾರೂಪವಾದ ಸಂಸ್ಕೃತ ಗ್ರಂಥ 'ಅದ್ವೈತತತ್ತ್ವಸುಧಾ ಸಮೀಕ್ಷಾ', 'ತತ್ತ್ವಮಾರ್ತಾಂಡ ವಿಮರ್ಶಾ(ಸಂಸ್ಕೃತ), ದ್ವೈತಸ್ಯ ಅಪೂರ್ವತಾ (ಸಂಸ್ಕೃತ), ದ್ವೈತ ವಿಜಯ (ಸಂಸ್ಕೃತ), ಮಾಯಾವಾದ ನಿರಸನಾರ್ಥ ಮಾಲಿಕ (ಸಂಸ್ಕೃತ), ಮಾಧ್ವಸಿದ್ಧಾಂತ ಸಾರ ಮೊದಲಾದ ಕೃತಿಗಳು ಶ್ರೀವಿದ್ಯಾಮಾನ್ಯರು ಮಾಧ್ವವಾಙ್ಮಯಕ್ಕೆ ನೀಡಿದಂತಹ ಮಹೋನ್ನತ ಕೊಡುಗೆಗಳು. ತಮ್ಮ ಪ್ರವಚನಗಳ ಮೂಲಕವೂ ಧರ್ಮಜಾಗೃತಿಯನ್ನು ಮೂಡಿಸುತ್ತಿದ್ದ ಶ್ರೀಗಳು ದೆಹಲಿಯಲ್ಲಿ ನಡೆದ ವಿಶ್ವಕಲ್ಯಾಣಯಾಗದ ನೇತೃತ್ವವನ್ನು ಸಹಾ ವಹಿಸಿದ್ದರು. ರಾಷ್ಟ್ರಪತಿಗಳಿಗೆ ಶ್ರೀಕೃಷ್ಣಮಂತ್ರದ ಉಪದೇಶವನ್ನೂ ಮಾಡಿದ ಶ್ರೀವಿದ್ಯಾಮಾನ್ಯರು ಕಾಷ್ಠಮೌನ ಮೊದಲಾದ ಅನೇಕ ಕಠಿಣವ್ರತಗಳ ಮೂಲಕವೂ ಸಮಾಜಕ್ಕೆ ಮಾದರಿಯಾಗಿದ್ದ ಮಹಾನುಭಾವರು. ಪರಮತೀಯರಾದ ಪ್ರಚಂಡ ವಿದ್ವಾಂಸರನ್ನು, ಯತಿಗಳನ್ನು ತಮ್ಮ ವೈದುಷ್ಯದಿಂದ ನಿರುತ್ತರರನ್ನಾಗಿಸಿ ಮಾಧ್ವ ತತ್ತ್ವಜ್ಞಾನದ ಮಹತಿಯನ್ನು ಜಗತ್ತಿಗೆ ಸಾರಿದ ಶ್ರೀವಿದ್ಯಾಮಾನ್ಯ ತೀರ್ಥರಿಗೆ ಹರಿದಿನ (ಏಕಾದಶಿ) ದ ಬಗ್ಗೆ ವಿಶೇಷವಾದ ಒಲವು. ಏಕಾದಶೀ ಉಪವಾಸದ ಮಹತ್ತ್ವವನ್ನು ತಮ್ಮ ಕೃತಿ ಮತ್ತು ಆಚರಣೆಗಳಿಂದ ಜಗತ್ತಿಗೆ ಸಾರಿದ ಮನಿವರ್ಯ ಶ್ರೀಕೃಷ್ಣ, ಮುಖ್ಯಪ್ರಾಣರ ಸನ್ನಿಧಿಗೆ ತೆರಳಿದ ದಿನವೂ ಏಕಾದಶಿಯೆ. 14-5-2000ರ ವೈಶಾಖ ಶುದ್ಧ ಏಕಾದಶಿಯಂದು ತಮ್ಮ ಪರಮ ಸಾತ್ತ್ವಿಕವಾದ ಮತ್ತು ಪರವಿದ್ಯೆಗೆ ಅರ್ಪಿತವಾಗಿದ್ದ ಶರೀರವನ್ನು ತ್ಯಜಿಸಿ, ಪರಮ ಮಂಗಳವಾದ ಹರಿಸಾಯುಜ್ಯವನ್ನು ಸೇರಿದರು. ತಮ್ಮ ಅಸಾಧಾರಣವಾದ ತಪಸ್ಸಿನಿಂದ, ಅದ್ವಿತೀಯವಾದ ಪಾಂಡಿತ್ಯದಿಂದ, ಪೀಠಾಧಿಪತ್ಯಕ್ಕೆ ಅಪರೂಪವೆನಿಸುವ ಮುಗ್ಧತೆಯಿಂದ, ಅಚಲವಾದ ಸಿದ್ಧಾಂತ ನಿಷ್ಠೆಯಿಂದ ಜಗತ್ತಿಗೆ ಮಾರ್ಗದರ್ಶಕವಾದ ಮಹಾಚೇತನವೊಂದು ಭೌತಿಕವಾಗಿ ಮರೆಯಾಯಿತು. ಅವರ ಪ್ರಿಯ ಶಿಷ್ಯರಾದ ಶ್ರೀವಿದ್ಯಾಧೀಶತೀರ್ಥರ ಮಾತಿನಲ್ಲಿ ಹೇಳುವುದಾದರೆ 'ಸ್ತಬ್ಧಬುದ್ಧಿಗಳಿಗೆ ಬುದ್ಧಿ ಪ್ರಚೋದಕರಾದ ಅನ್ವರ್ಥಕ ಶುದ್ಧಬುದ್ಧಿ' ಶ್ರೀವಿದ್ಯಾಮಾನ್ಯರು. ಪೂಜ್ಯ ಶ್ರೀವಿಶ್ವೇಶತೀರ್ಥರ ಮಾತಿನಂತೆ "ಅವರ ಚಾರಿತ್ರ್ಯವು ಅತ್ಯಂತ ನಿರ್ಮಲ, ಶಾಸ್ತ್ರಾರ್ಥಚರ್ಚೆ ಮಾಡಲು ಮುಂದೆ ಬರುವ ವಿದ್ವಾಂಸರು ಈ ಭಾಸ್ಕರನ ಮುಂದೆ ಮಿಣುಕು ಹುಳುಗಳು" ಹೀಗೆ ತಮ್ಮ ಅನನ್ಯವಾದ ಜೀವನ ಸಿದ್ಧಿಯಿಂದ ವಿದ್ವನ್ಮಾನ್ಯರಾದ, ವಿಶ್ವಮಾನ್ಯರಾದ ಶ್ರೀವಿದ್ಯಾಮಾನ್ಯರ ಅಂತರ್ಯಾಮಿ ಶ್ರೀಮಧ್ವ ವರದ ಶ್ರೀಕೃಷ್ಣ ಪ್ರೀತನಾಗಲಿ.
- by ಡಾ. ವೇಣುಗೋಪಾಲ ಬಿ. ಎನ್
****
No comments:
Post a Comment