Sri Vidya Rathnakara Theertha took Ashrama from Sri Vidya Samudra Theertha and is Thirty Fifth saint from Madhwacharya. Below is his brief introduction.
Parampare: sOsale vyAsarAja maTa, #35
Ashrama Period – 1902-1915
Poorvashrama Name – Ahobalacharya
Ashrama guru – Sri Vidya Samudra Theertha
Ashrama Shishya – Sri Vidya Varidhi Theertha
Ashrama Shishya – Sri Vidya Varidhi Theertha
Aradhana – Vaishakha Bahula Navami
Vrundavana Place – Sosale
Ankita- namagiri
ವೈಶಾಖ ಬಹುಳ ನವಮಿ वैशाख बहुळ नवमि
ವೃಂದಾವನ – ಸೋಸಲೆ वृंदावन – सोसलॆ
ಆಶ್ರಮ ಗುರುಗಳು – ಶ್ರೀ ವಿದ್ಯಾಸಮುದ್ರತೀರ್ಥರು
ಆಶ್ರಮ ಶಿಷ್ಯರು – ಶ್ರೀ ವಿದ್ಯಾವಾರಿಧಿತೀರ್ಥರು
आश्रम गुरुगळु – श्री विद्यासमुद्रतीर्थरु
आश्रम शिष्यरु – श्री विद्यावारिधितीर्थरु
दुर्वादिमत्तनागेंद्रविदारणमृगाधिप: ।
विद्यारत्नाकरगुरु: सन्निधत्तां सदा हृदि ॥
ದುರ್ವಾದಿಮತ್ತನಾಗೇಂದ್ರವಿದಾರಣಮೃಗಾಧಿಪ: |
ವಿದ್ಯಾರತ್ನಾಕರಗುರು: ಸನ್ನಿಧತ್ತಾಂ ಸದಾ ಹೃದಿ ||
· Sri Hariyappaachaaryaswamigalu of Sri Sripadaraja Mutt had honoured him with title “paralokabandhu”.
· During his period only “Srimaddashapramathi darshana prakashini” vidvatsabha was started in Bangalore.
· Rathanakara Theertharu was a renowned vidwan in Sahitya, Sangeetha, and siddantha.
· He has written –
a. Hariguru Mangalashtaka,
b. Vyasaraja Stotra,
c. Sheshachandrika Stotra,
d. Narasimha Suprabhata,
e. Madhvavijayasaarasangraha.
· Sri Vidyarathnakara theertha breathed his last in Rakshasa Samvatsara Vaishaka Bahula navami, (1915) when Sri Lakshmi Narasimhaachaarya was doing Bhashya Paarayana. shri vidyAratnAkara tIrtha guruvAntargata, shri vyAsarAja guruvAntargata, maharudradeva guruvAntargata, bhArathiramana mukhyaprANantargata, rukmiNi sathyabhAma samEta shri mUla gOpAlakrishNa dEvara pAdAravindakke gOvindA gOvindA...
.
*********
info from madhwamrutha.org--->
He was a great scholar. He was called as Shastra pravachana nidhi, sakalakalaa bhaskara. Sripadaraja matha’s Hariyappachar was showing great regard to swamiji and used to call him as heavenly relative. During his time only in Bangalore, ‘Sri Maddashapramathi darshana prakashini’ sabha was stared. In 1913 that sabha became very famous and created records. He was well expertise in Sanskrit as well as Kannada. He wrote following works in Sanskrit;
He was a great scholar. He was called as Shastra pravachana nidhi, sakalakalaa bhaskara. Sripadaraja matha’s Hariyappachar was showing great regard to swamiji and used to call him as heavenly relative. During his time only in Bangalore, ‘Sri Maddashapramathi darshana prakashini’ sabha was stared. In 1913 that sabha became very famous and created records. He was well expertise in Sanskrit as well as Kannada. He wrote following works in Sanskrit;
Sri Madhwa Vijaya sarasangraha
Sri Vedavyasa Stotra
Sri Hari Guru Mangalashtaka
Vyasaraja yatheesha charitre
Vyasaraja Mangalashtaka
Narasimha Suprabhata
Sheshachandrikacharya Stotra
He also wrote many songs in Kannada like Sri Vyasaraja and Sri Vidyakanta Theertha.
He handed over mahasamsthana to Sri Vidya Varidhi Theertha.
*****
Shri Vidyarathnakara Theertharu was an example of the perfect Peethadhipati - being the repository of Jnana, Bhakthi and Vairagya. He had a very difficult family life in his Poorvashrama days. He did not allow the family tribulations to affect his life as a scholar in the least. He had no fascination for worldly honours declining them politely, when they were offered by the King of Mysore state. He did not also accept the position of Dharmadhikari for Mysore palace along with perks like a house and regular income even in his Poorvashrama days. When his own Guru, offered him the position of his successor, he declined, preferring the life of the free lance scholar. He had to be persuaded repeatedly by his Guru along with the specific commitment by the Dewan of Mysore, that the state will look after all the assets and administration of the Matha, leaving him free to devote all his time to Svadhyaya, and his religious duties. To finally get his acceptance, even Lord Gopalakrishna had to tell him in a dream -"you must take over my worship". What a contrast to the present day! His attaining the Lotus feet of the Lord was also the unusual and difficult Yogic departure from the body, through the Brahma randhra - he never lost his asceticism till the very end by incapacity to perform his prescribed duties and to observe the purificatory rituals for eating etc. by taking medical treatment or staying in a hospital. On the other hand, he was listening to Brahma suthra shravana till the very end. It is not very surprising that his lone Poorvashrama son, who was Sri Vidyaprasanna Tirtha, emulated his example, by refusing to get himself admitted to a hospital, in spite of a Leg affected by Gangrene, and performed his duties as an ascetic till the very end. Such steadfastness of keeping the sacred vows, selflessness and nobility of character and total acceptance of what ever God chooses to bestow with complete equanimity are no doubt rare qualities these days - but they are expected to be present in those, who seek to sit in the seats occupied by the great sages of the past. We need the reincarnation of the divine personalities who gave our Matha the great image of the past, like Sri Vidyarathnakara tirtharu.
He attained haripada in rakshasa samvatsara vaishaka Bahula navami (1915) when Sri
Lakshmi Narasimhaacharya was doing bhashya Parayana.
|| Shri Krishnarpanamasthu ||
*****
Info from madhwasaints.wordpress.com--->
- Sri Vidyarathnakara theertharu is a famous saint from Vyasaraaja mutt.
- His poorvashrama son is Sri Vidyaprassanna theertharu.
- He was given the title “Paralokabandhu” by Sri Hariyappaachaarya of Sri Sripadaraja Mutt.
- His brindavana is one among the 9 brindavanas which is located at Vyasarajaa mutt, Sosale, Karnataka.
- This great place (Sosale) was once to be taken by the order of Hyder ali. Later on one day after giving the orders, Hyder ali got a dream in which he saw his son Tippu sultan being flooded by floods in his capital, Srirangapatnam. And when he was shouting for rescue in the presence of on one, a saint came and rescued him by throwing a piece of cloth. Disturbed by this dream he consulted his diwan and understood that Sri Raghunatha theertharu had come in his dream and also understood that he should not disturb the saint’s in Sosale.
- Today (Vaishaka Bahula Navami) is Sri Vidyarathnakara theertharu’s aaradhana. Let us all pray him and get his blessings.
His works –
a. Hariguru Mangalashtaka,
b. Vyasaraja Stotra,
c. Sheshachandrika Stotra,
d. Narasimha Suprabhata,
e. Madhvavijayasaarasangraha.
(Vaishaka Bahula Navami) is
Sri Vidyarathnakara Thirthara Aradhana .
Let us all pray him and get his blessings.
Brief history of
Sri Vidya Rathnakara Thirtharu:
Sri Vidyarathnakara Thirtharu is a famous saint from Vyasaraaja mutt.
His poorvashrama son is Sri Vidyaprassanna Thirtharu .
He was given the title “Paralokabandhu” by
Sri Hariyappaachaarya of
Sri Sripadaraja Mutt.
His brindavana is one among the Nine brindavanas which is located at Vyasarajaa mutt, Sosale, Karnataka.
This great place (Sosale) was once to be taken by the order of Hyder ali. Later on one day after giving the orders, Hyder ali got a dream in which he saw his son Tippu sultan being flooded by floods in his capital, Srirangapatnam. And when he was shouting for rescue in the presence of on one, a saint came and rescued him by throwing a piece of cloth. Disturbed by this dream he consulted his diwan and understood that
Sri Raghunatha Thirtharu had come in his dream and also understood that he should not disturb the saint’s in Sosale.
Sri Vidyarathnakara Thirthara Aradhana .
Let us all pray him and get his blessings.
Brief history of
Sri Vidya Rathnakara Thirtharu:
Sri Vidyarathnakara Thirtharu is a famous saint from Vyasaraaja mutt.
His poorvashrama son is Sri Vidyaprassanna Thirtharu .
He was given the title “Paralokabandhu” by
Sri Hariyappaachaarya of
Sri Sripadaraja Mutt.
His brindavana is one among the Nine brindavanas which is located at Vyasarajaa mutt, Sosale, Karnataka.
This great place (Sosale) was once to be taken by the order of Hyder ali. Later on one day after giving the orders, Hyder ali got a dream in which he saw his son Tippu sultan being flooded by floods in his capital, Srirangapatnam. And when he was shouting for rescue in the presence of on one, a saint came and rescued him by throwing a piece of cloth. Disturbed by this dream he consulted his diwan and understood that
Sri Raghunatha Thirtharu had come in his dream and also understood that he should not disturb the saint’s in Sosale.
***
ದುರ್ವಾದಿ ಮತ್ತ ನಾಗೇಂದ್ರ ವಿದಾರಣ ಮೃಗಾಧಿಪಃ/
ವಿದ್ಯಾರತ್ನಾಕರಗುರು: ಸನ್ನಿದತ್ತಾ೦ ಸದಾ ಹೃದೀ//
ಶ್ರೀಮದ್ವ್ಯಾಸರಾಜ ಮಠ, ಸೋಸಲೆಯ, 19ನೇ ಶತಮಾನದ ಯತಿಗಳೂ, ನಾಮಗಿರಿ ನರಸಿಂಹ ದೇವರ ಪರಮೋಪಾಸಕರೂ ಅದೇ ದೇವರ ಹೆಸರನ್ನೇ ಅಂಕಿತನಾಮವಾಗಿ ಪಡೆದವರು ಅರ್ಥಾತ್ ನಾಮಗಿರಿ ಅಂಕಿತಸ್ಥರು, ಶ್ರೀ ವಿದ್ಯಾಪ್ರಸನ್ನತೀರ್ಥರ ಪೂರ್ವಾಶ್ರಮದ ತಂದೆಯವರೂ, ಶ್ರೀ ವಿದ್ಯಾವಾರಿಧಿತೀರ್ಥರ ಗುರುಗಳೂ, ಮಠದ ಕಾರ್ಯಗಳನ್ನು ನಿರ್ವಹಿಸುವದಷ್ಟೇ ಅಲ್ಲದೇ ದಾಸ ಸಾಹಿತ್ಯದ ಸೇವೆಯಲ್ಲಿ ತಮ್ಮ ಜೀವನವನ್ನು ತೊಡಗಿಸಿ ಸಂಸ್ಕೃತ,ಕನ್ನಡ ಎರಡೂ ಭಾಷೆಗಳಲ್ಲಿ ಅದ್ಭುತ ಪ್ರಮೇಯ ಭರಿತ ಕೃತಿಗಳ ರಚನೆ ಮಾಡಿನೀಡಿದ ಶ್ರೀ ವಿದ್ಯಾರತ್ನಾಕರತೀರ್ಥರ ಆರಾಧನಾ ಮಹೋತ್ಸವ (ಸೋಸಲೆ, T. Narsipura) . ಶ್ರೀ ಯತಿಗಳ ಆಶೀರ್ವಾದಾನುಗ್ರಹಗಳು ಎಲ್ಲ ಸಜ್ಜನರ ಮೇಲೆ ಸದಾಕಾಲ ಇರಲೆಂದು ಅವರಲ್ಲಿ ಪ್ರಾರ್ಥನೆ ಮಾಡುತ್ತಾ. ...
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽
****
ವೈಶಾಖ ಬಹುಳ ನವಮಿ , ಶ್ರೀ೧೦೮ ವಿದ್ಯಾ ರತ್ನಾಕರ ತೀರ್ಥರ ಆರಾಧನೆ ದಿನ , ಗುರುಗಳಿಗೆ ವಂದಿಸಿ ಇಂದಿನ ಲೇಖನ. ಸಾಹಿತ್ಯ ಸಂಗೀತ ವೇದಾಂತದಲ್ಲಿ ನಿಷ್ಣಾತರಾಗಿದ್ದ ಶ್ರೀವ್ಯಾಸರಾಜ ಮಠದ ಯತಿಗಳು .
ಪೂರ್ವಾಶ್ರಮದಲ್ಲಿ ಅಹೋಬಲಾಚಾರ್ಯರು.
೧೯೦೨ ರಲ್ಲಿ ಶ್ರೀ ೧೦೮ ವಿದ್ಯಾ ಸಮುದ್ರ ತೀರ್ಥರಿಂದ ಆಶ್ರಮ ,ತಮ್ಮ ಆಶ್ರಮನಾಮ ವಿದ್ಯಾ ಎಂಬ ಹೆಸರು ಸಾರ್ಥಕ ಪಡಿಸಿಕೊಂಡವರು . ಸಂಸ್ಕೃತ ಕನ್ನಡ ಗ್ರಂಥಗಳ ರಚನೆ ಅಲ್ಲದೆ “ ಶ್ರೀಮದ್ ದಶಪ್ರಮತಿ ದರ್ಶನ ಪ್ರಕಾಶಿನಿ ” ಎಂಬ ಸಭೆಯನ್ನು ಬೆಂಗಳೂರಿನಲ್ಲಿ ಹುಟ್ಟುಹಾಕಿದರು .
ಇವರ ಕಾರ್ಯಗಳನ್ನು ಮೆಚ್ಚಿ ಅಂದಿನ ಶ್ರೀಪಾದರಾಜ ಮಠದ ಸ್ವಾಮಿಗಳು “ ಪರಲೋಕ ಬಂಧು “ ಎಂಬ ಬಿರುದಿತ್ತು ಸನ್ಮಾನಿಸಿದರು .
ಶ್ರೀವಿದ್ಯಾ ವಾರಿಧಿ ತೀರ್ಥರಿಗೆ ಆಶ್ರಮವಿತ್ತು
೧೯೧೫ನೆ ಇಸವಿ ರಾಕ್ಷಸನಾಮ ಸಂವತ್ಸರ
ವೈಶಾಖ ಬಹುಳ ನವಮಿ ಸೋಸಲೆಯಲ್ಲಿ ಬೃಂದಾವನಸ್ಥರಾದರು .
ಅವರು ರಚಿಸಿದ ಮುಖ್ಯ ಕೃತಿಗಳು , ವ್ಯಾಸರಾಜ ಸ್ತೋತ್ರ , ಹರಿಗುರು ಮಂಗಳಾಷ್ಟಕ
ಶೇಷ ಚಂದ್ರಿಕಾ ಸ್ತೋತ್ರ , ಮಧ್ವವಿಜಯ ಸಾರಸಂಗ್ರಹ .
ಅವರ ಪೂರ್ವಾಶ್ರಮದ ಪುತ್ರ ಶ್ರೀಪ್ರಸನ್ನತೀರ್ಥರಂತ ಮೇಧಾವಿಗಳು ಶಿಷ್ಯ ಪರಂಪರೆಯಲ್ಲಿ ಬಂದರು .
ಗುರುಗಳ ಚರಮ ಶ್ಲೋಕ ಈಗಾಗಲೇ ಸಮೂಹದ ಬಂದುಗಳು ಬರೆದಿದ್ದಾರೆ .
ಶ್ರೀಮೂಲ ಗೋಪಾಲಕೃಷ್ಣ ಪಟ್ಟಾಭಿ ರಾಮರ ಆರಾಧಕರಾದ ಗುರುಗಳಿಗೆ ಸಾಷ್ಟಾಂಗ
ನಮಸ್ಕಾರಗಳು .
*********
" ಶ್ರೀ ರಾಯರ ಅಂತರಂಗ ಭಕ್ತರು ಶ್ರೀ ವಿದ್ಯಾ ರತ್ನಾಕರ ತೀರ್ಥರು "
" ದಿನಾಂಕ : 03.06.21 ಗುರುವಾರ - ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಬಹುಳ ನವಮೀ - ಶ್ರೀ ವ್ಯಾಸರಾಜ ಮಠಾಧೀಶರಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಿದ್ಯಾ ರತ್ನಾಕರ ತೀರ್ಥರ ಆರಾಧನಾ ಮಹೋತ್ಸವ - ಸೋಸಲೆ "
ಶ್ರೀ ವಿದ್ಯಾ ರತ್ನಾಕರ ತೀರ್ಥರ ಪರಮ ಆಪ್ತರಾದ ಸಂಗೀತ ಕಲಾನಿಧಿ ವಿದ್ವಾನ್ ಶ್ರೀ ಮೈಸೂರು ವಾಸುದೇವಾಚಾರ್ಯರು [ ಕ್ರಿ ಶ 1865 - 1961] ವದನಾರವಿಂದದಲ್ಲಿ ಹೊರಹೊಮ್ಮಿದ .....
ರಾಗ: ಧನ್ಯಾಸಿ ತಾಳ : ಆದಿ
ನಮಾಮಿ ವಿದ್ಯಾರತ್ನಾಕರ-
ಗುರುವರಮನಿಶಂ ಭೃಶಮ್ ।। ಪಲ್ಲವಿ ।।
ಶಮಾದಿ ಸಂಪದ್ಗುಣ ಗಣಭರಿತಂ
ಬುಧ ಜನ ತೋಷಣ ನಿರತಮ್ ।
ರಮಾಪತಿ ಪ್ರಿಯತಮ-
ಮಧ್ವಾಗಮಾಬ್ಧಿಪಾರಗ -
ಮದ್ಭುತ ಚರಿತಮ್ ।। ಚರಣ ।।
ಪರಮಾನುಗ್ರಹ ನಿಜ
ಪದ ಸುಸ್ಥಾಪಿತ
ವಿದ್ಯಾವಾರಿಧಿತನಯಮ್ ।
ಶರಣಾಗತ ಜನ
ರಕ್ಷಣ ನಿಪುಣಂ -
ಕರುಣಾಪೂರಿತ
ಹೃದಯಮ್ ।। ಚರಣ ।।
ವರ ಶಿರೋಧಿ ಸಂಶೋಭಿತ -
ತುಳಸೀದಳ ಮಾಲಂ -
ಸುಂದರಕಾಯಮ್ ।
ಸರಸಗಾನ ಶಿರೋಮಣಿಂ -
ವಾಸುದೇವ ಗಾನಾತಿ -
ಪ್ರಿಯಮ್ ।। ಚರಣ ।।
ಶ್ರೀಮದ್ವ್ಯಾಸರಾಜ ಮಠದ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯದ ಸಿಂಹಾಸನವನ್ನು ಅಲಂಕರಿಸಿದ ಮಹನೀಯರೆಲ್ಲರೂ ವೇದಾಂತ ಧುರೀಣರು.
ವಾದಿ ನಿಗ್ರಹ - ಗ್ರಂಥ ರಚನೆ - ವೇದಾಂತ ಪ್ರವಚನ ಇವೇ ಅವರ ಉಸಿರಾಗಿದ್ದವು.
ಇದೇ ಪೀಠದಲ್ಲಿ 23ನೇಯವರಾದ ಶ್ರೀ ವಿದ್ಯಾ ರತ್ನಾಕರ ತೀರ್ಥ ಶ್ರೀಪಾದರು ಲೋಕೋತ್ತರ ವ್ಯಕ್ತಿಗಳಾಗಿದ್ದರು.
ಇವರ ಆಳವಾದ ಪಾಂಡಿತ್ಯ - ಪ್ರವಚನ ಪಟುತ್ವ - ಪಾಠ ಪ್ರವಚನ ಪರಿಪಾಟಿಗಳು ಅದ್ವಿತೀಯವಾಗಿದ್ದವು.
ಇವರಲ್ಲಿ ಪಾಂಡಿತ್ಯಕ್ಕೆ ಸರಿಯಾಗಿ ಕವಿತಾ ಶಕ್ತಿಯೂ ಕೂಡಿತ್ತು.
ಶ್ರೀ ವಿದ್ಯಾ ರತ್ನಾಕರ ತೀರ್ಥರು ಸಂಸ್ಕೃತದಲ್ಲಿ ಅನೇಕ ಸ್ತೋತ್ರ - ಕಾವ್ಯಾದಿಗಳನ್ನು ಮಾಡಿದ್ದಾರೆ.
ಶ್ರೀ ವಿದ್ಯಾ ರತ್ನಾಕರ ತೀರ್ಥರು ಸಾರ್ಥಕ ನಾಮಧ್ಯೇಯವುಳ್ಳವರಾಗಿದ್ದರು.
ಕನ್ನಡದಲ್ಲಿಯೂ ದೇವರ ನಾಮಗಳೂ - ಕಾವ್ಯಗಳನ್ನು ರಚಿಸಿದ್ದಾರೆ.
ಇವರ ಪೂರ್ವಾಶ್ರಮದ ಹೆಸರು ಶ್ರೀ ಅಹೋಬಲ ಆಚಾರ್ಯರು.
ಇವರು ಚತು: ಶಾಸ್ತ್ರ ಪಂಡಿತರೆಂದೂ - ಪ್ರಾಚೀನ ಸಂಪ್ರದಾಯ ಪೋಷಕರೆಂದೂ - ಶಾಸ್ತ್ರ ಪ್ರವಚನ ಚತುರರೆಂದೂ ಪ್ರಸಿದ್ಧರಾಗಿದ್ದರು.
ಇವರು ಪಂಡಿತರಿದ್ದಷ್ಟೇ ವೈರಾಗ್ಯಶಾಲಿಗಳಾಗಿದ್ದರು - ಆಶ್ರಮ ತೆಗೆದುಕೊಳ್ಳುವ ಪೂರ್ವದಲ್ಲಿಯೇ ಶ್ರೀ ಆಚಾರ್ಯರು ಮಹಾ ಪ್ರಸಿದ್ಧರಾಗಿದ್ದರು.
ಇವರು ಆಶ್ರಮ ಸ್ವೀಕರಿಸಿದಾಗ ವೃದ್ಧರಾಗಿದ್ದರು - ಹೆಚ್ಚು ಸಂಚಾರ ಮಾಡದೇ ಶ್ರೀ ಮಠದಲ್ಲೇ ಪಾಠ ಪ್ರವಚನ ಮಾಡುತ್ತಾ ಶಿಷ್ಯರನ್ನು ಉದ್ಧಾರ ಮಾಡಿದರು.
" ಶ್ರೀ ವಿದ್ಯಾ ರತ್ನಾಕರ ತೀರ್ಥರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ಅಹೋಬಲಾಚಾರ್ಯರು
ತಂದೆ : ಶ್ರೀ ಲಕ್ಷ್ಮೀ ನರಸಿಂಹಾಚಾರ್ಯರು
ತಾಯಿ : ಸಾಧ್ವೀ ರಂಗಜಾನಕಮ್ಮ
ಜನನ : ಕ್ರಿ ಶ 1837
ಜನ್ಮ ಸ್ಥಳ : ಸೋಸಲೆ
ಕುಲ ದೈವ : ಶ್ರೀ ಚಿಂತಲವಾದ ಶ್ರೀ ನರಸಿಂಹದೇವರು
ಆರಾಧ್ಯ ದೈವ : ಶ್ರೀ ನಾಮಗಿರಿಯ ನರಸಿಂಹದೇವರು ಮತ್ತು ಶ್ರೀ ನಾಮಗಿರಿಯಮ್ಮ
ವಿದ್ಯಾ ಗುರುಗಳು : ಶ್ರೀ ವಿದ್ಯಾಪೂರ್ಣ ತೀರ್ಥರು
ಶ್ರೀ ಅಹೋಬಲಾಚಾರ್ಯರು ತಮ್ಮ 34ನೇ ವಯಸ್ಸಿನಿಂದ 69ನೇ ವಯಸ್ಸಿನವರೆಗೂ ಶ್ರೀ ವ್ಯಾಸರಾಜ ಮಠದ ವೇದಾಂತ ದಿಗ್ವಿಜಯ ವಿದ್ಯಾ ಸಂಹಾಸನದಲ್ಲಿ ಅಧಿಷ್ಠಿತರಾದ ಶ್ರೀ ವಿದ್ಯಾ ಸಿಂಧು ತೀರ್ಥರು - ಶ್ರೀ ವಿದ್ಯಾ ಶ್ರೀಧರ ತೀರ್ಥರು - ಶ್ರೀ ವಿದ್ಯಾ ಶ್ರೀನಿವಾಸ ತೀರ್ಥರು - ಶ್ರೀ ವಿದ್ಯಾ ಸಮುದ್ರ ತೀರ್ಥರುಗಳಿಗೆ " ಮಾಧ್ವ ಸಂಸ್ಕೃತಿ ಪ್ರಸರಣ " ಕಾಲದಲ್ಲಿ ಬೆಂಬಲರಾಗಿದ್ದರು.
ಆಶ್ರಮ :
ಕ್ರಿ ಶ 1906 [ 69ನೇ ವಯಸ್ಸಿನಲ್ಲಿ ]
ಆಶ್ರಯ ಗುರುಗಳು : ಶ್ರೀ ವಿದ್ಯಾ ಸಮುದ್ರ ತೀರ್ಥರು
ವೇದಾಂತ ಸಾಮ್ರಾಜ್ಯಾಧಿಪತ್ಯ : ಕ್ರಿ ಶ 1906 - 1915
ಆಶ್ರಮ ಶಿಷ್ಯರು : ಶ್ರೀ ವಿದ್ಯಾ ವಾರಿಧಿ ತೀರ್ಥರು
ಅಂಕಿತ : ನಾಮಗಿರೀಶ
ಆರಾಧನೆ : ವೈಶಾಖ ಬಹುಳ ನವಮೀ
ವೃಂದಾವನ ಸ್ಥಳ : ಸೋಸಲೆ
" ವೈರಾಗ್ಯ ನಿಧಿಗಳು "
ಶ್ರೀ ಅಹೋಬಲಾಚಾರ್ಯರು ಪ್ರತಿಷ್ಠಾ ಪರಾಙ್ಞುಖರಾಗಿದ್ದರು.
ಮೈಸೂರಿನ ಮಹಾ ಪ್ರಭುಗಳಾಗಿದ್ದ ಶ್ರೀ ಚಾಮರಾಜೇಂದ್ರ ಒಡೆಯರು ಇವರ ವಿದ್ವತ್ತೆಯನ್ನು ಕೇಳಿ ಅರಮನೆಯಿಂದ ಮರ್ಯಾದೆ ಮಾಡಬೇಕೆಂದಿದ್ದರು - ಆದರೆ ಶ್ರೀ ಆಚಾರ್ಯರು ನಿರಾಕರಿಸಿದರು - ಇವರು ರಾಜಸ್ಥಾನಗಳಿಂದ, ಪಂಡಿತ ಮಂಡಲಿಗಳಿಂದ ಬಂದ ಪ್ರಶಸ್ತಿಗಳನ್ನು ಸವಿನಯವಾಗಿ ನಿರಾಕರಿಸುತ್ತಲಿದ್ದರು.
ಕೊಯಮತ್ತೂರು - ಕುಂಭಕೋಣ ಮುಂತಾದ ದಕ್ಷಿಣ ದೇಶದಲ್ಲಿ ಇಂದಿಗೂ ಪ್ರತಿಯೊಂದು ಮಾಧ್ವರ ಮನೆಯಲ್ಲಿ ಇವರ ಹೆಸರು ಮನೆಯ ಮಾತಾಗಿದೆ.
ಇವರು ಮಹಾ ಪಂಡಿತರಾಗಿದ್ದರೂ ಬಹಳ ಸರಳರೂ - ನಿಗರ್ವಿಗಳೂ ಆಗಿದ್ದರು.
ಸಾಂಸಾರಿಕ ಕ್ಲೇಶಗಳಿಂದ ಪೂರ್ಣ ವಿರಕ್ತಿಯನ್ನು ಹೊಂದಿದ್ದರು.
ಯತ್ಯಾಶ್ರಮಕ್ಕೆ ಇರಬೇಕಾದ ಸಮಸ್ತ ಸಂಪತ್ತುಗಳಿಂದಲೂ ಪೂರ್ಣರಾಗಿದ್ದರು.
ಅವರಿಗೆ ಆಶ್ರಮ ಕೊಡುತ್ತೇವೆಂದು ಹೇಳಿದಾದ....
ಶ್ರೀ ಆಚಾರ್ಯರು ಪ್ರಥಮತಃ ನಿರಾಕರಿಸಿದ್ದು - ಇವರ ಪಾಪ ಭೀರುತ್ವ - ಪ್ರತ್ಯವಾಯಶಂಕಾ - ಯತ್ಯಾಶ್ರಮದ ಮುಖ್ಯಾರ್ಥ ಜ್ಞಾನ ಎಷ್ಟಿತ್ತೆಂಬುದು ಸ್ಪಷ್ಟವಾಗುತ್ತದೆ.
" ಶ್ರೀ ಮೂಲಗೋಪಾಲಕೃಷ್ಣನ ಆದೇಶ "
ಸಪ್ನದಲ್ಲಿ ಶ್ರೀ ಮೂಲಗೋಪಾಲಕೃಷ್ಣನ ಆಜ್ಞೆಯಾದ ಮೇಲೆ ಅದರಂತೆ ಜ್ಞಾನಿಗಳಾದ - ಇವರ ಆಶ್ರಮ ಗುರುಗಳ ಒತ್ತಾಯದ ಆಜ್ಞೆ ನಿರಾಕರಿಸದೆ ಪೀಠಾಧಿಪತ್ಯವನ್ನು ಸ್ವೀಕಾರ ಮಾಡಿದರು.
ಶ್ರೀ ವಿದ್ಯಾ ಸಮುದ್ರ ತೀರ್ಥರಿಂದ ತುರ್ಯಾಶ್ರಮ ಸ್ವೀಕರಿಸಿ - ಶ್ರೀ ಸರ್ವಜ್ಞ ಸಿಂಹಾಸನಾರೋಹಣ ಮಾಡಿ -
" ಶ್ರೀ ವಿದ್ಯಾ ರತ್ನಾಕರ ತೀರ್ಥ "
ರೆಂದು ನಾಮಕರಣ ಹೊಂದಿದ ಮೇಲೆ ಜ್ಞಾನ ಪಿಪಾಸುಗಳಾದನೇಕ ವಿದ್ಯಾರ್ಥಿಗಳೂ - ಪಂಡಿತರೂ ಇವರಲ್ಲಿಗೆ ಆಗಮಿಸಿದರು - ಮಠವು ಜ್ಞಾನಾರ್ಜನೆಗೆ ತವರು ಮನೆಯಾಯಿತು.
" ಸರಳ ಸ್ವಭಾವದ ವಿದ್ಯಾ ಪಕ್ಷಪಾತಿಗಳು "
ಶ್ರೀ ವಿದ್ಯಾ ರತ್ನಾಕರ ತೀರ್ಥರು ಪೀಠಾಧಿಪತಿಗಳಾಗಿ ಪಂಡಿತರಾಗಿದ್ದರೂ ಸ್ವಲ್ಪವೂ ಹೆಮ್ಮೆಯಾಗಲೀ - ಅಭಿಮಾನವಾಗಲೀ ಇದ್ದಿಲ್ಲ.
ಸಣ್ಣ ಮಕ್ಕಳು ಕೂಡ ಪ್ರಶ್ನೆ ಮಾಡಿದರೂ ಉತ್ತರ ಕೊಟ್ಟು ಸಮಾಧಾನ ಮಾಡುತ್ತಿದ್ದರು.
ಶ್ರೀ ವಿದ್ಯಾ ರತ್ನಾಕರ ತೀರ್ಥರು ಕ್ರಿ ಶ 1906 ರಲ್ಲಿ ಆಶ್ರಮ ಸ್ವೀಕಾರ ಮಾಡಿದರು.
ಆಗಿನ ಕಾಲದ ಮಹಾ ಮಹಾ ಪಂಡಿತರು ಶ್ರೀ ವಿದ್ಯಾ ರತ್ನಾಕರ ತೀರ್ಥರಲ್ಲಿಗೆ ಬಂದು - ಶಾಸ್ತ್ರಗಳಲ್ಲಿ ಬಂದ ಸಂಶಯಗಳನ್ನು ನಿವಾರಣ ಮಾಡಿಕೊಳ್ಳುತ್ತಿದ್ದರು.
ಶ್ರೀ ಶ್ರೀಪಾದರಾಜ ಮಠಾಧೀಶರಾದ ಶ್ರೀ ಸುಧೀನಿಧೀ ತೀರ್ಥರವರು [ ಪೂರ್ವಾಶ್ರಮದಲ್ಲಿ ಶ್ರೀ ಹರಿಯಪ್ಪಾಚಾರ್ಯರು ] ಶ್ರೀ ವಿದ್ಯಾ ರತ್ನಾಕರ ತೀರ್ಥರನ್ನು ಪರಲೋಕ ಬಂಧುಗಳೆಂದು ಕರೆದಿದ್ದು - ಇವರ ಪ್ರಕಾಂಡ ಪಾಂಡಿತ್ಯಕ್ಕೆ ದ್ಯೋತಕವಾಗಿದೆ.
ಶ್ರೀ ವಿದ್ಯಾ ರತ್ನಾಕರ ತೀರ್ಥರು " ದಶ ಪ್ರಮತಿ ದರ್ಶನ ಪ್ರಕಾಶಿನೀ ಸಭಾ " ಯೆಂಬ ಸಭೆಯನ್ನು ಬೆಂಗಳೂರಲ್ಲಿ ಅಭೂತ ಪೂರ್ವ ರೀತಿಯಲ್ಲಿ ನಡೆಸಿದ್ದು ಚರಿತ್ರಾರ್ಹವಾಗಿದೆ.
ಶ್ರೀ ವಿದ್ಯಾ ರತ್ನಾಕರ ತೀರ್ಥರು 9 ವರ್ಷಗಳ ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ ಮಂಡಿಸಿದ ಕಾಲ ಮಾಧ್ವರ ಸುವರ್ಣ ಯುಗವೆಂದು ಹೇಳಬಹುದು.
ಶ್ರೀ ವಿದ್ಯಾ ರತ್ನಾಕರ ತೀರ್ಥರ ದೇಹ ತ್ಯಾಗವೂ ಅಪೂರ್ವ ರೀತಿಯಲ್ಲಿಯೇ ಆಯಿತು.
ಶ್ರೀ ಹರಿಧ್ಯಾನ ಮಾಡುತ್ತಾ ಬ್ರಹ್ಮರಂಧ್ರದಿಂದ ಪ್ರಾಣೋತ್ಕ್ರಮಣವನ್ನು ಮಾಡಿ ಮಾಡಿ ಕ್ರಿ ಶ 1915 ರಲ್ಲಿ ಇಹಲೋಕ ವ್ಯಾಪಾರ ಮುಗಿಸಿ " ಪರಂಧಾಮ " ಕ್ಕ್ಕೆ ಹೊರಟರು.
ದುರ್ವಾದಿ ಮತ್ತ ನಾಗೇಂದ್ರ
ವಿಧಾರಣ ಮೃಗಾಧಿಪ ।
ವಿದ್ಯಾರತ್ನಾಕರ ಗುರು:
ಸನ್ನಿಧತ್ತಾಂ ಸದಾ ಹೃದಿ ।।
" ಉಪ ಸಂಹಾರ "
ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಿದ್ಯಾ ರತ್ನಾಕರ ತೀರ್ಥರು.....
ಶಮದಮಾದಿ ಸಂಜುನ ಭರಿತರೂ - ಮಧ್ವಾಗಮ ಪಯೋಧಿ ಪಾರಂಗತ ಧೀರರೂ - ಸಕಲ ಕಲಾ ಚತುರರೂ - ಮಂದಹಾಸ ವದನರೂ - ಸುಂದರ ಶರೀರ ಉಳ್ಳವರೂ - ಮಹೀಶಪುಂಗವ ಸತ್ಕ್ಟುತ ಚರಣರೂ - ಶರಣಾಗತ ಜನ ಸಂರಕ್ಷಕ ನಿಪುಣರೂ - ಸಜ್ಜನ ನಿಕರ ಕುಮುದ ಚಂದ್ರಮರೂ -ಶ್ರೀ ರುಕ್ಮಿಣೀಶ ಪಾದಾಂಬುಜ ಮಧುಪಾರಾದ ಶ್ರೀ ಶ್ರೀಪಾದಂಗಳವರು ಅನಿತರ ಸಾಧಾರಣ ಮಹಿಮೆಯಿಂದ ಭಕ್ತರನ್ನು ಸಾಕಿ ಸಲುಹಿ ವೈಖಾಖ ಬಹುಳ ನವಮೀಯಂದು ಸೋಸಲೆಯಲ್ಲಿ ವೃಂದಾವನಸ್ಥರಾದರು.
ಶ್ರೀ ವಿದ್ಯಾ ಪ್ರಸನ್ನ ತೀರ್ಥರು....
ವಂದೇ ರತ್ನಾಕರ -
ಪರಮ ಗುರೂನ್ ।
ಮಹನೀಯ ಯತಿವರಾನ್ -
ವಂದೇ ।। ಪಲ್ಲವಿ ।।
ಸಾಂಗವೇದ ಚತುರಾನ್ ।
ತುಂಗ ಸುಗುಣ ಭರಿತಾನ್ -
ಸುಚರಿತಾನ್ ।। ಅ ಪ ।।
ಶಮದಮಾದಿ ಸದ್ಗುಣ -
ಗಣ ನಿಲಯಾನ್ ।
ವಿಮಲರುಚಿರ -
ಕಾಯಾನ್ ।
ಕುಮತ ಭಂಗ -
ಶೂರಾನ್ । ಮಧ್ವಾ ।
ಗಮ ಪಯೋಧಿ -
ಪಾರಂಗತ -
ಧೀರಾನ್ ।। ಚರಣ ।।
ಸುಹಾಸ ವದನಾತ್ -
ಮಹಾನುಭಾವಾನ್ ।
ಮಹೀಶ ಪುಂಗವ -
ಸತ್ಕೃತ ಚರಣಾತ್ ।
ಮಹೋದ್ಧತಾ ಅಪಿಯಾನ್ -
ಸಮಾನಮಮ್ ।
ಅಹೋಬಲಾನ್ । ಜ್ಞಾನ ।
ಬಲಾನ್ ಅನಿಶಮ್ ।। ಚರಣ ।।
ಸಕಲ ಕಲಾ ಚತುರಾನ್ ಸಜ್ಜನ ।
ನಿಕರ ಕುಮುದ ಚಂದ್ರಾನ್ ।
ರುಕುಮಿಣೀಶ ಪಾದಾಂಬುಜ -
ಮಧುಪಾನ್ ।
ಸ್ವಕೃತ ಮಧುರ ಗೀತೌಘ -
ಪ್ರಸನ್ನಾನ್ ।। ಚರಣ ।।
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
" ಶ್ರೀ ರಾಯರ ಅಂತರಂಗ ಭಕ್ತರು ಶ್ರೀ ವಿದ್ಯಾ ರತ್ನಾಕರ ತೀರ್ಥರು "
[ ಕಾಲ : ಕ್ರಿ ಶ 1837 - 1915 ]
" ಹರಿದಾಸ ಸಾಹಿತ್ಯಕ್ಕೆ ಕೊಡುಗೆ "
ಅಪ್ರತಿಮ ಪಂಡಿತ ಸಾರ್ವಭೌಮರೆಂದೇ ಪ್ರಸಿದ್ಧರಾದವರು ಶ್ರೀ ವಿದ್ಯಾರತ್ನಾಕರತೀರ್ಥರು.
ಸಕಲ ವಿದ್ಯೆಗಳ ಆಕರರೇ ಆಗಿದ್ದ ಮಹಾತ್ಮರು.
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ಚಂದ್ರಿಕಾಚಾರ್ಯರ ವಿದ್ಯಾ ಸಿಂಹಾಸನವನ್ನು ಆರೋಹಣ ಮಾಡಿದ ಶ್ರೀ ವಿದ್ಯಾರತ್ನಾಕರತೀರ್ಥರು ಶ್ರೀ ವ್ಯಾಸರಾಜ ಮಠದ ಪಂಡಿತ ಪರಿವ್ರಾಜಕ ಪೀಳಿಗೆಯಲ್ಲಿ ( ಪರಂಪರೆ ) ತೊಳಗುವ ದಿವ್ಯ ನಕ್ಷತ್ರವಾಗಿ ತಮ್ಮ ವಿದ್ವತ್ ಪೀಠದ ಗೌರವದ ಗರಿಮೆಯನ್ನೂ - ಹೆಚ್ಚಳ ಹಿರಿಮೆಯನ್ನೂ ಅನೂಚಾನವಾಗಿ ಪಾಲಿಸಿಕೊಂಡು ಬಂದ ಧೀಮಂತ ಧೌರೇಯರಾಗಿದ್ದರು.
ಶ್ರೀ ವಿದ್ಯಾರತ್ನಾಕರತೀರ್ಥರಲ್ಲಿ ಪ್ರಖರ ನಿಖರವಾದ ಶಾಸ್ತ್ರ ಪಾಂಡಿತ್ಯವು ಪರಿಪೂರ್ಣವಾಗಿದ್ದಂತೆ - ಸರಸ ಸುಂದರವಾದ ಕವಿತ್ವ ಕೌಶಲ್ಯವೂ ಪರ್ಯಾಪ್ತವಾಗಿದ್ದಿತು.
ಶ್ರೀ ವಿದ್ಯಾರತ್ನಾಕರತೀರ್ಥರು ಸಂಸ್ಕೃತದಲ್ಲಿ ರಚಿಸಿದ ಅನೇಕ ದೇವತಾ ಸ್ತೋತ್ರಗಳೂ ಮತ್ತು ಶ್ರೀಮತ್ಸುಮಧ್ವವಿಜಯ ಸಾರ ಸಂಗ್ರಹಾತ್ಮಕ ವಾದ ಪದ್ಯ ಪ್ರಬಂಧವೂ - ಶ್ರೀರಾಮಾಷ್ಟಕ - ಶ್ರೀಕೃಷ್ಣಾಷ್ಟಕ - ಅಶ್ವಧಾಟಿ ದಶಾವತಾರ ಸ್ತೋತ್ರ - ಶ್ರೀ ವ್ಯಾಸರಾಜ ಚರಿತಾಮೃತ ಮುಂತಾದ ಗೀತಗಾಥೆಗಳು.
ಶ್ರೀ ವಿದ್ಯಾರತ್ನಾಕರತೀರ್ಥರ ವಿಬುಧವಾಣಿ ವಾಲ್ಲಭ್ಯ ಅನನ್ಯ ಲಭ್ಯವಾದ ಅವರ ಶೈಲಿಯ ಭಾವಾರ್ಥ ಸೌಲಭ್ಯಕ್ಕೂ ಸಾಕ್ಷಿಯಾಗಿದೆ.
ಇದರಂತೆ ಕನ್ನಡ ಸಾಹಿತ್ಯದಲ್ಲೂ ಶ್ರೀ ವಿದ್ಯಾರತ್ನಾಕರತೀರ್ಥರಿಗೆ ನಿರಂತರ ಅಗ್ರಪೂಜಾ ಮಾನವನ್ನು ಒದಗಿಸಬಲ್ಲ ಪೂರ್ಣ ಪ್ರಭುತ್ವ - ಆಶು ಕವಿತ್ವಗಳೂ ಇದ್ದವು.
ದಾಸ ಪಂಥದ ಮೂಲಕೇಂದ್ರವಾದ ಶ್ರೀ ಚಂದ್ರಿಕಾಚಾರ್ಯರ ಮಹಾ ಸಿಂಹಾಸನದಲ್ಲಿ ಮಂಡಿಸಿದ ಶ್ರೀ ವಿದ್ಯಾರತ್ನಾಕರತೀರ್ಥರು " ನಾಮಗಿರಿ ನರಹರಿ / ನಾಮಗಿರೀಶ್ವರ ಸ್ವಾಮಿ " ಅಂಕಿತದಲ್ಲಿ ಪದ ಪದ್ಯಗಳನ್ನು ರಚಿಸಿ ತಮ್ಮ ಪರಂಪರೆಯ ಗೌರವ - ಘನತೆಗಳನ್ನು ಮತ್ತೊಮ್ಮೆ ಆ ಉಚ್ಛಾ೦ಕಕ್ಕೆ ಎತ್ತರಿಸಿದರು.
ಶ್ರೀ ವಿದ್ಯಾರತ್ನಾಕತೀರ್ಥ ಶ್ರೀಪಾದಂಗಳವರು ಕನ್ನಡ ಸಂಸ್ಕೃತ ಸಾಹಿತ್ಯಗಳ ಪ್ರಗಾಢ ಪಾಂಡಿತ್ಯದೊಂದಿಗೆ ಸಂಗೀತ ಶಾಸ್ತ್ರದ ರಾಗ - ರಾಗಿಣೀ ಹಾಗೂ ತಾಳ - ಮಟ್ಟುಗಳ ಸಾಕಷ್ಟು ಪರಿಜ್ಞಾನವಿದ್ದುದರಿಂದ ಅವರ ಪದಗಳು ಭಾವಾರ್ಥ ಪುಂಜಿತವಾದಂತೆ ರಾಗ ರಂಜಿತವೂ - ಶಬ್ದ ಸಿಂಜಿತವೂ ಆಗಿ ಮೆರೆಯುತ್ತಲಿವೆ.
ಶ್ರೀ ವಿದ್ಯಾರತ್ನಾಕತೀರ್ಥ ಶ್ರೀಪಾದಂಗಳವರ ದೇವರ ನಾಮಗಳು ಮೋಹಕ ಶೈಲಿಯ ಮಾಧುರ್ಯದ ಪರಿಚಯವನ್ನು ಈ ಕೆಳಗಿನ ಪದ್ಯಗಳು ಒದಗಿಸಿ ಕೊಡುತ್ತವೆ.
ಬೆಟ್ಟದ ಶೃಂಗವ ಹತ್ತಿ -
ಧುಮುಕುವೆ ನಾನು ।
ಕೃಷ್ಣನೇ ಸರ್ವೋ-
ತ್ತಮತ್ತಾರಿಲ್ಲವೆಂದೂ ।।
ಪಂಕಜಾಸನಾ ಹಿಪ -
ಶಂಕರಾದಿಗಳು ಹರಿಗೆ ।
ಕಿಂಕರರು ಮತ್ತು -
ಇವಗೆ ಪುತ್ರ ಪೌತ್ರರು ।
ಏಕೋ ನಾರಾಯಣ ಆಸೀನ್ನ -
ಬ್ರಹ್ಮೇತಿ ಶ್ರುತಿಯೊಂದೇ ।
ಸಾಕೊ ಮತ್ತಿನ್ಯಾಕೆ ಸಂಶಯ -
ಹರಿ ನೀನೆ ಗತಿಯೆಂದು ।।
ಯಂಕಾಮಯೇ ಯೆಂಬ ಶ್ರುತಿ -
ಪಂಕಜಾಸನಾನಿಲ ।
ಶಂಕರರೆಲ್ಲರೂ ಹರಿ -
ಕಿಂಕರ ಸಿರಿಗೆ ।
ಕಿಂಕರರೆಂಬುದ -
ನಿಶ್ಶಂಕವಾಗಿ ಪೇಳಲು ।
ಶಂಕೆಯಾಕೆ ಸಲಹೋ ಶ್ರೀ -
ಪಂಕಜಲೋಚನವೆಂದು ।।
ಹೀಗೆ ಶ್ರೀ ವಿದ್ಯಾರತ್ನಾಕತೀರ್ಥ ಶ್ರೀಪಾದಂಗಳವರು ರಚಿಸಿದ ಪದ್ಯಗಳು ಸಾಹಿತ್ಯದ ಸುವರ್ಣ ಪಾತ್ರದಲ್ಲಿ ದ್ವೈತ ಸಿದ್ಧಾಂತದ ಪ್ರಮೇಯ ರತ್ನಗಳನ್ನಿರಿಸಿ ಪಂಡಿತ ಪಾಮರ ರೋಚನ ರಂಜಕವಾಗುವಂತೆ ಮಾಡುತ್ತವೆ.
ಶ್ರೀ ವಿದ್ಯಾರತ್ನಾಕತೀರ್ಥ ಶ್ರೀಪಾದಂಗಳವರು ಜಂಜೂಟ ರಾಗದ ಆದಿ ತಾಳದಲ್ಲಿ ವಿನೋದ ವೈಖರಿಯ ಲೀಲಾ ಲಾಲಿತ್ಯದಿಂದ ಲಹರಿಸಿದ ಒಂದು ಲಘು ಗೀತೆಯ ವ್ಯಂಗ್ಯ ಭಂಗಿಯನ್ನು ಕಾಕು ವಿಡಂಭನೆಯನ್ನು ಈ ಕೆಳಕಂಡ ಪದ್ಯದಲ್ಲಿ...
ಶಾರದೇಂದು ಮುಖಿ -
ನೀರಜ ನಯನನೆ ।
ಬಾರೆಲೆ ಬಾಗಿಲ -
ತೆಗೆಯಲೇ ಭಾಮೆ ।। ಪಲ್ಲವಿ ।।
ಯಾರಯ್ಯಾ ಬಾಗಿಲ -
ಹೊರಗೆ ನಿಂತಿರುವನು ।
ಜಾರ ಪುರುಷನಂತೆ -
ತೋರುವೆ ನೀನು ।। ಚರಣ ।।
ಜಾರನಾದರೆ ನಿನಗೆ -
ಜಾರನಲ್ಲವೇ । ಮೀನಾ ।
ಕಾರ ಧರಿಸಿರುವ -
ಹರಿಯಾಲೆ ಭಾಮೆ ।। ಚರಣ ।।
ಮೀನನಾದರೆ ಬಲು -
ಮೌನದಲ್ಲಿರದಂತೆ ।
ಮಾನವರಂತೆ ಮಾತು -
ಯಾವುದೋ ನಿನಗೆ ।। ಚರಣ ।।
ಮಂದರ ಗಿರಿಯ ಬೆ-
ನ್ನಿಂದ ಧರಿಸಿದ ।
ಅಂದ ಕೂರ್ಮ-
ನಲ್ಲವೇನೆ ಭಾಮೆ ।। ಚರಣ ।।
ಕೂರ್ಮ ನೀನಾದರೆ -
ಕೂಪದೊಳಿರುವದೇ ।
ಧರ್ಮವೆಂಬುದನು -
ಮರೆತೆಯಾ ನೀನು ।। ಚರಣ ।।
ಹೀಗೆ ವಕ್ರೋಕ್ತಿಯ ಸಂಭಾಷಣೆಯನ್ನು 11 ನುಡಿಗಳಲ್ಲಿ ದಶಾವತಾರ ವಿವರವನ್ನು ಕೊಟ್ಟಿದ್ದಾರೆ.
ಶ್ರೀ ವಿದ್ಯಾರತ್ನಾಕತೀರ್ಥ ಶ್ರೀಪಾದಂಗಳವರ ಕನ್ನಡ ಪದ್ಯಗಳಲ್ಲಿ ಸಾಹಿತ್ಯಕ್ಕಿಂತಾ ಶಾಸ್ತ್ರದ ತೂಕವೇ ಹೆಚ್ಚು.
ಕನ್ನಡಕ್ಕಿಂತ ಸಂಸ್ಕೃತ ಶಬ್ದಗಳದ್ದೇ ಎಲ್ಲಾ ಕಡೆಗೂ ರಿಂಗಣ ಗಣಿತವು ಕೇಳಿ ಬರುತ್ತವೆ.
ಪೀಠದ ಮೇಲ್ಮೆ - ಸಂಪ್ರದಾಯ ನಿಷ್ಠೆ - ಜ್ಞಾನದ ಮಟ್ಟಗಳಿಗೆ ತಕ್ಕಂತೆ ಕನ್ನಡ ಕಾವ್ಯ ಪ್ರಜ್ಞೆಯೂ ಇಲ್ಲಿ ಜಾಗರೂಕವಾಗಿ ಹೆಜ್ಜೆ ಇರಿಸಿವೆ. ಪ್ರತಿಭೆ ತನ್ನ ಗೆಜ್ಜೆಯ ಕಿಂಕಿಣಿಯನ್ನು ಗಿಲಿಗಿಲಿಸಿದೆ.
ಶ್ರೀ ವಿದ್ಯಾರತ್ನಾಕತೀರ್ಥ ಶ್ರೀಪಾದಂಗಳವರು ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ದಿಗ್ವಿಜಯ ಮಾಡಿಸಿದ್ದಾರೆ.
ಶ್ರೀ ವ್ಯಾಸರಾಜರೇ ಶ್ರೀ ಮಂತ್ರಾಲಯ ಪ್ರಭುಗಳಾಗಿ ಮೂಲ ಬೃಂದಾವನದಲ್ಲಿ ವಿರಾಜಮಾನರಾಗಿದ್ದಾರೆ.
ಶ್ರೀ ರಾಯರನ್ನು ತದೇಕ ಚಿತ್ತದಿಂದ ನೋಡುತ್ತಿದ್ದಾರೆ.
ಕಂಠ ಗದ್ಗದಿತವಾಗಿದೆ. ಕಣ್ಣಂಚಿನಲ್ಲಿ ಆನಂದ ಭಾಷ್ಪ ಸುರಿಯುತ್ತಿದೆ.
ಶ್ರೀ ವಿದ್ಯಾರತ್ನಾಕತೀರ್ಥ ಶ್ರೀಪಾದಂಗಳವರ ವದನಾರವಿಂದದಿಂದ...
ರಾಗ : ಕಲ್ಯಾಣಿ ತಾಳ : ಆದಿ
ರಾಘವೇಂದ್ರ ಸಲಹೋ -
ಗುಣಸಾಂದ್ರಾ ।। ಪಲ್ಲವಿ ।।
ಭಗವದ್ಗೀತಾ ವಿವರಣ ತಂತ್ರದೀಪ ।
ನಿಗಮತತಿಗೆ ಖಂಡಾರ್ಥವ ರಚಿಸಿ ।
ಋಗಾರ್ಥಗಳನು ಅತಿ -
ಸ್ಫುಟವಾಗಿ ವಿವರಿಸಿ ।
ಖಗವಾಹನನ ತೋಷ -
ಪಡಿಸಿದ ಧೀರ ।। ಚರಣ ।।
ಧರಣಿ ದಿವಿಜರರಿಗೆ -
ವರಗಳ ಕೊಡುವಂಥ ।
ಸುರತರುವೆ ನಿನಗೆ -
ಕರಗಳ ಮುಗಿದು ।
ಪರಮ ಪುರುಷ ಹರಿ -
ಚರಣ ಕಮಲದಲಿ ।
ಸ್ಥಿರವಾದ ಭಕುತಿಯ -
ಬೇಡುವೆ ಧೀರ ।। ಚರಣ ।।
ಚಂಡ ಕುಮತಗಳ -
ಖಂಡಿಸಿ ಬುಧ ಜನ ।
ಮಂಡಲದೊಳಗೆ ಪ್ರ-
ಚಂಡನೆಂದೆನಿಸಿ ।
ಕುಂಡಲಿಶಯನನ ಪಾದ -
ಮಂಡಿತ ಹೃದಯ । ಭೂ ।
ಮಂಡಲದೊಳಗೆ ಆ-
ಖಂಡಲನಾದ ।। ಚರಣ ।।
ಶ್ರದ್ಧೆಯಿಂದಲಿ ವರ ಮಧ್ವಾಚಾರ್ಯರ ಮತ ।
ಪದ್ಧತಿ ಬಿಡದಂತೆ ಮಾಡಿ ಬುದ್ಧಿಯನಿತ್ತು ।
ಉದ್ಧರಿಸಯ್ಯಾ ಕೃಪಾಬ್ಧಿಯೇ ಬುಧ । ಜನಾ ।
ರಾಧ್ಯ ಚರಣ ಪರಿಶುದ್ಧ ಚರಿತ್ರ ।। ಚರಣ ।।
ಕಾಮ ಜನಕನಾದ ।
ನಾಮಗಿರೀಶ್ವರ ।
ಸ್ವಾಮಿ ನೃಹರಿ ಪಾದ -
ತಾಮರಸಂಗಳ ।
ಪ್ರೇಮದಿ ಪೂಜಿಪೆನೆಂಬೋ -
ಕಾಮಿತವರ ನೀಡೋ ।
ಶ್ರೀಮತ್ಸುಧೀಂದ್ರ ಕರ -
ತಾಮರಸಭವನೇ ।। ಚರಣ ।।
ಶ್ರೀ ರಾಯರ ಮಹಿಮೆಯನ್ನು - ದ್ವೈತ ಸಿದ್ಧಾಂತಕ್ಕೆ ಶ್ರೀ ರಾಯರು ಕೊಟ್ಟ ಕೊಡುಗೆಯನ್ನು ಅತಿ ಮನೋಜ್ಞವಾಗಿ ಸ್ತುತಿಸಿದ್ದಾರೆ.
ಶ್ರೀ ವಿದ್ಯಾರತ್ನಾಕತೀರ್ಥ ಶ್ರೀಪಾದಂಗಳವರ ವಿದ್ಯಾ ಪಕ್ಷಪಾತ ಹಾಗೂ ವಿದ್ವತ್ ಪೋಷಣೆ ದೀಕ್ಷಾ ದಾಕ್ಷ್ಯಗಳಿಗೆ ಸಾಕ್ಷೀಭೂತವಾಗಿ ಅವರು ಸ್ಥಾಪಿಸಿದ " ಶ್ರೀಮದ್ದಶ ಪ್ರಮತಿ ದರ್ಶನ ಪ್ರಕಾಶಿನೀ " ಎಂಬ " ವಿದ್ವತ್ಸಭೆ "ಯು ಈಗಲೂ ನಡೆಯುತ್ತಿದೆ.
" ಶ್ರೀ ವಿದ್ಯಾ ರತ್ನಾಕರ ತೀರ್ಥರ ಮತ್ತು ಶ್ರೀ ಸತ್ಯಧ್ಯಾನ ತೀರ್ಥರ ವಿದ್ಯಾ ಸಂಬಂಧ "
ಶ್ರೀ ಸತ್ಯಧ್ಯಾನ ತೀರ್ಥರು [ ಕಾಲ : ಕ್ರಿ ಶ 1872 - 1942 ] ತಾವು ತಯಾರು ಮಾಡಿದ ಶಿಷ್ಯರನ್ನು - " ಶ್ರೀ ವಿದ್ಯಾ ರತ್ನಾಕರ ತೀರ್ಥ " ಬಳಿ ಪರೀಕ್ಷಾರ್ಥವಾಗಿ ಕಳುಹಿಸಿ ಕೊಡುತ್ತಿದ್ದರಂತೆ.
ಅಲ್ಲದೇ - ಶ್ರೀ ಸತ್ಯಧ್ಯಾನ ತೀರ್ಥರಿಗೆ ದ್ವೈತ ವೇದಾಂತ ವಿಷಯದಲ್ಲಿ ಯಾವುದೇ ಸಂಶಯ ಬಂದರೂ ಶ್ರೀ ವಿದ್ಯಾ ರತ್ನಾಕರ ತೀರ್ಥರನ್ನು ಸಂಪರ್ಕಿಸಿ - ತಮ್ಮ ಸಂಶಯವನ್ನು ಪರಿಹಾರ ಮಾಡಿಕೊಳ್ಳುತ್ತಿದ್ದರಂತೆ.
ಇದು ಶ್ರೀ ಸತ್ಯಧ್ಯಾನ ತೀರ್ಥರ ಮತ್ತು ಶ್ರೀ ವಿದ್ಯಾ ರತ್ನಾಕರ ತೀರ್ಥರ ಮಧ್ಯ ಇರುವ ವಿದ್ಯಾ ಸಂಬಂಧ ಹಾಗೂ ಆದರಾಭಿಮಾನಗಳಿಗೆ ಜ್ವಲಂತ ನಿದರ್ಶನ.
ಶ್ರೀ ವಿದ್ಯಾ ರತ್ನಾಕರ ತೀರ್ಥರು ಆ ಕಾಲದ ದ್ವೈತ ವೇದಾಂತ ವಿದ್ಯಾ ಸಾರ್ವಭೌಮರು.
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****
ಅಹೋಬಲಾಚಾರ್ಯರು ವ್ಯಾಸರಾಜಮಠದ ಪೀಠವೇರಿ " ಶ್ರೀ ವಿದ್ಯಾ ರತ್ನಾಕರತೀರ್ಥ " ರೆನಿಸಿದರು. 'ನಾಮಗಿರೀಶ ' ಎಂಬ ಅಂಕಿತದಿಂದ ದಾಸ ಸಾಹಿತ್ಯವನ್ನು ಬೆಳೆಸಿದವರು. ಶ್ರೀಪಾದ ಪುತ್ರರಿಗೆ ಲಕ್ಷ್ಮೀ ಎಂಬ ಪತ್ನಿಯಲ್ಲಿ ಜಯತೀರ್ಥ ಹಾಗೂ ಇಂದಿರಮ್ಮ ಎಂಬ ಮಕ್ಕಳಾದರು. 36 ನೆ ವಯಸ್ಸಿಗೆ ಶ್ರೀವಿದ್ಯಾ ರತ್ನಾಕರತೀರ್ಥರ ಕರಕಮಲ ಸಂಜಾತರಾದ ಶ್ರೀ ಜಯತೀರ್ಥ, ಶ್ರೀ ವಿದ್ಯಾವಾರಿಧಿ ತೀರ್ಥರಿಂದ ಸನ್ಯಾಸ ಪಡೆದು "ಶ್ರೀ ವಿದ್ಯಾಪ್ರಸನ್ನ ತೀರ್ಥ"ರೆನಿಸಿದರು.
******
No comments:
Post a Comment