info from sumadhwaseva.com--->
Sri Sumateendra Tirthara Punyadina
Period : 1692 – 1725
Ashrama Gurugalu : Sri Sooreendra Teertharu
Ashrama Shishyaru : Sri Upendra Teertharu
Janma name – Sri Muddu Venkata Krishnachar
ಪೂರ್ಣಪ್ರಜ್ಞಮತಾಂಭೋಧಿ ಪೂರ್ಣೇಂದುಮಕಲಂಕಿನಂ |
ಸುಜನಾಂಬುಧಿಭಾಸ್ವಂತಂ ಸುಮತೀಂದ್ರಗುರುಂ ಭಜೇ |
पूर्णप्रज्ञमतांभोधि पूर्णेंदुमकलंकिनं ।
सुजनांबुधिभास्वंतं सुमतींद्रगुरुं भजे ।
poorNapraj~Jamataambhodhi poorNEndumakalankinam |
sujanaambudhibhaasvantam sumateendragurum bhajE |
He is regarded as Vidya Suta of Raghavendraru. Why? –
Sri Rayaru had written more than 50 granthas. Once his disciples asked swamiji ” swami, you have done great work by writing so many granthas. Already Kaliyuga prabhaava is there. Who will utilise all your works”. Rayaru replied “Third yathi after me will be Sri Sumatheendra Tirtharu, who will do all the works”. And it was Sri Sumateendraru, third after Rayaru (Yogeendra-Sooreendra-Sumateendra), who did that work.
shrI sumatIndratIrthara granthagaLu –
1. bhaavaratnakOsha:
2. tattvaprakaashikaa bhaavaratna kOsha:
3. RugbhaaShyaTeekaa bhaavaratnakOsha:
4. jayaghoShaNaa
5. birudaavalee
6. raajastuti:
7. shaahuvijaya:
8. chakravaalaprabandha:
9. raamadanDaka:
10.raamataaraavali
11.yogIndravijaya:
12.yogIndrataaraavali
13.abhinava kaadambaree
14.subhadraapariNaya vyaaKyaana (naaTaka)
15.alankaara manjarI vyaaKyaana
16.raamaguNaavalee
17.uShaaharaNa vyaaKyaana (rasikaranjani)
18.shrIvyaasaraajavijaya vyaaKyaanam
19.shrI raaghavEndrastOtra vyaaKyaanam
20.adhikaraNaratna maalaa
(brahmamImaamsaartha bhOdhakagrantha)
21.shrI narasimhastutiya vyaaKyaana (Ekaavali)
22.vaakyaartha ratnakOsha:
sudhaaTippaNi (parimaLaanusaari)
23.hanumatpoojaavidhi:
24.bhoogolasangraha:
25.shravaNadvaadashI viShayaka pramaaNasangraha:
26.brahmasootra nyaayasangraha vyaaKyaana
27.aShThamahaamantra vivaraNam
28.bhaavaratna manDanam
29.savyaaKyaamantraratnakOsha:
30.savyaaKyaa shaahuraaja prasanga:
31.samskRutapatrikaa jaala:
32.virodhoddhaara:
33.savyaaKyaanaaraayaNeeyagaathaa prabandha:
34.savyaaKyaa dEvaraajastuti:
35.shreeraaghavendravijaya vyaaKyaanam
36.pramaaNapaddhati vyaaKyaanam
37.nyaayaamRuta bhooShaNam
38.chandrikaa TippaNi
39.bhedhojjIvana TippaNi
40.vaadaavali TippaNi
41.tantrasaara vyaaKyaana
Shree Sumateendraru and Helavanakatte Giriyamma –
Once Sri Sumateendra Tirtharu had come to Malebennur and stayed at Ranganatha Temple. Helavanakatte Giriyamma was a strong devotee of Ranganathaswamy, she used to compose keerthanaas on him. As she was a lady and further she had no children, people were against her composing keerthanaas.
It was the Bhiksha day of Giriyamma. After the Mahapooja and Mangalarathi were over, the swamiji asked Giriyamma to come and take the Theertha. Mataadhikari replied as she has no issues, she is not eligible to take teertha from the swamiji. But Swamiji insisted that she must take the teertha. . She came and stood stretching her right hand. The SwAmji observing her hand said that Chakrapaaani, the Lord was her son, and her hand had the characteristic of Devaki, Her palms were that of Kausalya’s character, and requested her to show him Lord Balakrishna calling her Yashodhamma.
Giriyamma never used to take food without completing her daily routine of singing, performing pooja etc.. She started putting rangoli reciting keerthanas on the Lord worshipping with turmeric-kumkum keeping the idol of Venugopala at the centre gifted by Sri Gopaladasaru. Swamiji who was sitting nearby happened to see the idol. He heard Giriyamma singing Keerthanaas in a melodious style.. Venugopala was dancing making sounds from the tiny bells tied to his legs according to the tune from the flute. He was amazed.. Giriyamma took that child in her waist and kept before the Swamiji requesting him to give Mantrakshate to the child. SwAmiji was overwhelmed with “ Ananada Bhashpa” .He said, “Kanakadaasa showed to Sri Vyaasarayaru the Paramaathma, Vaikunta daasa showed paramaathma to Sri Vaadhiraajaru, Because of you, I also got the chance of looking at the heavenly manifestation of Venugopaala. Oh ! Mother, just like them that you have given the Darshan of Baalakrishna to me.
Sri Sumateendra Tirtharu said “You are yashodha, You are kausalya, You are Anasuya”, Giriyamma said, that it was His Moola Raama and sang
Raama Shree Raghunandana|
madanakoti mohanaanga maadhava puNcharitha karuNaapaanga||
madanakoti mohanaanga maadhava puNcharitha karuNaapaanga||
HeLavanakatte nilaya venkata shree ranga|
sumatheendhra hRudhaya pankaja Bhrunga|
sadhaanandha kadhana vikrama bhaahu
Kothanda Dhuritha seetaaraama shree raghnandhana.||
Sumateendra Theertha’s praise for Helavanakatte Giriyamma –
Next day it was a day for Tapthamudra DhaaraNa. “Sudharshana homa” was conducted and all had mudradhaarane. When it was the turn of Giriyamma, the swaamiji observing her stretched hands, said that Sri Hari had himself had done “Chakraankana” and he had no powers to do “Chakraankana” to her. He said not only those Bhakthas who had darshan of these hands had become pure , he was also fortunate to have been blessed” and thus praised Giriyamma.
-Source – “Sri Karnataka Bhaktavijaya” by Belur Keshavadas.
********
ArAdhane: AshvIna bahuLa dwAdashi
Period: 1692 - 1725
parampare: rAyara maTa, #20
pUrvAshrama Name: veena Muddu VenkatakrishnAchAryaru
vidyA gurugaLu: shri rAghavEndra gurusArvabhoumaru
Ashrama gurugaLu: shri sUrIndra tIrtharu
Ashrama shishyaru: shri upEndra tIrtharu
brindAvana: srirangam
He was a great scholar. He had written 6 GranthAs in his pUrvAshrama and 34 post taking sanyAsa.
All of his pUrvAshrama brothers became sanyAsigaLu and 4 of them adorned the pITa.
1. yOgIndra tIrtharu
2. sUrIndra tIrtharu
3. sumatIndra tIrtharu
4. upEndra tIrtharu
5. muNindra tIrtharu (did not adorn pITa)
Sri Sumatheendraru is guardian saint of Srirangam Ranganatha swami temple. Once a magician, by applying on himself an eye lotion, hid himself inside the Garba guDi. He, by chanting evil mantras, took away the lustre of the idol of Shri ranganAtha. To survive, he used to swallow the naivedya.
shri Sumatheendraru saw through this sinister game. He directed that the naivedya to be cooked in abundance of pepper. The magician while consuming the naivedya, started shedding tears profusely and in the process, rubbing off the eye lotion and exposing himself, and got caught.
To prevent recurrence, Sumatheendraru installed a Hanumantha idol in the temple.
shri sumatIndra tIrtha guruvantargata, bhArati ramaNa mukhyaprANAntargata, sItApate shri mUla rAma dEvara pAdAravindakke gOvinda, gOvinda...
shri krishNArpaNamastu...
Sumateendrateertharu !
Grandson of Shri Raghavendra Swamiji [ in poorvashraam ]
and Third in succession to Peetha after Gurusarvabhauma
Sumateendraru has done mahat Upakaara on MAdhwa lineage ... today if most of the population in Tamilanadu , kerala Andhra karnataka are still follwoing Dwaita culture its anugraha of Sumateendraru
If most of the Deshashtha Marathi junta are madhwas , it is krupakataksh of Sumateendraru
when entire South India was in grip of AVAISHNAVA tamas sadhana even Kings being under its influence and being patrons to KAli sadhan advaita sadhana .. Sumateendraru with his sanchaar , excellent writing skills poetic abilities , PANDITYA and mantra siddhi restored faith of people and KINGS in VISHNU ARADHANA
HE upheld Vishnu sarvottamatva amidst stiff challenge
In one such vidwat sabha after making a clear WIN ... The raani queen of MADURAI offered him their FAMILY treausre of Lord "Sribhudurga sameta sesha shayyavilasam MANIMAYA vapusham NEELA deviijakarkamalenararchitaam VAIKUNTHA VASUDEVA "
one of the ashta mahishi of SRIKRISHNA Sree NEELADEVI was from PANDYA desha and poorvaj of MADURAI royal family
Neeladevi worshipped an IDOL of SRI VAIKUNTHA VASUDEVA resting on SESHA along with SRI BHU DURGA made of precious stones ..
this IDol was traditionally handed down from generation to generation in Royal palace of MADURAI
and as a mark of respect to SHREE SUMATEENDRAteertharu for having defeated all the Philosophies [ advaita vishishta advaita bauddha jain charvaak nyaya vaisheshika etc ] in an open challenge QUEEN mangamma offered this VAIKUNTHA VASUDEVA to Sumateendraru and it is still being worshipped in MANTRALAYAM
Raghavendra Swamiji had vishesha vaatsalya [special affection ] on sumateendra teertharu ..
RAghevendra swamiji has written so many granthas .. chandrika prakash nyayamuktavali tantra deepika nyayasudha parimala etc
when asked why in this age [ where people are mandabuddhis ] is RAyaru writing so many granthas ...
Rayaru said
||bhaavyasanshamaho guruvanshe darshanshrutipara: sumateendra: tasya saarthakmidam sakalam syadityevetya krutvakrutisaartham ||
in the lineage of Guruparampara one by name sumateendra yati will come to aid his study and remove all doubts these granthas will be helpful
this is greatest TRIBUTE EVER to a person YET to be named SUmateendra teertha
by none other than saxaat AVATAR of PRAHLAAD the greatest VISHNU BHAKTA
it also shows Rayaru had divya drishti ..
Shree raghavendra teertha api asminnasadharanapremaamrutavarsham kurvanti
HE was so popular that even today in south srirangam RAghavendra muthha is known as SUMATEENDRA mutha only
*********
info from https://madhwafestivals.wordpress.com/2016/12/09
Moola brindavanas situated in Tamilnadu
- Uttaradhi Mutt – 6
- Raghavendra Mutt – 7
- Vyasaraja Mutt – 9
- Sripadaraja Mutt – 15
- Other Brindavanas/Bidi sanyasigalu – 8
Rayara Mutt
Sri Sumateendra Theertharu(Sri Rangam)
Aradhana Tithi : Ashvija Krishna Dwadashi(Sep – Oct)
Address:
NSRS MUTT SRIRANGAM
No : 7,Raghavendra Puram,
Srirangam,
Trichy 620 006
Ph : 0431 2432981
Ph : 0431 2431416
Mob: +91 9585599494
Mob : +91 9751795500
**********
**********
ಶ್ರೀಮನ್ಮಧ್ವಾಚಾರ್ಯರ ಮಹಾಸಂಸ್ಥಾನ ಶ್ರೀರಾಘವೇಂದ್ರಗುರುಸಾರ್ವಭೌಮರ ಮಠಾಧೀಶರಾಗಿ ವಿದ್ವತ್ ಪ್ರಪಂಚಕ್ಕೆ ಅನುಪಮ ಕೊಡುಗೆ ನೀಡಿದ ಶ್ರೀಸುಮತೀಂದ್ರತೀರ್ಥ ಶ್ರೀಪಾದಂಗಳವರ ಆರಾಧನೆ ಇಂದು. ಪರಮಪೂಜ್ಯಶ್ರೀಸುಮತೀಂದ್ರರು, ಅವರ ಅಂತರ್ಯಾಮಿ ಶ್ರೀಪರಿಮಳಾಚಾರ್ಯರ ಅಂತರ್ಯಾಮಿ, ಶ್ರೀಪೂರ್ಣಪ್ರಜ್ಞರ ಅಂತರ್ಯಾಮಿ ಶ್ರೀಮೂಲರಾಮಚಂದ್ರದೇವರು ಹಾಗೂ ಶ್ರೀವೈಕುಂಠವಾಸುದೇವದೇವರು ಸರ್ವರನ್ನು ಅನುಗ್ರಹಿಸಲಿ
ಶ್ರೀಸುಮತೀಂದ್ರತೀರ್ಥರು ವಾಙ್ಮಯಲೋಕಕ್ಕೆ ನೀಡಿದ ಕೆಲವು ಕೊಡುಗೆಗಳು:
1. ಋಗ್ಭಾಷ್ಯಟೀಕಾ ಭಾವರತ್ನಕೋಶ
2. ಬ್ರಹ್ಮಸೂತ್ರಭಾಷ್ಯ ತತ್ತ್ವಪ್ರಕಾಶಿಕಾ ಭಾವರತ್ನಕೋಶ
3. ಸವ್ಯಾಖ್ಯಾ ಮಂತ್ರರತ್ನಕೋಶ ( ಮಹಾ ಮಂತ್ರಗಳ ಉದ್ಧಾರ )
4. ಗೀತಾಭಾಷಾ ಪ್ರಮೇಯದೀಪಿಕಾ ಭಾವರತ್ನಕೋಶ
5. ಸುಭದ್ರಾಪರಿಣಯ ನಾಟಕ ವ್ಯಾಖ್ಯಾನ
6. ಅಲಂಕಾರ ಮಂಜರೀ ವ್ಯಾಖ್ಯಾನ " ಮಧುಧಾರಾ "
7. ಉಷಾಹರಣ ಕಾವ್ಯ ವ್ಯಾಖ್ಯಾನ ( ರಸಿಕರಂಜನೀ )
8. ವ್ಯಾಸರಾಜ ವಿಜಯ ವ್ಯಾಖ್ಯಾನ
9. ಚಂದ್ರಿಕಾ ವ್ಯಾಖ್ಯಾನ
10. ನ್ಯಾಯಾಮೃತ ವ್ಯಾಖ್ಯಾನ
11. ಶ್ರೀ ರಾಘವೇಂದ್ರ ಸ್ತೋತ್ರ ವ್ಯಾಖ್ಯಾನಮ್
12. ರಾಜಸ್ತುತಿ:
13. ಯೋಗೀ೦ದ್ರ ತಾರಾವಲೀ
14. ರಾಮತಾರಾವಲೀ
15. ಅಧಿಕರಣರತ್ನಮಾಲಾ ( ಬ್ರಹ್ಮ ಮೀಮಾಂಸಾರ್ಥ ಬೋಧಕ ಗ್ರಂಥ )
16. ನರಸಿಂಹಸ್ತುತಿ ವ್ಯಾಖ್ಯಾನ ( ಏಕಾವಳೀ )
17. ವಾಕ್ಯಾರ್ಥರತ್ನಕೋಶ: ಸುಧಾ ಟಿಪ್ಪಣಿ ( ಪರಿಮಳಾನುಸಾರಿ )
18. ಹನುಮತ್ಪೂಜಾವಿಧಿ:
19. ಭೂಗೋಲ ಸಂಗ್ರಹಃ
20. ಶ್ರವಣ ದ್ವಾದಶೀ ವಿಷಯಕ ಪ್ರಮಾಣ ಸಂಗ್ರಹಃ
21. ಬ್ರಹ್ಮಸೂತ್ರ ನ್ಯಾಯ ಸಂಗ್ರಹ ವ್ಯಾಖ್ಯಾನ
( ಶ್ರೀ ಸುಧೀಂದ್ರತೀರ್ಥರ ಗ್ರಂಥಕ್ಕೆ ವ್ಯಾಖ್ಯಾನ )
22. ಅಷ್ಟ ಮಹಾಮಂತ್ರ ವಿವರಣಮ್
23. ಭಾವರತ್ನ ಮಂಡನಮ್
24. ಸಂಸ್ಕೃತ ಪತ್ರಿಕಾ ಜಾಲ:
25. ವಿರೋಧೋದ್ಧಾರಃ
26. ಸುವ್ಯಾಖ್ಯಾ ದೇವರಾಜ ಸ್ತುತಿ:
27. ಶ್ರೀ ರಾಘವೇಂದ್ರ ವಿಜಯ ವ್ಯಾಖ್ಯಾನಮ್
28. ಪ್ರಮಾಣ ಪದ್ಧತಿ ವ್ಯಾಖ್ಯಾನಮ್
29. ಭೇದೋಜ್ಜೀವನ ಟಿಪ್ಪಣಿ
30. ವಾದವಳೀ ಟಿಪ್ಪಣಿ
31. ತಂತ್ರಸಾರ ವ್ಯಾಖ್ಯಾನಮ್
32. ರಾಮ ದಂಡಕ:
33. ಯೋಗೀ೦ದ್ರವಿಜಯಃ
34. ಅಭಿನವ ಕಾದಂಬರೀ.
4 nov 2018 ಇಂದು ಪ್ರಾಥಸ್ಮರಣಿಯರಾದ ಶ್ರೀ ಸುಮತೀಂದ್ರತೀರ್ಥರ ಆರಾಧನೆ, ಶ್ರೀರಂಗ.
ಹೇಳವನಕಟ್ಟೆ ಗಿರಿಯಮ್ಮನವರಗೆ ಅನುಗ್ರಹಿಸಿದ ಶ್ರೀ ಸುಮತೀಂದ್ರರು..
ಒಮ್ಮೆ ಶ್ರೀ ಸುಮತೀಂದ್ರ ತೀರ್ಥರು ಮಲೇಬೆನ್ನೂರುಗೆ(ಧಾರವಾಡ ಜಿಲ್ಲೆ) ಆಗಮಿಸಿರುತ್ತಾರೆ,ಆಗಿನ ಸಂಪ್ರದಾಯಸ್ಥರು,ಗಿರಿಯಮ್ಮನನ್ನು ಬಂಜೆಯೆಂದು ಪರಿಗಣಿಸಿ,ಸ್ವಾಮಿಗಳೆದರು ಬರದಂತೆ ನಿರ್ಬಂಧ ಹಾಕಿದಾಗ ಅಪರೋಕ್ಷ ಜ್ಞಾನಿಗಳಾದ ಶ್ರೀ ಸುಮತೀಂದ್ರತೀರ್ಥರು ಗಿರಿಯಮ್ಮನನ್ನು ಕರೆಸಿ,ತೀರ್ಥ ನೀಡಿದರಂತೆ.ತೀರ್ಥ ಕೊಡುವಾಗ ,"ಯಾರು ಈಕೆಯನ್ನು ಬಂಜೆಯೆಂದು ಕರೆದದ್ದು?,ಇವರು ಬಾಲಕೃಷ್ಣನನ್ನು ಆಡಿಸಿದ ಯಶೋದೆಯ ಕೈ".. ಎಂದು ಅನುಗ್ರಹಿಸಿದರಂತೆ..
ಅಂದಿನಿಂದ ಅವರನ್ನು ಯಶೋದಾದೇವಿಯ ಅಂಶಾವತರವೆಂದು ಪ್ರತೀತಿ ಬಂದಿದೆ.ಆ ನಂತರದಲ್ಲಿ ಗಿರಿಯಮನನ್ನು ವಿಶೇಷವಾಗಿ ಅನುಗ್ರಹಿಸಿದರು,ವಿಜಯದಾಸರ ಶಿಷ್ಯರು ಆದ ,ಭಕ್ತಿಯಲ್ಲಿ ಭಾಗಣ್ಣ ಎಂದೆ ಖ್ಯಾತರಾದ,ಅಪರೋಕ್ಷ ಜ್ಞಾನಿ ಗಳಾದ ಶ್ರೀ ಗೋಪಾಲದಾಸರು ಉಡುಪಿ ಯಾತ್ರಾಗೆ ಹೋಗುವಾಗ ಮಲೇಬೆನ್ನುರಿಗೆ ಆಗಮಿಸಿ ಗಿರಿಯಮ್ಮನವರಿಗೆ ಶ್ರೀ ಬಾಲ ಮೂರ್ತಿಯನ್ನು ಹಾಗೂ ಅಂಕಿತವನ್ನು ನೀಡಿದರಂತೆ,ಆ ನಂತರ ಆಕೆಗೆ "ಹೇಳವನಕಟ್ಟೆ ರಂಗ" ಎನ್ನುವ ಅಂಕಿತದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ...
ಶ್ರೀ ಸುಮತೀಂದ್ರ ತೀರ್ಥರಿಗೆ ಒಲಿದ ಶ್ರೀ ನೀಲಾದೇವಿ ಕರಾರ್ಚಿತ ಶ್ರೀಭೂದುರ್ಗಾ ಸಮೇತ ವೈಕುಂಠ ವಾಸುದೇವರು, ಇಂದಿಗೂ ಈ ಪ್ರತಿಯೆಯನ್ನು ನಾವು ಶ್ರೀಮಠದಲ್ಲಿ ಕಾಣಬಹುದು..
ಪೂರ್ಣಪ್ರಜ್ಞಮತಾ೦ಬೊಧಿ ಪೂರ್ಣೇ೦ದುಮಕಲ೦ಕಿನ೦
ಸುಜನಾ೦ಬುದಿಭಾಸ್ವ೦ತ೦ ಸುಮತೀ೦ದ್ರ ಗುರು೦ ಭಜೇ ||...
ಪತಿವ್ರತೆಯರ ವ್ರತವ ಅಳಿದಂಥ ಕೈಗೆ
ಹಿತವಾಜಿಯನೇರಿ ಮರ್ದಿಸಿದ ಕೈಗೆ
ಪತಿ ಶಿರೋಮಣಿ ಲಕ್ಷ್ಮೀ ಕಾಂತನ ಕೈಗೆ
ಚತುರ ಹೆಳವನ ಕಟ್ಟೆ ರಂಗನ ಕೈಗೆ... ತಾ ಗುಬ್ಬಿ.. ತಾ ಗುಬ್ಬಿ...
ಹೊನ್ನು ತಾ ಗುಬ್ಬಿ ಹೊನ್ನು ತಾ
ಚಿನ್ಮಯ ಮೂರುತಿ ಚೆಲುವ ರಂಗನ ಕೈಗೆ
ಹೊನ್ನು ತಾ ಗುಬ್ಬಿ ಹೊನ್ನು ತಾ..
*******
*******
||ಪೂರ್ಣಬೋಧಮತಾಂಬೋಧಿಪೂರ್ಣೇಂದ ುಮಕಲಂಕಿನಮ್||
||ಸುಜನಾಂಬುಧಿಭಾಸ್ವಂತಂ ಸುಮತೀಂದ್ರಗುರುಂ ಭಜೇ||
*******||ಸುಜನಾಂಬುಧಿಭಾಸ್ವಂತಂ ಸುಮತೀಂದ್ರಗುರುಂ ಭಜೇ||
ಶ್ರೀಂ ಶ್ರೀ ಕಂ ಕಪಿಲಾಯ ನಮಃ
ಪೂರ್ಣಪ್ರಜ್ಞಮತಾಂಭೋಧಿ ಪೂರ್ಣೇಂದುಮಕಲಂಕಿನಂ/
ಸುಜನಾಂಬುಧಿಭಾಸ್ವಂತಂ ಸುಮತೀಂದ್ರಗುರುಂ ಭಜೇ//
ಸಲಹು ಸುಖತೀರ್ಥಮತ ಜಲಧಿ ಚಂದ್ರ
ನಳಿನೀಶಾರ್ಚಕ ಇಂದ್ರ ಇಳಿಗೆ ಸುಮತೀಂದ್ರ ಸಲಹು
- ಶ್ರೀ ಪ್ರಸನ್ನವೇಂಕಟ ದಾಸರು
ಕುಮತವೆಂಬಗಣಿತ
ತಿಮಿರ ಓಡಿಸುವಲ್ಲಿ
ಕಮಲಾಪ್ತನಂತಿಹ
ಸುಮತೀಂದ್ರತೀರ್ಥಾ..
ಶ್ರೀ ಪ್ರಾಣೇಶದಾಸಾರ್ಯರು
ಸ್ವಯಂ ಶ್ರೀಮದ್ರಾಘವೇಂದ್ರ ತೀರ್ಥ ಗುರುಸಾರ್ವಭೌಮರಿಂದಲೇ ವಿದ್ಯೆಯನ್ನು ಅಭ್ಯಾಸ ಮಾಡಿದ (ಅಧ್ಯಯನ ಮಾಡಿದ), ಅಪಾರ ಜ್ಞಾನ ಸಂಪನ್ನರು, ಮಹಾನ್ ಚೇತನರು, ಯೋಗೀಂದ್ರತೀರ್ಥರ, ಉಪೇಂದ್ರತೀರ್ಥರ , ಸೂರೀಂದ್ರ ತೀರ್ಥರಂತಹಾ ಮಹಾನ್ ಯತಿಗಳ ಸಹೋದರರೂ ಆದ, 16ನೇ ಶತಮಾನದ ಪರಮಶ್ರೇಷ್ಠ ಯತಿಗಳು, ಬಿರುದಾವಳೀ ನಾರಾಯಣೀಯ ಗಾಧಾ ಪ್ರಬಂಧ, ತಂತ್ರಸಾರ ವ್ಯಾಖ್ಯಾನ
ವಾದಾವಳಿ ಟಿಪ್ಪಣಿ
ಚಂದ್ರಿಕಾ ಟಿಪ್ಪಣಿ, ಮೊದಲಾದ 40 ಮೇಲಿನ ಅದ್ಭುತವಾದ ಗ್ರಂಥಗಳ ರಚನೆ ಮಾಡಿದವರಾದ, ಶ್ರೀ ಸುಮತೀಂದ್ರ ತೀರ್ಥರ ಆರಾಧನೆ ಇಂದಿನಿಂದ ಮೂರುದಿನ ಶ್ರೀರಂಗಂ, ತಮಿಳುನಾಡುಲಿ.....
ಶ್ರೀ ಸುಮತೀಂದ್ರ ತೀರ್ಥರ ಅನುಗ್ರಹ ಸದಾ ನಮ್ಮ ಎಲ್ಲರಮೇಲಿರಲಿ ಎಂದು ಪ್ರಾರ್ಥನೆ ಮಾಡುತ್ತಾ....
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽
***
ಶ್ರೀಂ ಶ್ರೀ ಕಂ ಕಪಿಲಾಯ ನಮಃ
ಪೂರ್ಣಪ್ರಜ್ಞಮತಾಂಭೋಧಿ ಪೂರ್ಣೇಂದುಮಕಲಂಕಿನಂ/
ಸುಜನಾಂಬುಧಿಭಾಸ್ವಂತಂ ಸುಮತೀಂದ್ರಗುರುಂ ಭಜೇ//
ಸಲಹು ಸುಖತೀರ್ಥಮತ ಜಲಧಿ ಚಂದ್ರ
ನಳಿನೀಶಾರ್ಚಕ ಇಂದ್ರ ಇಳಿಗೆ ಸುಮತೀಂದ್ರ ಸಲಹು
- ಶ್ರೀ ಪ್ರಸನ್ನವೇಂಕಟ ದಾಸರು
ಕುಮತವೆಂಬಗಣಿತ
ತಿಮಿರ ಓಡಿಸುವಲ್ಲಿ
ಕಮಲಾಪ್ತನಂತಿಹ
ಸುಮತೀಂದ್ರತೀರ್ಥಾ..
ಶ್ರೀ ಪ್ರಾಣೇಶದಾಸಾರ್ಯರು
ಮಾರುತ ಮಧ್ವಶಾಸ್ತ್ರ
ವಾರಿಧಿ ಮೀನರೆನಿಸೆ
ಸೂರೀಂದ್ರ ಮುನಿವರರು
ಧಾರುಣಿ ಸುತ್ತೆ ವಲ್ಲಭಾಂಘ್ರಿಯ
ವಾರಿಜಂಗಳ ನೆನೆದು ಕೋವಿದ
ಸೇರ್ದ ಸಭೆಯೊಳು ಸುಮತೀಂ-
ದ್ರರೆಂದು ಚಾರು ಸಂನ್ಯಾಸ
ನೀಡೆ ಮೆರೆದಂಥ
ಶ್ರೀ ಲಕುಮೀಶರು
ಸ್ವಯಂ ಶ್ರೀಮದ್ರಾಘವೇಂದ್ರ ತೀರ್ಥ ಗುರುಸಾರ್ವಭೌಮರಿಂದಲೇ ವಿದ್ಯೆಯನ್ನು ಅಭ್ಯಾಸ ಮಾಡಿದ (ಅಧ್ಯಯನ ಮಾಡಿದ), ಅಪಾರ ಜ್ಞಾನ ಸಂಪನ್ನರು, ಮಹಾನ್ ಚೇತನರು, ಯೋಗೀಂದ್ರತೀರ್ಥರ, ಉಪೇಂದ್ರತೀರ್ಥರ , ಸೂರೀಂದ್ರ ತೀರ್ಥರಂತಹಾ ಮಹಾನ್ ಯತಿಗಳ ಸಹೋದರರೂ ಆದ, 16ನೇ ಶತಮಾನದ ಪರಮಶ್ರೇಷ್ಠ ಯತಿಗಳು, ಬಿರುದಾವಳೀ ನಾರಾಯಣೀಯ ಗಾಧಾ ಪ್ರಬಂಧ ಮೊದಲಾದ ಅದ್ಭುತವಾದ ಗ್ರಂಥಗಳ ರಚನೆ ಮಾಡಿದವರಾದ, ಅಲ್ಲದೇ ಹರಿದಾಸಿ ತಾಯಿ ಹೆಳವನಕಟ್ಟಿ ಗಿರಿಯಮ್ಮನವರನ್ನು ಯಶೋದೆ ಎಂದೇ ಕರೆದು ಅವರಿಗೆ ಅನುಗ್ರಹ ಮಾಡಿದವರಾದ ಶ್ರೀ ಸುಮತೀಂದ್ರ ತೀರ್ಥರ ಆರಾಧನಾ ಶುಭಸ್ಮರಣೆಗಳು....
ಶ್ರೀ ಸುಮತೀಂದ್ರ ತೀರ್ಥರ ಅನುಗ್ರಹ ಸದಾ ನಮ್ಮ ಎಲ್ಲರಮೇಲಿರಲಿ ಎಂದು ಪ್ರಾರ್ಥನೆ ಮಾಡುತ್ತಾ.... 🙏🏽
ಮಗುವಿನ ಹೆಸರು ಮುದ್ದುವೆಂಕಟ ಕೃಷ್ಣ. ಹೆಸರಿಗೆ ತಕ್ಕಂತೆ ತುಂಬಾ ಮುದ್ದಾಗಿದ್ದರು. ಶಾಸ್ತ್ರ ಧರ್ಮಗಳಲ್ಲಂತೂ ಅತೀವ ಭಕ್ತಿ, ವಿಶ್ವಾಸ. ಜ್ಞಾನದಾಹಿಯೂ, ಮೇಧಾವಿಯೂ, ಸೂಕ್ಷ್ಮ ಹಾಗೂ ಅತೀ ಕ್ಲಿಷ್ಟ ವಿಷಗಳ ಶೀಘ್ರಗ್ರಾಹಿಯೂ ಆದ ಆ ಕೂಸಿನ ಮೇಲೆ ವಿಶೇಷ ಆಸಕ್ತಿ ಹಾಗೂ ಅಚ್ಚುಮೆಚ್ಚು ನಮ್ಮ ಮಂತ್ರಾಲಯ ಪ್ರಭುಗಳಿಗೆ.
ತೊಡೆಯ ಮೇಲೆ ಕೂಡಿಸಿಕೊಂಡೇ ತಲೆ ಸವರುತ್ತಾ ಪಾಠ ಹೇಳುತ್ತಿದ್ದರು. ಎಂತಹ ಭಾಗ್ಯಶಾಲಿಯಲ್ಲವೇ ಆ ಕೂಸು. ಹಾಗೇ ರಾಯರ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾಗಿ, ಶಾಸ್ತ್ರ, ಜ್ಞಾನ, ತತ್ವ, ಮೀಮಾಂಸ, ವ್ಯಾಕರಣ ಹೀಗೆ ಸಕಲ ಶಾಸ್ತ್ರಗಳನ್ನೂ ಸಿದ್ಧ ಜ್ಞಾನವನ್ನು ಹೊಂದಿ ರಾಯರ ಅನುಗ್ರಹಕ್ಕೆ ಪಾತ್ರರಾದ ಶ್ರೀಸೂರೀಂದ್ರ ತೀರ್ಥರಿಂದ (ರಾಯರ ಸೂಚನೆಯಂತೆಯೇ) ಆಶ್ರಮ ಸ್ವೀಕರಿಸಿ ಶ್ರೀಸುಮತೀಂದ್ರ ತೀರ್ಥರೆಂದು ಪ್ರಸಿದ್ಧಿ ಹೊಂದಿದರು.
ಸಂಚಾರತ್ವೇನ ಅರಣಿ ಎಂಬುವ ಸ್ಥಳಕ್ಕೆ ಬಂದಾಗ, ಅಲ್ಲಿಯ ಜಹಗೀರುದಾರನಾದ ಸುಭಾನುರಾಯನೆಂಬುವನು ಜೋತಿಷ್ಮತಿ ಎನ್ನುವ ತೈಲ ಪಾನ ಮಾಡಿ ತಾನೊಬ್ಬ ಮಹಾಪಂಡಿತ ಎಂದು ಹೇಳಿ ಕೊಳ್ಳುತ್ತಿದ್ದ. ಹೇಗೋ ಈ ಶ್ರೀಗಳು ತರುಣರು, ಅರಮನೆಗೆ ಕರೆಸಿ ಸತ್ಕರಿಸಿ, ವಾದದಲ್ಲಿ ಸೋಲಿಸಿ ಮತ್ತೂ ಮೆರೆಯಬಹುದೆಂದು ಯೋಚಿಸಿ, ಕರೆದು ಸರ್ಕರಿಸಿದ ಮೇಲೆ, ವ್ಯಾಕರಣದ ಮೇಲೆ ವಾದಕ್ಕೆ ಕರೆದ. ನಿಜವಾಗಿಯೂ ಆರು ಶಾಸ್ತ್ರಗಳನ್ನು ಅರಗಿಸಿಕೊಂಡವನಾದ್ದರಿಂದ ಅವನ ಒಂದೊಂದೆ ಪ್ರಶ್ನೆಗಳಿಗೆ ಸಮರ್ಪಕ ರೀತಿಯಲ್ಲಿ ಉತ್ತರಿಸಿ ಶ್ರೀಗಳು ಅವನ ವಾದಗಳನ್ನೆಲ್ಲ ಕತ್ತರಿಸಿ ದುರ್ಬಲರನ್ನಾಗಿ ಮಾಡಿದರು. ಈ ವಾದ ಎಂಟು ದಿನಗಳಚರೆಗೆ ನಡೆದ ಮೇಲೆ, ಆತ ತಾವು ಕವಿತಾರಚನೆಯಲ್ಲಿ ಸ್ಪರ್ಧಿಸುವಿರಾ? ಎಂದು ಕೇಳಿದ.
ಅದಕ್ಕೆ ನಗುತ್ತಾ ಶ್ರೀಗಳು, ನಾವೇನೂ (ಕಾಳಿದಾಸನಂತೆ) ಕಾಳಿಯನ್ನು ಆರಾಧಿಸಲಿಲ್ಲ,( ನಿಮ್ಮ ಹಾಗೆ) ಜೋತಿಷ್ಮತಿ ಪಾನ ಮಾಡಲಿಲ್ಲ, ಇನ್ನೊಬ್ಬರಿಂದ ಶಬ್ಧಚೌರ್ಯ ಮಾಡಿಲ್ಲ, ಹಾಗಿದ್ದರೂ ಕಾವ್ಯ ರಚಿಸಬಲ್ಲೆವು ಎಂದು ಹೇಳಿದರಂತೆ. ಕಾವ್ಯರಚನೆಯಲ್ಲಿಯೂ ಆಳವಾದ ಜ್ಞಾನ ಹೊಂದಿದ ಶ್ರೀಗಳವರು ಸುಭಾನುರಾನನ್ನು ನಿರುತ್ತರರನ್ನಾಗಿ ಮಾಡಿದರು. ಶ್ರೀಗಳವರ ಪ್ರತಿಭೆ, ವರ್ಚಸ್ಸು , ಜ್ಞಾನಕ್ಕೆ ಶರಣಾಗಿ, ಎಲ್ಲ ಮಠಗಳಲ್ಲೂ ಯತಿಗಳಿದ್ದಾರೆ, ಆದರೆ ನಿಮ್ಮನ್ನು ಸರಿಗಟ್ಟುವವರನ್ನು ನಾ ಕಾಣೆ ಎಂದು ಹೇಳಿ ತನ್ನ ಭಕ್ತಿ ದ್ಯೋತಕ ಆಗಿ ರಾಹುಕೇತು ಎಂಬ ವಿಶಿಷ್ಟ ವಾದ್ಯವನ್ನೂ ಚಿತ್ರಾಸನದ್ವಯವನ್ನೂ ಅರ್ಪಿಸಿದ.
ಮಧುರೆಯ ಸಂಸ್ಥಾನವನ್ನು ಆಳುತ್ತಿದ್ದ ರಾಣಿ ಮಂಗಮ್ಮ ವಿದ್ಯಾಪಕ್ಷಪಾತಿ, ಮತತ್ರಯರ ವಾಕ್ಯಾರ್ಥವಾಗಬೇಕೆಂದು ಆಶಿಸಿ ವ್ಯವಸ್ಥೆ ಮಾಡಿದಳು. ಮಾಧ್ವರ ಪರವಾಗಿ ವ್ಯಾಸರಾಜರ ಮತ್ತು ಉತ್ತರಾಧಿಮಠದ ಯತಿಗಳೂ ಶ್ರೀಸುಮತೀಂದ್ರ ಜೊತೆ ಆಗಮಿಸಿದರು. ಅದ್ವೈತ ಪಂಡಿತೊಬ್ಬರಿಂದ ಪೂರ್ವಪಕ್ಷ ಆರಂಭವಾಗಿ ಶ್ರೀಸುಮತೀಂದ್ರ ತೀರ್ಥರೇ ಹೆಚ್ಚಿಗೆ ಸ್ಪಂದಿಸಿ ಅವರ ಎಲ್ಲಾ ಪೂರ್ವ ಪಕ್ಷಗಳನ್ನೂ ಖಂಡಿಸಿ ನಿರುತ್ತರರನ್ನಾಗಿ ಮಾಡಿದರು. ಶ್ರೀಗಳವರ ಪ್ರತಿಭೆಗೆ ಅಲ್ಲಿದ್ದವರೆಲ್ಲಾ ಮಾರುಹೋಗಿ, ರಾಣಿ ಮಂಗಮ್ಮನಿಗೂ ಅವರ ಮೇಲೆ ಅಪಾರ ಭಕ್ತಿ ಭಾವ ಹೆಚ್ಚಾಗಿ ಅರಮನೆಯ ಭಂಡಾರದಲ್ಲಿದ್ದ ನವರತ್ನ ಖಚಿತವಾದ "ವೈಕುಂಠ ವಾಸುದೇವರ" ಪ್ರತಿಮೆಯನ್ನು ಸಮರ್ಪಿಸಿದಳು.
ಹೀಗೆ ಶ್ರೀಗಳವರು ಸಂಚಾರತ್ವೇನ ಹೋದಲೆಲ್ಲಾ ತಮ್ಮ ಜ್ಞಾನದ ವರ್ಚಸ್ಸನ್ನು ಬೀರಿದರು.
ಹೆಳವನಕಟ್ಟೆಗೆ ಬಂದು ಅಲ್ಲಿ ಇದ್ದ ಭಗವಂತನ ಭಕ್ತೆ, ಆತನ ಅನುಗ್ರಹಕ್ಕೆ ಪಾತ್ರಳಾದ ಗಿರಿಯಮ್ಮನ ಬಗ್ಗೆ ಆಕೆ ದೇವರನ್ನೇ ಕೂಸಾಗಿ ಆಡಿಸುವಳೆಂಬುದನ್ನು ಮೊದಲೇ ತಿಳಿದಿದ್ದರು ಜ್ಞಾನಿಗಳಾದ ಶ್ರೀಗಳವರು. ಶ್ಯಾನುಭೋಗರ ಮನೆಯಲ್ಲಿ ಶ್ರೀಮನ್ಮೂಲರಾಮದೇವರ ಪೂಜೆಯ ಸಮಯದಲ್ಲಿ ಗಿರಿಯಮ್ಮ ಭಕ್ತಿಪರವಶದಿಂದ "ರಾಮ ರಘುನಂದನ ಕೌಸಲ್ಯ ರಾಮ,ಮದನಕೋಟಿ ಮೋಹನಾಂಗ, ಮಾಧವ ಪುಣ್ಯಚರಿತ ಕರುಣಾಪಾಂಗ,
ಕದ್ದನ ವಿಕ್ರಮ, ಬಾಹುಧೃತಕೋದಂಡ, ಸದಾನಂದ ಸುಮತೀಂದ್ರ ಹೃದಯ ಪಂಕಜಭೃಂಗ" ಎಂದು ಹಾಡಿದಳು. ಆದಿನ ಶ್ರೀಗಳವರು ಪ್ರಥಮತಃ ಗಿರಿಯಮ್ಮನಿಗೇ ತೀರ್ಥ , ಮಂತ್ರಾಕ್ಷತೆ ಕೊಟ್ಟು ಅನುಗ್ರಹಿಸಿದರು.
ಹೀಗೇ ಸಂಚಾರದಲ್ಲೆಲ್ಲಾ ತಮ್ಮ ಜ್ಞಾನ, ವ್ಯಕ್ತಿತ್ವಗಳಿಂದ ಸಜ್ಜನರ ಮನಸೂರೆ ಮಾಡುತ್ತಾ, ಪರವಾದಿಗಳನ್ನು ಜಯಿಸುತ್ತಾ, ಮಧ್ವಮತದ ಪತಾಕೆಯನ್ನು ಎಲ್ಲೆಡೆಯೂ ಹಾರಿಸುತ್ತಿದ್ದರು. ಇವುಗಳ ಜೊತೆಗೆ ಅನೇಕ ಗ್ರಂಥಗಳನ್ನೂ ರಚಿಸಿ ಜ್ಞಾನ ಪ್ರಪಂಚಕ್ಕೆ ಅತ್ಯಂತ ಉಪಕಾರವನ್ನು ಮಾಡಿದ್ದಾರೆ.
(ಆತ್ಮೀಯರ ಲೇಖನ)
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽
****
"ಅಮಿತಮತಿ ಶ್ರೀಸುಮತೀಂದ್ರತೀರ್ಥರು"
ಶ್ರೀಹಂಸನಾಮಕನ ಸಾಕ್ಷಾತ್ ಪರಂಪರೆಯಲ್ಲಿ ಶ್ರೀಪದ್ಮನಾಭತೀರ್ಥರ- ಶ್ರೀಜಯತೀರ್ಥರ-ಶ್ರೀಕವೀಂದ್ರತೀರ್ಥರ ಪರಂಪರೆಯಲ್ಲಿ ಉದಿಸಿದ ಪೂರ್ಣಪ್ರಜ್ಞಮತದ ಪೂರ್ಣಚಂದ್ರಮರೇ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದ ವಿಭೂತಿಪುರುಷ ಶ್ರೀಸುಮತೀಂದ್ರ ತೀರ್ಥರು.
ಶ್ರೀಮದಾಚಾರ್ಯರ ಸತ್ಪರಂಪರೆಯ ಇತಿಹಾಸದಲ್ಲಿಯೇ ವಿಶಿಷ್ಟಸ್ಥಾನವನ್ನು ಆಚಂದ್ರಾರ್ಕಪರ್ಯಂತ ಪಡೆದ ಅಪ್ರತಿಮ ಪ್ರತಿಭಾ ಸಂಪನ್ನ ಶಕಪುರುಷರು ಶ್ರೀಸುಮತೀಂದ್ರ ತೀರ್ಥರು.
ಶ್ರೀರಾಘವೇಂದ್ರ ಗುರುಸಾರ್ವಭೌಮರ ವಂಶೋದ್ಭವರಾದ ಶ್ರೀಗಳು ಶ್ರೀಮನ್ನ್ಯಾಯಸುಧಾದಿ ಉದ್ಗ್ರಂಥಗಳ ಪಾಠವನ್ನು ಸಾಕ್ಷಾತ್ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ ಪದತಲದಲ್ಲಿ ಕುಳಿತು ಕೇಳಿದ ಗುರುರಾಜರ ಸಾಕ್ಷಾತ್ ಶಿಷ್ಯರು.
ಪೂರ್ವಾಶ್ರಮ ಹಾಗೂ ವಿದ್ಯಾಭ್ಯಾಸ
ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರ ಪೂರ್ವಾಶ್ರಮ ಅಣ್ಣಂದಿರಾದ ಶ್ರೀಗುರಾಜಾಚಾರ್ಯರ ಮಕ್ಕಳೇ ಶ್ರೀವೆಂಕಟನಾರಾಯಣಾಚಾರ್ಯರು. ಅವರಿಗೆ ಐದು ಜನ ಗಂಡು ಮಕ್ಕಳು.
ಶ್ರೀವೇಂಕಣ್ಣಾಚಾರ್ಯರು,
ಶ್ರೀವಾಸುದೇವಾಚಾರ್ಯರು,
ಶ್ರೀಮುದ್ದುವೇಂಕಟಕೃಷ್ಣಾಚಾರ್ಯರು,
ಶ್ರೀವಿಜಯೀಂದ್ರಾಚಾರ್ಯರು ಹಾಗು
ಶ್ರೀಗರುಡವಾಹನ ಲಕ್ಷ್ಮೀನಾರಾಯಣಾಚಾರ್ಯರು ಎಂದು.
ಅವರೆಲ್ಲ ಕ್ರಮವಾಗಿ
ಶ್ರೀಯೋಗೀಂದ್ರತೀರ್ಥರು ,
ಶ್ರೀಸೂರೀಂದ್ರತೀರ್ಥರು,
ಶ್ರೀಸುಮತೀಂದ್ರತೀರ್ಥರು,
ಶ್ರೀಉಪೇಂದ್ರತೀರ್ಥರು,
ಶ್ರೀಮುನೀಂದ್ರತೀರ್ಥರೆಂದು ಯತ್ಯಾಶ್ರಮ ಸ್ವೀಕರಿಸಿ ವೈರಾಗ್ಯಕ್ಕೆ ಹೆಸರಾದವರು.
ಇವರಲ್ಲಿ ನಾಲ್ಕು ಜ್ಞಾನ ಶ್ರೀಮದಾಚಾರ್ಯರ ಪೀಠವನ್ನೇರಿದರೇ ಶ್ರೀಮುನೀಂದ್ರತೀರ್ಥರು ಬಿಡಿ ಸಂನ್ಯಾಸಿಗಳಾಗಿಯೇ ಇದ್ದು ಪೀಠಾಧಿಪತಿಗಳಾಗಲಿಲ್ಲ.
ಶ್ರೀರಾಘವೇಂದ್ರವಿಜಯವು,
ಜನಕೋಪಮಕನ್ಯಕೇsನ್ವಯೇsಸ್ಮಿನ್ನಿಜತಾತಾಧಿಕನಂದನೇ ಗುಣೌಘೈಃ ।
ಅನುಜಾತಸಮಾನಪೂರ್ವಜಾತೇsಭವದೇಕೋ ಭುವಿಕೃಷ್ಣನಾಮಧಾಮಾ ।।
- -(ಶ್ರೀರಾಘವೇಂದ್ರವಿಜಯ)
ಎಂದು ಉಲ್ಲೇಖಿಸುವಂತೆ, ತಂದೆಯನ್ನೇ ಮೀರಿಸುವ ಮಕ್ಕಳು, ಗುಣಗಳಲ್ಲಿ ಅಣ್ಣನ ಸಮಾನನೆನಿಸುವ ತಮ್ಮಂದಿರು ಆ ವಂಶದಲ್ಲಿ ಅವತರಿಸುವವರು ಎಂಬ ಮಾತಿನಂತೆ ಎಲ್ಲರೂ ವಿಶಿಷ್ಟಪಾಂಡಿತ್ಯಪೂರ್ಣರೂ, ಗ್ರಂಥಕಾರರು ಎನ್ನುವುದು ವಿಶೇಷ.
ಪಾಂಡವರಂತಿದ್ದ ಈ ಐವರಲ್ಲಿ ಮಧ್ಯಮಪಾಂಡವನಂತೆ ವಿಲಕ್ಷಣಕೀರ್ತಿಸಂಪನ್ನರಾದವರು ಶ್ರೀಮುದ್ದುವೆಂಕಟಕೃಷ್ಣಾಚಾರ್ಯರು. ಇವರೇ ಗುರುರಾಜರ ಇಚ್ಛೆ ಹಾಗೂ ಆದೇಶದಂತೆ ಶ್ರೀಸೂರೀಂದ್ರತೀರ್ಥರಿಂದ ಚತುರ್ಥಾಶ್ರಮ ಸ್ವೀಕರಿಸಿ, ಶ್ರೀಮದಾಚಾರ್ಯರ ಮೂಲಪರಂಪರೆಯ ೨೦ನೇ ಪೀಠಾಧೀಶ್ವರರಾಗಿ ಶ್ರೀಸುಮತೀಂದ್ರತೀರ್ಥರಾದರು.
ಶ್ರೀರಾಘವೇಂದ್ರಸ್ವಾಮಿಗಳವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದ ಶ್ರೀಸುಮತೀಂದ್ರತೀರ್ಥರ ಬಗ್ಗೆ ಸ್ವತಃ ಶ್ರೀರಾಘವೇಂದ್ರಗುರುಸಾರ್ವಭೌಮರೇ ಹೇಳಿದ ರೋಮಾಂಚಕಾರೀ ಮಾತುಗಳನ್ನು ಶ್ರೀರಾಘವೇಂದ್ರವಿಜಯವು ದಾಖಲಿಸುತ್ತದೆ.
ಪರಿಮಳಾದಿ ಅನೇಕ ಗ್ರಂಥಗಳನ್ನು ಯಾವ ಕಾರಣಕ್ಕಾಗಿ ರಚನೆ ಮಾಡಿದ್ದಾರೆಂಬ ಪ್ರಶ್ನೆಗೆ, ಶ್ರೀಗುರುರಾಜರು,
ಭಾವ್ಯಸಂಶಯಮಹೋ ಗುರುವಂಶೇ ದರ್ಶನಶೃತಿಪರಸ್ಸುಮತೀಂದ್ರ: ।
ತಸ್ಯ ಸಾರ್ಥಕಮಿದಂ ಸಕಲಂ ಸ್ಯಾದಿತ್ಯವೇತ್ಯ ಕೃತವಾನ್ ಕೃತಸಾರ್ಥಂ।।
- ಶ್ರೀರಾಘವೇಂದ್ರವಿಜಯ ( ೮-೧೩ )
"ನಮ್ಮ ಈ ಗುರುಪರಂಪರೆಯಲ್ಲಿ ಗ್ರಂಥಾವಲೋಕನ ಮತ್ತು ಮಧ್ವಶಾಸ್ತ್ರಗಳಲ್ಲಿಯೇ ಸದಾ ಆಸಕ್ತರಾದ ಶ್ರೀಸುಮತೀಂದ್ರತೀರ್ಥರು ನಿಸ್ಸಂಶಯವಾಗಿ ಬರಲಿರುವರು, ಅವರು ವ್ಯಾಸಮಧ್ವರ ಸೇವೆಗೆ ಈ ಗ್ರಂಥಸಮೂಹವು ಪ್ರಯೋಜನಕರವಾಗಿರಲಿವೆ."
ಎಂದು ಭವಿಷ್ಯವಾಣಿಯಿಂದ ಶ್ಲಾಘಿತರಾದವರು ಶ್ರೀಸುಮತೀಂದ್ರತೀರ್ಥ ಗುರುಸಾರ್ವಭೌಮರು. ಶ್ರೀಗುರುಸಾರ್ವಭೌಮರಿಂದ ಇಂತಹ ಪರಮಾನುಗ್ರಹಕ್ಕೆ ಪಾತ್ರರಾದವರೆಂದರೇ, ಶ್ರೀಗುರುಸಾರ್ವಭೌಮರು ಹೇಳಿದ ಇದೊಂದೇ ಮಾತು ಸಾಕು ಇವರ ಮಹಾಮಹಿಮಯನ್ನು ತಿಳಿಸಲು.
ಅಂತಹ ಮಹಾನ್ ಕೀರ್ತಿಗೆ ಭಾಜನರಾದ ಸುಮತೀಂದ್ರತೀರ್ಥರು (ಶ್ರೀಮುದ್ದುವೇಂಕಟಕೃಷ್ಣಾಚಾರ್ಯರು) ಪರಮಶ್ರೇಷ್ಠ ವಿದ್ವಾಂಸರ ಮನೆತನದಲ್ಲಿ ಅವತರಿಸಿ ಸಹಜವಾಗಿಯೇ ಪ್ರತಿಭಾಸಂಪನ್ನರಾಗಿದ್ದವರು.
ಪ್ರಾಥಮಿಕ ವಿದ್ಯಾಭ್ಯಾಸ ಅವರ ತಂದೆಗಳಲ್ಲಿಯೇ ಆಯಿತು.
ಇವರನ್ನೇ ಶ್ರೀಸುಮತೀಂದ್ರತೀರ್ಥರು ತಮ್ಮ ಗ್ರಂಥಗಳಲ್ಲಿ,
ಭೂರೀಮನೀಷಾಗಮಚಿತಕರಣಾನ್
ಶ್ರೀಜಯತೀರ್ಥವ್ರತಿಕೃತಿಶರಣಾನ್ ।
ಸಂತತಮೀಡೇ ಸುಚರಿತಚಾರಣಾನ್
ವೇಂಕಟನಾರಾಯಣಗುರುಚರಣಾನ್ ।।
"ಶ್ರೇಷ್ಠವಾದ ವೇದಾರ್ಥಗಳಲ್ಲಿ ಪರಿಪೂರ್ಣವಾದ ಜ್ಞಾನವುಳ್ಳವರಾದ, ಶ್ರೀಮಟ್ಟೀಕಾಕೃತ್ಪಾದರ ಗ್ರಂಥಗಳಲ್ಲೇ ಆಸಕ್ತರಾಗಿ ಅವರಲ್ಲೇ ಶರಣುಹೊಂದಿದವರಾದ, ಅಂತಹ ಸುಚರಿತಚರಣರಾದ ಶ್ರೀವೇಂಕಟನಾರಾಯಣಾಚಾರ್ಯರೆಂಬ ಗುರುಚರಣರನ್ನೇ ನಾವು ಸಂತತವಾಗಿ ಆಶ್ರಯಿಸುತ್ತೇವೇ."
ಎಂದು ತಮಗೆ ಬಾಲ್ಯದಲ್ಲಿ ಪಾಠ ಹೇಳಿದ ತಮ್ಮ ಪೂರ್ವಾಶ್ರಮ ಪಿತೃಪಾದರನ್ನು ಅತ್ಯಂತ ಗೌರವಪೂರ್ಣವಾಗಿ ತಮ್ಮ ಪ್ರಮೇಯದೀಪಿಕಾ-ಭಾವರತ್ನಕೋಶದ ಹಾಗೂ ತತ್ತ್ವಪ್ರಕಾಶಿಕಾ-ಭಾವರತ್ನಕೋಶದ ಮುಂತಾದ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ.
ಶ್ರೀಸುಮತೀಂದ್ರತೀರ್ಥರ ಉನ್ನತ ವಿದ್ಯಾಭ್ಯಾಸ ಸಾಕ್ಷಾತ್ ಶ್ರೀಗುರುಸಾರ್ವಭೌಮರಲ್ಲಿಯೇ ಆಯಿತು.
ತಮಗೆ ಶ್ರೀಮನ್ನ್ಯಾಯಸುಧಾದಿ ಉದ್ಗ್ರಂಥಗಳ ಪಾಠ ಹೇಳಿದ ಮಂತ್ರಾಲಯಪ್ರಭುಗಳನ್ನು ಶ್ರೀಸುಮತೀಂದ್ರರು,
ಸುಧಾವ್ಯಾಖ್ಯಾದಿಭಿಃ ಸರ್ವಸಜ್ಜನೋದ್ಧಾರತತ್ಪರಾನ್ ।
ರಾಘವೇಂದ್ರಗುರೂನ್ ವಂದೇ ಮಾಮ ವಿದ್ಯಾಗುರೂನಹಮ್ ।।
ಶ್ರೀರಾಘವೇಂದ್ರತೀರ್ಥಶ್ರೀಚರಣಾಮರಭೂರುಹಮ್ ।
ಕಾಮಿತಾಖಿಲಕಲ್ಯಾಣಕಲನೋನ್ಮುಖಮಾಶ್ರಯೇ ।।
ಎಂದು ತಮ್ಮ ವಿದ್ಯಾಗುರುಗಳಾದ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರನ್ನು ತಮ್ಮ ಭಾವರತ್ನಕೋಶಾದಿ ಗ್ರಂಥಗಳಲ್ಲಿ ಹೆಮ್ಮೆಯಿಂದ ಸ್ತೋತ್ರ ಮಾಡಿದ್ದಾರೆ.
ಸಂನ್ಯಾಸ ಹಾಗೂ ಅವತಾರ ಕಾರ್ಯ
ಶ್ರೀವೇದವ್ಯಾಸರಿಂದ ವ್ಯುಪ್ತವಾದ ತತ್ತ್ವಜ್ಞಾನಬೀಜವು ಶ್ರೀಮದಾಚಾರ್ಯರಿಂದ ಭುವಿಯಲ್ಲಿ ತತ್ತ್ವವಾದವನ್ನು ಪ್ರಚುರಪಡಿಸುವ ಮೂಲಕ ಅಂಕುರಹೊಂದಿತು. ನೇರ ಶಿಷ್ಯರಾದ ಶ್ರೀಪದ್ಮನಾಭತೀರ್ಥರೇ ಮೊದಲಾದ ಪ್ರಾಚೀನಾಚಾರ್ಯರಿಂದ ಸ್ವಲ್ಪವೇ ಮೊಳಕೆಹೊಂದಿದ ಭವ್ಯವಾದ ದ್ವೈತ ತತ್ತ್ವಜ್ಞಾನ ಪರಂಪರೆಯು ಶ್ರೀಜಯತೀರ್ಥರಿಂದ ವಿವಿಧ ಶಾಖೆಗಳನ್ನು ಹೊಂದಿ ಭವ್ಯವಾಗಿ ಪಸರಿಸಿತು. ನಂತರ ಶ್ರೀವ್ಯಾಸರಾಜರ ವಿಶೇಷ ಪ್ರಯತ್ನದಿಂದ ಶಾಖೆಗಳಲ್ಲಿ ಚಿಗುರುಗಳನ್ನು ಹೊಂದಿ ಶ್ರೀವಿಜಯೀಂದ್ರತೀರ್ಥರಿಂದ ಪುಷ್ಪಿತವಾದ ತತ್ತ್ವಜ್ಞಾನವೃಕ್ಷವು ಶ್ರೀರಾಘವೇಂದ್ರಗುರುಸಾರ್ವಭೌಮರಿಂದ ಫಲಿತವಾಗಿ ಸುಭದ್ರವಾಗಿ ಸ್ಥಾಪಿತವಾಗಿತ್ತು.
ಶ್ರೀಗುರುಸಾರ್ವಭೌಮರ ಅವತಾರದ ನಂತರ ಶ್ರೀಮದಾಚಾರ್ಯರ ಮೂಲ ಮಹಾಸಂಸ್ಥಾನಕ್ಕೆ 'ಶ್ರೀರಾಘವೇಂದ್ರಸ್ವಾಮಿಗಳವರ ಮಠ' ಎಂಬ ಹೆಸರೇ ಜಗತ್ಪ್ರಸಿದ್ಧವಾಗಿ ಪ್ರಚಲಿತವಾಯಿತು.
ಅವರ ನಂತರ ಬಂದ ಶ್ರೀರಾಘವೇಂದ್ರಕುಮಾರರಾದ ಶ್ರೀಯೋಗೀಂದ್ರತೀರ್ಥರು, ಶ್ರೀಸೂರೀಂದ್ರತೀರ್ಥರು ಮಹಾ ಸಂಸ್ಥಾನವನ್ನು ಪ್ರಾಚೀನಾಚಾರ್ಯರಂತೆಯೇ ಮುಂದುವರೆಸಿಕೊಂಡು ಹೋದರು. ನಂತರ ೧೬೯೨ರಲ್ಲಿ ಶ್ರೀಸೂರೀಂದ್ರತೀರ್ಥರು, ಶ್ರೀಮುದ್ದುವೆಂಕಟಕೃಷ್ಣಾಚಾರ್ಯರಿಗೆ ಚತುರ್ಥಾಶ್ರಮ ದಯಪಾಲಿಸಿ ಶ್ರೀಸುಮತೀಂದ್ರತೀರ್ಥ ಎಂಬ ಅಭಿದಾನವನ್ನಿತ್ತು ವೇದಾಂತಸಾಮ್ರಾಜ್ಯಾಧಿಪತಿಗಳನ್ನಾಗಿಸಿದರು. ಗುರುರಾಜರ ಕೃಪಾಶ್ರಯದಲ್ಲಿಯೇ ಬೆಳೆದ ಗುರುರಾಜರಿಂದಲೇ ಕೃಪಾಪೋಷಿತವಾದ ವಿದ್ಯಾಮಠದ ವಿದ್ಯಾವೈಭವದ ಮತ್ತೊಂದು ಸುವರ್ಣ ಅಧ್ಯಾಯದ ಆರಂಭ ಎಂದು ಈ ಕಾಲಘಟ್ಟವನ್ನು ಗುರುತಿಸಬಹುದು.
ಶಕಪುರುಷ ಶ್ರೀಸುಮತೀಂದ್ರತೀರ್ಥರು
ಕ್ರಿಶ ೧೬೯೨ ರಿಂದ ಕ್ರಿಶ ೧೭೨೫ರ ವರೆಗೆ ೩೩ ವರ್ಷಗಳಕಾಲ ಶ್ರೀಮದಾಚಾರ್ಯರ ಮೂಲ ಮಹಾ ಸಂಸ್ಥಾನದ ಪೀಠಾಧಿಪತಿಗಳಾಗಿ ವಿರಾಜಿಸಿದ ಶ್ರೀಸುಮತೀಂದ್ರತೀರ್ಥರು, ಅಸಾಧಾರಣವಾದ ಕಾರ್ಯಗಳಿಂದ, ಮಹಿಮೆಗಳಿಂದ ಸುಪ್ರಸಿದ್ಧರು.
ಶ್ರೀಮಠದ ಭವ್ಯಪರಂಪರೆಯ ಮೆರಗನ್ನು ತಮ್ಮ ವಿಶಿಷ್ಟ ಪಾಂಡಿತ್ಯ, ವಾದಿದಿಗ್ವಿಜಯ, ಅನರ್ಘ್ಯ ಕವಿತಾಸಾಮರ್ಥ್ಯ, ಅಪ್ರತಿಮ ಗ್ರಂಥರಚನಾ ಕೌಶಲ, ಶ್ರೇಷ್ಠ ತಪಸ್ಸು, ಪಡೆದ ಸಿದ್ಧಿಗಳಿಂದ ಇವರ ಪ್ರತಿಭಾಸಾಮರ್ಥ್ಯಕ್ಕೆ ದ್ಯೋತಕವಾಗಿ ಸರ್ವಜ್ಞಪೀಠವನ್ನು ಇವರು ಅಲಂಕರಿಸಿದ ಮೇಲೆ ಮಹಾಸಂಸ್ಥಾನವು "ಶ್ರೀಸುಮತೀಂದ್ರಮಠ"ವೆಂದೇ ಸುಪ್ರಸಿದ್ಧವಾಯಿತು.
ಪೂರ್ಣಪ್ರಜ್ಞರ ಪೂರ್ಣಾನುಗ್ರಹಕ್ಕೆ ಪಾತ್ರರಾಗಿದ್ದ ಶ್ರೀಸುಮತೀಂದ್ರತೀರ್ಥರು ಅಪ್ರತಿಮ ವಾದಮಲ್ಲರಾಗಿದ್ದವರು. ನ್ಯಾಯ, ಮೀಮಾಂಸ, ವ್ಯಾಕರಣಾದಿ ಅನೇಕ ಶಾಸ್ತ್ರ ಪಾರಂಗತರು.
ಆರಣಿ ಸಂಸ್ಥಾನದಲ್ಲಿ ದಿಗ್ವಿಜಯ:
ಶ್ರೀಸುಮತೀಂದ್ರರು ಸಂಚಾರತ್ವೇನ ಆರಣಿ ಸಂಸ್ಥನಕ್ಕೆ ದಿಗ್ವಿಜಯ ಮಾಡಿಸಿದ್ದರು. ಆರಣಿ ಸಂಸ್ಥಾನದ ಜಹಗೀರುದಾರನಾಗಿದ್ದ ಸುಭಾನುರಾಯ ಎಂಬುವವನು ಜ್ಯೋತಿಷ್ಮತಿ ತೈಲಪಾನದಿಂದ ಪಡೆದ ಪಾಂಡಿತ್ಯ, ಕವಿತಾ ಸಾಮರ್ಥ್ಯ ಹಾಗೂ ಬಾಹುಬಲದಿಂದ ಉನ್ಮತ್ತನಾಗಿದ್ದ. ಅವನು ಪಡೆದ ಸಿದ್ಧಿಗಳಿಂದ ಕೂಡಿದ್ದ ಅವನನ್ನು ಗೆದ್ದವರೇ ಇರಲಿಲ್ಲ!
ಶ್ರೀಪಾದಂಗಳವರು ಆರಣಿಯ ಕಡೆಗೆ ದಿಗ್ವಿಜಯ ಬೆಳೆಸಿದಾಗ ಅವನು ಶ್ರೀಗಳಲ್ಲೂ ವಾಕ್ಯಾರ್ಥಕ್ಕೆ ಬಂದ. ಸತತ ೮ ದಿನಗಳು ವಾಕ್ಯಾರ್ಥದ ನಂತರ ಶ್ರೀಗಳವರಲ್ಲಿ ಸೋಲೊಪ್ಪಿ ಶರಣಾಗತನಾದ.
ಸಹಜವಾಗಿ ಪೀಠಾಧಿಪತಿಗಳಾದವರು ವ್ಯಾಕರಣಾದಿ ಶಾಸ್ತ್ರಗಳಲ್ಲಿ ನಿಷ್ಣಾತರಾಗಿರುವುದು ಸಹಜ, ಕವಿತಾ ಸಾಮರ್ಥ್ಯ ಸನ್ಯಾಸಿಗಳಿಗೆ ಇರುವುದಿಲ್ಲ ಎಂದು ಬಗೆದು ಶ್ರೀಗಳವರನ್ನು ಹೇಗಾದರೂ ಮಾಡಿ ಜಯಿಸಲೇಬೇಕೆಂದು ಕಾವ್ಯಶಾಸ್ತ್ರದಲ್ಲಿ ಸ್ಪರ್ಧೆ ಹೂಡಿದ. ಅವನ ದುರಾಗ್ರಹವನ್ನು ಅರಿತ ಶ್ರೀಗಳು,
ಅನಾರಾಧ್ಯ ಕಾಳಿಂ ಅನಾಸ್ವಾದ್ಯ ಚೌಳಿಂ
ವೀನಾ ಮಂತ್ರತಂತ್ರೇ ಋತೇ ಶಬ್ದಚೌರ್ಯಾತ್ ।
ಪ್ರಪಂಚಪ್ರಸಿದ್ಧಪ್ರಬಂಧಂ ವಿಧಾತುಂ
ವಿರಿಂಚಪ್ರಪಂಚೇ ಮದನ್ಯ: ಕವಿ: ಕಃ ? ।।
"ನಾವೇನೂ ಕಾಳಿಯ ಆರಾಧನೆ ಮಾಡಿಲ್ಲ, ಜ್ಯೋತಿಷ್ಮತಿ ತೈಲವನ್ನು ಸೇವಿಸಲಿಲ್ಲ, ತಾಮಸಿಕ ಮಂತ್ರ-ತಂತ್ರಗಳನ್ನೇನೂ ಮಾಡಲಿಲ್ಲ, ಬೇರೆ ಗ್ರಂಥೋಕ್ತ ಶಬ್ದಗಳನ್ನೇನೂ ಕದಿಯುವದಿಲ್ಲ, (ಆದರೂ) ಚತುರ್ಮುಖನ ಈ ಸೃಷ್ಟಿಯಲ್ಲಿ ಉತ್ತಮ ಕವಿತೆಯನ್ನು ರಚಿಸಲು ನಮಗಿಂತ ಉತ್ತಮರಾರಿದ್ದಾರೆ ? ನೋಡೋಣ,"
ಎಂದು ಮಂದಹಾಸದಿಂದ ಉತ್ತರಿಸಿದರು. ಶುದ್ಧ ಸಾತ್ವಿಕವಾದ ಶ್ರೀಮದಾಚಾರ್ಯರ ಮತಾನುಯಾಯಿಗಳಾದ ನಾವು ಎಂದಿಗೂ ಶ್ರೀಹರಿ-ವಾಯು-ಗುರುಗಳ ಕರುಣಾಪೂರ್ಣ ಅನುಗ್ರಹದೃಷ್ಟಿಯನ್ನು ಹೊರತು ಪಡಿಸಿ, ಶುದ್ಧವಾದ ಸಾತ್ವಿಕಮಾರ್ಗವನ್ನು ಬಿಟ್ಟು ಬೇರೆ ಯಾವುದರ ಅವಲಂಬನೆಯನ್ನೂ ಮಾಡಿಲ್ಲ, ಮಾಡುವುದಿಲ್ಲ, ಮಾಡಬಾರದು ಎಂಬ ಪರಿಶುಧ್ಧತತ್ತ್ವವನ್ನು ತಿಳಿಸಿ ಪಂಥಾಹ್ವಾನವನ್ನು ಸ್ವೀಕರಿಸಿದರು. ಮತ್ತೆ ಅನೇಕ ದಿನಗಳ ಕಾಲ ನಡೆದ ಕಾವ್ಯಗೋಷ್ಠಿಯಲ್ಲಿ ಸುಭಾನುರಾಯ ನಿರುತ್ತರನಾದ.
ಪರಿಶುದ್ಧವಾದ ರೀತಿಯಲ್ಲಿ, ಶ್ರೀಹರಿಯ ಒಲುಮೆಯಿಂದ ಒದಗಿ ಬಂದ ಸಾತ್ವಿಕವಾದ ಪ್ರತಿಭೆಗೂ, ಜ್ಯೋತಿಷ್ಮತಿ ತೈಲಪಾನವೋ ಮುಂತಾದ ವಾಮಮಾರ್ಗಗಳಿಂದ ಗಳಿಸಿಕೊಂಡ ಅಸಾತ್ವಿಕ ವಿದ್ಯೆಗೂ ವ್ಯತ್ಯಾಸವನ್ನು ಅರಿತವನಾಗಿ, ಶ್ರೀಗಳವರಲ್ಲಿ ಭಕ್ತಿಭಾವದಿಂದ ,
"ಪ್ರತಿಮಠಮುದರಂಭರಯೋ ಬಹವೋ ಹಂತ ವರ್ತ೦ತ ।
ಸುಮತಿಯತೇ ವಿತತಮತೇ ಭವತಾ ಸಮತಾಂ ಕಃ ಪುಮಾನಿಯೇತ ?"
"ಪ್ರತಿ ಮಠ ಮಠಗಳಲ್ಲೂ ಅನೇಕ ಸನ್ಯಾಸಿಗಳಿದ್ದಾರೆ. ಆದರೇ ಶ್ರೀಸುಮತೀಂದ್ರತೀರ್ಥರೇ! ನಿಮ್ಮ ಸರಿಸಮಾನ ನಿಲ್ಲುವವರು ಯಾರಿದ್ದಾರೆ ??"
ಎಂದು ಉದ್ಗರಿಸಿ ಶರಣಾಗತನಾದ.
ಈ ದಿಗ್ವಿಜಯದ ದ್ಯೋತಕವಾಗಿ ರಾಹುಕೇತುವಾದ್ಯವನ್ನು, ಚಿತ್ರಾಸನದ್ವಯವನ್ನು ಸಮರ್ಪಿಸಿ ಕೃತಾರ್ಥನಾದ.
ಈ ಘಟನೆಯನ್ನು ಶ್ರೀರಾಘವೇಂದ್ರಕವಿ ರಚಿಸಿದ 'ಸಾರಸ್ವತ ಪರಿಣಯ'ದಲ್ಲಿ ಉಲ್ಲೇಖಿಸಿದ್ದಾನೆ. ಸುಭಾನುರಾಯನ ಪತ್ನಿಯು ಶ್ರೀಗಳಿಂದ ಬೇಡಿ ನಿತ್ಯ ಪೂಜೆಗಾಗಿ ಲಕ್ಷ್ಮೀಪ್ರತಿಮೆಯನ್ನು ಪಡೆದುಕೊಂಡಳು ಎನ್ನುವ ಉಲ್ಲೇಖವೂ ಇಲ್ಲಿದೆ.
ಶ್ರೀಪಾದಂಗಳವರು ಆರಣಿಯಿಂದ ಮುಂದೆ ದಿಗ್ವಿಜಯಯಾತ್ರೆಯನ್ನು ಬೆಳೆಸಿ ಕುಂಭಕೋಣ, ತಂಜಾವೂರು, ಮಧುರೈ ಪ್ರಾಂತ್ಯಗಳಲ್ಲಿ ಸಂಚಾರ ಕೈಕೊಂಡರು.
ಮಧುರೈ ಸಂಸ್ಥಾನದಲ್ಲಿ ದಿಗ್ವಿಜಯ:
ದಕ್ಷಿಣದ ಕಡೆಗೆ ದೇಶದಲ್ಲಿಯೇ ಹೆಚ್ಚು ಕಾಲ ಬೀಡು ಬಿಟ್ಟಿದ್ದ ಮಹಾ ಸಂಸ್ಥಾನವು ಕುಂಭಕೋಣಂ, ತಂಜಾವೂರು ಹಾಗೂ ಮಧುರೈ ಪ್ರಾಂತದಲ್ಲಿ ಅಲ್ಲಿನ ಅರಸರಿಂದ ವಿಶೇಷ ಆಶ್ರಯ ಪಡೆದುಕೊಂಡಿತ್ತು. ತಂಜಾವೂರು ಅರಸರ ಹಾಗೂ ಮಧುರೈಯ ಚೊಕ್ಕನಾಥನಾಯಕರ ಕಾಲದಲ್ಲಿ ಶ್ರೀಮಠಕ್ಕೆ ಅತ್ಯಂತ ಭಕ್ತಯಿಂದ ವರ್ತಿಸಿ ಶ್ರೀಮೂಲರಾಮರ ಪೂಜಾರಾಧನೆಗೆ ಯಾವುದೇ ಚ್ಯುತಿ ಬಾರದಂತೆ ಅನೇಕ ಕಾಣಿಕೆಗಳನ್ನು, ಗ್ರಾಮಗಳನ್ನು ಸಮರ್ಪಿಸರುವುದಕ್ಕೆ ಶಾಸನಗಳ ಉಪಲಬ್ಧಿ ಇದೆ. ಮಧುರೈ ಅರಸರ ಪಟ್ಟದ ರಾಣಿ ಮಂಗಮ್ಮಳಂತೂ ಧಾರ್ಮಿಕ ಸ್ವಭಾವದವಳು, ಅನೇಕ ವೈದಿಕರಿಗೆ, ಮಠ-ಮಾನ್ಯಗಳಿಗೆ ರಾಜಾಶ್ರಯವಿತ್ತ ಪುಣ್ಯಕೀರ್ತಿಶಾಲಿ.
ಶ್ರೀಸುಮತೀಂದ್ರತೀರ್ಥರು ಸಂಚಾರತ್ವೇನ ಮಧುರೈಗೆ ಆಗಮಿಸಿದಾಗ ಅವರನ್ನು ಸಂದರ್ಶಿಸಿದ ಮಹಾರಾಣಿಯವರು, ಶ್ರೀಗಳ ವಿಲಕ್ಷಣ ಅಲೌಕಿಕ ತೇಜಸ್ಸಿಗೆ, ಅವರ ಪ್ರವಚನ ಶೈಲಿಗೆ ಶರಣಾಗಿ ಅವರ ಅನುಗ್ರಹ ರಾಜ್ಯದ ಮೇಲೆ ಇರಬೇಕು ಎಂದು ಪ್ರಾರ್ಥಿಸುತ್ತಾಳೆ. ಶ್ರೀಪಾದಂಗಳವರು ಅಲ್ಲಿ ತಂಗಿದ್ದ ಕಾಲದಲ್ಲಿ ಅನೇಕ ಮತತ್ರಯ ವಿದ್ವತ್ಸಭೆಗಳನ್ನು, ಸಮ್ಮೇಳನಗಳನ್ನು ಮಧುರೈ ಸಂಸ್ಥಾನದಿಂದ ನಡೆಯುತ್ತಿರುತ್ತವೆ.
ಹೀಗೆ ಅನೇಕ ಮಾಧ್ವ ಪೀಠಾಧೀಶರ ಸಮ್ಮುಖದಲ್ಲಿ ಶ್ರೀರಂಗದಲ್ಲಿ ನಡೆದ ಮತತ್ರಯ ವಾಕ್ಯಾರ್ಥ ಸಭೆಯಲ್ಲಿ ಶ್ರೀಸುಮತೀಂದ್ರತೀರ್ಥರ ಪಾಂಡಿತ್ಯಕ್ಕೆ ವಿದ್ವತ್ಸಭೆಯಲ್ಲಿ ಉಪಸ್ಥಿತರಿದ್ದವರೆಲ್ಲರೂ ತಲೆದೂಗಿದರು.
ಶ್ರೀಉತ್ತರಾದಿ ಮಠದ ಅಂದಿನ ಸ್ವಾಮಿಗಳಾದ ಶ್ರೀಸತ್ಯಪೂರ್ಣತೀರ್ಥರೂ ತಮ್ಮ ವಿದ್ಯಾಪಕ್ಷಪಾತಿತ್ವವನ್ನು ತೋರಿಸಿ ಮಠಬೇಧ ಮರೆತು "ನಿಮ್ಮ ಪಾಂಡಿತ್ಯ ಅಸದೃಶವಾದುದು, ಇಂದಿನಿಂದ ನಮ್ಮ ಗೌರವದ ದ್ಯೋತಕವಾಗಿ ಎರೆಡು ಗದ್ದುಗೆಗಳ ಮೇಲೆ ಕೂತು ಪಾಠ ಪ್ರವಚನ ನಡೆಸಬೇಕು" ಎಂದು ಶ್ರೀಸುಮತೀಂದ್ರತೀರ್ಥರನ್ನು ಗೌರವಿಸಿದರು.
ಶ್ರೀಸತ್ಯಪೂರ್ಣರ ಈ ಸೌಹಾರ್ದದ ಕುರುಹಾಗಿ ಇಂದಿಗೂ ಮಹಾಸಂಸ್ಥಾನದಲ್ಲಿ ಎರೆಡು ಗದ್ದುಗೆಗಳನ್ನು ಬಳಸುವುದನ್ನು ಕಾಣಬಹುದು.
ಶ್ರೀಗಳವರ ಪಾಂಡಿತ್ಯಕ್ಕೆ ಮನಸೋತ ಮಹಾರಾಣಿಯಾರಾದ ಮಂಗಮ್ಮನವರು ಶ್ರೀಪಾದಂಗಳವರಿಗೆ ತುಂಬಿದ ಸಭೆಯಲ್ಲಿ ಗೌರವಿಸಿ, ಈಶ್ವರ ಸಂವತ್ಸರದ ಮಾಘ ಶುದ್ಧ ಪೌರ್ಣಿಮೆಯಂದು (ಕ್ರಿ.ಶ ೧೬೯೮) ಅನೇಕ ಗ್ರಾಮಗಳನ್ನು, ದೇವಾಲಯಗಳನ್ನು ಶ್ರೀಗಳ ಸುಪರ್ದಿಗೆ ದಾನವಾಗಿ ಸಮರ್ಪಿಸಿ ಶಾಸನ ಬರೆಸಿದಳು. (ತೆಲುಗು ಲಿಪಿಯ ತಾಮ್ರ ಶಾಸನ ಲಭ್ಯವಿದೆ).
ಶ್ರೀಗಳವರಲ್ಲಿ ಅನವರತ ಭಕ್ತಿಯನ್ನು ಹೊಂದಿದ್ದ ಮಹಾರಾಣಿ ಮಂಗಮ್ಮಳು ಮಧುರೈನ ಪಾಂಡ್ಯ ಭೂಪತಿಗಳ ಭಂಡಾರದಲ್ಲಿ ವಂಶಪಾರಂಪರ್ಯವಾಗಿ ಲಬ್ಧವಾಗಿದ್ದ, ಅಮೂಲ್ಯ ನವತ್ನಖಚಿತವಾದ, ರಮಾದೇವಿಯರ ವಿಶೇಷ ಸನ್ನಿಧಾನೋಪೇತರಾದ ಶ್ರೀನೀಳಾದೇವಿ ಕರಾರ್ಚಿತವಾದ ಶ್ರೀಭೂ-ದುರ್ಗಾ-ಸಮೇತ ಶ್ರೀವೈಕುಂಠ ವಾಸುದೇವರ ಪ್ರತಿಮೆಯನ್ನೂ ಹಾಗೂ ಕಲ್ಪವೃಕ್ಷವನ್ನು ಕೂಡ ಶ್ರೀಸುಮತೀಂದ್ರರ ಇಚ್ಛೆ ಹಾಗೂ ಅಣತಿಯಂತೆ ಮಹಾಸಂಸ್ಥಾನಕ್ಕೆ ಒಪ್ಪಿಸಿದ್ದೂ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ಐತಿಹಾಸಿಕ ಪ್ರಸಂಗ.
ಹೀಗೆ ಶ್ರೀಸುಮತೀಂದ್ರರಿಗೆ ಒಲಿದ ಶ್ರೀನೀಳಾದೇವಿ ಕರಾರ್ಚಿತವಾದ ಶ್ರೀಭೂ-ದುರ್ಗಾ-ಸಮೇತ ಶ್ರೀವೈಕುಂಠ ವಾಸುದೇವರ ಪ್ರತಿಮೆಯು ಇಂದಿಗೂ ಶ್ರೀರಾಘವೇಂದ್ರಸ್ವಾಮಿಗಳವರ ಮಹಾಸಂಸ್ಥಾನದಲ್ಲಿ ಸಂಸ್ಥಾನಮುಖ್ಯ ಪ್ರತಿಮೆಗಳಲ್ಲಿ ಒಂದಾಗಿ ಅರ್ಚನೆಗೊಳ್ಳುತ್ತಿರುವುದನ್ನು ಕಾಣಬಹುದು. ಈ ಐತಿಹಾಸಿಕ ಘಟನೆಯನ್ನು ಶ್ರೀಸುಮತೀಂದ್ರರ ಪ್ರಶಿಷ್ಯರೇ ಆಗಿರುವ ಶ್ರೀವಾದೀಂದ್ರತೀರ್ಥರು ತಮ್ಮ ಐತಿಹಾಸಿಕ ಕೃತಿಯಾದ 'ಅರ್ಚಾಗತಿಕ್ರಮದಲ್ಲಿ',
ಅನರ್ಘ್ಯಮಣಿಮಯ್ಯರ್ಚಾ ಶ್ರೀಭೂದುರ್ಗಾಸಮನ್ವಿತಾ ।
ಪಾಂಡ್ಯಭೂಪತಿಭಿರ್ದತ್ತಾ ಸುಮತೀಂದ್ರಯತೀಶೀತು: ।।
ಎಂದು ದಾಖಲಿಸಿದ್ದಾರೆ.
ಈ ಹಿಂದೆ ಶ್ರೀನರಹರಿ ತೀರ್ಥರು ಗಜಪತಿಯ ಬಂಢಾರದಿಂದ ಶ್ರೀಮದಾಚಾರ್ಯರ ಸಂಸ್ಥಾನಕ್ಕೆ ಶ್ರೀಮೂಲರಾಮಚಂದ್ರದೇವರ ಪ್ರತಿಮೆಯನ್ನು ತಂದರೇ, ಪಾಂಡ್ಯ ಅರಸರ ಬಂಢಾರದಿಂದ ಶ್ರೀವೈಕುಂಠ ವಾಸುದೇವರನ್ನು ಸಂಸ್ಥಾನಕ್ಕೆ ತಂದವರು ಶ್ರೀಸುಮತೀಂದ್ರತೀರ್ಥರು.
ರಾಜರಿಗೂ ರಾಜರು ವೇದಾಂತ ಸಾಮ್ರಾಜ್ಯದ ರಾಜರು :
ಮರಾಠರ ದೊರೆಯಾದ ಶಿವಾಜಿ ಮಹಾರಾಜರ ಮೊಮ್ಮಗನಾದ ಶಾಹು ಮಹಾರಾಜನು, ಶ್ರೀಸುಮತೀಂದ್ರತೀರ್ಥರ ಸಮಕಾಲೀನ. ಶ್ರೀಗಳವರ ಪೂರ್ವಾಶ್ರಮದಿಂದಲೂ ಇವನು ಅವರ ಸಂಪರ್ಕದಲ್ಲಿರುವ ಬಗ್ಗೆ ಸಾಕ್ಷಿಯಾಗಿ ಶ್ರೀಸುಮತೀಂದ್ರತೀರ್ಥರು ಪೂರ್ವಾಶ್ರಮದಲ್ಲಿ ಬರೆದ ಪತ್ರಿಕೆಗಳಿಂದ ತಿಳಿದುಬರುತ್ತದೆ. ಶಾಹು ಮಹಾರಾಜರ ಸಾಧನೆಗಳನ್ನು ಶ್ಲಾಘಿಸಿ ಶ್ರೀಗಳು ಪೂರ್ವಾಶ್ರಮದಲ್ಲಿ ಬರೆದಿದ್ದ 'ಜಯಘೋಷಣಾ ಪತ್ರಿಕೆ'ಯು ಇವರಿಬ್ಬರ ಮಧುರಮೈತ್ರಿಗೆ ಹಿಡಿದ ಕೈಗನ್ನಡಿ. ಪೂರ್ವಾಶ್ರಮದಲ್ಲೇ ಅವನಿಂದ ಸಮ್ಮಾನಿತರಾಗಿದ್ದ ಶ್ರೀಗಳು, ಆಶ್ರಮಾನಂತರ ಅವನ ಆಸ್ಥಾನಕ್ಕೆ ಆಹ್ವಾನದ ಮೇರೆಗೆ ಭೇಟಿ ಇತ್ತು, ಅವನಿಂದ ಅನೇಕ ಭೂಸ್ವಾಸ್ಥ್ಯಗಳನ್ನೂ ಪಡೆದ ದಾಖಲೆಗಳು ಉಪಲಬ್ಧವಿವೆ.
ತಮಿಳುನಾಡಿನ ಹಾಗೂ ಕರ್ನಾಟಕ ಪ್ರಾಂತ್ಯದ ಅನೇಕ ನಾಯಕರುಗಳು, ಸರದಾರರು, ಒಡೆಯರುಗಳ ಶ್ರೀರಘುಪತಿದೇವರ ಪೂಜಾರ್ಥವಾಗಿ, ಸೇವಾರ್ಥವಾಗಿ ಶ್ರೀರಘುಪತಿದೇವರ ಭಂಡಾರಕ್ಕೆ ಅನೇಕ ಗ್ರಾಮಗಳನ್ನು, ಭೂಪ್ರದೇಶಗಳನ್ನು, ದೇವಸ್ಥಾನ ಮಠಗಳನ್ನು ಇವರ ಕಾಲದಲ್ಲಿ ಸಮರ್ಪಿಸಿದ್ದರ ಕುರುಹಾಗಿ ಅನೇಕ ಶೀಲಾಶಾಸನಗಳು, ತಾಮ್ರ ಶಾಸನಗಳು ಇಂದಿಗೂ ಸುಸ್ಥಿತಿಯಲ್ಲಿ ಲಭ್ಯವಿವೆ.
ಅದರಂತೆಯೇ ಚಿತ್ರದುರ್ಗದ ಭರಮಣ್ಣ ನಾಯಕರೂ ಶ್ರೀಪಾದಂಗಳವರಲ್ಲಿ ಭಕ್ತಿಪೂರ್ವಕವಾಗಿ ಜಹಗೀರುಗಳನ್ನು ಸಮರ್ಪಿಸಿದ ಬಗ್ಗೆ ಶಾಸನಗಳಲ್ಲಿ ಮಾಹಿತಿ ದೊರೆಯುತ್ತವೆ.
ಶ್ರೀಗಳವರು ದುರ್ಗಕ್ಕೆ ಬಂದಾಗ ಘಟಿಸಿದ ಐತಿಹಾಸಿಕ ಕಾರ್ಯವೆಂದರೇ 'ಶ್ರೀಗುರುರಾಜರ ಮೃತ್ತಿಕಾ ವೃಂದಾವನ ಪ್ರತಿಷ್ಠಾಪನೆ. ಇಂದಿಗೂ ಆ ಮಠವನ್ನು ಕಾಣಬಹುದು. ತಮ್ಮ ಸ್ಮಾರಕವಾಗಿ ಪ್ರಾಣದೇವರ ಪ್ರತಿಷ್ಠೆಯನ್ನು ಮಾಡಿದನ್ನು ಅನೇಕ ನಿದರ್ಶನಗಳನ್ನೂ ಕಾಣಬಹುದು.
ಶ್ರೀರಂಗನಾಥನ ಸನ್ನಿಧಿಯಲ್ಲಿ ದುಷ್ಟಶಕ್ತಿಗಳ ಪ್ರತಿಬಂಧನ:
ರಾಜಾಧಿರಾಜರಿಂದ ಸಮ್ಮಾನಿತರಾಗಿ, ತಮ್ಮ ಅಲೌಕಿಕ ತೇಜಸ್ಸಿನಿಂದ, ತಪಃ ಪ್ರಭಾವದಿಂದ ವಿರಾಜಿಸಿದವರು ಶ್ರೀಸುಮತೀಂದ್ರತೀರ್ಥರು. ದಕ್ಷಿಣದಿಂದ ಉತ್ತರಾದ ಕಡೆಗೆ ಸಂಚರಿಸಿ ಶ್ರೀಪದ್ಮನಾಭಾದಿಯತಿಗಳ ಹಾಗೂ ಮಂತ್ರಾಲಯ ಪ್ರಭುಗಳೇ ಮೊದಲಾದ ಪ್ರಾಚೀನಾಚಾರ್ಯರ ಸಂದರ್ಶಿಸಿ ಮತ್ತೆ ದಕ್ಷಿಣದೇಶದೆಡೆಗೆ ತಮ್ಮ ಪರಮಗುರುಗಳಾದ ಶ್ರೀಯೋಗೀಂದ್ರತೀರ್ಥರ ದರ್ಶನ ಮಾಡಲು ಈಗಾಗಲೇ ಶ್ರೀಮಠದ ನಿಕಟ ಸಂಪರ್ಕದಲ್ಲಿದ್ದ ಶ್ರೀರಂಗ ಕ್ಷೇತ್ರಕ್ಕೆ ಬರುತ್ತಾರೆ.
ಶ್ರೀರಂಗದಲ್ಲಿ ಶಾಕ್ತೋಪಾಸಕ ಮಾಂತ್ರಿಕನೊಬ್ಬ ದುರುದ್ದೇಶದಿಂದ ಶ್ರೀರಂಗನಾಥನ ಕಳಾಕರ್ಷಣ ಮಾಡಿದ್ದ. ಅದರ ಪ್ರಭಾವದಿಂದ ದೇವರ ಮುಖದಲ್ಲಿನ ಕಾಂತಿಯೇ ಕ್ಷೀಣವಾಗಿತ್ತು. ಇದನ್ನು ನೋಡಿದ ಅರ್ಚಕರು ಶ್ರೀಸುಮತೀಂದ್ರತೀರ್ಥರನ್ನು ಪ್ರಾರ್ಥಿಸಿದಾಗ ಶ್ರೀಗಳವರು ಉಪಾಸ್ಯ ಶ್ರೀಮನ್ಮೂಲರಾಮನ, ತದಭಿನ್ನನಾದ ಶ್ರೀನರಸಿಂಹದೇವರ ಕೃಪಾಬಲದಿಂದ ಮಾಂತ್ರಿಕನು ಹೂಡಿದ್ದ ದುಷ್ಟ ಶಕ್ತಿಗಳ ಪ್ರತಿಬಂಧನ ಮಾಡಿ ತಮ್ಮ ತಪಃ ಪ್ರಭಾವವನ್ನು ತೋರಿಸಿ ಆ ಮಾಂತ್ರಿಕನು ಓಡಿಹೋಗುವಂತೆ ಮಾಡಿ, ದುಷ್ಟಶಕ್ತಿಗಳ ಪ್ರತಿಬಂಧಕ್ಕಾಗಿ ಶ್ರೀರಂಗನಾಥನೆದುರಿಗೆ ಶ್ರೀಮುಖ್ಯಪ್ರಾಣದೇವರ ಪ್ರತಿಷ್ಠೆಯನ್ನು ಮಾಡಿದರು.
ಆ ಶ್ರೀಸುಮತೀಂದ್ರತೀರ್ಥ ಪ್ರತಿಷ್ಠಿತ ಪ್ರಾಣದೇವರನ್ನು ಇಂದಿಗೂ ಶ್ರೀರಂಗನಾಥನ ಎದುರು ನೋಡಬಹುದು. ಇಂತಹ ಪರಮಾದ್ಭುತ ತಪಸ್ಸು ಶ್ರೀಗಳವರದ್ದಾಗಿತ್ತು.
ಹರಿದಾಸ ಸಾಹಿತ್ಯದ ಪೋಷಕರು ಶ್ರೀಸುಮತೀಂದ್ರರು:
ಸಾಕ್ಷಾತ್ ಶ್ರೀಮದಾಚಾರ್ಯರಿಂದಲೇ ಸ್ಫೂರ್ತಿ ಪಡೆದು ಶ್ರೀನರಹರಿತೀರ್ಥರಾದಿಯಾಗಿ ಪ್ರವರ್ತಿತವಾದ ಹರಿದಾಸ ಸಾಹಿತ್ಯ ಪರಂಪರೆಯನ್ನು ಉಳಿಸಿ ಬೆಳಿಸುವದರಲ್ಲಿ ಶ್ರೀರಾಘವೇಂದ್ರ ಗುರುಸಾರ್ವಭೌಮರ ಮಠದ ಕೊಡುಗೆ ಅಪಾರ. ತಮ್ಮ ಪ್ರಾಚೀನಾಚಾರ್ಯರಂತೆಯೇ ಅದರ ಪೋಷಣೆಯನ್ನು ಮುಂದುವರೆಸಿಕೊಂಡು ಬಂದವರು ಶ್ರೀಸುಮತೀಂದ್ರ ತೀರ್ಥರು.
ಶ್ರೀಗಳವರು ತಮ್ಮ ಸಮಕಾಲೀನ ಹರಿದಾಸರಾಗಿದ್ದ ಅನೇಕ ಹರಿದಾಸರಿಗೆ ಆಶ್ರಯಭೂತರಾಗಿದ್ದವರು. ಶ್ರೀಜಗನ್ನಾಥದಾಸಾರ್ಯರ ತಂದೆಗಳಾಗಿದ್ದ ಶ್ರೀನರಸಿಂಹದಾಸರು ತಮ್ಮ ಕುಲಗುರುಗಳಾದ ಇವರಲ್ಲೇ ಶಿಷ್ಯತ್ವ ವಹಿಸಿದ್ದವರು. ಶ್ರೀಗಳು ದಾಸರಿಗೆ ತಮ್ಮ ದೇವರ ಪೆಟ್ಟಿಗೆಯಲ್ಲಿನ ನರಸಿಂಹ ಸಾಲಿಗ್ರಾಮವನ್ನು ಕೊಟ್ಟು ಅನುಗ್ರಹಿಸಿದ್ದರು. ಮುಂದೆ ದಾಸರು ಶ್ರೀಸುಮತೀಂದ್ರಸ್ವಾಮಿಗಳ ಕರಕಮಲ ಸಂಜಾತರಾದ ಶ್ರೀಉಪೇಂದ್ರತೀರ್ಥರಲ್ಲಿ ಶಿಷ್ಯತ್ವವನ್ನು ವಹಿಸಿದ್ದರು.
ಅಂದಿನ ಹರಿದಾಸ ವಾಂಗ್ಮಯದ ಅಧ್ಯಾಯದ ಪ್ರಸಿದ್ಧನಾಮ ಹೆಳವನಕಟ್ಟೆ ಗಿರಿಯಮ್ಮನವರದ್ದು. ಸರಿಯಾದ ಔಪಚಾರಿಕ ಶಿಕ್ಷಣವಿಲ್ಲದೇ, ಸಾಂಸಾರಿಕ ಆಸಕ್ತಿಗಳನ್ನು ಬದಿಗೊಡ್ಡಿ ಕೇವಲ ರಂಗನಾಥನ ಸೇವೆಯನ್ನೇ ಮಾಡುತ್ತಲಿದ್ದ ಗಿರಿಯಮ್ಮ ಶ್ರೀಸುಮತೀಂದ್ರತೀರ್ಥರನ್ನು ಸಂದರ್ಶಿಸಿ ಅವರ ವಿಶೇಷ ಅನುಗ್ರಹಕ್ಕೆ ಪಾತ್ರಳಾದ ವೃತ್ತಾಂತ ಬಹುಪ್ರಚಲಿತ.
ಶ್ರೀಗಳವರ ಶ್ರೀಮೂಲರಾಮದೇವರ ಪೂಜೆಯನ್ನು ಕಂಡು ಕೃತಾರ್ಥಳಾದ ಗಿರಿಯಮ್ಮಶ್ರೀಗಳವರ ಪೂಜೆಯಲ್ಲಿ ಕೌಸಲ್ಯಾನಂದನ ಶ್ರೀರಾಮಚಂದ್ರನು ಸಾಕ್ಷಾತ್ ನೆಲೆಸಿದ್ದನ್ನು ಕಣ್ತುಂಬಿಕೊಂಡು,
"ಸದಾನಂದ ಸುಮತೀಂದ್ರಹೃದಯ ಪಂಕಜಭೃಂಗ ।"
ಎಂದು ಶ್ರೀರಾಮಚಂದ್ರನನ್ನು ಸುಮತೀಂದ್ರಹೃದಯ ಪಂಕಜಭೃಂಗನೆಂದು ಕಂಡು ಕೀರ್ತನೆಯಲ್ಲಿ ಸ್ತೋತ್ರ ಮಾಡಿದ್ದಾರೆ.
ಈ ಸ್ತೋತ್ರದಿಂದ ಸುಪ್ರೀತನಾಗಿ ಮಗುವಿನ ರೂಪದಲ್ಲಿ ಸಾಕ್ಷಾತ್ ರಾಮಚಂದ್ರನೇ ಶ್ರೀಗಳವರ ಎದುರೇ ಗಿರಿಯಮ್ಮನಿಗೆ ದರ್ಶನವಿತ್ತನಂತೆ. ಆ ಕೂಸನ್ನು ಶ್ರೀಗಳವರೂ ಮುದ್ದಿಸಿದರು ಎಂಬ ಐತಿಹ್ಯವಿದೆ. ಊರ ಮುಂದೆ ಒಬ್ಬ ಬಂಜೆ, ಒಬ್ಬ ಸಾಮಾನ್ಯ ಮಹಿಳೆಯಂತೆ ನಿರ್ಲಕ್ಷಿಸಲ್ಪಟ್ಟಿದ್ದ ಗಿರಿಯಮ್ಮನವರ ಅಪ್ರತಿಮ ಏಕಾಂತ ಸಾಧನೆಯನ್ನು ದಿವ್ಯಚಕ್ಷುಗಳಿಂದ ಗುರುತಿಸಿ "ನಮ್ಮ ರಾಮದೇವರನ್ನು ಎತ್ತಿ ಆಡಿಸುವವಳಮ್ಮ ನೀನು" ಎಂದು ಅವರಿಗೆ ಪ್ರಥಮ ಮುದ್ರಾಧಾರಣೆ ಹಾಗೂ ಪ್ರಥಮ ತೀರ್ಥವನ್ನು ಕರುಣಿಸಿ ಅನುಗ್ರಹಿಸಿ ಸ್ಫೂರ್ತಿಯನ್ನಿತ್ತ ಧೀಮಂತ ಕ್ರಾಂತಿಕಾರಿ ಯತಿಗಳು ಶ್ರೀಸುಮತೀಂದ್ರತೀರ್ಥರು. ಶ್ರೀಸುಮತೀಂದ್ರತೀರ್ಥರ ಪರಮಾನುಗ್ರಹದಿಂದ ಭಗವಂತನ ಸಾಕ್ಷಾತ್ಕಾರ ಪಡೆದ ಗಿರಿಯಮ್ಮನವರು ಸಾವಿರಾರು ಕೀರ್ತನೆಗಳನ್ನು ರಚಿಸಿ ಹರಿದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.
ಆಗಿನ ಕಾಲದ ಮತ್ತೊಬ್ಬ ಖ್ಯಾತ ಹರಿದಾಸರಾದ ಶ್ರೀಪ್ರಸನ್ನವೆಂಕಟದಾಸರೂ ಶ್ರೀಸುಮತೀಂದ್ರತೀರ್ಥ ತಪಸ್ಸು, ಜ್ಞಾನ, ಕೀರ್ತಿ, ಪ್ರಭಾವಗಳನ್ನು ಕೇಳಿ ಇವರಲ್ಲಿ ಬಂದು ಇವರ ಅನುಗ್ರಹವನ್ನು ಪಡೆದವರೇ. ಅವರು ಶ್ರೀಗಳ ವಿಲಕ್ಷಣವಾದ ಅಲೌಕಿಕ ವ್ಯಕ್ತಿತ್ವವನ್ನು ತಮ್ಮ ಕೀರ್ತನೆಗಳಲ್ಲಿ ವರ್ಣಿಸಿದ್ದಾರೆ,
ತಮ್ಮದೊಂದು ಕೀರ್ತನೆಯಲ್ಲಿ,
"ಶರಣು ಮುನಿಪ ಮಣಿಯೇ ಸುಮತೀಂದ್ರ ।
ಕರುಣಾಮೃತದ ಖಣಿಯೇ ।।
ಶರಣೆಂದವರಿಗೆ ವರಚಿಂತಾಮಣಿಯೇ
ಧರೆಯ ಮೇಲಿನೊಬ್ಬ ದೊರೆ ನಿನಗೆಣೆಯೇ ।। ಪ ।।"
ಎಂದು ಹಾಗೂ ,
" ಸಲಹು ಸುಖತೀರ್ಥಮತ ಜಲಧಿಚಂದ್ರ ।
ನಳಿನೀಶಾರ್ಚಕ ಇಂದ್ರ ಇಳೆಗೆ ಸುಮತೀಂದ್ರ ಸಲಹು ।। "
ಎಂದು ಮತ್ತೊಂದು ಕೀರ್ತನೆಯಲ್ಲಿ ಹೀಗೆ ತಾವು ಕಂಡ ಶ್ರೀಸುಮತೀಂದ್ರಸ್ವಾಮಿಗಳ ಮಹಾ ವೈಭವ, ಅವರ ವಿದ್ಯಾವೈಭವ, ಅವರ ಭಕ್ತವಾತ್ಸಲ್ಯ ಇತ್ಯಾದಿ ಗುಣಗಳನ್ನು ಭಕ್ತಿಪೂರ್ವಕವಾಗಿ ಸ್ತೋತ್ರ ಮಾಡಿ ದಾಖಲಿಸಿದ್ದಾರೆ.
ಹೀಗೆ ಶ್ರೀನರಸಿಂಹದಾಸರು, ಶ್ರೀಪ್ರಸನ್ನವೆಂಕಟದಾಸರು, ಹೆಳವನಕಟ್ಟೆ ಗಿರಿಯಮ್ಮ ಮುಂತಾದ ಹರಿದಾಸ ವಾಂಗ್ಮಯದ ಧುರೀಣರಿಗೆ ಪ್ರೋತ್ಸಾಹಿಸಿ ಪರಮಾನುಗ್ರಹ ಮಾಡಿ ಹರಿದಾಸ ಸಾಹಿತ್ಯದ ಬೆಳವಣಿಗೆಗೆ ತಮ್ಮ ಕಾಲದಲ್ಲಿ ವಿಶೇಷ ಅನುಗ್ರಹ ಮಾಡಿದವರು ಶ್ರೀಸುಮತೀಂದ್ರತೀರ್ಥರು. ಶ್ರೀಸುಮತೀಂದ್ರತೀರ್ಥರ ಕಾಲವನ್ನು ಹರಿದಾಸ ವಾಂಗ್ಮಯದ ಸುವರ್ಣಯುಗದ ಪೂರ್ವ ಪೀಠಿಕೆಯಾಗಿ ಭದ್ರಬುನಾದಿಯನ್ನಿತ್ತ ಕಾಲ ಎನ್ನುವುದರಲ್ಲಿ ಸಂಶಯವಿಲ್ಲ.
ಶ್ರೀಗಳವರ ಪಾಂಡಿತ್ಯ, ಕವಿತಾ ಸಾಮರ್ಥ್ಯ ಹಾಗೂ ಗ್ರಂಥರಚನಾ ಕೌಶಲ:
ಶ್ರೀಸುಮತೀಂದ್ರತೀರ್ಥರು ಶ್ರೀಮಠದ ಪರೆಂಪರೆಯಲ್ಲಿ ೧೪ ಬಾರಿ ಶ್ರೀಮನ್ನ್ಯಾಯಸುಧಾ ಮಂಗಲವನ್ನು ಆಚರಿಸಿದ ಮಹಾನುಭಾವರು. ವಿದ್ಯಾಮಠದ ಅಧಿಪತಿಗಳಾಗಿ ಸಮಸ್ತ ಮಾಧ್ವರ ಅಘೋಷಿತ ಪ್ರತಿನಿಧಿಗಳಂತೆ, ಸಮಸ್ತ ಮಾಧ್ವರ ಮುಖವಾಣಿಯಂತೆ ಕಂಗೊಳಿಸಿದವರು. ಶ್ರೀಸುಮತೀಂದ್ರತೀರ್ಥರ ಪ್ರತಿಭಾಸಾಮರ್ಥ್ಯಗಳನ್ನು ಮನಗಾಣದವರು ಅವರ ಕಾಲದಲ್ಲಿ ಯಾರೂ ಇರಲಿಲ್ಲ. ಸ್ವಮತ - ಪರಮತ ಹೀಗೆ ಸರ್ವರಿಂದಲೂ ಮಾನ್ಯರಾದವರು ಶ್ರೀಸುಮತೀಂದ್ರಪ್ರಭೃತಿಗಳು.
ಶ್ರೀರಾಘವೇಂದ್ರಸ್ವಾಮಿಗಳವರ ನಂತರದಲ್ಲಿ ಅತೀ ಹೆಚ್ಚು ಗ್ರಂಥಗಳನ್ನು ರಚಿಸಿದ ಮಹಾನ್ ಕೀರ್ತಿ ಶ್ರೀಸುಮತೀಂದ್ರತೀರ್ಥರಿಗೆ ಸಲ್ಲುತ್ತದೆ.
ಒಟ್ಟು ೪೨ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಮಹಾನುಭಾವರು ಶ್ರೀಸುಮತೀಂದ್ರತೀರ್ಥರು.
ಋಗ್ಭಾಷ್ಯಟೀಕಾ-ಭಾವರತ್ನಕೋಶ
ಬ್ರಹ್ಮಸೂತ್ರಭಾಷ್ಯ - ತತ್ತ್ವಪ್ರಕಾಶಿಕಾ - ಭಾವರತ್ನಕೋಶ -
ವಾಕ್ಯಾರ್ಥಕೋಶ - ನ್ಯಾಯಸುಧಾ ಟಿಪ್ಪಣಿ
ಗೀತಾಭಾಷ್ಯಪ್ರಮೇಯದೀಪಿಕಾ-ಭಾವರತ್ನಕೋಶ -
ಶ್ರೀಸುಧೀಂದ್ರಯತಿಕೃತ ಬ್ರಹ್ಮಸೂತ್ರನ್ಯಾಯಸಂಗ್ರಹ ವ್ಯಾಖ್ಯಾನ
ಪ್ರಮಾಣಪದ್ಧತಿ ವ್ಯಾಖ್ಯಾನ
ವಾದಾವಲಿ ಟಿಪ್ಪಣಿ
ತಾತ್ಪರ್ಯಚಂದ್ರಿಕಾ ಟಿಪ್ಪಣಿ
ನ್ಯಾಯಾಮೃತಭೂಷಣಂ
ಭೇದೋಜ್ಜೀವನ ಟಿಪ್ಪಣಿ
ವಿರೋಧೋದ್ಧಾರ
ಮಂತ್ರರತ್ನಕೋಶ
ಶ್ರೀರಾಮತಾರಾವಲಿ
ಶ್ರೀರಾಮಗುಣಾವಲಿ
ಶ್ರೀರಾಮದಂಡಕ - ಸ್ವಕೃತ ವ್ಯಾಖ್ಯಾನ ಸಹಿತ
ಶ್ರೀನೃಸಿಂಹಸ್ತುತಿ ವ್ಯಾಖ್ಯಾನ - ಏಕಾವಲಿ
ಶ್ರೀವಿಜಯೀಂದ್ರಯತಿಕೃತ ನೃಸಿಂಹಾಷ್ಟಕ ವ್ಯಾಖ್ಯಾನ
ರಾಘವೇಂದ್ರಸ್ತೋತ್ರ ವ್ಯಾಖ್ಯಾನ
ಚತುರ್ವಿಂಶತಿಮೂರ್ತಿ ಸ್ತುತಿಃ
ಉಷಾಹರಣದೀಪಿಕಾ (ರಸರಂಜಿನಿ)
ಅಲಂಕಾರಮಂಜರಿ ವ್ಯಾಖ್ಯಾನ (ಮಧುಧಾರಾ)
ಸುಭದ್ರಾಪರಿಯಾಣಯನಾಟಕ ವ್ಯಾಖ್ಯಾನ
ವ್ಯಾಸರಾಜವಿಜಯ ವ್ಯಾಖ್ಯಾನ
ರಾಘವೇಂದ್ರವಿಜಯ ವ್ಯಾಖ್ಯಾನ
ತಂತ್ರಸಾರೋಕ್ತ ದೇವಪೂಜಾ ಪದ್ಧತಿಃ
ಹನುಮತ್ಪೂಜಾ ಪದ್ಧತಿಃ
ಪ್ರಾಣಪೂಜಾ ಪದ್ಧತಿಃ
ಭೂಗೋಲಸಂಗ್ರಹಃ
ಶ್ರವಣದ್ವಾದಶೀನಿರ್ಣಯಃ
ಯೋಗಿಂದ್ರತಾರಾವಲಿ
ಅಭಿನವ ಕಾದಂಬರಿ
ಬಿರುದಾವಲಿ
ಶಾಹುರಾಜವಿಜಯಃ
ಜಯಘೋಷಣಾ
ಚಕ್ರವಾಲ ಪ್ರಬಂಧ
ಹೀಗೆ ಅನೇಕ ಸ್ತೋತ್ರಗಳು, ಲಘುಕಾವ್ಯಗಳೆನ್ನಬಹುದಾದ ಸ್ತೋತ್ರಪ್ರಕಾರಗಳಲ್ಲಿಯೇ ವಿಶಿಷ್ಟ ಪ್ರಕಾರವೆನಿಸುವ ರಾಮತಾರಾವಲಿ, ಯೋಗಿಂದ್ರತಾರಾವಲಿಯಂತಹ ತಾರಾವಲಿ, ದಂಡಕ ಕೃತಿಗಳು. ಪೂರ್ವಾಚಾರ್ಯರು ಮಾಡಿದ ಸ್ತೋತ್ರಕ್ಕೆ ಬಹ್ವರ್ಥಗರ್ಭಿತ ಗಹನ ವ್ಯಾಖ್ಯಾನಗಳು. ಭೂಗೋಳಸಂಗ್ರಹದಂತಹ ವಿಶಿಷ್ಟ ಕೃತಿಗಳು. ದೇವಪೂಜಾಪದ್ಧತಿ, ಮಂತ್ರರತ್ನಕೋಶದಂತಹ ಆಹ್ನಿಕಗ್ರಂಥಗಳು, ಶ್ರವಣದ್ವಾದಶಿನಿರ್ಣಯದಂತಹ ನಿರ್ಣಯ ಗ್ರಂಥಗಳು, ಉತ್ತಮ ಕಾವ್ಯಗಳಿಗೆ ಉತ್ಕೃಷ್ಟ ಟಿಪ್ಪಣಿಗಳು. ಹೀಗೆ ಸರಿ ಸಾಟಿಯಿಲ್ಲದ ಗ್ರಂಥರಾಶಿಯ ನಿರ್ಮಾತೃಗಳು ಶ್ರೀಸುಮತೀಂದ್ರತೀರ್ಥರು.
ಶ್ರೀಮದಾಚಾರ್ಯರ ಪೂರ್ಣಸನ್ನಿಧಾನ, ಶ್ರೀಮಟ್ಟೀಕಾಕೃತ್ಪಾದರ ವಾಗ್ವೈಭವ, ಶ್ರೀವಿಬುಧೇಂದ್ರತೀರ್ಥರ ವಾದಿದಿಗ್ವಿಜಯ ಸಾಮರ್ಥ್ಯ, ಶ್ರೀಜಿತಾಮಿತ್ರತೀರ್ಥರ ವೈರಾಗ್ಯ, ಶ್ರೀಸುರೇಂದ್ರ ತೀರ್ಥರ ತಪಸ್ಸು, ಶ್ರೀವಿಜಯೀಂದ್ರ ತೀರ್ಥರ ಚಾತುರ್ಯ, ಶ್ರೀವಾದಿರಾಜರ ಕವಿತ್ವ, ಶ್ರೀಸುಧೀಂದ್ರತೀರ್ಥರ ಕುಶಾಗ್ರಮತಿ, ಶ್ರೀರಾಘವೇಂದ್ರತೀರ್ಥರ ಗ್ರಂಥರಚನಾಸಾಮರ್ಥ್ಯ ಇವೆಲ್ಲವೂ ಶ್ರೀಸುಮತೀಂದ್ರತೀರ್ಥರಲ್ಲಿ ಏಕತ್ರದಲ್ಲಿ ಸಮ್ಮಿಳಿತಗೊಂಡಿದ್ದವು.
ಶ್ರೀಮದಾಚಾರ್ಯರ ಗ್ರಂಥಗಳಿಗೆ ವ್ಯಾಖ್ಯಾನಿಸಿದ ಪೂರ್ವಿಕರಾದ ಶ್ರೀಮಜ್ಜಯತೀರ್ಥಗುರುಸಾರ್ವಭೌಮರ ಗ್ರಂಥಗಳಿಗೆ ಇವರು ರಚಿಸಿದ ಭಾವರತ್ನಕೋಶಾದಿ ಟಿಪ್ಪಣಿಗಳು ಪ್ರತಿಪದಾರ್ಥನಿರೂಪಣೆ, ಬೇರೆ ಬೇರೆ ವ್ಯಾಖ್ಯಾನಗಳಲ್ಲಿ ಅಭಿಪ್ರೇತ ವಿಷಯಗಳ ಉತ್ತಮ ವಿಮರ್ಶೆ, ಪೂರ್ವಾಚಾರ್ಯೋಕ್ತವಾದ ಅಭಿಪ್ರಾಯ ಸಮರ್ಥನಾ, ಪೂರ್ವಾಚಾರ್ಯರಿಂದ ಉಕ್ತಿಗಳಿಗೆ ಸ್ಪಷ್ಟಾರ್ಥನಿರೂಪಣಾ, ಅನೇಕ ಪದಪಂಕ್ತಿಗಳಿಗೆ ಅಪೂರ್ವಾರ್ಥ ಆವಿಷ್ಕಾರ ಮುಂತಾದ ಗುಣಗಳಿಂದ ವಿಭೂಷಿತವಾಗಿ ವಿದ್ವತ್ಪ್ರಪಂಚದಲ್ಲಿ ಅತ್ಯಂತ ವಿಶಿಷ್ಟ ಸ್ಥಾನ ಪಡೆದುಕೊಂಡಿವೆ.
ತಮ್ಮ ಕವಿತಾಸಾಮರ್ಥ್ಯದಲ್ಲಿ ಶ್ರೀಗಳು ಆಡುವ ಅಧಿಕಾರಯುತ ಮಾತುಗಳು ಅವರ ದಿಟ್ಟತನವನ್ನು ತೆರೆದಿಡುತ್ತವೆ, ಶ್ರೀಸುಧೀಂದ್ರತೀರ್ಥರ 'ಸುಭದ್ರಾಪರಿಯಾಣಯನಾಟಕ'ಕ್ಕೆ ವ್ಯಾಖ್ಯಾನಿಸುವಾಗ,
"ಮಯಾ ವಿನಾ ಮಲಂ ಮಲಂ ಧುನಾತಿ ಕೋ ವಿನಾ ಸುಧೀಂದ್ರಸೂಕ್ತಿಷು"
ಸುಧೀಂದ್ರಸ್ವಾಮಿಗಳ ವಾಕ್ಯಗಳಿಗೆ ವ್ಯಾಖ್ಯಾನಮಾಡಲು ನಮ್ಮನ್ನು ಹೊರತು ಪಡಿಸಿ ಇನ್ನಾರು ಸಮರ್ಥರು ?
ಎಂದು ತಮ್ಮ ಅಸಾಧಾರಣ ಪ್ರತಿಭೆಯನ್ನು ತೋರಿಸಿದ್ದಾರೆ.
ಇಂತಹ ಅಪೂರ್ವವಾದ ಅನೇಕಾನೇಕ ಗ್ರಂಥಗಳನ್ನು ಕರುಣಿಸಿದ ಮಹಾನುಭಾವರು ಶ್ರೀಸುಮತೀಂದ್ರತೀರ್ಥರು. ಇವರ ಅನೇಕ ಗ್ರಂಥಗಳು ಮಂತ್ರಾಲಯ ಶ್ರೀರಾಘವೇಂದ್ರಮಠದಿಂದ ಹಾಗೂ ಮಾಧ್ವ ವಿದ್ಯಾ ಸಂಸ್ಥೆಗಳಿಂದ ಪ್ರಕಾಶಿತಗೊಂಡಿವೆ. ಇನ್ನೂ ಹಲವು ಗ್ರಂಥಗಳು ಹಸ್ತಪ್ರತಿಯ ರೂಪದಲ್ಲೇ ಉಳಿದಿದ್ದರೇ ಇತರ ಅನೇಕ ಗ್ರಂಥಗಳು ದುರಾದೃಷ್ಟವಶಾತ್ ಅನುಪಲಬ್ಧವಾಗಿರುವುದು ನಮ್ಮೆಲ್ಲ ದೌರ್ಭಾಗ್ಯ.
ಉಪಸಂಹಾರ:
ಶ್ರೀಮದಾಚಾರ್ಯರಿಂದ ಪ್ರವರ್ತಿತವಾದ ಸದ್ವೈಷ್ಣವ ಪರಂಪರೆಯಲ್ಲಿ ಶತಶತಮಾನಗಳ ಪರ್ಯಂತ ಅನೇಕಾನೇಕ ವಿಭೂತಿಪುರುಷರು ಅವತರಿಸಿ, ತಮ್ಮ ತಪಸ್ಸು, ಜ್ಞಾನಗಳಿಂದ ಸಜ್ಜನೋದ್ಧಾರ ತತ್ಪರರಾಗಿ ಅನುಗ್ರಹ ಮಾಡಿದ್ದಾರೆ. ಹಾಗೆ ಅವತರಿಸಿ ಬಂಡ ವಿದ್ವದ್ವಿಭೂತಿಗಳಲ್ಲಿ ಕಂಗೊಳಿಸುವ ಧೃವನಕ್ಷತ್ರ ಶ್ರೀಸುಮತೀಂದ್ರಗುರುಸಾರ್ವಭೌಮರು.
ಕ್ರಿ.ಶ ೧೬೯೨ ರಿಂದ ಕ್ರಿ.ಶ ೧೭೨೫ ರ ವರೆಗೆ ೩೩ ವರ್ಷಗಳ ಕಾಲ ಶ್ರೀಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀರಾಘವೇಂದ್ರಗುರುಸಾರ್ವಭೌಮರ ವಿದ್ಯಾಮಠದ ಅಧಿಪತಿಗಳಾಗಿ ವಿಲಕ್ಷಣವಾಗಿ ಮೆರೆದ ಶ್ರೀಸುಮತೀಂದ್ರಗುರುಸಾರ್ವಭೌಮರು, ತಮ್ಮ ಶಿಷ್ಯಾಗ್ರಗಣ್ಯರಾಗಿದ್ಧ ಶ್ರೀವಿಜಯೀಂದ್ರಾಚಾರ್ಯರಿಗೆ ಚತುರ್ಥಾಶ್ರಮವನ್ನು ದಯಪಾಲಿಸಿ 'ಶ್ರೀಉಪೇಂದ್ರತೀರ್ಥರು' ಎಂಬ ಅಭಿಧಾನವನ್ನಿತ್ತು ವೇದಾಂತಸಾಮ್ರಾಜ್ಯ ಪಟ್ಟಾಭಿಷೇಕ ಮಾಡಿ ಕ್ರಿ.ಶ ೧೭೨೫ರಲ್ಲಿ ತಮ್ಮ ಪರಮಗುರುಗಳಾದ ಶ್ರೀಯೋಗಿಂದ್ರತೀರ್ಥರ ಪಕ್ಕದಲ್ಲೇ ಶ್ರೀರಂಗ ಕ್ಷೇತ್ರದಲ್ಲಿ ವೃಂದಾವನಸ್ಥರಾಗುತ್ತಾರೆ.
ಅವರ ವ್ಯಕ್ತಿತ್ವಕ್ಕೆ ತಕ್ಕಂತೆ ಅವರ ಚರಮ ಶ್ಲೋಕವಿದೆ.
ಪೂರ್ಣಪ್ರಜ್ಞಮತಾಂಭೋಧಿ ಪೂರ್ಣೇಂದುಮಕಲಂಕಿನಂ ।
ಸುಜನಾಂಬುಧಿಭಾಸ್ವಂತಂ ಸುಮತೀಂದ್ರಗುರುಂ ಭಜೇ ।।
ಇಂತಹ ಶ್ರೀರಾಯರಂತಹ ವಿಭೂತಿಪುರುಷರಿಂದ ವೇದಾಂತವಿದ್ಯಾ ಸಂಪತ್ತನ್ನು ಪಡೆದ ಶ್ರೀಸುಮತೀಂದ್ರತೀರ್ಥರಂತಹ ದೇವತೆಗಳ ಮಹಿಮೆ ತಿಳಿಯುವ ಯೋಗ್ಯತೆಯೂ ನಮ್ಮದಲ್ಲ. ಅದಕ್ಕೆ ಶ್ರೀಉಪೇಂದ್ರತೀರ್ಥರು ಶ್ರೀವಾದೀಂದ್ರತೀರ್ಥರೇ ಸರಿ. ಶ್ರೀಕೃಷ್ಣಾರ್ಪಣಮಸ್ತು
✍️ ಸಮೀರ ಜೋಶಿ
******
" ಶ್ರೀ ಸುಮತೀಂದ್ರ - 1 "
" ಶ್ರೀ ರಾಯರ ಸದ್ವಂಶ ಸಂಜಾತರೂ ಹಾಗೂ ಪೌತ್ರರೂ [ ಮೊಮ್ಮಗ ], ಶ್ರೀ ರಾಯರ ವಿದ್ಯಾ ಶಿಷ್ಯರಾದ ಶ್ರೀ ಸುಮತೀಂದ್ರತೀರ್ಥರು "
ದಿನಾಂಕ : 12.11.2020 ಗುರುವಾರ ಶ್ರೀ ಸುಮತೀಂದ್ರತೀರ್ಥರ ಆರಾಧನಾ ಮಹೋತ್ಸವ, ಶ್ರೀರಂಗಂ
ಶ್ರೀ ಪ್ರಾಣೇಶದಾಸರು...
ಕುಮತವೆಂಬಗಣೀತ ।
ತಿಮಿರ ಓಡಿಸುವಲ್ಲಿ ।
ಕಮಲಾಪ್ತನಂತಿಹ ।
ಸುಮತೀಂದ್ರತೀರ್ಥಾ ।।
" ಶ್ರೀ ಸುಮತೀಂದ್ರತೀರ್ಥರ ಸಂಕ್ಷಿಪ್ತ ಮಾಹಿತಿ "
ರಚನೆ : ಸಾಧ್ವೀ ಗಿರಿಯಮ್ಮನವರು
ಅಂಕಿತ : ಶ್ರೀ ಹರಿ ಪ್ರಸಾದಾಂಕಿತ ಹೆಳವನಕಟ್ಟೆ ರಂಗ
ರಾಮ ಶ್ರೀ ರಘುನಂದನ
ಶರಣು । ಸಾರ್ವ ।
ಭೌಮ ಭೂಸುರ ವಂದ್ಯ ।
ಸೋಮಶೇಖರ ಮಿತ್ರ
ಕಾಮಿತ ಫಲದಾತ ।
ಕಾಮಧೇನು ವಿಶ್ವ ಭೀಮ
ಸನ್ನುತ ಸೀತಾ ।। ಪಲ್ಲವಿ ।।
ಕ್ರೂರ ದಾನವ ಸಂಹಾರ
ಕೌಸಲ್ಯಾ ಕುಮಾರ । ಭೂ ।
ಭಾರ ಹರ ಭಜಕ ಜನೋದ್ಧಾರ
ವೇದಾಂತ ಸಾರ ।
ಚಾರು ವದನ ಮಣಿಹಾರ
ಕುಂಡಲಧರ ।
ವೀರ ರಾಘವ ವಿಶ್ವಾಧಾರ
ಕರುಣಿಸು ಸೀತಾ ।। ಚರಣ ।।
ಪಾಪ ರಹಿತ ಪಾವನ
ಚರಿತ ಅಹಲ್ಯಾ ।
ಶಾಪ ಹರಣ ದಿವ್ಯ
ರೂಪ ರಮಾರಮಣ ।
ತಾಪ ವಿಚ್ಛೇದನ
ತಾಮಸ ಗುಣ ಹರಣ । ದ ।
ಯಾಪರ ಬ್ರಹ್ಮ ಸ್ವರೂಪ
ಮೂರುತಿ ಸೀತಾ ।। ಚರಣ ।।
ಮದನಕೋಟಿ ಮೋಹನಾಂಗ
ಮಾಧವ ಪುಣ್ಯ ಚರಿತ ।
ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ ।
ಸದಾನಂದ ಸುಮತೀಂದ್ರ ಹೃದಯ -
ಪಂಕಜ ಭೃಂಗ ।
ಕದನ ವಿಕ್ರಮ ಬಾಹು ಕೋದಂಡ
ಧೃತ ಮೂಲ ಸೀತಾ ।। ಚರಣ ।।
ಹೆಸರು :
ಶ್ರೀ ವೀಣಾ ಮುದ್ದು ವೇಂಕಟ ಕೃಷ್ಣಾಚಾರ್ಯರು
ತಂದೆ :
ಶ್ರೀ ವೀಣಾ ವೇಂಕಟ ನಾರಾಯಣಾಚಾರ್ಯರು
ತಾತಂದಿರು :
ಶ್ರೀ ವೀಣಾ ಗುರುರಾಜಾಚಾರ್ಯರು
ಶ್ರೀ ವೀಣಾ ವೇಂಕಟನಾಥಾಚಾರ್ಯರು ( ಶ್ರೀರಾಯರು )
ಗೋತ್ರ :
ಗೌತಮ
ಮನೆತನ :
ಬೀಗಮುದ್ರೆ
ವಂಶ :
ಷಾಷ್ಟೀಕ
ಸಹೋದರರು :
1. ಶ್ರೀ ವೀಣಾ ವೇಂಕಣ್ಣಾಚಾರ್ಯರು
( ಶ್ರೀ ಯೋಗೀ೦ದ್ರತೀರ್ಥರು )
2. ಶ್ರೀ ವೀಣಾ ವಾಸುದೇವಾಚಾರ್ಯರು
( ಶ್ರೀ ಸೂರೀ೦ದ್ರತೀರ್ಥರು )
3. ಶ್ರೀ ವೀಣಾ ವಿಜಯೀ೦ದ್ರಾಚಾರ್ಯರು
( ಶ್ರೀ ಉಪೇಂದ್ರತೀರ್ಥರು )
4. ಶ್ರೀ ವೀಣಾ ಗರುಡವಾಹನ ಲಕ್ಷ್ಮೀನಾರಾಯಣಾಚಾರ್ಯರು
( ಶ್ರೀ ಮುನೀಂದ್ರತೀರ್ಥರು )
ಶ್ರೀ ಮುನೀಂದ್ರತೀರ್ಥರು - " ಶ್ರೀ ವಿಬುಧೆಂದ್ರವಿಜಯ ಮಹಾ ಕಾವ್ಯ " ವನ್ನು ರಚಿಸಿದ ಮಹಾನುಭಾವರು.
ವಿದ್ಯಾ ಗುರುಗಳು :
ಸಾಕ್ಷಾತ್ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು
ಶ್ರೀ ಮುದ್ದು ವೇಂಕಟ ಕೃಷ್ಣಾಚಾರ್ಯರು ಬಾಲ್ಯದಿಂದಲೂ ಕುಶಾಗ್ರ ಮತಿಗಳೂ - ನವನವೋನ್ಮೇಷ ಪ್ರತಿಭಾಶಾಲಿಗಳೂ - ಕಾವ್ಯ ರಚನಾ ಧುರೀಣರಾಗಿದ್ದರು.
ಅಣ್ಣಂದಿರುಗಳೊಡನೆ ಬಾಲ್ಯ ಪಾಠ - ಕಾವ್ಯಾದಿ ಸಾಹಿತ್ಯ - ವೇದಾಂತ ಗ್ರಂಥಗಳನ್ನು ತಂದೆಯವರಲ್ಲಿ ಅಧ್ಯಯನ ಮಾಡಿ - ಮುಂದೆ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರಲ್ಲಿ ತಯಾರಾಗಿದ್ದರಿಂದಲೇ ಆಚಾರ್ಯರು ನವೀನ ನ್ಯಾಯ - ತರ್ಕ - ಅಲಂಕಾರ - ಮೀಮಾಂಸಾ - ಧರ್ಮಶಾಸ್ತ್ರ - ವೇದ - ಉಪನಿಷತ್ ಸಕಲ ಶಾಸ್ತ್ರಗಳನ್ನೂ - ಷಡ್ದರ್ಶನಗಳನ್ನೂ - ಪುರಾಣ - ಇತಿಹಾಸಾದಿ ಸಕಲ ವಿದ್ಯೆಗಳಲ್ಲಿಯೂ ಅನಿತರ ಸಾಧಾರಣ ಪಾಂಡಿತ್ಯವನ್ನು ಸಂಪಾದಿಸಿ ದಕ್ಷಿಣ ಭಾರತದ ಅಂದಿನ ವಿದ್ವನ್ಮಂಡಳಿಯಲ್ಲಿ ಅಗ್ರಸ್ಥಾನ ಗಳಿಸಿ ವಿಖ್ಯಾತರಾದರು.
" ಪೂರ್ವಾಶ್ರಮದಲ್ಲಿ ರಚಿತವಾದ ಗ್ರಂಥಗಳು "
1. ಬಿರುದಾವಳೀ
2. ಜಯಘೋಷಣಾ
3. ಶಾಹು ವಿಜಯ ( ಅಲಂಕಾರ ಗ್ರಂಥ )
4. ಶಾಹುರಾಜ ಪ್ರಸಂಗ
5. ಚಕ್ರವಾಲ ಪ್ರಬಂಧ
6. ನಾರಾಯಣೀಯ ಗಾಥಾ ಪ್ರಬಂಧ
" ಶ್ರೀ ರಾಯರ ಪ್ರೀತಿಪಾತ್ರರು "
ಶ್ರೀ ರಾಘವೇಂದ್ರತೀರ್ಥರು ಗುರುಸಾರ್ವಭೌಮರು ತಮ್ಮ ವಿದ್ಯಾ ಶಿಷ್ಯರಾದ ಶ್ರೀ ಮುದ್ದು ವೇಂಕಟ ಕೃಷ್ಣಾಚಾರ್ಯರ ಪಾಂಡಿತ್ಯಾತಿಸಹಾಯವನ್ನು ಕಂಡು ಹರ್ಷಿತರಾಗಿದ್ದರು.
ಶ್ರೀ ರಾಯರು ಶ್ರೀ ಮುದ್ದು ವೇಂಕಟ ಕೃಷ್ಣಾಚಾರ್ಯರಿಂದ ಶ್ರೀಮದಾಚಾರ್ಯರ ಮಹಾ ಸಂಸ್ಥಾನವು ಅತ್ಯಂತ ಪ್ರವರ್ಧಮಾನವಾಗಿ ತಾವು ರಚಿಸಿದ ಗ್ರಂಥಗಳ ಪಾಠ ಪ್ರವಚನಗಳು ಶ್ರೀಮದಾಚಾರ್ಯ ಪರಂಪರಾ ಪ್ರಾಪ್ತ ಸತ್ಸಂಪ್ರದಾಯಾನುಸಾರವಾಗಿ ವಿಶೇಷ ರೀತಿಯಿಂದ ಜರುಗುವುದೆಂದು ತೃಪ್ತರಾದರು ಮತ್ತು ಮುಂದೆ ವಾದಿ ದಿಗ್ವಿಜಯ - ಸಿದ್ಧಾಂತ ಸ್ಥಾಪನೆ - ಪಾಠ ಪ್ರವಚನಗಳಿಗೆ ಸಹಾಯಕವಾಗಲೆಂದು ಶ್ರೀ ರಾಯರು ಉಡುಪಿಯಲ್ಲಿದ್ದಾಗ..
1. ನ್ಯಾಯಮುಕ್ತಾವಲೀ
2. ತಂತ್ರದೀಪಿಕಾ
3. ಚಂದ್ರಿಕಾಪ್ರಕಾಶ ಮೊದಲಾದ ಗ್ರಂಥಗಳನ್ನು ರಚಿಸಿದರು.
ಈ ವಿಚಾರವು ಶ್ರೀ ರಾಘವೇಂದ್ರ ವಿಜಯ ಮಹಾ ಕಾವ್ಯದಲ್ಲಿ..
ಭಾವ್ಯಸಂಶಯಮಹೋ ಗುರುವಂಶೇ
ದರ್ಶನಶ್ರುತಿಪರಃ ಸುಮತೀಂದ್ರ: ।
ತಸ್ಯ ಸಾರ್ಥಕಮಿದಂ ಸಕಲಂ
ಸಾದಿತ್ಯವೇದ್ಯ ಕೃತವಾನ್ ಕೃತಿಸಾರ್ಥಮ್ ।।
ಇದರಿಂದ ಶ್ರೀ ಮುದ್ದು ವೇಂಕಟ ಕೃಷ್ಣಾಚಾರ್ಯರಲ್ಲಿ ಶ್ರೀ ಗುರುಸಾರ್ವಭೌಮರಿಗಿದ್ದ ಅಪಾರ ಪ್ರೇಮಾನುಗ್ರಹಗಳು ವ್ಯಕ್ತವಾಗುವವು.
ಶ್ರೀ ಗುರುರಾಜ ಗುರುಸಾರ್ವಭೌಮರ ಪರಮ ಪ್ರೀತಿಗೆ ಪಾತ್ರರಾದ ಶ್ರೀ ಮುದ್ದು ವೇಂಕಟ ಕೃಷ್ಣಾಚಾರ್ಯರೆಷ್ಟು ಭಾಗ್ಯಶಾಲಿಗಳು!!
***
" ಶ್ರೀ ಸುಮತೀಂದ್ರ - 2 "
" ಆಶ್ರಮ ಗುರುಗಳು "
ಶ್ರೀ ಸೂರೀ೦ದ್ರತೀರ್ಥರು
ಶ್ರೀ ಪ್ರಸನ್ನ ವೆಂಕಟದಾಸರು...
ಶ್ರೀ ಸುಮತೀಂದ್ರತೀರ್ಥರು, ಶ್ರೀ ಯೋಗೀ೦ದ್ರತೀರ್ಥರ ಕರಕಮಲ ಸಂಜಾತರಾದ ಶ್ರೀ ಸೂರೀ೦ದ್ರತೀರ್ಥರ ವರ ಪುತ್ರಕರೆಂದು ಶ್ರೀ ಪ್ರಸನ್ನ ವೆಂಕಟದಾಸರು ಸ್ಪಷ್ಟ ಪಡಿಸಿದ್ದಾರೆ.
ರಾಗ : ಹಂಸಾನಂದೀ ತಾಳ : ಆದಿ
ಶರಣು ಮುನಿಮಣಿಯೇ
ಸುಮತೀಂದ್ರಾ ।
ಕರುಣಾಮೃತದ ಖಣಿಯೇ ।
ಶರಣೆಂದವರಿಗೆ ವರ
ಚಿಂತಾಮಣಿಯೇ ।
ಧರಿಯ ಮೇಲಿನೊಬ್ಬ
ಧೊರೆ ನಿನಗೆಣೆಯೇ ।। ಪಲ್ಲವಿ ।।
ಸಂತತ ಸೇವಕ
ಸಂತರಿಗೊಲಿದೀಗ ।
ಸಂತತಿ ಸಂಪದ-
ವಿತ್ತೆ ಬೇಗ ।
ಶಾಂತ ಶುಭಗುಣ ವ-
ಸಂತನೆಂಬೋ ಕೀರ್ತಿ । ವಿ ।
ಶ್ರಾಂತಿಯಮಿತ ದಿ-
ಗಂತಕೆ ವಾರ್ತೆ ।। ಚರಣ ।।
ತಾಳ ತಮ್ಮಟೆ ಕಂಬು
ಕಾಳೆ ಬಿರುದು ಬುಧ ।
ಮೇಳದಿಂ ಶಿಷ್ಯ ಜನಾಲಯಕೆ
ಸಾಲುದೀವಿಗೆ ।
ಯೊಳು ಮಾಲಿಕೆ
ಗ್ರಹಿಸಿ ಅಂದೋಳಿ ।
ಗ್ರಹಿಸಿ ಬಂದು ಪಾಲಿಪೆ
ಅವರ ।। ಚರಣ ।।
ಪ್ರಸನ್ನವೆಂಕಟಾಚಲ ವಾಸ
ಮೂಲರಾಮನ ಪಾದ ।
ನಿಶಿ ದಿನಾರ್ಚಿಸುವೆ
ಸಂತೋಷ ಸಾಂದ್ರ ।
ಋಷಿ ಯೋಗೀ೦ದ್ರರ ಕರ
ಬಿಸಜಜ ಸೂರೀ೦ದ್ರ ।
ಸುಶರಧಿ ಸಂಭವ ಶಶಿ
ಸುಮತೀಂದ್ರ ।। ಚರಣ ।।
" ಆಶ್ರಮ ನಾಮ "
ಶ್ರೀ ಸುಮತೀಂದ್ರತೀರ್ಥರು
" ವೇದಾಂತ ಸಾಮ್ರಾಜ್ಯಾಧಿಪತ್ಯ "
ಕ್ರಿ ಶ 1692 - 1725
" ಗ್ರಂಥಗಳು "
ರಚನೆ :
ಶ್ರೀ ಪ್ರಸನ್ನ ವೆಂಕಟದಾಸರು
ಅಂಕಿತ :
ಶ್ರೀ ಶ್ರೀನಿವಾಸ ಪ್ರಸಾದಾಂಕಿತ " ಪ್ರಸನ್ವೆಂಕಟ "
ಸಲಹು ಸುಖತೀರ್ಥ ಮತ
ಜಲಧಿ ಚಂದ್ರ ।
ನಳನೀಶಾರ್ಚಕ ಇಂದ್ರ
ಇಳೆಗೆ ಸುಮತೀಂದ್ರ ಸಲಹು ।। ಪಲ್ಲವಿ ।।
ಅತುಳ ತತ್ತ್ವಾರ್ಥ ಗೋಪ್ರ-
ತತಿ ಸಂಪೂರ್ಣ । ದು ।
ರ್ಮತಿ ಮಾಯಿಮತ
ತಮ ವಿಷದಗುಣ ।
ಸತತ ವಿದ್ವತ್ ಕುಮುದ
ಪ್ರತಿಪಾಲಕನೆ । ಕರುಣಾ ।
ಮೃತ ಭರಿತ ವದನ ಖ-
ಚಿತ ಯಶೋಭರಣ ।। ಚರಣ ।।
ಸುಜ್ಞಾನ ಸುರಭಿಯುತ
ಅಜ್ಞ ಜಂಭಾರಿ ಛಳಿ । ವೈ ।
ರಾಗ್ಯ ಭಕುತ್ಯಾದಿ
ವಸು ಭಾಗ್ಯಶಾಲಿ ।
ಯಜ್ಞೇನ ಶುಕನ ಮತ-
ವಜ್ಞನ ದಂಭೋಳಿ ।
ವಾಗ್ರತ್ನಮಾಲಿ ಮುನಿವರ್ಗ
ಶುಭ ಮೌಳಿ ।। ಚರಣ ।।
ಧೀರ ಯೋಗೀ೦ದ್ರಕರ
ವಾರಿಜೋದ್ಭವ ಯೋಗಿ ।
ಸೂರೀ೦ದ್ರ ಭವಕಲ್ಪ-
ಭೂರುಹ ಸುತ್ಯಾಗಿ ।
ಧಾರುಣಿಗೆ ಪ್ರಸನ್ವೆಂಕಟ
ಮೂಲರಾಮ ಪ್ರಿಯವಾಗಿ ।
ಈರ ಮತ ಸ್ಥಾಪಿಸಿದೆ
ಮೀರಿ ಚೆನ್ನಾಗಿ ।। ಚರಣ ।।
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ತರುವಾಯ ದ್ವೈತಮತದಲ್ಲಿ ಶ್ರೀ ಸುಮತೀಂದ್ರತೀರ್ಥರ ಸ್ಥಾನ ನಿರುಪಮವಾದುದು.
ವೇದಾಂತ ದರ್ಶನಗಳಲ್ಲಿ ಋಕ್ ಪ್ರಸ್ಥಾನ - ಸೂತ್ರ ಪ್ರಸ್ಥಾನ - ಗೀತಾ ಪ್ರಸ್ಥಾನ ಹೀಗೆ ಪ್ರಸ್ಥಾನ ತ್ರಯಗಳಲ್ಲಿ ಗ್ರಂಥ ರಚನೆ ಮಾಡಿದವರನ್ನು ವಿದ್ವತ್ಪ್ರಪಂಚವು ಅಸಾಧಾರಣವಾಗಿ ಪೂಜಿಸುವುದು ಕಂಡು ಬಂದಿದೆ.
ಶ್ರೀ ಸುಮತೀಂದ್ರತೀರ್ಥವು ಕೂಡಾ ಇಂಥಹಾ ಅಪೂರ್ವ ಗುಂಪಿಗೆ ಸೇರಿದ ಮಹನೀಯರು.
***
" ಶ್ರೀ ಸುಮತೀಂದ್ರ - 3 "
ಶ್ರೀ ಸುಮತೀಂದ್ರತೀರ್ಥರು ಪ್ರಸ್ಥಾನ ತ್ರಯಗಳಿಗೂ " ಭಾವರತ್ನಕೋಶ " ಎಂಬ ಪ್ರೌಢ ವಿದ್ವನ್ಮಾನ್ಯ ಗ್ರಂಥಗಳನ್ನು ರಚಿಸಿದ್ದಾರೆ ಮತ್ತು ನ್ಯಾಯ - ವ್ಯಾಕರಣ - ಅಲಂಕಾರ - ಸಾಹಿತ್ಯಾದಿ ಶಾಸ್ತ್ರಗಳಲ್ಲಿಯೂ ಅಪೂರ್ವ ಕೃತಿಗಳನ್ನು ರಚಿಸಿದ್ದಾರೆ.
ಹೀಗೆ ಅಸಾಧಾರಣ ಜ್ಞಾನಕಾರ್ಯ ಮಾಡಿದ್ದರಿಂದಲೇ ಶ್ರೀ ಸುಮತೀಂದ್ರತೀರ್ಥರನ್ನು ವಿದ್ವಜ್ಜನರು " ಎರಡನೇ ವಿಜಯೀ೦ದ್ರರು " ಮತ್ತು " ಸರ್ವತಂತ್ರ ಸ್ವತಂತ್ರರು " ಎಂದು ಗೌರವಿಸುತ್ತಾರೆ.
1. ಋಗ್ಭಾಷ್ಯಟೀಕಾ ಭಾವರತ್ನಕೋಶ
2. ಬ್ರಹ್ಮಸೂತ್ರಭಾಷ್ಯ ತತ್ತ್ವಪ್ರಕಾಶಿಕಾ ಭಾವರತ್ನಕೋಶ
3. ಸವ್ಯಾಖ್ಯಾ ಮಂತ್ರರತ್ನಕೋಶ ( ಮಹಾ ಮಂತ್ರಗಳ ಉದ್ಧಾರ )
4. ಗೀತಾಭಾಷಾ ಪ್ರಮೇಯದೀಪಿಕಾ ಭಾವರತ್ನಕೋಶ
5. ಸುಭದ್ರಾಪರಿಣಯ ನಾಟಕ ವ್ಯಾಖ್ಯಾನ
6. ಅಲಂಕಾರ ಮಂಜರೀ ವ್ಯಾಖ್ಯಾನ " ಮಧುಧಾರಾ "
7. ಉಷಾಹರಣ ಕಾವ್ಯ ವ್ಯಾಖ್ಯಾನ ( ರಸಿಕರಂಜನೀ )
8. ವ್ಯಾಸರಾಜ ವಿಜಯ ವ್ಯಾಖ್ಯಾನ
9. ಚಂದ್ರಿಕಾ ವ್ಯಾಖ್ಯಾನ
10. ನ್ಯಾಯಾಮೃತ ವ್ಯಾಖ್ಯಾನ
11. ಶ್ರೀ ರಾಘವೇಂದ್ರ ಸ್ತೋತ್ರ ವ್ಯಾಖ್ಯಾನಮ್
12. ರಾಜಸ್ತುತಿ:
13. ಯೋಗೀ೦ದ್ರ ತಾರಾವಲೀ
14. ರಾಮತಾರಾವಲೀ
15. ಅಧಿಕರಣರತ್ನಮಾಲಾ
( ಬ್ರಹ್ಮ ಮೀಮಾಂಸಾರ್ಥ ಬೋಧಕ ಗ್ರಂಥ )
16. ನರಸಿಂಹಸ್ತುತಿ ವ್ಯಾಖ್ಯಾನ
( ಏಕಾವಳೀ )
17. ವಾಕ್ಯಾರ್ಥರತ್ನಕೋಶ: ಸುಧಾ ಟಿಪ್ಪಣಿ
( ಪರಿಮಳಾನುಸಾರಿ )
18. ಹನುಮತ್ಪೂಜಾವಿಧಿ:
19. ಭೂಗೋಲ ಸಂಗ್ರಹಃ
20. ಶ್ರವಣ ದ್ವಾದಶೀ ವಿಷಯಕ ಪ್ರಮಾಣ ಸಂಗ್ರಹಃ
21. ಬ್ರಹ್ಮಸೂತ್ರ ನ್ಯಾಯ ಸಂಗ್ರಹ ವ್ಯಾಖ್ಯಾನ
( ಶ್ರೀ ಸುಧೀಂದ್ರತೀರ್ಥರ ಗ್ರಂಥಕ್ಕೆ ವ್ಯಾಖ್ಯಾನ )
22. ಅಷ್ಟ ಮಹಾಮಂತ್ರ ವಿವರಣಮ್
23. ಭಾವರತ್ನ ಮಂಡನಮ್
24. ಸಂಸ್ಕೃತ ಪತ್ರಿಕಾ ಜಾಲ:
25. ವಿರೋಧೋದ್ಧಾರಃ
26. ಸುವ್ಯಾಖ್ಯಾ ದೇವರಾಜ ಸ್ತುತಿ:
27. ಶ್ರೀ ರಾಘವೇಂದ್ರ ವಿಜಯ ವ್ಯಾಖ್ಯಾನಮ್
28. ಪ್ರಮಾಣ ಪದ್ಧತಿ ವ್ಯಾಖ್ಯಾನಮ್
29. ಭೇದೋಜ್ಜೀವನ ಟಿಪ್ಪಣಿ
30. ವಾದವಳೀ ಟಿಪ್ಪಣಿ
31. ತಂತ್ರಸಾರ ವ್ಯಾಖ್ಯಾನಮ್
32. ರಾಮ ದಂಡಕ:
33. ಯೋಗೀ೦ದ್ರವಿಜಯಃ
34. ಅಭಿನವ ಕಾದಂಬರೀ
ಆಶ್ರಮ ಪೂರ್ವದಲ್ಲಿ = 6 ಗ್ರಂಥಗಳನ್ನೂ;
ಆಶ್ರಮಾನಂತರ = 36 ಗ್ರಂಥಗಳನ್ನೂ -
ಒಟ್ಟು 40 ಗ್ರಂಥಗಳನ್ನು ರಚಿಸಿದ್ದಾರೆ.
ಆಶ್ರಮ ಶಿಷ್ಯರು :
ಶ್ರೀ ಉಪೇಂದ್ರತೀರ್ಥರು
" ದ್ವೈತ ರವಿ ಅಸ್ತಂಗತ "
ರಚನೆ :
ಶ್ರೀ ಕುರುಡಿ ರಾಘವೇಂದ್ರಾಚಾರ್ಯರು
ಅಂಕಿತ :
ಶ್ರೀ ಪಂಚಮುಖಿ ಪ್ರಾಣದೇವರ ಪ್ರಸಾದಾಂಕಿತ " ಲಕುಮೀಶ "
ಶ್ರೀರಂಗದಲಿ ರಾಜಿಪ ಶ್ರೀ -
ಸುಮತೀಂದ್ರತೀರ್ಥರ ।
ವಾರಿಜಂಘ್ರಿಯ ಸ್ತುತಿಪೆ ।। ಪಲ್ಲವಿ ।।
ಸಾರಿದವರ ದುಷ್ಟ
ಘೋರ ಪಾಪವ ಕಳೆದು ।
ನಾರಾಯಣನೂರ
ದಾರಿಯ ತೋರುವ ।। ಅ ಪ ।।
ಮಾರುತ ಮಧ್ವಶಾಸ್ತ್ರ
ವಾರಿಧಿ ಮೀನರೆನಿಸೆ ।
ಸೂರೀ೦ದ್ರ ಮುನಿವರರು ।
ಧಾರುಣಿ ಸುತ್ತೆ ವಲ್ಲಭಾಂಘ್ರಿಯ ।
ವಾರಿಜಂಗಳ ನೆನೆದು ಕೋವಿದ ।
ಸೇರ್ದ ಸಭೆಯೊಳು ಸುಮತೀಂ-
ದ್ರರೆಂದು ಚಾರು ಸಂನ್ಯಾಸ
ನೀಡೆ ಮೆರೆದಂಥ ।। ಚರಣ ।।
ಕಾಲಕಾಲದಿ ಶ್ರೀ ಮೂಲ-
ರಾಮನ ಅರ್ಚಿಸಿ ।
ಶೀಲ ಸದ್ಗುಣಿಯೆನಿಸಿ ।
ಆಲಿಸಿ ಮತ ತ್ರಯದ ಮೇಳ ।
ಜಾಲ ವೈಭವದಿಂದ ಮಧುರೆಲಿ ।
ಶೀಲೆ ರಾಣಿ ಮಂಗಮ್ಮನಿದಿರೊಳು ।
ಲೀಲೆಯಲಿ ವಾಕ್ಯಾರ್ಥ
ಗೆದ್ದಿರ ।। ಚರಣ ।।
ಮಂಗಮ್ಮ ಇವರೀಗೆ ವೈಕುಂಠ
ವಾಸುದೇವನ ।
ಶೃಂಗರದ ಕಲ್ಪವೃಕ್ಷ ।
ಸಂಗರದೊಳಾ
ನೀಡೆ ಇವರಿಗೆ ।
ಇಂಗಿತಜ್ಞ ಉಪೇಂದ್ರತೀರ್ಥಗೆ ।
ರಂಗ ಶ್ರೀ ಲಕುಮೀಶ
ಮೂಲರಾಮನ ।
ಮಂಗಳೋತ್ಸವ
ದಿಂದ ಗೆದ್ದರ ।। ಚರಣ ।।
ಶ್ರೀ ಸುಮತೀಂದ್ರತೀರ್ಥರು 1692 ರಿಂದ 1725 ರ ವರೆಗೆ ಸುಮಾರು 33 ವರ್ಷಗಳ ಕಾಲ ದ್ವೈತ ವೇದಾಂತ ದಿಗ್ವಿಜಯ ಸಿಂಹಾಸನವನ್ನಾಳಿ ಸರ್ವ ಮಾನ್ಯರಾಗಿ ಕೊನೆಗೆ ಶ್ರೀ ಗುರುಸಾರ್ವಭೌಮರ ಆದೇಶದಂತೆ ತಮ್ಮ ಪೂರ್ವಾಶ್ರಮ ಸಹೋದರರೂ; ಶ್ರೀ ರಾಯರ ವಿದ್ಯಾ ಶಿಷ್ಯರೂ ಮತ್ತು ಮಹಾ ಪಂಡಿತರಾದ ಶ್ರೀ ವಿಜಯೀ೦ದ್ರಾಚಾರ್ಯರಿಗೆ ತುರ್ಯಾಶ್ರಮ ನೀಡಿ " ಉಪೇಂದ್ರತೀರ್ಥ " ರೆಂಬ ಅಭಿದಾನದಿಂದ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ ಮಾಡಿ, ಶ್ರೀಮದಾಚಾರ್ಯರ ಮಹಾ ಸಂಸ್ಥಾನವನ್ನು ಒಪ್ಪಿಸಿಕೊಟ್ಟು.......
" ಆಶ್ವಯುಜ ಬಹುಳ ದ್ವಾದಶೀ "
( 1725 ) ಯಂದು ತಮ್ಮ ಪರಮ ಗುರುಗಳಾದ ಶ್ರೀ ಯೋಗೀ೦ದ್ರತೀರ್ಥರ ಬೃಂದಾವನದ ಪಾರ್ಶ್ವದಲ್ಲಿ ಇಹಲೋಕ ವ್ಯಾಪಾರವನ್ನು ಮುಗಿಸಿ ಶ್ರೀ ನಾರಾಯಣ ಧ್ಯಾನಪರರಾಗಿ ಅಮರಾದರು!!
ಶ್ರೀಭೂದುರ್ಗಾ ಸಮೇತಂ
ಮಣಿಮಯವಪುಷ೦
ಶೇಷಶಯ್ಯಾವಿಲಾಸಂ
ನೀಲಾರ್ಚ್ಯ೦ ವಾಸುದೇವಂ
ಸ್ವಕುಲ ನೃಪತಿಭಿ:
ಪ್ರಾಚ್ಯಮಾನಂ ಸುಭಕ್ತ್ಯಾ ।
ಪಾರಂಪರ್ಯೇಣ ರಾಜ್ಞೇ
ಸ್ವಕುಲ ಗುರುಭರೋ:
ಶಾಸ್ತ್ರಕಾವ್ಯಾದಿಕರ್ತೇ
ದತ್ವಾ ವಿದ್ಯಾಪ್ತಿಕೀರ್ತೇ
ಸ್ಸುಮತಿಯತಿವರಾಯೇ
ಷ್ಟಸಿಧೈ ನ ನಾಮ ।।
ಶ್ರೀಮಧ್ವಮತ ದುಗ್ಧಾಬಿಧಿ
ಸಂಭೂತಂ ದ್ವಿಜ ಸೇವಿತಾಮರ ।
ವಂದೇ ವಿಷ್ಣು ಪಾದಸಕ್ತ೦
ಸುಮತೀಂದ್ರ ಕಲಾನಿಧಿಮ್ ।।
ಪೂರ್ಣಪ್ರಜ್ಞ ಮತಾಂಬೋಧಿ
ಪೂರ್ಣೇ೦ದುಮಕಲಂಕಿನಮ್ ।
ಸುಜನಾಂಬುಧಿ ಭಾಸ್ವಂತಂ
ಸುಮತೀಂದ್ರ ಗುರು೦ಭಜೇ ।।
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
*****
ಶ್ರೀ ಸುಮತೀಂದ್ರತೀರ್ಥಗುರುಸಾರ್ವಭೌಮರ ಪರಮಾನುಗ್ರಹ
ಒಬ್ಬ ಮಾಧ್ವ ಜ್ಞಾನಿ ಯಾವ ರೀತಿ ಅಧ್ಯಯನ ಮಾಡಬೇಕು, ಎಷ್ಟು ತಲಸ್ಪರ್ಶಿ ಅಧ್ಯಯನ ಮಾಡಬೇಕು ಎನ್ನುವದಕ್ಕೆ ಸಾಟಿಯಿಲ್ಲದ ದೃಷ್ಟಾಂತ ಅದು ನಮ್ಮ ಶ್ರೀಸುಮತೀಂದ್ರತೀರ್ಥಗುರುಸಾರ್ವಭೌಮರು.
ಶ್ರೀಮದಾಚಾರ್ಯರು, ಶ್ರೀಮಟ್ಟೀಕಾಕೃತ್ಪಾದರು ಮತ್ತು ಶ್ರೀಮಚ್ಚಂದ್ರಿಕಾಚಾರ್ಯರೆಂಬ ಮುನಿತ್ರಯರ ಗ್ರಂಥಗಳು, ಶ್ರೀಪದ್ಮನಾಭತೀರ್ಥರು, ಶ್ರೀಮತ್ ತ್ರಿವಿಕ್ರಮಂಡಿತಾಚಾರ್ಯರು ಮುಂತಾದ ಮಹನೀಯ ಜ್ಞಾನಿವರೇಣ್ಯರಿಂದ ಆರಂಭಿಸಿ ಸಕಲ ಸತ್ತತ್ವಗಳನ್ನೂ ಅತ್ಯಂತ ಸರಳವಾಗಿ ನಿರೂಪಿಸಿದ ನಮ್ಮ ಮಂತ್ರಾಲಯಪ್ರಭುಗಳ ಗ್ರಂಥಗಳವರೆಗೆ ಸಕಲವನ್ನೂ ಪರಿಪೂರ್ಣವಾಗಿ ಅಧ್ಯಯನ ಮಾಡಿದ ಮಹಾನುಭಾವರು ಶ್ರೀ ಸುಮತೀಂದ್ರತೀರ್ಥಗುರುಸಾರ್ವಭೌಮರು.
ಅವರ ಮಾಹಾತ್ಮ್ಯ ಎಷ್ಟು ದೊಡ್ಡದು ಎಂದರೆ, ರಾಯರನ್ನು ಅವರ ಶಿಷ್ಯರು ಕೇಳುತ್ತಾರೆ — ತಾವು ಇಷ್ಟೆಲ್ಲ ಗ್ರಂಥಗಳನ್ನು ರಚಿಸುತ್ತಿದ್ದೀರಿ, ಇವನ್ನು ಅಧ್ಯಯನ ಮಾಡುವ ಮುಖ್ಯಾಧಿಕಾರಿಗಳು ಯಾರು ಎಂದು, ರಾಯರು ನುಡಿಯುತ್ತಾರೆ — ಮುಂದೆ ಬರಲಿರುವ ಸುಮತೀಂದ್ರತೀರ್ಥರು ಈ ಗ್ರಂಥಗಳನ್ನೆಲ್ಲ ಪರಿಪೂರ್ಣವಾಗಿ ಓದಿ ಅದರ ಫಲ ಪಡೆಯುವವರು ಎಂದು.
ಹೀಗೆ ನಮ್ಮ ರಾಘವೇಂದ್ರತೀರ್ಥಗುರುಸಾರ್ವಭೌಮರಿಂದಲೇ ಶ್ಲಾಘಿತರಾದ ಶ್ರೀಸುಮತೀಂದ್ರತೀರ್ಥಶ್ರೀಪಾದಂಗಳವರ ಅಧ್ಯಯನದ ವ್ಯಾಪ್ತಿ ಮಹಾಜ್ಞಾನಿಗಳಿಗೂ ಅನೂಹ್ಯವಾದದ್ದು.
ಮಧ್ವಸಿದ್ಧಾಂತದ ಪ್ರತಿಯೊಂದು ತತ್ವದ ಕುರಿತೂ ಅವರು ಇದಮಿತ್ಥಂ ನಿರ್ಣಯ ನೀಡಿದ್ದಾರೆ.
ನೈವೇದ್ಯದ ಕುರಿತ ಶ್ರೀಸುಮತೀಂದ್ರತೀರ್ಥರ ನಿರ್ಣಯ
ನಾವು ಪ್ರತಿದಿವಸ ದೇವರಿಗೆ ನೈವೇದ್ಯ ಮಾಡುತ್ತೇವೆ. ಅದನ್ನು ದೇವರು ಸ್ವೀಕರಿಸುತ್ತಾನೆಯೋ ಇಲ್ಲವೋ?
ಸ್ವೀಕರಿಸುವದಿಲ್ಲ ಎಂದಾದಲ್ಲಿ, ನಾವೇಕೆ ನೈವೇದ್ಯ ಮಾಡಬೇಕು ಮತ್ತು ನೈವೇದ್ಯ ಮಾಡಿದ್ದು ಪ್ರಸಾದ ಎಂದು ಹೇಗಾಗಲು ಸಾಧ್ಯ?
ಸ್ವೀಕರಿಸುತ್ತಾನೆ ಎಂದರೆ, ಈ ಪ್ರಾಕೃತ ಪದಾರ್ಥಗಳನ್ನು ದೇವರು ಉಣ್ಣುತ್ತಾನೆ ಎಂದಾಯಿತು. ಅಂದ ಮೇಲೆ ಅದರಿಂದ ಸುಖ ದುಃಖಗಳಿವೆ ಎಂದಾಯಿತು. ದುಃಖವಿಲ್ಲ ಕೇವಲ ಸುಖವಿದೆ ಎಂದರೂ, ದೇವರಿಗೆ ಇದರಿಂದ ಸುಖ ‘ಉಂಟಾಯಿತು’ ಹೊಸದಾಗಿ ಉತ್ಪನ್ನವಾಯಿತು ಎಂದಾಯಿತು. ಅಂದರೆ ದೇವರಿಗೂ ನಮ್ಮಂತೆ ಹೊಸದಾಗಿ ಸುಖ ನಿರ್ಮಾಣವಾಗುತ್ತದೆ ಎಂದಾಯಿತು. ದೇವರಲ್ಲಿ ಹೊಸದಾಗಿ ಸುಖ ಬಂದರೆ ಅವನು ವಸ್ತು, ವಾಸ್ತವ ಹೇಗಾದ? ಅವನು ಅನಾದಿಕಾಲದಿಂದಲೂ ಒಂದೇ ರೀತಿಯಲ್ಲಿ ಇರುವವನಲ್ಲವೇ ?
ದೇವರು ಎಲ್ಲವನ್ನೂ ಅನುಭವಿಸುತ್ತಾನೆಯೇ ಎನ್ನುವದು ಮತ್ತೊಂದು ಪ್ರಶ್ನೆ. ಇಲ್ಲ ಎಂದಾದರೆ ದೇವರಿಗೆ ದುಃಖ, ನೋವು, ದುಷ್ಟಪದಾರ್ಥಗಳ ಜ್ಞಾನವಿಲ್ಲ ಎಂದಾಯಿತು. ಮತ್ತು “ಭುಂಕ್ತೇ ವಿಶ್ವಭುಕ್” ಎಂಬ ಮಾತು ಸುಳ್ಳಾಗುತ್ತದೆ. ಎಲ್ಲವನ್ನೂ ಅನುಭವಿಸುತ್ತಾನೆ ಎಂದಾದರೆ, ದೇವರಿಗೂ ದುಃಖ, ದುರ್ಗಂಧ, ದುಷ್ಟಪದಾರ್ಥಗಳಿಂದ ತೊಂದರೆಯಾಗಬೇಕಲ್ಲವೇ?
ಅದರ ಜೊತೆಯಲ್ಲಿ ಸಂಸಾರದಲ್ಲಿರುವ ನಾವು ತಿನ್ನದೇ, ಕುಡಿಯದೇ, ಪದಾರ್ಥಗಳನ್ನು ಅನುಭವಿಸದೇ ಇರಲು ಸಾಧ್ಯವಿಲ್ಲ. ಈ ಪದಾರ್ಥಗಳ ಅನುಭವವೇ ನಮ್ಮನ್ನು ಮತ್ತೆ ಸಂಸಾರದಲ್ಲಿ ಬೀಳುವಂತೆ ಮಾಡುವದು. ಹಾಗಾದರೆ ಇದರಿಂದ ಉದ್ಧಾರವಾಗುವ ಬಗೆಯೆಂತು ಎಂಬ ಪ್ರಶ್ನೆಗಳಿಗೆ
ನಮ್ಮ ಶ್ರೀ ಸುಮತೀಂದ್ರತೀರ್ಥಗುರುಸಾರ್ವಭೌಮರು ತಮ್ಮ ಭಾವರತ್ನಕೋಶ ಎಂಬ ಗ್ರಂಥದಲ್ಲಿ ಅತ್ಯಂತ ವಿಸ್ತೃತವಾಗಿ ಈ ತತ್ವವನ್ನು ಚರ್ಚಿಸಿ ಭಗವತ್ಪಾದರ ಅಭಿಪ್ರಾಯವನ್ನು ನಮಗೆ ನಿರ್ಣಯಿಸಿ ತಿಳಿಸಿದ್ದಾರೆ. ಆ ಕೆಳಗಿನ ಲಿಂಕಿನಲ್ಲಿ ಆ ಮಹಾನುಭಾವರ ವಾಣಿಗಳ ಅನುವಾದವಿದೆ.
http://vishwanandini.com/fullupanyasa.php?serialnumber=VNU574
ಕೇಳಿ. ಉತ್ತರ ಪಡೆಯಿರಿ. ತತ್ವವನ್ನು ತಿಳಿದು ಆ ಶ್ರೀರಂಗಕ್ಷೇತ್ರ ನಿವಾಸಿಗಳಾದ ಶ್ರೀಸುಮತೀಂದ್ರತೀರ್ಥಗುರುರಾಜರ ಚರಣಕ್ಕೆ ಭಕ್ತಿಯಿಂದ ನಮಸ್ಕಾರಗಳನ್ನು ಸಲ್ಲಿಸಿ.
ಆಶ್ವೀನ ಕೃಷ್ಣ ದ್ವಾದಶಿ ಆ ವೈಷ್ಣವೋತ್ತಮರ ಅರಾಧನೆ. ಅವರ ಕಾರುಣ್ಯ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥನೆ ಮಾಡುತ್ತ ಜೀವಸರ್ವಸ್ವದ ಭಕ್ತಿಯಿಂದ ಅವರಿಗೆ ಶರಣಾಗುತ್ತೇನೆ.
— ವಿಷ್ಣುದಾಸ ನಾಗೇಂದ್ರಾಚಾರ್ಯ from vishwanandini app
*******
year 2020
No comments:
Post a Comment