Friday, 19 February 2021

lakshminarayanaru 1900+ ಲಕ್ಷ್ಮೀನಾರಾಯಣರಾಯ dasaru

 lakshminarayana

ankita: srikanta, lakshmikanta

ಪ್ರಾತಃಸ್ಮರಣೀಯರಾದ ನಮ್ಮ ಹರಿದಾಸರು-ಚಿಂತನೆ 

ಮಹಾನುಭಾವರಾದವರು ಲೌಕಿಕದಲ್ಲಿ ಇದ್ದರೂ ಸಹ ಪರಮಾತ್ಮನು ಅವರನ್ನು ಯಾವುದೋ ಒಂದು ರೀತಿಯಲ್ಲಿ ತನ್ನೆಡೆಗೆ ತಿರುಗಿಸಿಕೊಳ್ಳುವ ಪರಿ ತುಂಬಾ ರೋಮಾಂಚಕವಾಗಿರ್ತದೆ.. ನವಕೋಟಿ ನಾರಾಯಣರಾದ ಶ್ರೀಮತ್ಪುರಂದರದಾಸಾರ್ಯರನ್ನು ಮೂಗುತಿಯ ಮುಖಾಂತರ ವಿಠ್ಠಲನು ಕರುಣಿಸಿದಂತೆ, 

ಹಾಗೆಯೇ  ಯುದ್ಧವೀರನಾದ ಶ್ರೀ ಕನಕಪ್ಪನನ್ನು ಸಾವಿನ ವರೆಗೂ ತಂದು ಕೇಶವನು ತನ್ನೆಡೆ ಸೇರಿಸಿಕೊಂಡಂತೆ, ಶ್ರೀ ವಿಜಯದಾಸಾರ್ಯರ ಅನುಗ್ರಹದಿಂದ ಶ್ರೀ ಮಾನವಿ ಪ್ರಭುಗಳು, ಅವರಿಂದ ಶ್ರೀ ಶ್ರೀದವಿಠಲರು ಹೀಗೆ ಯತಿಗಳ, ಮಹಾನುಭಾವರ, ದಾಸರ ಜೀವನವನ್ನು ವೈರಾಗ್ಯದೆಡೆ ಕರೆದೊಯ್ಯುವ ಪರಮಾತ್ಮನ ಲೀಲೆ ಅದೆಷ್ಟು ಚಂದ... 

 ಇಂದು ಶ್ರೀಕಾಂತ ಅಂಕಿತಸ್ಥರಾದ , ದಾಸರ ಶ್ರೀ ಲಕ್ಷ್ಮೀ ನಾರಾಯಣರಾಯರ ಜೀವನದ ಒಂದು ಘಟನೆ ದಾಸರನ್ನು ಪರಮಾತ್ಮನೆಡೆ ಸೆಳೆದ ವಿಷಯವನ್ನು ನೋಡೋಣ....

ಪಂಗನಾಮದ ತಿಮ್ಮಣ್ಣದಾಸರ ಅರ್ಥಾತ್ ಶ್ರೀವೇಣುಗೋಪಾಲವಿಠಲರ ಪೀಳಿಗೆಯಲ್ಲಿ ಬಂದಂತಹಾ 

ದೊಡ್ಡಬಳ್ಳಾಪುರದ ಶ್ರೀ ಮುದ್ದುಮೋಹನದಾಸಾರ್ಯರ ಶಿಷ್ಯರಲ್ಲಿ ಒಂದೇ ಪರಿವಾರಕ್ಕೆ ಸೇರಿದ ನಾಲ್ಕುಜನ ಶಿಷ್ಯರಲ್ಲಿ ಒಬ್ಬರಾದ  ಶ್ರೀ ಬಾಲಕೃಷ್ಣದಾಸರ ಸುಪುತ್ರರೇ  ಶ್ರೀ ದಾಸರ ಲಕ್ಷ್ಮೀನಾರಾಯಣರಾಯರು.

ತುಂಬಾ ಬಡತನವನ್ನು ಅನುಭವಿಸಿದವರು, ವೈರಾಗ್ಯ ಗುಣ ಸಂಪನ್ನರು, ಮೆಟ್ರಿಕ್ಯುಲೇಶನ್ ಓದುವಾಗಲೆ ಸಾಹಿತ್ಯಾಭಿಮಾನಿಗಳಾಗಿದ್ದವರು... 

ಜೀವನ ಭೃತಿಗಾಗಿ ಬೆಂಗಳೂರಿನ ರಾಜಾ ಮಿಲ್ಲಿನಲ್ಲಿ ಕೆಲಸಕ್ಕೆ ಸೇರಿರ್ತಾರೆ. ಅದನ್ನು ಬಿಟ್ಟು ಮತ್ತೆ ಐದಾರು ವರ್ಷಗಳ ಕಾಲ ರೈಲ್ವೆ ಇಲಾಖೆಯಲ್ಲಿ ಹಣವನ್ನು ನೋಡಿಕೊಳ್ಳುವ ಗುಮಾಸ್ತರಾಗಿ ಕೆಲಸ ಮಾಡಿರ್ತಾರೆ... ಆಗ ಒಂದು ದಿನ ಸರಕುಗೆ ಸಂಬಂಧಿಸಿದ 1000 ರೂ. ಹಣವನ್ನು  ಇಲಾಖೆಗೆ ಕಟ್ಟಬೇಗಾಗಿರುತ್ತದೆ. ಆ ಹಣವನ್ನು ಯಾರೋ ಕದ್ದುಬಿಡ್ತಾರೆ. ಆ ಆರೋಪ ದಾಸರ ಮೇಲೆ ಬರಬಾರದು ಎನ್ನುವ ಯೋಚನೆ ಮಾಡಿದ ಆತ್ಮಾಭಿಮಾನದ ನಮ್ಮ ದಾಸಾರ್ಯರು, ಬೇಗನೆ ಮನೆಗೆ ಹೋಗಿ ಮನೆಯಲ್ಲಿದ್ದ ಒಡವೆ, ವಸ್ತುಗಳೆಲ್ಲವನ್ನೂ ಮಾರಿ ಆ ಹೋದ 1000 ರೂ ಹಣವನ್ನು ಕಚೇರಿಯಲ್ಲಿ ಕಟ್ಟಿ ಆ ಕೆಲಸವನ್ನು ಬಿಟ್ಟುಬಿಡುತ್ತಾರೆ...

ಇದು ನೋಡಲು ತುಂಬಾ ಸಣ್ಣ ವಿಷಯ ಅನಿಸಬಹುದು, ಆದರೆ ಆತ್ಮಾಭಿಮಾನವಿರುವವರಿಗೆ ಇಂಥವು ತಲೆ ತೆಗದು ಹಾಕಿದಷ್ಟು ಅವಮಾನದ ನೋವನ್ನು ನೀಡುವ ವಿಷಯವೇ ಆಗಿರ್ತದೆ ಅಲ್ಲವೇ?

ಹೀಗೆ ದಾಸರು ಹಣವನ್ನು ಕಟ್ಟಿ ಮನೆಗೆ ಬಂದು ದೇವರ ಮುಂದೆ ಕುಳಿತುಕೊಂಡು ಭಗವದ್ಗೀತೆಯನ್ನು ತಲೆಯಮೇಲೆ ಇಟ್ಟುಕೊಂಡು 

ಇನ್ನು ಮುಂದೆ  ನನ್ನ ಬದುಕು ಪರಮಾತ್ಮನ ಸೇವೆಗೆ ಮೀಸಲು ಎಂದು ಪ್ರಮಾಣಮಾಡಿಕೊಂಡರು...

ಅದು ಮೊದಲು  ಅವರ ಜೀವನ ಪರಮಾತ್ಮನ ಸೇವೆಗೆ ಮಾತ್ರ ಅರ್ಪಿತವಾಗಿತ್ತು. ತಮ್ಮ ತಂದೆಯವರ, ಚಿಕ್ಕಪ್ಪಂದಿರ ಕೃತಿಗಳು ಹೊರತರುವ ಪ್ರಯತ್ನ,  ಎಲ್ಲ ಹರಿದಾಸರ ಕೃತಿಗಳ ಸಾಹಿತ್ಯ ಸಂಗ್ರಹ ಇವುಗಳಿಂದಲೆ ಜೀವನವನ್ನು ಸಂಪನ್ನಗೊಳಿಸಿದರು. ಇವರ ಸಂಶೋಧನೆಯ ಪ್ರಕಟಣೆ ಶ್ರೀ  ಸುಬೋಧರಾಮರಾಯರ ಸಂಪಾದಕೀಯದಲ್ಲಿ ಹೊರಬಂದೀತು.. 

ಶ್ರೇಷ್ಠ ಹರಿದಾಸರ ಕೃತಿಗಳನ್ನು, ಶ್ರೀಮದ್ಹರಿಕಥಾಮೃತಸಾರದ  ಸಂಗ್ರಹ ಇವೆಲ್ಲವನ್ನೂ ಶ್ರೀ ಸುಬೋಧರಾಮರಾರಿಗೆ ಕೊಟ್ಟಾಗ ಅವರು ಅವುಗಳನ್ನು ಪ್ರಕಟ ಮಾಡ್ತಿದ್ದರು. ಶ್ರೀ ಗೋರೆಬಾಳ ಹನುಮಂತರಾಯರಂತೆಯೇ ಸರಿಯಾದ ಸಾಹಿತ್ಯವನ್ನು ಪ್ರಕಟಮಾಡಿದವರಾಗಿದ್ದರು. ದಾಸ ಸಾಹಿತ್ಯದ ಸಂಬಂಧಿತ ಲೇಖನಗಳನ್ನೂ ಬರೆದವರಾಗಿದ್ದರು.

ದಾಸರು ಬೆಂಗಳೂರಿನ ಕೆಂಪಾಂಬುಧಿಯಲ್ಲಿ ಸದಾ ಈಜು ಹೊಡೆಯುತ್ತ, ಎಲ್ಲರಿಗೂ ಈಜು ಕಲೆಸುವರಾಗಿದ್ದರು ಅಲ್ಲದೆ 25 - 30 ಪ್ರಾಣಗಳನ್ನು ಉಳಿಸಿದವರಾಗಿದ್ದರು.. 

ಹೀಗೆ ಒಂದು ದಿನನಿತ್ಯದಂತೆ ಈಜಾಡಿ ಬಂದು ಮನೆಗೆ ಬಂದವರಾಗಿ ತುಂಬಾ ಆಯಾಸಪಡುತ್ತ ಅಂತಾರೆ ಐದು ನಿಮಿಷಗಳಲ್ಲಿ ನನ್ನ ಪಯಣವಾಗಿದೆ ಈಗ ನಕ್ಷತ್ರ ಸರಿಯಿಲ್ಲ, ಮನೆಯನ್ನು 5 ತಿಂಗಳು ಬಿಡಬೇಕಾಗುತ್ತೆ ಎಂದು ಹೇಳುತ್ತಲೆ ಮನೆಯ ಹೊರಗೆ ಬಂದು ಮಲಗಿ ಪರಮಾತ್ಮನ ಸ್ಮರಣೆ ಮಾಡುತ್ತ ದೇಹವನ್ನು ಬಿಟ್ಟರು...

ಶ್ರೀ ಲಕ್ಷ್ಮೀನಾರಾಯಣರಾಯರು   ಶ್ರೀಕಾಂತ , ಲಕ್ಷ್ಮೀಕಾಂತ ಅಂಕಿತಗಳಿಂದ ರಚನೆಮಾಡಿದ 100 ಕೃತಿಗಳು ಮಾತ್ರ ದೊರೆತಿವೆಯಷ್ಟೇ.. 

ಗೋಮಾತೆಯ ಸ್ತುತಿ ಮೊದಲಾದ ದೀರ್ಘ ಕೃತಿಗಳ ಜೊತೆಗೆ, ದೇಶಭಕ್ತಿಯ, ರಾಷ್ಟ್ರೀಯ ಕೃತಿಗಳು ಸಹ  ರಚಿಸಿದವರಾಗಿದ್ದಾರೆ.. ಹರಿದಾಸರು ಸದಾ ಸಮಾಜವನ್ನು ಎಚ್ಚತ್ತುಗೂಳಿಸುವುದಕ್ಕೆ ಕೃತಿಗಳು ರಚನೆ ಮಾಡಿರುವರು ಎಂದು ನಾವು ಹರಿದಾಸರ ಚರಿತ್ರೆ, ಕೃತಿಗಳಲ್ಲಿ ಕಾಣುತ್ತೆವೆ.. ಹಾಗೆಯೇ ಶ್ರೀ ದಾಸಾರ್ಯರ ಕೃತಿಗಳು ಆಗಿನ ಕಾಲದ ಸ್ವತಂತ್ರ್ಯ ಹೋರಾಟಕ್ಕೆ ಭಾರತೀಯರನ್ನು ಎಚ್ಚರಗೊಳಿಸುವಂತಿತ್ತು... 

ಪ್ರಾತಃಸ್ಮರಣೀಯರಾದ  ಶ್ರೀ ದಾಸರ ಲಕ್ಷ್ಮೀನಾರಾಯಣರಾಯರ ಅನುಗ್ರಹ ನಮಗಾಗಲಿ. ಲೌಕಿಕದ ಅಹಂ, ಮಮತೆಗಳನ್ನ ಮೀರಿ ಬದುಕು ಸಾಧನದೆ ಕಡೆ ಸಾಗುವಂತಾಗಲಿ ಎಂದು ಭಾರತೀರಮಣ ಮುಖ್ಯಪ್ರಾಣಾಂತರ್ಗತ ಲಕ್ಷ್ಮೀನಾರಸಿಂಹಾಭಿನ್ನ ಶ್ರೀ ಲಕ್ಷ್ಮೀವೆಂಕಪ್ಪನಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ... 

ಜೈ ವಿಜಯರಾಯ 

smt. padma sirish

ನಾದನೀರಾಜನದಿಂ ದಾಸಸುರಭಿ  🙏🏽

***


No comments:

Post a Comment