Sunday 7 February 2021

ರಾಘವೇಂದ್ರ ಸ್ವಾಮಿ ಜಯಂತಿ ರಾಯರು raghavendra swamy jayanti rayaru phalguna shukla sapthami

 

ಬಾಲಕ ವೆಂಕಟನಾಥ(ರಾಯರ ಪೂರ್ವಾಶ್ರಮದ ಹೆಸರು)

ತಮ್ಮ ತಂದೆ ತಾಯಿಗಳಾದ ಶ್ರೀ ತಿಮ್ಮಣ್ಣ ಭಟ್ಟರು ಮತ್ತು ಶ್ರೀ ಮತಿ ಗೋಪಿಕಾಂಬ ದೇವಿಯ ತೊಡೆಯ ಮೇಲೆ ಕುಳಿತು ಆಟವಾಡುವ ಪರಿ.ಇದನ್ನು ಅವರ ಅಣ್ಣನವರಾದ ಶ್ರೀ ಗುರುರಾಜ ಮತ್ತು ಅಕ್ಕ ವೆಂಕಟಾಂಬ ನವರು ನೋಡಿ ಆನಂದಿಸುತ್ತಾ ಇರುವುದು.ಕಲಾವಿದ ನ ಕೈಯಲ್ಲಿ ಬಹು ಸುಂದರವಾದ ಚಿತ್ರ

**

birth of sri raghavendra swami 

ಮತ್ತೊಂದು ಪುತ್ರನ ಬಯಕೆ ಗಾಗಿ ತಿಮ್ಮಣ್ಣ ಭಟ್ಟರು ಹಾಗು ಗೋಪಿಕಾಂಬ ದಂಪತಿಗಳು ಭೂ ವೈಕುಂಠ ಎಂದು ಕರೆಯಲ್ಪಡುವ ತಿರುಪತಿ ಹೋಗಿ ಅನೇಕ ವ್ರತ ನೇಮಾದಿಗಳಿಂದ,ಸೇವೆಯನ್ನು ಮಾಡಿದರು.

ಇವರ ಸೇವೆಗೆ ಸ್ವಾಮಿ ಪ್ರಸನ್ನ ನಾಗಿ 

ಆ ದಂಪತಿಗಳಿಗೆ ಸ್ವಪ್ನದಲ್ಲಿ ಬಂದು

ನನ್ನ ಭಕ್ತರಲ್ಲಿ ಅಗ್ರ ಗಣ್ಯನು,ಲೋಕಮಾನ್ಯ ನು ಆದ ಸತ್ಪುತ್ರನ್ನು ನಿಮಗೆ ಕರುಣಿಸುವೆನು ಅಂತ ಸೂಚನೆ ಕೊಡುತ್ತಾನೆ.. ಆನಂತರ ದಂಪತಿಗಳು ಪೂಜೆ ಸಲ್ಲಿಸಿ ಹಿಂತಿರುಗಿ ತಮ್ಮ ಊರಿಗೆ ಬರುತ್ತಾರೆ.

ಕಾಲ ಕ್ರಮೇಣ ಗೋಪಿಕಾಂಬ ದೇವಿಯು ಗರ್ಭಿಣಿ ಆಗುತ್ತಾಳೆ.

ಶ್ರೀ ವೆಂಕಟ ನ ದಯದಿಂದ ಗೋಪಿಕಾಂಬ ದೇವಿಯು

ಶ್ರೀ ಶಾಲಿವಾಹನ ಶಕೆ 1517ನೇ

ಮನ್ಮಥ ನಾಮ ಸಂವತ್ಸರದ

ಫಾಲ್ಗುಣ ಮಾಸದ ಶುಕ್ಲ ಪಕ್ಷದ ಸಪ್ತಮಿ ದಿನದಂದು ಗುರುವಾರ ಮೃಗಶಿರಾ ನಕ್ಷತ್ರ (ಕ್ರಿ.ಶ 1595)

ದಂದು  ಸರ್ವ ಲಕ್ಷಣಗಳು ಉಳ್ಳ ಪುತ್ರ ರತ್ನ ವನ್ನು ಪ್ರಸವಿಸುತ್ತಾಳೆ

ಆ ಸಮಯದಲ್ಲಿ ಶುಭ ಸೂಚನೆ ಗಳು ಗೋಚರವಾಗುತ್ತದೆ.

ಲೋಕದ ಜನರನ್ನು ಉದ್ದರಿಸಲು

ಶ್ರೀ ಪ್ರಹ್ಲಾದ ರಾಜರು ಮತ್ತೆ ಜನಿಸುತ್ತಾರೆ.

ಇಂದು ರಾಯರು ಧರೆಯೊಳಗೆ ಅವತಾರ ಮಾಡಿದ ದಿನ

ಎಲ್ಲಾ ರು ಅವರ ಬೃಂದಾವನ ದರುಶನ ಮಾಡುವ.

ರಾಯರ ಅನುಗ್ರಹ ಎಲ್ಲಾ ಜೀವಿಗಳ ಮೇಲೆ ಆಗಲಿ

: ಶ್ರೀ ಗುರು ಜಗನ್ನಾಥ ದಾಸರು ತಮ್ಮ ಕೃತಿಯಲ್ಲಿ ರಾಯರ ಬಗ್ಗೆ ಹೇಳಿದ್ದಾರೆ.

ಮಾತ ಪಿತ ಸುತ ಭ್ರಾತ ಬಾಂದವ

ದೂತ ಸತಿ ಗುರು ನಾಥ ಗತಿ ಮತಿ

ನೀತ ಸಖ ಮುಖವ್ರಾತ ಸಂತತ ಎನಗೆ ನೀನಯ್ಯ

ಭೂತಿದಾಯಕ ಸರ್ವಲೋಕದಿ

ಖ್ಯಾತ ಗುರು ಪವಮಾನ ವಂದಿತ ದಾತ

ಗುರು ಜಗನ್ನಾಥ ವಿಠ್ಠಲನ ಪ್ರೀತಿ ಪಡೆದಿರುವಿ

🙏🙏🙏🙏

ಭಗವಂತನು ಇಲ್ಲ,ಧರ್ಮ ಇಲ್ಲ ಎನ್ನುವ  ಹಲವರ  ನಿಂದನೆಯ ಮಾತು ಬರೀ ಕಲ್ಪನೆ ಅಂತ ಹೇಳಬಹುದು.

330ಕ್ಕು ಹೆಚ್ಚಿನ ವರ್ಷಗಳ ಹಿಂದೆ ಸಜೀವವಾಗಿ ಬೃಂದಾವನ ಪ್ರವೇಶ ಮಾಡಿ ಕಣ್ಮರೆಯಾದ ಒಬ್ಬ ಯತಿಗಳು ನೂರಾರು ಬೃಂದಾವನ ಗಳಲ್ಲಿ, ಮನೆ ಮನೆಗಳಲ್ಲಿ ಎಲ್ಲರ ಮನಗಳಲ್ಲಿ ಸನ್ನಿಹಿತ ರಾಗಿ,ಕರೆದಲ್ಲಿಗೆ ಬಂದು ನಾಮ ಸ್ಮರಣೆ ಮಾತ್ರ ದಿಂದ ಜಗತ್ತಿನ ಯಾವ ಮಾನವ ಶಕ್ತಿ ಗಳು ಗುಣಪಡಿಸುವಲ್ಲಿ ಸೋತ ಅನೇಕ ರೋಗ ಪರಿಹಾರ,  ಬೇಡಿದ ಮನೋರಥ ಪೂರೈಸುವ, ಜ್ಞಾನವನ್ನು ನೀಡುವದು ಸಾಧ್ಯ ವಾಗುತ್ತಾಇತ್ತೇ??

ಒಬ್ಬರು, ಇಬ್ಬರು,ಅಥವಾ ನೂರಾರು ಜನ ಶ್ರೀ ರಾಯರನ್ನು ಭಜಿಸಬಹುದು.

ಆದರೆ ಕೋಟ್ಯಾಂತರ ಜನರು ಅವರನ್ನು ಆರಾಧಿಸುತ್ತಾರೆ ಅಂದರೆ

ಅವರಲ್ಲಿ ಯಾವುದೋ  ಒಂದು ಮಹಾಶಕ್ತಿಅಡಗಿದೆ ಎಂಬುವದು ಸ್ಪಷ್ಟವಾಗಿ ಕಾಣುತ್ತದೆ.

ಇಂದು ಅತ್ಯಂತ ಪ್ರತಿಭಾ ಶಾಲಿಗಳು,ವೈದ್ಯರು,ರಾಜಕೀಯ ವ್ಯಕ್ತಿಗಳು, ಸಾಹಿತಿಗಳು ಉದ್ಯಮ ಮಾಡುವ ದೊಡ್ಡ ವ್ಯಕ್ತಿಗಳು ವಿಜ್ಞಾನಿಗಳು, ಸಣ್ಣ ಪುಟ್ಟ ಕೆಲಸ ಮಾಡುವ ಜನಗಳು, ಯಾವುದೇ ಮತ ಭಾಷೆ ಜಾತಿ ಭೇದ ವಿಲ್ಲದೇ ದೇಶದ ಹಲವಾರು ಕಡೆಗೆ ಇವರನ್ನು ಆರಾಧಿಸುತ್ತಾರೆ ಅಂದರೆ ಇದು ಸಣ್ಣ ಹಾಗು ಸಾಮಾನ್ಯವಾದ ವಿಷಯ ಅಲ್ಲ.

ಶ್ರೀ ರಾಯರು ಸಾಮಾನ್ಯ ಮಾನವರಲ್ಲ

ದೇವಾಂಶ ಸಂಭೂತರು

ಪರಮಪುರುಷ ನಾದ 

ಆ ಶ್ರೀ ಹರಿಯ ಕಾರುಣ್ಯಕ್ಕೆ ಪಾತ್ರ ರಾದವರು

ಇಂತಹ ಗುರುಗಳಲ್ಲಿ ಭಗವಂತನು ನಿಂತು ಮಾಡಿಸುವ ಅನೇಕ ಮಹಿಮೆಯನ್ನು ನಾವುಗಳು ಇಂದಿಗು ನೋಡುತ್ತೇವೆ ಹಾಗು ಕೇಳುತೇವೆ.

ಶ್ರೀ ಗುರು ಜಗನ್ನಾಥ ದಾಸರು ಹೇಳಿದಂತೆ

ಏನು ಚೋದ್ಯವೋ ಕಲಿಯ ಯುಗದಲಿ

ಏನು ಈತನ ಪುಣ್ಯ ಬಲವೋ

ಏನು ಈತನ ವಶದಿ ಶ್ರೀಹರಿ ತಾನೇ ನಿಂತಿಹನೋ

ಏನು ಕರುಣಾನಿಧಿಯೋ ಈತನು

ಏನು ಭಕುತರಿಗಭಯದಾಯಕ

ಏನು ಈತನ ಮಹಿಮೆ ಲೋಕಕ್ಕೆ ಗಮ್ಯವೆನಿಸಿಹದೋ

🙏🙏

ರಾಘವೇಂದ್ರರ ವಿಜಯ ಪೇಳುವೆ

ರಾಘವೇಂದ್ರರ ಕರುಣ ಬಲದಲಿ

ರಾಘವೇಂದ್ರರ ಭಕುತರಾದವ ಇದನು ಕೇಳುವದು

By prasadacharya

****


No comments:

Post a Comment