Thursday, 30 September 2021

aralikatte narasimhacharyaru hattibelagal chippagiri jyeshta shukla ashtami ಅರಳಿಕಟ್ಟಿ ನರಸಿಂಹಾಚಾರ್ಯರು



to check bidi sanyasi or gruhastaru

and aradhana date ashada shukla pratipada ?


Name: aralikatte narasimhacharyaru

Place: hattibelagal, chippagiri

Guru: Jambukhandi Vadiracharya
Shishya: Muttagi Narasimhacharya


ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರ ಶಿಷ್ಯರೂ ರಾಯರನ್ನು, ಶ್ರೀಮಟ್ಟೀಕಾಕೃತ್ಪಾದರನ್ನೂ ಒಲಿಸಿಕೊಂಡಂತಹಾ , ಶ್ರೀ ರಘುಪ್ರೇಮತೀರ್ಥರ  ಪೂರ್ವಾಶ್ರಮದ ಗುರುಗಳೂ, ಶ್ರೀ ಬಿಲ್ವಪತ್ರ ಆಚಾರ್ಯರಿಗೂ, ಮುತ್ತಗಿ ನರಸಿಂಹಾಚಾರ್ಯರಿಗೂ  ಗುರುಗಳಾದ,
ಮಹಾ ಮಹಿಮೆಯನ್ನು ತೋರಿ ಭಕ್ತರನು ಸಲಹಿದ, ಇಂದಿಗೂ ಸಲಹುತ್ತಿರುವ ಮಹಾನ್ ಸಾಧಕರಾದ ಶ್ರೀ ಅರಳಿಕಟ್ಟಿ ನರಸಿಂಹಾಚಾರ್ಯರ  ಆರಾಧನೆ.
ಇವರ ಕಟ್ಟಿ ರಾಯರು ಪ್ರತಿಷ್ಠೆ ಮಾಡಿದಂತಹಾ ಹನುಮಪ್ಪನ ದೇವಸ್ಥಾನದ ಪಕ್ಕದಲ್ಲಿದೆ. ಹತ್ತಿಬೆಳಗಲ್, ಚಿಪ್ಪಗಿರಿ ಹತ್ತಿರ.. ಇವತ್ತಿಗೂ ನಾವು ಇವರಿಗೆ ಸುಧಾಪಾಠಪ್ರವಚನಾದಿಗಳು ಸಲ್ಲಿಸಿದಕ್ಕಾಗಿ ಒಲಿದು ಬಂದ ಶ್ರೀ ಟೀಕಾಕೃತ್ಪಾದರ ಪುಟ್ಟ ವೃಂದಾವನ ನೋಡಬಹುದು. ಹಾಗೆಯೇ ಆಚಾರ್ಯರು ಪೂಜೆ ಮಾಡಿದಂತಹಾ ವಿಗ್ರಹಗಳು  ಸಹಾ. ಶ್ರೀ ಆಚಾರ್ಯರ ಪರಮಾನುಗ್ರಹ ನಮಗಿರಲೀ ಸದಾ.. ನಾವು ಸಾಧನೆಯ ಹಾದಿಯನ್ನು ಹಿಡಿದು ಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾಗಲು ಆಚಾರ್ಯರ ಕಟ್ಟಿ ಒಮ್ಮೆ ದರ್ಶನ ಮಾಡಲೇಬೇಕು, ಅಷ್ಟು ಪವಿತ್ರ ಜಾಗವೂ ಹೌದು...
***

ಧೂಮಾರ್ಯ ಪಾದಭಜಕಾನ್
ಮಧ್ವಶಾಸ್ತ್ರಾರ್ಥವಾದಿನಃ |
ಗೃಹಾದಿಸರ್ವಧಾತ್ರೃಂಶ್ಚ
ನೃಸಿಂಹಾರ್ಯಗುರುಂಭಜೇ||

ಶ್ರೀರಾಯರ ಪರಮಭಕ್ತರು, ಸೂರಿಜನಶ್ರೇಷ್ಟರಾದ  ಹತ್ತಿಬೆಳಗಳ್ಳಿನ 
ಶ್ರೀ ಅರಳಿಕಟ್ಟಿ ನರಸಿಂಹಾಚಾರ್ಯ ಗುರುವರ್ಯರ
ಗುರುಪರ್ವ ಆಷಾಢ ಶು.ಪಾಡ್ಯ

ಶ್ರೀ ಅರಳಿಕಟ್ಟಿ ನರಸಿಂಹಾಚಾರ್ಯರು ಆದವಾನಿ ಸಮೀಪದ ಹತ್ತಿಬೆಳಗಳ್ ಗ್ರಾಮವಾಸ್ತವ್ಯರು. ಹತ್ತಿಬೆಳಗಲ್ 200ರಕ್ಕು ಹೆಚ್ಚಿನ ಪಂಡಿತಾಗ್ರಗಣ್ಯರಾದ ಬ್ರಾಹ್ಮಣ ಅಗ್ರಹಾರ. ಇಲ್ಲಿ ಶ್ರೀರಾಯರು ಹನುಮಂತದೇವರ ಪ್ರತಿಷ್ಟಗೈದಿದ್ದಾರೆ.ದಿವಾನ್ ವೆಂಕಣ್ಣಪಂಥ ದೇವಾಲಯ ನಿರ್ಮಾಣಮಾಡಿದ್ದಾನೆ.ಶ್ರೀ ಆಚಾರ್ಯರು ಈ ಮುಖ್ಯಪ್ರಾಣದೇವರ ಉಪಾಸನೆಮಾಡಿ,ಅವರ ಆದೇಶದಂತೇ ನಡೆದುಕೊಂಡಿದ್ದಾರೆ. ಸುರ್ಯಾಂಶರು ಎಂದು ಹೇಳಲ್ಪಡುವ ಇವರಿಗೆ ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರು ಲೌಕಿಕ ಗುರುಗಳು. 
ಅನೇಕಬಾರಿ ಸರ್ವಸ್ವದಾನ, 40ದಿನ ಉಪವಾಸ,ಅಪಾರಪಾಂಡಿತ್ಯವಿದ್ದರು ಪ್ರತಿಷ್ಟಬಯಸದೇ,ಗ್ರಾಮಸೀಮೋಲ್ಲಂಘನೆ ಮಾಡದೇ,60ಕ್ಕೂ ಮೀರಿದ ಶಿಷ್ಯವರ್ಗಕ್ಕೆ ಸುಧಾದಿ ಉದ್ಗ್ರಂಥಗಳ ಪಾಠಹೇಳಿದ್ದಾರೆ. ಇವರ ಶಿಷ್ಯವರ್ಗದಲ್ಲಿ ಬಾಡದ ವೆಂಕಟ ನರಸಿಂಹಾಚಾರ್ಯರು(ಬಿಲ್ವಪತ್ರಿ ಆಚಾರ್ಯರು),  ಮುತ್ತಿಗಿ ಶ್ರೀನಿವಾಸಾಚಾರ್ಯರು (ಶ್ರೀರಘುಪ್ರೇಮತೀರ್ಥರು),ಪುಟ್ಟಾ
ಚಾರ್ಯರು,ಸುಂಕದ ಶ್ರೀನಿವಾಸಾಚಾರ್ಯರು ಪ್ರಮುಖರು.
ಶ್ರೀರಾಯರು ಇವರ ಉಪಾಸ್ಯ ಮುಖ್ಯಪ್ರಾಣನ ಮೂರ್ತಿ ಪಾದದಡಿ ಒಡಮೂಡಿದ್ದಾರೆ. ಶ್ರೀ ಆಚಾರ್ಯರು ಸಹ ಶಿಷ್ಯರಪ್ರಾರ್ಥನೆಮೇರೆಗೆ,ತಮ್ಮ ಲೌಕಿಕ ಯಾತ್ರೆ ಅನಂತರವು ಶ್ರೀರಾಯರ ಪ್ರತಿಷ್ಟಿತ ಹನುಮತ್ಪ್ರತೀಕದ ಬಲಪಾದದಡಿಯಲ್ಲಿ ಒಡಮೂಡಿ ದರ್ಶನಕೊಟ್ಟ ಮಹಾನುಭಾವರು.
****
 
ಶ್ರೀರಾಯರ ಪರಮಭಕ್ತರು,
 ಶ್ರೀ ಮುಖ್ಯಪ್ರಾಣದೇವರ ಉಪಾಸಕರು,
 ಶ್ರೀ ಜಮಖಂಡಿವಾದಿರಾಜಾಚಾರ್ಯರ ಶಿಷ್ಯರು, ಶ್ರೀಮುತ್ತಿಗಿ ಶ್ರೀನಿವಾಸಾಚಾರ್ಯರ (ಶ್ರೀ ಶ್ರೀ ರಘುಪ್ರೇಮತೀರ್ಥರ)ಗುರುಗಳು, ಸೂರ್ಯಾಂಶಸಂಭೂತರು, ಸರ್ವಸ್ವದಾನಗೈದವರು, ಸೂರಿಜನಶ್ರೇಷ್ಟರಾದ  ಹತ್ತಿಬೆಳಗಳ್ಳಿನ 
ಶ್ರೀ ಅರಳಿಕಟ್ಟಿ ನರಸಿಂಹಾಚಾರ್ಯ ಗುರುವರ್ಯರ
ಗುರುಪರ್ವ ಆಷಾಢ ಶು.ಪಾಡ್ಯ

ಶ್ರೀ ಅರಳಿಕಟ್ಟಿ ನರಸಿಂಹಾಚಾರ್ಯ
ನುತ್ಯಷ್ಟಕಮ್
***********
ಧೂಮಾರ್ಯ
ಪಾದಭಜಕಾನ್
ಮಧ್ವಶಾಸ್ತ್ರಾರ್ಥವಾದಿನಃ
ಗೃಹಾದಿಸರ್ವಧಾತ್ರೃಂಶ್ಚ
ನೃಸಿಂಹಾರ್ಯಗುರುಂಭಜೇ||

ಲಕ್ಷ್ಮೀನಾರಾಯಣ ಧ್ಯಾನನಿರತಾನ್ ಭಾಸ್ಕರಾಂಶಜಾನ್|
ಶೀತೋಪಲಪುರಾಗಾರಾನ್ ನೃಸಿಂಹಾರ್ಯಗುರೂನ್ ಭಜೇ||1||

ಗ್ರಾಮಸ್ಯ ದಕ್ಷಿಣೇಭಾಗೇ ಭಾರತೀಶಸ್ಯ ಸನ್ನಿಧೌ|
ವೇದಿಕಾಂತರ್ಗತಾನ್ ದಾತೃನ್
ನೃಸಿಂಹಾರ್ಯಗುರೂನ್ ಭಜೇ||2||

ಲಾಂಗೂಲಸ್ಯೋತ್ತರೇ ಭಾಗೇ ವಾಯೋರ್ಹಸ್ತೇ ಸಮೀಪಕೇ|
ಆವಿರ್ಭೂತಾನ್ ವಿಳಂಬ್ಯಬ್ದೇ
ನೃಸಿಂಹಾರ್ಯಗುರೂನ್ ಭಜೇ||3||

ಚಿತ್ರೇರೂಪಂ ಯಥೈವಾಸ್ತೇ ತಥಾರೂಪೇಣ ಸಂಯುತಾನ್|
ಮಾರ್ಗಶೀರ್ಷೇ ಸ್ವಯಂವ್ಯಕ್ತಾನ್
ನೃಸಿಂಹಾರ್ಯಗುರೂನ್ ಭಜೇ||4||

ಪುನಃಸುಗ್ರೀವರೂಪೇಣ ವಾಯೋರುತ್ತರಭಾಗಕೇ|
ಅಭಿವ್ಯಕ್ತಾನ್ ಸಿತೇಪಕ್ಷೇ
ನೃಸಿಂಹಾರ್ಯಗುರೂನ್ ಭಜೇ||5||

ಉದ್ಗತಂ ನೃಹರಿಂ ದ್ರಷ್ಟುಮ್ ಆಂಜನೇಯಸ್ಯಮಸ್ತಕೇ|
ಪ್ರಾದುರ್ಭೂತಾನ್ ದ್ವಿತೀಯಾಯಾಂ 
ನೃಸಿಂಹಾರ್ಯಗುರೂನ್ ಭಜೇ||6||

ಪ್ರತ್ಯಕ್ಷಮ್ ಅಂಜನಾಸೂನುಂ ತ್ವರಿತಂದ್ರಷ್ಟುಮುದ್ಯತಾನ್|
ನೃಹರೇರ್ದಕ್ಷಿಣೇಭಾಗೇ 
ನೃಸಿಂಹಾರ್ಯಗುರೂನ್ ಭಜೇ||7||

ಸಮುದ್ಭೂತಾನ್ ಮುದಾಭಕ್ತ್ಯಾ
ರಾಮಸಂದರ್ಶನೋತ್ಸುಕಾನ್|
ಮಾರುತೇಃಪಾದಪೂಜಾರ್ಥಂ
ನೃಸಿಂಹಾರ್ಯಗುರೂನ್ ಭಜೇ||8||

ನುತ್ಯಷ್ಟಕಂ ಗುರೂಣಾಂ
ಶ್ರೀಪಾಂಡುರಂಗೇಣನಿರ್ಮಿತಮ್|
ಅನೇನಪ್ರೀಯತಾಂ ಶ್ರೀಶೋ ಮಧ್ವಹೃತ್ಕಮಲಸ್ಥಿತಃ||

||ಇತಿ ಶ್ರೀ ಪಾಂಡುರಂಗಾಚಾರ್ಯಕೃತ
ಶ್ರೀ ಅರಳಿಕಟ್ಟಿ ನರಸಿಂಹಾಚಾರ್ಯ
ನುತ್ಯಷ್ಟಕಮ್ ಸಂಪೂರ್ಣಂ||
||ಶ್ರೀ ಮಧ್ವೇಶಕೃಷ್ಣಾರ್ಪಣಮಸ್ತು||
***
|| ಅರಳೀಕಟ್ಟಿ ಶ್ರೀನರಸಿಂಹಾಚಾರ್ಯರು ||

19ನೇ ಶತಾಬ್ದದಲ್ಲಿ, ಶ್ರೀಮುಖ್ಯಪ್ರಾಣದೇವರ ಇಚ್ಚಾದಂತೆ ಬೆಳಕಿಗೆ (ಈ ಬಾಹ್ಯ ಪ್ರಪಂಚ ಕಾಣದ)ಬಾರದ ಜ್ಞಾನಿಶ್ರೇಷ್ಠ ರಲ್ಲಿ ಇಂದಿನ ಕಥಾನಾಯಕರಾದ ಅರಳೀಕಟ್ಟಿ ಶ್ರೀನರಸಿಂಹಾಚಾರ್ಯರು ಸಹ ಒಬ್ಬರು. ಸುಮಾರಾಗಿ 3೦೦ ಬ್ರಾಹ್ಮಣ ಕುಟುಂಬ ಗಳಿದ್ದ ಹತ್ತಿಬೆಳಗಲ್ ಎಂಬುವ ಹಳ್ಳಿಯಲ್ಲಿ ವಾಸಮಾಡಿಕೊಂಡಿದ್ದರು. ಅಂದಿನ ಕಾಲದ ಶ್ರೀಮನ್ಮಂತ್ರಾಲಯ ಮಠ ದ ಶ್ರೀಸುಧರ್ಮೇಂದ್ರತೀರ್ಥರು ಈ ಹಳ್ಳಿಯಲ್ಲಿ ಚಾತುರ್ಮಾಸ್ಯವ್ರತ ವನ್ನು ಕೈಗೊಂಡಿದ್ದರೆಂದೂ ಹೇಳುತ್ತಾರೆ.  ಜಂಬುಖಂಡಿ ಶ್ರೀವಾದಿರಾಜಾಚಾರ್ಯರು ಹಾಗು ಮೊದಲಕಲ್ ಶ್ರೀಶೇಷದಾಸ ರಿಗೆ ಸಮಕಾಲೀನರಾಗಿದ್ದ ಪೂಜ್ಯ ಆಚಾರ್ಯರು ವರ್ಷಗಳ ಪರ್ಯಂತರ ಗ್ರಾಮ ಸೀಮೋಲ್ಲಂಘನ ಮಾಡಿ, ಗ್ರಾಮದ ಗಡಿಭಾಗದಲ್ಲಿರುವ ಶ್ರೀಮನ್ಮಂತ್ರಾಲಯ ಪ್ರಭು ಗಳಿಂದ ಪ್ರತಿಷ್ಠಿತ ಶ್ರೀಪ್ರಾಣದೇವರ ಸನ್ನಿಧಾನ ದಲ್ಲಿದ್ದವರು.  ಪೂಜ್ಯ ಆಚಾರ್ಯರು, ತಮ್ಮ ಸಾಧನಾ ದಿಂದ ಶ್ರೀಪ್ರಾಣದೇವರ ನ್ನು ನಿತ್ಯತೃಪ್ತ ರಾಗಿ ಮಾಡುತ್ತಿದ್ದರು. 

ಪೂಜ್ಯ ಆಚಾರ್ಯರ ಗುರುಪೀಳಿಗೆ ಯಲ್ಲಿ ಗದ್ವಾಲಿ ಪಾಂಡುರಂಗ ಕೇಶವಾಚಾರ್ಯರಾರಭ್ಯ ಧೂಮಾಚಾರ್ಯರ ವಂಶಪರಂಪರೆ ಯಲ್ಲಿ ಬಂದ ಪೂಜ್ಯ ಆಚಾರ್ಯರ ಗುರುಗಳಾದ ಅಪ್ಪಣ್ಣಾಚಾರ್ಯ ರಲ್ಲದೇ ಜಂಬುಖಂಡಿ ಆಚಾರ್ಯ ರೂ ಸಹ ಗುರುಗಳಾಗಿದ್ದವರು.  ಪೂಜ್ಯ ಜಂಬುಖಂಡಿ ಆಚಾರ್ಯರು, ಸಮಗ್ರ ಶಾಸ್ತ್ರದ ತಾತ್ಪರ್ಯವನ್ನು ಸಾರಭೂತ ವಾಗಿ 6 ತಿಂಗಳ ಪರ್ಯಂತ ಹತ್ತಿಬೆಳಗಲ್ ನಲ್ಲಿದ್ದು ಗ್ರಾಮದಲ್ಲಿದ್ದ ಶ್ರೀಕೂರ್ಮ(ಸ್ಥಳೀಯರು ಶ್ರೀಸೋಮೇಶ್ವರ ದೇವಸ್ಥಾನವೆಂದು ಕರೆಯುತ್ತಾರೆ) ದೇವಸ್ಥಾನ ದಲ್ಲಿ ಅರಳಿಕಟ್ಟಿ ಆಚಾರ್ಯ ರಿಗೆ ಹೇಳಿದ್ದರು.  

ಶ್ರೀಮುಖ್ಯಪ್ರಾಣದೇವರ ಆಜ್ಞಾಮೇರೆ ಗೆ ಆದವಾನಿಯಲ್ಲಿರುವ ಮುತ್ತಿಗಿ ಶ್ರೀಶ್ರಿನಿವಾಸಾಚಾರ್ಯ ರನ್ನು ತಮ್ಮ ಶಿಷ್ಯ ರನ್ನಾಗಿ ಮಾಡಿಕೊಳ್ಳಲು ತಮ್ಮ ಪುತ್ರರಾದ ಶ್ರೀಕೊಪ್ಪರೇಶಾಚಾರ್ಯರ ನ್ನು ಕಳುಹಿಸಿ ತಮ್ಮಲ್ಲಿಗೆ ಕರೆಸಿ ಕೊಂಡು ಮುತ್ತಿಗಿ ಆಚಾರ್ಯ ರಿಗೆ ಗುರೂಪದೇಶ ವನ್ನುಕೊಟ್ಟು ಶ್ರೀಮನ್ಯಾಯಸುಧಾ ಪಾಠ ವನ್ನು ಬಾಡದ ವೆಂಕಟ ನರಸಿಂಹಾಚಾರ್ಯರು(ಬಿಳ್ವಪತ್ರಿ ಆಚಾರ್ಯರು), ಪುಟ್ಟಾಚಾರ್ಯರು, ಸುಂಕದ ಶ್ರೀನಿವಾಸಾಚಾರ್ಯರು ಮತ್ತು ಕೀರಣಿ ಶ್ರೀಪಾಂಡುರಂಗಾಚಾರ್ಯ ರ ಜೊತೆಯಲ್ಲಿ ಹೇಳಿದ್ದರು.  ಇವರುಗಳ ಶ್ರೀಮನ್ಯಾಯಸುಧಾ ಮಂಗಳ ಕಾರ್ಯಕ್ರಮ ಕ್ಕೆ ಜಂಬುಖಂಡಿ ಆಚಾರ್ಯ ರೂ ಪಾಲ್ಗೊಂಡಿದ್ದಿರುವುದು ವಿಶೇಷ. 

ಪೂಜ್ಯ ಆಚಾರ್ಯರು, ತಮ್ಮ ಶಿಷ್ಯರನ್ನು ಲೌಕಿಕ ವಿದ್ಯಾವಲ್ಲದೇ ಪಾರಮಾರ್ಥಿಕ ವಿದ್ಯಾದಲ್ಲಿ ಹೆಚ್ಚು ಆಸಕ್ತರಾಗುವಂತೆ ಅರ್ಥಾತ್ ಪರಮಾತ್ಮನ ಪರ ಸಾಧಕರಾಗುವಂತೆ ಮಾಡುತ್ತಿದ್ದರು. ಉದಾಹರಣಗೆ ತಮ್ಮ ಶಿಷ್ಯರಿಗೆ ಕೊಟ್ಟಿದ್ದ ಪರೀಕ್ಷೆ ಯಾವತರಹಾ ಇತ್ತೆಂದರೇ ಭಗವತ್ ಪ್ರಸಾದಾರ್ಥ ಗುರು ಪ್ರಸಾದ ಪಡೆಯಬೇಕೆಂದು ಹವಣಿಸುವರು, ಒಂಬತ್ತು ದಿನಗಳು ಅನಶನವ್ರತ ದಿಂದ ಪ್ರಾತರಾರಭ್ಯ ರಾತ್ರಿ ಪರ್ಯಂತರ ಸರ್ವಸೇವಾ ಮಾಡಬೇಕು.  ಸರ್ವ ಸೇವಾ ಅಂದರೆ ಅಂಗಳ ಕಸ ಮೊದಲುಗೊಂಡು ಮನೆಯಲ್ಲಿಯ ಕಸ ತೆಗೆಯುವುದು, ಅಂಗಳ ಥಳಿ ಹಾಕಿ, ಮನೆ ಸಾರಿಸಿ, ಹೊಸ್ತಿಲಿಗೆ ಕೆಮ್ಮಣ್ಣು ಹಚ್ಚಿ ರಂಗೋಲಿ ಹಾಕುವುದು, ಆಕಳ ಕಾಲಾಗಿನ ಕಸ ತೆಗೆಯುವುದು, ಆಕಳ ಹಿಂಡುವುದು, ಉಪಸಾರಿಣಿ ಮುಸರೆ ಪಾತ್ರೆಗಳ ತೊಳೆಯುವುದು, ತುಳಸೀ ಪುಷ್ಪಗಳ ತರುವುದು, ನೀರು ತರುವುದು, ಬಟ್ಟೆಗಳ ಒಗೆದು ಒಣಹಾಕುವುದು, ಪಾಠಕ್ಕೆ ಬರುವುದು, ಅಡಿಗೆ ಮಾಡುವುದು, ನಮ್ಮ ದೇವತಾರ್ಚನಕ್ಕೆ ಸರಿಯಾಗಿ ಅಗ್ರೋದಕ ತರುವುದು, ಗಂಧಾಕ್ಷತೆ ಸಿದ್ಧಪಡಿಸುವುದು, ಎಡ ಬಲ ಸೇವಾ ಮಾಡುವುದು, ಭೋಜನಕ್ಕೆ ಕೂಡುವವರಿಗೆ ಬಡಿಸುವುದು, ಎಂಜಲ ತೆಗೆಯುವುದು, ಮುಸುರೆ ತೊಳೆಯುವುದು, ಪಾತ್ರೆಗಳನ್ನು ಸ್ವಚ್ಛ ಇಡುವುದು, ಭಾಗವತ ಪುರಾಣ ಹೇಳುವುದು, ಸಾಯಂಕಾಲದಲ್ಲಿಯೂ ಫಳಾರದವರಿಗೆ ಫಳಾರ, ಊಟದವರಿಗೆ ಅಡಿಗೆ ಸಿದ್ಧ ಪಡಿಸಿ, ಬಡಿಸಿ ಎಂಜಲ ತೆಗೆದು, ಸಾರಿಸಿ, ಮುಸುರೆ ತೊಳೆದು ಪಾತ್ರೆಗಳ ಸ್ವಚ್ಛ ಇಟ್ಟು, ಕರೆದರೆ ಪಾದ ಸಂಹನನ ಮಾಡುತ್ತ ಅನಿಮಿಷ ಜಾಗರವನ್ನು ಬೇಸರದೆ, ಆಲಸ್ಯ ಮಾಡದೆ, ಯಾರಿಗೂ ತೊಂದರೆ ಎಂದೆನಿಸದೆ ಸೇವಾ ಮಾಡುತ್ತ ಜಾಗರೂಕರಾಗಿರಬೇಕು. ಇದರಲ್ಲಿ ಒಂದುದಿನ ವ್ಯತ್ಯಾಸವಾದರೂ ಯಾವತ್ಪರ್ಯಂತರ ಮಾಡಿದ ಸೇವಾ ವ್ಯರ್ಥವಾಗುವು ದೆಂದು ಹೇಳುತ್ತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಮುತ್ತಿಗಿ ಆಚಾರ್ಯ ರಿಗೆ ಶ್ರೀಹರಿವಾಯು ಗುರುಗಳು ನಿನ್ನಲ್ಲಿ ಮೂರ್ತಿಮಂತರಾಗಿ ಇದ್ದು ನೀನು ಇಚ್ಛಿಸುವುದೆಲ್ಲವನ್ನು ಪೂರೈಸುವರು, ನುಡಿದದ್ದು ಹುಸಿಹೋಗಗೊಡದೇ ನಡೆಸುವರು, ಶಾಪಾನುಗ್ರಹ ಶಕ್ತಿ ಕೊಡುವರು, ಆ ಸೇತು ಹಿಮಾಚಲ ಪರ್ಯಂತ ಔದಾರ್ಯಾದಿಗುಣಗಳಲ್ಲಿ ನಿನ್ನ ಸಮಾನಾಧಿಕರಿಲ್ಲವೆಂದು ಕೀರ್ತಿ ಹಬ್ಬಿಸುವರು.  ನಿನ್ನ ಆಚರಣೆ ಸಜ್ಜನರಿಗೆ ಸಮ್ಮತವಾಗಿಯೂ, ಮಾರ್ಗದರ್ಶಕವಾಗಿಯೂ, ದುರ್ಜನರಿಗೆ ಕ್ಷೋಭದಾಯಕವಾಗಿ, ಲೋಕಕ್ಕೆ ಹಿತಕರವಾಗಿ ತಥಾ ಆದರ್ಶಪ್ರಾಯವಾಗಿಯೂ ಆಗುವುದು.  ನಿನ್ನ ನಡೆ ನುಡಿಗಳು ವೇದಾರ್ಥ ಗರ್ಭಿತವಾಗಿಯೂ ಸರ್ವತೋಮುಖ ಯಜ್ಞದಂತೆ ಪರಿಣಮಿಸಲಿ.  ಮಹಾಜ್ಞಾನಿಯಾಗು, ವಿರಕ್ತ ಶಿಖಾಮಣಿಯಾಗು, ಐಹಿಕ ಸಂಪತ್ತು ನಿನಗೆ ಬೇಡವಾದರೂ ತಾನಾಗಿಯೇ ರಥ, ಹಯ, ಪಲ್ಲಕಿ ಮೊದಲಾದ ವೈಭವಗಳಿಂದ ಮೆರೆಯುವಂಥವನಾಗು, ತಥಾಸ್ತು ಎಂದು ಶಿರಸ್ಸಿನ ಮೇಲೆ ತಮ್ಮ ಅಮೃತ ಹಸ್ತವನ್ನಿಟ್ಟು ಅಶೀರ್ವಾದ ಮಾಡಿದರು. ಮುತ್ತಿಗಿ ಆಚಾರ್ಯರು ಮಾಡಿದ ಮತ್ತೊಂದು ಸೇವಾ ಕ್ಕೆ ಸಂತುಷ್ಟರಾದ ಶ್ರೀವಾಯುದೇವರು, ಏನು ವರಗಳ ಕೊಡಬೇಕೆಂದು  ಇಂದಿನ ಕಥನಾಯಕರನ್ನು ಕೇಳಿದರೆಂದರೇ ಇವರಿಗೆ ಶ್ರೀಮುಖ್ಯಪ್ರಾಣದೇವರ ಅನುಗ್ರಹ  ಯಾವರೀತಿಲಿ ಇತ್ತೆಂದು ಯೋಚಿಸಲು ಸಾಧ್ಯವಿಲ್ಲ.

ಪೂಜ್ಯ ಆಚಾರ್ಯರೂ ತಮ್ಮ ಗುರುಗಳಾದ ಜಂಬುಖಂಡಿ ಆಚಾರ್ಯ ರಂತೆ ಶ್ರೀವಾದಿರಾಜತೀರ್ಥ ಭಗವತ್ಪಾದರ ಋಜುತ್ವೋಪಾಸಕರು. ಒಂದುದಿನ ಪೂಜಾಕಾಲದಲ್ಲಿ ಶ್ರೀವಾಯುದೇವರಜೊತೆ ಶ್ರೀಗುರುರಾಜರ ಪ್ರತೀಕವನ್ನು ಒಂದೇತಟ್ಟಿಯಲ್ಲಿಟ್ಟು ಸಮಪೂಜಾ ಮಾಡುತ್ತಿರುವ ಅರಳೀಕಟ್ಟಿ ಆಚಾರ್ಯರ ನ್ನು ನೋಡಿ, ಅವರ ಮೊಮ್ಮಗನಾದ ಶ್ರೀಹನುಮಂತಾಚಾರ್ಯರು, ನಮ್ಮ ತಾತನವರು ಯಾಕೆ ಈ ತರಹಾ ಪೂಜೆ ಮಾಡುತ್ತಿದ್ದಾರೆಂದು? ಯೋಚಿಸುತ್ತಿರಲು, ಕೂಡಲೇ ಇವರ ಮನಸ್ಸಿನ ವಿಚಾರವನ್ನರಿತ ಅರಳಿಕಟ್ಟಿ ಆಚಾರ್ಯರು, ನಿಮಗಿರುವ ಅನುಮಾನ ಪರಿಹಾರವಾಗಲು ಸೋದೆಗೆ ಹೋಗಿ ಶ್ರೀರಾಜರಸೇವಾ ಮಾಡಲು ಹನುಮಂತಾಚಾರ್ಯ ರಿಗೆ ಅಪ್ಪಣೆ ನೀಡಿದ್ದರು. ತಮ್ಮ ತಾತನವರ ಆಜ್ಞಾ ದಂತೆ ಶ್ರೀರಾಜರಸೇವಾ ಮಾಡಿಬಂದ ಶ್ರೀಹನುಮಂತಾಚಾರ್ಯರಿಗೆ ಶ್ರೀರಾಜರಋಜುತ್ವ ಪರ ಇರುವ ಅನುಮಾನ ಪರಿಹಾರವಾಗಿ ದ್ದಲ್ಲದೇ ತಾವೂ ಸಹ ತಮ್ಮ ಹೆಬ್ಬೆರಳಿನ ಗಾತ್ರದಲ್ಲಿ ನಿತ್ಯದಲ್ಲೂ ಶ್ರೀರಾಜರ ದಿವ್ಯಮೃತ್ತಿಕಾವನ್ನು ಹಣೆಯಮೇಲೆ ಧರಿಸುತ್ತಿದ್ದರು.

ಇಂತಹಾ ಈ ಜ್ಞಾನಿಸೂರ್ಯ ಗೆ ಒಂದುದಿನ 40ದಿನಗಳು ಸತತ ಉಪವಾಸ ಮಾಡುವುದಾಗಿ, ವಾಯುದೇವರು ಆಜ್ಞಾಪಿಸಿದ್ದ ಮೂಲಕ, ನಿತ್ಯವೂ ತೀರ್ಥ ಗಂಧಾಕ್ಷತೆ ಧಾರಣಮಾಡಿ ಊಟಕ್ಕೆ ಕೂತು,  ಎಲೆಯಲ್ಲಿ ಯಾವ ಪದಾರ್ಥಗಳನ್ನು ಹಾಕಿಸಿಕೊಳ್ಳದೇ, ಶಿಷ್ಯರ ಊಟ ಮುಗಿಯುವವರಿಗೆ ಕೂತು ನಿತ್ಯವೂ ಉಪವಾಸ ಮಾಡುತ್ತಿದ್ದರು.  ಬಡಿಸುವಾಗ ಅಕಸ್ಮಾತ್ ಎಲೆಯಲ್ಲಿ ಅಪ್ಪಿತಪ್ಪಿ ಯಾವ ಪದಾರ್ಥವನ್ನಾದರು ಹಾಕಿದರೇ ಅದರನ್ನು ಸ್ವೀಕರಿಸಿ ಅಮೃತೋಪಿ ತೆಗೆದುಕೊಂಡು ಮರುದಿನದಿಂದ 40 ದಿನಗಳವರೆಗೂ ಉಪವಾಸ ಪ್ರಾರಂಭವಾಗುತ್ತಿತ್ತು. ಈ ರೀತಿಲಿ ಹಲವುಸಲ ಭಂಗವಾಗುವ ಸಂದರ್ಭದಲ್ಲಿ ಮತ್ತೊಮ್ಮೆ ಸರ್ವಸ್ವ ದಾನ ಮಾಡುವುದಾಗಿ ಪ್ರಾಣದೇವರು ಆಜ್ಞಾ ಮಾಡಲು, "ಈವರೆಗೂ ಇದ್ದ ಆಸ್ತಿಯಲ್ಲಿ ನನ್ನ ಭೋಗಾರ್ಥ ಕಿಂಚಿದಪಿ ಇಟ್ಟುಗೊಳ್ಳದೇ ತಮಗೆ ಸಮರ್ಪಣ ಮಾಡುತ್ತ ಬಂದಂತೆ, ನನ್ನ ಜೀವಮಾನ ಪರ್ಯಂತ ಮಾಡುತ್ತೇನೆ ಹೊರತು ಈ ಸಲ ಸರ್ವಸ್ವ ದಾನ ಮಾಡುವುದಿಲ್ಲೆಂದು ಹಟಮಾಡಲು, ಹಾಗಾದರೇ, "ಈ ನಿನ್ನ ದೇಹವನ್ನು ಸಮಯೋಚಿತ ತೆಗೆಯುತ್ತೇ"ವೆಂದು ಶ್ರೀ ವಾಯುದೇವರು ಸೂಚನೆ ದಂತೆ 40ನೇ ದಿವಸ, ಸರ್ವಶಿಷ್ಯಮಂಡಲಿ ಸಮಕ್ಷಮ ಪ್ರಾತ:ಕಾಲ ಸೂರ್ಯೋದಯ ಸಮಯಕ್ಕೆ "ಶಾಲಿವಾಹನ ಶಕೆ ವಿಳಂಬಿ ನಾಮ ಸಂವತ್ಸರ ಆಷಾಡ ಶುಕ್ಲ ಪ್ರತಿಪದ ಭಾನುವಾರದಿನದಂದು ಪೂಜ್ಯ ಆಚಾರ್ಯರು ಸ್ವಲೋಕಕ್ಕೆ ತೆರಳಿ ದ ಸುದ್ದಿಯು ಶೀಘ್ರವಾಗಿ ನಾಲ್ಕು ದಿಕ್ಕಿಯೂ ಹರಡಿ, ಅಂತ್ಯ ದರ್ಶನಾರ್ಥ ಸುತ್ತಮುತ್ತಲಿನ ಗ್ರಾಮಗಳಿಂದ ಎಲ್ಲ ಜನರು  ಬರುವದರಿಂದ, ದಹನ ಸಂಸ್ಕಾರ ಬಿಳ್ವಪತ್ರಿ ಆಚಾರ್ಯರ ಹೊಲದಲ್ಲಿ ರಾತ್ರಿ ಎಂಟು ಘಂಟಿ ನಂತರ ಮಾಡುವುದೆಂದು ತಿಳಿದಕೂಡಲೇ ತಮ್ಮಷ್ಟಕ್ಕೆ ತಾವೇ ನೆರೆದ ಜನರು ಶ್ರೀಗಂಧ, ತುಳಸಿಕಾಷ್ಟ, ಕರ್ಪೂರ, ಊದಿನ ಕಡ್ಡಿಗಳಿಂದಲೇ ಚಿತವನ್ನು ಸಿದ್ದ ಪಡಿಸಿ, ಸುಮಾರು ಎರಡು ಫರ್ಲಾಂಗು ಧೂರವಿದ್ದ ಈ ಸ್ಥಳಕ್ಕೆ  ದಿವಟಿಗಳು, ತಾಳ, ತಂಬೂರಿ, ಮೃದಂಗ, ಜಾಗಟಿ ಇತ್ಯಾದಿ ಭಜನೆ ಮೇಳವಾದ್ಯಗಳಿಂದ ವೈಭವದೊಂದಿಗೆ ರಾತ್ರಿ ಹತ್ತು ಗಂಟೆ ಸುಮಾರಕ್ಕೆ ಪ್ರಾರಂಭವಾದ ದಹನ ಸಂಸ್ಕಾರ ವಿಧಿ ಮುಂದೆ ಒಂದು ತಾಸಿನವರೆಗೂ ಮುಂದು ವರಿದು ನಂತರ ಸ್ನಾನ ಮಾಡಿ ರುದ್ರ ದೇವರ ದರ್ಶನ ತೆಗೆದುಕೊಂಡು ಸರ್ವರೂ ಮನೆ ಸೇರಿದರು. 

ಧೂಮಾರ್ಯಪಾದ ಭಜಕಾನ್ ಮಧ್ವಶಾಸ್ತ್ರಾರ್ಥವಾದಿನ: |
ಗೃಹಾದಿಸರ್ವ ಧಾತೄಂಶ್ಚ ನೃಸಿಂಹಾರ್ಯ ಗುರುಂಭಜೇ ||
***
ಆಷಾಢ ಶುದ್ಧ ಪಾಡ್ಯ, ಶ್ರೀರಾಯರ ಪರಮಭಕ್ತರು, ಶ್ರೀ ಜಮಖಂಡಿ ಆಚಾರ್ಯರ ಶಿಷ್ಯರು, ಸುರ್ಯಾಂಶ ಸಂಭೂತರು ಸೂರಿಜನಶ್ರೇಷ್ಟರಾದ  ಹತ್ತಿಬೆಳಗಳ್ಳಿನ  ಶ್ರೀ ಅರಳಿಕಟ್ಟಿ ನರಸಿಂಹಾಚಾರ್ಯ ಗುರುವರ್ಯರ

ಧೂಮಾರ್ಯಪಾದ ಭಜಕಾನ್ ಮಧ್ವಶಾಸ್ತ್ರಾರ್ಥವಾದಿನ: |
ಗೃಹಾದಿ ಸರ್ವಧಾತೄಂಶ್ಚ ನೃಸಿಂಹಾರ್ಯ ಗುರುಂಭಜೇ ||

ಪೂಜ್ಯ ಆಚಾರ್ಯರ ಗುರು ಪೀಳಿಗೆಯಲ್ಲಿ ಧೂಮಾಚಾರ್ಯರ ವಂಶಪರಂಪರೆಯಲ್ಲಿ ಗದ್ವಾಲಿ ಪಾಂಡುರಂಗ ಕೇಶವಾಚಾರ್ಯರಾರಭ್ಯ ಇವರ ಗುರುಗಳಾದ ಅಪ್ಪಣ್ಣಾಚಾರ್ಯರ ವರೆಗೆ ಅಪರೋಕ್ಷ ಪಡೆದ ಜ್ಞಾನಿವರೇಣ್ಯರು ಎಂದು ತಿಳಿಯುತ್ತದೆ (ಸಪ್ತ ಶೀರ್ಷದವರಿಗೆ -ಸತತ 7 ಜನರು). ಇವರು ಆಂಧ್ರ ಪ್ರಾಂತದ ಆಲೂರು ತಾಲೂಕಿನ ಹತ್ತಿಬೆಳಗಳ್ ಗ್ರಾಮ ನಿವಾಸಿಗಳಾಗಿದ್ದು 300ಕ್ಕು ಹೆಚ್ಚಿನ ಶಿಷ್ಯಸಂಪತ್ತು ಹೊಂದಿದ್ದವರು.  ಹಲವುಸಲ ಶ್ರೀಪುರಂದರದಾಸರಂತೆ ಸರ್ವಸ್ವದಾನ ಮಾಡಿದ ಅಪರ ಕರ್ಣರಿವರು.  ಊರ ಹೊರಬದಿಯಲ್ಲಿ ಶ್ರೀಮನ್ಮಂತ್ರಾಲಯಪ್ರಭುಗಳಿಂದ ಪ್ರತಿಷ್ಟಿತ ಶ್ರೀಪ್ರಾಣದೇವರ ಸನ್ನಿಧಿಯಲ್ಲಿ ವರ್ಷಗಳ ಪರ್ಯಂತರ ವಾಸವಿದ್ದು ಗ್ರಾಮ ಸೀಮೋಲ್ಲಂಘನಮಾಡಿ ಶ್ರೀಪ್ರಾಣದೇವರ ಸೇವಾ ಮಾಡಿದ ಮಾನ್ಯರು.  ಅಂದಿನ ಶ್ರೀರಾಯರಮಠದ ಶ್ರೀಸುಧರ್ಮೇಂದ್ರತೀರ್ಥರ ಚಾತುರ್ಮಾಸ್ಯಾಕ್ಕೆ ಸುವ್ಯವಸ್ಥೆ ಮಾಡಿ,  ಅವರ ಅನುಗ್ರಹ ಪಡೆದ ಮೂರ್ಧನ್ಯರು.  ಇವರಿಗೆ ಶ್ರೀಮುಖ್ಯಪ್ರಾಣದೇವರು ಪ್ರತ್ಯಕ್ಷ ದರ್ಶಿಗಳು.  ಇವರ ಶಿಷ್ಯರಲ್ಲಿ ಪ್ರಮುಖರು ಶ್ರೀಬಿಳ್ವಪತ್ರಿ ಆಚಾರ್ಯರು, ಶ್ರೀಪುಟ್ಟಾಚಾರ್ಯರು, ಶ್ರೀಸುಂಕದ ಶ್ರೀನಿವಾಸಾಚಾರ್ಯರು, ಹಾಗು ಶ್ರೀಮುತ್ತಿಗಿ ಶ್ರೀನಿವಾಸಾಚಾರ್ಯರು (ಶ್ರೀ ರಘುಪ್ರೇಮತೀರ್ಥರು).  

 ಅಂದಿನಕಾಲದಲ್ಲಿ ಅಗ್ರಹಾರವಾಗಿದ್ದ ಹತ್ತಿಬೆಳಗಲ್ ನಲ್ಲಿ ಪ್ರತಿ ಒಂದು ಮನೆಯಲ್ಲಿ ವೇದಾಧ್ಯಯನ ನಡೆಯುತ್ತಿತ್ತು.  ಶಿಷ್ಯರುಗಳು ಗೋಪಾಳವೃತ್ತಿಯಿಂದ ತಂದ ಪದಾರ್ಥಗಳಿಂದ ಗುರುಕುಲ ನಡೆಯುತ್ತಿತ್ತು.  ಎಲ್ಲರಿಗೂ ಮಧುಕರ ವೃತ್ತಿ ಕಡ್ಡಾಯದಂತಿತ್ತು.  ಅರಳಿಕಟ್ಟಿ ಆಚಾರ್ಯರ ಶಿಷ್ಯರ ಪೈಕಿ ಕೆಲವರು ಅಕ್ಕಿ, ಬೇಳೆ ಮತ್ತಿತರ ಪದಾರ್ಥಗಳು ಪೂರೈಸುತ್ತಿದ್ದಲ್ಲದೇ, ತಮ್ಮ ಶಕ್ತ್ಯಾನುಸಾರ ಪ್ರತಿ ತಿಂಗಳಲ್ಲಿ ದ್ರವ್ಯರೂಪದಲ್ಲಿ ಕೆಲವರು ಸೇವಾ ಮಾಡುತ್ತಿದ್ದರು. ಒಂದುಸಲ ಶಿಷ್ಯರುಗಳಿಂದ ಪದಾರ್ಥಗಳು ಬಾರದಿದ್ದಾಗ, ಗುರುಗಳು, ಮುತ್ತಿಗಿ ಆಚಾರ್ಯರ ಜೊತೆ "ಈಗ ನಿನ್ನಿಂದಲೇ ಸರ್ವ ಸೇವಾ ಆಗಬೇಕಾಗಿದೆ.  ಇದರಿಂದ ಶ್ರೀಹರಿ, ವಾಯು ಗುರುಗಳು ಪ್ರೀತರಾಗಿ ಅಗಾಧ ಸಾಧನೆ ಮಾಡಿಸುವ ಪ್ರಯುಕ್ತ ಶುದ್ಧ ವೃತ್ತಿ(ಗೋಪಾಳ)ಯಿಂದ ಇಲ್ಲಿಯ ಖರ್ಚು ನಿರ್ವಾಹ ಮಾಡುವಂತೆ ಒಂದು ತಂಬಿಗಿ ಮುಂದಿಟ್ಟು ಆಜ್ಞಾ ಮಾಡಿದರು.  ತಾವತ್ಪರ್ಯಂತ ಶ್ರೀಮಂತನೆನಿಸಿ ಅಪರಿಚಿತ ಸ್ಥಳದಲ್ಲಿ ಹ್ಯಾಂಗೆ ಭಿಕ್ಷಾ ಬೇಡಬೇಕೆಂದು ಅಂತರಂಗದಲ್ಲಿ ಸೂಕ್ಷ್ಮವಾಗಿ ಅಭಿಮಾನವಿದ್ದಾಗ್ಯೂ, "ಗುರೋರಾಜ್ಞಾಂ ನ ಲಂಘಯೇತ್" ಅಂತೆಂದುಕೊಂಡು "ಯಸ್ಯಾನುಗ್ರಹಮಿಚ್ಛಾಮಿ ತಸ್ಯವಿತ್ತಂ ಹರಾಮ್ಯಹಂ" ಎಂಬ ವಚನಾನುಸಾರ ಶ್ರೀಶನು ನನ್ನ ಬಾಹ್ಯವಿತ್ತ(ಸಂಪತ್ತು)ದಂತೆ ಅಹಂಕಾರ, ಮಮಕಾರ ರೂಪವಾದ ಅಭಿಮಾನವೆಂಬ ಅಂತರ ವಿತ್ತವನ್ನು(ಜ್ಞಾನವನ್ನು) ಕಳೆಯಲುದ್ಯುಕ್ತನಾಗಿರುವನೆಂದು ಮನಸ್ಸಿನಲ್ಲಿ ಸಂಭ್ರಮಗೊಂಡು ಹತ್ತಿಬೆಳಗಲ್, ಆದವಾನಿ, ಆಲೂರು ಮತ್ತು ಬಳ್ಳಾರಿ ಯಲ್ಲಿ ಅಧಿಕಾರ ವರ್ಗ ಜನರಲ್ಲಿ ಮತ್ತು ವ್ಯಾಪಾರಸ್ಥರಿಂದ ಗೋಪಾಳ ಬೇಡುವುದು ವಾಯುದೇವರ ಮನಸ್ಸಿಗೆ ಬಂದದ್ದರಿಂದ, ಒಂದು ವರ್ಷ, ಎಲ್ಲಾ ನಿತ್ಯ ನೈಮಿತ್ತಿಕ ಖರ್ಚು ನಿರ್ವಹಿಸಿದರು.  ಗುರುಗಳು ಒಂದುದಿನ ಉಗ್ರಾಣ ಪ್ರವೇಶಿಸಿ ಯಾವತ್ ಪದಾರ್ಥಗಳು ತುಂಬಿರುವುದು ಕಂಡು ಬಹು ಸಂತುಷ್ಟರಾಗಿ, ದೂರ್ವಾಸರಿಗೆ ದ್ರೌಪದಿಯು ಕೌಪೀನಾರ್ಥ ತನ್ನ ಸೀರೆಯ ಸೆರಗನ್ನು ಹರಿದು ಕೊಟ್ಟುದಕ್ಕೆ ಅಕ್ಷಯಾಂಬುರವಾಗಲೆಂದು ಹರಿಸಿದಂತೆ ನಿನಗೂ ಭಗವಂತನು ಅಕ್ಷಯ ಪದಾರ್ಥಗಳನ್ನು ಕೊಡಲೆಂದು ಆಶೀರ್ವಾದ ಮಾಡಿದರು.

 ಅರಳಿಕಟ್ಟಿ ಆಚಾರ್ಯರು, ತಮ್ಮ ಮುಖ್ಯಶಿಷ್ಯರೆನಿಸಿದ ಬಾಡದ ವೆಂಕಟ ನರಸಿಂಹಾಚಾರ್ಯರು (ಬಿಲ್ವಪತ್ರಿ ಆಚಾರ್ಯರು), ಪುಟ್ಟಾಚಾರ್ಯರು, ಸುಂಕದ ಶ್ರೀನಿವಾಸಾಚಾರ್ಯರು ಮತ್ತು ಮುತ್ತಿಗಿ ಆಚಾರ್ಯರನ್ನು ಕರೆದು, ಭಗವತ್ ಪ್ರಸಾದಾರ್ಥ ಗುರು ಪ್ರಸಾದ ಪಡೆಯಬೇಕೆಂದು ಹವಣಿಸುವರು ನಾವು ಹೇಳುವ ಕ್ರಮದಿಂದ ಸೇವಾ ಮಾಡಲು ಸಿದ್ಧರಾಗಿರೆಂದು ಹೇಳುತ್ತಾ, ಒಂಬತ್ತು ದಿನಗಳು ಅನಶನವ್ರತದಿಂದ ಪ್ರಾತರಾರಭ್ಯ ರಾತ್ರಿ ಪರ್ಯಂತರ ಸರ್ವ ಸೇವಾ ಮಾಡಬೇಕು.  ಸರ್ವ ಸೇವಾ ಅಂದರೆ "ಅಂಗಳ ಕಸ ಮೊದಲುಗೊಂಡು ಮನೆಯಲ್ಲಿಯ ಕಸ ತೆಗೆಯುವುದು, ಅಂಗಳ ಥಳಿ ಹಾಕಿ, ಮನೆ ಸಾರಿಸಿ, ಹೊಸ್ತಿಲಿಗೆ ಕೆಮ್ಮಣ್ಣು ಹಚ್ಚಿ ರಂಗೋಲಿ ಹಾಕುವುದು, ಆಕಳ ಕಾಲಾಗಿನ ಕಸ ತೆಗೆಯುವುದು, ಆಕಳ ಹಿಂಡುವುದು, ಉಪಸಾರಿಣಿ ಮುಸರೆ ಪಾತ್ರೆಗಳ ತೊಳೆಯುವುದು, ತುಳಸೀ ಪುಷ್ಪಗಳ ತರುವುದು, ನೀರು ತರುವುದು, ಬಟ್ಟೆಗಳ ಒಗೆದು ಒಣಹಾಕುವುದು, ಪಾಠಕ್ಕೆ ಬರುವುದು, ಅಡಿಗೆ ಮಾಡುವುದು, ನಮ್ಮ ದೇವತಾರ್ಚನಕ್ಕೆ ಸರಿಯಾಗಿ ಅಗ್ರೋದಕ ತರುವುದು, ಗಂಧಾಕ್ಷತೆ ಸಿದ್ಧಪಡಿಸುವುದು, ಎಡ ಬಲ ಸೇವಾ ಮಾಡುವುದು, ಭೋಜನಕ್ಕೆ ಕೂಡುವವರಿಗೆ ಬಡಿಸುವುದು, ಎಂಜಲ ತೆಗೆಯುವುದು, ಮುಸುರೆ ತೊಳೆಯುವುದು, ಪಾತ್ರೆಗಳನ್ನು ಸ್ವಚ್ಛ ಇಡುವುದು, ಭಾಗವತ ಪುರಾಣ ಹೇಳುವುದು, ಸಾಯಂಕಾಲದಲ್ಲಿಯೂ ಫಳಾರದವರಿಗೆ ಫಳಾರ, ಊಟದವರಿಗೆ ಅಡಿಗೆ ಸಿದ್ಧ ಪಡಿಸಿ, ಬಡಿಸಿ ಎಂಜಲ ತೆಗೆದು, ಸಾರಿಸಿ, ಮುಸುರೆ ತೊಳೆದು ಪಾತ್ರೆಗಳ ಸ್ವಚ್ಛ ಇಟ್ಟು, ಕರೆದರೆ ಪಾದ ಸಂಹನನ ಮಾಡುತ್ತ ಅನಿಮಿಷ ಜಾಗರವನ್ನು ಬೇಸರದೆ, ಆಲಸ್ಯ ಮಾಡದೆ, ಯಾರಿಗೂ ತೊಂದರೆ ಎಂದೆನಿಸದೆ ಸೇವಾ ಮಾಡುತ್ತ ಜಾಗರೂಕರಾಗಿರಬೇಕು. ಇದರಲ್ಲಿ ಒಂದುದಿನ ವ್ಯತ್ಯಾಸವಾದರೂ ಯಾವತ್ಪರ್ಯಂತರ ಮಾಡಿದ ಸೇವಾ ವ್ಯರ್ಥವಾಗುವುದು" ಎಂದು ವಿವರಿಸಿದರು. 
 
 "ಇಷ್ಟು ಸೇವಾ ಹ್ಯಾಂಗಾದರೂ ಮಾಡಬಹುದು ಆದರೆ ಅನಶನ ವ್ರತದಿಂದ ಮಾಡುವುದು ಸಾಧ್ಯವಿಲ್ಲೆಂದು ಬಿಲ್ವಪತ್ರಿ ಆಚಾರ್ಯರೆನ್ನಲು, ಅನಶನ ವ್ರತ ಮಾಡಿದರೂ ಮಾಡಬಹುದು ಇಷ್ಟುಸೇವಾ ಅಸಾಧ್ಯವೆಂದು ಪುಟ್ಟಾಚಾರ್ಯರೆನ್ನಲು, ಅನಶನ ವ್ರತದಿಂದ ಇಷ್ಟುಸೇವಾ ಆಲಸ್ಯ ಮಾಡದೆ ಯಾರಿಂದಲೂ ಸಾಧ್ಯವಿಲ್ಲ ಬೇಕಾದರೇ ಅನ್ನ ಬಿಟ್ಟು ಅವಲಕ್ಕಿ ಇತ್ಯಾದಿ ಘಟ್ಟಿ ಪದಾರ್ಥ ಫಳಾರ ತಿಂದು ರಾತ್ರಿ ಎರಡು ಪ್ರಹರವಾದರೂ ನಿದ್ರಾಕ್ಕೆ ಅವಕಾಶ ಕೊಟ್ಟರೆ ಸ್ವಲ್ಪ ಹೆಚ್ಚು ಕಡಿಮೆ ಸೇವಾ ಮಾಡಿದರೂ ಮಾಡಬಹುದು ಎಂದು ಸುಂಕದ ಶ್ರೀನಿವಾಸಾಚಾರ್ಯರು ಗೊಣಗುಟ್ಟಿದರು.  ನೀವೇನನ್ನುತ್ತೀರಿ ಶ್ರೀನಿವಾಸಾಚಾರ್ಯರೇ? ಎಂದು ಇವರ ಮುಖ ನೋಡಲು "ಅನುಗ್ರಹ ಮಾಡಿ ಆಜ್ಞಾಮಾಡಿದರೆ ಮಾಡುತ್ತೇನೆ" ಅಂತ  ಸಾಷ್ಟಾಂಗ ಪ್ರಣಾಮ ಮಾಡಿದರು.  "ತಥಾಸ್ತು" ಮಾಡು ಶ್ರೀ ಹರಿವಾಯುಗಳ ಅನುಗ್ರಹ ಬಲದಿಂದ ನಿನ್ನ ಸರ್ವೇಂದ್ರಿಯ ನಿಯಾಮಕರು ಸರ್ವಾನುಕೂಲರಾಗಲಿ ಅಂತ ಪ್ರಸನ್ನ ಮುಖದಿಂದ ನುಡಿದರು.  

 ಆ ಪ್ರಕಾರ ಮರುದಿನ ಪ್ರಾತ:ಕಾಲದಿಂದ ಸೇವಾಸಕ್ತರಾದರು.  ರಾತ್ರಿ ಪಾದ ಸಂಹನನ ಕಾಲದಲ್ಲಿ ತಾವಾಗಿಯೇ ಒಂದು ಸಣ್ಣ ಬಟ್ಟಲಲ್ಲಿ ಪಾನಕ ಮಾತ್ರ ತಂದುಕೊಟ್ಟು ತೆಗೆದುಕೊಳ್ಳಲು ಹೇಳಿದರೆ, "ಮಹದಾಜ್ಞಾ"ಎಂದು ಸ್ವೀಕಾರ ಮಾಡಿದರು.  ಈರೀತಿ ಸೇವಾ ಒಂಬತ್ತು ದಿನಗಳ ಬಳಿಕ ಗುರುಗಳು ಬಹು ಸಂತುಷ್ಟರಾಗಿ "ಭಲಾ ಭೂಪಾ ಹೌದೋ" ಈ ರೀತಿ ಸೇವಾ ಮಾಡಿದಕ್ಕೆ ವರ ಏನುಬೇಕು ಕೇಳು ಕೊಡುತ್ತೇವೆಂದು ಬೆನ್ನು ಚಪ್ಪರಿಸಲು, ಬ್ರಹ್ಮಾಂಡದೊಳಗಿನ ಯಾವ ಪದಾರ್ಥಗಳು ಬೇಡ, ನನಗೆ ಬೇಕಾಗಿದ್ದು ಪರಮಾತ್ಮನ ಅತ್ಯರ್ಥ ಪ್ರಸಾದ, ಅದು ಲಭ್ಯವಾಗುವ ರೀತಿಯಲ್ಲಿ ಅನುಗ್ರಹ ಮಾಡಬೇಕೆಂದ ಇವರ ಪ್ರಾರ್ಥನೆಗೆ, ಗುರುಗಳು ಆನಂದೋದ್ರೇಕದಿಂದ "ಶ್ರೀಹರಿ, ವಾಯು, ಗುರುಗಳು ನಿನ್ನಲ್ಲಿ ಮೂರ್ತಿಮಂತರಾಗಿ ಇದ್ದು ನೀನು ಇಚ್ಛಿಸುವುದೆಲ್ಲವನ್ನು ಪೂರೈಸುವರು, ನುಡಿದದ್ದು ಹುಸಿಹೋಗಗೊಡದೇ ನಡೆಸುವರು, ಶಾಪಾನುಗ್ರಹ ಶಕ್ತಿ ಕೊಡುವರು, ಆ ಸೇತು ಹಿಮಾಚಲ ಪರ್ಯಂತ ಔದಾರ್ಯಾದಿಗುಣಗಳಲ್ಲಿ ನಿನ್ನ ಸಮಾನಾಧಿಕರಿಲ್ಲವೆಂದು ಕೀರ್ತಿ ಹಬ್ಬಿಸುವರು.  ನಿನ್ನ ಆಚರಣೆ ಸಜ್ಜನರಿಗೆ ಸಮ್ಮತವಾಗಿಯೂ, ಮಾರ್ಗದರ್ಶಕವಾಗಿಯೂ, ದುರ್ಜನರಿಗೆ ಕ್ಷೋಭದಾಯಕವಾಗಿ, ಲೋಕಕ್ಕೆ ಹಿತಕರವಾಗಿ ತಥಾ ಆದರ್ಶಪ್ರಾಯವಾಗಿಯೂ ಆಗುವುದು.  ನಿನ್ನ ನಡೆ ನುಡಿಗಳು ವೇದಾರ್ಥ ಗರ್ಭಿತವಾಗಿಯೂ ಸರ್ವತೋಮುಖ ಯಜ್ಞದಂತೆ ಪರಿಣಮಿಸಲಿ.  ಮಹಾಜ್ಞಾನಿಯಾಗು, ವಿರಕ್ತ ಶಿಖಾಮಣಿಯಾಗು, ಐಹಿಕ ಸಂಪತ್ತು ನಿನಗೆ ಬೇಡವಾದರೂ ತಾನಾಗಿಯೇ ರಥ, ಹಯ, ಪಲ್ಲಕಿ ಮೊದಲಾದ ವೈಭವಗಳಿಂದ ಮೆರೆಯುವಂಥವನಾಗು, ತಥಾಸ್ತು" ಎಂದು ಶಿರಸ್ಸಿನ ಮೇಲೆ ತಮ್ಮ ಅಮೃತ ಹಸ್ತವನ್ನಿಟ್ಟು ಅಶೀರ್ವಾದ ಮಾಡಿದರು.  

 ಒಂದುದಿನ ಪೂಜ್ಯ ಅರಳಿಕಟ್ಟಿ ಅಚಾರ್ಯರಿಗೆ ಸತತ ೪೦ ದಿನಗಳ ಪರ್ಯಂತರ ಉಪವಾಸ ಮಾಡುವುದಾಗಿ, ವಾಯುದೇವರು ಆಜ್ಞಾಪಿಸಿದ್ದ ಮೂಲಕ, ನಿತ್ಯವೂ ತೀರ್ಥ ಗಂಧಾಕ್ಷತೆ ಧಾರಣಮಾಡಿ ಊಟಕ್ಕೆ ಕೂತು,  ಎಲೆಯಲ್ಲಿ ಯಾವ ಪದಾರ್ಥಗಳನ್ನು ಹಾಕಿಸಿಕೊಳ್ಳದೇ, ಶಿಷ್ಯರ ಊಟ ಮುಗಿಯುವವರಿಗೆ ಕೂತು ನಿತ್ಯವೂ ಉಪವಾಸ ಮಾಡುತ್ತಿದ್ದರು.  ಬಡಿಸುವಾಗ ಅಕಸ್ಮಾತ್ ಎಲೆಯಲ್ಲಿ ಅಪ್ಪಿತಪ್ಪಿ ಯಾವ ಪದಾರ್ಥವನ್ನಾದರು ಹಾಕಿದರೇ ಅದರನ್ನು ಸ್ವೀಕರಿಸಿ ಅಮೃತೋಪಿ ತೆಗೆದುಕೊಂಡು ಮರುದಿನದಿಂದ ೪೦ ದಿನಗಳವರೆಗೂ ಉಪವಾಸ ಪ್ರಾರಂಭವಾಗುತ್ತಿತ್ತು. ಈ ರೀತಿಲಿ ಹಲವುಸಲ ಭಂಗವಾಗುವ ಸಂದರ್ಭದಲ್ಲಿ ಮತ್ತೊಮ್ಮೆ ಸರ್ವಸ್ವ ದಾನ ಮಾಡುವುದಾಗಿ ಪ್ರಾಣದೇವರು ಆಜ್ಞಾ ಮಾಡಲು, "ಈವರೆಗೂ ಇದ್ದ ಆಸ್ತಿಯಲ್ಲಿ ನನ್ನ ಭೋಗಾರ್ಥ ಕಿಂಚಿದಪಿ ಇಟ್ಟುಗೊಳ್ಳದೇ ತಮಗೆ ಸಮರ್ಪಣ ಮಾಡುತ್ತ ಬಂದಂತೆ, ನನ್ನ ಜೀವಮಾನ ಪರ್ಯಂತ ಮಾಡುತ್ತೇನೆ ಹೊರತು ಈ ಸಲ ಸರ್ವಸ್ವ ದಾನ ಮಾಡುವುದಿಲ್ಲೆಂದು" ಹಟಮಾಡಲು, ಹಾಗಾದರೇ, "ಈ ನಿನ್ನ ದೇಹವನ್ನು ಸಮಯೋಚಿತ ತೆಗೆಯುತ್ತೇ"ವೆಂದು ಶ್ರೀವಾಯುದೇವರು ಸೂಚನೆ ಕೊಟ್ಟರು.  ಶ್ರೀವಾಯುದೇವರ ಸೂಚನೆದಂತೆ ಪೂಜ್ಯ ಆಚಾರ್ಯರು 40ನೇ ದಿವಸ ಸರ್ವ ಶಿಷ್ಯ ಮಂಡಲಿ ಸಮಕ್ಷಮ ಪ್ರಾತ:ಕಾಲ ಸೂರ್ಯೋದಯ ಸಮಯಕ್ಕೆ "ಶಾಲಿವಾಹನ ಶಕೆ ವಿಳಂಬಿ ನಾಮ ಸಂವತ್ಸರ ಆಷಾಡ ಶುಕ್ಲ ಪ್ರತಿಪದ ಭಾನುವಾರ (ಕ್ರೀ. ಶ. 1898) ಸ್ವಲೋಕಕ್ಕೆ ತೆರಳಿದರು. 

 ಪೂಜ್ಯ ಆಚಾರ್ಯರ ಯಾತ್ರಾಮಾಡಿದ ಸುದ್ದಿ, ಶೀಘ್ರವಾಗಿ ನಾಲ್ಕು ದಿಕ್ಕಿಯೂ ಹರಡಿ, ಅಂತ್ಯ ದರ್ಶನಾರ್ಥ ಸುತ್ತಮುತ್ತಲಿನ ಗ್ರಾಮಗಳಿಂದ ಎಲ್ಲ ಜನರು  ಬರುವದರಿಂದ, ದಹನ ಸಂಸ್ಕಾರ ಬಿಳ್ವಪತ್ರಿ ಆಚಾರ್ಯರ ಹೊಲದಲ್ಲಿ ರಾತ್ರಿ ಎಂಟು ಘಂಟಿ ನಂತರ ಮಾಡುವುದೆಂದು ತಿಳಿದಕೂಡಲೇ ತಮ್ಮಷ್ಟಕ್ಕೆ ತಾವೇ ನೆರೆದ ಜನರು ಶ್ರೀಗಂಧ, ತುಳಸಿಕಾಷ್ಟ, ಕರ್ಪೂರ, ಊದಿನ ಕಡ್ಡಿಗಳಿಂದಲೇ ಚಿತವನ್ನು ಸಿದ್ದ ಪಡಿಸಿ, ಸುಮಾರು ಎರಡು ಫರ್ಲಾಂಗು ಧೂರವಿದ್ದ ಈ ಸ್ಥಳಕ್ಕೆ  ದಿವಟಿಗಳು, ತಾಳ, ತಂಬೂರಿ, ಮೃದಂಗ, ಜಾಗಟಿ ಇತ್ಯಾದಿ ಭಜನೆ ಮೇಳವಾದ್ಯಗಳಿಂದ ವೈಭವದೊಂದಿಗೆ ರಾತ್ರಿ ಹತ್ತು ಗಂಟೆ ಸುಮಾರಕ್ಕೆ ಪ್ರಾರಂಭವಾದ ದಹನ ಸಂಸ್ಕಾರ ವಿಧಿ ಮುಂದೆ ಒಂದು ತಾಸಿನವರೆಗೂ ಮುಂದು ವರಿದು ನಂತರ ಸ್ನಾನ ಮಾಡಿ ರುದ್ರ ದೇವರ ದರ್ಶನ ತೆಗೆದುಕೊಂಡು ಸರ್ವರೂ ಮನೆ ಸೇರಿದರು. 

 ಆಚಾರ್ಯರು ಯಾತ್ರಾಮಾಡಿದ ಸುದ್ದಿ ತಿಳಿಯದ ಭಕ್ತನಾದ ಬಡಿಗಾರ ರುದ್ರಪ್ಪನು ಮೂರು ದಿನಗಳ ಗ್ರಾಮಾಂತರ ಮುಗಿಸಿ, ಅರುಣೋದಯಕ್ಕೆ ಸರಿಯಾಗಿ ಎಂದಿನಂತೆ ತನ್ನ ಹೊಲಕ್ಕೆ ಮಾರ್ಗದಲ್ಲಿ ಆಚಾರ್ಯರ ದೇಹ ಸಂಸ್ಕಾರ ಮಾಡಿದ ಸ್ಥಳದ ಮೂಲಕ ಹೋಗುವಾಗ,"ಇಲ್ಲಿ ನೆಗ್ಗಿನ ಮುಳ್ಳು ಬಹಳ ಇದೆ ಎಂದೂ ನೀವೂ ಹೊರಗೆ ಬಾರದಿದ್ದವರು ಇವತ್ತು ಬರಿಗಾಲಿನಿಂದ ಏಕೆ ಬಂದಿರಿ ? ಅಂತ ಆಚಾರ್ಯರನ್ನು ನೋಡಿದಂತೆ ಪ್ರಶ್ನಿಸಿದನು. ಅದಕ್ಕೆ ಆಚಾರ್ಯರು ಹೌದು! ಕೆಲವು ದಿವಸ ನಾವು ಇಲ್ಲಿರಬೇಕಾಗಿದೆ" ಅಂತ ಉತ್ತರ ಕೊಡಲು, ಚಪ್ಪಲಿ ಹಾಕಿಕೊಳ್ಳದ ನಿಮಗೆ ಅವಿಗೆ ಮಾಡಿ ತಂದು ಕೊಡಲೇನೆಂದು ಕೇಳಲು,  ಹಾಗೇ ಮಾಡೆಂದ ಆಚಾರ್ಯರ ಉತ್ತರಕ್ಕೆ ಪುನ: ನಮಸ್ಕಾರ ಮಾಡಿ ತನ್ನ ಹೊಲಕ್ಕೆ ಹೋಗಿ ಬರುವಾಗ ಕಾಣದಿದ್ದ ಅಚಾರ್ಯರನ್ನು ಮನೆಗೆ ಹೋಗಿರಬಹುದೆಂದೆಣಿಸಿ, ಮಧ್ಯಾಹ್ನದಲ್ಲಿ ಭೊಜನಕ್ಕೆ ಸಿದ್ಧನಾಗುವಮುನ್ನ ಅವನಪದ್ದತಿಯಂತೆ ಆಚಾರ್ಯರ ಮನೆಗೆ ಬಂದು ನಮಸ್ಕಾರ ಮಾಡಿ ಭೋಜನ ಮಾಡುವ ಸಂಪ್ರದಾಯದಂತೆ ಆ ದಿನವೂ ಆಚಾರ್ಯರ ಮನೆಗೆ ಹೋಗಲು ಸಿದ್ಧನಾಗಲು, "ಅಪ್ಪನವರು ಹೋರಟು ಹೋಗಿ ಎರಡು ದಿನಗಳಾದವು ಈಗ ಏತಕ್ಕೆ ಹೋಗುವಿಯೆಂದು ಹೆಂಡತಿ ಹೇಳಲು, "ಛೀ! ಎಂಥ ಮಾತಾಡುವಿ, ನಿನಗೇನು ಹುಚ್ಚು ಹಿಡದಿದೇ? ಎಂದು ಝಬರಿಸಲು,"ಇಲ್ಲ ಅಪ್ಪನವರು ಸತ್ತಿದ್ದು ನಿಜ ನೀನು ಊರಲ್ಲಿ ಇರದಿದ್ದರಿಂದ ನಿನಗೆ ಗೊತ್ತಿಲ್ಲವೆಂದು ಹೇಳಲು, ಹೆಚ್ಚಿಗೆ ಸಿಟ್ಟಿಗೆದ್ದು ಹೆಂಡತಿಗೆ ಒಂದು ಪೆಟ್ಟು ಕೊಟ್ಟು ಆಚಾರ್ಯರ ಮನಿಗೆ ಬಂದನು.  ಇಲ್ಲಿ ಎಲ್ಲ ಶಿಷ್ಯರು ದು:ಖಸಾಗರದಲ್ಲಿ ಇರುವುದು ಕಂಡು ಹೆಂಡತಿ ಹೇಳಿದ್ದು ನಿಜವೆಂದು ತೋರಿ, "ಶಿಷ್ಯನಾದ ನನಗೆ ಅಂತ್ಯ ದರ್ಶನವಾಯಿತೆಂದು, ದರ್ಶನ ಕೊಟ್ಟ ಮಹಾಪ್ರಭು" ಎಂದು ಬಹುಪರಿ ಪ್ರಲಾಪಿಸಲು, ಎಲ್ಲ ಶಿಷ್ಯರಿಗೂ ಅವರ ಭಕ್ತಪ್ರಿಯತ್ವದ ಬಗ್ಗೆ ಉದ್ರೇಕ ಉಂಟಾಗಿ, "ಈತನಿಗೆ ದರ್ಶನವಿತ್ತಂತೆ ನಮ್ಮೆಲ್ಲರಿಗೂ ಒಮ್ಮೆ ದರ್ಶನ ಕೊಡಿರೆಂದು ಪ್ರಾರ್ಥನೆ ಮಾಡಲು, "ಪ್ರತಿಯೊಬ್ಬರು ಇದರಂತೆ ಕೆಳುತ್ತ ಹೋದರೆ ಎಷ್ಟು ಸಾರೆ ದರ್ಶನ ಕೊಡಬೇಕು? ಪ್ರಯುಕ್ತ ಬಿಲ್ವಪತ್ರಿ ಅಚಾರ್ಯರ ಉಪಾಸ್ಯ ಪ್ರಾಣಪ್ರತೀಕದ ಕೈಕೆಳಗೆ ನಾವು ಅಭಿವ್ಯಕ್ತರಾಗಿರುತ್ತೇವೆ ದರ್ಶನ ತೆಗೆದುಕೊಂಡು ತೃಪ್ತರಾಗಿರಿ ಅಂತ ಮತ್ತೋರ್ವ ಶಿಷ್ಯರಾದ ಕೀರಣಿ ಶ್ರೀಪಾಂಡುರಂಗಾಚಾರ್ಯರ ಸ್ವಪ್ನದಲ್ಲಿ ಹೆಳಲು, ಎಲ್ಲರೂ ಅಭಿವ್ಯಕ್ತರಾಗಿರುವುದು ನೋಡಿ ದರ್ಶನ ಮಾಡಿದರು.  ಕೆಲಕಾಲಾನಂತರ ಕೀರಣಿ ಶ್ರೀಪಾಂಡುರಂಗಾಚಾರ್ಯರು. ಪೂಜ್ಯ ಶ್ರೀಆಚಾರ್ಯರ ಕಟ್ಟಿಗೆ ಮಂಟಪ, ಗರ್ಭಗೃಹ ಇತ್ಯಾದಿಗಳಿಂದ ವೈಭವೋಪೇತ ದೇವಮಂದಿರವನ್ನು ನಿರ್ಮಿಸಿ, ದಿನಾಂಕ 01.10.1903 ರಂದು ಆಚಾರ್ಯರಗೆ ಸಮರ್ಪಣೆ ಮಾಡಿದರು.
***

No comments:

Post a Comment