Thursday 20 June 2019

aniruddha teertharu matha bhimanakatte mutt yati 19 alur jyeshta bahula ashtami ಅನಿರುಧ್ಧ ತೀರ್ಥರು



No info available on this yati over the internet. 
Please email
available info on this yati to 
sureshhulikunti@gmail.com. Thanks




check- jyeshta shukla or bahula
Sri. aniruddha teertharu yati 19
Ashrama Period: 1500+
Ashrama Guru: Sri. chakrapani teertharu 
Ashrama Shishya: Sri. pradyumna teertharu 
Vrundavana: Arur village, Osmanabad Maharashtra
Aradhana:

ಪರಮಪೂಜ್ಯ ಶ್ರೀ ಶ್ರೀ ಅನಿರುದ್ಧ ತೀರ್ಥರು
ಶ್ರೀಮದಚ್ಯುತಪ್ರೇಕ್ಷಾಚಾರ್ಯ ಮಹಾ ಸಂಸ್ಥಾನದ ಪರಂಪರೆಯನ್ನು ಬೆಳಗಿದ ಮಹಾ ತಪಸ್ವಿಗಳು.. ಶ್ರೀಮದಾಚಾರ್ಯರಿಂದ ೧೯ ನೆಯವರು ಇವರು.. ಮಹಾರಾಷ್ಟ್ರದ ಒಸ್ಮಾನಬಾದ್ ಜಿಲ್ಲೆಯ ಒಮೆರ್ಗ ತಾಲ್ಲೂಕಿನ ಆರೂರ್ ಎಂಬ ಗ್ರಾಮದಲ್ಲಿ ನೆಲೆ ನಿಂತಿದ್ದಾರೆ. ಬಹು ಜಾಗೃತವಾಗಿರುವ ಸನ್ನಿಧಾನ. 
******

ಇಂದು ಶ್ರೀಮದಚ್ಯುತಪ್ರೇಕ್ಷಾಚಾರ್ಯರ ಪರಂಪರೆಯನ್ನು ೧೪ನೆಯ ಶತಮಾನದಲ್ಲಿ ಅಲಂಕರಿಸಿದ್ದ, ೧೯ನೆಯ ಯತಿಗಳಾದ ಪರಮಪೂಜ್ಯ ಶ್ರೀ ಶ್ರೀಅನಿರುದ್ಧ ತೀರ್ಥರ ಆರಾಧನಾ ಪರ್ವಕಾಲ. ಶ್ರೀಚಕ್ರಪಾಣಿ ತೀರ್ಥರಿಂದ ಆಶ್ರಮ ಸ್ವೀಕಾರ. ಗುರುಗಳಲ್ಲಿಯೇ ಸಕಲ ಶಾಸ್ತ್ರಗಳ ಅಧ್ಯಯನ. ನರಸಿಂಹದೇವರ ಉಪಾಸನೆಯ ಬಲದಿಂದ ತಮ್ಮ ಹೆಸರಿಗೆ ಅನ್ವರ್ಥಕರಾಗಿ ಬೆಳಗಿದವರು ಇವರು.. ವೇದಾಂತವಾದಕ್ಕೆ ನಿಂತರೆ ಪ್ರತಿಪಕ್ಷದವರು ಶರಣಾಗುವುದು ನಿಶ್ಚಿತ ಅನ್ನುವಷ್ಟು ವಾಕ್ಚಾತುರ್ಯ, ಶಾಸ್ತ್ರದ ತಳಸ್ಪರ್ಶಿಪಾಂಡಿತ್ಯ.. ತಮ್ಮ ದಿವ್ಯತೇಜಸ್ಸು, ಹಿತ ಮಿತವಾದ ಆಕರ್ಷಕವಾದ ಪ್ರವಚನಗಳಿಂದ ಶ್ರೀಮದಾಚಾರ್ಯರ ಸಿದ್ದಾಂತದ ಬೋಧನೆಯ ಜೊತೆಗೆ ಧರ್ಮಜಾಗೃತಿ ಮೂಡಿಸಿದರು. ಹಲವು ಕೃತಿಗಳನ್ನು ರಚಿಸಿದ್ದಾರೆ ಅನ್ನುವ ಉಲ್ಲೇಖ ಇದ್ದರೂ ಲಭ್ಯವಾಗಿಲ್ಲ.. ಶ್ರೀಪ್ರದ್ಯುಮ್ನತೀರ್ಥರನ್ನು ತಮ್ಮ ಉತ್ತರಾಧಿಕಾರಿಯಾಗಿ ನಿಯಮಿಸಿ ಮಿಥುನ ಮಾಸದ ಜ್ಯೇಷ್ಠ ಬಹುಳ ಅಷ್ಟಮಿಯಂದು ಆಲೂರಿನಲ್ಲಿ( ಈಗೀನ ಮಹಾರಾಷ್ಟ್ರದ ಗಡಿ ಭಾಗದಲ್ಲಿ) ವೃಂದಾವನ ಪ್ರವೇಶ ಮಾಡಿದರು. ಇವರ ವೃಂದಾವನವು ಇಂದಿಗೂ ಬಹು ಜಾಗೃತ. ಸುತ್ತಲಿನ ಊರಿನ ಜನರು ತಮ್ಮ ಮನೆಯಲ್ಲಿ ನಡೆಯುವ ಯಾವುದೇ ಮಂಗಳಕಾರ್ಯಕ್ಕೂ ಶ್ರೀಪಾದರ ಸನ್ನಿಧಿಯಲ್ಲಿ ಫಲವಿರಿಸಿಯೇ ಮುಂದಡಿ ಇಡುವ ಪದ್ಧತಿ ಇರಿಸಿಕೊಂಡಿದ್ದಾರೆ. ನರಸಿಂಹ ದೇವರ ಕೃಪಾಪಾತ್ರರಾದ ಗುರುಗಳ ಕೃಪಾಶೀರ್ವಾದ ಸರ್ವರಿಗೂ ಸಿಗಲಿ.
***
ಶ್ರೀ ಅನಿರುದ್ಧ ತೀರ್ಥ ಗುರುಭ್ಯೋ ನಮಃ ಇಂದು ಶ್ರೀಭೀಮಸೇತು ಮುನಿವೃಂದ ಪರಂಪರೆಯನ್ನು ಬೆಳಗಿದ, ಶ್ರೀಮದಾಚಾರ್ಯರಿಂದ 19ಯತಿಗಳಾದ ಶ್ರೀ ಅನಿರುದ್ಧ ತೀರ್ಥರ ಮಧ್ಯಾರಾಧನೆಯ ಪರ್ವಕಾಲ. ತಮ್ಮನ್ನು ಬಹುವಾಗಿ ನಂಬಿದ ಶಿಷ್ಯರ ಮೇಲೆ ಎಂತಹ ಅನುಗ್ರಹ ಮಾಡಬಹುದು ಎಂಬುದಕ್ಕೆ ಬಹು ದೊಡ್ಡ ನಿದರ್ಶನ ಶ್ರೀ ಅನಿರುದ್ಧ ತೀರ್ಥರು.. ಶ್ರೀಚಕ್ರಪಾಣಿ ತೀರ್ಥರಲ್ಲಿ ಆಶ್ರಮ ಸ್ವೀಕರಿಸಿ ಅವರಲ್ಲಿಯೇ ಶ್ರೀಮದಾಚಾರ್ಯರ ಸಕಲ ಗ್ರಂಥಗಳ ಅಧ್ಯಯನ ಪೂರೈಸಿ ಗುರುಕೃಪೆಗೆ ಪಾತ್ರರಾದರು. ದೇಶದ ಉದ್ದಗಲಕ್ಕೂ ಸಂಚರಿಸಿ ಶ್ರೀಮದಾಚಾರ್ಯರ ಸಿದ್ಧಾಂತವನ್ನು ಪ್ರತಿಪಾದಿಸಿದರು. ವಾದಕ್ಕೆ ನಿಂತ ಪ್ರತಿವಾದಿಗಳಿಗೆ ಜಯವೆಂಬುದು ಗಗನಕುಸುಮವೇ ಆಗಿತ್ತು. ಅಂತಹ ಅದ್ಭುತ ಶಾಸ್ತ್ರ ಪಾಂಡಿತ್ಯ, ವಾಕ್ಚಾತುರ್ಯ, ವಾದನೈಪುಣ್ಯತೆ.. ವಿನಯಭೂಷಿತರಾದ ಇವರಿಂದ ಪ್ರತಿವಾದಿಗಳಿಗೂ ಸನ್ಮಾನ ನಡೆದಿತ್ತು. ಗುರುಗಳ ವೃಂದಾವನಪ್ರವೇಶದ ನಂತರದಲ್ಲಿ ಮಠದ ಜವಾಬ್ದಾರಿಯನ್ನು ವಹಿಸಿಕೊಂಡು ವಿಶೇಷವಾಗಿ ಅಭಿವೃದ್ಧಿಗೊಳಿಸಿದರು. ಇವರ ಕಾಲದಲ್ಲಿ ಶ್ರೀಮಠ ಪಂಡಿತರ ದೊಡ್ಡ ಆಶ್ರಯತಾಣವಾಗಿತ್ತು. ಶ್ರೀಮಠದಲ್ಲಿ ವೇದ, ವೇದಾಂತಗಳ ಜೊತೆಯಲ್ಲಿ ಆಯುರ್ವೇದಾದಿ ಶಾಸ್ತ್ರಗಳ ಪಾಠವೂ ನಡೆದಿತ್ತು. ಸ್ವತಃ ಶ್ರೀಪಾದರೇ ಆಯುರ್ವೇದದಲ್ಲಿ ದೊಡ್ಡ ಪಂಡಿತರಾಗಿದ್ದರು. ಶ್ರೀಪಾದರು ಸಂಚಾರ ಕ್ರಮೇಣ ಈಗಿನ ಮಹಾರಾಷ್ಟ್ರದ ಆಲೂರಿಗೆ ಬಂದು ಅಲ್ಲಿ ಕೆಲವು ಕಾಲ ನೆಲೆ ನಿಂತರು. ನಾರಾಯಣ ಎಂಬ ಹೆಸರಿನ ತರುಣ ಶ್ರೀಪಾದರನ್ನು ಬಹುಭಕ್ತಿಯಿಂದ ಸೇವಿಸಿದ. ಸಂನ್ಯಾಸಾಶ್ರಮಕ್ಕಾಗಿ ಪ್ರಾರ್ಥಿಸಿದ. ಜೀವಯೋಗ್ಯತೆಯನ್ನು ಅರಿತ ಗುರುಗಳು ಸಂನ್ಯಾಸ ದೀಕ್ಷೆಯನ್ನು ಕೊಟ್ಟು, ಶ್ರೀನರಸಿಂಹತೀರ್ಥರೆಂದು ನಾಮಕರಣವನ್ನು ಮಾಡಿದರು. ಆಲೂರಿನಲ್ಲಿಯೇ ಇದ್ದು ಸಾಧನೆ ಆರಂಭಿಸಿದರು ಶ್ರೀನರಸಿಂಹತೀರ್ಥರು. ಗುರುಗಳು ಸಂಚಾರ ನಿಮಿತ್ತ ಹೊರಟು ನಿಂತಾಗ ಶ್ರೀನರಸಿಂಹತೀರ್ಥರು "ನಮ್ಮನ್ನು ಏಕಾಂಗಿಯಾಗಿ ಬಿಟ್ಟು ಹೋಗಬೇಡಿ" ಎಂದು ಪರಿ ಪರಿಯಾಗಿ ಪ್ರಾರ್ಥಿಸಿದರು. ಶ್ರೀಅನಿರುದ್ಧತೀರ್ಥರು ಮುಂದೆ ನಾವಿಲ್ಲಿಯೇ ಬಂದು ನೆಲಸುವುದಾಗಿ ಅಭಯ ಕೊಟ್ಟು ಸಂಚಾರ ಮುಂದುವರಿಸಿದರು. ಮುಂದೆ ತಮ್ಮ ಉತ್ತರಾಧಿಕಾರಿಯಾಗಿ ಶ್ರೀಪ್ರದ್ಯುಮ್ನತೀರ್ಥರಿಗೆ ದೀಕ್ಷೆಯನ್ನು ಕೊಟ್ಟು, ಸಕಲಶಾಸ್ತ್ರಗಳ ಜ್ಞಾನವನ್ನು ಧಾರೆ ಎರೆದರು. ಶಿಷ್ಯರ ಶಾಸ್ತ್ರ ಪ್ರೌಢಿಮೆಯನ್ನು ಕಂಡು ಆನಂದಿಸಿದರು. ಆಲೂರಿನಲ್ಲಿ ಸಣ್ಣ ವಯಸ್ಸಿಗೆ ಶ್ರೀನರಸಿಂಹತೀರ್ಥರ ವೃಂದಾವನ ಪ್ರವೇಶದ ಸುದ್ದಿ ಕೇಳಿ ಬಹುದು:ಖಿಸಿದರು. ಶ್ರೀಮಠದ ಜವಾಬ್ದಾರಿಯನ್ನು ಶ್ರೀಪ್ರದ್ಯುಮ್ನತೀರ್ಥರಿಗೆ ವಹಿಸಿ ತಾವು ಶ್ರೀನರಸಿಂಹತೀರ್ಥರಿಗೆ ಮಾತು ಕೊಟ್ಟಂತೆ ಆಲೂರಿಗೆ ಬಂದು ನೆಲೆಸಿ ಅಲ್ಲಿಯೇ ಜ್ಯೇಷ್ಠ ಶುದ್ಧ ಅಷ್ಟಮಿಯಂದು ವೃಂದಾವನ ಪ್ರವೇಶ ಮಾಡಿದರು. ಶ್ರೀ ನರಸಿಂಹ ತೀರ್ಥರ ವೃಂದಾವನದ ಎದುರಿನಲ್ಲಿಯೇ ಶ್ರೀಅನಿರುದ್ಧತೀರ್ಥರ ವೃಂದಾವನವಿದೆ. ಶಿಷ್ಯವಾತ್ಸಲ್ಯದ ಔನ್ನತ್ಯವನ್ನು ನಾವೀಗಲೂ ದರ್ಶನ ಮಾಡಬಹುದು. ಇವರ ಸನ್ನಿಧಾನದಲ್ಲಿ ಮಾಡುವ ಪ್ರಾರ್ಥನೆ ಎಂದು ವಿಫಲವಾಗದು ಎಂಬುವ ನಂಬಿಕೆ ಊರ ಜನರದ್ದು. ಶ್ರೀಪಾದರಿಗೆ ಆಯುರ್ವೇದದಲ್ಲಿ ಅರ್ಪೂವವಾದ ಸಿದ್ಧಿಯಿತ್ತು. ಹಿಡಿಮಣ್ಣನ್ನು ಅಭಿಮಂತ್ರಿಸಿ ಕೊಟ್ಟು ಬಹು ಘೋರವಾದ ಖಾಯಿಲೆಗಳನ್ನು ದೂರ ಮಾಡಿದ ನಿದರ್ಶನಗಳಿದೆ. ಈಗಲೂ ಶ್ರೀಅನಿರುದ್ಧತೀರ್ಥರ ವೃಂದಾವನದ ಮೇಲೇರಿಸಿದ ಮಂತ್ರಾಕ್ಷತೆ ಭಕ್ತರ ಆರೋಗ್ಯ ಸಮಸ್ಯೆ ದೂರ ಮಾಡುತ್ತಿದೆ ಅಂದರೆ ಶ್ರೀಪಾದರ ಮಹಿಮೆಯನ್ನು ನಾವು ಚಿಂತಿಸಬಹುದು. ಸಕಲರಿಗೂ ಶ್ರೀಅನಿರುದ್ಧತೀರ್ಥಗುರುಗಳ ಅನುಗ್ರಹವಾಗಲಿ..
*****



No comments:

Post a Comment