Thursday 20 June 2019

raghupraveera teertharu matha bheemanakatte mutt yati 37 phalguna shukla dashami ರಘುಪ್ರವೀರ ತೀರ್ಥರು bhimanakatte








Please email available info on this yati to 
sureshhulikunti@gmail.com. Thanks
Sri. Raghupraveera Theertha yati 37
Ashrama Period:
Ashrama Guru: Sri. Raghunatha Theertha
Ashrama Shishya: Sri. Raghubhushana Theertha 
Vrundavana: Bheemana Katte
Aradhana: Phalguna shukla dashami

vrundaavanaarya sampraapta jnaanaishwaryarnaham sadaa
raghupraveeraakhya guroon bhaje jnaanaadi siddhaye

At a very young age, Shri Raghupraveera Teertharu was ordained into 'sanyasa' by Shri Raghunatha Teertharu. He was also a very great personality and can be said to be 'Shaka Purusha' of the 19th century. Before he took vows of celibacy, his name was Hayagreeva. He was a colossus of knowledge (Jnana Meru) a 'Rasa Rushi'. He studied under the tutelage of Shri Vrundavanacharya of Sode Matha. He was nurtured by his guru and received abundant blessings from acharya. Shri Vrundavanacharya had great affection for his disciple. He took care of his ward like a son. Swamiji also gained the best knowledge from his guru. Soon after his ashrama sweekara he performed 'sharavana ekadashi upavasa' for two days without any hesitation. Considering his age, his anxious father came to the matha to dissuade him from following it strictly. However, the little yati undauntedly said that Vaishnava Vratas cannot be forsaken. Hencforth Vrundavanacharya was his guide and guru and thereafter he would not appreciate any interference in his observance of rituals (anushtana). This was his 'vaishnava deekshe' (shrutva sa baalayati raaha na me twam, naaham sutastadidamucchyata ityuktam, yaddasthapanchakajavosmi ta eva taataa, paanaatyayepina jahaami tadeeyadharmaan - Shri Raghupraveera Guna Ratna Mala - Shri Shatturaajaacharya Virachita).
Swamiji also performed 'Chandrayanadi Vratas'. Like Vrundavanacharya he also observed several fasting rituals (upavasa vratas). He led an austere life eating just a handful of beaten puffed rice (Aralu) and Tulasi leaves for three years.
Shri Raghupraveera Teertha was an ardent devotee of Shri Vadiraja Swaiji. Pooja traditions (sampradaya) set by Vrundavanacharya were followed in the matha. (shrimadvrundavanacharyasampradaayapravrthaka) During one 'paryaya' of Sri Vrundavanacharya, Swamiji was with him and assisted him. During other 'paryaya' times he remained in Sode and performed 'trivikraotsava' and Shri Vadirajara Aradhane in grand manner and became der to his guru.
Swamii apart from the Bheemana Katte Matha, has consecrated Hanuman idols at four places. Also he has consecrated a very beautiful idol of Sri Murali Krishna at Belagavi Vittala Devasthana in Sahapura and 'prana devaru' behind the house of 'Gejje' located in Ananta shayana galli. Swamiji was known as 'Hayagreeva Muni' for having had special 'upadesha' o Shri Swapnavrundavanakhyana' adhyaya 18 to 22 and having eperienced the Shri Rajaru's 'kaarunyamruta'. Shri Vrundavancharya had given him an idol of Shri Krishna with a churning rod, Shri Vadiraja's statue (pratime) and silver pancha brundavana. Even to this day worship is carried out as per Sode Matha traditions (sampradaya) in this matha.
Shri Raghupraveera Teertharu ordained a young lad (vatu) into sanyas and named him Shri Raghudhwaja Teertharu. However, the disciple entered brundavana even while his guru was alive. So the swamiji gave ashrama to a young person and named him Shri Raghubhooshana Teertharu.
Shri Raghupraveera Teertharu remained as pontiff for more than 75 years. In 1895 (manmatha samvatsara) on phalguna shukla navami, as usual 'panchamruta abhisheka' was done in a grand manner. 'Brahmana Suvasane Santarpane' took place. He called Shri Raghubhooshana Teertharu and handed over the responsibility of the 'Samsthana' and gave him secret advice (rahasya upadesha). He sipped sacred water (teertha). By then it was noon and Dashami Tithi had already set in. He sat in meditation and left his mortal coil. As per his instructions his 'brundavana' was installed in Bheemana Katte Matha premises.
*******
 
ಶ್ರೀದಾಮೋದರಾರ್ಚಕಾಯ ಶ್ರೀರಾಮಚಂದ್ರಪ್ರಿಯಾಯ | ಶ್ರೀ ವಾದಿರಾಜ ವೃಂದಾವನಾಚಾರ್ಯ ಪೋಷಿತಾಯ | ಪ್ರಮಾಣ್ಯಬೋಧಿನಿ ಮಂಡಿತಾಯ ಪಂಚಮುಖ್ಯಪ್ರಾಣ ಸ್ಠಾಪಿತಾಯ ಶ್ರೀ ರಘುಪ್ರವೀರಾಯ ನತಿ ಶತ ತತಯಃ ||



🚩ಶ್ರೀರಘುಪ್ರವೀರತೀರ್ಥರು🚩
ಶ್ರೀಭೀಮಸೇತುಮುನಿವೃಂದ ಪರಂಪರೆಯನ್ನು ಬೆಳಗಿದ ಮಹಾಮಹಿಮರು, ಜ್ಞಾನ ಶಿಖರ.1808ರಲ್ಲಿ ಜನನ.
ಹಯಗ್ರೀವ ಎಂಬುದು ಬಾಲ್ಯನಾಮ.
1816ರಲ್ಲಿ ಯತ್ಯಾಶ್ರಮ ಸ್ವೀಕಾರ.
ಹಲಸಿಯಲ್ಲಿ ನೆಲೆಸಿರುವ ಶ್ರೀರಘುನಾಥತೀರ್ಥರ ಕರಕಮಲಸಂಜಾತರು ರಘುಪ್ರವೀರತೀರ್ಥರು.
ಸೋದೆ ವಾದಿರಾಜ ಮಠದ ವೃಂದಾವನಾಚಾರ್ಯ (ವಿಶ್ವಪ್ರಿಯತೀರ್ಥರು)ರಲ್ಲಿ ಸಕಲಶಾಸ್ತ್ರಗಳ ಅಧ್ಯಯನ. 
ಗುರುಕಾರುಣ್ಯಪಾತ್ರರಾಗಿ ಉಪನಿಷದ್ರಹಸ್ಯಗಳನ್ನು ಅರಿತು ವಿಶೇಷ ಉಪಾಸನೆ..ಅನಿತರವಾದ ಋಜುತ್ವದೀಕ್ಷೆ..
ಆಖ್ಯಾನದಲ್ಲಿ ಶ್ರೀಹಯಗ್ರೀವ ಮುನಿ ಎಂಬ ನಾಮದಿಂದ ರಾಜರ ಉಪದೇಶಕ್ಕೆ ಪಾತ್ರರಾದವರು.
ಗುರುಗಳ ಉಪದೇಶದಂತೆ ಆಖ್ಯಾನಪ್ರಾಮಾಣ್ಯ ಸಮರ್ಥನೆಗೆ "ಶ್ರೀವೃಂದಾವನಾಖ್ಯಾನ ಪ್ರಾಮಾಣ್ಯ ಪ್ರಬೋಧನಮ್" ಶಾಸ್ತ್ರೀಯ ವಾದಗ್ರಂಥದ ರಚನೆ. ಇವರು ಭಕ್ತರ ರಕ್ಷಣೆಗಾಗಿ, ದುಷ್ಟರ ನಿಗ್ರಹಕ್ಕಾಗಿ ತೋರಿದ ಪವಾಡಗಳು ಹಲವು.. 
ಸತ್ಯಮಂಗಳದಲ್ಲಿ ನೆಲೆಸಿರುವ 
ಶ್ರೀರಘುಧ್ವಜತೀರ್ಥರು ಪ್ರಥಮ ಶಿಷ್ಯರು, ಗುರುಗಳು ಇರುವಾಗಲೇ ವೃಂದಾವನ ಪ್ರವೇಶ. ದ್ವಿತೀಯ ಶಿಷ್ಶರನ್ನಾಗಿ ರಘುಭೂಷಣತೀರ್ಥರನ್ನು ಸ್ವೀಕರಿಸಿ, ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿ ಮನ್ಮಥ ಸಂವತ್ಸರದ ಮೀನ ಶುದ್ಧ ದಶಮಿಯಂದು (೧೮೯೫) ವೃಂದಾವನ ಪ್ರವೇಶ.. ಶ್ರೀಮದಾಚಾರ್ಯರ ಸಿದ್ಧಾಂತದ ಜೊತೆಯಲ್ಲಿ ವಾದಿರಾಜರ ಋಜುತ್ವಸಿದ್ಧಾಂತವನ್ನು ಜಗದಗಲದಿ ಪಸರಿಸಿದ ಪರಮಪೂಜ್ಯ ಗುರುಗಳ ಆರಾಧನಾ ಪರ್ವಕಾಲ (೨೪/೦೩/೨೧).
***********

ಇಂದಿನ ದಿನ ೧೯ ನೆಯ ಶತಮಾನ ಕಂಡ ಮಹಾಮಹಿಮರು, ಜ್ಞಾನಮೇರು, ರಸ ಋಷಿಗಳಾದ ಶ್ರೀರಘುಪ್ರವೀರ ತೀರ್ಥರ ಆರಾಧನಾ ಪರ್ವಕಾಲ.
 ಮಹಾತಪಸ್ವಿ ಶ್ರೀ ರಘುನಾಥತೀರ್ಥರಿಂದ ಸಂನ್ಯಾಸಾಶ್ರಮ. ಭಾವಿ ಸಮೀರ ವಾದಿರಾಜ ಗುರುಸಾರ್ವಭೌಮರ ಪರಮಾನುಗ್ರಹಪಾತ್ರರಾದ ವೃಂದಾವನಾಚಾರ್ಯರ ವಿದ್ಯಾಶಿಷ್ಯರಾಗಿ ಅವರ ಜ್ಞಾನಾಮೃತವನ್ನು ಪರಿಪೂರ್ಣವಾಗಿ ಸವಿದವರು. 
ಗುರುಗಳಂತೆ ನಿರನ್ನಾದಿವ್ರತವನ್ನಾಚರಿಸಿದವರು. ಗುರುಗಳ ಅನುಗ್ರಹದಿಂದ ಮೂರು ವರ್ಷ ಕೇವಲ ತುಳಸಿ , ಮುಷ್ಟಿ ಅರಳು ಸೇವಿಸಿ ತಪಸ್ಸು ಆಚರಿಸಿದವರು. 
ಗುರುಗಳ ಉಪದೇಶದಂತೆ “ಶ್ರೀ ವೃಂದಾವನಾಖ್ಯಾನ ಪ್ರಾಮಾಣ್ಯ ಪ್ರಬೋಧನಮ್” ಎಂಬ ಮೇರುಕೃತಿಯನ್ನು ರಚಿಸಿ ಆಖ್ಯಾನದ ಪ್ರಾಮಾಣ್ಯವನ್ನು ದೃಢೀಕರಿಸಿದಂತಹ ಮಹಾಮಹಿಮರು. 
ಶ್ರೀಹಯಗ್ರೀವ ಮುನಿ ಎಂಬುದಾಗಿ ಆಖ್ಯಾನೋಕ್ತರು ಇವರು.
ಈ ರೀತಿಯಾಗಿ ರಾಜರ ವಿಶೇಷ ಅನುಗ್ರಹ ಪಡೆದ ಗುರುಗಳ ಅನುಗ್ರಹ ಸಕಲ ಸಾಧಕ ವರ್ಗಕ್ಕೂ ಅತ್ಯವಶ್ಯ.
🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
The worship of Sri Raghupraveera Tirtha, the great sage, is said to be the embodiment of Dvaita Tattva Siddhanta during the 19th century.
Having Pontificated by Mahatapasvi Sri Raghunatha Tirtharu and with the divine blessings of Bhavisameera Sri Vaidiraja Gurusarvabhavoumaru, the great sage was a disciple of sri Vrindavanacharya of the sode mutt.
Inspired by his guru Sri Vrindavanacharya's Nirannadivrata-a strong penance that was done for years without any meal but with just a fist of paddy ruler,  he also practiced the penance for three years just by eating a fist of ruler having been offered to lord Sri Damodara who is been worshipped in the saligrama roopa in the Sri Bheemasethu Munivrunda Samsthana.
As per his Guru's preachings, he also authored the masterpiece "Sri Vrindavanakhyana  pramanya Prabodhanam" authenticating the aspects of rujutva upasane of Sri vadirajaru and Sri svapnavrundanakhyana grantha.
He is also known as Sri hayagreeva Muni as mentioned in the srisvapnavrundavanakhyana grantha by sri vadirajaru. 
In this way, the grace of the gurus, who have received the blessings of the satparampara and Sri Ramachandra prabhu is essential to all sajjanas especially during this auspicious occasion of the aradhana mahotsava of prathasmaraneeya Sri Raghupraveeera Teertharu.
****
ವೃಂದಾವನಾರ್ಯಸಂಪ್ರಾಪ್ತ ಜ್ಞಾನೈಶ್ವರ್ಯಾನಹಂ ಸದಾ/ ರಘುಪ್ರವೀರಾಖ್ಯಗುರೂನ್ ಭಜೇ ಜ್ಞಾನಾದುಸಿದ್ಧಯೇ//

ಭೀಮನಕಟ್ಟೆ ಮಠದ ಪರಂಪರೆಯ ಶ್ರೀರಘುಪ್ರವೀರ ತೀರ್ಥರ ಆರಾಧನೆಯ ಪರ್ವಕಾಲ.

ಚಿಕ್ಕ ವಯಸ್ಸಿನಲ್ಲೇ ಸನ್ಯಾಸ ಸ್ವೀಕಾರ ಮಾಡಿದರೂ ಶ್ರೀರಘುಪ್ರವೀರ ತೀರ್ಥರಿಗೆ ಆಗಲೇ ಶಾಸ್ತ್ರದ ಮೇಲೆ, ಗುರುಗಳ ಮೇಲೆ, ಪರಂಪರೆಯ ಮೇಲೆ ಅಪಾರ ನಂಬಿಕೆ. ಇದಕ್ಕೆ ಪೂರಕವೆಂಬಂತೆ ಅವರು ಸನ್ಯಾಸ ಸ್ವೀಕಾರ ಮಾಡಿದ ಸ್ವಲ್ಪವೇ ದಿನದಲ್ಲಿ  ಶ್ರವಣೋಪಾಸದ ನಿಮಿತ್ತ ಎರಡು ಉಪವಾಸಗಳ ಪ್ರಸಂಗ ಬಂದಿತು. ಇನ್ನೂ ಚಿಕ್ಕ ವಯಸ್ಸು, ಬಾಲಯತಿಗಳು ಇಷ್ಟು ದೇಹ ದಂಡಿಸಬಾರದು ಅಂತ ತಮ್ಮ ಪೂರ್ವಾಶ್ರಮದ ತಂದೆಯವರು‌ ಪ್ರಾರ್ಥಿಸಿದಾಗ(ಮಗನೆಂಬ ಮಮಕಾರದಿಂದ), ಸನ್ಯಾಸಾಶ್ರಮ ಸ್ವೀಕರಿಸಿದ ಮೇಲೆ ಪೂರ್ವ ಸಂಬಂಧಗಳ ಮಮಕಾರ ಇರಕೂಡದು, ಈಗ ನಮಗೆ ಸಮಸ್ತವೂ ಗುರುಗಳೇ ಆಗಿದ್ದಾರೆ. ಇಂತಹ ಹರಿದಿನಗಳ ಶ್ರೇಷ್ಠ ವ್ರತಗಳ ಆಚರಣೆಯಲ್ಲಿ ವಯೋಮಾನ, ದೇಹದ  ಅರೋಗ್ಯ ನಿಮಿತ್ತ ಮಾಡಿ ವ್ರತಭಂಗ ಮಾಡುವುದು ಸ್ವಲ್ಪವೂ ಸರಿಯಲ್ಲ ಅಂತ ನಿರ್ದಾಕ್ಷಿಣ್ಯವಾಗಿ ನಿರಾಕರಿಸಿಬಿಟ್ಟರು.
ಈ ಪ್ರಸಂಗವನ್ನು ಶ್ರೀಷಟ್ಪುರಾಚಾರ್ಯರು ತಾವು ರಚಿಸಿದ ಶ್ರೀರಘುಪ್ರವೀರ ಗುಣರತ್ನ ಮಾಲಾ  ಎನ್ನುವ ಗ್ರಂಥದಲ್ಲಿ ಶ್ರುತ್ವಾಸ ಬಾಲಯತಿರಾಹ ನೇ ಮೇ ಪಿತಾ ತ್ವಂ| ನಾಹಂ ಸುತಸ್ತದಿದಮುಚ್ಯತ ಇತ್ಯಯುಕ್ತಮ್|ಯದ್ಧಸ್ತಪಂಕಜಭವೋಸ್ಮಿ ತ  ಏವ ತಾತಃ| ಪ್ರಾಣಾತ್ಯಯೇsಪಿ ನ ಜಹಾಮಿ ತದೀಯ ಧರ್ಮಮ್ ಅಂತ ತಿಳಿಸಿದ್ದಾರೆ. 

ಸಮಸ್ತ ಶಾಸ್ತ್ರಗಳ ಅಧ್ಯಯನವು ಶ್ರೀವಾದಿರಾಜ ಗುರುಸಾರ್ವಭೌಮರ ಬೃಂದಾವನದಿಂದ ಮಂತ್ರಾಕ್ಷತೆಯ ವೃಷ್ಟಿಯನ್ನು ಅನುಗ್ರಹಪೂರ್ವಕ ಪಡೆದು ಧನ್ಯರೆನಿಸಿದ್ದ, ಚಿಕ್ಕ ವಯಸ್ಸಿನಲ್ಲಿಯೇ ಸಮಸ್ತ ಶಾಸ್ತ್ರಗಳೆಲ್ಲವನ್ನೂ ಮುಖೋದ್ಗತ ಮಾಡಿಕೊಂಡಿದ್ದ ಆಗಿನ ಕಾಲದ ಸರ್ವ ಶ್ರೇಷ್ಠ ಜ್ಞಾನಿಗಳೆನಿಸಿದ ಭಾವಿ ಇಂದ್ರರಾದ ಶ್ರೀವೃಂದಾವನಾಚಾರ್ಯರಿಂದ ನಡೆಯಿತು ಅಂದಮೇಲೆ ಶ್ರೀರಘುಪ್ರವೀರ ತೀರ್ಥರ ಜ್ಞಾನದ ಬಗ್ಗೆ ಹೇಳುವುದೇನು! ಸರ್ವಮೂಲ,ವೇದ, ಪುರಾಣ, ಶಾಸ್ತ್ರಗಳ ಜೊತೆ ಶ್ರೀವಾದಿರಾಜರ  ಋಜುತ್ವದ ಪ್ರಮಾಣಗಳ ವಿಷಯದ ಪಾಠವೂ ಗುರುಗಳಿಂದ ಅನುಗ್ರಹಿತವಾಗಿ, ಗುರುಗಳ ಜೊತೆಯಲ್ಲೇ ಅನೇಕ ಕಡೆ ಸಂಚರಿಸಿ ಗುರುಗಳ ಆಜ್ಞೆಯಂತೆಯೇ ರಾಜರ ಋಜುತ್ವೋತ್ಕರ್ಷ ಮಹಿಮೆಯನ್ನು ಹೋದಕಡೆಯಲ್ಲೆಲ್ಲಾ  ಪಸರಿಸಿದರು.  
ಗುರುಗಳಾದ ವೃಂದಾವನಾಚಾರ್ಯರಂತೆಯೇ  ತಾವು ಮೂರು ವರ್ಷಗಳ ಕಾಲ ಕೇವಲ ತುಳಸಿ ಮತ್ತು ಅರಳನ್ನು ಸೇವಿಸಿ ಕಠಿಣ ತಪಶ್ಚರ್ಯ ಆಚರಿಸಿದರ ಜೊತೆ ಚಂದ್ರಾಯಣಾದಿ ಕಠಿಣ ವ್ರತಗಳನ್ನೂ ಆಚರಿಸಿದ ಮಹನೀಯರು.
ಇವರ ಪ್ರತಿಭಾ ಸಾಮರ್ಥ್ಯಗಳನ್ನು ಮೆಚ್ಚೊಕೊಂಡಿದ್ದ ಶ್ರೀ ವೃಂದಾವನಾಚಾರ್ಯರು ನಮ್ಮ‌ ನಂತರ ಶ್ರೀ ವಾದಿರಾಜರ ಭಕ್ತರ ಸಂಶಯಗಳನ್ನು ನಿವಾರಿಸುವಲ್ಲಿ ಶ್ರೀರಘುಪ್ರವೀರರೇ ಸಮರ್ಥರು ಎಂದು ಅಭಿಮಾನದಿಂದ ಯಥಾರ್ಥವೇ ಆದ ಪ್ರಶಂಸೆಯನ್ನು ಮಾಡುತ್ತಿದ್ದರೆಂದರೆ ಶ್ರೀರಘುಪ್ರವೀರತೀರ್ಥರಿಗೆ ರಾಜರ ಋಜುತ್ವದ ವಿಷಯದಲ್ಲಿ ಇದ್ದ ನಂಬಿಕೆ, ಭಕ್ತಿ ಶ್ರದ್ಧೆಗಳು ಎಷ್ಟಿರಬೇಡ!
ಶ್ರೀ ವಾದಿರಾಜರ ಋಜುತ್ವೋಪಾಸನೆಯ ಸೇನಾನಿಯಂದೇ ಪ್ರಖ್ಯಾತರಾದ ಶ್ರೀಜಮಖಂಡಿ ವಾದಿರಾಜಾಚಾರ್ಯರಿಗೂ ಶ್ರೀರಘುಪ್ರವೀರ ತೀರ್ಥರ ಮೇಲೆ ಅಪಾರ ಭಕ್ತಿ. ಶ್ರೀರಘುಪ್ರವೀರ ತೀರ್ಥರೊಂದಿಗೆ  ಶಾಸ್ತ್ರಗಳ ಅನೇಕ‌ ವಿಷಯಗಳನ್ನು ಚರ್ಚಿಸುತ್ತಿದ್ದ ಆಚಾರ್ಯರು, ಶ್ರೀಗಳವರ ಕುಂಭಕೋಣೆಯ ಸಂಚಾರ ಕಾಲದಲ್ಲಾದ ಋಜುತ್ವದ ವಿರೋಧದ ಪ್ರಸಂಗದಲ್ಲಿ ತಾವೇ ಸ್ವತಃ ಶ್ರೀಗಳವರ ಜೊತೆ ಇದ್ದು, ವಿರೋಧಿಗಳಿಗೆ ಸರಿಯಾದ ಉತ್ತರ ಕೊಟ್ಟು,ಅವರ ಗ್ರಂಥ ಖಂಡಿಸಿ, ನಿರುತ್ತರರನ್ನಾಗಿ ಮಾಡಿ ಶ್ರೀಗಳವರಿಗೆ ಸಂತೃಪ್ತಿ ಪಡಿಸಿದರು. 

ಶ್ರೀಪ್ರಸನ್ನ ಕೇಶವ‌ವಿಠಲರು  ಶ್ರೀರಘುಪ್ರವೀರ ತೀರ್ಥರನ್ನು ಕುರಿತು ತಮ್ಮ ಒಂದು ಕೃತಿಯಲ್ಲಿ 
ಭಗವಂತನ ಒಲುಮೆ ಬೇಕಾದರೆ ರಘುಪ್ರವೀರ ತೀರ್ಥರನ್ನು ಪೂಜಿಸುವುದು ಒಳ್ಳೆಯದು ಅಂತ ತಿಳಿಸಿ , ವಾದಿರಾಜರ ಋಜುತ್ವದ ಬಗ್ಗೆ ಜ್ಞಾನವೂ ಇವರ ಉಪಾಸನೆಯಿಂದ ಸುಲಭದಲಿ ದೊರಕುತ್ತದೆ ಎಂದು  ಈ ಕೆಳಗಿನಂತೆ ತಿಳಿಸಿದ್ದಾರೆ.
ರಘುಪ್ರವೀರರ ಪೂಜಿಸುವುದೆ ಒಳಿತು| ರಘುರಾಮಾತ್ಮಕ ಹಯಮೊಗಬೇಕಾದವರಿಗೆ

ಋಜುರಾಜ ಮಿಗಿಲಾದ ಜ್ಞಾನವು ನಗುತ ಬರುವನು, ಗಗನಾಟವಾಹನಾ 

ಇಷ್ಟ ಪ್ರಸನ್ನಕೇಶವ ವಿಠಲನೆಂಬುವರ|ತುಷ್ಟಿಯಿಂದಲಿ ನಿಷ್ಠೆ ಪುಟ್ಟುವುದು|ದೃಷ್ಟಿಯಿಂದಲಿ ನೋಡೆ ಎಷ್ಟು ಪೇಳಲಿ ಗುಣ|ದಿಟ್ಟಾಶ್ರೀವರ ಸಾಕ್ಷೀವಿಠಲಾ ಭೀಮಸೇತು

ಇಂತಹ ಮಹಾನ್ ಜ್ಞಾನಿಗಳಾದ, ಶ್ರೀವಾದಿರಾಜರ ಋಜುತ್ವೋಪಾಸಕರಾದ ಶ್ರೀರಘುಪ್ರವೀರರಲ್ಲಿ ಮತ್ತು ಅವರ ಅಂತರ್ಯಾಮಿ ಶ್ರೀವಾದಿರಾಜರ ಅಂತರ್ಯಾಮಿ ಶ್ರೀಹಯಗ್ರೀವ ದೇವರ ಅನುಗ್ರಹ ನಮ್ಮೆಲ್ಲರ ಮೇಲಿರಲಿ ಎಂದು  ಭಕ್ತಿಯಿಂದ  ಪ್ರಾರ್ಥಿಸೋಣ.
by smt.padma sirish
***
24 august 2020 at sonda
ಶ್ರೀಮದಚ್ಯುತಪ್ರೇಕ್ಷಾಚಾರ್ಯರ ಪರಂಪರೆಯಲ್ಲಿ ಬೆಳಗಿದ ಮಹಾ ತಪಸ್ವಿ, ಯತಿಪುಂಗವರಾದ ಶ್ರೀರಘುಪ್ರವೀರತೀರ್ಥರ ಮಹಿಮಾಬೋಧಕ ಕೃತಿಗಳ ಸಂಗ್ರಹರೂಪವಾದ “ತತ್ವಮಂಡನಮಾರ್ತಾಂಡ ಶ್ರೀರಘುಪ್ರವೀರತೀರ್ಥರು” ಎನ್ನುವ ಕೃತಿಕುಸುಮವು ವಿಶ್ವೋತ್ತಮತೀರ್ಥರ ಆರಾಧನಾ ಪರ್ವಕಾಲದಲ್ಲಿ ಪರಮಪವಿತ್ರ ಸೋಂದಾಕ್ಷೇತ್ರದಲ್ಲಿ ಸೋದೆಮಠಾಧೀಶರಾದ ಪರಮಪೂಜ್ಯ ಶ್ರೀವಿಶ್ವವಲ್ಲಭತೀರ್ಥರ ಹಾಗೂ ಭೀಮನಕಟ್ಟೆಮಠಾಧೀಶರಾದ ಶ್ರೀರಘುವರೇಂದ್ರತೀರ್ಥರ ಅಮೃತಹಸ್ತದಿಂದ ಲೋಕಾರ್ಪಣಗೊಂಡಿತು.



****

No comments:

Post a Comment