Sri Raghupramathi Theertha
puShya shuddha shashTi is the ArAdhane of shri raghupramati tIrtharu of kUDali Arya akshObhya maTa.
parampare: kUDali Arya akshObhya maTa maTa, #36
Period: 1972 – 1982
Vrundavana: originally in shUrapAli and then shifted to kUDali in 1997
PUrvAshrama name: Bindacharya singanamalli
Ashrama Guru : Ramadhyana Theertha
Shiyaru: shri raghupriya tIrtharu
Aradhana : Pushya bahula shasti
Shri raghupramati tIrtharu was very simple, straight forward by his nature and was a great scholar in Vedanta, kavya mimamsa, vyaakarana, etc.
He travelled most of his 10 years with shri satyapramOda tIrtharu of uttarAdi maTa except the last 2 years. He offered all his wealth and philosophical books from his pUrvAshrama to the maTa. The gold was converted into Jewels for Lord Vijaya ViTTala.
He observed one chaturmasya at the Vijaya ViTTala temple in Haveri.
He left for the heavenly abode at Jamakhandi on 1/1/1982.
Shri raghupramati tIrtha varada gOvindA gOvindA....
shri krishNArpaNamastu...
***ರಾಮಧ್ಯಾನ ಕರಾಬ್ಜ್ಯೋತ ರಘುಪ್ರಮತಿ ನಾಮಕಹ
ಔದಾರ್ಯಾದಿ ಗುಣೋದ್ಯಕ್ತ ಭೂಯಾನ್ಮೇಭೀಷ್ಟದಿ ಸದಾ.
Sree Raghupramathi Theertha like his predecessor left this earth without appointing his successor . Once Again, The question of selecting the suitable pontiff to the math posed before Sree Sree Sathyapramodha Theertha . At that time, he prayed Sree Sathyabodha Theertha at Savanur who indicated the suitable person in the form of Sree Narayanacharya Galagali, who became Sree Raghupriya Theertha.
***
ಶ್ರೀಂ ಶ್ರೀ ಕಂ ಕಪಿಲಾಯ ನಮಃ
ಪುಷ್ಯ ಶುಕ್ಲ ಷಷ್ಠೀ
ರಾಮಧ್ಯಾನ ಕರಾಬ್ಜೋತ್ಥಃ ರಘುಪ್ರಮತಿ ನಾಮತಃ/
ಔದಾರ್ಯಾದಿಗುಣಾದ್ರಿಕ್ತಃ ಭೂಯಾನ್ಮೇ ಭೀಷ್ಟದ ಸದಃ//
ಶ್ರೀ ಕೂಡ್ಲಿ ಅಕ್ಷೋಭ್ಯತೀರ್ಥ ಮಠದ 20ನೆಯ ಶತಮಾನದ ಮಹಾನ್ ಯತಿಗಳು, ಪರಮ ಸಾತ್ವಿಕರು, ವೈರಾಗ್ಯ ಪುರುಷರು, ಶ್ರೀ ರಘುಪ್ರಿಯತೀರ್ಥರಂತಹಾ ಶ್ರೇಷ್ಠ ಯತಿಗಳ ಗುರುಗಳೂ ಆದ ಶ್ರೀ
ಶ್ರೀ ರಘುಪ್ರಮತಿ ತೀರ್ಥರ ಆರಾಧನಾ ಮಹೋತ್ಸವ
ಇವರ ಸಂಕ್ಷಿಪ್ತ ಚರಿತ್ರೆ - ಸಮೂಹದ ಆತ್ಮೀಯರು ವಿನೋದಾ ಅವರು ಬರೆದ ಹಳೆಯ ಲೇಖನ
👇🏽👇🏽👇🏽👇🏽👇🏽👇🏽👇🏽
ಶ್ರೀ ರಘುಪ್ರಮತಿತೀರ್ಥರು
( ಕಾಲ - 1972 - 1982)
ಆರಾಧನಾ ದಿನ - ಪುಷ್ಯ ಶುದ್ಧ ಷೃಷ್ಠಿ, ಪೂರ್ವ ಭಾದ್ರಪದ ನಕ್ಷತ್ರ
ಮೂಲ ವೃಂದಾವನ- ಶಿವಮೊಗ್ಗ ಜಿಲ್ಲೆ, ಹೊಳೆಹೊನ್ನೂರು ತಾಲೂಕು, ಕೂಡಲಿ.
ಪೀಠಾಧಿಪತಿಗಳಾಗಿದ್ದ ಕಾಲ -
1972-1982
ಶ್ರೀಮದಾಚಾರ್ಯರ ಸಾಕ್ಷಾತ್ ಶಿಷ್ಯರಲ್ಲಿ ಕೊನೆಯವರಾದ ಶ್ರೀ ಅಕ್ಷೋಭ್ಯತೀರ್ಥರ ಪರಂಪರೆಯಲ್ಲಿ ಶ್ರೀ ರಾಮಧ್ಯಾನತೀರ್ಥರ ನಂತರ ಪೀಠವನ್ನು ಅಲಂಕರಿಸಿದವರು ಶ್ರೀ ರಘುಪ್ರಮತಿ ತೀರ್ಥರು. ಚಿಕ್ಕೇರೂರಿನ ಸಿಂಗನಮಲ್ಲಿ ಮನೆತನದಲ್ಲಿ ಜನಿಸಿ ಪೂರ್ವಾಶ್ರಮದಲ್ಲಿ ಪಂಡಿತ ಬಿಂದುಮಾಧವಾಚಾರ್ಯ ಸಿಂಗನಮಲ್ಲಿ ಎಂದು ಪ್ರಸಿದ್ಧರಾಗಿದ್ದರು.ವ್ಯಾಕರಣ, ತರ್ಕ, ಸಾಹಿತ್ಯ, ವೇದಾಂತಗಳಲ್ಲಿ ವಿಷೇಶ ಪಾಂಡಿತ್ಯ ಪಡೆದಿದ್ದರು. ಸಜ್ಜನಿಕೆ, ವಿನಯ, ವೈರಾಗ್ಯ, ಗುರುಭಕ್ತಿ ಮತ್ತು ಶಾಂತ ಸ್ವಭಾವಗಳು ಇವರ ವಿಷೇಶ ಗುಣಗಳಾಗಿದ್ದವು. ಇದನ್ನು ಅರಿತ ಉತ್ತರಾಧಿ ಮಠದ ಶ್ರೀ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರು ಇವರಿಗೆ ಅಂಗಾರದಲ್ಲಿ ಬರೆದಾಗ ಉದ್ಭೂತನಾದ ಶ್ರೀ ನರಸಿಂಹ ದೇವರ ಕ್ಷೇತ್ರವಾದ ಮುಳಬಾಗಿಲಿನ ಶ್ರೀ ನರಸಿಂಹ ತೀರ್ಥದಲ್ಲಿ ೧೯೭೨ ನೇ ಇಸ್ವಿಯಲ್ಲಿ ತುರೀಯಾಶ್ರಮವನ್ನು ಕೊಟ್ಟು ಶ್ರೀ ರಘುಪ್ರಮತಿ ತೀರ್ಥರು ಎಂದು ನಾಮಕರಣ ಮಾಡಿದರು.
ತಮ್ಮ ಪೀಠಾಧಿಪತ್ಯದ ೧೦ ಚಾತುರ್ಮಾಸ್ಯಗಳಲ್ಲಿ ೮ ಚಾತುರ್ಮಾಸ್ಯಗಳನ್ನು ಉತ್ತರಾಧಿ ಮಠದ ಶ್ರೀ ಶ್ರೀ ಸತ್ಯಪ್ರಮೋದತೀರ್ಥಸ್ವಾಮಿಗಳ ಸನ್ನಿಧಿಯಲ್ಲಿ ಆಚರಿಸಿದರು. ತಮ್ಮ ಬಾಗಲಕೋಟೆಯ ಚಾತುರ್ಮಾಸ್ಯದ ಕಾಣಿಕೆಯನ್ನು ಸಮಿತಿಯವರಿಗೆ ಕೊಟ್ಟು ಅನ್ನಸಂತರ್ಪಣೆಗೆ ಬೇಕಾಗುವ ಪಾತ್ರೆಗಳನ್ನು ತೆಗೆದುಕೊಳ್ಳುವಂತೆ ಹೇಳಿದರು. ಸಂಸ್ಥಾನದ ವಿಜಯ ವಿಠಲದೇವರಿಗೆ ಪೂರ್ವಾಶ್ರಮದ ಪತ್ನಿಯಾದ ಶ್ರೀಮತಿ ಸುಂದರಾಬಾಯಿ ಅವರ ಚಿನ್ನಾಭರಣಗಳನ್ನು ಕರಗಿಸಿ ಭಗವಂತನಿಗೆ ಕವಚ ಮಾಡಿಸಿದರು.
ಸಂನ್ಯಾಸ ಧರ್ಮವನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ನಿರಂತರ ಪಾಠ ಪ್ರವಚನಗಳಲ್ಲಿ ನಿರತರಾಗಿದ್ದರು. ೧೯೮೨ ಜನೆವರಿ ೧ ರಂದು ನರಸಿಂಹ ಕ್ಷೇತ್ರವೆಂದು ಪ್ರಸಿದ್ಧಿ ಪಡೆದ ಕೃಷ್ಣಾನದಿ ದಂಡೆಯಲ್ಲಿರುವ ಶ್ರೀ ನರಸಿಂಹ ಕ್ಷೇತ್ರ ಶೂರ್ಪಾಲಿಯಲ್ಲಿ ವೃಂದಾವನಸ್ಥರಾದರು. ಇವರ ಮೂಲ ವೃಂದಾವನ ಶಿವಮೊಗ್ಗದ ಜಿಲ್ಲೆಯ ಹೊಳೆಹೊನ್ನೂರು ತಾಲೂಕಿನ ಕೂಡಲಿಯಲ್ಲಿದೆ (1997 ರಲ್ಲಿ ಬದಲಾಯಿಸಲಾಗಿದೆ)...
ಶ್ರೀಗಳ ಅನುಗ್ರಹ ಅವರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಲಕ್ಷ್ಮೀನಾರಸಿಂಹಾಭಿನ್ನ ಶ್ರೀ ವಿಠಲರ ಅನುಗ್ರಹ ಸದಾ ನಮಗೆಲ್ಲರಿಗಿರಲೆಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ...
-Smt. Padma Sirish
ನಾದನೀರಾಜನದಿಂ ದಾಸಸುರಭಿ
***
ರಾಮಧ್ಯಾನ ಕರಾಬ್ಜ್ಯೋತ ರಘುಪ್ರಮತಿ ನಾಮಕಹ
ReplyDeleteಔದಾರ್ಯಾದಿ ಗುಣೋದ್ಯಕ್ತ ಭೂಯಾನ್ಮೇಭೀಷ್ಟದಿ ಸದಾ.