Saturday, 1 June 2019

ramadhyana teertharu kudli matha kudli mutt yati 31 bhadrapada bahula ekadashi ರಾಮಧ್ಯಾನ ತೀರ್ಥರು

.
Sri Ramadhyana Theertha
Ashrama Guru: Sri Raghuveera Theertha
Ashrama Shishya: Sri Raghupramati Theertha
Vrundavana: Kudli
Aradhana: Badrapada bahula ekadashi
***

ಹರೇ ಶ್ರೀನಿವಾಸ🙏

ಇಂದು ಕೂಡ್ಲಿ ಶ್ರೀಮದಕ್ಷೋಭ್ಯತೀರ್ಥ ಮಹಾಸಂಸ್ಥಾನದ ಯತಿಗಳಾದ ಶ್ರೀ ರಾಮಧ್ಯಾನತೀರ್ಥರ ಆರಾಧನೆ...
ಶ್ರೀಮತ್ಸತ್ಯಪ್ರಮೋದಾರ್ಯ ಮುಖಪಂಕಜ ನಿಸೃತಾಂ  ಸುಧಾಮಧೀತ್ಯ ಯೋ ರೇಜೇ 
 ರಾಮಧ್ಯಾನಃ  ಪ್ರಸೀದತು ॥॥ 

ಪೂರ್ವಾಶ್ರಮದಲ್ಲಿ ಸಿಂಗನಮಲ್ಲಿ ಮನೆತನದವರು ಇವರು. ಹೆಂಡತಿ ಬಹಳ ಬೇಗನೆ ಕಾಲವಾಗಿದ್ದರು ಮತ್ತು ಇವರಿಗೆ ಸಂತಾನವಿರಲಿಲ್ಲ. 
ಹೆಂಡತಿಯ ಮಾಂಗಲ್ಯದಿಂದ ಹಿಡಿದು ತಮ್ಮಲ್ಲಿದ್ದ ಅನೇಕ ಗ್ರಂಥಗಳನ್ನು ....ಸರ್ವಸ್ವವನ್ನೂ(ಮೈಮೆಲಿನ ಬಟ್ಟೆ ಹೊರತುಪಡಿಸಿ) ತುಳಸೀದಳವಿಟ್ಟು ಶ್ರೀಮದುತ್ತರಾದಿಮಠಕ್ಕೆ ದಾನ ಮಾಡಿ ಶ್ರೀಸತ್ಯಪ್ರಮೋದತೀರ್ಥರ ಮಾತಿನಂತೆ ಸನ್ಯಾಸಾಶ್ರಮವನ್ನು ಸ್ವೀಕರಿಸಿದರು.
ಎಲ್ಲವನ್ನು ಕೂಡ್ಲಿ ಮಠದ ದೀವಾನರಿಗೆ ದಾನ ಮಾಡಿದರೆ ..ಮುಂದೆ ಅದನ್ನು ತಾವೇ ಇಟ್ಟು ಕೊಂಡ ಹಾಗೆ ಆಗುವುದು ವಿಕಲ್ಪೇಣ ಎಂದು ಸಮಸ್ತ ವಸ್ತುಗಳನ್ನು ಶ್ರೀಮದುತ್ತರಾದಿ ಮಠಕ್ಕೆ ದಾನ ಮಾಡಿ ಸನ್ಯಾಸವನ್ನು ತೆಗೆದುಕೊಂಡ ಮಹಾ ವಿರಕ್ತರು, ಮಂತ್ರಸಿದ್ಧರು....
ಹೆಚ್ಚಿನ ಸಂಚಾರವನ್ನು ಮಾಡದೇ ಶ್ರೀಸತ್ಯಪ್ರಮೋದತೀರ್ಥರ ಬಳಿ ಮತ್ತು ಕೂಡ್ಲಿಯಲ್ಲಿದ್ದುಕೊಂಡು ನಿರಂತರವಾಗಿ ಶ್ರೀರಾಮಚಂದ್ರದೇವರ ಪೂಜಾಕೈಂಕರ್ಯವನ್ನು ನಡೆಸಿದ ಮಹಾನ್ ಯತಿಗಳು.
ಜಮಖಂಡಿಯಲ್ಲಿ ತೀರ್ಥಪ್ರಾಶನ ಮಾಡಿ ಭಿಕ್ಷಾಕೋಣೆಯಲ್ಲಿ ಇವರಿಗೆ ಊಟ ಬಡಿಸುವಾಗಲೇ ಮಡಿಯಲ್ಲೇ ದೇಹತ್ಯಾಗ ಮಾಡಿದರು.
ಇವರ ಬೃಂದಾವನವು ಶೂರ್ಪಾಲಿ ನರಸಿಂಹ ದೇವರಗುಡಿಯ ಬಳಿ ಇತ್ತು.
ಆದರೆ ಅಲ್ಲಿಯ ನದಿಯ Backwatersನಿಂದ ಊರು ಮುಳುಗುತ್ತದೆ ಎಂದು ಗೊತ್ತಾದಮೇಲೆ...ಶ್ರೀರಘುಪ್ರೇಮತೀರ್ಥರ ಕಾಲಕ್ಕೆ ಕೂಡ್ಲಿಯಲ್ಲಿ ಬೃಂದಾವನವನ್ನು ಪುನಃ ಪ್ರತಿಷ್ಟಾಪನೆಯನ್ನ ಮಾಡಿದರು.
ಇಂತಹಾ ಮಹಾನ್ ಯತಿಗಳ ಆರಾಧನೆಯ ದಿನದಂದು
ಶ್ರೀರಾಮಧ್ಯಾನತೀರ್ಥರ ಅಂತರ್ಯಾಮಿಯಾದ ಭಾರತೀರಮಣ ಮುಖ್ಯಪ್ರಾಣಂತರ್ಗತ ಶ್ರೀಸೀತಾ ಸಮೇತ ಶ್ರೀರಾಮಚಂದ್ರದೇವರು ಎಲ್ಲರನ್ನೂ ಸಲಹಲಿ.....🙏
***



No comments:

Post a Comment