Monday 1 April 2019

adhokshaja teertharu dhanushkoti matha pejavara mutt yati 02 magha shukla saptami ಅಧೋಕ್ಷಜ ತೀರ್ಥರು


Sri Adhokshaja Theertha
Sri Adhokshaja Theertha is the 1st saint after Sri Madhwacharya in the guru parampare of Pejawar mutt.
Poorvashrama Name :
Ashrama Guru : Sri Madhwacharya
Ashrama Shishya : Sri Kamalaksha Theertha
Aradhana : Magha Shudha Saptami
Vrundavana : Dhanushkoti


ಶ್ರೀಮಂತಂ ಕಮಲಾಕಾಂತಸಂತತಧ್ಯಾನತತ್ಪರಮ್
ಅಧೋಕ್ಷಜಮುನಿಂ ಶಾಂತಂ ವಂದೇ ವಿಟ್ಠಲಪೂಜಕಂ
SrImaMtaM kamalAkAMtasaMtatadhyAnatatparam

adhOkShajamuniM SAMtaM vaMdE viTThalapUjakaM

Sri Adhokshaja Theertha is the first pontiff of Pejawar mutt who was given Ashrama by Sri Madhwacharya himself. In Udupi ashta mutt parampare Sri Hrishikesha Theertha was the first one and Sri Adhokshaja Theertha was the last saint. He was praised in Sumadhwavijaya as “apratyaksha gunodriktah”. Sri Madhwacharya has blessed him with the idol of Sri Vittala and was popularly known as Aja Vittala. He was a great tapasvi and well orator on Shastras. He took pilgrimage tours to Bhagirathi and other holy places..
After handing over Peeta to Sri Kamalaksha Theertha, it is said that he entered Vrundavana at Dhanushkoti on the 7th day of Magha Shudha, but place of Vrundavana needs to be confirmed after thorough research.
***

ಶ್ರೀಗುರುಭ್ಯೋ ನಮಃ

ಶ್ರೀಅಧೋಕ್ಷಜತೀರ್ಥರು

ಮಾಘ-ಶುದ್ಧ-ಸಪ್ತಮೀ ಅಂದರೆ ರಥಸಪ್ತಮೀ ಶ್ರೀಮದಾಚಾರ್ಯರ ಸಾಕ್ಷಾಚ್ಛಿಷ್ಯರಾದ ಪೇಜಾವರ ಮಠದ ಮೂಲಪುರುಷರಾದ ಶ್ರೀಮದಧೋಕ್ಷಜತೀರ್ಥರ ಆರಾಧನೆ. ತನ್ನಿಮಿತ್ತ ಅವರ ಸ್ಮರಣೆಯನ್ನು ಮಾಡೋಣ.

ಚರಿತ್ರೆಚಿಂತನೆ

ಅಧೋಕ್ಷಜತೀರ್ಥರ ಯಾವ ಚರಿತ್ರೆಯೂ ಈಗ (ನನಗೆ) ಉಪಲಬ್ಧವಾಗಿಲ್ಲ. 

ಆದರೆ ಸುಮಧ್ವವಿಜಯದಲ್ಲಿ ಪಂಡಿತಾಚಾರ್ಯರ ಒಂದೇ ಒಂದು ಮಾತು ಅಧೋಕ್ಷಜತೀರ್ಥರ ಮಹತ್ವವನ್ನು ತಿಳಿಸಿಕೊಡುತ್ತದೆ.

ಅಪ್ರತ್ಯಕ್ಷಗುಣೋದ್ರಿಕ್ತಾ ಭಕ್ತಿವೈರಾಗ್ಯಸಾಗರಾ:

ಅಧೋಕ್ಷಜತೀರ್ಥರು ಸದ್ಗುಣಗಳ ಗಣಿ. ಆದರೆ ಸಾಮಾನ್ಯರಾದ ಯಾರಿಗೂ ಅವರ ಗುಣಗಳು ತಿಳಿಯುತ್ತಲೆ ಇರಲಿಲ್ಲ. ಪರಮಾತ್ಮನಲ್ಲಿ ಭಕ್ತಿ, ಸಂಸಾರದಲ್ಲಿಯ ವೈರಾಗ್ಯ ಇವುಗಳಿಗೆ ಸಾಗರವಾಗಿದ್ದರು. ನಮ್ಮ ಮಹತ್ವವನ್ನು ಜಗತ್ತಿಗೆ ತೋರಕೊಡಬಾರದು ಎಂಬ ಶಾಸ್ತ್ರದ ಆದೇಶವನ್ನು ಪಾಲಿಸುತ್ತಿದ್ದ ವಿಭೂತಿಪುರುಷರು.

ಹೃಷೀಕೇಶತೀರ್ಥರು ಅಧೋಕ್ಷಜಯೋಗಿನ: ಎಂದಿರುವುದು ಇಲ್ಲಿ ಗಮನಾರ್ಹವಾದ ವಿಷಯ.

ಪ್ರಾಣೇಶದಾಸರೂ ಕೂಡ ಅತಿಸುಗುಣ ಅಧೋಕ್ಷಜತೀರ್ಥರಿಗೆ.. ಎಂದು ಹೇಳಿರುವುದು ಗಮನೀಯವಾಗಿದೆ.

ಅವರ ಈ ತಪಸ್ಸಿನ ಫಲವು ಅವರ ಪರಂಪರೆಯಲ್ಲಿ ಅಭಿವ್ಯಕ್ತವಾಗಿದೆ. 

ಕೆಲವನ್ನು ನೋಡೋಣ....

೧) ವಿಜಯಧ್ವಜತೀರ್ಥರು. ಸಮಗ್ರಭಾಗವತಕ್ಕೆ ವ್ಯಾಖ್ಯಾನವನ್ನು ಮಾಡಿದ್ದಾರೆ. ಇದು ಮಾಧ್ವರಲ್ಲಿ ಪ್ರಥಮ. ಹಾಗೂ ಸರ್ವಮಾನ್ಯವಾದದ್ದು.

ಇದೆ ವಿಜಯಧ್ವಜತೀರ್ಥರ ಪ್ರಭಾವದಿಂದ ಚಿತ್ರಾಪುರಮಠವು ಆರಂಭವಾಯಿತು. ಇದೂ ಒಂದು ವೈಶಿಷ್ಟ್ಯ.

೨) ವಿಶ್ವೇಶ್ವರತೀರ್ಥರು. ಐತರೇಯಭಾಷ್ಯಕ್ಕೆ ಉತ್ತಮ ಟೀಕೆಯನ್ನು ಬರೆದಿದ್ದಾರೆ. ಇವರ ಗ್ರಂಥವನ್ನು ಭಾಷ್ಯದೀಪಿಕೆಯಲ್ಲಿ ಉಲ್ಲೇಖ ಮಾಡುತ್ತಾರೆ. ಇದಕ್ಕೆ ವ್ಯಾಖ್ಯಾನವೂ ಬಂದಿದೆ.

೩) ವಿಶ್ವಪತಿತೀರ್ಥರು. ಅನೇಕಗ್ರಂಥಗಳನ್ನು ಬರೆದ ಇವರು ಪಂಡಿತಾಚಾರ್ಯರ ಗ್ರಂಥಗಳಿಗೆ ವ್ಯಾಖ್ಯಾನ ಮಾಡುವ ನಿಯಮವಿಟ್ಟುಕೊಂಡಂತೆ ಭಾಸವಾಗುತ್ತದೆ. ಸರಳ ಹಾಗೂ ಉಪಯುಕ್ತವಾಗಿರುವ ಗ್ರಂಥಗಳು.

೪) ವಿಶ್ವೇಶತೀರ್ಥರು. ಗುರುಗಳ ಸಾಮರ್ಥ್ಯವು ಇಂದಿಗೆ ಸರ್ವವಿದಿತವೇ ಆಗಿದೆ. ಹೆಚ್ಚು ಹೇಳುವ ಅವಶ್ಯಕತೆಯಿಲ್ಲ. 

೫) ವಿಶ್ವಪ್ರಸನ್ನತೀರ್ಥರು. ಗುರುಗಳ ಮಾರ್ಗದಲ್ಲಿ ನಡೆಯುತ್ತಾ ರಾಮಮಂದಿರದ ವಿಶ್ವಸ್ತಮಂಡಳಿಯ ಸದಸ್ಯರಾಗಿದ್ದಾರೆ. ಇದು ಎಲ್ಲ ತತ್ವವಾದಿಗಳಾದ ಮಧ್ವಾನುಯಾಯಿಗಳಾದ ವೈಷ್ಣವರಿಗೆ, ದಕ್ಷಿಣಭಾರತೀಯರಿಗೆ ಹೆಮ್ಮೆಯೆನಿಸುವ ವಿಷಯವಾಗಿದೆ.

ಇಂಥಹ ಪರಂಪರೆಯ ಮೂಲಪುರುಷರಾದ ಅಧೋಕ್ಷಜತೀರ್ಥರು ತೀರ್ಥಯಾತ್ರೆ ಮಾಡುತ್ತಾ ಧನುಷ್ಕೋಟಿಗೆ ಬಂದು ಅಲ್ಲಿ ಮಾಘಶುದ್ಧಸಪ್ತಮಿಯಂದು ನಿರ್ಯಾಣವನ್ನು ಹೊಂದಿದರು.
______

ಉಪಾಸ್ಯಮೂರ್ತಿಯ ಚಿಂತನೆ

೧) ಶ್ರೀಮದಾಚಾರ್ಯರು ಅಧೋಕ್ಷತೀರ್ಥರಿಗೆ ಶ್ರೀಕೃಷ್ಣಪರಮಾತ್ಮನನ್ನು ಪೂಜಿಸುವ ಸೌಭಾಗ್ಯವನ್ನು ಕರುಣಿಸಿದ್ದಾರೆ.

೨) ಅಲ್ಲದೆ ನಿತ್ಯಪೂಜೆಗಾಗಿ ಸಂಸ್ಥಾನಪ್ರತಿಮೆಯನ್ನಾಗಿ ರುಕ್ಮಿಣೀ-ಸತ್ಯಭಾಮಾಸಮೇತವಿಟ್ಠಲದೇವರನ್ನು ನೀಡಿದ್ದಾರೆ. 

....ಅಧೋಕ್ಷಜಯೋಗಿನ: ಪುನಃ। ಶ್ರೀವಿಟ್ಠಲಂ....।  
ಹೃಷೀಕೇಶತೀರ್ಥರು. ಸಂಪ್ರದಾಯಪದ್ಧತಿ.

ಅತಿಸುಗುಣ ಅಧೋಕ್ಷಜತೀರ್ಥರಿಗೆ ವಿಟ್ಠಲನ.. 
ಪ್ರಾಣೇಶದಾಸರು.

ಈ ವಿಟ್ಠಲನನ್ನು ಅಜ ವಿಟ್ಠಲ ಎಂದು ಕರೆಯುವ ರೂಢಿ ಇದೆ. ಅಧೋಕ್ಷಜವಿಟ್ಠಲ ಎನ್ನುವ ಬದಲು ಆದ್ಯಂತಾಕ್ಷರಗಳ ಸಂಯೋಜನೆಯಿಂದ ಅಜವಿಟ್ಠಲ ಎನ್ನುವ ಪದ್ಧತಿ ಬಂದಿರಬಹುದು. ಈ ಕ್ರಮವು ಪ್ರಾಯ: ವ್ಯಾವೃತ್ತಿಗಾಗಿ ಇರಬೇಕು.

ಕೈಫೀಯತ್ತಿನಲ್ಲಿ ಈ ವಿಟ್ಠಲನನ್ನು "ವಿದ್ಯಾ"ವಿಟ್ಠಲ ಎಂದು ಕರೆಯಲಾಗಿದೆ. ಇದು ಬಹಳ ಮಹತ್ವದ ವಿಷಯ. ಇದು ಆ ವಿಟ್ಠಲನನ್ನು ಪ್ರಾರ್ಥಿಸಲು ಮಾರ್ಗದರ್ಶಕವೂ ಆಗಿದೆ. ಈ ಸನ್ನಿಧಾನದ ಉಪಾಸನೆಯ ಫಲವು ಈ ಶತಮಾನದಲ್ಲಿ ಪರಮಪೂಜ್ಯ ಗುರುಗಳ ಮೂಲಕ ಹೇಗೆ ಸಮಾಜಕ್ಕೆ ಸಿಕ್ಕಿದೆ ಎನ್ನುವುದು ಎಲ್ಲರ ಅನುಭವಕ್ಕೆ ಬಂದ ಸಂಗತಿ.

೩) ಕಣ್ವತೀರ್ಥದಲ್ಲಿದ್ದ, ಪ್ರಾಚೀನವಾದ, ಶ್ರೀಮದಾಚಾರ್ಯರಿಂದ ಪೂಜಿತವಾದ ಸೀತಾ-ಲಕ್ಷ್ಮಣಸಮೇತರಾಮದೇವರು.

ಈ ರಾಮದೇವರ ಬಗ್ಗೆ ವಿಶ್ವಪತಿತೀರ್ಥರು ತಮ್ಮ ವಿಜಯಧ್ವಜಾಷ್ಟಕದಲ್ಲಿ ತಿಳಿಸಿದ್ದಾರೆ.

ಮಧ್ವಾರಾಧಿತಸೀತೇತ
ರಾಮಚಂದ್ರಪದಾಂಬುಜೇ।
ಚಂಚರೀಕಾಯಿತಂ ವಂದೇ 
ಯೋಗೀಂದ್ರಂ ವಿಜಯಧ್ವಜಮ್।।

೪) ಅಧೋಕ್ಷತೀರ್ಥರು ಪೂಜಿಸಿದ, ಅಪರೂಪದ, ಪ್ರಾಯ: ಮಾಧ್ವಸಂಸ್ಥಾನಗಳಲ್ಲಿ ಬೃಹತ್ತಾದ, ಪ್ರಾಚೀನವೂ ಆದ ಹಯಗ್ರೀವದೇವರು ಪೇಜಾವರ ಮಠದಲ್ಲಿ ನಿತ್ಯೋಪಾಸ್ಯನಾಗಿದ್ದಾನೆ. 
_______
ನಿರ್ಯಾಣಕಾಲಚಿಂತನೆ
ಮಾಘ-ಶುದ್ಧ-ಸಪ್ತಮಿಯಂದು ಅಧೋಕ್ಷಜತೀರ್ಥರು ರಾಮೇಶ್ವರಸಮೀಪದ ಧನುಷ್ಕೋಟಿಯಲ್ಲಿ ದೇಹತ್ಯಾಗವನ್ನು ಮಾಡಿದರು ಎಂದು 'ಉಡುಪಿ ಅಷ್ಟಮಠದ ಕೈಪಿಯತ್ತುಗಳು' ಎಂಬ ಪುಸ್ತಕದಲ್ಲಿ ಹೇಳಲಾಗಿದೆ. "ಈ ವಿಷಯದಲ್ಲಿ ಯಾವುದೇ ಬಾಧಕವಿಲ್ಲವಾದ್ದರಿಂದ ಇದು ಸ್ವೀಕಾರಾರ್ಹವಾಗಿದೆ" ಎನ್ನುವುದು ನನ್ನ ಅಭಿಪ್ರಾಯ.

ಇದರ ಜೊತೆಗೆ ಇದೇ ಕೈಫೀಯತ್ತಿನಲ್ಲಿ ಅಧೋಕ್ಷಜತೀರ್ಥರು ದೇಹತ್ಯಾಗವನ್ನು ಮಾಡಿದ್ದು ಹದಿನಾಲ್ಕನೇ ಶತಮಾನದ ದ್ವಿತೀಯದಶಕದಲ್ಲಿ (ಪ್ರಾಯ: 1312-1313ರಲ್ಲಿ) ಬಂದ ಪರಿಧಾವಿಸಂವತ್ಸರದಲ್ಲಿ ಎಂದೂ ಹೇಳಲಾಗಿದೆ.

ಸೂಚನೆ:- ಕೈಫೀಯತ್ತಿನಲ್ಲಿ ೧೨೩೫ರ ಪರಿಧಾವಿ ಎಂದು ಬರೆಯಲಾಗಿದೆ. ತದನುಸಾರಿಯಾದ ಪುಸ್ತಕಗಳಲ್ಲಿ ಶಕವರ್ಷವನ್ನು ಬಿಟ್ಟು ಕೇವಲ ಪರಿಧಾವಿಸಂವತ್ಸರ ಎಂದಿಷ್ಟೆ ಕೊಡಲಾಗಿದೆ. ಆದರೆ ಇಂದಿನ ಲೇಕ್ಕಾಚಾರದಲ್ಲಿ ನೋಡಿದರೆ ೧೨೩೫ರಲ್ಲಿ ಪರಿಧಾವಿ ಬಂದಿಲ್ಲ ಎಂದು ತಿಳಿಯುತ್ತಿದೆ. ಶಾ.ಶ ೧೨೩೩ರಲ್ಲಿ (ಕ್ರಿ.ಶ ೧೩೧೨-೧೩೧೩ರಲ್ಲಿ) ಬಂದಿದೆ. ಹಾಗಾಗಿ ಸರ್ವಾನುಮತವಾದ ಪರಿಧಾವಿ ಗೆ ಮಹತ್ವ ಕೊಟ್ಟು ತದನುಗುಣವಾಗಿ ಶಕವರ್ಷವನ್ನು ಹೊಂದಿಸಿಕೊಳ್ಳುವುದು ಯೋಗ್ಯವಾಗಿದೆ. ಆದ್ದರಿಂದ ೧೨೩೩ ಶಕವರ್ಷ ಎಂದು ಬದಲಿಸಿಕೊಂಡಿದ್ದೇನೆ. ಲೆಕ್ಕಾಚಾರದಲ್ಲಿ ತಪ್ಪಿದಲ್ಲಿ ತಿಳಿಸಬಹುದು.

ಅಲ್ಲದೇ ಹದಿನಾಲ್ಕನೇ ಶತಮಾನದ ದ್ವಿತೀಯದಶಕದಲ್ಲಿ (ಪ್ರಾಯ: 1233ಶಾ.ಶ, 1312ಕ್ರಿ.ಶ ರಲ್ಲಿ) ಬಂದ ಪರಿಧಾವಿಸಂವತ್ಸರವನ್ನೆ ಇಲ್ಲಿ ಪರಿಗಣಿಸಬೇಕು. ಇದಕ್ಕಿಂತಲೂ ಪೂರ್ವಾವರ್ತದ ಪರಿಧಾವಿ 1252 ಆಸುಪಾಸಿನಲ್ಲಿ ಬರುತ್ತದೆ. ಅದು ಸರಿಯಾಗುವುದಿಲ್ಲ. ಏಕೆಂದರೆ ಆಗಿನ್ನು ಶ್ರೀಮದಾಚಾರ್ಯರ ದೃಶ್ಯಾವಧಿಯ ಮಧ್ಯಭಾಗ. ಆಚಾರ್ಯರು ಬದರಿಗೆ ಹೋಗುವುದಕ್ಕಿಂತಲೂ ಬಹಳ ಪೂರ್ವದಲ್ಲಿ ಅಧೋಕ್ಷಜತೀರ್ಥರು ದೇಹತ್ಯಾಗವನ್ನು ಮಾಡಿದರು ಎಂದು ಹೇಳಬೇಕಾಗುತ್ತದೆ. ಆದ್ದರಿಂದ ಇದು ಸರಿಯಾಗುವುದಿಲ್ಲ. 

ಇನ್ನು 1312ರ ಮುಂದಿನ ಆವೃತ್ತವನ್ನು ಇಟ್ಟುಕೊಂಡರೆ 1382ರ ಸಮೀಪದಲ್ಲಿ ಪರಿಧಾವಿ ಬರುತ್ತದೆ. ಇದನ್ನು ಇಟ್ಟುಕೊಂಡರೆ ಚಿತ್ರಾಪುರಮಠದ ವರದತೀರ್ಥರ ಶಾಸನದ ವಿರೋಧ ಬರುತ್ತದೆ. ಹೇಗೆಂದರೆ 1394ರಲ್ಲಿ ವರದತೀರ್ಥರಿಗೆ ಸಂಬಂಧಿಸಿದ ಶಾಸನವಿದೆ. ಹಾಗಾಗಿ ಆ ಕಾಲದಲ್ಲಿ ವರದತೀರ್ಥರು ಪೀಠದಲ್ಲಿದ್ದರು ಎಂದು ತಿಳಿಯುತ್ತದೆ. ಈ ವರದತೀರ್ಥರು ವಿಜಯಧ್ವಜತೀರ್ಥರಿಂದ ಐದನೆಯವರು. ಅಂದರೆ ಅಧೋಕ್ಷಜತೀರ್ಥರಿಂದ ಸುಮಾರು 10ನೆ ಯತಿಗಳು. ಒಂದುವೇಳೆ  ಅಧೋಕ್ಷಜತೀರ್ಥರು 1382 ರ ಪರಿಧಾವಿಯಲ್ಲಿ ದೇಹತ್ಯಾಗವನ್ನು ಮಾಡಿದರು ಎಂದು ಹೇಳಿದರೆ ಕೇವಲ ಹನ್ನೆರಡು ವರ್ಷಗಳಲ್ಲಿ 10 ಯತಿಗಳು ಆಗಿಹೋದರು ಎಂದು ಹೇಳುವ ಸ್ಥಿತಿ ಬರುತ್ತದೆ. ಇದು ಅತ್ಯಂತ ಅಸಂಭಾವಿತ. 

ಇಷ್ಟೆ ಅಲ್ಲದೇ ಬಿ ಎನ್ ಕೆ ಶರ್ಮಾ ಅವರು ಹೇಳಿರುವ ಕ್ರಿ.ಶ 1336ರ ವಿಜಯಧ್ವಜತೀರ್ಥರ ಶಾಸನದ ಸಂವಾದವೂ ಈ ಚಿಂತನೆಗೆ ಪುಷ್ಟಿ ನೀಡುತ್ತದೆ. 

ಮುಖ್ಯವಾಗಿ 1394ರ ವರದತೀರ್ಥರ ಶಾಸನವು ಇಲ್ಲಿ ಬಹಳ ದೊಡ್ಡ ಸಹಕಾರವನ್ನು ನೀಡುತ್ತದೆ.

ಆದ್ದರಿಂದ ೧೪ನೆ ಶತಮಾನದ ದ್ವಿತೀಯದಶಕದಲ್ಲಿ ಬರುವ (ಪ್ರಾಯ: 1312) ಪರಿಧಾವಿಯನ್ನೆ ಇಲ್ಲಿ ಪರಿಗಣಿಸಬೇಕು. 

ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ಈ ಬಾರಿ ೬೧೧ನೆ ವರ್ಷದ ಆರಾಧನೆ ಎನ್ನುವುದು ತಿಳಿಯುತ್ತದೆ.

ಇಂತಹ ಅಧೋಕ್ಷಜತೀರ್ಥರ, ಅವರ ಗುರುಗಳಾದ ಶ್ರೀಮದಾಚಾರ್ಯರ, ಮಧ್ವವಲ್ಲಭನಾದ ವಿಟ್ಠಲನ ಅಗುಗ್ರಹವು ಎಲ್ಲಾ ಸಜ್ಜನರ ಮೇಲೆ ನಿರಂತರವಾಗಿ ಇರಲಿ.
- ಶ್ರೀನಿವಾಸ ಕೊರ್ಲಹಳ್ಳಿ
*****


1 comment:

  1. namaskaragalu you can even show thebrindavana photo of sri adhokshaja theertharu

    ReplyDelete