Monday, 1 April 2019

vijayadhwaja teertharu 1410 kanva pejavara matha mutt yati 07 vaishakha shukla triteeya ವಿಜಯಧ್ವಜ ತೀರ್ಥರು



vaishAka shuddha trithIya is the ArAdhane of shri vijayadhwaja tIrtharu of pEjAvara maTa.

shri vijayadhwaja tIrtharu: (1381-1410)

Parampare: shri pEjAvara maTa, #  7
06. Sri Vijayadhwaja Theertha
Sri Vijayadhwaja Theertha is the 6th saint after Sri Adhokshaja Theertha in the guru parampare of Pejawar mutt.
Poorvashrama Name :
Ashrama Guru : Sri Mahendra Theertha
Ashrama Shishya : Sri Uttama Theertha
shishyaru: shri dAmOdara tIrtharu

Aradhana : Vaishakha Shudha Dwadashi
Vrundavana : Kanva tirtha

ಶ್ರೀಮದ್ಭಾಗವತಾರ್ಥಾಬ್ಜಮಿಹಿರಂ ಸರ್ವದಿಗ್ಜಯಮ್
ವಿಜಯಧ್ವಜಯೋಗೀಂದ್ರಂ ವಂದೇ ವಿಟ್ಠಲಪೂಜಕಂ
SrImadbhAgavatArthAbjamihiraM sarvadigjayam

vijayadhwajayOgIMdraM vaMdE viTThalapUjakaM

Sri Vijayadhwaja Theertha took Ashrama from Sri Mahendra Theertha and ruled the Peeta for 29 years. He was a great devotee of Srihari. He wrote “Padaratnavali” a great commentary on Bhagavatha. It was written in accordance with acharya Madhwa’s philosophy. He did complete pilgrimage tour of entire India for 2 times. It was also believed that, he wrote commentaries on MBTN and ‘Yamakabharata’. He also wrote one Sanskrit Stotra ‘Dasavatara harigatha’. He had a debate with pontiff of Bhattacharya sampradaya in Chittapura and defeated him and later took him as his sishya and started Chittapura mutt. One of the pontiff of this parampare Sri Viswendra Theertha wrote ‘Durgashtaka’. Sri Sripadaraja wrote one Stotra on Sri Vijayadhwaja Theertha and it is available in mutt library. Sri Viswapati Theertha wrote ‘Vijayadhwajashtaka’. Bidarahalli Srinivasachar, Yadupatyachar and Sri Satyadharma Theertha etc. had respected Sri Vijayadhwaja Theertha in their works. He occupied prominent place in madhwa parampare. He left his mortal body near Kanva tirtha on the 12th day of Vaishakha Shudha.

He wrote a commentary on bhAgavatha, which is widely used for bhAgavatha studies.

shri vijayadhwaja tIrtha guruvAntargata, maharudradeva guruvAntargata, bhArathiramana mukhyaprANantargata, rukmiNi sathyabhAma pate shri viTTala dEvara pAdAravindakke gOvindA gOvindA...

shri krishNArpaNamastu

****

info from sumadhwaseva.com--->


Sri Vijayadwaja Tirtharu

(Pejawara Adhokshaja Mutt Parampare)

जनासूनु सान्निध्यात् विजयॆन विराजितम् ।
अजितप्रीतिजनकं भजॆsहम् विजयध्वजम्

ಅಂಜನಾಸೂನು ಸಾನ್ನಿಧ್ಯಾತ್ ವಿಜಯೇನ ವಿರಾಜಿತಮ್ |
ಅಜಿತಪ್ರೀತಿಜನಕಂ ಭಜೇsಹಮ್ ವಿಜಯಧ್ವಜಮ್


anjanaasoonu saannidhyaat vijayEna viraajitam |
ajitaprItijanakam bhajEham vijayadhwajam

Kanva Tirtha (Moola Vrundavana)    Chennai (Mruttika Vrundavana)
Period – 1434-1448
Aradhana – Vaishaka Shudda Triteeya
He has written Commentary on Srimadbhagavatha with the title “Bhakti-ratnavali”.  This commentary is popularly called as “Vijayadhwajeeya vyaakyaana”.   Sri Vijayadhvaja Tirtha was the sixth in the lineage of the Pejwara Mutt, and he passed away on the Aksaya Tritya day, which falls on the third day in the month of Vaishaka Madhusudana (Vaisakha – April/May).
He is the only one who has written the commentary on entire Bhagavatha.
His Granthas –
1. Bhakthi Ratnavali or Pada Ratnavali
2. Dashavatara Harigatha – Stotra
3. Krishnastaka (not available)
At the end of this commentary Vijayadhvaja Tirtha prayed earnestly to Sri Krishna:

vyakhya bhagavatasya krishna rachitatvaat priti kamatmana pretascet pradadasi tat pratinidhim tat trin varisye varan|
prana nishkinchanatam tava pratibhavam padaravindatmana samsaktim sukhatirtha sastra vijarajarasya param taya |
Meaning – He prayes to Sri Krishna Paramathma that he has written the commentary on Bhagavata just for pleasing him. If he is pleased, he requests him to grant him three boons – that I should always remain a poor man in this and any future lives, that I may always have the opportunity to study Acharya Madhva’s works on Krishna tatva, and lastly by doing so, and to rest in Srihari as his foot servant.”

KANVA TIRTHA –
Sri Vijayadwaja Tirthara Vrundavana is at Kanva Tirtha
Sri Vijayadwaja Tirtharu has done the prathistapane of Mukyaprana at this place
It is about 40 Kms from Udupi – It is the place where Kanva Maharshi did the Tapassu.
Vibheeshana served Sri Ramachandra for some time in this place

Source : Sri Vyasanakere Prabhanjanacharya

Sri BNK Sharma
**************


[4:33 PM, 4/27/2020] Prasad Karpara Group: "ಶ್ರೀ ಶುಕ ಮುನಿಗಳ ಅಂಶ ಸಂಭೂತರಾದ ಶ್ರೀ ವಿಜಯಧ್ವಜ ತೀರ್ಥರ ಆರಾಧನಾ ಮಹೋತ್ಸವ "

" ಶ್ರೀ ವಿಜಯಧ್ವಜ ತೀರ್ಥರ ಅವತಾರ ವೈಭವ "

1. ಶ್ರೀ ವಿಜಯಧ್ವಜ ತೀರ್ಥರು ಶ್ರೀ ಶುಕ ಮುನಿಗಳ ಅವತಾರ. 

2. ದ್ವಾಪರ ಯುಗದಲ್ಲಿ ಶ್ರೀ ಪರೀಕ್ಷಿತ ಮಹಾರಾಜರಿಗೆ ಶ್ರೀಮದ್ಭಾಗವತ ಮಹಾ ಪುರಾಣದ ಉಪದೇಶ ಮಾಡಿ  ಜಗದೋದ್ಧಾರ ಮಾಡಿದವರು. 

3. ಈ ಕಲಿಯುಗದಲ್ಲಿ ಪುನಃ ಶ್ರೀ ಸರ್ವಜ್ಞಾಚಾರ್ಯರ ಪೀಠ ಪರಂಪರೆಯಲ್ಲಿ ಬಂದು ಕಲಿಯುಗದ ಜನರಿಗೆ " ಶ್ರೀಮದ್ಭಾಗವತಾಮೃತ " ವನ್ನು ಉಣ ಬಡಿಸಿದ್ದಾರೆ. 

ಇವತ್ತು ಮಾಧ್ವ ಪಂಡಿತರೂ - ವಿದ್ವಾಂಸರೂ - ಪ್ರವಚನಕಾರರು ಶ್ರೀ ವೇದವ್ಯಾಸ - ಶ್ರೀ ಸರ್ವಜ್ಞಾಚಾರ್ಯರಿಗೆ ಸಮ್ಮತವಾಗುವ ರೀತಿಯಲ್ಲಿ " ಶ್ರೀಮದ್ಭಾಗವತ ಮಹಾ ಪುರಾಣ " ಪ್ರವಚನ ಹೇಳುತ್ತಾರೆ ಅಂದರೆ... 

ಅದಕ್ಕೆ ಮುಖ್ಯ ಕಾರಣ " ಶ್ರೀ ಶುಕ ಮುನಿಗಳ ಅಂಶ ಸಂಭೂತರಾದ ಶ್ರೀ ವಿಜಯಧ್ವಜ ತೀರ್ಥರು ". 

4. ಶ್ರೀ ವಿಜಯಧ್ವಜ ತೀರ್ಥರು ಚಿತ್ರಾಪುರ ಮಠದಲ್ಲಿದ್ದ ಭಟ್ಟಾಚಾರ್ಯ ಸಂಪ್ರದಾಯದ ಯತಿಯನ್ನು ಸೋಲಿಸಿ, ಅವರನ್ನು ತಮ್ಮ ಶಿಷ್ಯರನ್ನಾಗಿ ಮಾಡಿಕೊಂಡು ಆ ಮಠವನ್ನು ತಮ್ಮ ಸಂಪ್ರದಾಯ ಪದ್ಧತಿಯಂತೆ ಮುಂದುವರೆಸಿದರು. 

ಆ ಮಠವು ಇಂದು " ಚಿತ್ರಾಪುರ ಮಠ " ವೆಂದೇ ಪ್ರಸಿದ್ಧಿಯಾಗಿದೆ. 

5. ಗ್ರಂಥಗಳು... 

ಅ ) ಶ್ರೀಮದ್ಭಾಗವತ ಮಹಾ ಪುರಾಣ ವ್ಯಾಖ್ಯಾನ " ಪದರತ್ನಾವಲೀ "

ಶ್ರೀ ವಿಜಯಧ್ವಜತೀರ್ಥರ ಆರಾಧನಾ ದಿನದಂದು ಅವರಿಂದ ರಚಿತವಾದ ಶ್ರೀಮದ್ಭಾಗವತ ಮಹಾ ಪುರಾಣದ ಸಮಗ್ರ ಮತ್ತು ಸಂಪೂರ್ಣ ವ್ಯಾಖ್ಯಾನವಾದ  " ಪದರತ್ನಾವಲೀ " ಯ ಒಂದೆರಡು ಸ್ಕಂದಗಳ ಆದ್ಯಂತ ಶ್ಲೋಕಗಳ ಸ್ಮರಣೆ ಮಾಡೋಣ... 

" ಪ್ರಥಮ ಸ್ಕಂದ  " ದ ಪ್ರಾರಂಭ ಶ್ಲೋಕ... 

ಯತೋ ಜನ್ಮಾದ್ಯಸ್ಯ 
ಶ್ರುತಿಸುನಯಮಾನೈಕ 
ವಿಷಯಾತ್ ಸ್ವತಂತ್ರ 
ಸಂತ್ರಜ್ನೊ ಗುರುನಪಿ 
ಗುರೋರ್ಯಶ್ಚ ಜಗತಾಮ್ ।

ವಿಮೂಢಾಯತ್ತತ್ವಂ 
ಪ್ರಕಟಮೀಹವೇತ್ತು೦ 
ಸಮನಸೋ 
ಮುಕುಂದಂ ಧ್ಯಾಯಾಮಾಪಹತ 
ಕುಹಕಂ ತಂ ಸ್ವಮಹಸಾ ।।

ಅಂತ್ಯ :

ಭಾಗವತ ವಿವರಣಮಿದಂ 
ತುಲಸೀದಳಮಿವ 
ಸಮರ್ಪಯಾಮಿ ಹರೇ:।

ಚರಣನಲಿನಯುಗಲೇsಹಂ 
ಪ್ರಥಮಸ್ಕಂಧೋಪಗಂ 
ಸತಾಂ ಪ್ರೀತ್ಯೈ ।। 

" ದಶಮಸ್ಕಂಧ - ಪೂರ್ವಾರ್ಧ "

ಆದಿ :

ಮಂದಮಹೇ ಮಕರಕುಂಡಲ
ಚಾರುಗಂಡಂವಿದ್ವೇಷಿಕಾಂಡ-
ಯಮದಂಡಸುಬಾಹುದಂಡಂ ।

ಸರ್ವಾಶ್ರಯಾಮಲಪಿಚಂಡ-
ಮಖಂಡನಾಥ೦ಕೃಷ್ಣ೦ 
ಮಹಾವೃಜಿನಮಂಡಲಖಂಡ ನಾಖ್ಯಮ್ ।\

ಕೃಷ್ಣಘಾನಾಲೀರಾಮಂ ಕೃಷ್ಣಕಲಾಂ
ಜ್ವಲಯಂತಂ ದಿತಿಜಶ್ರೇಣೀಕಕ್ಷೇತು ।

ಕೃಷ್ಣಮಹಂ ಖಲು ನತ್ವಾ ದಶಮಸ್ಕಂಧಂ 
ವ್ಯಾಕುರ್ವೇ ಕೃಷ್ಣಕಥಾಮೃತ ಪಾತ್ರಮ್ ।।

ಅಂತ್ಯ :

ಯೋsಯಾಚಿ ತ್ರಿದಶೈ: 
ಕುಭಾರಹೃತಯೇs 
ವಾತಾರಿಯೇನ ಕ್ಷಿತೌ 
ಜಘ್ನೇ ಯೇನ ಸುರಾಸುಹೃತ್ಸ
ಮುದಯೋ ಯೇನ ತ್ರೈಲೋಕ್ಯಾಪಿ ಸಾ ।

ಯೇನಾಧಾಯಿ  ಯುಧಿಷ್ಠಿರೋ
ನಿಜಪದೇ ಧರ್ಮೋsಪಿ 
ಯೇನಾಂಕುರಿ 
ಶ್ರೀಕೃಷ್ಣ೦ ತಮಕೃಷ್ಣಕೃಷ್ಣದಯಿತ೦ 
ವಂದಾಮಹೇ ಸಂತತಮ್ ।।

" ದ್ವಾದಶ ಸ್ಕಂಧ "

ಆದಿ :

ಪದ್ಮಾವಾಸಾಲಯಂ ನತ್ವಾ 
ಪದ್ಮಭೂಪೂರ್ವಸ್ವರ್ಗೀಡ್ಯಮ್ ।

ದ್ವಾದಶಸ್ಕಂಧಂ ವ್ಯಾಕುರ್ವೇ
ದ್ವಾದಶಾತ್ಮಪ್ರೀತ್ಯೈ ನಿತ್ಯಮ್ ।।

ಅಂತ್ಯ :

ಸತ್ಯಂ ಜ್ಞಾನಮನಂತಮಚ್ಯುತಮಜಂ 
ನಿರ್ದುಃಖಸೌಖ್ಯೋದಧಿ೦
ನಿರ್ದೋಷಾಮಿತ ವೇದ ವೇದಿತಮಹಂ 
ವಂದೇ ಮುಕುಂದಂ ಸದಾ ।

ಯದ್ಭಕ್ತ್ಯಾ ಕಮಲಾಬ್ಜಜೇಂದ್ರ 
ಗಿರೀಶಾನಂತಾದಿ ದೇವಾ: ಪದಂ 
ಸಾಯುಜ್ಯ೦ ಪ್ರಸರಂತ್ಯನೇಕ
ವಿಧಯಾ ಸತ್ಯೋ 
 ವಿರತ್ಯಾಚತಮ್ ।।         

ವ್ಯಾಖ್ಯಾ ಭಾಗವತಸ್ಯ ಕೃಷ್ಣ ರಚಿತಾ 
ತ್ವತ್ ಪ್ರೀತಿ ಕಾಮಾತ್ಮನಾ 
ಪ್ರೀತಶ್ಚೇತ್ ಪ್ರದದಾಸಿ ತತ್ಪ್ರತಿನಿಧಿ೦ 
ತತ್ತ್ರೀನ್ ವರಿಷ್ಯೇವರಾನ್ ।

ಪ್ರಾಙ್ಞ ನಿಷ್ಕಿ೦ಚನತಾಂ 
ತವ ಪ್ರತಿಭವಂ 
ಪಾದಾರವಿಂದಾತ್ಮನಾ 
ಸಂಸಕ್ತಿ ಸುಖತೀರ್ಥ 
ಶಾಸ್ತ್ರ ವಿಜರಾಹಾರಸ್ಯ 
ಪಾರಂ ತಯಾ ।।

ಭಗವಾನ್ ಶ್ರೀ ಕೃಷ್ಣಾ !

ನೀನು ಸುಪ್ರೀತವಾಗಲೆಂಬ ಹಿರಿಯಾಸೆಯಿಂದ ಶ್ರೀಮದ್ಭಾಗವತ ಮಹಾ ಪುರಾಣಕ್ಕೆ ನಾನು ಈ " ಪದರತ್ನಾವಲೀ " ಎಂಬ ವ್ಯಾಖ್ಯಾನವನ್ನು ಬರೆದಿದ್ದೇನೆ. 

ಇದರಿಂದ ನಿಜವಾಗಿಯೂ ಪ್ರೀತನಾಗಿದ್ದರೆ ನಿನ್ನಲ್ಲಿ ಮೂರು ವರಗಳನ್ನು ಕೇಳಿ ಕೊಳ್ಳುತ್ತಾನೆ . 

1. ನಾನು ಯಾವುದೇ ಜನ್ಮದಲ್ಲಿರಲಿ - ಎಲ್ಲಿಯೇ ಹುಟ್ಟಿರಲಿ ಮೊದಲು ನನ್ನನ್ನು ನಿಷ್ಕಿಂಚನನ್ನಾಗಿ ಮಾಡು. 

2. ನಿನ್ನ ಪಾದಾರವಿಂದ ನಿಷೇವಣದಲ್ಲಿಯೇ ನನ್ನ ದೇಹಾತ್ಮಗಳು ಸರ್ವದಾ ಆಸಕ್ತವಾಗಿರಬೇಕು. 

3. ಆ ಭಗವದ್ಭಕ್ತಿಯಿಂದ ಮಧ್ವ ಶಾಸ್ತ್ರದಲ್ಲಿ ಪಾರಂಗತತ್ತ್ವ ಬಂದು ಅದರಿಂದ ಭವಸಾಗರದ ಪಾರಂಗತನೇನಾನಾಗಬೇಕು. .  

ಪದರತ್ನಾವಲೀ ಕಂಠೇ 
ರಾಜತಾಂ ಹಿ ಮುರದ್ವಿಷಃ ।

ವನಮಾಲೇವ ಮಾಲೇವ 
ಮೌಕ್ತಿಕೀ ಕೃಷ್ಣವಲ್ಲಭಾ ।।

ಮುರಾರಿಯಾದ ಶ್ರೀ ಕೃಷ್ಣನ ಕೊರಳಲ್ಲಿ ಶ್ರೀ ಕೃಷ್ಣನಿಗೆ ಪ್ರಿಯವಾದ ಈ ಪದರತ್ನಾವಲಿಯು ವನಮಾಲೆಯಂತೆಯೂ - ಮುತ್ತಿನಮಾಲೆಯಂತೆಯೂ ಶೋಭಿಸಲಿ.                                                

ಆ ) ಕೃಷ್ಣಾಮೃತ ಮಹಾರ್ಣವ ವ್ಯಾಖ್ಯಾನ 

ಇ ) ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ " ಪಾರಿಜಾತ ಹರಣ " ಕ್ಕೆ ಟೀಕಾ ಗ್ರಂಥ 

ತ್ರಿಪದಂ ತ್ರಿವಿಕ್ರಮಾರ್ಯ೦ ಪ್ರಣಮ್ಯ 
ಮಹೇಂದ್ರತೀರ್ಥ ಗುರುಚರಣಾನ್ ।

ವಿಜಯಧ್ವಜತೀರ್ಥೋsಹಂ 
ವ್ಯಾಕುರ್ವೇ ಪಾರಿಜಾತಹರಣಮಿದಮ್ ।।

ಈ ) ದಶಾವತಾರ ಹರಿಗಾಥಾ 

" ಜ್ಞಾನಿಗಳ ಕಣ್ಣಲ್ಲಿ ಶ್ರೀ ವಿಜಯಧ್ವಜ ತೀರ್ಥರು "

ಶ್ರೀ ವ್ಯಾಸತತ್ತ್ವಜ್ಞ ತೀರ್ಥರು - ಮಂದನಂದಿನೀ " ಯಲ್ಲಿ..... 

ವಿಜಯಧ್ವಜತೀರ್ಥಾನಾ೦ 
ಕೃತೇರನುಕೃತಿರ್ಮಮ ।

ಶಿಷೋರಿವ ಕೃತಿಃ ಪಿತ್ರೋ-
ರ್ಹಾಸಹರ್ಷಾವಹಾಸಿತಾಂ ।।

ಶ್ರೀ ಚಟ್ಟಿ ವೇಂಕಟೇಶಾಚಾರ್ಯ..... 

ಜಯತೀರ್ಥಗುರೂನ್ ವಂದೇ 
ಸರ್ವಾಭೀಷ್ಟಪ್ರದಾನ್ ಮಮ ।

ವಿಜಯಧ್ವಜತೀರ್ಥಾದೀನ್ 
ಗುರೂನನ್ಯಾಂಶ್ಚಭಕ್ತಿತಃ ।।

ಶ್ರೀ ಛಲಾರಿ ಶೇಷಾಚಾರ್ಯರು... 

ಶ್ರೀಭಾಗವತ ಟೇಕಾಯಾ: 
ಕರ್ತ್ರೂನಾಪಿ ಪುರಾತನಾನ್ ।

ಪ್ರಣಮ್ಯ ಜ್ಞಾನ ಸಿದ್ಧ್ಯರ್ಥಂ 

ವಿಜಯಧ್ವಜಪೂರ್ವಕಾನ್ ।।         

      

ಶ್ರೀ ಲಿಂಗೇರಿ ಶ್ರೀನಿವಾಸಾಚಾರ್ಯರು... 

ಪ್ರಣಮ್ಯ ಮಧ್ವಹೃತ್ಕಂಜಸಂಸ್ಥಂ 
ವ್ಯಾಸಂ ತಥಾ ಗುರೂನ್ ।

ಪೂರ್ವಟೀಕಾಕೃತಶ್ಚಾತ 
ವಿಜಯಧ್ವಜಪೂರ್ವಕಾನ್ ।।
***



ಶ್ರೀಂ ಶ್ರೀ ಕಂ ಕಪಿಲಾಯ ನಮಃ 

ಅಕ್ಷಯವಾಗಲಿ ನಮ್ಮ ಭಕ್ತಿ, ಅಕ್ಷಯವಾಗಲಿ ನಮ್ಮ ನಿಜ ಸಂಪತ್ತು, ಅಕ್ಷಯವಾಗಲಿ ಜ್ಞಾನಾದಿಗಳು, ಅಕ್ಷಯವಾಗಲಿ ಸಕಲವೂ ಎಂದು ಈ ಅಕ್ಷಯತೃತೀಯಾದಿನದಲಿ ಪರಮಾತ್ಮನಲ್ಲಿ ಪ್ರಾರ್ಥನೆ ಮಾಡಿ ಸಾಧನೆಗೆ ದೇವರ ಸ್ಮರಣೆ ಗೆ ಮಾತ್ರ ಆರೋಗ್ಯಭಾಗ್ಯ ನಮಗೆ ಪರಮಾತ್ಮ ನೀಡುವಂತಾಗಲಿ..

 ಅಹಂಕಾರ ದಿಂದ ರಾಜ್ಯವಾಳುತ್ತಿರುವ ದುಷ್ಟ ರಾಜರನೆಲ್ಲ ಕೊಂದ ಹರಿಣೀ ಪತಿ ಪರಶುರಾಮದೇವರ ಅವತಾರ ಮಾಡಿದ ಈ ದಿನದಲಿ, ಪರಮಾತ್ಮ ತನ್ನ ಕೊಡಲಿಯಿಂದ ನಮ್ಮಲ್ಲಿನ ಅಜ್ಞಾನದ ಕಷ್ಮಲದ ಮರಗಳನ್ನು ಕತ್ತರಿಸಿ ಜ್ಞಾನದ ಭಿಕ್ಷೆನೀಡಿ ಪರಮಾನುಗ್ರಹವನ್ನು ಮಾಡಲಿ ಎಂದು ಪ್ರಾರ್ಥನೆ ಮಾಡುತ್ತಾ.. ..

ಹಾಗೆಯೇ....

ವಿದ್ಯಾಧೀಶಪದಾಸಕ್ತೋ ವಿದ್ಯಾಕೌಶಲ್ಯಸಂಯುತಃ/
ವಿದ್ಯಾಧಿರಾಜತೀರ್ಥಾಖ್ಯೋ ಗುರುರ್ಭೂಯಾದಭೀಷ್ಟದಃ//

ಶ್ರೀಮಟ್ಟೀಕಾಕೃತ್ಪಾದರ ನೇರ ಶಿಷ್ಯರು, ಶ್ರೀಮತ್ಕವೀಂದ್ರತೀರ್ಥರ, ಶ್ರೀ ರಾಜೇಂದ್ರತೀರ್ಥರ ಗುರುಗಳೂ ಆದ  ಶ್ರೀ ವಿದ್ಯಾಧಿರಾಜತೀರ್ಥರ ಆರಾಧನಾ ಮಹೋತ್ಸವ, ಯರಗೋಳದಲ್ಲಿ... ಮತ್ತೆ...

ಅಂಜನಾಸೂನು ಸಾನ್ನಿಧ್ಯಾತ್ ವಿಜಯೇನ ವಿರಾಜಿತಮ್/
ಅಜಿತಪ್ರೀತಿಜನಕಂ ಭಜೇಹಂ ವಿಜಯಧ್ವಜಮ್// 

14ನೆಯ ಶತಮಾನದವರಾದ, 
ಸಜ್ಜನರ ಉದ್ಧಾರಕ್ಕಾಗಿಯೆ ಶ್ರೀಮದ್ಭಾಗವತಕ್ಕೆ ವ್ಯಾಖ್ಯಾನವಾದ ಪದರತ್ನಾವಲಿಯನ್ನು  ಬರೆದು ಎಲ್ಲ ಸಜ್ಜನರಿಗೆ ದಾರಿದೀಪರಾದ ಕಣ್ವತೀರ್ಥನಿವಾಸಿಗಳಾದ, ಶ್ರೀ ಪೇಜಾವರ ಮಠದ 6ನೆಯ ಯತಿಗಳಾದ ಶ್ರೀ ವಿಜಯಧ್ವಜತೀರ್ಥ ಗುರುಸಾರ್ವಭೌಮರ ಆರಾಧನಾ ಮಹೋತ್ಸವವೂ..

ವಿಜಯದಾಸಪದಾಸಕ್ತಮ್ ವಿಟಲೋಪಪದಸಂಯುತಮ್/
ವೇಣುಗೋಪಾಲದಾಸಾಖ್ಯಂ ದಾಸವರ್ಯಂಮಹಂಭಜೇ//

ಶ್ರೀ ವೇಣುಗೋಪಾಲವಿಠಲ ದಾಸಾರ್ಯರ ಉತ್ತರಾರಾಧನೆಯ ಶುಭವಂದನೆಗಳನ್ನು ಸಲ್ಲಿಸುತ್ತಾ... ಜೊತೆಗೆ..

ಗಂಗಾಪಿತ ಪದಾಬ್ಜಾಳಿಂ ಗಂಗಾಧರ ಸಮಪ್ರಭಂ/ 
ಮಂಗಳಾಂಗಂ ಮಹಿದೇವಂ ಮೈಸೂರು ಪುರವಾಸಿನಂ/
ವಿಠಲೋಪ ಪದೋಪೇತಂ/ ವಿಜಯರಾಮಚಾಂದಿರಂ/
ವೈರಾಗ್ಯ ಜ್ಞಾನ ಮೂರ್ತಿಂಚ ಭಜೇಹಂ ಭವತಾರಕಮ್//

ಶ್ರೀ ಜಯೇಶವಿಠಲರ ಪರಮಪೂಜ್ಯ ಗುರುಗಳು,  ಶ್ರೀ ಅಪ್ಪಾವರ ಪರಮಾನುಗ್ರಹಪಾತ್ರರೂ, ಪರಮ ವೈರಾಗ್ಯ ಪುರುಷರೂ, ಕನ್ನಡ, ಮರಾಠಿ ಮೊದಲಾದ ಭಾಷೆಗಳಲ್ಲಿ ಪದ ಪದ್ಯ ಸುಳಾದಿಗಳನ್ನು ರಚನೆಮಾಡಿದವರಾದ, ಶ್ರೀ ಕುಂಭಕೋಣಂ ಪ್ರಸನ್ನವೇಂಕಟವಿಠಲರ ಶಿಷ್ಯರು, ಅನೇಕ ಜನ ಸಜ್ಜನ ಸಮುದಾಯವನ್ನು ಶಿಷ್ಯ ಸಂಪತ್ತನ್ನಾಗಿ ಹೊಂದಿದವರಾದ,     ಶ್ರೀ ವಿಜಯರಾಮಚಂದ್ರವಿಠಲರ ಮಧ್ಯಾರಾಧನೆ ಮೈಸೂರಿನ ಕಟ್ಟೆಮನೆಯಲ್ಲಿ...

ಇಂಥಾ ಅದ್ಭುತವಾದ ದಿನದಲಿ ಪರಮಾತ್ಮನ,ದಾಸರ ಕುರಿತಾದ ಪದಗಳು ಹಾಡುವ ಮುಖಾಂತರ, ಯತಿಗಳ ಕುರಿತಾದ ಲೇಖನಾ, ಪ್ರವಚನಗಳು ಹಂಚಿಕೊಳ್ಳುವ ಮುಖಾಂತರ   ಸಣ್ಣ ಸೇವೆಯನ್ನು ಪ್ರತಿಯೊಬ್ಬರೂ ಸಲ್ಲಿಸುವ ಪ್ರಯತ್ನವನ್ನು ಮಾಡೋಣ ಎಂದು ಬೇಡಿಕೊಳ್ಳುತ್ತಾ...

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
***


" ಶ್ರೀ ಪೇಜಾವರ ಮಠಾಧೀಶರಾದ ಪ್ರಾತಃಸ್ಮರಣೀಯ ಪರಮಪೂಜ್ಯ ಶ್ರೀ ವಿಜಯಧ್ವಜತೀರ್ಥರ ಸ್ಮರಣೆ  "
ಶ್ರೀ ಶ್ರೀಪಾದರಾಜರು.... 
ವಿಜಯಧ್ವಜತೀರ್ಥ ಯತೀಶಂ 
ನೌಮಿ ನಿರಂತರಮಾನಮಿತಾಂಗಃ । 
ವಾದಿ ಮತ್ತೇಭ ವಿದಾರಣದಕ್ಷ೦ 
ವ್ಯಾಕೃತ ಭಾಗವತಂ ಪರಮಾಪ್ತಮ್ ।।   
ಪುರಾಣ ಚೂಡಾಮಣಿಯಾದ ಶ್ರೀಮದ್ಭಾಗವತ ಪುರಾಣ ಗ್ರಂಥಕ್ಕೆ ಜ್ಞಾನ ಕರ್ಮ ನಿರಪೇಕ್ಷವಾದ ಬರಿ ಭಕ್ತಿ ಪರ ಅರ್ಥ ಮಾಡಿ ಟೀಕಾಕಾರರು ಶ್ರೀ ಬಾದರಾಯಣರ ಮೂಲ ಉದ್ಧೇಶಕ್ಕೆ ಭಂಗ ಬರದಂತೆ ಮಾಡಿದರೆ - ಇನ್ನೂ ಹಲವು ಮಹನೀಯರು ಈ ಉದ್ಗ್ರಂಥವನ್ನು ಮಾಯಾವಾದದ ಮರಳು ಗಾಡಿಗೆ ಜಗ್ಗಿ ತಂದು ಮೋಕ್ಷಪ್ರದವಾದ ಈ ಪುರಾಣದಿಂದ ನರಕಾದ್ಯನರ್ಥಗಳು ಉಂಟಾಗುವಂತೆ ಮಾಡಿದರು.
ಜಗದೋದ್ಧಾರಕ್ಕಾಗಿ ಭಗವಾನ್ ಶ್ರೀ ಬಾದರಾಯಣರು ಶ್ರೀ ನಾರದರ ಪ್ರಾರ್ಥನೆಯಂತೆ ರಚಿಸಿದ ಈ ಪುರಾಣ ರತ್ನದ ಈ ಅವಸ್ಥೆ ಕಂಡು ಶ್ರೀ ಪೂರ್ಣಬೋಧರು ಮನನೊಂದು ಸಜ್ಜನರ ಉದ್ಧಾರಕ್ಕಾಗಿ " ಭಾಗವತ ತಾತ್ಪರ್ಯ " ವೆಂಬ ಸಾವಿರಾರು ಪ್ರಮಾಣ ವಚನ ಪರಿಬೃಂಹಿತವಾದ ಬೃಹದ್ಗ್ರಂಥವನ್ನು ರಚಿಸಿ ಆ ಮೂಲ ಗ್ರಂಥಕರ್ತರಾದ ಶುಕ ವ್ಯಾಸರ ನಿಜವಾದ ಆಶಯವನ್ನು ವ್ಯಕ್ತ ಮಾಡಿದರು.
ಆದರೆ.....
" ದುರ್ನಿರೂಪ ವಚನಂ ಚ ಪಂಡಿತೈ: " 
ಎಂಬಂತೆ ಇರುವ ಆ ಶ್ರೀ ಭಾರತೀಶರ ವಚನ ವಾಗ್ಗುಂಪನದ ಗೂಢಾದಿ ಸಂಧಿಗಳನ್ನೆಲ್ಲ ತಿಳಿದುಕೊಂಡು ಅದನ್ನು ನೆನಪಿನಲ್ಲಿಟ್ಟು ಆ ಒರೆಗಲ್ಲಿಗೆ ಭಾಗವತ ಪ್ರತಿ ಪದ್ಯರ್ಥಗಳನ್ನೆಲ್ಲ ತಿಕ್ಕಿ ತೂಗಿ ವಿವೇಚಿಸಿ ತಪ್ಪು ಒಪ್ಪು ಒರೆ ಕೋರೆಗಳನ್ನು ಅಳೆದು ತಿಳಿದು ನೋಡುವುದೂ - ಬಳಿಕ ಅದರಂತೆ ಉಪಾಸನೆ ಮಾಡುವುದೂ ಸಾಮಾನ್ಯ ಶ್ರಾವಕ ಭಾವುಕರ ಅಳವಿಗೆ ಮೀರಿದ ಮಾತಾಗಿತ್ತು.
ಆದುದರಿಂದಲೇ ಶ್ರೀ ಆಚಾರ್ಯರ ಪೀಠ ಪ್ರತಿಷ್ಠಿತರಾದ ಶ್ರೀ ವಿಜಯಧ್ವಜತೀರ್ಥರು ನಿರ್ಣಯಾಚಾರ್ಯರ ಸರ್ವಜ್ಞ ಸೂತ್ರ ಹಿಡಿದು ಭಾಗವತದ ಪ್ರತಿ ಪದ್ಯದ ಸ್ವಾರಸ್ಯವನ್ನೂ ಬಗೆದು ತೆಗೆದು ತೋರಿಸುತ್ತಾ ಇಡೀ ಗ್ರಂಥಕ್ಕೆ " ಪದ ರತ್ನಾವಲೀ " ಎಂಬ ಟೀಕೆಯನ್ನು ಬರೆದರು.
ಶ್ರೀ ವಿಜಯಧ್ವಜರ ತಾತ್ಪರ್ಯಾನುಸಾರ ಟಿಪ್ಪಣಿಯೊಂದಿದ್ದರೆ ಸಮಗ್ರ ಭಾಗವತವೆಲ್ಲ ಮತ್ತೊಂದು ಅಭ್ಯಾಸ ಭಾಷ್ಯವೇ ಆಗುತ್ತಿತ್ತೋ ಏನೋ!
ಅನೇಕ ಟೀಕೆ ಟೂಕೆಗಳಿಂದ ಆಕುಲಗೊಂಡ ಈ ಪವಿತ್ರ ಕೃತಿಯನ್ನು ಸುಸಂಗತ ಸಿದ್ಧಾಂತದ ಚೌಕಟ್ಟಿನಲ್ಲಿ ಕೂಡಿಸಿ ಆ ಪುರಾಣ ಗ್ರಂಥಕ್ಕೆ ಔಪನಿಷದಿಕ ಗೌರವವನ್ನು ಮರಳಿ ತಂದು ಕೊಟ್ಟ ಕೀರ್ತಿ ಶ್ರೀಮದಾಚಾರ್ಯರಿಗೆ ಸಲ್ಲುತ್ತಿದ್ದರೆ - ಆ ಪುರಾಣ ಗ್ರಂಥದಲ್ಲಿಯೇ ಸಕಲ ವೇದ ವೇದಾಂತದ ದರ್ಶನ ಮಾಡಿಸಿದ ಧನ್ಯತೆ - ಮಾನ್ಯತೆಗಳು ಶ್ರೀ ವಿಜಯಧ್ವಜರ ಪದರಿಗೆ ಬಿದ್ದಿದೆ.
ಬರೀ ಶಾಸ್ತ್ರ ಗ್ರಂಥವನ್ನು ಬರೆಯಬಹುದು ಅಥವಾ ಪುರಾಣ ಟಿಪ್ಪಣಿಯನ್ನೂ ಬರೆಯಬಹುದು. 
ಆದರೆ ಶಾಸ್ತ್ರದ ಶೈಲಿಯಲ್ಲಿ ಪ್ರಮಾಣ ವಚನಗಳ ಪರಿವೇಷಣದಲ್ಲಿ ಪುರಾಣದ ಟೀಕೆಯನ್ನು ವೈಖರಿಸುವುದು " ವಿಜಯಧ್ವಜೀಯ " ವೈಶಿಷ್ಟ್ಯವಾಗಿದೆ.
ಪುರಾಣ ಪ್ರಸಾದದ ಮೇಲೆ ಇಂದಿಗೂ ಅಂಥಾ ಧ್ವಜ ಏರಿಲ್ಲ. 
ಇಂಥ ವಿಜಯ ಯಾರ ಬಳಿಗೂ ಸಾರಿಲ್ಲ. 
ಆದುದರಿಂದಲೇ ಅವರಿಗೆ ಭಾಗವತದ ಟೀಕಾಕೃತ್ಪಾದರೂ ಎಂದು ಹೇಳಿದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.
ಈ ಶ್ರೀ ವಿಜಯಧ್ವಜತೀರ್ಥರು ಉಡುಪಿಯ ಶ್ರೀ ಪೇಜಾವರ ಮಠದವರು. 
ಶ್ರೀಮದಾನಂದತೀರ್ಥರಿಂದ ಶ್ರೀ ಪಾಂಡುರಂಗ ವಿಠಲನ ಪ್ರತಿಮೆಯನ್ನು ಪೂಜೆಗಾಗಿ ಪಡೆದ ಶ್ರೀ ಪೇಜಾವರ ಮಠದ ಶ್ರೀ ಅಧೋಕ್ಷಜತೀರ್ಥರು ಈ ದಿವ್ಯ ಪರಂಪರೆಯ ಪುಣ್ಯಾತ್ಮರು.
ಅವರಿಂದ 7ನೇಯವರಾದ ಶ್ರೀ ಮಹೇಂದ್ರತೀರ್ಥರಿಂದ ಶ್ರೀ ವಿಜಯಧ್ವಜತೀರ್ಥರು ಆಶ್ರಮವನ್ನು ಸ್ವೀಕರಿಸಿ ಸರ್ವಜ್ಞ ಸಿಂಹಾಸನವನ್ನು ಆರೋಹಣ ಮಾಡಿದರು.
" ಅಂಜನಾಸೂನು ಸಾನ್ನಿಧ್ಯಾತ್ 
ವಿಜಯೇನ ವಿರಾಜಿತಮ್ "
ಎಂಬ ಅವರ ಚರಮ ಶ್ಲೋಕದಲ್ಲಿ ಅವರಲ್ಲಿ ಶ್ರೀ ವಾಯುದೇವರ ವಿಶೇಷ ಸನ್ನಿಧಾನವಿದ್ದಿತೆಂದು ಹೇಳಿದ್ದಾರೆ. 
ಅವರ ಲೋಕೋತ್ತರವಾದ ಗೈಮೆ ಮಹಿಮೆಗಳನ್ನು ನೋಡಿ ಕೇಳಿದರೆ ಅವರಲ್ಲಿ ಶ್ರೀ ವಾಯುದೇವರು ಶ್ರೀ ಮಧ್ವ ರೂಪದಿಂದ ನಿಶ್ಚಿತವಾಗಿಯೂ ವಿಶೇಷವಾಗಿ ಸನ್ನಿಹಿತರಾಗಿದ್ದರೆಂದು ತಾನಾಗಿ ತಿಳಿದು ಬರುವುದು.
ಉಡುಪಿಯಿಂದ 47 ಮೈಲಿಗಳ ದೂರದಲ್ಲಿರುವ ಮಂಜೇಶ್ವರದ ಹತ್ತಿರವಿರುವ " ಕಣ್ವತೀರ್ಥ " ವು ಪರಮ ಪಾವನವೂ - ಅತ್ಯಂತ ಪ್ರಾಚೀನವೂ ಆದ ಪುಣ್ಯ ಕ್ಷೇತ್ರವಾಗಿದೆ.
ಮಂತ್ರದ್ರಷ್ಟ್ರಾರರಾದ ವೈದಿಕ ಮಹರ್ಷಿ ಮಹಾತ್ಮ ಶ್ರೀ ಕಣ್ವರು ತಪಂಗೈದ ಪುಣ್ಯಸ್ಥಳವೇ ಇದು. 
ಇಲ್ಲಿರುವ ಶ್ರೀ ರಾಮದೇವರನ್ನು ಪೂಜಿಸಿ ಶ್ರೀ ಕಣ್ವ ಮಹರ್ಷಿಗಳು ತಮ್ಮ ತಪಸ್ಸಿದ್ಧಿಯ ಮಧುರ ಹಣ್ಣಿನ ಸವಿಗಂಡು ಧನ್ಯರೂ - ಕೃತಾರ್ಥರೂ ಆದರು.
ಇದನ್ನು ತಿಳಿದ ಲಂಕಾಧಿಪತಿಯಾದ ಚಿರಂಜೀವಿ ವಿಭೀಷಣನೂ ಅಲ್ಲಿಗೆ ಓಡಿ ಬಂದ. 
ಆಗ ಅವನ ಕಿವಿಗೆ ಕಣ್ವಾಶ್ರಮದಲ್ಲಿರುವ ಶ್ರೀ ರಾಮನ ದಿವ್ಯ ವಿಗ್ರಹದ ಸಮಾಚಾರವು ತಿಳಿದು ಬಂದಿತು.
ಈ ಶ್ರೀ ರಾಮನ ಅವಿತರ ಉಪಾಸನೆಯಿಂದಲೇ ಮಹಾ ಮುನಿ ಶ್ರೀ ಕಣ್ವ ಋಷಿಗಳು ಸಿದ್ಧಿ ಪ್ರಸಿದ್ಧಿಗಳನ್ನು ಪಡೆದರೆಂದು ಕೇಳಿದ ಬಳಿಕವಂತೂ ವಿಭೀಷಣನು ಲಂಕೆಯನ್ನೇ ಬಿಟ್ಟನು.
ನೇರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಗಳೂರು ಬಳಿಯ ಮಂಜೇಶ್ವರಕ್ಕೆ ಬಂದು ಅಲ್ಲಿಂದ ನೇರವಾಗಿ ಕಣ್ವಾಶ್ರಮಕ್ಕೆ ಚಿತ್ತೈಸಿದ. 
ಅಲ್ಲಿ ಕಣ್ವ ಮುನಿ ಪೂಜಿತ ಶ್ರೀ ರಾಮನ ದಿವ್ಯ ಮೂರ್ತಿಯನ್ನು ಕಂಡಾಗ ತನ್ನ ಅಣ್ಣನನ್ನು ಕೊಂದು  ಬಂದ ಆ ಶ್ರೀ ರಾಮನೇ ಇಲ್ಲಿ ಕಣ್ವ ಋಷಿಗಳ ಕೈಗೊಂಬೆಯಾಗಿ ನಿಂತಂತೆ ತೋರಿತು.
ಈ ಶ್ರೀರಾಮ ಪ್ರತಿಮೆಯ ಮಹಿಮೆ ಮಹತಿಗಳನ್ನು ಅರಿತ ಶ್ರೀ ವಾಯು ಸನ್ನಿಹಿತರಾದ ಶ್ರೀ ವಿಜಯಧ್ವಜತೀರ್ಥರು ಕಣ್ವತೀರ್ಥಕ್ಕೆ ಬಂದು ಅಲ್ಲಿಯೇ ನೆಲೆಸಿ ಆ ಶ್ರೀ ರಾಮನನ್ನು ಅತ್ಯಂತ ಭಕ್ತಿಯಿಂದ ಅರ್ಚಿಸಿದರು. 
ಹಿಂದೆ ಶ್ರೀಮದಾಚಾರ್ಯರು ಇಲ್ಲಿ ಚಾತುರ್ಮಾಸ್ಯಕ್ಕೆ ಕೂತಿದ್ದರು. 
ಉಡುಪಿಯ ಅಷ್ಟ ಯತಿಗಳಿಗೆ ಶ್ರೀಮದಾಚಾರ್ಯರು ಪರಮಹಂಸ ಪದವಿಯಲ್ಲಿ ಪಟ್ಟಾಭಿಷೇಕ ಮಾಡಿದ್ದೂ ಈ ಪರಮ ಪವಿತ್ರವಾದ ಪುಣ್ಯ ಸ್ಥಳದಲ್ಲೇ. 
ಇಲ್ಲಿ ಶ್ರೀ ವಿಜಯಧ್ವಜರು ಶ್ರೀ ಮುಖ್ಯಪ್ರಾಣದೇವರನ್ನು ಪ್ರತಿಷ್ಠಾಪಿದ್ದಾರೆ.
ಈ ಪುಣ್ಯ ಸ್ಥಳದಲ್ಲಿ ಶ್ರೀ ವಿಜಯಧ್ವಜರು ವಾಸ ಮಾಡಿ ಪಾಠ - ಪ್ರವಚನ - ಸ್ವಾಧ್ಯಾಯ ರೂಪವಾದ ವಾಜ್ಮಯ ತಪಸ್ಸನ್ನು ಆಚರಿಸುತ್ತಲಿದ್ದರು. 
ಅವರು ಒಮ್ಮೆ ಇಲ್ಲಿಯ ಅಶ್ವತ್ಥ ವೃಕ್ಷದ ಕಟ್ಟೆಯ ಮೇಲೆ ತಮ್ಮ ಶಿಷ್ಯರಿಗೆ ಪಾಠ ಹೇಳುತ್ತಾ ಕುಳಿತಿದ್ದರು. 
ಆಗ ಗಾಳಿಯು ಬಿರುಸಾಗಿ ಬೀಸಿ ಗಿಡದ ಎಲೆಗಳು ಪಟ ಪಟ ಸಪ್ಪಳ ಮಾಡ ಹತ್ತಿದವು. 
ಈ ವೃಕ್ಷ ಪರ್ಣಗಳ ಮರ್ ಮರ ಶಬ್ದಗಳ ಸದ್ದುಗದ್ದಲದಿಂದ ಶ್ರೀ ವಿಜಯಧ್ವಜತೀರ್ಥರ ಪಾಠಕ್ಕೆ ಆತಂಕವಾಗ ತೊಡಗಿತು. 
ಆಗ ಆ ತಪೋ ವಿಭೂತಿಗಳು ತಮ್ಮ ಕೈಯೆತ್ತಿ ಅಶ್ವತ್ಥ ಮರಕ್ಕೆ ಸದ್ದು ಮಾಡದಿರಲು ಸೂಚನೆ ನೀಡಿದರು.
ಏನಿದು ಆಶ್ಚರ್ಯ! ಗಾಳಿ ಬೀಸುತ್ತಿದ್ದರೂ, ಎಲೆಗಳು ಚಲಿಸುತ್ತಿದ್ದರೂ ಸದ್ದು ಮಾತ್ರ ಇಲ್ಲ. 
ಎಲ್ಲವೂ ಒಮ್ಮೆಲೇ ಶಾಂತ. 
ವಾತಾವರಣವೆಲ್ಲವೂ ಪ್ರಶಾಂತ. 
ಪರಿಸರದ ಪ್ರಕೃತಿ ಎಲ್ಲವೂ ಜಿಜ್ಞಾಸು ಶಿಷ್ಯನಂತೆ ನಿಶ್ಚಲವಾಗಿ ನಿಂತುಕೊಂಡು ಸರ್ವಜ್ಞ ಶಾಸ್ತ್ರದ ಪಾಠವನ್ನು ಶ್ರೀ ವಿಜಯಧ್ವಜತೀರ್ಥರ ಮುಖದಿಂದ ಆಲಿಸುತ್ತಿದೆ. 
ಗಾಳಿ ಕೂಡಾ ಪ್ರಾಣಿಗಳ ಶ್ವಾಸೋಚ್ಛ್ವಾಸಕ್ಕೆ ತೊಂದರೆಯಾಗದಂತೆ ತಿಳುಗಾಳಿಯಾಗಿ ತೀಡುತ್ತಿದೆ. ಇಂಥದ್ದು ಶ್ರೀ ವಿಜಯಧ್ವಜತೀರ್ಥರ ತಪೋಮಹಿಮೆ.
ಶ್ರೀ ವಿಜಯಧ್ವಜತೀರ್ಥರು ತಮ್ಮ ಗ್ರಂಥಗಳನ್ನು ಬರೆಯಲಿಕ್ಕೂ - ಧ್ಯಾನ ಸಮಾಧಿಯಲ್ಲಿ ಲೀನರಾಗಿ ತಪಂಗೈಯಲಿಕ್ಕೂ ಸಮುದ್ರ ಮಧ್ಯದಲ್ಲಿಯ ಒಂದು ಹೆಬ್ಬಂಡಿಯ ಮೇಲೆ ಕುಳಿತು ಕೊಳ್ಳುತ್ತಿದ್ದರಂತೆ. 
ಆ ಶಿಲಾಸನದ ಮೇಲೆ ಅವರು ಚಿಂತನ ಶೀಲರಾಗಿ ಅನಂತನ ಧ್ಯಾನ ಮಾಡುತ್ತಾ ಕುಳಿತುಕೊಂಡಾಗ ಕಡಲಿನ ಒಡಲಿನಲ್ಲಿ ಎದ್ದೇಳುವ ಹೆದ್ದೆರೆಗಳು ಕೂಡಾ ಒಮ್ಮೆಲೇ ಶಾಂತವಾಗಿ ಸದ್ದು ಗದ್ದಲ ಮಾಡದೇ ಒಮ್ಮೆಲೇ ತಿಳುವಾಗಿ ತರಳವಾಗಿ ತೆವಳಿಕೊಂಡು ಹೋಗುತ್ತಿದ್ದವಂತೆ.
ಶ್ರೀ ವಿಜಯಧ್ವಜರು ತಪೋನಿಷ್ಠಾನಗೈದ ಆ ಪುಣ್ಯ ಪಾಷಾಣ ಖಂಡವನ್ನು ಈಗಲೂ ಪಶ್ಚಿಮ ಸಮುದ್ರದಲ್ಲಿ ಕಣ್ವತೀರ್ಥದ ಬಳಿಯಲ್ಲಿ ಕಾಣಬಹುದು.
ಶ್ರೀ ವಿಜಯಧ್ವಜರು ಅಲ್ಲಿ ಚಿಂತನ ಶೀಲರಾಗಿ ಕುಳಿತಾಗ ತಮ್ಮ ಧ್ಯಾನ ಗೋಚರವಾದ ಅನೇಕ ಸಂಗತಿಗಳನ್ನು ಆ ಸಮುದ್ರದ ಶಿಲೆಯ ಮೇಲೆ ಕೊರೆದಿಟ್ಟು ನಂತರ ತಾಡವಾಲೆಯಲ್ಲಿ ಬರೆಯುತ್ತಿದ್ದರಂತೆ.
ಶ್ರೀ ವಿಜಯಧ್ವಜರು ತಮ್ಮ ಹಸ್ತಾಕ್ಷರದಿಂದ ಉಟ್ಟಂಕಿಸಿದ ಅನೇಕ ವರ್ಣ ಮಾಲೆಗಳನ್ನು ಆ ಕಡಲುಗಲ್ಲಿನ ಬೆನ್ನಮೇಲೆ ಇಂದಿಗೂ ನಾವು ಕಾಣಬಹುದು. 
ಹೇಳುತ್ತಾ ಹೋದರೆ ಶ್ರೀ ವಿಜಯಧ್ವರತೀರ್ಥರ ಅಪಾರವಾದ ಮಹಿಮೆಗಳು ಒಂದು ಗ್ರಂಥವೇ ಆಗುತ್ತದೆ.
ಶ್ರೀ ವಿಜಯಧ್ವಜತೀರ್ಥರು ಶ್ರೀಮದ್ಭಾಗವತಕ್ಕೆ " ಪದ ರತ್ನಾವಲೀ " ಯೆಂಬ ವ್ಯಾಖ್ಯಾನವನ್ನು ಬರೆದು ಅದರ ಕೊನೆಗೆ ಒಂದು ಪದ್ಯದಲ್ಲಿ ತಮ್ಮ ಕೃತಿಯನ್ನು ಶ್ರೀ ಕೃಷ್ಣನ ಪಾದಾರವಿಂದದಲ್ಲಿ ಸಮರ್ಪಣೆ ಮಾಡುತ್ತಾ ಮೂರು ವರಗಳನ್ನು ಕೇಳಿದ್ದಾರೆ.
ಸ್ವಾಮೀ ಕೃಷ್ಣಾ ನೀನು ಈ ಭಾಗವತದ ವ್ಯಾಖ್ಯಾನದಿಂದ ನಿಜವಾಗಿಯೂ ಸಂತುಷ್ಟನಾಗಿದ್ದರೆ ನನಗೆ ಮೂರು ವರಗಳನ್ನು ಕೊಡು.
ವ್ಯಾಖ್ಯಾ ಭಾಗವತಸ್ಯ ಕೃಷ್ಣ ರಚಿತಾ -
ತ್ವತ್ ಪ್ರೀತಿ ಕಾಮಾತ್ಮನಾ 
ಪ್ರೀತಶ್ಚೇತ್ ಪ್ರದದಾಸಿತತ್ಪ್ರತಿನಿಧಿಂ -
ತತ್ತ್ರೀನ್ ವಿರಿಷ್ಯೇವರಾನ್ ।
ಪ್ರಾಜ್ ನಿಷ್ಕಂಚನತಾಂ ತವ -
ಪ್ರತಿಭವಂ ಪಾದಾರವಿಂದಾತ್ಮನಾ 
ಸಂಸಕ್ತಿ೦ ಸುಖತೀರ್ಥ ಶಾಸ್ತ್ರ -
ವಿಜರಾಹಾರಸ್ಯ ಪಾರಂ ತಯಾ ।। 12 ।।
ಭಗವಾನ್ ಶ್ರೀ ಕೃಷ್ಣ !
ನೀನು ಸುಪ್ರೀತನಾಗಲೆಂಬ ಹಿರಿಯಾಸೆಯಿಂದ ಶ್ರೀಮದ್ಭಾಗವತಕ್ಕೆ ನಾನು ಈ " ಪದರತ್ನಾವಲೀ " ಯೆಂಬ ವ್ಯಾಖ್ಯಾನವನ್ನು ಬರೆದಿದ್ದೇನೆ. ಇದರಿಂದ ನಿಜವಾಗಿಯೂ ಪ್ರೀತನಾಗಿದ್ದರೆ ನಿನ್ನಲ್ಲಿ ಮೂರು ವರಗಳನ್ನು ಕೇಳಿಕೊಳ್ಳುತ್ತೇನೆ. 
1. ನಾನು ಯಾವುದೇ ಜನ್ಮದಲ್ಲಿರಲಿ - ಎಲ್ಲಿಯೇ ಹುಟ್ಟಿರಲಿ ಮೊದಲು ನನ್ನ ನಿಷ್ಕಿಂಚನನ್ನು [ ಸಂಪೂರ್ಣ ದಾರಿದ್ರ್ಯ ] ಮಾಡು. 
2. ನಿನ್ನ ಪಾದಾರವಿಂದ ನಿಷೇವಣದಲ್ಲಿಯೇ ನನ್ನ ದೇಹಾತ್ಮಗಳು ಸರ್ವದಾ ಆಸಕ್ತವಾಗಿರಬೇಕು. 
3. ಆ ಭಗವದ್ಭಕ್ತಿಯಿಂದ ಮಧ್ವ ಶಾಸ್ತ್ರದಲ್ಲಿ ಪಾರಂಗತತ್ತ್ವ ಬಂದು ಅದರಿಂದ ಭವಸಾಗರದ ಪಾರಂಗತನೆ ನಾಂಗಬೇಕು. 
ಇದರ ಮೇಲಿಂದ ಶ್ರೀ ವಿಜಯಧ್ವಜತೀರ್ಥರ ವೈರಾಗ್ಯ ಯಾವ ಮಟ್ಟದ್ದು ಇದ್ದಿತೆಂಬುದನ್ನು ಸುಲಭವಾಗಿ ಅರಿತುಕೊಳ್ಳಬಹುದು ಮತ್ತು ಅವರ ಹರಿಭಕ್ತಿ ಹಾಗೂ ಮಧ್ವ ಶಾಸ್ತ್ರ ದೀಕ್ಷೆಗಳು ಎಷ್ಟು ಉತ್ಕಟವಾಗಿದ್ದವು ಎನ್ನುವುದನ್ನು ಕೂಡಾ ಅವರ ಗ್ರಂಥದ ಕೊನೆಯ ಪದ್ಯದ ಈ ವಚನ ರಚನೆಯಿಂದ ಸುಸ್ಪಷ್ಟವಾಗಿ ಗೋಚರವಾಗುತ್ತದೆ.
ಶ್ರೀ ವಿಜಯಧ್ವಜತೀರ್ಥರು ಸಾಕ್ಷಾತ್ ಶ್ರೀ ಶುಕಾಚಾರ್ಯರ ಅವತಾರ ಭೂತರೇ ಆಗಿದ್ದರೆಂಬುದು ಅವರ ಭಾಗವತ ಟೀಕೆಯನ್ನು ನೋಡೊದರೆ ಯಥಾರ್ಥವೆಂದೇ ಎನಿಸುವುದು. 
ಅವರ ಬೃಂದಾವನದ ಬಳಿ ಕುಳಿತು ಸಮಗ್ರ ಭಾಗವತವನ್ನು ಪಾರಾಯಣ ಮಾಡಿದರೆ ಎಂಥಾ ಮಂದಮತಿಗೂ ಶ್ರೀಮದ್ಭಾಗವತದ ದಿವ್ಯವಾದ ಅರ್ಥವು ಹೊಳೆಯುವುದಂತೆ. ಶ್ರೀಮದಾನಂದತೀರ್ಥರ ಭಾಗವತ ತಾತ್ಪರ್ಯದ ಸಾರಸಂದೇಶವೆಲ್ಲವೂ ತಿಳಿಯಾಗಿ ತಿಳಿಯುವುದಂತೆ.
ಶ್ರೀಮದ್ಭಾಗವತ ಟೀಕೆಯನ್ನು ಬರೆಯುವಾಗ ಶ್ರೀ ವಿಜಯಧ್ವಜತೀರ್ಥರು ಪ್ರತಿಯೊಂದು ಸ್ಕಂದದ ಪ್ರಾರಂಭಕ್ಕೂ ಆ ಇಡೀ ಸ್ಕಂದದ ಭಾವವೇ ತೇಲಿ ತೂರಿ ತೋರಿ ಬರುವಂತೆ ಸುಂದರವಾದ ಒಂದೊಂದು ಪದ್ಯವನ್ನು ರಚಿಸಿದ್ದಾರೆ.
ಆ 12 ಪದ್ಯಗಳಲ್ಲಿಯೂ ಅವರ ಹೃದಯದಲ್ಲಿ ಉಕ್ಕುವ ಹರಿಭಕ್ತಿಯ ಹಲಬು ಹಂಬಲಗಳು ಹಾಡಾಗಿ ಹೊಮ್ಮಿವೆ - ಪದ್ಯವಾಗಿ ಚಿಮ್ಮಿವೆ.
" ಗ್ರಂಥಗಳು "
1. ಶ್ರೀಮದ್ಭಾಗವತ ಮಹಾ ಪುರಾಣ ವ್ಯಾಖ್ಯಾನ " ಪದರತ್ನಾವಲೀ "
2.  ಕೃಷ್ಣಾಮೃತ ಮಹಾರ್ಣವ ವ್ಯಾಖ್ಯಾನ 
3. ಶ್ರೀ ನಾರಾಯಣ ಪಂಡಿತಾಚಾರರ್ಯರ " ಪಾರಿಜಾತಹರಣ " ಕ್ಕೆ ವ್ಯಾಖ್ಯಾನ 
4. ದಶಾವತಾರ ಹರಿಗಾಥಾ 
ಶ್ರೀ ವಿಜಯಧ್ವಜತೀರ್ಥರು ಪರಮ ಪಾವನ ಪುಣ್ಯಾಶ್ರಮವಾದ ಈ ಕಣ್ವತೀರ್ಥದಲ್ಲಿ ಬಹು ಕಾಲಯಿದ್ದು ಶ್ರೀ ಕಣ್ವ ಋಷಿಗಳಿಂದ ಅರ್ಚಿತನಾದ ಶ್ರೀ ರಾಮದೇವರನ್ನೂ - ಶ್ರೀ ಸರ್ವಜ್ಞ ಕರಾರ್ಚಿತ ವಿಠಲದೇವರನ್ನೂ ಪೂಜೆ ಮಾಡಿ ಸಮೀರ ಸಮಯ ಸಿದ್ಧಾಂತವನ್ನು ಶಿಷ್ಯರಿಗೆ ಪಾಠ ಹೇಳಿ......
" ಸಿದ್ಧಾರ್ಥ ಸಂವತ್ಸರದ ವೈಶಾಖ ಶುದ್ಧ ತೃತೀಯಾ  ( ಕ್ರಿ ಶ 1439 ) " ಈ ಕಣ್ವ ತೀರ್ಥದಲ್ಲಿಯೇ ಬೃಂದಾವನಸ್ಥರಾದರು.
ಅಂಜನಾಸೂನು ಸಾನ್ನಿಧ್ಯಾತ್ 
ವಿಜಯೇನ ವಿರಾಜಿತಂ ।
ಅಜಿತ ಪ್ರೀತಿ ಜನಕಂ 
ಭಜೇsಹಂ ವಿಜಯಧ್ವಜಮ್ ।।
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
***

ಶ್ರೀ ವಿಜಯಧ್ವಜ ತೀರ್ಥರು
ಅಕ್ಷಯ ತದಿಗೆಯ ಈ ಪರ್ವಕಾಲದಲ್ಲಿ ವಿಜಯ ಧ್ವಜ ರ ಆರಾಧನೆಯ ಈ ಸುಸಂದರ್ಭದಲ್ಲಿ ಅವರ ಬಗ್ಗೆ ಯಥಾ ಶಕ್ತಿಯಾಗಿ ಪರಿಚಯಾತ್ಮಕವಾದ ಈ ಲೇಖನ....
ಇವರು ಪೇಜಾವರ ಮಠದ ಪರಂಪರೆಯ ಆರನೆಯ ಯತಿಗಳು. ಇವರು ಮುಖ್ಯಪ್ರಾಣನ ಸನ್ನಿಧಾನವುಳ್ಳ ಶುಕಮುನಿಗಳ ಅಂಶ ಉಳ್ಳವರಾಗಿದ್ದರು. ಉಡುಪಿಯಿಂದ ಸುಮಾರು 75 ಕಿಲೋಮೀಟರ್ ದಕ್ಷಿಣದ ಭಾಗ ಸಮುದ್ರ ತಟದಲ್ಲಿರುವ ಕಣ್ವ ತೀರ್ಥವು ಪರಮ ಪಾವನವಾದ ಮತ್ತು ಅತ್ಯಂತ ಪ್ರಾಚೀನವಾದ ಪುಣ್ಯಕ್ಷೇತ್ರ. ಇಲ್ಲಿರುವ ರಾಮನನ್ನು ಪೂಜಿಸಿ ಕಣ್ವ ಮುನಿಗಳು ಸಿದ್ಧಿಯನ್ನು ಪಡೆದ ಸ್ಥಳವಿದು. ಈ ಕಣ್ವ ಆಶ್ರಮದಲ್ಲಿರುವ ಶ್ರೀರಾಮನ ದಿವ್ಯ ವಿಗ್ರಹದ ವಿಷಯ ತಿಳಿದ ವಿಭೀಷಣನು ಇಲ್ಲಿಗೆ ಬಂದು ರಾಮನ ಈ ಮೂರ್ತಿಯನ್ನು ಕಂಡು ಭಕ್ತಿಪರವಶರಾಗಿ ಇಲ್ಲಿಯೇ ವಾಸಮಾಡಿದನು. ರಾಮನ ಮಹಿಮೆಯನ್ನು ಅರಿತ ಪ್ರಾಣ ದೇವನ ಸನ್ನಿಧಾನ ಯುಕ್ತರಾದ ವಿಜಯಧ್ವಜ ತೀರ್ಥರು ರಾಮ ದೇವನನ್ನು ಪೂಜಿಸುತ್ತಾ ಇಲ್ಲಿಯೇ ನೆಲೆಸಿದರು. ಹಾಗೆಯೇ ಇಲ್ಲಿಯೇ ಪ್ರಾಣ ದೇವನ ಪ್ರತಿಷ್ಠೆಯನ್ನು ಸಹ ಮಾಡಿರುವರು.
ವಿಜಯಧ್ವಜರು ಈ ಕ್ಷೇತ್ರದಲ್ಲಿ ವಾಸಮಾಡುತ್ತಾ ಪಾಠ-ಪ್ರವಚನ ಸ್ವಾಧ್ಯಾಯ ರೂಪವಾದ ವಾಂಙ್ಮಯ ತಪಸ್ಸನ್ನು ಆಚರಿಸುತ್ತಿದ್ದರು. ಅವರು ಒಮ್ಮೆ ಇಲ್ಲಿಯ ಅಶ್ವತ್ಥಮರದ ಬುಡದ ಕಟ್ಟೆಯ ಮೇಲೆ ತಮ್ಮ ಶಿಷ್ಯರಿಗೆ ಪಾಠವನ್ನು ಹೇಳುತ್ತಿರಲು ಆಗ ಗಾಳಿಯು ಬಿರುಸಾಗಿ ಬೀಸಿ ಗಿಡದ ಎಲೆಗಳು ಪಟಪಟನೆ ಎಂದು ಶಬ್ದವ ಮಾಡುತ್ತಿರಲು ವೃಕ್ಷಗಳ ಎಲೆಗಳ ಶಬ್ದದಿಂದ ವಿಜಯಧ್ವಜ ರ ಪಾಠಕ್ಕೆ ಅಡ್ಡಿಯಾಯಿತು. ಈ ಸಂದರ್ಭದಲ್ಲಿ ಇವರು ತಮ್ಮ ಕೈಯನ್ನು ಮೇಲಕ್ಕೆತ್ತಿ ಅಶ್ವತ್ಥ ಮರಕ್ಕೆ ಸದ್ದು ಮಾಡದಿರಲು ಸೂಚಿಸಿದರು. ಆಗ ಗಾಳಿ ಬೀಸುತ್ತಿದ್ದರೂ ಎಲೆಗಳು ಚಲಿಸುತ್ತಿದ್ದರೂ ಸದ್ದು ಮಾತ್ರ ಇರುತ್ತಿರಲಿಲ್ಲ. ಎಲ್ಲವೂ ಒಮ್ಮೆಲೆ ನಿಶಬ್ದವಾಗಿ ವಾತಾವರಣ ಪ್ರಶಾಂತವಾಯಿತು. ಇಂದಿಗೂ ಕೂಡ ಶಬ್ದವಿಲ್ಲದೆ ಈ ಪ್ರದೇಶವು ಬಹಳ ಶಾಂತವಾಗಿದೆ.
ವಿಜಯಧ್ವಜ ರು ತಮ್ಮ ಗ್ರಂಥಗಳನ್ನು ಬರೆಯಲಿಕ್ಕೆ ಹಾಗೂ ತಪಸ್ಸನ್ನು ಆಚರಿಸಲು ಸಮುದ್ರದ ಮಧ್ಯದಲ್ಲಿ ಒಂದು ಬಂಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರಂತೆ. ಆಗ ತಮ್ಮ ಧ್ಯಾನ ಗೋಚರವಾದ ಅನೇಕ ವಿಷಯಗಳನ್ನು ಸಮುದ್ರದಲ್ಲಿರುವ ಶಿಲೆಯ ಮೇಲೆ ಕೊರೆದಿಟ್ಟು ನಂತರ ತಾಡವಾಲೆ ಗಳ ಮೇಲೆ ಬರೆಯುತ್ತಿದ್ದರಂತೆ. ಇಂದಿಗೂ ಸಹ ತಮ್ಮ ಹಸ್ತಾಕ್ಷರದಿಂದ ಬರೆದ ಅನೇಕ ವರ್ಣಮಾಲೆಗಳನ್ನು ನಾವು ಈ ಕಡಲ ತೀರದ ಬಂಡೆಕಲ್ಲಿನ ಮೇಲೆ ಕಾಣಬಹುದು.
ವಿಜಯಧ್ವಜ ರು ಶ್ರೀಮದ್ಭಾಗವತಕ್ಕೆ ಪದರತ್ನಾವಳಿ ಎಂಬ ವ್ಯಾಖ್ಯಾನವನ್ನು ಬರೆದು ಅದರ ಕೊನೆಗೆ ಒಂದು ಪದ್ಯದಲ್ಲಿ ತಮ್ಮ ಕೃತಿಯನ್ನು ಕೃಷ್ಣನ ಪಾದಾರವಿಂದಕ್ಕೆ ಸಮರ್ಪಣೆ ಮಾಡುತ್ತಾ 3 ವರಗಳನ್ನು ಕೇಳಿದ್ದಾರೆ. ಮೊದಲನೆಯದಾಗಿ- ಸಂಪೂರ್ಣ ದಾರಿದ್ರ್ಯ ಎರಡನೆಯದಾಗಿ- ಪ್ರತಿ ಜನ್ಮದಲ್ಲೂ ನಿನ್ನ ಪಾದಾರವಿಂದಗಳಲ್ಲಿ ಭಕ್ತಿ ಮೂರನೆಯದಾಗಿ- ಸರ್ವಜ್ಞ ಶಾಸ್ತ್ರದಲ್ಲಿ ಆಸಕ್ತಿ.... ಇದರಿಂದ ವಿಜಯಧ್ವಜ ರ ವೈರಾಗ್ಯ ಯಾವ ಮಟ್ಟದ್ದು ಎಂಬುದನ್ನು ಅರಿತುಕೊಳ್ಳಬಹುದು. ವಿಜಯಧ್ವಜ ರು ಸಾಕ್ಷಾತ್ ಶುಕ್ರಾಚಾರ್ಯರ ಅವತಾರ ಆಗಿದ್ದರೆಂದು ಅವರ ಭಾಗವತ ಟೀಕೆಯನ್ನು ನೋಡಿದರೆ ತಿಳಿದುಬರುವುದು. ಭಾಗವತದ ಟೀಕೆಯನ್ನು ಬರೆಯುವಾಗ ಪ್ರತಿಯೊಂದು ಸ್ಕಂದದ ಆದಿಯಲ್ಲಿ ಸುಂದರವಾದ ಒಂದೊಂದು ಪದ್ಯವನ್ನು ರಚಿಸಿದ್ದಾರೆ. ಇವರ ಈ ವ್ಯಾಖ್ಯಾನವು ವಿಜಯಧ್ವಜೀಯ ಎಂಬ ಹೆಸರಿನಿಂದಲೂ ಖ್ಯಾತವಾಗಿದೆ.
ಇವರು ಸುರತ್ಕಲ್ ಹತ್ತಿರವಿರುವ ಚಿತ್ರಾಪುರ ಮಠದಲ್ಲಿದ್ದ ಭಟ್ಟಾಚಾರ್ಯ ಸಂಪ್ರದಾಯದ ಶ್ರೀಗಳವರನ್ನು ವಾದದಲ್ಲಿ ಸೋಲಿಸಿ ಅವರನ್ನು ತಮ್ಮ ಶಿಷ್ಯರನ್ನಾಗಿ ಮಾಡಿಕೊಂಡು ವೈಷ್ಣವ ಮಠವನ್ನಾಗಿ ಮುಂದುವರೆಸಿದರು ಎಂಬುದಾಗಿ ತಿಳಿದುಬರುತ್ತದೆ.
ಹೀಗೆ ಬಹುಕಾಲ ಕಣ್ವತೀರ್ಥ ದಲ್ಲಿ ಕಣ್ವ ಋಷಿಗಳ ಕರಾರ್ಚಿತ ನಾದ ರಾಮನ ಆರಾಧಕರಾಗಿ ಸರ್ವಜ್ಞ ತೀರ್ಥರ ಕರಾರ್ಚಿತ ನಾದ ವಿಠಲನನ್ನು ಆರಾಧಿಸುತ್ತಾ 'ಉತ್ತಮ ತೀರ್ಥ' ಎಂಬ ತಮ್ಮ ಶಿಷ್ಯರಿಗೆ ಪೀಠವ ಒಪ್ಪಿಸಿ ಕ್ರಿಸ್ತಶಕ 1436 ರ ಸಿದ್ಧಾರ್ಥ ನಾಮ ಸಂವತ್ಸರದ ವೈಶಾಖ ಶುದ್ಧ ಅಕ್ಷಯ ತೃತೀಯ ದಿನದಂದು ಕಣ್ವತೀರ್ಥ ದಲ್ಲಿ ವೃಂದಾವನಸ್ಥರಾದರು.

 ‌(received in WhatsApp)

***


ವೈಶಾಖ ಶುಕ್ಲಪಕ್ಷದ ಅಕ್ಷಯ ತೃತೀಯಾದಂದು ಶ್ರೇಷ್ಠ ಜ್ಞಾನಿಗಳಾದ ಪರಮಭಕ್ತರಾದ ಭಾಗವತ ಗ್ರಂಥಕ್ಕೆ "ಪದ ರತ್ನಾವಲಿ" ಎಂಬ ವ್ಯಾಖ್ಯಾನವನ್ನು ರಚಿಸಿದ ಶ್ರೀ  ವಿಜಯಧ್ವಜತೀರ್ಥ ಶ್ರೀಪಾದಂಗಳವರ ಆರಾಧನಾ ದಿವಸ. ಅವರ ವೃಂದಾವನ ಪುಣ್ಯಕ್ಷೇತ್ರವಾದ  ಶ್ರೀ ಕಣ್ವತೀರ್ಥದಲ್ಲಿದೆ. ಅವರ ಆರಾಧನಾ ನಿಮಿತ್ತವಾಗಿ
ಪಾರಾಯಣ ಮಾಡುವವರ ಅನುಕೂಲಕ್ಕಾಗಿ ವಿಶ್ವಪತಿ ತೀರ್ಥರು ರಚಿಸಿದ ವಿಜಯಧ್ವಜಾಷ್ಟಕ -

ಅಂಜನಾಸೂನುಸಾನ್ನಿಧ್ಯಾದ್ ವಿಜಯೇನ ವಿರಾಜಿತಮ್ | ಅಜಿತಪ್ರೀತಿಜನಕಂ ಭಜೇಹಂ ವಿಜಯಧ್ವಜಮ್ || 

ಶ್ರೀವಿಜಯಧ್ವಜಯೋಗಿಯತೀಶಂ ನೌಮಿ ನಿರಂತರಮಾನಮಿತಾಂಗ: | ವಾದಿಮದೇಭವಿದಾರಣದಕ್ಷಂ ವ್ಯಾಕೃತಭಾಗವತಂ ಪರಮಾಪ್ತಮ್ ||

ಜಯವಿಜಯೌ ದಂಡಧರೌ ಭೂಯೋ ಭೂಯೋSಭಿವಾದಯೇ ಮೂರ್ಧ್ನಾ | ಭಾಗವತೀ ಟೀಕಾ ಯಾಸೌ ವರ್ಣ್ಯಂತಃ ಪ್ರವೇಷ್ಟುಮೇತಸ್ಯಾ:||

ಮಧ್ವಾಧೋಕ್ಷಜಸಂಪ್ರದಾಯಕ-ಮಹಾಶಾಸ್ತ್ರಾರ್ಥಸಂವ್ಯಂಜಕಃ ಶ್ರೀಮದ್ಭಾಗವತಾಂಬುಧೌ ವ್ಯವಹರನ್ ತಾತ್ಪರ್ಯರತ್ನಾವಲೀಮ್ | ದೃಷ್ಟಾ ಭಾಗವತಾರ್ಥದೀಪ್ತಪದಕೈಃ ಶ್ರೀಕೃಷ್ಣಪಾದಾರ್ಚನಂ ಮಾ ತ್ಯಾಕ್ಷೀದ್ವಿಜಯಧ್ವಜೋ ಭಜ ಮನಸ್ತಂ ಕಣ್ವತೀರ್ಥಸ್ಥಿತಮ್ ||
 
ಯಸ್ಯ ವಾಕ್ಕಾಮಧೇನುರ್ನ: ಕಾಮಿತಾರ್ಥಾನ್ ಪ್ರಯಚ್ಛತಿ | ಭಜೇ ಮಹೇಂದ್ರಸಚ್ಚಿಷ್ಯಂ ಯೋಗೀಂದ್ರಂ ವಿಜಯಧ್ವಜಮ್

ಸರ್ವದುರ್ವಾದಿಮಾತಂಗದಲನೇ ಸಿಂಹವಿಕ್ರಮಮ್ | ವಂದೇ ಯತಿಕುಲಾಗ್ರಣ್ಯಂ ಯೋಗೀಂದ್ರಂ ವಿಜಯಧ್ವಜಂ||

ಮಧ್ವಾರಾಧಿತಸೀತೇತ-ರಾಮಚಂದ್ರಪದಾಂಬುಜೇ | ಚಂಚರೀಕಾಯಿತಂ ವಂದೇ ಯೋಗೀಂದ್ರಂ ವಿಜಯಧ್ವಜಮ್ ||
 
ಶ್ರೀಮದ್ಭಾಗವತಾಭಿಧಾನಸುರಭಿಃ ಯಟ್ಟೀಕಯಾ                             ವತ್ಸಯಾ | 
ಸ್ಪೃಷ್ಟಾ ಶ್ಲೋಕಪಯೋಧರೈಃ ನಿಜಮಹಾಭಾವಂ ಪಯ: ಪ್ರಸ್ನುತೇ || 
ಲೋಕೇ ಸಜ್ಜನತಾಪಸಂಪ್ರಶಮನಾಯೋದೀರಿತಂ ಸೂರಿಭಿಃ | 
ಶ್ರೀಮಂತಂ ವಿಜಯಧ್ವಜಂ ಮುನಿವರಂ ತಂ ಸನ್ನಮಾಮ್ಯನ್ವಹಮ್ ||

||  ಶ್ರೀವಿಶ್ವಪತಿತೀರ್ಥವಿರಚಿತಂ ಶ್ರೀವಿಜಯಧ್ವಜಾಷ್ಟಕಮ್ ||
***

vijayadwaja Teertharu - by srinivasa korlahalli
ಮದ್ವಿಜಯಧ್ವಜವಿಜಯ-೧

ಶ್ರೀಮದಾಚಾರ್ಯರ ಸಾಕ್ಷಾತ್ ಶಿಷ್ಯರಾದ ಶ್ರೀಕೃಷ್ಣಪೂಜಕರಾದ ಶ್ರೀಮದಧೋಕ್ಷಜತೀರ್ಥರ ಪರಂಪರೆಯ ಭೂಷಾಮಣಿಗಳಾದ, ಸಮಗ್ರ ಭಾಗವತಕ್ಕೆ ವ್ಯಾಖ್ಯಾನವನ್ನು ಮಾಡಿ ಮುಂದಿನ ಸಕಲಮಾಧ್ವರಿಂದ ಮಾನ್ಯರಾದ ಶ್ರೀಮದ್ವಿಜಯಧ್ವಜತೀರ್ಥರ ಚರಿತ್ರೆಯ ಬಗ್ಗೆ ಸರಿಯಾದ ಮಾಹಿತಿಗಿಂತಲೂ ಊಹಾಪೋಹಗಳೇ ಹೆಚ್ಚು. ಹಾಗಾಗಿ ಆ ಮಹಾಗುರುಗಳ ಚರಿತ್ರೆಯನ್ನು ಯಥಾವತ್ತಾಗಿ ತಿಳಿದು ತಿಳಿಸುವ ಒಂದು ಪ್ರಯತ್ನ.

ಕಾಲಮಾನ

ವಿಜಯಧ್ವಜತೀರ್ಥರ ಕಾಲದ ಬಗ್ಗೆ ಸಂಶೋಧಕರು ವಿಭಿನ್ನಭಾವವನ್ನು ತಾಳಿದ್ದಾರೆ. ಪೇಜಾವರಮಠದ ಕೈಫಿಯತ್ತಿನಲ್ಲಿ ಶಾ.ಶ 1348 ಅಂದರೆ ಕ್ರಿ.ಶ 1427 ರಲ್ಲಿ (15ಶತಮಾನ) ವಿಜಯಧ್ವಜತೀರ್ಥರ ನಿರ್ಯಾಣ ಎಂದು ಹೇಳಲಾಗಿದೆ. ಬಿಎನ್ಕೆ ಶರ್ಮಾ ಹಾಗೂ ಅವರನ್ನು ಹೆಚ್ಚಾಗಿ ಅನುಸರಿಸುವ ಅನೇಕ ಸಂಶೋಧಕರು ವಿಜಯಧ್ವಜತೀರ್ಥರ ಕಾಲವನ್ನು ಕ್ರಿ.ಶ 1410-1450 ಎಂದು ಹೇಳುತ್ತಾರೆ. ಮತ್ತೆ ಕೆಲವರು ಕ್ರಿ.ಶ 1436 ರಲ್ಲಿ ನಿರ್ಯಾಣ ಹೊಂದಿದರು ಎಂದು ಹೇಳುತ್ತಾರೆ. 

ವಿಜಯಧ್ವಜತೀರ್ಥರಿಗೆ ಸಂಬಂಧಿಸಿದ, ಯಾವುದೇ ವಿವಾದಗಳಿಗೆ ಅವಕಾಶ ನೀಡಿದಿರುವ, ಪ್ರಾಚೀನ ದಾಖಲೆಗಳನ್ನು ನೋಡಿದಾಗ ಈ ಯಾವ ಪಕ್ಷಗಳೂ ಸರಿಯಲ್ಲ ಎಂದು ತಿಳಿಯುತ್ತದೆ. 

ಅಷ್ಟೇ ಅಲ್ಲದೆ ವಿಜಯಧ್ವಜತೀರ್ಥರು ಈ ವರ್ಷದಿಂದ ಈ ವರ್ಷದವರೆಗೂ ಇದ್ದರು ಎಂದು ನಿರ್ಣಯಿಸುವುದು ಪ್ರಾಯ: ಅಸಾಧ್ಯ. ನಿರ್ದುಷ್ಟ ದಾಖಲೆಗಳು ಸಿಗುವುದಿಲ್ಲ. ಸಿಗುವ ದಾಖಲೆಗಳಲ್ಲಿ ನಿರ್ದುಷ್ಟತೆ ಇಲ್ಲ. ಹಾಗಾಗಿ ಕೇವಲ ಯಾವ ಶತಮಾನದಲ್ಲಿ ಇದ್ದರು ಯಾರ ಕಾಲದಲ್ಲಿದ್ದರು ಎಂಬ ಸ್ಥೂಲವಾದ ಆದರೆ ನಿಖರವಾದ ನಿರ್ಣಯವನ್ನು ಮಾಡಬಹುದು. 

ಇಲ್ಲಿಯವರೆಗೂ ಎಲ್ಲರೂ ೧೫ ನೇ ಶತಮಾನವೇ ವಿಜಯಧ್ವಜತೀರ್ಥರ ಕಾಲ ಎಂದು ಭಾವಿಸಿದ್ದರು. ಆದರೆ ಪ್ರಾಚೀನ ದಾಖಲೆಗಳನ್ನು ನೋಡಿದಾಗ ೧೪ ನೇ ಶತಮಾನವು ವಿಜಯಧ್ವಜತೀರ್ಥರ ಕಾಲ ಎಂದು ಸಿದ್ಧವಾಗುತ್ತದೆ.

ಅವುಗಳನ್ನು ಇಲ್ಲಿ ನೋಡೋಣ.
_______

ಆಧಾರ-೧

ವಿಜಯಧ್ವಜತೀರ್ಥರ ಶಾಸನ

ಬಿ ಎನ್ ಕೆ ಶರ್ಮಾ ಅವರು ತಮ್ಮ 'ದ್ವೈತವೇದಾಂತ ವಾಙ್ಮಯ ಹಾಗೂ ಇತಿಹಾಸ' ಎಂಬ ಪುಸ್ತಕದಲ್ಲಿ ವಿಜಯಧ್ವಜತೀರ್ಥರಿಗೆ ಸಂಬಂಧಿಸಿದ, ಚಿತ್ರಾಪುರದ ದುರ್ಗಾದೇವಾಲಯದ ಶಾಸನವೊಂದನ್ನು ಉಲ್ಲೇಖಿಸಿ "ಆ ಶಾಸನದ ಪ್ರಕಾರ ಕ್ರಿ.ಶ 1336 ರಲ್ಲಿ ವಿಜಯಧ್ವಜತೀರ್ಥರು ದುರ್ಗಾಮಂದಿರವನ್ನು ನಿರ್ಮಿಸಿದರೆಂದು ತಿಳಿದು ಬರುತ್ತದೆ" ಎಂದು ದಾಖಲಿಸಿದ್ದಾರೆ. 

ಸೋಜಿಗವೆಂದರೆ ಬಿಎನ್ಕೆ ಶರ್ಮಾ ಅವರು ತಮ್ಮ ಆಚಾರ್ಯರ ಕಾಲ ನಿರ್ಣಯದ ಅಭಿಪ್ರಾಯಕ್ಕೆ ಬಾಧಕವಾಗುತ್ತದೆ ಎಂಬ ಕಾರಣದಿಂದ ಈ ಶಾಸನವನ್ನು ಆಧರಿಸಬಾರದು ಎಂದು ಹೇಳಿದ್ದಾರೆ. ಇದು ಸರಿಯಾದ ಶೋಧನೆ ಆಗಲಾರದು. 

ದುರಂತವೆಂದರೆ ಬಿ ಎನ್ಕೆ ಶರ್ಮಾ ಅವರು ಆ ಶಾಸನದ ಸಂಖ್ಯೆಯನ್ನಾಗಲಿ, ಅದರ ಪೂರ್ಣಪಾಠವನ್ನಾಗಲಿ, ಅದಿರುವ ನಿಖರವಾದ ಸ್ಥಳವನ್ನಾಗಲಿ ಹೇಳಿಲ್ಲ. ಈಗ ಆ ಶಾಸನದ ಬಗ್ಗೆ ಬೇರೆ ಯಾವುದೇ ಮಾಹಿತಿ (ನನಗೆ) ಸಿಗುತ್ತಿಲ್ಲ. 

ಆದರೂ 'ಬಿ ಎನ್ ಕೆ ಶರ್ಮಾ ಅವರು ಭಿನ್ನವಾದ ಆಲೋಚನೆಗಳನ್ನು ಮಾಡಿದರೂ ಶಾಸನಗಳ ವಿಷಯದಲ್ಲಿ ಮೋಸ ಮಾಡುವುದಿಲ್ಲ' ಎಂಬ ಅನೇಕರ ಅಭಿಪ್ರಾಯವನ್ನು ಅವಲಂಬಿಸಿ, ವಿಜಯಧ್ವಜತೀರ್ಥರ ಹಾಗೂ ಚಿತ್ರಪುರದುರ್ಗಾಲಯದ ಸಂಬಂಧವನ್ನು ಅವಲಂಬಿಸಿ, ಮುಖ್ಯವಾಗಿ ಚಿತ್ರಾಪುರಮಠದ ವರದತೀರ್ಥರ ಶಾಸನಗಳಿಗೆ ಹೆಚ್ಚು ಸಂವಾದಿಯಾಗಿದೆ ಎಂಬ ಕಾರಣಗಳಿಂದ ೧೩೩೬ ರ ಶಾಸನವನ್ನು ಪ್ರಾಮಾಣಿಕವೆಂದು ಪರಿಗಣಿಸಲಾಗಿದೆ. ಇದರ ಬಗ್ಗೆ ಹೆಚ್ಚಿನ ವಿಚಾರಕ್ಕೆ ಅವಕಾಶವಿದೆ.

ಒಟ್ಟಿನಲ್ಲಿ ಈ ಶಾಸನದ ಪ್ರಕಾರ ವಿಜಯಧ್ವಜತೀರ್ಥರು 1336 ರಲ್ಲಿಯೇ ಪ್ರಭಾವಶಾಲಿಗಳಾಗಿದ್ದರು ಎಂದು ತಿಳಿಯುತ್ತದೆ. ಹೀಗಿರುವಾಗ 15ನೆ ಶತಮಾನ ಅವರ ಕಾಲ ಎಂದು ತಿಳಿಯುವುದು ತಪ್ಪಾಗುತ್ತದೆ.

ಒಂದು ವೇಳೆ ಈ ಶಾಸನವು ಅಪ್ರಮಾಣಿಕವಾಗಿದ್ದರೂ ಮುಂದೆ ನಿರೂಪಿಸುವ ದಾಖಲೆಗಳಿಂದ ವಿಜಯಧ್ವಜತೀರ್ಥರ ಕಾಲವು 14 ನೆ ಶತಮಾನ ಎಂದೆ ಸಿದ್ಧವಾಗುತ್ತದೆ.
_______

ಆಧಾರ-೨

ಚಿತ್ರಾಪುರಮಠದ ವರದತೀರ್ಥರ ಶಾಸನ

ವಿಜಯಧ್ವಜತೀರ್ಥರಿಂದ ಪ್ರವರ್ತಿತವಾದ ಚಿತ್ರಾಪುರಮಠದಲ್ಲಿ ವಿಜಯಧ್ವಜತೀರ್ಥರಿಂದ ಐದನೇ ಯತಿಗಳು ವರದತೀರ್ಥರು. ಈ ವರದತೀರ್ಥರಿಗೆ ವಿಜಯನಗರದ ಅರಸರು ಅನೇಕ ದಾನಗಳನ್ನು ನೀಡಿದ ಶಾಸನಗಳು ಚಿತ್ರಾಪುರಮಠದಲ್ಲಿ ಇಂದಿಗೂ ಸುರಕ್ಷಿತವಾಗಿ ದಾಖಲಾಗಿವೆ. 

ವರದತೀರ್ಥರಿಗೆ ಸಂಬಂಧಿಸಿದ ಮೂರು ಶಾಸನಗಳಲ್ಲಿ ಮೊದಲ ಶಾಸನ ಕ್ರಿ.ಶ 1398 ರದ್ದು. ಎರಡನೆ ಶಾಸನ ಕ್ರಿ.ಶ 1405ರದ್ದು. ಮೂರನೆಯ ಶಾಸನ 1415ರದ್ದು. 

ಈ ಶಾಸನಗಳು ಅತ್ಯಂತ ನಿರವಕಾಶವಾಗಿ ನಿರ್ದುಷ್ಟವಾಗಿದ್ದು ಪ್ರಬಲವಾಗಿವೆ. ಬಿ ಎನ್ ಕೆ ಶರ್ಮಾ ಮೊದಲಾವರ ಪ್ರಕಾರ ಈ ಎಲ್ಲ ಶಾಸನಗಳು ಮುಗಿದ ಮೇಲೆ ವಿಜಯಧ್ವಜತೀರ್ಥರ ಕಾಲ ಎಂದಾಗುತ್ತದೆ. ಇದು ಅಸಂಭಾವಿತ ಹಾಗೂ ಹಾಸ್ಯಾಸ್ಪದ.

ಹಾಗಾಗಿ ವರದತೀರ್ಥರ 1398ರ ಶಾಸನದ ಆಧಾರದಲ್ಲಿ ವರದತೀರ್ಥರಿಗೂ ವಿಜಯಧ್ವಜತೀರ್ಥರಿಗೂ ಮಧ್ಯದಲ್ಲಿ ಮೂರು ಯತಿಗಳ ಅಂತರವಿರುವುದರಿಂದಲೂ ಕನಿಷ್ಠ ಪಕ್ಷ "1360ರ ಮೊದಲು ವಿಜಯಧ್ವಜತೀರ್ಥರಿದ್ದರು. ಅವರು ಆಗಲೇ ಚಿತ್ರಾಪುರಮಠದಲ್ಲಿ ದುರ್ಗೆಯನ್ನು ಸ್ಥಾಪಿಸಿದ್ದರು" ಎಂದು ತಿಳಿಯುತ್ತದೆ.

ಹೀಗೆ ಪ್ರಬಲವಾದ ಈ ಶಾಸನದ ಆಧಾರದಲ್ಲಿ ಕ್ರಿ.ಶ ೧೩೫೦ರ ಆಸುಪಾಸು ಅಂದರೆ ೧೪ ನೆ ಶತಮಾನವೆ ವಿಜಯಧ್ವಜತೀರ್ಥರ ಕಾಲ ಎಂದು ಸಿದ್ಧವಾಗುತ್ತದೆ.

ಒಟ್ಟಿನಲ್ಲಿ ಸ್ಥೂಲವಾಗಿ ಹೇಳುವುದಾದರೆ ೧೩೩೫ರಿಂದ ೧೩೬೦ (ಈ ಸಂಖ್ಯೆಯಲ್ಲಿ ಹೆಚ್ಚುಕಡಿಮೆ ಇರಬಹುದು) ಅಂದರೆ ನಿಖರವಾಗಿ ೧೪ ನೇ ಶತಮಾನವು ಅಂದರೆ ಹೆಚ್ಚು ಕಡಿಮೆ ಟೀಕಾಕೃತ್ಪಾದರ ಕಾಲವೆ ವಿಜಯಧ್ವಜತೀರ್ಥರ ಕಾಲ ಎಂದು ನಿರ್ಣಯವಾಗುತ್ತದೆ.

ವಿಜಯಧ್ವಜತೀರ್ಥರ ಬಗ್ಗೆ ಮತ್ತಷ್ಟು ಚರಿತ್ರೆಯನ್ನು ಮುಂದಿನ ಭಾಗದಲ್ಲಿ ನೋಡೋಣ.

ಶ್ರೀನಿವಾಸ ಕೊರ್ಲಹಳ್ಳಿ
***
.


No comments:

Post a Comment