Saturday, 1 June 2019

raghupriya teertharu 2 kudli 2010 ? matha kudli mutt yati 28 pushya shukla trayodashi ರಘುಪ್ರಿಯ ತೀರ್ಥರು ಕೂಡಲೀ



madhyaradhane 19 January 2019 - Sri Raghupriya Theertharu  pushya shuddha trayOdashI is the ArAdhane of shri raghupriya tIrtharu of kUDali akshObhya maTa.

parampare: kUDali akshObhya maTa, #32 28? check
Ashrama gurugaLu: shri raghupramati tIrtharu
Ashrama shishyaru: shri raghuvijaya tIrtharu, present pITAdhipathi
Vrundavana: kUDali

raghupramati satputram satpramoda bahupriya |
ajAtshatrum tam vande raghupriya gurum sada ||

The Senior Pontiff HH Shri 1008 Shri Raghupriya Theertharu took over the pontificate of Shri Kudli Mutt under his Vidhya Guru of Uttaradi Mutt HH Shri Sathyapramoda Theertharu on 27 February 1987, about 3 decades ago.


HH Shri Raghupriya Theertharu in 2008 was in advanced age of 94 years but continued to lead the Mutt and had performed Shri Ramadevara Pooje with atmost bhakti and vyragya. HH Shri Raghupriya Theertharu was a senior official in the Agricultural department and was known is his poorvashrama days as Pt. Narayanachar Galagali. HH Shri Raghupriya Theertharu is an exemplary orator and known to have performed several miracles and has a very huge following in Bijapur, Bagalkote areas.

HH Shri Raghupriya Theertharu’s shishya is HH Shri Raghu Vijaya Theertharu and the Junion Pontiff of the Shri Kudli Mutt, who in his pre-pontiff days held B.Tech, MBA and LLB degrees and was a successful professional working out of Mumbai. But HH Shri Raghu Vijaya Theertharu was highly overcome and influenced by the senior poniff HH Shri Raghupriya Theertharu and immediately gave up loukika life and studied Sudha under HH Shri Raghupriya Theertharu and was made a pontiff to lead the Kudli Mutt in the future and he was rechristened HH Shri Raghuvijaya Theertharu.

shri raghupriya tIrtha guruvAntargata, bhAratiramaNa mukhyaprANAntargata, sItA pate shri vaikunTa rAma dEvara pAdAravindakke gOvinda gOvinda...

shri krishnArpaNamastu

***
ಪುಷ್ಯ ಶುಕ್ಲ ತ್ರಯೋದಶಿ

ರಘುಪ್ರಮತಿ ಸತ್ಪುತ್ರಂ ಸತ್ಯಪ್ರಮೋದ ಬಹುಪ್ರಿಯಂ/ 
ಅಜಾತಶತ್ರುಮ್ ತಂ ವಂದೇ ರಘುಪ್ರಿಯ ಗುರುಮ್ ಸದಾ//

ಶ್ರೀ ಕೂಡ್ಲಿ ಅಕ್ಷೋಭ್ಯತೀರ್ಥ ಮಠದ ಯತಿಗಳಾದ ಶ್ರೀ ರಘುಪ್ರಿಯತೀರ್ಥರ ಆರಾಧನಾ ಮಹೋತ್ಸವ ಇಂದು ಕೂಡ್ಲಿ ಕ್ಷೇತ್ರದಲ್ಲಿ....

ಶ್ರೀ ಯತಿಗಳ ಅನುಗ್ರಹ  ನಮ್ಮ ಸಮೂಹದ ಸದಸ್ಯರೆಲ್ಲರಮೇಲಿರಲೆಂದು ಅವರಲ್ಲಿ ಪ್ರಾರ್ಥನೆ ಮಾಡುತ್ತಾ..
ಇವರ ಕುರಿತಾದ ಲೇಖನ ನನ್ನ ಆತ್ಮೀಯ ತಮ್ಮ  ಶ್ರೀ ಗೋಪಾಲ್ ಕಟಗೇರಿ⁩ ಬರೆದದ್ದು

👇🏽👇🏽👇🏽👇🏽👇🏽👇🏽👇🏽👇🏽

 ಪ್ರಾತಃಕಾಲ ಮಲಾಪಹಾರಿ ನದಿ ತೀರ ಒಬ್ಬ ಜ್ಞಾನ ವೃದ್ಧರು, ವಯೋ ವೃದ್ಧರು ತಮ್ಮ ಶಿಷ್ಯರಿಗೆ ಅರಳಿಕಟ್ಟಿಯ ಮೇಲೆ ಕುಳಿತು ಶ್ರೀಮನ್ಯಾಯಸುಧಾ ಪಾಠ ಹೆಳುತ್ತಿದ್ದಾರೆ.
ಆಗ ಇಬ್ಬರು ಕುದುರೆ ಸವಾರರು ಚಿಲಕತ್ತು,ಶಿರಸ್ತ್ರಾಣ, ಖಡ್ಗ ಇತ್ಯಾದಿಗಳನ್ನು ಧರಿಸಿಕೊಂಡು ತಮ್ಮ ಸೈನಿಕರೊಂದಿಗೆ ಅದೇ ಮಾರ್ಗದಲ್ಲಿ ಬರುತ್ತಿದ್ದಾರೆ. 
ಆಶ್ರಮದ ಮುಂದೆ ಬಂದಾಗ ಆ ತಪಸ್ವಿಗಳ ತೇಜಸ್ಸನ್ನು ಕಂಡು‌ ಆರ್ಕಷಿತರಾಗಿ ಅವರಿಗೆ ನಮಸ್ಕಾರ ‌ಮಾಡುತ್ತಾರೆ. ಪದ್ಧತಿಯಂತೆ ವಿಚಾರಿಸುತ್ತಾರೆ. ಯಾರು ನೀವು? ಎಲ್ಲಿಂದ ಬಂದಿರಿ? ಎಲ್ಲಿಗೆ ಪ್ರಯಾಣ?
ಆ ಕುದರೆ ಸವಾರ ಹೇಳುತ್ತಾನೆ ನನ್ನ ಹೆಸರು ಶ್ರೀಪತಿರಾಯ ಹಾಗೂ ನನ್ನ ತಮ್ಮ ನರಸಿಂಗರಾಯ,ಬ್ರಾಹ್ಮಣರು, ವಿಜಾಪುರದ ಸುಲ್ತಾನನ ‌ಸೇನಾನಿಗಳು. ಯುದ್ದಕೊಸ್ಕರ ಹೊರಟಿದ್ದೆವೆ.
ಪುನಃ ಪ್ರಶ್ನೆ: ಈ ಚಿಲಕತ್ತು ಹಾಗೂ ಶಿರಸ್ತ್ರಾಣಗಳು??
ಕುದುರೆ ಸವಾರರು: ಶತ್ರುಗಳಿಂದ ರಕ್ಷಿಸಿಕೊಳ್ಳಲು.
ಆಗ ಗುರುಗಳು ಹೆಳುತ್ತಾರೆ ಬಾಹ್ಯ ಶತ್ರುಗಳಿಂದ ರಕ್ಷಿಸಿಕೊಳ್ಳಲು ಒಳ್ಳೆಯ ಉಪಾಯ‌ ಮಾಡಿದ್ದಿರಿ ಆದರೆ ಆಂತರಿಕ ಶತ್ರುಗಳಾದ ಕಾಮಕ್ರೋಧಾದಿಗಳಿಂದ ರಕ್ಷಿಸಿಕೊಳ್ಳಲು ಎನು ಉಪಾಯ ಮಾಡಿದ್ದಿರಿ? ಇಷ್ಟೇ ಸಾಕು ಆ ಕುದುರೆ ಸವಾರರ ಕಣ್ಣು ತೆರೆಯಲು. ಕೂಡಲೆ ಎಲ್ಲ ಆಯುಧಗಳನ್ನು ಬದಿಗಿಟ್ಟು ಮಹನೀಯರ ಪಾದಕ್ಕೆರೆಗಿ ಉದ್ದಾರ ಮಾಡಿ ಎಂದು ಬೇಡಿಕೊಂಡರು. ಗುರುಗಳು ಅವರ ಮೇಲೆ ಕೃಪಾ ದೃಷ್ಟಿ ಬೀರಿದರು. ಹೀಗೆ ಅನುಗ್ರಹ ಮಾಡಿದವರೇ ಮಹಾನುಭಾವರಾದ ಶ್ರೀ ಯಾದವಾರ್ಯರು. ಇಬ್ಬರು ಕುದುರೆ ಸವಾರರನ್ನು ತಮ್ಮ ಗುರುಗಳಾ ಉತ್ತರಾದಿ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರಿಂದ ವೈಷ್ಣವ ದೀಕ್ಷೆ ಕೊಡಿಸಿ ಅನುಗ್ರಹಿಸಿದರು.
ಇವರೆ ಗಲಗಲಿ ಮನೆತನದ ಮೂಲ ಪುರುಷರು.
ಇದೇ ಗಲಗಲಿ‌ ಮನೆತನದಲ್ಲಿ ಶ್ರೀ ಸತ್ಯಧ್ಯಾನರ ಪ್ರಿಯ ಶಿಷ್ಯರಾದ ಮಧ್ವಾಚಾರ್ಯ ಹಾಗೂ ಜೀವುಬಾಯಿ ಅವರ ಮೂರನೇ ಪುತ್ರರೇ ನಾರಾಯಣಾಚಾರ್ಯರು. ಇಂದಿನ ಕಥಾ ನಾಯಕರು.
ಬಾಲ್ಯ ಕರ್ಜಗಿಯಲ್ಲಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಇವರ ಒಡನಾಟ ಗುತ್ತಲ ಗುರುರಾಜ ಆಚಾರ್ಯರ( ಶ್ರೀ ಸತ್ಯಪ್ರಮೋದ ತೀರ್ಥರ ಪೂರ್ವಾಶ್ರಮ) ಜೊತೆ. ಇಬ್ಬರದೂ ಒಂದೆ ಮಂಟಪದಲ್ಲಿ ಉಪನಯನ. ಮುಂದೆ ಧಾರವಾಡದ ಕಡೆ ಪಯಣ.
ಲೌಕಿಕ ವಿದ್ಯಾಭ್ಯಾಸ ಜೊತೆ ಪ್ರಕಾಂಡ ಪಂಡಿತರಾದ ತಂದೆಯವರಿಂದಲೆ ಶ್ರೀಮದಾಚಾರ್ಯರ ಗ್ರಂಥಗಳ ಅಮೂಲಾಗ್ರ ಪಾಠ.
ಮುಂದೆ ಹಾವನೂರು ವೇಂಕಟರಾಯರ ಪುತ್ರಿ ಕೃಷ್ಣಾಬಾಯಿ ಅವರೊಂದಿಗೆ ಸಂಸಾರ ಜೀವನಕ್ಕೆ ಕಾಲಿಟ್ಟರು.
ದೂರದ ಪುಣೆಯಲ್ಲಿ ಕೃಷಿ ಇಲಾಖೆಯಲ್ಲಿ ಉದ್ಯೋಗ. ಅರ್ಜಿ ಹಾಕದೆ ಬಂದ ಕೆಲಸ. ಆಫಿಸನಲ್ಲಿ ಮಾತ್ರ ಸರಕಾರಿ ಕೆಲಸ ಅದರ ಮೊದಲು ಬೆಳಿಗ್ಗೆ ೪ ರಿಂದ ೮ ವರೆಗೆ ಸಾಯಂಕಾಲ ೭ ರಿಂದ ೧೦ರ ವರೆಗೂ ಪಾಠ.ಸಚ್ಛಾಸ್ತ್ರ ಚಿಂತನ,ಗ್ರಂಥಾವಲೋಕನ ಇದರಲ್ಲಿಯೇ ಕಾಲಕ್ಷೇಪ. ಒಂದು ಕ್ಷಣವೂ ವ್ಯರ್ಥ ಕಾಲಹರಣ ಮಾಡುತ್ತಿರಲಿಲ್ಲ‌.
ಸರಕಾರಿ ಕೆಲಸದಲ್ಲೆ ಪುಣೆ ಅಲ್ಲದೆ. ವಿಜಾಪುರ,ಬಾಗಲಕೋಟೆ, ಗುಲಬುರ್ಗಾ, ಬೆಂಗಳೂರು ಮುಂತಾದ ನಗರಗಳಲ್ಲಿ ಇದ್ದಾಗ ಅಲ್ಲಿಯ ಸುಜೀವಿಗಳನ್ನು ಹುಡುಕಿ, ಅವರ ಅಜ್ಞಾನವನ್ನು ತೊಳೆದು ಅವರನ್ನು  ಶ್ರೀ ಮಧ್ವಾಚಾರ್ಯರ ಗ್ರಂಥದಲ್ಲಿ ಪರಿಚಯ ಮಾಡಿಸಿ ಅವರನ್ನು ಸನ್ಮಾರ್ಗದಲ್ಲಿ ಇರುವಂತೆ ಪರಿವರ್ತನೆ ಮಾಡುವದೆ ಕಾಯಕವಾಗಿ ಇಟ್ಟುಕೊಂಡಿದ್ದರು. ಈಗಲೂ ಆ ಪ್ರದೇಶದಲ್ಲಿ ಇವರಿಂದ ಉಪಕೃತರಾದವರು ಇನ್ನೂ ಇದ್ದಾರೆ. ಅವರಲ್ಲಿ ನಮ್ಮ ಮಾತಾಮಹ. ಪಂ ಭೀಮಸೇನ ಆಚಾರ ವಡವಿ ಅವರೂ ಒಬ್ಬರು.
1/1/1987 ಶ್ರೀ ಸತ್ಯಪ್ರಮೋದ ತೀರ್ಥರು ಸವಣೂರು ಸತ್ಯಭೋಧ ತೀರ್ಥರ ದರ್ಶನ ಮುಗಿಸಿ ಮರುಳಿ ಹೊಗುವಾಗ ಸಿಡಿಲು ಬಡೆದಂತೆ ಸುದ್ದಿ ಬಂತು ತಮ್ಮ ಪರಮ ಶಿಷ್ಯ ಶ್ರೀ ರಘುಪ್ರಮತಿ ತೀರ್ಥರು ಇಹ ಲೋಕವನ್ನು ತ್ಯಜಿಸಿದರು. ಕೂಡಲೆ ಅವರು ಹೋಗಿ ಸತ್ಯಭೋದ ಸ್ವಾಮಿಗಳ ವೃಂದಾವನಕ್ಕೆ ಹೊಗಿ ಬಹಳ ಹೊತ್ತು ಬಾಗಿಲ ಹಾಕಿಕೊಂಡು ಕುಳಿತುಕೊಂಡರು. ಆಗ ಸತ್ಯಭೋಧ ಸ್ವಾಮಿಗಳ ಸೂಚಿಸಿದ ಹೆಸರೇ ಈಗಿನ ಕಥಾ ನಾಯಕರಾದ ಗಲಗಲಿ ನಾರಾಯಣ ಆಚಾರ್ಯರು...

ಫೆಬ್ರವರಿ ೨೭ ೧೯೮೭( ಮಾಘ ಶುದ್ಧ ದ್ವಿತಿಯಾ) ಅನೇಕ ಪಂಡಿತರು ಪಿಠಾಕಾಂಕ್ಷಿಗಳಾಗಿದ್ದರು ಅದೃಷ್ಟ ಲಕ್ಷ್ಮೀ ಗಲಗಲಿ ನಾರಾಯಣ ಆಚಾರ್ಯರಿಗೆ ಒಲಿದು ಬಂದಿದ್ದಳು.
ಖಜುರಿ (ಗುಲ್ಬರ್ಗಾ ಜಿಲ್ಲೆ) ಸತ್ಯಪ್ರಮೋದ ತೀರ್ಥರ ಪರಮಾನುಗ್ರಹಕ್ಕೆ ಪಾತ್ರರಾಗಿ ರಘುಪ್ರಿಯ ತೀರ್ಥರು ಜನ್ಮ ತಾಳಿದರು.
ಆಶ್ರಮ ಪೂರ್ವದಲ್ಲಿ ಇವರು ಬಹಳ ಸೂಕ್ಷ್ಮ ಪ್ರಕೃತಿಯ ಸ್ವಭಾವದವರು...ಇಂಥವರು ಹೇಗೆತಾನೆ ಕಠಿಣ ಸನ್ಯಾಶ್ರಮ ನಡೆಸಿಯಾರು ಎಂದು ಎಲ್ಲರೂ ವಿಚಾರಮಾಡಿದರು.. ಆದರೆ ಸತ್ಯಪ್ರಮೋದ ತೀರ್ಥರು ಪರಮಾನುಗ್ರಹದ ರಕ್ಷಾ ಕವಚ ಧರಿಸಿದ ರಘುಪ್ರಿಯ ತೀರ್ಥರು ಪ್ರತಿನಿತ್ಯ ಸೀತಾ ಸಮೇತ ವೈಕುಂಠ ರಾಮದೇವರನ್ನು ಕಠಿಣ ವೃತ‌ನಿಯಮಗಳೊಂದಿಗೆ ಪೂಜಿಸಿದರು. ಕೂಡಲಿ‌ ಮಠದ ಪರಂಪರೆಯಲ್ಲಿ ಮೊದಲಬಾರಿಗೆ ಆಸೆತು ಹಿಮಾಚಲ ಯಾತ್ರೆ ಮಾಡಿದ ಕೀರ್ತಿ ರಘುಪ್ರಿಯ ತೀರ್ಥರಿಗೆ ಸಲ್ಲುತ್ತದೆ. ಶ್ರೀ ರಘುಪ್ರಿಯ ತೀರ್ಥರು ಗ್ರಾಮೈಕ ರಾತ್ರಿ ಸಂಚಾರ ಮಾಡುತ್ತಾ ಇಡಿ ಭಾರತದಲ್ಲಿ ಭಕ್ತರ ಉದ್ದಾರ ಮಾಡಿದ್ದಾರೆ. ವಿಶೇಷ ಎನೆಂದರೆ ಇವರು‌ ವಾಯುಸ್ತುತಿ ರತಿ ಪ್ರಿಯರು ಭಕ್ತರು ಯಾವುದೇ ರೀತಿಯ ಸಮಸ್ಯೆಯ ಪರಿಹಾರಕ್ಕೆ ಸ್ವಾಮಿಗಳ ಹತ್ತಿರ ಬಂದರೆ ಅವರು.. ವಾಯುಸ್ತುತಿ ಬರತದೊ ಇಲ್ಲೊ ಹ್ಮ ತತ್ವಜ್ಞಾನ ಶ್ಲೋಕ ಅನ್ನು ಕೂಸು ಎಂದು ವಾಯುಸ್ತುತಿಯಿಂದ ಅಭಿಮಂತ್ರಿಸಿ ಮಂತ್ರಾಕ್ಷತೆ ಕೊಟ್ಟು ಭಕ್ತರ ಉದ್ದಾರ ಮಾಡಿದ್ದಾರೆ.
ಅಪಾರ ಶಿಷ್ಯ ವಾತ್ಸಲ್ಯರಾದ  ಸ್ವಾಮಿಗಳಲ್ಲಿ ಲೌಕಿಕ, ಪರಮಾರ್ಥಿಕ ಬೇಡಿಕೆ ಇಟ್ಟು ಬಂದವರು‌ ಎಂದೂ ಬರಿಗೈಯಲ್ಲಿ ಹೊದದ್ದೆ ಇಲ್ಲ.
ಸಂತಾನ, ಪ್ರೇತ ಭಾಧೆ, ಉದ್ಯೊಗ ಲಾಭ, ಜಮಿನು ಆಸ್ತಿಗಳಲ್ಲಿ ಲಾಭ ಹಿಗೆಯೆ ಅನೇಕ ಜನರು ಇವರಿಂದ ಅನುಗ್ರಹಿತರಾಗಿದ್ದಾರೆ.
ಅವರ ಅನುಗ್ರಹಕ್ಕೆ ನಾನೇ ಜೀವಂತ ಸಾಕ್ಷಿ.. 
ಈಗ ಧರ್ಮಾನುಷ್ಠಾನಕ್ಕೆ ಸಹಾಯವಾಗುವ ಉದ್ಯೋಗದಲ್ಲಿ ಇದ್ದನೆ. ಎಂದರೆ ಇದು ಶ್ರೀ ರಘುಪ್ರಿಯ ತೀರ್ಥರ ವಿಶೇಷ ಅನುಗ್ರಹವೇ...

ಶಿವಮೊಗ್ಗ ಹಾಗೂ ಕೂಡಲಿಯಲ್ಲಿ ಶಿಥಿಲವಾದ ಮಠದ ಕಟ್ಟಡವನ್ನು ಸಂಪೂರ್ಣ ನವಿಕರಿಸಿದರು. ಇಡೀ ಭಾರತದಾದ್ಯಂತ ಸಂಚಾರ ಮಾಡುತ್ತಾ ಮಧ್ವಮತದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಹಾರಿಸಿದರು.
ಪ್ರತಿ ವರ್ಷವೂ ತಮ್ಮ ಗುರುಗಳ ಮಹಾ ಸಮಾರಾಧೆಯನ್ನು ಅತೀ ವಿಜೃಂಭಣೆಯಿಂದ ಮಾಡುತ್ತಿದ್ದರು. ಪಂಡಿತರ ಪೊಷಣೆ. ಅಲ್ಲಲ್ಲಿ ಇರುವ ಜ್ಞಾನ‌ಪಿಪಾಸುಗಳನ್ನು ಹುಡುಕಿ ಅವರಿಗೆ ಶ್ರೀಮನ್ಮಧ್ವಾಚಾರ್ಯರ ಗಂಥಗಳ ಪಾಠ.ಶ್ರವಣ,ಮನನ ಮಾಡಿಸುತ್ತಿದ್ದರು. ಇವರ ಒಂದು ವೈಷಿಷ್ಠ್ಯ ಅಂದರೆ ಶಿಷ್ಯರಿಗೆ ಪಾಠ ಹೆಳಿಕೊಟ್ಟು ಗ್ರಂಥದ ಮಂಗಳ ಮಾಡುವಾಗ ಪಾಠ ಓದಿದ ಪ್ರತಿಯೊಬ್ಬರಿಂದ ಕಡ್ಡಾಯವಾಗಿ ಅನುವಾದ ಮಾಡಿಸುತ್ತಿದ್ದರು.
ಅಪಾರ ಶಿಷ್ಯ ವಾತ್ಸಲ್ಯ , ಅಜಾತ ಶತ್ರಗಳು. ಶ್ರೀ ಸತ್ಯಪ್ರಮೋದ ತೀರ್ಥರ ಹಾಗೂ ಶ್ರೀ ಸತ್ಯಾತ್ಮ ತೀರ್ಥರ ಅತ್ಯಂತ ಪ್ರಿತಿಪಾತ್ರರಾಗಿದ್ದರು.
ಮುಂದೆ ತಮ್ಮ ಅತ್ಯಂತ ಪ್ರೀತಿಯ ಶಿಷ್ಯರಾದ ಶ್ರೀ ರಘುವಿಜಯ ತೀರ್ಥರಿಗೆ ಪಟ್ಟಾಭಿಷೇಕ ಮಾಡಿದರು.
ಇಂತಹ ಮಹಾನ ಚೇತನವು 9.1.2009 ಪುಷ್ಯ ತ್ರಯೊದಶಿ ಕೂಡಲಿ ಕ್ಷೇತ್ರದಲ್ಲಿ ವೃಂದಾವನಸ್ಥರಾದರು.

ಇಂದಿಗೂ ಅವರು ವೃಂದಾವನದಲ್ಲಿದ್ದು ಅನೇಕರಿಗೆ ಅನುಗ್ರಹ ಮಾಡುತ್ತಿದ್ದಾರೆ. 
ಹಾಗೆಯೆ ಶ್ರೀ ರಘುವಿಜಯ ತೀರ್ಥರಲ್ಲಿದ್ದು ನಮಗೆ ನಿತ್ಯ ರಾಮ ದೇವರ ದರ್ಶನ ಪಾಠ ಸಜ್ಜನರ ಉದ್ದಾರ ಮಾಡಿಸುತ್ತಾದ್ದರೆ.

ಇಂತಹ ಮಹಾನ್ ತಪಸ್ವಿಗಳಾದ ಮಹಾಸ್ವಾಮಿಗಳು ನಮಗೆಲ್ಲರಿಗೂ ವಿಶೇಷವಾಗಿ ಜ್ಞಾನ ಭಕ್ತಿ ವೈರಾಗ್ಯಗಳನ್ನು ಕೊಟ್ಟು ಉದ್ದಾರ ಮಾಡಿರೆಂದು  ಅವರ ಚರಣ ಕಮಲಗಳಿಗೆ ನಮಸ್ಕಾರ ಮಾಡಿ ಅವರ, ಅವರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಲಕ್ಷ್ಮೀನಾರಸಿಂಹಾಭಿನ್ನ ಶ್ರೀ ಧನ್ವಂತರೀ ರೂಪೀ ಪರಮಾತ್ಮನ ಅನುಗ್ರಹ ಸದಾ ನಮಗಿರಲೆಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ.... 
Smt Padma Sirish
ಜೈ ವಿಜಯರಾಯ
ನಾದನೀರಾಜನದಿಂ ದಾಸಸುರಭಿ 🙏🏽
***



[9:26 AM, 1/19/2019] +91 95358 37843: ಶ್ರೀ ರಘುಪ್ರಿಯ ತೀರ್ಥರು...

ಫೆಬ್ರವರಿ ೨೭ ೧೯೮೭( ಮಾಘ ಶುದ್ಧ ದ್ವಿತಿಯಾ) ಅನೇಕ ಪಂಡಿತರು ಪಿಠಾಕಾಂಕ್ಷಿಗಳಾಗಿದ್ದರು ಅದೃಷ್ಟ ಲಕ್ಷ್ಮೀ ಗಲಗಲಿ ನಾರಾಯಣ ಆಚಾರ್ಯರಿಗೆ ಒಲಿದು ಬಂದಿದ್ದಳು.
ಖಜುರಿ (ಗುಲ್ಬರ್ಗಾ ಜಿಲ್ಲೆ) ಸತ್ಯಪ್ರಮೋದ ತೀರ್ಥರ ಪರಮಾನುಗ್ರಹಕ್ಕೆ ಪಾತ್ರರಾಗಿ ರಘುಪ್ರಿಯ ತೀರ್ಥರು ಜನ್ಮ ತಾಳಿದರು.
ಆಶ್ರಮ ಪೂರ್ವದಲ್ಲಿ ಇವರು ಬಹಳ ಸೂಕ್ಷ್ಮ ಪ್ರಕೃತಿಯ ಸ್ವಭಾವದವರು...ಇಂಥವರು ಹೇಗೆತಾನೆ ಕಠಿಣ ಸನ್ಯಾಶ್ರಮ ನಡೆಸಿಯಾರು ಎಂದು ಎಲ್ಲರೂ ವಿಚಾರಮಾಡಿದರು.. ಆದರೆ ಸತ್ಯಪ್ರಮೋದ ತೀರ್ಥರು ಪರಮಾನುಗ್ರಹದ ರಕ್ಷಾ ಕವಚ ಧರಿಸಿದ ರಘುಪ್ರಿಯ ತೀರ್ಥರು ಪ್ರತಿನಿತ್ಯ ಸೀತಾ ಸಮೇತ ವೈಕುಂಠ ರಾಮದೇವರನ್ನು ಕಠಿಣ ವೃತ‌ನಿಯಮಗಳೊಂದಿಗೆ ಪೂಜಿಸಿದರು. ಕೂಡಲಿ‌ ಮಠದ ಪರಂಪರೆಯಲ್ಲಿ ಮೊದಲಬಾರಿಗೆ ಆಸೆತು ಹಿಮಾಚಲ ಯಾತ್ರೆ ಮಾಡಿದ ಕೀರ್ತಿ ರಘುಪ್ರಿಯ ತೀರ್ಥರಿಗೆ ಸಲ್ಲುತ್ತದೆ. ಶ್ರೀ ರಘುಪ್ರಿಯ ತೀರ್ಥರು ಗ್ರಾಮೈಕ ರಾತ್ರಿ ಸಂಚಾರ ಮಾಡುತ್ತಾ ಇಡಿ ಭಾರತದಲ್ಲಿ ಭಕ್ತರ ಉದ್ದಾರ ಮಾಡಿದ್ದಾರೆ. ವಿಶೇಷ ಎನೆಂದರೆ ಇವರು‌ ವಾಯುಸ್ತುತಿ ರತಿ ಪ್ರಿಯರು ಭಕ್ತರು ಯಾವುದೇ ರೀತಿಯ ಸಮಸ್ಯೆಯ ಪರಿಹಾರಕ್ಕೆ ಸ್ವಾಮಿಗಳ ಹತ್ತಿರ ಬಂದರೆ ಅವರು.. ವಾಯುಸ್ತುತಿ ಬರತದೊ ಇಲ್ಲೊ ಹ್ಮ ತತ್ವಜ್ಞಾನ ಶ್ಲೋಕ ಅನ್ನು ಕೂಸು ಎಂದು ವಾಯುಸ್ತುತಿಯಿಂದ ಅಭಿಮಂತ್ರಿಸಿ ಮಂತ್ರಾಕ್ಷತೆ ಕೊಟ್ಟು ಭಕ್ತರ ಉದ್ದಾರ ಮಾಡಿದ್ದಾರೆ.
ಅಪಾರ ಶಿಷ್ಯ ವಾತ್ಸಲ್ಯರಾದ  ಸ್ವಾಮಿಗಳಲ್ಲಿ ಲೌಕಿಕ, ಪರಮಾರ್ಥಿಕ ಬೇಡಿಕೆ ಇಟ್ಟು ಬಂದವರು‌ ಎಂದೂ ಬರಿಗೈಯಲ್ಲಿ ಹೊದದ್ದೆ ಇಲ್ಲ.
ಸಂತಾನ, ಪ್ರೇತ ಭಾಧೆ, ಉದ್ಯೊಗ ಲಾಭ, ಜಮಿನು ಆಸ್ತಿಗಳಲ್ಲಿ ಲಾಭ ಹಿಗೆಯೆ ಅನೇಕ ಜನರು ಇವರಿಂದ ಅನುಗ್ರಹಿತರಾಗಿದ್ದಾರೆ.   ಮಧ್ಯಾರಾಧನೆ : - ಪುಷ್ಯ ಶುಕ್ಲ ತ್ರಯೋದಶಿ(ದಿನಾಂಕ : - 19/01/2019 ಇಂದು) . ವೃಂದಾವನ ಸ್ಥಳ : - ಶಿವಮೊಗ್ಗ ಸಮೀಪ ಇರುವ ತುಂಗಾಭದ್ರಾ ಸಂಗಮ ಸ್ಥಾನ ಕೂಡಲೀ ಕ್ಷೇತ್ರ.
by [9:27 AM, 1/19/2019] +91 95358 37843: shri gurubyO namaha, hari Om...

*****
check



No comments:

Post a Comment