ತಪಸ್ವಾಧ್ಯಾಯಶುಶ್ರೂಷಾ - ಕೃಷ್ಣ ಪೂಜಾರತಮ್ ಮುನಿಮ್ /
ವಿಶ್ವೇಶಮ್ ಇಷ್ಟದಂ ವಂದೇ ಪರಿವ್ರಾಟ್ ಚಕ್ರವರ್ತಿನಮ್//
Ashrama Shishya : Sri Viswaprasanna Theertha
Vrundavana : Bangalore - Vidyapeetha BSK III Stage
Aradhana : Margashira shukla triteeya
H. H. Sri Sri Vishvesha Tirtha Swamiji
| |
---|---|
Personal | |
Born |
Venkatrama
27 April 1931
Uppinangadi. (ramakunja)
|
Religion | Hinduism |
Order | Vedanta (Pejawara Matha) |
Founder of | Poornaprajna Vidyapeetha |
Philosophy | Dvaita Vedanta |
Religious career | |
Guru | Shri Vishvamanya Teertha Swamiji |
Website | Official website |
Honors | Yathikula Chakravarthy |
ತಪಸ್ವಾಧ್ಯಾಯಶುಶ್ರೂಷಾ - ಕೃಷ್ಣ ಪೂಜಾರತಮ್ ಮುನಿಮ್ /
ವಿಶ್ವೇಶಮ್ ಇಷ್ಟದಂ ವಂದೇ ಪರಿವ್ರಾಟ್ ಚಕ್ರವರ್ತಿನಮ್//
ನಾವು ಕಂಡ ಚೇತನರು, ಮಹಾನ್ ಭಕ್ತರು, ಸಮಾಜೋದ್ಧಾರಕ್ಕಾಗಿಯೇ ಜೀವನವನ್ನು ಅರ್ಪಿಸಿದವರು, ನಿರಂತರ ಶ್ರೀಕೃಷ್ಣ ಪಾದಾರಾಧಕರು, ಹಸನ್ಮುಖರು, ಜ್ಞಾನಿಕುಲತಿಲಕರು, ಪದ್ಮವಿಭೂಷಣರು, ಅಯೋಧ್ಯೆಯಲ್ಲಿ ರಾಮ ಮಂದಿರ ಬರಲು ತಮ್ಮ ಪರವಾದ ಕರ್ತವ್ಯವವನ್ನು ನಿರ್ವಹಿಸಿದವರು, ಐದು ಪರ್ಯಾಯಗಳ ಪರ್ಯಂತ ಉಡುಪಿಯ ಕಂದನ ಪೂಜೆ ಮಾಡಿದವರು, ಪರಮತಸಹನಮಾಡಿದವರು, ಆದ್ಯರು, ಯತಿಕುಲಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಗುರುಗಳ ಮೊದಲ ಆರಾಧನಾ ಮಹೋತ್ಸವ ಇಂದು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ. ಯಾರೆಲ್ಲಾ ದರ್ಶನ ಮಾಡಿ ಬರ್ತಾರೆಯೋ ನಮ್ಮದೂ ಒಂದು ನಮಸ್ಕಾರ ಹಾಕಿ ದಯವಿಟ್ಟು..
ಶ್ರೀ ಮಹಾನ್ ಯತಿಗಳಾದ ಶ್ರೀ ಕಂಬಾಲೂರು ರಾಮಚಂದ್ರ ತೀರ್ಥರ ಅನುಗ್ರಹದ ಜೊತೆಗೆ ಶ್ರೀ ವಿಶ್ವೇಶತೀರ್ಥ ಗುರುಗಳ ,ಅಂತರ್ಗತ ಪರಮಾತ್ಮನ ಅನುಗ್ರಹ ಸದಾ ಇರಲಿ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ ....
-Smt. Padma Sirish
ನಾದನೀರಾಜನದಿಂ ದಾಸಸುರಭಿ
***
16 December 2020 ·
" ಶ್ರೀ ವಿಶ್ವೇಶ - 1 "
" ಪ್ರಾತಃ ಸ್ಮರಣೀಯ ಪರಮಪೂಜ್ಯ ಪದ್ಮವಿಭೂಷಣ - ಡಾ ।। ಶ್ರೀ ವಿಶ್ವೇಶ ತೀರ್ಥರ ಸ್ಮರಣೆ "
ಆಚಾರ್ಯ ನಾಗರಾಜು ಹಾವೇರಿ " ವೆಂಕಟನಾಥ " ಮುದ್ರಿಕೆಯಲ್ಲಿ...
ವಿಶ್ವ ಮಾನ್ಯರೂ - ಶ್ರೀ ವಿಶ್ವೇಶ ತೀರ್ಥರು ।
ವಿಶ್ವ ವಂದ್ಯರೂ - ಶ್ರೀ ವಿಶ್ವೇಶ ತೀರ್ಥರು ।
ವಿಶ್ವ ಗುರು ಮಧ್ವರ ಸಾಮ್ರಾಜ್ಯದಿ ಶೋಭಿಪ ।
ವಿಶ್ವ ನಾಮಕ ವೆಂಕಟನಾಥಗೆ ಅತಿ ಪ್ರಿಯರು ।।
" ಪರಮಪೂಜ್ಯ ಶ್ರೀ ವಿಶ್ವೇಶ ತೀರ್ಥರ ಸಂಕ್ಷಿಪ್ತ ಮಾಹಿತಿ "
" ಹೆಸರು "
ಶ್ರೀ ವೆಂಕಟರಮಣಾ ಚಾರ್ಯ
" ತಂದೆ "
ಶ್ರೀ ನಾರಾಯಣಾಚಾರ್ಯ
" ತಾಯಿ "
ಸಾಧ್ವೀ ಕಮಲಮ್ಮ
ಜನನ : 27.04.1931
" ಸಂನ್ಯಾಸ "
ಕ್ರಿ ಶ 1938ರಲ್ಲಿ - ಶ್ರೀ ವ್ಯಾಸರಾಜ ಗುರುಸಾರ್ವಭೌಮರಿಂದ ಪ್ರತಿಷ್ಠಿತವಾದ - ಜೀವೋತ್ತಮರಾದ ಶ್ರೀ ಯಂತ್ರೋದ್ಧಾರಕ ಮುಖ್ಯಪ್ರಾಣದೇವರ ಪರಮ ಪವಿತ್ರವಾದ ಸನ್ನಿಧಾನದಲ್ಲಿ ಶ್ರೀ ವಿಶ್ವಮಾನ್ಯ ತೀರ್ಥರಿಂದ ಆಶ್ರಮ ಪ್ರದಾನ.
" ಆಶ್ರಮ ನಾಮ "
ಶ್ರೀ ವಿಶ್ವೇಶ ತೀರ್ಥರು
" ಆಶ್ರಮ ಶಿಷ್ಯರು "
ಶ್ರೀ ವಿಶ್ವ ಪ್ರಸನ್ನ ತೀರ್ಥರು
" ವೇದಾಂತ ಸಾಮ್ರಾಜ್ಯಾಧಿಕಾರ "
ಕ್ರಿ ಶ 1938 - 2019
" ವೃಂದಾವನ ಪ್ರವೇಶ "
ದಿನಾಂಕ : 29.12.2019 ಪುಷ್ಯ ಶುದ್ಧ ತೃತೀಯಾ ಭಾನುವಾರ
" ದ್ವೈತ ವೇದಾಂತ ಕೋವಿದ "
ಶ್ರೀ ಭಂಡಾರಕೇರಿ ಮಠದ ಪ್ರಾತಃ ಸ್ಮರಣೀಯ ಶ್ರೀ ವಿದ್ಯಾಮಾನ್ಯ ತೀರ್ಥರಲ್ಲಿ 12 ವರ್ಷ ಅಧ್ಯಯನ ಮಾಡಿ ನ್ಯಾಯ ವೇದಾಂತಾದಿ ಶಾಸ್ತ್ರಗಳಲ್ಲಿ ಅನ್ಯಾದೃಶವಾದ ಪಾಂಡಿತ್ಯ, ಪ್ರಭುತ್ವ, ಪ್ರವಚನ ಪಟುತ್ವ, ವಾಕ್ಯಾರ್ಥ ಪ್ರಾವೀಣ್ಯತೆ ಗಳ ನ್ನೂ ಪಡೆದ ಶ್ರೀ ವಿಶ್ವೇಶ ತೀರ್ಥರು ಇಂದಿನ ಮಾಧ್ವ ಸಮಾಜದ ಉದ್ಧಾರಕರು ಆಗಿದ್ದಾರೆಂದರೆ ಅತಿಶಯೋಕ್ತಿಯಲ್ಲ.
ಅವರ ಕಾರ್ಯ ಬಹು ಮುಖ.
ಅವರ ಜೀವನ ಅನಂತ ಮುಖ.
ಅವರ ದೃಷ್ಟಿ ವಿಶ್ವತೋ ಮುಖ.
ಸಮಾಜದೆಡೆಗೆ ಸರ್ವಾದಪಿ ಕರುಣೋನ್ಮುಖ.
ಶ್ರೀ ವಿದ್ಯಾಮಾನ್ಯ ತೀರ್ಥರ ವೇದಾಂತ ಗರಡಿಯಿಂದ ತಲೆಯಲ್ಲಿ ವೇದ ಶಾಸ್ತ್ರ ವಿದ್ಯಾ ಭಾರವನ್ನು ಹೊತ್ತು ಹೊರ ಬಂದ ಎಳೆವರಯದ ಶ್ರೀ ಶ್ರೀಗಳವರಿಗೆ ಸಮಾಜದ ವಿಕಟ ಚಿತ್ರವು ಕಣ್ಣೆದುರಿಗೆ ನಿಂತಿತು.
" ಸಮಾಜೋದ್ಧಾರ "
ಒಂದು ಕಡೆ ಆಂಗ್ಲ ವಿದ್ಯಾ ಪ್ರಭಾವದಿಂದ ಜಡವಾದ, ನಾಸ್ತಿಕವಾದ, ಭೌತವಾದದ ಕಡೆಗೆ ಸೇಳೆಯಲ್ಪಟ್ಟು ಆಚಾರ ವಿಚಾರಗಳನ್ನು ಬಿಟ್ಟು ಶುದ್ಧ ನಾಸ್ತಿಕ ಆಗುತ್ತಿರುವ ಬ್ರಾಹ್ಮಣ ಸಮಾಜದ ಶೋಚನೀಯ ಪರಿಸ್ಥಿತಿ.
ಇನ್ನೊಂದು ಕಡೆ ಸಂಸ್ಕೃತವನ್ನು ಓದಿ ಪ್ರೋತ್ಸಾಹ ಇಲ್ಲದೇ, ಉಪ ಜೀವನಕ್ಕೆ ದಿಕ್ಕಿಲ್ಲದೆ, ದಾರಿದ್ರ್ಯದಿಂದ ದೀನ ದೂನರಾಗಿ, ಶಾಸ್ತ್ರ ಓಡಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಿರುವ ಪಂಡಿತ ವರ್ಗ ಇನ್ನೊಂದು ಕಡೆಗೆ.
ಆರ್ಥಿಕ ಮುಗ್ಗಟ್ಟಿನ ಲ್ಲಿ ಸಿಲುಕಿ ಪೀಠಾಧಿಪತಿಗಳ ಮಾರ್ಗದರ್ಶನ ಇಲ್ಲದೇ ಗುರು ಮಠಗಳ ಕಡೆಗೆ ಸಾಶಂಕ ದೃಷ್ಟಿಯಿಂದ ನೋಡುವ ಸಮಾಜದ ಅಕರ್ಮಣ್ಯ ಅವಸ್ಥೆ ಇನ್ನೊಂದು ಕಡೆಗೆ.
ಹೀಗೆ ದೃಷ್ಟಿ ಹರಿಸಿದತ್ತೆಲ್ಲ ಕಡೆಗೆ ಸಮಾಜದ ಪುನರುತ್ಥಾನ.
ಸಿದ್ಧಾಂತದ ಪ್ರಸಾರ.
ಬ್ರಾಹ್ಮಣ ಜಾತಿಯ ಪುನಃ ಸಂಘಟನೆ.
ನಾಸ್ತಿಕ್ಯವಾದ ನಿರಾಕರಣ ಪೂರ್ವಕವಾಗಿ ಆಸ್ತಿಕ್ಯದೆಡೆಗೆ ಜನರ ಸಮಾಕರ್ಷಣೆ.
ಗುರು ಶಿಷ್ಯರ ನಡುವೆ ಮಧುರ ಸಂಬಂಧ ಸ್ಥಾಪನೆ.
ಪಂಡಿತ ಪೋಷಣೆ ಮೊದಲಾದ ಅನೇಕ ಅವಶ್ಯಕ ಕಾರ್ಯಗಳು ಕೈಮಾಡಿ ಕರೆಯುತ್ತಲಿದ್ದವು.
ಆಚಾರ್ಯ ನಾಗರಾಜು ಹಾವೇರಿ " ವೆಂಕಟನಾಥ " ಮುದ್ರಿಕೆಯಲ್ಲಿ...
ಶ್ರೀ ವಿಶ್ವೇಶ ತೀರ್ಥ ಸ್ತುತಿ......
ವೇದವ್ಯಾಸ ಮಧ್ವ ಪ್ರಿಯಂ
ನಮಃ ಕಾರುಣ್ಯ ವಾರಿಧೇ ।
ವಿಶ್ವಮಾನ್ಯ ಸುತಂ ವಂದೇ
ವಿಶ್ವೇಶಾರ್ಯ ಗುರುಂ ಭಜೇ ।।
***
" ಶ್ರೀ ವಿಶ್ವೇಶ - 2 "
ವಿಶ್ವ ನಾಮಕ ವಿಶ್ವಂಭರ ಪ್ರಿಯ ।
ವಿಶ್ವ ಮಯ ಸದನಕೆ ಪೊರಟರು ।
ವಿಶ್ವ ಜಾಗರ ವೆಂಕಟನಾಥನ ಸೇವಿಸಲು ।
ವಿಶ್ವೇಶ ತೀರ್ಥರು ಮುಕ್ತಿಪಥದಿ ನಡೆದರು ।।
ಓರ್ವ ದೈವೀ ಪುರುಷನ ಮಾಂತ್ರಿಕ ಹಸ್ತ ಸ್ಪರ್ಶಕ್ಕಾಗಿ ನೂರಾರು ಕೆಲಸಗಳು ಕಾದುಕೊಂಡು ಕುಳಿತಿದ್ದವು.
ಜೀವನದ ವಸಂತ ಮಾಸದಲ್ಲಿ ಕಾಲಿಡುತ್ತಿರುವ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಎದುರು ಶ್ರೀ ಕೃಷ್ಣನ ಪರ್ಯಾಯ ಪೀಠವೂ ಇವರ ಆರೋಹಣಕ್ಕಾಗಿ ನಿರೀಕ್ಷಿಸುತ್ತಲಿತ್ತು.
ಶುರುವಾಯಿತು ಆ ದಿಶೆಯಲ್ಲಿ ಕಾರ್ಯ.
ಅಖಿಲ ಭಾರತ ಮಾಧ್ವ ಮಹಾ ಮಂಡಳವು ಪ್ರಾರಂಭವಾಯಿತು.
ಪ್ರಾಚೀನ ಗುರುಕುಲ ಪದ್ಧತಿಯಿಂದ ದಿಗ್ಗಜ ಪಂಡಿತರನ್ನು ಸಿದ್ಧಪಡಿಸಲಿಕ್ಕಾಗಿ " ಪೂರ್ಣಪ್ರಜ್ಞ ವಿದ್ಯಾ ನಿಲಯ " ಕಾರ್ಯ ಪ್ರವೃತ್ತವಾಯಿತು.
ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಮಹಾ ಪ್ರಯತ್ನಗಳ ಫಲವಾಗಿ ಊರೂರಿಗೆ ಮಾಧ್ವ ವಿದ್ಯಾರ್ಥಿ ನಿಲಯಗಳು ತಲೆ ಎತ್ತಿದವು.
ಒಂದಲ್ಲದಂತೆ ಮೂರು ಭಾಷೆಗಳಲ್ಲಿ " ತತ್ತ್ವವಾದ " ವೆಂಬ ಮಾಸ ಪತ್ರಿಕೆಯು ಸಿದ್ಧಾಂತ ಪ್ರಸಾರದ ಕಾರ್ಯವನ್ನು ಭರದಿಂದ ನಡೆಸಿತು.
ಪ್ರತಿವರ್ಷವೂ ಜ್ಞಾನಸತ್ರ, ಶಿಬಿರ, ವಿದ್ವದ್ಗೋಷ್ಠಿ, ತತ್ತ್ವಜ್ಞಾನ ಸಮ್ಮೇಳನ, ವಿದ್ವತ್ಸಭಾ ಮುಂತಾದವುಗಳ ಮುಖಾಂತರ ಶ್ರೀಮದಾಚಾರ್ಯರ ಸಂದೇಶವು ಮನೆ ಮನೆಗೆ ಮುಟ್ಟುವಂತಾಯಿತು.
ಸಂಸ್ಕೃತ ಪಂಡಿತರಿಗೂ, ಸಾಮಾನ್ಯರಿಗೂ ಸ್ನೇಹ ಏರ್ಪಟ್ಟಿತು.
ಪ್ರತಿ ಪ್ರಾಂತದಲ್ಲಿಯೂ ಆಂಗ್ಲ ಭಾಷೆ ಓದುತ್ತಲಿರುವ ವಿದ್ಯಾರ್ಥಿಗಳಿಗೆ ಮಧ್ವ ಮತದಲ್ಲಿ ಆಸಕ್ತಿಯನ್ನು ಹುಟ್ಟಿಸಿ ಸಾಲ ರೂಪ ಶಿಷ್ಯ ವೃತ್ತಿಯನ್ನು ಕೊಟ್ಟು ಪ್ರೋತ್ಸಾಹಿಸಲಾಯಿತು.
ಹೀಗೆ ವಿದ್ಯಾರ್ಥಿ ನಿಲಯ ಮತ್ತು ಶಿಷ್ಯ ವೃತ್ತಿಗಳಿಂದ ಮತನಿಷ್ಠಕಾದ ಹೊಸ ಮಾಧ್ವ ಪೀಳಿಗೆಯೇ ನಿರ್ಮಾಣಗೊಂಡಿತು.
ಅತ್ತ ವಿದ್ಯಾಪೀಠದಲ್ಲಿ ಪಂಡಿತರ ಪಡೆ ನಿರ್ಮಾಣವಾಗುತ್ತಾ ನಡೆಯಿತು.
ಇತ್ತ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ವರ್ಚಸ್ಸಿನಿಂದ ಸ್ವಾಮಿ ಸ್ವಾಮಿಗಳವರಲ್ಲಿಯೂ, ಸಾಮಾಜಿಕರಲ್ಲೊಯೂ, ಎಲ್ಲಾ ಮಾಧ್ವರಲ್ಲಿಯೂ ಸ್ನೇಹಮಯವಾದ ಸೌಹಾರ್ದವು ಕುದುರಲು ಅನುಕೂಲವಾಯಿತು.
ಇವಲ್ಲದೆ ಗ್ರಂಥ ಸಂಶೋಧನೆ, ಗ್ರಂಥ ಭಾಂಡಾರ, ಗ್ರಂಥ ಪ್ರಕಾಶನ, ಪ್ರಾಚೀನ ಗ್ರಂಥ ಮುದ್ರಣ, ಗೋ ರಕ್ಷಣೆ, ವಿಶ್ವ ಹಿಂದೂ ಪರಿಷನ್ಮಾರ್ಗದರ್ಶನ, ಶ್ರೀ ಕೃಷ್ಣ ಸೇವಾಶ್ರಮ ಸ್ಥಾಪನಾ ಮುಂತಾಗಿ ವಿವಿಧ ಬಗೆಗಳಿಂದ ಸಾಮಾಜಿಕ, ಸಾಂಸ್ಕೃತಿಕ, ಸೈದ್ಧಾಂತಿಕ ಕಾರ್ಯಗಳು ಮುಂದುವರೆಯುತ್ತಲೇ ಇವೆ.
ಅನೇಕ ಬಾರಿ ಬದರೀ, ಕಾಶೀ, ಕೊಚಿನ್, ಕುಂಭಕೋಣ, ರಾಮೇಶ್ವರದ ವರೆಗೆ ( ಯಾವತ್ ಭಾರತ ) ಸಂಚರಿಸಿ ಪಂಡಿತರ ಜೊತೆಗೆ ವಾಕ್ಯಾರ್ಥ ಮಾಡಿ ಪರವಾದಿಗಳನ್ನು ನಿಗ್ರಹಿಸಿದ್ದಾರೆ.
ದ್ವೈತ ದುಂದುಭಿಯನ್ನು ಮೊಳಗಿಸಿದ್ದಾರೆ.
ಮಧ್ವ ಮತವನ್ನು ಪ್ರಸಾರ ಮಾಡಿದ್ದಾರೆ.
ಗ್ರಂಥ ರಚನೆ ಮಾಡಿದ್ದಾರೆ.
ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರಂತೆ ಸುಧಾ ಪಾಠ ಪ್ರಾರಂಭ ಪೂರ್ವಕವಾಗಿ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಶ್ರೀ ಕೃಷ್ಣನ ಪ್ರಥಮ ಪರ್ಯಾಯದ ಕೈಂಕರ್ಯವನ್ನು ಅಂದು ಅಲ್ಲಿ ಉಡುಪಿಯ ಶ್ರೀ ಕೃಷ್ಣನ ಪರಮ ಪವಿತ್ರವಾದ ಕ್ಷೇತ್ರದಲ್ಲಿ ಸೇರಿದ ಸಾವಿರಾರು ಪಂಡಿತ - ಪಾಮರ - ಪರಿವ್ರಾಜಕ - ಲೌಕಿಕ -ವೈದಿಕ - ಯೋಗಿ - ಯಾಗಿ - ತ್ಯಾಗಿ - ವಿರಾಗಿ ಜನಸ್ತೋಮದ ಎದುರು ಸಮಾಜ ಸೇವೆಯ ವ್ರತವನ್ನು ಹರಿ ಗುರುಗಳೆದುರು ಸ್ವೀಕರಿಸಿ ಕೊನೆಯ ದಿನದ ವರೆಗೂ ಸತ್ಕರ್ಮಾಚರಣೆಯೊಂದಿಗೆ ತತ್ತ್ವಜ್ಞಾನ ಪ್ರಸಾರ - ಸಮಾಜ ಸುಧಾರಣೆ ಕಾರ್ಯದಲ್ಲಿಯೇ ಇದ್ದು...
ದಿನಾಂಕ : 29.12.2019 ಪುಷ್ಯ ಶುದ್ಧ ತೃತೀಯಾ ಭಾನುವಾರದಂದು ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಕೃಷ್ಣೋsಭಿನ್ನ ಶ್ರೀ ಹರಿಯ ಪಾದಾರವಿಂದ ಸೇರಿದರು!!
ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ .....
ವಿದ್ಯಾಮಾನ್ಯರಲಿ -
ಶಿಷ್ಯತ್ವ ವಹಿಸಿ ।
ವೇದವ್ಯಾಸರ -
ಮಾತನು ಆಲಿಸಿ ।
ಮೋದತೀರ್ಥ
ಸಿದ್ಧಾಂತವನು
ಪ್ರಸಾರಗೈದು ।।
ಯಾದವರಾಯನ
ಪದಾರ್ಚನೆ ಮಾಡುತಾ ।
ಮುದದಿ ವೇಂಕಟನಾಥನ
ಕಿಂಕರನೆನಿಸಿದ ।
ಸದಮಲ ವಿಶ್ವೇಶರೇ
ವಿಶ್ವಪ್ರಸನ್ನರ ಪಿತನು ।।
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****
ವಿಶ್ವೇಶ ತೀರ್ಥರು 01 ಪೇಜಾವರ ಶ್ರೀ 01
ವಿಶ್ವೇಶ ತೀರ್ಥರು 02 ಪೇಜಾವರ ಶ್ರೀ 02
***
No comments:
Post a Comment