ಕಷ್ಟದಲ್ಲಿರುವವರ ಪಾಲಿಗೆ ಕರಿವರದನಂತೆ ‘ಕರುಣೆ ತೋರುವ’ ಕಲಿಯುಗದ ಕಾಮಧೇನು. ದೇಹಿ ಎಂದ ದೀನರ ಪಾಲಿಗೆ ‘ಬವಣೆಯಲ್ಲವೀ ಬದುಕು’ ಎಂದು ‘ಅಜನಪಿತನ’ ತೋರುವ ದಯಾನಿಧಿ. ನಾನು ಅನಾಥ ಎಂದಾಕ್ಷಣ ‘ನಾರಾಯಣ’ ನಂತೆ ‘ನಾಥ’ನಾಗಿ ಕೈಪಿಡಿವ ಕಾರುಣ್ಯದ ಕಡಲು. ಮನಕೆ ದುಃಖವಾದಾಗ ಮುದದಿ ‘ಮಂದರೋದ್ಧಾರ’ ನಂತೆ ಮಂದಾನಿಲ ಸುರಿಸುವ ಮಂತ್ರಾಲಯದ ಮಹಾಪ್ರಭು. ಜಗತ್ತು, ಜೀವನ ಕತ್ತಲು ಎಂದು ಭಾಸವಾದಾಗ ‘ಜಗನ್ನಾಥ ವಿಠ್ಠಲ’ ನೆಂಬ ‘ಜೀಯ’ನಿದ್ದಾನೆಂದು ತೋರುವ ಕಲ್ಪಧ್ರುಮ. ಸುಖವಿಲ್ಲದೆ ಬಾಳಿಗೆ ‘ಗಂಗಾಜನಕ’ ನಂತೆ ಸುಂದರ ಸುಧೆಯನ್ನು ಸ್ಪುರಿಸಿ ಸಮ್ಮೋಹನಗೊಳಿಸುವ ಸುರತರು. ನಲಿವನ್ನು ಕಾಣದ ನೋವಿನ ಮನಸ್ಸಿಗೆ ‘ಕಪಿಲ’ ನಂತೆ ತಂಪೆರೆವ ಸುರನದಿ. ಅನ್ಯರಿಂದ ಅಪಮಾನವಾಯಿತೆಂದು ನೊಂದ ಜೀವಕೆ ‘ಕಂದಾ ನಾನಿರುವೆನೆಂದ’ ನರಹರಿಯ ತೋರುವ ಯತಿರಾಜರು. ಮಧ್ವಮತದ ಮೇರು ಕುಸುಮವಾಗಿ ಮಂದಿಗೆ ‘ಮಾಧವ’ನ ತೋರಿದ. ಬಡವ, ಬಲ್ಲಿದನೆಂಬ ಭೇದ ತೋರದೆ ಅನುಗ್ರಹಿಸುತ್ತಿರುವ ಕಲಿಯುಗದ ಕಲ್ಪವೃಕ್ಷ, ಮಹಾನುಭಾವರಾದ ‘ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರು’ ಜನ್ಮಿಸಿದ ದಿನ.
ಶಂಕುಕರ್ಣಾಖ್ಯದೇವಸ್ತು ಬ್ರಹ್ಮ ಶಾಪಾಶ್ಚ ಭೂತಲೇ| ಪ್ರಹ್ಲಾದ ಇತಿ ವಿಖ್ಯಾತಃ ಭೂಭಾರಕ್ಷಪಣೇರತಃ | ಕಲೌ ಯುಗೇ ರಾಮಸೇವಾಂ ಕುರ್ವನ್ಮಂತ್ರಾಲಯೇ ಭವೇತ್ | ಸ ಏವ ರಾಘವೇಂದ್ರಾಖ್ಯೋ ಯತಿರೂಪೇಣ ಸರ್ವದಾ||
ಎನ್ನುವಂತೆ ಶಂಕುಕರ್ಣ ಎಂಬ ದೇವತೆ ಬ್ರಹ್ಮದೇವರ ಶಾಪದಿಂದ ಭೂಮಿಯಲ್ಲಿ ಪ್ರಹ್ಲಾದರಾಜರಾಗಿ ಅವತರಿಸಿದರು. ನಂತರ ದ್ವಾಪರದಲ್ಲಿ ರೂಪದಲ್ಲಿ ಬಾಹ್ಲೀಕರಾಜರಾದರು. ಕಲಿಯುಗದಲ್ಲಿ ಗೋಪಾಲಕೃಷ್ಣನ ಸೇವೆ ಮಾಡಿ, ನಂತರ ರಾಮದೇವರ ಸೇವೆಗಾಗಿ ಮಂತ್ರಾಲಯದಲ್ಲಿ ಶ್ರೀರಾಘವೇಂದ್ರತೀರ್ಥ ಎಂಬ ಯತಿಗಳಾಗಿ ನಿಂತಿದ್ದಾರೆ.
ಇಂತಹ ನಮ್ಮ ರಾಯರು ತಮಿಳುನಾಡಿನ ಭುವನಗಿರಿಯಲ್ಲಿ ಶ್ರೀತಿಮ್ಮಣ್ಣ ಭಟ್ಟ ಹಾಗೂ ಸಾಧ್ವಿ ಗೋಪಿಕಾಂಬೆಯ ಉದರದಲಿ ವೆಂಕಟನಾಥರೆಂಬ ನಾಮಾಕಿಂತರಾಗಿ 1595ರಲ್ಲಿ ಜನಿಸಿದರು. ವಿದ್ಯಾಭ್ಯಾಸದ ನಂತರ ಕುಂಭಕೋಣದಲ್ಲಿದ್ದ ಶ್ರೀವಿಜಯೀಂದ್ರತೀರ್ಥರಿಂದ ಪ್ರೇರಿತರಾಗಿ ಶ್ರೀಸುಧೀಂದ್ರತೀರ್ಥರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿ ‘ಶ್ರೀರಾಘವೇಂದ್ರತೀರ್ಥ’ ರಾದರು.
ಇಂತಹ ಮಹಾನುಭಾವರ ಜನ್ಮದಿನದಂದು ಅವರನ್ನು ಸ್ಮರಿಸೋಣ, ಭಜಿಸೋಣ. ಸ್ಮರಣೆಯ ಫಲ ‘ರಾ’ ಎಂದರೆ ರಾಶಿ ದೋಷಗಳನ್ನು ದೂರಮಾಡುವರು. ‘ಘ’ ಎಂದರೆ ಘನ ಗಾನ ಭಕ್ತಿಯನ್ನು ನೀಡುವರು. ‘ವೇಂ’ ಎಂದರೆ ವೇಗದಿ ಜನನ ಮರಣಗಳನ್ನು ದೂರ ಮಾಡುವರು, ‘ದ್ರ’ ಎಂದರೆ ದ್ರವಿಣಾರ್ಥ ಶ್ರುತಿ ಪಾದ್ಯನಾದ ಶ್ರೀಹರಿಯನ್ನು ತೋರಿಸುವರು.
ಸಾಧ್ಯವಾದವರು ಸ್ತೋತ್ರ ಪಠಿಸಿ, ಸಾಧ್ಯವಾಗದಿದ್ದಲ್ಲಿ ಸಂಕ್ಷಿಪ್ತವಾಗಿ ಕೆಳಗೆ ಅರ್ಥ ನೀಡಲಾಗಿದೆ.
ಶ್ರೀ ರಾಘವೇಂದ್ರ ಸ್ತೋತ್ರ:
ಶ್ರೀಪೂರ್ಣಬೋಧಗುರುತೀರ್ಥಪಯೋಬ್ಧಿಪಾರಾ ಕಾಮಾರಿಮಾಕ್ಷವಿಷಮಾಕ್ಷಶಿರಃ ಸ್ಪೃಶನ್ತೀ । ಪೂರ್ವೋತ್ತರಾಮಿತತರಂಗಚರತ್ಸುಹಂಸಾ ದೇವಾಳಿಸೇವಿತಪರಾಂಘ್ರಿಪಯೋಜಲಗ್ನಾ ॥ 1॥
ಜೀವೇಶಭೇದಗುಣಪೂರ್ತಿಜಗತ್ಸುಸತ್ತ್ವ ನೀಚೋಚ್ಚಭಾವಮುಖನಕ್ರಗಣೈಃ ಸಮೇತಾ ।
ದುರ್ವಾದ್ಯಜಾಪತಿಗಿಳೈರ್ಗುರುರಾಘವೇನ್ದ್ರವಾಗ್ದೇವತಾಸರಿದಮುಂ ವಿಮಲೀಕರೋತು ॥ 2॥
ಶ್ರೀರಾಘವೇನ್ದ್ರಃ ಸಕಲಪ್ರದಾತಾ ಸ್ವಪಾದಕಂಜದ್ವಯಭಕ್ತಿಮದ್ಭ್ಯಃ ।
ಅಘಾದ್ರಿಸಮ್ಭೇದನದೃಷ್ಟಿವಜ್ರಃ ಕ್ಷಮಾಸುರೇನ್ದ್ರೋಽವತು ಮಾಂ ಸದಾಽಯಮ್ ॥ 3॥
ಶ್ರೀರಾಘವೇನ್ದ್ರೋಹರಿಪಾದಕಂಜನಿಷೇವಣಾಲ್ಲಬ್ಧಸಮಸ್ತಸಮ್ಪತ್ ।
ದೇವಸ್ವಭಾವೋ ದಿವಿಜದ್ರುಮೋಽಯಮಿಷ್ಟಪ್ರದೋ ಮೇ ಸತತಂ ಸ ಭೂಯಾತ್ ॥ 4॥
ಭವ್ಯಸ್ವರೂಪೋ ಭವದುಃಖತೂಲಸಂಘಾಗ್ನಿಚರ್ಯಃ ಸುಖಧೈರ್ಯಶಾಲೀ ।
ಸಮಸ್ತದುಷ್ಟಗ್ರಹನಿಗ್ರಹೇಶೋ ದುರತ್ಯಯೋಪಪ್ಲವಸಿನ್ಧುಸೇತುಃ ॥ 5॥
ನಿರಸ್ತದೋಷೋ ನಿರವದ್ಯವೇಷಃ ಪ್ರತ್ಯರ್ಥಿಮೂಕತ್ತ್ವನಿದಾನಭಾಷಃ ।
ವಿದ್ವತ್ಪರಿಜ್ಞೇಯಮಹಾವಿಶೇಷೋ ವಾಗ್ವೈಖರೀನಿರ್ಜಿತಭವ್ಯಶೇಷಃ ॥ 6॥
ಸನ್ತಾನಸಮ್ಪತ್ಪರಿಶುದ್ಧಭಕ್ತಿವಿಜ್ಞಾನವಾಗ್ದೇಹಸುಪಾಟವಾದೀನ್ ।
ದತ್ತ್ವಾ ಶರೀರೋತ್ಥಸಮಸ್ತದೋಷಾನ್ ಹತ್ತ್ವಾ ಸ ನೋಽವ್ಯಾದ್ಗುರುರಾಘವೇನ್ದ್ರಃ ॥ 7॥
ಯತ್ಪಾದೋದಕಸಂಚಯಃ ಸುರನದೀಮುಖ್ಯಾಪಗಾಸಾದಿತಾ-
ಸಂಖ್ಯಾಽನುತ್ತಮಪುಣ್ಯಸಂಘವಿಲಸತ್ಪ್ರಖ್ಯಾತಪುಣ್ಯಾವಹಃ ।
ದುಸ್ತಾಪತ್ರಯನಾಶನೋ ಭುವಿ ಮಹಾ ವನ್ಧ್ಯಾಸುಪುತ್ರಪ್ರದೋ
ವ್ಯಂಗಸ್ವಂಗಸಮೃದ್ಧಿದೋ ಗ್ರಹಮಹಾಪಾಪಾಪಹಸ್ತಂ ಶ್ರಯೇ ॥ 8॥
ಯತ್ಪಾದಕಂಜರಜಸಾ ಪರಿಭೂಷಿತಾಂಗಾ ಯತ್ಪಾದಪದ್ಮಮಧುಪಾಯಿತಮಾನಸಾ ಯೇ ।
ಯತ್ಪಾದಪದ್ಮಪರಿಕೀರ್ತನಜೀರ್ಣವಾಚಸ್ತದ್ದರ್ಶನಂ ದುರಿತಕಾನನದಾವಭೂತಮ್ ॥ 9॥
ಸರ್ವತನ್ತ್ರಸ್ವತನ್ತ್ರೋಽಸೌ ಶ್ರೀಮಧ್ವಮತವರ್ಧನಃ ।
ವಿಜಯೀನ್ದ್ರಕರಾಬ್ಜೋತ್ಥಸುಧೀನ್ದ್ರವರಪುತ್ರಕಃ ।
ಶ್ರೀರಾಘವೇನ್ದ್ರೋ ಯತಿರಾಟ್ ಗುರುರ್ಮೇ ಸ್ಯಾದ್ಭಯಾಪಹಃ ॥ 10॥
ಜ್ಞಾನಭಕ್ತಿಸುಪುತ್ರಾಯುಃ ಯಶಃ ಶ್ರೀಪುಣ್ಯವರ್ಧನಃ ।
ಪ್ರತಿವಾದಿಜಯಸ್ವಾನ್ತಭೇದಚಿಹ್ನಾದರೋ ಗುರುಃ ।
ಸರ್ವವಿದ್ಯಾಪ್ರವೀಣೋಽನ್ಯೋ ರಾಘವೇನ್ದ್ರಾನ್ನವಿದ್ಯತೇ ॥ 11॥
ಅಪರೋಕ್ಷೀಕೃತಶ್ರೀಶಃ ಸಮುಪೇಕ್ಷಿತಭಾವಜಃ ।
ಅಪೇಕ್ಷಿತಪ್ರದಾತಾಽನ್ಯೋ ರಾಘವೇನ್ದ್ರಾನ್ನವಿದ್ಯತೇ ॥ 12॥
ದಯಾದಾಕ್ಷಿಣ್ಯವೈರಾಗ್ಯವಾಕ್ಪಾಟವಮುಖಾಂಕಿತಃ ।
ಶಾಪಾನುಗ್ರಹಶಕ್ತೋಽನ್ಯೋ ರಾಘವೇನ್ದ್ರಾನ್ನವಿದ್ಯತೇ ॥ 13॥
ಅಜ್ಞಾನವಿಸ್ಮೃತಿಭ್ರಾನ್ತಿಸಂಶಯಾಪಸ್ಮೃತಿಕ್ಷಯಾಃ ।
ತನ್ದ್ರಾಕಮ್ಪವಚಃಕೌಂಠ್ಯಮುಖಾ ಯೇ ಚೇನ್ದ್ರಿಯೋದ್ಭವಾಃ ।
ದೋಷಾಸ್ತೇ ನಾಶಮಾಯಾನ್ತಿ ರಾಘವೇನ್ದ್ರಪ್ರಸಾದತಃ ॥ 14॥
`ಓಂ ಶ್ರೀ ರಾಘವೇನ್ದ್ರಾಯ ನಮಃ ' ಇತ್ಯಷ್ಟಾಕ್ಷರಮನ್ತ್ರತಃ ।
ಜಪಿತಾದ್ಭಾವಿತಾನ್ನಿತ್ಯಂ ಇಷ್ಟಾರ್ಥಾಃ ಸ್ಯುರ್ನಸಂಶಯಃ ॥ 15॥
ಹನ್ತು ನಃ ಕಾಯಜಾನ್ದೋಷಾನಾತ್ಮಾತ್ಮೀಯಸಮುದ್ಭವಾನ್ ।
ಸರ್ವಾನಪಿ ಪುಮರ್ಥಾಂಶ್ಚ ದದಾತು ಗುರುರಾತ್ಮವಿತ್ ॥ 16॥
ಇತಿ ಕಾಲತ್ರಯೇ ನಿತ್ಯಂ ಪ್ರಾರ್ಥನಾಂ ಯಃ ಕರೋತಿ ಸಃ ।
ಇಹಾಮುತ್ರಾಪ್ತಸರ್ವೇಷ್ಟೋ ಮೋದತೇ ನಾತ್ರ ಸಂಶಯಃ ॥ 17॥
ಅಗಮ್ಯಮಹಿಮಾ ಲೋಕೇ ರಾಘವೇನ್ದ್ರೋ ಮಹಾಯಶಾಃ ।
ಶ್ರೀಮಧ್ವಮತದುಗ್ಧಾಬ್ಧಿಚನ್ದ್ರೋಽವತು ಸದಾಽನಘಃ ॥ 18॥
ಸರ್ವಯಾತ್ರಾಫಲಾವಾಪ್ತ್ಯೈ ಯಥಾಶಕ್ತಿಪ್ರದಕ್ಷಿಣಮ್ ।
ಕರೋಮಿ ತವ ಸಿದ್ಧಸ್ಯ ವೃನ್ದಾವನಗತಂ ಜಲಮ್ ।
ಶಿರಸಾ ಧಾರಯಾಮ್ಯದ್ಯ ಸರ್ವತೀರ್ಥಫಲಾಪ್ತಯೇ ॥ 19॥
ಸರ್ವಾಭೀಷ್ಟಾರ್ಥಸಿದ್ಧ್ಯರ್ಥಂ ನಮಸ್ಕಾರಂ ಕರೋಮ್ಯಹಮ್ ।
ತವ ಸಂಕೀರ್ತನಂ ವೇದಶಾಸ್ತ್ರಾರ್ಥಜ್ಞಾನಸಿದ್ಧಯೇ ॥ 20॥
ಸಂಸಾರೇಽಕ್ಷಯಸಾಗರೇ ಪ್ರಕೃತಿತೋಽಗಾಧೇ ಸದಾ ದುಸ್ತರೇ ।
ಸರ್ವಾವದ್ಯಜಲಗ್ರಹೈರನುಪಮೈಃ ಕಾಮಾದಿಭಂಗಾಕುಲೇ ।
ನಾನಾವಿಭ್ರಮದುರ್ಭ್ರಮೇಽಮಿತಭಯಸ್ತೋಮಾದಿಫೇನೋತ್ಕಟೇ ।
ದುಃಖೋತ್ಕೃಷ್ಟವಿಷೇ ಸಮುದ್ಧರ ಗುರೋ ಮಾ ಮಗ್ನರೂಪಂ ಸದಾ ॥ 21॥
ರಾಘವೇನ್ದ್ರಗುರುಸ್ತೋತ್ರಂ ಯಃ ಪಠೇದ್ಭಕ್ತಿಪೂರ್ವಕಮ್ ।
ತಸ್ಯ ಕುಷ್ಠಾದಿರೋಗಾಣಾಂ ನಿವೃತ್ತಿಸ್ತ್ವರಯಾ ಭವೇತ್ ॥ 22॥
ಅನ್ಧೋಽಪಿ ದಿವ್ಯದೃಷ್ಟಿಃ ಸ್ಯಾದೇಡಮೂಕೋಽಪಿ ವಾಗ್ಪತಿಃ ।
ಪೂರ್ಣಾಯುಃ ಪೂರ್ಣಸಮ್ಪತ್ತಿಃ ಸ್ತೋತ್ರಸ್ಯಾಸ್ಯ ಜಪಾದ್ಭವೇತ್ ॥ 23॥
ಯಃ ಪಿಬೇಜ್ಜಲಮೇತೇನ ಸ್ತೋತ್ರೇಣೈವಾಭಿಮನ್ತ್ರಿತಮ್ ।
ತಸ್ಯ ಕುಕ್ಷಿಗತಾ ದೋಷಾಃ ಸರ್ವೇ ನಶ್ಯನ್ತಿ ತತ್ಕ್ಷಣಾತ್ ॥ 24॥
ಯದ್ವೃನ್ದಾವನಮಾಸಾದ್ಯ ಪಂಗುಃ ಖಂಜೋಽಪಿ ವಾ ಜನಃ ।
ಸ್ತೋತ್ರೇಣಾನೇನ ಯಃ ಕುರ್ಯಾತ್ಪ್ರದಕ್ಷಿಣನಮಸ್ಕೃತಿ ।
ಸ ಜಂಘಾಲೋ ಭವೇದೇವ ಗುರುರಾಜಪ್ರಸಾದತಃ ॥ 25॥
ಸೋಮಸೂರ್ಯೋಪರಾಗೇ ಚ ಪುಷ್ಯಾರ್ಕಾದಿಸಮಾಗಮೇ ।
ಯೋಽನುತ್ತಮಮಿದಂ ಸ್ತೋತ್ರಮಷ್ಟೋತ್ತರಶತಂ ಜಪೇತ್ ।
ಭೂತಪ್ರೇತಪಿಶಾಚಾದಿಪೀಡಾ ತಸ್ಯ ನ ಜಾಯತೇ ॥ 26॥
ಏತತ್ಸ್ತೋತ್ರಂ ಸಮುಚ್ಚಾರ್ಯ ಗುರೋರ್ವೃನ್ದಾವನಾನ್ತಿಕೇ ।
ದೀಪಸಂಯೋಜನಾಜ್ಞಾನಂ ಪುತ್ರಲಾಭೋ ಭವೇದ್ಧ್ರುವಮ್ ॥ 27॥
ಪರವಾದಿಜಯೋ ದಿವ್ಯಜ್ಞಾನಭಕ್ತ್ಯಾದಿವರ್ಧನಮ್ ।
ಸರ್ವಾಭೀಷ್ಟಪ್ರವೃದ್ಧಿಸ್ಸ್ಯಾನ್ನಾತ್ರ ಕಾರ್ಯಾ ವಿಚಾರಣಾ ॥ 28॥
ರಾಜಚೋರಮಹಾವ್ಯಾಘ್ರಸರ್ಪನಕ್ರಾದಿಪೀಡನಮ್ ।
ನ ಜಾಯತೇಽಸ್ಯ ಸ್ತೋತ್ರಸ್ಯ ಪ್ರಭಾವಾನ್ನಾತ್ರ ಸಂಶಯಃ ॥ 29॥
ಯೋ ಭಕ್ತ್ಯಾ ಗುರುರಾಘವೇನ್ದ್ರಚರಣದ್ವನ್ದ್ವಂ ಸ್ಮರನ್ ಯಃ ಪಠೇತ್ ।
ಸ್ತೋತ್ರಂ ದಿವ್ಯಮಿದಂ ಸದಾ ನಹಿ ಭವೇತ್ತಸ್ಯಾಸುಖಂ ಕಿಂಚನ ।
ಕಿಂ ತ್ವಿಷ್ಟಾರ್ಥಸಮೃದ್ಧಿರೇವ ಕಮಲಾನಾಥಪ್ರಸಾದೋದಯಾತ್ ।
ಕೀರ್ತಿರ್ದಿಗ್ವಿದಿತಾ ವಿಭೂತಿರತುಲಾ ಸಾಕ್ಷೀ ಹಯಾಸ್ಯೋಽತ್ರ ಹಿ ॥ 30॥
ಇತಿ ಶ್ರೀ ರಾಘವೇನ್ದ್ರಾರ್ಯ ಗುರುರಾಜಪ್ರಸಾದತಃ ।
ಕೃತಂ ಸ್ತೋತ್ರಮಿದಂ ಪುಣ್ಯಂ ಶ್ರೀಮದ್ಭಿರ್ಹ್ಯಪ್ಪಣಾಭಿದೈಃ ॥ 31॥
ಇತಿ ಶ್ರೀ ಅಪ್ಪಣ್ಣಾಚಾರ್ಯವಿರಚಿತ ಶ್ರೀರಾಘವೇಂದ್ರಸ್ತೋತ್ರಂ ಸಂಪೂರ್ಣಮ್
ಶ್ರೀ ಪೂರ್ಣ ಬೋಧರೆನೆಸಿದ ಮಧ್ವಾಚಾರ್ಯ ರೆಂಬ ಸಾಗರವನ್ನು ಸೇರುವ ಗಂಗೆಯಂತಿರುವ ಪೂರ್ವ -ಉತ್ತರ ಮೀಮಾಂಸಾ ಶಾಸ್ತ್ರ ಗಳೆಂಬ ಅಲೆಗಳುಳ್ಳ ರಾಘವೇಂದ್ರರೆಂಬ ವಾಕ್ ಪ್ರವಾಹವು ನಮ್ಮನ್ನು ಸಲಹಲಿ. ಶ್ರೀ ರಾಘವೇಂದ್ರರು ಸಕಲಾಭೀಷ್ಟದಾತರು. ತಮ್ಮನ್ನು ನಂಬಿದವರ ಸಕಲ ಪಾಪಗಳೆಂಬ ರಾಶಿಗೆ ವಜ್ರಾಯುಧ ದಂತೆ ಇರುವ ದಯಾನಿಧಿ. ಇಂದ್ರ ಸಮಾನರಾದ ಗುರುಗಳು ನಮ್ಮನ್ನು ಕಾಪಾಡಲಿ. ಶ್ರೀ ರಾಘವೇಂದ್ರರುಹರಿಪಾದ ಕಮಲ ಸೇವೆಯಿಂದಲಭಿಸಿದ ಸಕಲ ಸಂಪತ್ತುಳ್ಳ ದೇವತಾ ಸ್ವಭಾವದವರು. ಕಲ್ಪತರುವಿನಂತಿರುವ ಗುರುಗಳು ಇಷ್ಟ ಪ್ರದಾತರಾಗಲಿ. ಶ್ರೀರಾಘವೇಂದ್ರಾಯ ನಮಃಎಂಬ ಮಂತ್ರದಿಂದ ಎಲ್ಲಾ ದೋಷಗಳು ಪರಿಹಾರವಾಗುತ್ತದೆ ಈ ಮಂತ್ರದ ಜಪದಿಂದ ಸಕಲಾಭೀಷ್ಚಲಿಸಿಧ್ಧಿ ,ಸೌಖ್ಯ ಲಭಿಸುತ್ತದೆ ರಾಘವೇಂದ್ರರು ಮಹಿಮೆ ಯುಳ್ಳವರು. ಸಕಲ ಯಾತ್ರಾಫಲವು ವೃಂದಾವನ ಪ್ರದಕ್ಷಣೆ ,ತೀರ್ಥ ಸ್ವೀಕಾರ ಮಾಡಿದರೆ ಸರ್ವಾಭೀಷ್ಟ ಸಿದ್ಘಿ,ಜ್ಞಾನ ಸಿದ್ಧಿಸುತ್ತದೆ. ಸತ್ಯ ಧರ್ಮ ರೂಪನಾದ ಪರಮಾತ್ಮನಲ್ಲಿ ಆಸಕ್ತರಾಗಿ ನಂಬಿದವರಿಗೆ ಕಲ್ಪವೃಕ್ಷದಂತೆ ,ನಂಬಿದವರಿಗೆ ಕಾಮಧೇನುವಿನಂತೆ ಇರುವ ಗುರುಸಾರ್ವಭೌಮ ರಾಘವೇಂದ್ರತೀರ್ಥರಿಗೆ ನಮನಗಳು.
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||
ಮೂಕೋಪಿ ಯತ್ಪ್ರಸಾದೇನ ಮುಕುಂದ ಶಯನಾಯತೇ| ರಾಜರಾಜಾಯತೇ ರಿಕ್ತೋ ರಾಘವೇಂದ್ರಂ ತಮಾಶ್ರಯೇ ||
ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ| ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ ||
ಆಪಾದಃ ಮೌಲಿ ಪರ್ಯಂತಂ ಗುರೂಣಾಂ ಆಕೃತಿಂ ಸ್ಮರೇತ್| ತೇನ ವಿಘ್ನಾಃ ಪ್ರಣಶ್ಯಂತಿ ಸಿಧ್ಧ್ಯಂತಿ ಚ ಮನೋರಥಾಃ ||
ಶ್ರೀರಾಘವೇಂದ್ರಾಷ್ಟೋತ್ತರಶತನಾಮಾವಳಿಃ
1. ಓಂ ಶ್ರೀರಾಘವೇಂದ್ರಾಯ ನಮಃ
2. ಓಂ ಶ್ರೀಸಕಲಪ್ರದಾತ್ರೇ ನಮಃ
3. ಓಂ ಶ್ರೀಕ್ಷಮಾಸುರೇಂದ್ರಾಯ ನಮಃ
4. ಓಂ ಶ್ರೀಸ್ವಪಾದಭಕ್ತಪಾಪಾದ್ರಿಭೇದನದೃಷ್ಟಿವಜ್ರಾಯ ನಮಃ
5. ಓಂ ಶ್ರಿಹರಿಪಾದಪದ್ಮನಿಷೇವಣಾಲ್ಲಬ್ಧಸರ್ವಸಂಪದೇ ನಮಃ
6. ಓಂ ಶ್ರೀದೇವಸ್ವಭಾವಾಯ ನಮಃ
7. ಓಂ ಶ್ರೀದಿವಿಜದ್ರುಮಾಯ ನಮಃ
8. ಓಂ ಶ್ರೀಭವ್ಯಸ್ವರೂಪಾಯ ನಮಃ
9. ಓಂ ಶ್ರೀಸುಖಧೈರ್ಯಶಾಲಿನೇ ನಮಃ
10. ಓಂ ಶ್ರೀದುಷ್ಟಗ್ರಹನಿಗ್ರಹಕರ್ತ್ರೇ ನಮಃ
11. ಓಂ ಶ್ರೀದುಸ್ತಿರ್ಣೋಪಪ್ಲವಸಿಂಧುಸೇತವೇ ನಮಃ
12. ಓಂ ಶ್ರೀವಿದ್ವತ್ಪರಿಜ್ಞೇಯಮಹಾವಿಶೇಷಾಯ ನಮಃ
13. ಓಂ ಶ್ರೀಸಂತಾನಪ್ರದಾಯಕಾಯ ನಮಃ
14. ಓಂ ಶ್ರೀತಾಪತ್ರಯವಿನಾಶಕಾಯ ನಮಃ
15. ಓಂ ಶ್ರೀಚಕ್ಷುಪ್ರದಾಯಕಾಯ ನಮಃ
16. ಓಂ ಶ್ರೀಹರಿಚರಣಸರೋಜರಜೋಭೂಷಿತಾಯ ನಮಃ
17. ಓಂ ಶ್ರೀದುರಿತಕಾನನದವಭೂತಾಯ ನಮಃ
18. ಓಂ ಶ್ರೀಸರ್ವತಂತ್ರಸ್ವತಂತ್ರಾಯ ನಮಃ
19. ಓಂ ಶ್ರೀಮಧ್ವಮತವರ್ಧನಾಯ ನಮಃ
20. ಓಂ ಶ್ರೀಸತತಸನ್ನಿಹಿತಶೇಷದೇವತಾಸಮುದಾಯಾಯ ನಮಃ
21. ಓಂ ಶ್ರೀಸುಧೀಂದ್ರವರಪುತ್ರಕಾಯ ನಮಃ
22. ಓಂ ಶ್ರೀವೈಷ್ಣವಸಿದ್ದಾಂತಪ್ರತಿಷ್ಠಾಪಕಾಯ ನಮಃ
23. ಓಂ ಶ್ರೀಯತಿಕುಲತಿಲಕಾಯ ನಮಃ
24. ಓಂ ಶ್ರೀಜ್ಞಾನಭಕ್ತ್ಯಾಯುರಾರೋಗ್ಯಸುಪುತ್ರಾದಿವರ್ಧನಾಯ ನಮಃ
25. ಓಂ ಶ್ರೀಪ್ರತಿವಾದಿಮಾತಂಗಕಂಠೀರವಾಯ ನಮಃ
26. ಓಂ ಶ್ರೀಸರ್ವವಿದ್ಯಾಪ್ರವೀಣಾಯ ನಮಃ
27. ಓಂ ಶ್ರೀದಯಾದಕ್ಷಿಣ್ಯವೈರಗ್ಯಶಾಲಿನೇ ನಮಃ
28. ಓಂ ಶ್ರೀರಾಮಪಾದಾಂಬುಜಾಸಕ್ತಾಯ ನಮಃ
29. ಓಂ ಶ್ರೀರಾಮದಾಸಪದಾಸಕ್ತಾಯ ನಮಃ
30. ಓಂ ಶ್ರೀರಾಮಕಥಾಸಕ್ತಾಯ ನಮಃ
31. ಓಂ ಶ್ರೀದುರ್ವಾದಿಧ್ವಾಂತರವಯೇ ನಮಃ
32. ಓಂ ಶ್ರೀವೈಷ್ಣವೇಂದೀವರೇಂದವೇ ನಮಃ
33. ಓಂ ಶ್ರೀಶಾಪಾನುಗ್ರಹಶಕ್ತಾಯ ನಮಃ
34. ಓಂ ಶ್ರೀಅಗಮ್ಯಮಹಿಮ್ನೇ ನಮಃ
35. ಓಂ ಶ್ರೀಮಹಾಯಶಸೇ ನಮಃ
36. ಓಂ ಶ್ರೀಮಧ್ವಮತದುಗ್ಧಾಬ್ಧಿಚಂದ್ರಮಸೇ ನಮಃ
37. ಓಂ ಶ್ರೀಪದವಾಕ್ಯಪ್ರಮಾಣಪಾರಾವಾರಪಾರಂಗತಾಯ ನಮಃ
38. ಓಂ ಶ್ರೀಯೋಗೀಂದ್ರಗುರುವೇ ನಮಃ
39. ಓಂ ಶ್ರೀಮಂತ್ರಾಲಯನಿಲಯಾಯ ನಮಃ
40. ಓಂ ಶ್ರೀಪರಮಹಂಸಪರಿವ್ರಾಜಕಾಚಾರ್ಯಾಯ ನಮಃ
41. ಓಂ ಶ್ರೀಸಮಗ್ರಟೀಕಾವ್ಯಾಖ್ಯಾಕರ್ತ್ರೇ ನಮಃ
42. ಓಂ ಶ್ರೀಚಂದ್ರಿಕಾಪ್ರಕಾಶಕಾರಿಣೇ ನಮಃ
43. ಓಂ ಶ್ರೀಸತ್ಯಾಧಿರಾಜಗುರುವೇ ನಮಃ
44. ಓಂ ಶ್ರೀಭಕ್ತವತ್ಸಲಾಯ ನಮಃ
45. ಓಂ ಶ್ರೀಪ್ರತ್ಯಕ್ಷಫಲದಾಯ ನಮಃ
46. ಓಂ ಶ್ರೀಜ್ಞಾನಪ್ರದಾಯಕಾಯ ನಮಃ
47. ಓಂ ಶ್ರೀಸರ್ವಪೂಜ್ಯಾಯ ನಮಃ
48. ಓಂ ಶ್ರೀತರ್ಕತಾಂಡವವ್ಯಾಖ್ಯಾತ್ರೇ ನಮಃ
49. ಓಂ ಶ್ರೀಕೃಷ್ಣೋಪಾಸಕಾಯ ನಮಃ
50. ಓಂ ಶ್ರೀಕೃಷ್ಣದ್ವೈಪಾಯನಸುಹೃದೇ ನಮಃ
51. ಓಂ ಶ್ರೀಆರ್ಯಾನುವರ್ತಿನೇ ನಮಃ
52. ಓಂ ಶ್ರೀನಿರಸ್ತದೋಷಾಯ ನಮಃ
53. ಓಂ ಶ್ರೀನಿರವದ್ಯವೇಷಾಯ ನಮಃ
54. ಓಂ ಶ್ರೀಪ್ರತ್ಯರ್ಥಿಮೂಕತ್ವನಿಧಾನಭಾಷಾಯ ನಮಃ
55. ಓಂ ಶ್ರೀಯಮನಿಯಮಾಸನಪ್ರಾಣಾಮ್ಯಾಮಪ್ರತ್ಯಾಹಾರಧ್ಯಾನಧಾರಣ ಸಮಾಧ್ಯಷ್ಟಾಂಗಯೋಗಾನುಷ್ಠನನಿಯಮಾಯ ನಮಃ
56. ಓಂ ಶ್ರೀಸಂಗಾಮ್ನಾಯಕುಶಲಾಯ ನಮಃ
57. ಓಂ ಶ್ರೀಜ್ಞಾನಮೂರ್ತಯೇ ನಮಃ
58. ಓಂ ಶ್ರೀತಪೋಮೂರ್ತಯೇ ನಮಃ
59. ಓಂ ಶ್ರೀಜಪಪ್ರಖ್ಯಾತಾಯ ನಮಃ
60. ಓಂ ಶ್ರೀದುಷ್ಟಶಿಕ್ಷಕಾಯ ನಮಃ
61. ಓಂ ಶ್ರೀಶಿಷ್ಟರಕ್ಷಕಾಯ ನಮಃ
62. ಓಂ ಶ್ರೀಟೀಕಾಪ್ರತ್ಯಕ್ಷರಾರ್ಥಪ್ರಕಾಶಕಾಯ ನಮಃ
63. ಓಂ ಶ್ರಿಶೈವಪಾಷಂಡಧ್ವಾಂತಭಾಸ್ಕರಾಯ ನಮಃ
64. ಓಂ ಶ್ರೀರಾಮಾನುಜಮತಮರ್ದಕಾಯ ನಮಃ
65. ಓಂ ಶ್ರೀವಿಷ್ಣುಭಕ್ತಾಗ್ರೇಸರಾಯ ನಮಃ
66. ಓಂ ಶ್ರೀಸದೋಪಾಸಿತಹನುಮತೇ ನಮಃ
67. ಓಂ ಶ್ರೀಪಂಚಭೇದಪ್ರತ್ಯಕ್ಷಸ್ಥಾಪಕಾಯ ನಮಃ
68. ಓಂ ಶ್ರೀಅದ್ವೈತಮೂಲನಿಕೃಂತನಾಯ ನಮಃ
69. ಓಂ ಶ್ರೀಕುಷ್ಠಾದಿರೋಗನಾಶಕಾಯು ನಮಃ
70. ಓಂ ಶ್ರೀಅಗ್ರ್ಯಸಂಪತ್ಪ್ರದಾತ್ರೇ ನಮಃ
71. ಓಂ ಶ್ರೀಬ್ರಾಹ್ಮಣಪ್ರಿಯಾಯ ನಮಃ
72. ಓಂ ಶ್ರೀವಾಸುದೇವಚಲಪರಿಮಾಯ ನಮಃ
73. ಓಂ ಶ್ರೀಕೋವಿದೇಶಾಯ ನಮಃ
74. ಓಂ ಶ್ರೀವೃಂದಾವನರೂಪಿಣೇ ನಮಃ
75. ಓಂ ಶ್ರೀವೃಂದಾವನಾಂತರ್ಗತಾಯ ನಮಃ
76. ಓಂ ಶ್ರೀಚತುರೂಪಾಶ್ರಯಾಯ ನಮಃ
77. ಓಂ ಶ್ರೀನಿರೀಶ್ವರಮತನಿವರ್ತಕಾಯ ನಮಃ
78. ಓಂ ಶ್ರೀಸಂಪ್ರದಾಯಪ್ರವರ್ತಕಾಯ ನಮಃ
79. ಓಂ ಶ್ರೀಜಯರಾಜಮುಖ್ಯಾಭಿಪ್ರಾಯವೇತ್ರೇ ನಮಃ
80. ಓಂ ಶ್ರೀಭಾಷ್ಯಟೀಕಾದ್ಯವಿರುದ್ಧಗ್ರಂಥಕರ್ತ್ರೇ ನಮಃ
81. ಓಂ ಶ್ರೀಸದಾ ಸ್ವಸ್ಥಾನಕ್ಷೇಮಚಿಂತಕಾಯ ನಮಃ
82. ಓಂ ಶ್ರೀಕಾಷಾಯಚೈಲಭೂಷಿತಾಯ ನಮಃ
83. ಓಂ ಶ್ರೀದಂಡಕಮಂಡಲುಮಂಡಿತಾಯ ನಮಃ
84. ಓಂ ಶ್ರೀಚಕ್ರರೂಪಹರಿನಿವಾಸಾಯ ನಮಃ
85. ಓಂ ಶ್ರೀಲಸದೂರ್ಧ್ವಪುಂಡ್ರಾಯ ನಮಃ
86. ಓಂ ಶ್ರೀಗಾತ್ರಧೃತವಿಷ್ಣುಧರಾಯ ನಮಃ
87. ಓಂ ಶ್ರೀಸರ್ವಸಜ್ಜನವಂದಿತಾಯ ನಮಃ
88. ಓಂ ಶ್ರೀಮಾಯಿಕರ್ಮಂದಿಮದಮರ್ದಕಾಯ ನಮಃ
89. ಓಂ ಶ್ರೀವಾದಾವಲ್ಯರ್ಥವಾದಿನೇ ನಮಃ
90. ಓಂ ಶ್ರೀಸಾಂಶಜೇವಾಯ ನಮಃ
91. ಓಂ ಶ್ರೀಮಾದ್ಯಮಿಕಮತವನಕುಠಾರಾಯ ನಮಃ
92. ಓಂ ಶ್ರೀಪ್ರತಿಪದಂ ಪ್ರತ್ಯಕ್ಷರಂ ಭಾಷ್ಯಟೀಕಾರ್ಥಗ್ರಾಹಿಣೇ ನಮಃ
93. ಓಂ ಶ್ರೀಅಮಾನುಷವಿಗ್ರಹಾಯ ನಮಃ
94. ಓಂ ಶ್ರೀಕಂದರ್ಪವೈರಿಣೇ ನಮಃ
95. ಓಂ ಶ್ರೀವೈರಾಗ್ಯನಿಧಯೇ ನಮಃ
96. ಓಂ ಶ್ರೀಭಾಟ್ಟಸಂಗ್ರಹಕರ್ತ್ರೇ ನಮಃ
97. ಓಂ ಶ್ರೀದೂರೀಕೃತಾರಿಷಡ್ವರ್ಗಾಯ ನಮಃ
98. ಓಂ ಶ್ರೀಭ್ರಾಂತಿಲೇಶವಿದುರಾಯ ನಮಃ
99. ಓಂ ಶ್ರೀಸರ್ವಪಂಡಿತಸಮ್ಮತಾಯ ನಮಃ
100. ಓಂ ಶ್ರೀ ಅನಂತವೃಂದಾವನನಿಲಯಾಯ ನಮಃ
101. ಓಂ ಶ್ರೀಸ್ವಪ್ನಭಾವ್ಯರ್ಥವಕ್ತ್ರೇ ನಮಃ
102. ಓಂ ಶ್ರೀಯಥಾರ್ಥವಚನಾಯ ನಮಃ
103. ಓಂ ಶ್ರೀಸರ್ವಗುಣಸಮೃದ್ಧಾಯ ನಮಃ
104. ಓಂ ಶ್ರೀಅನಾದ್ಯವಿಚ್ಛಿನ್ನಗುರುಪರಂಪರೋಪದೇಶಲಬ್ಧಮಂತ್ರಜಪ್ತ್ರೇ ನಮಃ
105. ಓಂ ಶ್ರೀಧೃತಸರ್ವವ್ರತಾಯ ನಮಃ
106. ಓಂ ಶ್ರೀರಾಜಾಧಿರಾಜಾಯ ನಮಃ
107. ಓಂ ಶ್ರೀಗುರುಸಾರ್ವಭೌಮಾಯ ನಮಃ
108. ಓಂ ಶ್ರೀಶ್ರೀಮೂಲರಾಮಾರ್ಚಕಶ್ರೀಮದ್ರಾಘವೇಂದ್ರಯತೀಂದ್ರಾಯ ನಮಃ
|| ಇತಿ ಶ್ರೀಮದಪ್ಪಣ್ಣಾಚಾರ್ಯ ಕೃತ ಶ್ರೀರಾಘವೇಂದ್ರಾಷ್ಟೋತ್ತರಶತನಾಮಾವಳಿಃ ಸಮಾಪ್ತಾಃ||
ಶ್ರೀಮದ್ರಾಘವೇಂದ್ರತೀರ್ಥ ಗುರುವಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಮನ್ಮೂಲರಾಮ ದೇವರು ಎಲ್ಲರನ್ನು ಅನುಗ್ರಹಿಸಲಿ.
ಶುಭ ದಿನ ಶುಭ ವಾರದಂದು ಶ್ರೀ ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಸ್ಮರಣೆ ಯೊಂದಿಗೆ ನಮನಗಳು.
ಶ್ರೀ ರಾಘವೇಂದ್ರ ಗುರು ಸಾರ್ವಭೌಮರು (ಪ್ರಲ್ಹಾದ ಅಂಶ).
ಶ್ರೀ ರಾಘವೇಂದ್ರ ಗುರುವೇ ನಮೋ ಅತ್ಯಂತ ದಯಾಲವೇ//.
ಮೇಘಶ್ಯಾಮಲ ರಾಮಾರಾಧಕ ಅಮೋಘ ಬೋಧ ತೇ ನಮೋ ನಮೋ//.
ದೇಶಿಕವರ ಸಂಸೇವ್ಯ ನಮೋ ನಮೋ/ದೋಷವಿವರ್ಜಿತ ಕವ್ಯ ನಮೋ ನಮೋ//.
(ಶ್ರೀ ಜಗನ್ನಾಥ ದಾಸರು)..
ಶ್ರೀ ಮಾಧ್ವ ಸಿದ್ಧಾಂತದ ಪತಾಕೆಯನ್ನು ವಿಶ್ವ ದಲ್ಲೆಡೆ ಹಾರಿಸಿ,ಮಾನವ ಕುಲದ ಉದ್ಧಾರಕ್ಕಾಗಿ ವೇದಾಂತ ಸಾಮ್ರಾಜ್ಯದ ಪಟ್ಟವನ್ನೇರಿ ಗುರು ಗಳಾದ ಶ್ರೀ ಸುಧೀಂದ್ರ ತೀರ್ಥ ರಿಂದ ಮಹಾ ವೈಭವ ದಿಂದ ಪಟ್ಟಾಭಿಷೇಕ ಮಹೋತ್ಸವವನ್ನು , ತಂಜಾವೂರಿನ ಮಹಾರಾಜರಿಂದ ಸಕಲ ಮರ್ಯಾದೆ ಗಳಿಂದ
ಸಮೇತ ಮಹಾ ಪಟ್ಟಾಭಿಷೇಕ ನಡೆದ ಸುದಿನ ಇಂದು.
ಇಂದಿನ ಶುಭ ದಿನವನ್ನು ಮತ್ತು ವರ್ಧಂತಿ ಮಹೋತ್ಸವ (ಜನ್ಮ ದಿನೋತ್ಸವ ವನ್ನು ಭಕ್ತಿ, ಶ್ರದ್ಧೆಗಳಿಂದ ಆಚರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹ ವನ್ನು ಪಡೆದು ಧನ್ಯತೆ ಹೊಂದೋಣ.
ಶ್ರೀ ರಾಘವೇಂದ್ರಾಯ ನಮಃ.