Friday, 30 April 2021

galagali avva 1760 ಗಲಗಲಿ ಅವ್ವ

Galagali Avva 

ದಾಸರ ಹೆಸರು : ಗಲಗಲಿಅವ್ವನವರು

ಜನ್ಮ ಸ್ಥಳ     : ಭೋಗಾಪುರ (ಜಿಲ್ಹೆ ಕೊಪ್ಪಳ)

ತಂದೆ ಹೆಸರು : ಅಲಭ್ಯ (ಭೋಗಾಪುರೇಶ ದೇವಸ್ಥಾನ ಅರ್ಚಕರ ಮಗಳು)

ಕಾಲ             : check 1670 to 

ಅಂಕಿತನಾಮ : ರಮೇಶ, ರಮೇಶ, ರವಿಯರಸು

ಲಭ್ಯ ಕೀರ್ತನೆಗಳ ಸಂಖ್ಯೆ: 266

ಗುರುವಿನ ಹೆಸರು : (ಮಕ್ಕಳಿಂದಲೇ ಕೇಳಿ ತಿಳಿದದ್ದು)

ರೂಪ         : ಕೆಂಪು ಮೈ ಬಣ್ಣದ ಮಧ್ಯಮಗಾತ್ರದವರು

ಪೂರ್ವಾಶ್ರಮದ ಹೆಸರು: ರಮಾಬಾಯಿ

ಮಕ್ಕಳು: ಅವರ ಹೆಸರು: ಅಲಭ್ಯ (ನಿರ್ಧರಿಸಬೇಕಿದೆ)

ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು: ಅಲಂಕಾರ ತಾರತಮ್ಯ ಸೇತು ಬಂದನಹಾಡುಗಳು (ಶ್ರೀ ಕೃಷ್ಣ ಜನ್ಮದ ಸುದೀರ್ಘ ಜೋಗುಳ ಹಾಡು. 57 ನುಡಿಗಳು.

ಪತಿ: ಪತ್ನಿಯ ಹೆಸರು: ಗಲಗಲಿ ಮುದ್ದಲಾಚಾರ್ಯ

ಕಾಲವಾದ ಸ್ಥಳ ಮತ್ತು ದಿನ: ಶೂರ್ಪಾಲಿ (ತಾ. ಜಮಖಂಡಿ)

ಕೃತಿಯ ವೈಶಿಷ್ಟ್ಯ: ಮು್ಯು ಕೊಡುವ ಮತ್ತು ಹಿಂದಿರುಗಿಸುವ ಸಂಪ್ರದಾಯದ ನೆಪದಲ್ಲಿ ಭಾರತ ಭಾಗವತಾರಿ ಪುರಾಣ ಪ್ರಸಂಗಗಳು, ಪುರಾಣವಾತ್ರಗಳು ಅವರ ಸ್ವಭಾವ ಇತ್ಯಾದಿಗಳ ಚಿತ್ರಣವಿದೆ. ಮಾತಿನ ಚಕಮಕಿ, ಹಾಸ್ಯ ವಿಡಂಬನೆ ಸರ್ಡರ ಸಂಭವ್ರಗಳ ನಿರೂಪಣೆ ಲವಲವಿಕೆುಂದ ಕೂಡಿದೆ.

ಇತರೆ : 1. ಇವರು ಪ್ರಥಮ ಹರಿದಾಸ ಮಹಿಳೆ 3. ಅವ್ವನವರನ್ನು ಅವರ ಪತಿ, ಮುದ್ಗಲಾಚಾರ್ಯರನ್ನು ಆದರಿಸುವಂತೆಯೇ ಮೈಸೂರಿನ ಅರಸರು ಸನ್ಮಾನಿಸುತ್ತಿದ್ದರು. ಇವರಲ್ಲಿಯ ವಿಶೇಷ ಪಾಂಡಿತ್ಯ ದ್ವೇವೀಶಕ್ತಿ ಭಕ್ತಿಗಳಿಂದ್ದಾಗಿ ಅರಮನೆಯಲ್ಲೇ ಇವರಿಗೆ ದೇವರ ಪೂಜೆ ನೈವೇದ್ಯಗಳ ವ್ಯವಸ್ಥೆಯನ್ನೂ ಮಾಡಿದರು. ಪಲ್ಲಕ್ಕಿ ಮೇಣೆ ಛತ್ತ ಚಾಮರ ಧನಿಕನ ಭೂಮಿ ಕಾಣಿಕೆಗಳನ್ನು ಕೊಟ್ಟು ಗೌರವಿಸಿದ್ದಾರೆ. 4. ಇವರ ಶಿಷ್ಯೆ ಭಾಗವ್ವ, ಇವರ ಒಂದಿಷ್ಟು ಕೀರ್ತತಿಗಳೂ ಲಭ್ಯವಾಗಿದೆ. ಪ್ರಯಾಗವ್ವ, ಪಾಂಡುರಂಗ ಅಂಕಿತಗಳಿಂದ ಹಾಡುಗಳನ್ನು ರಚಿಸಿದ್ದಾರೆ. ವಿಜಯಧ ಜ್ವೀಯ ಟೀಕೆಗೆ ಅನುಗುಣವಾಗಿ ಭಾಗವತದ ತೃತೀಯಸ್ಕಂದವನ್ನು ಸರಸಸುಂದರವಾಗಿ ಕನ್ನಡದಲ್ಲಿ ರಚಿಸಿರುವರು.

****



info from kannadasiri.in

By Hanamanta Tasgaonkar

ಕನ್ನಡ ಸಾಹಿತ್ಯಕ್ಕೆ, ಅದರಲ್ಲೂ ಮಾಧ್ವವಾಙ್ಮಯಕ್ಕೆ ಮಹಿಳೆಯರ ಕೊಡುಗೆಯೂ ಗಣನೀಯವಾಗಿದೆ. ಶ್ರೀ ಪುರಂದರದಾಸರ ಪತ್ನಿ-ಪುತ್ರಿಯರು, ಶ್ರೀ ರಾಘವೇಂದ್ರಸ್ವಾಮಿಗಳ ತಾಯಿಯವರು ಕಾವ್ಯರಚಿಸಿದ್ದರೆಂಬ ಮಾತಿದ್ದರೂ ಈಗ ಉಪಲಬ್ದವಿರುವ ಮಹಿಳಾ ಕೀರ್ತನಕಾರರಲ್ಲಿ ಗಲಗಲಿಯ ಅವ್ವನವರೇ ಮೊದಲಿಗರೆಂದು ಹೇಳಬಹುದು. ಗಲಗಲಿ ಮನೆತನ ಹಿಂದಿನಿಂದಲೂ ಶೌರ್ಯ, ಪಾಂಡಿತ್ಯಗಳಿಗೆÉ ಹೆಸರುವಾಸಿ. ಆದಿಲಶಾಹಿ, ನಿಜಾಮರು, ಪೇಶೆÉ್ವ, ರಾಣಿಸರಕಾರ, ಮೈಸೂರು ಅರಸರು ಹಾಗೂ ಇದೀಗ ಭಾರತ ಸರಕಾರದಿಂದಲೂ ಮಾನ-ಸಮ್ಮಾನಗಳನ್ನು ಪಡೆದ ಪ್ರಾಜ್ಞರು ಈ ಮನೆತನದವರು. ಇಂದು ರಾಷ್ಟ್ರಮಟ್ಟದ ಮನ್ನಣೆಗಳಿಸಿರುವ, ಸಂಸ್ಕøತ-ಕನ್ನಡ ಉಭಯ ಭಾಷಾಪ್ರವೀಣ ಗಲಗಲಿ ಆಚಾರ್ಯರ ವಂಶದ ಹಿರಿಯರು, ಗಲಗಲಿಯ ಅವ್ವನವರು. ಈಕೆ ಗಲಗಲಿ ಆಚಾರ್ಯರ ವಂಶದ, ಮಹರ್ಷಿಗಳ ಮನೆತನದವರೆÀಂದೇ ಪ್ರಸಿದ್ಧರಾಗಿದ್ದ ಶ್ರೀ ಮುದ್ಗಲಾಚಾರ್ಯರ ಧರ್ಮಪತ್ನಿ, ಹೆಸರು ರಮಾ. ಗಲಗಲಿ ವಂಶಸ್ತರು 'ಅಪ್ಪನವರು - ಅವ್ವನವರು’ - ಎಂದು ಮುದ್ಗಲಾ ಚಾರ್ಯರು ಮತ್ತು ರಮಾ ದಂಪತಿಗಳನ್ನು ಗೌರವಿಸಿ ಪೂಜಿಸುತ್ತಾರೆ. ಕ್ರಿ.ಶ.1927ರ ‘ಬಾಲಬೋಧ' (ಬೆಳಗಾವಿಯ ಶ್ರೀ ರಾಮತತ್ವ ಪ್ರಕಾಶನದವರು ಪ್ರಕಟಿಸಿದ ಪುಸ್ತಕ) ಪುಸ್ತಕದ ಪ್ರಸ್ತಾವನೆಯನ್ನು ಬರೆದಿರುವ ಗಲಗಲಿ ಮಧ್ವಮುನಿ ಆಚಾರ್ಯರು' ಅನುಸರಿಸಿ ಬರೆದ ಸಂಕ್ಷಿಪ್ತ ಚರಿತ್ರೆ'ಯಿಂದ ತಾವು ವಿಷಯ ಗ್ರಹಣ ಮಾಡಿರುವುದಾಗಿ ಸೂಚಿಸಿದ್ದಾರೆ. ಅದರಲ್ಲಿ ರಮಾ ಹಾಗೂ ಮುದ್ಗಲಾಚಾರ್ಯರ ಪಾಣಿಗ್ರಹಣ ಸಂದರ್ಭದ ಉಲ್ಲೇಖವಿದೆ. ಭೋಗಾಪುರ ಗ್ರಾಮದ ಶ್ಯಾನುಭೋಗರ ಮಗಳಾದ ಈಕೆಯನ್ನು ಶ್ರೀ ಮುದ್ಗಲಾಚಾರ್ಯರು ಶಾಸ್ತ್ರ ಸಂಪನ್ನರಾದ ತಮ್ಮ ಮಕ್ಕಳೆಲ್ಲರ ಅನುಮತಿಪಡೆದು, ಕನ್ಯೆಯ ಮಾತಾಪಿತೃಗಳ ಸಮ್ಮತಿಯೊಂದಿಗೇ ವಿವಾಹವಾದರೆಂದು ಹೇಳಿದೆÀ. ವಿವಾಹದ ವಿಚಾರವೂ ತುಂಬ ಕುತೂಹಲಕಾರಿಯಾದದ್ದೇ. ಒಮ್ಮೆ ಬಾಗಲಕೋಟ ಜಿಲ್ಲೆಯ ಗಲಗಲಿಯ ಪಂಡಿತ ಮುದ್ಗಲಾಚಾರ್ಯರು ತಮ್ಮ ಐದುಜನ ವಿದ್ವಾಂಸ ಪುತ್ರರೊಂದಿಗೆ ಮೈಸೂರಿನ ರಾಜಾಸ್ಥಾನಕ್ಕೆ ಹೋಗಿದ್ದರಂತೆ. ಅಲ್ಲಿಯ ವಿದ್ವಾಂಸರನ್ನು ವಾದದಲ್ಲಿ, ಪಾಂಡಿತ್ಯದಲ್ಲಿ ಸೋಲಿಸಿ, ಮಾನ-ಮರ್ಯಾದೆಯೊಂದಿಗೆ ಹಿಂತಿರುಗಿ ಬರುವಾಗ ಭೋಗಾಪುರ ಗ್ರಾಮದ ಭೋಗಾಪುರೇಶ ದೇವಸ್ಥಾನದಲ್ಲಿ ತಂಗಿದ್ದರು. ಅಲ್ಲಿ ಓಡಾಡಿಕೊಂಡಿದ್ದ ಅವಿವಾಹಿತೆ ಶ್ಯಾನುಭೋಗರ1 ಮಗಳು ಹನ್ನೆರಡರ ಬಾಲೆಯನ್ನು ಕಂಡು, ಅವಳನ್ನೆ ಮದುವೆಯಾಗಲು ನಿರ್ಧರಿಸಿದರು. ಮೊದಲು ಮಕ್ಕಳ ಒಪ್ಪಿಗೆ ಪಡೆದು ಬಳಿಕ ಶ್ಯಾನುಭೋಗರಿಗೆ ಸಾವಿರದ ಇನ್ನೂರು ರೂ. ತೆರಕೊಟ್ಟು, ತೊಂಬತ್ತು ವಯಸ್ಸಿನ ವಯೋವೃದ್ಧ ಮುದ್ಗಲಾಚಾರ್ಯರು2, ಈ ಕನ್ಯೆಯನ್ನು ಮದುವೆ ಮಾಡಿಕೊಂಡರು; ಮದುವೆಯಾದ ಎಂಟೇ ದಿನಗಳಲ್ಲಿ ಪರಲೋಕ ಯಾತ್ರೆ ಮಾಡಿದರು. ಸಾಯುವಾಗ ಮಕ್ಕಳನ್ನು ಬಳಿಗೆ ಕರೆದು, ತಮ್ಮ ವಿಧವೆ ಹೆಂಡತಿಗೆ ನೀವೇ ವಿದ್ಯಾಭ್ಯಾಸ ಮಾಡಿಸಬೇಕೆಂದು ಹೇಳಿದ್ದರಿಂದ ಮಕ್ಕಳೇ ಅವ್ವನಿಗೆ ವಿದ್ಯಾಗುರುಗಳೂ ಆದರು. ಕ್ರಮೇಣ ಅವ್ವನವರು ನ್ಯಾಯಶಾಸ್ತ್ರದಲ್ಲಿ ವಿಶೇಷ ಪರಿಣಿತಿಯನ್ನು ಪಡೆದದ್ದಲ್ಲದೆ ಪುಣೆಯ ಪೇಶ್ವೆ ದರ್ಬಾರಿನಲ್ಲಿ, ಔತ್ತರೇಯ ವಿದ್ವಾಂಸರು ದಕ್ಷಿಣದ ವಿದ್ವಾಂಸರನ್ನೆಲ್ಲ ಸೋಲಿಸಿದೆವೆಂದು ಬೀಗುತ್ತಿದ್ದಾಗ ಮುದ್ಗಲಾಚಾರ್ಯರ ಮಕ್ಕಳಾದ ಪಂಡಿತ ಷಟ್ಕರು ಸೋಲುವ ಸ್ಥಿತಿ ಬಂತೆಂದೂ ಆಗÀ ಅವ್ವನವರ ಸಹಾಯ ಪಡೆದು ವಾದಮಾಡಿ ಗೆದ್ದರೆಂದೂ ಪ್ರತೀತಿ. ಈ ಮಾತಿಗೆ ಪೇಶವಾಯಿಯವರು ಅವ್ವನವರಿಗೆ ಬಾಗಲಕೋಟ ಜಿಲ್ಲೆಯ ಬೀಳಗಿ ಟ್ರೇಜರಿಯಲ್ಲಿ ವರ್ಷಾಶನ ಹಾಕಿಕೊಟ್ಟಿದ್ದುದೇ ಸಾಕ್ಷಿ.

ಅವ್ವನವರ ಹಾಡುಗಳಲ್ಲಿ ದೊರೆಯುವ ಆಧಾರಗಳಿಂದ ಅವರ ಕಾಲವನ್ನು ಹೀಗೆ ಗುರ್ತಿಸಬಹುದು. ತಮ್ಮ ಮುಯ್ಯದ ಹಾಡಿನಲ್ಲಿ ಹಾಡು ಬರೆದು ಮುಗಿಸಿದ ದಿನವನ್ನು ಹೀಗೆ ಹೇಳಿದ್ದಾರೆ.

'ಜ್ಯೇಷ್ಠ ಬಹುಳ ಉತ್ಕøಷ್ಠ ಪಂಚಮಿತಿಥಿ

ಶ್ರೇಷ್ಠವಾಗಿದ್ದ ಬುಧವಾರ| ಈ ಕÀವನ ಶ್ರೀ

ಕೃಷ್ಣಗರ್ಪಿಸಿದೆ ಹರುಷಾಗಿ

ಭಾವ (ಯುವ?) ಸಂವತ್ಸರದಿ ದೇವಾಧಿದೇವನ

ಪಾವನವಾದ ಚರಿತ್ರೆಯ ರಚಿಸಿದೆ'

ಈ ವಿವರಗಳು ಎಫಿಮೆರಿಸ್ ಪ್ರಕಾರ 1695ನೇ ಇಸವಿ ಮೇ 22ನೇ ತಾರೀಕು ಬುಧವಾರ ಸರಿಯಾಗುತ್ತವೆ. ಉಳಿದಂತೆ ಕೆಲವು ಪೂರಕ ಅಂಶಗಳು ಹೀಗಿವೆ:

1. ಒಮ್ಮೆ ಶ್ರೀ ಮುದ್ಗಲಾಚಾರ್ಯರು ಉತ್ತರಾದಿಮಠದ ಸ್ವಾಮಿಗಳಾಗಿದ್ದ ಶ್ರೀ ಸತ್ಯಪೂರ್ಣ ತೀರ್ಥರನ್ನು ಸುಧಾಮಂಗಳಕ್ಕೆಳ ಆಮಂತ್ರಿಸಿದಾಗ ಶ್ರೀಪಾದಂಗಳವರು ಒಂದು ನಿರೂಪ ಪತ್ರ ಬರೆದಿದ್ದು, ಅದರಲ್ಲಿ ‘ಜಯ ಸಂವತ್ಸರದ ವೈಶಾಖ ಶುದ್ಧ ದಶಮಿ...' ಎಂಬ ಉಲ್ಲೇಖವಿದ್ದು, ‘ಮಿಗಿಲಾದ ವರ್ತಮಾನ ವಿದ್ಯಾಧೀಶಾಚಾರ್ಯರು ಹೇಳಲಾಗಿ ಮನಸ್ಸಿಗೆ ಬಂದಿತು ಇತಿ ನಿರೂಪ' - ಎಂದಿರುವರು. ಅಂದರೆ, ಮುದ್ಗಲಾಚಾರ್ಯರು ತಮ್ಮ ಪುತ್ರ ವಿದ್ಯಾಧೀಶಾಚಾರ್ಯರೊಡನೆ ಶ್ರೀಗಳವರಿಗೆ ಹೇಳಿ ಕಳುಹಿಸಿದ್ದರೆಂಬ ವಿಚಾರ ಇಲ್ಲಿ ಸ್ಪಷ್ಟವಾಗಿದೆ. ಮಠಾಧೀಶರ ಮೂಲ ಪತ್ರದಿಂದ ಈ ವಿಚಾರ ತಿಳಿಯುತ್ತದೆ.

2. ಪೇಶವೆ ದರ್ಬಾರಿನಲ್ಲಿ ಅವ್ವನವರು ತಮ್ಮ ವಿದ್ವತ್ತನ್ನು ಪ್ರದರ್ಶಿಸಿ ಜಯಗಳಿಸಿ ಕೊಟ್ಟದ್ದಕ್ಕಾಗಿ ವರ್ಷಾಶನ ಪಡೆದ ವಿಚಾರವನ್ನು ಪ್ರಸ್ತಾಪಿಸಲಾಗಿದೆಯಷ್ಟೆ. ಕ್ರಿ.ಶ.1740ರ ಅನಂತರ ಪೇಶವೆಗಳ ಆಳ್ವಿಕೆಯ ಅವಸಾನ ಪ್ರಾರಂಭವಾಗುವುದರಿಂದ ಅದಕ್ಕೆ ಮುಂಚೆಯೇ ಅವ್ವನವರು ಈ ವರ್ಷಾಶನವನ್ನು ಪಡೆದಿರಬೇಕು.

3. ಮೈಸೂರಿನ ಅರಸರಾಗಿದ್ದ ಶ್ರೀ ಕೃಷ್ಣರಾಜ ಒಡೆಯರಿಂದಲೂ ಅವ್ವನವರಿಗೆ ಸನ್ಮಾನದೊರಕಿದೆ. ಅರಸರು ಇವರಿಗೆ ಮೇಣೆ, ನಗನಾಣ್ಯ, ವಸ್ತ್ರಾಭರಣಗಳನ್ನಿತ್ತು ಗೌರವಿಸಿದ್ದರು. ಇವರ ವಿದ್ವತ್ತನ್ನು ಕಂಡು ಕೇಳಿದ್ದ ರಾಜರು ಸ್ವತಃ ಇವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ವೈಭವದಿಂದ ಅರಮನೆಗೆ ಕರೆದುಕೊಂಡು ಹೋಗಿದ್ದರೆನ್ನಲಾಗಿದೆ.

4. ಬಾಗಲಕೋಟೆಯಲ್ಲಿ ಜನಿಸಿದ ಶ್ರೀ ಪ್ರಸನ್ನವೆಂಕಟದಾಸರು (ಕ್ರಿ.ಶ.1680/1752) ಈ ಮುದ್ಗಲಾಚಾರ್ಯರ ಶಿಷ್ಯರು. ಇವರಲ್ಲೇ ಶಾಸ್ತ್ರಾಭ್ಯಾಸ ಮಾಡಿದವರು. ಗುರುಗಳನ್ನು ಕುರಿತು 'ಭಜಿಸಿ ಬದುಕೆಲೋ ಮುದ್ಗಲಾರ್ಯರನು' ಎಂದು ಸ್ತುತಿಸಿರುವರು. ಅಲ್ಲದೆ 'ಸ್ವೀಯಪಾದ ನೀರಜಾನುರಕ್ತ ಮುದ್ಗಲಸ್ಯಮೇ| ಶ್ರೀಗುರೋರು ಮಾನಸಾಂಬು ಜಾಲಯೋದಯೋದಧಿ :'-ಎಂದಿದ್ದಾರೆ.

ಮೇಲಣ ಈ ಕೆಲವು ಆಧಾರಗಳಿಂದ ಅವ್ವನವರು ಕ್ರಿ.ಶ.1670 ರಿಂದ 1760ರ ಕಾಲದಲ್ಲಿ ಜೀವಿಸಿದ್ದರೆನ್ನ ಬಹುದು. ಅವರು ತಮ್ಮ ಕೊನೆಗಾಲವನ್ನು ತಮ್ಮ ಹಿರಿಯರು ಬಾಳಿ ಬದುಕಿದ್ದ ಶೂರ್ಪಾಲಿ ಗ್ರಾಮದಲ್ಲೇ ಕಳೆದು, ಅಲ್ಲಿಯೇ ಹರಿಪಾದವನ್ನು ಸೇರಿದರು.

ಇನ್ನೊಂದು ಸ್ವಾರಸ್ಯವಾದ ವಿಚಾರವೆಂದರೆ ಅವ್ವನವರು ತಮ್ಮ ಹಾಡಿನಲ್ಲಿ ಗುರುಪರಂಪರೆ ಹೇಳುತ್ತ ಕ್ರಿ.ಶ.1797ರಲ್ಲಿದ್ದ ಶ್ರೀ ಸತ್ಯಧರ್ಮ ತೀರ್ಥರನ್ನೂ ಸ್ತುತಿಸಿದ್ದಾರೆ ಬಹುಶಃ ಈ ಹೆಸರನ್ನು ಅಂದು ಹಾಡನ್ನು ಪ್ರತಿ ಮಾಡಿದವರು ಬರೆದು ಸೇರಿಸಿರಬೇಕು; ಅಥವಾ ಅವ್ವನವರು ದೀರ್ಘಾಯುಷಿಗಳಾಗಿದ್ದು ಸು.125 ವರ್ಷಗಳ ಕಾಲ ಬಾಳಿ ಬದುಕಿದ್ದಿರಬೇಕು. ಹೀಗಾಗಿ ಅವ್ವನವರ ಕಾಲವನ್ನು ಖಚಿತವಾಗಿ ಹೇಳುವುದು ಸಾಧ್ಯವಿಲ್ಲ. ಅದಕ್ಕೆ ಇನ್ನೂ ಸಾಕಷ್ಟು ಸಂಶೋಧನೆ ನಡೆಯಬೇಕಿದೆ.

ಕೀರ್ತನೆಗಳು

ಹದಿನೇಳನೆಯ ಶತಮಾನದ ಉತ್ತರಾರ್ಧ ಹಾಗೂ ಹದಿನೆಂಟನೆಯ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದಿರಬಹುದಾದ ಅವ್ವನವರು ರಾಮೇಶ, ರಮಿಅರಸು, - ಇತ್ಯಾದಿ ಅಂಕಿತಗಳಿಂದ ಭಕ್ತಿಪ್ರದ ಮುಯ್ಯದ ಹಾಡುಗಳು, ಬೀಗರ ಹಾಡುಗಳು ಕೋಲು ಹಾಡುಗಳು, ಶೃಂಗಾರ ತಾರತಮ್ಯ ಮೋರೆಗೆ ನೀರುತಂದ ಹಾಡುಗಳು ಮೊದಲಾದ ಕೃತಿಗಳನ್ನು ರಚಿಸಿರುವುದಾಗಿ ತಿಳಿದುಬರುತ್ತದೆ ಆದರೆ ಈಗ ನಮಗೆದೊರೆತಿರುವುದು ಮುಯ್ಯದ ಹಾಡುಗಳು ಮಾತ್ರ. ಅಡಿಗೆ ಮಾಡುತ್ತ ಮಾಡುತ್ತಲೇ ಆಲಿಸುತ್ತ,ಮಾತ್ರ ಕೇವಲ ಶ್ರವಣ ಮಾತ್ರದಿಂದಲೇ ಮಕ್ಕಳಿಂದ ಶಾಸ್ತ್ರಾಭ್ಯಾಸಮಾಡಿ ಪಂಡಿತರಾದ ಅವ್ವನವರು, ' ಬಲ್ಲಿದ ಗುರುಗಳ ಎಲ್ಲ ಹಿರಿಯರ ದಯದಿ | ಬಲ್ಲಷ್ಟು ತತ್ವರಚಿಸಿದೆ' ಎಂದಿದ್ದಾರೆ.

'ಮುದ್ಗಲ್ಲವಾಸನ ಶುದ್ಧನಾಮದವರು

ಮುದ್ದುಪಾದಗಳ ಸ್ಮರಿಸುತ ರಚಿಸಿದ ಅ

ಪದ್ಧÀ ನೋಡದಲೆ ಹರಿಕೊಳ್ಳೊ'

ಮೂಢಳು ನಾನೊಂದು ಬೇಡಿ ಬಯಸಿಕೊಂಡೆ

ಮಾಡಿದೆ ರಚನಿ ಮನಉಬ್ಬಿ’ - ಎಂದು ವಿನಯವನ್ನು ಮೆರೆದಿರುವರು. ಕೊಂಗಬುದ್ಧಿಯನ್ನು ಅಷ್ಟಮದಗಳನ್ನು ತಂದೆ ರಾಮೇಶನ ಪಾದಕ್ಕೆ ಅರ್ಪಿಸಿ, e್ಞÁನಸೂರ್ಯನ ಉದಯಮಾಡಿಸಬೇಕೆಂದು ಕೇಳುವ ಪರಿ ಹೀಗಿದೆ:

'ಅಷ್ಟಮದವು ತಮವುಎಂಬೊ

ಕುಟ್ಟಿ ಹಿಟ್ಟುಮಾಡಿಸಿ

ಸಿಟ್ಟು ಕೋಪವೆಂಬೊ ಬಣವಿ

ಒಟ್ಟಿ ಕೆಂಡ ಹೇರಿಸಿ'

ಸತ್ವ ರಜವು ತಮವು ಎಂಬೊ

ಕತ್ತಲಿಯ ಅಡಗಿಸಿ

ಮತ್ತೆ e್ಞÁನ ಸೂರ್ಯನ ಪ್ರ

ಶಸ್ತ ಉದಯ ಮಾಡಿಸಿ...'

ಮುಯ್ಯದ ಹಾಡುಗಳು ಅವ್ವನವರ ವಿಶೇಷ ರಚನೆಗಳು. ಪುರಾಣದ ಹಿನ್ನೆಲೆಯಲ್ಲಿ ರಚಿತವಾಗಿರುವಂಥ ಹಾಡುಗಳವು. ‘ಮುಯ್ಯಿ' ಕೊಡುವ ಮತ್ತು ಹಿಂತಿರುಗಿಸುವ ಸಂಪ್ರದಾಯದ ನೆವದಲ್ಲಿ ಭಾರತ ಭಾಗವತಾದಿ ಪುರಾಣ ಪಾತ್ರಗಳು, ಪುರಾಣ ಪ್ರಸಂಗಗಳು, ಅವುಗಳ ಮನೋಧರ್ಮ, ಬಗೆಬಗೆಯ ವರ್ಣನೆಗಳು ನಾಮುಂದು ತಾಮುಂದು ಎಂದು ಧುಮ್ಮಿಕ್ಕುತ್ತವೆ. ಪರಸ್ಪರ ಮಾತಿನ ಚಕಮಕಿ, ಹಾಸ್ಯ, ವಿಡಂಬನೆಗಳು ಮುಗಿಲು ಮುಟ್ಟುತ್ತವೆ, ಅವ್ವನವರ ಮುಯ್ಯದ ಹಾಡುಗಳನ್ನು `ಮುಯ್ಯಕೊಟ್ಟಹಾಡು' ಮತ್ತು `ಮುಯ್ಯ ಹಿಂತಿರುಗಿಸಿದ ಹಾಡು' - ಎಂದು ಎರಡು ನೆಲೆಗಳಲ್ಲಿ ಪರಿಭಾವಿಸಬಹುದು. ಈ ಹಾಡುಗಳಲ್ಲಿ ಉದ್ದಕ್ಕೂ ದ್ರೌಪದಿ, ಸುಭದ್ರೆ, ರುಕ್ಮಿಣಿ, ಸತ್ಯಭಾಮೆ, ಗಂಗೆ-ಗೌರಿ, ಕೃಷ್ಣ, ವಿಷ್ಣು-ಶಿವ ಈ ಎಲ್ಲ ಪಾತ್ರಗಳ ಸಡಗರ ಸಂಭ್ರಮಗಳೊಂದಿಗೆ ಶ್ರೀಹರಿಯ ದಿವ್ಯಲೀಲಾ ವಿಭೂತಿಗಳೂ ಕೋಡಿವರಿದಿವೆ.


ಸುಭದ್ರೆ ದ್ರೌಪದಿಯರು ತಮ್ಮ ಅಣ್ಣ ಶ್ರೀಕೃಷ್ಣನ ದರ್ಶನಾಕಾಂಕ್ಷಿಗÀಳಾಗಿ ಮುಯ್ಯದ ನೆಪ ಮಾಡಿಕೊಂಡು ದ್ವಾರಕೆಗೆ ಬರುವರು. ಕೃಷ್ಣನ ಹಾಗೂ ಅವನ ಪತ್ನಿಯರಾದ ರುಕ್ಮಿಣಿ ಸತ್ಯಭಾಮೆಯರನ್ನು ಮನಸೋಚ್ಛೆ ಸ್ತುತಿಸಿ ಅವರೊಂದಿಗೆ ವಾದ ಮಾಡಿದಂತೆ ನಟಿಸಿ ಧನ್ಯರಾಗುವರು. ತಾವು ಧನ್ಯರಾದುದಲ್ಲದೆ ಮುಂಬರುವ ಭಕ್ತರೂ ಈ ಪದ್ಧತಿಯನ್ನನುಸರಿಸಿ ಧನ್ಯತೆಪಡೆಯಲಿ ಎಂದು ಆಶಿಸಿ, ಆಣಿಯಿಟ್ಟು ತಮ್ಮ ತಮ್ಮ ಮನೆಗಳಿಗೆ ಹಿಂತಿರುಗುವರು ಇದು ಸ್ಥೂಲವಾಗಿ ಮುಯ್ಯಕೊಟ್ಟ ಹಾಡಿನ ವಸ್ತು. ಅಂತೆಯೇ ತಮಗೆ ಪ್ರೀತಿಪಾತ್ರರೂ ಭಗವದ್ಭಕ್ತರೂ ಆದ ಪಾಂಡವರನ್ನು ಕಾಣಲು, ಪ್ರೀತಿಯಿಂದ ಆಲಿಂಗಿಸಲು ಬಯಸಿದ ಶ್ರೀಕೃಷ್ಣ ತನ್ನ ಪತ್ನಿಯರಿಂದಕೂಡಿ ವೈಭವದಿಂದ ಮುಯ್ಯ ಹಿಂತಿರುಗಿಸಲು ಹಸ್ತಿನಾವತಿಗೆ ಬರುತ್ತಾನೆ. ಪುನಃ ಅಲ್ಲಿ ಪರಸ್ಪರರಿಗೆ ವಾಗ್ವಾದಗಳು, ಹಾಸ್ಯ, ವಿಡಂಬನೆ ಎಲ್ಲ ಸಾವಕಾಶವಾಗಿ ನಡೆದು ಎಲ್ಲರೂ ಸಂತೋಷ ಸಡಗರ ಸಂಭ್ರಮಗಳಿಂದ ಶುಭ ಹಾರೈಸುತ್ತ ಹಿಂತಿರುಗುವರು. -ಇದು ಮುಯ್ಯ ಹಿಂತಿರುಗಿಸಿದ ಹಾಡಿನ ವಸ್ತು.

ದಿಕ್ಕು ತುಂಬಿತು ಲೆಕ್ಕವಿಲ್ಲದೆ ಜನರು

ಕಾಶತುಂಬಿತು ಎಲ್ಲಕೋಶತುಂಬಿತು

ಆಶೆಬಡುತಲೆ ಜನರು ಸೋಸಿನ ಮುಯ್ಯಕ್ಕೆ

ಹಾದಿ ತುಂಬಿತು ಎಲ್ಲ ಬೀದಿ ತುಂಬಿತು

ಅಂಬರ ತುಂಬಿತು ಪಟ್ಟಣ ತುಂಬಿತು

ಒಂದಿಷ್ಟೂ ಬಿಡದಲೆ||

ಮುಯ್ಯಕೊಡುವ ಮಂಗಳಕಾರ್ಯದಲ್ಲಿ ಪಾಂಡವರೊಡಗೂಡಿ ಸುಭದ್ರೆ ದ್ರೌಪದಿಯರು ಮಾತ್ರ ಭಾಗವಹಿಸಿರಲಿಲ್ಲ. ದೇವಾನುದೇವತೆಗÀಳು ತಾಳ ತಂಬೂರಿಯವರು, ತುಂಬುರ ನಾರದರು, ಸಿದ್ಧ ಸಾಧ್ಯರು, ಪ್ರಸಿದ್ಧ ನಾಟಕಕಾರರು ಎಲ್ಲರೂ ಕೂಡಿ ' ಕೋಟಿ ಸೂರ್ಯರ ಧಾಟಿ ತೋರೋ ಅಂಗಳದಿ | ಮುತ್ತಿನ ತೋರಣ ನವರತ್ನದ ಹಂದರ | ಪಚ್ಚದ ಪಾವಟಿಗೆ ರತ್ನ ಹಚ್ಚಿದ ಹೊಸ್ತಿಲ'ನ್ನು ದಾಟಿ ಒಳಗೆ ಪ್ರವೇಶಿಸಿದರಂತೆ! ಇದು ಕೃಷ್ಣನ ದ್ವಾರಕೆಯ ವೈಭವ. ಕೃಷ್ಣಾರ್ಜುನರ, ರುಕ್ಮಿಣಿ ಸತ್ಯಭಾಮೆ; ಸುಭದ್ರೆದ್ರೌಪದಿಯರ ಪರಿಹಾಸ್ಯಭರಿತ ಸಂಭಾಷಣೆಗಳು ರಸವತ್ತಾಗಿವೆ. ಅವ್ವನವರ ಭಾಷೆ, ಉಪಮಾ-ರೂಪಕಾದಿ ಅಲಂಕಾರಗಳು, ನಾಣ್ಣುಡಿ, ಪದಪುಂಜಗಳು ನಿಜಕ್ಕೂ ಅಚ್ಚರಿಯುಂಟು ಮಾಡುತ್ತವೆ.

'ನೇತ್ರವೆಂಬೊ ಕುಮುದ ಚಕ್ಕನರಳುತ'

'ಕಂದಗೆÉ ಸ್ತನವೊಂದುಬಿಂದು ಬಾಯೊಳಗಿಟ್ಟು'

'ತಾರಕ್ಕಿ ಹೊಳೆವಂತೆ ತೋರ ದೀವಿಗೆ ಎಷ್ಟ'-ಇವು

ಎಲ್ಲೋ ಒಂದೆರಡು ಉದಾಹರಣೆಗÀಳು. 'ಘಿಲಿ ಘಿಲಿ ಘಿಲಿಕೆಂದು ಗೆಜ್ಜೆ...ಘಿಲಕು ಎನ್ನುತಲಿ' -ಎಂದು ಆ ನರ್ತನ ಪ್ರಿಯ ಹರಿಯನ್ನು ಭಕ್ತಿಯಿಂದ ತಾಳಕ್ಕೆ ತಕ್ಕಂತೆ ಕುಣಿಸಿದ್ದಾರೆ, ಅವ್ವನವರು. ಸಜ್ಜನರ ಸಹವಾಸ ಹೇಗಿರುತ್ತದೆ ಎಂಬುದನ್ನು ‘ಭಾವಜ್ಞರ ಸಂಗ ಶಾವಿಗೆ ಉಂಡಂತೆ' -ಎಂದು ಹೇಳಿರುವುದಲ್ಲದೆ' ಪಾಮರರ ಸಹವಾಸ ಬೇವಿನಹಾಲು ಕುಡಿದಂತೆ' -ಕಕ್ಕಟ್ಟೆ ಕಹಿ ಅನುಭವ ವೆಂಬುದನ್ನು ಹೇಳಿರುವರು ಹೀಗೆ ಅವ್ವನವರ ಕಾವ್ಯದ ರಸಾನುಭೂತಿ, ಭಕ್ತಿಯಕುಲುಮೆಯಲ್ಲಿ ಅನುಭವದ ಮೇಲೆ ಪುಟಗೊಂಡೇ ಪುಟಿಯುತ್ತದೆ. ‘ಹಾಡುಗಳಲ್ಲಿ ಬರುವ ಪರಸ್ಪರ ಮಾತಿನ ಚಕಮಕಿಗಳು, ಮಾರ್ಮಿಕ ಉತ್ತರಗಳು, ಪ್ರಸಂಗಾವಧಾನದ ರೀತಿ ಲವಲವಿಕೆಯಿಂದ ಕೂಡಿದೆ' ಸುಭದ್ರೆ-ರುಕ್ಮಿಣಿ ಹಾಗೂ ರುಕ್ಮಿಣಿ-ದ್ರೌಪದಿಯರ ಮಾತುಗಳು ಈ ದೃಷ್ಟಿಯಿಂದ ಗಮನಾರ್ಹ.

'ಜೋಗುಳದಹಾಡು' ಅವ್ವನವರ ಇನ್ನೊಂದು ಕೃತಿ, ಇದೂ ಕೂಡ ಸರಳ ಮಾತುಗಳಲ್ಲಿ ಸುಲಭಧಾಟಿಯಲ್ಲಿ ನಿರೂಪಿತವಾಗಿದೆ. 52 ನುಡಿಗಳಲ್ಲಿರುವ ಈ ಹಾಡಿನಲ್ಲಿ ಮಗು ಕೃಷ್ಣನನ್ನು ವಿಧಿವತ್ತಾಗಿ ತೊಟ್ಟಿಲಿನಲ್ಲಿ ಮಲಗಿಸಿ ಜೋಗುಳ ಹಾಡಿದ ಪ್ರಸ್ತಾಪವಿದೆ. ಕೃಷ್ಣ ಹುಟ್ಟಿದ ಕೂಡಲೇ ಕಂಸನ ಭಯದಿಂದ ವಸುದೇವ ಅವನನ್ನೆತ್ತಿಕೊಂಡು ಗೋಕುಲದಲ್ಲಿ ಯಶೋದೆಯ ಬಳಿಯಲ್ಲಿಟ್ಟು ಯಶೋದೆಯ ಮಡಿಲಿನ ಹೆಣ್ಣುಕೂಸನ್ನು ಒಯ್ದು ದೇವಕಿಯ ಬದಿಯಲ್ಲಿಟ್ಟನೆಂಬುದರಿಂದ ಕೀರ್ತನೆ ಪ್ರಾರಂಭವಾಗುತ್ತದೆ. ಕ್ರಮವಾಗಿ ಮಗುವಿಗೆ ಎರೆದು ಜಾತಕರ್ಮಮಾಡಿ, ತೊಟ್ಟಿಲಿಡುವ ಶಾಸ್ತ್ರವನ್ನು ಹಂತಹಂತವಾಗಿ ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಇನ್ನೊಂದು ಸೇತುಬಂಧನದ ಹಾಡು. ರಾಮಭಕ್ತ ಹನುಮ ಮತ್ತು ಕೃಷ್ಣ ಭಕ್ತ ಪಾರ್ಥರನಡುವೆ ರಾಮಹೆಚ್ಚು ಕೃಷ್ಣಹೆಚ್ಚು ಎನ್ನುವ ವಾಗ್ವಾದ ಪ್ರಾರಂಭವಾಗುತ್ತದೆ. ವಾಗ್ವಾದದ ನೆಪದಲ್ಲಿ ರಾಮ-ಕೃಷ್ಣರಿಬ್ಬರ ಮಹಿಮೆಗಳನ್ನೂ ಹೇಳುತ್ತ ಹೋಗುವ ತಂತ್ರ ಮೆಚ್ಚುವಂಥದ್ದು. ಕೊನೆಗೆ ಪಾರ್ಥ ಸೋತರೂ ಹನುಮ ಅವನ ಧ್ವಜದಲ್ಲಿ ನೆಲೆಸಿದನೆನ್ನುವಲ್ಲಿಗೆ ಕೀರ್ತನೆ ಮುಗಿದಿದೆ. ಮೇಲಿನ ಈ ಎರಡು ಕೀರ್ತನೆಗಳನ್ನೂ ಅವ್ವನವರವೆಂದು ಹಾಡುತ್ತಾರಾದರೂ, ಅವರವೇ ಎಂದು ಖಚಿತವಾಗಿ ಹೇಳುವುದು ಕಷ್ಟ ಆದ್ದರಿಂದ ಅವುಗÀಳನ್ನು ಅನುಬಂಧವಾಗಿ ಕೊಟ್ಟಿದೆ. (ನೋಡಿ :ಅನುಬಂಧ-1)

ಅವ್ವನವರೊಂದಿಗೆ ಅವರ ಶಿಷ್ಯೆ ಭಾಗಮ್ಮ ಸದಾ ಇರುತ್ತಿದ್ದರೆನ್ನಲಾಗಿದೆ. ಪ್ರಯಾಗಮ್ಮ ಅಂಕಿತದಿಂದ ಪ್ರಸಿದ್ಧರಾಗಿದ್ದ ಇವರು ಅವ್ವನವರೊಂದಿಗೆ ಕಾಶಿಯಲ್ಲಿ ವಾಸಿಸುತ್ತಿದ್ದಾಗ ರೋಗಪೀಡಿತರಾಗಿದ್ದು ಅವ್ವನವರ ಆe್ಞÁನುಸಾರ ಭಾಗವತ ತೃತೀಯ ಸ್ಕಂಧವನ್ನು ಕನ್ನಡದಲ್ಲಿ ರಚಿಸಿ ರೋಗÀ ಮುಕ್ತರಾದರಂತೆ. `ಏಸುಜನ್ಮದ ಪುಣ್ಯವಾಸವಾಯಿತೋ ವಿಷ್ಣುದಾಸರ ದಾಸಿ ನಾನಾದೆ'-ಎಂದು ಧನ್ಯತಾಭಾವವನ್ನು ವೆÀುರೆದಿರುವರು 'ಕಾಶಿ ಪಟ್ಟಣದಲ್ಲಿ ವಾಸಾದ ಭಾಗಮ್ಮನು ಕಟ್ಟಿದ ಪದ್ಯವನು ಭೂಸುರರೆಲ್ಲರು ಉದಾಸೀನ ಮಾಡದೆ ಲೇಸಾಗಿ ಪದ್ಯವ ತಿದ್ದುವದÀು’ -ಎಂಬ ವಿನಯವನ್ನು ಮೆರೆದಿದ್ದಾರೆ, ಭಾಗಮ್ಮ.

ಒಟ್ಟಿನಲ್ಲಿ ಸಂಸ್ಕøತ ವಿದ್ವಾಂಸರ, ಶಾಸ್ತ್ರಸಂಪನ್ನರ, ವೇದಪಾರಂಗತರ ಮನೆಯ ಹೆಣ್ಣು ಮಗಳೊಬ್ಬಳು ಕನ್ನಡದಲ್ಲಿ ಕೃತಿರಚನೆ ಮಾಡಿದ್ದಲ್ಲದೆ, ಅಂದಿನ ಸಾಮಾಜಿಕ ಪರಿಸರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ವಹಿಸಿದ್ದು ಹೆಗ್ಗಳಿಕೆಯೇ ಸರಿ. ಉತ್ತರ ಕರ್ನಾಟಕದ ಕೆಲವೆಡೆಗಳಲ್ಲಿ ಇಂದಿಗೂ ಅವ್ವನವರ ಮುಯ್ಯದ ಹಾಡು, ಸೇತುಬಂಧನದ ಹಾಡುಗಳನ್ನು ಹಬ್ಬ ಹರಿದಿನಗಳಲ್ಲಿ ಶ್ರದ್ಧೆ-ಭಕ್ತಿಗಳಿಂದ ಹಾಡುತ್ತಾರೆ.

ಹಸ್ತಪ್ರತಿ - ಸಂಪಾದನೆ

ಅವ್ವನವರ ಕೀರ್ತನೆಗಳು ಬಾಯಿಂದ ಬಾಯಿಗೆ ಸಾಗಿಬಂದಿದ್ದು, ಕೆಲವರು ಅವುಗಳನ್ನು ಬರೆದಿಟ್ಟುಕೊಳ್ಳವ ಮನಸ್ಸು ಮಾಡಿದ್ದು ನಿಜಕ್ಕೂ ಸಂತಸದ ಸಂಗತಿ. ನನ್ನ ಮಾವಂದಿರಾದ ಪಂಡಿತ ಪ್ರಾಣನಾಥಾಚಾರ್ಯ ಕೂರ್ಮಾಚಾರ್ಯ ಗಲಗಲಿಯವರಲ್ಲಿದ್ದ ಅಂತಹ ಒಂದು ಹಸ್ತಪ್ರತಿ ನನಗೆ ದೊರೆಯಿತು. 1927 ರಲ್ಲಿ ಪ್ರಕಟಗೊಂಡ ಕೆಲ ಹಾಡುಗಳ ಮುದ್ರಿತ ಪ್ರತಿಯೊಂದು ದೊರೆಯಿತು. ಬಾಲಬೋಧ ಲಿಪಿಯ (ದೇವನಾಗÀರೀ ಲಿಪಿ) ಪುಸ್ತಕವದು. ಸುಮಾರು ಎರಡು ವರ್ಷಗಳ ಕಾಲ ಊರೂರು ಅಲೆದು ಅವ್ವನವರ ಕೀರ್ತನೆಗಳ ಹಸ್ತಪ್ರತಿಗಾಗಿ ಹುಡುಕಾಡಿದೆ. ಬಲ್ಲವರೊಡನೆ ಅವರ ಜೀವನ-ಕೃತಿಗಳನ್ನು ಕುರಿತು ಚರ್ಚೆ ಮಾಡಿ ಸಾಕಷ್ಟು ವಿಷಯ ಸಂಗ್ರಹಿಸಿದೆ. ಕೆಲವರಲ್ಲಿ ಅಲ್ಪಸ್ವಲ್ಪ ಮಾಹಿತಿ ಇದ್ದರೂ ಅವರು ಕೊಡಲು ಒಪ್ಪಲಿಲ್ಲ. ಅಂತಹ ಕೆಲವರ ಮನಸ್ಸು ಒಲಿಸಿ ಅವರನ್ನು ಕಾಡಿಸಿ, ಪೀಡಿಸಿ ಅಲ್ಪಸ್ವಲ್ಪ ಸಂಗ್ರಹಿಸಲು ಸಾಧ್ಯವಾಯಿತು. ಆ ಪೈಕಿ ಗಲಗಲಿಯ ಕು.ಸೌ.ಶೀಲಾಬಾಯಿಗುಡಿ ಅವರಲ್ಲಿ ಹೆಚ್ಚಿನ ಹಾಡುಗಳು ದೊರೆತವು ಬೇರೆ ಬೇರೆ ಸ್ಥಳಗÀಳಲ್ಲಿ ಹೆಚ್ಚನ ಪ್ರತಿಗಳು ದೊರೆತರೂ ಅವೆಲ್ಲ ತದ್ರೂಪಿ ಪ್ರತಿಗಳೇ ಆಗಿದ್ದುವು. ಹೀಗೆ ಒಟ್ಟಾರೆ ದೊರೆತ ಹತ್ತು ಹಸ್ತಪ್ರತಿಗಳಲ್ಲಿ ಕು.ಸೌ.ಶೀಲಾಬಾಯಿಗುಡಿ ಮತ್ತು ಕು.ಸೌ.ಶಾಲಿನಿಯದುನಂದನ ಗಲಗಲಿ ಇವರಲ್ಲಿದ್ದ ಹಸ್ತ ಪ್ರತಿಗಳ ಸಹಾಯದಿಂದ ಪ್ರಸ್ತುತ ಸಂಪುಟವನ್ನು ಸಂಪಾದಿಸಲಾಗಿದೆ. ಹಸ್ತಪ್ರತಿಗಳಲ್ಲಿ ಸ್ಖಾಲಿತ್ಯಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಗದ್ಯವನ್ನು ಬರೆಯುವ ಹಾಗೆ ಸಾಲುಗಳನ್ನು ಉದ್ದಕ್ಕೆ ಬರೆಯಲಾಗಿದೆ. ಕೇವಲ ಹಾಡುಗರ ಯಾ ಓದುಗರ ಶ್ರದ್ಧೆಯನ್ನು ಮಾತ್ರ ಆ ಕೀರ್ತನೆಗಳ ಬರವಣೆಗೆಯಲ್ಲಿ ಕಾಣುತ್ತೇವೆ. ಅಕ್ಷರಗಳೂ ಅಷ್ಟು ಸ್ಫುಟವಾಗಿಲ್ಲ. ಹಾಗಾಗಿ ಆನೇಕಬಾರಿ ಓದಿ, ತಿದ್ದಿಬರೆದು ಪ್ರಾಸಕ್ಕನುಗುಣವಾಗಿ ಸಾಲುಗಳನ್ನು ವಿಂಗಡಿಸುವುದು ಸಾಕಷ್ಟು ಶ್ರಮಸಾಧ್ಯವಾದ ಕೆಲಸವಾಯಿತು.

ಪ್ರಸ್ತುತ ಸಂಪುಟದ ಸಂಪಾದನೆಯ ಕೆಲಸವನ್ನು ಇದೀಗ ಮುಗಿಸಿ ನಿಮ್ಮ ಮುಂದಿಡುತ್ತಿದ್ದೇನೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಮಗ್ರದಾಸವಾಙ್ಮಯ ಪ್ರಕಟಣಾ ಯೋಜನೆಯನ್ನು ಹಮ್ಮಿಕೊಂಡಿರುವುದು. ಸ್ತುತ್ಯಾರ್ಹ. ಆ ಯೋಜನೆಯಡಿ `ಗಲಗಲಿ ಅವ್ವನವರ ಕೀರ್ತನೆಗಳು' ಸಂಪುಟವನ್ನು ಸಿದ್ಧಪಡಿಸಲಾಗಿದೆ. ಈ ಸಂಪುಟದ ಕೆಲಸವನ್ನು ನನಗೆ ವಹಿಸಿಕೊಟ್ಟ ಇಲಾಖೆಯ ನಿರ್ದೇಶಕ ಶ್ರೀ ವೈ.ಕೆ.ಮುದ್ದುಕೃಷ,್ಣ ಹೆಜ್ಜೆ ಹೆಜ್ಜೆಗೂ ಸೂಕ್ತ ಸಲಹೆ ಸಹಕಾರಗಳನ್ನಿತ್ತು ಸಹಕರಿಸಿದ ಯೋಜನೆಯ ನಿರ್ವಾಹಕ ಸಂಪಾದಕರಲ್ಲೊಬ್ಬರಾದ ಡಾ.ಟಿ.ಎನ್.ನಾಗರತ್ನ ಅವರಿಗೂ, ಪ್ರೇರಣೆ ಪ್ರೋತ್ಸಾಹಗಳನ್ನಿತ್ತ ಮತ್ತೊಬ್ಬ ಸಂಪಾದಕ ಡಾ.ಶ್ರೀನಿವಾಸ ಹಾವನೂರರಿಗೂ ನನ್ನ ಕೃತಜ್ಞತಾಪೂರ್ವಕ ನಮಸ್ಕಾರಗಳು ಸಲ್ಲುತ್ತವೆ. 

- ಹಣಮಂತ ತಾಸಗಾಂವಕರ

****

ಗಲಗಲಿ ಅವ್ವನವರು



ಪ್ರಪ್ರಥಮ ಹರಿದಾಸಿನಿ ಎಂದು ಹರಿದಾಸ ಸಾಹಿತ್ಯ ದಲ್ಲಿ ಗುರುತಿಸಲ್ಪಡುವ ಗಲಗಲಿ ಅವ್ವನವರು ವಾಸವಾಗಿದ್ದ ಮನೆ 
ಮತ್ತು
ತಾವೂ ಗಲಗಲಿ  ಶ್ರೀ ಮುದ್ಗಲಾಚಾರ್ಯರ ಕೈ ಹಿಡಿದು ಗಂಡನ ಮನೆಗೆ ಹೋಗುವಾಗ ತನ್ನ ಹುಟ್ಟೂರಾದ ಮತ್ತು ಕುಲಸ್ವಾಮಿ ಯಾದ ಭೋಗಾಪುರೇಶನ ನೆನಪಿಗಾಗಿ ಅಲ್ಲಿಂದ ಒಂದು ಪ್ರಾಣದೇವರ ಮೂರ್ತಿ ತೆಗೆದುಕೊಂಡು ಬರುತ್ತಾರೆ.
ಅದು ಅಲ್ಲಿ ಇವಾಗ ಭೊಗಾಪುರೇಶ ಎಂದು ಪ್ರಸಿದ್ಧಿ.

ಮೇಲಿನ ಪ್ರಾಣದೇವರ ಚಿತ್ರ👆👆
ಭೋಗಾಪುರ (ನವಲಿ)ದಿಂದ ಗಲಗಲಿಗೆ ಅವ್ವನವರು ತಂದ ಶ್ರೀ ಪ್ರಾಣದೇವರು. ಶ್ರೀ ಭೋಗಾಪುರೇಶ ಎಂದೇ ಪ್ರಸಿದ್ಧ
ಸ್ಥಳ: ಗಲಗಲಿ

ಹೀಗೆ ಭೋಗಾಪುರೇಶನ ಅರ್ಚಕ ಮನೆತನದ ರಮಾ ಅಥವ ರಮಾಬಾಯಿ ಅವರು ಗಲಗಲಿ ಗೆ ಹೋದ ಮೇಲೆ ಗಲಗಲಿ ಅವ್ವನವರು ಎಂದು ಪ್ರಸಿದ್ಧಿ ಯಾಗಿ ಅನೇಕ ಕೃತಿ ಕೀರ್ತನೆಗಳನ್ನು ರಚನೆ ಮಾಡುತ್ತಾರೆ.
ಪೋಟೊ ಕೃಪೆ.
ಶ್ರೀ ನಾರಾಯಣ ಕಾಖಂಡಕಿ ಸರ್ 4 june 2020
***

info from:  Haridasa Sahitya (seven) WOMEN POETS
ARCHIVE | DECEMBER 3, 2013
There have been a lot of focus and innumerable articles on Haridasas of Karnataka and their invaluable contribution to the growth and development of Bhakti movement in Karnataka.

The Haridasas were essentially Vaishnavas and all of them, irrespective of the region they came from and their

social and economic status, adhered to the tenets of Madhwacharya, the saint-philosopher, and propounded his Dwaitha or theory of dualism.

The Haridasas had an enormous impact on the life and times of society and people like Purandara Dasa, Kanaka Dasa, Vijaya Dasa and Jagannatha Dasa held the mirror of literature to society so that it could rectify its failings.

While there are hundreds of Haridasas and they are practically from every region in the State from Achalananda Dasa of the eighth century in Bangalore to Purandara Dasa in Hampi, Vijaya Dasa in Raichur and Mahipati Dasa in Bijapur, the role of women poets or Haridasis has not received the attention that these remarkable women deserve.

The composition of these poet-composers is simple, touching and musical. Yet, and this is really intriguing, they are the product of  those whose world revolved around domesticity of homes, and more specifically, to the kitchen.

These women poets rose above the mundane and stitched a high place in the literary field. Many of them had to face problems of a typical Brahmin household such as superstition, tradition, rigidity and in cases domestic strife. But these women overcame all odds and today they are a force to reckon with and a shining example of what women can do in times of adversity.

A shining example of resilience and strength of will power is Galgali Avva. Born in 1670, she was just 12 when she was married off to a 95-year-old man. Her marriage lasted exactly eight days and she was widowed on the ninth.

As was the practice in those days, Avva had to tonsure her hair and observe the stringent practice of widowhood. However, her five grown up step-sons, all of them scholars, taught her to read and write, and Avva who soon gave expression to her literary talent,  became a composer, writing under the ankita Rama.

Today we are fortunate in possessing 261 of her songs and some of them like “Bheegara Haadu,”  describes a ritual in a typical Brahmin wedding. In “Sringara Tara Tamya”, she gives a vivid and evocative description of various ornaments worn by a woman. She then becomes philosophical and says of all the ornaments, the only two worth possessing and which are ever lasting are bhakti and gnana.

In “Muyyada Haadu”, she writes about the exchange of gifts during Gowri puja. Ironically, she would not have been allowed for the pooje as she was a widow. She died in 1760.

This entry was posted on December 3, 2013, in Uncategorized.
****

 " ಶ್ರೀ ರಮೇಶಾ೦ಕಿತ ಗಲಗಲಿ ಅವ್ವನವರು "

ಭಕ್ತಿ ಪರವಾದ ಗೀತ ಪದ್ಯಗಳನ್ನು ಮತ್ತು ಪ್ರಮೇಯ ಭಾಗವನ್ನು ತಿಳಿಸುವ ಪದ - ಪದ್ಯಗಳನ್ನು ಬರೆದು ಉತ್ತರ ಕರ್ನಾಟಕದಲ್ಲಿ ಸುಪ್ರಸಿದ್ಧಳಾದ ಇನ್ನೊಬ್ಬ ಮಹಿಳೆಯೆಂದರೆ " ಗಲಗಲಿ ಅವ್ವ " ನವರು!!

ಧಕ್ಷಿಣ ಭಾರತದಲ್ಲಿ ಮಹರ್ಷಿಗಳ ಮನೆತನೆವೆಂದು ಪ್ರಸಿದ್ಧವಾದ ಪೂಜ್ಯ ಗಲಗಲಿ ಆಚಾರ್ಯರ ವಂಶದ ತಪೋ ವಿಭೂತಿಗಳಾದ ಶ್ರೀ ಮುದ್ಗಲಾಚಾರ್ಯರ ಧರ್ಮಪತ್ನಿಯೇ ಈ ಅವ್ವನವರು!

ಉತ್ತರಾದಿ ಮಠದ ಶ್ರೀ ಸತ್ಯಧರ್ಮತೀರ್ಥರೂ ಕೂಡಾ ಅವ್ವನವರ ಪ್ರಮೇಯ ಜ್ಞಾನಕ್ಕೆ ತಲೆದೂಗಿದರಂತೆ. ಅವ್ವನವರಿಗೆ ನ್ಯಾಯ ಶಾಸ್ತ್ರದಲ್ಲಿ ಅಪ್ರತಿಮ ಪಾಂಡಿತ್ಯವಿದ್ದಿತು.

ಅವ್ವನವರಿಗೆ ಆರು ಜನ ದಿಗ್ಗಜ ಪಂಡಿತರಾದ ಮಕ್ಕಳಿದ್ದರು. ಪುಣೆಯ ಪೇಶ್ವೆಯ ದರ್ಬಾರದಲ್ಲಿ ಸರ್ವಜ್ಞ " ಷಟ್ಕ " ಎಂದು ಪ್ರಸಿದ್ಧರಾದ ಆರೂ ಗಾಲವ ಪಂಡಿತರು ಉತ್ತರ ದೇಶದ ಕಾಶೀ ಪಂಡಿತರೊಡನೆ ತರ್ಕ ಶಾಸ್ತ್ರದಲ್ಲಿ ವಾಕ್ಯಾರ್ಥಕ್ಕೆ ಇಳಿದಾಗ ಯಾವುದೋ ಒಂದು ವಿಷಯ ನಿಂತಾಗ ಜನಾನಖಾನಾದಲ್ಲಿ ಕುಳಿತ ಅವ್ವನವರು ಕೂಡಲೇ ಅದಕ್ಕೆ ಉತ್ತರ ಸೂಚಿಸಿದರಂತೆ.

ಅದನ್ನು ನೋಡಿ ಆಶ್ಚರ್ಯ ಚಕಿತರಾದ ಪೇಶ್ವೆಯವರು ಅವ್ವನವರ ಹೆಸರಿನಿಂದಲೇ ವರ್ಷಾಶನ ಹಾಕಿ ಕೊಟ್ಟರು. ಅದು ಸಂಸ್ಥಾನಗಳ ವಿಲೀನೀಕರಣವಾಗುವ ವರೆಗೆ ಈ ಮನೆತನಕ್ಕೆ ನಡೆಯುತ್ತಿತ್ತು.

ಅವ್ವನವರ ಈ ವಿಚಿತ್ರ ಪಾಂಡಿತ್ಯ ಕೀರ್ತಿ ಕೇಳಿದ ಮೈಸೂರು ಮಹಾರಾಜರು ಅವರನ್ನೂ, ಅವರ ಪಂಡಿತ ಪುತ್ರರನ್ನೂ ಮೈಸೂರಿಗೆ ಬರ ಮಾಡಿಕೊಂಡು ಅವರಿಗೆ ಭೂಮಿ ಕಾಣಿಕೆಗಳನ್ನಿತ್ತು ಗೌರವಿಸಿದರು. ಅವ್ವನವರು...

ಮುಯ್ಯದ ಹಾಡು

ಶೃಂಗಾರ ತಾರತಮ್ಯ

ಮೋರೆಗೆ ನೀರು ತಂದ ಹಾಡುಗಳು

ಮುಂತಾದ ಆಧ್ಯಾತ್ಮ ಗೀತ ಕಾವ್ಯಗಳನ್ನು ಬರೆದಿದ್ದಾರೆ.

ಅವ್ವನವರ ಶಿಷ್ಯೆಯೊಬ್ಬಳು ತನ್ನ ಗಂಡನನ್ನು ಅಲಂಕಾರ ಆಭರಣಗಳಿಗಾಗಿ ಬಹಳ ಪೀಡಿಸುತ್ತಿದ್ದಳಂತೆ. ಅವಳಿಗೆ ತಿಳುವಳಿಕೆ ಹೇಳಲಿಕ್ಕಾಗಿ ಈ ಶೃಂಗಾರ ತಾರತಮ್ಯ ಎಂಬ ಪ್ರಮೇಯ ಪ್ರಚುರವಾದ ಗೇಯ ಪ್ರಬಂಧವನ್ನು ಅವ್ವನವರು ರಚಿಸಿದರಂತೆ...

ಹರಿಯು ಒಬ್ಬ ಸರ್ವೋತ್ತಮ ।

ತರುವಾಯ ಶ್ರೀದೇವಿಯಂದು ।

ಪರಮ ಭಕ್ತಿಯಿಂದ ಮುಕ್ತಿ ।

ಕರದೊಳು ಪಿಡಿದವರ ಸಂಗಾ ಮಾಡು ।।

ತಾರತಮ್ಯ ಪದ್ಧತಿಯಿಂದ ।

ಸಾರ ಭೂಷಣವನ್ನಿಟ್ಟ ಬಾಲೇರು ।

ಶ್ರೀ ರಮೇಶನ ದಯದಿ । ಮುಕ್ತಿ ।

ಸಾರವನ್ನೇ ಪಡೆದವರ ಸಂಗವ ಮಾಡೋ ।।

ಮುಂತಾದ ಹೆಣ್ಣು ಮಕ್ಕಳಿಗೆ ಅವರಿಗೆ ಪ್ರಿಯವಾದ ಆಭರಣ ಅಲಂಕಾರಗಳ ಮೂಲಕವೇ ದೇವತಾ ತಾರತಮ್ಯದ ತತ್ತ್ವವನ್ನೆಲ್ಲಾ ತಿಳಿಯಾಗಿ ತಿಳಿಸಿ ಕೊಟ್ಟಿದ್ದಾರೆ. ಇದರಲ್ಲಿ ಶಾಸ್ತ್ರ ಮತ್ತು ಸಾಹಿತ್ಯ ಎರಡರಲ್ಲಿಯೂ ಅವ್ವನವರ ಪ್ರಭುತ್ವವನ್ನೂ ಹಾಗೂ ವೈರಾಗ್ಯ ಭಾವವನ್ನೂ ಕಾಣಬಹುದು.

ಅವ್ವನವರ ಮುಯ್ಯದ ಪದಗಳಲ್ಲಿ ಭಕ್ತಿಯ ಜೊತೆಗೆ ಶೃಂಗಾರ, ಹಾಸ್ಯ, ಕರುಣೆಗಳ ಕಾರಂಜಿಯೂ ಅಲ್ಲಲ್ಲಿ ಪುಟಿದು ಹೊಸದಾದ ಒಂದು ರಸರಂಗವೇ ಏರ್ಪಟ್ಟಂತೆ ತೋರುತ್ತದೆ.

ಗಂಗೆ - ಗೌರೀ, ದ್ರೌಪದೀ - ಸುಭದ್ರೆ, ರುಕ್ಮಿಣೀ - ಸತ್ಯಭಾಮೆ ಮುಂತಾದವರ ಮೂದಲಿಕೆಯ ಮಾತುಗಳು ಮಾರ್ಮಿಕವೂ, ಮನ ರಂಜಕವೂ ಆಗಿವೆ. ಸುಭದ್ರೆ ದ್ರೌಪದಿಗೆ ಹೇಳುವ ಚುಚ್ಚು ಮಾತು...

ಕೆಂಡವ ತುಂಬಿದ ಕುಂಡದೀ ಪುಟ್ಟೀದಿ ।

ಕಂಡ ಜನಕೆಲ್ಲ ಭಯವಾದಿ ।

ಕಂಡ ಜನಕೆಲ್ಲ ಭಯವಾದಿ । ಭೀಮ ನಿನ ।

ಗಂಡ ಎಂಥವನ ಎದೆಗಾರ ।।

ಪಲ್ಯದ ತುದಿಯಿಂದ ।

ಎಲ್ಲ ಪದಾರ್ಥವ ಮಾಡಿ ।

ಬಲ್ಲಿದ ಮುನಿಗೆ ಉಣಿಸೀದಿ । ಇಂದ್ರ ।

ಜಾಲ ಬಲ್ಲವಳಿಗೆಂಥ ಭಯವುಂಟು ।।

ಪ್ರಬಲ ಹೆಂಡಂದಿರಾದ ರುಕ್ಮಿಣೀ - ಸತ್ಯಭಾಮೆಯರ ನಡುವೆ ತನ್ನ ಅಣ್ಣ ಕೃಷ್ಣಯ್ಯನ ಪಾಡು ಏನಾಯಿತೆಂಬುದು ದ್ರೌಪದಿಯ ಮಾತಿನಲ್ಲಿ ಮಾರ್ಮಿಕವಾಗಿ ಮೂಡಿ ಬಂದಿದೆ. ಅದರಲ್ಲಿ ಈ ಮೂದಲಿಕೆಯ ನೆವದಿಂದ ಕೊನೆಗೆ ವ್ಯಕ್ತವಾಗುವುದು. ಶ್ರೀ ಕೃಷ್ಣನ ಅಚಿಂತ್ಯಾದ್ಭುತ ಮಹಿಮೆಯೇ!

ಈ ಕೃತಕ ಕಲಹಗಳೆಲ್ಲ ಹರಿಯ ಚರಿತ್ರೆ ಹಾಗೂ ದಿವ್ಯ ಲೀಲಾ ವಿಭೂತಿಗಳನ್ನು ಬಗೆ ಬಗೆಯಿಂದ ಸ್ಮರಣಕ್ಕೆ ತಂದು ಕೊಳ್ಳಲಿಕ್ಕೆ ಮತ್ತು ಅದರಿಂದ  ಮತ್ತೆ ಅವನಲ್ಲಿ ಹೆಚ್ಚಿನ ಭಕ್ತಿ ಮಾಡಲಿಕ್ಕೆ ಆ ದೇವ ಚರಿತೆಯ ನೆನಪಿಗೊಂದು ಮೀಟಗೋಲಾಗುತ್ತದೆ ಅಷ್ಟೇ!!

ನಾರೇರಿಬ್ಬರ ಬಿಟ್ಟು ನೀರೊಳಗಡಿಗಿದಾ ।

ಮೋರೆ ತೋರದಲೆ ನೆಲವನು ಸಖಿ ।

ಮೋರೆ ತೋರದಲೆ ನೆಲವ ಬಗೆದು ಅತಿ ।

ಕ್ರೂರನಾದರೂ ಬಿಡರಲೇ ಸಖಿಯೇ ।।

ತಿರಕತಾಯಿ ಸುದ್ದಿ ಅರಿತವನಲ್ಲದೆ ।

ದೊರೆತನವ ಬಿಟ್ಟು ದನವನೇ ಸಖಿಯೇ ।

ದೊರೆತನ ಬಿಟ್ಟು ದಾನವನು ಕಾಯಿದಾರು । ನಿಮ್ಮ ।

ಕರಿ ಕರಿ ಒಂದು ಬಿಡರೆಲ್ಲಾ ಸಖಿಯೇ ।।

ಮುದ್ದು ರಮೇಶಗೆ ಕದ್ದು ಓಲೆಯ ಬರೆಯೆ ।

ಹದ್ದು ವಾಹನನು ಎರಗಿದಾ ಸಖಿಯೇ ।

ಹದ್ದು ವಾಹನನು ಎರಗೀದ ಕಾರಣ ।

ವಿದ್ವಜ್ಜನರೆಲ್ಲ ನಮಿಸೂತ ಸಖಿಯೇ ।।

ಅವ್ವನವರ ಕಾವ್ಯದಲ್ಲಿ ನವರಸಗಳೆಲ್ಲಾ ಉಕ್ಕೇರಿ ಹರಿಯುತ್ತಿದ್ದರೂ ಅವೆಲ್ಲವೂ ಭಕ್ತಿಯ ಭಟ್ಟಿಯಲ್ಲಿ ಪಾವನತೆಯ ಪುಟಗೊಂಡೇ ಬರುತ್ತವೆ.

ಉಪಮೇ - ಉತ್ಪ್ರೇಕ್ಷ - ಅಲಂಕಾರ - ವಕ್ರೋಕ್ತಿ ಎಲ್ಲವೂ ಅವ್ವನವರ ಕಾವ್ಯದಲ್ಲಿ ನೀತಿ ಬೋಧಕವಾಗಿ ಹರಿ ಪ್ರೀತಿ ಕಾರಣವಾಗಿಯೇ ಬೆಳಗುತ್ತದೆ. ಸಜ್ಜನ ಸಹವಾಸದ ಮಹಿಮೆಯನ್ನು ಪಾಮರರಿಗೂ ತಿಳಿಸುವ ಅವರ ಸರಳ - ಸರಸ ದೃಷ್ಟಾಂತ ಪ್ರದರ್ಶನದ ಸುಂದರ ಪದ್ಧತಿಯ ಒಂದು ಮಾದರಿ...

ಭಾವಜ್ಞರ ಸಂಗ ಶಾವೀಗೆ ಉಂಡಂತೆ ।

ಭಾವವರಿಯದಾ ಪಾಮರರ ।

ಭಾವವರಿಯದಾ ಪಾಮರರ । ಸ ।

ಹವಾಸ ಬೇವಿನ ಹಾಲು ಕುಡಿದಂತೆ ।।

ಅವ್ವನವರು  ಶೂರ್ಪಾಲಿಯಿಂದ ಒಲಿದು ಬಂದ ಗಲಗಲಿ ಕ್ಷೇತ್ರದ ಶ್ರೀ ನೃಸಿಂಹ ದೇವರ ಉಪಾಸಕರು.

ಲಕ್ಷಮೀ ರಮಣನೇ ಪಕ್ಷಿವಾಹನ ಸ್ವಾಮಿ ।

ಕುಕ್ಷಿಲೆ ಜಗವ ಸಲಹುವಿ ।

ಕುಕ್ಷಿಲೆ ಜಗವ ಸಲಹುವಿ । ಶೂ ।

ರ್ಪಾಲಿ ವೃಕ್ಷರಾಜನ ಬಲಗೊಂಬೆ ।

ಗಲಗಲಿ ನರಸಿಂಹ ಬಲು ದಯವಂತನು ।

ಸುಲಭಾದಿ ವರವ ಕೊಡುವನಾ ।

ಸುಲಭಾದಿ ವರವ ಕೊಡುವ ರಮೇಶನ ।

ಚೆಲುವ ಮೂರುತಿಯ ಬಲಗೊಂಬೆ ।।

ಉತ್ತರ ಕನ್ನಡದ ಹೆಂಗಳೆಯರು ಅವ್ವನವರ ಪದ್ಯಗಳನ್ನು ಸಪ್ತಾಹ ಕ್ರಮದಲ್ಲಿ ಹೇಳುವ ಸಂಪ್ರದಾಯ ಈಗಲೂ ಉಂಟು!!

by ಆಚಾರ್ಯ ನಾಗರಾಜು ಹಾವೇರಿ

    ಗುರು ವಿಜಯ ಪ್ರತಿಷ್ಠಾನ

****


Galagali Avva is said to be the first women poet or first woman Haridasi in Dasa Sahitya history having written a number of devaranamas.

Know more here

  CLICK GALAGALI AVVA-FIRST HARIDASI

***


sheshagiri dasa son of vijaya dasa 1720+ bhadrapada shukla bidige ಶೇಷಗಿರಿ ದಾಸ



 bhadrapada shukla bidige 


ಶ್ರೀ ಶೇಷಗಿರಿ ದಾಸರಿಗೆ ಹಯಗ್ರೀವ ವಿಠ್ಠಲ ಎಂದು ಅಂಕಿತ ಉಪದೇಶವನ್ನು ಕೊಟ್ಟವರು ಶ್ರೀ ವಿಜಯಪ್ರಭುಗಳು.

ನಂತರದಲ್ಲಿ ಅವರು ಗೋಪ್ಯವಾಗಿ ಸಾಧನೆ ಯನ್ನು ಮಾಡಿಕೊಳ್ಳುತ್ತಾ ಇದ್ದರು.

ತಮ್ಮ ಮಗನಿಗೆ ಎರಡು ವರ್ಷಗಳ ಕಾಲ ತಮ್ಮ ಆಯುಸ್ಸು ಧಾರೆ ಎರೆದ ಮೇಲೆ ಶಾಲಿವಾಹನ ಶಕೆ ೧೬೭೩ ನೇ ಪ್ರಜೋತ್ಪತ್ತಿ ನಾಮ ಸಂವತ್ಸರದ ಭಾದ್ರಪದ ಮಾಸದ ಶುಕ್ಲ ಪಾಡ್ಯಮಿ ದಿನಕ್ಕೆ ಶ್ರೀರಂಗ ಪಟ್ಟಣಕ್ಕೆ

 ಶ್ರೀ ವಿಜಯಪ್ರಭುಗಳು ತಮ್ಮ ಪರಿವಾರಸಮೇತರಾಗಿ  ಪ್ರಯಾಣ ಬೆಳೆಸಿದರು.

ಅಲ್ಲಿ ಗೌತಮ ಋಷಿಗಳು ತಪಸ್ಸು ಮಾಡಿದ ಸ್ಥಳಕ್ಕೆ ಬಂದರು.ಅಂದು ಶೇಷಗಿರಿ ದಾಸರಿಗೆ ದೇಹಾಲಸ್ಯವಾಯಿತು. ಮರುದಿನ ಬಿದಿಗೆ ಭಾನುವಾರ ದಿನ ಶೇಷಗಿರಿ ದಾಸರು ಶ್ರೀ ಹರಿಯ ಪುರವನ್ನು ಸೇರಿದರು.

ಆಗ ಶ್ರೀ ವಿಜಯಪ್ರಭುಗಳು ತಮ್ಮ ಎದುರಿಗೆ ತಮ್ಮ ಮಗನಾದ ಶೇಷಗಿರಿ ದಾಸರು ಕಾಲವಾದುದನ್ನು ಕಂಡು ಹನ್ನೆರಡು ಪದಗಳನ್ನು ಅಂದರೆ ಕೃತಿಗಳನ್ನು ರಚನೆ ಮಾಡುತ್ತಾರೆ. ನಂತರದಲ್ಲಿ ಮುಂದಿನ ಕಾರ್ಯಕ್ರಮ ಗಳನ್ನು ನೆರವೇರಿಸಿ ಮುಂದೆ ಪ್ರಯಾಣವನ್ನು ಬೆಳೆಸುತ್ತಾರೆ. 

ಶ್ರೀ ವಿಜಯಪ್ರಭುಗಳ ಕಡೆಯಲ್ಲಿ ಅಷ್ಟು ಜ್ಞಾನ ಉಪದೇಶ, ಉಪನಯನ, ಅಂಕಿತ ಮದುವೆ,ಮತ್ತು ಎರಡು ವರುಷದ ಆಯುಸ್ಸು ದಾನವನ್ನು ಪಡೆದುಕೊಂಡು ಮತ್ತು ತಂದೆಯ ಅಪ್ಪಣೆಯಂತೆ ಆ ಎರಡು ವರುಷಗಳ ಕಾಲ ಕ್ಷಣಬಿಡದೆ ಸಾಧನೆಯನ್ನು ಮಾಡಿಕೊಂಡು ಅವರ ಕಣ್ಣಿನ ಎದುರಿಗೆ ದೇಹಯಾತ್ರೆ ಮಾಡಿ ಅವರಿಂದ ಅಂತ್ಯಕರ್ಮಗಳನ್ನು ಮಾಡಿಸಿಕೊಂಡ ಶ್ರೀ ಶೇಷಗಿರಿ ದಾಸರಂತಹ ಸುಜೀವಿ ನಿಜಕ್ಕೂ ಸಾಮಾನ್ಯ ಜೀವಿಯಲ್ಲ..

ಇಂತಹ ವರ ಸ್ಮರಣೆ ನಮ್ಮ ಜೀವನ ಧನ್ಯ.

ಬೆಳಿಗ್ಗೆ ಪೋಸ್ಟ ಮಾಡಿದ ಶ್ರೀ ಹಯಗ್ರೀವ ವಿಠ್ಠಲ ಅಂಕಿತ ಶ್ರೀ ಶೇಷಗಿರಿ ದಾಸರ ಜೀವನ ಚರಿತ್ರೆಯನ್ನು ಅವರ ಅಂತರ್ಯಾಮಿಯಾದ ಶ್ರೀ ಶೇಷಗಿರಿ ವಾಸನ ಪಾದಕ್ಕೆ ಸಮರ್ಪಣೆ

- prasadacharya

***

ಶ್ರೀ ವಿಜಯದಾಸರ ಮಕ್ಕಳಾದ ಶ್ರೀ ಶೇಷಗಿರಿದಾಸರ ಆರಾಧನಾ ದಿನ. ಅವರ ಬಗ್ಗೆ ಹೆಚ್ಚಿನ ಪ್ರಚಲಿತ ವಿಲ್ಲ.


ಶ್ರೀ ವಿಜಯ ವಿಠ್ಠಲನ ಅನುಗ್ರಹದಿಂದ ಜನಿಸಿದ ಒಬ್ಬ ಉತ್ತಮವಾದ ಸಾಂಶ ಜೀವ ಶ್ರೀವಿಜಯದಾಸರಲ್ಲಿ ಜನಿಸಿದ ಕೂಸು ಇಂದಿನ ಕಥಾ ನಾಯಕರು.


ಶ್ರೀ ವಿಜಯದಾಸರು ತಮ್ಮ ಕುಲದೈವವಾದ ಶೇಷಾಚಲವಾಸನಾದ ಆ ಸ್ವಾಮಿಯ ಹೆಸರನ್ನೇ ತಮ್ಮ ಮಗನಿಗೆ ಶೇಷಗಿರಿ ದಾಸ ಅಂತ ನಾಮಕರಣ ವನ್ನು ಮಾಡಿದರು.

ಕೆಲ ಕಾಲದ ನಂತರ ಅವರು ಬೆಳೆದು ದೊಡ್ಡವರಾದ ಮೇಲೆ ಅವರಿಗೆ ಇದ್ದಕ್ಕಿದ್ದಂತೆ ದೇಹಾಲಸ್ಯವಾಗುತ್ತದೆ.ವ್ಯಾಧಿ ಮಿತಿ ಮೀರಿತು.

ಇದನ್ನು ಕಂಡ ಅರಳಮ್ಮನವರು ಬಹು ವ್ಯಸನಗೊಂಡು ಚಿಂತಿತರಾಗಿ ದಾಸರ ಬಳಿಗೆ ಬಂದು ನಮ್ಮ ಮಗ ಶೇಷಗಿರಿ ಇಷ್ಟು ದೇಹಾಲಸ್ಯದಿಂದ ಇದ್ದಾಗ ನೀವು ನಿಮ್ಮ ಪಾಡಿಗೆ ಇರುವದು ಸರಿಯೇ!! ಅವನ ಆರೋಗ್ಯ ದ ಬಗ್ಗೆ  ಸ್ವಾಮಿಯ ಬಳಿ ಪ್ರಾರ್ಥನೆ ಮಾಡಿ ಅಂತ ಮೊರೆ ಇಡುತ್ತಾರೆ.

ತಕ್ಷಣ ಶ್ರೀ ವಿಜಯದಾಸರು ಮಗನ ಬಳಿ ಬಂದು ನೋಡಿದಾಗ ಪ್ರಬಲ ಕರ್ಮ ಇವನಿಗೆ ಬೆನ್ನು ಹತ್ತಿದೆ.ಅದರ ನಿವಾರಣೆಗೆ ಶ್ರೀಹರಿಯ ಕರುಣ ಬೇಡುವದು ಬಿಟ್ಟು ಬೇರೆ ಯಾವ ಔಷಧ ಉಪಚಾರ ಗಳಿಂದ ಆಗದು ಅಂತ ಅವರಿಗೆ ತಿಳಿಯುತ್ತದೆ.

ತಕ್ಷಣ ತಮ್ಮ ಮಗನ ಅಪಮೃತ್ಯು ಪರಿಹಾರಕ್ಕಾಗಿ ಒಂದು ಸುಳಾದಿ ಯನ್ನು ರಚನೆಯನ್ನು ಮಾಡಿ ತಮ್ಮ ಉಪಾಸ್ಯ ಮೂರುತಿಯಾದ ಶ್ರೀ ವಿಜಯವಿಠ್ಠಲನಲ್ಲಿ ಪ್ರಾರ್ಥನೆ ಮಾಡುತ್ತಾರೆ.

ಆ ಸುಳಾದಿ ಹೀಗಿದೆ.👇

ಹಗರಣ ಮಾಡದಿರು ಹರಿಯೆ| ನಿನಗೆ ಕರವ ಮುಗಿದು ಬೇಡಿಕೊಂಬೆ| ಭಕ್ತ ಜನರ ಬಗೆಬಗೆಯಿಂದ ಬಂದ ಕ್ಲೇಶ ಕಳೆದು| ನಂಬಿಗೆ ಇತ್ತು ಪಾಲಿಸುವ ಗುಣವಾರಿಧಿ||..


ಅಂತ ರಚನೆಯನ್ನು ಮಾಡಿ ಅದರಲ್ಲಿ ಹೇಳುತ್ತಾರೆ ತಮ್ಮ ಮಗನ ಬಗ್ಗೆ. ಆ ಜೀವಿ ಎಂತಹದ್ದು ಅಂತ.


ಉದ್ದವನ್ನ ಶಾಪದಿಂದ ಮುಕ್ತನಮಾಡಿ| ಉದ್ದರಿಸಿದೆ ತತ್ವವ ಉಪದೇಶಿಸಿ|

ಶುದ್ದ ವೈಷ್ಣವನಿವ| ನಿರ್ಮತ್ಸರದವ| ಮಧ್ವರಾಯರ ಪಾದ ಪದ್ಮವೆ ಪೊಂದಿದ ತದ್ದಾಸರ ದಾಸ ಭೃತ್ಯನೆನಿಪನಿವ||

ಶ್ರದ್ಧೆ ಯುಳ್ಳವನಿವ| ಸೌಮ್ಯಗುಣದವ ಸಿದ್ದಾಂತ| ಪ್ರಮೇಯಗಳ ಪದ್ದತಿ ಬಲ್ಲವ|

ಉದ್ದಂಡನಲ್ಲವೋ| ಕರ್ಮನಿಷ್ಟನಿವ|

ಕ್ಷುದ್ರ ನಾದರೆ ನಾ ನಿನಗೆ ಪ್ರಾರ್ಥಿಸುವನೆ||

ಅಂತ ಕೇಳಿಕೊಂಡರು.

ಆದರು ಸಹ ಅವರ ಆರೋಗ್ಯ ಸುಧಾರಣೆ ಆಗಲಿಲ್ಲ

ತಕ್ಷಣ ಎರಡು ಉಗಾಭೋಗ ಗಳನ್ನು ರಚಿಸಿ ಆ ಶ್ರೀ ಹರಿಗೆ ಒಪ್ಪಿಸಿ ,

ಸ್ವಾಮಿ!! ಸಣ್ಣವನು ಇವನು ವಿವಾಹವಾಗಿದೆ .ಇವನೊಬ್ಬನೇ ಮಗ.ನನ್ನವಳ ಕೊರಗು ಸೊಸೆಯ ದುಃಖ ನೋಡಲಾಗದು.ನನಗೆ ನೀನು ಕೊಟ್ಟ ತಿಳುವಳಿಕೆ ಎಲ್ಲಡಿಗಿತು ಏನೋ ನಿನ್ನ ಬಂಧ ಶಕುತಿಯನ್ನು ಮೀರಿದವರನ್ನು ನಾ ಕಂಡಿಲ್ಲ ಹರಿಯೇ ಇನ್ನೂ ಇವನಿಗೆ ಆಯುಷ್ಯ ಇಲ್ಲ. ಆದುದರಿಂದ ನನ್ನ ಆಯುಸ್ಸಿನಲ್ಲಿ ಎರಡು ವರ್ಷ ಇವನಿಗೆ ಧಾರೆ ಎರೆದಿದ್ದೇನೆ..

ಉಳಿಸು ಇವನನ್ನು ಎಂದು ಆ ವಿಜಯವಿಠ್ಠಲನಲ್ಲಿ ಮೊರೆ ಇಟ್ಟರು.

ಮರುದಿನದಿಂದಲೆ ಶೇಷಗಿರಿ ದಾಸರ ಆರೋಗ್ಯ ಸುಧಾರಣೆ ಆಯಿತು.


ಮುಂದೆ ಎರಡು ವರುಷದ ನಂತರ ಶ್ರಾವಣಮಾಸ ಬಂದಾಗ ತಮ್ಮ ಕುಟುಂಬದ ಜೊತೆಗೂಡಿ ಶ್ರೀರಂಗಪಟ್ಟಣ ಕ್ಕೆ ಪಯಣ ಬೆಳೆಸಿದರು.

 *ಶ್ರೀರಂಗಪಟ್ಟಣ ಹಿಂದೆ ಮೂರು ಮೈಲಿ ಕರಿಘಟ್ಟವೆಂಬ 

ಶ್ರೀನಿವಾಸನ ಕ್ಷೇತ್ರದಲ್ಲಿ ವಾಸ ಮಾಡುತ್ತಾರೆ.*

 ನಂತರ ಕೆಲದಿನವಾದ ಮೇಲೆ ಅಲ್ಲಿ ಇಂದ ಮುಂದೆ ಕಾವೇರಿ ನದಿ ತೀರದ ಹತ್ತಿರ ಇರುವ ಗೌತಮ ಋಷಿ ಗಳು ತಪಸ್ಸು ಮಾಡಿದ ಗೌತಮ ಕ್ಷೇತ್ರದಲ್ಲಿ ಉಳಿದುಕೊಳ್ಳುವರು.

ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಶೇಷಗಿರಿದಾಸರ ದೇಹಾಲಸ್ಯವಾಗುತ್ತದೆ.

ಮರುದಿನವೇ ಭಾದ್ರಪದ ಶುದ್ಧ ಬಿದಿಗೆ ಅಂದೇ ಶ್ರೀ ಶೇಷಗಿರಿ ದಾಸರು ಶ್ರೀ ನಾರಾಯಣ ಸ್ಮರಣೆ ಪೂರ್ವಕ ದೇಹವನ್ನು ತ್ಯಾಗ ಮಾಡುತ್ತಾರೆ.

ಮಗನ ಅಂತ್ಯಕ್ರಿಯೆ ಕಾರ್ಯಗಳನ್ನು  ಶ್ರೀ ವಿಜಯದಾಸರು ನೆರೆವೇರಿಸಿ ಅಲ್ಲಿಂದ ಮುಂದೆ ಹೊರಡುತ್ತಾರೆ.

ತಮ್ಮ ಎದುರಿಗೆ ತಮ್ಮ ಮಕ್ಕಳಾದ ಶೇಷಗಿರಿ ದಾಸರು ದೇಹತ್ಯಾಗ ಮಾಡಿದ್ದನ್ನು ಕಂಡು ೧೨ ಪದಗಳಿಂದ ಭಗವಂತನಿಗೆ ಪ್ರಾರ್ಥನೆ ಮಾಡುತ್ತಾರೆ.


 ಶ್ರೀ ವಿಜಯದಾಸರ ಮಗನಾಗಿ ಹುಟ್ಟಿದ ಶ್ರೀಶೇಷಗಿರಿ ದಾಸರು  ದಾಸರಿಂದ ಆಯುರ್ದಾನ ಪಡೆದ ಪುಣ್ಯಜೀವಿ ಹಾಗು ಅವರಿಂದ ಹೊಗಳಿಸಿಕೊಂಡವರು..

ನಿಜವಾಗಿಯೂ ಬಹು ದೊಡ್ಡ ಸಾಧನಾ ಜೀವಿಯೇ ಇರಬೇಕು...

ಅಂತಹವರ ಸ್ಮರಣೆ ಮಾಡಿದರೆ ನಮ್ಮ  ಜನ್ಮ ಕಿಂಚಿತ್ತು ಉದ್ದಾರವಾಗಬಹುದು.

ವಿಧಿ ಸಂವತ್ಸರ ಭಾದ್ರಪದ ಶುಕ್ಲ ದ ಭಾನು| ಬಿದಿಗಿಯಲಿ ಪ್ರವರ ಗೌತುಮ ಸಂಗಮಾ

|ನಿಧಿಯಲಿ ವಿಜಯವಿಠ್ಠಲನಂಘ್ರಿಯುಗಳವನು|

 ಹೃದಯದಲ್ಲಿ ಇಟ್ಟು ದೇಹವ ತ್ಯಾಗ ಮಾಡ್ದೆ||


ಧನ್ಯನೋ ಶೇಷಗಿರಿದಾಸ ನೀನೂ|

ಪುಣ್ಯವಂತನು ಅಹುದೊ ಮನೋ ವಾಚದಲಿ ನಿತ್ಯ|

***


 

vaikunta dasaru 1550 ವೈಕುಂಠ ದಾಸರು

 Vaikunta Dasaru

Name: Keshavacharya Iyengar

Ankita: Vaikunta Vittala, vaikunta keshava

ದಾಸರ ಹೆಸರು: ಬೇಲೂರು ವೈಕುಂಠದಾಸರು

ಜನ್ಮ ಸ್ಥಳ: ಬೇಲೂರು ಹಾಸನಜಿಲ್ಲೆ

ತಂದೆ ಹೆಸರು: ತಿರುಮಲಾರ್ಯ

ಕಾಲ 1480 - 1550

ಅಂಕಿತನಾಮ: ವೈಕುಂಠ ಕೇಶವ

ಲಭ್ಯ ಕೀರ್ತನೆಗಳ ಸಂಖ್ಯೆ: 65

ಗುರುವಿನ ಹೆಸರು: ತಿರುಮಲಾರ್ಯ

ಆಶ್ರಯ: ಬೇಲೂರು ಚೆನ್ನಕೇಶವನ ಸನ್ನಿಧಿ

ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು: 1. ಗಜೇಂದ್ರಮೋಕ್ಷ 2. ಶನೀಶ್ವರದಂಡಕ

ವೃತ್ತಿ : ಅರ್ಚನೆ. ದಾಸವೃತ್ತಿ

ಕೃತಿಯ ವೈಶಿಷ್ಟ್ಯ: ವಿಶಿಷ್ಟ ದ್ವೈತ ತತ್ವ ಪ್ರತಿಪಾದನೆ

ಇತರೆ : ವಾದಿರಾಜರು, ಪುರಂದರ, ಕನಕ, ಅಚ್ಯುತದಾಸರು ತೆಲುಗಿನ ಚಿನ್ನಯ್ಯ ಮುಂತಾದವರಿಂದ ಸ್ತುತಿಸಲ್ಪಟ್ಟಿರುವ ದಾಸೋತ್ತಮರಾಗಿದ್ದರು..

*** 

by Sri Nagaraj Acharya

" ಶ್ರೀ ಇಂದ್ರದೇವರ ಅಂಶ ಸಂಭೂತರು ಶ್ರೀ ವೈಕುಂಠದಾಸರು "

ಭಾರತ ಭೂಮಿ ಹಲವು ಸಂಸ್ಕೃತಿಗಳ ತವರಾಗಿದೆ. 

ಹಲವು ಧರ್ಮಗಳ ಆಗರವಾಗಿದೆ. 

ಅದರಲ್ಲೂ ಕರ್ನಾಟಕವಂತೂ ವಿವಿಧ ಭಕ್ತಿ ಪಂಥಗಳ ನೆಲೆಯಾಗಿದೆ. 

ಹರಿದಾಸ ಸಾಹಿತ್ಯದ ಆದ್ಯ ಪ್ರವರ್ತಕರು 13ನೇ ಶತಮಾನದಲ್ಲಿ ಶ್ರೀ ಹರಿಯ ಆಜ್ಞೆಯಂತೆ ಧರೆಗಿಳಿದು ಬಂದ ಶ್ರೀ ವಾಯುದೇವರ ಅವತಾರಿಗಳಾದ ಶ್ರೀಮನ್ಮಧ್ವಾಚಾರ್ಯರು. 

ಅವರಿಂದ ಪ್ರಾರಂಭಗೊಂಡ ಹರಿದಾಸ ಸಾಹಿತ್ಯದ ಬೆಳವಣಿಗೆಗೆ ನಾಂದಿ ಹಾಡಿದವರು ಶ್ರೀ ನರಹರಿತೀರ್ಥರು. 

ಶ್ರೀ ನರಹರಿತೀರ್ಥರ ನಂತರ ದಾಸ ಸಾಹಿತ್ಯಕ್ಕೆ ಮೆರಗು ಕೊಟ್ಟವರು ಶ್ರೀ ಧ್ರುವಾಂಶ ಶ್ರೀಪಾದರಾಜರು. 

ಶ್ರೀ ಶ್ರೀಪಾದರಾಜರಿಂದ ಮುಂದುವರೆದ ಈ ಸಾಹಿತ್ಯದ ಉಜ್ವಲ ಪರಂಪರೆಯನ್ನು ಬೆಳೆಸಿದವರು 

ಶ್ರೀ ಶಂಖುಕರ್ಣಾವತಾರಿಗಳಾದ ಶ್ರೀ ಪ್ರಹ್ಲಾದರೇ ವ್ಯಾಸರಾಜ ಗುರುಸಾರ್ವಭೌಮರು. 

ಶ್ರೀ ವ್ಯಾಸರಾಜರ ನೇತೃತ್ವದಲ್ಲಿ ದಾಸಕೂಟ ಪ್ರಾರಂಭವಾಯಿತು. 

ಶ್ರೀ ಭಾವಿಸಮೀರ ವಾದಿರಾಜರು - ಶ್ರೀ ಯಮಾಂಶ ಕನಕದಾಸರು ಮತ್ತು ಶ್ರೀ ನಾರದಾಂಶ ಪುರಂದರದಾಸರು ಈ ದಾಸ ಕೂಟಕ್ಕೆ ಸೇರಿದವರು. 

ಶ್ರೀ ಪುರಂದರದಾಸರ ಕಾಲವಂತೂ ಹರಿದಾಸ ಸಾಹಿತ್ಯದ " ಸುವರ್ಣ ಕಾಲ " ವೆನ್ನುತ್ತಿದ್ದರು. 

ಇವರು ಸಾಮಾಜಿಕ ಮತ್ತು ಲೋಕ ನೀತಿಯ ಕುರಿತು ಖಡಾ ಖಂಡಿತವಾಗಿ ಆಡು ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿದ್ದಾರೆ. 

ಶ್ರೀ ಪುರಂದರದಾಸರ ಜಾಡಿನಲ್ಲಿಯೇ ಸಾಗಿದ ಮತ್ತೊಬ್ಬ ದಾಸ ಶ್ರೇಷ್ಠರೆಂದರೆ ಕವಿಸಾರ್ವಭೌಮ ಶ್ರೀ ಕನಕದಾಸರು. 

ಹೀಗೆ ಹರಿದಾಸರುಗಳಿಂದ ಬೆಳೆದು ಹೆಮ್ಮರವಾಗಿ ದಾಸ ಸಾಹಿತ್ಯವು ಫಲವೀಯ್ಯುತ್ತಾ ಪ್ರಥಮ ಘಟ್ಟದ ಬೆಳವಣಿಗೆಗೆ ಸಾಧನವಾಯಿತು. 

ದಾಸ ಸಾಹಿತ್ಯ ಎನ್ನುವುದು ವ್ಯಾಸ ಸಾಹಿತ್ಯದ ಇನ್ನೊಂದು ರೂಪ.

ವ್ಯಾಸ ಸಾಹಿತ್ಯ ಎನ್ನುವುದು ಹಣ್ಣಿನಂತೆ. 

ದಾಸ ಸಾಹಿತ್ಯ ಎನ್ನುವುದು ಹಣ್ಣಿನ ರಸದಂತೆ. 

ಹಣ್ಣು ತಿನ್ನಲಾಗದಿದ್ದವರು ರಸವನ್ನು ಸುಲಭವಾಗಿ ಕುಡಿಯುವಂತೆ; ಸಂಸ್ಕೃತ ಬಾರದೇ ಇರುವ ಪಾಮರರಿಗೆ ದಾಸ ಸಾಹಿತ್ಯ ಒಂದು ವರದಂತೆ. 

" ಸುಧಾ ಓದು ಪದ ಮಾಡು " ಎನ್ನುವ ವಾಕ್ಯದಂತೆ ಪಂಡಿತರಿಗೂ ಕೂಡಾ ದಾಸ ಸಾಹಿತ್ಯ ಕ್ಲಿಷ್ಟವಾಗಬಹುದು. 

ಅಲ್ಲದೇ ಅವರವರ ಯೋಗ್ಯತೆಗೆ ತಕ್ಕಂತೆ ದಾಸ ಸಾಹಿತ್ಯ ಅರ್ಥವಾಗಬಹುದು.


" ಶ್ರೀ ವೈಕುಂಠ ದಾಸರ ಸಂಕ್ಷಿಪ್ತ ಮಾಹಿತಿ "

ಹೆಸರು : ಶ್ರೀ ಕೇಶವಚಾರ್ಯ ಅಯ್ಯಂಗಾರ್ 

ತಂದೆ :ಶ್ರೀ ತಿರುಮಲಾಚಾರ್ಯ ಅಯ್ಯಂಗಾರ್ 

ಕಾಲ : ಕ್ರಿ ಶ 1480 - 1550

ಅಂಶ : ಶ್ರೀ ಇಂದ್ರದೇವರು 

ಕ್ಷಕೆ : 08

" ಸಮಕಾಲೀನ ಯತಿಗಳು "

ಶ್ರೀ ವ್ಯಾಸರಾಜರು - ಶ್ರೀ ವಾದಿರಾಜರು - ಶ್ರೀ ಗೋವಿಂದ ಒಡೆಯರು - ಶ್ರೀ ವಿಜಯೀ೦ದ್ರರು 

" ಸಮಕಾಲೀನ ಹರಿದಾಸರು "

ಶ್ರೀ ಪುರಂದರ ದಾಸರು - ಶ್ರೀ ಕನಕ ದಾಸರು - ಶ್ರೀ ನವಸಾಲ್ಪುರಿ ತಿಪ್ಪಣ್ಣಾರ್ಯರು 

" ಕೃತಿಗಳು "

ಗಜೇಂದ್ರ ಮೋಕ್ಷ - ಶ್ರೀ ಶನೈಶ್ಚರ ದಂಡಕಮ್ 

ಪದ 14 - ಸುಳಾದಿ 3

ಶ್ರೀ ವಾದಿರಾಜ ಗುರುಸಾರ್ವಭೌಮರು ಸಂಚಾರ ಕ್ರಮದಲ್ಲಿ ಬೇಲೂರಿಗೆ ಬಂದಾಗ - ಶ್ರೀ ಕೇಶವ ಅಯ್ಯಂಗಾರ್ ಅವರು ಶ್ರೀ ವಾದಿರಾಜರ ಸನ್ನಿಧಿಗೆ ಬಂದು ವಿಶೇಷವಾಗಿ ಸೇವೆ ಸಲ್ಲಿಸಿದರು. 

ಅವರ ಸೇವೆಗೆ ಮೆಚ್ಚಿದ - ಶ್ರೀ ವಾದಿರಾಜ ಗುರುಸಾರ್ವಭೌಮರು ಶ್ರೀ ಹಯಗ್ರೀವ ಸಾಲಿಗ್ರಾಮ ಕೊಟ್ಟು ನಿತ್ಯ ಪೂಜಿಸಿ ಶ್ರೀ ಹಯಗ್ರೀವ ಪರಮಾನುಗ್ರಹ ಮಾಡುತ್ತಾನೆ ಎಂದು ಹೇಳಿ ಕೊಟ್ಟರು. 

ಶ್ರೀ ಬೇಳೂರು ಕೇಶವ ದಾಸರು ಪ್ರತಿನಿತ್ಯ ಶ್ರೀ ಹಯಗ್ರೀವ ಸಾಲಿಗ್ರಾಮವನ್ನು ಭಕ್ತಿ ಶ್ರದ್ಧೆಗಳಿಂದ ಪೂಜಿಸಿ ಶ್ರೀ ಹಯವದನನ್ನು ಸಾಕ್ಷಾತ್ಕಾರ ಪಡೆದು ಅವನಿಂದಲೇ " ವೈಕುಂಠ ವಿಠಲ " ಯೆಂಬ ಅಂಕಿತವನ್ನು ಸ್ವೀಕರಿಸಿ ಪದ - ಸುಳಾದಿಗಳನ್ನು ರಚಿಸಿದರು. 

" ಶಿಷ್ಯರು "

ಶ್ರೀ ಅಚ್ಯುತ ವಿಠಲ - ಶ್ರೀ ವರದ ಕೇಶವ - ಶ್ರೀ ಚೆನ್ನ ಕೇಶವ ಮತ್ತು ಬೈಲಾಪುರಿ ಕೇಶವ

ಶ್ರೀ ಬೈಲಾಪುರಿ ಕೇಶವಾಂಕಿತ ಶ್ರೀ ನಂಜುಂಡ ಶ್ರೀ ವೈಕಂಠ ದಾಸರಿಗೆ ಅಚ್ಚುಮೆಚ್ಚಿನ ಪ್ರೀತಿಯ ಶಿಷ್ಯ. 

ಶ್ರೀ ವೈಕುಂಠದಾಸರು ತಮ್ಮ ಪ್ರೀತಿಯ ಶಿಷ್ಯನಾದ ಶ್ರೀ ನಂಜುಂಡನನ್ನು... ... 


ರಾಗ : ತೋಡಿ    ತಾಳ : ಆದಿ 


ಬದುಕೋ ಬದುಕೋ 

ನಂಜುಂಡಾ । ಮ ।

ತ್ತೊದಗಿ ನೂರು ವರುಷ 

ಪರಿಯಂತ ।। ಪಲ್ಲವಿ ।।


ಜನನಿಯಾ ಮಾತು

ಮೀರಾದೆ । ಪರ ।

ವನಿತೆಯರಿಗೆ ಮನ 

ಸೋಲಾದೆ ನಂಜಾ ।

ಬಿನುಗು ದೈವಂಗಳಿಗೆರಗದೆ 

ದುರ್ಜನರ ಸಂಗವನು 

ಮಾಡಾದೆ ನಂಜಾ ।। ಚರಣ ।।


ತಪ್ಪು ದಾರಿಯಲ್ಲಿ 

ನಡಿಯಾದೆ ಆರು ।

ವಪ್ಪಾದೆ ಕರ್ಮವು 

ಮಾಡಾದೆ ನಂಜಾ ।

ತಪ್ಪು ಕಥೆಗಳ ನೀ ಕೇಳಾದೆ ।

ಅಪಸವ್ಯ ವಾಕ್ಕ್ಯಾಗಳಾ-

ನಾಡಾದೆ ನಂಜಾ ।। ಚರಣ ।। 


ಹರಿಗೆರಗೂತಲಿರು 

ಶರಣರ್ಗೆ ನಿರುತಾದಿ ।

ಹರಿಯ ಪೂಜೆಯನು 

ನೀ ಮಾಡುತಾ ನಂಜಾ ।

ಹರಿ ಸರ್ವೋತ್ತಮನೆಂತೆಂದು 

ಇರು ಕಂಡ್ಯಾ ।

ಹರಿ ಶ್ರೀ ವೈಕುಂಠ ವಿಠಲ 

ರಕ್ಷಿಸುವನು ನಿನ್ನಾ ।। ಚರಣ ।।


ಮುಂದೆ ಶ್ರೀ ವೈಕುಂಠ ದಾಸರು " ಶ್ರೀ ಪಂಗನಾಮದ ತಿಮ್ಮಣ್ಣದಾಸರಾಗಿಯೂ - ಶ್ರೀ ಮೊದಲಕಲ್ಲು ಶ್ರೀ ಶೇಷದಾಸರಾಗಿಯೂ ದಾಸ ರೂಪದಲ್ಲಿ ಅವತಾರ ಮಾಡಿದರು. 

ಈ ಶ್ರೀ ನಂಜುಂಡನೇ ಮುಂದೆ " ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯರಾಗಿ [ ಶ್ರೀ ವ್ಯಾಸ ವಿಠಲ ] ಅವತಾರ ಮಾಡಿದ ಪೂತಾತ್ಮರು. 

ಶ್ರೀ ವೈಕುಂಠದಾಸರ ರಚನೆಗಳು... 

೧. ಏಳಿ ಸುನಂದನಾ ನೀ ಬ್ಯಾಗದಿ 

೨. ಮದಕರಿಯೇ ವದನಕವಳವನಾದೆಲೊ ದೇವ 

೩. ಪಾಪಾತ್ಮ ನಾನಲ್ಲ ಪಾಪ ಎನಗಿನಿತಿಲ್ಲ 

೪. ನೀನೆ ಶ್ರಾದ್ಧದನ್ನವನುಂಡವಾ ನಾನರಿಯದಂತೆ 

೫. ಕೊಡುವದಿಲ್ಲವೆ ಪೋದ ಕಂಣು ನಾಲಿಗೆಯಾ 

೬. ಪಾಲಿಪೆದು ನಯನಗಳ ನಾಲಿಗೆಯ ನೀನು 

೭.ಶ್ರೀರಂಗ ಯಾತ್ತ್ರಿಯನು ಮಾಡಿ ಬಾರೆಂದೆನ್ನ 

೮. ನೋಡಾಲ ಬೇಕೇ ಎನ್ನೊಡೆಯನ 

೯. ಅಕಟಕಟ ಬಹಳ ಬಡತನವಡಸಿತೆ ನಿನಗೆ 

೧೦. ಮಗುವು ಕಾಣೆಯ್ಯಾ ಮಾಯದ ಮಗುವು ಕಾಣೆಯ್ಯಾ 

೧೧. ಏನು ಕಾರಣ ಎನಗ ತಿಳಿಯದಿದಕೋ 

೧೨. ಕೊಂಡಾಡಬಹುದೇ ಯತೀಂದ್ರ ಎನ್ನಾ ಪಾಂಡವ ಪ್ರಿಯನಾ ಪೂಜಕ ವಾದಿರಾಜ ಯತೀ 

೧೩. ಎಂಥಾ ಗಾಡಿಕಾರನೇ ಕೃಷ್ಣಯ್ಯ 

" ಸುಳಾದಿ "

೧. ಲಕ್ಷುಮೀಯ ಮಸ್ತಕಕೆ ಮಣಿ ಮೌಳಿಯಾದ 

೨. ಎಲ್ಲಿಹ ಮಧುರಾ ಪುರ ಇನ್ನೆಲ್ಲಿಹ ಕಂಸಾಸುರನೆ 

೩. ನೋಡಲೇ ಮನವೇ ಜಗದೀಶನ

by ಆಚಾರ್ಯ ನಾಗರಾಜು ಹಾವೇರಿ

ಗುರು ವಿಜಯ ಪ್ರತಿಷ್ಠಾನ

***

following is from samyukta harshita blog

The miser who became a Haridasa

Just like his friend Purandara Dasa, he too was rich person and he was a miser too. If Purandara Dasa lived in Kshemapura in Shimoga district, he lived in Belur in Hassan district.

Though both were contemporaries, they did not know each other. If Purandara Dasa was a Madhwa Brahmin, this person was a Srivaishnava. If Hari himself transformed Purandara Dasa into a Haridasa, it was Vadiraja Theertha (1480-1600) who gave this man from Belur deekshe and transformed his mundane life into a pious and holy one.

Both Purandara and the man from Belur met at Hampi where they quickly became close friends. Both accepted the venerable Vyasa Raja or Vyasa Theertha (1447-1539) as their guru and both composed innumerable devaranamas.

The man from Belur later went on to make a mark as a great devotee of Sri Krishna whom he always worshipped. This man is none other than Belur Vaikunta Dasa (1480-1550).

It was Vadiraja who reformed a rich Vaikunta Dasa and gave him a Hayagriva Saligrama. Vadiraja told Vaikunta Dasa that he could amass untold wealth and riches if he worshipped the Saligrama with sincerity and devotion.

More out of greed, Vaikunta Das began performing pooje daily to the Saligrama. Slowly but surely, he became devoted to the Saligrama and the pooje continued. Over a period of time, he realised that the Saligrama was more precious than all his wealth and that it could never be quantified.

He became a devotee of Hayagriva and lost interest in the materialistic world. When Varidara realised that Belur Vaikunta dasa was a transformed man, he blessed him and named him “Sri Vaikunta Dasa.”

Vaikunta Dasa became a Haridasa and began composing Kirtanas in Kannada on Sri Hari with Ankitha Vaikunta.

Vaikunta Dasa was a native of  Belur and he rarely if ever stirred out of Belur. He has a few compositions in Kannada which bear the ankita nama Vaikunta Dasa. He became a close friend and companion of Purandara Dasa and Kanaka Dasa and also a disciple of Vadiraja Theertha.

His devotion to Hari was such that Krishna danced in front of him when he sang. All the three dasas -Vadiraja, Kanaka and Purandara have paid tributes to Vaikunta Dasa.

Purandara Dasa went around the Vijayanagar Kingdom spreading the tenets of Madhwacharya and singing the glory of Hari. During one such tour, he came to Belur in Hassan district where Belur Vaikunta Dasa was staying.

Vaikunta Dasa rarely, if ever, stirred out of  Belur and the few times he did was to visit his friend Purandara Dasa and his guru, Vyasa Raja. Though he was a Srivaishnava scholar, he  composed many songs on Hari.

Vaikunta Dasa lived in a house in Belur and when Puranadara Dasa came, he saw a beautiful child playing on the lap of the Dasa. Both Belur Vaikunta Dasa and the boy, whom Belur Vaikunta Dasa called Keshava, were so engrossed in playing that they did not notice Purandara Dasa.

When Purandara Dasa came very near to them, he suddenly realised that the Keshava who was playing in the lap of Belur Vaikunta Dasa was none other than Krishna himself.

Even as Puranadara Dasa was about to speak, the child looked up and on seeing a stranger burst into tears. The incessant crying of the child immediately spurred Purandara Dasa into composing a poem.

This beautiful poem is:


 “aLuvadyaadako raMgaa! atta raMjisuva  gummA  


puTTidELu divasadali!duShTa pootaneeya koMde

muTTi moleya haaluMDa kaaraNa! dRuShTi taakitE ninage kaMdayyaa  1


bAlakatanadalli gO! paalaroDagooDi

kALiMga maDuvanu kalakida kAraNa! kaalu uLakitE ninage raMgayyaa    2


turuva kaayalu pOgi! bharadiMda maLegareye

beraLali beTTavanettida kaaraNa! beraLu uLukitE ninage kaMdayyaa    3


vasudEva sutanaagi asurara mardiside

basurali bommana paDeda kAraNa! kisaru taakite ninage raMgayyaa     4


sharaNu vElaapurada  doreye  chennigaraaya

sharaNara salahuva karuNAnidhiyE varada puraMdara viThala rAya        5


When Purandara Dasa began singing in his melodious voice, the child stopped crying and gave a smile.

Puranadara Dasa stayed back at the home of Belur Vaikunta Dasa for some time before proceeding on his onward journey.

Another time, when Purandara Dasa was walking on the streets of Hampi or Vijayanagar one evening with Belur Vaikunta Dasa, a rogue elephant suddenly came out of nowhere and charged at them.

While Purandara Das managed to take evasive action, Vaikunta Dasa came face to face with the animal. Purandara Dasa immediately began singing,


“Sakala duritagala parihara maado Venkatesha, bhaktige volidu bandu bhaktana kaayo Venkatesha….varada Purandara vittala,”


Meanwhile, the elephant ran upto Vaikunta Dasa and it saluted the Dasa with its trunk and left. A dumbfounded Purandara Dasa had no words to describe his feelings and he embraced Vaikunta Dasa and both continued their evening stroll.  

***

panduranga vittala dasaru born1918 ಪಾಂಡುರಂಗವಿಟ್ಠಲ ದಾಸರು

lakshminarayanaru 1900+ ಲಕ್ಷ್ಮೀನಾರಾಯಣರಾಯ dasaru  

ಗುರುರಾಘವೇಂದ್ರ ತವ ಚರಣಾರವಿಂದ.. raghavendra stavana creator

"ಶ್ರೀ ರಾಘವೇಂದ್ರ ಸ್ತವನ"ವು ಪಾಂಡುರಂಗವಿಟ್ಠಲ ದಾಸರ ಮಹತ್ತರ ಕೃತಿ (ಪಾಂಡುರಂಗ ರಾವ್ ಕಸಬೆ, 1918). ಅಶ್ವಧಾಟಿ ಸಾಂಗತ್ಯದಲ್ಲಿರುವ ಈ ಕೃತಿಯಲ್ಲಿ ಭಕ್ತಿರಸವು ಹರಿದಿದೆ, ರಾಯರ ಮಹಿಮೆಯು ಕೊಂಡಾಡಲ್ಪಟ್ಟಿದೆ.

ಸುಮಾರು 150 ವರ್ಷಗಳ ಹಿಂದೆ ಗದ್ವಾಲ ಸಂಸ್ಥಾನದಲ್ಲಿ ನರಹರಿ ರಾವ್ ಎನ್ನುವವರು ದಿವಾನರಾಗಿದ್ದರು. ಇವರು ‘ನರಹರಿವಿಟ್ಠಲ’ ಎಂಬ ಅಂಕಿತದಿಂದ ಸರಿಸುಮಾರು ಇನ್ನೂರು ಪದ್ಯಗಳನ್ನು ರಚಿಸಿರುವರೆಂದು ಮಾಧ್ವವಾಙ್ಮಯತಪಸ್ವಿಗಳು ಎಂಬ ಗ್ರಂಥದಲ್ಲಿ ಪಂಡರೀನಾಥಾಚಾರ್ಯ ಗಲಗಲಿಯವರು ತಿಳಿಸಿದ್ದಾರೆ. ಇವರ ವಂಶಜರೇ ಪಾಂಡುರಂಗ ರಾವ್ ಕಸಬೆಯವರು.

ಬಾಲ್ಯದಲ್ಲಿ ಪಾಂಡುರಂಗರಾಯರು ಪ್ರೌಢಶಿಕ್ಷಣಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಮನನೊಂದು ತಿರುಪತಿಗೆ ತೆರಳಿ ಅಲ್ಲಿ ಮಹಾನ್ ಸಾಧಕರೆನಿಸಿದ್ದ ಪಾಂಡುರಂಗೀ ಹುಚ್ಚಾಚಾರ್ಯರನ್ನು ಸೇವಿಸಿ ಅವರಿಂದಲೇ ‘ಪಾಂಡುರಂಗವಿಟ್ಠಲ’ ಎಂಬ ಅಂಕಿತವನ್ನೂ ಪಡೆದು ಸಾಧನಾಮಾರ್ಗದಲ್ಲಿ ಮುನ್ನಡೆದರು. ಗುರುಗಳ ಅನುಗ್ರಹಬಲಾತ್ ‘ಶ್ರೀ ಜಗನ್ನಾಥ ವಿಜಯ’ವೆಂಬ ಕೃತಿಯನ್ನು ರಚಿಸಿ ಸಮಕಾಲೀನರಾಗಿದ್ದ ಸರ್ವ ಹರಿದಾಸರ ಪೀತಿಗೆ ಪಾತ್ರರಾದುದಷ್ಟೇ ಅಲ್ಲದೆ ಹರಿ-ಗುರುಗಳ ವಿಶೇಷಕೃಪೆಗೆ ಪಾತ್ರರಾದರು.

ಕ್ರಿ.ಶ. 1918ರಲ್ಲಿ ಜನಿಸಿದ ಶ್ರೀಯುತರು ರಾಯಚೂರಿನಲ್ಲಿ ಕರಣಿಕವೃತ್ತಿಯಲ್ಲಿದ್ದರು. ಸಾಂಪ್ರತ ನಾವು ರಾಯರ ಅಂತರಂಗ ಭಕ್ತರಾಗಿದ್ದ, ಪಾಂಡುರಂಗವಿಟ್ಠಲದಾಸರ ಜನ್ಮಶತಮಾನೋತ್ಸವವನ್ನೂ ಆಚರಿಸುತ್ತಿದ್ದೇವೆ. ಇವರು ಸಂಸ್ಕೃತ, ಕನ್ನಡ, ಉರ್ದು ಮುಂತಾದ ಭಾಷೆಗಳಲ್ಲಿ ಕಾವ್ಯರಚನಾಸಾಮರ್ಥ್ಯದಷ್ಟು ಪ್ರೌಢಿಮೆ ಹೊಂದಿದ್ದರು. ಅನೇಕ ಕವನಗಳಲ್ಲದೆ ಉರ್ದುಭಾಷೆಯಲ್ಲಿ ‘ಪನ್ನಾದಾಸಿ’ ಎಂಬ ನಾಟಕವನ್ನೂ ರಚಿಸಿರುವ ದಾಸರು ಮತೀಯ ವೈಷಮ್ಯಗಳನ್ನು ಪರಿಹರಿಸುತ್ತ ಸರ್ವಜನಾನುರಾಗಿಗಳಾಗಿದ್ದರು.

ಭಾಮಿನಿಷಟ್ಪದಿಯ ನೂರಕ್ಕೂ ಮಿಗಿಲಾದ ಪದ್ಯಗಳಲ್ಲಿ ಹಾಗೂ ಐದು ಅಧ್ಯಾಯಗಳಲ್ಲಿ ನಿಬದ್ಧವಾಗಿದೆ ಇವರ ‘ಶ್ರೀ ಜಗನ್ನಾಥ ವಿಜಯ’ ಕೃತಿ. ಇದರಲ್ಲಿ ದಾಸರು ಕನ್ನಡಭಾಷಾಭಿಮಾನ, ಕನ್ನಡನಾಡಿನ ಬಗೆಗಿರುವ ಗೌರವಾತಿಶಯಗಳನ್ನು ಅಭಿವ್ಯಕ್ತಿಸಿದ್ದಾರೆ. ಜಗನ್ನಾಥದಾಸರನ್ನು ಮನಸಾರೆ ಸ್ತುತಿಸುತ್ತ ಅವರು ಕನ್ನಡನಾಡಿಗೆ ನೀಡಿದ ಅಪಾರ ಕೊಡುಗೆಯನ್ನು ನೆನೆಯುತ್ತಾರೆ ದಾಸರು – ‘ದೇಶಕನ್ನಡವೆಂಬ ವಿಶದಾಕಾಶ ಭಾಸ್ಕರರಾಗಿ ದಾಸರು ಸೂಸಿದರು ವೈರಾಗ್ಯ ಬಿಂಬಗಳಲ್ಲಿ’ ಎಂಬುದಾಗಿ.

ಇವರ ಕೃತಿಗಳಲ್ಲಿ ನೀತಿಸಂಹಿತೆಯು ಹಾಸುಹೊಕ್ಕಾಗಿದೆ ಹಾಗೂ ಮನನಾಟುವಂತಿದೆ. ‘ದಾನಗುಣವಿಲ್ಲದ ಪೂಜೆ, ಭೂತದಯವಿಲ್ಲದ ಪಾಂಡಿತ್ಯ, ಪಾತಿವ್ರತ್ಯವಿಲ್ಲದ ವನಿತೆ, ಭಯವಿಲ್ಲದ ಸೇವಕರು, ನಯವಿಲ್ಲದ ಬಾಲಕರ, ನಿಶ್ಚಯವನಾಡದ ಸ್ನೇಹಿತರು ಕುರಿಯ ಕೊರಳೊಳು ಮೊಲೆಗಳಿದ್ದಂತೆ’ ಎಂಬುದಾಗಿ ಮಾರ್ವಿುಕವಾಗಿ ಉಪದೇಶಿಸುತ್ತಾರೆ. ಕೊಪ್ಪರದ ಶ್ರೀ ನರಸಿಂಹದೇವರನ್ನು ಅಶ್ವಧಾಟಿಯಲ್ಲಿ 19 ನುಡಿಗಳಲ್ಲಿ ವರ್ಣಿಸಿರುವ ದಾಸರು ಕೃಷ್ಣಾನದಿಯ ಸೊಬಗನ್ನು, ಷೋಡಶಬಾಹು ನರಸಿಂಹನ ಉದ್ಭವವು ಯಾವ ತೆರದಿ ಆಯಿತೆಂಬುದನ್ನೂ ಬಣ್ಣಿಸಿದ್ದಾರೆ.

ದಾಸರ ಮಹತ್ತರ ಕೃತಿ ‘ಶ್ರೀ ರಾಘವೇಂದ್ರ ಸ್ತವನ’. ಅಶ್ವಧಾಟಿ ಸಾಂಗತ್ಯದಲ್ಲಿರುವ ಈ ಕೃತಿಯಲ್ಲಿ ಭಕ್ತಿರಸವು ಮುಗಮ್ಮಾಗಿ ಹರಿದಿದೆ. ಉಪಮೆಯು ಲಲನೆಯಂತೆ ನಲಿದಾಡಿದೆ. ರಾಯರ ಮಹಿಮೆಯು ಕಬ್ಬಿನರಸದಂತೆ ಕಬ್ಬಿಗರಿಗೆ ಆಸ್ವಾದ್ಯಮಾನವಾಗಿದೆ. ಭವದ ಮೋಹವನ್ನು, ಮೃತ್ಯುವಿನೊಂದಿಗೆ ಬಾಳ್ವೆ ಮಾಡುವ ಮಾನವನ ಕ್ಷಣಿಕ ಜೀವನವನ್ನೂ ಚಿತ್ರಿಸುವ ದಾಸವರ್ಯರ ಜಾಣ್ಮೆಯು ಪ್ರಹ್ಲಾದನಿಗೆ ತೋರಿದ ಭಗವದ್ದರ್ಶನದಂತೆ ಮೋಹಕವಾಗಿದೆ. ರೊಕ್ಕಕ್ಕೆ ಸಿಕ್ಕಿ, ದಿಕ್ಕಿಲ್ಲದಂತಾಗಿ, ಜ್ಞಾನಾಮೃತವಿಲ್ಲದೆ ಬಿಕ್ಕಳಿಸುವ ಮಾನವನು ಗುರುರಾಯರ ಪಾದಗಳನ್ನು ಗಬಕ್ಕನೆ ಹಿಡಿದು ಹೇಗೆ ಭಗವದ್ಭಕ್ತರ ಪಕ್ಕದಲ್ಲಿ ಮುಕ್ತಿಯ ಸೋಪಾನಮಾರ್ಗದಲ್ಲಿ ನಡೆಯಬಹುದೆಂದು ದಾಸರ ಕೃತಿಗಳು ಸರಳೋಪಾಯಗಳನ್ನು ತಿಳಿಸಿವೆ.

ರಾಯರನ್ನು ಸ್ತುತಿಸುವ ಇವರ ಸಾಲುಗಳು ಹೀಗಿವೆ – ‘ವಾರಾಹಿವಾಸ ಭೂಭಾರಾರಿದಿವ್ಯರಥವೇರುತ್ತಲಾಕ್ಷಣದ, ಬಾರೋ ನೀ ಭವರೋಗದೂರಾ ಯತಿಯೆ ಎಂದು ಸಾರುತ್ತ ಡಂಗುರಗಳ’. ರಾಯರ ಬಗ್ಗೆ ವಿಶೇಷ ವಿಶ್ವಾಸ ವ್ಯಕ್ತಪಡಿಸುವ ದಾಸರು, ‘ರಾಯರು, ದಿವ್ಯಾಂಗರಾದ, ತುಂಗಾನಿವಾಸಿಗಳಾಗಿ, ಪಾಂಡುರಂಗನಪಾದಭೃಂಗರೆಂದೆನಿಸಿ ಜನರನ್ನು ಉತ್ತುಂಗಕ್ಕೆ ಕರೆದೊಯ್ಯುವಲ್ಲಿ ಸಂಶಯವೇ ಬೇಡ’ ಎನ್ನುವರು. ಉಪಮೆಯಿಂದ ಗುರುರಾಜರನ್ನು ಅಲಂಕರಿಸುವ ದಾಸರು, ‘ಶಾಂತತೆಯಲಿ ಚಂದ್ರ, ಸಂತೋಷದಲಿ ಕಡಲ ಕಾಂತಿಯೊಳಗಿವ ಭಾಸ್ಕರ, ಶ್ರೀಮಂತಿಗೆಯಲಿ ದನುಜತನಯ, ಪಂಥದಲಿ ಬಲಿತಾತ, ಸುತೇಂದ್ರ ದಾನದಲಿ ಈ ಮಂತ್ರಾಲಯನಿವಾಸನು’. ಹೀಗಿರಲು ಭಕ್ತರು ಏನನ್ನೂ, ಯಾರನ್ನೂ ಚಿಂತಿಸದೆ ರಾಯರ ಬಳಿಗೆ ಪೋಗಿ ತಮಗೆ ಬೇಕಾದ್ದೆಲ್ಲವನ್ನೂ ಕೇಳಿ ಪಡೆಯಿರಿ ಎಂದು ಮಾರ್ಗದರ್ಶನ ಮಾಡುತ್ತಾರೆ. ಮುಂದೆ ರಾಯರೇ ನಮ್ಮ ಸಕಲ ರೋಗಗಳನ್ನೂ ಪರಿಹರಿಸುವ ಏಕಮಾತ್ರ ವೈದ್ಯ ಎಂದು ಅರುಹುತ್ತಾ ದಾಸರು, ‘ವ್ಯಾಕುಳದ ಭವರೋಗಕೆ ಏಕಔಷಧಮಾತ್ರೆ ಪಾಕವಿದು ಜನರ ಬಿಡದೆ ಏಕಚಿತ್ತದಿ ಪಠಿಪುದು ಈ ಕೃತಿಯ ನಿತ್ಯದಿ ಐಹಿಕಸುಖಕೆ ಒಳಗಾಗದೆ’ ಎಂಬ ಹಿತವಚನದೊಂದಿಗೆ ತಮ್ಮ ಕೃತಿಯ ಫಲಸ್ತುತಿಯನ್ನೂ ನಿವೇದಿಸಿದ್ದಾರೆ.

ಇಂತಹ ಮಹನೀಯರ ಈ ರಾಘವೇಂದ್ರಸ್ತವನವನ್ನು ಗುರುರಾಯರ ಆರಾಧನಾಮಹೋತ್ಸವದ ಈ ಶುಭಮಾಸದಲ್ಲಿ ನಾವೆಲ್ಲರೂ ಪಠಸಿ ಧನ್ಯರಾಗೋಣ.

(ಲೇಖಕರು ವಿದ್ವಾಂಸರು, ಸಂಸ್ಕೃತ ಪ್ರಾಧ್ಯಾಪಕರು)

(ಪ್ರತಿಕ್ರಿಯಿಸಿ: vidwansuman@gmail.com)

***

Tuesday, 27 April 2021

subodharamarayaru ಸುಬೋಧರಾಮರಾಯರು phalguna shukla ekadashi

SUBODHARAMARAYARU ಸುಬೋಧರಾಮರಾಯರು

ರಘುರಾಮ ವಿಠಲ

ಫಾಲ್ಗುಣ ಶುದ್ಧ ಏಕಾದಶಿ/ದ್ವಾದಶಿ

ಶ್ರೀ ಗೋರೆಬಾಳ ಹನುಮಂತರಾಯರಂತೆಯೇ ಅವರ ಹಾದಿಯಲ್ಲೇ ನಡೆದು ಹರಿದಾಸ ಸಾಹಿತ್ಯದ ಸೇವೆ ಮಾಡಿದವರು,  ಅನೇಕ ಕೃತಿ ಸಂಗ್ರಹ ಮಾಡಿ ಸಂಶೋಧಿಸಿ  ಸ್ವಚ್ಛ ಕೃತಿಗಳನ್ನು ಪ್ರಕಟ ಮಾಡಿದವರು, ಅನೇಕ ಮಹನೀಯರ ಚರಿತ್ರೆಗಳನ್ನೂ ಸಹ ಪ್ರಕಟಮಾಡಿದವರು,  ಸುಬೋಧ ಪ್ರಕಟನಾಲಯದ ಅಧಿನೇತ, ಕರಿಗಿರೀಶ  ಅಂಕಿತಸ್ಥರಾದ ಶ್ರೀ ವರವಣಿರಾಮರಾಯರ. ಶ್ರೀಕಾಂತ ಅಂಕಿತಸ್ಥರಾದ ಶ್ರೀ ದಾಸರ ಲಕ್ಷ್ಮೀನಾರಾಯಣ ದಾಸರ ಆತ್ಮೀಯರು, ನಿಕಟವರ್ತಿಗಳು, ಅನೇಕ ಪ್ರಶಸ್ತಿಗಳನ್ನು ಪಡೆದವರು, ತಮ್ಮ ಅಂತ್ಯಕಾಲದಲ್ಲಿ ಪರಮಾತ್ಮನನ್ನು ಧ್ಯಾನಿಸುತ್ತಲೇ ದೇಹವನ್ನು ಬಿಟ್ಟ ಚೇತನರು ಶ್ರೀ ರಘುರಾಮವಿಠಲ ಅಂಕಿತಸ್ಥರು, ತಮ್ಮ ಪ್ರಕಟನಾಲಯದ ಹೆಸರನ್ನೇ ಮನೆಯ ಹೆಸರೆನ್ನುವಂತೆ ಪ್ರಖ್ಯಾತರಾದ ಶ್ರೀ ಸುಬೋಧರಾಮರಾಯರ ಆರಾಧನಾ ಪರ್ವಕಾಲವು

ಇಂತಹ ಮಹಾನುಭಾವರ ದಯೆಯಿಂದ ಇಂದು ನಾವು ಸರಿಯಾದ ಸಾಹಿತ್ಯವನ್ನು  ಪಡೆದಿದ್ದೆವೆ ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.  ಶ್ರೀ ಸುಬೋಧ ರಾಮರಾಯರ ಅನುಗ್ರಹ ಸದಾ ನಮ್ಮ ಎಲ್ಲರಮೇಲಿರಲಿ ಎಂದು ಅವರಲ್ಲಿ ಅವರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಲಕ್ಷ್ಮೀನಾರಸಿಂಹಾಭಿನ್ನ ಶ್ರೀ ಲಕ್ಷ್ಮೀವೆಂಕಪ್ಪನಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ...

smt. padma sirish

ಜೈ ವಿಜಯರಾಯ

ನಾದನೀರಾಜನದಿಂ ದಾಸಸುರಭಿ 🙏🏽

***


Sunday, 18 April 2021

ವ್ಯಕ್ತಿ ವಿಶೇಷ vyakti vishesha

 ಪುಸ್ತಕ ರಶ್ಮಿಗಳ ಬೀರಿದ ಸೂರ್ಯ ಇಂದು ಅಸ್ತಂಗತ 28 dec 2020

ವಿಜಯಪುರದಲ್ಲಿ ಎರಡು ಗುಮ್ಮಟಗಳಂತೆ ‌‌. ಐತಿಹಾಸಿಕವಾಗಿ ಪ್ರಸಿದ್ಧವಾದ ಗೋಳಗುಮ್ಮಟ ಒಂದಾದರೆ  ಶ್ರೀನಿವಾಸಾಚಾರ್ಯ ಸು ಮಠದ ಇವರು ಕಟ್ಟಿದ ಪುಸ್ತಕದ ಗುಮ್ಮಟ ಎರಡನೆಯ ಗುಮ್ಮಟವೆಂದು ಪೇಜಾವರ ಶ್ರೀಪಾದಂಗಳವರು ಹೇಳಿದ ಮಾತು ವಿಜಯಪುರದ ಈ ಗುಪ್ತ ಸಾಧಕರ ವ್ಯಕ್ತಿತ್ವವನ್ನು ಚಿತ್ರಿಸಲು ಪರ್ಯಾಪ್ತವಾಗಿದೆ.

ಡಿಸೆಂಬರ್ 20ರಂದು ಕೃತಿಗಳ ಮೇರು ಕಟ್ಟಿದ ಈ ಸುಕೃತಿಗಳು ಪ್ರಕೃತಿಯಲ್ಲಿ ಲೀನರಾಗಿದ್ದಾರೆ.

ಶ್ರೀ ಶ್ರೀ 1008 ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ಅಚ್ಛಿನ್ನ ಶಿಷ್ಯರಾದ, ಸಾಧು ಸ್ವಭಾವದ ಶ್ರೀ ಸುಬ್ರಹ್ಮಣ್ಯಆಚಾರ್ಯ ಮಠದ ಇವರ ಸುಪುತ್ರರು ಶ್ರೀನಿವಾಸಾಚಾರ್ಯರು.   ವಿಜಯಪುರದಲ್ಲಿ ಋಷಿಸದೃಶ ಜೀವನ ನಡೆಸಿದ ಪಂಡಿತ ಪೂಜ್ಯ ಉಮರ್ಜಿ ತ್ರಿವಿಕ್ರಮಾಚಾರ್ಯರ ಏಕನಿಷ್ಠ ಶಿಷ್ಯರಾಗಿ ಅತ್ಯಂತ ಮಡಿವಂತಿಕೆಯಿಂದ ಇಡೀ ಜೀವನವನ್ನೇ ಧರ್ಮಕ್ಕಾಗಿ ಮೀಸಲಿಟ್ಟವರು ಈ ಸಿದ್ಧಪುರುಷರು. ಒಳ್ಳೆ ಬ್ಯಾಂಕಿನ ನೌಕರಿಯನ್ನು ತಮ್ಮ 50 ನೇ ವಯಸ್ಸಿನಲ್ಲಿ ಭಾರಿ ಭರ್ತಿ ಸಂಸಾರದ ಮಧ್ಯದಲ್ಲಿ ನಾಲ್ಕು ಜನ ಹೆಣ್ಣುಮಕ್ಕಳ ಹೊಣೆ ಇದ್ದಾಗಲೂ , ಮನಸ್ಸಿನಲ್ಲಿ ಮೂಡಿದ ವೈರಾಗ್ಯವನ್ನು ಆ ಕ್ಷಣದಲ್ಲಿ ಕೃತಿಯಲ್ಲಿ ತಂದು ಸ್ವಯಂ  ನಿವೃತ್ತಿ ಘೋಷಣೆ ಮಾಡಿ, ತಾವು ಓದಿದ, ತಿಳಿದ, ಕೇಳಿದ ಶಾಸ್ತ್ರ ಪ್ರಮೇಯಗಳ ತಿರುಳನ್ನು ಬ್ರಾಹ್ಮಣ ಸಮಾಜದ ಸಮಗ್ರ ಸಾಧಕರಿಗೆ ಸೋಪಾನವಾಗುವಂತೆ 113 ಅದ್ಭುತ, ಅತ್ಯಂತ ಉಪಯುಕ್ತ ಕೃತಿಗಳಲ್ಲಿ ತಿಳಿಸಿ ವಿಲಕ್ಷಣ ಕೊಡುಗೆ ನೀಡಿದ್ದಾರೆ. ಅನೇಕ ಮಾಸ ಮಹಾತ್ಮೆಗಳು,  ಸ್ವಪ್ನ ಪ್ರಪಂಚ, ಭಾಗವತ ಸಂಗ್ರಹ, ರಾಮ ನರಸಿಂಹ ಮುಂತಾದ ಅನೇಕ ಸ್ತೋತ್ರ ಮಂಜರಿಗಳು, ಕರಾವಲಂಬನ, ಮಂಗಳಾಷ್ಟಕಗಳ ಸಂಗ್ರಹ, ಸದಾಚಾರಗಳ ಬಗ್ಗೆ ಅನೇಕ ಪ್ರಮಾಣಬದ್ಧ ಕೃತಿಗಳು, ಹೀಗೆ ಇನ್ನೂ ಅನೇಕ ಕೃತಿಗಳನ್ನು ವಿದ್ವಾಂಸರಿಗೂ, ಸಾಧಕರಿಗೂ ಉಪಯುಕ್ತವಾಗುವ ರೀತಿಯಲ್ಲಿ ಕನ್ನಡದಲ್ಲಿ ರಚಿಸಿ ಪ್ರತಿಯೊಂದು ಮಾತಿಗೂ ಪ್ರಮಾಣಗಳನ್ನು ನೀಡಿ ಅತ್ಯಂತ ಸ್ತುತ್ಯ ಕಾರ್ಯವನ್ನು ಮಾಡಿದ್ದಾರೆ. ಒಂದೊಂದೇ ಕೃತಿಗೂ ಅನೇಕ ಮೂಲಪ್ರತಿಗಳನ್ನು ಸಂಶೋಧಿಸಿ, ತಾವೇ ಕುಳಿತು ಬರೆದು ಡಿಟಿಪಿ ಮಾಡಿಸಿ, ತಾವು ಸ್ವಯಂ ಒಳ್ಳೆಯ ಶಾಸ್ತ್ರಜ್ಞರಾದರೂ ಕೂಡ ವಿದ್ವಾಂಸರ ಮುಂದೆ ವಿನಯದಿಂದ ಓದಿ ತೋರಿಸಿ ಅತ್ಯಂತ ಪ್ರಾಮಾಣಿಕ ರೀತಿಯಲ್ಲಿ ಭಾರೀ ಶ್ರಮ ಸಾಧ್ಯವಾದ ಕೆಲಸವನ್ನು ತಮ್ಮ ಜೀವನದ ದ್ವಿತೀಯಾರ್ಧದಲ್ಲಿ ಮಾಡಿದ್ದು  ಶ್ಲಾಘನೀಯವಾದದ್ದು. ತಮ್ಮ ಮಕ್ಕಳೆಲ್ಲರ ಸಂಸಾರವನ್ನು ಅತ್ಯಂತ ಯೋಗ್ಯವಾಗಿ ನಡೆಯುವಂತಾಗಿಸಿ, ಮಗನನ್ನೂ ಒಳ್ಳೆಯ ವಿದ್ವಾಂಸನಾಗುವಂತೆ ಪಂ. ಮಧ್ವಾಚಾರ್ಯ ಮೊಕಾಶಿ ಅವರಲ್ಲಿ ಶಾಸ್ತ್ರ ಪಾಠ ಹೇಳಿಸಿ, ತಂದೆಯಾಗಿ ಮಾಡಬೇಕಾದ ಕರ್ತವ್ಯವನ್ನು ನಿಭಾಯಿಸಿದ್ದಾರೆ. ಅನೇಕ ವರ್ಷಗಳ ಕಾಲ ವಿಜಯಪುರದಲ್ಲಿ ಇದ್ದ ಇವರು ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಮೇಲೆಯೂ ತಮ್ಮ ಬೆನ್ನುನೋವಿನ ಮಧ್ಯದಲ್ಲಿಯೂ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಶ್ರೀ ೧೦೦೮ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ವಿಜಯಪುರದಲ್ಲಿ ಮಾಡಿದ ತಮ್ಮ ಗುರುಗಳ ಮಹಾಸಮಾರಧನೆಯ ಸ್ಮರಣ ಸಂಚಿಕೆಯನ್ನು ಹಾಗೂ ಇನ್ನೂ ಅನೇಕ ಸ್ಮರಣ ಸಂಚಿಕೆಗಳನ್ನೂ ಸಂಪಾದಿಸಿ ಮಹಾಸ್ವಾಮಿಗಳ ಸೇವೆ ಮಾಡಿದ್ದಾರೆ. "ಹಯವದನ ವಿಠ್ಠಲ" ಎನ್ನುವ  ಅಂಕಿತದಿಂದ (ಅವರಿಗೆ ಸ್ವಪ್ನ ಲಬ್ಧವಾದದ್ದು) ಅನೇಕ ಪದ್ಯಗಳನ್ನು ರಚಿಸಿದ್ದಾರೆ. ಅನೇಕ ಮಠ ಮಾನ್ಯಗಳಿಂದ, ಸಂಘ ಸಂಸ್ಥೆಗಳ ವತಿಯಿಂದ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ. 

ನಿತ್ಯ ಮೂರುಗಂಟೆಯ ಸವಿಸ್ತಾರವಾದ ಪೂಜೆ, ಅನೇಕ ಗಂಟೆಗಳ ಸರ್ವಮೂಲ ಪಾರಾಯಣ, ಗ್ರಂಥಗಳ ಅಧ್ಯಯನ, ಪುಸ್ತಕಗಳ ಲೇಖನ, ಇದುವೇ ಅವರ ಜೀವನ. ಮಿಂಚಬೇಕೆಂದು ಕೊಂಚವೂ ಇಚ್ಚಿಸಲಿಲ್ಲ, ಲೋಭದ ಲೇಪವು ಇಲ್ಲ, ಮಾತ್ಸರ್ಯ ಮನೆ ಮಾಡಲಿಲ್ಲ, ಕ್ರೋಧಗೊಂಡವರಲ್ಲ, ಮೃದು ನುಡಿಯ ರೂಢಿ ಬಿಡಲಿಲ್ಲ, ಎಷ್ಟು ಹೇಳಿದರೂ ಈ ಗುಣಗಳು ಮುಗಿಯುವುದಿಲ್ಲ. .

ಶಾಸ್ತ್ರ ಸಾಗರದಲ್ಲಿ ಮುಳುಗಿ ಅನೇಕ ಪ್ರಮೇಯ ರತ್ನಗಳನ್ನು ಹುಡುಕಿ ತಮ್ಮ ಕೃತಿಗಳಲ್ಲಿ ಅವುಗಳನ್ನು ಪೋಣಿಸಿ ಪರಮಾತ್ಮನನ್ನು ಅದರಿಂದ ಪೂಜಿಸಿ, ಸಾಧಕ ಸಮಾಜಕ್ಕೆ ನಿರ್ಮಾಲ್ಯದಂತೆ ಅದನ್ನು ನೀಡಿದ ಇವರನ್ನು ವಿಜಯಪುರ ಹಾಗೂ ಸಮಗ್ರ ಬ್ರಾಹ್ಮಣ ಸಮಾಜ ಇಂದು ನೆನೆಯುತ್ತದೆ.

ತಮ್ಮ ಎಪ್ಪತ್ತನೆಯ ವಯಸ್ಸಿನಲ್ಲಿ ಮಹಾಮಾರಿಗೆ ತುತ್ತಾಗಿ ಹೋದರು ಎನ್ನುವುದು ನೆಪಮಾತ್ರವಾದೀತು. ತಾವೇ ಅದ್ಭುತ ಸಾಧನೆಯ ಸೋಪಾನವನ್ನು ಸದ್ಗತಿಯ ಕಡೆಗೆ ಕಟ್ಟಿ ಇಲ್ಲಿನ ಬಂಧನವನ್ನು ಕಳಚಿಕೊಂಡಂತೆ ನಮಗೆ ಭಾಸವಾಗುತ್ತಿದೆ.

ಇಂತಹ ಧೀಮಂತ ವ್ಯಕ್ತಿಯನ್ನು ಕಳೆದುಕೊಂಡ ನಮ್ಮ ಸಮಾಜ ನಿಜಕ್ಕೂ ಬಡವಾಗಿದೆ. ಪರಮಾತ್ಮ ಅವರಿಗೆ ಸದ್ಗತಿಯನ್ನು ನೀಡಲಿ, ಅವರ ಕುಟುಂಬಕ್ಕೆ ಧೈರ್ಯವನ್ನು ದಯಪಾಲಿಸಲಿ. ‌ ಮುಂಬರುವ ಪೀಳಿಗೆಗೆ ಅವರ ಪುಸ್ತಕಗಳು ಧರ್ಮಮಾರ್ಗದಲ್ಲಿ ಕೈಹಿಡಿಯುವ ಸ್ನೇಹಿತರಾಗಲಿ ಎಂದು ಮನಃಪೂರ್ವಕವಾಗಿ ಆಶಿಸುತ್ತೇವೆ.

- ಶ್ರೀಮದುತ್ತರಾದಿ ಮಠ, ವಿಜಯಪುರ

ಸರ್ವಜ್ಞ ವಿಹಾರ ವಿದ್ಯಾಪೀಠ, ವಿಜಯಪುರ

ಹಾಗೂ ಸಮಗ್ರ ವಿಜಯಪುರ ವಿಪ್ರ ವೃಂದ.

******



ಕೊರ್ಲಹಳ್ಳಿ ನರಸಿಂಹಾಚಾರ್ಯರು 

ನಾಡಿನ ಸುಪ್ರಸಿದ್ಧ ಪಂಡಿತರಾದ, ತಮ್ಮ ಅತ್ಯದ್ಭುತ ಪ್ರವಚನ ಶೈಲಿಯಿಂದ ಎಲ್ಲರನ್ನೂ ಆಕರ್ಷಿಸುವ, ಎಲ್ಲರಿಗೂ ಚಿರಪರಿಚಿತರಾದ ಪಂ.ಪೂ. ಕೊರ್ಲಹಳ್ಳಿ ನರಸಿಂಹಾಚಾರ್ಯರು ಭುವಿಯಲ್ಲಿ ಉದಯರಾದ ದಿನ ಅಕ್ಷಯ ತೃತೀಯಾ.
ಅವರು ಹುಟ್ಟಿದ್ದು ಧಾರವಾಡ. ಪೂರ್ವಾಭ್ಯಾಸವನ್ನು ತಮ್ಮ ತಂದೆಯಾದ, ಪ್ರಾತಃಸ್ಮರಣೀಯ ಶ್ರೀ ಶ್ರೀ ಸತ್ಯಧ್ಯಾನತೀರ್ಥರ ಪ್ರಿಯಶಿಷ್ಯರಾದ ಪಂಡಿತವ್ಯಾಘ್ರ ಯುಕ್ತಿಮಲ್ಲಿಕಾಚಾರ್ಯ, ನ್ಯಾಯಾಮೃತಾಚಾರ್ಯ ಎಂಬ ಬಿರುದುಗಳನ್ನು ಪಡೆದ ಶ್ರೀ ಶ್ರೀ ವಿದ್ಯಾಮಾನ್ಯತೀರ್ಥರ ಸಹಪಾಠಿಗಳಾದ ಕೊರ್ಲಹಳ್ಳಿ ಭೀಮಸೇನಾಚಾರ್ಯರಲ್ಲಿ ಮಾಡಿದರು.  ಅವರ ತಾಯಿ ಅಕ್ಕರೆಯ ಅಕ್ಕವ್ವ (ಪದ್ಮಾಬಾಯಿಯವರ) ಮಡಿಲಲ್ಲಿ ಬೆಳೆತಾ ಇರುವಾಗ ಅವರ ತಂದೆ ಕಾಲವಾದರು ಆಗ ಆ ಸಮಯದಲ್ಲಿ ಅವರಿಗೆ ಇನ್ನೇನು ಸುಧಾಪಾಠ ಆರಂಭ ಆಗಬೇಕಿತ್ತು ಅದೇ ಸಮಯದಲ್ಲಿ ಅವರು ಬಿ ಎ ಡಬಲ್ ಪದವೀಧರರಾಗಿದ್ದರು. ಬ್ಯಾಂಕಿನಲ್ಲಿ ಒಳ್ಳೆಯ ಕೆಲಸವೂ ಸಿಕ್ಕಿತು. ಆದರೆ ಮುಂದೆ ಪಾಠ ಹೇಗೆ ಎಂಬ ಚಿಂತೆ ಕಾಡುತ್ತಿದ್ದಾಗ ಆ ಚಿಂತೆಗೆ ಚಿತೆಯನ್ನು ಇಟ್ಟವರು ಪ್ರಾತಃಸ್ಮರಣೀಯ ಶ್ರೀ ಶ್ರೀ ವಿದ್ಯಾಮಾನ್ಯತೀರ್ಥರು. ಅವರ ಬಳಿ ಸುಧಾ ಚಂದ್ರಿಕಾದಿಗಳನ್ನು  ಅಭ್ಯಾಸ ಮಾಡಿ ಅತ್ಯದ್ಭುತ ಪಂಡಿತರಾದರು. ಸುಧಾಗ್ರಂಥಾದಿಗಳನ್ನು ಅಭ್ಯಾಸ ಮಾಡಬೇಕು ಅಂತ ೨ ೩ ವರ್ಷ ಬ್ಯಾಂಕನ್ನೇ ಬಿಟ್ಟು ಹೋಗಿದ್ದರು ಅಷ್ಟು ಆಸಕ್ತಿ ಆ ಗ್ರಂಥಗಳ ಮೇಲೆ ಮುಂದೆ ಇವರು ಧಾರವಾಡದಲ್ಲಿ ಪಾಠಪ್ರವಚನ ಮಾಡ್ತಾ ಪ್ರತಿವಾದಿಗಳ ಜೊತೆ ವಾದ ಮಾಡಿ ಅವರನ್ನು ಸೋಲಿಸಿ ಗುರುಗಳ ವಿಶೇಷ ಅನುಗ್ರಕ್ಕೆ ಪಾತ್ರರಾಗಿದ್ದಾರೆ. ಇವರು ತಮ್ಮ ಗುರುಗಳ (ಶ್ರೀ ವಿದ್ಯಾಮಾನ್ಯತೀರ್ಥರ) ಹಾಗೂ ಅನೇಕ ಪೀಠಾಧಿಪತಿಗಳ ಸನ್ನಿಧಿಯಲ್ಲಿ ಇದು ವರೆಗೂ ೮ ಸುಧಾಮಂಗಳಗಳನ್ನು ಮಾಡಿದ್ದಾರೆ. ಇವರಲ್ಲಿ ಪಾಠ ಕೇಳಿದ ಶಿಷ್ಯರು ಪಂಡಿತರಾಗಿ ಅವರೂ ಪಾಠ ಮಾಡುತ್ತಿದ್ದಾರೆ. ಇವರು ಸುಮಾರು ವರ್ಷಗಳಿಂದ ಅವರ ಗುರುಗಳ ( ಶ್ರೀ ವಿದ್ಯಾಮಾನ್ಯತೀರ್ಥರ) ಅಪೇಕ್ಷೆಯಂತೆ ಉತ್ತರಭಾರತದ ಪ್ರಯಾಗ ಬದರೀ ಮೊದಲಾದವುಗಳಲ್ಲಿ ಧರ್ಮಜಾಗೃತಿಯನ್ನು ಮಾಡ್ತಾಯಿದ್ದಾರೆ. ಧರ್ಮದ ಉಪದೇಶವನ್ನು ಖಡಾಖಂಡಿತವಾಗಿ ಮಾಡುತ್ತಾರೆ. ಕೆಲವು ವರ್ಷಗಳ ಹಿಂದೆ ಹಾರ್ಟ್ ಆಪರೇಶನ್ ಆದಾಗ್ಯೂ ಅವರು ಆಚರಣೆ ಪಾಠಗಳನ್ನು ಬಿಟ್ಟಿಲ್ಲ. ಬೆಳಗ್ಗೆ ೫  ಪಾಠ ಆರಂಭವಾದರೆ ರಾತ್ರಿ ೧೧ - ೩೦ ರ ತನಕ ಸತತ ಪಾಠಗಳು ನಡೆಯುತ್ತಲೇಯಿರುತ್ತವೆ. ಆಜೀವ ಪರ್ಯಂತ ವಿಷ್ಣುಪಂಚಕವೃತವನ್ನು ಹಿಡಿದವರು. ಅನೇಕ ಶಿಷ್ಯರನ್ನು ಸಾಧನಾಮಾರ್ಗದಲ್ಲಿ ತೊಡಗಿಸಿದ ಕೀರ್ತಿ ಇವರಿಗಿದೆ. ಇಂಥವರನ್ನು ನಾವು ತಂದೆಯಾಗಿ ಪಡೆದಿದ್ದು ನಮ್ಮ ಅನಂತ ಜನ್ಮದ ಪುಣ್ಯ. ಇವರ ಅನುಗ್ರಹ ಸದಾಕಾಲವೂ ನಮ್ಮ ಮೇಲಿರಲಿ. ಇವರ ಪಾದಾರವಿಂದಗಳಿಗೆ ಸಾಷ್ಟಾಂಗ ಪ್ರಣಾಮಗಳು. 

ಸುಘೋಷ  ಕೊರ್ಲಹಳ್ಳಿ
**********


*******

'ಸಾರಸ್ವತ ಸಾನ್ನಿಧ್ಯ'ಲೇಖನ ಮಾಲಿಕೆಯ ಎಂಬತ್ತೊಂಭತ್ತನೆಯ ಲೇಖನ- 'ಹರಿದಾಸರತ್ನಂ' ಗೋಪಾಲದಾಸರು

'ಚಿಪ್ಪಗಿರಿಯ ತಪೋಮೂರ್ತಿ' ಶ್ರೀವಿಜಯದಾಸಾರ್ಯರ ವಿಶೇಷವಾದ ಅನುಗ್ರಹಕ್ಕೆ ಪಾತ್ರರಾಗಿ, ತಮ್ಮ ಜೀವಿತವನ್ನು ಹರಿದಾಸಸಾಹಿತ್ಯದ ಪ್ರಸಾರಕ್ಕೆ ತನ್ಮೂಲಕ ಶ್ರೀಮಧ್ವಸಿದ್ಧಾಂತದ ಪ್ರಸರಣಕ್ಕೆ ಮುಡಿಪಾಗಿರಿಸಿದ ಮಹನೀಯರು 'ಹರಿದಾಸ ರತ್ನಂ' ಗೋಪಾಲದಾಸರು. ಬೃಂದಾವನಸ್ಥಗುರುಗಳ ಉಪಾಸನೆಯ ಮೂಲಕ ಅವರಲ್ಲಿ ಅಂತರ್ಯಾಮಿಯಾಗಿರುವ ಚಕ್ರರೂಪೀ ಪರಮಾತ್ಮನ ಪರಮಾನುಗ್ರಹಕ್ಕೆ ಪಾತ್ರರಾಗಬಹುದೆಂದು, ಬೃಂದಾವನಸ್ಥಗುರುಗಳ ಆರಾಧನೆಗೂ ಹೆಚ್ಚಿನ ಪ್ರಾಧಾನ್ಯನೀಡಿ, ಗುರುಗಳ ಅನುಗ್ರಹದಿಂದ ಭಕ್ತಿ ಪ್ರಸರಣದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡ ಶ್ರೀಗೋಪಾಲದಾಸರು ಜನಿಸಿದ್ದು ಕೋಲಾರಜಿಲ್ಲೆಯ ಮಾಲೂರಿನ ಸಮೀಪದಲ್ಲಿರುವ ಮುತ್ತುಗದಹಳ್ಳಿಯಲ್ಲಿ. 1916ರ ಮಾರ್ಗಶೀರ್ಷ ಬಹುಳ ದ್ವಾದಶಿ( 2/1/1916)ರಂದು ಜನಿಸಿದ ಶ್ರೀಗೋಪಾಲಾಚಾರ್ಯರ ತಂದೆ ಶ್ರೀಶ್ರೀಪತ್ಯಾಚಾರ್ಯರು (ಶ್ರೀಪಾದಾಚಾರ್ಯರು),ತಾಯಿ ಶ್ರೀಮತಿ ಗುಂಡಮ್ಮನವರು. ತಮ್ಮ ಏಳನೆಯ ವಯಸ್ಸಿನಲ್ಲಿ ಮಾತೃವಾತ್ಸಲ್ಯದಿಂದ, ಹತ್ತನೆಯ ವಯಸ್ಸಿನಲ್ಲಿ ಪಿತೃವಾತ್ಸಲ್ಯದಿಂದ ವಂಚಿತರಾದ ಶ್ರೀಗೋಪಾಲದಾಸರ ಉಪನಯನವನ್ನು 'ನರಹರಿವಿಠಲ' ಅಂಕಿತದಲ್ಲಿ ಕೃತಿ ರಚನೆ ಮಾಡಿರುವ ಸೋದರಮಾವ ಶ್ರೀಶಿಡ್ಲಘಟ್ಟ ನರಸಿಂಹಮೂರ್ತಾಚಾರ್ಯರು ನೆರವೇರಿಸಿದರು.ನಂತರ ಎಳಂದೂರಿನಲ್ಲಿ ವಾಸವಾಗಿದ್ದ ತಮ್ಮ ಅಣ್ಣ ಶ್ರೀನಿವಾಸಾಚಾರ್ಯರ ಬಳಿಗೆ ತೆರಳಿದ ಶ್ರೀ ಗೋಪಾಲಾಚಾರ್ಯರು ತಮ್ಮ ವಿದ್ಯಾಭ್ಯಾಸವನ್ನು ಘನವಿದ್ವಾಂಸರಾದ ಶ್ರೀಅಂಬ್ಲಿ ಶ್ರೀನಿವಾಸಾಚಾರ್ಯರ ಬಳಿಯಲ್ಲಿ ನಂತರ ಬೆಂಗಳೂರಿನ ಚಾಮರಾಜೇಂದ್ರಸಂಸ್ಕೃತ ವಿದ್ಯಾಲಯದಲ್ಲಿ ನಡೆಸಿದರು. ವ್ಯಾಕರಣ, ನಾಟಕ,ವೇದಾಂತ ಶಾಸ್ತ್ರಗಳೊಂದಿಗೆ ಸಂಗೀತವನ್ನೂ ಕಲಿತ ಶ್ರೀಗೋಪಾಲಾಚಾರ್ಯರು ನಂತರ ಸಂಗೀತವನ್ನು ಅವಲಂಬಿಸಿ ಜೀವನವನ್ನು ನಡೆಸಬಾರದೆಂಬ ಉದ್ದೇಶದಿಂದ ಚಿಪ್ಪಗಿರಿಯ ತಪೋನಿಧಿ, ಹರಿದಾಸಸಾಹಿತ್ಯದ ತವನಿಧಿ ಶ್ರೀವಿಜಯದಾಸಾರ್ಯರ ಸೇವೆಯನ್ನು ಮಾಡುವ ವ್ಯಾಜದಿಂದ ಚಿಪ್ಪಗಿರಿಗೆ ಬಂದರು. ಅಲ್ಲಿ ಅನೇಕ ದಿನಗಳ ಕಾಲ ತಂಗಿದ್ದು, ಸ್ವಪ್ನಸೂಚನೆಯಂತೆ ತಿರುಕೋಯಿಲೂರಿನ ಮಹಾತಪಸ್ವಿ, ವಿಖ್ಯಾತ ಟಿಪ್ಪಣಿಕಾರರನ್ನು ಶಿಷ್ಯ, ಪ್ರಶಿಷ್ಯರನ್ನಾಗಿ ಹೊಂದಿದ ಶ್ರೀರಘೂತ್ತಮ ತೀರ್ಥ ಗುರುಸಾರ್ವಭೌಮರ ಸನ್ನಿಧಾನಕ್ಕೆ ತೆರಳಿದರು. ಶ್ರೀರಘೂತ್ತಮ ತೀರ್ಥರನ್ನು ಸೇವಿಸಿ ನಂತರ, ಸ್ವಪ್ನನಿರ್ದೇಶನದಂತೆ ಮುಳಬಾಗಿಲಿನ ನರಸಿಂಹತೀರ್ಥದ ತಟದಲ್ಲಿ ನೆಲೆನಿಂತ ಶ್ರೀವ್ಯಾಸರಾಜಗುರುಸಾರ್ವಭೌಮರಂತಹ  ವಿದ್ವದ್ವಿಭೂತಿಗೆ ಗುರುವಾಗಿ, ಹರಿದಾಸಸಾಹಿತ್ಯಕ್ಕೆ ನಿರ್ದಿಷ್ಟಸ್ವರೂಪನೀಡಿದ, ಶ್ರೀಪಾದರಾಜಗುರುಸಾರ್ವಭೌಮರ ಸೇವೆಯನ್ನು ಸುಮಾರು 10 ತಿಂಗಳ ಕಾಲ ಮಾಡಿ, ಅಲ್ಲಿ ದೊರೆತ ಸೂಚನೆಯಂತೆ ಮಹಾತಪಸ್ವಿಗಳಾಗಿದ್ದ ಶ್ರೀಪ್ರೇಕ್ಷಾನಿಧಿತೀರ್ಥರಲ್ಲಿ ಶ್ರೀಸರ್ವಜ್ಞಶಾಸ್ತ್ರವನ್ನು ಅಭ್ಯಸಿಸಿದರು. ಗುರುಗಳಾದ ಶ್ರೀ ಪ್ರೇಕ್ಷಾನಿಧಿತೀರ್ಥರ ಆರಾಧನೆಯ ಸಂದರ್ಭದಲ್ಲಿ ಶ್ರೀಜಗನ್ನಾಥದಾಸರನ್ನು ಕುರಿತು ಹರಿಕಥಾಸಂಕೀರ್ತನೆ ಮಾಡುವುದರೊಂದಿಗೆ ಶ್ರೀಗೋಪಾಲಾಚಾರ್ಯರು ಶ್ರೀಗೋಪಾಲದಾಸರಾದರು. ಶ್ರೀತಂಬಿಹಳ್ಳಿ ಶ್ರೀಮಾಧವತೀರ್ಥಮಠಾಧೀಶರಾದ ಶ್ರೀ ವೀರಮಾಧವತೀರ್ಥರು 'ಹರಿದಾಸರತ್ನಂ' ಎಂಬ ಪ್ರಶಸ್ತಿಯೊಂದಿಗೆ ಅನುಗ್ರಹಿಸಿದರು. ಪರಮಪೂಜ್ಯ ಶ್ರೀಪೇಜಾವರ ಶ್ರೀವಿಶ್ವೇಶತೀರ್ಥರ ಪರ್ಯಾಯಕಾಲದಲ್ಲಿ ಅಷ್ಟಮಠಾಧೀಶರ ಸಾನ್ನಿಧ್ಯದಲ್ಲಿ 'ಸತ್ಕೀರ್ತನ ದುರಂಧರ' ಪ್ರಶಸ್ತಿಯನ್ನು, ನಂತರ ಸುವರ್ಣ ಪದಕ, ದಾಸರತ್ನಂ ಎಂಬ ಪ್ರಶಸ್ತಿ, ತಿರುಪತಿಯಲ್ಲಿ ಆಯೋಜಿಸಲಾಗುವ ಶ್ರೀವೇದವ್ಯಾಸೋತ್ಸವದಲ್ಲಿ 'ಹರಿಕಥಾರತ್ನಾಕರ' ಪ್ರಶಸ್ತಿಯ ಗೌರವಕ್ಕೂ ಭಾಜನರಾದ ಶ್ರೀಗೋಪಾಲದಾಸರಿಗೆ ಧಾರವಾಡದಲ್ಲಿ ನಡೆದ ಶ್ರೀಪುರಂದರದಾಸರ ಚತುರ್ಥಶತಮಾನೋತ್ಸವ ಸಮಾರಂಭದಲ್ಲಿ ಅಗ್ರಗೌರವವೂ ದೊರೆಯಿತು.

ಹರಿದಾಸಸಾಹಿತ್ಯಪ್ರಸರಣಕ್ಕೆ ಶ್ರೀಗೋಪಾಲದಾಸರು ಪ್ರಾರಂಭಿಸಿದ 'ಹರಿದಾಸಭಾರತೀ'ಎಂಬ ಮಾಸಪತ್ರಿಕೆಯಲ್ಲಿ ವಿದ್ವದ್ ದಿಗ್ಗಜರಾದ ಶ್ರೀಅಡ್ಡೆ ವೇದವ್ಯಾಸಾಚಾರ್ಯರು, ಶ್ರೀಅಲೆವೂರು ಸೀತಾರಾಮಾಚಾರ್ಯರು,ಪ್ರೊ.ಕೆ.ಟಿ.ಪಾಂಡುರಂಗಿ ಮೊದಲಾದವರ ಲೇಖನಗಳು ಪ್ರಕಟಗೊಂಡಿವೆ. ನಂತರ 'ಹರಿದಾಸಭಾರತೀ ಗ್ರಂಥ ರತ್ನಮಾಲೆ'ಯನ್ನು ಪ್ರಾರಂಭಿಸಿ, ಶ್ರೀವಾದಿರಾಜ ಗುರುಸಾರ್ವಭೌಮರ ಕನ್ನಡ ಕೃತಿಗಳನ್ನು, ಶ್ರೀಜಗನ್ನಾಥದಾಸರ 'ತತ್ತ್ವಸುವ್ವಾಲಿ' ಮೊದಲಾದ ಕೃತಿಗಳನ್ನು ಪ್ರಕಟಿಸಿದ ಕೀರ್ತಿಯೂ ಶ್ರೀಗೋಪಾಲದಾಸರದು. ದಾವಣಗೆರೆಯ ವಿದ್ವಾಂಸರಾದ 'ಮಾಧ್ವಭೂಷಣ' ಭೀಮರಾಯರಿಂದ ಅನೇಕ ಕೃತಿಗಳನ್ನು ಸರಳ ಕನ್ನಡದಲ್ಲಿ ಅನುವಾದ ಮಾಡಿಸಿ, ಪ್ರಕಟಿಸಿದ ಶ್ರೀಗೋಪಾಲದಾಸರು ವಿದ್ವದ್ವರೇಣ್ಯರಾದ ಶ್ರೀಸಾಣೂರು ಭೀಮಭಟ್ಟರಿಂದ 'ತೀರ್ಥಪ್ರಬಂಧ' ವೇ ಮೊದಲಾದ ಕೃತಿಗಳ ಅನುವಾದವನ್ನು, ಚಿಕ್ಕೆರೂರು ಗೋವಿಂದಾಚಾರ್ಯರಿಂದ 'ಪುಣ್ಯಶ್ಲೋಕರು' ಎಂಬ ಗ್ರಂಥರಚನೆಯನ್ನು ಮಾಡಿಸಿ, ಸ್ವತ: ತಾವು ಶ್ರೀವಿಜಯದಾಸಾರ್ಯರ ಜೀವನಚರಿತ್ರೆಯನ್ನು ರಚಿಸಿ ಪ್ರಕಟಿಸಿದರು. ಶ್ರೀಭಾಗಣ್ಣದಾಸರ (ದಾಸಶ್ರೇಷ್ಠರಾದ ಗೋಪಾಲದಾಸರು) ಸಂಕ್ಷಿಪ್ತ ಜೀವನಚರಿತ್ರೆಯನ್ನು ಸಹಾ ರಚಿಸಿದ ಶ್ರೀ 'ಹರಿದಾಸರತ್ನಂ' ಗೋಪಾಲದಾಸರು ಶ್ರೀವಾಯುದೇವರ ಸ್ತೋತ್ರಸುಳಾದಿಗಳನ್ನು ಸಂಪಾದಿಸಿದರು. ಚೆನ್ನಪಟ್ಟಣ, ಭಾಗಣ್ಣದಾಸರ ಕರ್ಮಭೂಮಿ ಸಂಕಾಪುರ, ವೇಣೀಸೋಮಪುರ ಮೊದಲಾದ ಕಡೆಗಳಲ್ಲಿ ದೇವತಾ, ಗುರು ಪ್ರತಿಷ್ಠೆಗಳನ್ನು ಮಾಡಿಸುವುದರೊಂದಿಗೆ ಬೆಂಗಳೂರಿನ ಯಲಹಂಕದಲ್ಲಿ 'ವಿಜಯಮಂದಿರ'ವನ್ನು ಸ್ಥಾಪಿಸಿ ಸಜ್ಜನರಿಗೆ ಸಚ್ಛಾಸ್ತ್ರಗಳನ್ನು ನಿರಂತರವಾಗಿ ಬೋಧಿಸುತ್ತಾ ಶ್ರೀಮನ್ಮಧ್ವಾಚಾರ್ಯರ ಸಿದ್ಧಾಂತದಲ್ಲಿ ಪರಮಾವಧಿ ದೀಕ್ಷೆಗೆ ಇನ್ನೊಂದು ಹೆಸರಾಗಿದ್ದ 'ಹರಿದಾಸರತ್ನಂ' ಶ್ರೀಗೋಪಾಲದಾಸರು 2002ರಲ್ಲಿ ತಮ್ಮ 86ನೆಯ ವಯಸ್ಸಿನಲ್ಲಿ, ಶ್ರೀರಾಘವೇಂದ್ರಗುರುಸಾರ್ವಭೌಮರ ಆರಾಧನೆಯ ಪರ್ವಕಾಲದಲ್ಲಿಯೇ ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸಿದರು. ತಮ್ಮ ಜೀವಿತವನ್ನು ಶ್ರೀಹರಿಯ, ಹರಿದಾಸರ ಸೇವೆಗೆ ಸಮರ್ಪಿಸಿಕೊಂಡಿದ್ದ ಪುಣ್ಯ ಚರಿತರ ಬಗ್ಗೆ  ಬರೆಯುವುದು ಹರಿಯ ಕರುಣದೊಳಾದ ಭಾಗ್ಯ.  (ಶ್ರೀದಾಸರ ಸುಪುತ್ರರೂ,ಶ್ರೀಸಾಣೂರು ಭೀಮಭಟ್ಟರ ಶಿಷ್ಯರೂ ಆದ  ಶ್ರೀವಿಜಯವಿಕ್ರಮದಾಸರನ್ನು ಸಂಪರ್ಕಿಸಿದಾಗ ಅತ್ಯಂತ ಪ್ರೀತಿಯಿಂದ ಶ್ರೀಗೋಪಾಲದಾಸರ ಬಗ್ಗೆ ವಿಷಯವನ್ನು ತಿಳಿಸಿದ್ದಾರೆ. ಇದರೊಂದಿಗೆ ಶ್ರೀಗೋಪಾಲದಾಸರು ಹಾಡಿದ ಅಪೂರ್ವವಾದ 'ಗೋವಿಂದ ನಿನ್ನಾನಂದ' ಹಾಡನ್ನು ಶ್ರವಣಮಾಡಿಸಿದ್ದಾರೆ, ಅವರಿಗೆ ಅನಂತ ಧನ್ಯವಾದಗಳು, ದೇವನಹಳ್ಳಿಯ ಶ್ರೀಗಿರೀಶಾಚಾರ್ಯರ Prahlada Raoq Girish ಮೂಲಕ ಶ್ರೀವಿಜಯ ವಿಕ್ರಮದಾಸರ ಸಂಪರ್ಕಸಾಧ್ಯವಾಯಿತು ಅವರಿಗೆ, ಶ್ರೀಗೋಪಾಲದಾಸರ ಭಾವಚಿತ್ರಕಳುಹಿಸಿದ ಹಿರಿಯರಾದ ಶ್ರೀಶ್ರೀನಿವಾಸರಾಯರಿಗೆ Srinivasa Rao ಹೃತ್ಪೂರ್ವಕ ಧನ್ಯವಾದಗಳು) ಶ್ರೀಕೃಷ್ಣ,ಮಧ್ವರು ಪ್ರೀತರಾಗಲಿ -ವೇಣುಗೋಪಾಲ ಬಿ.ಎನ್.
**********

ಬ್ರಹ್ಮಾತ್ಮ ದಾಸರು.....೧  

ನನ್ನ ಸ್ವರೂಪೋದ್ಧಾರಕ ಗುರುಗಳಾದ , ಬ್ರಹ್ಮಾತ್ಮ ದಾಸರೂ ಆದ, ಪರಮಪೂಜ್ಯ ಮಾಹುಲೀ (ಪಂ. ವಿದ್ಯಾಸಿಂಹಾಚಾರ್ಯರ) ಆಚಾರ್ಯರ ಆರವತ್ತನೇಯ ಸಂಭ್ರಮದ ವಾತಾವರಣ. 

ಜೀವನವೆಂದ ಮೇಲೆ ಸವಾಲುಗಳು ಇರುವವೇ. ಸವಾಲುಗಳು ಎದುರಾದಾಗ ಪಲಾಯನ ಮಾಡುವವರು ಹಲವರು ಆದರೆ, ಸವಾಲುಗಳನ್ನು ಎದುರಿಸುವವರು ಕೆಲವರು ಆದರೆ, ಸವಾಲುಗಳೇ ಸೋಪನಾವಗುವವು ಒಬ್ಬಿಬ್ಬರಿಗೆ ಮಾತ್ರ. ಆ ಒಬ್ಬಿಬ್ಬರಲ್ಲಿ ನಮ್ಮ ಪೂಜ್ಯ ಗುರುಗಳೂ ಒಬ್ಬರು. 

೧೯೬೦ ನೇಯ ಇಸ್ವಿಯಲ್ಲಿ ಜನಿಸಿದ ಆಚಾರ್ಯರಿಗೆ, ೮೪ ನೇ ಈಸ್ವಿಗೆ, ಅಂದರೆ ಸರಿಸುಮಾರು ೨೩ - ೨೪ ನೇಯ ವಯಸ್ಸಿಗೇ ಅತ್ಯಂತ ಪ್ರಾಚೀನವಾದ, ಪ್ರಾಚೀನಪದ್ಧತಿಗಳನ್ನೇ ಒಳಗೊಂಡ ಭವ್ಯ ದಿವ್ಯವಾದ, ೧೫೦ ಕ್ಕೂ ಮಿಗಿಲಾದ ವಿದ್ಯಾರ್ಥಿಗಳಿಂದ ಕೂಡಿದ  ಸತ್ಯಧ್ಯಾನ ವಿದ್ಯಾಪೀಠ ವೆಂಬ ದೊಡ್ಡ ಗುರುಕುಲಕ್ಕೆ ಕುಲಪತಿ ಗಳು ಎಂದಾಗುವದೇ ಒಂದು ದೊಡ್ಡ ಸವಾಲು ಆಗಿತ್ತು. 

ಧರ್ಮವಿಲ್ಲಿ ಕಂಡರೇ ಅದು ಇವರ ಶಕ್ತಿಯೇ 

ಪಾಶ್ಚತ್ಯ ಸಂಪ್ರದಾಯದ ಪ್ರಭಾವ ಬೀರಲು  ಹೆಬ್ಬಾಗಿಲಿನಂತೆ ಇರುವದೇ ಮುಂಬಯಿ.  ಮೋಹಮಯೀ ಪಟ್ಟಣ. ಅತ್ಯಂತ ನಾಸ್ತಿಕ ಪಟ್ಟಣ ಮುಂಬಯಿ.

 ಪರಮೂಪಜ್ಯ ಪರಮಾಚಾರ್ಯರು ದೇಶದ ಆರ್ಥಿಕ / ನಾಸ್ತಿಕ ರಾಜಧಾನಿಯಾದ ಮುಂಬಯಿಯನ್ನು ವಾಣೀ ವಿಹಾರ ವಿದ್ಯಾಲಯ ಹಾಗೂ ಸತ್ಯಧ್ಯಾನ ವಿದ್ಯಾಪೀಠ ಗಳನ್ನು ಸಂಸ್ಥಾಪಿಸಿ, ತತ್ವಜ್ಙಾನವನ್ನು ಪಸರಿಸಿ  ಧರ್ಮದ ಗಿಡವನ್ನು ನೆಟ್ಟಿ  ವಿದ್ಯಾವಿಹಾರ ವನ್ನಾಗಿಸಿದ್ದರು. ಮುಂಬಯಿಯನ್ನೇ ಪರಿವರ್ತಿತವಾಗುವಂತೇ ಮಾಡಿದ,  ವಿದ್ಯಾಪೀಠದ ಕುಲಪತಿಗಳು ಪೂಜ್ಯ ಪರಮಾಚಾರ್ಯರು.  ಆ ಭವ್ಯ ದಿವ್ಯ ವಿದ್ಯಾಪೀಠದ ಕುಲಪತಿಗಳು ಪೂಜ್ಯ ಮಾಹುಲೀ ಆಚಾರ್ಯರು

ಸವಾಲುಗಳು ನೂರು.... ಎಲ್ಲದಕ್ಕೂ ದಾರಿ ಪಾಠಪ್ರಚನ ಮಾತ್ರ

ಪೂಜ್ಯ ಆಚಾರ್ಯರಿಗೆ ೨೪ ವರ್ಷ.  ಏಕ ವಚನದಿಂದ ಕರೆಯುತ್ತಾ ಸಣ್ಣವರನ್ನಾಗಿಸುವ ಪ್ರಯತ್ನ ಸುತ್ತಮುತ್ತಲಿನ ಅನೇಕರದ್ದು. ಬೆಂಬಲಿಸಿ ಪ್ರೋತ್ಸಾಹಿಸುವವರು ಕೆಲವರೇ. 
ಎದುರಿಗಿರುವ ಮಕ್ಕಳು ನೂರೈವತ್ತು ಜನ. ಈ ಎಲ್ಲ ಮಕ್ಕಳಿಗೂ ಮೋಕ್ಷ ಮಾರ್ಗ ತೋರಿಸುವ ಗುರಿ. ಅವರೆಲ್ಕರ ಜೀವನದ ಜವಾಬ್ದಾರಿ. ಪ್ರತಿಯೊಂದೂ ಸಮಸ್ಯೆಯೇ. ಪ್ರತಿ ಸಮಸ್ಯೆಯನ್ನೂ ಸವಾಲನ್ನಾಗಿಯೇ  ಸ್ವೀಕರಿಸಿದರು.

ದಿನಬೆಳಗಾದರೆ ಪ್ರತಿನಿತ್ಯ ೫೦ ಕೇಜಿ ಅಕ್ಕಿ ಬೇಕು. ೨೦ ಕೇಜಿ ತೊಗರೀ ಬೇಳಿ. ಇಪ್ಪತ್ತು ಕೇಜಿ ಪಲ್ಯಾಕಿಗಳು. ಇಪ್ಪತ್ತು ಕೇಜಿ ಉಪಹಾರಕ್ಕೆ ರವೆ. ಇಪ್ಪತ್ತೈದು ಲೀಟರ್ ಹಾಲು ಬೇಕು. ವಿದ್ಯಾರ್ಥಿಗಳ ಅರೋಗ್ಯ ಪೋಷಣ. ವಸ್ತ್ರ ಧನ ಮೊದಲಾದ ವ್ಯವಸ್ಥೆ  ಆಚಾರ್ಯರದ್ದೇ. ಯಾವುದಕ್ಕೂ ಕಡಿಮೆ ಆಗುವ ಹಾಗಿಲ್ಲ. ಇದೆಲ್ಲದರ ಮೇಲೆ ದಾರಿದ್ರ್ಯ. 

ವಿದ್ಯಾರ್ಥಿಗಳು ನಿಶ್ಚಿಂತವಾಗಿ ಅಧ್ಯಯನ ಮಾಡಲಿ ಎಂಬ ಉದ್ಯೇಶ್ಯದಿಂದ ಅನೇಕ ವಿದ್ಯಾರ್ಥಿಗಳ ಪಾಲಕರಿಗೆ ಹಣ ಕಳಿಸುವದೂ ಆಚಾರ್ಯರ ಕೆಲಸ. ಪ್ರತಿತಿಂಗಳು ಕಳೆದರೆ ಲಕ್ಷರೂಪಾಯಿ ಖರ್ಚು ತಪ್ಪದೆ ಎದುರಿಗೇ ಬರುವದೇ..... ಅಂತಹ ಪ್ರಸಂಗದಲ್ಲಿ ಸಮಸ್ಯೆಗಳ ಸುಳಿಯಲ್ಲಿ ಪೂಜ್ಯ ಆಚಾರ್ಯರು. ಎಂಥ ಘೋರ ಪ್ರಸಂಗ ಎದುರಾದರೂ  ಪಾಠಪ್ರವಚನ ತಪ್ಪುವದು ಸರ್ವಥಾ ಇಲ್ಕ.

ಒಂದು ದಿನ ತಿಂಗಳು ಬೇಕಾಗುವ ಕಿರಾಣಿ ಸಾಮಾನುಗಳನ್ಬು  ಕೊಡುವ ವ್ಯಕ್ತಿ ಹಣಕ್ಕಾಗಿ ಬಂದ. ಕೈಯಲ್ಲಿ ದುಡ್ಡಿಲ್ಲ. ಅವನು ಬರುವದನ್ನು ದೂರದಿಂದ ಗಮನಿಸಿದ ಆಚಾರ್ಯರು ಪಕ್ಕದ ರೂಮಿಗೆ ಹೋಗಿ ಬಚ್ಚಿಟ್ಟುಕೊಂಡು, "ಆಚಾರ್ಯರು ಇಲ್ಲ, ಮತ್ತೆ ಮುಂಸಿನ ವಾರ ಬಾ, ಆಚಾರ್ಯರು ದುಡ್ಡು ಕೊಡುತ್ತಾರೆ" ಎಂದು ಹೇಳಿ ಕಳುಹಿಸಿದರು. 

ಆ ಕ್ಷಣದಲ್ಲಿಯೇ ಒಬ್ಬ ಗ್ರಹಸ್ಥ "ಮೂರು ಜನ ಮಕ್ಕಳನ್ನು ಕರೆತಂದು ಆಚಾರ್ಯರ ಪಾದಕ್ಕೆ ಹಾಕಿ, ಇವರನ್ನು ಸ್ವೀಕರಿಸಿ, ಇವರ ಜೀವನವನ್ನು ಉದ್ಧರಿಸಬೇಕು, ಇಂದಿನಿಂದ ಇವರು ನಿಮ್ಮ ಜೋಳಿಗೆಗೆ" ಎಂದು ನಿವೇದಿಸಿ ಕೈ ಮುಗಿದು ನಿಂತ. 

ಕೈಲ್ಲಿ ದುಡ್ಡಿಲ್ಲ. ದುಡ್ಡಿವ ಬಂದಾಗ ಮುಚ್ಚಿಟ್ಟುಕೊಳ್ಳುವ ಸ್ಥಿತಿ. ಈಗಾಗಲೇ ನೂರೈವತ್ತು ಜನ ವಿದ್ಯಾರ್ಥಿಗಳು. ಇಂತಹ ಸ್ಥಿತಿ ಎದುರಾದಾಗ ಸಾಮಾನ್ಯ ವ್ಯಕ್ತಿ ಏನು ಮಾಡಬಹುದು.. ?? ಯೋಚಿಸುವ ವಿಷಯವೇ... 

ಆದರೆ ಪೂಜ್ಯ ಆಚಾರ್ಯರು ಮಾತ್ರ ಆ ಮೂರೂ ವಿದ್ಯಾರ್ಥಿಗಳನ್ನೂ ಬಿಗದಪ್ಪಿಕೊಂಡು, ಏನೂ ಕಾಳಜೀ ಬೇಡ, ಇವರು ಉತ್ಕೃಷ್ಟ ಸಾಧಕರು ಆಗ್ತಾರೆ, ಉತ್ತಮ ವಿದ್ವಾಂಸರೂ ಆಗ್ತಾರೆ, ಏನೂ ಚಿಂತಿ ಬೇಡ, ಇಂದುನಿಂದ ಇವರು ನನ್ನ ಮಕ್ಕಳೇ (ಆಮೂವರಲ್ಲಿ ನಾನೂ ಒಬ್ಬವನಾಗಿದ್ದೆ) ಎಂದು ಹೇಳಿ ಬಿಗಿದಪ್ಪಿಕೊಂಡು ಅವರನ್ನೂ ಸ್ವೀಕರಿಸುತ್ತಾರೆ. ಕೇವಲ ಒಂದು ಪ್ರಸಂಗ ಮಾತ್ರ. ಇಂತಹ ನೂರಾರು ಪ್ರಸಂಗಗಳಲ್ಲಿ ಸಮಸ್ಯೆಗಳು ಎದುರಾದಗಲೆಲ್ಲ, ಪಲಾಯನ ಮಾಡದೇ ಸವಾಲಾಗಿ ಸ್ವೀಕರಿಸಿ ಜಗತ್ತಿಗೆ ದೊಡ್ಡ  ಆದರ್ಶವನ್ನು ತಿಳಿಸಿಕೊಟ್ಟವರು ಪೂಜ್ಯ ಆಚಾರ್ಯರು. 

ಈ ಧೈರ್ಯ ಹೇಗೆ ಬಂತು...?? ಎಂದು ಕೇಳಿದರೆ

ಜಗವ ರಕ್ಷಿಸುವ ಹೊಣೆ ಜಗದೀಶ ತಾ ಹೊತ್ತವನು. ಅವನು ಬ್ರಹ್ಮ ಗುಣಪೂರ್ಣನು. ಅವನು  ನನ್ನ ಆತ್ಮಾ  ನನ್ನ ಸ್ವಾಮಿ. ನಾನು ಗೂಣಪೂರ್ಣ ಸ್ವಾಮಿಯ ದಾಸ. ಅವನಾಜ್ಙೆ ಪಾಲನೆಯೇ ನನ್ನ ಕಸುಬು. ಮುಂದಿನದು ಅವನದು ಎಂದು ಉತ್ತರಿಸಿದರು ಪೂಜ್ಯ ಆಚಾರ್ಯರು...

✍🏽✍🏽ನ್ಯಾಸ...
ಗೋಪಟಲ ದಾಸ.

ವಿಜಯಾಶ್ರಮ ಸಿರವಾರ.ಬ್ರಹ್ಮಾತ್ಮ ದಾಸರು....೨

ಭಕ್ತೈವ ತುಷ್ಯತಿ ಹರಿಃ.....

ಶ್ರಿಹರಿಯಲ್ಲಿಯ ಪ್ರಣತೆಯ ಮುಖಾಂತರ ಭಕ್ತಿಯ ಅಭಿವ್ಯಕ್ತಿ ಇಂದಲೇ ಶ್ರೀಹರಿಯ ಸಂತೃಪ್ತಿ. ಜಗದಲ್ಲಿ ಏನೆಲ್ಲ ಸಂಪಾದಿಸ ಬಹುದು ಆದರೆ ದೇವರಲ್ಲಿ ಭಕ್ತಿ ಹಾಗೂ ವಿಶ್ವಾಸ ಗಳನ್ನು ಸಂಪಾದಿಸಿಕೊಳ್ಳುವದು, ಉಳಿಸಿಕೊಳ್ಳುವದು, ತಮ್ಮವರಲ್ಲಿ ಬಿತ್ತುವದು ತುಂಬ ಕಠಿಣ. 

ಕೈ ಮುಗಿಯುವದು ಭಕ್ತಿಯಲ್ಲ.  ಜ್ಙಾನಪೂರ್ವಕ ಬೆಳೆಯುವ ಅತ್ಯಂತ ಸುದೃಢವಾದ ಸ್ನೇಹವೇ ಭಕ್ತಿ. ದೇವರು ಎದರು ಬಂದಾಗ ಕೈ ಮುಗಿಯುವದು ತಾತ್ಕಾಲಿಕವಾದರೆ, ದೇವರಿಲ್ಲದಿರುವಾಗಲೂ ಮನಸ್ಸು ದೇವರಲ್ಲೇ ರತವಾಗಿರುವದು "ದೃಢ ಭಕ್ತಿ" ಎಂದೆನಿಸಿಕೊಳ್ಳುತ್ತದೆ. ಪೂಜೆಗೆ ಕುಳಿತಾಗ ಮಾಡುವ ಭಕ್ತಿ ಊಟಕ್ಕೆ ಕುಳಿತಾಗಲೂ ಇದ್ದರೆ ದೃಢಭಕ್ತಿ ಎಂದೆನಿಸಿಕೊಳ್ಳುತ್ತದೆ. ಹಾಗೆಯೇ "ವಿಶ್ವಾಸ" ವೂ ಸಹ. 

ಕಷ್ಟ ಬಂದಾಗಿನ ವಿಶ್ವಾಸ ಭರವಸೆಗಳು ಸುಖದ ಸುಪ್ಪರಿಗೆಯಲ್ಲಿ ಇದ್ದಾಗಲೂ ವಿಶ್ವಾಸ ಭರವಸೆ ಕೃತಜ್ಙತೆಗಳು ಇವೆ ಎಂದಾದರೆ ಆ ವಿಶ್ವಾಸ ಭರರವಸೆಗಳು ದೃಢವಾಗಿ ತಳವೂರಿವೆ ಎಂದೇ ಅರ್ಥ. 

ಪೂಜ್ಯ. ಮಾಹುಲೀ ಆಚಾರ್ಯರು

ಭಕ್ತಿ ಸ್ವಾಭಾವಿಕ. ಜ್ಙಾನ ಬೆಳೆದ ಹಾಗೆ ಭಕ್ತಿಯ ಅಭಿವ್ಯಕ್ತಿ ಆಗುತ್ತದೆ.  ಜ್ಙಾನದ ಗಣಿ ಪೂಜ್ಯ ಆಚಾರ್ಯರು. ಪೂಜ್ಯ ಆಚಾರ್ಯರರಲ್ಲಿ ಭಕ್ತಿಗೆ ತುಂಬಾ ಸ್ಥಳಾವಕಾಶ ಇದೆ. "ಸ್ವಾತ್ಮಾತ್ಮೀಯ ಸಮಸ್ತವಸ್ತುಗಳಲ್ಲಿ ಮಾಡುವ ಸ್ನೇಹಕ್ಕಿಂತಲೂ ಅಧಿಕ ಸ್ನೇಹ ದೇವರಲ್ಲಿ" ಎಂದಾದರೆ ಅದು ನೈಜ ಭಕ್ತಿ ಎಂದು ಶಾಸ್ತ್ರ. ಪೂಜ್ಯ ಆಚಾರ್ಯರ ದಿನದ ಇಪ್ಪತ್ತುನಾಲ್ಕು ಗಂಟೆಗಳಲ್ಲಿ ಎಂಟು ಗಂಟೆ ಪಾಠಕ್ಕೆ. ಎಂಟುಗಂಟೆ ಶಾಸ್ತ್ರಾವಮರ್ಷೆಗೆ. ಮೂರು ಗಂಟೆ ಪೂಜೆ ಜಪಗಳಿಕೆ ಮೀಸಲು ಎಂದಾದರೆ ತಮಗಿಂತಲೂ ಅತೀ ಹೆಚ್ಚಿನ ಮಟ್ಟದಲ್ಲಿ ದೇವರು ಶಾಸ್ತ್ರವನ್ನು ಪ್ರೀತಿಸುತ್ತಾರೆ ಎಂದೇ ಆಗುತ್ತದೆ. ಈ ಪ್ರೀತಿ ಸುಮಾರು ಐವತ್ತು ವರ್ಷಗಳಿಂದ ಬೆಳೀತಾನೇ ಇದೆ.   ಇದು ಭಕ್ತಿ ಒಂದು ಭವ್ಯ ಸೂಚಕ ಎಂದೇ ತಿಳಿಯಬಹುದು. 

ಒಂದು ಸಣ್ಣ ನಿದರ್ಶನ... ಕಳೆದ ತಿಂಗಳು ಪರ್ಯಾಯ ಪೀಠಾಧಿಪತಿಗಳ ಅಪೇಕ್ಷೆಯಂತೆ ಉಡುಪಿಯ ಶ್ರೀಕೃಷ್ಣನ ಸನ್ನಿಧಿಯಲ್ಲಿ ವಾಯು ಮಹಿಮಾ ಉಪನ್ಯಾಸ ಇತ್ತು. ಈ ಸಮಯವನ್ನು ಪೂರ್ಣ ಸದುಪಯೋಗ ತೆಗೆದುಕೊಳ್ಳಲು ಬಯಸಿದ ಪೂಜ್ಯ ಆಚಾರ್ಯರು ಗೀತಾಭಾಷ್ಯ ಪಾಠ ಎಂಟು ದಿನಗಳಕಾಲ ಎಂಟುಗಂಟೆಗಳಂತೆ ಹೇಳಿದರು. ಕೆಲ ದಿನ ಹತ್ತುಗಂಟೆಯೂ ಸಾಕಾಗಲಿಲ್ಲ. 

ಕೆಲ ದಿನಗಳನಂತರ ನನಗೆ ಒಬ್ಬ ಉತ್ತಮ ಪ್ರೊಫೇಸರ್  ಒಬ್ಬರು ಸಿಕ್ಕರು, ಮಾತಾಡ್ತಾ ಉಡುಪಿಯ ಈ ವಿಷಯ ತಿಳಿಸಿದೆ. ಅವರು ಹೀಗೆ ಉದ್ಗಾರ ತೆಗೆದರು... "ಗೋಪಾಲಾಚಾರ್ !! ನಾವು ವರ್ಷಕ್ಕೆ ಸರಿಯಾಗಿ ನೂರು ಗಂಟೆ ಪಾಠ ಮಾಡ್ತೇವೆ, ಹನ್ನೆರಡು ಲಕ್ಷ ಸಂಪಾದನೆ ನಮ್ಮದಿದೆ. ಆದರೆ ನಿಮ್ಮ‌ ಆಚಾರ್ಯರು ಕೇವಲ ಎಂಟು ದಿನದಲ್ಲಿ ಎಂಭತ್ತು ಗಂಟೆ ಪಾಠ ಮಾಡಿದ್ದಾರೆ - ಅದೂ ಕೇವಲ ಕೃಷ್ಣ ಪ್ರೀತಿಗೋಸ್ಕರ ಎಂದರೆ ನಿಜವಾಗಿಯೂ  ಆಶ್ಚರ್ವಾಗುತ್ತದೆ" ಹೀಗೆ ಉದ್ಗಾರ ತಗೆದರು. ಈ ತರಹದ ಜ್ಙಾನಸತ್ರ ವಿದ್ಯಾರ್ಥಿಗಳಿಗೆ ಪಂಡತರಿಗೋಸ್ಕರ ಪ್ರತೀವರ್ಷ ಕನಿಷ್ಠ ಎರಡುಬಾರಿಯಾದರೂ ಪೂಜ್ಯ ಆಚಾರ್ಯರು ಮಾಡುತ್ತಾರೆ. ಅದರ ಉದ್ಯೇಶ್ಯ ಸ್ಪಷ್ಟ ಕೇವಲ ವಿಷ್ಣುಪ್ರೀತಿ. ವಿದ್ಯಾರ್ಥಿಗಳಿಗೆ ವಿದ್ವಾಂಸರಿಗೆ ಜ್ಙಾನಾಭಿವೃದ್ಧಿಯಾಗಲಿ ಎಂಬ ಕಳಕಳಿ ಮಾತ್ರ.  ಉಳಿದ ಯಾವ ಅಂಶಕ್ಕೂ ಅಲ್ಲಿ ಆಸ್ಪದ ಇರುವದಿಲ್ಲ. 
ಇದರಿಂದ ನಮಗೆ ಅನಿಸುತ್ತದೆ ಪೂಜ್ಯ ಆಚಾರ್ಯರಲ್ಲಿ ಶಾಸ್ತ್ರ ಪಾಠ ಪ್ರವಚನಗಳಲ್ಲಿಯ ಪ್ರೇಮ,  ಶ್ರೀಕೃಷ್ಣನಲ್ಕಿಯ ಭಕ್ತಿ, ಇದುವೇ ಸಾಧನೆ ಎಂಬ ದೃಢ ವಿಶ್ವಾಸ ಯಾವ ಮಟ್ಟದಲ್ಲಿ ಇರಬಹುದು ಎಂದು.

 ಪ್ರತೀ ಕಾರ್ಯದಲ್ಲಿಯೂ ಭಕ್ತಿ ಹಾಸುಹೊಕ್ಕಿದೆ ಪೂಜ್ಯ ಆಚಾರ್ಯರಲ್ಲಿ. 

ಪೂಜ್ಯ ಆಚಾರ್ಯರು ಯಾವಾಗಲೂ ಹೇಳುವ ಒಂದು ಮಾತು ಭಕ್ತಿಯಿಲ್ಲದ ಯಾವ ಕಾರ್ಯವೂ ವಿಷ್ಣು ಪ್ರಿಯವಾಗಲಾರದು ಎಂದು. ನಾವು ಮಾಡುವ (ಪಾಠ, ಊಟ, ನಿದ್ರೆ, ಜಪ, ಪೂಜೆ,  ಉಪನ್ಯಾಸ, ಭಜನೆ, ಹರಟೆ, ಸಮಾಜ ಸೇವೆ, ಲೌಕಿಕಕಾರ್ಯ, ಭವ್ಯ ಭವನ ಕಟ್ಟುವದು, ಜ್ಙಾನಸತ್ರ ಹೀಗೆ ) ಯಾವ ಕಾರ್ಯವೂ ವಿಷ್ಣು ಪ್ರಿಯವೇ ಆಗಬೇಕು ಎಂಬ ಭಾವ ಇದ್ದರೆ ಆ ಎಲ್ಲ ಕಾರ್ಯಗಳಲ್ಲಿಯೂ ಭಕ್ತಿ ಬೆರೆತಿರಲೇಬೇಕು. ನಮ್ಮ ಸ್ವಾಮಿ ಭಕ್ತೈವ ತುಷ್ಯತಿ ಎಂದು ಸದಾ ಹೇಳಬೇಕು.

ಯಾವುದೇ ಕೆಲಸ ಮಾಡುವಾಗಲೂ  ಒಂದು ಹತ್ತು ಸೆಕೆಂದು ದೇವರನ್ನು ಧೇನಿಸುವ ಪರಿಪಾಕ  ರೂಡಿಸಿಕೊಳ್ಳಬೇಕು ಎಂಬುವದು ಪೂಜ್ಯ ಆಚಾರ್ಯರ ಆಶಯವಾಗಿದೆ. ಅದನ್ನು ರೂಢಿಸಿಕೊಳ್ಳುವದು ನಮ್ಮದಾಗಬೇಕು.

ಆ ತರಹದ ಭಕ್ತಿಯ ತುಣುಕು ನಮಗೂ ಅನುಗ್ರಹಿಸಲಿ, ನಮ್ಮ ಪ್ರತೀ ಕಾರ್ಯಗಳಲ್ಲಿಯೂ ಭಕ್ತಿ ಬೆರೆಯುವಂತೆ ನನ್ನ ಗುರುಗಳಾದ ಪೂಜ್ಯ ಆಚಾರ್ಯರು ಎನಗೆ ಅನುಗ್ರಹಿಸಲಿ.....

✍🏽✍🏽ನ್ಯಾಸ..
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ

[5:08 PM, 11/24/2019] +91 95358 37843: ಬ್ರಹ್ಮಾತ್ಮ ದಾಸರು.....೩


ಜ್ಙಾನೋಪದೇಷ್ಟ್ರೇ ನಮಃ


ಜ್ಙಾನವೆಂಬುವದು ಮಹತ್ವದ ಅಂಶ. ಜ್ಙಾನವಿರುವಲ್ಲಿಯೇ ಮಹತ್ವ ಸಿಗುವದು. ಜ್ಙಾನವಿರುವಲ್ಲಿಯೇ ಭವಿಷ್ಯ ನಿರ್ಮಾಣವಾಗುವದು. ಜ್ಙಾನವಿರುವಲ್ಲಿಯೇ ದೇವ ತಾ ಒಲಿವ.  ಅಂತೆಯೇ ಜ್ಙಾನ ಸರ್ವಶ್ರೇಷ್ಠ ಹಾಗೂ ಅನಿವಾರ್ಯ.


ಜ್ಙಾನದ ಪ್ರತಿ ತುಣುಕೂ ನಮ್ಮ ಭವಿಷ್ಯವನ್ನು ನಿರ್ಮಿಸುತ್ತದೆ, ನಿರ್ಮಿಸುವಂತಾಗುತ್ತದೆ.

"ನಮ್ಮ ಭವಿಷ್ಯ ಭೂತ ಹಾಗೂ ವರ್ತಮಾನಗಳಿಗೆ ಸಮವಲ್ಲ, ತುಂಬ ಉತ್ತಮ" ಅದನ್ನು ನಿರ್ಮಾಣ ಮಾಡುವದೇ ಜ್ಙಾನ.


ಭೂತವನ್ನು ನೆನಿಸಿ ಕಣ್ಣೀರು ಹಾಕುವವರು ಕೆಲವರಾದರೆ, ವರ್ತಮಾನವನ್ನೇ ಅವಲಂಬಿಸಿರುವವರು ಮತ್ತೆ ಕೆಲವರು. ಇವರೀರ್ವರ ಬೆಳವಣಿಗೆ ಕುಂಠಿತವೇ ಸರಿ. ಮುಂದೆ ಬರುವ ಅಗಾಧವಾದ ಭವಿಷ್ಯವನ್ನು ನೆನೆದು ಮುನ್ನುಗ್ಗುವವರು ನೈಜ "ಜ್ಙಾನವಂತರು" ಅವರು ಮಹಾನ್ ಆಗುವವರು. ಜ್ಙಾನವಂತರಿಗೇ ಭವಿಷ್ಯ ಕಾಣುವದು. ಅಂತೆಯೇ ನಿಜವಾದ ಜ್ಙಾನಿಗಳು ಅವರು. ಆ ಕಾರಣವೇ ದೂರದೃಷ್ಟಿಗಳು ಎಂದು ಜ್ಙಾನಿಗಳನ್ನು ಕರಿಯುವದು.  "ಭವಿಷ್ಯದ ನಿರ್ಮಾಣವೇ ಜ್ಙಾನದ ಕಾಯಕ" ಇದನ್ನರಿತು ಮುನ್ನುಗ್ಗುವವನೇ ಜ್ಙಾನಿ...


ಪೂಜ್ಯ ಆಚಾರ್ಯರು.....


ಪೂಜ್ಯ ಆಚಾರ್ಯರರಲ್ಲಿ ಜ್ಙಾನ ದಾಹ ನಿಂತಿಲ್ಲ. ನಿಲ್ಲುವದೂ ಇಲ್ಲ. ಅವರ ಜ್ಙಾನ ನಿಲ್ಲದ ಗಂಗೆ. ಅವರ ಜ್ಙಾನದ ಹರಿವಿನಲ್ಲಿ ಶಿಷ್ಯರಾದ ನಮ್ಮೆಲ್ಕರಿಗೂ ಜ್ಙಾನ ಹರಿಯುವಂತೆ ಪ್ರೇರಿಸಿ,  ಜ್ಙಾನ ದಯಪಾಲಿಸಿ, ತಮ್ಮಂತೆಯೇ ಮುಂದೆ ಹೊಗುವಂತೆ ಮಾಡುತ್ತಾರೆ. ಮುಂದೆ ಎನ್ನುವದೇ ಭವಿಷ್ಯ. 


ವರ್ತಮಾನದಲ್ಲಿಯೇ ಇರುವದು ಸಲ್ಲ. ಭವಿಷ್ಯವನ್ನು ಹುಡುಕು. ಭಿಷ್ಯತ್ಕಾಲದ ಪೂರ್ಣ ಫಲ ಮುಕ್ತಿ. ಭವಿಷ್ಯದಲ್ಲಿಯ ಮುಕ್ತಿ  ಇರುವದು ಶಾಸ್ತ್ರಜ್ಙಾನದಲ್ಲಿ. ಅಂತೆಯೇ "ಜ್ಙೆನೇನೈವ ಪರಮ್ ಪದಮ್" ಎಂದಿತು ಶಾಸ್ತ್ರ. "ಜ್ಙಾನವಿಲ್ಲದೇ ಮೋಕ್ಷವಿಲ್ಲ" ಎಂದು ಹೇಳಿದರು ದಾಸರು. 


ಜ್ಙಾನ ಉಣಿಸುವವರು ಜ್ಙಾನನಿಧಿಗಳೇ ಆಗಿರುತ್ತಾರೆ..


ಪೂ ಆಚಾರ್ಯರ ಜ್ಙಾನ ಹಾಗೂ ಜ್ಙಾನದ ಪ್ರಭಾವ ಇಂದಿನ ಜಗತ್ತು ಅನುಭವಿಸುತ್ತಾ ಇದೆ. ಜಗತ್ತಿನ ಮೂಲೆಮೂಲೆಯಲ್ಲಿಯ ಸಿದ್ಧಾಂತಗಳನ್ನು, ಸಂಪ್ರದಾಯಗಳನ್ನು, ಫಿಲಾಸಫಿಗಳನ್ನು, ಆಂಗ್ಲಭಾಷೆಯ ಸಾವಿರ ಸಾವಿರ ಪುಸ್ಕಗಳ ಜ್ಙಾನ ಇವರ ಮಸದತಕದಲ್ಲಿ ಇದೆ. ಅದ್ವೈತ ವಿಶಿಷ್ಟಾದ್ವೈತ ಮೀಮಾಂಸಾ ತರ್ಕ ವ್ಯಾಕರಣ ಬೌದ್ಧ ಜೈನ ಮೊದಲಾದ ಎಲ್ಲ ದಾರ್ಶನಿಕರ ಸಿದ್ಧಾಂತಗಳ ಜ್ಙಾನದ ಆಗರ ನಮ್ಮ ಗುರುಗಳು. ನಮ್ಮ ಸಿದ್ಧಾಂತದ ಸೂತ್ರ,  ಮೂಲ,  ಭಾಷ್ಯ,  ಟೀಕಾ,  ಟಿಪ್ಪಣೀ, ಆ ಟಿಪ್ಪಣಿಗಳು ಅನೇಕ,  ಹಾಡುಗಳು, ಸುಳಾದಿಗಳು ಇವೆಲ್ಲವನ್ನೂ ನೂರಾರು (ಕೆಲವು ನಾಲ್ಕಾರು ಬಾರಿ, ಮತ್ತೆ ಹಲವು ಹತ್ತಾರು ಬಾರಿ, ಇನ್ನೂ ಕೆಲವು ನೂರಾರು ಬಾರಿ) ಓದಿರಬಹುದು.  ಹೀಗೆ  ಸುಮಾರು ಐವತ್ತು ಸಾವಿರ ಪುಸ್ತಕಗಳನ್ನು ಓದಿರಬಹುದು. ಆ ಎಲ್ಲ ಜ್ಙಾನವನ್ನೂ ಕಾಲಕಾಲಕ್ಕೆ ಜಗತ್ತು ಅನುಭವಿಸಿದೆ. ನಾನು ಹೇಳುವದು ಏನೂ ಇಲ್ಲ. 


ನಮ್ಮಲ್ಲಿಯ ಜ್ಙಾನ ವ್ಯವಹಾರಕ್ಕಾಗಿ ಬಳಿಸಿದಾಗ ಆ ಜ್ಙಾನ ವರ್ತಮಾನೋಪಯೋಗಿ ಜ್ಙಾನ. ಡೊನೇಶನ್ ತೆಗೆದುಕೊಂಡು ಕೊಡುವ ಜ್ಙಾನ ಇಂದಿನ ವೈಭವದ ಜೀವನೋಪಯೋಗಕ್ಕೆ ಬೇಕಾದ ಬರಬಹುದೇನೋ. ಆದರೆ ನಿರ್ವ್ಯಾಜವಾಗಿ ಜ್ಙಾನವನ್ನು ಉಣಿಸಿದರೆ ಆ ಜ್ಙಾನ ಭವಿಷ್ಯತ್ ಕಾಲೀನವಾದ, ಅನಂತ ಕಾಲೀನ ಮುಕ್ತಿಯೋಗ್ಯ ಜ್ಙಾನ ಎಂದೆನಿಸಿಕೊಳ್ಳುತ್ತದೆ. ವರ್ತಮಾನಕ್ಕೂ ಹಿತಕಾರಿ ಆಗಿರುತ್ತದೆ. ಭೂತದಲ್ಲಿಯ ಅನಿಷ್ಟಗಳನ್ನೂ ಅಪಹರಿಸುತ್ತದೆ. ಅತೀ ಮುಖ್ಯವಾಗಿ ವಿಷ್ಣು ಪ್ರಿಯವೂ ಆಗಿರುತ್ತದೆ. ಒಬ್ಬ ಶಿಷ್ಯನಿಗೆ ಮಾಡಿದ ಪಾಠ ನಿರಂತರ ಧ್ಯಾನಮಾಡಿದ ಸಾಧನೆಗಿಂತಲೂ ನೂರ್ಪಟ್ಟು ಮಿಗಲಾದ ಸಾಧನೆ ಎಂದು ಸ್ವಯಂ ಶ್ರೀಮದಾಚಾರ್ಯರು ತಿಳುಹಿಸಿಕೊಡುತ್ತಾರೆ. 


ನಮ್ಮ ಪೂಜ್ಯ ಆಚಾರ್ಯರು


ತಮ್ಮ ಅಪಾರ ಜ್ಙಾನದ ಒಂದು ತುಣುಕೂ ವ್ಯವಹಾರಕ್ಕೆ ಬಳಿಸಿಕೊಳ್ಳದೇ, "ನಂಬಿ ಬಂದ ಈ ಶಿಷ್ಯರಿಗೆ ಈ ಶುದ್ಧವಾದ ಜ್ಙಾನ ಸಿಗಲಿ, ಜ್ಙಾನ ಗಂಗೆ ಹರಿಯಲಿ ಎಂಬ ಶುದ್ಧ ಉದ್ಯೇಶ್ಯದೊಂದಿಗೆ ತಮ್ಮ  ಅಪಾರ ಜ್ಙಾನವ ಬಳಿಸಿಕೊಳ್ಳಲು ಬಯಸಿದರು" ಅಂತೆಯೇ ಅನ್ನ ವಸ್ತ್ರ ವಸತಿ ಕೊಟ್ಟು, ಉಚಿತವಾಗಿ ಇಟ್ಟುಕೊಂಡು, ಎಲ್ಲ ವೈಭವಗಳನ್ನೂ ಒದಗಿಸಿಕೊಟ್ಟು ಪರಿಶುದ್ಧ ಜ್ಙಾನವನ್ನು, ಭವಿಷ್ಯವನ್ನು ಊರ್ಜಿತಗೊಳಿಸುವ  ಮುಕ್ತಿಯೋಗ್ಯ ಜ್ಙಾನವನ್ನು ನಂಬಿದ ಶಿಷ್ಯರಿಗೆ ಉಪದೇಶಿಸಿದರು. ಸಾತ್ವಿಕ ಆಸ್ತಿಕ ಸಮಾಜಕ್ಕೆ ಪಸರಿಸಿದರು. ಆ ಶಿಷ್ಯ ವರ್ಗದಲ್ಲಿ ನಾನೂ ಒಬ್ಬನಾಗಿದ್ದೇನೆ ಇದೇ ನನ್ನ ಸೌಭಾಗ್ಯ. ಆ ಗುರುಗಳಿಗೆ ಅನಂತ ನಮನಗಳನ್ನು ಸಲ್ಲಿಸುತ್ತಾ ನಿಮ್ಮ ಶುದ್ಧ  ಜ್ಙಾನದ ಪ್ರತಿಬಿಂಬ ಜ್ಙಾನ ಎನ್ನಲ್ಲಿಯೂ ಅಭಿವ್ಯಕ್ತಗೊಳ್ಳಲಿ ಎಂದು ಪ್ರಾರ್ಥಿಸುವೆ.


✍🏽✍🏽ನ್ಯಾಸ..

ಗೋಪಾಲ ದಾಸ.

ವಿಜಯಾಶ್ರ. ಸಿರವಾರ.
[5:08 PM, 11/24/2019] +91 95358 37843: ಬ್ರಹ್ಮಾತ್ಮ ದಾಸರು.....೪

ವಿದ್ಯಾರ್ಥಿ ವತ್ಸಲಂ ವಂದೇ

ಸತ್ಯಧ್ಯಾನ ವಿದ್ಯಾಪೀಠ ಅತ್ಯಂತ ಪ್ರಾಚೀನ ವಿದ್ಯಾಪೀಠಗಳಲ್ಲೊಂದು. ಮಧ್ವಸಿದ್ಧಾಂತದಲ್ಲಿಯ, ಪ್ರಾಚೀನ ಪದ್ಧತಿಗಳನ್ನೊಳಗೊಂಡ university ಎಂದರೆ ಅದು ಸತ್ಯಧ್ಯಾನವಿದ್ಯಾಪೀಠ. 

ವಿದ್ಯಾಪೀಠ ಎಂದ ಮೇಲೆ ವಿದ್ಯಾರ್ಥಿಗಳು ಬರುವವರೇ. ಜ್ಙಾನಾನ್ನವನ್ನು ಬಯಸುವ ವಿದ್ಯಾರ್ಥಿಗಳ ಹರಿವು ಸದಾ ಇರುವದೇ. 

ನ ಕಂಚನ ವಸತೌ ಪ್ರತ್ಯಾಚಕ್ಷೀತ

ಬಂದ ವಿದ್ಯಾರ್ಥಿಗಳನ್ನು ಪೂ. ಆಚಾರ್ಯರು ಎಂದಿಗೂ ತಿರುಗಿ ಕಳುಹಿಸಲಿಲ್ಲ. ತಮಗೆ ಹಣದ ಕೊರತೆ, ಸ್ಥಳದ ಅಭಾವ, ಅನುಕೂಲತೆಗಳು ಕಡಿಮೆ ಇದ್ದರೂ ಎಂದಿಗೂ ತಿರುಗಿ ಕಳುಹಿಸುವ ಯೋಚನೆ ಮಾಡಲಿಲ್ಲ. "ನ ಕಂಚನ ವಸತೌ ಪ್ರತ್ಯಾಚಕ್ಷೀತ" ಈ ಶೃತಿಸಿದ್ಧಾಂತವನ್ನು ದೃಢವಾಗಿ ನಂಬಿದವರು ನಮ್ಮ ಆಚಾರ್ಯರು. "ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ" ಎಂಬ ಮಾತನ್ನು ನೆಚ್ಚಿದವರು. 

ಯಾವ ವಕ್ತಿಯಲ್ಲಿ ಏನೂ ವಿಕಾಸವಾಗಬಹುದು. ಅವನಲ್ಲಿ ಜ್ಙಾನ ಭಕ್ತಿ ಧರ್ಮ ಗುರುಭಕ್ತಿ ವಿನಯಾದಿಗುಣಗಳು ಇವುಗಳನ್ನು ಬಿತ್ತುವದು ನನ್ನ ಧರ್ಮ. ಮುಂದೆ ಆ ವಿದ್ಯಾರ್ಥಿ ಸಮಾಜಕ್ಕೋ ದೇಶಕ್ಕೋ ಶ್ರೀಮಠಕ್ಕೋ ತನ್ನ ಮನೆಗೋ ಒಂದಿಲ್ಲ ಒಂದು ರೀತಿಯಿಂದ ತನ್ನದೇ ಆದ ಸೇವೆ ಸಲ್ಲಿಸುವವನು ಆಗುತ್ತಾನೆ. ಈ ದೂರದೃಷ್ಟಿಯೂ ಇದೆ. ಈ  ಭರವಸೆ ಪೂಜ್ಯ ಆಚಾರ್ಯರರಲ್ಲಿ ತುಂಬಾ ಇದೆ.  ಅಂತೆಯೇ ಬಂದ ಯಾವ ವಿದ್ಯಾರ್ಥಿಯನ್ನೂ ತಿರುಗಿ ಕಳುಹಿಸಲಿಲ್ಲ. 

ವಿದ್ಯಾದಾನ - ವ್ಯಕ್ಯಿತ್ವ ನಿರ್ಮಾಣ

ವಿದ್ಯಾದಾನ ಮಾಡುವದು ಮಾಡಿಯೇ ಮಾಡುತ್ತಿದ್ದರು ಪೂ ಆಚಾರ್ಯರು. ಜೊತೆಗೆ ಆ ವಿದ್ಯಾರ್ಥಿಯ ವ್ಯಕ್ತಿತ್ವವನ್ನೂ ನಿರ್ಮಿಸಿ ಕಳುಹಿಸುತ್ತಾರೆ. ಆ ಕ್ರಮದಲ್ಲಿಯೇ ವಿದ್ಯಾರ್ಥಿಗಳ ಜೀವನದ ರೂಪರೇಖೇ ಸಿದ್ಧಪಡಿಸಿದ್ದಾರೆ ಪೂಜ್ಯ ಆಚಾರ್ಯರು. 

ವಿದ್ಯಾರ್ಥಿಗಳಲ್ಲಿ ತುಂಬ ವಾತ್ಸಲ್ಯ

ಪೂಜ್ಯ ಆಚಾರ್ಯರ ಅಂತಃಕರಣ ತುಂಬ ಅಪರೂಪ. ಪರಮಾಚಾರ್ಯರ ಪ್ರತಿರೂಪ. ತಂದೆ ತಾಯಿಗಳನ್ನು ಬಿಟ್ಟು ಬಂದ ವಿದ್ಯಾರ್ಥಿ. ಎಲ್ಲವನ್ನೂ ಬಿಟ್ಟು ಬಂದ ವಿದ್ಯಾರ್ಥಿಗೆ ಇಲ್ಲಿ ಎಲ್ಲವನ್ನೂ ಕರುಣಿಸಿದ್ದರು. ಉಣಿಸಿದ್ದರು. ತಣಿಸಿದ್ದರು. 

ಪೂಜ್ಯ ಆಚಾರ್ಯರಿಗೆ ವಿದ್ಯಾರ್ಥಿಗಳು ಎಂದರೆ ಬಹಿಪ್ರಾಣರೇ. ಅಂತೆಯೇ ಹೆಚ್ಚು ಕಾಲ ವಿದ್ಯಾರ್ಥಿಗಳಡನೆಯೆ ಕಳೆಯುತ್ತಾರೆ. 

ವಿದ್ಯಾರ್ಥಿಗಳಿಗೆ ರೋಗ, ಕಷ್ಟ, ದಾರಿದ್ರ್ಯ, ಇದೆ ಎಂದಾದರೆ ಆಚಾರ್ಯರ ಮನಸ್ಸು ಕರಗಿಹೋಗುತ್ತದೆ.  ಬಂದ ರೋಗಕ್ಕೆ ಮನೆಯಲ್ಲಿ ಎಷ್ಟು ಉಪಾಯಗಳು ಇರುತ್ತಿತ್ತೋ ತಿಳಿಯದು, ಅದಕ್ಕೂ ನೂರ್ಮಡಿ ಹೆಚ್ಚು ಉಪಾಯ ಉಪಚಾರಗಳನ್ನು ಇಂದಿಗೂ ಮಾಡುತ್ತಾರೆ. ವಿದ್ಯಾಪೀಠದಿಂದ ಹೊರಬಂದ ವಿದ್ವಾಂಸರಿಗೂ ಈ ಲಾಭವಿದೆ.  

ಮನೆಯ ನೆನಪು ಬಾರದಂತೆ ಸ್ವಾತಂತ್ರ್ಯ

ಬಂದ ವಿದ್ಯಾರ್ಥಿಯನನ್ನು ಕಟ್ಟಿ ಹಾಕಿದರೆ ಮನೆಗೆ ಓಡಿ ಹೋಗುತ್ತಾನೆ, ವಿದ್ಯೆ ಪಡೆಯಲಾರ ಎಂದು ಯೋಚಿಸಿ ಸೂಕ್ತ ಸ್ವಾತಂತ್ರವನ್ನೂ ಕೊಟ್ಟಿದ್ದರು ಆಚಾರ್ಯರು. 

ವಿದ್ಯಾರ್ಥಿಗಳಕಡೆ ಪೂರ್ಣ ಗಮನವೂ ಇರುತ್ತದೆ

ವಿದ್ಯಾರ್ಥಿಗೆ ಕೊಟ್ಟ ಪ್ರೀತಿ ಮತ್ತು ಸ್ವಾತಂತ್ರ್ಯ ಇವುಗಳ ದುರುಪಯೋಗ ಸರ್ವಥಾ ಆಗದ ಹಾಗೆ ಲಕ್ಷ್ಯವನ್ನು ಸ್ವಯಂ ಆಚಾರ್ಯರು ಇಟ್ಟಿದ್ದರು. ದುರುಪಯೋಗ ಪಡಿಸಿಕೊಂಡಾಗ ಶಿಕ್ಷೆಯನ್ನೂ ಕೊಡುತ್ತಿದ್ದರು. ಅಪರಾಧಗಳನ್ನು ಮನ್ನಿಸಿದಾಗ  ಸಜ್ಜನಿಕೆ, ಸಾಧು ಸ್ವಭಾವ, ವಿನಯಾದಿಗುಣವಂತಿಕೆ " ಇತ್ಯಾದಿಗಳಿಂದ ವಿದ್ಯಾರ್ಥಿ ದೂರಾಗಬಾರದು" ಎಂಬ ಕಳಕಳಿಯೂ ಇತ್ತು.  ಸ್ವಯಂ ನಾನೇ ಅನುಭವಸ್ಥ. 

ಇದೆಲ್ಲವನ್ನೂ ಇಂದಿಗೂ ಅನುಭವಿಸುತ್ತೇವೆ...

ವಿದ್ಯಾಪೀಠ ಬಿಟ್ಟು ಕೆಲವರು ಇಪ್ಪತ್ತು ವರ್ಷವಾಯಿತು, ಹಲವರು ಹತ್ತು ವರ್ಷವಾಯಿತು, ಕೆಲವರದ್ದು ಐದಾರು ವರ್ಷಗಳೂ ಕಳೆಯಿತು ಆದರೆ ಆಚಾರ್ಯರು ಮಾತ್ರ ಇವರೆಲ್ಲರೂ ಇನ್ನೂ ವಿದ್ಯಾರ್ಥಿಗಳೇ ಎಂದೇ ಯೋಚಿಸಿ ಪಾಠ ಏನೇನು ಆಗ್ತಾ ಇದೆ...  ಅಧ್ಯಯನ ಎಲ್ಲಿಗೆ ಬಂತು... ಆರೋಗ್ಯ ಹೇಗಿದೆ... ಇವುಗಳಿಗೆ  ಉಪಚಾರ ಉಪಾಯಗಳೇನೇನು.... ಸಮಾಜದ ಸೇವೆ ಹೇಗೆ ನಡೀತಾ ಇದೆ.... ಕುಟುಂಬದ ಸ್ಥಿತಿಗತಿ ಏನು...  ಈತರಹದ ನೂರಾರು  ವಿಚಾರಗಳನ್ನು ಮಾಡುತ್ತಾ, ಸೂಕ್ತ ಉಪಾಯಗಳನ್ನೂ ತೋರುತ್ತಾ, ನಿತ್ಯ ದೇವರಲ್ಲಿ ಗುರುಗಳಲ್ಲಿ ಪ್ರಾರ್ಥಿಸುತ್ತಾರೆ ನಾವೆಲ್ಲರೂ ಇಂದಿಗೂ ಅನುಭವಿಸುತ್ತೇವೆ.  
  
 ಇಂತಹ ಅಪಾರವಾದ ವಿದ್ಯಾರ್ಥಿ ವಾತ್ಸಲ್ಯ ತೋರುವ "ನಮ್ಮ ಗುರು"ಗಳಿಗೆ ಅನಂತ ವಂದನೆಗಳನ್ನು ಸಲ್ಲಿಸುವೆ.....

✍🏽✍🏽ನ್ಯಾಸ....
ಗೋಪಾಲದಾಸ

ವಿಜಯಾಶ್ರಮ, ಸಿರವಾರ
******
***




Haveri Gundacharyaru with son Nagaraju Haveri


Haveri Gundacharyaru

Haripada on 18 April 2014 ಚೈತ್ರ ಬಹುಳ ತೃತೀಯಾ ಉಪರಿ ಚತುರ್ಥಿ - ಚೌತಿ
" ನಮ್ಮ ತಂದೆಯವರ ಪುಣ್ಯ ಸ್ಮರಣೆ "
" ಈದಿನ - > ದಿನಾಂಕ : 30.04.2021 ಶುಕ್ರವಾರ - ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರ ಬಹುಳ ಚತುರ್ಥಿ [ ಚೌತಿ ] " 
" ಶ್ರೀ ವ್ಯಾಸತತ್ತ್ವಜ್ಞ ತೀರ್ಥರ [ ವೇಣೀಸೋಮಪುರ ] ಹಾಗೂ ಶ್ರೀ ಸುಜ್ಞಾನೇಂದ್ರ ತೀರ್ಥರ [ ನಂಜನಗೂಡು ] ಪೂರ್ವಾಶ್ರಮ ಸದ್ವಂಶ ಸಂಜಾತರೂ - ಶ್ರೀ ರಾಯರ ಮತ್ತು ಶ್ರೀ ವಿಜಯರಾಯರ ಅಂತರಂಗ ಭಕ್ತರೂ - ನಮ್ಮ ಪೂಜ್ಯ ತಂದೆಯವರಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ  ಹಾವೇರಿ ಗುಂಡಾಚಾರ್ಯರ ಪುಣ್ಯ ಸ್ಮರಣೆ " 
ಆಚಾರ್ಯ ನಾಗರಾಜು ಹಾವೇರಿ.... 
ರಾಘವೇಂದ್ರ ಪಾದಾಸಕ್ತ೦
ವಿಜಯಾರ್ಯ ಸುಸೇವಕಮ್ ।
ವರ್ತುಲಾರ್ಯ ಮಹಂ ವಂದೇ 
ಸುಬ್ಬಣ್ಣಾರ್ಯ ಸುಪುತ್ರಕಮ್ ।।
" ಪುಣ್ಯಾತ್ಮರಷ್ಟೇ ಸದ್ವಂಶದಲ್ಲಿ ಹುಟ್ಟುವರು "
" ಶ್ರೀ ನಾರದೀಯ ಪುರಾಣ " ದಲ್ಲಿ..... 
ಸರ್ವ ಸಂಗ ನಿವೃತ್ತಾನಾಂ 
ಧ್ಯಾನ ಯೋಗ ರತಾತ್ಮನಾಂ । 
ಸರ್ವತ್ರ ಭಾಟಿ ಜ್ಞಾನಾತ್ಮ 
ತಮಸ್ಮಿ ಶರಣಂ ಗತಃ ।।
ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವ್ಯಾಸತತ್ತ್ವಜ್ಞತೀರ್ಥರು - ಪ್ರಾತಃ ಸ್ಮರಣೀಯ ಪರಮಪೂಜ್ಯ  ಶ್ರೀ ಸುಜ್ಞಾನೇಂದ್ರತೀರ್ಥರೇ ಮೊದಲಾದ ಪ್ರಾತಃ ಸ್ಮರಣೀಯರು ಸರ್ವತ್ರ ಭಗವಂತನನ್ನು ಕಾಣುವ ಮಹಾತ್ಮರುಗಳು. 
ಸರ್ವ ಸಂಗ ಪರಿತ್ಯಾಗ ಮಾಡಿ ಸರ್ವದಾ  ಭಗವತ್ ವಿಷಯಕ ಧ್ಯಾನಾಸಕ್ತರಾದ ಯೋಗಿಗಳಿಗೆ ಮಾತ್ರ ಇದು ಸಾಧ್ಯ. 
ಇಂಥಹಾ ಜಗನ್ಮಾನ್ಯರು ಜಗತ್ತಿನಾದ್ಯಂತ ಜ್ಞಾನ ದೀಪ ಬೆಳಗಿದವರ ಮನೆಯಲ್ಲೇ ಹುಟ್ಟುವುದರ ಸಂಯೋಗ ಸಣ್ಣ ವಿಚಾರವಲ್ಲ!
" ಗರುಡ ಪುರಾಣ " ದಲ್ಲಿ.... 
ಶುಚೀನಾಂ ಶ್ರೀಮತಾಂ ಗೇಹೇ 
ಜಾಯತೇ ಸುಕೃತೀ ಯಥಾ ।
ತಥಾ ವಿಧಾನಂ ನಿಯಮಂ ತ
ತ್ಪಿತೋ: ಕಥಾಮಾಮಿ ತೇ ।।
ಪುರಾಣ ವಚನದಂತೆ...     
ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವ್ಯಾಸತತ್ತ್ವಜ್ಞತೀರ್ಥರು - ಪ್ರಾತಃ ಸ್ಮರಣೀಯ ಪರಮಪೂಜ್ಯ  ಶ್ರೀ ಸುಜ್ಞಾನೇಂದ್ರತೀರ್ಥರೇ ಮೊದಲಾದಯೋಗಿಗಳ ಮನೆಯಲ್ಲಿ ಹುಟ್ಟುವುದು ಬಹು ದೊಡ್ಡ ಭಾಗ್ಯ ವಿಶೇಷ. 
ಹುಟ್ಟುತ್ತಲೇ ಇಂಥಹಾ ಮಹನೀಯರ ಸಂಪರ್ಕ - ಕೀರ್ತಿ ಮತ್ತು ಸಂಯೋಗ ಲಭಿಸುವುದು ಅತಿ ದುರ್ಲಭವೇ ಸರಿ !
ಬಹು ಜನ್ಮದ ಸುಕೃತ ಇದ್ದವರಿಗಷ್ಟೇ ಇಂಥಹಾ ಅರ್ಥಾತ್ " ಪುಣ್ಯ ಕ್ಷೇತ್ರಗಳಿಗೆ ಸದೃಶವಾದ [ ಲೋಕ ಪೂಜ್ಯರಾದ ] ಮಹನೀಯರ ಸದ್ವಂಶದ ಮನೆಯಲ್ಲಿ ಜನಿಸುವ ಸೌಭಾಗ್ಯ " ದೊರೆಯುವುದು. 
ಉತ್ತಮವಾದ ಸದ್ಗುಣ ಸಂಪನ್ನರೂ - ಶ್ರೀ ರಾಯರ ಮತ್ತು ಶ್ರೀ ವಿಜಯರಾಯರ ಅಂತರಂಗ ಭಕ್ತರೂ - ಸಜ್ಜನರೂ ಮತ್ತು ಸ್ನೇಹ ಜೀವಿಗಳೂ [ ಅಜಾತ ಶತ್ರುಗಳು ] - ನನ್ನ ಪರಮಪೂಜ್ಯ ತಂದೆಯವರೂ, ವಿದ್ಯಾ ಗುರುಗಳೂ, ಮಾರ್ಗದರ್ಶಕರೂ ಆದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಹಾವೇರಿ ಗುಂಡಾಚಾರ್ಯರು ತೋರಿದ ಸನ್ಮಾರ್ಗದಲ್ಲಿ - ಅವರ ನೆನಪಿನಲ್ಲಿ ಅವರಂತೆಯೇ ನಾವು [ ಮಕ್ಕಳುಗಳು - ಬಂಧುಗಳು ] ಬದುಕಿ ಕೃತಾರ್ಥರಾಗೋಣ!!
" ಶ್ರೀ ರಾಯರ ಅಂತರಂಗ ಭಕ್ತರು "
ಸದಾಕಾಲ ಶ್ರೀ ರಾಯರ ಧ್ಯಾನದಲ್ಲೇ ನಿರುತರಾಗಿದ್ದರು - ಶ್ರೀ ರಾಯರು ಬಿಟ್ಟರೆ ಅವರಿಗೆ ಬೇರೆ ಜಗತ್ತೇ ಇರಲಿಲ್ಲ. 
ತುಂಗಭದ್ರಾ ನದಿಯಲ್ಲಿ ಸ್ನಾನ - ಜಪ - ತಪ - ದೇವರ ಪೂಜೆ ಮೊದಲಾದ ಸತ್ಕರ್ಮನಿಷ್ಠರಾಗಿ ಪ್ರತಿನಿತ್ಯಾ ಶ್ರೀ ರಾಯರ ಮೂಲ ವೃಂದಾವನದ ಪರಮ ಪವಿತ್ರವಾದ ಸನ್ನಿಧಿಯಲ್ಲಿ ಪ್ರದಕ್ಷಿಣ ನಮಸ್ಕಾರ - ಪಾದೋದಕ ಪ್ರಾಶನ ಮತ್ತು ಶ್ರೀ ರಾಯರ ಹಸ್ತೋದಕ ಸ್ವೀಕಾರದೊಂದಿಗೆ ಸುಮಾರು 75 ವರ್ಷಗಳ ಭಕ್ತಿ ಶ್ರದ್ಧೆಗಳಿಂದ ಸೇವೆ ಮಾಡಿದ ಪೂತಾತ್ಮರು. 
" ಶ್ರೀ ವಿಜಯರಾಯರ ಕಾರುಣ್ಯ ಪಾತ್ರರು "
ಶ್ರೀ ಕ್ಷೇತ್ರ ಮಂತ್ರಾಲಯ ಶ್ರೀ ರಾಯರ ಮಠದಲ್ಲಿರುವ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವ್ಯಾಸತತ್ತ್ವಜ್ಞತೀರ್ಥರ ಪೂರ್ವಾಶ್ರಮ ಸದ್ವಂಶೋದ್ಭವರೂ   - ಪ್ರಾತಃ ಸ್ಮರಣೀಯ ಪರಮಪೂಜ್ಯ  ಶ್ರೀ ಸುಜ್ಞಾನೇಂದ್ರತೀರ್ಥರ ದೌಹಿತ್ರ ಜ್ಯೇಷ್ಠ ಸಂತತಿಯಲಿ ಬಂದ ಪರಮಪೂಜ್ಯ ಶ್ರೀ ಹಾವೇರಿ ಗುಂಡಾಚಾರ್ಯರ [ ನನ್ನ ತಂದೆಯವರು ] ಮೇಲೆ ಶ್ರೀ ರಾಯರು ಹಾಗೂ ಶ್ರೀ ವಿಜಯರಾಯರು ತೋರಿದ ಕಾರುಣ್ಯ ಪರಮಾದ್ಭುತವಾದದ್ದು. 
ಕ್ರಿ ಶ 2007 ರಲ್ಲಿ ಪರಮಪೂಜ್ಯ ನನ್ನ ತಂದೆಯವರು " ಜಾಂಡೀಸ್ " ನಿಂದ ಬಳಲುತ್ತಿದ್ದಾಗ - ಬೆಂಗಳೂರಿನ ಹೆಸರಾಂತ ಆಸ್ಪತ್ರೆಯಾದ " ಮಲ್ಯ ಹಾಸ್ಪಿಟಲ್ " ನಲ್ಲಿ ಅಡ್ಮಿಟ್ ಮಾಡಿದ್ದು - ಅಲ್ಲಿಯ ಹೆಸರಾಂತ ವೈದ್ಯರೆಲ್ಲರೂ ಕೈಚೆಲ್ಲಿ ಮುಂದಿನ ಏರ್ಪಾಟು ಮಾಡಿಕೊಳ್ಳಿ ಎಂದು ಹೇಳಿದಾಗ - ಶ್ರೀ ರಾಯರ ಮಠದ ಪ್ರಾತಃ ಸ್ಮರಣೀಯ ಪರಮಪೂಜ್ಯ ಸುಶಮೀ೦ದ್ರತೀರ್ಥರ ಆಪ್ತ ಕಾರ್ಯದರ್ಶಿಗಳೂ - ನನ್ನ ಆಪ್ತ ಮಿತ್ರರೂ ಆದ ಕೀರ್ತಿಶೇಷ ಶ್ರೀ ರಾಜಾ ಎಸ್ ರಾಜಗೋಪಾಲಾಚಾರ್ಯರು ನನ್ನ ಹತ್ತಿರ ಹೇಳಿದ್ದು ಇಷ್ಟೇ. 
ಆಪತ್ಕಾಲ ಮಿತ್ರರಾದ ಶ್ರೀ ರಾಯರ ಮತ್ತು ಶ್ರೀ ವಿಜಯರಾಯರ ಮೇಲೆ ವಿಶ್ವಾಸವಿಡು - ನಿನ್ನ ತಂದೆಯವರು ಗುಣಮುಖರಾಗಿ ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಬಂದು ಶ್ರೀ ರಾಯರ ಸೇವೆಯನ್ನು ಮುಂದುವರೆಸುತ್ತಾರೆ ಎಂದು ನುಡಿದರು. 
ಕೀರ್ತಿಶೇಷ ಶ್ರೀ ರಾಜಾ ಎಸ್ ರಾಜಗೋಪಾಲಾಚಾರ್ಯರ ಮಾತಿನಂತೆ ನಾನು ಶ್ರೀ ರಾಯರ  ಹಾಗೂ ಶ್ರೀ ವಿಜಯರಾಯರಲ್ಲಿ..... 
ನನ್ನ ತಂದೆಯವರಿಗೆ ಆರೋಗ್ಯ ಭಾಗ್ಯವನ್ನು ಕರುಣಿಸೆಂದು ಬೇಡಿಕೊಂಡೆ - ನನ್ನಂಥಾ ಅಲ್ಪನಾದವನ ಪ್ರಾರ್ಥನೆಯನ್ನೂ ಮನ್ನಿಸಿ - ವೈದ್ಯ ಲೋಕಕ್ಕೆ ಸವಾಲಾಗಿದ್ದಂಥಹಾ ಕಾಯಿಲೆಯನ್ನು ಪರಿಹರಿಸಿ - ನನ್ನ ತಂದೆಗೆ ಆರೋಗ್ಯ ಭಾಗ್ಯವನ್ನು ಕರುಣಿಸಿದ ಪರಮ ದಯಾಳುಗಳು ಶ್ರೀ ರಾಯರು ಮತ್ತು ಶ್ರೀ ವಿಜಯರಾಯರು. 
ಶ್ರೀ ರಾಯರ ಆಜ್ಞಾನುಸಾರ  ಶ್ರೀ ಸುಶಮೀ೦ದ್ರತೀರ್ಥರು  ಶ್ರೀ ವಿಜಯರಾಯರ ಕಟ್ಟೆಗೆ ಬೆಳ್ಳಿ ಕವಚ ಮಾಡಿಸಿ ಸಮರ್ಪಿಸಿದರೆ - ಶ್ರೀ ವಿಜಯರಾಯರ ತಂಬೂರಿಗೆ ನಮ್ಮ ತಂದೆಯವರು " ಬೆಳ್ಳಿ ಕವಚ " ವನ್ನು ತಯಾರು ಮಾಡಿಸಿ - ಶ್ರೀ ವಿಜಯರಾಯರ ಪಾದ ಪದ್ಮಗಳಲ್ಲಿ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿದ ಧನ್ಯ ಜೀವಿಗಳು. 
" ನಿರ್ಯಾಣ "
ಶ್ರೀ ಮೂಲರಘುಪತಿವೇದವ್ಯಾಸದೇವರು - ಶ್ರೀ ಯಂತ್ರೋದ್ಧಾರಕ ಪ್ರಾಣದೇವರು - ಶ್ರೀ ರಾಯರು ಹಾಗೂ ಅವರ ಪರಂಪರೆ ಯತಿಗಳ ಸೇವೆ - ಶ್ರೀ ಶ್ರೀಪಾದರಾಜ - ಶ್ರೀ ವ್ಯಾಸರಾಜ - ಶ್ರೀ ವ್ಯಾಸತತ್ತ್ವಜ್ಞತೀರ್ಥರು - ಶ್ರೀ ಸುಜ್ಞಾನೇಂದ್ರ ತೀರ್ಥರು - ಶ್ರೀ ವಿಜಯದಾಸರು - ಶ್ರೀ ಗೋಪಾಲದಾಸರು - ಶ್ರೀ ಮೋಹನದಾಸರು - ಶ್ರೀ ಜಗನ್ನಾಥದಾಸರುಗಳ ಸೇವೆಯನ್ನು ಅವಿಚ್ಛಿನ್ನವಾಗಿ 75 ವರ್ಷಗಳ ಮಾಡಿ - ತಮ್ಮ 83ನೇ ವಯಸ್ಸಿನಲ್ಲಿ ಕಾಲನ ಕರೆಗೆ ಓಗೊಟ್ಟು " ಕೈವಲ್ಯದಾಯಕ ಶ್ರೀ ನರಸಿಂಹದೇವರ ಸ್ಮರಣೆ ಮಾಡುತ್ತಾ [ ಪ್ರಾಣ ಹೋಗುವ ಸಮಯದಲ್ಲಿ ಶೂರ್ಪಾಲಿಯ ಶ್ರೀ ನೃಸಿಂಹದೇವರ ಕಥೆಯನ್ನು ಹೇಳುತ್ತಾ ].....
ದಿನಾಂಕ : 18.04.2014 ಶುಕ್ರವಾರ ಸಂಜೆ 4.30ಕ್ಕೆ [ ಚೈತ್ರ ಬಹುಳ ತೃತೀಯಾ ಉಪರಿ ಚತುರ್ಥಿ - ಚೌತಿ ] ಶ್ರೀ ವಿಜಯವಿಠಲನ ಸನ್ನಿಧಾನವಾದ ವೈಕುಂಠಕ್ಕೆ ಪ್ರಯಾಣ ಮಾಡಿದರು. 
ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ..... 
ವ್ಯಾಸ ಸುಜ್ಞಾನರ ಸದ್ವಂಶ ಸಂಜಾತರಾಗಿ । ಮೂಲರಘುಪತಿ । ವೇದ । ವ್ಯಾಸದೇವರ ಪಾದ ಪದ್ಮಾರಾಧಕರಾದ । ಸಂ  । ನ್ಯಾಸ ಕುಲದೀಪಕರಾದ । ಶ್ರೀ ರಾಘವೇಂದ್ರ ಕೃಪಾಛಾತ್ರರ । ಸುಸನ್ನಿಧಿಯಲ್ಲಿ ಸೇವಾರತರಾಗಿ ।।
ಭೃಗು ಮಹರ್ಷಿಗಳ ಅವತಾರರಾದ ಶ್ರೀ ವಿಜಯರಾಯರಿಂದ ಆಯುರ್ದಾನ ಪಡೆದು । ಭೃಗು ವಾಸರ ಚೈತ್ರ ಬಹುಳ ಚತುರ್ಥಿಯಂದು ವೇಂಕಟನಾಥನ ಪುರಕೆ ಚಿತ್ತೈಸಿದರು ।।
ಆಚಾರ್ಯ ನಾಗರಾಜು ಹಾವೇರಿ 
ಗುರು ವಿಜಯ ಪ್ರತಿಷ್ಠಾನ
******

ಶಿರಹಟ್ಟಿ ಭೀಮಚಾರ್ಯ and ಭಾಗವತರತ್ನ ನಾರಾಯಣಾಚಾರ್ಯ

ಶಿರಹಟ್ಟಿ ಭೀಮಚಾರ್ಯರಿಗೆ ಭಾಗವತರತ್ನದ ಅನುಗ್ರಹ

ಶ್ರೀ ಅಪ್ಪವರಿಗೆ ದೇಶದೆಲ್ಲೆಡೆ ಶಿಷ್ಯಸಂಪತ್ತು. ಅದರಲ್ಲಿ ವಿದ್ವಾಂಸರಾದ ಶಿರಹಟ್ಟಿ ಭೀಮಚಾರ್ಯರು ಒಬ್ಬರು. ಅಪ್ಪಾವರ ಪರಮ ಆಪ್ತರಾಗಿದರು. ಸಂಚಾರಾನ್ವಯ ಅಪ್ಪಾವರ ಅವರ ಮನೆಯಲ್ಲಿ ಉಳಿದುಕೊಂಡರು. ಆಚಾರ್ಯರ ಹೆಂಡತಿ ಸ್ವರ್ಗಸ್ಥರಾಗಿದರು ಜೊತೆಯಲ್ಲಿ ಸಂತಾನವಿರಲಿಲ್ಲ.

ಅಪ್ಪಾವರ ಭೀಮಾಚಾರ್ಯರಿಗೆ ವಿಚಾರಿಸಿದಾಗ ಯಾಕೋ ಭೀಮ ತುಂಬಾ ಚಿಂತೆಯಲ್ಲಿ ಇದ್ದಿ ಅಂತ ಕೇಳಿದಾಗ ಆಚಾರ್ಯರು " ಸ್ವಾಮಿ ನಿಮಗೇ ತಿಳಿಯದ ಸಂಗತಿ ಏನು ಇಲ್ಲ ಈ ವಯಸ್ಸಿನಲ್ಲಿ ನಾನು ಒಬ್ಬಂಟಿ ಹೆಂಡತಿ ಇಲ್ಲ ಸಂತಾನ ಭಾಗ್ಯವೂ ದೇವರು ಕರುಣಿಸಲಿಲ್ಲ ಎಂದು ಬಹು ದುಃಖದಿಂದ ಹೇಳಿಕೊಂಡರು." ಅಪ್ಪಾವರ ಸಮಾಧಾನ ಹೇಳಿ ಚಿಂತಿಸಬೇಡ ಭೀಮ ನಿನಗೆ ಕಲ್ಯಾಣವಾಗಿ ಒಳ್ಳೆಯ ಕೀರ್ತಿಶಾಲಿ ಶಾಸ್ತ್ರಸಂಪನ್ನವಾದ ಪುತ್ರ ಜನಿಸುತ್ತಾನೆ.

ಶ್ರೀ ಅಪ್ಪಾವರು ಆಶೀರ್ವಚನದಂತೆ ಭೀಮಾಚಾರ್ಯರಿಗೆ ಲಕ್ಷ್ಮೇಶ್ವರದ ಕನ್ಯೆಯ ಜೊತೆ ಮದುವೆಯಾಗಿ ಸುಪುತ್ರ ಪ್ರಾಪ್ತಿಯಾಯಿತು. ಅವರ ಸುಪುತ್ರರೆ ಶ್ರೀ ಶಿರಹಟ್ಟಿ ನಾರಾಯಣಾಚಾರ್ಯರು. ತಂದೆಯಲ್ಲಿಯೇ ಸಕಲ ಶಾಸ್ತ್ರವನ್ನು ಅಧ್ಯಯನ ಮಾಡಿ ಭಾಗವತ ಶಿರೋಮಣಿಗಳೆಂದು ಮಾನ್ಯರಾಗಿ ಜನರ ಮಾತಿನಲ್ಲಿ ಇವರು ಭಾಗವತರತ್ನ ನಾರಾಯಣಾಚಾರ್ಯರೆಂದು ಪ್ರಸಿದ್ದರಾದರು. ಶ್ರೀನಾರಾಯಣಾಚಾರ್ಯರು ಗದಗಿನಲ್ಲಿ ಶ್ರೀಅಪ್ಪಾವರು ಪ್ರತಿಷ್ಠಿತ ರಾಯರು ಬೃಂದಾವನ ಸನ್ನಿಧಾನದಲ್ಲಿ ರಾಯರ ಆರಾಧನೆ ಅತಿವಿಜೃಂಭಣೆ ಮಾಡುತಿದ್ದರು.

- ವಿಷ್ಣುತೀರ್ಥಚಾರ್ಯ ಇಭರಾಮಪುರ
***

15 dec 2020

 ತಮ್ಮ ಪ್ರವಚನಗಳ ಮೂಲಕ, ಗ್ರಂಥಗಳ ಮೂಲಕ, ಸಂಪಾದಿತ ಕೃತಿಗಳ ಮೂಲಕ, ಸಂಶೋಧನೆಯ ಮೂಲಕ ಶ್ರೀವೇದವ್ಯಾಸ, ಶ್ರೀಕೃಷ್ಣ,ಮಧ್ವರನ್ನು ಜನಮಾನಸದಲ್ಲಿ ಪ್ರತಿಷ್ಠಾಪಿಸಿದ ಗುರುವರ್ಯ ಶ್ರೀಬನ್ನಂಜೆಗೋವಿಂದಾಚಾರ್ಯರು ಇಂದು ಶ್ರೀಹರಿಯ ಪಾದವನ್ನು ಸೇರಿದ್ದಾರೆ. ಮಾಧ್ವಸಮಾಜ ಎಂದಿಗೂ ಮರೆಯಲಾರದ ಮಹಾನ್ ಚೇತನ, ಮಧ್ವಸಿದ್ಧಾಂತವನ್ನು ದಿಗಂತ ವಿಶ್ರಾಂತವಾಗಿಸಿದ ವಿದ್ವದ್ವರೇಣ್ಯ ಶ್ರೀಬನ್ನಂಜೆಗೋವಿಂದಾಚಾರ್ಯರು ಗೋವಿಂದನ ಸಾನ್ನಿಧ್ಯವನ್ನು ಸೇರಿದ ಈ ಕ್ಷಣದಲ್ಲಿ ಆ ಮಹಾಚೇತನಕ್ಕೆ ಅನಂತನಮನಗಳು

'ಅಭಿನವ ಪಂಡಿತಾಚಾರ್ಯ ಶ್ರೀಬನ್ನಂಜೆ ಗೋವಿಂದಾಚಾರ್ಯರು-

'ಪರಾಶರಸೂನು'ವಿನ ಪರಮಾನುಗ್ರಹ, ಪೂರ್ಣಬೋಧ'ರಪೂರ್ಣಾನುಗ್ರಹಗಳ ಮೂರ್ತರೂಪದಂತೆ ನಮ್ಮೊಡನೆ ಇರುವ ವಿದ್ಯಾವಾಚಸ್ಪತಿ', 'ಅಭಿನವ ಪಂಡಿತಾಚಾರ್ಯ' 'ಪದ್ಮಶ್ರೀ'ಡಾ. ಬನ್ನಂಜೆ ಗೋವಿಂದಾಚಾರ್ಯರ ಪ್ರವಚನವೆಂದರೆ, ಆಚಾರ್ಯರ ನಾಲಗೆಯಲ್ಲಿ ನಾಲ್ಮೊಗನರಸಿ ನಲಿದಾಡುತ್ತಾಳೆ. ವೇದಾಂತದ ಗಹನತತ್ತ್ವಗಳೇ ಇರಲಿ, ಮಧ್ವಸಿದ್ಧಾಂತದಕಠಿಣ ಪ್ರಮೇಯಗಳೇ ಇರಲಿ, ರಾಮಾಯಣ, ಭಾಗವತ, ಭಾರತ, ಭಗವದ್ಗೀತೆಗಳ ಪ್ರವಚನವೇ ಇರಲಿ, ಆಚಾರ್ಯರ ವಾಣಿ ಶ್ರೋತೃಗಳ ಸರ್ವೇಂದ್ರಿಯಗಳನ್ನೂ ಶ್ರವಣೇಂದ್ರಿಯದಲ್ಲಿ ಲಯಗೊಳಿಸಬಲ್ಲದು. ಕೇಳುಗರು ಕ್ಷಣಾರ್ಧದಲ್ಲಿ ಆಚಾರ್ಯರ ವಾಗೀಂದ್ರಜಾಲದ ಮಾಯೆಯಲ್ಲಿ ಬಂಧಿಗಳು. ಆಚಾರ್ಯರು ತನಗೆ ತಿಳಿದಿದೆ ಎಂದು ಹೇಳುವುದಿಲ್ಲ, ಒಂದೊಮ್ಮೆ ಹೇಳಿದರೂ ತಿಳಿದ್ದೆಲ್ಲವನ್ನೂ ಹೇಳುವ ತವಕ, ತಿಳಿಯಾದದ್ದನ್ನು ಹೇಳುವ ತುಡಿತ ಅವರ ಪ್ರತಿಮಾತಿನಲ್ಲೂ ವ್ಯಕ್ತ. ಅವರು ತಿಳಿವಿನ ಜಲಧಿಯನ್ನು ಈಜಿ ಪಾರಂಗತರಾಗುವುದರಲ್ಲಿ ಆಸಕ್ತರಲ್ಲ, ವಿದ್ವದ್ ಶರಧಿಯಲ್ಲಿ ಮುಳುಗಿ ರತ್ನಗಳನ್ನು ಹೆಕ್ಕಿ ತರಬಲ್ಲ ಶಕ್ತರು. 1936ರ ಆಗಸ್ಟ್ ಮೂರರಂದು ಉಡುಪಿಯ ಮಹಾವಿದ್ವಾಂಸ ಶ್ರೀಪಡಮನ್ನೂರು ನಾರಾಯಣಾಚಾರ್ಯರ ಮಗನಾಗಿ ಜನಿಸಿದ ಶ್ರೀಗೋವಿಂದಾಚಾರ್ಯರು ಶ್ರೀಪಲಿಮಾರು,ಭಂಡಾರಕೇರಿ ಮಠಾಧೀಶರಾಗಿದ್ದ ಶ್ರೀವಿದ್ಯಾಮಾನ್ಯರು ಹಾಗೂ ಶ್ರೀಕಾಣಿಯೂರು ಮಠಾಧೀಶರಾಗಿದ್ದ ಶ್ರೀವಿದ್ಯಾಸಮುದ್ರ ತೀರ್ಥರಿಂದ ಹೆಚ್ಚು ಪ್ರಭಾವಿತರಾದರು. ಶ್ರೀಬನ್ನಂಜೆ ತಮ್ಮಪ್ರವಚನಗಳ ಮೂಲಕ ಎಷ್ಟು ಜ್ಞಾನ ಪ್ರಸರಣಕ್ಕೆ ದೀಕ್ಷಾಬದ್ಧರೋ ಅಷ್ಟೇ ತಮ್ಮ ಸಂಶೋಧನೆ, ಗ್ರಂಥಗಳ ಮೂಲಕವೂ. ಬನ್ನಂಜೆಯವರ ಬರಹವೂ ಮಾತಿನಷ್ಟೇ ಸುಭಗ. ವಾಗರ್ಥಗಳ ಮಧುರ ಮಿಲನ, ವರಕವಿ ದ.ರಾ.ಬೇಂದ್ರೆಯಂತವರೇ ಬನ್ನಂಜೆ ಬರಹವನ್ನು ಕುರಿತು, "ಹೆಜ್ಜೆ ಹೆಜ್ಜೆಗೆ ರಸೋಕ್ತಿ, ಭಾವಗೀತ ಸದೃಶವಾಕ್ಯ ಪುಂಜ, ಪುಂಜ...", "ಸುಂದರ ಸೂಕ್ತಿಗರ್ಭಂ" ಈ ಗದ್ಯ ಎಂದು ನುಡಿದಿದ್ದಾರೆ. "ಬನ್ನಂಜೆ ಹೊಸತನ್ನು ಹೇಳಲಿಲ್ಲ, ಆದರೆ ಹೇಳಿದ್ದು ಹಳತು ಅಲ್ಲವೇ ಅಲ್ಲ." ಎಂಬ ಸತ್ಯಕಾಮರ ಮಾತು ಸತ್ಯ. ವೇದವ್ಯಾಸರು, ಆಚಾರ್ಯಮಧ್ವರು, ವಾಲ್ಮೀಕಿ, ಬಾಣಭಟ್ಟ, ಭವಭೂತಿ, ತ್ರಿವಿಕ್ರಮ ಪಂಡಿತಾಚಾರ್ಯರು, ಹರಿದಾಸರು ಬನ್ನಂಜೆಯವರ ಸಾಹಿತ್ಯದ ಮೂಲಕ ಕನ್ನಡಜನಕ್ಕೆ ಹೆಚ್ಚು ಹತ್ತಿರವಾದರು. ವೇದವ್ಯಾಸ. ಮಧ್ವರಂತೂ ಬನ್ನಂಜೆಯವರ ಚಿಂತನದ ಮೂಲ ಸ್ರೋತ. ಭಗವದ್ಗೀತೆಯನ್ನು 'ಭಗವಂತನ ನಲ್ನುಡಿ'ಯಾಗಿ ಅನುವಾದಿಸಿ ಬನ್ನಂಜೆ ಭಗವದ್ಗೀತೆ ಐತಿಹಾಸಿಕವಾಗಿ, ಮನ:ಶಾಸ್ತ್ರೀಯವಾಗಿ ಹಾಗೂ ಭಗವತ್ ಪರವಾಗಿ ಯಾವ ಬಗೆಯಲ್ಲಿ ನಮ್ಮ ಮುಂದೆ ತೆರೆದುಕೊಳ್ಳುತ್ತದೆ ಎಂದು ತೋರಿದರು.

ಆಚಾರ್ಯಮಧ್ವರ ಹೃದಯದ ಹಾಡು'ದ್ವಾದಶಸ್ತೋತ್ರ"ಗಳನ್ನು ಬನ್ನಂಜೆ ಕನ್ನಡದಲ್ಲಿ ಹಾಡಿದಾಗ, ಆನಂದತೀರ್ಥರು ಆನಂದತುಂದಿಲರಾಗಿ ಹರಸಿರಬೇಕು. ಹಾಗಾಗಿಯೇ ಹನ್ನೆರಡು ಹಾಡುಗಳೂ ಶ್ರವಣರಮಣೀಯವಾದವು. ಹರಿದಾಸಸಾಹಿತ್ಯಕ್ಕೆ ಬೀಜಾವಾಪನೆ ಮಾಡಿದ ಶ್ರೀಮಧ್ವರ ಹಾಡುಗಳು ಕನ್ನಡದಲ್ಲಿ ಮೂಡಿದಾಗ, ಸಂಸ್ಕೃತವರಿಯದ ಮಂದಿ ಸಹ ಆನಂದತೀರ್ಥರ ಭಕ್ತಿಯ ಬಿತ್ತರವನ್ನು ಎತ್ತರವನ್ನು ಕಂಡು ಮಣಿದರು.

ತಲವಕಾರೋಪನಿಷತ್, ಯಾಜ್ಞೀಯ ಮಂತ್ರೋಪನಿಷತ್ ಎಂದು ಖ್ಯಾತವಾಗಿರುವ ಈಶಾವಾಸ್ಯೋಪನಿಷತ್ ಮೊದಲಾದ ಉಪನಿಷತ್ ಗಳನ್ನು ಕನ್ನಡದಲ್ಲಿ ಅನುವಾದಿಸಿರುವ ಪೂಜ್ಯ ಆಚಾರ್ಯರು 'ಯಾಜ್ಞೀಯಮಂತ್ರೋಪನಿಷತ್, ಕಾಠಕೋಪನಿಷತ್, ತಲವಕಾರೋಪವಿಷತ್, ಅಥರ್ವಣೋಪನಿಷತ್, ಷಟ್ ಪ್ರಶ್ನೋಪನಿಷತ್, ಮಾಂಡುಕೋಪನಿಷತ್ ಹೀಗೆ ಆರು ಉಪನಿಷತ್ತುಗಳಿಗೆ ಶ್ರೀಮಧ್ವಭಗವತ್ಪಾದರು ರಚಿಸಿರುವ ಉಪನಿಷದ್ಭಾಷ್ಯಕ್ಕೆ ತ್ರಿವಿಕ್ರಮಪಂಡಿತಾಚಾರ್ಯರ ಪೌತ್ರ ವಾಮನಪಂಡಿತಾಚಾರ್ಯರು ರಚಿಸಿದ, ಇಂದು ಉಪಲಬ್ಧವಿರುವ ಅತ್ಯಂತ ಪ್ರಾಚೀನವಾದಂತಹ ಟೀಕಾಗ್ರಂಥಕ್ಕೆ 'ಭಾವಚಂದ್ರಿಕಾ' ಎನ್ನುವಂತಹ ಟಿಪ್ಪಣಿಯನ್ನು ರಚಿಸಿದ್ದಾರೆ. ವಿಶೇಷವೆಂದರೆ ವಾಮನಪಂಡಿತರ ಟೀಕಾಗ್ರಂಥವೂ ಶ್ರೀಬನ್ನಂಜೆಯವರ ಸಂಶೋಧನೆಯ ಫಲಿತ. ವಾಮನಪಂಡಿತರ ಟೀಕೆಯಲ್ಲಿ ಅಸ್ಫುಟವಾಗಿರುವ ಅರ್ಥವಿಶೇಷಗಳೂ ಶ್ರೀಬನ್ನಂಜೆಯವರ ಟಿಪ್ಪಣಿಯಲ್ಲಿ ಹೆಚ್ಚು ಸ್ಫುಟ ಮಾತ್ರವಲ್ಲ, ಹೆಚ್ಚು ವಿಸ್ತೃತ.

ಮನ್ಯುಸೂಕ್ತ, ಅಂಭ್ರಿಣೀ ಸೂಕ್ತ, ಪ್ರಾಣಾಗ್ನಿ ಸೂಕ್ತ, ಪುರುಷಸೂಕ್ತ, ಶ್ರೀಸೂಕ್ತ ಮೊದಲಾದ ವೇದಸೂಕ್ತಗಳನ್ನು ಶ್ರೀಮಧ್ವರು ತೋರಿದ ಬೆಳಕಿನಲ್ಲಿ ಕನ್ನಡದಲ್ಲಿ ಅನುವಾದಿಸಿರುವ ಶ್ರೀಬನ್ನಂಜೆ ಶ್ರೀಮಧ್ವಭಗವತ್ಪಾದರು ಯಾವರೀತಿಯಲ್ಲಿ ವೇದಾರ್ಥಚಿಂತನೆ ಮಾಡಬೇಕೆಂದು ತಮ್ಮ 'ಋಗ್ಭಾಷ್ಯ'ಹಾಗೂ 'ಖಂಡಾರ್ಥನಿರ್ಣಯ' (ಕರ್ಮನಿರ್ಣಯ)ದಲ್ಲಿ ಮಾರ್ಗದರ್ಶನ ಮಾಡಿರುವರೋ, ಅದೇ ಮಾರ್ಗದರ್ಶನಕ್ಕೆ ಅನುಸಾರಿಯಾಗಿ 'ಶತರುದ್ರೀಯ' (ರುದ್ರಾನುವಾಕ)ದ ಮಂತ್ರಗಳಿಗೆ ಭಾಷ್ಯವನ್ನು ರಚಿಸಿ, ಶತರುದ್ರೀಯ ಮಂತ್ರಗಳು ಯಾವರೀತಿಯಲ್ಲಿ ಪ್ರಧಾನವಾಗಿ ಶ್ರೀನಾರಾಯಣನ ಗುಣಾನುಸಂಧಾನದ ಮಂತ್ರಗಳು, ಮುಖ್ಯತ: ಮುಖ್ಯಪ್ರಾಣನ ಮಹಿಮಾತಿಶಯಗಳನ್ನು ಕೊಂಡಾಡುವ ಮಂತ್ರಗಳು ಮತ್ತು ಯಾವ ರೀತಿಯಲ್ಲಿ ರುದ್ರದೇವರ ಪ್ರತಿಪಾದಕವಾದಂತಹ ಮಂತ್ರಗಳಾಗಿವೆ ಎಂಬುದನ್ನು ತಮ್ಮ ಭಾಷ್ಯದಲ್ಲಿ ಅತ್ಯಂತ ಸುಂದರವಾಗಿ ವೇದಮಂತ್ರಗಳ ಆಂತರ್ಯವನ್ನು ತೆರೆದಿರಿಸಿದ್ದಾರೆ. 'ರುದ್ರ'ಶಬ್ದವನ್ನೂ ಹೇಗೆ ಭಗವತ್ಪರ, ವಾಯುಪರವಾಗಿ ಅನುಸಂಧಾನ ಮಾಡಬಹುದು ಎಂಬುದನ್ನು ಆಚಾರ್ಯರ ಭಾಷ್ಯದಲ್ಲಿ ನೋಡಿದಾಗ, ಆಚಾರ್ಯರ ವೈದುಷ್ಯದ ವಿರಾಟ್ ರೂಪದ ದರ್ಶನವಾಗುತ್ತದೆ. 'ಖಂಡಾರ್ಥ ನಿರ್ಣಯ'ದ ಪ್ರವಚನದಲ್ಲಿ ಯಾಜ್ಞಿಕ ಮಂತ್ರವೊಂದನ್ನು ಪ್ರಾಣನ ಹನುಮ, ಭೀಮ, ಮಧ್ವರೂಪಗಳಿಗೆ ಯಾವರೀತಿ ಅನುಸಂಧಾನ ಮಾಡಬಹುದು ಎಂಬುದನ್ನು ವಿವರಿಸಿದಾಗ, ರೋಮಾಂಚನವಾಗುತ್ತದೆ.ಯಾವ ಅರ್ಥವೂ ವೇದಮಂತ್ರಗಳಿಗೆ ಹೇರಿದ ಅರ್ಥವಲ್ಲ, ಬದಲಾಗಿ ವೇದದ ಆಂತರ್ಯವೇನು ಎಂದು ತೋರುವ ಅರ್ಥ. ಬನ್ನಂಜೆಯವರ 'ಐತರೇಯ ಉಪನಿಷತ್ತಿನಲ್ಲಿ ಬರುವ 'ಮಹಾನಾಮ್ನೀ'ಮಂತ್ರಗಳ ಅರ್ಥಾನುಸಂಧಾನ ಅಪೂರ್ವವಾದ ಅನುಭವ.ಶ್ರೀಮಧ್ವರ ಮಹೋನ್ನತ ಕೃತಿ 'ಮಹಾಭಾರತತಾತ್ಪರ್ಯನಿರ್ಣಯ' ಕ್ಕೆ ಅತ್ಯಂತ ವಿಸ್ತೃತವಾದ ಟೀಕೆಯನ್ನೂ 'ನಿರ್ಣಯಭಾವಚಂದ್ರಿಕಾ' ಎಂಬ ಹೆಸರಿನಲ್ಲಿ ರಚಿಸಿದ್ದಾರೆ. ಶ್ರೀಮಧ್ವರ ಪದಪ್ರಯೋಗಗಳ ಹಿಂದಿನ ಹಿರಿದಾದ ಅರ್ಥವನ್ನು ತೋರುವುದರಲ್ಲಿ ಬನ್ನಂಜೆಯವರಿಗೆ ಮುಖ್ಯತಾತ್ಪರ್ಯ. ಶ್ರೀವೇದಾಂಗತೀರ್ಥರ 'ಪದಾರ್ಥದೀಪಿಕೆ' ಹಾಗೂ ಶ್ರೀವ್ಯಾಸತೀರ್ಥರ 'ಭಾವಪಂಚಿಕೆ' ಟೀಕಾಗಳಿಗಿಂತ ಹೆಚ್ಚು ವಿಸ್ತೃತವಾದಂತಹ ಟೀಕೆಯನ್ನು ಮಹಾಭಾರತ ತಾತ್ಪರ್ಯ ನಿರ್ಣಯಕ್ಕೆ ರಚಿಸುವ ಮೂಲಕ ಮಾಧ್ವ ವಾಙ್ಮಯಕ್ಕೆ ಮಹತ್ತ್ವದಕೊಡುಗೆ ಶ್ರೀಬನ್ನಂಜೆಯವರದು. ಶ್ರೀನಾರಾಯಣಪಂಡಿತಾಚಾರ್ಯರ ಮಧ್ವವಿಜಯಕ್ಕೆ ಆಚಾರ್ಯರು ರಚಿಸಿದ ವ್ಯಾಖ್ಯಾನ ಅಸದೃಶವಾದ ವ್ಯಾಖ್ಯಾನ. ಭಾಷ್ಯಕಾರರಾಗಿ, ಟೀಕಾಕಾರರಾಗಿ, ಟಿಪ್ಪಣಿಕಾರರಾಗಿ ತಮ್ಮ ವಿಶ್ವಗುರುಗಳ ಪ್ರಸಾದಿತವಾದ ವೈದುಷ್ಯವನ್ನು ಪ್ರಕಟಗೊಳಿಸಿದ ಆಚಾರ್ಯರು 'ಪ್ರಾಣಸೂತ್ರ' ಗಳನ್ನು ರಚಿಸುವ ಮೂಲಕ ಸೂತ್ರಕಾರರೂ ಆಗಿದ್ದಾರೆ. ಶ್ರೀಮಧ್ವರ ಸಾಕ್ಷಾತ್ ಶಿಷ್ಯರಾದ ಫಲಿಮಾರು ಮಠದ ಮೂಲಯತಿಗಳಾದ ಶ್ರೀಹೃಷಿಕೇಶತೀರ್ಥರ ಪಾಠದನ್ವಯ ಶ್ರೀಮಧ್ವರ ಸರ್ವಮೂಲಗ್ರಂಥಗಳ ಶುದ್ಧಪಾಠದ ಸಂಪಾದನೆ, ಪ್ರಕಟಣೆಯ ಮೂಲಕ ವೇದಾಂತ ಪ್ರಪಂಚಕ್ಕೆ ಅವಿಸ್ಮರಣೀಯ ಕೊಡುಗೆ ಬನ್ನಂಜೆ ಗೋವಿಂದಾಚಾರ್ಯರದು. ಆಚಾರ್ಯಮಧ್ವರ ಕೃತಿಗಳು, ತ್ರಿವಿಕ್ರಮ ಪಂಡಿತಾಚಾರ್ಯ, ನಾರಾಯಣಪಂಡಿತಾಚಾರ್ಯರ ರಚನೆಗಳನ್ನು ಕನ್ನಡಕ್ಕೆ ಅನುವಾದಿಸಿರುವ ಶ್ರೀಬನ್ನಂಜೆ, ಬಾಣನ 'ಕಾದಂಬರಿ', ಭವಭೂತಿಯ 'ಉತ್ತರರಾಮ ಚರಿತ', ಶೂದ್ರಕನ 'ಮೃಚ್ಛಕಟಿಕ' ಮೊದಲಾದ ಸಂಸ್ಕೃತದ ಮೇರು ಕೃತಿಗಳಿಗೆ ತಮ್ಮ ಅನುವಾದದ ಮೂಲಕ ಕನ್ನಡದಲ್ಲಿ ಹೊಸಹುಟ್ಟು ನೀಡಿದ್ದಾರೆ. ಬಾಣಭಟ್ಟನ ಕಾದಂಬರಿಯ ಅನುವಾದ ವರಕವಿ ಬೇಂದ್ರೆ, ಕವಿವರ್ಯ ಪುತಿನ ರಂತಹವರನ್ನೂ ಪುಲಕಿತರನ್ನಾಗಿಸಿದ ಅನುವಾದ. 'ವಿಷ್ಣುಪುರಾಣ'ವನ್ನು ಕುರಿತು 'ಪರಾಶರ ಕಂಡ ಪರತತ್ವ', ತಾತ್ಪರ್ಯ ನಿರ್ಣಯದಲ್ಲಿ ಆಚಾರ್ಯ ಮಧ್ವರು ಸಂಗ್ರಹಿಸಿರುವ 'ರಾಮಾಯಣದ ಕಥಾಸಂಗ್ರಹವನ್ನು 'ಮಧ್ವರಾಮಾಯಣ' ಎಂಬ ಹೆಸರಿನಲ್ಲಿ ಅನುವಾದ, 'ವಾಲ್ಮೀಕಿ ಕಂಡ ರಾಮಾಯಣ' 'ಚಕ್ರಾಬ್ಜಮಂಡಲ' ವನ್ನು ಕುರಿತ ವಿದ್ವತ್ಪೂರ್ಣಬರಹ ಶ್ರೀಬನ್ನಂಜೆಯವರ ವಿದ್ವತ್ತಿಗೆ ದರ್ಪಣಗಳಾಗಿವೆ. ಪುರಂದರದಾಸರು, ಕನಕದಾಸರ ಕೃತಿಗಳನ್ನು ಕುರಿತ ಪುರಂದರೋಪನಿಷತ್, ಕನಕೋಪನಿಷತ್ ಹರಿದಾಸಸಾಹಿತ್ಯಕ್ಕೆ ಬನ್ನಂಜೆ ನೀಡಿದ ಅಪೂರ್ವ ಕೊಡುಗೆಗಳು. ಭೋಗ-ಯೋಗ ಎರಡೂ ಜೀವನದ ಮಂಗಲಕ್ರಿಯೆಗಳು , ಯಾವುದೋ ಒಂದನ್ನು ಅತಿಯಾಗಿ ಆರಾಧಿಸುವನು ಜೀವನದ ಪೂರ್ಣಯೋಗದಿಂದ ವಂಚಿತನಾಗುತ್ತಾನೆ ಎಂಬ ಅಭಿಪ್ರಾಯದ ಬನ್ನಂಜೆ ವೇದವ್ಯಾಸರ ಬ್ರಹ್ಮಸೂತ್ರಗಳ ದಿವ್ಯವಾದ ಅನುಭವದೊಂದಿಗೇ ವಾತ್ಸಾಯನನ ಕಾಮಸೂತ್ರಗಳನ್ನೂ ಪೂರ್ಣದೃಷ್ಟಿಯಿಂದ ನೋಡಬೇಕು ಎಂದು ಪ್ರತಿಪಾದಿಸಿದವರು ಇದರ ದ್ಯೋತಕ- ಪ್ರಾಚೀನಭಾರತದಲ್ಲಿ ಕಾಮಶಾಸ್ತ್ರ ಎಂಬ ಕೃತಿ. ಬೇರೆಯವರ ದೃಷ್ಟಿಗಿಂತ ಭಿನ್ನವೆಂದೆನಿಸುವ ಆದರೆ ಸತ್ಯಕ್ಕೆ ಹತ್ತಿರವಾದ ಮತ್ತು ವೇದವ್ಯಾಸ-ಕೃಷ್ಣ, ಮಧ್ವರಿಗೆ ಸಮ್ಮತವಾದ ಅಭಿಪ್ರಾಯಗಳನ್ನು ತಮ್ಮ ಕೃತಿ-ಮಾತುಗಳಲ್ಲಿ ಬಿಂಬಿಸುವ ಬನ್ನಂಜೆ ಕೆಲವೊಮ್ಮೆ ಸಂಪ್ರದಾಯವಾದಿಗಳು ನಂಬಿರುವ ವಿಚಾರಗಳಿಗಿಂತ ಭಿನ್ನವಾದ ವಿಚಾರಗಳನ್ನು ವ್ಯಕ್ತಪಡಿಸಿರುವುದೂ ಉಂಟು. ಶ್ರೀಕೃಷ್ಣನ ಪ್ರತಿಷ್ಟೆ ಪಶ್ವಿಮಾಭಿಮುಖವಾಗಿಯೇ ಆಗಿದೆ ಎಂದು ಸಾಧಾರವಾಗಿ ಪ್ರತಿಪಾದಿಸಿದವರು ಬನ್ನಂಜೆ.

ಬೇಂದ್ರೆಯವರ ನಾಕುತಂತಿಯ ಅರ್ಥಬಿತ್ತರವನ್ನು ಬಿತ್ತರಿಸಿದವರೂ ಬನ್ನಂಜೆ. ನನ್ನ ಕೃತಿ ಸೂತ್ರಪ್ರಾಯ ನೀನು ಅದಕ್ಕೆ ಭಾಷ್ಯ ಬರೆಯಬೇಕು ಎಂದು ವರಕವಿಗಳಿಂದಲೇ ಆಜ್ಞಪ್ತರಾದ ಧನ್ಯಜೀವಿ ಶ್ರೀಗೋವಿಂದಾಚಾರ್ಯರು. ಕಿಷ್ ಕಿಂಧಾಕಾಂಡ, ಪ್ರಕಟವಾಗಿರುವ ಬನ್ನಂಜೆ ಬರಹಗಳಲ್ಲಿ ಶ್ರೀಬನ್ನಂಜೆ ಯಾವರೀತಿಯಲ್ಲಿ ವಿಭಿನ್ನವಾಗಿ ಮತ್ತು ವಿಶಿಷ್ಟ ಆಲೋಚಿಸಬಲ್ಲರು ಎಂಬುದಕ್ಕೆ ಸಾಕ್ಷಿಗಳಾಗಿವೆ. ವೇದಾಂತದ ಬಗ್ಗೆ ಶ್ರೀಬನ್ನಂಜೆಯವರು ನೀಡಿರುವ ಪ್ರವಚನಗಳನ್ನು ಪುಸ್ತಕಗಳ ರೂಪದಲ್ಲಿ ಸಂಗ್ರಹಿಸಿದರೆ, ಅಪಾರವಾದಂತಹ ಸಾರಸ್ವತ ಸಂಪತ್ತು ನಮ್ಮದಾಗುತ್ತದೆ.ವಿದೇಶಗಳಲ್ಲಿಯೂ ಸಹ ಪ್ರವಚನಗಳನ್ನು ನೀಡಿ ಶ್ರೀವೇದವ್ಯಾಸರ, ಮಧ್ವರ ಸಿದ್ಧಾಂತವನ್ನು ಪ್ರಸರಿಸುತ್ತಿರುವ ಮಹಾಗುರು ಶ್ರೀಬನ್ನಂಜೆಯವರು.

ಒಂದು ತೀರಾ ವೈಯಕ್ತಿಕವಾದ ಅನುಭವ, ಶ್ರೀಜಗನ್ನಾಥದಾಸರ ಜೀವನವನ್ನು ಕುರಿತು ನನ್ನಿಂದ ರಚಿತವಾಗಿದ್ದ 'ಫಲವಿದು ಬಾಳ್ದುದಕೆ' ಕಾದಂಬರಿಯನ್ನು ಪರಮಪೂಜ್ಯ ಶ್ರೀಪೇಜಾವರ ಶ್ರೀಗಳು ಲೋಕಾರ್ಪಣೆ-ಲೋಕೇಶಾರ್ಪಣೆ ಮಾಡಿದ್ದರು. ಆ ಕೃತಿಯನ್ನು ಪೂಜ್ಯ ಬನ್ನಂಜೆಯವರು ಚಾಮರಾಜಪೇಟೆಯ ಶ್ರೀರಾಮಸೇವಾಮಂಡಳಿಯಲ್ಲಿ ರಾಮಾಯಣ ಕುರಿತು ಉಪನ್ಯಾಸ ನೀಡುತ್ತಿದ್ದ ಸಂದರ್ಭದಲ್ಲಿ ಅವರಿಗೆ ಸಮರ್ಪಿಸಿ, ಮುಂದೆ ಕೃತಿ ರಚನೆಗೆ ಆಚಾರ್ಯರ ಅನುಗ್ರಹ ಬೇಕು ಎಂದು ಪ್ರಾರ್ಥಿಸಿದೆ. ಶ್ರೀಗೋವಿಂದಾಚಾರ್ಯರು ನನ್ನ ತಲೆಯ ಮೇಲೆ ಕೈಯಿರಿಸಿದರು. ಯೋಗಿಕ ಪರಿಭಾಷೆಯಲ್ಲಿ ಶಕ್ತಿಪಾತವೆಂದು ಕರೆಯುವಂತಹ ಅನುಭವ. ಸಹಸ್ರ ಮಿಂಚುಗಳು ಹೊಳೆದಂತೆ, ಮೈಯಲ್ಲಿ ನಖಶಿಖಾಂತ ವಿದ್ಯುತ್ ಪ್ರವಹಿಸಿದಂತೆ, ಅಂತಹ ಅನುಭವ ನನ್ನದಾಗಿಸಿದ ಆಚಾರ್ಯರಿಗೆ ಅಭಿವಂದನೆಗಳು

ಒಮ್ಮೆ ಬನ್ನಂಜೆ ವಿಜಯ ಕಾಲೇಜು (ಆಗ ಬಿಎಚ್ ಎಸ್ ಕಾಲೇಜು) ಆಯೋಜಿಸಿದ್ದ ವರಕವಿ ಬೇಂದ್ರೆಯವರ ಸಾಹಿತ್ಯ ಕುರಿತ ವಿಚಾರಸಂಕಿರಣಕ್ಕೆ ಬಂದ ಸಂದರ್ಭದಲ್ಲಿ ಮಾತನಾಡುತ್ತಾ 'ಗುರುಗಳೇ ವೇದವ್ಯಾಸರ ವಿಚಾರಗಳನ್ನು ಪ್ರಕಟಿಸುವಲ್ಲಿ ಆಚಾರ್ಯಮಧ್ವರು ಮಾಧ್ಯಮವಾದಂತೆ ನೀವು ಮಧ್ವರ ವಿಚಾರಗಳನ್ನು ಪ್ರಕಟಿಸುವಲ್ಲಿ ಮಾಧ್ಯಮವಾದಿರಿ'ಎಂದೆ. ಆಗ ಬನ್ನಂಜೆ ಎಂದರು "ನಾನು ಆಗಲಿಲ್ಲ- ಮಧ್ವರು ಮಾಧ್ಯಮಮಾಡಿಕೊಂಡರು ಅದು ಅವರ ಅನುಗ್ರಹ" ಎಂದರು. ಶ್ರೀಬನ್ನಂಜೆಯವರು ಬಿ.ಎಚ್.ಎಸ್.ಕಾಲೇಜಿನ 'ಬೇಂದ್ರೆಸಾಹಿತ್ಯ'ಕುರಿತ ವಿಚಾರ ಸಂಕಿರಣದಲ್ಲಿ ನೀಡಿದ ಉಪನ್ಯಾಸವನ್ನು ಬರಹದ ರೂಪಕ್ಕೆ ತರುವ ಭಾಗ್ಯವೂ ನನಗೊದಗಿತು. ಪ್ರತಿನಿತ್ಯ ಶ್ರೀಬನ್ನಂಜೆಯವರ ಪ್ರವಚನ ಕೇಳದೆ ಇರಲೂ ಆಗದಷ್ಟು ನನ್ನ ಭಾವಕೋಶದ ಭಾಗವಾಗಿದ್ದಾರೆ ಮಹಾಭಾಗ ಶ್ರೀಬನ್ನಂಜೆಯವರು. ಉಪನಿಷತ್ತುಗಳು, ಭಾಗವತ, ಆಚಾರ್ಯರ ಸರ್ವಮೂಲ ಕೃತಿಗಳು ಪ್ರತಿನಿತ್ಯ ಬನ್ನಂಜೆಯವರ ಮೂಲಕ ಹತ್ತಿರವಾಗುತ್ತಲೇ ಇವೆ. ಶ್ರೀವೇದವ್ಯಾಸ,ಕೃಷ್ಣ,ಮಧ್ವರ ಚಿಂತನಗಳೋ ಮಹಾಸಮುದ್ರ, ನಾವೋ ಬೊಗಸೆಯಲ್ಲಿಯೂ ಹಿಡಿಯಲಾಗದ ಅಲ್ಪಮತಿಗಳು. ಹಾಗಿದ್ದಾಗ್ಯೂ ನಮ್ಮ ಮೇಲಿನ ಕಾರುಣ್ಯದಿಂದ ಶ್ರೀಬನ್ನಂಜೆಗೋವಿಂದಾಚಾರ್ಯರಂತಹ ಜ್ಞಾನಿಗಳನ್ನು ನಮಗೆ ನೀಡಿ ಹರಸುತ್ತಿರುವ ಮಾಧವ, ಮಧ್ವರಿಗೆ ಈ ಜೀವನ ಎಷ್ಟು ಋಣಿಯಾಗಿದ್ದರೂ ಕಡಿಮೆಯೆ. ಬನ್ನಂಜೆಯವರ ಮೂಲಕ ಶ್ರೀವೇದವ್ಯಾಸ-ಮಧ್ವರು ನಮಗೆ ಇನ್ನೂ ಹೆಚ್ಚು ಹತ್ತಿರವಾದರು. ಅಮರರಾದ ಆಚಾರ್ಯರಿಗೆ ಅಂತಿಮ ನಮನಗಳು. ವೇಣುಗೋಪಾಲ. ಬಿ.ಎನ್.

*******

ಪುರದ ಪುಣ್ಯವೆ ಪುರುಷರೂಪಿಂದೆ ಪೋದಂತೆ

- ರೋಹಿತ್ ಚಕ್ರತೀರ್ಥ | ಹೊಸ ದಿಗಂತ 14 ಡಿಸೆಂಬರ್ 2020

ಡಾ. ಎಂ.ಎಂ. ಕಲಬುರ್ಗಿಯವರು ಹಂಪಿ ವಿವಿಯ ಕುಲಪತಿಗಳಾಗಿದ್ದ ಸಮಯ. ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಹೊಸಪೇಟೆಯ ಮೇಲಿಂದ ಬೇರಾವುದೋ ಊರಿಗೆ ಪ್ರಯಾಣ ಮಾಡುತ್ತಿದ್ದಾರೆಂಬ ಸುದ್ದಿ ಸಿಕ್ಕಿತು. ಅವರನ್ನು ನಮ್ಮ ವಿಶ್ವವಿದ್ಯಾಲಯಕ್ಕೂ ಕರೆಸಿ ಮಾತಾಡಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಭಾವಿಸಿದ ಕಲಬುರ್ಗಿ, ತನ್ನ ಕಿರಿಯ ಸಹೋದ್ಯೋಗಿಗಳನ್ನು ಕರೆದು, ಬನ್ನಂಜೆಯವರನ್ನು ಕರೆಸುವುದಕ್ಕೆ ಏರ್ಪಾಟು ಮಾಡಿಸಿದರು. ಆಗ ಹಂಪಿ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಎ.ವಿ. ನಾವಡ, ಬನ್ನಂಜೆಯವರನ್ನು ಕಂಡು ಮಾತಾಡಿಸಿ ಮನವೊಲಿಸಿ ವಿಶ್ವವಿದ್ಯಾಲಯಕ್ಕೆ ಕರೆತಂದರು. ಬನ್ನಂಜೆ ಅಂದು ವಿದ್ವತ್ಸಮೂಹವನ್ನು ಎದುರಿಗೆ ಕೂರಿಸಿಕೊಂಡು ಒಂದು ತಾಸು ಅತ್ಯದ್ಭುತವಾದ ಉಪನ್ಯಾಸ ನಡೆಸಿಕೊಟ್ಟರು. ಅದರ ಮರುದಿನವೇ ವಿಶ್ವವಿದ್ಯಾಲಯದಲ್ಲಿ ಒಂದಷ್ಟು ಹಳಸುಗಾಳಿಯ ಹಬೆಯೆದ್ದಿತು. ಕುಲಪತಿಗಳು ಯಾವುದೋ ಮಾಧ್ವಮಠದ ಕಚ್ಛೆಪಂಚೆ ಪಂಡಿತರನ್ನೆಲ್ಲ ಕರೆಸಿ ವೇದಿಕೆ ಹತ್ತಿಸಿ ವಿಶ್ವವಿದ್ಯಾಲಯದ ಘನತೆ ಹದಗೆಡಿಸುತ್ತಿದ್ದಾರೆಂದೂ ಅವರ ಮೇಲೆ ಮೇಲಿನವರಿಗೆ ದೂರು ಕೊಡಬೇಕೆಂದೂ ಒಂದಷ್ಟು ಚರ್ಚೆಗಳು ವಿಶ್ವವಿದ್ಯಾಲಯದ ಹಜಾರದಲ್ಲಿ ನಡೆಯತೊಡಗಿದವು. ಇಷ್ಟೆಲ್ಲ ವಿವಾದಕ್ಕೆ ಕಾರಣವಾಗುವಂಥ ಯಾವ ವಿಷಯವನ್ನು ಬನ್ನಂಜೆ ಮಾತಾಡಿದ್ದರು ಎನ್ನುತ್ತೀರಾ? ಅವರು ಕೊಟ್ಟದ್ದು ಬೇಂದ್ರೆಯವರ "ನಾಕುತಂತಿ"ಯ ಮೇಲೆ ಉದ್ಭೋದಕ ಉಪನ್ಯಾಸ!

ದುರಂತ ನೋಡಿ. ನಮ್ಮಲ್ಲಿ ಜ್ಞಾನಾಧಿಕಾರ ಕೇಂದ್ರಗಳಾದ ಶಾಲೆ-ಕಾಲೇಜು-ಉನ್ನತ ಅಧ್ಯಯನ ಸಂಸ್ಥೆಗಳು, ಸರಕಾರೀ ಅಕಾಡೆಮಿ/ಪ್ರಾಧಿಕಾರಗಳು, ಪತ್ರಿಕೆ-ಟಿವಿಯಂಥ ಮಾಧ್ಯಮ ವೇದಿಕೆಗಳು ಎಲ್ಲವೂ ಐವತ್ತು ವರ್ಷಗಳಿಗೂ ಹೆಚ್ಚುಕಾಲ ಆಳಲ್ಪಟ್ಟಿದ್ದು ಎಡಸಿದ್ಧಾಂತಿಗಳಿಂದಲೇ. ಅವರನ್ನು ಹೊರತುಪಡಿಸಿ ಮಿಕ್ಕವರೆಲ್ಲ ಮಡೆಯರು, ಮಂಕರು, ಅಜ್ಞಾನಿಗಳು ಎಂದೇ ಹಣೆಪಟ್ಟಿ ಹಚ್ಚಿಕೊಂಡು ಬರಲಾಯಿತು. ತಮ್ಮ ಸಿದ್ಧಾಂತಕ್ಕೊಗ್ಗದ ಎಲ್ಲವೂ ತಪ್ಪೆಂದೇ ನಿರ್ಣಯ ಹೊರಡಿಸುತ್ತಿದ್ದ ಎಡ-ಬಿಡಂಗಿ ವಿದ್ವಾಂಸರೊಂದಷ್ಟು ಜನ, ಕಚ್ಛೆ-ಪಂಚೆಯ ಮಂದಿಯನ್ನು, ಜುಟ್ಟು ಬಿಟ್ಟವರನ್ನು, ಜನಿವಾರ ತೊಟ್ಟವರನ್ನು ಸೀಮಿತ ದೃಷ್ಟಿಕೋನದ ಕೂಪಮಂಡೂಕಗಳು ಎಂದು ಬ್ರ್ಯಾಂಡ್ ಮಾಡಿದರು! ದುರಂತವೆಂದರೆ ಬರೋಬ್ಬರಿ 30 ಸಂಸ್ಕೃತ ಕೃತಿಗಳನ್ನು ಬರೆದ, ಐವತ್ತಕ್ಕೂ ಹೆಚ್ಚು ಸಂಸ್ಕೃತ ಕೃತಿಗಳನ್ನು ತಿಳಿಗನ್ನಡಕ್ಕೆ ಅನುವಾದ ಮಾಡಿದ, 70ಕ್ಕೂ ಹೆಚ್ಚು ಮೂಲ ಕನ್ನಡ ಕೃತಿಗಳನ್ನು ರಚಿಸಿದ ಬನ್ನಂಜೆ ಎಡಸಿದ್ಧಾಂತಿಗಳಿಗಾಗಲೀ ಸರಕಾರಗಳಿಗಾಗಲೀ ಯಾವತ್ತೂ ಸಾಹಿತಿ ಎಂದು ಕಾಣಲೇ ಇಲ್ಲ! ಸಂಸ್ಕೃತ ವಾಙ್ಮಯದ ಮೇರುಶಿಖರದಂತಿದ್ದ ಅವರಿಗೆ ವ್ಯಾಸ, ಸರಸ್ವತಿಯರ ಹೆಸರಿನ ಯಾವೊಂದು ರಾಷ್ಟ್ರೀಯ ಪುರಸ್ಕಾರವೂ ಬರಲಿಲ್ಲ. ಕನ್ನಡದ ಪಂಪ, ರತ್ನ ಪ್ರಶಸ್ತಿಗಳಿಗೂ ಅವರು ಅಸ್ಪೃಶ್ಯರಾಗಿಯೇ ಉಳಿದರು. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ನಡೆಯುವ ಸರಕಾರೀ ಅನ್ಯಾಯಗಳಿಗೆ ಬನ್ನಂಜೆಯವರೂ ಬಲಿಪಶುವಾಗಬೇಕಾಯಿತು. ಸರಕಾರದ ನಿರ್ಣಾಯಕ ಸ್ಥಾನದಲ್ಲಿ ಕೂತವರಿಗೆ ಗುಣಗ್ರಾಹಿತ್ವವಿದ್ದಿದ್ದರೆ ಬನ್ನಂಜೆಯವರಿಗೆ ಕನಿಷ್ಠ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಎಂದೋ ಬರಬೇಕಿತ್ತು. ಆದರೆ ಸಾಲು ಸಾಲು ಅಪಾತ್ರರಿಗೆಲ್ಲ ಆ ಗೌರವ ದಕ್ಕಿದ ಮೇಲೆ ಬನ್ನಂಜೆಯವರಿಗೆ ಬರದಿದ್ದುದು ಒಳ್ಳೆಯದೇ ಆಯಿತು ಎಂದು ನಾವು ನಿಟ್ಟುಸಿರುಬಿಡಬೇಕಷ್ಟೆ!

ಬನ್ನಂಜೆ ಗೋವಿಂದಾಚಾರ್ಯರು ಹುಟ್ಟಿದ್ದು 1936ರ ಆಗಸ್ಟ್ 3ರಂದು, ಪೊಡವಿಗೊಡೆಯನ ನಾಡು ಉಡುಪಿಯಲ್ಲಿ. ತಂದೆ ತರ್ಕಕೇಸರಿ ಪಡುಮನ್ನೂರು ನಾರಾಯಣಾಚಾರ್ಯರು. ಮಠದ ಸ್ವಾಮಿಗಳಿಗೆ ಪಾಠ ಹೇಳುತ್ತಿದ್ದ ಪ್ರಕಾಂಡ ಪಂಡಿತರು. ಬಾಲಕ ಗೋವಿಂದನಿಗೆ ಪ್ರಥಮಪಾಠಗಳೆಲ್ಲ ನಡೆದುದು ಮನೆಯಲ್ಲೇ, ಪಿತೃಮುಖೇನ. ಹಾಗಾಗಿ ಸಂಸ್ಕೃತದ ಅಡಿಪಾಯ ಎಳವೆಯಲ್ಲೇ ಗಟ್ಟಿಯಾಯಿತು. ಆದರೇನಂತೆ, ಸಂಸ್ಕೃತ ಕಾಲೇಜಿನಲ್ಲಿ ಪದವಿ ಪಡೆದು, ಶಿಕ್ಷಕನೋ ಪ್ರಾಧ್ಯಾಪಕನೋ ಆಗಿ ಜೀವನವ್ಯವಸಾಯ ಮಾಡಬೇಕೆಂದು ಬಯಸಿದವನಿಗೆ ಪ್ರಥಮಚುಂಬನಂ ದಂತಭಗ್ನಂ. ಎಂಟ್ರೆನ್ಸ್ ಪರೀಕ್ಷೆಯಲ್ಲಿ ನಪಾಸಿನ ಗೌರವ! ಛಲಬಿಡದೆ ಮತ್ತೆ ಪರೀಕ್ಷಿಸಿದರೆ ಎರಡನೇ ವರ್ಷದಲ್ಲಿ ಇತಿಹಾಸ ಪುನರಾವರ್ತನ! ಮಠದ ವಿದ್ವಾಂಸರ ಮಗನಾಗಿ ಇಂಥ ಅಪಮಾನವನ್ನು, ಅದೂ ಕಾರ್ಯಕ್ಷೇತ್ರ ಉಡುಪಿಯಲ್ಲೇ ಅನುಭವಿಸುತ್ತ ಬದುಕುವುದು ಹೇಗೆ? ಪೇಚಾಟ, ಸಂಕಟ, ದುಃಖ. ಅದೊಂದು ದಿನ, ಹತಾಶೆಯಿಂದ ಮಡುಗಟ್ಟಿದ್ದ ಮನಸ್ಸು ಯೋಚಿಸಿತು: ಮಠದ ಮಾಣಿಗಳಿಗೆ ಪಾಠ ಮಾಡುವ ಸಂಸ್ಕೃತ ಶಿಕ್ಷಕನಾಗುವುದಕ್ಕಿಂತ ಶಿಕ್ಷಕರಿಗೇ ಪಾಠ ಮಾಡುವ ಗುರುವಿನ ಸ್ಥಾನಕ್ಕೇರಬೇಕು! ಯೋಚನೆ ನಿರ್ಧಾರವಾಯಿತು, ನಿರ್ಧಾರ ಸಂಕಲ್ಪವಾಯಿತು. ಜಗಲಿ ಹಾರದವನ ಗಗನಗಮನ! ಯಾಕಾಗಬಾರದು? ಹೊಳೆಹಾರದ ಹನುಮಂತ ಸಾಗರವನ್ನೇ ದಾಟಲಿಲ್ಲವೇ? ಹನುಮದ್ವಿಕಾಸಕ್ಕೊಂದು ನಾಂದಿಯಾಯಿತು. ಹುಡುಗ ತುಪ್ಪದ ದೀಪಹಚ್ಚಿದ; ಗ್ರಂಥಗಳ ಕಟ್ಟುಬಿಚ್ಚಿದ; ಸ್ವಾಧ್ಯಾಯಕ್ಕಿಳಿದ. ಮೂರುವರ್ಷ ಪರ್ಯಂತ ದಿನದ ಇಪ್ಪತ್ತಕ್ಕೂ ಹೆಚ್ಚು ತಾಸುಗಳನ್ನು ಅಧ್ಯಯನವೊಂದರಲ್ಲೇ ಕಳೆದ. ಕರಗಿದ ಎಣ್ಣೆ, ಬತ್ತಿಗಳು ಬೆಳಕಾಗಿ ಸಾರ್ಥಕ್ಯ ಕಂಡವು.

ಆ ಮೂರು ವರ್ಷಗಳನ್ನು ಕಳೆದು ಹೊರಬಂದ ಹುಡುಗ, ಕತ್ತಲ ತತ್ತಿಯನ್ನೊಡೆದು ಹೊರಬಂದ ಬೆಳಕಿನ ಮಗು. ದ್ವಿಜ. ಕಣ್ಣುಗಳಲ್ಲಿ ಅಸಾಧಾರಣ ಕಾಂತಿ. ನಾಲಗೆಯಲ್ಲಿ ವಾಗ್ದೇವಿ. ಮಾತಿನಲ್ಲಿ ಚಿಂತನೆಯ ಹೊಳಹು. ಆಲಿಸಿದವರಿಗೆ ರೋಮಾಂಚನ. ಬರೆದ ಸಾಲುಗಳೆಲ್ಲ ವೇದದ ಋಕ್ಕುಗಳಂತೆ, ಮಂತ್ರಗಳಂತೆ. ಅಪ್ಪನ ಕರ್ಮಠ ಸಾಂಪ್ರದಾಯಿಕತೆಗೆ ಆಘಾತ ಕೊಡಬೇಕೆಂದು ಬೀದಿಯಲ್ಲಿ ನಿಂತು ಸಿಗರೇಟೆಳೆಯುವ ದಿನಗಳೆಲ್ಲ ಕಳೆದಿದ್ದವು. ಮೈಮನಗಳಲ್ಲಿ ಒಡಮೂಡಿದ್ದ ಪಕ್ವತೆ. ಅಣ್ಣ ರಾಮಾಚಾರ್ಯರು "ಸುದರ್ಶನ" ಎಂಬ ಪತ್ರಿಕೆಯನ್ನು ಹೊರಡಿಸುತ್ತಿದ್ದರು. ಆ ಪತ್ರಿಕೆಯಲ್ಲಿ ತಮ್ಮ ಗೋವಿಂದ ಆಗೀಗ ಒಂದೊಂದು ಬರಹಗಳನ್ನು ಪ್ರಕಟಿಸತೊಡಗಿದ. ಬೀಳಬೇಕಿದ್ದ ಕಣ್ಣುಗಳಿಗದು ಬಿತ್ತು. ಉದಯವಾಣಿಯಲ್ಲೊಂದು ಕೆಲಸ ನಿಕ್ಕಿಯಾಯಿತು. ಮೊದಮೊದಲು ಸಾಧಾರಣ ಪತ್ರಕರ್ತನ ಹುದ್ದೆ. ನಂತರ ಸ್ವಸಾಮರ್ಥ್ಯ, ಪಾಂಡಿತ್ಯಗಳಿಂದ ಏರಿದ ಈ ಯುವಕ ಒಂದೊಂದೇ ಮೆಟ್ಟಿಲು. "ಕಿಷ್ಕಿಂಧಾಕಾಂಡ" ಅಂಕಣ ಜನಪ್ರಿಯವಾಯಿತು. ಪತ್ರಿಕೆಯ ಸಾಪ್ತಾಹಿಕ ಪುರವಣಿಯ ಜವಾಬ್ದಾರಿ ಹೆಗಲೇರಿತು. ಅದನ್ನು ಸಮರ್ಥವಾಗಿ ನಿರ್ವಹಿಸಿದರು, ನಿಭಾಯಿಸಿದರು, ಹೊಸತೊಂದು ಹೊಳಪು ಕೊಟ್ಟರು ಬನ್ನಂಜೆ - ಒಂದೆರಡಲ್ಲ; ಮೂವತ್ತು ವರ್ಷ! ಆ ಮೂರು ದಶಕಗಳುದ್ದಕ್ಕೆ ಬನ್ನಂಜೆಯವರು ಬರೆದು ಪ್ರಕಟಿಸಿದ ಪುಸ್ತಕ ವಿಮರ್ಶೆಗಳೇ ಬರೋಬ್ಬರಿ 750ರಷ್ಟು! ಅದರ ಹತ್ತರಲ್ಲೊಂದಷ್ಟನ್ನೂ ಬರೆಯದ, ಓದದ, ಸಾಧಿಸದ ಪಂಡಿತಪುತ್ರರೆಲ್ಲ ಕವಿ, ಸಾಹಿತಿ, ವಿಮರ್ಶಕರ ಬಿರುದುಬಾವಲಿ ಧರಿಸಿ ಕನ್ನಡ ಸಾಹಿತ್ಯ ಲೋಕದಲ್ಲಿ ಠಳಾಯಿಸಿಬಿಟ್ಟರು!

ಬನ್ನಂಜೆಯವರು ತನ್ನ ಇಪ್ಪತ್ತಾರನೆಯ ವಯಸ್ಸಿನಲ್ಲಿ ಪ್ರಕಟಿಸಿದ್ದು ಬಾಣಭಟ್ಟನ ಕಾದಂಬರಿಯ ಕನ್ನಡರೂಪ. ಕೆಲವೆಡೆ ಎರಡೆರಡೆ ಶಬ್ದಗಳಷ್ಟು ಸಂಕ್ಷಿಪ್ತ. ಇನ್ನು ಕೆಲವೆಡೆ ಆರೇಳು ಸಾಲಿಗೂ ಪೂರ್ಣವಿರಾಮ ಸಿಕ್ಕದಷ್ಟು ದೀರ್ಘ. ಕನ್ನಡದ ಬಾಣನೆಂಬಷ್ಟು ಪ್ರಗಲ್ಭತೆ, ವಾಕ್ಯಸೌಂದರ್ಯ, ನಿರಾಡಂಭರ ಸರಳತೆ, ಅನುಪಮ ಅರ್ಥವಿನ್ಯಾಸ. ಬಿಡಿಸಿದಷ್ಟು ತೆರೆದುಕೊಳ್ಳುವ ಅರ್ಥ - ಉಪನಿಷತ್ತುಗಳ ಮಾತಿನಂತೆ. "ಕಾದಂಬರಿ" ವಿದ್ವಜ್ಜನರ ಪ್ರಶಂಸೆಗೆ ಭಾಜನವಾಯಿತು. ಅಲ್ಲಿಂದ ಮುಂದಕ್ಕೆ ಬನ್ನಂಜೆ ತಿರುಗಿನೋಡಿದ್ದೇ ಇಲ್ಲ. ಸಂಸ್ಕೃತದ ಹಲವು ನಾಟಕ-ಕಾವ್ಯಕೃತಿಗಳು ಕನ್ನಡಕ್ಕೆ, ಈ ನೆಲಸಂಸ್ಕೃತಿಯದೇ ಕೃತಿಗಳೋ ಎಂಬಷ್ಟು ಸಹಜಗುಣ ಮೈವೆತ್ತು ಅನುವಾದಗೊಂಡವು. ಕಾಳಿದಾಸನ ಅಭಿಜ್ಞಾನಶಾಕುಂತಲ - ನೆನಪಾದಳು ಶಕುಂತಲೆ, ಭವಭೂತಿಯ ಉತ್ತರರಾಮಚರಿತ - ಮತ್ತೆ ರಾಮನ ಕತೆ, ಶೂದ್ರಕನ ಮೃಚ್ಛಕಟಿಕ - ಆವೆಯ ಮಣ್ಣಿನ ಆಟದ ಬಂಡಿ, ದಂಡಿಯ ದಶಕುಮಾರ ಚರಿತ - ಹತ್ತು ಮಕ್ಕಳ ಕತೆ, ಭಗವದ್ಗೀತೆ - ಭಗವಂತನ ನಲ್ನುಡಿ, ವಿಷ್ಣುಸಹಸ್ರನಾಮ - ದೇವರ ಸಾವಿರ ಹೆಸರಿನ ಹಾಡು... ಶೀರ್ಷಿಕೆಯಲ್ಲೇ ಇಂಥ ಜೀವಂತಿಕೆ! ಒಳಗಿನ ಹೂರಣ ಕೇಳಬೇಕೆ! ಸಂಸ್ಕೃತದ ಕಾವ್ಯ-ನಾಟಕಗಳೆಲ್ಲವೂ ಹಳೆಗನ್ನಡದ, ಬಹುತೇಕ ರಂಗಪ್ರಯೋಗಕ್ಕೊಗ್ಗದ ಮಾದರಿಯಲ್ಲಿ ಬರುತ್ತಿದ್ದಾಗ ಬನ್ನಂಜೆಯವರ ಅನುವಾದಗಳು, ಕತ್ತಲೆ ಕವಿದ ನೆಲಮಾಳಿಗೆಗೆ ಬೆಳಕಿನ ಕಿಂಡಿ ಹೊದೆಸಿದಂತಾಯಿತು. "ಮಣ್ಣಿನ ಬಂಡಿ" ನಾಟಕದ ಸೂತ್ರಧಾರನ ಬಾಯಲ್ಲಿ ಅವರು ಕುಂದಗನ್ನಡವನ್ನೂ ಆಡಿಸಿದ್ದಾರೆಂಬುದು ವಿಶೇಷ.

ವೇದದೃಷ್ಟಾರರಿಗೆಂತೋ ಅಂತೆಯೇ ಬನ್ನಂಜೆಯವರಿಗೆ ಪದಗಳ ಬಗ್ಗೆ ಪ್ರೀತಿ. ಒಂದೊಂದು ಪದವನ್ನೂ ಅವರು ಸಾಗರದಲ್ಲಿ ಮುಳುಗಿ ಎತ್ತಿತಂದ ಮುತ್ತಿನ ಕಾಳಜಿಯಿಂದ ಬಿಡಿಸಿ ಅದರ ಅರ್ಥವಿಸ್ತಾರಗಳನ್ನು ಓದುಗರ, ಕೇಳುಗರ ಮುಂದೆ ಹರಡುತ್ತಿದ್ದರು. "ಎಲ್ಲ ಸಂಖ್ಯೆಗಳೂ ರಾಮಾನುಜನ್ ಗೆಳೆಯರಾಗಿದ್ದವು" ಎಂಬ ಮಾತಿದೆ. ಅದನ್ನೇ ಶಬ್ದಲೋಕಕ್ಕೆ ಅನ್ವಯಿಸುವುದಾದರೆ ಎಲ್ಲ ಶಬ್ದಗಳೂ ಬನ್ನಂಜೆಯವರ ಜ್ಞಾತಿಗಳೇ ಆಗಿದ್ದವೆನ್ನಬಹುದು. ಅವರ ಉಪನ್ಯಾಸ ಹಳಿಯ ಮೇಲೋಡಿದ ರೈಲಿನಂತಲ್ಲ; ಮೃಗಯಾವಿನೋದಕ್ಕಾಗಿ ಹೊರಟ ರಾಜನ ಸವಾರಿಯಂತೆ. ಅವರು ಸಾಹಿತ್ಯದ ಗೊಂಡಾರಣ್ಯವನ್ನು ಹೊಗುತ್ತಾರೆ; ಅಲ್ಲಿ ಅವರಿಗೆ ಬೃಹದ್ವೃಕ್ಷಗಳು, ಗಿಡಬಳ್ಳಿ ಪೊದೆಹೊದರುಗಳು, ನೀರಿನ ಝರಿ-ತೊರೆ-ನದಿಗಳು, ಬಯಲು, ಗುಡ್ಡ-ದಿಬ್ಬ-ಕಣಿವೆಗಳು ಎಲ್ಲವೂ ಸಿಗುತ್ತವೆ. ಅವನ್ನೆಲ್ಲ ಇದೇ ಮೊದಲ ಬಾರಿಗೆ ಕಾಣುತ್ತಿದ್ದೇನೋ ಎಂಬಂತೆ ಅಚ್ಚರಿಯ ಕಣ್ಣುಗಳಿಂದ ನೋಡುತ್ತ, ತೋರಿಸುತ್ತ, ವಿವರಿಸುತ್ತ ಅವರು ಆ ಎಲ್ಲ ಹೊಕ್ಕುಬರೆ ದಾರಿಗಳಲ್ಲಿ ಹೋಗಿಬಂದು ಹೊಸದೊಂದು ಜಗತ್ತನ್ನೇ ಸೃಷ್ಟಿಸುತ್ತಾರೆ. ಬೇಟೆಯೆಂಬುದು ಕೇವಲ ನೆಪವಾಗಿ, ಅಥವಾ ಕೆಲವೊಮ್ಮೆ ನಗಣ್ಯವಾಗಿ, ಈ ವಿಹಾರ-ಸಂಚಾರಗಳೇ ಮುಖ್ಯಭೂಮಿಕೆಯನ್ನು ಆವರಿಸಿಕೊಳ್ಳುತ್ತವೆ. ಅವರ ಮಾತುಗಳಲ್ಲಿ ಮಾಧ್ವಮತ-ಮಠಗಳ ವಿಚಾರಗಳೆಂತೋ ಹಾಗೆಯೇ ಸರ್ ಜಾನ್ ವುಡ್‍ರಾಫ್, ಫ್ರಿತ್ಸೋ ಕಾಪ್ರಾ, ಅಲೆಕ್ಸಿಸ್ ಕ್ಯಾರಲ್‍ರಂಥ ವಿದೇಶೀ ವಿದ್ವಾಂಸರೂ ಲೀಲಾಜಾಲವಾಗಿ ಬಂದುಹೋಗುತ್ತಿದ್ದರೆಂಬುದು ವಿಶೇಷ. ಜಯತಿ ಪರಾಶರ ಸೂನುಃ ಸತ್ಯವತೀಹೃದಯನಂದನೋ ವ್ಯಾಸಃ | ಯಸ್ಯಾsಸ್ಯಕಮಲಗಲಿತಂ ವಾಙ್ಮಯಮ್ ಅಮೃತಂ ಜಗತ್ಪಿಬತಿ || ಎಂದು ವ್ಯಾಸರನ್ನು ಸ್ಮರಿಸಿಕೊಂಡು ಅವರು ಪ್ರಾರಂಭಿಸುತ್ತಿದ್ದ ಆ ಪ್ರತಿ ಪ್ರವಚನದಲ್ಲೂ ಆಯ್ದು ಜೋಳಿಗೆಗಿಳಿಸಿಕೊಳ್ಳುವ ಹತ್ತಾರು ಸಂಗತಿಗಳು ಇದ್ದೇ ಇರುತ್ತಿದ್ದವು. ಅಂಥ ಸುಮಾರು 30,000 ಗಂಟೆಗಳಷ್ಟು ಉಪನ್ಯಾಸವನ್ನು ಅವರು ಜಗತ್ತಿನ ಕಿವಿಗಳಿಗೆ ಇಳಿಸಿಹೋಗಿದ್ದಾರೆಂಬುದು ಗಿನ್ನೆಸ್ ಪುಸ್ತಕದಲ್ಲಿ ಸೇರಬೇಕಿರುವ ದಾಖಲೆಯೂ ಹೌದು. 

ಬನ್ನಂಜೆ ಅಧ್ಯಯನದ ವಿಷಯದಲ್ಲಿ ಕರ್ಮಠದಲ್ಲಿ ಕರ್ಮಠರು; ಆದರೆ ಕಂಡುಂಡದ್ದನ್ನು ಅರ್ಥೈಸಿಕೊಂಡು ಜಗತ್ತಿಗೆ ಕೊಡುವುದರಲ್ಲಿ ಆಧುನಿಕರಲ್ಲಿ ಆಧುನಿಕರು. ಮನಸ್ಸಿಗೆ ಬಂದದ್ದನ್ನೆಲ್ಲ ಅಥವಾ ಆ ಕ್ಷಣಕ್ಕೆ ಲಹರಿಯಿದ್ದುದನ್ನೆಲ್ಲ ಫಿಲಾಸಫಿ ಎಂಬ ಹೆಸರಿನಲ್ಲಿ ಶ್ರೋತೃಗಳಿಗೆ ದಾಟಿಸುವ ಆಧುನಿಕ ಗುರುಗಳಿಗಿಂತ ಬನ್ನಂಜೆ ಭಿನ್ನ. ಅವರು ಅದೇನೇ ಮಾತಾಡಲಿ, ಅದಕ್ಕೊಂದು ಶಾಸ್ತ್ರದ ಹಿನ್ನೆಲೆ, ಪುರಾವೆ, ಪೂರಕದಾಖಲೆಗಳು ಇದ್ದೇ ಇರುತ್ತಿದ್ದವು. ಇದನ್ನೇ ಬನ್ನಂಜೆಯವರ ಅಹಂಕಾರ, ಧಾರ್ಷ್ಟ್ಯ ಎಂದೆಲ್ಲ ಅರ್ಥೈಸಿದವರೂ ಇದ್ದಾರೆ. ಆದರೆ ಪಾಂಡಿತ್ಯ ಮತ್ತು ಅಪಾರ ಅಧ್ಯಯನದ ಬಲದಿಂದ ಬರುವ ಈ ಜ್ಞಾನದ ಧಾಡಸಿತನ (ಅಡಾಸಿಟಿ) ಬನ್ನಂಜೆಯವರಿಗೆ ಜನ್ಮಜಾತ. ಒಂದು ಉದಾಹರಣೆ: 1958ರಲ್ಲಿ ಅವರಿಗೆ 22ರ ಹರೆಯ. ಆನಂದತೀರ್ಥರು (ಅರ್ಥಾತ್ ಆಚಾರ್ಯ ಮಧ್ವರು) ಬರೆದ ತಂತ್ರಸಾರ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ, ಟೀಕೆ-ಟಿಪ್ಪಣಿ-ತಾತ್ಪರ್ಯಗಳನ್ನು ಕೊಡುವ ದೊಡ್ಡ ಹೊಣೆಗಾರಿಕೆಯನ್ನು ಬನ್ನಂಜೆ ಏಕಮೇವರಾಗಿ ತನ್ನ ಕೃಶ ಹೆಗಲುಗಳ ಮೇಲೆ ಹೊತ್ತರು. ಕೃತಿಯನ್ನು ಪೂರ್ಣಗೊಳಿಸಿ ಪೇಜಾವರ ಶ್ರೀ ವಿಶ್ವೇಶತೀರ್ಥರ ಅವಗಾಹನೆಗಿಟ್ಟು ಮುನ್ನುಡಿ ಬಯಸಿದರು. ಆಗ ವಿಶ್ವೇಶತೀರ್ಥರು ತಮ್ಮ ಮುನ್ನುಡಿಯಲ್ಲಿ "ಉಪಾಸನೆಯ ವಿಚಾರವೊಂದಕ್ಕೆ ಸಂಬಂಧಪಟ್ಟಂತೆ ಆಚಾರ್ಯಮಧ್ವರ ದೃಷ್ಟಿಗೆ ವಿರುದ್ಧವಾದ ಒಂದು ವಿಚಾರವನ್ನು ಬನ್ನಂಜೆ ಸಮ್ಮತಿಸಿದ್ದಾರೆ" ಎಂದು ಬರೆದುಬಿಟ್ಟರು. ಆದರೆ ಬನ್ನಂಜೆ, ಮತ್ತೆ ಮಧ್ವರ ಬೇರೊಂದು ಕೃತಿಯಲ್ಲಿ ಬಂದಿರುವ ಅಂಶವನ್ನು ಮುಂದಿಟ್ಟುಕೊಂಡು ತಾನು ಬರೆದಿರುವುದಕ್ಕೆ ಶಾಸ್ತ್ರಸಮ್ಮತಿ ಇದೆ ಎಂದು ಅದೇ ಕೃತಿಯಲ್ಲಿ ಉತ್ತರರೂಪದ ಟಿಪ್ಪಣಿ ಕೊಟ್ಟರು! 22ರ ಎಳವೆಯಲ್ಲೇ ಅವರ ಅಧ್ಯಯನದ ಆಳ-ವಿಸ್ತಾರಗಳು ಹೇಗಿದ್ದವೆಂದರೆ ತಂತ್ರಸಾರ ಕೃತಿಗೆ ಬನ್ನಂಜೆ ಪೀಠಿಕೆಯಾಗಿ 45 ಪುಟಗಳಷ್ಟಾಗುವ ದೀರ್ಘ, ಘನಿಷ್ಠ ಪ್ರಸ್ತಾವನೆಯನ್ನೂ ಬರೆದಿದ್ದಾರೆ. ಹೀಗೆ ತನ್ನ ಪ್ರತಿ ಮಾತಿಗೂ ತನ್ನ ಅಧ್ಯಯನದ ಸಂಗತಿಗಳ ಒಳಗಿಂದಲೇ ಪುರಾವೆಗಳನ್ನು ಹುಡುಕುವ ಬಗೆ ಇದೆಯಲ್ಲ, ಅದು, ಅತ್ಯಂತ ಶುದ್ಧ ಭಾರತೀಯ ಚಿಂತನಕ್ರಮವೇ ಆಗಿದೆ.

ಬನ್ನಂಜೆ ಆ ಕಾಲಕ್ಕೇ ಆಧುನಿಕರಾಗಿದ್ದರೆಂಬುದಕ್ಕೆ ಇನ್ನೊಂದು ದೃಷ್ಟಾಂತವೂ ನಮಗೆ ಅವರ ಯೌವನದ ದಿನಗಳಲ್ಲೇ ಸಿಗುತ್ತದೆ. 1950ರ ದಶಕ. ಪಾವಂಜೆ ಗುರುರಾಜರಾಯರ ಶ್ರೀಮನ್ಮಧ್ವಸಿದ್ಧಾಂತ ಗ್ರಂಥಾಲಯ ಆ ಕಾಲದಲ್ಲಿ ಭಜನೆ, ಸ್ತೋತ್ರ, ಮಂತ್ರಗಳ ಕೃತಿಗಳನ್ನು ಅಚ್ಚುಹಾಕಿ ಮಾರಾಟ ಮಾಡುತ್ತಿತ್ತು. ಗುರುವಿನಿಂದ ಶಿಷ್ಯನಿಗೆ ದೀಕ್ಷೆಮುಖೇನವಷ್ಟೇ ಹೋಗಬೇಕಾದ ಮಂತ್ರಗಳೆಲ್ಲ ಹೀಗೆ ಪುಸ್ತಕಗಳಲ್ಲಿ ಪ್ರಕಟವಾಗಿ ಮಾರುಕಟ್ಟೆಯಲ್ಲಿ ಬಿಕರಿಯಾಗಿ ಅಪಾತ್ರರ ಕೈಗಳಿಗೆಲ್ಲ ಹೋಗಿ ಮೈಲಿಗೆಯಾಯಿತು ಎಂದು ಯಾರೋ ಗುಲ್ಲೆಬ್ಬಿಸಿದರಂತೆ. ಆಗ ಪ್ರಕಾಶಕರ ಪರವಾಗಿ ನಿಂತು ಗಟ್ಟಿದನಿ ಎತ್ತಿದವರು ಇಬ್ಬರು - ಅದೇ ಪೇಜಾವರ ಶ್ರೀಗಳು ಮತ್ತು ಬನ್ನಂಜೆ! ವಿಶ್ವೇಶತೀರ್ಥರ ಜೊತೆ ಬನ್ನಂಜೆಯವರದು ಪ್ರೀತಿ-ಹುಸಿಕೋಪಗಳ ಸಂಬಂಧ. ವಿಶ್ವೇಶರ ವಿದ್ಯಾಗುರುಗಳಾದ ವಿದ್ಯಾಮಾನ್ಯರೇ ಬನ್ನಂಜೆಯವರಿಗೂ ಗುರುಗಳಾಗಿ ಒದಗಿಬಂದವರು (ಇನ್ನೊಬ್ಬ ಗುರುಗಳು ವಿದ್ಯಾಸಮುದ್ರತೀರ್ಥರು). ಹಾಗಾಗಿ ವಿಶ್ವೇಶತೀರ್ಥರ ಜೊತೆ ಬನ್ನಂಜೆಯವರಿಗೆ ಶಾಸ್ತ್ರಚರ್ಚೆ, ವಾದ-ಸಂವಾದಗಳನ್ನು ಮಾಡುವ ಸ್ವಾತಂತ್ರ್ಯ ಮತ್ತು ಸಲಿಗೆ ಪ್ರಾರಂಭದಿಂದಲೇ ಇತ್ತು. ಅವರಿಬ್ಬರ ನಡುವೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಮೂಡುತ್ತಿದ್ದರೂ ಅವೆಲ್ಲವೂ ಆಯಾ ಚರ್ಚೆಗಳ ಶಾಸ್ತ್ರವಿಷಯಗಳಿಗಷ್ಟೇ ಸೀಮಿತವಾಗಿದ್ದವೇ ಹೊರತು ವೈಯಕ್ತಿಕ ನೆಲೆಗೆ ಎಂದೂ ಇಳಿದದ್ದೇ ಇಲ್ಲ. ಬನ್ನಂಜೆಯವರು ಅದೆಷ್ಟೋ ಸಲ ತನ್ನ ಸ್ವಚ್ಛಂದ ಮನೋವೃತ್ತಿಯಿಂದಾಗಿ ಸಾಂಪ್ರದಾಯಿಕ ಕಣ್ಣುಗಳನ್ನು ಕೆಂಪಗಾಗಿಸಿದ್ದಿದೆ; ಅನ್ಯಥಾ ಅಪಾರ್ಥಕ್ಕೆ ಎಡೆಮಾಡಿಕೊಟ್ಟದ್ದೂ ಇದೆ. ಬನ್ನಂಜೆಯವರ ಯಾವುದೋ ಮಾತನ್ನು ಹಿನ್ನೆಲೆ-ಮುನ್ನೆಲೆಗಳಿಂದ ಪ್ರತ್ಯೇಕಿಸಿ ಅನ್ಯಾರ್ಥ/ಅಪಾರ್ಥಗಳು ಬರುವಂತೆ ಎಡಿಟ್ ಮಾಡಿ ಕೆಲವು ಕಿಡಿಗೇಡಿಗಳು ಜಾಲತಾಣಗಳಲ್ಲಿ ಹಂಚಿಕೊಂಡು ಅವರ ವ್ಯಕ್ತಿತ್ವಕ್ಕೆ ಮಸಿಬಳಿಯುವ ಕೃತ್ಯವೆಸಗಿದ್ದೂ ಇದೆ. ಅಂಥ ವಿಚಾರಗಳಿಗೆಲ್ಲ ಬನ್ನಂಜೆಯವರು ಹೇಳುತ್ತಿದ್ದ ಮಾತೊಂದೆ: "ಬನ್ನಂಜೆ ಇನ್ನೂ ಬದುಕಿದ್ದೇನಲ್ಲ? ಭಿನ್ನಾಭಿಪ್ರಾಯ ಇರುವವರು ಎದುರೆದುರು ಬಂದು ಚರ್ಚೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಿ. ಯಾರೋ ಎಲ್ಲೋ ಕಲ್ಲೆಸೆದರೆಂದು ನಾನೇಕೆ ಪ್ರತಿಕ್ರಿಯೆ ಕೊಡುತ್ತಕೂಡಲಿ?" ಸತ್ಯನಿಷ್ಠುರತೆಯ ವಿಷಯಕ್ಕೆ ಬಂದರೆ ಬನ್ನಂಜೆಯವರಿಗೆ ಸ್ವಸಮುದಾಯದೊಳಗೇ ವಿರೋಧಿಗಳು ಹೆಚ್ಚಿದ್ದರೆಂಬುದು ಹೊರಗಿನ ವಿರೋಧಿಗಳಿಗೆ ಗೊತ್ತಿಲ್ಲದಿರಬಹುದು!

ವಿದ್ವದ್ವಲಯಕ್ಕೆ ಬನ್ನಂಜೆಯವರು ಕೊಟ್ಟ ಅಮೂಲ್ಯ ರತ್ನಗಳೆಂದರೆ ಹೃಷೀಕೇಶತೀರ್ಥರ ಕೈಬರಹದಲ್ಲಿದ್ದ ಸರ್ವಮೂಲಗ್ರಂಥಗಳನ್ನು ತಪ್ಪಿಗೆ ಎಡೆಯಿಲ್ಲದಂತೆ ಟೀಕೆ-ಟಿಪ್ಪಣಿಯ ಜೊತೆಗೆ ಮುದ್ರಿಸಿದ್ದು. ಆಚಾರ್ಯ ಮಧ್ವರ ಮಹಾಭಾರತ ತಾತ್ಪರ್ಯ ನಿರ್ಣಯವೆಂಬ ಉದ್ಗ್ರಂಥಕ್ಕೆ ಅಷ್ಟೇ ಬಲಯುತವಾದ ವ್ಯಾಖ್ಯಾನಗಳನ್ನು ಬರೆದದ್ದು. ಉಪನಿಷತ್ತುಗಳಿಗೆ ಭಾಷ್ಯ, ಪುರುಷಸೂಕ್ತ, ಶ್ರೀಸೂಕ್ತದಂಥ ಹಲವು ವೈದಿಕ ಸಾಹಿತ್ಯಗಳಿಗೆ ವಿದ್ವತ್ಪೂರ್ಣ ವಿವರಣೆ, ಮಧ್ವಾಚಾರ್ಯರ ಬಹುತೇಕ ಎಲ್ಲ ಕೃತಿಗಳಿಗೂ ವಿವರಣೆ, ಟಿಪ್ಪಣಿ, ಅನುವಾದ, ಮಧ್ವರ ಜೀವನ-ಸಾಧನೆಗಳ ಕುರಿತು ಕೃತಿ, ಹರಿದಾಸ ಸಾಹಿತ್ಯದ ಬಗ್ಗೆ ಹಲವು ಚಿಕ್ಕ-ದೊಡ್ಡ ಗ್ರಂಥಗಳು, ಆರ್ಷಸಾಹಿತ್ಯದ ಹಿನ್ನೆಲೆಯಲ್ಲಿ ಪುರಂದರದಾಸರ ಸಾಹಿತ್ಯದ ವಿವೇಚನೆ.. ಇವಿಷ್ಟೇ ಅಲ್ಲದೆ ಭಾರತೀಯ ಕಾಮಶಾಸ್ತ್ರದ ಕುರಿತು ಕೂಡ ಕೃತಿಗಳನ್ನು ಬರೆದು ಉಪಕರಿಸಿದವರು ಬನ್ನಂಜೆ ಗೋವಿಂದಾಚಾರ್ಯರು. ಸ್ವಯಂ ಕವಿಹೃದಯದ ಬನ್ನಂಜೆಯವರು ಪಲಿಮಾರು ಮಠದ ರಘುವಲ್ಲಭ ತೀರ್ಥರು (ಕಾವ್ಯನಾಮ ಕುಮುದಾತನಯ) ಮತ್ತು ಕೂರಾಡಿ ಸೀತಾರಾಮ ಅಡಿಗರ ಜೊತೆಗೂಡಿ ಮುಕ್ಕಣ್ಣದರ್ಶನ ಎಂಬ ಕವನಸಂಕಲನವನ್ನು ತನ್ನ ಹದಿಹರೆಯದ ಬಿಸಿರಕ್ತದ ದಿನಗಳಲ್ಲೇ ತಂದದ್ದುಂಟು (ಆಗವರಿಗೆ 25). ಬೇಂದ್ರೆ, ಪಾವೆಂ, ಕುಶಿ ಹರಿದಾಸ ಭಟ್ಟ, ಕಾರಂತ, ಅಮೃತ ಸೋಮೇಶ್ವರ ಮೊದಲಾದವರೆಲ್ಲ ಬನ್ನಂಜೆಯವರ ಸ್ನೇಹವಲಯದಲ್ಲಿದ್ದವರು. ಎಷ್ಟೊಂದು ತನ್ಮಯತೆಯಿಂದ ಬನ್ನಂಜೆಯವರು ಶಾಸ್ತ್ರಾಧ್ಯಯನ, ಪಾಠ-ಪ್ರವಚನ, ಶಾಸ್ತ್ರಗ್ರಂಥ ರಚನ-ಪ್ರಕಟನಗಳಲ್ಲಿ ತೊಡಗಿಕೊಳ್ಳುತ್ತಿದ್ದರೋ ಅಷ್ಟೇ ಶ್ರದ್ಧೆಯಿಂದ ಉಡುಪಿಯ ತಿಂಗಳೆಯಲ್ಲಿ ಐವತ್ತು ವರ್ಷಕ್ಕೂ ಹೆಚ್ಚು ಕಾಲ ಸಾಹಿತ್ಯ ಸಮ್ಮೇಳನವನ್ನು ನಡೆಸಿಕೊಂಡು ಬಂದರೆಂಬುದು ಬಹುಶಃ ಹೆಚ್ಚಿನವರಿಗೆ ಗೊತ್ತಿಲ್ಲ. ಮಾಧ್ವಮತಾನುಯಾಯಿ ಬನ್ನಂಜೆಯವರು ತಮ್ಮ "ವೇದಗಳ ಸಂದೇಶ" ಎಂಬ ಬೃಹತ್ ಸಾಹಿತ್ಯದಲ್ಲಿ ಮಧ್ವರ ಟೀಕೆಯ ಜೊತೆಗೇ ಶಂಕರ ಮತ್ತು ರಾಮಾನುಜರ ಟೀಕೆಯನ್ನೂ ಮುಂದಿಟ್ಟುಕೊಂಡು ವೇದಗಳ ಅರ್ಥಜಿಜ್ಞಾಸೆ ನಡೆಸಿದ್ದಾರೆ; ಜೊತೆಗೆ ಜಿ.ವಿ. ಅಯ್ಯರರು ಆಚಾರ್ಯತ್ರಯರ ಮೇಲೆ ನಿರ್ಮಿಸಿದ ಮೂರು ಸಂಸ್ಕೃತ ಸಿನೆಮಗಳಿಗೂ ಸಂಭಾಷಣೆ ಬರೆದಿದ್ದಾರೆ - ಎಂಬುದೂ ಬಹಳ ಮಂದಿಗೆ ತಿಳಿದಿಲ್ಲದ ಸತ್ಯ. 

ಒಂದು ವರ್ಷದ ಅಂತರದಲ್ಲಿ ಉಡುಪಿ ಶ್ರೀ ವಿಶ್ವೇಶ ತೀರ್ಥರನ್ನು, ಸಾಹಿತಿ ಸಜ್ಜನ ಕಲಾವಿದ ಉದ್ಯಾವರ ಮಾಧವಾಚಾರ್ಯರನ್ನು ಮತ್ತು ಇದೀಗ ವಿದ್ಯಾವಾಚಸ್ಪತಿ ಸವ್ಯಸಾಚಿ ಬಹುಶ್ರುತ ವಿದ್ವನ್ಮಣಿ ಬನ್ನಂಜೆ ಗೋವಿಂದಾಚಾರ್ಯರನ್ನು ಕಳೆದುಕೊಂಡಿದೆ. ಇಂಥ ಘಟಾನುಘಟಿಗಳ ಅಗಲಿಕೆ, ಒಂದು ಬಗೆಯಲ್ಲಿ ಪುರದ ಪುಣ್ಯವೆ ಪುರುಷರೂಪದಿಂದ ಹೋದಂತಾಗಿದೆ.

✍🏻 ರೋಹಿತ ಚಕ್ರತೀರ್ಥ

******


ಗುರುಗಳಾದ ಬನ್ನಂಜೆ ಗೋವಿಂದಾಚಾರ್ಯರ‌  ಪುಸ್ತಕಗಳು


ಕನ್ನಡ ಪುಸ್ತಕಗಳು

1. ಅಂಕೆಯಲ್ಲಿ  ಆಧ್ಯಾತ್ಮ , 2. ಆಚಾರ್ಯ ಮಧ್ವ, 3. ಆನಂದ ತೀರ್ಥರ ಭಕ್ತಿ ಗೀತೆಗಳು-ಕನ್ನಡಾನುವಾದ, 4. ಆವೆಯ ಮಣ್ಣಿನ ಆಟದ ಬಂಡಿ, 5. ಇನ್ನಷ್ಟು ಹೇಳದೇ ಉಳಿದದ್ದು, 6. ಒಂದು ಎರಡಲ್ಲ ಎರಡು ಒಂದಲ್ಲ, 7. ಋತುಗಳ ಹೆಣಿಗೆ, 8. ಕನಕೋಪನಿಷತ್ತು, 9. ಕಿಷ್ಕಿಂಧಾ ಕಾಂಡ, 10. ಕೃಷ್ಣನ ಉಡುಪಿ, 11. ಕೃಷ್ಣನೆಂಬ ಸೊದೆಯ ಕಡಲು, 12. ಕೃಷ್ಣ ಮಾಲಾ ಧ್ಯಾನ ಮಾಲಾ, 13. ಜಯಂತಿ ಕಲ್ಪ, 14. ತಲವಕಾರೋಪನಿಷತ್, 15. ತಂತ್ರಸಾರ - ಸಂಗ್ರಹ, 16. ಧೀರಸನ್ಯಾಸಿ ಆನಂದತೀರ್ಥರು-ಪುಟಾಣಿಗಳ ಸಂಪುಟ, 17. ನಾಕು ಹಾಡುಗಳು, 18. ನೆನಪಾದಳು ಶಕುಂತಲೆ, 19. ಪರಾಶರ ಕಂಡ ಪರತತ್ವ, 20. ಪಂಚ ಸೂತ್ರಗಳು, 21. ಪುರಂದರೋಪನಿಷತ್, 22. ಪುರುಷ ಸೂಕ್ತ ಶ್ರೀ ಸೂಕ್ತ, 23 ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ, 24. ಪ್ರಾಣ ಸೂತ್ರಗಳು, 25. ಬನ್ನಂಜೆ ಬರಹಗಳು- 1 2 3 4 , 26 ಬಾಣಭಟ್ಟನ ಕಾದಂಬರಿ, 27. ಭಗವದ್ಗೀತೆ ಭಾಗ-1, 2,3,4,5,6, 28. ಭಗವಂತನ ನಲ್ನುಡಿ, 29 ಭೀಮಸೇನ: ವ್ಯಾಸರು ಕಂಡಂತೆ, 30 ಮತ್ತೆ ರಾಮನ ಕಥೆ, 31 ಮಧ್ವವಿಜಯ, 32 ಮಹಾಭಾರತ ತಾತ್ಪರ್ಯ ನಿರ್ಣಯ-ಮಹಾಭಾರತ ತಾತ್ಪರ್ಯ (ಶ್ಲೋಕ ಮಾತ್ರಾ), 33 ಮಹಾಶ್ವೇತೆ, 34 ಮುಗಿಲ ಮಾತು, 35 ಮುಂಜಾನೆಯಿಂದ ಸಂಜೆಯತನಕ, 36 ಮಂಗಲಾಷ್ಟಕಮ್, 37 ಯಾಜ್ಞೀಯ  ಮಂತ್ರೋಪನಿಷದ್, 38 ವಾಲ್ಮೀಕಿ ಕಂಡ ರಾಮಾಯಣ (ಬಾಲಕಾಂಡ), 39 ವಿಷ್ಣು ಸಹಸ್ರನಾಮ ಸ್ತೋತ್ರ, 40 ವಿಷ್ಣು ಸ್ತುತಿ-ನಖ ಸ್ತುತಿ-ವಾಯುಸ್ತುತಿ, 41 ಶಿವ ಸ್ತುತಿ-ನರಸಿಂಹ ಸ್ತುತಿ, 42 ಸಾರಸ್ವತ ಸಂಪತ್ತು, 43 ಸಂಗ್ರಹ ಭಾಗವತ, 44 ಸಂಗ್ರಹ ರಾಮಾಯಣ, 45 ಹದಿನಾಕು ಹಾಡುಗಳು, 46 ಹೇಳದೆ ಉಳಿದದ್ದು, 47 ಪ್ರಯೋಗಶೀಲ ಬೇಂದ್ರೆ , 49 ರಾಮಾಚಾರ್ಯರ ಗೀತಾ, 50 ರೂಖಿ ಮೇಶ್ಕಿಟಾ ಗೆ ಉತ್ತರ.


ಸಂಸ್ಕೃತ ಪುಸ್ತಕಗಳು :

1. ಸಮಗ್ರ ಹೃಷಿಕೇಶ ತೀರ್ಥರ ಪಾಠ (ಸರ್ವಮೂಲ), 2. ಉಪನಿಷತ್ ಚಂದ್ರಿಕಾ-೧, 3. ಕರ್ಮಸಿದ್ಧಾಂತಃ, 4. ನ್ಯಾಯಾಮೃತಕೂಲ್ಯಾ, 5. ಭಾಗವತ ತಾತ್ಪರ್ಯನಿರ್ಣಯಃ, 6. ಸಂಗ್ರಹ ರಾಮಾಯಣ-೧,೨, 7. ಶತರುದ್ರೀಯಮ್, 8. ಶ್ರೀಮಹಾಭಾರತ ತಾತ್ಪರ್ಯನಿರ್ಣಯಃ-೧,೨, 9. ಶ್ರೀಮಹಾಭಾರತ ತಾತ್ಪರ್ಯಂ, 10. ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ, 11. ಜಯಂತೀ ಕಲ್ಪಃ, 12. ತತ್ವ ಚಂದ್ರಿಕಾ, 13. ತಾಪನಿ ಉಪನಿಷತ್ತು, 14. ಅಸ್ಯವಾಮೀಯಸೂಕ್ತಂ, 15. ಶ್ರೀಮಧ್ವವಿಜಯಃ, 16. ದೂಷಣತ್ರಯಮ್, 17. ಖಂಡಾರ್ಥ ಚಂದ್ರಿಕಾ, 18.ಉಪಾಸನಾ ವಿಧಿ ಅಥವಾ ಧ್ಯಾನಯೋಗ, 19. ಭಾರತೀಯ ಮನಶಾಸ್ತ್ರ ತತ್ವಾನಿ ಮಧ್ವವಿಜಯ ಮೂಲ ಮಾತ್ರ, 20. ಪ್ರಾಣಾಗ್ನಿ ಸೂಕ್ತ


English

1. Ramayana-major roles of minor characters

2. Pearls of bliss

3. Udupi of Lord Krishna

4. Talavakara upanishadh

5. Ancient studies of kamashastra

6. Acharya Madhwa


ಬನ್ನಂಜೆ ಗೋವಿಂದಾಚಾರ್ಯರ ಬಗ್ಗೆ ಪುಸ್ತಕಗಳು:


1. ಬನ್ನಂಜೆ ಗೋವಿಂದಾಚಾರ್ಯರ ಪತ್ರಗಳು-ಹರಿಹರ ಪ್ರಿಯ

2. ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ-ಬೆಳಗೋಡು ರಮೇಶ ಭಟ್

3. ಕೃತಿ ಸಮೀಕ್ಷೆ(ಬ್ರಹ್ಮರಥ-೨)-ತುಶಿಮಮ, ವರ್ಷ: ೨೦೧೫; ಉಡುಪಿ.

4. Bannanje A rishi Revealed

5. ಬನ್ನಂಜೆ ಷಡ್ದರ್ಶನ

*********