Friday, 1 February 2019

vidyatma teertharu prayag 2023 prayag madhwa mutt yati P 02 vaishakha krishna amavasya ವಿದ್ಯಾತ್ಮ ತೀರ್ಥರು



Shri Vidyatma Theertharu (born 1935)

Prayag Madhwa Mutt, Kashi (Varanasi)
Ashrama Guru: Shri Vidyavallabharu

||ಶ್ರೀ ರಾಮ ಶ್ರೀ||

ಉತ್ತರಭಾರತದಲ್ಲಿ ಮಾದ್ವತತ್ವಪ್ರಚಾರ ಆಗಬೇಕೆಂಬ ಮಹದ್ದುದೇಶದಿಂದ ಶ್ರೀಪಲಿಮಾರು ಮಠದ ಹಿರಿಯ ಪೀಠಾಧಿಪತಿಗಳಾದ ನಮ್ಮ ಗುರುಗಳೂ ಆದ ಶ್ರೀಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರು ಉತ್ತರಪ್ರದೇಶದ ಪ್ರಯಗರಾಜ್_ನಲ್ಲಿ "ಶ್ರೀಮಧ್ವಮಠ"  ಸ್ಥಾಪಿಸಿದರು. ಅಲ್ಲಿನ ಪೀಠಾಧಿಪತಿಗಳಾಗಿ ಶ್ರೀವಿದ್ಯಾವಲ್ಲಭ ತೀರ್ಥರನ್ನು ನೇಮಿಸಿದರು.

ಶ್ರೀವಿದ್ಯಾವಲ್ಲಭತೀರ್ಥರ ಕಾಲಾನಂತರ ನಾವು ನಮ್ಮ ಪ್ರಥಮ ಶ್ರೀಕೃಷ್ಣಪೂಜಾ ಪರ್ಯಾಯ ಕಾಲದಲ್ಲಿ 2004_ರ ಜನವರಿ 9ನೇ ತಾರಿಕೀನಂದು ಶ್ರೀವಾದಿರಾಜ ಪಂಚಮುಖಿಯವರಿಗೆ ಸರ್ವಜ್ಞಪೀಠದಲ್ಲಿ ಸಂನ್ಯಾಸಾಶ್ರಮವನ್ನು ನೀಡಿ, 'ಶ್ರೀವಿದ್ಯಾತ್ಮತೀರ್ಥ'ರೆಂದು ನಾಮಕರಣ ಮಾಡಿ, ಅವರನ್ನು ಶ್ರೀಪಲಿಮಾರು ಮಠದ ಶಾಖಾಮಠವಾದ ಪ್ರಯಾಗದ ಶ್ರೀ ಮಧ್ವಮಠಕ್ಕೆ  ಉತ್ತರಾಧಿಕಾರಿಯನ್ನಾಗಿ ನೇಮಿಸಿದೆವು.

ಶ್ರೀವಿದ್ಯಾತ್ಮತೀರ್ಥರು ಉತ್ತರಭಾರತದಲ್ಲಿ ಸಂಚಾರ ಮಾಡುತ್ತಾ, ಸಂಸ್ಕೃತ - ಕನ್ನಡ - ಹಿಂದಿಯಲ್ಲಿ ಪಾಠ-ಪ್ರವಚನ ನಡೆಸುತ್ತಾ, ಭಗವದ್ಗೀತೆ, ಬ್ರಹ್ಮಸೂತ್ರ, ಭಾಗವತ, ಮಹಾಭಾರತ  ಗ್ರಂಥಗಳ ಅನುವಾದವನ್ನು ಹಿಂದಿಯಲ್ಲಿ ಮಾಡಿದರು. ಅಷ್ಟೇ ಅಲ್ಲದೆ ಪ್ರಯಾಗದ ಮಾಘಮೇಳದಲ್ಲಿ ವಿಶೇಷ ಜ್ಞಾನಸತ್ರ ಮತ್ತು ಗೀತಾಜಯಂತಿ ಪರ್ವ ಕಾಲದಲ್ಲಿ ಸಪ್ತಾಹ ಪರ್ಯಂತ ಪ್ರವಚನಗಳನ್ನು ನಡೆಸುತಿದ್ದರು. ಈ ರೀತಿಯಾಗಿ ಪಾಠ-ಪ್ರವಚನ, ಲೇಖನ ಮತ್ತು ಜ್ಞಾನಸತ್ರಗಳ ಮೂಲಕ ಮಾಧ್ವತತ್ವ ವಾಗ್ಮಯದ ವಿಶೇಷ ಸೇವೆಯನ್ನು ನಡೆಸಿದ್ದರು.

ಇಂತಹ ಉತ್ತಮ ವ್ಯಕ್ತಿತ್ವದ ಶ್ರೀವಿದ್ಯಾತ್ಮತೀರ್ಥಶ್ರೀಪಾದರು 92ರ ಇಳಿವಯಸ್ಸಿನಲ್ಲಿ  ಅವರಿಗೆ ಪರಮಾಪ್ತವಾದ ಪ್ರಯಾಗ ಕ್ಷೇತ್ರದಲ್ಲಿಯೇ ಇಂದು (19/05/2023)  ಹರಿಪಾದವನ್ನು ಸೇರಿದರಂದು ತಿಳಿಸಲು ವಿಷಾದಿಸುತ್ತೇವೆ.

ಉತ್ತರ - ದಕ್ಷಿಣ ಭಾರತದಲ್ಲಿ ಅಪಾರ ಶಿಷ್ಯ-ಭಕ್ತ ವರ್ಗವನ್ನು ಹೊಂದ್ದಿದ್ದ ಶ್ರೀಪಾದರ ಆತ್ಮಕ್ಕೆ ಭಗವಂತನು ಶಾಂತಿಯನ್ನು ನೀಡಲಿ ಎಂದು ನಮ್ಮ ಉಪಾಸ್ಯಮೂರ್ತಿ ಶ್ರೀರಾಮ- ಶ್ರೀಕೃಷ್ಣ ಮುಖ್ಯಪ್ರಾಣರಲ್ಲಿ ವಿಶೇಷವಾಗಿ ಪ್ರಾರ್ಥಿಸುತ್ತೇವೆ.

ಇತ್ಯನೇಕ ನಾರಾಯಣ ಸ್ಮರಣೆಗಳು 

ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು
ಶ್ರೀ ಪಲಿಮಾರು ಮಠ, ಉಡುಪಿ.
***


 




No comments:

Post a Comment