Tuesday 1 January 2019

jaya teertharu ಜಯತೀರ್ಥರ ಮೂಲ ವೃಂದಾವನ ಆನೆಗೊಂದಿ ಅಲ್ಲ ಮಳಖೇಡವೇ


*Where is Jayathirtha's moola vrundavana? not in Anegondi, but in Malakheda

(1)
by- ಆಚಾರ್ಯ ನಾಗರಾಜು ಹಾವೇರಿ 
ಗುರು ವಿಜಯ ಪ್ರತಿಷ್ಠಾನ says ಶ್ರೀ ಜಯತೀರ್ಥರ ಮೂಲ ವೃಂದಾವನ " ಆನೆಗೊಂದಿ " ಯಲ್ಲಿದೆ.  Here is how:
ತುಂಗಭದ್ರಾ ತೀರ ವಾಸ ಶ್ರೀ ಜಯತೀರ್ಥ ಗುರುಭೋನಮಃ "
ಶ್ರೀ ವಿಜಯರಾಯರ ನುಡಿಮುತ್ತುಗಳಲ್ಲಿ.......
" ಹರಿದಾಸ ಸಾಹಿತ್ಯ " ಅಂದರೆ " ಶಬಾರ್ಥ ಕೋಶ " ಎಂದು ಅರ್ಥ. ಹರಿದಾಸರು ಸಕಲ ಶಬ್ದವಾಚ್ಯನಾದ ಶ್ರೀ ಹರಿಯನ್ನು ಪ್ರತಿ ಅಕ್ಷರ ಅಕ್ಷರಕ್ಕೂ ಅರ್ಥವನ್ನು ಹೇಳಿ ಸ್ತೋತ್ರ ಮಾಡಿದ್ದಾರೆ.
ಉದಾಹರಣೆಗೆ ....
" ಮೇಘನಾಥಪುರ ಕಕುರವೇಣೀ ವಾಸ ರಾಘವೇಶ ವಿಜಯವಿಠಲನ್ನ ನಿಜದಾಸ "!
ಮೇಘನಾಥಪುರ = ಕಿಷ್ಕಿಂಧೆ ( ಗಜಗಹ್ವರ )
" ಕಕುರ "
ಕ = ಹೊಳೆಯುವ
ಕು = ಭೂಮಿಯಿಂದ
ರ = ರಾಜಿಸುವ
ಅಂದರೆ, ಹೊಳೆಯುವ ಭೂಮಿಯಿಂದ ಹೊಳೆಯುವ ಶ್ರೀ ವರಾಹ ಎಂದು ಒಂದರ್ಥ ಆದರೆ,
ಕ = ವಸು ( ವಸು ಅಂದರೆ ಸಕಲ ಸಂಪತ್ತುಗಳು )
ಕು = ಭೂಮಿಯಿಂದ
ರ = ಶೋಭಿಪ
ಅಂದರೆ ಸಕಲ ಸಂಪದ್ಭರಿತವಾದ ಭೂಮಿಯಿಂದ ಶೋಭಿಪ; ಭೂಮಿಗೂ ಒಡೆಯನಾದ ಶ್ರೀ ವರಾಹ ರೂಪಿ ಶ್ರೀ ಜಗನ್ನಾಥ ಎಂದು ಶ್ರೀ ವಿಜಯರಾಯರ ವಾಕ್ಯ! ಇದನ್ನೇ ಶ್ರೀ ಜಯತೀರ್ಥರ ಸ್ತೋತ್ರ ಸುಳಾಡಿಯಲ್ಲಿ ಸ್ಪಷ್ಟ ಪಡಿಸಿದ್ದಾರೆ!
ಕಕುರ = ಸಕಲ ಸಂಪದ್ಭರಿತವಾದ ಭೂಮಿಯಿಂದ ಶೋಭಿಪ ಅಂದರೆ ಶ್ರೀ ವರಾಹದೇವರ ಕೋರೆಹಲ್ಲಿನ ಮೇಲೆ ಶೋಭಿಸುತ್ತಿರುವ ಭೂಮಿ ಎಂದು ಅರ್ಥ.
ವೇಣೀ ವಾಸಾ = ಶ್ರೀ ವರಹದೇವರಿಗೆ ಸಂಬಂಧ ತುಂಗಭದ್ರಾ ನದೀ ತೀರವಾಸ ಎಂದು ಸ್ಪಷ್ಟ ಪಡಿಸುವ ಶ್ರೀ ವಿಜಯರಾಯರು ತುಂಗಭದ್ರೆಯ ಕುರಿತು ಈ ಕೆಳಗಿನಂತೆ ಸ್ತೋತ್ರ ಮಾಡಿದ್ದಾರೆ.
ರೂಢಿಯೊಳಗೆಲ್ಲ ಸಮಸ್ತ ನದಿ ಉದಕಗಳು ।
ನೋಡಿದರು ರುಚಿಕರವಿಲ್ಲವೆಂದೂ ।
ದಾಡಿಯಲಿ ಧರಿಸಿದನು ಸುರರು ಕೊಂಡಾಡುತಿರೆ ।
ಈಡ್ಯಾರು ನಿನ್ನ ಮಹಿಮೆಗೆ ವರಹ ತನಯೇ ।।
ಎಂದು...
ನಮೋ ನಮೋ ತುಂಗಭದ್ರೆ ।
ನಮಿತರನು ಪಾಲಿಸುವ ಸದ್ಗುಣ ಸಮುದ್ರೆ ।।
ಎಂಬ ಸ್ತೋತ್ರ ಪದದಲ್ಲಿ ಸ್ಪಷ್ಟ ಪಡಿಸಿದ್ದಾರೆ.
ರಾಘವೇಶ = ಶ್ರೀ ಜಯರಾಮದೇವರಾದ ( ಶ್ರೀ ಜಯತೀರ್ಥರು ತಮ್ಮ ಸ್ವಹಸ್ತದಲ್ಲಿ ತಮ್ಮ ಆರಾಧ್ಯ ದೈವವಾದ ಶ್ರೀ ರಾಮನ ಪ್ರತಿಮೆಯನ್ನು ನಿರ್ಮಾಣ ಮಾಡಿ, ಅದಕ್ಕೆ ಶ್ರೀ ಜಯರಾಮದೇವರು ಎಂದು ಹೆಸರನ್ನಿಟ್ಟು; ಶ್ರೀ ಬ್ರಹ್ಮ ಕರಾರ್ಚಿತ ಶ್ರೀಮೂಲರಾಮದೆವರು; ಶ್ರೀಮದಾಚಾರ್ಯರ ಕರಾರ್ಚಿತ ಶ್ರೀ ದಿಗ್ವಿಜಯರಾಮದೇವರ ಜೊತೆಯಲ್ಲಿ ಶ್ರೀ ಜಯರಾಮದೇವರನ್ನು ಇಟ್ಟು ಪೂಜಿಸಿದ್ದಾರೆ. ಆ ವಿಗ್ರಹಗಳು ಇಂದಿಗೂ ಶ್ರೀ ರಾಯರ ಮಠದಲ್ಲಿ ಪೋಜೆಗೊಳ್ಳುತ್ತಿವೆ ).
ಶ್ರೀ ವಿಜಯವಿಠಲನ್ನ = ಶ್ರೀ ವಿಜಯವಿಠಲ ರೂಪಿಯಾದ ಶ್ರೀ ಹರಿಯ
ನಿಜದಾಸ = ಶ್ರೀ ಜಯತೀರ್ಥರು ನಿಜ ದಾಸರೆಂದು ಶ್ರೀ ಭೃಗು ಮಹರ್ಷಿಗಳ ಅಂಶ ಸಂಭೂತರಾದ ಶ್ರೀ ವಿಜಯದಾಸರು ಸ್ಪಷ್ಟ ಪಡಿಸಿದ್ದಾರೆ.
ಈ ವಿಷಯಕ್ಕೆ ಪೂರಕವಾಗಿಯೇ..
ಕುಶರಾಯ ಇಲ್ಲಿ ತಪಸ್ಸು ಮಾಡಿದಂಥಾ । ವಸುಮತಿಯ ನೋಡಿ ದಿಗ್ಗೇಶ ಜಯಿಸಿ ಮಾ । ನಸದಲ್ಲಿ ತಿಳಿದು ಅಕ್ಷೋಭ್ಯತೀರ್ಥರು ಇಲ್ಲಿ । ನಸು ನಗುತಲೆ ವಾಸವಾದರು ಬಿಡದಲೆ । ಋಷಿ ಕುಲೋತ್ತಮರಾದ ಜಯರಾಯರು । ಬೆಸ ಬೇಸನೆ ಬಂದು ಗುಪ್ತದಲ್ಲಿ ಪೂ । ಜಿಸುವರು ಪ್ರೀತಿಲಿ ಏನೆಂಬೆನಾ ಚರ್ಯೆ । ಶಶಿವರ್ಣದಂತೆ ಪೊಳೆವ ದರುಶನ ಗ್ರಂಥ । ರಸಪೂರಿತವಾಗಿ ವಿಸ್ತರಿಸಿದರು ವಿ । ಕಸಿತವ ಮಾಡಿ ಕರಾವ ಕನ್ನಡಿ ಯಂತೆ । ಕುಶಲ ಮಾನವರಿಗೆ ಜ್ಞಾನ ಹೆಚ್ಚುವಂತೆ । ವಸುಧೆಯೊಳಗೆ ನಮ್ಮ ವಿಜಯವಿಠ್ಠಲರೇಯ । ವಶವಾಗುವುದಕ್ಕೆ ಪ್ರಸಾದ ಮಾಡಿದರು ।।
ಕುಶರಾಯ ಇಲ್ಲಿ ತಪಸು ಮಾಡಿದಂಥ । - ಶ್ರೀ ವಿಜಯರಾಯರು
ಅಂದರೆ :
ಕುಶ = ಜಲ, ನೀರು
ರಾ = ಗಮನೆ, ಸ್ವರ್ಣ, ಸಂಪತ್ತು
ಯ = ಕಾಂತಿ, ಶೋಭೆ
" ಕುಶರಾಯ " ಅಂದರೆ ಜಲ ಸಂಪತ್ತಿನಿದ ಕಾಂತಿ ಯುಕ್ತವಾಗಿ ಶೋಭಿಸುತ್ತಿರುವ;
ಇಲ್ಲಿ ಅಂದರೆ ಆ ಪ್ರದೇಶದಲ್ಲಿ
ತ = ಅಮೃತ, ಕರುಣೆ, ದಯೆ
ಪ = ಪವನ ( ಪವನಾವತಾರಿಗಳಾದ ಶ್ರೀ ಮನ್ಮಧ್ವಾಚಾರ್ಯರಿಂದ ಆಶ್ರಮ ಸ್ವೀಕಾರ ಮಾಡಿ ಸಕಲ ದ್ವೈತ ಶಾಸ್ತ್ರಾಧ್ಯನ ಮಾಡಿದ ಶ್ರೀ ಅಕ್ಷೋಭ್ಯತೀರ್ಥರ ವೈಭವವನ್ನು ಶ್ರೀ ದಾಸಾರ್ಯರು ಹೇಳಿದ್ದಾರೆ )
ಸು = ಸಮೃಧ್ಧಿ, ಮನೋಹರವಾದ, ಸುಂದರವಾಗಿ
" ತಪಸು " ಅಂದರೆ ಸಮೃಧ್ಧವಾದ, ಮನೋಹರವಾದ, ಸುಂದರವಾದ, ಅಮೃತತುಲ್ಯವಾದ ಕಾರುಣ್ಯಶೀಲರೂ, ದಯಾಮಯರೂ ಆದ ಶ್ರೀ ಮನ್ಮಧ್ವಾಚಾರ್ಯರ ಪ್ರೀತಿಯ ಶಿಷ್ಯರೂ, ರುದ್ರಾವತಾರಿಗಳಾದ ಶ್ರೀ ಅಕ್ಷೋಭ್ಯತೀರ್ಥರು ಇಲ್ಲಿ ವಾಸ ವಾಗಿದ್ದರೆ ಎಂದು ಅರ್ಥ.
ಇಲ್ಲಿ...
ಋಷಿ ಕುಲೋತ್ತಮರಾದ ಜಯರಾಯರು ।
ಬೆಸ ಬೇಸನೆ ಬಂದು ಗುಪ್ತದಲ್ಲಿ ಪೂ ।
ಜಿಸುವರು ಪ್ರೀತಿಲಿ ಏನೆಂಬೆನಾ ಚರ್ಯೆ ।।
ಎಂದು ಶ್ರೀ ಜಯರಾಯರು ಶ್ರೀ ಶೇಷಾವೇಷರು ಆದ್ದರಿಂದ ಸರ್ಪದ ರೂಪದಲ್ಲಿ ಯಾರಿಗೂ ಕಾಣಿಸದಂತೆ ಬಂದು ಪ್ರೀತಿಯಿಂದ ಪೂಜಿಸುತ್ತಿದ್ದಾರೆ. ಅಂದರೆ ಶ್ರೀ ಜಯತೀರ್ಥರು ತುಂಗಭದ್ರ ನದೀ ತೀರದಲ್ಲಿರುವ ನವ ವೃಂದಾವನ ಗಡ್ಡೆಯಲ್ಲಿ ಶ್ರೀ ಶೇಷಾಂಶರಾದ ಶ್ರೀ ಪದ್ಮನಾಭತೀರ್ಥರ ಸನ್ನಿಧಿಯಲ್ಲಿ ವಿರಾಜಮಾನರಾಗಿದ್ದು, ಸರ್ಪ ರೂಪದಲ್ಲಿ ಮಳಖೇಡಕ್ಕೆ ಬಂದು ಶ್ರೀ ಅಕ್ಷೋಭ್ಯತೀರ್ಥರನ್ನು ಪೂಜಿಸಿ ಮತ್ತೆ ನವ ವೃಂದಾವನಕ್ಕೆ ವಾಪಸ್ಸು ಹೋಗುತ್ತಿರುವ ಶ್ರೀಮಜ್ಜಯತೀರ್ಥರ ವ್ಯಾಪಾರವನ್ನು ಕಂಡು ಏನೆಂದು ವರ್ಣಿಸಲಿ ಎಂದು ಸ್ತೋತ್ರ ಮಾಡಿದ್ದಾರೆ!
ಒಂದು ವೇಳೆ ಶ್ರೀ ಜಯತೀರ್ಥರು ಶ್ರೀ ಅಕ್ಷೋಭ್ಯತೀರ್ಥರ ಪಕ್ಕದಲ್ಲಿಯೇ ಇದ್ದಿದ್ದರೆ ಶ್ರೀ ವಿಜಯರಾಯರು ಮೇಲ್ಕಂಡ ಶಬ್ದಗಳ ಪ್ರಯೋಗ ಮಾಡುತ್ತಿರಲಿಲ್ಲ! ಅಂದರೆ ಶ್ರೀ ಜಯತೀರ್ಥರ ಮೂಲ ಬೃಂದಾವನ ಮಳಖೇಡದಲ್ಲಿ ಇಲ್ಲವೆಂದು ದೃಢ ಪಡಿಸಿದ್ದಾರೆ.
ಶ್ರೀ ಮಜ್ಜಯತೀರ್ಥರು ನವ ವೃಂದಾವನ ಗಡ್ಡೆಯ ಮೂಲ ವೃಂದಾವನದಲ್ಲಿ ವಿರಾಜಮಾನರಾಗಿದ್ದರಿಂದಲೇ ಈ ರೀತಿ ಶಬ್ದ ಪ್ರಯೋಗ ಮಾಡಿದ್ದಾರೆ.. " ಋಷಿ ಕುಲೋತ್ತಮರಾದ ಜಯರಾಯರು । ಬೆಸ ಬೇಸನೆ ಬಂದು ಗುಪ್ತದಲ್ಲಿ ಪೂ । ಜಿಸುವರು ಪ್ರೀತಿಲಿ ಏನೆಂಬೆನಾ ಚರ್ಯೆ ।। " ಶ್ರೀ ಜಯತೀರ್ಥರು ನವ ವೃಂದಾವನ ಗಡ್ಡೆಯಿಂದ ಮಳಖೇಡಕ್ಕೆ ಸರ್ಪ ರೂಪದಲ್ಲಿ ಬಂದು ಅವರನ್ನು ಪೂಜಿಸಿ ಮತ್ತೆ ತಮ್ಮ ಮೂಲ ಸ್ಥಳವಾದ ನವ ವೃಂದಾವನಕ್ಕೆ ಹಿಂತಿರುಗುತ್ತಾರೆ ಎನ್ನುವುದು ಶ್ರೀ ದಾಸರ್ಯರ ವಾಕ್ಯ!
ಆದರೆ, ಕೆಲವರು ಶ್ರೀ ಹರಿದಾಸರ ಮಾತನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡದೆ ತಮ್ಮದೇ ಆದ ಶೈಲಿಯಲ್ಲಿ ಮತ್ತು ತಮ್ಮ ಜ್ಞಾನಕ್ಕೆ ತಕ್ಕಂತೆ " ಕುಶರಾಯ " ಎಂದರೆ ಶ್ರೀ ರಾಮನ ಪುತ್ರ ಕುಶ ಎಂದು, ಆತನು ಇಲ್ಲಿ ತಪಸ್ಸು ಮಾಡಿದನೆಂದು ಬರೆದು ಸಜ್ಜನರ ದಾರಿ ತಪ್ಪಿಸುವುದರೊಂದಿಗೆ ದಾಸ ಸಾಹಿತ್ಯದ ಅರ್ಥವನ್ನೇ ತಿರುಚಿ ಸ್ವೋತ್ತಮರಲ್ಲಿ ಅಪರಾಧ ಮಾಡಿದ್ದರೆ. ಇದಕ್ಕೆ ಪ್ರಾಯಶ್ಚಿತ್ತವೇ ಇಲ್ಲ.
ಅಲ್ಲದೇ, ಅಯೋಧ್ಯೆಯಲ್ಲಿ ಸಕಲವನ್ನೂ ಕೊಡುವಂಥಾ, ಮೋಕ್ಷಪ್ರದನಾದ ಜಗದೊಡೆಯನಾದ ಶ್ರೀ ರಾಮನೇ ಇರುವಾಗ ಇಲ್ಲಿಗೆ ಬರುವ ಅವಶ್ಯಕತೆ ಕುಶನಿಗೆ ಇಲ್ಲ! ಯಾರಾದರೂ ಗಂಗೆಯ ನೀರನ್ನು ಬಿಟ್ಟು ಬಾವಿಯ ನೀರನ್ನೂ; ಕಲ್ಪವೃಕ್ಷವನ್ನು ಬಿಟ್ಟು ಜಾಲಿಮರವನ್ನು ಆಶ್ರಯಿಸುತ್ತರೆಯೇ! ಕಲ್ಪವೃಕ್ಷವಾದ ಶ್ರೀ ರಾಮನ ಬಿಟ್ಟು ಯಾರು ಬರುವುದಿಲ್ಲ ಅಂತಾದ್ದರಲ್ಲಿ ಕುಶ ಬರುತ್ತಾನೆಯೇ? ಖಂಡಿತ ಬರುವುದಿಲ್ಲ!
ಆದ್ದರಿಂದ ಪರಮ ಪವಿತ್ರವಾದ, ಮನೋಹರವಾದ - ಸುಂದರ ಪ್ರದೇಶವಾದ ತುಂಗಭದ್ರಾ ನದೀ ತೀರದಲ್ಲಿಯೇ ಶ್ರೀ ಶೇಷಾವತಾರಿಗಳಾದ ಶ್ರೀ ಪದ್ಮನಾಭತೀರ್ಥರ ಸನ್ನಿಧಾನದಲ್ಲಿ ತಮ್ಮ ಮೂಲ ಬೃಂದಾವನದಲ್ಲಿ ಶ್ರೀ ಜಯತೀರ್ಥರು ವಿರಾಜಮಾನರಾಗಿದ್ದಾರೆ!
ಆದ್ದರಿಂದ ಶ್ರೀ ಜಯತೀರ್ಥರ ಮೂಲ ವೃಂದಾವನ " ಆನೆಗೊಂದಿ " ಯಲ್ಲಿದೆ.
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ

(2)

ಡಾ. ನಾಗರಾಜ ಆಚಾರ್ಯರು ಹೇಳಿದ್ದಕ್ಕಿಂತ ಹೆಚ್ಚು ಸ್ಪಷ್ಟವಾಗಿ ಶ್ರೀ ನರಹರಿ ಸುಮಧ್ವ ರವರು ಈ ಲೇಖನದಲ್ಲಿ ಶ್ರೀ ಜಯತೀರ್ಥರ ಮೂಲ ವೃಂದಾವನ ಮಳಖೇಡದಲ್ಲಿ ಇದೆ ಎಂದು ಪುರಾವೆ ಸಹಿತ ತೋರಿಸಿಕೊಟ್ಟಿದ್ದಾರೆ. ಅದರ link ಇಲ್ಲಿದೆ 
https://dokumen.tips/documents/moola-vrundavana-of-sri-jayateertharu.html?fbclid=IwAR3TuSPlE4GjwKCIQoHHq8S-esCc4TUfqYUVM8BKCoNiyBlmK7aVtcy94KE

*******

No comments:

Post a Comment