ಶ್ರೀ ಇಭರಾಮಪುರ ಅಪ್ಪಾವರ ಬಳಿ ಒಂದು ಕುದುರೆ ಇತ್ತು.
ಅದರ ಹೆಸರು ಹಯವದನ ಎಂದು.
ಆ ಕುದುರೆ ಅವರಿಗೆ ಬಂದ ಬಗ್ಗೆ ಒಂದು ಹಿನ್ನೆಲೆ ಇದೆ.
ಶ್ರೀ ಅಪ್ಪಾವರಿಗೆ ಅಸಂಖ್ಯಾತ ಭಕ್ತರು ಎಲ್ಲಾ ಕಡೆ.
ಅವರಿಗೆ ಮಂತ್ರಾಲಯ ,ಇಭರಾಮಪುರ ಸುತ್ತಲಿನ ಸಹ ಜನರೆಲ್ಲಾ ಅವರಿಗೆ ಅಪ್ಪಾ ಅಥವಾ ತಾತ ಎಂದೇ ಪ್ರೀತಿ ಯಿಂದ ಕರೆಯುತ್ತಿದ್ದರು.
ಒಂದು ದಿನ ಅಪ್ಪಾವರು ತಮ್ಮ ಹೊಲದಲ್ಲಿ ತಿರುಗಾಡುತ್ತಾ ಇರುವಾಗ ಒಬ್ಬ ಅಪ್ಪಾವರ ಭಕ್ತ ಅವರ ಬಳಿ ಬರುತ್ತಾನೆ.
ಅವರಿಬ್ಬರ ನಡುವೆ ಮಾತು ನಡೆಯುತ್ತದೆ.
ತಾತಾ!!..ಈ ವರ್ಷವು ಸಹ ಮಳೆ ಬಂದಿಲ್ಲ.
ಹೊಲದಲ್ಲಿ ಏನು ಬೆಳೆಗಳನ್ನು ಬೆಳೆಯಲು ಸಾಧ್ಯ ವಾಗಿಲ್ಲ.
ದಯವಿಟ್ಟು ಈ ಸಾರಿ ಮಳೆ ಬರುವ ಹಾಗೇ ಮಾಡು ಎಂದು ಕೇಳಿಕೊಂಡನು.
ಅವಾಗ್ಗೆ ಅಪ್ಪಾವರು ನಗುತ್ತಾ
ಸರಿ ಮಳೆ ಬಂದರೆ ನೀನು ನನಗೆ ಏನು ಕೊಡುತ್ತೀಯಾ.??
ಮಳೆ ಬರದೇ ಇದ್ದರೆ ನಾನು ನಿನಗೆ ಏನು ಕೊಡಬೇಕು ??ಅಂತ ಕೇಳಿದರು..
ಅದಕ್ಕೆ ಅವನು
ತಾತ !!ನನ್ನ ಹತ್ತಿರ ಈ ಕುದುರೆ ಇದೆ.ಇದನ್ನು ನಿಮಗೆ ಕೊಡುತ್ತೇನೆ.ತೆಗೆದುಕೊ..
ಮಳೆ ಬಂದರೆ ಸಾಕು ಎಂದ.
ಸರಿ!! ಇವಾಗ ನೀನು ಮನೆಗೆ ಹೋಗು.ಮಳೆ ಬರುತ್ತದೆ ಅಂತ ಶ್ರೀ ಅಪ್ಪಾವರು ಅವನಿಗೆ ಹೇಳುತ್ತಾರೆ.
ಮರು ಮಾತನಾಡದೇ , ಶ್ರೀಅಪ್ಪಾವರ ಮಾತಿನಲ್ಲಿ ವಿಶ್ವಾಸವನ್ನು ಇಟ್ಟು ಆ ವ್ಯಕ್ತಿ ಮನೆಗೆ ಹಿಂತಿರುಗಿದ.
ಆ ದಿನ ಸಾಯಂಕಾಲ ಧಾರಾಕಾರವಾಗಿ ಮಳೆ ಸುರಿದು ಸಮೃದ್ಧವಾಗಿ ನೀರು ಅವನ ಹೊಲದಲ್ಲಿ ಬಂದಿದೆ.
ತಕ್ಷಣ ಅವನು ಮರುದಿನ ಬೆಳಿಗ್ಗೆ ಮರು ಮಾತನಾಡದೇ ತನ್ನ ಕುದುರೆಯನ್ನು ತೆಗೆದುಕೊಂಡು ಶ್ರೀಅಪ್ಪಾವರ ಬಳಿ ಬಂದು ಅವರಿಗೆ ಕೊಟ್ಟು ನಮಸ್ಕರಿಸಿ ಅಲ್ಲಿಂದ ಹೊರಡುತ್ತಾನೆ.
ಇದು ಶ್ರೀಅಪ್ಪಾವರ ಕಾರುಣ್ಯ ದ ಪರಿ.
ಯಾರೇ ಬಂದು ಅವರ ಬಳಿ ಕಷ್ಟ ವನ್ನು ಹೇಳಿಕೊಂಡರೆ ಅವರ ಕಷ್ಟ ವನ್ನು ಪರಿಹಾರವನ್ನು ಮಾಡುತ್ತಾ ಇಂದಿಗೂ ಸಹ ಇಭರಾಮಪುರ ದಲ್ಲಿ ನೆಲೆಸಿದ್ದಾರೆ.
ಆ ಕುದುರೆಗೆ ಒಂದು ಕಣ್ಣಿಗೆ ದೃಷ್ಟಿ ದೋಷ ಇತ್ತು.
ಅದಕ್ಕೆ ದಾರಿ ತೋರಿಸಲೋಸುಗ ಅಪ್ಪಾವರ ಬಳಿ ಒಂದು ಕೋಲು ಸಣ್ಣದು ಇತ್ತು.
ಅದು ತೋರಿಸಿ ಬಲಗಡೆ ಅಂದರೆ ಬಲಗಡೆ ,ಎಡಗಡೆ ಅಂದರೆ ಕುದುರೆ ಆ ದಿಕ್ಕಿನಲ್ಲಿ ಹೋಗುತ್ತಾ ಇತ್ತು ಅಂತ ಶ್ರೀ ಅಪ್ಪಾವರ ಚರಿತ್ರೆ ಯಲ್ಲಿ ನಾವು ಕೇಳುತ್ತೇವೆ.
ದೃಷ್ಟಿ ದೋಷ ಇದ್ದಂತಹ ಕುದುರೆಯನ್ನು ಸರಿ ದಾರಿಯಲ್ಲಿ ನಡೆಸಿದವರು ಶ್ರೀ ಅಪ್ಪಾವರು.
ಅಂತಹವರ ಬಳಿಯಲ್ಲಿ ನಮ್ಮ ಪ್ರಾರ್ಥನೆ ಹೀಗಿರಲಿ.
ಸ್ವಾಮಿ!!ಅಪ್ಪಾವರೇ ನಾವು ಸಹ ಆ ಕುದುರೆಯಂತೆ ಹುಟ್ಟಿದಾಗಲಿಂದ ಅರಿವು ಎಂಬ ದೃಷ್ಟಿ ದೋಷವನ್ನು ಹೊಂದಿದ್ದೇವೆ.
ಯಾವುದು ಸರಿ, ಯಾವುದು ತಪ್ಪು,ಯಾವ ಕರ್ಮಗಳನ್ನು ಮಾಡಿದರೆ ನಮಗೆ ಶುಭ,ಯಾವುದು ಮಾಡದಿದ್ದರೆ ಒಳಿತಲ್ಲ ಎನ್ನುವ ಅರಿವು ಮತ್ತು ಅದರ ಬಗ್ಗೆ ತಿಳಿದುಕೊಳ್ಳುವ ಜ್ಞಾನವೆಂಬ ದೃಷ್ಟಿ ನಮಗಿಲ್ಲ.
ದಯವಿಟ್ಟು ನಮ್ಮ ಮೇಲೆ ಸಹ ಅನುಗ್ರಹ ಮಾಡಿ.ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾಡಿ.
🙏🙏
ಇಂತಹ ಕರುಣಾಶಾಲಿಗಳಾದ ಶ್ರೀ ಅಪ್ಪಾವರ ೧೫೦ನೇ ವರುಷದ ಆರಾಧನಾ(2/8/19 to 5/8/19) ಮಹೋತ್ಸವದ ಆಮಂತ್ರಣ ಪತ್ರಿಕೆ ಯನ್ನು ಇಲ್ಲಿ ಹಾಕಿದ್ದೇನೆ.
ಶ್ರೀ ಅಪ್ಪಾವರ ಭಕ್ತರಾದ ತಾವುಗಳು ಬಂದು ಈ ಏಳುದಿನದ ಕಾರ್ಯಕ್ರಮ ದಲ್ಲಿ ತಮ್ಮ ಪರಿವಾರ ,ಬಂಧು ವರ್ಗದವರ ಸಮೇತವಾಗಿ ಭಾಗವಹಿಸಿ, ಶ್ರೀ ಅಪ್ಪಾವರ ಮತ್ತು ಅವರ ಅಂತರ್ಯಾಮಿಯಾದ ಶ್ರೀ ವೇಣುಗೋಪಾಲ ಕೃಷ್ಣ ನ ಅನುಗ್ರಹಕ್ಕೆ ಪಾತ್ರರಾಗಿ ಅಂತ ತಮ್ಮ ಬಳಿ ವಿನಂತಿ.
ಆಮಂತ್ರಣ ಪತ್ರಿಕೆ ಯಲ್ಲಿ ಕಾರ್ಯಕ್ರಮ ಗಳ ವಿವರಣೆ ಇದೆ.
✍ಶ್ರೀ ಅಪ್ಪಾವರ ಪಾದ ಸೇವಕ..
*******
No comments:
Post a Comment