Tuesday 1 January 2019

ಅಪ್ಪಾವರು ಮಹಿಮೆ 04 ಇಭರಾಮಪುರ appavaru mahime 04

ಶ್ರೀ ಇಭರಾಮಪುರ ಅಪ್ಪಾವರ ಮಹಿಮೆ||

ಒಮ್ಮೆ ಅಪ್ಪಾವರು ಸಂಚಾರತ್ವೇನ  ಒಂದು ಸಲ ಆದವಾನಿಗೆ ಬರುತ್ತಾರೆ. ಅಲ್ಲಿ ಒಬ್ಬ ಸದ್ಗೃಹಸ್ಥನ ಮನೆಯಲ್ಲಿ ಇಳಿದುಕೊಳ್ಳುತ್ತಾರೆ.ಆದರೆ ಅವರ ಮನೆಯಲ್ಲಿ ಸ್ನಾನದ ಮನೆಯು ಅನುಕೂಲವಾಗಿರಲಿಲ್ಲ. ಆದ್ದರಿಂದ ಅವರು ಮನೆಯ ಮುಂಭಾಗದಲ್ಲಿ ಇರುವ ಒಳ ಅಂಗಳದಲ್ಲಿ ಸ್ನಾನಕ್ಕಾಗಿ ವ್ಯವಸ್ಥೆ ಮಾಡಲಾಯಿತು.

ಶ್ರೀ ಅಪ್ಪಾವರು ಸ್ನಾನ ಮಾಡಿದೊಡನೆ ಆ ಪ್ರದೇಶವೆಲ್ಲ ವಿಚಿತ್ರ ವಾದ ಪುನುಗು, ಕಸ್ತೂರಿ,ಸುವಾಸನೆ ಆ ಪ್ರದೇಶವೆಲ್ಲ ವ್ಯಾಪಿಸಿತು.
ಅಲ್ಲಿ ಇದ್ದ ಜನರೆಲ್ಲಾ ಇದನ್ನು ಕಂಡು ಬೆರಗಾದರು.ನಿತ್ಯ ವು ಅಪ್ಪಾವರಿಗೆ ಅಲ್ಲಿ ಇದ್ದ ಜನರೆಲ್ಲಾ ತಮ್ಮ ಮನೆಗೆ ಆತಿಥ್ಯ. ಹೀಗೆ  ಅಪ್ಪಾವರು ಯಾರ ಮನೆಗೆ ಹೋದರು ಸಹ ನಾನಾ ಬಗೆಯ ಪರಿಮಳದ ಅನುಭವ ಆ ಮನೆಯವರಿಗೆ ಹಾಗು ಸುತ್ತಲಿನ ಜನರಿಗೆ.

ಇದನ್ನು ಕಂಡು ಅವರಿಗೆ ಪರಿಮಳದ ಆಚಾರ್ಯರು ಎಂದೇ ಪ್ರಸಿದ್ಧಿ ಆಯಿತು.ಕೆಲವರು ಕುಹಕಿಗಳು ಇವರು ಯಾವುದೊ ಮಂತ್ರಶಕ್ತಿ ಯನ್ನು ವಶಪಡಿಸಿಕೊಂಡಿದ್ದಾರೆ,ಅಥವಾ ತಂತ್ರ ವಿದ್ಯೆಯನ್ನು ಕಲಿತಿದ್ದಾರೆ ಅಂತ ಅಪ ಪ್ರಚಾರ ಮಾಡಲು ಶುರು ಮಾಡಿದರು. ನಿಂದಕರಿಗೇನು ಕೊರತೆ ಇರಲಿಲ್ಲ ಅವರ ಕಾಲದಲ್ಲಿ. ಮತ್ತೆ ಕೆಲವು ಸಜ್ಜನರು ಇವರ್ಯಾರೋ ದೊಡ್ಡವರು ,ಮತ್ತು ಅವರ ಸ್ವರೂಪ ಶಕ್ತಿಯ ಇರಬೇಕು ಎಂದು ಕೊಂಡಾಡಿದರು.

ಇದನ್ನು ತಿಳಿದ ಅಪ್ಪಾವರು ಇದು ಮತ್ತೇನು ಅಲ್ಲ
ನಾವು ನಿತ್ಯ ವು ಪುನಃ ಪುನಃ ಶ್ರೀ ಮನ್ಯಾಯ ಸುಧಾ ಪರಿಮಳ ಗ್ರಂಥಗಳು ಪಾರಾಯಣ ಮಾಡಿದುದರ ಫಲವೆಂದು ನುಡಿದರು.ಆದರು ಜನಗಳಿಗೆ ಇದರ ಬಗ್ಗೆ ವ್ಯಂಗ್ಯವಾಗಿ ಮಾತನಾಡುತ್ತಾ ಇರುವದು ಬಿಡಲಿಲ್ಲ. ಮುಂದೆ ಸಂಚಾರ ಮಾಡುತ್ತಾ ಹೊಸಪೇಟೆ ಬಳಿ ಇರುವ ನಾರಾಯಣ ದೇವರ ಕೆರೆ ಎಂಬ ಗ್ರಾಮಕ್ಕೆ ದಯಮಾಡಿಸಿದರು.ಅಲ್ಲಿ ವಕೀಲರು ಆದಂತಹ ಧಾರವಾಡದ ಶ್ರೀ ಕೃಷ್ಣ ರಾಯರ ಮನೆಯಲ್ಲಿ ವಾಸ್ತವ್ಯವನ್ನು ಮಾಡಿದರು.
ಅಲ್ಲಿಯು ಸಹ  ನಿಂದಕರ ಸಂಖ್ಯೆ ಕಡಿಮೆ ಇರಲಿಲ್ಲ.
ಇದನ್ನು ಕಂಡ ಮನೆಯ ಯಜಮಾನ ಅಪ್ಪಾವರ ಬಳಿ ಬಂದು ಜನರಾಡಿಕೊಳ್ಳುವ ವ್ಯಂಗ್ಯ ಭರಿತ ಮಾತುಗಳನ್ನು ಅಪ್ಪಾವರಿಗೆ ಹೇಳಿದಾಗ

ಅದಕ್ಕೆ ಅಪ್ಪಾವರು
ಕೃಷ್ಣರಾಯ!ಜನರು ಆಡಿಕೊಂಡರೆ ನಮಗೇನು ಹಾನಿಯಿಲ್ಲ..
ಆದರೆ ಆಸ್ತಿಕರಾದವರು ಆಡಿಕೊಂಡು ಈ ಪಾಪಕ್ಕೆ ಗುರಿಯಾಗಬಾರದು..ಏನು ಮಾಡಿದರೆ ನಿಮಗೆ ಈ ವಿಷಯದಲ್ಲಿ ನಂಬಿಕೆ ಬರಲು ಸಾಧ್ಯ.??ಅಂತ ಕೇಳಿದಾಗಅಲ್ಲಿ ಇದ್ದವರ ಅಭಿಪ್ರಾಯ ದಂತೆ ತಮ್ಮ ಸ್ನಾನದ ಸಮಯದಲ್ಲಿ ಬರುವ ಸುಗಂಧ ಭರಿತ ಸುವಾಸನೆ ಉತ್ಪನ್ನ ವಾಗುವದಷ್ಟೇ..

ಅದನ್ನು ತಕ್ಷಣ ದಲ್ಲಿ ಉಪಸಂಹಾರ ಮಾಡಿದರೆ ನಮಗೆ ನಂಬಿಕೆ ಯಾಗುವದೆಂಬ ಅಭಿಪ್ರಾಯ ತಿಳಿದು ಅದೇ ರೀತಿಯಲ್ಲಿ ಸುಗಂಧ ವಾಸನೆಯನ್ನು ಅಡಗಿಸಿದರು  ತಕ್ಷಣ ಎಲ್ಲಾ ರು ಭಯಭೀತರಾಗಿ
ಸ್ವಾಮಿ!! ನಾವೆಲ್ಲರೂ ನಿಮ್ಮ ಮಕ್ಕಳು. ನೀವು ನಮಗೆ ಅಪ್ಪಾವರು. ತಂದೆಯು ಮಕ್ಕಳ ತಪ್ಪನ್ನು ಕ್ಷಮಿಸುವ ಹಾಗೇ ನಮ್ಮ ತಪ್ಪು ಕ್ಷಮಿಸಿ ಅಂತಕೇಳಿಕೊಳ್ಲುವರು.

ದಯಾ ಸಮುದ್ರ ರಾದ ಅಪ್ಪಾವರು ಅವರ ತಪ್ಪನ್ನು ಮನ್ನಿಸಿ ಅವರಿಗೆಲ್ಲ ಆಶೀರ್ವಾದ ಮಾಡಿ ಮುಂದೆ ಸಂಚಾರ ಬೆಳೆಸುತ್ತಾರೆ.ಒಂದೇ,ಎರಡೆ  ಎಷ್ಟು ಹೇಳಿದರು ಕಡಿಮೆಯಾಗಿ ಕಾಣುವ ಅಧ್ಬುತ ಇಂತಹ ಮಹಿಮಾತೀತರನ್ನು ನೆನೆಯುವದು ನನ್ನ ಯೋಗ್ಯತೆ ಗೆ ನಿಲುಕದ ವಿಷಯ.ಇದು ಅವರಮಹಿಮೆ,ಕಾರುಣ್ಯ ಆಗಿರುವದರಿಂದ ಮತ್ತೇನು ಇಲ್ಲ.

ಕರುಣಾಸಾಗರರ ನೋಡಿದೆಯಾ|
ಮಹಾ ಪುರುಷರಿಗೊಂದಿಸಿ ವರವ ಬೇಡಿದೆಯಾ||

ಹರಿಭಕ್ತರಾಗ್ರಣಿಯ ಗುಣಗಳ ಅರಿಯದವರು ಇವರನಾಡಿಕೊಂಡರೆ ಕೊರತೆಯಾಗುವದೇನು ಇಭರಾಮಪುರ ನಿಲಯ ಕೃಷ್ಣಾರ್ಯರ.||ಅ.ಪ||

ಹರಿಯ ಧ್ಯಾನದೊಳಿದ್ದು ನಲಿವಾ|
ತನ್ನ ಚರಣ ಸೇವಕರಿಗೆ ಸುಲಭದಿಂದೊಳಿವಾ|


ದುರುಳ ದುಷ್ಕೃತ್ಯಗಳಳಿವಾ ತನ್ನವರ ಸಮಯಕೆ ಸ್ವಪ್ನದಿ ಬಂದು ನಿಲುವಾ ||
*****
ಅಪ್ಪಾವರ ಮಹಿಮೆ : ಮಂತ್ರಾಕ್ಷತೆಯು ಪ್ರತಿಮೆಯಾದದು 

ಮಂತ್ರಾಕ್ಷತಸಮಾಯುಕ್ತೇ ಸಂಪುಟೇ ಯತ್ಕರಾರ್ಚಿತೆ|
ಪ್ರತಿಮಾ ಭೂತ್ಸಾರ್ಚಕಾನಾಂ  ಕ್ವಚಿತ್ ಕಾಲಾಂತರೇಣ ವೈ ||

ಶ್ರೀ ಅಪಾವರ ಪ್ರಮುಖ ಶಿಷ್ಯರಲ್ಲಿ ಒಬ್ಬರಾದ ಅಪರೋಕ್ಷ ಜ್ಞಾನಿಗಳಾದ ತಮ್ಮ ಯೋಗ ಶಕ್ತಿಯಿಂದ ಗಡಗಿನ ವೀರನಾರಾಯಣನನ್ನು ಸಾಕ್ಷಾತ್ಕಾರ ಮಾಡಿಕೊಂಡರು ಶ್ರೀ ಯೋಗಿ ನಾರಾಯಣಾಚಾರ್ಯರು ಶ್ರೀ ಅಪ್ಪಾವರ ಮಹಿಮೆ ಹೇಳುವ ಮಹಿಮಾ ಸ್ತೋತ್ರವಿದು.

ಅಪ್ಪಾವರು ಮಂತ್ರಾಕ್ಷತೆ ಕೊಟ್ಟರೆ ಆ ಮಂತ್ರಾಕ್ಷತೆಯು ಪ್ರತಿಮೆಯಾಗತಿತು ಅಂತ ಶ್ರೀ ಯೋಗಿನಾರಾಯಣಾಚಾರ್ಯರು ವರ್ಣನೆ ಮಾಡಿದಾರೆ. ಅಪರೋಕ್ಷ ಜ್ಞಾನಿಗಳಾದ ಯಲಮೇಲಿ ಹಾಯಗ್ರೀವಾಚಾರ್ಯರು ಶ್ರೀ ಅಪ್ಪಾವರ   ಶಿಷ್ಯರಲ್ಲಿ ಒಬ್ಬರಾಗಿದರು . 

ಸುರಪುರದ ಆನಂದ ದಾಸರು ಶ್ರೀ ರಾಘವೇಂದ್ರರಾಯರ ಪಾದಾಂಬುಜ 
ದಾರಾಧಕರ ಕೊಂಡಾಡಿರೋ ಕೃತಿಯಲ್ಲಿ

"ಇಳೆಯೊಳು ಚೌಷಷ್ಠಿ ಕಳದಿ ನಿಪುಣರಾದ ।
ಯಲಮೇಲಿ ಹಯಗ್ರೀವಾಚಾರ್ಯರ"

ಶ್ರೀ ಅಪ್ಪಾವರ ಶಿಷ್ಯರಾದ ಯಳಮೇಲಿ ಹಾಯಗ್ರೀವಾಚಾರ್ಯರು ಎಲ್ಲಾ 64 ಕಲಾ ನಿಪುಣರು. ತಮ್ಮ ಶಿಷ್ಯರಿಗೆ ಇಷ್ಟು ಸಾಧನೆ ಇದಾಗ ಅಪ್ಪಾವರ ಸಾಧನೆಯ ಶಕ್ತಿ ನಮ್ಮ ಊಹೆಗೂ ಮೀರಿದು.

ಶ್ರೀ ಅಪ್ಪಾವರ ತಾವು ಕೊಟ್ಟ ಮಂತ್ರಾಕ್ಷತೆಯು ಪ್ರತಿಮೆಯಾಗಿ ಮುಜಾಮುದಾರರ ಮನೆತನಕೆ ಅನುಗ್ರಹ ಮಾಡಿದರು.

ಒಮ್ಮೆ ಶ್ರೀಅಪ್ಪಾವರು ಸಂಚಾರತ್ವೇನ ತಮ್ಮ ಭಕ್ತರಾದ ಮುಜಾಮುದಾರರ ಮನೆಗೆ ಬರುತ್ತಾರೆ.
ಅವಾಗ ಮುಜಾಮುದಾರರು ಅಪ್ಪಾವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ ಸ್ವಾಮಿ ತಾವು ಎಲ್ಲರಿಗು ಅನುಗ್ರಹ ಮಾಡಿದ್ದೀರಿ ,ಎಲ್ಲರಿಗು ಅವರು ಕೇಳಿದ್ದು ಕೊಟ್ಟಿದ್ದೀರಿ,ತಮ್ಮ ಪಾದುಕೆಗಳು,ಕೋಲು, ಹೀಗೆ ನಮಗು ಸಹ ಅನುಗ್ರಹ ಮಾಡಿ
ಅಂತ ಬಹಳ ಕೇಳಿಕೊಂಡಾಗ ಅವಾಗ್ಗೆ  ಅಪ್ಪಾವರು ಮಂತ್ರಾಕ್ಷತೆ ಕೋಟು ಹೇಳುತ್ತಾರೆ , ನಾನೇ ನಿಮ್ಮ ಮನೆಯಲ್ಲಿ ಇದ್ದೀನಿ ಅಂತಾ ಮಾರ್ಮಿಕವಾಗಿ ಹೇಳಿ ಮುಂದೆ ಪಯಣವನ್ನು ಬೆಳೆಸುತ್ತಾರೆ.

ಅಪ್ಪಾವರ ಕೊಟ್ಟ ಮಂತ್ರಾಕ್ಷತೆಯು ದೂಡವರು ಮಾಡಿದ ಅನುಗ್ರಹ ,ಸಂಪುಷ್ಟದಲಿ ಇಡುತ್ತಾರೆ.
ಮುಜಾಮುದಾರರು ಅವರದು ಒಂದು ಪದ್ದತಿ. ಸ್ನಾನ ವಾದನಂತರ ದೇವರ ಮನೆ,ಕಟ್ಟಿ ಸ್ವಚ್ಛತೆ ಮಾಡಿ ಅಲ್ಲಿ ಇಟ್ಟಿರುವ ಸಂಪುಷ್ಟ ತೆಗೆದುಕೊಂಡು ತುಳಸಿ ತರುವದು ನಿತ್ಯ ಪದ್ಧತಿ.

ಆದಿನ ಸಂಪುಷ್ಟ ಬಹು ಭಾರವಾಗಿ ತೋರಿತು ಯಾಕೆ ಇಷ್ಟು ಭಾರವಾಗಿದೆ ,ಅದರಲ್ಲಿ ಏನು ಇಟ್ಟಿಲ್ಲ !!!
ಅಂತ ತೆಗೆದು ನೋಡಲಾಗಿಅಪ್ಪಾವರ ಬೆಳ್ಳಿಯ ಮೂರ್ತೀ ಸುಮಾರು 3inch ಅಳತೆಯ ಪ್ರತಿಮೆ ಕಾಣುತ್ತದೆ ತಕ್ಷಣ, ಮುಜಾಮುದಾರರಿಗೆ
ಅಪ್ಪಾವರು ತಮ್ಮ ಮೇಲೆ ಮಾಡಿದ  ಅನುಗ್ರಹ ನೆನೆದು ಆನಂದಭರಿತರಾಗುತ್ತಾರೆ. 

ಶ್ರೀ ಇಭರಾಮಪುರೋಪಾಖ್ಯಾ ಕೃಷ್ಣಾರ್ಯ ಮಹಿಮಾಂ ಭುದೇಃ |
ಏಕಸ್ಯಾಲ್ಪ ತರಂಗಸ್ಯ ವರ್ಣನಂ ಸಮುದೀರಿತಮ್|| 

ಶ್ರೀ ಮದ್ ಇಭರಾಮಪುರಾಧೀಶರಾದ ಅಪ್ಪಾವರ ಮಹಿಮಾ ಸಮುದ್ರದ ಆಗಾದ ಅಲೆಗಳಲ್ಲಿ ಒಂದು ಚಿಕ್ಕದಾದ ಅಲೆಯಂತೆ ಯಥಾವತ್ತಾಗಿ ಅವರ ಅನುಗ್ರಹದಿಂದ ಹೇಳುತ್ತಿದ್ದೇನೆ.

Pic: ಅಪ್ಪಾವರು ತಾವು ಕೊಟ್ಟ ಮಂತ್ರಾಕ್ಷತೆಯಿಂದ ಆಯ ಪ್ರತಿಮೆ.ಪ್ರತಿಮೆ ಮುಜಾಮುದಾರರ ಮನೆಯಲ್ಲಿ ಇದೆ.ಕಿತ್ತೂರಿನಲ್ಲಿ ಅವರ ವಂಶಸ್ಥರ ಮನೆಯಲ್ಲಿ ಇದೆ.

*****


|| ಶ್ರೀ ಇಭರಾಮಪುರಾಧೀಶಾಯ ನಮಃ ||
|| ಶ್ರೀ ಅಪ್ಪಾವರ ಮಹಿಮೆ ||

 ಹುಲಿ ಮರಡಿ :
ಇಭರಾಮಪುರದ ಹತ್ತಿರ ಹುಲಿ ಮರಡಿ ಎಂಬ ಸ್ಥಳವಿದೆ. ನಿರ್ಜನವಾದ ಗುಡ್ಡಗಾಡಿನ ಪ್ರದೇಶವಾದ ಅಲ್ಲಿ ಹಿಂದೆ ಹುಲಿಯ ಕಾಟವಿದ್ದುದರಿಂದ ಹುಲಿಮರಡಿ ಎಂಬ ಹೆಸರು ಬಂದಿದೆ.

ಶ್ರೀ ಅಪ್ಪಾವರ ಕಾಲದಲ್ಲಿ ಆ ನಿರ್ಜನವಾದ ಬೆಟ್ಟದ ಪ್ರದೇಶದಲ್ಲಿ ಹುಲಿಯ ಕಾಟ ವಿಪರೀತವಾಗಿತ್ತು. ಅಲ್ಲಿ ವ್ಯಾಘ್ರವೊಂದು ಸೇರಿಕೊಂಡು ಜನ- ಜಾನುವಾರುಗಳಿಗೆ ಬಹಳ ತೊಂದರೆಯನ್ನು ಕೊಡುತಿತ್ತು ಅಲ್ಲದೆ ಜೀವಹಾನಿಗೆ ಕಾರಣವಾಗಿತ್ತು. ಹಾಗಾಗಿ ತಮ್ಮ ಜಾನುವಾರುಗಳನ್ನು ಕಳೆದುಕೊಂಡ ಗ್ರಾಮಸ್ಥರು ಆ ಸ್ಥಳದಕಡೆ ತಿರುಗಿಯೂ ನೋಡುತ್ತಿರಲಿಲ್ಲ.

ಆ ವ್ಯಾಘ್ರ ಹುಲಿಯ ಭಾದೆಯನ್ನು ಸಹಿಸಲಾರದೇ  ಆ ಗ್ರಾಮದ ಜನರು ಶ್ರೀ ಅಪ್ಪಾವರ ಮೋರೆ ಹೋಗುತ್ತಾರೆ. ಗ್ರಾಮಸ್ಥರ ಈ ಸಮಸ್ಯೆಯನ್ನು ಕೇಳಿದ ಅಪ್ಪಾವರು ಭಯಭೀತರಾಗಿ ಬಂದು ನಿಂತಿದ್ದವರೇಲ್ಲರೀಗೂ  ಧೈರ್ಯ ಹಾಗು ಆತ್ಮಸ್ಥೈರ್ಯವನ್ನು ತುಂಬಿ ಮಂತ್ರಾಕ್ಷತೆಯನ್ನು ಕೊಟ್ಟು, ನಾಳೆಯಿಂದ ನಿಮಗೆ ಆ ವ್ಯಾಘ್ರದಭಾದೆ ಇರುವುದಿಲ್ಲ ನೀವುಗಳು ನಿಶ್ಚಿಂತೆಯಿಂದ ನಿಮ್ಮ ಗ್ರಾಮಕ್ಕೆ ತೆರಳಿ ಎಂದು ತಿಳಿಸಿದರು. ಅಪ್ಪಾವರ ಮಾತಿಗೆ ಸಂತುಷ್ಟರಾದ  ಗ್ರಾಮಸ್ಥರು ನೆಮ್ಮದಿಯಿಂದ  ಊರಿನ‌ ಕಡೆಗೆ ಪ್ರಯಾಣ ಬೆಳೆಸಿದರು.

ಮರುದಿನ ಬೆಳಗಾಗುವುದರಲ್ಲಿ ಆ ದಟ್ಟ ಅರಣ್ಯದಲ್ಲಿದ್ದ ವ್ಯಾಘ್ರ ಅಲ್ಲಿಂದ ಪಲಾಯನವಾಗಿ ಬಿಟ್ಟಿತ್ತು.

ಅಂದು ರಾತ್ರಿ ಸ್ವತಃ ಶ್ರೀ ಅಪ್ಪಾವರು ತಮ್ಮ ರೂಪವನ್ನು ಬದಲಿಸಿ ಹೆಬ್ಬುಲಿಯಾಗಿ ಆ ಬೆಟ್ಟದಲ್ಲಿ ಹೋಗಿ ಆ ಕ್ರೂರ ವ್ಯಾಘ್ರವನ್ನು ಓಡಿಸಿರುತ್ತಾರೆ.

ಹೀಗೆ ಶ್ರೀ ಅಪ್ಪಾವರು ತಾವು ಮನುಷ್ಯರೂಪದಿಂದ ರೂಪಾಂತರವಾಗಿ ಹಲವು ಮಹಿಮೆಗಳನ್ನು ತೋರಿ ತಾವು ದೈವಾಂಶ ಸಂಭೂತರೆಂದು ತೋರಿದ್ದಾರೆ.

ಭೌತಿಕ ದೇಹದಿಂದ ಇರುವ ಸಮಯದಲ್ಲಿ ಸಹ ಬೇರೆ ಕಡೆಗೆ ಒಂದು ಅಂಶದಿಂದ ಬಂದು ಭಕ್ತರ ಉದ್ದಾರ ಮಾಡುವದು ಮತ್ತು ಸುಮನೋಹರ ಪರಿಮಳವನ್ನು ಬೀರುವದು ,ಹೀಗೆ ಮೊದಲಾದ ಅಪೂರ್ವ ಮಹಿಮೆಯನ್ನು,ಅಂದಿಗು ಮತ್ತುಇಂದಿಗು ಸಹ ತೋರುತ್ತಾ,ಭಕ್ತರು ಬೇಡಿದ ಇಷ್ಟಾರ್ಥ ಗಳನ್ನು ನೆರವೇರಿಸಿ,ಇಭರಾಮಪುರದಲ್ಲಿ ನೆಲೆಸಿರುವ ಅಪ್ಪಾವರ ಕಾರುಣ್ಯ ಬಹಳ ದೊಡ್ಡದು..
ಭಗವಂತನ ಕೃಪೆ ಇಂದ ಇಂತಹ ಅಪರೋಕ್ಷ ಜ್ಞಾನಿಗಳ ಮಹಿಮೆ ವ್ಯಾಪ್ತವಾದುದು. 


 ಶ್ರೀ ಬಾದರಾಯಣವಿಠಲರು .

ಘನ್ನ ಭಕ್ತಿ ವಿರಕ್ತಿ ನೀಡುವುದರಲಿ ।
ಇನ್ನು ನಿನಗೆಣೆಗಾಣೆ ಪುಣ್ಯ ಪುರುಷ ।
ಪುನೀತ ಪೂರ್ಣ ಕಾರುಣ್ಯ ನಿರ್ದೋಷ ವೇಷಾ ।।

ಇಭರಾಮಪುರದರಸೆ ಈಪ್ಸಿತ ಫಲಪ್ರದ ।
ತ್ರಿಭುವನ ವ್ಯಾಪ್ತಿ ಸಿರಿ ವಿಷ್ಣುದರ್ಶಿ ।।

 ಶ್ರೀ ಜಯೇಶವಿಠಲರು 

ಈ ಧರಣಿಯಲಿ ಕಲಿಯು ಬಾಧಿಸಲು ಸುಜ್ಞಾನ ।
ಮೇದಿನಿ ಸುರರೆಲ್ಲ ಮೊರೆಯಿಡಲು ಶ್ರೀ ರಮಣ ।
ಭೇದ ಸತ್ಯವ ತೋರೆ ಕೃಷ್ಣಾರ್ಯ ಪ್ರಭುವರನ ।
ಆದರದಿ ಕಳುಹಿದನು ನಿನ್ನ ಸಹಿತಾ ।।

ಕಪ್ಪುಗೊರಳನ ಬಿಂಬಾ ಅಪ್ಪ ಸಲಹೋ ।।

 ಶ್ರೀ ವಿಜಯರಾಮಚಂದ್ರದಾಸರ ಶಿಷ್ಯರಾದ ಶ್ರೀ ಬಾಲಕೃಷ್ಣದಾಸರು 

ನಮ್ಮ ಸ್ವಾಮಿ ಕೃಷ್ಣಾರ್ಯವರ್ಯ । ಪರ ।
ಬೊಮ್ಮನ ಅರ್ಚಿಸಿ ಮುಂದೆ ।
ಬ್ರಹ್ಮ ಪದವಿ ಪಡೆವಾ ।।

ಜೀವದಲ್ಲಿ ಇಂದ್ರಿಯದಲ್ಲಿ ದೇಹದಲ್ಲಿ ಮನಸ್ಸಿನಲ್ಲಿ ।
ಭುವಿಯಲ್ಲಿ ಮೊದಲಾದ ಅಖಿಳ ಲೋಕದಲ್ಲಿ ನಿಂದು ಪೊರೆವಾ ।।

ಸ್ಮರಿಸುವ ನರನೆ ಧನ್ಯ
 ಇಭರಾಮಪುರಾಧೀಶ


********



**



No comments:

Post a Comment