Tuesday 1 January 2019

ಅಪ್ಪಾವರು ಮಹಿಮೆ 03 ಇಭರಾಮಪುರ appavaru mahime 03 ibharamapura



ಶ್ರೀ ಅಪ್ಪಾವರ ಮಹಿಮೆ ;ಅಭಿಮಂತ್ರಿತ ಅಂಗಾರದ
ಒಂದು ಸಲ ಸಂಚಾರ ಸಮಯದಲ್ಲಿ ಶ್ರೀ ಅಪ್ಪಾವರು (ಶ್ರೀ ಕೃಷ್ಣಾರ್ಯರು) ಸುರಪುರದಲ್ಲಿ ಇದ್ದರು.ಅಲ್ಲಿ ಒಬ್ಬರು ಶ್ರೀ ಪಾಲ್ಮೂರು ವಾಮನಾಚಾರ್ಯ ಎಂಬುವರು ಅಪ್ಪಾವರ ಭಕ್ತರು.

ಅಪ್ಪಾವರು ಅಲ್ಲಿ ಇದ್ದ ಸಮಯದಲ್ಲಿ ಆ ವಾಮನಾಚಾರ್ಯರ ಪತ್ನಿ ಗರ್ಭಿಣಿ ಆಗಿದ್ದು ಪ್ರಸವ ಕಾಲ ಸಮೀಪಿಸಿತ್ತು.

ಸಕಾಲದಲ್ಲಿ ಆ ಹೆಣ್ಣು ಮಗಳು ಗಂಡು ಮಗುವಿಗೆ ಜನ್ಮ ಇತ್ತಳು.

ಆದರೇನು?? ಪ್ರಸವ ಸಮಯದಲ್ಲಿ ಆ ಬಾಣಂತಿಗೆ ಎರಡು ಕಣ್ಣು ಗಳು ಇಂಗಿಹೋಯಿತು. ಎಷ್ಟೋ ಉಪಚಾರಗಳಾದವು.

ಆ ಕಾಲದಲ್ಲಿ ಇರುವ ಎಲ್ಲಾ ವೈದ್ಯಕೀಯ ಚಿಕಿತ್ಸೆ ಗಳು ಆದವು. ಅನೇಕ ವೈದ್ಯರ ಪ್ರಯತ್ನ ಮಾಡಿದರು ಸಹ ಕುರುಡು ಆಗಿದ್ದ ಆ ತಾಯಿಯ ಕಣ್ಣು ಬರಲಿಲ್ಲ.


ಆ ನಂತರ ವಾಮನಾಚಾರ್ಯರು ಅಪ್ಪಾವರ ಬಳಿ ಬಂದು ತಮಗೆ ಬಂದು ಒದಗಿದ ಕಷ್ಟದ ಪರಿಸ್ಥಿತಿ ಹೇಳಿಕೊಂಡರು.

ತಕ್ಷಣ ಅಪ್ಪಾವರು ಹೇಳಿದರು ವೃದ್ಧಿ ಮುಗಿದ ಮೇಲೆ ಬಂದು ನಮಗೆ ಕಾಣಬೇಕು ಅಂತ ಆದರೇನು ಮಾಡುವದು!! ಆ ಆಚಾರ್ಯರಿಗೆ ಯಾವುದೊ ಕೆಲಸದ ನಿಮಿತ್ತ ಹೈದರಾಬಾದ್ ಹೋಗುವ ಅವಶ್ಯಕತೆ ಇರುತ್ತದೆ. ಆ ಕೆಲಸ ಮುಗಿಸಿಕೊಂಡು ೧೫ದಿನಗಳ ನಂತರ ಊರಿಗೆ ಬಂದು ಶ್ರೀ ಅಪ್ಪಾವರ ಬಳಿ ಬಂದು ವಿಜ್ಞಾಪನೆ ಮಾಡಿಕೊಳ್ಳಲು

ಶ್ರೀ ಅಪ್ಪಾವರು ಹೇಳುತ್ತಾರೆ

ವಾಮನಾಚಾರ್ಯರೇ!! ಸಮಯವು ಮೀರಿಹೋಯಿತು.

ನಾವು ತಿಳಿಸಿದ ಹಾಗೆ ವೃದ್ದಿ ತೀರಿದ ನಂತರ ಹೇಳಿದ ಸಮಯಕ್ಕೆ ನೀವು ಬರಲಿಲ್ಲ.ಚಿಂತಿಸಬೇಡಿ ನಿಮ್ಮ ಹೆಂಡತಿಗೆ ಒಂದೇ ಕಣ್ಣು ಬರುತ್ತದೆ. ಮತ್ತೊಂದು ಬರುವುದಿಲ್ಲ ಇಗೋ ಈ ಅಭಿಮಂತ್ರಿತವಾದ,ಪೂಜೆ ಸಮಯದಲ್ಲಿ ಧೂಪಾರತಿ ಮಾಡಿದ ಶ್ರೀ ವಿಷ್ಣು ವಿಗೆ ಸಮರ್ಪಿತವಾದ ಅಂಗಾರವನ್ನು ತೆಗೆದುಕೊಂಡು ದಿನಂಪ್ರತಿ ಈ ಅಂಗಾರವನ್ನು ಸಾಣೆಕಲ್ಲಿನ ಮೇಲೆ ತೇಯ್ದು ಅವರ ಕಣ್ಣಿಗೆ ಹಚ್ಚುತ್ತಾ ಬನ್ನಿ. ನಮ್ಮ ಉಪಾಸ್ಯ ಮೂರ್ತಿ ಯಾದ ಶ್ರೀ ಪಂಚಮುಖಿ ಪ್ರಾಣದೇವರು ಅವರಿಗೆ ನೇತ್ರವನ್ನು ಅನುಗ್ರಹ ಮಾಡುತ್ತಾರೆ. ಚಿಂತಿಸಬೇಡಿ ಅಂತ ಹೇಳಿ ಅಂಗಾರವನ್ನು ಕೊಡುತ್ತಾರೆ.

ಶ್ರೀಅಪ್ಪಾವರ ಮಾತಿನಂತೆ ಅದೇ ರೀತಿ ಚಿಕಿತ್ಸೆ ಮಾಡಲು ಬರೇ ಮೂರು ದಿನದಲ್ಲಿ ಆ ಹೆಣ್ಣು ಮಗಳಿಗೆ ಬಲಗಣ್ಣು ಕಾಣಲು ಆರಂಭವಾಯಿತು. ಅದೊಂದೇ ಕಣ್ಣು ಅವರು ಜೀವಿತಕಾಲದವರೆಗೆ ಇದ್ದು ಶ್ರೀ ಅಪ್ಪಾವರ ಚರಣ ಭಜನೆಯನ್ನು ಮಾಡುತ್ತಾ ಕಾಲ ಕಳೆದರು. ಮತ್ತು ಸದ್ವಂಶಾಭಿವೃದ್ದಿಯನ್ನು ಪಡೆದರು.
ಉದಯಕಾಲದಿ ಇಂತಹ ಪರಮ ಭಾಗವತರ ಸ್ಮರಣೆ

ನಮ್ಮ ಜೀವನ ಉದ್ದಾರವಾಗುವದರಲ್ಲಿ ಸಂಶಯವಿಲ್ಲ.

ಚಿರಕಾಲ ಸೇವಿಪ ಪರಮ ವಂದ್ಯರಿಗೆಲ್ಲ

ವರ ಪುತ್ರ ಸೌಖ್ಯ ವ ಕರುಣಿಸುವರು ಸತ್ಯ

ಸ್ಮರಿಸುವ ನರನೇ ಧನ್ಯ

ಶ್ರೀ ಕೃಷ್ಣಾರ್ಯರ
*****
ಶ್ರೀ ಅಪ್ಪಾವರ ಹೆಸರಿನ ಮಹಿಮೆ:
ಶ್ರೀ ಅಪ್ಪಾವರ ಕೀರ್ತಿಯು ಅಪಾರವಾದದ್ದು , ದೇಶದೆಲ್ಲೆಡೆ ಹಲವಾರು ಶಿಷ್ಯರು ಅಪ್ಪಾವರ ಅನುಗ್ರಹಕೆ ಪಾತ್ರರಾಗಿದ್ದರು. ಹೀಗೆ ತಮ್ಮ ಶಿಷ್ಯರೊಬ್ಬರಾದ ಶ್ರೀ ಕೆರೊಡೆ ಕೃಷ್ಣ ರಾಯರ ಆಮಂತ್ರಣದ ಮೇರೆಗೆ ಶಿವಮೊಗ್ಗಕ್ಕೆ ಬಂದಿರುತ್ತಾರೆ.

ಅಪ್ಪಾವರ ಸಂಪೂರ್ಣ ಅನುಗ್ರಹಕೆ ಪಾತ್ರರಾಗಿದ್ದವರು ಶ್ರೀ ಕೆರೊಡೆ ಕೃಷ್ಣರಾಯರು ಶಿಷ್ಯ ಮನೆತನದವರು. ತಮ್ಮ ಸರ್ವಸ್ವವನ್ನೂ ಅಪ್ಪಾವರಿಗೆ ಸಮರ್ಪಣೆ ಮಾಡಲು ಸಂಕಲ್ಪಿಸಿದ್ದರು. ಆದರೆ ಯದ್ಪಚ್ಛಾಲಾಭ ಸಂತುಷ್ಟರಾದ ಅಪ್ಪಾವರು ಇದಕ್ಕೆ ಸಮ್ಮತಿಸಲಿಲ್ಲ. ತಮ್ಮಿಂದ ಏನನ್ನಾದರೂ ಸ್ವೀಕರಿಸಿ ಅಂತ ಶಿಷ್ಯ ಒತ್ತಾಯ ಮಾಡಿದಾಗ ಅಪ್ಪಾವರು ನಿನಗೆ ಕೊಡಲೇಬೇಕೆಂಬ ಇಚ್ಛೆಯಿದರೆ ನಿಮ್ಮಲ್ಲಿ ಇರುವ ಮರದ ದಿಮ್ಮಿಗಳನು ನಮಗೆ ಕೊಡಿ ಎಂದರು.
ಶ್ರೀ ಅಪ್ಪಾವರ ಆಜ್ಞೆಯಂತೆ ಸಂತುಷ್ಟರಾದ ಕುಟುಂಬದವರು ಎಲ್ಲ ಮರದ ದಿಮ್ಮಿಗಳನ್ನು ಸಮರ್ಪಣೆ ಮಾಡುತ್ತಾರೆ.
ಆ ಕಾಲದಲ್ಲಿ ಇಂಥಹ ದೊಡ್ಡದಾದ ವಸ್ತುಗಳ ಸಾಗಣೆಗೆ ವ್ಯವಸ್ಥೆ ಇರಲಿಲ್ಲ. ಈ ವಿಷಯದ ಬಗ್ಗೆ ಕುಟುಂಬದ ಸದಸ್ಯರಿಗೆ ಗೊಂದಲ ಮತ್ತು ಚಿಂತೆ ಉಂಟಾಗುತದೆ.
ಈ ಸಮಸ್ಯೆ ಬಗ್ಗೆ ಶ್ರೀ ಅಪ್ಪಾವರಲ್ಲಿ ಹೇಳಿದಾಗ , ಚಿಂತಿಸಬೇಡಿ!! ಮರದ ದಿಮ್ಮಿಗಳಮೇಲೆ

ಶ್ರೀ ಇಭರಾಮಪುರ ಅಪ್ಪಾವರು ಅಂತ ಬರೆದು ನಿಮ್ಮ ಊರಿನಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಬಿಡಿ ಅವು ನಮಗೆ ತಲುಪುತ್ತೆ ಅಪ್ಪಾವರು ಹೇಳಿದ ಹಾಗೆ ಅವರ ಶಿಷ್ಯ ಪರಿವಾರ ಆ ಮರದ ದಿಮ್ಮಿಗಳನ್ನು ಶಿವಮೊಗ್ಗದ ತುಂಗಭದ್ರಾ ನದಿಯಲ್ಲಿ ಹಾಕಿದರು. ಶಿವಮೊಗ್ಗದಿಂದ ತುಂಗಭದ್ರ ನದಿಯಿಂದ ಇಭರಾಮಪುರ ಹತ್ರದಲ್ಲಿ ಇರುವ ನದಿಖೈರವಾಡಿಗೆ ಬಂದು ತಲುಪಿದವು.

ಈ ಮರದ ದಿಮ್ಮಿಯಿಂದ ಶ್ರೀ ಅಪ್ಪಾವರು ಮಂತ್ರಾಲಯದಲ್ಲಿ ತಮ್ಮ ಮನೆನಿರ್ಮಾಣಕ್ಕೆ ಉಪಯೋಗ ಮಾಡಿದರು.
ವಿ.ಸೂ : 

ಮಂತ್ರಾಲಯದಲ್ಲಿ ಶ್ರೀ ರಾಮಚಂದ್ರಾಚಾರ್ಯ ಇರುವ ಮನೆಯು ಅಪ್ಪಾವರು ವಾಸವಾಗಿದ್ದ ಸ್ಥಳ. ಆ ಮನೆಯ ನಿರ್ಮಾಣ ಶ್ರೀ ಅಪ್ಪಾವರು ಶಿವಮೊಗ್ಗ ಇಂದ ಬಂದ ಈ ಕಟ್ಟಿಗೆಯಿಂದ ಮನೆ ನಿರ್ಮಾಣ ಮಾಡಿಸಿದ್ದು.

--
ನಂದವಾರ ಎನ್ನುವ ಊರು ಇಭರಾಮಪುರ ಗ್ರಾಮಕ್ಕೆ ಹತ್ತಿರವಾದ ಗ್ರಾಮ. ಆ ಗ್ರಾಮದಲ್ಲಿ ನಂದವಾರ ದೇಸಾಯಿ ಮನೆತನದವರು ನೆಲೆಸಿದ್ದು. ಸುಖ ಸಂಪತಿನಲ್ಲಿ ಇದ್ದ ದೇಸಾಯಿ ಮನೆತನಕೆ ಸಂತಾನ ಭಾಗ್ಯ ಇರಲಿಲ್ಲ. ಸಂತಾನ ಅನುಗ್ರಹಕಾಗಿ ಅಪ್ಪಾವರ ಮೊರೆ ಹೋಗುತ್ತಾರೆ. ಶ್ರೀ ಅಪ್ಪಾವರ ಅನುಗ್ರಹದಿಂದ ಅವರ ವಂಶ ಬೆಳೆಯುತ್ತದೆ.
ಶ್ರೀ ಅಪ್ಪಾವರು ಮಾಡಿದ ಅನುಗ್ರಹಕೆ ದೇಸಾಯಿವರು ಶ್ರೀ ಅಪ್ಪಾವರಿಗೆ ನಿತ್ಯ ಅನುಷ್ಠಾನಕ್ಕೆ ಇಭರಾಮಪುರದಲ್ಲಿ ಮಂಟಪ ಕಟ್ಟಲು ಸಂಕಲ್ಪಿಸುತ್ತಾರೆ.
ಮಂಟಪ ಕಟ್ಟಲು ಬೇಕಾದ ಎಲ್ಲಾ ಬಂಡೆಗಳು ರಾಂಪುರ ಗ್ರಾಮದಲ್ಲಿ ಇರುತ್ತದೆ. ಕಲ್ಲು ಬಂಡೆಗಳು ಸಾಗಿಸಲು ದೂರದ ಇಭರಾಮಪುರಕೆ ಸೇರಿಸುವುದು ಅಸಾಧ್ಯ ಮಾತು. ದೇಸಾಯಿಯವರ ಅಪ್ಪಾವರಲ್ಲಿ ಇ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ.
ಅಪ್ಪಾವರು ಆಗ ಬಂದು,

ಎಲ್ಲಾ ಬಂಡೆಗಳ ಮೇಲೆ ಇಭರಾಮಪುರ ಶ್ರೀ ಅಪ್ಪಾವರು ಅಂತ ಬರೆದು ನದಿಗೆ ಹಾಕಿಸು ಅಂತ ಹೇಳುತ್ತಾರೆ.

ಅಪ್ಪಾವರ ಮಾತಿನಂತೆ ಆ ಕಲ್ಲುಗಳ ಮೇಲೆ ಇಭರಾಮಪುರ ಶ್ರೀ ಅಪ್ಪಾವರ ಅಂತ ಬರೆದು ನದಿಯಲ್ಲಿ ಹಾಕುತ್ತಾರೆ. ಇಭರಾಮಪುರ ಹತ್ತಿರದಲ್ಲಿ ಇದ್ದ ನದಿಖೈರವಾಡಿಯಲ್ಲಿ ತೇಲಿಬಂದವು. ಆ ದೊಡ್ಡ ಗಾತ್ರದ ಕಲ್ಲುಬಂಡೆಗಳು ಭಾರವು ಹುಲ್ಲುಕಡ್ಡಿಯಂತ ಆಗಿತ್ತು ನದಿಖೈರವಾಡಿಯಿಂದ ಇಭರಾಮಪುರಕೆ ಅತಿಸುಲಭವಾಗಿ ಸಾಗಿಸಿ ಅಲ್ಲಿ ಮಂಟಪ,ಪೂಜಾ ಗೃಹ ನಿರ್ಮಾಣವಾಯಿತು.
ಈ ಮಂಟಪವೇ ಈಗಿರುವ ಶ್ರೀ ಕ್ಷೇತ್ರ ಅಪ್ಪಾವರ ಕಟ್ಟೆಯಲ್ಲಿ ಈಗಿನ ಮಂಟಪ ವಾಗಿದೆ. ಈ ಮಂಟಪದಲ್ಲಿ ಗದುಗಿನ ಶ್ರೀ ಯೋಗಿ ನಾರಾಯಣಾಚಾರ್ಯರು ಮಂಟಪದ ಕಂಬದ ಮೇಲೆ ಗಣಪತಿ , ಪ್ರಾಣದೇವರು , ರುದ್ರದೇವರು, ಶೇಷದೇವರ,ಗರುಡದೇವರು , ರಾಯರನ್ನು ಮತ್ತು ಅವತಾರ ತ್ರಯ ಪ್ರಾಣದೇವರನ್ನು ಕೆತ್ತನೆ ಮಾಡಿದ್ದಾರೆ.
ಈ ಪ್ರಾಣದೇವರ ವಿಶೇಷ ಏನೆಂದರೆ ಕೈಯಲ್ಲಿ ಕಮಂಡಲು ಹಿಡಿದಿರುವದು.
ಸ್ಮರಿಸುವ ನರನೇ ಧನ್ಯ.

ಇಭರಾಮಪುರಾಧೀಶ
******



Pic : ಶ್ರೀ ಅಪ್ಪಾವರ ಕಟ್ಟೆಯಲ್ಲಿ ಇರುವ ಮಂಟಪ

ಶ್ರೀ ಅಪ್ಪಾವರು ಮಹಿಮೆ

ಗದುಗಿನಲ್ಲಿ ಶ್ರೀ ಅಪ್ಪಾವರು ರಾಯರ ವೃಂದಾವನ ಪ್ರತಿಷ್ಠಿತ ಮಾಡಿದ ಇತಿಹಾಸ.

ಒಮ್ಮೆ ಶ್ರೀ ಅಪ್ಪಾವರು ಸಂಚಾರತ್ವೇನ ಗದಗಿಗೆ ಬರುತ್ತಾರೆ.
ಬಂದವರು ಎಲ್ಲಾ ಶಿಷ್ಯರ ಮನೆಗೆ ಹೋಗಿ ಅವರಿಗೆ ಆಶೀರ್ವಾದ ಮಾಡಿ ನಂತರ ಗದುಗಿನ ಶ್ರೀ ವೀರನಾರಾಯಣ ಗುಡಿಗೆ ಹೋಗುತ್ತಾರೆ.

ಅವರು ಹೋದಾಗ ಗುಡಿಯಲ್ಲಿ ಒಂದು ಕಡೆ ಪ್ರಾಕಾರದ ಮಂಟಪದಲ್ಲಿ ಶ್ರೀ ಯೋಗಿ ನಾರಾಯಣ ಆಚಾರ್ಯರು ಒಂದು ಕಡೆ ಪಾರಾಯಣ ಮಾಡುತ್ತಾ ಕುಳಿತಿರುತ್ತಾರೆ. ಶ್ರೀ ಅಪ್ಪಾವರನ್ನು ನೋಡಿ ಅವರು ಮಾತನಾಡಿಸುವದಿಲ್ಲ ಅಪ್ಪಾವರು ಸಹ ಅವರನ್ನು ನೋಡುವುದಿಲ್ಲ.ಗರ್ಭಗುಡಿಯ ಬಾಗಿಲು ಬೀಗ ಹಾಕಿದೆ. ಅವಾಗ ಅಪ್ಪಾವರು ನಾರಾಯಣಪ್ಪ ನಿನ್ನ ದರುಶನಕ್ಕೆ ಬಂದರೆ ಪೂಜಾರಪ್ಪ ಬೀಗ ಹಾಕಿಕೊಂಡು ಹೋಗ್ಯಾನ*ಏನು ಮಾಡಲಿ  ಅಂತ ಹೇಳಿದಾಗ ತಕ್ಷಣ ಗುಡಿಯ ಬೀಗ ಒಡೆದು ನಾರಾಯಣನ ದರುಶನ ಆಗುತ್ತದೆ.ಇಬ್ಬರು ಒಬ್ಬರಿಗೊಬ್ಬರು ಮಾತನಾಡುತ್ತಾ ಇರುತ್ತಾರೆ.

ಈ ದೃಶ್ಯಗಳನ್ನು ನೋಡಿದ  ಶ್ರೀಯೋಗಿ ನಾರಾಯಣ ಆಚಾರ್ಯರು ಅಪ್ಪಾವರು ಬಳಿ ಬಂದು ಅವರ ಕಾಲನ್ನು ಗಟ್ಟಿಯಾಗಿ ಹಿಡಿದು ಸ್ವಾಮಿ!! ನಿಮ್ಮ ಹೆಸರನ್ನು ಕೇಳಿದ್ದೆ.ನಿಮ್ಮನ್ನು ನೋಡಿದ್ದಿಲ್ಲ. ಇವಾಗ ನಿಮ್ಮ ಪರಿಚಯ ಆಯಿತು. ದಯವಿಟ್ಟು ಇಂದಿನಿಂದ ನನ್ನನ್ನು ನಿಮ್ಮ ಶಿಷ್ಯ ನನ್ನಾಗಿ ಸ್ವೀಕಾರ ಮಾಡಿ.ಇಂತಹ ಗುರುಗಳು ಸಿಗುವುದು ಬಹಳ ದುರ್ಲಭ ದಯವಿಟ್ಟು ನಿಮ್ಮ ಜೊತೆಗೆ ನಮ್ಮ ಸಕುಟುಂಬ ಪರಿವಾರ ಸಮೇತ ನನ್ನ ಜೀವನ ಪೂರ್ತಿ ನಿಮ್ಮ ಜೊತೆಗೆ ಇದ್ದು ಸೇವೆ ಮಾಡುವ ಭಾಗ್ಯ ವನ್ನು ಕೊಡಿ ಅಂತ ಕೇಳುತ್ತಾರೆ
ಅವಾಗ ಶ್ರೀ ಅಪ್ಪಾವರು ನಾರಾಯಣ ನಾನು ನಿನಗೆ ಗುರು,ನೀನು ನನ್ನ ಶಿಷ್ಯ ಸರಿ.

ಆದರೆ ನಮಗೆಲ್ಲ ಗುರುಗಳು ಮಂತ್ರಾಲಯ ಪ್ರಭುಗಳು.ಈ ಸನ್ನಿವೇಶ ನೆನಪಿಗಾಗಿ ನೀನು ಒಂದು ರಾಯರ ವೃಂದಾವನ ಕೆತ್ತನೆ ಮಾಡು ಅಂತ ಹೇಳುತ್ತಾರೆ.ಆಗ ಶ್ರೀ ಯೋಗಿ ನಾರಾಯಣ ಆಚಾರ್ಯರು ವೃಂದಾವನ ಒಳಗಡೆ ಮೃತ್ತಿಕಾ ಇಡಲು ಅದರ ಅಳತೆ ಹೇಗೆ ಅಂತ ಕೇಳಿದಾಗ ಆಗ ಅಪ್ಪಾವರು ನಾರಾಯಣ ಏಕ ಶಿಲಾ ವೃಂದಾವನ ಕೆತ್ತನೆ ಮಾಡು.ವೃಂದಾವನ ಸುತ್ತಲೂ ಶ್ರೀ ಪ್ರಾಣದೇವರು ಮೂರ್ತಿ ಕೆತ್ತನೆ ಮಾಡು ಹಾಗು ವೃಂದಾವನ ಮೇಲುಗಡೆ ಒಂದು ಸಣ್ಣ ರಂಧ್ರ ವನ್ನು ಮಾಡು ರಾಯರು  ಪ್ರತಿಷ್ಟೆ ಸಮಯದಲ್ಲಿ ಜ್ಯೋತಿ ರೂಪದಲ್ಲಿ ಅಲ್ಲಿ ಬಂದು ತಾವೇ ಪ್ರತಿಷ್ಟಿತ ಆಗುತ್ತಾರೆ*.ಅಂತ ಹೇಳುತ್ತಾರೆ.ಅದರಂತೆ ಗದುಗಿನ ಶ್ರೀ ವೀರ ನಾರಾಯಣ ನ ಬಲಗಡೆ ಪ್ರಾಕಾರದಲ್ಲಿ ಪ್ರತಿಷ್ಠಿತ ಆಗುತ್ತದೆ .

ವೃಂದಾವನ ಪ್ರತಿಷ್ಠಿತ ಆದ ಮೇಲೆ ರಾಯರು ಜ್ಯೋತಿ ರೂಪದಿಂದ ಅದರಲ್ಲಿ ಪ್ರವೇಶ ಮಾಡುತ್ತಾರೆ*.
ಆ ನಂತರ ರಾಯರ ಎದುರುಗಡೆ ಶ್ರೀ ಲಕ್ಷ್ಮೀ ನರಸಿಂಹ ದೇವರ ವಿಗ್ರಹ ಪ್ರತಿಷ್ಠಿತ ಮಾಡುತ್ತಾರೆ.ಯಾಕೆ ಶ್ರೀ ಲಕ್ಷ್ಮೀ ನರಸಿಂಹ ದೇವರ ಪ್ರತಿಷ್ಠಿತ ಆಯಿತು ಅಂದರೆ ರಾಯರು ಪೂರ್ವ ದಲ್ಲಿ ಶ್ರೀ ಪ್ರಹ್ಲಾದ ರಾಜರಾಗಿದ್ದಾಗ ನರಸಿಂಹ ದೇವರನ್ನು ಒಲಿಸಿಕೊಂಡಿದ್ದು ಒಂದು ಕಾರಣ ಇನ್ನೊಂದು ಶ್ರೀ ಅಪ್ಪಾವರ  ಕುಲದೇವರು ಶ್ರೀ ಉರುಕುಂದಿ ನರಸಿಂಹ ದೇವರು ಮತ್ತು 

ಇನ್ನೊಂದು ಶ್ರೀ ತಿರುಪತಿಯ ವೆಂಕಪ್ಪ .
****
**
[7:01 PM, 2/2/2019] +91 95358 37843: ಅಪ್ಪಾವರ ಮಹಿಮೆ :

ತೀರ್ಥ ಯಾತ್ರೆ:
ಶ್ರೀ ಅಪ್ಪಾವರು ಒಂದು ಬಾರಿ ದಕ್ಷಿಣ ಭಾರತದ ತೀರ್ಥ ಯಾತ್ರೆ ಮಾಡಲು ಇಚ್ಚಿಸುತ್ತಾರೆ. ಇದಕ್ಕಾಗಿಯೇ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪರಮ ಗುರುಗಳಾದ ಶ್ರೀ ವಿಜಯೀಂದ್ರತೀರ್ಥರ ದರ್ಶನ ಮಾಡಲು ನಿರ್ಧರಿಸುತ್ತಾರೆ. ಯಾತ್ರೆಯ ಬಗ್ಗೆ ಶ್ರೀ ಅಪ್ಪಾವರು ತಮ್ಮ ಶಿಷ್ಯರಾದ ಯೋಗಿ ನಾರಾಯಣಾಚಾರ್ಯರ ಹತ್ತಿರ  ಬಗ್ಗೆ ಹೇಳಿಕೊಳ್ಳುತ್ತಾರೆ.

ಶ್ರೀ ಯೋಗಿನಾರಾಯಣಾಚಾರ್ಯರು ಅಪ್ಪಾವರ ಮಾತಿನಂತೆಯೇ ಎಲ್ಲಾ ಸಿದ್ಧತೆಗಳನ್ನು ಮಾಡಿರುತ್ತಾರೆ. ದೂರದ ಕುಂಭಕೋಣಕೆ ತಲುಪಲು ಸುಮಾರು ವಾರದ ಸಮಯಬೇಕು. ವಾರಗಳೇ ಕಳೆದವು ಶ್ರೀ ವಿಜಯೀಂದ್ರ ತೀರ್ಥರ ಆರಾಧನೆ ಹತ್ತಿರವಾಗುತ್ತದೆ ಜೇಷ್ಟ ಮಾಸದ ಕೃಷ್ಣ ಪಕ್ಷ ಏಕಾದಶಿಯೂ ಕೂಡ ಬಂತು ಮರುದಿನವೇ ಶ್ರೀ ವಿಜಯೀಂದ್ರ ತೀರ್ಥರ ಮಧ್ಯಾರಾಧನೆ ಆದರೂ ಶ್ರೀ ಅಪ್ಪಾವರು ಯಾತ್ರೆಗೆ ಯಾವಾಗ ಹೊರಡುವ  ಬಗ್ಗೆ ಏನು ಸುಳಿವು ಕೊಡಲಿಲ್ಲ.

ಏಕಾದಶಿಯ ರಾತ್ರಿ ಅಪ್ಪಾವರು ಶ್ರೀ ನಾರಾಯಣಾಚಾರ್ಯರಿಗೆ ಕರೆದು ನಾಳೆ ಶ್ರೀ ವಿಜಯೀಂದ್ರರ ಮಧ್ಯಾರಾಧನೆ ದರ್ಶನಕ್ಕೆ ಹೊರಡಬೇಕು ಬೆಳಗ್ಗೆ ಬೇಗ ಎದ್ದು ಅಹ್ನಿಕಾದಿಗಳನ್ನು ಮುಗಿಸಲು ಸೂಚಿಸುತ್ತಾರೆ. ದರ್ಶನದ ಭಾಗ್ಯ ದೊರೆಯುತ್ತದೆ ಎನ್ನುವ ಖುಷಿಯಲ್ಲಿ ಇದ್ದ ಆಚಾರ್ಯರಿಗೆ ಇನ್ನೊಂದುಕಡೆ ದೂರದ ಕುಂಭಕೋಣಕೆ ಬೆಳಗಾಗುವುದರಲ್ಲಿ ಹೇಗೆ ಹೋಗಿ ತಲುಪಬೇಕೆಂಬ ಗೊಂದಲ ಮನಸ್ಸಿನಲ್ಲಿ ಮೂಡತ್ತದೆ.

ಆದರೂ  ಶ್ರೀಅಪ್ಪಾವರ ಆಜ್ಞೆ ಎಂದು ಭಾವಿಸಿ ಬೆಳಗ್ಗೆ ಬೇಗ ಎದ್ದು ಅಹ್ನೀಕಾದಿಗಳನ್ನು ಮುಗಿಸಿದ ಆಚಾರ್ಯರು ಶ್ರೀ ಅಪ್ಪಾವರ ಬಳಿ ಬಂದು ತಮ್ಮ ಮನದಲ್ಲಿನ ಗೊಂದಲಗಳನ್ನು  ಹೇಳಿಕೊಳ್ಳುತ್ತಾರೆ . ಅಪ್ಪಾವರು ಆಚಾರ್ಯರ ಗೊಂದಲಕ್ಕೆ ನಗುತ್ತಾ ನನ್ನ ಕೈ ಹಿಡಿಯಿರಿ ಎನ್ನುತ್ತಾರೆ. 

ಶ್ರೀ ಅಪ್ಪಾವರ ಕೈ ಹಿಡಿದ ಶ್ರೀ ಯೋಗಿ ನಾರಾಯಣಾಚಾರ್ಯರಿಗೆ ಕ್ಷಣಮಾತ್ರದಲ್ಲಿ ಕುಂಭಕೋಣಕೆ ತಲುಪಿಸಿ ಚತುರಧಿಕ ಶತಗ್ರಂಥರತ್ನಗಳ ಒಡೆಯರಾದ ಶ್ರೀ ವಿಜಯೀಂದ್ರ ತೀರ್ಥರ ದರ್ಶನವನ್ನು ಮಾಡಿಸುತ್ತಾರೆ.


ಹರಿಯ ಧ್ಯಾನದೊಳಿದ್ದು ನಲಿವಾ | ತನ್ನ
ಚಾರಣ ಸೇವಕರಿಗೆ ಸುಲಭದಿಂದೊಳಿವಾ |
ದುರುಳ ದೃಕೃತ್ಯಗಳಳಿವಾ | ತನ್ನವರ
ಸಮಯಕೆ ಸ್ವಪ್ನದಿ ಬಂದು ನಿಲುವಾ |
ಮರುತ ದೇವರು ಇವರ ಹೃನ್ಮಂದಿರದೊಳಗೆ ನೆಲಸಿ ನಿಜಾಭಿಮಾನದಲ್ಲಿರುವ | ಕಾರಣದಿಂದ ಸುಂದರುಶನವೇ ಸ್ವರ್ಗಾದಿ ಸಾಧನ ||

ಇಂದಿರೇಶ ದಾಸರು ಹೇಳುವಂತೆ  ಕರುಣಾ ಸಾಗರರಾದ ನಮ್ಮ ಅಪ್ಪಾವರು ತಮ್ಮ ಚಾರಣ ಸೇವಕರಿಗೆ ಅತಿಸುಲಭವಾಗಿ ಒಲಿದು ಸಾಧನದ ಮಾರ್ಗವನ್ನು ತೋರಿಸಿದ್ದಾರೆ.

ಅಗಮ್ಯ ಮಹಿಮನಾದ ಅಪ್ಪಾವರು ವಾಯುವಾಹನದ ಮೂಲಕ ಪ್ರಕಟಿಸಿದ ವಿವಿಧ ಮಹಿಮೆಗಳನ್ನು ಮೆಲಕು ಹಾಕಿದರು. ತಮ್ಮ ಮೇಲೆ ಶ್ರೀ ಪಂಚಮುಖಿ ಪ್ರಾಣದೇವರು ಸುರಿಸಿದ ಕಾರುಣ್ಯ ವೃಷ್ಟಿಯನ್ನು ಸ್ಮರಿಸಿ ಅವರ ಕಣ್ಣಲೆಗಳು ತೇಲಿ ಬಂದವು. ತಮ್ಮ ಜೀವನದಲ್ಲಿ ನಡೆದ ಸಕಲ ಕ್ರಿಯೆಗಳನ್ನೂ ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನೃಸಿಂಹದೇವರಿಗೆ ಪಾದಾರವಿಂದಗಳಲ್ಲಿ ಸಮರ್ಪಿಸಿ ಅಪ್ಪರೋಕ್ಷ ಹೊಂದಿದ್ದಾರೆ.
[7:02 PM, 2/2/2019] +91 95358 37843: 

*******

ಶ್ರೀ ಇಭರಾಮಪುರ ಅಪ್ಪಾವರ ಮಹಿಮೆ. ಭಾಗ_೫
ಉಡುಪಿ ಯಾತ್ರೆ ಯನ್ನು ಮುಗಿಸಿ ಕೊಂಡು ಶ್ರೀಅಪ್ಪಾವರು ಮುಂದೆ ಕೊಪ್ಪರ ನರಸಿಂಹ ಕ್ಷೇತ್ರ ಕ್ಕೆ ಆಗಮಿಸಿದರು.
ಕೊಪ್ಪರದಲ್ಲಿ ನರಸಿಂಹದೇವರ ಸನ್ನಿಧಿಯಲ್ಲಿ ತಮ್ಮ ತಪಸ್ಸು ಮಾಡುವದು ಅಂತ ತಿಳಿದುಕೊಂಡು ಅಪ್ಪಾವರು ಅಲ್ಲಿ ಇದ್ದ ಒಂದು ಮಂಟಪದಲ್ಲಿ ವಾಸ ಮಾಡುತ್ತಾರೆ.ಅವಾಗ ಅವರ ಕಾಲದಲ್ಲಿ ಇಷ್ಟು ಅಭಿವೃದ್ಧಿ ಹೊಂದಿದ್ದಿಲ್ಲ.
ಆ ಮಂಟಪದಲ್ಲಿ ಬರಿ ಒಂದು ನಂದಿಯ ವಿಗ್ರಹ ವಿದೆ.ಈಗಲು ಅಲ್ಲಿ ಹೋದಾಗ ನೋಡಬಹುದು.
ಆ ನಂದಿ ಬಾಗಿಲ ಕಡೆ ಬೆನ್ನು ಮಾಡಿಕೊಂಡು ಕುಳಿತಿದೆ.ಮತ್ತು ಆ ಮಂಟಪದಲ್ಲಿ ಯಾವುದೇ ಈಶ್ವರ ಲಿಂಗವಾಗಲಿ ಇದ್ದಂತೆ ಕಾಣುವುದಿಲ್ಲ.
ಇಂತಹ ಮಂಟಪದಲ್ಲಿ ಶ್ರೀ ಅಪ್ಪಾವರು ತಮ್ಮ ತಪಸ್ಸು ಮಾಡುತ್ತಾ ಕೂಡುವದೆಂದು ನಿಶ್ಚಯಿಸಿದರು.. 
ಮತ್ತು ಆ ವೃಷಭವು ಶ್ರೀ ಜಯತೀರ್ಥರ ಪೂರ್ವವತಾರವೆಂದು ತಿಳಿದು ಅಲ್ಲಿ ಯೆ ತಮ್ಮ ಜಪ ತಪ ಮಾಡುತ್ತಾ ಇದ್ದರು.
ಅವಾಗ ಅಲ್ಲಿ ನರಸಿಂಹ ದೇವರ ಅರ್ಚಕ ರಿಗೆ ಕುಂ||ನರಸಮ್ಮ ಅನ್ನುವ ಮಗಳು ಇದ್ದಳು.ಮಗಳಿಗೆ ವಿವಾಹ ಮಾಡಿ ಅಳಿಯನ ಜೊತೆಗೆ ತಮ್ಮ ಮನೆಯಲ್ಲಿ ಇಟ್ಟು ಕೊಂಡರು.
ಯುಕ್ತ ಕಾಲ ಬಂದರು ನರಸಮ್ಮನವರಿಗೆ ಸಂತಾನವಾಗದೇ ಇದ್ದಾಗ ನರಸಿಂಹ ದೇವರ ಸೇವೆ ಯನ್ನು ಅವರು ಮಾಡುತ್ತಾರೆ.
ಸೇವೆ ಮುಗಿಸಿದ ನಂತರ ಕಟ್ಟಿ ಇಂದ ಇಳಿದು ಬಂದು ಮಂಟಪದಲ್ಲಿ ಕುಳಿತ ಅಪ್ಪಾವರ ನ್ನು ನೋಡಿ ಯಾರೋ ದೊಡ್ಡವರು,ಜ್ಞಾನಿಗಳು ಇರಬೇಕು  ಅಂತ ಹೊರಗಡೆ ಇಂದ ಪ್ರದಕ್ಷಿಣ ನಮಸ್ಕಾರ ಅಪ್ಪಾವರಿಗೆ ಹಾಕಿ ಕೊಂಡು ಮನೆಗೆ ಬರುತ್ತಾ ಇದ್ದರು.
ಇದು ಅವರ ತಂದೆಯವರಿಗೆ ತಿಳಿಯಿತು.
ಇದನ್ನು ಪ್ರತ್ಯಕ್ಷವಾಗಿ ಕಂಡ ಅವರು ಮಗಳನ್ನು ಕರೆದು
ನರಸು!!ದೇವರ ಸೇವೆ ಮಾಡಿದರಾಯಿತು.ಇತರರನ್ನು ಸೇವಿಸುವದು ನನಗೆ ಸಮ್ಮತಿ ಇಲ್ಲ .ಅಲ್ಲದೇ ಇವರನ್ನು ನೋಡಿದರೆ ಯಾರೋ ಹಳ್ಳಿಯ ಜೋಯಿಸರ ತರಹ ಕಾಣುತ್ತಾರೆ. ನಮ್ಮ ಮಗಳಾಗಿ ಇಂತಹವರಿಗೆ ನಮಸ್ಕಾರ ಮಾಡುವದು ತಪ್ಪು.ಸ್ತ್ರೀ ಯರಿಗೆ ಇದೊಂದು ಭ್ರಾಂತಿ!! ಅಂತ ತಮ್ಮ ಮನೆಯಲ್ಲಿ  ಮಗಳಿಗೆ ಸಿಟ್ಟು ಮಾಡಿಕೊಂಡು ಹೇಳುತ್ತಾರೆ.
ಅವಾಗ ಆ ತಾಯಿಯು
ಅಪ್ಪಾ!!ನಮ್ಮ ಮೊರೆ ದೇವರಿಗೆ ಮುಟ್ಟಲಿಲ್ಲ ಅಂದರೆ ಅವಾಗ ನಾವು ಆತನ ಭಕ್ತರಿಗೆ ಶರಣುಹೋದರೆ ಅವರು ನಮ್ಮ ಪರವಾಗಿ ಸ್ವಾಮಿಗೆ ವಿಜ್ಞಾಪನೆ ಮಾಡಿಕೊಳ್ಲುವರು.
ಭಕ್ತರಾಧೀನ ಆ ಸ್ವಾಮಿ ತನ್ನ ಭಕ್ತರು ಹೇಳಿದ ಕೇಳಿದ ಮಾತು ಬಿಡ.ಭಕ್ತರ ಭಿಡಿಯಕ್ಕೆ ಬಿದ್ದು ಅವರ ಮಾತು ನಡೆಸಿಕೊಡುವ.
ಇವರನ್ನು ನೋಡಿದರೆ ಹರಿಭಕ್ತರ ತರಹ ಕಾಣುತ್ತಾರೆ. ಹಾಗಾಗಿ ಇವರಿಗೆ ಸೇವೆ ಮಾಡುತ್ತಾ ಇದ್ದೀನಿ.ನಿಮಗೆ ಆಸಮ್ಮತವಾದರೆ ಬಿಟ್ಟು ಬಿಡುವೆ ಅಂತ ಹೇಳುತ್ತಾರೆ.
ಅದೇ ದಿನ ರಾತ್ರಿ ಆಚಾರ್ಯ ರಿಗೆ ಸ್ವಪ್ನದಲ್ಲಿ ಏನು ಸೂಚನೆ ಆಯಿತೊ ಗೊತ್ತಿಲ್ಲ!!
ಬೆಳಿಗ್ಗೆ ಬೇಗ ಎದ್ದು ತಮ್ಮಸ್ನಾನ ಆಹ್ನೀಕ ಮುಗಿಸಿಕೊಂಡು ಮಗಳನ್ನು ಕರೆದುಕೊಂಡು ಅಪ್ಪಾವರು ಬಳಿ ಬರುತ್ತಾರೆ.
ಬಂದು ಅವರಿಗೆ ಕೈ ಮುಗಿದು ನಮ್ಮ ಮಗಳು ಸಂತಾನ ಅಪೇಕ್ಷಿತ ಇಂದ ಸೇವೆ ಮಾಡುತ್ತಾ ಇದ್ದಾಳೆ.ದಯವಿಟ್ಟು ಅವಳ ಮೇಲೆ ನರಸಿಂಹ ದೇವರ ಅನುಗ್ರಹ ವಾಗುವಂತೆ ಅನುಗ್ರಹಿಸಿ ಅಂತ ಪ್ರಾರ್ಥನೆ ಮಾಡುತ್ತಾರೆ.
ಅವಾಗ ಅಪ್ಪಾವರು
ನಮ್ಮ ಹತ್ತಿರ ಏನಿದೇ ಆಚಾರ್ಯ!!. ನಾನೊಬ್ಬ ಹಳ್ಳಿ ಜೊಯಿಸ!!.. ಅಂತ ಹೇಳಿದಾಗ,ಆಚಾರ್ಯರು ನಡುಗಿದರು.ಮನೆಯಲ್ಲಿ ಆಡಿದ ಮಾತು ಇವರಿಗೆ ತಿಳಿದು ಬಂದಿದ್ದು ಕಂಡು ಸಾಮಾನ್ಯರಲ್ಲ ಇವರು ಅಂತ ತಿಳಿದು 
ತಮ್ಮ ನ್ನು ಆ ರೀತಿಯಾಗಿ ನೋಡಿದ ನನ್ನ ಅಜ್ಞಾನ ವನ್ನು ಕ್ಷಮಿಸಿ!! ಅಂತ ಪ್ರಾರ್ಥನೆಮಾಡಿಕೊಳ್ಳುವರು.
ಪದ್ಮಾಸನದಲ್ಲಿ ಕುಳಿತ ಅಪ್ಪಾವರು ತಕ್ಷಣ ತಮ್ಮ ಎರಡು ಕೈಗಳನ್ನು ಜೋರಾಗಿ ನೆಲಕ್ಕೆ ಅಪ್ಪಳಿಸಿ ಆಚಾರ್ಯರ ಕಡೆ ನೋಡಿದರು...
ತಕ್ಷಣ ಆ ಕ್ಷಣದಲ್ಲಿ ಅಪ್ಪಾವರು ಬದಲಿಗೆ ಒಂದು ಘಟಸರ್ಪ ಹೆಡೆಯನ್ನು ಅಲ್ಲಾಡಿಸುತ್ತಾ ಕುಳಿತಿದೆ..
ಭಯ ಚಕಿತರಾಗಿ ಅವರಿಬ್ಬರೂ ಹಾಗೆ ನಿಂತು ಬಿಟ್ಟರು.
ಭಯಭೀತರಾಗಿ ಆಚಾರ್ಯರು ಮತ್ತು ಅವರ ಮಗಳು ನಿಂತುಬಿಟ್ಟರು.
ಮತ್ತೊಂದು ಕ್ಷಣದಲ್ಲಿ ನಿಜ ರೂಪದಿಂದ ಅಪ್ಪಾವರು ಮುಗುಳು ನಗುತ್ತ  ಆ ಹೆಣ್ಣು ಮಗಳಿಗೆ ಎರಡು ಕಾಯಿಯನ್ನು ಕೊಡುತ್ತೇವೆ. ಉಡಿಯನ್ನು ಹಿಡಿ ಅಂತ ಹೇಳಿದಾಗ,ಪ್ರತ್ಯಕ್ಷ ವಾಗಿ ಸರ್ಪವನ್ನು ನೋಡಿದ ಆ ಹೆಣ್ಣು ಮಗಳು ನಡುಗುತ್ತಾ ಉಡಿಯನ್ನು ಹಿಡಿಯುತ್ತಾರೆ.ಆದರೆ ಮೊದಲು *ಹಾಕಿದ ಫಲವು ಕೆಳಗಡೆ ಬೀಳುತ್ತದೆ. ಎರಡನೆಯ ದು ಅವರ ಉಡಿಯಲ್ಲಿ ನಿಲ್ಲುತ್ತದೆ.
ಅವಾಗ ಅಪ್ಪಾವರು 
ತಾಯಿ!! ನಿನಗೆ ಎರಡು ಸಂತಾನವಾಗುವದು.
ಮೊದಲನೆಯದು ಉಪಯೋಗವಿಲ್ಲ.ದ್ವೀತಿಯ ಕುಮಾರನಿಂದಲೇ ನಿಮ್ಮ ಸಂತತಿ ಬೆಳೆಯುವದು.ಮುಂದೆ ನರಸಿಂಹ ದೇವರ ಪೂಜೆ ನಿಮ್ಮ ಸಂತತಿಗೆ ಬರುವದು ಅಂತ ಹೇಳಿ ಆಶೀರ್ವಾದ ಮಾಡುತ್ತಾರೆ. ಅದರಂತೆ ಕೊಪ್ಪರ ನರಸಿಂಹ ದೇವರ ಅರ್ಚಕ ಸಂತತಿಯು ಅಪ್ಪಾವರ ಅನುಗ್ರಹ ದಿಂದ ಬೆಳೆದಿದೆ.
ಇದನ್ನು ಕೊಪ್ಪರ ಗಿರಿಆಚಾರ್ಯರು ತಮ್ಮ ಕೃತಿಯಲ್ಲಿ ಉಲ್ಲೇಖ ಮಾಡುತ್ತಾರೆ.

ಚಿರಕಾಲ ಸೇವಿಪ ಪರಮ ವಂದ್ಯರಿಗೆಲ್ಲ ವರ ಪುತ್ರ ಸೌಖ್ಯ ವ ಕರುಣಿಸುವರು ಸತ್ಯ|
ಅಪರಿಮಿತ ಮಹಿಮ ರೆಂದರಿಯದೇ ಇವರನ್ನು| ಜರಿಯಲಾಕ್ಷಣದಲ್ಲಿ| ಅರಿತು ಭೀಕರವಾದ ಉರಗ ರೂಪವ ತೋರುತ| 
ತ್ಯಜಿಸಿ ಮತ್ತೆ ನಿಜರೂಪದಿಂದಿರುತ| ನೋಳ್ಪರಿಗತ್ಯಾಶ್ಚರ್ಯ ಸದ್ಗುಣ ಭರಿತ|
ಕಾರ್ಪರ ನರಹರಿಯ ಪರೋಕ್ಷದಿ ನಿರುತ| ಸುಖಿಪರಂಘ್ರಿ||

ಸ್ಮರಿಸುವ ನರನೇ ಧನ್ಯ
ಶ್ರೀ ಅಪ್ಪಾವರ ಅಂತರ್ಯಾಮಿಯಾದ ಮದ್ವೇಶ ಕೃಷ್ಣ ಪ್ರೀತಿಯಾಗಲಿ.

ಶ್ರೀ ಕೃಷ್ಣಾರ್ಪಣಮಸ್ತು.
*****
||ಶ್ರೀ ಇಭರಾಮಪುರಾಧೀಶಾಯ ನಮಃ ||
|| ಶ್ರೀ ಅಪ್ಪಾವರ ಮಹಿಮೆ ||🙏

ಜನ್ಮಾಂಧನಿಗೆ ದೃಷ್ಟಿ ಕರುಣಿಸಿದ್ದು 

ಕಲಿಯುಗದ ಕಾಮಧೇನು, ಕಲ್ಪವೃಕ್ಷ  ಎಂದೇ ಪ್ರಖ್ಯಾತರಾದ ಮಂಚಾಲೆಯ ಪ್ರಭುಗಳಾದ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಸೇವೆ ಮಾಡದ ಜನರಿಲ್ಲ. 
ಅವರ ಹೆಸರನ್ನು ಕೇಳದವರು ಸಹ ಇಲ್ಲ.

ಉದ್ಯೋಗ , ಜ್ಞಾನ , ಸಂಪತ್ತು , ಸಂತಾನ , ವ್ಯಾಧಿ  ಮತ್ತು ಲೌಕಿಕದ ಕಷ್ಟಗಳ ನಿವಾರಣೆಗೆ ಹಾಗು  ತಮ್ಮ ಸಂಕಷ್ಟ ಪರಿಹರಿಸಲು ಮನೋಭಿಷ್ಟ ಸಿದ್ದಿಗಾಗಿ ಗುರುರಾಜರ ಮೊರೆ ಹೋಗೋದು ಸಹಜ.

ಶ್ರೀ  ಇಭರಾಮಪುರ ಅಪ್ಪಾವರ ಕಾಲದಲ್ಲಿ ಒಬ್ಬ ಜನ್ಮತಹಃ ಅಂಧ.ಅಂದರೆ ಹುಟ್ಟು ಕುರುಡ. ತನಗೆ  ಎಲ್ಲರ ಹಾಗೆ ಕಣ್ಣು ಬೇಕೆಂದು ರಾಯರ ಸೇವೆಗೆ ಬಂದಿರುತ್ತಾನೆ.

ಅಗಮ್ಯ ಮಹಿಮರಾದ ಮಂತ್ರಾಲಯ ಗುರು ಸಾರ್ವಭೌಮ  ಸ್ತೋತ್ರದಲ್ಲಿ ಹೇಳುವಂತೆ 
"ಅಂಧೋಪಿ ದಿವ್ಯ ದೃಷ್ಟಿಸ್ಸ್ಯಾದೇಡಮೂಕೋಪಿ ವಾಕ್ಪತಿಃ" 
ಅಂಧರಿಗೆ ದಿವ್ಯದೃಷ್ಠಿ ಮತ್ತು ಮಾತು ಬಾರದ ಮೂಕರಿಗೆ ವಾಕ್ ಶಕ್ತಿಯನ್ನು ಕೊಟ್ಟು ಗುರುರಾಜರು ಅನುಗ್ರಹಿಸುತ್ತಾರೆ.   
ಈ ವಾಕ್ಯದಲ್ಲಿ ವಿಶ್ವಾಸ ಇಟ್ಟು ಆ ಜನ್ಮಾಂಧನು ಪ್ರತಿನಿತ್ಯ ರಾಯರ ಪ್ರದಕ್ಷಣೆ ಸೇವೆ ಮಾಡಿ ರಾಯರಲ್ಲಿ ತನಗೆ ಕಣ್ಣು ಬೇಕು , ರಾಯರ ದರ್ಶನ  ಮಾಡಬೇಕು ಎಂಬ ಬಯಕೆಯನ್ನು ಗುರುಗಳ ಬಳಿ ಕೇಳುತ್ತಾ ಇದ್ದ.

ಒಂದು ದಿವಸ ಆ ಜನ್ಮಾಂಧನು  ಪ್ರದಕ್ಷಿಣೆ ಸೇವೆ ಮಾಡುವ ಸಮಯದಲ್ಲಿ ಶ್ರೀ ಅಪ್ಪಾವರು ಆ ಭಕ್ತನ ಕೋರಿಕೆಯನ್ನು ಅರಿತು ಅವನಿಗೆ ರಾಯರ ಬೃಂದಾವನ ಮುಂದೆ ನಿಲ್ಲಿಸುತ್ತಾರೆ. 
ರಾಯರ ಬೃಂದಾವನ ಮುಂದೆ ನಿಂತು ಶ್ರೀ ಅಪ್ಪಾವರು ರಾಯರಿಗೆ ಪ್ರಾರ್ಥನೆ ಮಾಡಿ ತಮ್ಮ ಎರಡು ಕೈಗಳಿಂದ ಭಕ್ತನ ಕಣ್ಣಿಗೆ ತಮ್ಮ ವರಹಸ್ತವನಿಟ್ಟು ಅನುಗ್ರಹಿಸುತ್ತಾರೆ. 
ಶ್ರೀ ಅಪ್ಪಾವರ ಮತ್ತು ರಾಯರ ಅನುಗ್ರಹದಿಂದ ಜನ್ಮಾಂಧನಾದ ಅವನಿಗೆ ದೃಷ್ಟಿ ಯನ್ನು ಅನುಗ್ರಹಿಸುತ್ತಾರೆ. 


ಆ ಭಕ್ತನ ಸಂತೋಷಕ್ಕೆ ಮಿತಿಯಿಲ್ಲ..!!
 ಕಣ್ಣು ತೆಗೆದ ತತ್ ಕ್ಷಣ ಭವ್ಯವಾದ ರಾಯರ ಬೃಂದಾವನ.. 
ಶ್ರೀಗೋಪಾಲ ದಾಸರು ಹೇಳುವಂತೆ 
ರಾಯರ ಬೃಂದಾವನ ಬರಿಯ ಕಲ್ಲಿನ ಬೃಂದಾವನವಲ್ಲ . 
ಅಲ್ಲಿ ನರಹರಿ, ಕೃಷ್ಣ ,ರಾಮ ವೇದವ್ಯಾಸರು, ಸೇರಿದಂತೆ ಸಕಲ ದೇವತಾ ಪರಿವಾರವು ಅಲ್ಲಿ  ಸನ್ನಿಹಿತರಾಗಿದ್ದಾರೆ.  ಶ್ರೀಮಧ್ವಾಚಾರ್ಯರು, ಶ್ರೀಪದ್ಮನಾಭ ತೀರ್ಥರು , ಶ್ರೀಜಯರಾಯರು ಸೇರಿದಂತೆ ಸಕಲ ಜ್ಞಾನಿಗಳ ಸಮೂಹವೆ ರಾಯರ ವೃಂದಾವನದಲ್ಲಿ ವಿರಾಜ ಮಾನರಾಗಿದ್ದಾರೆ.

ನರಹರಿಕೃಷ್ಣರಾಮ ಸಿರಿ ವೇದವ್ಯಾಸಎರಡೆರಡು ನಾಲ್ಕು ಹರಿಮೂರ್ತಿಗಳುಪರಿವಾರ ಸಹಿತಾಗಿ ಸಿರಿಸಹಿತ ನಿಂದು||ಸುರಗುರು
ಮಧ್ವಾಚಾರ್ಯರೆ ಮೊದಲಾಗಿ ತರುವಾಯದಲ್ಲಿನ್ನು| ತಾರತಮ್ಯಾನುಸಾರಪರಿಪರಿಯತಿಗಳು ಇರುತಿಪ್ಪರು| 
....
..
ಗರುಡವಾಹನ ರಂಗ ಗೋಪಾಲವಿಠಲ ತನ್ನಶರಣರ ಪಾಲಿಸುತಿರುತಿಪ್ಪನಿಲ್ಲಿ ||
- ಶ್ರೀ ಗೋಪಾಲ ದಾಸರು

ಇಂತಹ ಭವ್ಯಸ್ವರೂಪವನ್ನು ಕಂಡು ಆ ಭಕ್ತನ ಕಣ್ಣಲ್ಲಿ ಆನಂದ ಭಾಷ್ಪ!! ..
ಆ ಭಕ್ತ ಮತ್ತೆ ಶ್ರೀಅಪ್ಪಾವರಲ್ಲಿ ಪ್ರಾರ್ಥನೆ ಮಾಡುತ್ತಾನೆ. 

ಅಪ್ಪಾವರೆ !!,  ನಾನು ರಾಯರು ಮತ್ತೆ ನಿಮ್ಮಂತಹ ಜ್ಞಾನಿಗಳ ದರ್ಶನ ಮಾಡಿ ನನ್ನ ಜನ್ಮ ಸಾರ್ಥಕವಾಯಿತು. ನನಗೆ ಈ ಘೋರ ಕಲಿಯುಗದಲ್ಲಿ ಜ್ಞಾನಿಗಳ ದರ್ಶನ ಬಳಿಕ ಇನ್ನು ಪಾಪ ಕರ್ಮಗಳ ನೋಡಲು ಇಚ್ಚಿಸುವದಿಲ್ಲ. ಇನ್ನು   ನನಗೆ ಕಣ್ಣು ಬೇಡ!! ನಾನು ಮತ್ತೆ ಅಂಧನಾಗಲು ಇಚ್ಚೆಸುತೇನೆಯಂದು ಪ್ರಾರ್ಥನೆ ಮಾಡುತ್ತಾನೆ. ಶ್ರೀಅಪ್ಪಾವರು ಆ ಭಕ್ತನ ಪ್ರಾರ್ಥನೆಯ ಮೇರೆಗೆ ಮತ್ತೆ ಮೊದಲನೆಯ ಸ್ಥಿತಿಗೆ ಅನುಗ್ರಹಿಸುತ್ತಾರೆ.

ಜನ್ಮೋಂಧೋಪ್ಯೇಕದಾ ಕಚ್ಚಿತ್ ವರಹ ಹಸ್ತೇನ ದೃಷ್ಟಮಾನ್ |
ಕಿಂಚಿತ್ ಕಾಲಂ ವಿಧಾಯಸೌ ಯಥಾಪೂರ್ವಮಕಲ್ಪಯತ್ ||

ಶ್ರೀ ಅಪ್ಪಾವರ ಶಿಷ್ಯರಾದ ಶ್ರೀಯೋಗಿ ನಾರಾಯಣಾಚಾರ್ಯರು ರಚಿಸಿದ ಶ್ರೀ ಇಭರಾಮಪುರ ಶ್ರೀಕೃಷ್ಣಾರ್ಯ ಸ್ತೋತ್ರದಲ್ಲಿ  ಜನ್ಮಾಂಧನಿಗೆ ಕಣ್ಣು ಕೊಟ್ಟ ಮಹಿಮೆಯನ್ನು ಹೇಳಿದ್ದಾರೆ..

ಇಂದಿರೇಶ ದಾಸರು ಒಂದು ಕಡೆ  ಕೃತಿರಚನೆ ಮಾಡಿ ಹೇಳುತ್ತಾರೆ

ಹರಿಯ ಧ್ಯಾನದೊಳಿದ್ದು ನಲಿವಾ|
ತನ್ನ ಚರಣ ಸೇವಕ ರಿಗೆ ಸುಲಭದಿಂದೊಲಿವಾ|
ದುರುಳ ದುಷ್ಕೃತ್ಯಗಳ ಅಳಿವಾ|
ತನ್ನವರ ಸಮಯಕ್ಕೆ ಸ್ವಪ್ನದಿ ಬಂದು ನಿಲುವಾ|
ಮರುತ ದೇವರು ಇವರ ಹೃನ್ಮಂದಿರದೊಳಗೆ ನೆಲೆಸಿ| ನಿಜಾಭಿಮಾನದಲಿರುವ ಕಾರಣದಿಂದ
ಇವರ ಸಂದುರುಶನವೇ ಸ್ವರ್ಗಾದಿ ಸಾಧನ||

ಕರುಣಾ ಸಾಗರರ ನೋಡಿದೆಯಾ|
ಮಹಾ ಪುರುಷರಿಗೊಂದಿಸಿ ವರವ ಬೇಡಿದೆಯಾ||

ದರಿದ್ರಾಃ  ಅಲ್ಪಧಿಯೋಲ್ಪ ವಂಶೋದ್ಬವಾಶ್ಚ ಮಾನವಾಃ |
ಸದಾಚಾರಶ್ಚ ಸಜ್ಜನಾಃ ಪ್ರೌಢಾಃ ಪ್ರಾಜ್ಞಶ್ಚ  ಸಾಧವಃ ||

ಕುಷ್ಠಾದಿ ಶ್ರೇಷ್ಠ ರೋಗಾ ಯೇ ಗಂಧಕಾಷ್ಠಶ್ಚ ಭಸ್ಮನಾ |
ಮೃತಿಕಾಧೂಪಧೂಮಾದಿ ಸಾಧನೈರ್ತಾಶಿತಾಃ ಸತಾಮ್ ||

ಶ್ರೀ ಅಪ್ಪಾವರು ಕರುಣಾ ಸಮುದ್ರರು. . 
ಶ್ರೀ ಅಪ್ಪಾವರ ತಪೋ ಬಲದಿಂದ ದರಿದ್ರರು - ಅಲ್ಪಮತಿಉಳ್ಳವರು - ಅಲ್ಪವಂಶದಲ್ಲಿ, ಹುಟ್ಟಿದವರು ಸಹ ಸದಾಚಾರಿಗಳು ,ಧನ್ಯರು , ಜ್ಞಾನಿಗಳು , ಸಜ್ಜನರಾಗಿದ್ದಾರೆ... 
ಶ್ರೀ ಅಪ್ಪಾವರು ಪಂಚಮುಖಿ ಪ್ರಾಣದೇವರ ನಿರಂತರ ಉಪಾಸನೆಯಿಂದ ತನ್ನ ಭಕ್ತರಿಗೆ ಬಂದ ಹಲವು ವ್ಯಾಧಿಗಳ ನಿರ್ಮೂಲನೆ ಮಾಡಿದ್ದಾರೆ...

ಸ್ಮರಿಸುವ ನರನೆ ಧನ್ಯ
🙏🙏
ಇಭರಾಮಪುರಾಧೀಶ
ಗುರು ಮಹಿಮಾ : ಇಚ್ಛಾ ರೂಪ ಸಿದ್ದಿ

ಶ್ರೀ ಅಪ್ಪಾವರು ಪ್ರತಿವರ್ಷವು ಸುರಪುರದಲ್ಲಿ ಅತಿವೈಭವದಿಂದ ನಡೆಯುತ್ತಿದ್ದ ನರಸಿಂಹ ಜಯಂತಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಒಂದು ವರ್ಷ ಕಾರಣಾಂತರಗಳಿಂದ ಅಪ್ಪಾವರು ಅಲ್ಲಿಯ ಉತ್ಸವಕ್ಕೆ ಹೋಗಲು ಆಗಲಿಲ್ಲ. ದೇವರಿಗೆ ನೈವೇದ್ಯದ ಅಡಿಗೆಳನ್ನು ಸಿದ್ದಪಡಿಸಿ ಅರ್ಚಕರು ಎಲ್ಲಾ ವ್ಯವಸ್ಥೆ ಮಾಡಿದರು. ಮಧ್ಯಾಹ್ನ 3 ಗಂಟೆ ಅಪ್ಪಾವರ ಆಗಮನದ ನಿರೀಕ್ಷೆಯಲ್ಲಿದ್ದರು ಆದರೆ ಅಪ್ಪಾವರು ಬರಲಿಲ್ಲ.ಬಂದ ಭಕ್ತರಿಗೆ ಇನ್ನೇನು ತೀರ್ಥ-ಪ್ರಸಾದದ ವ್ಯವಸ್ಥೆಯಾಗಬೇಕಿತ್ತು ಆ ಸಮಯದಲ್ಲಿ ಅಡಿಗೆ ಮನೆಯಲ್ಲಿ ನಾಯಿ ಬಂದು ನೈವೇದ್ಯ ಮಾಡಿದ ಹೋಳಿಗೆ ಬಾಯಿಯಲ್ಲಿ ತೆಗೆದುಕೊಂಡು ಹೋಯ್ತು. ಅಡೆಗೆಯವನು ಇದನ್ನು ನೋಡಿ ನಾಯಿಗೆ ಕೋಲಿನಿಂದ ಅದರ ಬೆನ್ನಿಗೇ ಹೊಡೆದು ಓಡಿಸುತ್ತಾನೆ. ನಾಯಿ ಎಂಜಲು ಮಾಡಿದ ವಿಷಯ ತಿಳಿಸಿದರೆ ಅವ್ಯವಸ್ಥೆ ಆಗುತ್ತದೆ ಎಂದು ಯಾರಿಗೂ ಹೇಳದೆ ಮುಂದಿನ ಕಾರ್ಯಕ್ರಮ ಮುಂದುವರಿಸುತ್ತಾರೆ.  

ಮುಂದಿನ ವರ್ಷ ಅಪ್ಪಾವರು ಬರಲೇಬೇಕು ಎಂದು ಅರ್ಚಕರು ಆಮಂತ್ರಣ ನೀಡಲು ಇಭರಾಮಪುರಕೆ ಬಂದಿರುತ್ತಾರೆ. ಆಮಂತ್ರಣ ನೀಡಿದ ಅರ್ಚರು ಅಪ್ಪಾವರು ಈ ಹಿಂದೆ ಯಾವ ಕಾರಣದಿಂದ ಬರಲು ಆಗಲಿಲ್ಲ ಎಂದು ಅಪ್ಪಾವರೊಂದಿಗೆ ವಿಚಾರಿಸುವಾಗ ಅಪ್ಪಾವರು ನಾನು ಉತ್ಸವಕ್ಕೆ ಬಂದು ಪ್ರಸಾದ ಸ್ವೀಕಾರ ಮಾಡಿದ್ದೇನೆಂದು ಹೇಳಿದಾಗ ಅರ್ಚಕರು ಆಶ್ಚರ್ಯರಾಗುತ್ತಾರೆ. ನಾನು ಶುನಕ ರೂಪದಿಂದ ಅಲ್ಲಿಗೆ ಬಂದಿದ್ದು ನಿಮ್ಮ ಅಡಿಗೆ ಮಾಡುವವ ಭೀಮಣ್ಣ ನನಗೆ ಕಟ್ಟಿಗೆಯಿಂದ ನನ್ನ ಬೆನ್ನಿಗೆ ಹೊಡೆದಿದ್ದಾನೆ. ಹೊಡೆದ ಜೋರಿಗೆ  ನನ್ನ ಬೆನ್ನಿಗೆ ಬಿದ್ದ ಬಾರು ಇನ್ನು ಇದೆ ಎಂದು  ತಮ್ಮ ಬೆನ್ನು ತೋರಿಸಿದರು. ತಮ್ಮ ಅಜ್ಞಾನದಿಂದ ಅಪ್ಪಾವರನ್ನು ಗುರುತಿಸಲಿಕ್ಕೆ ಆಗಲಿಲ್ಲವೆಂದು ಎಂದು ಅರ್ಚಕರು ಪ್ರಾರ್ಥಿಸುತ್ತಾರೆ. ಕರುಣಾಸಮುದ್ರರಾದ ಅಪ್ಪಾವರು ಅರ್ಚಕರ ವಿನಂಮ್ರತೆಯನು ಮೆಚ್ಚಿ ವಿಶೇಷವಾಗಿ ಅನುಗ್ರಹಿಸಿ ಮತ್ತೆ ಪ್ರತಿವರ್ಷದಂತೆ ಪುನಃ ದೇವರ ಉತ್ಸವಕ್ಕೆ ಬರುತ್ತೇನೆ ಎಂದು ಹೇಳುತ್ತಾರೆ.

ಅನೇಕಕಾರಕಾಯೈಃ ಯಃ ಸ್ವಾತ್ಮಾನಂ ಬಹುಧಾ ನೃಣಾಮ್ |
ದರ್ಶಯತ್ಯೇ ಚಕಿತಾಭೂತ್ ಯತ್ರ ಕುತ್ರಾಪಿ ವರ್ತಿನಾಮ್ ||
- ಶ್ರೀ ಯೋಗಿನರಾಯಣಾಚಾರ್ಯರು

ಶ್ರೀಅಪ್ಪಾವರ ಮಹಿಮೆಗಳನ್ನು ಸಾರುವ ಶ್ರೀ ಯೋಗಿನಾರಾಯಣಾಚಾರ್ಯರು ರಚಿಸಿದ ಸ್ತೋತ್ರದಲ್ಲಿ ಅಪ್ಪಾವರು ತಮ್ಮ ತಪಃಶಕ್ತಿಯಿಂದ ತಮಗೇ ಬೇಕಾದ ಇಚ್ಛೆ ರೂಪವನ್ನು ಹೊಂದುತ್ತಿದ್ದರು ಎಂದು ಅವರ ಮಹಿಮೆಯನ್ನು ಸಾರಿದ್ದಾರೆ.

ಅಡಗಿಸೀ ಕಲಿಯನ್ನು ನಡುಗಿಸುತ ದುರ್ಜನರ
ಪೊಡವಿಯನು ಸಂಚರಿಸಿ ಸುಜನಕ್ಕೆ
ದೃಢಪಡಿಸಿ ಸನ್ಮತಿಯ ಒಡಲಲಿ ಶ್ರೀಹರಿಯ
ಒಡೆಯ ತೋರಿದಿ ಸ್ವಾತ್ಮಕರುಣಕಡಲಾ ||
ಜಯತು ಜಯತು ಕೃಷ್ಣರ್ಯ | 
ಜಯತು ಜಯತು ಸಜ್ಜನ ಅಭಯ | 
ಜಯತು ಕೈವಲ್ಯನೆ ಜಯತು ಗುರುವೆ ||

ಧಾರುಣಿಯಲ್ಲಿ ಮನುಜನಂತೆ ತೋರಿಕೊಂಡು ನಂಬಿದವರ ।
ಘೋರ ದುರಿತ ದೂರ ಮಾಡಿ ಪಾರುಗಾಣಿಸಿ ಮೋದಿಸುವರ ॥
ಚರಿತೆ ಸಾಲದೇ ಅಪ್ಪನಾ ಚರಿತೆ ಸಾಲದೇ ॥
ಚರಿತೆ ಸಾಲದೇನೆ ಸುಖಾಭರಿತ ಕೃಷ್ಣಾರ್ಯರ , ಶುಭ ॥ 

ಶ್ರೀ ಇಭರಾಮಪುರಾಧೀಶ
***********

|ಶ್ರೀ ಇಭರಾಮಪುರ ಅಪ್ಪಾವರ ಚರಿತ್ರೆ||
ಶ್ರೀಶ ಲಕ್ಷ್ಮೀಗೆ ಬ್ರಹ್ಮ ಜೀವೇಶರಾ ನಮಿಸಿ|..
ಅಪ್ಪಾವರ ದಿವ್ಯ ಭಾಸುರ ಚರಿತೆ ನಾ ಲೇಶಮತಿ ಪೇಳ್ವೆ||
✍ಶ್ರೀ ಇಭರಾಮಪುರ ಅಪ್ಪಾವರು ಪ್ರತಿ ವರುಷವು ಸುರಪುರಕ್ಕೆ ಶ್ರೀ ನರಸಿಂಹ ದೇವರ ಸಂದರ್ಶನ ಮಾಡಲು ಶ್ರೀ ನರಸಿಂಹ ಜಯಂತಿ ಉತ್ಸವಕ್ಕೆ ಆಗಮಿಸುತ್ತಾ ಇದ್ದರು.ಮಾರ್ಗದಲ್ಲಿ ಇರುವ ಮಾನ್ವಿ ಕ್ಷೇತ್ರಕ್ಕೆ ಬಂದಾಗ ಪುಷ್ಯಮಾಸವಾಗಿತ್ತು.
ಅವಾಗ ಅಪ್ಪಾವರು ಉಳಿದುಕೊಂಡ ಮನೆಯವರಾದ ಮಾನ್ವಿಯ ಕುಲಕರ್ಣಿ ಮನೆತನದವರು ಶ್ರೀ ಅಪ್ಪಾವರಿಗೆ ಸಾಷ್ಟಾಂಗ ನಮಸ್ಕರಿಸಿ, ಈ ಸಲ ಮಧ್ವ ನವಮಿಯ ಮಹೋತ್ಸವಕ್ಕೆ ದಯಮಾಡಿ ಮಾನ್ವಿಗೆ ಆಗಮಿಸಿ ನಮನ್ನು ಉದ್ದಾರ ಮಾಡಬೇಕೆಂದು ಭಕ್ತಿ,ಇಂದ ಕೇಳಿಕೊಂಡರು.
ಅವಾಗ್ಗೆ ಅಪ್ಪಾವರು 
"ಕುಲಕರ್ಣಿ ಆಗಲಿ!!
ನಾವು ಕೆಲಸದ ನಿಮಿತ್ತ ವಾಗಿ ಸೊಲ್ಲಾಪುರ ಹೋಗಬೇಕಾಗಿದೆ.ನೀವು ಇತ್ತ ಮಧ್ವ ನವಮಿಯ ಮಹೋತ್ಸವ ನೆರವೇರಿಸಿ.".
"ನಾವು ಶ್ರೀ ಮಧ್ವ ನವಮಿಯ ದಿನ ಎಲ್ಲಿ ಇದ್ದರು ಸಹ ಸರಿಯಾಗಿ  ಮಧ್ಯಾನ್ಹ ೧೨ಗಂಟೆಗೆ ನಿಮ್ಮ ಮನೆಗೆ ಬರುತ್ತೇವೆ "ಎಂದು ಹೇಳಿ ಎಲ್ಲಾ ಭಕ್ತರಿಗೆ ಆಶೀರ್ವಾದ ಮಾಡಿ ಮುಂದೆ ಸಂಚಾರ ಹೊರಟರು.ಮಾಘ ಮಾಸ ಬಂತು.ಈ ಸಾರಿ ಮಾನ್ವಿ ಯಲ್ಲಿ ಬಹಳ ವಿಶೇಷ. ಇಭರಾಮಪುರ ಅಪ್ಪಾವರು ಬರುತ್ತಾರೆ ಅನ್ನುವ ಸುದ್ದಿ ಒಬ್ಬರಿಂದ ಒಬ್ಬರಿಗೆ ಹರಡಿ ಅಸಂಖ್ಯಾತ ಭಕ್ತರು ಒಂದೆರಡು ದಿನ ಮುಂಚಿತವಾಗಿ ಕುಲಕರ್ಣಿಯ ಮನೆಗೆ ಆಗಮಿಸುತ್ತಾರೆ.ಉತ್ಸವದ ದಿನ ಆರಂಭವಾಗಿದೆ.ರಥಸಪ್ತಮಿ,
ಮರುದಿನ ಭೀಷ್ಮ ಅಷ್ಟಮಿ ಅಪ್ಪಾವರ ಆಗಮನವಿಲ್ಲ.
ಇದೇನಿದು!! ಅಪ್ಪಾವರು ಬರುತ್ತೇನೆ ಅಂತ ಹೇಳಿದ್ದಾರೆ .ಇನ್ನೂ ಬರಲಿಲ್ಲ ವಲ್ಲ ಅಂತ ಕುಲಕರ್ಣಿ ಯವರಿಗೆ ಸ್ವಲ್ಪ ನಿರಾಶೆ ಆಯಿತು.
ಮರುದಿನ ಮಧ್ವ ನವಮಿ
ಅಪ್ಪಾವರ ಆಗಮನವಿಲ್ಲ!!
ಅವಾಗ್ಗೆ ಕುಲಕರ್ಣಿ ಯವರು "ಶ್ರೀ ಇಭರಾಮಪುರ ಅಪ್ಪಾವರು ಎಂದಿಗು, ಯಾವ ಭಕ್ತರಿಗು, ಯಾರಿಗೂ ನಿರಾಶೆ ಮಾಡಿಲ್ಲ. ಎಲ್ಲರಿಗೂ ಅನುಗ್ರಹ ಮಾಡಿದ್ದಾರೆ...
ಇಂದು ಏಕೆ ಹೀಗೆಆಯಿತೋ??ಏನೋ!!
ಮುಖ್ಯ ನನಗೆ ಅವರಿಗೆ ಸೇವೆ ಮಾಡುವ ಭಾಗ್ಯ ಲಭ್ಯ ಇಲ್ಲವೆಂದು ಚಿಂತಾ ಮಗ್ನರಾಗಿದ್ದರು"... 
ಆದರೂ ಕಾರ್ಯಕ್ರಮ ನಿಲ್ಲುವಂತಿಲ್ಲ.
ಬೆಳಿಗ್ಗೆ ಇಂದ ಪಾರಾಯಣ ಪಠಣಾದಿಗಳು ನಡೆಯತ್ತಾ ಇದ್ದವು.ಅಡಿಗೆ ಯಾಯಿತು
ನೈವೇದ್ಯ ಸಹ ಆಗಿದೆ
ಇನ್ನೂ ಅಪ್ಪಾವರ ಆಗಮನವಿಲ್ಲ...
ಸಮಯ ಸರಿಯಾಗಿ ಮಧ್ಯಾಹ್ನ ೧೧:೩೦ ಆಗಿದೆ
ಬ್ರಾಹ್ಮಣ ಸುವಾಸಿನಿಯರಿಗೆ ಭೋಜನಕ್ಕೆ ಎಲೆಗಳನ್ನು ಸಹ ಹಾಕಿದ್ದಾರೆ.
ಕುಳಿತವರಿಗೆಲ್ಲ ಸಾಲಾಗಿ ಎಲ್ಲಾ ಅಡಿಗೆ ಪದಾರ್ಥಗಳನ್ನು ಬಡಿಸಿದ್ದಾರೆ.
ಅವಾಗ ಕುಲಕರ್ಣಿ ಯವರು ಬಂದು "ಕೃಷ್ಣಾರ್ಪಣಮಸ್ತು ಅಂತ ಯಾರು ಹೇಳಬೇಡಿ. ಸರಿಯಾಗಿ ೧೨:೦೦ಗಂಟೆಗೆ ಅಪ್ಪಾವರು ಬರುತ್ತೇನೆ ಅಂತ ಸ್ಪಷ್ಟವಾಗಿ ಕಾಲ ನಿರ್ದೇಶನ ಮಾಡಿ ಹೇಳಿದ್ದಾರೆ.ಇನ್ನೂ ಕೆಲ ಸಮಯ ಕಾಯುವದು ಅಗತ್ಯ ವೆಂದು" ಬಂದಂತಹ ಭಕ್ತರ ಬಳಿ ವಿಜ್ಞಾಪನೆ ಮಾಡಿಕೊಳ್ಳಲು
ಎಲ್ಲಾ ರು ಆಗಬಹುದು ಅಂತ ಹೇಳುತ್ತಾರೆ.
"ತಕ್ಷಣ ದಲ್ಲಿ ದೇವರ ಮನೆಯಿಂದ ಪುನುಗು ಕಸ್ತೂರಿ ಜಾಜಿ ಮುಂತಾದ ದೇವಲೋಕದ ಪರಿಮಳವು ವಾಸನೆ ಆ ಸ್ಥಳದಲ್ಲಿ ಬಂತು..".
ಕಲೆತ ಜನರೆಲ್ಲ ತಕ್ಷಣ  "ಇದೇನು!! ಘಮಘಮಿಸುವ ಸುವಾಸನೆ ನಿಮ್ಮ ದೇವರ ಮನೆಯಿಂದ" ಎಂದು ಕುಲಕರ್ಣಿ ಅವರನ್ನು ಕೇಳುತ್ತಿದ್ದರು.
ದೇವರ ಮನೆಯ ಒಳಗಡೆ ಹೋಗಿ ನೋಡುವ ಧೈರ್ಯ ಯಾರಿಗು ಇಲ್ಲ.
ಕುಲಕರ್ಣಿ ದಂಪತಿಗಳು ಅಪ್ಪಾವರ ಸ್ಮರಣೆ ಮಾಡುತ್ತಾ ದೇವರ ಮನೆಗೆ ಹೋಗುವ ಧೈರ್ಯ ಮಾಡಿದರು.
"ದೇವರ ಕಟ್ಟಿಯ ಮೇಲೆ ದೊಡ್ಡದಾದ ಘಟಸರ್ಪವು ಹೆಡೆಆಡಿಸುತ್ತಾ ಕುಳಿತಿತ್ತು.".
ಅದನ್ನು ದಿಟ್ಟಿಸಿ ನೋಡಲು ಶ್ರೀ ಇಭರಾಮಪುರ ಅಪ್ಪಾವರ ಆಕೃತಿ ಅವರ ಕಣ್ಣಿಗೆ ಕಾಣಿಸಿದೊಡನೆ,ಇತರ ಜನರೆಲ್ಲ ಒಳಗಡೆ ನುಗ್ಗಿ ದರುಶನ ಪಡೆದರು.
ಸರ್ಪವು ಅದೃಶ್ಯ ವಾಯಿತು.
ಎಲ್ಲರು ರೋಮಾಂಚಿತರಾಗಿ, ಭಕ್ತಿ ಇಂದ ಅಪ್ಪಾವರು ದರುಶನ ಕೊಟ್ಟ ದೇವರ ಜಗುಲಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ.
ದೇವರ ಮನೆಯಲ್ಲಿ ಒಂದು ಎಲೆಯಲ್ಲಿ ಇದು ಶ್ರೀ ಅಪ್ಪಾವರ ಎಲೆ ಎಂದು ಹೇಳಿ ಎಲ್ಲಾ ಅಡಿಗೆ ಪದಾರ್ಥಗಳನ್ನು ಬಡಿಸಿ ಇತರ ಬ್ರಾಹ್ಮಣ ಸುವಾಸಿನಿಯರಿಗೆ ಕೃಷ್ಣಾರ್ಪಣಮಸ್ತು ಅಂತ ಹೇಳಿ ಭೋಜನಕ್ಕೆ ಕೂಡಿಸುವರು.
ಕುಲಕರ್ಣಿ ಯವರ ಆನಂದ ಹೇಳತೀರದು.
ಶ್ರೀ ಮಧ್ವ ನವಮಿ ಗೆ ಸರಿಯಾಗಿ ಮಧ್ಯಾಹ್ನ ಸಮಯದಲ್ಲಿ ಬರುತ್ತೇವೆ ಅಂತ ಹೇಳಿದ ಅಪ್ಪಾವರು ಒಂದು ಅಂಶದಿಂದ ಶೇಷರೂಪದಿಂದ ದರುಶನ ಕೊಟ್ಟು ಅದೃಶ್ಯ ರಾದ ಸಂಗತಿಯನ್ನು ನೆನೆದು ಬಹಳ ಸಂತೋಷ ಭರಿತರಾದರು.
ಭೌತಿಕ ದೇಹದಿಂದ ಇರುವ ಸಮಯದಲ್ಲಿ ಸಹ ಬೇರೆ ಕಡೆಗೆ ಒಂದು ಅಂಶದಿಂದ ಬಂದು ಭಕ್ತರ ಉದ್ದಾರ ಮಾಡುವದು ಮತ್ತುಸುಮನೋಹರ ಪರಿಮಳವನ್ನು ಬೀರುವದು ,ಹೀಗೆ ಮೊದಲಾದ ಅಪೂರ್ವ ಮಹಿಮೆಯನ್ನು,ಅಂದಿಗು ಮತ್ತುಇಂದಿಗು ಸಹ ತೋರುತ್ತಾ,ಭಕ್ತರು ಬೇಡಿದ ಇಷ್ಟಾರ್ಥ ಗಳನ್ನು ನೆರವೇರಿಸಿ,ಇಭರಾಮಪುರದಲ್ಲಿ ನೆಲೆಸಿರುವ ಅಪ್ಪಾವರ ಕಾರುಣ್ಯ ಬಹಳ ದೊಡ್ಡದು...
ಭಗವಂತನ ಕೃಪೆ ಇಂದ ಇಂತಹ ಅಪರೋಕ್ಷ ಜ್ಞಾನಿಗಳ ಮಹಿಮೆ ವ್ಯಾಪ್ತವಾದುದು. 
ಇಂತಹ ದೊಡ್ಡವರ ಚರಿತ್ರೆಯು ಈ ಪಾಮರನನ್ನು ಉದ್ದರಿಸಲು ಅವರೆ ನಿಂತು ಪ್ರೇರಿಸಿ, ಬರೆಸಿ ,ಬರೆದಿದ್ದು...
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಸಾನುರಾಗದಿ ಇವರ ಮಹಿಮೆಯ|
ಗಾನ ಮಾಡುತ ಕುಣಿದು ಹಿಗ್ಗಲು|
ಶ್ರೀನಿವಾಸನ ಪೂಜೆ ಸುರನದಿ ಸ್ನಾನ ವೆನಿಸುವದು||

🙏ಅ.ವಿಜಯವಿಠ್ಠಲ
*************

ಕೃಷ್ಣಾರ್ಯರು

ಮಂತ್ರಾಲಯ ಗುರು ರಾಘವೇಂದ್ರರ ಕರುಣಾ ಸುಪಾತ್ರರ|
ಶ್ರೀ ಕೃಷ್ಣಾರ್ಯರ|
ಸ್ಮರಿಸುವ ನರನೇ ಧನ್ಯ ಸನ್ಮಾನ್ಯ||
🙏🙏🙏🙏
ಶ್ರೀ ಇಭರಾಮಪುರ ಅಪ್ಪಾವರ(ಶ್ರೀ ಕೃಷ್ಣಾರ್ಯರು) ಮೇಲೆ ಶ್ರೀ ಹರಿ ವಾಯು ಗುರುಗಳ ಕಾರುಣ್ಯದ ಪರಿಯನ್ನು ಅವರ ಜೀವನದಚರಿತ್ರೆಯಲ್ಲಿ ನಾವು ಕಾಣುತ್ತೇವೆ.
ಇದು ಕೆಲ ವರ್ಷಗಳ ಹಿಂದೆ ನಡೆದ ಘಟನೆ.
ಇದನ್ನು ನಮ್ಮ ಹಿರಿಯರಾದ ಮತ್ತು ಇವಾಗ ಅಲ್ಲಿ ಅರ್ಚಕರಾಗಿರುವ ಶ್ರೀರಾಮಚಂದ್ರಾಚಾರ್ಯ ಅವರ ತಂದೆಯವರಾದ 
ಪ್ರಾತಃ ಸ್ಮರಣೀಯ ರಾದ ಶ್ರೀ ಇಭರಾಮಪುರ ಕೃಷ್ಣಾಚಾರ್ಯರು ಸದಾ ಹೇಳುತ್ತಾ ಇದ್ದರು.

ಶ್ರೀ ಅಪ್ಪಾವರ ಆರಾಧನ ಸಮಯದಲ್ಲಿ ಅವರು ತಮ್ಮ ಕುಟುಂಬದವರು ಹಾಗು ಭಕ್ತವೃಂದ ಜೊತೆಯಲ್ಲಿ ಮಂತ್ರಾಲಯದಿಂದ ಇಭರಾಮಪುರಕ್ಕೆ ಬಂದು ಆರಾಧನಾ ಕಾರ್ಯಕ್ರಮ ಗಳನ್ನು ನಾಲ್ಕು ದಿನ ಮುಗಿಸಿ ನಂತರ ಮಂತ್ರಾಲಯಕ್ಕೆ ಹಿಂದಿರುಗುವದು ಇದು ಅವರ ಪ್ರತಿ ವರುಷದ ಕೆಲಸ.
ಒಮ್ಮೆ ಆರಾಧನ ಸಮಯದಲ್ಲಿ ಹಿಂದಿನ ದಿನ ಅವರು ಶ್ರೀ ಗುರು ಸೌರ್ವಭೌಮರಾದ ರಾಯರ ದರುಶನವನ್ನು ಮಾಡಿಕೊಳ್ಳಲು ಬಂದಿದ್ದಾರೆ.
ಹಾಗೇ ಪ್ರದಕ್ಷಿಣೆ ಹಾಕುತ್ತಾ ಅಲ್ಲಿ ಯಾರಾದರು ಪಂಡಿತರು, ಅಥವಾ ಆಚಾರ್ಯರು, ನಿತ್ಯ ಕರ್ಮಗಳನ್ನು ಆಚರಣೆ ಮಾಡುತ್ತಾ ಇರುವ ಸಜ್ಜನರು, ರಾಯರ ದರುಶನಕ್ಕೆ ಯಾತ್ರಾರ್ಥಿಗಳಾಗಿ ಬಂದಿದ್ದರೆ,ಅಲ್ಲಿ ಪ್ರಾಕಾರದಲ್ಲಿ ಕುಳಿತಿದ್ದರೆ ತಕ್ಷಣ ಅವರಿಗೆ ಆರಾಧನೆಗೆ ಬರಲು ಆಹ್ವಾನವನ್ನು ಕೊಟ್ಟು ಆಮಂತ್ರಣ ಮಾಡುವದು ಅವರ ಪದ್ದತಿ.
(ಇವಾಗಲು ಸಹ ಅದೇ ಪದ್ದತಿ ನಡೆದುಕೊಂಡು ಬಂದಿದೆ.)
ಹೀಗಿರುವಾಗ ಆ ದಿನ ಅವರು ರಾಯರಿಗೆ ಪ್ರದಕ್ಷಿಣೆ ಹಾಕುವಾಗ ಒಬ್ಬ ಸುಧಾ ಪಂಡಿತರು ಸೇವೆಗಾಗಿ ಮಂತ್ರಾಲಯ ಪ್ರಭುಗಳ ಸನ್ನಿಧಾನಕ್ಕೆ ಬಂದಿದ್ದಾರೆ.
ಅವರನ್ನು ನೋಡಿದ ತಕ್ಷಣ ಇವರು 
"ಸ್ವಾಮಿ!! ಆಚಾರ್ಯರೇ ನಾಳೆಯಿಂದ ಇಭರಾಮಪುರದಲ್ಲಿ ಶ್ರೀ ಅಪ್ಪಾವರ ಆರಾಧನಾ ಕಾರ್ಯಕ್ರಮ."ಶ್ರೀ ಅಪ್ಪಾವರು ರಾಯರಿಗೆ ಬಹಳ ಬೇಕಾದವರು.ರಾಯರ  ಅಂತರಂಗ ಭಕ್ತರು.ದಯವಿಟ್ಟು ತಪ್ಪದೇ ತಾವು ಬರಬೇಕು"  ಅಂತ ಆಹ್ವಾನವನ್ನು ಕೊಡುತ್ತಾರೆ.
ತಕ್ಷಣ ಆ ಪಂಡಿತರು 
ಇಲ್ಲ!! ಆಚಾರ್ಯರೇ ನನಗೆ ಬರಲು ಆಗುವದಿಲ್ಲ.ಇಂದಿನಿಂದ ನಾನು ಒಂದು ವಾರಗಳ ಕಾಲ ರಾಯರ ಸೇವೆ ಮಾಡಲು ಬಂದಿದ್ದೇನೆ.ಇವತ್ತು ಸೇವೆ ಶುರುವಾಗಿದೆ.ನಾಳೆಗೆ ಬಂದರೆ ದ್ವಿತೀಯ ವಿಘ್ನವಾಗುತ್ತದೆ.ಬರಲು ಆಗುವದಿಲ್ಲ. ಕ್ಚಮಿಸಿ🙏 ಅಂತ ಹೇಳುತ್ತಾರೆ.
ನಂತರದಲ್ಲಿ ಶ್ರೀ ಕೃಷ್ಣಾಚಾರ್ಯರು 
ಏನು ತಪ್ಪು ಆಗುವದಿಲ್ಲ ಬರಬಹುದು. ಆಚಾರ್ಯರೆ ಬನ್ನಿ. ಅಂತ ಮತ್ತೊಂದು ಸಾರಿ ಕೇಳಿದಾಗ ಅವರು  ಬರಲು ಆಗುವದಿಲ್ಲ ಎಂದು ಹೇಳುವರು. 
ಶ್ರೀ ಕೃಷ್ಣಾಚಾರ್ಯರು 
ಆಗಲಿ ಸ್ವಾಮಿ ಅಂತ ಹೇಳಿ ಸಾಯಂಕಾಲ ಬಂಡಿ ಕಟ್ಟಿಕೊಂಡು ಇಭರಾಮಪುರಕ್ಕೆ ಹೊರಡುತ್ತಾರೆ.ಅವಾಗ ಇಷ್ಟು ವಾಹನದ ವ್ಯವಸ್ಥೆ, ರಸ್ತೆ ಮಾರ್ಗ ಸಹ ಇದ್ದಿಲ್ಲ.

ಆ ರಾತ್ರಿ   ಇತ್ತ ಮಂತ್ರಾಲಯದಲ್ಲಿ ಸೇವೆಯನ್ನು ಮುಗಿಸಿಕೊಂಡು ಆಚಾರ್ಯರು ಮಲಗಿದ್ದಾರೆ.
ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಅವರಿಗೆ ಸ್ವಪ್ನ ವಾಗಿದೆ.
ಸ್ವಪ್ನದಲ್ಲಿ ರಾಯರು ಬಂದು
"ಇಲ್ಲಿ ಕೂತು ನೀ ಏನು ಮಾಡುತ್ತೀಯಾ.??"
"ಇಂದಿನಿಂದ ಮೂರು ದಿನಗಳ ಕಾಲ ನಾನೇ ಅಲ್ಲಿ ಇಭರಾಮಪುರದಲ್ಲಿ ಅಪ್ಪಾವರ ಆರಾಧನ ಸಮಯದಲ್ಲಿ ಅಲ್ಲಿ ಇರುತ್ತೇನೆ.ನೀನು ನಡಿ ಇಭರಾಮಪುರಕ್ಕೆ" ಅಂತ ಸೂಚನೆಯನ್ನು ಕೊಡುತ್ತಾರೆ.
ಬೆಳಗ್ಗೆ ಎದ್ದು ನಿತ್ಯ ಕರ್ಮಗಳನ್ನು ಆಚರಿಸಿ,ರಾಯರಿಗೆ ನಮಸ್ಕರಿಸಿ
ಅಲ್ಲಿಂದ ಇಭರಾಮಪುರಕ್ಕೆ ಅವರು ಬರುತ್ತಾರೆ.

ಅವಾಗ್ಗೆ ಇಭರಾಮಪುರಕ್ಕೆ ಹೊಲದಲ್ಲಿ ನಡೆದುಕೊಂಡು ಬರಬೇಕು.
ಇವರು ತಮ್ಮ ಪ್ರಯಾಣದ ಚೀಲದೊಂದಿಗೆ ಅವರಿವರಿಗೆ ಕೇಳಿಕೊಂಡು ಶ್ರೀಅಪ್ಪಾವರ ಕಟ್ಟಿಗೆ ಬರುತ್ತಾರೆ.
ಸಾಯಂಕಾಲ ನಾಲ್ಕು ಗಂಟೆ ಆಗಿದೆ. ಆ ದಿನ ಪೂರ್ವಾರಾಧನೆ ಅಲಂಕಾರ ಬ್ರಾಹ್ಮಣರು ಭೋಜನಕ್ಕೆ ಕುಳಿತಿದ್ದಾರೆ..
ಶ್ರೀ ಕೃಷ್ಣಾರ್ಪಣ ಮಸ್ತು ಅಂತ ಹೇಳಿದ್ದಾರೆ.
ಬಂದಂತಹ ಆಚಾರ್ಯರನ್ನು ನೋಡಿ ಕೃಷ್ಣಾಚಾರ್ಯರು ಸ್ವಾಮಿ!!
ಮೊದಲೇ ಹೇಳಿದ್ದರೆ ಏನಾದರು ಬಂಡಿ ವ್ಯವಸ್ಥೆ ಮಾಡುತ್ತಾ ಇದ್ದೆ.
ಇವಾಗ ತಾನೇ ಅಲಂಕಾರ ಬ್ರಾಹ್ಮಣರು ಭೋಜನಕ್ಕೆ ಕುಳಿತಿದ್ದಾರೆ.ತಮಗೆ ಈ ಅಡಿಗೆ ನಡೆಯುತ್ತದೆ ಅಂದರೆ ತಾವು ಭೋಜನಕ್ಕೆ ಕುಳಿತುಕೊಳ್ಳಬಹುದು.ಇಲ್ಲ ವೆಂದರೆ ತಮ್ಮ ನೇಮಕ್ಕೆ ತೊಂದರೆ ಆಗುತ್ತದೆ ಅಂದರೆ ಬೇರೆ ವ್ಯವಸ್ಥೆ ಮಾಡಿಸುವೆ.. ಅಂದಾಗ ಅವಾಗ ಆ ಆಚಾರ್ಯರು 
ಸ್ವಾಮಿ!! ರಾಯರೇ ನನ್ನ ಇಲ್ಲಿ ಕರೆದುಕೊಂಡು ಬಂದಿದ್ದಾರೆ.ಹಾಗೇನು ನೇಮವಿಲ್ಲ. ಅವರ ನಂತರ ಭೋಜನಕ್ಕೆ ಕೂಡುವೆ.. ಅಂತ ಹೇಳಿ ನಂತರದಲ್ಲಿ ತೀರ್ಥ ಪ್ರಸಾದಗಳನ್ನು ಸ್ವೀಕಾರ ಮಾಡಿದರು. ಸಾಯಂಕಾಲದ ಸಮಯದಲ್ಲಿ 
ಅವರು 
ರಾಯರ ಸೂಚನೆಯಂತೆ ಇಲ್ಲಿಗೆ ನನಗೆ ಬರಲು ಆಯಿತು. ರಾಯರೇ ನನಗೆ ಇಲ್ಲಿ ಕಳುಹಿಸಿದ್ದಾರೆ.
ರಾಯರೇ ಇಲ್ಲಿ ಮೂರು ದಿನಗಳ ಕಾಲ ಇಲ್ಲಿ ಇರುತ್ತೇನೆ ಅಂತ ಸ್ವಪ್ನದಲ್ಲಿ ಸೂಚನೆ ಕೊಟ್ಟ ಕಾರಣ ಇಲ್ಲಿ ಇದ್ದು ಮೂರು ದಿನಗಳ ಕಾಲ ಇಲ್ಲಿ ಸೇವೆ ಮಾಡಿಕೊಂಡು ಹೋಗುವೆ.ಅಂತ ಹೇಳಿ ಮೂರು ದಿನವಿದ್ದು ಅಪ್ಪಾವರ ಸೇವೆ ಮಾಡಿ ಹಿಂತಿರುಗಿದರು.
ಇದನ್ನು ಯಾವಾಗಲು ಅವರು ನಮಗೆ ಹೇಳುತ್ತಾ ಇದ್ದರು.
ಶ್ರೀ ಅಪ್ಪಾವರ ಕಟ್ಟಿ ಗೆ ಯಾರೇ ಭಕ್ತರು ಬರಲಿ ಅವರಲ್ಲಿ ಅವರು ತೋರಿಸುವ ವಾತ್ಸಲ್ಯ ಪ್ರೀತಿ ಎಂದಿಗು ಮರೆಯಲಾಗದು.
ಅದನ್ನು ಪ್ರತ್ಯಕ್ಷವಾಗಿ ಅನುಭವವನ್ನು ಹೊಂದಿದ್ದೇನೆ.

ಇವಾಗಲು ಕೆಲವರು ಸೇವೆ ಮಾಡಲು ಮಂತ್ರಾಲಯಕ್ಕೆ ಬಂದಾಗ ರಾಯರು ಇಭರಾಮಪುರಕ್ಕೆ ಹೋಗಿ ಸೇವೆ ಮಾಡಲು ಹೇಳಿದ ನಿದರ್ಶನವು ಇದೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಸ್ಮರಿಸುವರಿಗೆ ಸುರ ತರು ಕಲ್ಪ| 
ಇಭರಾಮ ಪುರದೀ ಶ್ರೀ ಹರಿ ಧ್ಯಾನ| ಪರ ಶ್ರೀ ಕೃಷ್ಣಾರ್ಯರ|

🙏ಅ.ವಿಜಯವಿಠ್ಠಲ🙏
***********

ಪ್ರವರರಿಯದವನಿಂದ ಮದವಿಳಿಸಿದೇ|
🙏🙏
ಶ್ರೀ ಇಭರಾಮಪುರ ಅಪ್ಪಾವರ ಚರಿತ್ರೆ
✍ಒಮ್ಮೆ ಮಂತ್ರಾಲಯ ಕ್ಷೇತ್ರಕ್ಕೆ ರಾಮಾಚಾರ್ಯರು ಎಂಬ ಪಂಡಿತರು ಸಂತಾನ ಅಪೇಕ್ಷಿತ ವಾಗಿ ಶ್ರೀ ರಾಯರ ಸೇವೆಗಾಗಿ ಬಂದಿರುತ್ತಾರೆ.ದೊಡ್ಡ ಪಂಡಿತರು. ಪಾಠ ಪ್ರವಚನ ಕುಶಲರು.ಆದರೆ ಅವರಲ್ಲಿ ಒಂದು ದೋಷ.ವಿನಯ ಅವರ ಬಳಿ ಇದ್ದಿಲ್ಲ.
ಮಂತ್ರಾಲಯ ಕ್ಕೆ ಸೇವೆಗಾಗಿ ಬಂದ ಅನೇಕ ಅಕ್ಷರಸ್ಥರ ಜೊತೆಯಲ್ಲಿ ಶಾಸ್ತ್ರ ವಿಚಾರವಾಗಿ ವಾದ ಮಾಡಿ ಅವರನ್ನು ನಿರುತ್ತರ ಮಾಡಿ,ಅಹಂಕಾರ ದಿಂದ ವರ್ತನೆ ಮಾಡಲು ಆರಂಭಿಸಿದರು. ಇದು ರಾಯರಿಗೆ ಸರಿ ಕಾಣಲಿಲ್ಲ.
ಇವರು ಅಲ್ಲಿ ಇದ್ದಾಗ ಶ್ರೀ ಅಪ್ಪಾವರು ರಾಯರ ದರ್ಶನಕ್ಕೆ ಬಂದಿರುತ್ತಾರೆ.
ರಾಯರ ವರ್ಧಂತಿ ಸಹ ಆ ಸಮಯದಲ್ಲಿ ಇರುತ್ತದೆ. ಹಾಗಾಗಿ ರಾಯರ ವರ್ಧಂತಿ ಸಮಾರಾಧನೆಗೆ ರಾಯರ ಹತ್ತಿರ ಬಂದು ಇಭರಾಮಪುರಕ್ಕೆ ಬರಲು ರಾಯರಿಗೆ ಆಹ್ವಾನವನ್ನು ಕೊಡುತ್ತಾರೆ.ರಾಯರ ಜೊತೆಯಲ್ಲಿ ಇವರು ಮಾತನಾಡುವ ಸಾಮರ್ಥ್ಯ ಅವರಿಗೆ ಇತ್ತು.
ವೃಂದಾವನದ ಮುಂದೆ ನಿಂತು ಇವರು ಮಾತನಾಡಿದರೆ ರಾಯರು ಒಳಗಡೆ ಇಂದ ಉತ್ತರ ಕೊಡುತ್ತಾ ಇದ್ದರು.
ನೋಡುವವರಿಗೆ ಇವರೊಬ್ಬರೇ ಮಾತನಾಡುತ್ತಾ ಇದ್ದಾರೆ ಅಂತ ಭಾವಿಸುತ್ತಾ ಇದ್ದರು.
ಅಲ್ಲಿ ಕುಳಿತಿದ್ದ ಆಚಾರ್ಯರಿಗೆ ಸಹ ಆಹ್ವಾನವನ್ನು ನೀಡುತ್ತಾರೆ.
ಆದರೆ ಆಚಾರ್ಯರು 
ಇವರು ಯಾರೋ! ಏನೋ?? ಮಂತ್ರಾಲಯ ಬಿಟ್ಟು ಹೋಗುವದು ಏಕೆ?? ಎಂದು ಅನುಮಾನದಿಂದ ಉತ್ತರ ಕೊಡಲಿಲ್ಲ.
"ಆ ರಾತ್ರಿ ಸ್ವಪ್ನದಲ್ಲಿ ರಾಯರು ಬಂದು ಪಂಡಿತರಿಗೆ  ಇಭರಾಮಪುರಕ್ಕೆ ಹೋಗಲು ಸೂಚನೆ ಕೊಡುತ್ತಾರೆ."
ಶ್ರೀರಾಯರ ಆಜ್ಞೆಯಂತೆ ಶ್ರೀ ಅಪ್ಪಾವರ ಮೇಲಿನ ಗೌರವದಿಂದ ಆಚಾರ್ಯರು ಮಂತ್ರಾಲಯ ದಿಂದ ಇಭರಾಮಪುರ ಕ್ಕೆ ಹೆಜ್ಜೆ ನಮಸ್ಕಾರ ಹಾಕುತ್ತಾ ಹೊರಟರು.
ಇತ್ತ ಇಭರಾಮ ಪುರದಲ್ಲಿ ದೊಡ್ಡ ಉತ್ಸವ. ವಿದ್ವತ್ ಗೋಷ್ಠಿ ನಡೆದಿದೆ.ಎಲ್ಲಾ ಮುಗಿದು ಭೋಜನ ಸಮಯ.ಆದರೆ ಶ್ರೀಅಪ್ಪಾವರು ಮಾತ್ರ ಭೋಜನಕ್ಕೆ ಕೂಡದೇ ಯಾರಿಗೋ ಕಾಯುತ್ತಾ ಇದ್ದಾರೆ.ಜನರೆಲ್ಲಾ ಅಪ್ಪಾವರ ವೀಕ್ಷಣೆ ಮಾಡುತ್ತಾ ಇದ್ದಾರೆ.ಸ್ವಲ್ಪ ಹೊತ್ತಿಗೆ ರಾಮಾಚಾರ್ಯರು ಅಲ್ಲಿ ಗೆ ಬರುತ್ತಾರೆ
"ಶ್ರೀ ಅಪ್ಪಾವರು ರಾಘವೇಂದ್ರ ಚಿತ್ತಜ್ಞರಾದ್ದರಿಂದ ರಾಯರು ಯಾರಿಗೆ ಏನು ಸೂಚನೆ ಕೊಟ್ಟಿದ್ದಾರೆ ಇವೆಲ್ಲವೂ ಗೊತ್ತಾಗುತ್ತಾ ಇತ್ತು."
ತದನಂತರ ಭೋಜನ ಆದ ಮೇಲೆ ತಾಂಬೂಲ ಸ್ವೀಕರಿಸುವ ವೇಳೆ.
ಶ್ರೀ ಅಪ್ಪಾವರು ತಮ್ಮ ಮನೆಯಲ್ಲಿ ಕೆಲಸ ಮಾಡುವ ನೀರು ತರುವ  ಆಳನ್ನು ಕರೆದು ಅವನನ್ನು ಹಸ್ತದಿಂದ ಸ್ಪರ್ಶಿಸಿ 
"ಈ ರಾಮಾಚಾರ್ಯರು ಪಂಡಿತರು.ಶ್ರೀ ಮನ್ ನ್ಯಾಯ ಸುಧಾ ಗ್ರಂಥ ದಲ್ಲಿ ಇವರಿಗೆ ಅರ್ಥ ವಾಗದ ವಿಷಯಗಳಿಂದ ಸಂಶಯಗ್ರಸ್ತರಾಗಿದ್ದಾರೆ.ಅವರ ಸಂಶಯಗಳನ್ನು ನಿವಾರಿಸಲು" ಹೇಳುತ್ತಾರೆ. ಸುತ್ತ ಇದ್ದ ಜನರಿಗೆಲ್ಲ ಆಶ್ಚರ್ಯಕರವಾಗಿ ತೋರುತ್ತದೆ. ಏನು!! ಓದು ಬರಹ ಇಲ್ಲದವ ಹೇಗೆ ಸುಧಾನುವಾದ ಮಾಡಿಯಾನು ಎಂದು??
"ಶ್ರೀ ಅಪ್ಪಾವರ ಅನುಗ್ರಹದಿಂದ ಸತತ ಎರಡು ಗಂಟೆ ಗಳ ಕಾಲ ಸಂಸ್ಕೃತ ದಲ್ಲಿ ಲೀಲಾಜಾಲವಾಗಿ ಸುಧಾನುವಾದ ಮಾಡಿ ಆಚಾರ್ಯರ ಸಂಶಯವನ್ನು ನೀರಿನವ ನಿವಾರಣೆ ಮಾಡುತ್ತಾನೆ".
ಇದರಿಂದ ಆಚಾರ್ಯರಿಗೆ ಗರ್ವಭಂಗವಾಯಿತು.
"ಇನ್ನೂ ಮುಂದೆ ಈ ತರಹ ಗರ್ವಪಡಬಾರದು.ತತ್ರಾಪಿ ದೊಡ್ಡವರ ಸನ್ನಿಧಿಯಲ್ಲಿ ಸಾಧು ಜನರಿಗೆ ಅಹಂಕಾರ ದಿಂದ ಮಾತನಾಡಿ ಅವರ ಮನಸ್ಸು ನೋಯಿಸುವ ಕೆಲಸ ಮಾಡಬಾರದು" ಎಂದು ತಿಳಿದು ಅಪ್ಪಾವರ ಬಳಿ ಕ್ಷಮೆ ಯಾಚನೆಮಾಡುವರು.
ಶ್ರೀ ಅಪ್ಪಾವರ ಬಳಿ ಭಕ್ತಿ ಮಾಡಿದ ರಾಮಾಚಾರ್ಯರಿಗೆ ಮುಂದೆ ಸಂತಾನವಾಗುತ್ತದೆ.
ಹೀಗೆ ತಮ್ಮ ಹಸ್ತ ಸ್ಪರ್ಶದಿಂದ ಓದು ಬರಹ ಬಾರದ ವ್ಯಕ್ತಿಯಿಂದ ಸಕಲ ಶಾಸ್ತ್ರಾರ್ಥ ವನ್ನು ಅನುವಾದ ಮಾಡಿಸಿದ ಈ ಚರಿತ್ರೆ ಮಂತ್ರಾಲಯ ಪ್ರಾಂತ್ಯದಲ್ಲಿ ಬಹು ಜಾಗರೂಕ ವಾಗಿದೆ.
ಹೀಗೆ ಭಗವಂತ ತನ್ನ ಭಕ್ತರಲ್ಲಿ ನಿಂತು ಮಾಡುವ ಲೀಲೆ ಬಹು ವಿಚಿತ್ರ ಮತ್ತು ಸೋಜಿಗ.
ಶ್ರೀ ಕೃಷ್ಣ ಪರಮಾತ್ಮನ,ವಾಯುದೇವರ ಮತ್ತು,ರಾಯರ ಸಂಪೂರ್ಣ ಅನುಗ್ರಹ ಪಾತ್ರರಾದ ಶ್ರೀ ಅಪ್ಪಾವರು ನಮ್ಮ ಮೇಲೆ ಸಹ ಅನುಗ್ರಹ ಮಾಡಲಿ ಎಂದು ಪ್ರಾರ್ಥನೆ ಮಾಡುತ್ತಾ
🙏ಶ್ರೀ ಕೃಷ್ಣಾರ್ಪಣಮಸ್ತು🙏
 ಸಾನುರಾಗದಿ ಇವರ ಮಹಿಮೆಯ ಗಾನ ಮಾಡುತ| ಕುಣಿದು ಹಿಗ್ಗಲು ಶ್ರೀನಿವಾಸನ ಪೂಜೆ ಸುರನದಿ ಸ್ನಾನ ವೆನಿಸುವದು.|
🙏ಶ್ರೀ ಕೃಷ್ಣಾಚಾರ್ಯ ಗುರುಂಭಜೇ🙏
******


No comments:

Post a Comment