Tuesday 1 January 2019

ಅಪ್ಪಾವರು ಮಹಿಮೆ 07 ಇಭರಾಮಪುರ appavaru mahime 07





ಇಬ್ಬರಾಮಪುರದ ಶ್ರೀ ಅಪ್ಪಾವರು ಎಂದು ಪ್ರಖ್ಯಾತರಾದ ಶ್ರೀ ಕೃಷ್ಣಾಚಾರ್ಯರು ಸುಜೀವಿಗಳನ್ನು ಉದ್ಧರಿಸಲೆಂದೇ ಅವತರಿಸಿದ ದೇವಾಂಶಸಂಭೂತರು.

ಶ್ರೀಹರಿಯನ್ನು ಅಪರೋಕ್ಷಿಕರಿಸಿಕೊಂಡು ಅಪೂರ್ವ ಯೋಗ ಸಾಮರ್ಥ್ಯಗಳನ್ನು ಸಂಪಾದಿಸಿದ್ಧ ಅವರಲ್ಲಿ ಭಾವುಕರಿಗೆ ಅಪಾರ

ಗೌರವಾದರಗಳಿದ್ದವು.

ಎಲ್ಲರೂ ಅಭಿಮಾನದಿಂದ ಅಪ್ಪಾವರು ಎಂದೇ ಸಂಭೋದಿಸುತ್ತಿದ್ದರು.ಹಾಗಾಗಿ ತಮ್ಮ ಭಕ್ತವಲಯದಲ್ಲಿ ಅವರು " ಅಪ್ಪಾವರು "ಎಂದೇ ಸುಪ್ರಸಿದ್ದರಾದರು, ಅಪ್ಪಾವರಿಂದ ತಮ್ಮ ಕಷ್ಟ-ದುಃಖಗಳನ್ನು ಪರಿಹರಿಸಿಕೊಂಡು,ರೋಗ-ರುಜಿನ ಗಳನ್ನು ಕಳೆದುಕೊಂಡ,ಸಾಧನೆ ಹಾದಿಯನ್ನು ಕಂಡುಕೊಂಡ ಭಕ್ತರ ಸಂಖ್ಯೆ ಅಪಾರವಾದದ್ದು.

ಅಪ್ಪಾವರಿಂದ ತಮ್ಮ ಬದುಕಿನಲ್ಲಿ ಬೆಳಕನ್ನು ಕಂಡುಕೊಂಡ ಸಾವಿರಾರು ಕುಟುಂಬಗಳು ಇನ್ನು ನಾಡಿನಾದ್ಯಂತ ಊರ್ಜಿತವಾಗಿವೆ.

" ಇಭರಾಮಪುರಾಧೀಶ ಅಪ್ಪ ಅಪ್ಪ" ಎಂದು ಭಕ್ತಿಯಿಂದ ಉದ್ಗರಿಸಿ ಅವರಿಗೆ ಪೂರ್ಣ ಶರನಾಗುತ್ತಾರೆ.

ತಾವು ತಿನ್ನುವ ಅನ್ನ,ಉಡುವ ಅರವೆ, ಹಚ್ಚುವ ದೀಪ ಮತ್ತು ಕಾಣುವ ನೆಮ್ಮದಿ ಶ್ರೀಅಪ್ಪಾವರು ಮಾಡಿದ ಪರಮಾನುಗ್ರಹ ವೆಂದು ಭಾವಿಸುತ್ತಾರೆ.

ರಾಯರ ಅನುಗ್ರಹ ಅಪ್ಪಾವರಲ್ಲಿ ಎಷ್ಟಿತೆಂದರೆ ರಾಯರು ನಡೆಸುವ ಸಕಲ ವ್ಯಾಪಾರವು ಅಪ್ಪಾವರಗೆ ಮೊದಲೇ ತಿಳಿದಿರುತ್ತಿತ್ತು.

ಮಂತ್ರಾಲಯದಲ್ಲಿ ಸೇವೆ ನಡೆಸುತ್ತಿದ್ದ ಭಕ್ತರಿಗೆ " ನಾಳೆ ನಾನು ಇಲ್ಲೀರುವುದಿಲ್ಲ.ಇಭರಾಮಪುರಾದ ಅಪ್ಪವರಲ್ಲಿ ಹೋಗುತ್ತಿದ್ದೇನೆ" ಎಂದು ಅನೇಕ ಬಾರಿ ರಾಯರೆ ಸ್ವಪ್ನದಲ್ಲಿ ಸೂಚಿಸುತ್ತಿದ್ದುದ್ದುಂಟು.

ಅಗಮ್ಯಮಹಿಮರೆಂದು ಪ್ರಸಿದ್ಧರಾದ ಶ್ರೀ ರಾಘವೇಂದ್ರ ಪ್ರಭುಗಳುನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವ ಸಾಮರ್ಥ್ಯ " ಶ್ರೀ ರಾಘವೇಂದ್ರ ಚಿತ್ತಜ್ಞo" ಎಂದು ಹೆಸರು ಪಡೆದ ಅಪ್ಪಾವರಿಗೆ ಪೂರ್ಣವಾಗಿ ಸಿದ್ದಿಸಿತ್ತು.

 ಹೀಗೆ ಅಪ್ಪಾವರು ಅಂತರ್ಗತ ಗುರುರಾಯಾರು,ಮುಖ್ಯಪ್ರಾಣ,ಲಷ್ಮಿ ನಾರಸಿಂಹ ದೇವರು,ಸಮಸ್ತ ಭಕ್ತರಿಗೆ ಅನುಗ್ರಹಿಸಲಿ.

"ಮರೇತು ಮಾಡಿದ ಪಾಪ ಅಪ್ಪಾವರೆ,ಇನ್ನು
ಅರಿತು ಮಾಡದ ಹಾಗೆ ಅಪ್ಪಾವರೆ|
ತಿರುಮಲೇಶ ಹರಿ ವಿಠ್ಠಲರಾಯನ
ಚರಣವ ತೋರಿಸಿ ಅಪ್ಪವರೆ.."
ತಪ್ಪು ಮಾಡಿದೆ ನಾನು ಅಪ್ಪಾವರೆ
ಒಪ್ಪತ್ತಾದರು ನಿಮ್ಮ ಒಪ್ಪಾದಿ ಭಾಜಿಸದೆ...
***


|ಶ್ರೀ ಅಪ್ಪಾವರ ಮಹಿಮೆ||


ಒಮ್ಮೆ ಶ್ರೀ ಅಪ್ಪಾವರು ಸಂಚಾರತ್ವೇನ ಗದ್ವಾಲ ಪ್ರಾಂತ್ಯಕ್ಕೆ ಹೋಗುತ್ತಾರೆ.  ಅಲ್ಲಿ ಕೆಲ ವರುಷಗಳಿಂದ ಮಳೆ ಬೆಳೆ ಇಲ್ಲದೆ, ಬರಗಾಲ ಬಂದಿರುತ್ತದೆ.  ಅಪ್ಪಾವರು ಊರ ಹೊರಗಿನ ಒಂದು ಗಿಡದ ಕೆಳಗೆ ಕುಳಿತಿರುತ್ತಾರೆ.  ಗದ್ವಾಲ ರಾಜ ಅವರನ್ನು ಭೇಟಿಯಾಗಲು ಬರುತ್ತಾನೆ.

ತನ್ನ ರಾಜ್ಯಕ್ಕೆ ಬಂದೊದಗಿದ ದುಸ್ತಿತಿ,ಜನಗಳು ,ಜಾನುವಾರು ಗಳು ಪಡುತ್ತಿರುವ ಕಷ್ಟವನ್ನು ಅಪ್ಪಾವರ ಬಳಿ ತನ್ನ ದುಖಃವನ್ನು ಹೇಳಿಕೊಳ್ಳುವ.

ಅವಾಗ್ಗೆ  ಅಪ್ಪಾವರು  "ರಾಜಾ ನೀನು ಅರಮನೆಗೆ ಹಿಂತಿರುಗು ಮಳೆ ಬರುವದು" ಅಂತ ಹೇಳಿದಾಗ, ಅವನಿಗೆ ನಂಬಿಕೆ ಬಾರದೇ ಇಷ್ಟು ದಿನ ಬಾರದ ಮಳೆ ಇವಾಗ ಹೇಗೆ ಬರುವದು?? ಅನ್ನುವದು ಅವನ ಮನಸ್ಸಿನಲ್ಲಿ ಆಲೋಚನೆ ಬರುತ್ತದೆ.

ಅದನ್ನು ಕಂಡ ಅಪ್ಪಾವರು ಮತ್ತೆ ಅದೇ ಮಾತನ್ನು ಹೇಳುತ್ತಾರೆ. ಅರಮನೆಗೆ ಹಿಂತಿರುಗಿ ಅಂತ.

ಆ ರಾಜ ಅರಮನೆಗೆ ಮುಟ್ಟುವಷ್ಟು ರೊಳಗೆ ಧಾರಾಕಾರ ಮಳೆ ಬಂದು ಆ ರಾಜ್ಯದಲ್ಲಿ ಇರುವ ಕೆರೆ,ಬಾವಿಗಳು,ನದಿ ಎಲ್ಲವೂ ತುಂಬಿ ಹರಿಯುತ್ತದೆ.

ಅದನ್ನು ಕಂಡ ರಾಜನು ಅಪ್ಪಾವರ ಬಳಿ ಬಂದು

ಸ್ವಾಮಿ! ನನ್ನ ರಾಜ್ಯವನ್ನು, ಉಳಿಸಿದ್ದೀರಿ,ನಿಮಗೇನು ಬೇಕು ಕೇಳಿ ಕೊಡುತ್ತೇನೆ ಅಂಥ ಹೇಳಿದಾಗ ಅವಾಗ್ಗೆ ಅಪ್ಪಾವರು ನಸು ನಗುತ್ತಾ

"ರಾಜಾ !ನೀ ಏನು ಕೊಡುತ್ತೀಯೊ,ಭಗವಂತ ನನಗೆ ಎಲ್ಲಾ ಕೊಟ್ಟಾನಾ,ನನಗೆ ಏನು ಬೇಡ ಅಂಥ ಹೇಳುತ್ತಾರೆ.

ಆದರು ಗದ್ವಾಲ ರಾಜ ಬಿಡುವದಿಲ್ಲ, ಪರಿಪರಿಯಾಗಿ ಬೇಡಿಕೊಳ್ಳಲು ಅವಾಗ್ಗೆ ಅಪ್ಪಾವರು ಹೇಳುತ್ತಾರೆ.  ನಿಮ್ಮ ಊರಿನಲ್ಲಿ ಇರುವ ಅಗ್ರಹಾರದಲ್ಲಿ ನಮ್ಮ ಸ್ವಾಮಿ ಭಾರತೀಶ ಇದ್ದಾನೆ. ಅವನ ಮೂರ್ತಿಯನ್ನು ಅದನ್ನು ಕೊಡಿಸು ಎನ್ನಲು  ಅವಾಗ್ಗೆ ಅಪ್ಪಾವರು ಮತ್ತು ರಾಜ ಇಬ್ಬರು ಅಲ್ಲಿ ಹೋಗುತ್ತಾರೆ. ಅಲ್ಲಿ ಇರುವ ಜನರಿಗೆ ಆ ಸ್ವಾಮಿಯನ್ನು ಕರೆದುಕೊಂಡು ಹೋಗಲು ಕೇಳಿದಾಗ,ಅಲ್ಲಿ ಇರುವ ಯಾರೂ ಒಪ್ಪಿಗೆ ಕೊಡುವದಿಲ್ಲ..  ವಾದ ವಿವಾದಗಳು ಆಗುತ್ತವೆ.

ಅಲ್ಲಿ ಒಬ್ಬನು  ಅಪ್ಪಾವರಿಗೆ ಹೇಳುತ್ತಾನೆ..

ಹೊರಗೆ ನಿಂತು ಕರಿಯಿರಿ.ಬಂದರೆ ಕರೆದುಕೊಂಡು ಹೋಗಿ ಅಂತ  ತಕ್ಷಣ ಅಪ್ಪಾವರು ಕೈ ಮುಗಿದು

"ಭಾರತೀಶ! ನಡಿ ಇಭರಾಮಪುರಕ್ಕೆ  ಹೋಗೋಣ ಅಂತ ಕೇಳಿಕೊಂಡು ಕುದುರೆ ಏರಿ ಹೊರಟಾಗ,ಅವರ ಹಿಂದೆಯೆ ಆ ಸ್ವಾಮಿ   ಬರುತ್ತಾನೆ.

ಬಂದಂತಹ ಪ್ರಾಣದೇವರನ್ನು ತಮ್ಮ ಮನೆಯ ಹತ್ತಿರ ಪ್ರತಿಷ್ಠೆ ಮಾಡುತ್ತಾರೆ.


ಈ ಪ್ರಾಣದೇವರ ವಿಶೇಷ ಏನೆಂದರೆ  ತಲೆಯ ಹಾಗು ಬಾಲದ ಮಧ್ಯ ದಲ್ಲಿ ಸುದರ್ಶನ ಇದೆ.   ಕೈಯಲ್ಲಿ ಸೌಗಂಧಿಕಾ ಪುಷ್ಪ ಹಿಡಿದಿದ್ದಾನೆ.  ಶಿಖಾ ಇದೆ ತಲೆಯಲ್ಲಿ.  ಪ್ರಾಣದೇವರು  ಕರೆದಕೂಡಲೆ ಬಂದರು. ಅಂತ ಸಹಜವಾದ ಒಂದು ಕುತೂಹಲ ನಮಗೆಲ್ಲ ರಿಗೆ ಬರುವದು ಸಹಜ.

ಹೀಗು ನಡೆಯುವದೇ ಅಂತ ಕೆಲವರಿಗೆ ಸಂದೇಹ.

ಇದರ ಬಗ್ಗೆ ತಿಳಿದಷ್ಟು ಹೇಳುವ ಪ್ರಯತ್ನ.

"ಪರಮಾತ್ಮನು ಭಕ್ತಪರಾಧೀನನಾದ ಕಾರಣ,ಶ್ರೀ ಇಭರಾಮಪುರ ಅಪ್ಪಾವರಂತಹ ಮಹಾತ್ಮರಿಗೆ ಭಗವಂತನು ವಶನಾದ ಮೇಲೆ ಅವನ ಮಂತ್ರಿಯಾದ ಮುಖ್ಯಪ್ರಾಣದೇವರು ಇವರ ಹಿಂದೆ ಬರುವುದು ಉಚಿತವಾಗಿದೆ...

ಇಂತಹ ಮಹನೀಯರ ಮುಖಾಂತರ ನಮ್ಮಂತಹ ಅಜ್ಞ ಜನಗಳ ಉದ್ಧಾರಗೋಸುಗ ಜೀವೋತ್ತಮರಾದ ವಾಯುದೇವರು, ಸರ್ವೋತ್ತಮನಾದ ಪರಮಾತ್ಮನ  ಅಪೌರುಷೇಯವಾದ ಮಹಿಮೆಯನ್ನು  ವ್ಯಕ್ತಪಡಿಸುವರು.
****

ಮಾತೋಶ್ರೀ ರಂಗಮ್ಮನವರ ಕೃತಿ.

ಚರಿತೆ ಸಾಲದೇ ಅಪ್ಪನಾ ಚರಿತೆ ಸಾಲದೇ ॥ ಪ ॥
ಚರಿತೆ ಸಾಲದೇನೆ ಸುಖಾಭರಿತ ಕೃಷ್ಣಾರ್ಯರ , ಶುಭ ॥ ಅ ಪ ॥

ಧಾರುಣಿಯಲ್ಲಿ ಮನುಜನಂತೆ ತೋರಿಕೊಂಡು ನಂಬಿದವರ ।
ಘೋರ ದುರಿತ ದೂರ ಮಾಡಿ ಪಾರುಗಾಣಿಸಿ ಮೋದಿಸುವರ ॥

ಜೀವದಲ್ಲಿ ಇಂದ್ರಿಯದಲ್ಲಿ ದೇಹದಲ್ಲಿ ಮನಸಿನಲ್ಲಿ ।
ಭೂಮಿ ಮೊದಲಾದ ಅಖಿಳ ಲೋಕದಲ್ಲಿ ನಿಂತು ಪೊರೆವ ॥

ಅಣಿಮಾದಿ ಸಿದ್ಧಿಪುರುಷ ಪ್ರಣತಜನರ ಸತತ ಪೊರೆವ ।
ಗುಣನಿಧಿ ನಮ್ಮ *ಬಾಲಕೃಷ್ಣನ ಪ್ರಣತರಾಗ್ರಣಿಯ ದಿವ್ಯ|
****

ಪ್ರಸನ್ನ ಶ್ರೀನಿವಾಸದಾಸರು

ಶ್ರೀ ಇಭರಾಮಪುರ ಕೃಷ್ಣಾಚಾರ್ಯರ ಸ್ತೋತ್ರ
(ಅಪ್ಪಾವರು)

ಇಭರಾಮಪುರ ಅಪ್ಪ ಸೌಭಾಗ್ಯದಾಯಕರೇ |
ಶುಭನಾಮ ಶ್ರೀ ಕೃಷ್ಣಾಚಾರ್ಯರೇ ನಮಸ್ತೇ ||
ಇಭರಾಜ ವರದನಿಗು ದ್ರುಪದಾತ್ಮಜಾಪತಿಗು |
ಶುಭಚರಿತ ರಾಘವೇಂದ್ರಾರ್ಯರಿಗು ಪ್ರಿಯ ಪ

ಶ್ರೀರಾಮನರಹರಿ ಶ್ರೀಕರನಾರಾಯಣ |
ವರಾಹ ಹಯಶೀರ್ಷ ಶ್ರೀಕೃಷ್ಣನ ಪೂರ್ಣಾ ||
ನುಗ್ರಹಕೆ ಪೂರ್ಣಪಾತ್ರರೇ ನಿಮ್ಮ ಚರಣ |
ಅರವಿಂದದಲಿ ನಾನು ಶರಣು ಶರಣಾದೆ 1

ಪಂಚಮುಖ ಹನುಮಂತ ನರಸಿಂಹ ಗರುಡ
ವರಾಹ ಹಯವದನ ||
ಈ ಅಂಜನಾಸುತನನ್ನು ತತ್ ಅಂತಸ್ಥ |
ಪಂಚರೂಪ ಶ್ರೀಶನ್ನ ಪೂಜಿಪಮಹಂತ 2

ಅಪ್ಪಾವರೆಂದು ಪ್ರೇಮದಿ ಕರೆಸಿಕೊಂಡು
ಅಪ್ಪಮಕ್ಕಳಂತೆ ಕಾಯ್ದಿರಿ ಜನರ ||
ಅಪ್ಪಾ ಎಂದೀಗಲೂ ಸ್ಮರಿಸಿದರೂ ನಿಮ್ಮ ಸಹ
ಶ್ರೀಪ ತಿಮ್ಮಪ್ಪ ಬಂದೆಮ್ಮನು ಕಾಯ್ವ 3

ಮೇಲಿಂದ ಬಿದ್ದವನ್ನ ದೂರ ಇದ್ದರೂ ಕಾಯ್ದು
ತಾಳಿಗೋರೂಪ ಪಾದಜ ಧಾನ್ಯ ಉಂಡು ||
ಜಲದಿಂದ ವಿಪ್ರತಮ ಭಕ್ತವರನನ್ನ ಕಾಯ್ದು |
ಜಲಜನಾಭನ ಗಾಯಕನೆಂದು ಆಶಿಸಿದಿರಿ 4

ಬೊಮ್ಮನ ಪಿತ `ಶ್ರೀ ಪ್ರಸನ್ನ ಶ್ರೀನಿವಾಸನಲಿ'
ಪ್ರೇಮ ಅಚ್ಛಿನ್ನ ಭಕ್ತಿ ನಿಮಗೆ ದ್ವಿಜವರರೆ ||
ನಿಮ್ಮವನು ಭುವಿಯಲ್ಲಿ ತೋರಿಹ ಎನ್ನನ್ನು
ಪ್ರೇಮಾನುಗ್ರಹದಯದಿ ಪಾಲಿಪುದು ಶರಣು 5 ಪ
***

ಶ್ರೀ ಇಭರಾಮಪುರ ಅಪ್ಪಾವರ ಚರಿತ್ರೆ||

ಶ್ರೀಶ ಲಕ್ಷ್ಮೀಗೆ ಬ್ರಹ್ಮ ಜೀವೇಶರಾ ನಮಿಸಿ|..
ಅಪ್ಪಾವರ ದಿವ್ಯ ಭಾಸುರ ಚರಿತೆ ನಾ ಲೇಶಮತಿ ಪೇಳ್ವೆ||

ಶ್ರೀ ಇಭರಾಮಪುರ ಅಪ್ಪಾವರು ಪ್ರತಿ ವರುಷವು ಸುರಪುರಕ್ಕೆ ಶ್ರೀ  ನರಸಿಂಹ ದೇವರ ಸಂದರ್ಶನ ಮಾಡಲು ಶ್ರೀ ನರಸಿಂಹ ಜಯಂತಿ ಉತ್ಸವಕ್ಕೆ  ಆಗಮಿಸುತ್ತಾ ಇದ್ದರು.ಮಾರ್ಗದಲ್ಲಿ ಇರುವ ಮಾನ್ವಿ ಕ್ಷೇತ್ರಕ್ಕೆ ಬಂದಾಗ  ಪುಷ್ಯಮಾಸವಾಗಿತ್ತು.

ಅವಾಗ ಅಪ್ಪಾವರು ಉಳಿದುಕೊಂಡ ಮನೆಯವರಾದ ಮಾನ್ವಿಯ ಕುಲಕರ್ಣಿ ಮನೆತನದವರು ಶ್ರೀ ಅಪ್ಪಾವರಿಗೆ ಸಾಷ್ಟಾಂಗ ನಮಸ್ಕರಿಸಿ, ಈ ಸಲ ಮಧ್ವ  ನವಮಿಯ ಮಹೋತ್ಸವಕ್ಕೆ ದಯಮಾಡಿ ಮಾನ್ವಿಗೆ ಆಗಮಿಸಿ ನಮನ್ನು  ಉದ್ದಾರ ಮಾಡಬೇಕೆಂದು ಭಕ್ತಿ,ಇಂದ ಕೇಳಿಕೊಂಡರು.

ಅವಾಗ್ಗೆ ಅಪ್ಪಾವರು ಕುಲಕರ್ಣಿ ಆಗಲಿ!!

ನಾವು ಕೆಲಸದ ನಿಮಿತ್ತ ವಾಗಿ ಸೊಲ್ಲಾಪುರ ಹೋಗಬೇಕಾಗಿದೆ. ನೀವು ಇತ್ತ  ಮಧ್ವ ನವಮಿಯ ಮಹೋತ್ಸವ ನೆರವೇರಿಸಿ..

ನಾವು ಶ್ರೀ ಮಧ್ವ ನವಮಿಯ ದಿನ ಎಲ್ಲಿ ಇದ್ದರು ಸಹ ಸರಿಯಾಗಿ  ಮಧ್ಯಾನ್ಹ ೧೨ಗಂಟೆಗೆ ನಿಮ್ಮ ಮನೆಗೆ ಬರುತ್ತೇವೆ ಎಂದು ಹೇಳಿ ಎಲ್ಲಾ ಭಕ್ತರಿಗೆ ಆಶೀರ್ವಾದ ಮಾಡಿ ಮುಂದೆ ಸಂಚಾರ ಹೊರಟರು.ಮಾಘ ಮಾಸ ಬಂತು.

ಈ ಸಾರಿ ಮಾನ್ವಿ ಯಲ್ಲಿ ಬಹಳ ವಿಶೇಷ. ಇಭರಾಮಪುರ ಅಪ್ಪಾವರು ಬರುತ್ತಾರೆ ಅನ್ನುವ ಸುದ್ದಿ ಒಬ್ಬರಿಂದ ಒಬ್ಬರಿಗೆ ಹರಡಿ ಅಸಂಖ್ಯಾತ ಭಕ್ತರು ಒಂದೆರಡು ದಿನ ಮುಂಚಿತವಾಗಿ ಕುಲಕರ್ಣಿಯ ಮನೆಗೆ ಆಗಮಿಸುತ್ತಾರೆ.  ಉತ್ಸವದ ದಿನ ಆರಂಭವಾಗಿದೆ.ರಥಸಪ್ತಮಿ, ಮರುದಿನ ಭೀಷ್ಮ ಅಷ್ಟಮಿ ಅಪ್ಪಾವರ ಆಗಮನವಿಲ್ಲ.

ಇದೇನಿದು!! ಅಪ್ಪಾವರು ಬರುತ್ತೇನೆ ಅಂತ ಹೇಳಿದ್ದಾರೆ .ಇನ್ನೂ ಬರಲಿಲ್ಲವಲ್ಲ ಅಂತ ಕುಲಕರ್ಣಿ ಯವರಿಗೆ ಸ್ವಲ್ಪ ನಿರಾಶೆ ಆಯಿತು.  ಮರುದಿನ ಮಧ್ವ ನವಮಿ ಅಪ್ಪಾವರ ಆಗಮನವಿಲ್ಲ!!

ಅವಾಗ್ಗೆ ಕುಲಕರ್ಣಿ ಯವರು ಶ್ರೀ ಇಭರಾಮಪುರ ಅಪ್ಪಾವರು ಎಂದಿಗು, ಯಾವ ಭಕ್ತರಿಗು, ಯಾರಿಗೂ ನಿರಾಶೆ ಮಾಡಿಲ್ಲ. ಎಲ್ಲರಿಗೂ ಅನುಗ್ರಹ ಮಾಡಿದ್ದಾರೆ... ಇಂದು ಏಕೆ ಹೀಗೆಆಯಿತೋ??ಏನೋ!!  ಮುಖ್ಯ ನನಗೆ ಅವರಿಗೆ ಸೇವೆ ಮಾಡುವ ಭಾಗ್ಯ ಲಭ್ಯ ಇಲ್ಲವೆಂದು ಚಿಂತಾ ಮಗ್ನರಾಗಿದ್ದರು. 

ಆದರೂ ಕಾರ್ಯಕ್ರಮ ನಿಲ್ಲುವಂತಿಲ್ಲ. ಬೆಳಿಗ್ಗೆ ಇಂದ ಪಾರಾಯಣ ಪಠಣಾದಿಗಳು ನಡೆಯತ್ತಾ ಇದ್ದವು. ಅಡಿಗೆ ಯಾಯಿತು. ನೈವೇದ್ಯ ಸಹ ಆಗಿದೆ

ಇನ್ನೂ ಅಪ್ಪಾವರ ಆಗಮನವಿಲ್ಲ.

ಸಮಯ ಸರಿಯಾಗಿ ಮಧ್ಯಾಹ್ನ ೧೧:೩೦ ಆಗಿದೆ. ಬ್ರಾಹ್ಮಣ ಸುವಾಸಿನಿಯರಿಗೆ ಭೋಜನಕ್ಕೆ ಎಲೆಗಳನ್ನು ಸಹ ಹಾಕಿದ್ದಾರೆ. ಕುಳಿತವರಿಗೆಲ್ಲ ಸಾಲಾಗಿ ಎಲ್ಲಾ ಅಡಿಗೆ ಪದಾರ್ಥಗಳನ್ನು ಬಡಿಸಿದ್ದಾರೆ. ಅವಾಗ ಕುಲಕರ್ಣಿ ಯವರು ಬಂದು. ಕೃಷ್ಣಾರ್ಪಣಮಸ್ತು ಅಂತ ಯಾರು ಹೇಳಬೇಡಿ. ಸರಿಯಾಗಿ ೧೨:೦೦ಗಂಟೆಗೆ ಅಪ್ಪಾವರು ಬರುತ್ತೇನೆ ಅಂತ ಸ್ಪಷ್ಟವಾಗಿ ಕಾಲ ನಿರ್ದೇಶನ ಮಾಡಿ ಹೇಳಿದ್ದಾರೆ.  ಇನ್ನೂ ಕೆಲ ಸಮಯ ಕಾಯುವದು ಅಗತ್ಯ ವೆಂದು ಬಂದಂತಹ ಭಕ್ತರ ಬಳಿ ವಿಜ್ಞಾಪನೆ ಮಾಡಿಕೊಳ್ಳಲು ಎಲ್ಲಾ ರು ಆಗಬಹುದು ಅಂತ ಹೇಳುತ್ತಾರೆ.

ತಕ್ಷಣ ದಲ್ಲಿ ದೇವರ ಮನೆಯಿಂದ ಪುನುಗು ಕಸ್ತೂರಿ ಜಾಜಿ ಮುಂತಾದ ದೇವಲೋಕದ ಪರಿಮಳವು ವಾಸನೆ ಆ ಸ್ಥಳದಲ್ಲಿ ಬಂತು... ಕಲೆತ ಜನರೆಲ್ಲ ತಕ್ಷಣ  ಇದೇನು!! ಘಮಘಮಿಸುವ ಸುವಾಸನೆ ನಿಮ್ಮ  ದೇವರ ಮನೆಯಿಂದ ಎಂದು ಕುಲಕರ್ಣಿ ಅವರನ್ನು ಕೇಳುತ್ತಿದ್ದರು.  ದೇವರ ಮನೆಯ ಒಳಗಡೆ ಹೋಗಿ ನೋಡುವ ಧೈರ್ಯ ಯಾರಿಗು ಇಲ್ಲ.  ಕುಲಕರ್ಣಿ ದಂಪತಿಗಳು ಅಪ್ಪಾವರ ಸ್ಮರಣೆ ಮಾಡುತ್ತಾ ದೇವರ ಮನೆಗೆ ಹೋಗುವ ಧೈರ್ಯ ಮಾಡಿದರು.

ದೇವರ ಕಟ್ಟಿಯ ಮೇಲೆ ದೊಡ್ಡದಾದ ಘಟಸರ್ಪವು ಹೆಡೆಆಡಿಸುತ್ತಾ ಕುಳಿತಿತ್ತು.  ಅದನ್ನು ದಿಟ್ಟಿಸಿ ನೋಡಲು ಶ್ರೀ ಇಭರಾಮಪುರ ಅಪ್ಪಾವರ ಆಕೃತಿ ಅವರ ಕಣ್ಣಿಗೆ ಕಾಣಿಸಿದೊಡನೆ,ಇತರ ಜನರೆಲ್ಲ ಒಳಗಡೆ ನುಗ್ಗಿ ದರುಶನ ಪಡೆದರು.

ಸರ್ಪವು ಅದೃಶ್ಯ ವಾಯಿತು.

ಎಲ್ಲರು ರೋಮಾಂಚಿತರಾಗಿ, ಭಕ್ತಿ ಇಂದ ಅಪ್ಪಾವರು ದರುಶನ ಕೊಟ್ಟ ದೇವರ ಜಗುಲಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆದೇವರ ಮನೆಯಲ್ಲಿ ಒಂದು ಎಲೆಯಲ್ಲಿ ಇದು ಶ್ರೀ ಅಪ್ಪಾವರ ಎಲೆ ಎಂದು ಹೇಳಿ ಎಲ್ಲಾ ಅಡಿಗೆ ಪದಾರ್ಥಗಳನ್ನು ಬಡಿಸಿ ಇತರ ಬ್ರಾಹ್ಮಣ ಸುವಾಸಿನಿಯರಿಗೆ ಕೃಷ್ಣಾರ್ಪಣಮಸ್ತು ಅಂತ ಹೇಳಿ ಭೋಜನಕ್ಕೆ ಕೂಡಿಸುವರು. ಕುಲಕರ್ಣಿ ಯವರ ಆನಂದ ಹೇಳತೀರದು.

ಶ್ರೀ ಮಧ್ವ ನವಮಿ ಗೆ ಸರಿಯಾಗಿ ಮಧ್ಯಾಹ್ನ ಸಮಯದಲ್ಲಿ ಬರುತ್ತೇವೆ ಅಂತ ಹೇಳಿದ ಅಪ್ಪಾವರು ಒಂದು ಅಂಶದಿಂದ ಶೇಷರೂಪದಿಂದ ದರುಶನ ಕೊಟ್ಟು ಅದೃಶ್ಯ ರಾದ ಸಂಗತಿಯನ್ನು ನೆನೆದು ಬಹಳ ಸಂತೋಷ ಭರಿತರಾದರು.  ಭೌತಿಕ ದೇಹದಿಂದ ಇರುವ ಸಮಯದಲ್ಲಿ ಸಹ ಬೇರೆ ಕಡೆಗೆ ಒಂದು ಅಂಶದಿಂದ ಬಂದು ಭಕ್ತರ ಉದ್ದಾರ ಮಾಡುವದು ಮತ್ತುಸುಮನೋಹರ ಪರಿಮಳವನ್ನು ಬೀರುವದು ,ಹೀಗೆ ಮೊದಲಾದ ಅಪೂರ್ವ ಮಹಿಮೆಯನ್ನು,ಅಂದಿಗು ಮತ್ತುಇಂದಿಗು ಸಹ ತೋರುತ್ತಾ,ಭಕ್ತರು ಬೇಡಿದ ಇಷ್ಟಾರ್ಥ ಗಳನ್ನು ನೆರವೇರಿಸಿ,ಇಭರಾಮಪುರದಲ್ಲಿ ನೆಲೆಸಿರುವ ಅಪ್ಪಾವರ ಕಾರುಣ್ಯ ಬಹಳ ದೊಡ್ಡದು...

ಭಗವಂತನ ಕೃಪೆ ಇಂದ ಇಂತಹ ಅಪರೋಕ್ಷ ಜ್ಞಾನಿಗಳ ಮಹಿಮೆ 

ವ್ಯಾಪ್ತವಾದುದು. 

ಇಂತಹ ದೊಡ್ಡವರ ಚರಿತ್ರೆಯು ಈ ಪಾಮರನನ್ನು ಉದ್ದರಿಸಲು ಅವರೆ ನಿಂತು
 ಪ್ರೇರಿಸಿ, ಬರೆಸಿ ,ಬರೆದಿದ್ದು...
🙏ಕಟ್ಟು ಕಥೆಯಿದು ಅಲ್ಲ|
ದುಷ್ಟರಿಗೆ ಸಿಗೊರಲ್ಲ|
ಗಟ್ಟ್ಯಾಗಿ ಇವರ ಭಜಿಸೆ ಬಿಟ್ಟಿರನು ತಾ ಬಲ್ಲ|
🙏ಶ್ರೀ ಕೃಷ್ಣಾರ್ಪಣಮಸ್ತು

ಸಾನುರಾಗದಿ ಇವರ ಮಹಿಮೆಯ|
ಗಾನ ಮಾಡುತ ಕುಣಿದು ಹಿಗ್ಗಲು|
ಶ್ರೀನಿವಾಸನ ಪೂಜೆ ಸುರನದಿ ಸ್ನಾನ ವೆನಿಸುವದು||
🙏ಅ.ವಿಜಯವಿಠ್ಠಲ
**



ಶ್ರೀಹೊಸಕೋಟೆ ಶ್ಯಾಮಾರ್ಯರು ಶ್ರೀ ಇಭರಾಮಪುರ ಅಪ್ಪಾವರ ಕಾಲದವರು.  ಶ್ರೀಅಪ್ಪಾವರ ಮತ್ತು ಸುರಪುರ ಆನಂದ ದಾಸರ ಸಮಕಾಲೀನರು.  ಒಮ್ಮೆಅವರಿಗೆ ತುಂಗಭದ್ರಾ ನದಿಯಲ್ಲಿ ಅರ್ಘ್ಯ ಕೊಡಬೇಕಾದ ಸಮಯದಲ್ಲಿ ರಾಯರ ವೃಂದಾವನ (ಸಣ್ಣದು)ಸಿಗುತ್ತದೆ.  ಆ ವೃಂದಾವನ ಹೇಗೆ ಇದೆ ಅಂತ ಮೇಲಿನ ಕೃತಿಯಲ್ಲಿ ಶ್ರೀಹರಿ ವಿಠ್ಠಲೇಶ ದಾಸರು ವರ್ಣನೆ ಮಾಡಿದ್ದಾರೆ.

ಶ್ರೀ ಅಪ್ಪಾವರ ಅನುಗ್ರಹ ವಾದರೆ ರಾಯರ ಅನುಗ್ರಹ ತಡವಾಗುವದಿಲ್ಲ ಎನ್ನುವುದಕ್ಕೆ ಇದೊಂದುಉದಾಹರಣೆ.

ಶ್ರೀ ಹರಿ ವಿಠ್ಠಲೇಶ ದಾಸರು ರಚಿಸಿದ 
ನಿನ್ನ ಅಂಗಳದೊಳಗೆ ಹಿಡಿ ಅನ್ನ ಹಾಕು ಮತ್ತು ಧರೆಯೊದ್ದಾರಕೆ ಮೆರೆವರು  ಗುರುಗಳು ವರ ಮಂತ್ರಾಲಯ ದಲ್ಲಿ. ಮತ್ತು ಇನ್ನು ಅನೇಕ ಕೃತಿಗಳು ಬಹಳ ಪ್ರಸಿದ್ಧವಾಗಿವೆ.


ಮಂತ್ರಾಲಯ ಗುರು ರಾಘವೇಂದ್ರ ರ ಕರುಣಾ ಸು ಪಾತ್ರರ|
ಸ್ಮರಿಸುವ ನರನೇ ಧನ್ಯ|
***


ಶ್ರೀ ಇಭರಾಮಪುರಾಧೀಶಯ ನಮಃ ||

ಅಪ್ಪಾವರ ಮಹಿಮೆ : ಮಂತ್ರಾಕ್ಷತೆಯು ಪ್ರತಿಮೆಯಾದದು

ಮಂತ್ರಾಕ್ಷತಸಮಾಯುಕ್ತೇ ಸಂಪುಟೇ ಯತ್ಕರಾರ್ಚಿತೆ|
ಪ್ರತಿಮಾ ಭೂತ್ಸಾರ್ಚಕಾನಾಂ  ಕ್ವಚಿತ್ ಕಾಲಾಂತರೇಣ ವೈ ||

ಶ್ರೀ ಅಪಾವರ ಪ್ರಮುಖ ಶಿಷ್ಯರಲ್ಲಿ ಒಬ್ಬರಾದ ಅಪರೋಕ್ಷ ಜ್ಞಾನಿಗಳಾದ ತಮ್ಮ ಯೋಗ ಶಕ್ತಿಯಿಂದ ಗದಗಿನ ವೀರನಾರಾಯಣನನ್ನು ಸಾಕ್ಷಾತ್ಕಾರ ಮಾಡಿಕೊಂಡರು ಶ್ರೀ ಯೋಗಿ ನಾರಾಯಣಾಚಾರ್ಯರು ಶ್ರೀ ಅಪ್ಪಾವರ ಮಹಿಮೆ ಹೇಳುವ ಮಹಿಮಾ ಸ್ತೋತ್ರವಿದು.

ಅಪ್ಪಾವರು ಮಂತ್ರಾಕ್ಷತೆ ಕೊಟ್ಟರೆ ಆ ಮಂತ್ರಾಕ್ಷತೆಯು ಪ್ರತಿಮೆಯಾಗತಿತು ಅಂತ ಶ್ರೀ ಯೋಗಿನಾರಾಯಣಾಚಾರ್ಯರು ವರ್ಣನೆ ಮಾಡಿದಾರೆ. ಅಪರೋಕ್ಷ ಜ್ಞಾನಿಗಳಾದ ಯಲಮೇಲಿ ಹಾಯಗ್ರೀವಾಚಾರ್ಯರು ಶ್ರೀ ಅಪ್ಪಾವರ   ಶಿಷ್ಯರಲ್ಲಿ ಒಬ್ಬರಾಗಿದರು .

ಸುರಪುರದ ಆನಂದ ದಾಸರು ಶ್ರೀ ರಾಘವೇಂದ್ರರಾಯರ ಪಾದಾಂಬುಜದಾರಾಧಕರ ಕೊಂಡಾಡಿರೋ ಕೃತಿಯಲ್ಲಿ
"ಇಳೆಯೊಳು ಚೌಷಷ್ಠಿ ಕಳದಿ ನಿಪುಣರಾದ ।
ಯಲಮೇಲಿ ಹಯಗ್ರೀವಾಚಾರ್ಯರ"

ಶ್ರೀ ಅಪ್ಪಾವರ ಶಿಷ್ಯರಾದ ಯಳಮೇಲಿ ಹಾಯಗ್ರೀವಾಚಾರ್ಯರು ಎಲ್ಲಾ 64 ಕಲಾ ನಿಪುಣರು. ತಮ್ಮ ಶಿಷ್ಯರಿಗೆ ಇಷ್ಟು ಸಾಧನೆ ಇದಾಗ ಅಪ್ಪಾವರ ಸಾಧನೆಯ ಶಕ್ತಿ ನಮ್ಮ ಊಹೆಗೂ ಮೀರಿದು.

ಶ್ರೀ ಅಪ್ಪಾವರ ತಾವು ಕೊಟ್ಟ ಮಂತ್ರಾಕ್ಷತೆಯು ಪ್ರತಿಮೆಯಾಗಿ ಮುಜಾಮುದಾರರ ಮನೆತನಕೆ ಅನುಗ್ರಹ ಮಾಡಿದರು.

ಒಮ್ಮೆ ಶ್ರೀಅಪ್ಪಾವರು ಸಂಚಾರತ್ವೇನ ತಮ್ಮ ಭಕ್ತರಾದ ಮುಜಾಮುದಾರರ ಮನೆಗೆ ಬರುತ್ತಾರೆ.

ಅವಾಗ ಮುಜಾಮುದಾರರು ಅಪ್ಪಾವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ ಸ್ವಾಮಿ ತಾವು ಎಲ್ಲರಿಗು ಅನುಗ್ರಹ ಮಾಡಿದ್ದೀರಿ ,ಎಲ್ಲರಿಗು ಅವರು ಕೇಳಿದ್ದು ಕೊಟ್ಟಿದ್ದೀರಿ,ತಮ್ಮ ಪಾದುಕೆಗಳು,ಕೋಲು, ಹೀಗೆ ನಮಗು ಸಹ ಅನುಗ್ರಹ ಮಾಡಿ ಅಂತ ಬಹಳ ಕೇಳಿಕೊಂಡಾಗ   ಅಪ್ಪಾವರು ಮಂತ್ರಾಕ್ಷತೆ ಕೋಟು ಹೇಳುತ್ತಾರೆ , ನಾನೇ ನಿಮ್ಮ ಮನೆಯಲ್ಲಿ ಇದ್ದೀನಿ ಅಂತಾ ಮಾರ್ಮಿಕವಾಗಿ ಹೇಳಿ ಮುಂದೆ ಪಯಣವನ್ನು ಬೆಳೆಸುತ್ತಾರೆ.

ಅಪ್ಪಾವರ ಕೊಟ್ಟ ಮಂತ್ರಾಕ್ಷತೆಯು ದೂಡವರು ಮಾಡಿದ ಅನುಗ್ರಹ ,ಸಂಪುಷ್ಟದಲಿ ಇಡುತ್ತಾರೆ.  ಮುಜಾಮುದಾರರು ಅವರದು ಒಂದು ಪದ್ದತಿ. ಸ್ನಾನ ವಾದನಂತರ ದೇವರ ಮನೆ,ಕಟ್ಟಿ ಸ್ವಚ್ಛತೆ ಮಾಡಿ ಅಲ್ಲಿ ಇಟ್ಟಿರುವ ಸಂಪುಷ್ಟ ತೆಗೆದುಕೊಂಡು ತುಳಸಿ ತರುವದು ನಿತ್ಯ ಪದ್ಧತಿ.  ಆದಿನ ಸಂಪುಷ್ಟ ಬಹು ಭಾರವಾಗಿ ತೋರಿತು ಯಾಕೆ ಇಷ್ಟು ಭಾರವಾಗಿದೆ ,ಅದರಲ್ಲಿ ಏನು ಇಟ್ಟಿಲ್ಲ !!! ಅಂತ ತೆಗೆದು ನೋಡಲಾಗಿಅಪ್ಪಾವರ ಬೆಳ್ಳಿಯ ಮೂರ್ತೀ ಸುಮಾರು 3inch ಅಳತೆಯ ಪ್ರತಿಮೆ ಕಾಣುತ್ತದೆ ತಕ್ಷಣ, ಮುಜಾಮುದಾರರಿಗೆ

ಅಪ್ಪಾವರು ತಮ್ಮ ಮೇಲೆ ಮಾಡಿದ  ಅನುಗ್ರಹ ನೆನೆದು ಆನಂದಭರಿತರಾಗುತ್ತಾರೆ.

ಶ್ರೀ ಇಭರಾಮಪುರೋಪಾಖ್ಯಾ ಕೃಷ್ಣಾರ್ಯ ಮಹಿಮಾಂ ಭುದೇಃ |
ಏಕಸ್ಯಾಲ್ಪ ತರಂಗಸ್ಯ ವರ್ಣನಂ ಸಮುದೀರಿತಮ್||

ಶ್ರೀ ಮದ್ ಇಭರಾಮಪುರಾಧೀಶರಾದ ಅಪ್ಪಾವರ ಮಹಿಮಾ ಸಮುದ್ರದ ಆಗಾದ ಅಲೆಗಳಲ್ಲಿ ಒಂದು ಚಿಕ್ಕದಾದ ಅಲೆಯಂತೆ ಯಥಾವತ್ತಾಗಿ ಅವರ ಅನುಗ್ರಹದಿಂದ ಹೇಳುತ್ತಿದ್ದೇನೆ.

Pic: ಅಪ್ಪಾವರು ತಾವು ಕೊಟ್ಟ ಮಂತ್ರಾಕ್ಷತೆಯಿಂದ ಆದ ಪ್ರತಿಮೆ.ಪ್ರತಿಮೆ ಮುಜಾಮುದಾರರ ಮನೆಯಲ್ಲಿ ಇದೆ.ಕಿತ್ತೂರಿನಲ್ಲಿ ಅವರ ವಂಶಸ್ಥರ ಮನೆಯಲ್ಲಿ ಇದೆ.
ಇಭರಾಮಪುರಾಧೀಶ
****



|| ಶ್ರೀ ಇಭರಾಮಪುರಾಧೀಶಾಯ ನಮಃ ||

ಗುರು ಮಹಿಮೆ : ಶಿರಹಟ್ಟಿ ಭೀಮಚಾರ್ಯರಿಗೆ ಅನುಗ್ರಹ

ಶ್ರೀ ಅಪ್ಪಾವರು ದೇಶದೆಲ್ಲೆಡೆ ಶಿಷ್ಯಸಂಪತ್ತುನ್ನು ಹೊಂದಿದ್ದರು. ಅದರಲ್ಲಿ ಅಪ್ಪಾವರಿಗೆ  ಪರಮ ಆಪ್ತರಾಗಿದ್ದ, ವಿದ್ವಾಂಸರಾದ ಶಿರಹಟ್ಟಿ ಭೀಮಚಾರ್ಯರು ಕೂಡ ಒಬ್ಬರು.  ಅವರು ಒಂದು ಬಾರಿ ಸಂಚಾರಾನ್ವಯ ಅಪ್ಪಾವರ ಅವರ ಮನೆಯಲ್ಲಿ ಉಳಿದುಕೊಂಡಿರುತ್ತಾರೆ. ಆಚಾರ್ಯರ ಹೆಂಡತಿ ಸ್ವರ್ಗಸ್ಥರಾಗಿದ್ದರು ಜೊತೆಯಲ್ಲಿ ಸಂತಾನವಿರಲಿಲ್ಲ.

ಅಪ್ಪಾವರ ಭೀಮಾಚಾರ್ಯರಿಗೆ ವಿಚಾರಿಸಿದಾಗ ಯಾಕೋ ಭೀಮ ತುಂಬಾ ಚಿಂತೆಯಲ್ಲಿ ಇದ್ದಿ  ಅಂತ ಕೇಳಿದಾಗ ಆಚಾರ್ಯರು " ಸ್ವಾಮಿ ನಿಮಗೇ ತಿಳಿಯದ ಸಂಗತಿ ಏನು ಇಲ್ಲ ಈ ವಯಸ್ಸಿನಲ್ಲಿ ನಾನು ಒಬ್ಬಂಟಿ, ಹೆಂಡತಿ ಇಲ್ಲ ಸಂತಾನ ಭಾಗ್ಯವೂ ದೇವರು ಕರುಣಿಸಲಿಲ್ಲ ಎಂದು ಬಹು ದುಃಖದಿಂದ ಹೇಳಿಕೊಂಡರು." ಅಪ್ಪಾವರು ಸಮಾಧಾನ ಹೇಳಿ ಚಿಂತಿಸಬೇಡ ಭೀಮ ನಿನಗೆ ಕಲ್ಯಾಣವಾಗಿ ಒಳ್ಳೆಯ ಕೀರ್ತಿಶಾಲಿ ಶಾಸ್ತ್ರಸಂಪನ್ನವಾದ ಪುತ್ರ ಜನಿಸುತ್ತಾನೆ ಎಂದು ತಿಳಿಸುತ್ತಾರೆ.

ಶ್ರೀ ಅಪ್ಪಾವರ ಆಶೀರ್ವಚನದಂತೆ ಭೀಮಾಚಾರ್ಯರಿಗೆ ಲಕ್ಷ್ಮೇಶ್ವರದ ಕನ್ಯೆಯ ಜೊತೆ ಮದುವೆಯಾಗಿ ಸುಪುತ್ರ ಪ್ರಾಪ್ತಿಯಾಯಿತು. ಅವರ ಸುಪುತ್ರರೇ ಶ್ರೀ ಶಿರಹಟ್ಟಿ ನಾರಾಯಣಾಚಾರ್ಯರು. ತಂದೆಯಲ್ಲಿಯೇ ಸಕಲ ಶಾಸ್ತ್ರವನ್ನು ಅಧ್ಯಯನ ಮಾಡಿ ಭಾಗವತ ಶಿರೋಮಣಿಗಳೆಂದು ಮಾನ್ಯರಾಗಿ ಜನರ ಮಾತಿನಲ್ಲಿ ಇವರು ಭಾಗವತರತ್ನ ನಾರಾಯಣಾಚಾರ್ಯರೆಂದು ಪ್ರಸಿದ್ದರಾದರು. ಶ್ರೀನಾರಾಯಣಾಚಾರ್ಯರು ಗದಗಿನಲ್ಲಿ ಶ್ರೀಅಪ್ಪಾವರು ಪ್ರತಿಷ್ಠಿತ ರಾಯರು ಬೃಂದಾವನ ಸನ್ನಿಧಾನದಲ್ಲಿ ರಾಯರ ಆರಾಧನೆ ಅತಿವಿಜೃಂಭಣೆ ಮಾಡುತ್ತಿದ್ದರು.

ರವಿಯಂತೆ ಜಗದೊಳಗೆ ಉದ್ಭವಿಸಿ ಸುಜನಕ್ಕೆ ।
ಕವಿದ ಕತ್ತಲೆ ಕಳೆದು ಪವನಮತ ತೋರಿ ॥

ವಿವಿಧ ವೈಭವದಿಂದ ಅವನಿಯೊಳು ಸಂಚರಿಸಿ ।
ಭವ ಬಿಡಿಸಿ ಪಾಲಿಸಿದೆ ತವ ಜನರ ಪ್ರಭುವೇ ॥

ಜಯ ಜಯತು ಕೃಷ್ಣರ್ಯ । 
ಜಯ ಜಯತು ಸಜ್ಜನ ಅಭಯ ।
ಜಯತು ಕೈವಲ್ಯದನೆ ಜಯತು ಗುರುವೆ ॥ 
॥ ಜಯತು ಜಯತು ॥

ಶ್ರೀ ಇಭರಾಪುರಾಧೀಶ
*********
|| ಶ್ರೀ ಗುರುರಾಜೋ ವಿಜಯತೇ ||
|| ಶ್ರೀ ಇಭರಾಮಪುರಾಧೀಶಾಯ ನಮಃ ||

ಗುರು ಮಹಿಮೆ :  ವ್ಯಾಧಿ ನಿವಾರಣೆ

ಶ್ಯಾನುಭೋಗರ ಮಗನಿಗೆ ವಿಚಿತ್ರವಾದ ವ್ಯಾಧಿ ನಿವಾರಣೆ

ಶ್ರೀ ಅಪ್ಪಾವರಿಗೆ ದೇಶದೆಲ್ಲೆಡೆ ಹಲವಾರು ಶಿಷ್ಯರು. ಎಲ್ಲಡೆ ಅವರ ಕೀರ್ತಿ ವ್ಯಾಪಿಸಿ ನಿತ್ಯದಲ್ಲಿ ಅಪ್ಪಾವರಿಗೆ ಒಂದಿಲ್ಲಾ ಒಂದೂರಿಗೆ ಪ್ರಾಣದೇವರ ಪೂಜೆಗೆ ಆಮಂತ್ರಣವಿರುತಿತ್ತು. ಹೀಗೆ ಒಂದು ದಿನ ಸಂಚಾರದಲ್ಲಿ ಇದ್ದಾಗ ಅವರ ಪೂಜೆಗೆ ಅನುಕೂಲವಾಗುವಂತಹ ಸುಂದರವಾದ ತೋಟ ಅಲ್ಲಿ ನಿತ್ಯದ ಅನುಷ್ಠಾನಕ್ಕೆ ಅನುಕೂಲವಾಗುವಂತಹ ಪ್ರಶಸ್ತವಾದ ವಾತಾವರಣವಿತ್ತು.

ಆ ತೋಟದ ಮಾಲೀಕರು ಊರಿನ ಶಾನುಭೋಗರು. ಅವರ ತೋಟದಲ್ಲಿ ಪೂಜೆ ವ್ಯವಸ್ಥೆಯಾಗಬೇಕು  ಎಂದು ಶಿಷ್ಯರಮೂಲಕವಾಗಿ ಶಾನುಭೋಗರಿಗೆ ಅಪ್ಪಾವರು ಹೇಳಿ ಕಳುಹಿಸಿದರು. ಅಪ್ಪಾವರ ಆಗಮನ ಮತ್ತು ಅವರ ತೋಟದಲ್ಲಿಯೇ ಪೂಜೆಯನ್ನು ಕೈಗೊಳ್ಳುತ್ತಿದ್ದಾರೆ ಎಂದು ಮನೆಯಲ್ಲಿ ಹರುಷದ ವಾತಾವರಣ. ಎಲ್ಲವೂ ಅನುಕೂಲ ಮಾಡಿಕೊಟ್ಟ ಅವರ ಕುಟುಂಬಕ್ಕೆ ಅಪ್ಪಾವರು ಮಾಡುವ  ಪ್ರಾಣದೇವರ ವಿಶೇಷ ಪೂಜೆ ಮತ್ತು ವಿಶೇಷವಾಗಿ ತೀರ್ಥಪ್ರಸಾದ ವ್ಯವಸ್ಥೆ ಮಾಡಲಾಯಿತು.

ತೀರ್ಥಪ್ರಸಾದದ ನಂತರ ಶಾನುಭೋಗರ ಕುಟುಂಬದವರಿಗೆ ಅನುಗ್ರಹಿಸುತ್ತಾ ಅಪ್ಪಾವರ ಶಾನುಭೋಗರಿಗೆ ಪ್ರಾಣದೇವರ ಪ್ರಸಾದವನ್ನು ಕೊಟ್ಟು ನಿಮ್ಮ ಮಗನಿಗೆ ಈ ಪ್ರಸಾದವನ್ನು ಉಣ್ಣಿಸಿ ಎಲ್ಲವೂ ಒಳ್ಳೆಯದು ಆಗುತ್ತದೆ ಎಂದು ಅನುಗ್ರಹಿಸುತ್ತಾರೆ. ಶಾನುಭೋಗರು ತಮ್ಮ ಮಗನಿಗಿರುವ ವ್ಯಾಧಿಯ ಬಗ್ಗೆ ಅಪ್ಪಾವರಿಗೆ ಮೊದಲೇ ತಿಳಿದಿದ್ದನ್ನು ಕಂಡು ಪರಮಾಶ್ಚರ್ಯವಾಯಿತು. ಶಾನುಭೋಗರ ಕಣ್ಣಲಿ ಸಂತೋಷದಿಂದ ಕಣ್ಣೀರು ಬರುತಿತ್ತು. ಅವರ ಮಗನಿಗೆ ವಿಚಿತ್ರವಾದ ವ್ಯಾಧಿ ಏನು ತಿಂದರು ದಕ್ಕುತಿರಲಿಲ್ಲ. ಆಹಾರ ತೆಗೆದುಕೊಂಡರು ವಾಂತಿಯಾಗುತ್ತಿತು.ಯಾವ ವೈದ್ಯರಲ್ಲಿಯೂ ಪರಿಹಾರ ಕಾಣದೆ ಸಾಯುವ ಸ್ಥಿತಿಯಲ್ಲಿ ಮಗನ ರಕ್ಷಣೆಗೆ ಅಪ್ಪಾವರು ಬಂದಿದ್ದಾರೆಯೆಂದು ತಿಳಿದು ಅವರ ಪಾದವನ್ನು ಭಕ್ತಿಯಿಂದ ನಮಸ್ಕರಿಸುತ್ತಾರೆ. 

ಅಪ್ಪಾವರು ಅಲ್ಲಿ ಶಾನುಭೋಗರು ಅಳುತ್ತಾ ಸ್ವಾಮಿ ನನ್ನ ಮಗ ಏನು ತಿನ್ನುವ ಪರಿಸ್ಥಿತಿಯಲ್ಲಿ ಇಲ್ಲ ಪ್ರಸಾದ ಹೇಗೆ ಸ್ವೀಕರಿಸಿಸುತ್ತಾನೆ ಎಂದು ವಿನಮ್ರವಾಗಿ ಹೇಳಿದಾಗ ಅಪ್ಪಾವರು ಮುಖ್ಯಪ್ರಾಣ ಅನುಗ್ರಹ ಮಾಡುತ್ತಾನೆಯೆಂದು ಹೇಳಿ ಮಂತ್ರಾಕ್ಷತೆ ಕೊಟ್ಟು ಅನುಗ್ರಹಿಸುತ್ತಾರೆ.

ವರ್ಷಗಳಿಂದ ಆಹಾರವನ್ನೇ ತಿನ್ನದ ಶಾನುಭೋಗರ ಮಗ ಅಂದು ಪ್ರಸಾದವನ್ನು ಸಾಮಾನ್ಯರು ಹೇಗೆ ಸ್ವೀಕರಿಸುತ್ತಾರೋ ಹಾಗೆ ಸ್ವೀಕಾರ ಮಾಡುತ್ತಾರೆ.

ಸುಮಾರು ವರ್ಷಗಳ ನಂತರ ಅದೇ ಊರಿಗೆ ಮತ್ತೆ ಅಪ್ಪಾವರು ಬಂದಾಗ ಶಾನುಭೋಗರು ಸ್ವರ್ಗಸ್ಥರಾಗಿರುತ್ತಾರೆ. ಶಾನುಭೋಗರು ಮಗ ತಂದೆಯ ಎಲ್ಲಾ ವ್ಯವಹಾರಗಳನ್ನು ನೋಡಿಕೊಂಡು  ಹೋಗುತ್ತಿದ್ದ. ಅಪ್ಪಾವರ ಆಗಮನದ ವಿಷಯ ಕೇಳಿ ಅವರನ್ನು ಮನೆಗೆ ಗೌರವದಿಂದ ಸತ್ಕಾರ ಮಾಡಿ ನಂತರದಲಿ ಅಪ್ಪಾವರು ಅವನಿಗೆ ಕೀರ್ತಿವಂತನಾಗು ಅಂತ ಆಶೀರ್ವಾದ ಮಾಡುತ್ತಾರೆ.

ಯತ್ ಸ್ಪೃಷ್ಟಧೂಪಧೂಮಸ್ಯ ಸೇವನಾದ್ ರೋಗ ಜಾತಯಃ |
ತತ್ಕ್ಷಣಾದೇವ ನಶ್ಯಂತಿ ಸ ಕೃಷ್ಣೋ ಮಾಂ ಸಾದವರು ||
- ಶ್ರೀ ಮಹಿಷಿ ಚಕ್ರಪಾಣಿ

ಕುಷ್ಠದಿ ಶ್ರೇಷ್ಠ ರೋಗಾ ಯೇ ಗಂಧಕಾಷ್ಠಶ್ಚ ಭಸ್ಮನಾ |
ಮೃತಿಕಾಧೂಪಧೂಮಾದಿ ಸಾಧನೈರ್ತಾಶಿತಾಃ ಸತಾಮ್ ||
- ಶ್ರೀ ಯೋಗಿ ನಾರಾಯಣಾಚಾರ್ಯ

ಶ್ರೀ ಮಹಿಷಿ ಚಕ್ರಪಾಣಿ ಹಾಗೂ  ಶ್ರೀ ಯೋಗಿ ನಾರಾಯಣಾಚಾರ್ಯರು ಅಪ್ಪಾವರ ಮಹಿಮೆ ಸಾರುವ ಸ್ತೋತ್ರದಲ್ಲಿ ಹೇಳುವಂತೆ  ಶ್ರೀಅಪ್ಪಾವರ ಸಂದರ್ಶನ ಅವರು ಪೂಜೆ ಮಾಡುವ ಪಂಚಮುಖಿ ಮುಖ್ಯಪ್ರಾಣದೇವರ ದರ್ಶನ , ಅದಕ್ಕೆ ಅರ್ಪಿಸುತ್ತಿದ ಧೂಪ ಧೂಮಾದಿಗಳು , ಪ್ರಸಾದ ಸ್ವೀಕಾರದಿಂದ ಆ ತತ್ಕ್ಷಣದಲ್ಲಿಯೇ ಕುಷ್ಠಾದಿ ಸಕಲ ವ್ಯಾಧಿಗಳು ನಿವಾರಣೆಯಾಗುತಿತ್ತು.

ಅಡಗಿಸೀ ಕಲಿಯನ್ನು ನಡುಗಿಸುತ ದುರ್ಜನರ
ಪೊಡವಿಯನು ಸಂಚರಿಸಿ ಸುಜನಕ್ಕೆ
ದೃಢಪಡಿಸಿ ಸನ್ಮತಿಯ ಒಡಲಲಿ ಶ್ರೀಹರಿಯ
ಒಡೆಯ ತೋರಿದಿ ಸ್ವಾತ್ಮಕರುಣಕಡಲಾ ||
ಜಯತು ಜಯತು ಕೃಷ್ಣರ್ಯ | 
ಜಯತು ಜಯತು ಸಜ್ಜನ ಅಭಯ | 
ಜಯತು ಕೈವಲ್ಯನೆ ಜಯತು ಗುರುವೆ ||

ತ್ರಾಣ ನೀನು ಕೃಷ್ಣವರ್ಯ ಪ್ರಾಣಕಾಂತ ಎನ್ನ ದೊರೆಗೆ 
ವೇಣುಗೋಪಾಲನ ಪರಮ ಆಪ್ತಮಂತ್ರಿಯೆ
ನಾನಾವತಾರ ಮಾಡಿ ದಾನವರ ಸವರಿ ಮೆರೆದೆ
ಭಾನುತೇಜ ನಿನ್ನೆ ಪಾದ ಪೊಂದಿ ನಂಬಿದೆ ||
ಬಿಚ್ಚು ಬಿಚ್ಚು ಬಿಚ್ಚು ಸ್ವಾಮಿ ಹೃದಯಗ್ರಂಥಿಯ |
ಅಚ್ಯುತನ್ನ ದರ್ಶನಕ್ಕೆ ಅಚ್ಚ ಕರುಣ ಮಾಡಿ ಮುನ್ನ ||

ವಿಷ್ಣುತೀರ್ಥಾಚಾರ್ ಇಭರಾಮಪುರ

ಶ್ರೀ ಇಭರಾಮಪುರಾಧೀಶ
*************

ವಾವ್




No comments:

Post a Comment