Thursday 1 August 2019

kautala rangaiahnavaru 1746 rangayyanavaru kautalam bidi sanyasi rayara mutt vaishakha bahula dwadashi ಕೌತಾಳ ರಂಗಯ್ಯನವರು


shri gurubyO namaha...hari Om... 

vaishAka bahuLa dwAdashi, is the ArAdhane of kowthALa  rangayyanavaru.

kouthALa rangayyanavaru....


birth: kowthALa
Period: 1687 - 1746
Father's name: ambaNNa bhaTTaru
Mother's name: sAdhvi lakshmamma


ರಂಗನಾಮಾಭಿದಂ ವಂದೇ ಕವಿತಾಳ ಪುರ ವಾಸಿನಂ ।
ವೈರಾಗ್ಯ ಭಾಗ್ಯ ಸಂಪನ್ನಂ ಭಕ್ತಾಭೀಷ್ಟ ಪ್ರದಾಯಕಮ್ ।।


He was again reborn as ibharAmapura appAvaru. 

srInivAsana darshaNa...

When he was young, he went to a nearby town, tOvI, which is 10 kms from kothALam, without informing his parents. He started hearing the sound of "gejje" behind him. When he turned around, he did not see anyone. But the sound continued as he walked further. 

After some time, he felt thirsty. He started digging in the ground for water. Lord srInivAsa took the form of a shUdra and started disturbing the pit that young rangaiyya was digging. Unperturbed, rangaiyya continued to dig but the Lord's game would not stop. Finally rangaiyya gave up and asked the person what was he doing. That is when srInivAsa showed his real form and told rangaiyya that the thirst he has is spiritual and he should focus on that. He also placed his hand on his head and wrote "bhIjAkshara" on his tongue. rangaiyya was overjoyed on having darshaNa of Lord srInivAsa and his life changed completely towards AdhyAtma. 

Once his mother wanted to see the brahmOtsava that was happening in Tirupati during navaratri. She requested rangaiyya if that is possible. He took her to the terrace of the house and showed her the brahmOtsava and also darshaNa of srInivAsa. Similarly, in his next avatara as appAvaru, he would take a crying child to the terrace and him his mother who was away in Hampi for utsava so that the child stops crying. 

shri vAdIndra tIrtharu visited kowthALa and was doing mudrAdhAraNe. Shri rangayya also got into the line. When shri vAdIndraru saw him, he noticed that his body was full of shanka and chakrAs. Shri vAdIndrara shishyaru, shri purushOtamAchAr could also see it. 

shri purushOthamAchAr prostrated in front of rangaiyyanavaru. Shri rangaiyyanavaru then said that while shri purushOthamAchAr was prostrating before him today, shortly he would have to prostrate before him. Rangaiyyanavaru further went on to say that shri purushOtamAchAr would become pITAdhipathi post vAdindraru. Also that rangaiyyanavaru would attain haripAda shortly but would get a brindAvana. He requested purushOtamAchAr to do the samsthAna pUje of shri mUlarAma dEvaru in front of this brindAvana. Such was the mahime of rangaiyyanavaru. 

In due course, rangaiyyanavaru attains haripAda and just before that he had instructed his disciple to not cremate him but construct a brindAvana. However, since brindAvana was only for yatIs, the village elders did not allow for brindAvana and forced cremation. That night, rangaiyyanavaru appeared in the dreams of several people chiding them for not giving him a brindAvana. He said, nevertheless, that his little finger, "kowpIna" and tuLasimaNi were not burnt and they should retrieve those and construct a brindAvana. Realising the greatness of rangaiyyanavaru, the people followed his orders and found that his little finger, "kowpIna" and tuLasimaNi were not burnt. They constructed a brindAvana with them. 

Around the same time, shri purushOtamAchAr ascended the rAyara maTa pITa as vasudEndra tIrtharu. When he was in Kumbakonam, shri rangaiyyanavaru appeared in his dreams and reminded him of the request he had made of wanting samsthAna pUje in front of his brindanvana. Shri vasudEndra tIrtharu recollected the same and came over to kowthALa and did the puje there. He extolled the greatness of rangaiyyanavaru. 

shri rangaiyya guruvAntargata, bhAratIramaNa mukhyaprAnantargata, srIdEvi, bhUdEvi samEta shri srInivAsana pAdAravindakke gOvindA gOvindA...

shri krishNArpaNamastu..

********

|| ಶ್ರೀಮನ್ಮೂಲರಾಮೋ ವಿಜಯತೇ ||
|| ಶ್ರೀ ಗುರುರಾಜೋ ವಿಜಯತೇ ||
|| ಶ್ರೀ ಇಭರಾಮಪುರಾಧೀಶಾಯ ನಮಃ ||

ವೈಶಾಖ ಬಹುಲ ದ್ವಾದಶಿ ಅವಧೂತ ಶಿರೋಮಣಿಗಳಾದ ಕೌತಾಳಂ ರಂಗಯ್ಯನವರ (1687-1746) ಆರಾಧನೆ , ಕೌತಾಳಂ.

ರಂಗನಾಮಾಭಿದಂ ವಂದೇ 
ಕವಿತಾಳ ಪುರ ವಾಸಿನಂ ।
ವೈರಾಗ್ಯ ಭಾಗ್ಯ ಸಂಪನ್ನಂ 
ಭಕ್ತಾಭೀಷ್ಟ ಪ್ರದಾಯಕಮ್ ।। 

ಕೌತಾಳಂ ಗ್ರಾಮವಾಸಿಗಳಾದ ಶ್ರೀಅಂಬಣ್ಣ ಭಟ್ಟರು ಮತ್ತು ಸಾದ್ವಿ ಲಕ್ಷ್ಮಮ್ಮ ಅವರ ಸುಪುತ್ರರೇ ಅವಧೂತ ಶಿರೋಮಣಿಗಳಾದ ಶ್ರೀರಂಗಯ್ಯನವರು. ಶ್ರೀರಂಗಯ್ಯನವರು ಶ್ರೀನಿವಾಸನ ಹಾಗೂ ಮಂತ್ರಾಲಯ ಗುರುಸಾರ್ವಭೌಮರ ಅಂತರಂಗ ಭಕ್ತರು.

ಶ್ರೀನಿವಾಸನ ಸಾಕ್ಷಾತ್ಕಾರ
ಶ್ರೀರಂಗಯ್ಯನವರು ತಮ್ಮ ಊರೂ ಕೌತಾಳಂ ಇಂದ ಸುಮ್ಮರು 10kms ದೂರವಿರುವ ತೋವಿಯಂಬ ಗ್ರಾಮಗೆ ತಮ್ಮ ತಂದೆ ತಾಯಿಯರಿಗೆ ಹೇಳದೆ ಬಂದಿರುತ್ತಾರೆ. ಅಲ್ಲಿ ಬಂದನಂತರ ಅವರಿಗೆ ವಿಶೇಷವಾದ ಅನುಭವ. ಅಲ್ಲಿ ಅವರ ಬೆನ್ನಹಿಂದೆ ಯಾರೋ ಗೆಜ್ಜೆಯ ಶಬ್ದ ಮಾಡುತ್ತಾ ಹಿಂಬಾಲಿಸಿದಂತಾಯ್ತು. ತಾವು ಎಷ್ಟು ದೂರ ತೆರಳಿದರು ಆ ಹಿಂಬಾಲಕೆಯ ಶಬ್ದ ಬಿಡಲೆಯಿಲ್ಲ.

ಸ್ವಲ್ಪಸಮಯದನಂತರ ಬಯರಿಕೆಯಾಗಿ ಅಲ್ಲಿಯೇ ಭೂಮಿ ಅಗೆದು ನೀರನ್ನು ಹುಡುಕಲು ಆರಂಭಿಸಿದರು. ಭಕ್ತವತ್ಸಲನಾದ ಶ್ರೀನಿವಾಸನು ಶೂದ್ರ ವೇಷಧಾರಿಯಾಗಿ ಅಲ್ಲಿ ಬಂದು ಶ್ರೀರಂಗಯ್ಯನವರು ನೀರಿಗಾಗಿ ಭೂಮಿ ಅಗೆಯುವ ಕೆಲಸಕೆ ತೊಂದರೆಉಂಟುಮಾಡಲು ಸಾಕಷ್ಟು ಪ್ರಯತ್ನ ಮಾಡಿದರು. ಯಾವ ತೊಂದರೆಯು ಲೆಕ್ಕಿಸದೆ ರಂಗಯ್ಯನವರು ತಾವು ಮಾಡುತಿದ್ದ ಕೆಲಸವನ್ನು ಬಿಡಲಿಲ್ಲ ಆದರೆ ಪರಮಾತ್ಮನ ಆಟವೇ ಬೇರೆಯಾಗಿತ್ತು. ರಂಗಯ್ಯನವರು ತಾವು ಮಾಡುವಕೆಲಸ ನಿಲ್ಲಿಸಿ ಆ ತೊಂದರೆಕುಟಿದ್ದವನಿಗೆ ಕರೆದು ಎನ್ ಮಾಡುತಿದಿ ? ಯಾರು ನೀನು ? ಅಂತ ವಿಚಾರಿಸಿದಾಗ ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ಶ್ರೀನಿವಾಸ ತನ್ನ ನಿಜರೂಪ ದರ್ಶನ ಕೊಟ್ಟು ನಿನಗೆ (ರಂಗಯ್ಯನವರಿಗೆ) ಜ್ಞಾನದ ದಾಹವಾಗಿದೆ ಎಂದು ಹೇಳಿ ಅವರ ತಲೆಯಮೇಲೆ ಅಭಯಹಸ್ತವನಿಟ್ಟು ಅವರು ನಾಲಿಗೆಯ ಮೇಲೆ ಬೀಜಾಕ್ಷರವನ್ನು ಬರೆದು ಕಣ್ಮರೆಯಾದನು. 

ಸಾಕ್ಷಾತ್ ಪರಮಾತ್ಮನ ಅನುಗ್ರಹ ಹೊಂದಿದ ರಂಗಯ್ಯನವರು ಮಹಾಸಾದಕರಾಗಿ ಬಿಂಬಾಪರೋಕ್ಷವನ್ನು ಹೊಂದುತ್ತಾರೆ.

ದೂರದ ಕೌತಾಳಂ ಗ್ರಾಮದಿಂದ ಶ್ರೀನಿವಾಸ ಬ್ರಹೋತ್ಸವ ದರ್ಶನ

ಅದು ನವರಾತ್ರಿಯ ಸಮಯ ಭೂವೈಕುಂಠ ತಿರುಪತಿಯಲ್ಲಿ ವೈಭವದ ಪೂಜೆ ,ಶ್ರೀನಿವಾಸನ ಕಲ್ಯಾಣದ ಸಡಗರ ಸಂಭ್ರಮ, ಬ್ರಹೋತ್ಸವದ ಪುಣ್ಯ ದಿನಗಳು. ಹೀಗಿರುವಾಗ ಶ್ರೀರಂಗಯ್ಯನವರ ತಾಯಿಯು ಶ್ರೀನಿವಾಸನ ದರ್ಶನಮಾಡಿಸಲು ಮಗನಿಗೆ ತಮ್ಮ ಅಸೆಯನ್ನು ಹೇಳಿಕೊಳ್ಳುತ್ತಾರೆ. ಸರ್ವವ್ಯಾಪಿಯಾದ ಭಗವಂತನನ್ನು ತೋರಿಸಲು ತಾಯಿಯನ್ನು ತಮ್ಮ ಮನೆಯ ಮಹಡಿಯ ಮೇಲೆ ಕರೆದುಕೊಂಡು ಹೋಗಿ ತಿರುಪತಿಯಲ್ಲಿ ನಡೆಯುತ್ತಿದ್ದ ವೈಭವದ ಉತ್ಸವ ಶ್ರೀನಿವಾಸನ ದರ್ಶನ ದೂರದ ಕೌತಳಂ ಗ್ರಾಮದಿಂದ ತೋರಿದರು.

ಕ್ಷಾಮ ಪರಿಹಾರ

ಒಮ್ಮೆ ಕರ್ನೂಲ್ ಪ್ರಾಂತ್ಯದಲ್ಲಿ ಭೀಕರವಾದ ಬರಗಾಲ. ಮನುಷ್ಯರಲ್ಲದೆ ಸರ್ವಜೀವಿಗಳಿಗೂ ಸಂಕಷ್ಟವಾದ ಸಮಯ. ಕರ್ನೂಲ್ ಅರಸರು ರಂಗಯ್ಯನವರ ಮಹಿಮೆಯನ್ನು ಅರಿತು ಅಲ್ಲಿಯ ರಾಜರು ತಮ್ಮ ಸಂಸ್ಥಾನಕೆ ರಾಜ ಮರ್ಯಾದೆಯಿಂದ ಬರಮಾಡಿಕೊಂಡರು. ಆ ವೈಭವ ಕೆಲ ಕುಹಕಿಗಳಿಗೆ ಸಹಿಸಲು ಆಗಲಿಲ್ಲ.

ಮರುದಿನ ರಾಜ ಆಫೀಜ್ ಖಾನ್ ಮತ್ತು ಎಲ್ಲಾ ಮಂತ್ರಿಮಂಡಲ ಮತ್ತು ರಾಜ ಗುರುಗಳ ಸಮೇತವಾಗಿ ರಂಗಯ್ಯನವರಿಗೆ ಗುರುವಂದನೆ ಸಲ್ಲಿಸಲು ಹೊರಡುತ್ತಾರೆ. ಕುಹಕಿಗಳಿಗೆ ರಾಜ ಸಮರ್ಪಣೆ ಮಾಡುವ ವಸ್ತುಗಳಲ್ಲಿ ಮಾಂಸವನ್ನು ಸೇರಿಸಿದರು. ಅಪರೋಕ್ಷ ಜ್ಞಾನಿಗಳಾದ ರಂಗಯ್ಯನವರಿಗೆ ಧ್ಯಾನದಲ್ಲಿ ಎಲ್ಲವೂ ಗೋಚರವಾಯಿತು. 

ರಂಗಯ್ಯನವರು ಎಲ್ಲರಿಗೂ ಆಶೀರ್ವದಿಸಿ ಮಾಂಸವಿರುವ ಆ ತಟ್ಟೆಯಮೇಲೆ ಪ್ರೋಕ್ಷಣೆ ಮಾಡಿದರು. ಮಾಂಸವೆಲ್ಲ ಹೂವು ಹಣ್ಣುಗಲಾದವು. ಎಲ್ಲಾ ಕುಹಕಿಗಳಿಗೆ ಪರಮಾಶ್ಚರ್ಯವಾಯಿತು. ರಂಗಯ್ಯನವರ ಮಹಿಮೆಯನ್ನು  ಕಂಡು ಅವರಿಗೆ ಶರಣುಹೋದರು.

ಸಂಸ್ಥಾನದಲ್ಲಿ ಬರಗಾಲದ ಬಗ್ಗೆ ಹೇಳಿಕೊಂಡ ಅರಸರಿಗೆ ಅಭಯನೀಡಿದ ರಂಗಯ್ಯನವರು ಶ್ರೀನಿವಾಸನ ವಿಶೇಷ ಅನುಗ್ರಹ ಆಗುತ್ತೆ ರಾಜ್ಯ ಸುಭಿಕ್ಷೆ ಆಗುವುದು ಎಂದು ಆಶೀರ್ವದಿಸಿದರು. 
ರಂಗಯ್ಯನವರು ಆಶೀರ್ವಾದದಿಂದ 2 ದಿನಗಳಲ್ಲಿ ಎಲ್ಲಾ ಕೆರೆ ಭಾವಿ ತುಂಬಿ ಹಲವರ್ಷದ ಕ್ಷಾಮ ಪರಿಹರಿಸಿದರು.

ದೇಹವೆಲ್ಲ ಶಂಕ ಚಕ್ರ
ಒಮ್ಮೆ ಹಂಸನಾಮಕ ಪರಮಾತ್ಮನ ಸಾಕ್ಷಾತ್ ಪರಂಪರೆಯಾದ ದಕ್ಷಿಣಾದಿ ಕವೀಂದ್ರಮಠ ಇಂದಿನ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠದಲ್ಲಿ ವಿರಾಜಮಾನರಾಗಿದ ಶ್ರೀಉಪೇಂದ್ರತೀರ್ಥರ ವರಕುಮಾರರಾದ ಶ್ರೀವಾದೀಂದ್ರತೀರ್ಥರು ಸಂಚಾರದಲ್ಲಿ ಕೌತಳಂ ಗ್ರಾಮಕೇ ದಿಗ್ವಿಜಯಮಾಡಿರುತ್ತಾರೆ. ಮುದ್ರಾಧಾರಣೆ ಮತ್ತು ಶ್ರೀಮನ್ಮೂಲರಾಮದೇವರ ಪೂಜಾದಿ ದರ್ಶನಕೆಂದು ಎಲ್ಲಾ ವಿಪ್ರರು ಬಂದಿರುತ್ತಾರೆ. ಮುದ್ರಾಧಾರಣೆ ಸಮಯದಲ್ಲಿ ಶ್ರೀವಾದೀಂದ್ರತೀರ್ಥರು ಮತ್ತೆ ಅವರ ಶಿಷ್ಯರಾದ ಶ್ರೀ ಪುರುಷೂತ್ತಮಾಚಾರ್ಯರಿಗೆ  ರಂಗಯ್ಯನವರ್ ದೇಹವೆಲ್ಲಾ ಶಂಕ ಚಕ್ರ ವಾಗಿ ಕಾಣಿಸುತ್ತದೆ.

ಇದನ್ನು ಕಂಡು ಧಿಗ್ಭ್ರಮೆಯಾದ ಶ್ರೀ ಪುರುಷೋತ್ತಮಾಚಾರ್ಯರು ರಂಗಯ್ಯನವರಿಗೆ ಸಾಷ್ಟಾಂಗ ನಮಸ್ಕರಿಸಿದರು. ನಮಸ್ಕರಿಸುವಾಗ ರಂಗಯ್ಯನವರು ಪುರುಷೋತ್ತಮಾಚಾರ್ಯರಿಗೆ ಇನ್ನು ಸ್ವಲ್ಪ ದಿನಗಳನಂತರ ನಾನೇ ತಮಗೆ ಸಾಷ್ಟಾಂಗ ನಮಸ್ಕರಿಸುತ್ತೇನೆ ಅಂತ ಹೇಳಿ ಶ್ರೀಪುರುಷೋತ್ತಮಾಚಾರ್ಯರು ಮುಂದೆ ಶ್ರೀಮಠ ಪೀಠಾಧಿಪತಿ ಆಗುತ್ತಿರ ಎಂದು ರಂಗಯ್ಯನವರು ಹೇಳುತ್ತಾರೆ. ಇದನ್ನು ಹೇಳುತ್ತಾ ಇನ್ನು ಕೆಲದಿನಗಳ ನಂತರದಲ್ಲಿ ತಮ್ಮ ವೈಕುಂಠ ಯಾತ್ರೆ ವಿಚಾರತಿಳಿಸಿ ಬೃಂದಾವನ ನಿರ್ಮಾಣದನಂತರ ಅವರ ಬೃಂದಾವನದ ಮುಂದೆ ಸಂಸ್ಥಾನದ ಮುಖ್ಯದೇವರಾದ ಚತುರ್ಯುಗ ಮೂರ್ತಿ ಶ್ರೀಮನ್ಮೂಲರಾಮ  ಮತ್ತು ಇತರೆ ಸಂಸ್ಥಾನದ ಪ್ರತಿಮೆಯೊಂದಿಗೆ ಪೂಜೆ ಮಾಡಲು ಕೇಳಿಕೊಳ್ಳುತ್ತಾರೆ.

ಅಕ್ಷಯ ನಾಮ ಸಂವತ್ಸರ ವೈಶಾಖ ಬಹುಳ ದ್ವಾದಶಿಯಂದು ಲಯ ಚಿಂತನಾ ಪೂರ್ವಕವಾಗಿ ಯೆಲ್ಲರೂ ನೋಡುತ್ತಿರುವಂತೆಯೇ ಹರಿಧ್ಯಾನ ಮಾಡುತ್ತಾ ಪಾರ್ಥಿವ ಶರೀರವನ್ನು ಬಿಟ್ಟು ವೈಕುಂಠಕ್ಕೆ ತೆರಳಿದರು.  ಶ್ರೀರಂಗಯ್ಯನವರು ಗೃಹಸ್ತಶ್ರಮಿಗಳಾದ ಕಾರಣ ಗ್ರಾಮದ ಹಿರಿಯರು ಬೃಂದಾವನ ನಿರ್ಮಿಸಲು ನಿರಾಕರಿಸಿ ದೇಹವನ್ನು ಗೃಹಸ್ತಶ್ರಮಿಗಳಿಗೆ ಸಂಸ್ಕಾರ ಮಾಡುವ ವಿಧಿಯಲ್ಲೇ ಮಾಡಿದರು. ರಾತ್ರಿ ಊರಿನ ಹಲವಾರು ಹಿರಿಯರ ಸ್ವಪ್ನದಲ್ಲಿ ತಮ್ಮ ದೇಹದ ಕಿರುಬೆರಳು ಮತ್ತೆ ತುಳಸಿ ಮಣಿಯು ,ಕೌಪೀನ ಸುಡದೆ ಹಾಗೆಯೇ ಉಳಿದಿದ್ದು ಅದನ್ನ ತೆಗೆದುಕೊಂಡು ಬಂದು ಬೃಂದಾವನ ನಿರ್ಮಿಸಿಸಲು ಸೂಚಿಸಿದರು. ಶ್ರೀರಂಗಯ್ಯನವರ ಆಜ್ಞೆಯಂತೆ ದಹನ ಸ್ಥಳದಿಂದ ಕಿರುಬೆರಳು ಮತ್ತೆ ತುಳಸಿ ಮಣಿ,ಕೌಪೀನ ತೆಗೆದುಕೊಂಡು ಬಂದು ಬೃಂದಾವನ ನಿರ್ಮಿಸುತ್ತಾರೆ.

ಶ್ರೀರಂಗಯ್ಯನವರು ನುಡಿದಂತೆಯೇ 
ಶ್ರೀಪುರುಷೋತ್ತಮಾಚಾರ್ಯರು ಶ್ರೀವಸುದೇಂದ್ರತೀರ್ಥರಾಗಿ ಶ್ರೀಮಠ ಪೀಠಾಧಿಪತಿಯಾಗಿರುತ್ತಾರೆ. ಶ್ರೀಗಳು ಕುಂಭಕೋಣದಲ್ಲಿ ದಿಗ್ವಿಜಯ ಸಂದರ್ಭದಲ್ಲಿ  ಶ್ರೀಗಳ ಸ್ವಪ್ನದಲ್ಲಿ ರಂಗಯ್ಯನವರು ತಾವು ಬೃಂದಾವನಸ್ಥರಾದ ನಂತರದಲ್ಲಿ ಸಂಸ್ಥಾನದ ಪೂಜೆಯ ಬಗ್ಗೆ ನೆನಪಿಸಿದರು. ಶ್ರೀವಸುದೇಂದ್ರತೀರ್ಥರು  ಕೌತಾಳಂ ಗ್ರಾಮಗೆ ದಿಗ್ವಿಜಯಮಾಡಿ ಅಲ್ಲಿ ಶ್ರೀರಂಗಯ್ಯನವರ ಬೃಂದಾವನದ ಎದರುಗಡಗೆ ವೈಭವದಿಂದ ಸಂಸ್ಥಾನ ಪೂಜೆ ಮಾಡಿ ನೆರದ ಜನರಿಗೆ ಅನುಗ್ರಹಿಸಿದರು.

ಶ್ರೀ ರಂಗಯ್ಯನವರ ಚರಿತ್ರೆಯನ್ನು ಶ್ರೀ ರಘುಪತಿ ವಿಠಲಾಂಕಿತ  ತಿಮ್ಮಣ್ಣದಾಸರು ಸ್ತೋತ್ರಪದವನ್ನು ರಚನೆ ಮಾಡಿದರೆ.

ಶ್ರೀ ರಂಗಯ್ಯನವರು ಪೂರ್ವ ಅವತಾರವಾಗಿ ಶ್ರೀಸತ್ಯತೀರ್ಥರು ಮತ್ತೆ ಇವರೇ ನಂತರದಲ್ಲಿ ಶ್ರೀ ಇಭರಾಮಪುರ ಅಪ್ಪಾವರಾಗಿ ಅವತರಿಸಿದ್ದಾರೆ ಅಂತ ಪ್ರಾಜ್ಞರ ವಚನವಾಗಿದೆ.

ರಂಗಯ್ಯನ ನೋಡಿರೈ - ಕೌತಾಳದ ಶ್ರೀ ।
ರಂಗಯ್ಯನ ಪಾಡಿರೈ - ಬೃಂದಾವನದ ಶ್ರೀ ।। ಪಲ್ಲವಿ ।।

ಇಂಗಿತಜ್ಞರ ಸಂಗ ಪಾಲಿಸಿ । ಭಂಗ ಬಡಿಸುವ 
ಭವ ಭಯಂಗಳ । ಮಂಗಳ ಕುಲ 
ತಿಲಕಾಂಗನೊಳು ನಮ್ಮ । ರಂಗನಂಘ್ರಿಯ 
ನೋಡಿ ನಲಿದಾ ।। ಅ ಪ ।।

ನಂಬಿ ಭಜಿಸುವರಿಷ್ಟ  ಅನುಗಾಲ ಬಿಡದೆ ।
ತುಂಬಿ ಕೊಡುವ ಸತ್ಯನಿಷ್ಠ ।
ಅಂಬಣ್ಣಾರ್ಯರ ಸತಿಯು ।।
ಲಕ್ಷ್ಮಾಂಬೆಯರ ಗರ್ಭದಿ ಜನಿಸಿ ಜಗದೊಳು ।
ಹಂಬಲ ಬಿಟ್ಟಿಲ್ಲ ವಿಷಯದಿ । 
ಅಂಬುಜಾಕ್ಷನ ಜಪಿಸಿ ಒಲಿಸಿದ ।। ಚರಣ ।।

ಚಿಕ್ಕ ಬಾಲಕ ತಾನಿರಲು । ಉಪನೀತ ಮಾಡೆ ।
ಪಕ್ಕ ಊರಿಗೆ ಪೋಗುತಿರಲೂ ।
ಫಕ್ಕನೆ ಕಾಲ್ಗೆಜ್ಜೆ ಧ್ವನಿಗೈದು ।।
ಠಕ್ಕು ಶೂದ್ರನ ತೆರದಿ ಬೆನ್ಹತ್ತಿ ।ಠಕ್ಕ ಸಾರಿಯೆ ।
ರಂಗನೊಳು ತಾನಿಕ್ಕೆ ಬೀಜಾಕ್ಷರದಿ ನಲಿದಾ ।। ಚರಣ ।।

ಹುಚ್ಚ ರಂಗನು  ಇವನೆಂದು  ತಂದಿ ತಾಯಿ ನೊಂದು ।ಮೆಚ್ಚಿ ತಿರುಮಲೆಗೆ ಬಂದು ।
ಸ್ವಚ್ಛ ಭಕುತಿಲಿ ಭಜಿಸಿ ಸೇವಿಸೆ ।।
ಅಚ್ಯುತನು ತಾನೆಂದ ರಂಗಗೆ ।
ಮೆಚ್ಚಿ ನಿನ್ನಲ್ಲಿ ನಾನಿರೆ । ಉತ್ಸವಕೆ ಮತ್ತೇಕೆ 
ಬಂದ ಎಂದ ।। ಚರಣ ।।

ಚಿರುತಾ ಪಳ್ಳಿಯ ಜನರು ಪ್ರಾರ್ಥಿಸಲು 
ಭಾವಿಯೊಳ್ ।ತರಿಸಿ ಕುಡಿಯುವ 
ತುಂಬಾ ನೀರು ।ಸ್ಮರಿಸೆ ಬ್ರಹ್ಮೋತ್ಸವವ ।।
ತಾಯಿಗೆ ಕರೆದು ಮಾಳಿಗೆ ಮೇಲೆ ತೋರಿಸಿ ।
ಭರದಿ ಕಾಶೀ ಯಾತ್ರೆಯೊಳು ಲಿಂಗ ।
ದೊರಕೆ ಗಂಗೆಯೊಳ್ ಮುದದೀ ತಂದಾ ।। ಚರಣ ।।

ಶ್ರೀಶೈಲ ಯಾತ್ರೆಯ ಮಾಡಿ ನವಾಬ 
ಗುರು ತಂದ ।ಅಶುಚಿ ಮಾಂಸ ಫಲವ ಮಾಡಿ ।
ಅಸುರಹರ ಲಕುಮೀಶನ ಕೇಶವ ।।
ನಿಶಿಯ ಸ್ವಪ್ನದಿ ಪೇಳೆ ತನ್ನ ಮೂರ್ತಿ ।
ಅಸಮ ಬಾಳೇ ಕೊಳದಿ ತರುತಲಿ ।
ಎಸೆವ ಕೌತಾಳದಲಿ ಸ್ಥಿರವಿಟ್ಟ ।। ಚರಣ ।।

ಶ್ರೀ ಇಭರಾಮಪುರಾಧೀಶ
ವಿಷ್ಣು ತೀರ್ಥಾಚಾರ್ ಇಭರಾಮಪುರ
*****************

ಕೌತಾಳಂ ಶ್ರೀ ರಂಗಯ್ಯನವರು
ಮುಂದೆ ಇವರೇ ಇಭರಾಮಪುರ ಅಪ್ಪಾವರು ಆಗಿ ಅವತಾರ ಮಾಡಿದರು ಅಂತ ಅನ್ನುವುದು ಭಕ್ತರ ನಂಬಿಕೆ..
ಅವರ ಒಂದು ಮಹಿಮೆಯನ್ನು ತಿಳಿಸುವ ಪುಟ್ಟ ಪ್ರಯತ್ನ.
✍ಅಂದು ನವರಾತ್ರಿಯ ಸಮಯ...
ಎಲ್ಲಾರ ಮನೆಗಳಲ್ಲಿ ಜಗತ್ತಿನ ತಂದೆಯಾದ ಶ್ರೀನಿವಾಸನ ಕಲ್ಯಾಣದ ಸಡಗರ ಸಂಭ್ರಮ.
ಒಲಿದು ಭಕುತರಿಗಾಗಿ, ಮದುವೆ ಹವಣಿಸಿಕೊಂಡ ಸುಲಭ ದೇವರ ದೇವ ವಿಜಯವಿಠ್ಠಲ ವೆಂಕಟನ ಚರಿತ್ರೆ. 
ಎಲ್ಲಾ ಭಕ್ತರ ಮನೆಯಲ್ಲಿ ಪಾರಾಯಣ ಸಂಭ್ರಮದಿಂದ ನಡೆದಿದೆ.
ರಂಗಯ್ಯನವರ ತಾಯಿ ಲಕ್ಷ್ಮಮ್ಮ ನವರಿಗೆ ದೇವಗಿರಿಯಾದ,ಭೂ ವೈಕುಂಠ ವಾದ, ಸಪ್ತಪರ್ವತಗಳ ,ಒಡೆಯನಾದ ಪದುಮಾವತಿಯ ಪ್ರಾಣಪ್ರಿಯನಾದ ಶ್ರೀನಿವಾಸನ ದರುಶನ ಮಾಡಬೇಕೆಂದು ಬಹು ಅಪೇಕ್ಷೆ ಆಯಿತು.
ಪುಣ್ಯ ಚರಿತನಾದ ಶ್ರೀನಿವಾಸನ ಭಕ್ತನಾದ ತನ್ನ ಮಗನನ್ನು ಕುರಿತು 
ಮಗು!! ರಂಗಯ್ಯ ನನ್ನ ತಿರುಪತಿ ಗೆ ಕರೆದುಕೊಂಡು ಹೋಗುವಿಯಾ!!ಆ ಸ್ವಾಮಿಯ ಬ್ರಹ್ಮೋತ್ಸವ ನೋಡಬೇಕು ಎನ್ನುವ ಆಸೆ ಬಹಳವಾಗಿದೆ.ಕರೆದು ಕೊಂಡು ಹೋಗುವಿಯಾ!! ಎಂದಳು.
ಅದಕ್ಕೆ ರಂಗಯ್ಯ ನವರು
ಅಮ್ಮ!! ಎಲ್ಲಿ ನೋಡಲು ಅಲ್ಲಿ ವ್ಯಾಪ್ತನಾಗಿರುವ,ಕರೆದಲ್ಲಿಗೆ ಬರುವ ಕಡು ಕರುಣಾನಿಧಿ ಆದ ಆ ಸ್ವಾಮಿಯ ವೈಭವವನ್ನು ಎಲ್ಲಾ ಕಡೆ ಕಾಣಬಹುದು.
ಸಾಧನ ಶರೀರವಿದು ಸಾಧಾರಣ ವಲ್ಲವು ಅಂತಹ ಈ ಶರೀರಕ್ಕೆ ಜನ್ಮವಿತ್ತ ನಿನ್ನ ಆಪೇಕ್ಷೆಯನ್ನು ಪೂರೈಸುವದು ನನ್ನ ಕರ್ತವ್ಯ. ಅದನ್ನು ತಪ್ಪದೇ ನಡೆಸಿಕೊಡುವೆನು ಅಂತ ಹೇಳುತ್ತಾರೆ..
ತಕ್ಷಣ 
ತಮ್ಮ ತಾಯಿಯನ್ನು ತಮ್ಮ ಮನೆಯ ಮೇಲಿನ ಭಾಗಕ್ಕೆ  ಅಂದರೆ ಮಾಳಿಗೆಗೆ ಕರೆದೊಯ್ದರು.
ತಿರುಮಲೆ ಯ ದಿಕ್ಕಿನ ಕಡೆ ಕೈ ತೋರಿಸುತ್ತಾ
ಅಮ್ಮಾ !!
ಅದೋ ನೋಡು! ಬ್ರಹ್ಮಾಂಡದ ಒಡೆಯನಾದ,ಬ್ರಹ್ಮನ ಪಿತನಾದ ಆ ಶ್ರೀನಿವಾಸನ ಬ್ರಹ್ಮೋತ್ಸವ ದ ವೈಭವವನ್ನು... 
ಬಂಗಾರದ ಶಿಖರದಿಂದ ಒಪ್ಪುವ ಆ ಸ್ವಾಮಿಯ ಮಂದಿರ ನೋಡು... ಆನಂದಾದ್ರಿಯಲ್ಲಿ ನಗುಮುಖದಿಂದ ನಿಂತ ಆ ಜಗದೊಡೆಯ ಶ್ರೀನಿವಾಸನನ್ನು ನೋಡು ಎಂದು ಹೇಳಿ ದರುಶನ ತಾಯಿಗೆ ಮಾಡಿಸಿದರು..
 ನಂತರ ದೇವ ಬೀದಿಯ ನಾಲ್ಕು ಕಡೆ ಗರುಡವಾಹನನಾಗಿ ತನ್ನ ಮಡದಿಯರ ಕೂಡ ಸಡಗರದಿಂದ ಸಂಚರಿಸುವ  ಆ ಸ್ವಾಮಿಯ ಮೂರ್ತಿಯನ್ನು ದರುಶನ ಮಾಡಿಸಿದರು 
ಆ ಸ್ವಾಮಿಯ ಮುಂದೆ ಭಕ್ತರ ಭಜನೆ ನರ್ತನೆ, ಅದರ ಮುಂದೆ ನಿಧಾನವಾಗಿ ಸಾಗುವ ಗಜ,ಅಶ್ವ ಗಳನ್ನು ಮತ್ತು ಹರಿದಾಸರ ಭಕ್ತರ ವೃಂದವನ್ನು ನೇರವಾಗಿ ಬಹು ಹತ್ತಿರ ದಿಂದ ಕಂಡಳು.
ಆನಂದದಿಂದ ಕಣ್ಣು ಗಳಲ್ಲಿ ನೀರನ್ನು ಸುರಿಸುತ್ತಾ ಗೋವಿಂದಾ!! ಗೋವಿಂದ!! ಎಂದು  ಮುಕ್ತ ಕಂಠದಿಂದ ಕೂಗಿದಳು..
ಆ ತಾಯಿಗೆ ಕಾಲದ ಪರಿವೆಯೆ ಇಲ್ಲ.
ಸಂಪೂರ್ಣ ಬ್ರಹ್ಮೋತ್ಸವ ದ ದರುಶನ ವಾದ ಮೇಲೆ ರಂಗಯ್ಯ !!ನಿನ್ನನ್ನು ಮಗನಾಗಿ ಪಡೆದ ನನ್ನ ಜನುಮ ಧನ್ಯವಾಯಿತು ಎಂದಳು.
ಯಾವುದೇ ಟಿವಿ ಅಥವಾ ಮಾಧ್ಯಮ ಇಲ್ಲದ ಕಾಲವದು..
ಭಗವಂತನ ದರುಶನ ವನ್ನು ತಮ್ಮ ತಾಯಿಗೆ ನೇರವಾಗಿ ಮಾಡಿಸಿದ ಆ ಮಹಾನುಭಾವರ   ಸ್ಮರಣೆ ಉದಯಕಾಲದಲ್ಲಿ ಮಾಡಿದರೆ ನಮ್ಮ ಈ ಜೀವನ ಧನ್ಯ..
ಇಂತಹ ಪರಮ ಭಾಗವತರು ಅನೇಕ ಜನ ನಮ್ಮ ಮಧ್ವಮತದಲ್ಲಿ ಭಗವಂತನ ಅಪ್ಪಣೆಯಂತೆ ಧರೆಯೊಳು ಅವತಾರ ಮಾಡಿದ್ದಾರೆ..
ಭಗವಂತನಿಂದ ದೂರವಾಗಿ ಅವನ ನಾಮ ಸ್ಮರಣೆ ಮಾಡದ ನಮ್ಮಂತಹ ಪಾಮರ ಜನಗಳಿಗೆ ಉದ್ದಾರ ಮಾಡಲು ಇಂತಹವರು ಬರುತ್ತಾರೆ.
ಇಂತಹ ಅನೇಕ 
ಪರಮ ಭಾಗವತರನ್ನು ಕೊಂಡಾಡುವದು ಪ್ರತಿದಿನವು..
ಶ್ರೀ ಕೃಷ್ಣಾರ್ಪಣ ಮಸ್ತು

******
ಧರೆಯೊದ್ದಾರಕೆ ಮೆರೆವರು ಗುರುಗಳು ವರ ಮಂತ್ರಾಲಯ ದಲ್ಲಿ|
ವರ ಪ್ರಹ್ಲಾದ ರು ವ್ಯಾಸ ಪ್ರಭುಗಳು ವರ ತುಂಗಾತಟದಲ್ಲಿ|

 ಕೊರೆದಿಹ ಕಂಭದಿ ಹರಿಯನು ತೋರಿಸಿ|
ಹರಿನಾಮವ ಜಗದಲ್ಲಿ|
ಮೆರೆಸಿದ ವರ ಪ್ರಹ್ಲಾದ ರು ಮೆರೆವರು ವರ ಮಂತ್ರಾಲಯ ದಲ್ಲಿ|
🙏🙏
||ರಾಯರ ಮಹಿಮೆ||
ಮುಂದುವರೆದ ಭಾಗ. 

✍ಜ್ಞಾನ, ಭಕ್ತಿ ,ವೈರಾಗ್ಯ ಗಳೆಂಬ ನಿಜ ಸಂಪತ್ತಿನಿಂದ ಉಳ್ಳ ಹರಿದಾಸರಿಗೆ ಈ ಲೌಕಿಕ ಸಂಪತ್ತು ಸಂಗ್ರಹಣೆ ಅವಶ್ಯಕತೆ ಇರುವದಿಲ್ಲ.

ಈ ಘಟನೆ ನಮ್ಮ ಕೌತಾಳಂ ಗುರು ಜಗನ್ನಾಥ ದಾಸರ ಚರಿತ್ರೆಯಲ್ಲಿ ಬರುತ್ತದೆ.

ಶ್ರೀ ಗುರು ಜಗನ್ನಾಥ ದಾಸರಿಗೆ ಲೌಕಿಕದ ಮೋಹವಿಲ್ಲ..
ದಾಸರು ಎಂದು ಭವಿಷ್ಯವನ್ನು ಕುರಿತು,ನಾಳೆಗೆ ಹೇಗೆಂಬ ಆಲೋಚನೆ ಮಾಡಿದವರಲ್ಲ.
ಭಗವಂತ ಏನು ಕೊಟ್ಟಿದ್ದಾನೆ ಅದರಲ್ಲಿ ತೃಪ್ತಿ ಪಡುವದು ಅವರ ಸ್ವಭಾವ.

ರಾಯರ ಆರಾಧನೆ ಹತ್ತಿರ ಬಂತು. ಬೇಕಾದ ಸಾಮಗ್ರಿಗಳು ಸಂಗ್ರಹಣೆ ಆಗಿಲ್ಲ..
ದಾಸರ ಶಿಷ್ಯರಿಗೆ ಚಿಂತೆ ಯಾಯಿತು.ಆರಾಧನೆಗೆ ಇನ್ನೂ ಒಂದೆರಡು ದಿನಗಳು ಮಾತ್ರ ಉಳಿದಿದೆ.
ಆರಾಧನೆಗೆ ಸಾಮಗ್ರಿಗಳನ್ನು ತರಲು ದಾಸರ ಬಳಿ ಧನವಿಲ್ಲ.
ಬರುವ ಭಕ್ತಾದಿಗಳ ಸಂಖ್ಯೆ ಬಹಳ..ಹೇಗೆ ಅಂತ ಚಿಂತೆ??..
ಆದರೆ ಆ ಊರಿನ ಕೆಲವರು ಗಣ್ಯ ಮುಖಂಡರು  
ದಾಸರು ನಮ್ಮ ಬಳಿ ಬಂದು ಕೇಳಲಿ, ಸಂಪೂರ್ಣ ಖರ್ಚು ಕೊಡುತ್ತೇವೆ ಅಂತ ಅವರ ಶಿಷ್ಯರ ಮುಂದೆ ಹೇಳುತ್ತಾ ಇದ್ದರು.

ಆ ದಿನ ಸಾಯಂಕಾಲ ಭಜನೆ ಆಯಿತು.
ಅವಾಗ್ಗೆ ಶಿಷ್ಯರು 
ಮುತ್ಯಾ!!  ರಾಯರ ಆರಾಧನೆ ಹತ್ತಿರ ಬಂತು.ಮಾಡಬೇಕಾದ ಕೆಲಸ ಬಹಳವಿದೆ.ನೀವು ಒಮ್ಮೆ ಕೇಳಿದರೆ ಸಾಕು ಕೊಡಲು ಬಹಳಷ್ಟು ಜನ ಸಿದ್ದರಿದ್ದಾರೆ.. 
ಅಂತ ಹೇಳಿದಾಗ
ದಾಸರು ನಗುತ್ತಾ ಹೇಳುತ್ತಾರೆ..
ಮಗುವಿನ ಚಿಂತೆ ತಾಯಿಗೆ ಹೊರತು, ಮಗುವಿಗೆ ಇರುವದಿಲ್ಲ.

ಕಾರ್ಯವನ್ನು ಮಾಡಿ ಮಾಡಿಸುವವನು ಭಗವಂತ..

ಅಸ್ವತಂತ್ರನಾದ ಜೀವಿ ಇಲ್ಲದ ಕತೃತ್ವ,ಭಾರ ಹೊರಬಾರದು.

ನಮ್ಮ ಪುರಂದರದಾಸರ ತಾರಕ ಮಂತ್ರ ..
ಹಾಡಿದರೆ ಎನ್ನೊಡೆಯನ ಹಾಡುವೆ|
ಬೇಡಿದರೆ ಎನ್ನೊಡೆಯನ ಬೇಡುವೆ|
ಎನ್ನೊಡೆಯನಿಗೆ ಒಡಲನು ತೋರುವೆ|

ಮಾಡಿದ ಕೆಲಸದಿಂದ ಬೇಡಿದ ಸುಖ ಬರದೇ ಇದ್ದರು ಪರವಾಗಿಲ್ಲ.
ಅದರಿಂದ ದುಖಃ ಬರಬಾರದು..

ನರರನ್ನು ಬೇಡಿ ಸುಖ ಪಡುವದಕ್ಕಿಂತ ಭಗವಂತನನ್ನು ಬೇಡಿ ಕಷ್ಟ ಪಡುವದೇ ಲೇಸು..
ನರರನ್ನು ಬೇಡಿದಾಗ ಇಹದಲ್ಲಿ ಸುಖ..ಆದರೆ ಪರದಲ್ಲಿ ದುಖಃ

ಅದೇ ಭಗವಂತನಲ್ಲಿ ಬೇಡಿದಾಗ ಇಹ ಮತ್ತು ಪರದಲ್ಲಿ  ಸುಖವನ್ನು ಕರುಣಿಸುವನು..
ಅಂತ ಹೇಳಿ
|ಏಕಾಂತದಿ ಶ್ರೀಕಾಂತನ
ಭಜಿಸಲು|
|ಲೋಕಾಂತರ ಸುಖ ಪ್ರಾಪ್ತಿ|
ಅನ್ನುವ ಕೃತಿಯೊಂದಿಗೆ ಆ ದಿನ ಉಪದೇಶ ಮುಗಿಸುತ್ತಾರೆ.

ಎಲ್ಲಾ ಶಿಷ್ಯರಿಗು ಗುರುಗಳ ಮಾತಿನ ಮೇಲೆ ವಿಶ್ವಾಸ. 

ಮರುದಿನ ಬೆಳಿಗ್ಗೆ ರಾಯರ ಸೂಚನೆಯಂತೆ
ತಿರುಮಲರಾಯರೆಂಬ ಜಡ್ಜ್ ಗಳು ಧಾರವಾಡದಿಂದ ಬಂದು ರಾಯರ ಆರಾಧನೆಗೆ ಬೇಕಾದ ಹಣವನ್ನು ದಾಸರಿಗೆ ಸಮರ್ಪಣೆ ಮಾಡುತ್ತಾರೆ.
ಆಗ ಗುರು ಜಗನ್ನಾಥ ದಾಸರು ತಿರುಮಲರಾಯರನ್ನು ಆಶೀರ್ವದಿಸಿ,ರಾಯರ ಕಾರುಣ್ಯ ವನ್ನು ನೆನೆದು

ನಂಬಿ ಕೆಟ್ಟವರಿಲ್ಲವೋ
ಈ ಗುರುಗಳ|
ನಂಬದೆ ಕೆಡುವರುಂಟೋ||
ನಂಬಿದ ಜನರಿಗೆ ಬೆಂಬಲ ತಾನಾಗಿ|
ಹಂಬಲಿಸಿದ ಫಲ ತುಂಬಿ ಕೊಡುವ ರನ್ನ||
ಅನ್ನುವ ೦೩ನುಡಿಗಳುಳ್ಳ ಕೃತಿಯನ್ನು ರಚನೆ ಮಾಡಿ ಅವರಿಗೆ ಸಮರ್ಪಣೆ ಮಾಡುತ್ತಾರೆ.

ಉದಯಕಾಲದಿ ಇಂತಹ ಪರಮಭಾಗವತರ ಸ್ಮರಣೆ ಮಾಡುತ್ತಾ

ರಾಯರ ಅನುಗ್ರಹ ನಿಮಗೆ ಹಾಗು ನಿಮ್ಮ ಪರಿವಾರದವರಿಗೆಲ್ಲ ಆಗಲಿ
ಕಾಲ ಕಾಲಕ್ಕೆ ಮಳೆ ಬೆಳೆ ಆಗಲಿ,ದೇಶ ಸುಭಿಕ್ಷವಾಗಿರಲಿ, ಅಂತ ಪ್ರಾರ್ಥನೆ ರಾಯರಲ್ಲಿ ಮಾಡುತ್ತಾ

🙏ಶ್ರೀ ಕೃಷ್ಣಾರ್ಪಣ ಮಸ್ತು
************

 ಕೌತಾಳಂ ಶ್ರೀರಂಗಯ್ಯ ನವರ  ಆರಾಧನೆ.
ಇವರೇ ಮುಂದೆ ಶ್ರೀ ಇಭರಾಮಪುರ ಅಪ್ಪಾವರು ಆಗಿ ಅವತಾರ ಮಾಡಿದರೆಂದು ಬಲ್ಲವರ ವಾಣಿ ಮತ್ತು ಅವರ ಭಕ್ತರ ನಂಬಿಕೆ..
✍ಶ್ರೀ ರಂಗಯ್ಯನವರು ಬಾಲ್ಯದಲ್ಲಿಯೇ ಭಗವಂತನ ಸಾಕ್ಷಾತ್ಕಾರ ಪಡೆದಂತಹ ಮಹಾನುಭಾವರು.
"ಶ್ರೀನಿವಾಸದೇವರು ಇವರನ್ನು ಪರೀಕ್ಷೆ ಮಾಡಲೊಸುಗ ಮಾನುಷ ರೂಪಧಾರಿಯಾಗಿ ಬಂದು ಇವರಿಗೆ ಅನುಗ್ರಹ ಮಾಡಿ, ತನ್ನ ನಿಜರೂಪ ತೋರಿಸಿ ಇವರ ತಲೆಯ ಮೇಲೆ ತನ್ನ ಅಭಯಹಸ್ತವನ್ನು ಇಟ್ಟು ಇವರ ನಾಲಿಗೆಯ ಮೇಲೆ ಬೀಜಾಕ್ಷರವನ್ನು ಬರೆದು ಅದೃಶ್ಯ ನಾಗುತ್ತಾನೆ".
ಅಂದಿನಿಂದ ಇವರ ಜೀವನ ಚರ್ಯೆ ಬದಲಾಯಿತು.
ಒಮ್ಮೆ ರಂಗಯ್ಯ ನವರು ತಮ್ಮ ಪ್ರಿಯಶಿಷ್ಯನಾದ ಚನ್ನಯ್ಯನ ಸಂಗಡ ಕಾಶಿ ಯಾತ್ರೆ ಗೆ ಹೊರಟರು. ಕಾಶಿಯಲ್ಲಿ ವಿಶ್ವನಾಥನ ಸನ್ನಿಧಿಯಲ್ಲಿ ಇರುವಾಗ ಒಂದು ದಿನ ಗಂಗಾ ಸ್ನಾನ ಮಾಡಲು ಹೋದಾಗ ಒಂದು ಶಿವಲಿಂಗ ದೊರೆಯಿತು.. 
ಈಗಲು ಅದು ಕೌತಾಳಂ ನಲ್ಲಿ  ಅವರ ವೃಂದಾವನದ ಹತ್ತಿರ ಇದೆ.
ನಂತರ ಸಂಚಾರ ಮಾಡುತ್ತಾ ಕರ್ನೂಲು ಗೆ ಬರುತ್ತಾರೆ.
ಭೀಕರ ಬರಗಾಲ,ಮಳೆ ಬೆಳೆಗಳು ಇಲ್ಲದೇ ,ಕುಡಿಯುವ ನೀರು ಸಹ ಇಲ್ಲದೇ ಜನರೆಲ್ಲ ಬಹಳ ಕಷ್ಟ ಒಳಗಾಗಿದ್ದರು.
ಆ ಸಮಯದಲ್ಲಿ ಇವರು ಬಂದಿದ್ದನ್ನು ಕೇಳಿದ ಕರ್ನೂಲು ನವಾಬನಾದ ಆಫೀಜ್ ಖಾನ.
ಇವನ ಮಂತ್ರಿ ಕೃಷ್ಣ ರಾಯ.
ಶ್ರೀರಂಗಯ್ಯ ನವರ ಮಹಿಮೆಯನ್ನು ತಿಳಿದ ಇವರು ತಮ್ಮ ಅರಮನೆ ಗೆ ರಾಜಮರ್ಯಾದೆ ಇಂದ ಕರೆದುಕೊಂಡು ಹೋಗುತ್ತಾರೆ.
ಆ ವೈಭವವನ್ನು ನೋಡಿ ಅಲ್ಲಿ ಇದ್ದ ಕೆಲವರಿಗೆ ಹೊಟ್ಟೆ ಉರಿಯಾಗುತ್ತದೆ.ಅದಕ್ಕೆ ನವಾಬನ ಗುರು ಕೂಡ ಸೇರಿರುತ್ತಾನೆ.
ಮರುದಿನ ಪ್ರಾತಕಾಲದಲ್ಲಿ ನವಾಬ ತನ್ನ ಗುರುಗಳ ಜೊತೆಗೆ ಶ್ರೀರಂಗಯ್ಯ ನವರ ದರುಶನ ಮಾಡಲು ತಟ್ಟೆ ಯಲ್ಲಿ ಹೂವು ಹಣ್ಣು ಸಮೇತ ಇಟ್ಟುಕೊಂಡು ಬರುತ್ತಾನೆ.
ಆದರೆ ನವಾಬನ ಗುರುವು ಹೇಗಾದರು ಇವರಿಗೆ ಅವಮಾನ ಮಾಡಬೇಕೆಂದು ತಟ್ಟೆ ಯಲ್ಲಿ ಮಾಂಸವನ್ನು ತುಂಬಿ ವಸ್ತ್ರ ವನ್ನು ಹೊದಿಸಿ ತೆಗೆದುಕೊಂಡು ಬಂದಿರುತ್ತಾನೆ.
ಅದೇ ಸಮಯದಲ್ಲಿ ಶ್ರೀರಂಗಯ್ಯ ನವರು ಧ್ಯಾನಸ್ಥ ರಾಗಿದ್ದರು.
ಬಂದ ಆ ರಾಜಗುರುವಿನ ದುರ್ಭುದ್ದಿ ಅವರಿಗೆ ತಿಳಿಯಿತು.
ಅವಾಗ ನವಾಬನು ತಾನು ತಂದ ಫಲಗಳ ತಟ್ಟೆ ಅವರ ಮುಂದೆ ಇಟ್ಟನು.
ರಾಜಗುರುವು ಸಹ ಮಾಂಸ ತುಂಬಿದ ತಟ್ಟೆ ಅವರ ಮುಂದೆ ಇರಿಸಿದನು.
 ಅದನ್ನು ಕಂಡ ರಂಗಯ್ಯ ನವರು ಆ ನವಾಬನ ಗುರುವಾದ ಖಾಜಿ ಯವರಿಗೆ ಹೇಳುತ್ತಾರೆ.
"ಖಾಜೀಯವರೇ !!ನಮ್ಮ ಭಗವಂತನು ಯಾರಲ್ಲು ,ಯಾವುದರಲ್ಲು ದ್ವೇಷ ಮಾಡುವವನಲ್ಲ. ಕರುಣಾನಿಧಿ ಅವನು".
"ಸರ್ವತ್ರ ವ್ಯಾಪ್ತಿ. ರಸ ರೂಪಿಯಾದ ಅವನ ಸ್ಮರಣೆ ಇಂದ ಸರ್ವವು ರಸವಾಗಿ ತೋರುವದು" ಅಂತ ಹೇಳಿ ಆ ತಟ್ಟೆಯ ಮೇಲಿನ ಬಟ್ಟೆ ತೆಗಿಸಲಾಗಿ ಅದು ಹಣ್ಣು ಗಳಾಗಿ ಪರಿವರ್ತನೆ ಆಗಿರುತ್ತದೆ.
ಆದರು ಖಾಜಿಗೆ ತನಗಾದ ಈ ಅವಮಾನವನ್ನು ಮನಸ್ಸಿಗೆ ತಂದುಕೊಂಡು ಹೇಗಾದರೂ ಸರಿಯೇ ಇವರಿಗೆ ಅಪಮಾನ ಆಗಬೇಕು ಅಂತ ನಿರ್ಧಾರ ಮಾಡಿ 
"ಸ್ವಾಮಿ !!!ನಮ್ಮ ರಾಜ್ಯ ದಲ್ಲಿ ಮಳೆ ಇಲ್ಲ.ಬರಗಾಲ ಇದೆ. ಮಳೆ ತರಿಸಿ ಅನುಗ್ರಹ ಮಾಡಿ ಅಂತ ಹೇಳುತ್ತಾನೆ.
ಅವಾಗ ರಂಗಯ್ಯ ನವರು
ಹೇ!! ಶ್ರೀನಿವಾಸ!! ನಿನ್ನ ಚಿತ್ತಕೆ ಬಂದುದು ಎನ್ನ ಚಿತ್ತಕೆ ಬರಲಿ ಅಂತ ಸ್ಮರಿಸಿ ಇನ್ನೂ ಮೂರು ದಿನದ ಒಳಗಾಗಿ ನಮ್ಮ ಸ್ವಾಮಿಯ ಅನುಗ್ರಹ ದಿಂದ ಮಳೆ ಆಗುವದು ಅಂತ ಆಶೀರ್ವಾದ ಮಾಡುವರು..
ಎರಡು ದಿನ ಕಳೆಯಿತು. ಮಳೆ ಬರುವ ಸೂಚನೆ ಇಲ್ಲ..ನವಾಬನ ಗುರುವಿಗೆ ಸಂತಸ.
ಕೃಷ್ಣ ರಾಯನಿಗೆ ದಿಗಿಲು.ಮುಂದೆ ಆಗುವ ಅನಾಹುತವನ್ನು ನೆನೆದು ವಿಷ ಪ್ರಾಶನ ಮಾಡಲು ನಿಶ್ಚಯಿಸಿದ.
ತಮ್ಮ ಯೋಗ ದೃಷ್ಟಿಯಿಂದ ಇದನ್ನು ಅರಿತ ಶ್ರೀ ರಂಗಯ್ಯನವರು ಕೃಷ್ಣ ರಾಯನಿಗೆ ತಮ್ಮ ಬಳಿ ಬರಲು ಹೇಳಿ ಕಳುಹಿಸಿ
"ರಾಯ! ಭಗವಂತ ನಲ್ಲಿ ನಂಬಿಕೆ ಇಡು.ನಮ್ಮ ಸ್ವಾಮಿ ಶ್ರೀನಿವಾಸನು ನಂಬಿದವರ ಕೈ ಬಿಡಲಾರ' ಎಂದು ಹೇಳುತ್ತಾರೆ.
ಸಾಯಂಕಾಲ ವಾಯಿತು.
ಶ್ರೀರಂಗಯ್ಯನವರು ತಮ್ಮ ಶಿಷ್ಯನಿಗೆ ಕರೆದು "ಮಳೆಯ ಸೂಚನೆ ಇದೆಯೇ??" ಅಂತ ಕೇಳಿದರು..
ಅವನು ಇಲ್ಲ ವೆಂದು ಹೇಳಿದ.
ತಕ್ಷಣ ರಂಗಯ್ಯ ನವರು ತಮ್ಮ ಕುಲದೈವವಾದ ಆ ಶ್ರೀನಿವಾಸನ ಸ್ಮರಣೆ ಮಾಡುತ್ತಾ ಒಂದು ತೆಂಗಿನ ಕಾಯಿಯನ್ನು ತರಿಸಿ ಆಕಾಶದತ್ತ ಎಸೆಯಲು ಹೇಳುತ್ತಾರೆ.
ಹೀಗೆ ಎರಡು ಸಾರಿ ಮಾಡುವದರೊಳಗಾಗಿ ಬರಿದಾದ ಆಕಾಶವು ಮೇಘ ಆವೃತ ವಾಯಿತು.
ಭಯಂಕರ ವಾದ ಗುಡುಗು ಮಿಂಚುಗಳ ಆರ್ಭಟ  ಶುರುವಾಯಿತು‌.ಮಳೆಯನ್ನೇ ಕಾಣದ ಆ ಊರಿನ ಜನರಿಗೆ ಧಾರಕಾರವಾದ ಮುಸಲಧಾರೆಯಂತೆ ಮಳೆ ಸುರಿಯಲು ಆರಂಭವಾಯಿತು.
ಕೆರೆ ಭಾವಿ ಗಳು ತುಂಬಿ ತುಳುಕಿದವು.
ಜನರ ಹಾಗು ನವಾಬನ ಆನಂದಕ್ಕೆ ಪಾರವೇ ಇಲ್ಲ.
ನವಾಬನ ಗುರುವಿನ ಅಹಂಕಾರ ವನ್ನು  ಶ್ರೀರಂಗಯ್ಯ ನವರು ಮುರಿದರು.
ಹೀಗೆ ಆ ಶ್ರೀ ಹರಿಯು ತನ್ನ ಭಕ್ತರು ಯಾರಿದ್ದಾರೆ ಅವರೊಳಗೆ ನಿಂತು ಈ ತರಹದ ಕಾರ್ಯ ವನ್ನು ಮಾಡಿಸಿ ಅವರಿಗೆ ಹೆಸರನ್ನು ತಂದು ಕೊಡುವ.
ತಾನೆ ಮಾಡುವ ಈ ಲೀಲೆ ಬಹು ವಿಚಿತ್ರ..
ಉದಯ ಕಾಲದಿ ಇಂತಹ ಪರಮ ಭಾಗವತರನ್ನು ಕೊಂಡಾಡುವದು ನಮ್ಮ ಜನ್ಮಾಂತರದ ಪುಣ್ಯ ಮತ್ತು ಜೀವನ ಧನ್ಯ. 
🙏ಶ್ರೀ ಕೃಷ್ಣಾರ್ಪಣಮಸ್ತು🙏
ಶ್ರೀ ಶೈಲ ಯಾತ್ರೆ ಯ ಮಾಡಿ|ನವಾಬ ಗುರು ತಂದ ಅಶುಚಿ ಮಾಂಸ| ಫಲವ ಮಾಡಿ| ಅಸುರ ಹರ ಲಕುಮೀಶಕೇಶವ||
ರಂಗಯ್ಯನ ನೋಡಿರೈ|
ಕೌತಾಳದ ರಂಗಯ್ಯನ ಪಾಡಿರೈ||
🙏ಶ್ರೀ ರಂಗಯ್ಯ ಗುರುವೇ ನಮಃ🙏
****************


ಶ್ರೀ ಕೌತಾಳಂ ರಂಗಯ್ಯ ನವರ ವೃಂದಾವನದ ಬಗ್ಗೆ ಚರಿತ್ರೆ.
🙏🙏
ಒಮ್ಮೆ ಮಂತ್ರಾಲಯ ಮಠದ ಪರಂಪರೆಯಲ್ಲಿ ಬಂದ ಶ್ರೀ ವಾದೀಂದ್ರ ಗುರುಗಳು ಸಂಚಾರ ಮಾಡುತ್ತಾ ಕೌತಾಳಂ ಗ್ರಾಮಕ್ಕೆ ಬರುತ್ತಾರೆ.
ಗುರುಗಳಿಗೆ ಇವರ ಬಗ್ಗೆ ಮೊದಲೇ ತಿಳಿದಿತ್ತು. ಶ್ರೀನಿವಾಸನ ಪರಮ ಭಕ್ತರು ಇವರೆಂದು.
ಶ್ರೀ ವಾದೀಂದ್ರ ಗುರುಗಳ ಬಗ್ಗೆ ಸಹ ರಂಗಯ್ಯ ನವರಿಗೆ ತಿಳಿದಿತ್ತು.ಮಹಾಜ್ಞಾನಿಗಳು ಎಂದು
ಹೀಗೆ ಜ್ಞಾನಿಗಳು ಬಗ್ಗೆ ಜ್ಞಾನಿಗಳು ತಿಳಿಯುವದು ವಿಚಿತ್ರ ವೇನಲ್ಲ.
ಶ್ರೀ ರಂಗಯ್ಯ ನವರಿಗೆ ಸ್ವಪ್ನದಲ್ಲಿ ಒಲಿದು ಬಂದು ಅವರಿಂದಲೇ ಪ್ರತಿಷ್ಠಿತ ವಾದ ಶ್ರೀ ಕೇಶವ ದೇವರ ಗುಡಿಯಲ್ಲಿ ಗುರುಗಳ ಸಂಸ್ಥಾನ ಪೂಜೆಗ ಸಕಲ ವ್ಯವಸ್ಥೆ ಆಗಿತ್ತು.
ಬಂದಂತಹ ಭಕ್ತರಿಗೆ ಎಲ್ಲಾ ಮುದ್ರಾ ಧಾರಣೆ ನಡೆಯುತ್ತಾ ಇದೆ.
ರಂಗಯ್ಯ ನವರು ಸಹ ಮುದ್ರಾಧಾರಣೆಗೆ ಬಂದು ನಿಂತಾಗ ಗುರುಗಳು ನಸು ನಗುತ್ತಾರೆ.ಯಾಕೆಂದರೆ ಶ್ರೀ ರಂಗಯ್ಯ ನವರ ಮೈ ತುಂಬಾ ಶಂಖು ಚಕ್ರಾದಿಗಳು ಕಾಣಿಸಿಕೊಂಡವು.
ಈ ದೃಶ್ಯಗಳನ್ನು ಶ್ರೀ ವಾದೀಂದ್ರ ಗುರುಗಳು ಹಾಗು ಅವರ ಶಿಷ್ಯರು ಆದ ಶ್ರೀ ಪುರುಷೋತ್ತಮ ಆಚಾರ್ಯರು (ಮುಂದೇ ಶ್ರೀ ವಾದೀಂದ್ರ ಗುರುಗಳ ನಂತರ ಆ ಪೀಠವನ್ನು ಶ್ರೀ ವಸುಧೇಂದ್ರ ಗುರುಗಳು ಇವರೇ)ಕಾಣುತ್ತಾರೆ.
ಇದನ್ನು ಕಂಡು 
ಶ್ರೀ ಪುರುಷೋತ್ತಮ ಆಚಾರ್ಯರು ರಂಗಯ್ಯ ನವರಿಗೆ ಗೌರವ ಭಕ್ತಿಇಂದ ಪಾದ ನಮಸ್ಕಾರ ಮಾಡಿದಾಗ ಅವರನ್ನು ಪ್ರೀತಿ ಇಂದ ಆಲಂಗಿಸಿಕೊಂಡು
ಆಚಾರ್ಯರೇ!! ಇಂದು ನೀವು ನಮಗೆ ನಮಸ್ಕಾರ ಮಾಡುತ್ತಾ ಇದ್ದೀರಿ.ಆ ಶ್ರೀ ಹರಿಯ ಸಂಕಲ್ಪ. ನಾಳೆ ನೀವು ನಮ್ಮ ಇಂದ ನಮಸ್ಕಾರ ಮಾಡಿಸಿಕೊಳ್ಳುವಿರಿ.
ಶ್ರೀ ವಾದೀಂದ್ರ ಗುರುಗಳ ನಂತರ ಪೀಠದಲ್ಲಿ ನೀವು ಬಂದು ಶ್ರೀ ವಸುಧೇಂದ್ರರು ಎಂಬ ನಾಮದಿಂದ ಮೆರೆಯುವಿರಿ
ನಾನು ಇನ್ನೂ ಕೆಲದಿನಗಳಲ್ಲಿ ಇಹಲೋಕ ಯಾತ್ರೆ ಯನ್ನು ಮುಗಿಸಬೇಕಾಗಿದೆ.ಶ್ರೀನಿವಾಸನ ಸಂಕಲ್ಪ. ಹೋಗಲೇಬೇಕು
ನೋಡಿ ಅವನ ಸಂಕಲ್ಪ ಎಷ್ಟು ವಿಚಿತ್ರ ವಾಗಿದೆ.
ಬ್ರಹ್ಮಚಾರಿಯಾದ ನನಗೆ ವೃಂದಾವನ ವ್ಯವಸ್ಥೆ ಆಗುವದು.
ಆ ವೃಂದಾವನ ಸನ್ನಿಧಿಯಲ್ಲಿ ತಾವು ಬಂದು ಶ್ರೀ ಮೂಲರಾಮನ ಸಂಸ್ಥಾನದ ಪೂಜೆಯನ್ನು ಮಾಡಬೇಕು.
ಆಗ ಮಾತ್ರ ಈ ಬಡವನನ್ನು ಮರೆಯಬೇಡಿ
ಎಂದು ಹೇಳುತ್ತಾರೆ.
ಕಾಲ ಕ್ರಮೇಣ ರಂಗಯ್ಯ ನವರಿಗೆ ೬೦ವರುಷಗಳು .
ಒಂದು ದಿನ ತಮ್ಮ ಶಿಷ್ಯ ನಾದ ಚನ್ನಯ್ಯ ನಿಗೆ ಕರೆದು ತಮಗಾಗಿ ಒಂದು ವೃಂದಾವನ ನಿರ್ಮಿಸಲು ಹೇಳುತ್ತಾರೆ. ಅಯ್ಯನವರ ಮಾತಿಗೆ ಶಿಷ್ಯ ಕಣ್ಣೀರು ಹಾಕುತ್ತಾ ನಾನು ಈ ವಿಯೋಗವನ್ನು ಭರಿಸಲಾರೆ ಅಂದಾಗ
ರಂಗಯ್ಯ ನವರು ಹೇಳುತ್ತಾರೆ.
ಚನ್ನಯ್ಯ !!ಹುಟ್ಟಿದ ಪ್ರತಿ ಜೀವಿ ಸಾಯಲೇಬೇಕು.ಆವ ಕಾಲ ತಪ್ಪಿಸಿದರು ಸಾವ ಕಾಲ ತಪ್ಪಿಸಲು ಸಾಧ್ಯವಿಲ್ಲ. ನಿಜವಾದ ಜ್ಞಾನಿಗಳು ಸಾವಿಗೆ ಭಯ ಪಡುವದಿಲ್ಲ ಅದಕ್ಕೆ ಸ್ವಾಗತವನ್ನು ಬಯಸುವನು.ಭಗವಂತನು ಹೊಸ ಅಂಗಿಯನ್ನು ಕರುಣಿಸುವಾಗ ಈ ಹಳೆಯ ಅಂಗಿಗೆ ವಿವೇಕ ಉಳ್ಳವರು ಚಿಂತಿಸುವದಿಲ್ಲ.
ಕಾಲನಾಮಕ ಭಗವಂತನ ಆಜ್ಞೆ ಯನ್ನು ಮೀರಲು  ರಮಾ ಬ್ರಹ್ಮಾದಿಗಳು,ದೇವತೆಗಳು ಹೀಗೆ ಯಾರಿಂದಲು ಸಹ  ಸಾಧ್ಯವಿಲ್ಲ.
ನಿನ್ನಲ್ಲಿ ಭಗವಂತನ ಅನುಗ್ರಹ ವಿದೆ.ಈ ಕಾರ್ಯವನ್ನು ಪೂರೈಕೆ ಮಾಡು ಅಂತ ಆಜ್ಞೆ ಮಾಡುತ್ತಾರೆ.
ಅಕ್ಷ ಯ ನಾಮ ಸಂವತ್ಸರ ವೈಶಾಖ ಬಹುಳ ದ್ವಾದಶಿಯಂದು ಲಯಚಿಂತನೆ ಮಾಡುತ್ತಾ ರಂಗನ ಪುರಕ್ಕೆ ರಂಗಯ್ಯ ನವರು ತಮ್ಮ ಪಾರ್ಥೀವ ದೇಹವನ್ನು ಬಿಟ್ಟು ತೆರಳುತ್ತಾರೆ
ನಂತರ ಅವರ ಶಿಷ್ಯ ನಾದ ಚೆನ್ನಯ್ಯನು ಗುರುಗಳ ವಾಣಿಯಂತೆ ವೃಂದಾವನ ಪ್ರವೇಶದ ಕಾರ್ಯಕ್ರಮ ಮಾಡಲು ಊರಿನವರಲ್ಲಿ ಕೇಳಲು
ಆ ಊರಿನ ಪ್ರಮುಖರು ಅವನ ಮಾತಿಗೆ ಬೆಲೆಕೊಡದೆ
ಬ್ರಹ್ಮಚಾರಿ ಗಳಿಗೆ ವೃಂದಾವನ ಪ್ರತಿಷ್ಠಿತ ಮಾಡುವದು ಶಾಸ್ತ್ರ ವಿರುದ್ದ.ಯತಿಗಳಿಗೆ ಮಾತ್ರ ವೃಂದಾವನ ಪ್ರತಿಷ್ಠಿತ ಮಾಡುವದು ಅಂತ ಹೇಳಿ ಅವರ ದೇಹವನ್ನು ಅಗ್ನಿ ಸಂಸ್ಕಾರ ಮಾಡುತ್ತಾರೆ.
ಆ ರಾತ್ರಿ ಯೇ ಅಯ್ಯನವರು ಎಲ್ಲ ರ ಕನಸಿನಲ್ಲಿ ಕಾಣಿಸಿಕೊಳ್ಳುವರು
ಹೀಗೆ ಹೇಳುತ್ತಾರೆ.
ನನ್ನ ದೇಹವನ್ನು ದಹನ ಮಾಡಬೇಡಿ ಅಂತ ಮೊದಲೇ ಹೇಳಿದ್ದರು ಸಹ ನೀವು ಅದರ ವಿರುದ್ಧ ವಾಗಿ ಮಾಡಿದ್ದೀರಿ.
ಆದರು ಚಿಂತೆಇಲ್ಲ.
ನನ್ನ ದೇಹ ದಹನವಾದರು ಸಹ ಆ ಚಿತಾ ಭಸ್ಮ ದಲ್ಲಿ ನನ್ನ ಕಿರುಬೆರಳು,ಕೌಪೀನ ತುಳಸಿಮಾಲೆಗಳು ಹಾಗೇಯೇ ಇವೆ.ತಂದು ವೃಂದಾವನ ದಲ್ಲಿ ಇಟ್ಟು ಪ್ರತಿಷ್ಠಿತ ಮಾಡಿರಿ ಅಂತ ಸೂಚಿಸಿದರು. ಎಲ್ಲರು ಭಯಭೀತರಾಗಿ ಸ್ಮಶಾನಕ್ಕೆ ಹೋಗಿ ನೋಡಿದಾಗ ರಂಗಯ್ಯ ನವರ ಚಿತಾಭಸ್ಮದ ಮಧ್ಯ ದಲ್ಲಿ ಅವರ ಕಿರುಬೆರಳು,ಕೌಪೀನ,ತುಲಸಿಮಾಲೆಗಳು ತೇಜಃ ಪುಂಜವಾಗಿ ಕಾಣಿಸಿದವು.
ತಕ್ಷಣ ತಂದು ವೃಂದಾವನ ದಲ್ಲಿ ಇಟ್ಟು ಪ್ರತಿಷ್ಠಿತ ಮಾಡಿದರು.
ಅಯ್ಯನವರು ಎಂದಿನಂತೆ ಮೊದಲಿನ ಹಾಗೇ ಇವಾಗಲು ಬಂದ ಭಕ್ತರಿಗೆ ಅಭಯಪ್ರದಾನ ಮಾಡುತ್ತಾ ಅಲ್ಲಿ ಸನ್ನಿಹಿತ ರಾಗಿದ್ದಾರೆ.
ಶ್ರೀ ವೀರ ರಘುಪತಿ ವಿಠ್ಠಲ ರು ಹೇಳಿದಂತೆ👇
ಕನಸಿನಲಿ ಬಂದು ಕಿರಿಬೆರಳು ಕೌಪೀನವು
ವಣಗದಿಹ ತುಲಸಿ ಮಾಲೆಯು ಉಳಿದಿವೆ
ಅನುಮಾನಿಸದೇ ಇವನು ತಂದು ವೃಂದಾವನದೊಳಿರಿಸೆ
ಘನ ಮಹತ್ತುಗಳನೆಲ್ಲ ತೋರಿಸುವೆನೆಂದು
🙏🙏
ಕಾಲ ಕ್ರಮೇಣ ಶ್ರೀ ವಸುಧೇಂದ್ರ ಗುರುಗಳು ಪೀಠವನ್ನು ಏರಿದಾಗ ಕುಂಭಕೋಣ ದಲ್ಲಿ ಶ್ರೀ ವಿಜಯೀಂದ್ರ ಗುರುಗಳ ಸನ್ನಿಧಿಯಲ್ಲಿ ಇರುತ್ತಾರೆ. ಅವರಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು
ಈ ಬಡವನನ್ನು ತಾವು ಪೀಠವನ್ನು ಏರಿದಾಗ ಮರೆಯಬೇಡಿ.ನಮ್ಮ ಸನ್ನಿಧಿಯಲ್ಲಿ  ಶ್ರೀ ಮೂಲರಾಮ ದೇವರ ಪೂಜೆ ಯನ್ನು ಮಾಡಬೇಕೆಂದು ಕೇಳಿಕೊಂಡರು.
ಗುರುಗಳು ತಕ್ಷಣ ಅಲ್ಲಿಂದ ಹೊರಟು ಅವರ ವೃಂದಾವನ ಸನ್ನಿಧಿ ಯಲ್ಲಿ ಸಂಸ್ಥಾನದ ಪೂಜೆ ಯನ್ನು ಮಾಡಿ ಭಕ್ತರಿಗೆ ಅವರ ಬಗ್ಗೆ ತಿಳಿಸಿಕೊಡುತ್ತಾರೆ.
🙏🙏
ಇಂತಹ ಅನೇಕ ಜ್ಞಾನಿಗಳು ನಮ್ಮ ಮಧ್ವಮತದ ಪರಂಪರೆಯಲ್ಲಿ ಬಂದು  ಯತಿಗಳಾಗಿ ಹರಿದಾಸರಾಗಿ ಬಂದು ಹೋಗಿದ್ದಾರೆ.
ನಿತ್ಯ ಇಂತಹ  ಪರಮ ಭಾಗವತರ ಸ್ಮರಣೆ, ವರ್ಣನೆ ಇಂದ ನಮ್ಮ ಅಂತಃಕರಣವು ಶುದ್ದವಾಗಿ ಭಗವಂತನ ಅನುಗ್ರಹ ಲಭಿಸುವದು
ಮುಂದೆ ಇವರೇ ಇಭರಾಮಪುರ ಅಪ್ಪಾವರು ಆಗಿ ಅವತಾರ ಮಾಡಿ ಅನೇಕ ಭಕ್ತರ ಉದ್ದಾರ ಮಾಡಿದ್ದಾರೆ.
🙏🙏
ಶ್ರೀ ಕೌತಾಳಂ ರಂಗಯ್ಯ ಗುರುಭ್ಯೋ ನಮಃ
ಶ್ರೀ ಕೃಷ್ಣಾರ್ಪಣ ಮಸ್ತು
🙏ಅ.ವಿಜಯವಿಠ್ಠಲ🙏
**********

ಕೌತಾಳಂ ರಂಗಯ್ಯ ತಾತನವರು ಮತ್ತು ನಮ್ಮ ಶ್ರೀ ಇಭರಾಮಪುರ ಅಪ್ಪಾವರು
ಇವರಿಬ್ಬರಿರು ಭಗವಂತನ ಕೃಪೆಯಿಂದ ತೋರಿದ ಕೆಲ ಸಾಮ್ಯತೆ ಇರುವ ಮಹಿಮೆಗಳು...
👏👏
೧)ಕೌತಾಳಂ ರಂಗಯ್ಯ ತಾತನವರು  ಬರಗಾಲ ಪೀಡಿತ ಕರ್ನೂಲು ನಲ್ಲಿ ಮಳೆ ತರಿಸಿದರೆ 
ನಮ್ಮ ಇಭರಾಮಪುರ ಅಪ್ಪಾವರು  ಬರಗಾಲ ಪ್ರದೇಶವಾದ ಗದ್ವಾಲ್ನಲ್ಲಿ ಮತ್ತು ಮಳೆ ಇಲ್ಲದೇ ಇದ್ದ ಇಭರಾಮಪುರ ದಲ್ಲಿ ಸಹ ಭಕ್ತರ ಅಪೇಕ್ಷಿತ ಮೇರೆಗೆ ಮಳೆಯನ್ನು ತರಿಸಿದರು.

೨)ಶ್ರೀ ರಂಗಯ್ಯ ತಾತನವರು ತಮ್ಮ ತಾಯಿಗೆ ಮನೆಯ ಮಾಳಿಗೆಯ ಮೇಲೆ ತಿರುಪತಿಯ ಶ್ರೀನಿವಾಸನ ದರ್ಶನ ಮಾಡಿಸಿದರು.
 ನಮ್ಮಶ್ರೀ ಅಪ್ಪಾವರು ತಮ್ಮ ಸೇವಕನ ಪತ್ನಿಯು ಹಂಪಿಯ ಜಾತ್ರೆಗೆ ಮಗನನ್ನು ಬಿಟ್ಟು ಹೋಗಲು ಮಗುವಿನ ಅಳು ನೋಡಲಾರದೆ ಆ ಮಗುವಿಗೆ ತಮ್ಮ ಮನೆಯ ಮಾಳಿಗೆಮೇಲೆ ಹಂಪಿಯ ಶ್ರೀ ವಿರೂಪಾಕ್ಷ ದೇವರ ದರ್ಶನ, ರಥೋತ್ಸವ ಮತ್ತು ಅವನ ತಾಯಿಯನ್ನು ತೋರಿಸಿದರು.

೩)ಶ್ರೀ ರಂಗಯ್ಯ ತಾತನವರಿಗೆ ಚೆನ್ನ ಕೇಶವ ದೇವರು ಸ್ವಪ್ನದಲ್ಲಿ ಬಂದು ತಾನಿರುವ ಸ್ಥಳವನ್ನು ಹೇಳಿ ಅವರಿಗೆ ಒಲಿದು ಬಂದು ಕೌತಾಳಂ ನಲ್ಲಿ ಪ್ರತಿಷ್ಠಿತ ಗೊಂಡನು.
 ನಮ್ಮ ಶ್ರೀ ಅಪ್ಪಾವರಿಗೆ ಶ್ರೀ ಮುಖ್ಯ ಪ್ರಾಣದೇವರ ಸೂಚನೆಯಂತೆ  ಮೈಸೂರು ಅರಮನೆಯಲ್ಲಿ ವಿಶ್ವಕರ್ಮ ನಿರ್ಮಿತ,ಪಾಂಡವರು ವಿಶೇಷವಾಗಿ ಅರ್ಜುನ ಕರಾರ್ಚಿತ ಪಂಚಮುಖಿ ಪ್ರಾಣದೇವರ ಮೂರ್ತಿಪ್ರಾಪ್ತಿ..

ಹೀಗೆ ಇನ್ನೂ ಅನೇಕ.. ಮಹಿಮೆಯನ್ನು ಭಗವಂತನ ಅನುಗ್ರಹ ದಿಂದ ಇವರಿಬ್ಬರು ತೋರಿಸಿದ್ದಾರೆ.
ನಾಳೆ ಉಳಿದ ಭಾಗ..
🙏ಶ್ರೀ ಕೃಷ್ಣಾರ್ಪಣಮಸ್ತು🙏
ಪರಮ ಭಾಗವತರನು| ಕೊಂಡಾಡುವದು ಪ್ರತಿದಿನವೂ|
🙏ಅ.ವಿಜಯವಿಠ್ಠಲ🙏
*******

ರಂಗಯ್ಯನ ನೋಡಿರೈ| ಕೌತಾಳದ ಶ್ರೀ ರಂಗಯ್ಯನ ಪಾಡಿರೈ|
ನಂಬಿ ಭಜಿಸುವರ ಇಷ್ಟ| ಅನುಗಾಲ ಬಿಡದೇ|
ತುಂಬಿಕೊಡುವ ಸತ್ಯ ನಿಷ್ಟ|
🙏ಹರಿದಿನದ ನಮನಗಳು🙏
ನವರಾತ್ರಿಯ ಸಮಯ...
ಎಲ್ಲಾರ ಮನೆ ಮತ್ತು ಮನಗಳಲ್ಲಿ ಜಗತ್ತಿನ ತಂದೆಯಾದ ಶ್ರೀನಿವಾಸನ ಕಲ್ಯಾಣದ ಸಡಗರ ಸಂಭ್ರಮ.
"ಒಲಿದು ಭಕುತರಿಗಾಗಿ ಮದುವೆ ಹವಣಿಸಿಕೊಂಡ| ಸುಲಭ ದೇವರ ದೇವ ವಿಜಯವಿಠ್ಠಲ ವೆಂಕಟನ| ಚರಿತ್ರೆ.."" 
ಎಲ್ಲಾ ಭಕ್ತರ ಮನೆಯಲ್ಲಿ ಪಾರಾಯಣ,ಶ್ರವಣ ಬಹು ಸಂಭ್ರಮದಿಂದ ನಡೆದಿದೆ.
ಶ್ರೀರಂಗಯ್ಯನವರ ತಾಯಿ ಲಕ್ಷ್ಮಮ್ಮ ನವರಿಗೆ ದೇವಗಿರಿಯಾದ,ಭೂವೈಕುಂಠವಾದ, ಸಪ್ತಪರ್ವತಗಳ ,ಒಡೆಯನಾದ ಪದುಮಾವತಿಯ ಪ್ರಾಣಪ್ರಿಯನಾದ ಶ್ರೀನಿವಾಸನ ದರುಶನ ಮಾಡಬೇಕೆಂದು ಬಹು ಅಪೇಕ್ಷೆ ಆಯಿತು.
ಪುಣ್ಯ ಚರಿತನಾದ, ಶ್ರೀನಿವಾಸನ ಭಕ್ತನಾದ ತನ್ನ ಮಗನನ್ನು ಕುರಿತು 
"ಮಗು.. ರಂಗ! ನನ್ನ ತಿರುಪತಿ ಗೆ ಕರೆದುಕೊಂಡು ಹೋಗುವಿಯಾ!!ಆ ಸ್ವಾಮಿಯ ಬ್ರಹ್ಮೋತ್ಸವ ನೋಡಬೇಕು ಎನ್ನುವ ಆಸೆ ಬಹಳವಾಗಿದೆ.ಕರೆದು ಕೊಂಡು ಹೋಗುವಿಯಾ?? ಎಂದಳು.
ಅದಕ್ಕೆ ರಂಗಯ್ಯ ನವರು
ಅಮ್ಮ!! ಎಲ್ಲಿ ನೋಡಲು ಅಲ್ಲಿ ವ್ಯಾಪ್ತನಾಗಿರುವ,ಕರೆದಲ್ಲಿಗೆ ಬರುವ ಕಡು ಕರುಣಾನಿಧಿ, ಆದ ಆ ಸ್ವಾಮಿಯ ವೈಭವವನ್ನು ಎಲ್ಲಾ ಕಡೆ ಕಾಣಬಹುದು...
ಸಾಧನ ಶರೀರವಿದು. ಸಾಧಾರಣ ವಲ್ಲವು.. ಅಂತಹ ಈ ಶರೀರಕ್ಕೆ ಜನ್ಮವಿತ್ತ ನಿನ್ನ ಆಪೇಕ್ಷೆಯನ್ನು ಪೂರೈಸುವದು ನನ್ನ ಕರ್ತವ್ಯ. ಅದನ್ನು ತಪ್ಪದೇ ನಡೆಸಿಕೊಡುವೆನು ಅಂತ ಹೇಳುತ್ತಾರೆ...
ತಕ್ಷಣ 
ತಮ್ಮ ತಾಯಿಯನ್ನು ತಮ್ಮ ಮನೆಯ ಮಾಳಿಗೆಗೆ ಕರೆದೊಯ್ದರು.
ತಿರುಮಲೆಯ ದಿಕ್ಕಿನ ಕಡೆ ಕೈ ತೋರಿಸುತ್ತಾ
"ಅಮ್ಮಾ !!
ಅದೋ ನೋಡು.. ಬ್ರಹ್ಮಾಂಡದ ಒಡೆಯನಾದ,ಬ್ರಹ್ಮನ ಪಿತನಾದ ಆ ಶ್ರೀನಿವಾಸನ ಬ್ರಹ್ಮೋತ್ಸವ ದ ವೈಭವವನ್ನು... 
ಬಂಗಾರದ ಶಿಖರದಿಂದ ಒಪ್ಪುವ ಆ ಸ್ವಾಮಿಯ ಮಂದಿರ ನೋಡು... ಆನಂದಾದ್ರಿಯಲ್ಲಿ ಇಂದಿರೆಯನ್ನು ತನ್ನ ಎದೆಯಲ್ಲಿ ಧರಿಸಿ ನಗುಮುಖದಿಂದ ನಿಂತ ಆ  ಶ್ರೀನಿವಾಸನ ನೋಡು..ಅಂತ   ಸಪ್ತಗಿರಿಯ ಒಡೆಯನ ದರ್ಶನವನ್ನು ತಾಯಿಗೆ ಮಾಡಿಸಿದರು... 
ನಂತರ ದೇವ ಬೀದಿಯ ನಾಲ್ಕು ಕಡೆ ಗರುಡವಾಹನನಾಗಿ ತನ್ನ ಮಡದಿಯರ ಕೂಡ ಸಡಗರದಿಂದ ಸಂಚರಿಸುವ  ಆ ಸ್ವಾಮಿಯ ವೈಭವವನ್ನು ಮತ್ತು ಉತ್ಸವ ಮೂರ್ತಿಯನ್ನು  ತಾಯಿಗೆ ದರುಶನ ಮಾಡಿಸಿದರು.. ..
ಆ ಸ್ವಾಮಿಯ ಮುಂದೆ ಭಕ್ತರ ಭಜನೆ, ನರ್ತನೆ, ಅದರ ಮುಂದೆ ನಿಧಾನವಾಗಿ ಸಾಗುವ ಗಜ,ಅಶ್ವ ಗಳನ್ನು ಮತ್ತು ಹರಿದಾಸರ ಭಕ್ತರ ವೃಂದವನ್ನು ನೇರವಾಗಿ ಬಹು ಹತ್ತಿರ ದಿಂದ ಕಂಡಳು... ..
ಆನಂದದಿಂದ ಕಣ್ಣು ಗಳಲ್ಲಿ ನೀರನ್ನು ಸುರಿಸುತ್ತಾ "ಗೋವಿಂದಾ!! ಗೋವಿಂದ!!"🙏 ಎಂದು  ಮುಕ್ತ ಕಂಠದಿಂದ ಕೂಗಿದಳು..
ಆ ತಾಯಿಗೆ ಕಾಲದ ಪರಿವೆಯೆ ಇಲ್ಲ.
ಸಂಪೂರ್ಣ ಬ್ರಹ್ಮೋತ್ಸವ ದ ದರುಶನ ವಾದ ಮೇಲೆ " "ಮಗು!!ರಂಗಯ್ಯ ನಿನ್ನನ್ನು ಮಗನಾಗಿ ಪಡೆದ ನನ್ನ ಜನುಮ ಧನ್ಯವಾಯಿತು" ಎಂದಳು...
ಯಾವುದೇ ಟಿವಿ ಇಲ್ಲದ ಕಾಲ.
ಭಗವಂತನ  ಬ್ರಹ್ಮೋತ್ಸವದ ದರುಶನ ವನ್ನು ತಮ್ಮ ತಾಯಿಗೆ ನೇರವಾಗಿ ಮಾಡಿಸಿದ ಆ ಮಹಾನುಭಾವರ   ಸ್ಮರಣೆ.. ಉದಯಕಾಲದಲ್ಲಿ ಮಾಡಿದರೆ ನಮ್ಮ ಈ ಜೀವನ ಧನ್ಯ..!!....
ಇಂತಹ ಪರಮ ಭಾಗವತರು ಅನೇಕ ಜನ..  ಭಗವಂತನ ಅಪ್ಪಣೆಯಂತೆ ಧರೆಯೊಳು ಅವತಾರ ಮಾಡಿದ್ದಾರೆ....
ಭಗವಂತನಿಂದ ದೂರವಾಗಿ, ಅಧರ್ಮ ನಿರತರಾಗಿ, ಸಂಸಾರ ದುಃಖ ದಿಂದ ನೊಂದು, ಬೆಂದ ಜನರನ್ನು ಉದ್ದಾರ ಮಾಡಲಿಕ್ಕೆ ಆಗಿಯೇ ಇಂತಹ ಅನೇಕ ಭಗವದ್ಭಕ್ತರ ಅವತಾರ ಮತ್ತು ಸಂಚಾರ ಎಲ್ಲಾ ಕಡೆ...
ಇಂತಹ ಅನೇಕ 
ಪರಮ ಭಾಗವತರನ್ನು ಕೊಂಡಾಡುವದು ಪ್ರತಿದಿನವು....
🙏ಶ್ರೀ ಕೃಷ್ಣಾರ್ಪಣಮಸ್ತು🙏
ಮಂಗಳ ಶುಭಾಂಗನೆ ರಂಗಯ್ಯನೇ|
ತುಂಗ ಮಹಿಮೋದ್ದಾರ ಮಹರಾಯನೇ|
🙏ಶ್ರೀ ರಂಗಯ್ಯ ತಾತನವರ ಪಾದಕಮಲಕ್ಕೆ ನಮೋ ನಮಃ🙏
**********

ನಂಬಿ ಭಜಿಸುವರಿಷ್ಟ| ಅನುಗಾಲ ಬಿಡದೇ| ತುಂಬಿಕೊಡುವ ಸತ್ಯನಿಷ್ಟ.|
ರಂಗಯ್ಯನ ನೋಡಿರೈ|
ಕೌತಾಳದ ಶ್ರೀ ರಂಗಯ್ಯನ ಪಾಡಿರೈ|
🙏🙏
ಇಂದು ಅವರ ಉತ್ತರಾರಾಧನ.ಅವರ ಮಹಿಮೆಯನ್ನು ತಿಳಿಸುವ ಪ್ರಯತ್ನ
ಇವಾಗ ಕೆಲ ವರುಷಗಳ ಹಿಂದೆ ನಡೆದ ಘಟನೆ.
ಕೌತಾಳಂ ನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಾ ಇದ್ದ ಹೇಮಣ್ಣ ಅವರ ಅನುಭವವನ್ನು ಅವರ ಮಾತಿನಂತೆ ಇಲ್ಲಿ ಬರೆದು ಹಾಕಿದ್ದೇನೆ..
ದಿನಾಂಕ 23/12/98.
ಆ ದಿನ ಹೇಮಣ್ಣ ಅವರು ಶಾಲೆ ಗೆ ಹೋಗಬೇಕು ಎಂದು ಬಸ್ಟಾಂಡಗೆ ಬಂದು ನಿಂತಿದ್ದಾರೆ.ಬಸ್ ಬಂದಿಲ್ಲ. ಬಹಳ ಹೊತ್ತು ಆಯಿತು.
ಸರಿ ಇನ್ನೂ ಮನೆಗೆ ಹೋದರೆ ಆಯಿತು ಎಂದು ಕೊಂಡು ಹೋಗುವ ಮುಂಚೆ ಶ್ರೀ ರಂಗಯ್ಯನವರ ಗುಡಿಯಪಕ್ಕದಲ್ಲಿ ಇದ್ದ ಅರ್ಚಕರು ಮತ್ತು ಅವರ ಮನೆತನದ ವರ ಮನೆಗೆ ಹೋಗಿ ದ್ದಾರೆ.ಮಾತನಾಡುತ್ತಾ ಕುಳಿತಿದ್ದಾರೆ.
ಸಮಯ ಮಧ್ಯಾಹ್ನ  1.00pm ಆಗಿದೆ.
ಇತ್ತ ಶ್ರೀ ರಂಗಯ್ಯನವರ ಗುಡಿಯಲ್ಲಿ ಹೊರಗಡೆ ಅವರ ಮಗ ಮತ್ತು ಅವನ ಸ್ನೇಹಿತರು ಚೆಂಡಾಟವನ್ನು ಆಡುತ್ತಾ ಇದ್ದಾರೆ. ಚೆಂಡು ಅಲ್ಲಿ ಗುಡಿಯ ಒಳಗೆ ಇರುವ ಬಾವಿಯಲ್ಲಿ ಬಿದ್ದಿದೆ. ಇವರ ಮಗನಿಗೆ ಮತ್ತು ಉಳಿದವರಿಗೆ ಸಹ ಈಜು ಬರದು.ಆ ಹುಡುಗ ಹೋಗಿ ತೆಗೆದುಕೊಂಡು ಬರುತ್ತೇನೆ ಎಂದು ಬಾವಿಯ ಒಳಗೆ ಮೆಟ್ಟಿಲು ತರಹ ಇರುವ ಸಣ್ಣ ಕಲ್ಲುಗಳನ್ನು ಉಪಯೋಗಿಸಿ ಇಳಿದಿದ್ದಾನೆ.ಚೆಂಡು ತೆಗೆದು ಕೊಳ್ಳಲು ಹೋದಾಗ ಆಯ ತಪ್ಪಿ ಬಾವಿಯಲ್ಲಿ ಬಿದ್ದಾಗ ಮಕ್ಕಳೆಲ್ಲ ಜೋರಾಗಿ ಕೂಗಿದ್ದಾರೆ.
ಇವನಿಗೆ ಈಜು ಬರದು.ಬಾವಿಯಲ್ಲಿ ಮುಳುಗಿದ್ದಾನೆ.
ಸಮಯ 1.10pm ಆಗಿದೆ.ಆ ಮೇಲೆ ಮಕ್ಕಳ ಗಲಾಟೆ ನೋಡಿ ಯಾರೋ ಒಬ್ಬರು ಬಂದಿದ್ದಾರೆ.ಅವರು ಸಹ ಬಾವಿಯಲ್ಲಿ ಇಳಿಯಲಿಲ್ಲ.
ನಂತರ ಮಕ್ಕಳು ಅರ್ಚಕರ ಮನೆಗೆ ಬಂದು ನಡೆದ ವಿಷಯ ಹೇಳಿದಾಗ ಎಲ್ಲಾ ಅಲ್ಲಿ ಹೋಗಿ ನೋಡಲು ಮಗು ಕಾಣುತ್ತಾ ಇಲ್ಲ. ತಕ್ಷಣ ಅವರು ತಮ್ಮ ಮಗನಿಗೆ ಕರೆತರಲು ಬಾವಿಯಲ್ಲಿ ಇಳಿದು ಹುಡುಕಾಟ ಮಾಡಲಾಗಿ ಆ ಹುಡುಗ ಸಿಕ್ಕಿದ್ದಾನೆ.
ಉಸಿರಾಟ ಇಲ್ಲ. ಕಣ್ಣು ,ಕಿವಿ, ಮೂಗು, ತಲೆಯ ತುಂಬ ಬಾವಿಯ ಹೊಂಡು ಸೇರಿಕೊಂಡಿದೆ.
ಅಲ್ಲಿ ಗೆ ಹುಡುಗ ಬಾವಿಯಲ್ಲಿ ಬಿದ್ದು 27ನಿಮಿಷ ಆಗಿದೆ.
ತಕ್ಷಣ ಮೇಲೆ ಎತ್ತಿ ಶ್ರೀ ರಂಗಯ್ಯನವರ ಮುಂದೆ ಇರುವ ಗುಡಿಯ ಹೊರಗಡೆ ಪ್ರಾಕಾರದಲ್ಲಿ ಮಗುವನ್ನು ಮಲಗಿಸಿದ್ದಾರೆ.ಹುಡುಗನ ದೇಹದಲ್ಲಿ ಉಸಿರಾಟ ಚಲನೆ ಏನು ಇಲ್ಲ.
ಅವರಿಗೆ ದಾರಿ ತೋರದೆ ಶ್ರೀ ರಂಗಯ್ಯನವರಿಗೆ ಪ್ರಾರ್ಥನೆ ಮಾಡಿಕೊಂಡು  ಜೋರಾಗಿ ಗಂಟೆಯನ್ನು ಹೊಡೆದು ಅಲ್ಲಿ ಇದ್ದ  ಆಧಾರ ಅದನ್ನು ಹಚ್ಚಿ,ತಾತನವರ ತೀರ್ಥ ವನ್ನು ಮಗುವಿಗೆ ಪ್ರೋಕ್ಷಣೆ ಮಾಡಲಾಗಿ ಚಲನೆ ಇಲ್ಲದ
ಆ ಹುಡುಗ ಒಮ್ಮೆ ಜೋರಾಗಿ ಹಾ!!ಎಂದು ಕೂಗಿದ...
ಆ ಮಗುವಿಗೆ ಬಂದಿದ್ದ ಅಪಮೃತ್ಯುವನ್ನು ಶ್ರೀರಂಗಯ್ಯ ತಾತನವರು ಕಳೆದರು.
ಅವರ ನಂಬಿಕೆ ದೊಡ್ಡದು.
ಆ ಸಮಯದಲ್ಲಿ ನೂರಾರು ಜನ ಸೇರಿದ್ದು ಅವರೆಲ್ಲರೂ ಶ್ರೀ ರಂಗಯ್ಯನವರ ಮಹಿಮೆಯ ಈ ದೃಶ್ಯಕ್ಕೆ ಸಾಕ್ಷಿ. ಇವಾಗಲು ಹೇಮಣ್ಣ ಮಾಸ್ತರ್ ಸಹ ಇದ್ದಾರೆ.
ತಕ್ಷಣ ಅವನಿಗೆ ಆಸ್ಪತ್ರೆ ಕರೆದುಕೊಂಡು ಹೋಗಿ ಮುಂದಿನ ಚಿಕಿತ್ಸೆ ನೀಡಲು ಆ ಹುಡುಗ ಹುಷಾರಾದ.
ಇಂದು ಆ ಹುಡುಗ ಕೃಷಿ ಇಲಾಖೆ ಯಲ್ಲಿ ಉನ್ನತ ಅಧಿಕಾರ ದಲ್ಲಿ ಇದ್ದಾನೆ.
ಅವರು ಹೇಳುತ್ತಾರೆ.
"ಸ್ವಾಮಿ! ನಾವೇನು ನಿಮ್ಮ ಹಾಗೇ ಪೂಜೆ ಮಂತ್ರ ನಮಗೆ ಬರದು.ಬರಿ ಗುಡಿಯ ಕಸ ಹೊಡೆಯುವದು ಮತ್ತು ಅಲ್ಲಿ ಬೆಳೆಸಿದ ತುಲಸಿ ವನಕ್ಕೆ ನೀರು ಹಾಕುವದು. ಗುಡಿಗೆ ಬೇಕಾದ ಸಣ್ಣಪುಟ್ಟ ರಿಪೇರಿ ಕೆಲಸ ಇಷ್ಟೇ ಮಾಡುವದು."
ಇದೇ ನಮ್ಮ ಸೇವೆ.
ಇಷ್ಟು ಮಾಡಿದ್ದಕ್ಕಾಗಿ ತಾತ ನಮ್ಮ ಮಗನ ಪ್ರಾಣ ಉಳಿಸಿ ಕೊಟ್ಟ ಅಂತ ಶ್ರೀ ರಂಗಯ್ಯನವರ ಮಹಿಮೆಯನ್ನು ಕೊಂಡಾಡುತ್ತಾರೆ.

ವಿಶ್ವಾಸೊ ಫಲದಾಯಕ..
ಅವರ ನಿರ್ಮಲ ಭಕ್ತಿಗೆ ಶ್ರೀ ರಂಗಯ್ಯನವರು ಒಲಿದರು.
ಇಂದಿಗೂ ಅಲ್ಲಿ  ಭಕ್ತಿಯಿಂದ ನಡೆದುಕೊಂಡು ವರ ಪಡೆದವರು ಅಸಂಖ್ಯಾತ ಜನ.
ಶ್ರೀ ಹರಿ ವಾಯು ಗುರುಗಳಲ್ಲಿ ಭಕ್ತಿ ಮಾಡಿದಾಗ ನಮಗೆ ಬಂದಂತಹ ಆಪತ್ತು ಹೇಗೆ ನಿವಾರಣೆ ಮಾಡುತ್ತಾರೆ ಎನ್ನುವುದಕ್ಕೆ  ಮತ್ತು ಶ್ರೀ ರಂಗಯ್ಯ ತಾತನವರು ಇಂದಿಗು ಅಲ್ಲಿ ಇದ್ದಾರೆ ಎನ್ನುವದಕ್ಕೆ ಈ ಘಟನೆ ಸಾಕ್ಷಿ.
ಇಂತಹ ಗುರುಗಳ ಪಾದಕ್ಕೆ ನಮಿಸುತ್ತಾ
ನಮಗೆ ಸಹ ಅವರ ಅನುಗ್ರಹ ವಾಗಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತಾ..
🙏ಶ್ರೀ ಕೃಷ್ಣಾರ್ಪಣಮಸ್ತು🙏
ನಿನ್ನಲ್ಲಿ ಭಕುತಿಯೂ ನಿನ್ನವರ ಸಹವಾಸ|
ಚೆನ್ನಕೇಶವನಂಘ್ರಿ ಧ್ಯಾನ ಸತತಾ|
ಚೆನ್ನಾಗಿ ನೀನಿತ್ತು ಎನ್ನ ಧನ್ಯನ ಮಾಡೋ|
ಅನ್ನಯನಲ್ಲವೋ ನಿನ್ನ ಭಕುತನಿಹೆನೋ|
ಮಂಗಳ ಶುಭಾಂಗ ರಂಗಯ್ಯ ನೇ|
ತುಂಗ ಮಹಿಮೊದ್ದಾರ ಮಹರಾಯನೇ|
🙏ಶ್ರೀ ರಂಗಯ್ಯಗುರುಭ್ಯೋ ನಮಃ🙏
*********


" ಶ್ರೀ ರಂಗಯ್ಯ - 1 "
" ಶ್ರೀ ರಾಯರ - ಶ್ರೀ ಶ್ರೀನಿವಾಸನ ಅಂತರಂಗ ಭಕ್ತರು ಕೌತಾಳದ ಶ್ರೀ ರಂಗಯ್ಯನವರು " 
" ದಿನಾಂಕ : 07.06.2021 ಸೋಮವಾರ - ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಬಹುಳ ದ್ವಾದಶೀ -  ಶ್ರೀ ರಂಗಯ್ಯನವರ ಆರಾಧನಾ ಮಹೋತ್ಸವ, ಕೌತಾಳ " 
ಹೆಸರು : ಶ್ರೀ ರಂಗ 
ತಂದೆ : ಶ್ರೀ ಅಂಬಣ್ಣ ಭಟ್ಟರು 
ತಾಯಿ : ಸಾಧ್ವೀ ಲಕ್ಷ್ಮಮ್ಮ 
ಜನ್ಮ ಸ್ಥಳ : ಕೌತಾಳ ( ಕರ್ನೂಲು ಜಿಲ್ಲೆ ) 
ಅಂಶ : ಶ್ರೀ ಕೇಸರಿ 
( ಶ್ರೀ ಹನುಮಂತದೇವರ ತಂದೆಯಾದ ಶ್ರೀ ಕೇಸರಿಯ ಅವತಾರ ) 
ಅವತಾರ ಕಾಲ : ಕ್ರಿ ಶ 1687 ( ಪ್ರಭವ ನಾಮ ಸಂವತ್ಸರ )
" ಶ್ರೀ ಶ್ರೀನಿವಾಸನ ಪರಮಾನುಗ್ರಹ " 
ಶ್ರೀ ರಘುಪತಿ ವಿಠಲಾಂಕಿತ ಪರಮ ವೈರಾಗ್ಯಶಾಲಿ ತಮ್ಮಣ್ಣ ದಾಸರು... 
ಜನನವು ಕವಿತಾಳ ಜೋಯಿಸರ ವಂಶದಲಿ । ನ ।
ಸು ನಗುತ ಕೂಸಾಗಿ ಐದನೇ ವರ್ಷದಿ ।
ಸನು ಮತದಿ ತೋವೆಂಬ ಗ್ರಾಮಕ್ಕೆ ತೆರಳುತಾ ।
ಮನುಮಥನ ಪಿತ ಮಾರ್ಗ ಮಧ್ಯದಲ್ಲಿ ।। 
ಶ್ರೀ ರಂಗನವರ ಸಾಧನೆ ಪಕ್ವ ದಶೆಗೆ ಬಂದಿತ್ತು. 
ಶ್ರೀ ಹರಿಯ ಅನುಗ್ರಹ ಪ್ರಾಪ್ತಿ ಸಮಯವೂ ಆಸನ್ನವಾಯಿತು. 
ಒಮ್ಮೆ ಶ್ರೀ ರಂಗನವರು ತಂದೆ ತಾಯಿಗಳಿಗೆ ಹೇಳದೆ " ತೋವಿ " ಎಂಬ ಗ್ರಾಮಕ್ಕೆ ಹೊರಟನು. 
ಆ ಗ್ರಾಮ ಕೌತಾಳದಿಂದ 6 ಮೈಲಿಗಳ ದೂರದಲ್ಲಿದೆ. 
ಭಗವತ್ಚಿಂತನೆಯಲ್ಲಿ ನಡೆಯುತ್ತಿರುವ ಶ್ರೀ ರಂಗನಿಗೆ ಹಿಂದಿನಿಂದ ಗೆಜ್ಜೆಗಳ ಶಬ್ದ ಕೇಳಿ ಬಂತು. 
ಹಿಂತಿರುಗಿ ನೋಡಲು ಯಾರೂ ಕಾಣಲಿಲ್ಲ. 
ಶ್ರೀ ರಂಗನು ಪುನಃ ಮುಂದೆ ಸಾಗಿದರು. 
ಹಿಂದಿನಂತೆ ಕಾಲಿಗೆ ಗೆಜ್ಜೆ ಕಟ್ಟಿ ಯಾರೋ ನಡೆದು ಬರುವಂತೆ ಭಾಸವಾಯಿತು. 
ಬಾಲಕ ಶ್ರೀ ರಂಗನ ಭಕ್ತಿಗೆ ಮೆಚ್ಚಿದ ಶ್ರೀ ಹರಿಯು ಅವರ ಹಿಂದೆ ನಡೆದನು. 
ಅದೇ ಸಮಯಕ್ಕೆ ಶ್ರೀ ರಂಗನಿಗೆ ನೀರಡಿಕೆ ಆಯಿತು. 
ಶ್ರೀ ರಂಗನು ಹಳ್ಳದಲ್ಲಿಳಿದು ನೀರಿಗಾಗಿ ಚಿಲುಮೆ ತೋಡಿದರು. 
ಶ್ರೀ ರಂಗನ ಪರೀಕ್ಷೆಗಾಗಿ ಶ್ರೀ ಶ್ರೀನಿವಾಸನು ಶೂದ್ರನ ವೇಷದಲ್ಲಿ ಬಂದು ಚಿಲುಮೆಯನ್ನು ಕೆಡಸಿದನು. 
ಭಕ್ತರೊಡನೆ ಆಡುವುದು ಭಗವಂತನಿಗೆ ಎಲ್ಲಿಲ್ಲದ ಆನಂದ. 
ಶ್ರೀ ರಂಗನು ಭಗವಂತನ ಮಾಯೆಗೆ ಒಳಗಾದರು. 
ಕಣ್ಣು ಮುಂದೆ ಬಂದು ನಿಂತ ಆತ್ಮ ಬಂಧುವನ್ನು ಅರಿಯದಾದರು. 
ಶ್ರೀ ರಂಗನು ಚಿಲುಮೆಯನ್ನು ತೊಡುವುದು, ಶ್ರೀ ಹರಿ ಚಿಲುಮೆಯನ್ನು ಕೆಡಿಸುವುದು.
ಭಕ್ತ - ಭಗವಂತನ ಮಧ್ಯೆ ಬಹಳ ಹೊತ್ತು ಈ ರೀತಿ ವ್ಯಾಪಾರ ನಡೆಯಿತು. 
ಕೊನೆಗೆ ಶ್ರೀ ರಂಗನು ತಡೆಯಲಾರದೆ ಶ್ರೀ ರಂಗನು.... 
ಏನಯ್ಯಾ! ಈ ನಿನ್ನ ಕೆಲಸ? ಎಂದನು. 
ಆಗ ಕಪಟ ನಾಟಕ ಸೂತ್ರಧಾರಿ ಶ್ರೀ ಶ್ರೀನಿವಾಸನು ಮುಗುಳ್ನಗೆ ನಕ್ಕು... 
ರಂಗಾ! ನಿನಗಾಗಿರುವ ಬಾಯಾರಿಕೆ ಆಧ್ಯಾತ್ಮಿಕ ಬಾಯಾರಿಕೆ. 
ಆ ಬಾಯಾರಿಕೆ ಹಿಂಗಲು ಅಧ್ಯಾತ್ಮ ಜ್ಞಾನದ ನೀರು ಬೇಕು ಎಂದನು. 
ಈ ಮಾತುಗಳಿಂದ ಶ್ರೀ ರಂಗನ ಅಂತರಂಗ ದೃಷ್ಟಿಯು ತೆರೆಯಿತು. 
ತಮ್ಮೆದುರಿನಲ್ಲಿ ನಿಂತ ಲಕುಮೀ ನಲ್ಲನ ಅರಿವು ಶ್ರೀ ರಂಗನಿಗೆ ಆಯಿತು. 
ಆನಂದ ಭಾಷ್ಪಗಳು ಧಾರಾಕಾರವಾಗಿ ಸುರಿದವು. 
ಕಂಠವು ಗದ್ಗದಿತವಾಯಿತು. 
ಆಗ ಶ್ರೀ ರಂಗನು.... 
ಪ್ರಭೋ ದೀನಬಂಧೋ! 
ತೊಂಡರಿಗೆ ತೊಂಡನೆನಿಸುವ ಕಡು ಕರುಣಾಮಯೀ.
ಜಗನ್ನಾಥಾ! ನನ್ನನ್ನು ಉದ್ಧರಿಸಲು ಬಂದೆಯಾ? 
ಎಂದು ದೀರ್ಘ ದಂಡ ಪ್ರಣಾಮಗಳು ಮಾಡಿದರು. 
ಪರಾತ್ಪರನು ಶ್ರೀ ಶ್ರೀನಿವಾಸನ ರೂಪದಲ್ಲಿ ಶ್ರೀ ರಂಗನಿಗೆ ಕಾಣಿಸಿಕೊಂಡನು. 
ತನ್ನ ಅಮೃತ ಹಸ್ತಗಳನ್ನು ಬಾಲಕ ಶ್ರೀ ರಂಗನ ತಲೆಯ ಮೇಲಿರಿಸಿ - ನಾಲಿಗೆಯ ಮೇಲೆ ಬೀಜಾಕ್ಷರವನ್ನು ಬರೆದನು. 
ಶ್ರೀ ರಂಗನ ಜೀವನದಲ್ಲಿ ನೂತನ ಅಧ್ಯಾಯವು ಪ್ರಾರಂಭವಾಯಿತು. 
ಅವರ ಹೃದಯದಲ್ಲಿ ಜ್ಞಾನ ಜ್ಯೋತಿಯು ಪ್ರಕಾಶಿಸಿತು. 
ಎಲ್ಲಾ ಕಡೆಯೂ ಶ್ರೀ ಹರಿಯ ಸುಂದರ ಮಂಗಳ ರೂಪ ದರ್ಶನವಾಯಿತು.
ಹೃದಯಾಂತರ್ಯಾಮಿಯಾದ ಬಿಂಬನು ಪ್ರಕಾಶಿಸಿದನು. 
ಮುಂದೆ ನಿಂತ ಶ್ರೀ ಶ್ರೀನಿವಾಸನು ಅದೃಶ್ಯನಾದನು.
ಹೀಗೆ ಶ್ರೀ ಶ್ರೀನಿವಾಸನ ಪರಮಾನುಗ್ರಹ ಪಾತ್ರರಾದ ಶ್ರೀ ಕೇಸರಿಯ ಅಂಶ ಸಂಭೂತರಾದ ಶ್ರೀ ರಂಗಯ್ಯನವರು ಅನೇಕ ಮಹಿಮೆಗಳನ್ನು ತೋರಿಸಿ... 
ಕ್ರಿ ಶ 1746 ಅಕ್ಷಯ ನಾಮ ಸಂವತ್ಸರ ವೈಶಾಖ ಬಹುಳ ದ್ವಾದಶಿಯಂದು ಲಯ ಚಿಂತನಾ ಪೂರ್ವಕವಾಗಿ ಯೆಲ್ಲರೂ ನೋಡುತ್ತಿರುವಂತೆಯೇ ಹರಿಧ್ಯಾನ ಮಾಡುತ್ತಾ ಪಾರ್ಥಿವ ಶರೀರವನ್ನು ಬಿಟ್ಟು ವೈಕುಂಠಕ್ಕೆ ತೆರಳಿದರು. 
ರಂಗನಾಮಾಭಿದಂ ವಂದೇ 
ಕವಿತಾಳ ಪುರ ವಾಸಿನಂ ।
ವೈರಾಗ್ಯ ಭಾಗ್ಯ ಸಂಪನ್ನಂ 
ಭಕ್ತಾಭೀಷ್ಟ ಪ್ರದಾಯಕಮ್ ।। 
ಆಚಾರ್ಯ ನಾಗರಾಜು ಹಾವೇರಿ  " ವೇಂಕಟನಾಥ " ಮುದ್ರಿಕೆಯಲ್ಲಿ.....  
ರಂಗಯ್ಯ ಕೌವಿತಾಳ 
ವಾಸ ಬಂದು । ತಿ ।
ಮ್ಮಯ್ಯನ ತೋರೋ ದಯದಿ ।। 
ಸೂರಿ ಅಂಬಯ್ಯ ಲಕುಮೀ 
ದಂಪತಿಗಳಿಗೆ ।
ಹರಿಯ ಅನುಗ್ರಹದಿ 
ರಂಗನಾಗಿ ಸುತನಾದ ।। 
ಭೂಸುರ ವಂದ್ಯ 
ವಸುಧೇಂದ್ರರಿಗೆ ।
ಪರಮ ಕರುಣಾದಿ 
ಭವಿಷ್ಯ ಪೇಳಿದ ।। 
ಇಂದು ರಂಗಯ್ಯ ಆದ ನೀ 
ವೇಂಕಟನಾಥನಾಜ್ಞದಿ ।
ಮುಂದೆ ಅಪ್ಪಾವರ 
ರೂಪದಿ ಮೆರೆದ ।। 
ವಿಶೇಷ ವಿಚಾರ.... 
ಶ್ರೀ ರಂಗಯ್ಯನವರ ಚರಿತ್ರೆಯನ್ನು ಶ್ರೀ ರಘುಪತಿ ವಿಠಲಾಂಕಿತ ಪರಮ ವೈರಾಗ್ಯಶಾಲಿ ತಿಮ್ಮಣ್ಣದಾಸರು 43 ನುಡಿಗಳಲ್ಲಿ ಹೇಳಿದ್ದು ಆ ಕೃತಿಯನ್ನು ನೋಡುವುದು.
ಸೇರಿ ಭಜಿಪರಿಗಿಷ್ಟ ಫಲ 
ಕೊಟ್ಟು ರಕ್ಷಿಸೋ ।
ಕಾರುಣ್ಯ ಮೂರುತಿಯೇ 
ಕಡು ಪ್ರೀತಲೀ ।
ವೀರ ರಘುಪತಿ ವಿಠಲನಾ 
ದಾಸನೇ ನಾ ನಿತ್ಯ ।
ಸಾರುವೆನು ತವ 
ಕೀರ್ತಿ ದಿಗ್ದೇಶದೋಳ್ ।। 
ಮುಂದೆ ಶ್ರೀ ರಂಗಯ್ಯನವರೇ " ಶ್ರೀ ಇಭರಾಮಪುರ ಕೃಷ್ಣಾಚಾರ್ಯ " ರಾಗಿ ಅವತರಿಸಿ ಅನೇಕ ಅಪರೋಕ್ಷ ಜ್ಞಾನಿಗಳು ಉದ್ಧರಿಸಿದ್ದಾರೆ.
***
" ಶ್ರೀ ರಂಗಯ್ಯ - 2 "
" ಶ್ರೀ ರಂಗಯ್ಯನವರ ಮಹಿಮೆ " 
" ದಿನಾಂಕ : 07.06.2021 -  ಶ್ರೀ ರಂಗಯ್ಯನವರ ಆರಾಧನಾ ಮಹೋತ್ಸವ, ಕೌತಾಳ " 
ಶ್ರೀ ರಂಗಯ್ಯನವರ ಪ್ರೀತಿಯ ಶಿಷ್ಯನಾದ ಚನ್ನಯನು... 
ಶ್ರೀ ಅಯ್ಯನವರ ಆದೇಶವನ್ನು ಅಲ್ಲಿ ಸೇರಿದ ಜನರಿಗೆ ತಿಳಿಸಿ, ಬೃಂದಾವನ ಪ್ರತಿಷ್ಠೆಯನ್ನು ನಡೆಸಿ ಕೊಡಬೇಕೆಂದು ಕೇಳಿದನು. 
ಆದರೆ ಆ ಊರಿನ ( ಕೌತಾಳ ) ಪ್ರಮುಖರು ಕೆಲವರು ಬ್ರಹ್ಮಚಾರಿಗೆ ಬೃಂದಾವನ ನಿರ್ಮಾಣ ಶಾಸ್ತ್ರ ವಿರುದ್ಧವೆಂದು ವಾದಿಸಿ ಅಯ್ಯನವರ ದೇಹಕ್ಕೆ ಸಂಸ್ಕಾರ ಮಾಡಿದರು.
ಅದೇ ದಿನ ರಾತ್ರಿಯೇ ಶ್ರೀ ಅಯ್ಯನವರು ಎಲ್ಲರ ಸ್ವಪ್ನದಲ್ಲೂ ಕಾಣಿಸಿಕೊಂಡು...
" ನನ್ನ ಅಭಿಪ್ರಾಯಕ್ಕೆ ವಿರುದ್ಧವಾಗಿ ನಡೆದುಕೊಂಡಿರಿ. 
ಆದರೂ ಚಿಂತೆಯಿಲ್ಲ. 
ಚಿತಾ ಭಸ್ಮದಲ್ಲಿ ನನ್ನ ಕಿರಿ ಬೆರಳು, ಲಂಗೋಟಿ, ತುಳಸೀ ಮಾಲೆಗಳು ಹಾಗೆಯೇ ಇವೆ. 
ಅವುಗಳನ್ನಾದರೂ ತಂದು ಬೃಂದಾವನದಲ್ಲಿಟ್ಟು ಪ್ರತಿಷ್ಠೆ ಮಾಡಿರಿ " 
ಎಂದು ಆಜ್ಞಾಪಿಸಿದರು.
ಎಲ್ಲರೂ ಭಯ ಭೀತರಾದರು. 
ಸ್ಮಶಾನಕ್ಕೆ ಓಡಿದರು. 
ಆಶ್ಚರ್ಯ! 
ಶ್ರೀ ಅಯ್ಯನವರ ಚಿತಾ ಭಸ್ಮದ ಮಧ್ಯದಲ್ಲಿ ಕಿರಿಬೆರಳು; ಲಂಗೋಟಿ; ತುಳಸೀ ಮಾಲೆಗಳು ತೇಜ: ಪುಂಜವಾಗಿ ಕಾಣಿಸಿದವು. 
ಆ ಅವಶೇಷಗಳನ್ನು ತೆಗೆದುಕೊಂಡು ಬಂದು ಬೃಂದಾವನದಲ್ಲಿಟ್ಟು ಪ್ರತಿಷ್ಠೆ ಮಾಡಿದರು.
ಶ್ರೀ ರಂಗಯ್ಯನವರು ಅದ್ಯಪಿ ಕೌತಾಳದ ಮೂಲ ಬೃಂದಾವನದಲ್ಲಿ ವಿರಾಜಮಾನರಾಗಿ ಭಕ್ತರ ಮನೋಭೀಷ್ಟಗಳನ್ನು ಪೂರೈಸುತ್ತಾ ಕಲಿಯುಗದ ಕಾಮಧೇನು ಕಲ್ಪವೃಕ್ಷದಂತೆ ಪರಮಾನುಗ್ರಹ ಮಾಡುತ್ತಿದ್ದಾರೆ. 
ಶ್ರೀ ರಘುಪತಿ ವಿಠಲಾಂಕಿತ ಪರಮ ವೈರಾಗ್ಯಶಾಲಿ ತಿಮ್ಮಣ್ಣದಾಸರು..... 
ಕ್ಷಯ ನಾಮ ಸಂವತ್ಸರದ 
ವೈಶಾಖ ಬಹುಳದಿ ।
ಪ್ರಿಯ ಉಳ್ಳ ದ್ವಾದಶಿಯ 
ದಿವಸದಲ್ಲಿ ।
ದೈತ್ಯಾರಿ ಧ್ಯಾನಿಸುತ 
ಪರಿಭಟರು ಯುಕ್ತದಿಂ ।
ವಯನ ಮಾರ್ಗವ ಪಿಡಿದು 
ಅತಿ ಮೋದದಿ ।। 37 ।। 
ವೃಂದಾವಸ್ಥನಂ ಮಾಡಲು 
ನಾ ಮುದದಿ ।
ಎಂದಿನಂದದಿ 
ಮಾತನಾಳ್ಪೆನೆಂದು ।
ಛಂದದಿಂದಲಿ ಪೇಳಿ 
ದೇಹವ ಬಿಡಲು ಶಿಷ್ಯರು ।
ಸಂದೇಹದಿಂದದನು 
ದಹನ ಮಾಡೇ ।। 38 ।। 
ಕನಸಿನಲಿ ಬಂದು 
ಕಿರಿಬೆರಳು ಕೌಪೀನವೂ ।
ವಣಗದಿಹ ತುಳಸೀ 
ಮಾಲೆಯೂ ಉಳಿದಿದೆ ।
ಅನುಮಾನಿಸುದೆ ಇವನು 
ತಂದ ವೃಂದಾವನದೊಳೆರಿಸೆ ।
ಘನ ಮಹತ್ತುಗಳೆಲ್ಲ 
ತೋರಿಸುವೆನೆಂದೀ ।। 39 ।। 
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
*****

7 june 2021

ಶ್ರೀ ಕೌತಾಳಂ ರಂಗಯ್ಯ ನವರ ವೃಂದಾವನದ ಬಗ್ಗೆ ಚರಿತ್ರೆ.
ಇಂದು ಅವರ  ಆರಾಧನಾ ಪರ್ವಕಾಲ..
✍️ಒಮ್ಮೆ ಮಂತ್ರಾಲಯ ಶ್ರೀ ರಾಯರ ಮಠದ ಪರಂಪರೆಯಲ್ಲಿ ಬಂದ ಶ್ರೀ ವಾದೀಂದ್ರತೀರ್ಥ ಗುರುಗಳು ಸಂಚಾರ ಮಾಡುತ್ತಾ ಕೌತಾಳಂ ಗ್ರಾಮಕ್ಕೆ ಬರುತ್ತಾರೆ.
ಗುರುಗಳಿಗೆ ಇವರ ಬಗ್ಗೆ ಮೊದಲೇ ತಿಳಿದಿತ್ತು. ಶ್ರೀನಿವಾಸನ ಪರಮ ಭಕ್ತರು ಇವರೆಂದು.
ಶ್ರೀ ವಾದೀಂದ್ರ ಗುರುಗಳ ಬಗ್ಗೆ ಸಹ ಶ್ರೀರಂಗಯ್ಯ ನವರಿಗೆ ತಿಳಿದಿತ್ತು.ಮಹಾಜ್ಞಾನಿಗಳು,ರಾಯರ ಪ್ರೀತಿ ಪಾತ್ರರೆಂದು.
ಹೀಗೆ ಜ್ಞಾನಿಗಳ ಬಗ್ಗೆ ಜ್ಞಾನಿಗಳು ತಿಳಿಯುವದು ವಿಚಿತ್ರ ವೇನಲ್ಲ.
ಶ್ರೀ ರಂಗಯ್ಯ ನವರಿಗೆ ಸ್ವಪ್ನದಲ್ಲಿ ಒಲಿದು ಬಂದು ಅವರಿಂದಲೇ ಪ್ರತಿಷ್ಠಿತ ವಾದ ಶ್ರೀ ಕೇಶವ ದೇವರ ಗುಡಿಯಲ್ಲಿ ಗುರುಗಳ ಸಂಸ್ಥಾನ ಪೂಜೆಗ ಸಕಲ ವ್ಯವಸ್ಥೆ ಆಗಿತ್ತು.
ಬಂದಂತಹ ಭಕ್ತರಿಗೆ ಎಲ್ಲಾ ಮುದ್ರಾ ಧಾರಣೆ ನಡೆಯುತ್ತಾ ಇದೆ.
ರಂಗಯ್ಯ ನವರು ಸಹ ಮುದ್ರಾಧಾರಣೆಗೆ ಬಂದು ನಿಂತಾಗ ಗುರುಗಳು ನಸು ನಗುತ್ತಾರೆ."ಯಾಕೆಂದರೆ ಶ್ರೀ ರಂಗಯ್ಯ ನವರ ಮೈ ತುಂಬಾ ಶಂಖು ಚಕ್ರಾದಿಗಳು ಕಾಣಿಸಿಕೊಂಡವು..".
ಅದನ್ನು ಕಂಡು ಗುರುಗಳು ಅವರಿಗೆ ಶ್ರೀನಿವಾಸನ  ಅನುಗ್ರಹ ಪಾತ್ರರೆಂದು ಕೊಂಡಾಡಿ ಆಶೀರ್ವಾದ ಮಾಡುತ್ತಾರೆ.
ಈ ದೃಶ್ಯವನ್ನು ಶ್ರೀವಾದೀಂದ್ರ ಗುರುಗಳ ಶಿಷ್ಯರು ಆದ ಶ್ರೀ ಪುರುಷೋತ್ತಮಾಚಾರ್ಯರು ಕಾಣುತ್ತಾರೆ...
ಇದನ್ನು ಕಂಡು 
ಶ್ರೀ ಪುರುಷೋತ್ತಮಾಚಾರ್ಯರು ರಂಗಯ್ಯ ನವರಿಗೆ ಗೌರವ, ಭಕ್ತಿಇಂದ ಪಾದ ನಮಸ್ಕಾರ ಮಾಡಿದಾಗ ಅಯ್ಯನವರು ಅವರನ್ನು ಪ್ರೀತಿ ಇಂದ ಆಲಂಗಿಸಿಕೊಂಡು
"ಆಚಾರ್ಯರೇ!! ಇಂದು ನೀವು ನಮಗೆ ನಮಸ್ಕಾರ ಮಾಡುತ್ತಾ ಇದ್ದೀರಿ.ಆ ಶ್ರೀ ಹರಿಯ ಸಂಕಲ್ಪ. ನಾಳೆ ನೀವು ನಮ್ಮಿಂದ ನಮಸ್ಕಾರ ಮಾಡಿಸಿಕೊಳ್ಳುವಿರಿ...
ಶ್ರೀ ವಾದೀಂದ್ರ ಗುರುಗಳ ನಂತರ ಪೀಠದಲ್ಲಿ ನೀವು ಬಂದು ಶ್ರೀ ವಸುಧೇಂದ್ರರು ಎಂಬ ನಾಮದಿಂದ ಮೆರೆಯುವಿರಿ..
ನಾನು ಇನ್ನೂ ಕೆಲದಿನಗಳಲ್ಲಿ ಇಹಲೋಕ ಯಾತ್ರೆ ಯನ್ನು ಮುಗಿಸಬೇಕಾಗಿದೆ.
ಶ್ರೀನಿವಾಸನ ಸಂಕಲ್ಪ. ಹೋಗಲೇಬೇಕು..
"ನೋಡಿ!! ಭಗವಂತನ ಸಂಕಲ್ಪ ಎಷ್ಟು ವಿಚಿತ್ರ ವಾಗಿದೆ.ಬ್ರಹ್ಮಚಾರಿಯಾದ ನನಗೆ ವೃಂದಾವನ ವ್ಯವಸ್ಥೆ ಆಗುವದು..ಆ ವೃಂದಾವನ ಸನ್ನಿಧಿಯಲ್ಲಿ ತಾವು ಬಂದು ಸಂಸ್ಥಾನದ ಪೂಜೆಯನ್ನು, ಮಾಡಬೇಕು.ಆಗ ಮಾತ್ರ ಈ ಬಡವನನ್ನು ಮರೆಯಬೇಡಿ".
ಎಂದು ಹೇಳುತ್ತಾರೆ.
(ಪೀಠಕ್ಕೆ ಬರುವ ಮುಂಚೆ ಅವರಿಗೆ ಭವಿಷ್ಯ ಹೇಳಿದ್ದು.
ಕಾಲಾನಂತರದಲ್ಲಿ ಶ್ರೀ ವಸುಧೇಂದ್ರ ತೀರ್ಥ ರು ಅಲ್ಲಿಗೆ ಬಂದು ವೃಂದಾವನ ಸಮ್ಮುಖದಲ್ಲಿ ಸಂಸ್ಥಾನ ಪೂಜೆಯನ್ನು ಮಾಡಿ ಜನರಿಗೆ ಅವರ ಮಹಿಮೆಯನ್ನು ತಿಳಿಸುತ್ತಾರೆ)
ಕಾಲ ಕ್ರಮೇಣ ಶ್ರೀರಂಗಯ್ಯ ನವರಿಗೆ ೬೦ವರುಷಗಳು ತುಂಬಿದೆ. .
ಒಂದು ದಿನ ತಮ್ಮ ಶಿಷ್ಯ ನಾದ ಚನ್ನಯ್ಯ ನನ್ನು ಕರೆದು ತಮಗಾಗಿ ಒಂದು ವೃಂದಾವನ ನಿರ್ಮಿಸಲು ಹೇಳುತ್ತಾರೆ. ರಂಗಯ್ಯನವರ ಮಾತಿಗೆ ಶಿಷ್ಯ ಕಣ್ಣೀರು ಹಾಕುತ್ತಾ 
"ನಾನು ಈ ವಿಯೋಗವನ್ನು ಭರಿಸಲಾರೆ" ಅಂದಾಗ
ಶ್ರೀರಂಗಯ್ಯ ನವರು ಹೇಳುತ್ತಾರೆ.
"ಚನ್ನಯ್ಯ !!ಹುಟ್ಟಿದ ಪ್ರತಿ ಜೀವಿ ಸಾಯಲೇಬೇಕು.ಆವ ಕಾಲ ತಪ್ಪಿಸಿದರು ಸಾವ ಕಾಲ ತಪ್ಪಿಸಲು ಸಾಧ್ಯವಿಲ್ಲ".ನಿಜವಾದ ಜ್ಞಾನಿಗಳು ಸಾವಿಗೆ ಭಯ ಪಡುವದಿಲ್ಲ." ಅದಕ್ಕೆ ಸ್ವಾಗತವನ್ನು ಬಯಸುವನು.ಭಗವಂತನು ಹೊಸ ಅಂಗಿಯನ್ನು ಕರುಣಿಸುವಾಗ ಈ ಹಳೆಯ ಅಂಗಿಗೆ ವಿವೇಕ ಉಳ್ಳವರು ಚಿಂತಿಸುವದಿಲ್ಲ.
ಕಾಲನಾಮಕ ಭಗವಂತನ ಆಜ್ಞೆ ಯನ್ನು ಮೀರಲು  ರಮಾ ಬ್ರಹ್ಮಾದಿಗಳಾಗಲಿ,ದೇವತೆಗಳಾಗಲಿ  ಯಾರಿಂದಲು ಸಹ  ಸಾಧ್ಯವಿಲ್ಲ.
"ನಿನ್ನಲ್ಲಿ ಭಗವಂತನ ಅನುಗ್ರಹ ವಿದೆ.ಈ ಕಾರ್ಯವನ್ನು ಪೂರೈಕೆ ಮಾಡು" ಅಂತ ಆಜ್ಞೆ ಮಾಡುತ್ತಾರೆ.
ಅಕ್ಷಯ ನಾಮ ಸಂವತ್ಸರ ವೈಶಾಖ ಬಹುಳ ದ್ವಾದಶಿಯಂದು ಲಯಚಿಂತನೆ ಮಾಡುತ್ತಾ ಶ್ರೀರಂಗನ ಪುರಕ್ಕೆ ಶ್ರೀರಂಗಯ್ಯನವರು ತಮ್ಮ ಪಾರ್ಥೀವ ದೇಹವನ್ನು ಬಿಟ್ಟು ತೆರಳುತ್ತಾರೆ.
ನಂತರ ಅವರ ಶಿಷ್ಯ ನಾದ ಚೆನ್ನಯ್ಯನು ಗುರುಗಳ ವಾಣಿಯಂತೆ ವೃಂದಾವನ ಪ್ರವೇಶದ ಕಾರ್ಯಕ್ರಮ ಮಾಡಲು ಊರಿನವರಲ್ಲಿ ಕೇಳಲು
ಆ ಊರಿನ ಪ್ರಮುಖರು ಅವನ ಮಾತಿಗೆ ಬೆಲೆಕೊಡದೆ
"ಬ್ರಹ್ಮಚಾರಿ ಗಳಿಗೆ ವೃಂದಾವನ ಪ್ರತಿಷ್ಠಿತ ಮಾಡುವದು ಶಾಸ್ತ್ರ ವಿರುದ್ದ. ಯತಿಗಳಿಗೆ ಮಾತ್ರ ವೃಂದಾವನ ಪ್ರತಿಷ್ಠಿತ ಮಾಡುವದು" ಅಂತ ಹೇಳಿ ಅವರ ದೇಹವನ್ನು ಅಗ್ನಿ ಸಂಸ್ಕಾರ ಮಾಡುತ್ತಾರೆ."
ಆ ರಾತ್ರಿಯೇ ಶ್ರೀ ರಂಗಯ್ಯನವರು ಎಲ್ಲರ ಕನಸಿನಲ್ಲಿ ಕಾಣಿಸಿಕೊಂಡು.
 ಹೇಳುತ್ತಾರೆ.
"ನನ್ನ ದೇಹವನ್ನು ದಹನ ಮಾಡಬೇಡಿ ಅಂತ ಮೊದಲೇ ಹೇಳಿದ್ದರು, ಸಹ ನೀವು ಅದರ ವಿರುದ್ಧ ವಾಗಿ ಮಾಡಿದ್ದೀರಿ"..
ಆದರು ಚಿಂತೆಇಲ್ಲ.
"ನನ್ನ ದೇಹ ದಹನವಾದರು ಸಹ ಆ ಚಿತಾ ಭಸ್ಮ ದಲ್ಲಿ ನನ್ನ ಕಿರುಬೆರಳು,ಕೌಪೀನ ತುಳಸಿಮಾಲೆಗಳು ಹಾಗೇಯೇ ಇವೆ.ತಂದು ವೃಂದಾವನ ದಲ್ಲಿ ಇಟ್ಟು ಪ್ರತಿಷ್ಠಿತ ಮಾಡಿರಿ"ಅಂತ ಸೂಚಿಸಿದರು.. 
ಎಲ್ಲರು ಭಯಭೀತರಾಗಿ ಸ್ಮಶಾನಕ್ಕೆ ಹೋಗಿ ನೋಡಿದಾಗ ರಂಗಯ್ಯ ನವರ ಚಿತಾಭಸ್ಮದ ಮಧ್ಯ ದಲ್ಲಿ 
"ಅವರ ಕಿರುಬೆರಳು,ಕೌಪೀನ,ತುಲಸಿಮಾಲೆಗಳು ತೇಜಃ ಪುಂಜವಾಗಿ ಕಾಣಿಸಿದವು"..
ತಕ್ಷಣ ತಂದು ವೃಂದಾವನ ದಲ್ಲಿ ಇಟ್ಟು ಪ್ರತಿಷ್ಠಿತ ಮಾಡಿದರು..
ಶ್ರೀ ರಂಗಯ್ಯನ ವರು ಎಂದಿನಂತೆ ಮೊದಲಿನ ಹಾಗೇ ಇವಾಗಲು ಬಂದ ಭಕ್ತರಿಗೆ ಅಭಯಪ್ರದಾನ ಮಾಡುತ್ತಾ ಅಲ್ಲಿ ಸನ್ನಿಹಿತ ರಾಗಿದ್ದಾರೆ.
ಶ್ರೀ ವೀರ ರಘುಪತಿವಿಠ್ಠಲ ದಾಸ ರು ಹೇಳಿದಂತೆ..
"ಕನಸಿನಲಿ ಬಂದು ಕಿರಿಬೆರಳು ಕೌಪೀನವು|
ವಣಗದಿಹ ತುಲಸಿ ಮಾಲೆಯು ಉಳಿದಿವೆ|
ಅನುಮಾನಿಸದೇ ಇವನು ತಂದು| ವೃಂದಾವನದೊಳಿರಿಸೆ|
ಘನ ಮಹತ್ತುಗಳನೆಲ್ಲ ತೋರಿಸುವೆನೆಂದು|"
ಇಂತಹ ಅನೇಕ ಜ್ಞಾನಿಗಳು ನಮ್ಮ  ಪರಂಪರೆಯಲ್ಲಿ ಬಂದು  ಯತಿಗಳಾಗಿ, ಹರಿದಾಸರಾಗಿ, ಬಂದು ಹೋಗಿದ್ದಾರೆ..
ನಿತ್ಯ ಸದಾಕಾಲ ಇಂತಹ  ಪರಮ ಭಾಗವತರ ಸ್ಮರಣೆ, ವರ್ಣನೆ ಇಂದ ನಮ್ಮ ಅಂತಃಕರಣವು ಶುದ್ದವಾಗಿ ಭಗವಂತನ ಅನುಗ್ರಹ ಲಭಿಸುವದು.
"ಹಾಗಾಗಿ ಇಂತಹ ಭಗವಂತನ ಭಕ್ತರೇ ಗತಿಯು ನಮಗೆ..."
🙏ಶ್ರೀ ಕೃಷ್ಣಾರ್ಪಣಮಸ್ತು🙏
|ಶ್ರೀ ಕೌತಾಳಂ ರಂಗಯ್ಯ ಗುರುಭ್ಯೋ ನಮಃ||
✍️ಅ.ವಿಜಯವಿಠ್ಠಲ🙏
******

7 june 2021
" ಈದಿನ ಕೌತಾಳ ಪುರಾಧೀಶರೂ - ಶ್ರೀ ರಾಯರ ಅಂತರಂಗ ಭಕ್ತರೂ ಆ ಶ್ರೀ ರಂಗಯ್ಯನವರ ಆರಾಧನಾ ಮಹೋತ್ಸವ    "
" ಶ್ರೀ ರಂಗಯ್ಯನವರ ಮಹಿಮೆ " 
" ಶ್ರೀ ವಸುಧೇಂದ್ರ ತೀರ್ಥರ ಭವಿಷ್ಯ ನುಡಿದ ಶ್ರೀ ರಂಗಯ್ಯ ತಾತ "
ಶ್ರೀ ವಾದೀಂದ್ರ ತೀರ್ಥರೊಂದಿಗೆ ವಿದ್ವಾನ್ ಶ್ರೀ ಪುರುಷೋತ್ತಮಾಚಾರ್ಯರು ಸಂಚಾರ ಕ್ರಮದಲ್ಲಿ ಕೌತಾಳಕ್ಕೆ ಬಂದಾಗ ಶ್ರೀ ತಾತನವರು ಪುರುಷೋತ್ತಮಾಚಾರ್ಯರೇ ನೀವು ಶ್ರೀ ವಸುಧೇಂದ್ರ ತೀರ್ಥರಾಗಿ ಹಂಸ ವಂಶದಲ್ಲಿ ಮೆರೆವಿರಿ ಎಂದು ಹೇಳಿದರು. 
ಕೆಲವೇ ದಿನಗಳಲ್ಲಿ ಶ್ರೀ ವಾದೀಂದ್ರ ತೀರ್ಥರು -  ಪುರುಷೋತ್ತಮಾಚಾರ್ಯರಿಗೆ ಆಶ್ರಮ ಕೊಟ್ಟು " ವಸುಧೇಂದ್ರ ತೀರ್ಥ " ಯೆಂದು ನಾಮಕರಣ ಮಾಡಿ ವೇದಾಂತ ಸಾಮ್ರಾಜ್ಯದಲ್ಲಿ ಕುಳ್ಳಿರಿಸಿ ತಮ್ಮ ಅಮೃತ ಹಸ್ತಗಳಿಂದ ಪಟ್ಟಾಭಿಷೇಕ ಮಾಡಿದರು. 
ಈ ವಿಷಯವನ್ನು ಶ್ರೀ ರಘುಪತಿ ವಿಠಲಾಂಕಿತ ಪರಮ ವೈರಾಗ್ಯಶಾಲಿ ತಿಮ್ಮಣ್ಣದಾಸರು..... 
ವಾದೀಂದ್ರ ಶಿಷ್ಯ ಪುರುಷೋತ್ತಮಾಚಾರ್ಯರೇ ।
ಮೋದದಿಂದಲಿ ನೀವೆ ವಸುಧೇಂದ್ರರಾಗುವಿರಿ ।
ಎಂದೆಂದಿಗೂ ನಿಮ್ಮ ಎನ್ನಯ ಸಂಬಂಧವೂ ।
ಕುಂದದಲೆ ಬೆಳಗಲಿ ಎಂದು ನೀ ನುಡಿದೆ ।। 35 ।। 
ನಿರ್ಯಾಣ ಕಾಲಮಂ ನಿರ್ಣಯಿಸಿ ಗುರುಗಳಿಗೆ ।
ಬರುವದೆಂದೆನುತ ಬಿನ್ನಹವ ಗೈಯುತ ।
ಹರಿ ದರುಶನವ ವೃಂದಾವನಕೆ ಕೊಡಿಸುತ್ತ ।
ಧರಣಿಸುತ ಭೋಜನವ ಮಾಡಿಸೆಂದೆ ।। 36 ।। 
ಶ್ರೀ ರಂಗಯ್ಯವನರ ಭವಿಷ್ಯವಾಣಿಯಂತೆ ಶ್ರೀ ಪುರುಷೋತ್ತಮಾಚಾರ್ಯರು - ಶ್ರೀ ವಸುಧೇಂದ್ರ ತೀರ್ಥರಾಗಿ ಕೌತಾಳಕ್ಕೆ ಬಂದರು. 
ಶ್ರೀ ರಂಗಯ್ಯನವರು ಆಗಾಗಲೇ ಹರಿಧ್ಯಾನಪರರಾಗಿದ್ದರು. 
ಶ್ರೀ ವಸುಧೇಂದ್ರ ತೀರ್ಥರು ಶ್ರೀ ರಂಗಯ್ಯನವರ ವೃಂದಾವನ ಸನ್ನಿಧಾನದಲ್ಲಿ ಶ್ರೀ ಬರ್ಹ್ಮ ಕರಾರ್ಚಿತ ಮೂಲರಾಮ - ಶ್ರೀ ಮಧ್ವಾಚಾರ್ಯರ ಕರಾರ್ಚಿತ ದಿಗ್ವಿಜಯ ರಾಮ - ಶ್ರೀ ಜಯತೀರ್ಥ ಕರಾರ್ಚಿತ ಶ್ರೀ ಜಯರಾಮ - ಶ್ರೀ ನೀಳಾದೇವಿ ಕರಾರ್ಚಿತ ಶ್ರೀ ಭೂದೇವಿ ಸಹಿತ ವೈಕುಂಠ ವಾಸುದೇವರು - ಶ್ರೀ ರಾಯರ ಕರಾರ್ಚಿತ ಶ್ರೀ ಸಂತಾನ ಗೋಪಾಲಕೃಷ್ಣದೇವರ ಪೂಜಿಸಿ - ಸಂಸ್ಥಾನ ಪ್ರತಿಮೆಗಳನ್ನು ಶ್ರೀ ರಂಗಯ್ಯನವರ ವೃಂದಾವನದ ಮೇಲಿಟ್ಟು ಪೂಜೆ ಮಾಡಿ - ಮಹಾ ಮಂಗಳಾರತಿ ಮಾಡಿ ಬ್ರಾಹ್ಮಣ ಸುವಾಸಿನೀಯರಿಗೆ ಅಣ್ಣ ಸಂತರ್ಪಣೆ ಮಾಡಿಸಿದರು ಶ್ರೀ ವಸುಧೇಂದ್ರ ತೀರ್ಥರು. 
by ಆಚಾರ್ಯ ನಾಗರಾಜು ಹಾವೇರಿ 
     ಗುರು ವಿಜಯ ಪ್ರತಿಷ್ಠಾನ
***


1 comment:

  1. Not bidi sanyasi..
    He was a bramachari..
    Don't misguided plz

    ReplyDelete