Wednesday 1 May 2019

sujayeendra teertharu 1986 mantralaya matha rayara mutt yati 37 magha shukla chaturthi ಸುಜಯೀಂದ್ರ ತೀರ್ಥರು,





info from sumadhwaseva.com--->

Sri Sujayeendra Theertha

Aradhana – Magha Shudda Chaturthi

Vrundavana – Mantralaya

Sanyasa Period – 1963 – 1986

Ashrama gurugalu – Sri Suyameendra Tirtharu

Ashrama Shishyaru – Sri Sushmeendra Tirtharu

Poorvashrama name – Sri Venkataraghavendracharya

Family Name – “Beegamudre”

ಸುಯಮೀಂದ್ರ ಕರಾಬ್ಜೋತ್ಥಂ ಸುವಿದ್ಯಾಬೋಧಕಂ ಸದಾ |
ಸುಮೂಲರಾಮಪೂಜಾಢ್ಯಂ ಸುಜಯೀಂದ್ರಗುರುಂ ಭಜೇ ||

सुयमींद्र कराब्जोत्थं सुविद्याबोधकं सदा |

सुमूलरामपूजाढ्यं सुजयींद्रगुरुं भजे ||

His father – Sri Sujnanendracharya (Younger brother of Sri Sukruteendra Tirtharu and Sri Susheelendra Tirtharu in their poorvashrama)
Mother    – Lakshmibai (Sister of Suvrateendra Tirtharu)

Education – Nyaya & Vedanta from Huli Hanumantacharyaru

“Gurusarvabhouma Vidya peeta” – The seer encouraged the adhyayana of Madhwa Shastra by offering free boarding and loading to the Madhwa Shastra adhyayana aspirants

“Gurusarvabhouma” Magazine – The Swamiji started the Gurusarvabhouma Magazine from the Mantralaya Rayara Mutt,  in Kannada, which is now being published in several languages including English.

Renovation of Mutt’s building at Mantralaya – Sri Sujayeendra Thirtha who renovated the Mutt’s building at Mantralaya became responsible for construction of rooms, cottages, schools, spacious dining halls, choultries, hospitals; provision of facilities for drinking water with contributions from devotees. Thus for the instrumental role he played in multifaceted development of Mantralaya, he earned the title as the ‘Architect of Mantralaya’.

************

Sujayeendratheertha in his poorvashrama was known as Venkataraghavendracharya. He was born in ‘Beegamudre’ family of Gouthama Gothra, the sacred poorvashrama family of Sri Gururaja. His father Sujnanendracharya was the younger brother of Sukrutheendra theertha and Susheelendra theertha and his mother Lakshmibai was the sister of Survatheendra theertha.


Venkataraghavendracharya born to such pious couple was naturally an epitome of piety. He had his initial education in Nyaya and Vedantha under his grandfather Huli Hanumanthacharya, the most celebrated scholar of four Shastras of Nyaya, Vedantha and others and under Doddaballapuram Vasudevacharya who was a scholar in the royal court of Mysore and professor of Nyaya Vedantha at Maharaja Sanskrit college, Mysore. He also studied Tarka Shastra under the renowned scholar of Tarka Shastra, Elathur Krishnacharya.
He made a comprehensive study of Vedantha Shastra under Susheelendratheertha, Suvratheendratheertha and Suyameendra theertha and won the plaudits as a great scholar. Sri Suyameendratheertha who was heading the maTa then, had entrusted Venkataraghavendracharya with all the responsibilities pertaining to the administration of the maTa. Acharya who had acquired expertise in dealing with all official matters of the maTa being Sarvadhikari of the maTa and its Dharmadhikari, caretaker of Brindavana Sannidhana at Mantralaya, representative of the maTa in respect of legal disputes at various courts, had earned swamiji’s blessing and appreciation. When Suyameendra theertha who was at Nanjangud was indisposed in 1963, he decided to name his successor. He chose Venkataraghavendracharya to be his successor, bestowed sanyasa on him and named him ‘Sujayeendra theertha’. Later with a view to complete all the tasks he had envisaged, he sent his disciple to Mantralaya. Obeying the orders of his guru, Sujayeendra theertha went to Mantralaya and addressed himself to the task in right earnest. The unresolved issue pertaining to the administrative affairs of Mantralaya that rested between the maTa and the Andhra Pradesh government was the first and foremost task Sujayeendratheertha undertook. The swamiji decided to take up the development works of Mantralaya entrusted by his guru after resolving the issue to the advantage of the maTa through discussions and correspondences with the government. Suyameendra theertha fully recovered his health. After staying at Nanjangud for three years, he went to Bangalore. His health suffered a major setback after a few months there. He reached the heavenly abode in 1967 at Mantralaya.


Sujayeendra theertha slowly recovering from the grief of separation from his guru, continued the developmental works of the maTa that had been assigned by his guru. The swamiji who set apart lakhs of rupees for all round development of Sri Gurusarvabhouma Vidyapeetha at Mantralaya, appointed several scholars and saw to it that learning activities went on ceaselessly at Vidyapeetha. He provided the students studying there with free boarding and lodging facilities and thus paved way for a large number of aspirants to enter Vidyapeetha. He saw to it that the annual conference of scholars being held during Raghavendra swamiji’s Aradhana took place biannually. The swamiji who brought out several ancient books through the Mutt also started ‘Gurusarvabhouma’, a Kannada cultural monthly magazine to bring about greater awareness of Dharma amongst the people. The magazine which has touched a new high of nine thousand copies is also being published in Tamil, Telugu, Marathi, English and Sanskrit languages at the behest of Sushameendra theertha, his successor. Sujayeendra theertha who renovated the maTa building at Mantralaya became responsible for construction of rooms, cottages, schools, spacious dining halls, choultries, hospitals; provision of facilities for drinking water with contributions from devotees. Thus for the instrumental role he played in multifaceted development of Mantralaya, he earned the sobriquet as the ‘Architect of Mantralaya’. The swamiji earned the special blessings of Lord Moolarama and Sri Gururaja by getting the entire Brindavan of Sri Gururaja decorated with gold relief and the gold Mantap of Lord Moolarama enlarged. Thus the swamiji came to be held in high esteem by making Haridasa’s accolade¸ ಸುರಪನಾಲಯದಂತೆ ಮಂತ್ರಾಲಯ true. The swamiji built beautiful buildings for the maTa, choultries at many other major cities and places besides Mantralaya, installed the Brindavans of Sri Gururaja at several places resulting in the fulfilment of wishes of the devotees. The swamiji became an exemplar of ‘Gurubhakthi’ for he always proclaimed that all his achievements were possible only because of the great blessings of Sri Gururaja and his guru Sri Suyameendra theertha. The greatest gift Sujayeendra theertha enriched the society with was Sushameendra theertha. When his health began to fall, Sujayeendra theertha bestowed sanyasa on Suprajnendracharya, the son of his poorvashrama elder brother and named him ‘Sushameendra theertha’. Being served by his disciple for about a year, Sujayeendra theertha reached heavenly abode in 1986 at Mantralaya.

shri sujayIndra tIrtha varada gOvindA gOvindA... 


shri krishNArpaNamastu...
************



09.02.2019
ಶ್ರೀ ಸುಜಯೀಂದ್ರ ತೀರ್ಥರ ಪು (ಮಂತ್ರಾಲಯ). ೧೨ ಫೆಬ್ರವರಿ ೧೯೮೬
SRI SUJAYEENDRA Theertara Pu (MANTRALAYA). 12 Feb 1986






*****

ಶ್ರೀಂ ಶ್ರೀ ಕಂ ಕಪಿಲಾಯ ನಮಃ

ಸುಯಮೀಂದ್ರ ಕರಾಬ್ಜೋತ್ಥಂ
ಸುವಿದ್ಯಾ ಬೋಧಕಮ್ ಸದಾ/
ಸುಮೂಲರಾಮ ಪೂಜಾಢ್ಯಂ
ಸುಜಯೀಂದ್ರ ಗುರುಮ್ ಭಜೇ//

ಶ್ರೀ ರಾಯರ ಮಠದ 20ನೇ ಶತಮಾನದ ಶ್ರೇಷ್ಠ ಯತಿಗಳೂ...ನವಮಂತ್ರಾಲಯ ನಿರ್ಮಾಣ ಕರ್ತೃಗಳು, ಶ್ರೀ ಸುಯಮೀಂದ್ರತೀರ್ಥರ ಶಿಷ್ಯರೂ, ನಡೆದಾಡುವ ರಾಯರೆಂದೇ ಖ್ಯಾತರಾದ ಶ್ರೀ ಸುಶಮೀಂದ್ರತೀರ್ಥರನ್ನು ನಮಗೆ ನೀಡಿದಂತವರು, ಗುರುಗುಣಸ್ತವನಕ್ಕೆ ವ್ಯಾಖ್ಯಾನವನ್ನು ರಚನೆ ಮಾಡಿದ ,  ಶ್ರೀ ಕೃಷ್ಣ ಚಾರಿತ್ರ್ಯ ಮಂಜರಿ, ರಾಮ ಚಾರಿತ್ರ್ಯ ಮಂಜರಿಗಳ ಕನ್ನಡೀಕರಿಸಿದ, , ಶ್ರೀಮನ್ಮಧ್ವಮತಮ್ ಎನ್ನುವ ಮಸಾನ್ ಪ್ರಬಂಧವನ್ನು ರಚಿಸಿದ ಶ್ರೀ ಸುಜಯೀಂದ್ರತೀರ್ಥರ ಆರಾಧನಾ ಮಹೋತ್ಸವ ಇಂದು..  ಶ್ರೀ ಮಹಾನ್ ಗುರುಗಳು ನಮ್ಮನ್ನೆಲ್ಲರನ್ನೂ ಸದಾಕಾಲ ಅನುಗ್ರಹಿಸಲೆಂದು ಹಾರೈಸುತ್ತಾ...

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
***


" ದಿನಾಂಕ : 15.02.2021 ಸೋಮವಾರ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಜಯೀ೦ದ್ರತೀರ್ಥರ ಆರಾಧನಾ ಮಹೋತ್ಸವ ,ಶ್ರೀಕ್ಷೇತ್ರ ಮಂತ್ರಾಲಯ "
ರಾಗ : ಮೋಹನ  ತಾಳ : ಆದಿ 
ಸುಜಯೀ೦ದ್ರತೀರ್ಥ ದಿಕ್ಪಾಲರಂತೆ ।
ಸುಜನ ಮನ ಕುಮುದ 
ಶರಧಿಜರಂತೆ ರಾಜಿಸುವ ।। ಪಲ್ಲವಿ ।।
ದೇವೇಂದ್ರನಂತೆ 
ಭೂದೇವ ಗಢಣದಿ । ಮೆ ।
ರೆವ ಕಾಮಾದಿ ವಿಷಯ ತೃಣ ।
ದೇವಾಸ್ಯನು ಆವ ಸದ್ಧರ್ಮ 
ಶಿಕ್ಷಿಸುವಲ್ಲಿ ದಂಡಧರ ।
ಭೂವಲಯ ನರಯಾನನೇರಿ
 ದಿಗ್ವಿಜಿಯಿಸುವ ।। ಚರಣ ।।
ವರ ಭಕ್ತಿ ತಪ ಜ್ಞಾನ 
ಗುಣದಿ ರತ್ನಾಕರನು ।
ದುರುಳ ಮತ ಪಾನೀಯದರ 
ಮರುತನು ।
ಶರಣು ಜನ ದೀನರಿಗೆ 
ಪೆರೆಶಿರನ ಸುಹೃದಯ ।
ನಿರುತ ವೈರಾಗ್ಯದಲಿ 
ಸ್ಮರದೂರನೆಂತೆಸವ ।। ಚರಣ ।।
ಮೌನಿ ಗುರು ಸುಯಮೀ೦ದ್ರ 
ಕರಕಂಜ ಸಂಜಾತ ।
ಪ್ರಾಣಪತಿ ಶ್ರೀಮೂಲರಾಮಾರ್ಚಕ ।
ಜಾನಕೀಶಭಿನವ ಪ್ರಾಣೇಶ ವಿಠ್ಠಲನ ।
ಸಾನುರಾಗದಿ ವಲಿಸಿ
ರಾರಾಜಿಸುತಲಿಪ್ಪ ।। ಚರಣ ।।    
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಜಯೀ೦ದ್ರತೀರ್ಥರು ವಿದ್ಯಾ ಪಕ್ಷಪಾತಿಗಳು. 
ಪರಮಪೂಜ್ಯ ಶ್ರೀ ಸುಜಯೀ೦ದ್ರತೀರ್ಥರು ಸ್ವಯಂ ಪಂಡಿತರಾದುದರಿಂದ ವಿದ್ವತ್ತಿಗೆ ಯಾವ ರೀತಿ ಗೌರವವನ್ನು ನೀಡಬೇಕೆಂಬುದು ಅವರಿಗೆ ಗೊತ್ತಿತ್ತು. 
ಪಂಡಿತರ ಕಷ್ಟ ನಷ್ಟಗಳು ಅವರಿಗೆ ಚೆನ್ನಾಗಿ ಅರ್ಥವಾಗಿತ್ತು. 
ಆದುದರಿಂದ ಅವರು ತಮ್ಮ ಕೈಯಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡಿ ನಾಡಿನ ವಿದ್ವಾಂಸರಿಗೆ ಸಹಾಯ ಮಾಡಿರುತ್ತಾರೆ. 
ಅದಕ್ಕಾಗಿಯೇ ವರ್ಷದಲ್ಲಿ ಒಂದಲ್ಲದಂತೆ ಎರಡು ವಿದ್ವತ್ಸಭೆಗಳನ್ನು ಮಾಡಿ ಪರಮಪೂಜ್ಯ ಶ್ರೀ ಸುಜಯೀ೦ದ್ರತೀರ್ಥರು ತ್ರಿಮತಸ್ಥ ಪಂಡಿತರನ್ನೂ ಸನ್ಮಾನಿಸಿ ಕೈತುಂಬ ದಕ್ಷಿಣೆ ಇತ್ತು ಪರಮಾನುಗ್ರಹ ಮಾಡಿದ್ದಾರೆ.
ಶ್ರೀ ಎಲತ್ತೂರು ಕೃಷ್ಣಾಚಾರ್ಯರಲ್ಲಿ ತರ್ಕ ಶಾಸ್ತ್ರಾಧ್ಯಯನವನ್ನು ಮಾಡಿದ ಶ್ರೀ ಶ್ರೀಗಳವರ ಶಾಸ್ತ್ರ ಶಾಣೋಲ್ಲೀಢವಾದ ಬುದ್ಧಿಯು ವಾದದಲ್ಲಿ ಪ್ರಖರವಾಗಿತ್ತು. 
ವಾಕ್ಯಾರ್ಥದಲ್ಲಿ ಅವರ ವಾಣಿಯು ಧೀರಮುಖರವಿತ್ತು. 
ಮಹಾ ಪಂಡಿತರು ವಾದಿಸುವಾಗ ಅವರಲ್ಲಿಯ ತಪ್ಪು ಒಪ್ಪುಗಳನ್ನು ಗುರುತಿಸಿ ನ್ಯಾಯ ನಿರ್ಣಯವನ್ನು ನೀಡುವ ಅವರ ನಯ ನೈಪುಣಿಯು ಎಲ್ಲಾ ವಿದ್ವಾಂಸರ ಮೆಚ್ಚುಗಿಗೆ ಪಾತ್ರವಾಗಿತ್ತು. 
ಶ್ರೀ ಲಕುಮೀಶರು ( ಶ್ರೀ ಕುರುಡಿ ರಾಘವೇಂದ್ರಾಚಾರ್ಯರು )..... 
ಎಲತ್ತೂರು ಮತ್ತು ಎಲೆ ಊರಿನವರಾದ ।
ಚಲುವ ನಾಮದ ಒಂದೇ ಗುರುಗಳಲ್ಲಿ ।
ಒಲಿಸಿ ಅವರ ಮನ ।
ನಲಿದು ಷಟ್ ಸ್ಮೃತಿಗಳ್
ಬಿಡದಾಭ್ಯಾಸವ ಮಾಡಿ ।
ಕಲಿತನದಿ ವಿದ್ವತ್ಪೂರ್ಣ ಸಭೆಯೊಳು ।
ಹಲವು ವಾಕ್ಯಾರ್ಥಗಳ ತಾವು ಮಾಡಿ ।
ಗೆಳೆಯ ಗುನ್ಹಾಳ್ ವೆಂಕೋಬಾಚಾರ್ಯರ ।
ಕಲೆತು ಉಭಯರು ಶಾಸ್ತ್ರಗಳ ನೋಡಿ ।
ಫಲ ಭರಿತ ಮಧವರ ಶಾಸ್ತ್ರ । ಉಪವನ ।
ದೊಳಗೆ ಓಡ್ಯಾಡಿ ।। 
ಪರಮಪೂಜ್ಯ ಶ್ರೀ ಸುಜಯೀ೦ದ್ರತೀರ್ಥರ ಅಂತಃಕರಣ ಕೋಮಲ. 
ಶ್ರೀ ಗುರುರಾಜ ಗುರುಸಾರ್ವಭೌಮರ ದರ್ಶನಕ್ಕಾಗಿ ಬರುವ ಲಕ್ಷಾವಧಿ ಯಾತ್ರಿಕರ ಸುಖ ಸೌಕರ್ಯಗಳ ಕಡೆಗೆ ಅವರ ಲಕ್ಷವು ಯಾವಾಗಲೂ ವೇಧಿಸಿರುತ್ತದೆ. 
ಪರಮಪೂಜ್ಯ ಶ್ರೀ ಸುಜಯೀ೦ದ್ರತೀರ್ಥರ ಪ್ರಯತ್ನದಿಂದ ಇಂದು ಶ್ರೀ ಕ್ಷೇತ್ರ ಮಂತ್ರಾಲಯವು ಎಲ್ಲಾ ಮತೀಯರ ಯಾತ್ರಾ ಸ್ಥಾನವಾಗಿದೆ. 
ಪರಮಪೂಜ್ಯ ಶ್ರೀ ಸುಜಯೀ೦ದ್ರತೀರ್ಥರು ಮಾಧ್ವ ಸಮಾಜದ ವಿದ್ವಾಂಸರಿಗೂ, ವಿದ್ಯಾರ್ಥಿಗಳಿಗೂ ಹಾಗೂ ಶ್ರೀ ರಾಯರ ಭಕ್ತರಿಗೂ ಅನೇಕ ಮುಖದಿಂದ ಉನ್ನತಿ, ಉತ್ಕರ್ಷಗಳನ್ನು ಸಾಧಿಸಲಿಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. 
ಸಮಾಜದ ಕಲ್ಯಾಣಾಕಾಂಕ್ಷಿಗಳಾದ ಪರಮಪೂಜ್ಯ ಶ್ರೀ ಸುಜಯೀ೦ದ್ರತೀರ್ಥರು ಕಂಡರಿಸುವ ಕನಸುಗಳಲ್ಲಿ ನಮ್ಮ ಸಮಾಜಕ್ಕೆ ಭವ್ಯ ಭವಿಷ್ಯಕ್ಕೆ ನಾಂದಿ ಹಾಡಿತು. 
ಮುಂದೆ ಪರಮಪೂಜ್ಯ ಶ್ರೀ ಸುಜಯೀ೦ದ್ರತೀರ್ಥರು ಶಿಷ್ಯ - ಪ್ರಶಿಷ್ಯರು ಶ್ರೀ ಕ್ಷೇತ್ರ ಮಂತ್ರಾಲಯವನ್ನು ಸರ್ವತೋಮುಖ ಅಭಿವೃದ್ಧಿ ಹೊಂದುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಹೆಸರು : ವಿದ್ವಾನ್ ಶ್ರೀ ವೆಂಕಟರಾಘವೇಂದ್ರಾಚಾರ್ಯರು 
ತಂದೆ : ಪೂಜ್ಯಶ್ರೀ ಸುಜ್ಞಾನೇಂದ್ರಾಚಾರ್ಯರು 
ತಾಯಿ : ಸಾಧ್ವೀ ಲಕ್ಷ್ಮೀಬಾಯಿ
ವಿದ್ಯಾ ಗುರುಗಳು : ನ್ಯಾಯ - ವೇದಾಂತ ವಿದ್ವಾನ್ ಶ್ರೀ ಧಾರಾಪುರಂ ಕೃಷ್ಣಾಚಾರ್ಯರು 
ಕ್ಷಿತಿಲಿ ಎಲತ್ತೂರು ಧಾರಾಪುರದ ।
ಅತುಲ ಕೃಷ್ಣಾರ್ಯರಲಿ ಓದಿದ ।।
ಸಹಪಾಠಿ : ಗುನ್ನಾಳ ವೆಂಕೋಬಾಚಾರ್ಯರು
ಗುನ್ನಾಳ ವೆಂಕೋಬಾಚಾರ್ಯರ ।
ಘನ್ನ ಸಹಪಾಠಿಗಳು ।
ಉನ್ನಂತ ಮಧ್ವ ಶಾಸ್ತ್ರ ।
ಸಣ್ಣ ವಯದಲಿ ಕಲೆತು ।।
ಆಶ್ರಮ ಸ್ಥಳ :  ನಂಜನಗೂಡು 
ಶ್ರೀ ನಂಜನಗೂಡಿನಲಿ ।
ನಾನಾ ವೈಭವದಿಂದ ।
ಸಾನುರಾಗದಿ ಆಶ್ರಮದಿ ।
ಜಾನಕೀಶ ಲಕುಮೀಶನಂಘ್ರಿಯ ।।   
ಆಶ್ರಮ ಗುರುಗಳು : ಶ್ರೀ ಸುಯಮೀ೦ದ್ರತೀರ್ಥರು 
ವೇದಾಂತ ಸಾಮ್ರಾಜ್ಯಾಧಿಕಾರ : ಕ್ರಿ ಶ 1967 - 1986 
ಆಶ್ರಮ ಶಿಷ್ಯರು : ಶ್ರೀ ಸುಶಮೀ೦ದ್ರತೀರ್ಥರು 
" ಗ್ರಂಥಗಳು " 
1. ಗುರುಗುಣಸ್ತವನದ ಕನ್ನಡ ವ್ಯಾಖ್ಯಾನ
2. ಶ್ರೀ ಕೃಷ್ಣ ಚಾರಿತ್ರ್ಯ ಮಂಜರೀ ಕನ್ನಡ ವ್ಯಾಖ್ಯಾನ
3. ಶ್ರೀಮನ್ಮಧ್ವಮತಮ್ - ಮಹಾ ಪ್ರಬಂಧ
4. ಶ್ರೀ ರಾಮಾಚಾರಿತ್ರ್ಯ ಮಂಜರೀ ಕನ್ನಡ ವ್ಯಾಖ್ಯಾನ
5. ಪಂಚಲಕ್ಷಣಿಯ ಮೇಲೆ ಪ್ರೌಢ ಲೇಖನ 
ಆರಾಧನೆ : ಮಾಘ ಶುದ್ಧ ಚತುರ್ಥೀ 
ಬೃಂದಾವನ ಸ್ಥಳ : ಶ್ರೀ ಕ್ಷೇತ್ರ ಮಂತ್ರಾಲಯ
ಮೃತ್ತಿಕಾ ಬೃಂದಾವನ ಸ್ಥಳಗಳು : 
ನವದೆಹಲಿ - ಹೈದ್ರಾಬಾದ್ 
ತೆರಳಿದರು ಹರಿಪುರಕೆ 
ಸುಜಯೀ೦ದ್ರರು ।
ಶಿರಿ ಮೂಲರಾಮನ್ನ 
ಗುರುವರರ ಪದ ಜಪಿಸಿ ।। ಪಲ್ಲವಿ ।। 
.... ವಿದ್ಯಾ ಪೀಠವ ರಚಿಸಿ 
ವಿದ್ವತ್ಸಭೆಗಳಗೈದು ।
 ಸದ್ಮಂತ್ರ ಸದನ ಪರ 
ಹೃದ್ವಾಸ ಲಕುಮೀಶನ ।
 ಪದ್ಮ ಅಡಿಗಳ ಭಜಿಸಿ 
ಕ್ರುದ್ಧ ರಹಿತಾ ಮಾಘ ।
 ಶುದ್ಧ ಚೌತಿಯು ಶೋಕ 
ಅಬ್ಧಿಯೊಳಗೆನ್ನದ್ದಿ ।। 
" ಉಪ ಸಂಹಾರ " 
ಶ್ರೀಮದಾಚಾರ್ಯರ ಸಂಸ್ಥಾನಾಧಿಪತಿಗಳಾಗಿ ತಮ್ಮ ಗುರುಪಾದರಾದ ಶ್ರೀ ಸುಯಮೀ೦ದ್ರತೀರ್ಥರ ಅಪ್ಪಣೆಯಂತೆ ತಮ್ಮ ಪಾಂಡಿತ್ಯ, ವಿದ್ವಜ್ಜನ ಪೋಷಣೆ: ಶ್ರೀ ಮಹಾ ಸಂಸ್ಥಾನಭಿವೃದ್ಧಿ: ಶ್ರೀ ಕ್ಷೇತ್ರ ಮಂತ್ರಾಲಯಾಭಿವೃದ್ಧಿ ಮುಂತಾದ ಕಾರ್ಯಗಳಿಂದ ಲೋಕ ಮಾನ್ಯರಾದವರು ಪ್ರಾತಃಸ್ಮರಣೀಯ ಪರಮಪೂಜ್ಯ ಶ್ರೀ ಸುಜಯೀ೦ದ್ರತೀರ್ಥರು. 
ಶ್ರೀ ದ್ವೈತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯವಾದ ಶ್ರೀಮದಾಚಾರ್ಯರ ಮಹಾ ಸಂಸ್ಥಾನಾಧಿಪತಿಗಳಲ್ಲಿರಬೇಕಾದ ಸದ್ಗುಣಗಳೆಲ್ಲವೂ ಶ್ರೀ ಶ್ರೀಗಳವರಲ್ಲಿ ವಿರಾಜಿಸುತ್ತಿತ್ತು. 
ಶ್ರೀ ಶ್ರೀಗಳವರು ಅನ್ನದಾನ - ಜ್ಞಾನದಾನ - ಪಂಡಿತ ಪೋಷಣೆ - ತೀರ್ಥ ಯಾತ್ರ ಮಾಡುವುದೂ - ಶಿಷ್ಯರೂ, ಭಕ್ತರೂ ಹಾಗೂ ಧಾರ್ಮಿಕರಾದ ಸುಜನರನ್ನು ಉದ್ಧರಿಸುವುದೂ ಇವುಗಳಲ್ಲಿ ಆಸಕ್ತರಾಗಿದ್ದರು. 
ಸೇವಿಸುವ - ಸ್ತುತಿಸುವ ಜನರ ಮನೋಭೀಷ್ಟಗಳನ್ನು ಕೊಡುವುದರಲ್ಲಿ ಕಾಮಧೇನುವಿನಂತಿರುವವರೂ ಮತ್ತು ಕಾಂತಿ ಸಂಪದ್ಭರಿತರೂ ಪ್ರಾತಃಸ್ಮರಣೀಯ ಪರಮಪೂಜ್ಯ ಸುಜಯೀ೦ದ್ರತೀರ್ಥರು!! 
ಸುಯಮೀ೦ದ್ರ ಕರಾಬ್ಜೋತ್ಥ೦ 
ಸುವಿದ್ಯಾ ಬೋಧಕಂ ಸದಾ ।
 ಸುಮೂಲರಾಮ ಪೂಜಾಢ್ಯ೦ 
ಸುಜಯೀ೦ದ್ರ ಗುರು೦ಭಜೇ ।। 
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
******





No comments:

Post a Comment