Wednesday 1 May 2019

susheelendra teertharu 1926 hosaritti matha rayara mutt yati 34 ashada shukla triteeya ಸುಶಿಲೇಂದ್ರ ತೀರ್ಥರು





info from sumadhwaseva.com--->

Sri Susheelendra Theerthara 


Sanyasa Period – 1912-1926
(Rayara Mutt Parampare)
Aradhana – Ashada Shudda Triteeya
Poorvashrama Naama – Krishnacharya
Ashrama Gurugalu – Sri Sukruteendra Thirtharu
Ashrama Shishyaru – Sri Suvrateendra Tirtharu
Vrundavana – Hosaritti (near Savanoor)

Vidya Gurugalu -

Sri Suprajnendra Tirtharu – Kavya, Nataka, alankara, vedanta
Sri Huli Hanumantacharyaru – Nyaaya, Meemamsa
Sri Sukruteendra Tirtharu – Dwaitha Shastra



During his period he asked Sri Goudagiri Venkataramanacharyaru to write Khandana Grantha for Chandrika Khandana. Sri Anantha Krishna Shastri had written a Khandana Grantha for “Chandrika” titled “Chandrika khandana”. For this Sri Goudagiri Venkataramanacharyaru wrote “Chandrika Prakasha Prasara” for Khandana of Advaitha Grantha. This is one of the achievements.


He started “Srimatsameerasamaya Samvardini Sabha”, wherein he gave scope for Dharmaprachara, Sanmana of Madhwa Pandits, Vakyaartha, dvaitha-advaita-vishistadvaitha pandits were also invited to participate in the Sabha.


Bless of rain – Once there was a severe draught in Gadhwala Kingdom for nearly two years. At that time the king was Seetharama Bhoopala. Some of his ministers recommended him to approach Sri Susheelendra Tirtharu in Mantralaya. The King immediately approached the seer, who agreed to visit his palace. It is was to the surprise of one and all that the rain started as soon as the seer entered the main gate of the palace and it continued for nearly 13 days, that too during “Magha”masa. The king was overwhelmed with joy and he asked the seer to stay for more period in his city only.


Bless of Children – Then the king asked Sri Susheelendra Tirtharu that he had two wives but without children and pursued him to stay for some time and do the pooja in his palace. The seer agreed and did the pooja for one month, during which time, the elder wife of the king conceived. The king felt that it was with the anugraha of Rayaru and Susheelendra Tirtha’s pooja that his wife is getting the child and asked the seer to stay until she delivers. The seer agreed and was regularly doing the pooja in his place only. The King’s second wife also conceived during this time. The king was so happy that he did the pooja of the seer with great enthusiasm and he honoured him.“Bala Chakravathi” – On hearing the miracles done by the seer the Hyderabad’s Navaaba also sent in h is officers to invite the seer to his kingdom. The seer agreed and visited his palace and was honoured by the Musalman Navaab and the seer gave him phala mantraakshate and blessed him. The Navaab called the seer as “Baala Chakravatthi”.


Mruthika Vrundavana prathistapana at Udupi – Once Sri Vibudapriya Tirtharu of Adamaru Mutt, the paryaaya seer at Udupi sent invitation to Sri Susheelendra Tirtharu to come to Udupi. The seer went to Udupi and was approached by the “Asta Mutt” Yathees to do the prathistapane of Rayaru at Udupi, which he agreed and did the pratistapane.“Abhinava Raghavendra” – Once a poet by name Sri Nanjundaiya from Nanjanagud wrote a Kaavya in the name of “Abhinava Raghavendra” praising the Seer, but the seer didn’t liked the same and asked him to throw in the river. However, after the vrundavana pravesha of the seer Sri Elmattur Krishnachar printed the same kavya.


“Chandrika Prakasha Prasara” – Once Mahamahopaadyaya Anantha Krishna Swami, an advaitee scholar wrote “Chandrika Khandana”, a Khandana grantha on “Chandrika” of Vyasarajaru. Then immediately the seer asked Sri Goudagere Venkataramanacharya to write the Mandana Grantha bearing all the expenses in printing the said grantha with title “Chandrika Prakasha Prasara”.


First initiated Printing of Panchangas.

for Further Details pl click here

SRI SUSHEELENDRA TIRTHA – Kannada


SRI SUSHEELENDRA TIRTHA – English


******



info from madhwamrutha.org--->


Sri Susheelendra Theertha considered as the doyen of madhwa samaja & source of madhwa siddantha beginning of 20th century. He played a very important role in creating roadmap for dwaitha siddantha during 20th century & beyond by doing jnana prachara (Spreading knowledge) by many folds. He Started publishing many Madhwa siddantha scripts through journals, magazines & teaching number of high quality students who became scholars in later period. He also strived very hard to create a unity among all the madhwa linages and also with other section of Hindu community including Advaitha & Vishitadvaitha etc. Some brief life history of Sri Susheelendra Thirtaru captured below.

Sri Krishnacharya was the Poorvashrama younger brother of Sri Sukruteendra Theertha belong to Shastika Begamudre manatana. He did his initial education under Sri Suprajnendra Theertha. Later  with Huli Hanumantacharya and did his higher education on Dwaitha Philosophy under Sri Sukruteendra Theertha. After his education Krishnacharya took initiative to invite scholars of different schools (Dwaitha, Adviatha, Visisthavaitha) & facilitate high quality debates / discussion on  various philosophical topics. This gathering become the talk of the town in scholars. Later Sri Sukruteedra theertha named it as “Srimath Sameera Samaya Samvardhini Sabha”. This Sabha was very successful & recognized by scholars of Mysore kings & it became a massive assembly of scholars of all schools. The scholars were honoured greatly by the mutt & assisted them for their further education through mutt libraries & facilities. During this period he got in contact with all legendary scholars of those days & every one respected Sri krishnacharya with heavenly. 

Seeing his passion & recognizing his spiritual leadership Sri Sukruteendra Theertha gave ashrama to Sri Krishnacharya & named him as Sri Susheelendra Theertha. He became 34th saint from Sri Madhwacharya in his direct linage.
During initial days of his ashrama he extensively toured most places around northern Karnataka & Tamilnadu to integrate madhwa people & ignite the madhwa philoshophy which was declining during this period.
After adorned in the seat of samstana his spiritual brilliance reached highest peak. He was a legend in the divine world. The encouragement, respect & support to scholars by swamiji after he attained sanyasa was extraordinary. He became known for his generosity. In the very second year of his sanyasa the swamiji had a conference of a very large number of scholars at Nanjangud the head quarter of Sri Madhwacharya moola samstana. It was a milestone achievement, that a large number of scholars gathered at palace comprised from different sects advocating their philosophies. The debates that ensued excellent exchange of viewpoints & conclusions, swamiji himself over seeing the arrangements of the sabha honoured the scholars with huge rewards & recognitions, the manner of serving dainties and delicacies of every description. This brought about an everlasting fame for the swamiji and the Mutt as well. Such conferences under the aegis of Srimath Sameera Samaya Samvardhini Sabha became regular annual events.
Swamiji’s genius and interest were multifaceted. Apart from being a pioneer of such meticulously organised massive assemblies, he was instrumental in making way for achieving many milestones. He made a very beautiful golden Mantap and worshipped Moolarama in that.
Sri Vibudhapriya Theertha of Adamar Mutt was in charge of the affairs of Krishna Mutt at Udupi. He too was a great scholar. Known for his ingenuity. Vibudhapriya who had heard of the fame of Susheelendra Theertha invited him to Udupi. Accepting this invitation, the swamiji went to Udupi. Vibudhapriya Theertha had made excellent arrangements to receive the swamiji. The swamiji was taken in procession seated in a bedecked palanquin from the outskirts of the town. This two mile long procession was very astonishing for the citizens of Udupi. 
As the procession neared the Krishna temple, the swamiji alighted from the palanquin. Vibudhapriya received the swamiji holding his hand warmly. He exchanged greetings and enquiries. It reminded of the meeting of Vadiraja and Vijayeendra Theertha in the past. The swamiji had Dhoolidarshan of Udupi Lord Krishna and offered rupees seven thousand to the deity. 
To commemorate his visit, the swamiji next day installed the Vrundavana of Sri Gururaja at the Mutt at the same place which was gifted by Sri Vadirajaru to Sri Vijayeendra Theertha.It is in the same place Sri Rayaru stayed when he visited Udupi & created many granthas & Sri Krishna idol.  The glory of installation of this Vrundavana exactly opposite to the idol of Lord Krishna was extraordinary. In the history of the Mutt this is an unprecedented event and a service of exceptional kind that the swamiji did to Sri Gururaja. Lord Krishna must have been greatly pleased to have the most devoted seated in front offering his worship forever. That was why the Lord too looked more glorious that day than ever.
The swamijis of other Ashta Mutts had the Padapooja of the swamiji performed. The swamiji proceeded to North Karnataka after doing the system of rituals and daily worship of Sri Gururaja at Mantralaya.
Through his scholarship & authority on the subjects Sri Susheelendra Theertha was well respected by all section of the madhwa & other mutts. He initiated publishing of many philosophical works from mutt & this is the first in its kind during that days. He thought many students & they become high quality scholars, among them are Ritti Dheerendracharya, Durgam Bheemacharya, H N Raghavendracharya,  Saahukar Narasimhacharya, Raja Srinivasamurthyacharya, Chandur Govinda Krishnacharya, Goudagere venkataramanacharya (who wrote “Chandrika Prakasha Prasara” on the instructions swamiji to refute mahamahopadyaya Ananthakrishna Shastri’s khandana on Sri Vyasarajaru “Chandrika grantha).Later that spiritual wisdom passed on by Chandur Acharya & Goudagere acharya to many of his students including  Doddaballapuram Vasudevacharya, Sethumadhavacharya( Sri Satyadhayana Theertha), etc. Thus Sri Sheelendra Theertha foresee needs of 20th century and created solid base for  spreading spiritual light for future generations. It reminds us the great work done by Sri Vibhudendra theertha centuries ago. There were no scholars of that time who are not influenced by swamiji’s spiritual leadership.
Sri Susheelendra Theertha through his brilliant spiritual leadership developed very good rapport with all his contemporaries which include Sri Vidyaratnakara Theertha, Sri Vidya varidhi Theertha of Sri Vyasaraja mutt, all Asta mutt swamijis of udupi, Sri Medhanidhi theerhta of Sripadaraja mutt.Sri Satyadhayana thirta of uttaradi mutt & they had a very cordial relationship. Legend says that the Later used to approach his senior contemporary Sri Susheelendra Theerthata to solve many complicated spiritual / philosophical questions. Sri Susheelendra Theertha & Sri Satyadhyana Theertha have together done their samstana pooja at Bellary Sri Satyanarayana temple, when later helped Sri Satyadhayana thirta to solve restrictions for movement around that place.
Thus the entire life of swamiji lasted as an occasion of great festivity. When swamiji was touring Hubli region, he was slightly indisposed. Immediately he hurried to the village Ritti, the abode of Dheerendra Theertha, where he sent for his confidant and the Dewan of the Mutt Huli Krishnacharya and bestowed sanyasa on him and named him “Suvrateendra Theertha”. On the third day of Ashada Shudha in Akshaya Samvatsara, he reached the Lotus feet of Lord Krishna.
There are many stotras made by various scholars on Sri Susheelendra Theertha, some including
  1. Sri Susheelendra mangala ratnamala – Composed by Sri Raja Gururajacharya
  2. Sri Susheelendra Stotram  – Archaka Vedavyasacharya
  3. Srimatsuheelendra Stutimala – Srinivasabhatta
  4. Srimatsuheelndra thirta yativarya navaratnamala – Phadesagooru Venkobhacharya
  5. Sri Susheelendra Vijaya Kavya – Vidwan Nanjundaswamy
**********
Aradhana : Hosaritti : 15.07.2018 / Sunday:
****

||ಪಾವನ ದಿಗ್ವಿಜಯ ಸೇವಾ ಸಮಿತಿ||
||ಶ್ರೀ ಮೂಲ ರಾಮೋ ವಿಜಯತೇ||
||ಶ್ರೀ ಶ್ರೀ ಸುಶಿಲೇಂದ್ರತೀರ್ಥ ಗುರುಭ್ಯೋ ನಮಃ||
ಸುಧಾದ್ಯಮಲಸಧ್ಬೋಧಂ ಸುಕೀರ್ತಿವಿಲಸದ್ದಿಶಮ್|
ಸುಧೀಸಂಸ್ತುತ್ಯಸುಗುಣಂ ಸುಶೀಲೇಂದ್ರ ಗುರುಂ ಭಜೇ||
 
||ಶ್ರೀ ಸುಶೀಲೇಂದ್ರ ತೀರ್ಥೋ ವಿಜಯತೇ||

ಆಶ್ರಮ ನಾಮ - ಶ್ರೀ ಸುಶೀಲೇಂದ್ರತೀರ್ಥರು
ಸಂನ್ಯಾಸ ಅವಧಿ - 1912-1926
ಆರಾಧನಾ - ಆಶಾಡಾ ಶುದ್ಧ ತ್ರಿತೇಯ
ಪೂರ್ವಾಶ್ರಮ ನಾಮ - ಕೃಷ್ಣಾಚಾರ್ಯರು
ಆಶ್ರಮ ಗುರುಗಳು - ಶ್ರೀ ಸುಕೃತೀಂದ್ರ ತೀರ್ಥರು
ಆಶ್ರಮ ಶಿಷ್ಯರು - ಶ್ರೀ ಸುವ್ರತೀಂದ್ರ ತೀರ್ಥರು
ವೃಂದಾವನ - ಹೊಸರಿತ್ತಿ 
ವಿದ್ಯಾ ಗುರುಗಳು -
ಶ್ರೀ ಸುಪ್ರಜ್ಞೇಂದ್ರ ತೀರ್ಥರು - ಕಾವ್ಯ, ನಟಕ, ಅಲಂಕರ, ವೇದಾಂತ
ಶ್ರೀ ಹುಲಿ ಹನುಮಂತಾಚಾರ್ಯರು - ನ್ಯಾಯಾ, ಮೀಮಾಂಸೆ

ಹಂಸನಾಮಕ ಪರಮಾತ್ಮನ ನೇರ ಪೀಳಿಗೆ ಅವಿಚ್ಚಿನ್ನವಾಗಿ ನಡೆದು ಬಂದ, ಸನಕಾದಿಗಳಿಂದ ಮುಂದುವರಿದ, ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ವಿದ್ಯಾ ಮಠದ ಸಿಂಹಾಸನಾಧೀಶ್ವರರಾಗಿ, ವೇದಾಂತ ಸಾಮ್ರಾಜ್ಯದ ದಿಗ್ವಿಜಯ ಚಕ್ರವರ್ತಿಗಳಾಗಿ , ಚತುರ್ಯುಗ ಮೂರುತಿ ಚತುರ್ಮುಖಬ್ರಹ್ಮ ಕರಾರ್ಚಿತ ಶ್ರೀ ಸೀತಾಪತಿ ಶ್ರೀ ಮನ್ ಮೂಲ ರಾಮದೇವರನು ಪೂಜಿಸಿ ಪೂತಾತ್ಮರಾಗಿ, ಉಭಯ ವಂಶಾಬ್ಧಿ ಚಂದ್ರಮರು, ಪರವಾದಿ ನಿಗ್ರಹ,  ದ್ವೈತ ಸಿದ್ಧಾಂತ ಸ್ಥಾಪನೆ, ನಿರಂತರ ಪಾಠ ಪ್ರವಚನ, ಪಂಡಿತರ ವಿದ್ವಾಂಸರ ಪೋಷಣೆ, ಸದ್ಭಕ್ತರಿಗೆ ಅನುಗ್ರಹ, ತೀರ್ಥ ಕ್ಷೇತ್ರಗಳ ಸಂದರ್ಶನಗಳನ್ನು ಮಾಡಿ ತಮ್ಮ ಜೀವಿತ ಬಹುಕಾಲ ಶ್ರೀಕ್ಷೇತ್ರ ಮಂತ್ರಾಲಯದ ಶ್ರೀ ರಾಯರ ಮೂಲ ವೃಂದಾವನ ಸನ್ನಿಧಿಯಲ್ಲಿ ಕಳೆದು ಶ್ರೀಮಠವನ್ನು ಅಭಿವೃದ್ಧಿಗೊಳಿಸಿದ್ದಾರೆ.

ಪ್ರಪ್ರಥಮ ಬಾರಿಗೆ ಪಂಚರಾತ್ರೋತ್ಸವವನ್ನು ಶ್ರೀ ರಾಯರ ಆರಾಧನಾ ಕಾಲದಲ್ಲಿ ಪ್ರಾರಂಭಿಸಿ, ವಿದ್ಯಾ ಮತ್ತು ಸಿದ್ಧಾಂತ ಪ್ರಸಾರಕ್ಕಾಗಿ " ಶ್ರೀ ಸಮೀರ ಸಮಯ ಸಂವರ್ಧಿನೀ " ಯೆಂಬ ವಿದ್ವತ್ಸಭೆಯನ್ನು ಆರಂಭಿಸಿ ಸಕಲ ಶಾಸ್ತ್ರಾರ್ಥ ವಿಚಾರ, ವಿಮರ್ಶೆ, ಅನುವಾದಗಳನ್ನು ನಡೆಸಿ ವಿದ್ವಾಂಸರನ್ನು ಪೋಷಣೆ ಮಾಡುತ್ತಿದ್ದರು.
ದ್ವೈತ ಶಾಸ್ತ್ರ ಅಧ್ಯಯನಕ್ಕಾಗಿ ಪಾಠಶಾಲೆಯನ್ನು ಸ್ಥಾಪಿಸಿದ್ದಾರೆ.
 ಶ್ರೀ ಮೂಲರಾಮದೇವರಿಗೆ ಸುವರ್ಣ ಮಂಟಪವನ್ನು ನಿರ್ಮಾಣ ಮಾಡಿಸಿ ಶ್ರೀ ಮೂಲರಾಮನನ್ನು ಪೂಜಿಸಿದರು.
ಅನೇಕ ಮಹಿಮೆಗಳಿಂದ ಸಜ್ಜನರನ್ನು ಉದ್ಧರಿಸಿ, ಧೀರಸಿಂಹರೆಂದು ಪ್ರಖ್ಯಾತರಾದ ಶ್ರೀ ಧೀರೇಂದ್ರ ತೀರ್ಥರ ಮೂಲ ವೃಂದಾವನದ ಪಕ್ಕದಲ್ಲಿ  ಬೃಂದಾವನಸ್ಥರಾಗಿ ವಿರಾಜಿಸುತಿದ್ದಾರೆ.
***

Wednesday 24.06.2020
ಶ್ರೀಂ ಶ್ರೀ ಕಂ ಕಪಿಲಾಯ ನಮಃ
ಶ್ರೀಮದ್ವ್ಯಾಸರಾಜ  ಮಠದ, 17ನೇ ಶತಮಾನದ ಯತಿಗಳಾದ, ಶ್ರೀ ಲಕ್ಷ್ಮೀನಾರಾಯಣತೀರ್ಥರ ಶಿಷ್ಯರೂ, ಶ್ರೀ ಭಾಷ್ಯದೀಪಿಕಾಚಾರ್ಯರ ಗುರುಗಳೂ, ಶ್ರೀ ಚಂದ್ರಿಕಾಚಾರ್ಯರ ಬೃಹತ್ ಗ್ರಂಥವಾದ ತಾತ್ಪರ್ಯಚಂದ್ರಿಕಾ ವನ್ನು ಪೂರ್ಣಮಾಡಿ (ಶ್ರೀ ಚಂದ್ರಿಕಾಚಾರ್ಯರು ತಿಳಿಸಿದಂತೆ)  ಶೇಷಚಂದ್ರಿಕಾಚಾರ್ಯರೆಂದೆ ಖ್ಯಾತರಾದ ಶ್ರೀ ರಘುನಾಥತೀರ್ಥರ ಆರಾಧನಾ ಮಹೋತ್ಸವ ಇಂದಿನಿಂದ ಮೂರುದಿನ, ನಮ್ಮ ತಿ. ನರಸೀಪುರದ ತಿರುಮಕೂಡಲಿನಲಿ.. 

ಹಾಗೆಯೇ ಶ್ರೀ ರಾಯರ ಮಠದ 19ನೇ ಶತಮಾನದ  ಯತಿಗಳು, ಶ್ರೀ ಸುಕೃತೀಂದ್ರತೀರ್ಥರ ಶಿಷ್ಯರು, ಶ್ರೀ ಸುವೃತೀಂದ್ರತೀರ್ಥರ ಗುರುಗಳು, ಮಾಘಮಾಸದಲ್ಲಿಯೂ ಮಳೆಯನ್ನು ತರಿಸಿದ ಮಹಾನ್ ಚೇತನರೂ, ಬಾಲ ಚಕ್ರವರ್ತಿ ಎಂದು ಹೈದರಾಬಾದ್ ನವಾಬಿನಿಂದ ಶ್ಲಾಘಿತರಾದ , ಉಡುಪಿಯಲ್ಲಿ ರಾಯರ ಮೃತ್ತಿಕಾ ವೃಂದಾವನವನ್ನು ಪ್ರತಿಷ್ಠೆ ಮಾಡಿದ ಶ್ರೀ ಸುಶೀಲೇಂದ್ರತೀರ್ಥರ ಆರಾಧನಾ ಮಹೋತ್ಸವ ಇಂದು..
ಶ್ರೀ ಯತಿದ್ವಯರ ಅನುಗ್ರಹ ಸದಾ ನಮ್ಮ ಎಲ್ಲರಮೇಲಿರಲಿ ಎಂದು ಪ್ರಾರ್ಥನೆಮಾಡುತ್ತಾ.... 

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽

***



" ಶ್ರೀ ಸುಶೀಲೇಂದ್ರ  - 1 "
" ದಿನಾಂಕ : 24.06.2020 ಬುಧವಾರ - ಆಷಾಢ ಶುದ್ಧ ತೃತೀಯ - ಶ್ರೀ ರಾಯರ ಉಭಯ ವಂಶಾಬ್ಧಿ ಚಂದ್ರಮರೂ - ಶ್ರೀ ರಾಯರ ಅಂತರಂಗ ಭಕ್ತರೂ - ದ್ವೈತ ವಿದ್ಯಾ ಕೋವಿದರೂ ಆದ  ಶ್ರೀ ಸುಶೀಲೇಂದ್ರ ತೀರ್ಥರ ಆರಾಧನಾ ಮಹೋತ್ಸವ - ಹೊಸರಿತ್ತಿ "
" ವೃಂದಾರಕಾಂಶಜರು ಶ್ರೀ ಸುಶೀಲೇಂದ್ರತೀರ್ಥರು "
ರಾಗ : ತೋಡಿ ತಾಳ : ರೂಪಕ
ಇಂದು ನೋಡಿದೆ 
ಸುಶೀಲೇಂದ್ರ ಗುರುಗಳ ।। ಪಲ್ಲವಿ ।।
ಕುಂದಣದ ಶಿಖರ । ಮೌಕ್ತಿಕ ।
ದಿಂದ ವಿರಾಜಿಸುವ ರಜತ ।
ಅಂದಣವನೇರಿ । ಸಂಭ್ರಮ ।
ದಿಂದ ಮೆರೆದು 
ಬರುವ ಗುರುಗಳ ।। ಆ. ಪ ।।
ಧ್ವಜ ಪತಾಕೆ ಶ್ವೇತ ಛತ್ರ ।
ರಜತ ವರ್ಣ ಚವರ ಚಾಮರ ।
ಭಜಿಪ ಭಟರ ಸಂದಣಿ ಮಧ್ಯ ।
ರಜನಿಪತಿಯ ತೆರದಿ 
ಶೋಭಿಪರಿಂದು ।। ಚರಣ ।।
ಭೇರಿ ಕಹಳೆ ವಾದ್ಯನೇಕ ।
ಚಾರುತರ ಶೃಂಗಾರವಾದ ।
ವಾರಣಗಳು ಎಡ ಬಲದಲಿ ।
ಸಾರಿ ಬರುವ 
ಸಂಭ್ರಮವನು ।। ಚರಣ ।।
ಎಲ್ಲಿ ನೋಡೆ ಪಾಠ ಪ್ರವಚನ ।
ಎಲ್ಲಿ ನೋಡೆ ವೇದಶಾಸ್ತ್ರ ।
ಎಲ್ಲಿ ನೋಡಲಲ್ಲಿ । ಲಕುಮಿ ।
ನಲ್ಲನ ಸತ್ಕಥಾಲಾಪ ।। ಚರಣ ।।
ಆ ಮಹಾ ಸುಶೋಭಿತವಾದ ।
ಹೇಮ ಮಂಟಪ ಮಧ್ಯ । ಮೂಲ ।
ರಾಮಾರ್ಚನೆ ಗೈವವಂದ ।
ಪ್ರೇಮದಿ ನೋಡಿ 
ಧನ್ಯನಾದೆ ।। ಚರಣ ।।
ಆ ಮಹಾ ಗುರುವರ್ಯರ ಪದ ।
ತಾಮರಸವ ಪೊಂದಿದ ಭಕ್ತರ ।
ನೇಮದಿಂ ವರದೇಶವಿಠಲ ।
ಕಾಮಿತಾರ್ಥಗಾರೆವ್ವ ಸತ್ಯ ।। ಚರಣ ।।
ಹದಿನಾಲ್ಕು ವರ್ಷಗಳ ಕಾಲ ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಚಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರ ಸ್ವಾಮಿಗಳವರ ವೇದಾಂತ ದಿಗ್ವಜಯ ವಿದ್ಯಾ ಸಿಂಹಾಸನದಲ್ಲಿ ವಿರಾಜಮಾನರಾಗಿ; ಪರವಾದಿ ನಿಗ್ರಹ - ದ್ವೈತ ಸಿದ್ಧಾಂತ ಸ್ಥಾಪನೆ - ಪಾಠ ಪ್ರವಚನ; ಶಿಷ್ಯ ಭಕ್ತ ಜನೋದ್ಧಾರ - ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸಿ ಪವಿತ್ರಾತ್ಮರಾಗಿ ಶ್ರೀ ಕ್ಷೇತ್ರ ಮಂತ್ರಾಲಯದ ಶ್ರೀ ರಾಯರ ಮೂಲ ವೃಂದಾವನ ಸನ್ನಿಧಾನವನ್ನು ವಿವಿಧ ರೀತಿಯಲ್ಲಿ ಅಭಿವೃದ್ಧಿ ಪಡಿಸಿದರು.
ಪ್ರಪ್ರಥಮ ಬಾರಿಗೆ ಪಂಚರಾತ್ರೋತ್ಸವವನ್ನು ಶ್ರೀ ರಾಯರ ಆರಾಧನಾ ಕಾಲದಲ್ಲಿ ಪ್ರಾರಂಭಿಸಿ ಸೇವಿಸಿ, ವಿದ್ಯಾ ಮತ್ತು ಸಿದ್ಧಾಂತ ಪ್ರಸಾರಕ್ಕಾಗಿ " ಶ್ರೀ ಸಮೀರ ಸಮಯ ಸಂವರ್ಧಿನೀ " ಯೆಂಬ ವಿದ್ವತ್ಸಭೆಯನ್ನು ಆರಂಭಿಸಿ ಸಕಲ ಶಾಸ್ತ್ರಾರ್ಥ ವಿಚಾರ - ವಿಮರ್ಶೆ - ಪಂಡಿತ ಪೋಷಣೆ - ದ್ವೈತ ಶಾಸ್ತ್ರ ಅಧ್ಯಯನಕ್ಕಾಗಿ ಪಾಠಶಾಲೆಯನ್ನು ಸ್ಥಾಪಿಸಿ; ಶ್ರೀ ಮೂಲರಾಮದೇವರಿಗೆ ಸುವರ್ಣ ಮಂಟಪವನ್ನು ನಿರ್ಮಾಣ ಮಾಡಿಸಿ ಶ್ರೀ ಮೂಲರಾಮನನ್ನು ಪೂಜಿಸುತ್ತಾ...
ಶ್ರೀ ಗುರುರಾಜರ ಪ್ರತಿಮಾಸ್ಥಾನೀಯರೂ; ಅನ್ನದಾನ ಪ್ರಭುಗಳೆಂದು ಜಗನ್ಮಾನ್ಯರಾಗಿ ವಿದ್ವಜ್ಜನರಿಂದ ಸರ್ವ ಕಾಲಗಳಲ್ಲಿಯೂ ವಂದಿತರಾದವರು ಶ್ರೀ ಸುಶೀಲೇಂದ್ರತೀರ್ಥ ಶ್ರೀಪಾದಂಗಳವರು.
" ಶ್ರೀ ತಂದೆ ವರದ ಗೋಪಾಲವಿಠಲಾಂಕಿತ ಶ್ರೀ ವಾಂಯಿ ಕೃಷ್ಣಾಚಾರ್ಯರು "
ಕಾಮಧೇನು ಸುತಲ್ಪತರುವೆಂಬ-
ರತುನ ನಾಮಕ ।
ಸುಶೀಲೇಂದ್ರ ತೀರ್ಥದಿ ।
ಮಿಂದು ತಂದೆ ವರದ -
ಗೋಪಾಲವಿಠಲನ ದ್ವಂದ್ವವ 
ಕಂಡೆ ಗುರು ದಯದಿಂದ ।।
***
" ಶ್ರೀ ಸುಶೀಲೇಂದ್ರ  - 2 "
" ಶ್ರೀ ಸುಶೀಲೇಂದ್ರತೀರ್ಥರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ಕೃಷ್ಣಾಚಾರ್ಯರು
ತಂದೆ : ಶ್ರೀ ವೆಂಕಟ ರಾಘವೇಂದ್ರಾಚಾರ್ಯರು
ವಿದ್ಯಾ ಗುರುಗಳು :
ಪ್ರಸಿದ್ಧ ನ್ಯಾಯ ಶಾಸ್ತ್ರ ವಿಶಾರದರಾದ ಶ್ರೀ ಅನುವಾದಂ ನಾಮಗೊಂಡ್ಲು ಶ್ಯಾಮಾಚಾರ್ಯರು;
ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಪ್ರಜ್ಞೇಂದ್ರತೀರ್ಥರಲ್ಲಿ ನ್ಯಾಯ - ವೇದಾಂತ - ಮೀಮಾಂಸಾದಿ ಶಾಸ್ತ್ರಗಳನ್ನು ಅಧ್ಯಯನ ಮಾಡಿ ಸರ್ವಸ್ವತಿಯ ವರಪುತ್ರರಾಗಿದ್ದರು.
ಆಶ್ರಮ ಗುರುಗಳು : ಪರಮಪೂಜ್ಯ ಶ್ರೀ ಸುಕೃತೀಂದ್ರತೀರ್ಥರು
ಆಶ್ರಮ ನಾಮ : ಶ್ರೀ ಸುಶೀಲೇಂದ್ರತೀರ್ಥರು
ವೇದಾಂತ ಸಾಮ್ರಾಜ್ಯಾಧಿಪತ್ಯ : ಕ್ರಿ ಶ 1912 - 1926
" ವಿದ್ವಾನ್ ಶ್ರೀ ಕೃಷ್ಣಾಚಾರ್ಯರು ಶ್ರೀ ಸುಶೀಲೇಂದ್ರತೀರ್ಥರಾಗಿ ವಿರಾಜಿಸಿದ್ದು "
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಪ್ರಾರಂಭವಾದ ಜ್ಞಾನ ಪರಂಪರೆ - ಸಂಪ್ರದಾಯವು ಶ್ರೀಮದಾಚಾರ್ಯರಿಂದ ಶ್ರೀ ಸುಕೃತೀಂದ್ರತೀರ್ಥರ ವರೆಗಿನ ವಿಭೂತಿ ಪುರಷರಿಂದ ಸಜೀವವಾಗಿ ರೂಪಗೊಂಡು ಪರಿಪೂರ್ಣತೆಯನ್ನು ಪಡೆಯಿತು.
ಈ ಮಹಾ ಪರಂಪರೆಗೆ ಈಗ ಜೀವ ಕಲೆ ಕೊಡುವ ಮತ್ತೊಬ್ಬ ತೇಜೋಮೂರ್ತಿಗಳು ಜನತೆಗೆ ಕಾಣಿಸಿಕೊಂಡರು.ವಿದ್ವಾನ್ ಶ್ರೀ ಕೃಷ್ಣಾಚಾರ್ಯರಿಗೆ ಶ್ರೀ ಸುಕೃತೀಂದ್ರತೀರ್ಥರು ಸಂಪ್ರದಾಯ ಪದ್ಧತಿಗಳನ್ವಯ ತುರ್ಯಾಶ್ರಮ ನೀಡಿ; ತಪ್ತ ಮುದ್ರಾಧಾರಣೆ - ಮಂತ್ರೋಪದೇಶ ಮಾಡಿ " ಶ್ರೀ ಸುಶೀಲೇಂದ್ರತೀರ್ಥ " ರೆಂದು ನಾಮಕರಣದೊಂದಿಗೆ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ ಮಾಡಿಸಿಕೊಂಡ ವಿಭೂತಿ ಪುರುಷರೇ " ಶ್ರೀ ಸುಶೀಲೇಂದ್ರತೀರ್ಥರು ".
ರಾಗ : ಶಂಕರ ತಾಳ : ಕೇರ್ವಾ
ಸೂರ್ಯ ಯತಿವರ್ಯ । ಮ ।
ಧ್ವಾರ್ಯರ ಸುಮತ 
ಸರೋಜಕೆ ಸುಶೀಲೇಂದ್ರ ।। ಪಲ್ಲವಿ ।।
ಬುಧ ಜನ ವಂದಿತ ।
ಸುಧಿ ಸುವ್ರತೀಂದ್ರರ ।
ಸದಮಲಘನ ಸದ್ ।
ಹೃದಯಾಕಾಶಕೆ ।। ಚರಣ ।।
ಧರಣಿ ಸುರಾಗ್ರಣಿ ।
ಗುರು ಸುಕೃತೀಂದ್ರರ ।
ಸುರಚಿರ ಸರಸಿಜ ।
ಕರ ಪೂರ್ವಾದ್ರಿಗೆ ।। ಚರಣ ।।
ಭೂಸುರ ಸೇವಿತ ।
ಪೂಶರ ವರ್ಜಿತ ।
ಭಾಸುರವರ । ಸಂ ।
ನಾಸ ಸುಛಾಯಕೆ ।। ಚರಣ ।।
ಬಗೆ ಬಗೆಯಿಂದಯಿಂದಲಿ ।
ನಿಗಮೋಕ್ತಿಯಲಿ ।
ರಘುವರನರ್ಚಿಪ ।
ಸುಗುಣವೆಂಬ ಹಗಲಿಗೆ ।। ಚರಣ ।।
ಶ್ಯಾಮಸುಂದರನ ।
ನಾಮವ ಪೊಗಳಿದ ।
ಪಾಮರ ಮತಿ ಜನ ।
ಸ್ತೋಮ ಯಾಮಿನಿಗೆ ।। ಚರಣ ।।
***
" ಶ್ರೀ ಸುಶೀಲೇಂದ್ರ - 3 "
" ಶ್ರೀ ಸುಶೀಲೇಂದ್ರತೀರ್ಥರ ವಿದ್ಯಾ ವೈಭವ "
ಶ್ರೀಮದಾಚಾರ್ಯರ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯದಲ್ಲಿ ವಿರಾಜಿಸಿದ ಶ್ರೀ ಸುಶೀಲೇಂದ್ರತೀರ್ಥರ ಅಸಾಧಾರಣ ಪ್ರತಿಭೆಯನ್ನೂ; ವಾದಶೈಲೀ; ಪಾಠ ಪ್ರವಚನ ಕೌಶಲದಿಂದ ಮಿಂಚಿದ ಅವರ ಕೀರ್ತಿಯನ್ನು ಭೂಮಂಡಲದಲ್ಲಿ ಶ್ರೇಷ್ಠರಾದ ಜ್ಞಾನಿಗಳೂ; ಕವಿಗಳೂ ಹಾದಿ ಹೊಗಳಿದ್ದಾರೆ. ಇನ್ನು ವಿದ್ವಾಂಸರಂತೂ ಶ್ರೀ ಸುಶೀಲೇಂದ್ರತೀರ್ಥರ ಉದಾರತೆಯನ್ನೂ; ಕಾರುಣ್ಯವನ್ನೂ ಕಲ್ಪವೃಕ್ಷಕ್ಕಿಂತಾ ಅಧಿಕವೆಂದು ವರ್ಣಿಸಿದ್ದಾರೆ!!
ರಾಗ :ಕಾಂಬೋಧಿ ತಾಳ : ಝ೦ಪೆ
ಸ್ಮರಿಸು ಮಾನವಾ ।
ನಿರುತ ಶ್ರೀ ಸುಶೀಲೇಂದ್ರತೀರ್ಥರಾ ।
ವರಹಜ ತಟ । ಶ್ರೀ ವ್ಯಾ ।
ಸರಾಯರ ಕರುಣಾಪಾತ್ರರಾ ।।ಪಲ್ಲವಿ ।।
ಭಾನುಜ ಸಮಾನ ।
ದಾನಿ ದೀನಪಾಲರಾ ।
ಮಾನಿತ । ಸ ।
ನ್ಮೌನಿವರ್ಯ ಜ್ಞಾನಶೀಲರಾ ।। ಚರಣ ।।
ಪ್ರಾಣಪತಿಯ ಮತಾಬ್ಧಿಗೆ ।
ಪಾಠಿಯರೆನಿಪರಾ ।
ಕ್ಷಿಣಿ ತಳದಿ ಇವರಿಗೆ । ಸರಿ ।
ಗಾಣೆ ಜಾಣರಾ ।। ಚರಣ ।।
ಶ್ಯಾಮಸುಂದರವಿಠಲನ । ನಿ ।
ಸ್ಸೀಮ ಭಕುತರಾ ।
ಸ್ವಾಮಿ ಸುಕೃತೀಂದ್ರ ।
ಕೋಮಲ ಸಂಜಾತರಾ ।। ಚರಣ ।।
***
" ಶ್ರೀ ಸುಶೀಲೇಂದ್ರ  - 4 " 
" ವಿದ್ವಜ್ಜನ ಪೋಷಕರು ಶ್ರೀ ಸುಶೀಲೇಂದ್ರತೀರ್ಥರು "
ಶ್ರೀ ಸುಶೀಲೇಂದ್ರತೀರ್ಥರು ಪೂರ್ವಾಶ್ರಮದಲ್ಲೇ " ಶ್ರೀ ಸಮೀರ ಸಮಯ ಸಂವರ್ಧಿನೀ " ಎಂಬ ವಿದ್ವತ್ಸಭೆಯನ್ನು ಪ್ರಾರಂಭಿಸಿ; ರಾಜ - ಮಹಾರಾಜ - ಪೀಠಾಧೀಶರು ಮಾಡಬಹುದಾದ ಕಾರ್ಯವನ್ನು ಕೈಗೊಂಡ ಶ್ರೀ ಕೃಷ್ಣಾಚಾರ್ಯರ ಎದೆಗಾರಿಕೆಯನ್ನು ಕಂಡು ಜನರು ಅಚ್ಛರಿಗೊಂಡಿದ್ದರು.
ದೇಶದ ಮೂಲೆ ಮೂಲೆಗಳಿಂದ ಸರ್ವ ಶಾಸ್ತ್ರ ಕೋವಿದರಾದ ತ್ರಿಮತಸ್ಥ ವಿದ್ವಾಂಸರನ್ನು ಆಹ್ವಾನಿಸಿ; ಷಡ್ದರ್ಶನಗಳ ವಾಕ್ಯಾರ್ಥ; ವಿದ್ಯಾರ್ಥಿಗಳ ಪರೀಕ್ಷೆ; ವಿಚಾರಗೋಷ್ಠಿಗಳೊಡನೆ ಅನೇಕ ವಿದ್ವತ್ಸಭೆಗಳನ್ನು ನೆರವೇರಿಸಿದರಲ್ಲದೆ; ವರ್ಷದಲ್ಲಿ ಎರಡೆರಡು ಸ್ಥಳಗಳಲ್ಲಿ ಸಭೆಗಳನ್ನು ನೆರವೇರಿಸಿ ಸಕಲ ಸಜ್ಜನ ವಿದ್ವಾಂಸರ ಪ್ರೀತಿ ಪಡೆದ ಆಚಾರ್ಯರು; ಪೀಠಾಧಿಪತಿಗಳಾದನಂತರವೂ ವಿದ್ವತ್ಸಭೆಗಳನ್ನು ನೆರವೇರಿಸಿ " ಸಭಾ ಸ್ವಾಮಿಗಳೆಂದೇ " ಪ್ರಸಿದ್ಧರಾದರು.
ರಾಗ : ಧನ್ಯಾಸಿ ತಾಳ : ಝ೦ಪೆ
ದಾನಿಗಳೊಳು ಪ್ರತಿಗಾಣೆನೊ ನಿನಗೆ । ಸ ।
ನ್ಮಾನಿ ಶ್ರೀ ಸುಶೀಲೇಂದ್ರ ।। ಪಲ್ಲವಿ ।।
ನೀನೇವೆ ಗತಿಯೆಂದ ।
ದೀನರ ಮನೋಭೀಷ್ಟ ।
ಸಾನುರಾಗದಿ ಕೊಡುವಿ ಕೈಪಿಡಿವಿ ।। ಆ. ಪ ।।
ಶ್ರೀ ಸುಕೃತೀಂದ್ರ 
ಸಂಯಮಿಗಳಿಂದ ।
ಲಿ ಸಂನ್ಯಾಸತ್ವ ಸ್ವೀಕರಿಸಿ ।
ಭೂಸುತೆ ಪತಿ ಮೂಲ 
ದಾಶರಥಿಯ ಪಾದ ।
ಲೇಸಾಗಿ ಒಲಿಸಿದಿ 
ನೀ ಸುಜ್ಞಾನಿ ।। ಚರಣ ।।
ಕರಿವರದನ ಪೂರ್ಣ 
ಕರುಣವ ಪಡೆದು । ದಿನ ।
ಕರನಂತೆ ರಾಜಿಸುತ ।
ಗುರು ರಾಘವೇಂದ್ರಾಖ್ಯ 
ಸುರಧೇನುವಿಗೆ ಪುಟ್ಟ ।
ಕರುವೆನಿಸುತ ಮೆರೆದಿ 
ಭೂವಲಯದಿ ।। ಚರಣ ।।
ಮೋದತೀರ್ಥಾಗಮ 
ಸಾಧು ಸಜ್ಜನರಿಂದ ।
ಶೋಧಿಸಿ ಬಹು ವಿಧದಿ ।
ಮೇದಿನಿಯೋಳ್ ಪಂಚಭೇದ 
ಶಿಷ್ಯರಿಗೆಲ್ಲ ।
ಬೋಧಿಸುತಲಿ ಪೊರೆದಿ 
ದಯಾ೦ಬುಧಿ ।। ಚರಣ ।।
ಮಂದಾಕಿನಿಗೆ ಸಮ-
ವೆಂದೆನಿಸುವ ವರದಾ ।
ಸಿಂಧು ತೀರದಿ ನೆಲಸೀ ।
ಮಂದಾರಕುಜದಂತೆ 
ಮಂದ ಜನರಿಗೆ । ಕ ।
ರ್ಮಂದಿಪ ವರಗಳನು 
ನೀಡುವಿ ನೀನು ।। ಚರಣ ।।
ಶ್ರೀ ಶ್ಯಾಮಸುಂದರವಿಠಲನ 
ವಾಸಿಸುವ । ರೌ ।
ಪ್ಯಾಸನ ವರ ಕ್ಷೇತ್ರದಿ ।
ದೇಶ ದೇಶದಿ ಬಂದ 
ಭೂಸುರರಿಗೆ । ಧನ
ರಾಶಿಸೂರೆ ಮಾಡಿದಿ 
ಸನ್ಮೋದದಿ ।। ಚರಣ ।।
***
ಶ್ರೀ ಸುಶೀಲೇಂದ್ರ  - 5 " 
" ಶ್ರೀ ಕ್ಷೇತ್ರ ಉಡುಪಿಯಲ್ಲಿ ಶ್ರೀ ರಾಯರ ಮೂಲ ಮೃತ್ತಿಕಾ ವೃಂದಾವನ ಪ್ರತಿಷ್ಠಾಪನೆ "
ಶ್ರೀ ಸುಶೀಲೇಂದ್ರತೀರ್ಥರು ಶ್ರೀ ಕ್ಷೇತ್ರ ಉಡುಪಿ ಶ್ರೀ ಕೃಷ್ಣನ ದರ್ಶಕ್ಕೆ ಬಂದಾಗ ಅದಮಾರು ಮಠಾಧೀಶರಾದ ಶ್ರೀ ವಿಬುಧಪ್ರಿಯತೀರ್ಥರ ಪರ್ಯಾರ ನಡೆಯುತ್ತಿತ್ತು. 
ಶ್ರೀ ವಿಬುಧಪ್ರಿಯತೀರ್ಥರು ಪಂಡಿತರೂ ಮತ್ತು ಲೌಕಿಕ ಧುರೀಣರು.
ಶ್ರೀ ಸುಶೀಲೇಂದ್ರತೀರ್ಥರ ಕೀರ್ತಿಯನ್ನು ಕೇಳಿ ಶ್ರೀ ಕ್ಷೇತ್ರ ಉಡುಪಿಗೆ ಆಹ್ವಾನಿಸಿದ್ದರು.
ಶ್ರೀಗಳವರು ಈ ಆಹ್ವಾನವನ್ನು ಸ್ವೀಕರಿಸಿ ಶ್ರೀ ಕ್ಷೇತ್ರ ಉಡುಪಿಗೆ ದಿಗ್ವಿಜಯ ಮಾಡಿಸಿದ್ದರು.
ಶ್ರೀ ಸುಶೀಲೇಂದ್ರತೀರ್ಥರನ್ನು ಎದುರ್ಗೊಳ್ಳಲು ಶ್ರೀ ವಿಬುಧಪ್ರಿಯತೀರ್ಥರು ಮಾಡಿದ ವ್ಯವಸ್ಥೆ ಅನ್ಯಾದೃಶವಾಗಿತ್ತು. 
ಉಡುಪಿ ನಗರದ ಒಂದು ಕಿಲೋಮೀಟರ್ ದೂರದಿಂದಲೇ ಅಲಂಕೃತವಾದ ಪಲ್ಲಕಿಯಲ್ಲಿ ಶ್ರೀ ಸುಶೀಲೇಂದ್ರತೀರ್ಥರ ಮೆರವಣಿಗೆ ಶ್ರೀ ಕೃಷ್ಣ ದೇವಾಲಯದ ಹತ್ತಿರ ಬಂದ ಕೂಡಲೇ ಶ್ರೀ ವಿಬುಧಪ್ರಿಯತೀರ್ಥರು ಎದುರ್ಗೊ೦ಡು ಹಸ್ತಲಾಘವ ಕೊಟ್ಟು ಕುಶಲ ಪ್ರಶ್ನೆ ಮಾಡಿದರು. 
ಹಿಂದೆ ಶ್ರೀ ವಾದಿರಾಜರು - ಶ್ರೀ ವಿಜಯೀ೦ದ್ರತೀರ್ಥರು ಸೇರಿದ ದ್ರಶ್ಯವನ್ನು ನೆನಪಿಗೆ ತಂದು ಕೊಡುತ್ತಿತ್ತು.
ಮರುದಿನ, ಶ್ರೀ ವಿಜಯೀ೦ದ್ರತೀರ್ಥರು ಶ್ರೀ ವಾದಿರಾಜರಿಂದ ದಾನವಾಗಿ ಸ್ವೀಕರಿಸಿದ ಸ್ಥಳದಲ್ಲಿ ಶ್ರೀಮಠದ ಸತ್ಸಂಪ್ರದಾಯ ಪದ್ಧತಿಗಳಂತೆ ಶ್ರೀ ರಾಯರ ಮೂಲ ಮೃತ್ತಿಕಾ ವೃಂದಾವನವನ್ನು ಪ್ರತಿಷ್ಠಾಪಿಸಿದರು.
ಆ ಶುಭ ಸಂದರ್ಭದಲ್ಲಿ ಶ್ರೀ ವಿಬುಧಪ್ರಿಯತೀರ್ಥರು ಉಪಸ್ಥಿತರಿದ್ದರು. 
ಶ್ರೀ ರಾಯರು ಅನೇಕ ವರ್ಷಗಳು ಶ್ರೀ ಕೃಷ್ಣನ ಸನ್ನಿಧಾನದಲ್ಲಿದ್ದು ಸೇವೆ ಸಲ್ಲಿಸಿದ್ದರ ಫಲವಾಗಿ ಶ್ರೀ ರಾಯರ ಸನ್ನಿಧಾನಯುಕ್ತರಾದ ಶ್ರೀ ಸುಶೀಲೇಂದ್ರತೀರ್ಥರು ಶ್ರೀ ರಾಯರನ್ನು ಶ್ರೀ ಕೃಷ್ಣನ ಸನ್ನಿಧಾನಕ್ಕೆ ಕರೆತಂದಿದ್ದರಿಂದ ಶ್ರೀಕೃಷ್ಣನಿಗೆ ಅತ್ಯಂತ ಸಂತೋಷವಾಗಿದೆ ಮತ್ತು ತನ್ನ ಭಕ್ತ ಶಿರೋಮಣಿ ಉಡಿಪಿಗೆ ಬಂದಿದ್ದರಿಂದ ಶ್ರೀ ಕೃಷ್ಣ ಪರಮಾತ್ಮನು ಇನ್ನೂ ಹೆಚ್ಚಾಗಿ ಕಂಗೊಳಿಸಿದ ಎಂದು ಶ್ರೀ ವಿಬುಧಪ್ರಿಯತೀರ್ಥರು ತಮ್ಮ ಅನುಗ್ರಹ ಸಂದೇಶದಲ್ಲಿ ತಿಳಿಸಿದರು.
ಶ್ರೀ ಕೃಷ್ಣನೆದುರಿಗೆ ಶ್ರೀ ಗುರುಸಾರ್ವಭೌಮರ ಪ್ರತಿಷ್ಠಾಪಿನೆಯಾದ ವೈಭವ ಅತ್ಯದ್ಭುತವಾಗಿದೆ.
ಶ್ರೀಮಠದ ಇತಿಹಾಸದಲ್ಲೇ ಇದೊಂದು ಅಭೂತಪೂರ್ವವಾದ ಘಟನೆ.
ಈ ವಿಷಯವನ್ನು ಶ್ರೀ ಶ್ಯಾಮಸುಂದರದಾಸರು....
ರಾಗ : ದರ್ಬಾರಿ ಕಾನಡ   ತಾಳ : ರೂಪಕ 
ಗುರು ಸುಶೀಲೇಂದ್ರರ 
ಚರಣ ವಾರಿಜಯುಗ್ಮ ।
ಸ್ಮರಿಸುವ ನರರು 
ಶ್ರೀ ಹರಿದಾಸರೂ ।। ಪಲ್ಲವಿ ।।
ಹರಿವಾರ ಸುಮತಾಬ್ಧಿ 
ಹರಿಣಾಂಕರೆನಿಸಿದ ।
ವರ ಸುಕೃತೀಂದ್ರ ತೀರ್ಥರ 
ಕರ ಕಮಲಜ ।। ಅ ಪ ।।
ಕಡೆಯ ಆಶ್ರಮವ 
ಕೈಕೊಂಡು ಮಾಸತ್ರಯದಿ ।
ಸಡಗರದಲಿ ಮಹಾ 
ಸಭೆ ನಿರ್ಮಿಸಿ ।
ಪೊಡವಿಯೊಳಿದ್ದ ಭೂಸುರ-
ರಾಜ್ಞಾ ಪತ್ರದಿ ಬರ-
ಮಾಡಿ ವಿದ್ವಾಂಸರ 
ಒಡಗೂಡಿ ಮಧ್ವಾಗಮನವನು ।
ನೋಡಿ ಬೆಲೆಯುಳ್ಳ 
ವೆಗ್ಗಳ ಒಡವೇ ।
ಉಡುಪುಗಳನ್ನು ಕರುಣಿಸಿ 
ಮೃಷ್ಟಾನ್ನ ದ್ವಿಜರಿಗೆ ।
ಕಡು ಸುಪ್ರೇಮದಿ 
ಸಲಿಸಿ ಮುದ ಬಡಿಸಿ ।    
ಜಡಕು ಮಾಯ್ಗಳ ಗಡಣ 
ಜಡಧಿಗೆ ವಡವ ತಾನೆನಿಸಿ । 
ಕ್ರೋಡಜಾಸ್ಥಿತ ಒಡೆಯ 
ಶ್ರೀ ಗುರುರಾಘವೇಂದ್ರರ ।
ಅಡಿಗಳಾಬ್ಜ ಕಾರಡಿಯಂತೊಪ್ಪುತ ।
ಬಿಡದೆ ಸಂತತ ದೃಢದಿ ಸೇವಿಸಿ ।
ಜಡಜಜಾಂಡದಿ 
ಮೆರೆದ ಅಸ್ಮದ್ ।। ಚರಣ ।।   
ಮರುತಾಂತರ್ಗತ ಮೂಲ 
ತರಣಿ ಕುಲೇಂದ್ರನ ।
ಕರುಣವೆಷ್ಟಿವರೊಳು 
ಅರುಹಲಾರೆ ।
ವರ ರೌಪ್ಯಾಸನಪುರಕೆ 
ಎರುಡಾರು ಯತಿಗಳ ವತಿಯಿಂದ ।
ತಮ್ಮಯ ಶಿಷ್ಯ ತತಿಯಿಂದ 
ಬಹುವಿಧ ಬಿರುದಾವಳಿಯಿಂದ ।
ತೆರಳಿ ಶಶಿರವಿ ವರಸುವಾದ್ಯ 
ಧ್ವಾನ ಮೊಳಗಿಸುತ್ತಾ ।
ಘನ ಭಕುತಿ ಪರವಶರಾಗಿ 
ಸುರಶಿರ ಕನಕವಣಿ 
ಧನ ತನು ಮನ ತ್ವರಿತ ।।
ತೃಣ ಬಗೆದು ದೇವಕೀ 
ತರುಳ ರುಕ್ಮಿಣೀ 
ವರ ಮೂರಾಂತಕ ।
ಚರಣಕರ್ಪಿಸುತ 
ಆನಂದ ಬಡುತ ।
ಸರ್ವ ಮುನಿಜನಗಳಿಗೆ 
ಬಹು । ಉಪ ।
ಚರಿಸಿ ಮನ್ನಣೆ 
ಧರಿಸಿ ಹರುಷದಿ ।
ವರ ಸುಧೀಂದ್ರ ಕರಜರನು ।
ನೆರೆ ಸ್ಥಾಪಿಸಿದ 
ಆಶ್ಚರ್ಯ ಚರಿತ ।। ಚರಣ ।।
ಕ್ಷಿತಿಯೊಳು ಭಾರತೀ 
ಪತಿ ಉಕ್ತ ಶಾಸ್ತ್ರಾರ್ಥ ।
ಚತುರತನದಿ ಪಡೆದು 
ವಿತತ ಮಹಿಮಾನಾದ ।
ಪತಿತ ಪಾವನ 
ಶ್ಯಾಮಸುಂದರನ ।
ಸ್ತುತಿಸುತಲಿಯ ಚಿಂತನ 
ಗೈಯುತ ಶ್ರೀಯುತ ಸಂಸ್ಥಾನ ।
ಮತಿ ವಿಶಾರದರಾದವರ 
ಸುವ್ರತೀಂದ್ರ ತೀರ್ಥರಿಗೆ ।
ಹಿತದಿಂದ ಒಪ್ಪಿಸಿ ಯತಿ 
ಧೀರೇಂದ್ರರ ಚಾರು ಸ್ಥಳದೊಳಗೆ ।
ತನುವಿಟ್ಟು ಹರಿಪುರ ಪಥವ 
ಪಿಡಿದೈದಿದರು ಚೆನ್ನಾಗಿ ಸೇವಿಪ ಜನರಿಗೆ ।
ಅತಿಶಯದಿ ಮನೋರಥವ 
ನೀಡುತ ।ಸತತ ಮಾಣದೆ ಪರಮ ಭಕುತಿಲಿ ।
ಪೃಥ್ವಿ ಸುರಕರಶತದಳಗಳಿಂ 
ನುತಿಸಿಕೊಳತರ್ಚನೆಯಗೊಂಬ ।। ।। ಚರಣ ।।
***
" ಶ್ರೀ ಸುಶೀಲೇಂದ್ರ  - 6 " 
" ಶ್ರೀ ಸುಶೀಲೇಂದ್ರತೀರ್ಥರ ವಿದ್ಯಾ ವೈಭವ ಮತ್ತು ಔದಾರ್ಯ "
ಶ್ರೀ ಸುಶೀಲೇಂದ್ರತೀರ್ಥರ ಪಾಂಡಿತ್ಯ ಪೋಷಣೆ ಅಸಾಧಾರಣವಾಗಿತ್ತು. 
ಇವರ ಔದಾರ್ಯ ಹೆಸರಾಯಿತು. 
ಆ ಕಾಲದ ಪ್ರೌಢ ವಿದ್ವಾಂಸರೆಲ್ಲಾ ಸಂಸ್ಥಾನದಲ್ಲಿ ಅಲಂಕೃತರಾಗಿದ್ದರು. 
ಆಶ್ರಮವಾದ ಎರಡನೇ ವರ್ಷವೇ ಶ್ರೀ ಸುಶೀಲೇಂದ್ರತೀರ್ಥರು ನಂಜನಗೂಡಿನಲ್ಲಿ ದೊಡ್ಡ ವಿದ್ವತ್ಸಭೆಯನ್ನು ಮಾಡಿದರು. 
ಅದು ಅದ್ಭುತವಾಗಿತ್ತು. 
ನಂಜನಗೂಡಿನ ಅರಮನೆಯಲ್ಲಿ ವಿದ್ವತ್ಗೋಷ್ಠಿ ನಡೆಯಿತು. 
ತ್ರಿಮತಸ್ಥ ಉದ್ಧಾಮ ಪಂಡಿತರೆಲ್ಲಾ ಸೇರಿದರು. 
ಆಗ ನಡೆದ ವಾಕ್ಯಾರ್ಥ, ವಿದ್ವಾಂಸರುಗಳಿಗೆಲ್ಲಾ ಶ್ರೀಗಳವರು ಕೊಟ್ಟ ಸಂಭಾವನೆ; ಬ್ರಾಹ್ಮಣ ಸಂತರ್ಪಣೆ ವರ್ಣಿಸಲಸದಳ.
ಇದು ಶ್ರೀ ಸುಶೀಲೇಂದ್ರತೀರ್ಥರಿಗೂ - ಸಂಸ್ಥಾನಕ್ಕೂ ಆಚಂದ್ರಾರ್ಕವಾದ ಕೀರ್ತಿಯನ್ನು ತಂದುಕೊಟ್ಟಿತು. 
ಶ್ರೀ ಸುಶೀಲೇಂದ್ರತೀರ್ಥರಿಂದ ಪ್ರಾರಂಭವಾದ " ಶ್ರೀ ಸಮೀರ ಸಮಯ ಸಂವರ್ಧಿನೀ " ಸಭೆ ಇಂದಿನವರೆಗೂ ಶ್ರೀ ಮಠದಲ್ಲಿ ನೆಡೆಯುತ್ತಾ ಬಂದಿದೆ.
ಶ್ರೀ ಸುಶೀಲೇಂದ್ರತೀರ್ಥರ ವಿದ್ವತ್ಪ್ರೌಢಿಮೆಯನ್ನೂ; ವಾದ ಕೌಶಲವನ್ನೂ ಕಂಡು ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಧ್ಯಾನತೀರ್ಥರು ಮಾರುಹೋಗಿದ್ದರು.
ರಾಗ : ಯದುಕುಲಕಾಂಬೋಧಿ ತಾಳ : ಆದಿ
ಪೊಂದಿ ಭಜಿಸೋ ಸುಶೀಲೇಂದ್ರರ 
ಪದ ನಿರುತ ।
ಮಂದ ಮಾನವ ತ್ವರಿತ ।। ಪಲ್ಲವಿ ।।
ವೃಂದಾರಕ ಸದ್ವಂಶಜರಿವರೆನುತ ।
ಮನದೊಳು ಭಾವಿಸುತ ।। ಆ. ಪ ।।
ಗುರು ಸುಕೃತೀಂದ್ರ 
ಕರಕಮಲದಿ ತಾನು ।
ತುರಿಯಾಶ್ರಮವನ್ನು ।
ಧರಿಸುತ ಹರುಷದಿ 
ರಘುಕುಲಜನ ।।
ಚರಣ ಆರಾಧಿಸಿ ಘನ್ನ ।
ಮರುತಾಗಮ 
ಮರ್ಮಜ್ಞನು ತಾನಾಗಿ ।
ಮೆರೆದನು ಚೆನ್ನಾಗಿ ।। ಚರಣ ।।
ವರಹಜ ನದಿ ವಾಸರ 
ಒಲಿಮೆಯಲಿ ।
ಧರೆಯಲಿ ಚಲಿಸುತಲಿ ।
ಪರವಾದಿಯ ಮತ 
ಜರಿಯುತ ।। ವೈಷ್ಣ ।।
ವರ ಉದ್ಧರಿಸಿದ ಧೀರ ।
ನರನೆಂದಿವರನು 
ನಿಂದಿಸುವನೇ
ದೈತ್ಯ ನಾ ಪೇಳುವೆ 
ಸತ್ಯ ।। ಚರಣ ।।
ಶ್ರೀ ಮನೋವಲ್ಲಭ 
ಶ್ಯಾಮಸುಂದರನ ।
ನಾಮವ ಪ್ರತಿದಿನ ।
ನೇಮದಿ ಪಠಿಸುತ್ತಾ ।।
ಪ್ರೇಮದಿ ಶಿಷ್ಯರನ್ನು 
ಸಲುಹಿದ ಸಂಪನ್ನ ।
ಧೀಮಜ್ಜನ ಸಂಸೇವಿತ 
ಸುವ್ರತೀಂದ್ರ । ಹೃ ।
ತ್ಕುಮುದಕೆ ಚಂದ್ರ ।। ಚರಣ ।।
***
" ಶ್ರೀ ಸುಶೀಲೇಂದ್ರ  - 7 " 
ಆಶ್ರಮ ಶಿಷ್ಯರು : ಶ್ರೀ ಸುವ್ರತೀಂದ್ರತೀರ್ಥರು 
" ಶ್ರೀ ಲಕುಮೀಶರು ".......
ಕುಶಲ ಮತಿ ಸುಶೀಲೇಂದ್ರ ಯತಿಕರ ।
ಬಿಸಜಜಾನೆನಿಸಿ ।
ಅಸುನಾಥ ಶಾಸ್ತ್ರವ ।
ವಸುಧೀ ಸುರರಿಗೆ ಪ್ರೇಮದಿಂ ।।
ತಿಳಿಸೀ ನೇಸರನ ಕಾಂತಿಯೊಳೆಸೆದ ।।
ಸಮಕಾಲೀನ ಹರಿದಾಸರು :
ಶ್ರೀ ಗುರು ಜಗನ್ನಾಥದಾಸರು; ಶ್ರೀ ವರದೇಶವಿಠಲರು; ಶ್ರೀ ಸುಂದರವಿಠಲರು; ಶ್ರೀ ದಿನ್ನೆ ರಾಘಪ್ಪನರು; ಶ್ರೀ ಅಸ್ಕಿಹಾಳ ಗೋವಿಂದದಾಸರು; ಶ್ರೀ ಶ್ಯಾಮಸುಂದರದಾಸರು
ಆರಾಧನೆ : ಆಷಾಢ ಶುದ್ಧ ತೃತೀಯಾ
ಬೃಂದಾವನ ಸ್ಥಳ : ಹೊಸರಿತ್ತಿ
" ಉಪ ಸಂಹಾರ "
ಶ್ರೀ ಸುಶೀಲೇಂದ್ರತೀರ್ಥರು ಮಧ್ವ ಸಿದ್ಧಾಂತ ಸ್ಥಾಪನೆ; ಮಧ್ವಮತ ಪ್ರಸಾರ; ವಿದ್ಯಾದಾನ; ಅನ್ನದಾನ; ಪಂಡಿತ ಪೋಷಣೆ; ಕಲಾ ಪೋಷಣೆ ಹಾಗೂ ಧಾರ್ಮಿಕ - ಸಾಮಾಜಿಕ - ಶೈಕ್ಷಣಿಕ - ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಮತ್ತು ಶ್ರೀ ರಾಯರ ಮಠದ ಅಭಿವೃದ್ಧಿ ಕಾರ್ಯಗಳನ್ನೂ; ಶ್ರೀ ಮೂಲರಾಮನಿಗೆ ಬಂಗಾರದ ಮಂಟಪ; ತ್ರಿಮತಸ್ಥ ಪಂಡಿತರಿಗಾಗಿ " ಶ್ರೀ ಸಮೀರ ಸಮಯ ಸಂವರ್ಧಿನೀ ಸಭೆ " ಯನ್ನು ಏರ್ಪಾಟು ಮಾಡಿ; ವಿದ್ವಾನ್ ಶ್ರೀ ಹುಲಿ ಹನುಮಂತಾಚಾರ್ಯರಿಗೆ ಆಶ್ರಮ ಕೊಟ್ಟು " ಶ್ರೀ ಸುವತೀಂದ್ರತೀರ್ಥ " ರೆಂಬ ಅಭಿದಾನದೊಂದಿಗೆ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕವನ್ನು ಮಾಡಿ...
ಶ್ರೀ ಶ್ಯಾಮಸುಂದರದಾಸರು....
ಕ್ಷಿವರದಾಕೂಲದಿ ಪರಿಶೋಭಿಪ ।
ರಿತ್ತಿ ಗ್ರಾಮ ಕೃತ ನಿಜಧಾಮ ।
ಗುರುವರೇಣ್ಯ ಧೀರೇಂ -
ದ್ರರ ಪೂರ್ಣ ಸುಪ್ರೇಮ 
ಪಡೆದ ಸನ್ಮಹಿಮ ।
ಪರಿಮಳ ಸುಧಾ 
ನ್ಯಾಯಾಮೃತ ತತ್ತ್ವದ ।
ಸಾರತ್ವರಿತ ಗಂಭೀರ ।
ಧರಣಿ ಸುರಾಗ್ರಣಿ ಸುವ್ರತೀಂ-
ದ್ರರ ಹೃತ್ಕುಮುದ 
ಸುಮನ ಶರಶ್ಚಂದ್ರ ।। 
ವರದಾ ನದೀ ತೀರದಲ್ಲಿರುವ ಶ್ರೀ ಕ್ಷೇತ್ರ ಹೊಸರಿತ್ತಿಯ ಮುನಿಪುಂಗವರಾದ ಶ್ರೀ ಧೀರೇಂದ್ರತೀರ್ಥರ ಪರಮ ಪವಿತ್ರವಾದ ಸನ್ನಿಧಾನದಲ್ಲಿ ನಾರಾಯಣ ಧ್ಯಾನಪರರಾದರು.
ಶ್ರೀ ಸುವ್ರತೀಂದ್ರ ತೀರ್ಥರು... 
ಸುಧಾದ್ಯಮಲ ಸದ್ಬೋಧಂ 
ಸುಕೀರ್ತಿ ವಿಲಸದ್ದಿಶಂ ।
ಸುಧೀ ಸಂಸ್ತುತ್ಯ ಸುಗುಣಂ 
ಸುಶೀಲೇಂದ್ರ ಗುರಂಭಜೇ ।।
" ವಿಶೇಷ ವಿಚಾರ "
ಕ್ರಿ ಶ 1985 ರಿಂದ 1991 ರ ವರಗೆ ನನ್ನ ತಾಯಿ ಸಾಧ್ವೀ ಲಲಿತಾಬಾಯಿ ಅವರ ಆರೋಗ್ಯದ ಸಲುವಾಗಿ ನನ್ನ ತೀರ್ಥರೂಪ ತಂದೆಯವರ ಆದೇಶದ ಮೇರೆಗೆ....
" ಶ್ರೀ ಘಟಿಕಾಚಲ ಶ್ರೀ ನೃಸಿಂಹ ದೇವರ ಮತ್ತು ಶ್ರೀ ಮುಖ್ಯಪ್ರಾಣದೇವರ ಸೇವೆಯನ್ನು ಮಾಡಲು ಶ್ರೀ ಕ್ಷೇತ್ರ ಘಟಿಕಾಚಲದಲ್ಲಿ ಇದ್ದಾಗ ಪ್ರಾತಃಸ್ಮರಣೀಯ ಪರಮಪೂಜ್ಯ ಶ್ರೀ ವಿಬುಧಪ್ರಿಯ ತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ ಅವರ ಹಸ್ತೋದಕ ಸ್ವೀಕಾರ ಮಾಡಿದ ಮಹಾ ಭಾಗ್ಯಶಾಲಿ ನಾನು ". 
ಇದಕ್ಕೆ ಕಾರಣ ನನ್ನ ತಂದೆ ತಾಯಿಗಳು. ಅವರ ಋಣವನ್ನು ಎಷ್ಟು ಜನ್ಮ ಎತ್ತಿದರೂ ತೀರಿಸಲು ಸಾಧ್ಯವೇ ಇಲ್ಲ??
ಯಾವ ಜನ್ಮದ ಸುಕೃತವೋ ಮಹನೀಯರಾದ ಪ್ರಾತಃಸ್ಮರಣೀಯ ಪರಮಪೂಜ್ಯ ಶ್ರೀ ಯತಿದ್ವಯರ ಹಸ್ತೋದಕ ಪ್ರಸಾದ ಸ್ವೀಕಾರ ಮಾಡಿದ ಅದೃಷ್ಟ ನನ್ನ ಪಾಲಿನದ್ದು. 
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
******


year 2021


ಸುಧಾದ್ಯಮಲಾ ಸಧ್ಭೋಧಂ ಸುಕೀರ್ತಿ ವಿಲ ಸದ್ದಿಶಂ/
ಸುಧೀ ಸಂಸ್ತುತ್ಯ ಸುಗುಣಂ ಸುಶೀಲೇಂದ್ರ ಗುರುಂ ಭಜೇ//

ಸು ಯನಲು ಸುಜ್ಞಾನ ಶೀ ಯನಲು ಶೀಲತ್ವ
ಲ ಯನಲು ಲಯ ದೂರವೋ
ಕಾಯ ಶುದ್ಧಿಯಲಿ ಇಂದ್ರ ಎಂದುಚ್ಚರಿಸಲಾ
ಇಂದ್ರಲೋಕ ಸುಖವೋ ನಿಜವೋ (ಶ್ರೀ ಶ್ಯಾಮಸುಂದರ ದಾಸರು)

 ಶ್ರೀಸುಕೃತೀಂದ್ರ ತೀರ್ಥರ ಕರಕಮಲಸಂಜಾತರಾದ ಇಂದಿನ ಆರಾಧನಾ ನಾಯಕರು ನಮ್ಮ ಶ್ರೀಸುಶಿಲೇಂದ್ರ ತೀರ್ಥ ಶ್ರೀಪಾದಂಗಳವರು ಪೀಠಸ್ಥರಾದ ಮೇಲೆ ಶ್ರೀಮಠದ ವರ್ಚಸ್ಸು ಬಹಳವಾಗಿ ಬೆಳೆಯಿತು. ಜ್ಞಾನಕಾರ್ಯಕ್ಕೆ ಶ್ರೀಗಳವರಿಗೆ ವಿಶೇಷ ಒಲವು. ಪಾಂಡಿತ್ಯಕ್ಕೆ ಹೆಚ್ಚಿನ ಮಣ್ಣನೆ ಕೊಡುತ್ತಿದ್ದು ವಿವಿಧ ಕಡೆಗಳಿಂದ ವಿದ್ವಾಂಸರನ್ನು ಬರಮಾಡಿಕೊಂಡು ವಿದ್ವತ್ ಗೋಷ್ಠಿಗಳನ್ನು ನಡೆಸಬೇಕು ಎನ್ನುವ ಉದ್ದೇಶದಿಂದ ಗುರುಗಳ ಸೂಚನೆಯಂತೆ ಶ್ರೀಮತ್ಸಮೀರ ಸಮಯ ಸಂವರ್ಧಿನೀ ಸಭಾ ವೇದಿಕೆ ನಿರ್ಮಿಸಿ ವಿದ್ವತ್ ಕಾರ್ಯಕ್ರಮಗಳನ್ನು ವರ್ಷದಲ್ಲಿ ಮೂರ್ನಾಲ್ಕು ದಿನಗಳವರೆಗೆ ನೆರವೇರಿಸುತ್ತಿದ್ದರು. ಶ್ರೀಗಳವರ  ಈ ಅದ್ಭುತ ಕಾರ್ಯವು ಮುಂದಿನವರಿಗೆ ಆದರ್ಶಪ್ರಾಯವಾಗಿದೆ.  ಉಪಾಸ್ಯಮೂರ್ತಿ  ಶ್ರೀಮನ್ಮೂಲರಾಮಚಂದ್ರ ದೇವರ ಪೂಜೆಯನ್ನು ಅತ್ಯಂತ  ಪ್ರೀತಿ,ಭಕ್ತಿಗಳಿಂದ ಅದ್ಧೂರಿಯಾಗಿ ನೆರವೇರಿಸುತ್ತಿದ್ದರು. 

ಮಂತ್ರಾಲಯ ಪ್ರಭುಗಳ ಮಹಾಕಾರುಣ್ಯಪಾತ್ರರಾಗಿದ್ದ ಶ್ರೀಸುಶಿಲೇಂದ್ರ ತೀರ್ಥರಿಗೆ ಗುರುಸಾರ್ವಭೌಮರ ಚಲಪ್ರತಿಮಾ ಸ್ಥಾನೀಯರು ಎಂಬ ಅಭಿಧಾನ ಇತ್ತು. 

ರಜತಪೀಠಪುರದಲ್ಲಿ ಆಗ ಅದಮಾರು ಪರ್ಯಾಯ ಮಹೋತ್ಸವವನ್ನು ಶ್ರೀವಿಬುಧಪ್ರಿಯ ತೀರ್ಥರು ನೆರವೇರಿಸುತ್ತಿದ್ದರು. ಪ್ರಾರಂಭದಿಂದಲೂ ರಾಯರ ಮತ್ತು ಅದಮಾರು ಮಠಗಳು ಸ್ನೇಹಿತರ ಮಠಗಳಂತೆ ಅನ್ಯೋನ್ಯದಿಂದಿದ್ದು, ಪರ್ಯಾಯ ಶ್ರೀಗಳವರು ಶ್ರೀಸುಶಿಲೇಂದ್ರ ತೀರ್ಥರನ್ನು ಉಡುಪಿಗೆ ಆಹ್ವಾನಿಸಿ ಆಮಂತ್ರಣ ಕಳುಹಿಸಿದಾಗ, ಉಡುಪಿಯ ಹೊರವಲಯದಿಂದಲೇ ಶ್ರೀಸುಶಿಲೇಂದ್ರ ತೀರ್ಥರಿಗೆ ಅದ್ಧೂರಿಯಾದ ಸ್ವಾಗತ ದೊರೆಯಿತು‌. ಶ್ರೀಕೃಷ್ಣಪರಮಾತ್ಮನ ಎದುರಿಗೆ ಶ್ರೀವಾದಿರಾಜ ಗುರುಸಾರ್ವಭೌಮರಿಂದ ತಮ್ಮ ನೆಚ್ಚಿನ ಸ್ನೇಹಿತರೂ, ಸಹಪಾಠಿಗಳೂ ಆದ ಶ್ರೀವಿಜಯೀಂದ್ರ ತೀರ್ಥರಿಗೆ ಕಾಣಿಕೆಯಾಗಿ ಕೊಟ್ಟ(ಅಂತರ್ಯಾಮಿಯಾದ  ಶ್ರೀಭೂವರಾಹ ಹಯವದನ ಕೃಷ್ಣ ರೂಪವು ಶ್ರೀಮನ್ಮೂಲರಾಮ ದೇವರ ರೂಪಕ್ಕೆ ಕೊಟ್ಟಿದ್ದು) ಮಠದಲ್ಲಿ ಇದ್ದು, ಯಾವ ಜಾಗದಲ್ಲಿ ಮಂತ್ರಾಲಯ ಪ್ರಭುಗಳು ಸುಮಾರು ಎರಡುವರ್ಷಗಳ ಕಾಲ ಪ್ರತಿನಿತ್ಯ ಆಸೀನಸ್ಥರಾಗಿ ಜಪ, ಪಾಠ,ಪ್ರವಚನ ,ಪೂಜೆ ಮತ್ತು ಗ್ರಂಥರಚನೆಯ ಕಾರ್ಯವನ್ನು ನೆರವೇರಿಸಿದ್ದರೋ ಮತ್ತು ಯಾವ ಸ್ಥಳದಿಂದ ತಾವು ಶ್ರೀಕೃಷ್ಣನನ್ನು ವಿಶೇಷವಾಗಿ ಸ್ತುತಿಸಿ, ಭಜಿಸಿ, ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ನಿತ್ಯ ದರ್ಶನ ಮಾಡುತ್ತಿದ್ದರೂ ಅಂತ ರಾಯರ ನಿತ್ಯಸನ್ನಿಧಾನವುಳ್ಳ ಜಾಗದಲ್ಲೇ ಶ್ರೀಮಂತ್ರಾಲಯ ಪ್ರಭುಗಳ ಮೃತ್ತಿಕಾಬೃಂದಾವನ ಪ್ರತಿಷ್ಠಾಪಿಸಿ, ಇಂದಿಗೂ ರಾಯರ ಭಕ್ತರು ಉಡುಪಿಗೆ  ಹೋದಾಗ, ದೇವರ ಜೊತೆ, ಶ್ರೀಮದಾಚಾರ್ಯರ ಜೊತೆ ಮಂತ್ರಾಲಯ ಪ್ರಭುಗಳ ದರ್ಶನದ ಅನುಗ್ರಹವನ್ನೂ ಶಾಶ್ವತಗಿ ಸಿಗುವಂತೆ ಅನುಗ್ರಹಿಸಿದರು. 

ಒಮ್ಮೆ ಶಿಷ್ಯರೊಡನೆ ಕಾವೇರಿ ತೀರದಲ್ಲಿ ಸಂಚರಿಸುತ್ತಿದ್ದಾಗ ಒಂದು ಮದೋನ್ಮತ್ತನಾದ  ಗೂಳಿಯು ಇವರಿದ್ದ‌ ಕಡೆ ವೇಗವಾಗಿ ಓಡಿ ಬರುತ್ತಿದ್ದಾಗ, ಶಿಷ್ಯರು ಹೆದರಿ ಪಕ್ಕಕ್ಕೆ ಸರಿದರೆ, ಮನೋಬಲದ ಜೊತೆ ದೇಹಬಲವು ಉಳ್ಳ ಶ್ರೀಗಳವರು ಎದೆಗುಂದದೆ ಅದು ಹತ್ತಿರ ಬಂದು ಇನ್ನೇನು ತಿವಿಯಬೇಕು ಎನ್ನುವಷ್ಟರಲ್ಲಿ ಅವರು ತಮ್ಮ ಮುಷ್ಟಿಯಿಂದ ಅದಕ್ಕೊಂದು ಪೆಟ್ಟು ಕೊಟ್ಟು, ಒಂದೇ ಕೈಯ್ಯಲ್ಲಿ ಎರಡೂ ಕೋಡುಗಳನ್ನು ಹಿಡಿದು ಅದರ ಮತ್ತ ಇಳಿಸಿ,ಶಾಂತಗೊಳಿಸಿದರು. 

ರಾಯರ, ವಾಯುದೇವರ ಭಗವಂತನ  ಅನುಗ್ರಹಕ್ಕೆ ಪಾತ್ರರಾದವರಿಗೆ ಯಾರ  ಭಯ, ಎಲ್ಲಿಯ ಆತಂಕ?? ಅಲ್ಲವೇ?...

ಸಂಚಾರತ್ವೇನ ಶ್ರೀಗಳವರು ಉತ್ತರ ಕರ್ನಾಟಕದ ಕಡೆ ಸಂಚಾರ ಮಾಡಿ ರಿತ್ತಿಗೆ ಬಂದು ಮಹಾ ತಪಸ್ವಿಗಳಾದ ಶ್ರೀಧೀರೇಂದ್ರ ತೀರ್ಥರ ಸೇವೆ ಮಾಡಿ ಅವರ ಅನುಗ್ರಹಕ್ಕೂ ಪಾತ್ರರಾದರು. ಅಲ್ಲಿ ಇದ್ದಾಗಲೇ ದೇಹಾಲಸ್ಯವುಂಟಾಗಿ ತಮ್ಮಲ್ಲಿ‌ ದಿವಾನರಾಗಿದ್ದ ಹುಲಿ ಕೃಷ್ಣಾಚಾರ್ಯರಿಗೆ ಆಶ್ರಮವಿತ್ತು ಶ್ರೀಸುವ್ರತೀಂದ್ರ ತೀರ್ಥರು ಎಂದು ನಾಮಕರಣ ಮಾಡಿ ತಾವು ಆಷಾಡ ಶುದ್ಧ ತೃತೀಯದಂದು ಹರಿಪದವನ್ನು ಸೇರಿದರು. 
ಶ್ರೀಸುಶಿಲೇಂದ್ರ ತೀರ್ಥರ ಸಂಚಾರ ಕ್ರಮದ ವೈಭವವನ್ನು ಶ್ರೀವರದೇಶ ವಿಠಲರು ತಮ್ಮ ಒಂದು ಕೃತಿಯಲ್ಲಿ
ಇಂದು ನೋಡಿದೆ ಸುಶಿಲೇಂದ್ರ ಗುರುಗಳ/ಕುಂದಣದ ಶಿಖರ ಮೌಕ್ತಿಕದಿಂದ ವಿರಾಜಿಸುವ ರಜತ ಅಂದಣವನೇರಿ ಸಂಭ್ರಮದಿಂದ ಮೆರೆದು ಬರುವ ಗುರುಗಳ// ಎಂದು ತಿಳಿಸುತ್ತಾ

ಧ್ವಜಪತಾಕೆ ಶ್ವೇತಛತ್ರ| ರಜತ ವರ್ಣ ಚವರ  ಚಾಮರ|ಭಜಿಪ ಭಟರ ಸಂದಣಿ ಮಧ್ಯ ರಜನಿ‌ ಪತಿಯ ತರದಿ ಶೋಭಿಪರ--"

ಎಂದು ತುತಿಸಿ
ಈ ಮಹಾಗುರುವರ್ಯರ ಪದ ತಾಮರಸವ ಪೊಂದಿದ ಭಕ್ತರ ನೇಮದಿಂ   ವರದೇಶವಿಠಲ ಕಾಮಿತಾರ್ಥಗರೆವ ಸತ್ಯ ಎಂದು ಇಳಿಸಿದ್ದಾರೆ.

ಶ್ರೀಲಕುಮೀಶ ದಾಸರು ತಮ್ಮ ಸುಶಿಲೇಂದ್ರ ಸುಶಿಲೇಂದ್ರ|ಪುಶಿಯ ವಾದಿ ಕರುವೃಂದ ಪದ್ಮನಾಭಪ್ರಿಯ ಎನ್ನುವ ಕೃತಿಯಲ್ಲಿ ಲಕುಮೀಶದೇವನ ಭಕುತಿ ಪಾಶದಿ ಕಟ್ಟಿ|ಸುಖಪಡುವೋ ದಿವ್ಯ ಮುಕುತಿ ಪಥವ ತೋರಿ ಎಂದು ಸ್ತುತಿಸಿದ್ದಾರೆ.

ವೃಂದಾರಕಾಂಶಜರು ಸಂದೇಹವಿಲ್ಲಿವರ ವೃಂದಾವನ ದರುಶನದಿ/
ಮಂದಾಕಿನಿಯೊಳಗೆ ಮಿಂದ ಫಲ ಸಂಪ್ರಾಪ್ತಿ/
ಇಂದಿರಾಪತಿ ಶ್ಯಾಮಸುಂದರನು ಕೈಪಿಡಿವ ಎಂದು ಶ್ರೀಶ್ಯಾಮಸುಂದರ ದಾಸರು ತಮ್ಮ ವಶವಲ್ಲ ವರ್ಣಿಸಲು ಸುಶಿಲೇಂದ್ರ ತೀರಥರ/ಅಸದೃಶದ ಮಹಿಮೆಗಳನು ಎನ್ನುವ ಸುಂದರ ಕೃತಿಯಲ್ಲಿ ಕೊಂಡಾಡಿದ್ದಾರೆ... 

ಹೀಗೇ ಸದಾಕಾಲ ಶ್ರೀರಾಘವೇಂದ್ರ ತೀರ್ಥರ, ಸಕಲಗುರುಗಳ, ಶ್ರೀಮದಾಚಾರ್ಯರ ಅಂತರ್ಯಾಮಿ ಶ್ರೀಮನ್ಮೂಲರಾಮ ಚಂದ್ರ ದೇವರ ಸ್ಮರಣೆ, ಪಾಠ , ಗ್ರಂಥರಚನೆ ಇವುಗಳಲ್ಲೇ ನಿರತರಾಗಿದ್ದ  ಶ್ರೀಸುಶಿಲೇಂದ್ರ ತೀರ್ಥರ ಮಧ್ಯಾರಾಧನೆಯ ಈ ಪರ್ವಕಾಲದಲ್ಲಿ ಅವರ ಪರಮಾನುಗ್ರಹ ನಮ್ಮೆಲ್ಲರ ಮೇಲಿರಲಿ ಎಂದು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುತ್ತಾ...

ಯತಿಗ ಪರಮಾನುಗ್ರಹ ನಮ್ಮೆಲ್ಲರ ಮೇಲಿರಲಿ, ಅನಂತಾನಂತ ನಮನಗಳು ಸಲ್ಲಿಸುತ್ತಾ..

-Smt. Padma Sirish

ನಾದನೀರಾಜನದಿಂ ದಾಸಸುರಭಿ
***


No comments:

Post a Comment