Wednesday, 1 May 2019

suvrateendra teertharu mantralaya 1933 matha rayara mutt yati 35 vaishakha shukla dwadashi ಸುವ್ರತೀಂದ್ರ ತೀರ್ಥರು




shri gurubyO namaha, hari Om...

vaishAka shudha dwAdashI is the ArAdhane of shri suvratIndra tIrtharu of rAyara maTa.

shri suvratIndra tIrtharu:

Parampare: rAyara maTa, #35
Period: 1926 - 1933
gurugaLu: shri sushIlEndra tIrtharu
shishyaru: shri suyamIndra tIrtharu
brindAvana: manthrAlayam

He was an expert in nyAya shAshtra. In 1930, he conducted a grand sabha at Kumbakonam in which all the leading trimatha scholars participated. This was during the mahAsamArAdhane of his gurugaLu.

He was the pITAdhipathi from 1926 to 1933. His gurugaLu was shri sushIlEndra tIrtharU and shishyarU was shri suyamIndra tIrtharU.

shri suvratIndra tIrtha guruvAntargata, raghavendra tIrtha guruvAntargata, bhArathiramaNa mukhyaprANantargata sItApate sriman mUla rAmA, digvijaya rAmA, jaya rAmA dEvara pAdAravindakke gOvindA gOvindA....

shri krishNArpaNamastu

********
" ಶ್ರೀ ಸುವ್ರತೀಂದ್ರತೀರ್ಥರು "
" ದಿನಾಂಕ : 24.05.2021 ಶ್ರೀ ಸುವ್ರತೀಂದ್ರತೀರ್ಥರ ಆರಾಧನಾ ಮಹೋತ್ಸವ, ಮಂತ್ರಾಲಯ "
" ಶ್ರೀ ಲಕುಮೀಶದಾಸರ ( ಶ್ರೀ ಕುರುಡಿ ರಾಘವೇಂದ್ರಾಚಾರ್ಯರು ) ಕಣ್ಣಲ್ಲಿ..... "
ರಾಗ : ಸೌರಾಷ್ಟ್ರ  ತಾಳ : ಆದಿ
ಕರುಣದಿ ಪಿಡಿ ಕೈಯ್ಯಾ ಸುವ್ರತೀಂದ್ರ ಗುರುವರ್ಯಾ ।। ಪಲ್ಲವಿ ।।
ಕರುಣದಿ ಪಿಡಿ ಕೈಯ್ಯಾ । ಮೊರೆ ಹೊಕ್ಕೆನೊ ಜೀಯಾ । ಮರುತಾಂತರ್ಗತ ಹರಿಯಾ ।
ತ್ವರಿತದಿ ತೋರಯ್ಯಾ ।। ಅ. ಪ ।।
ಮೇದಿನಿಜ ರಮಣನ । ಪಾದ ಕಮಲಕೆ ಭೃಗವೆನಿಸುತಲಿ । ಭೂಧರನ ರದನದಿ । ಉದಿಸಿ ಹರಿಯುವ ನದಿಯ ತೀರದಲಿ । ಮುದದಿಂದ ಗುರು । ರಾಘ । ವೇಂದ್ರರಾಯರ ಪಾದ ಸನ್ನಿಧಿಯಲ್ಲಿ । ಸಾದರದಿ ನೆಲೆಸಿದೆ । ಮೊದವೀಯಲೋ ಯೆನಗೆ ತ್ವರಿತದಲಿ । 
ಬುಧರ್ವಿನುತ ನಗುತಲಿ ।। ಚರಣ ।।
ಕುಶಲಮತಿ ಸುಶೀಲೇಂದ್ರ ಯತಿವರ । ಬಿಸಜಜಾರೆನಿಸಿ । ಅಸುನಾಥ ಶಾಸ್ತ್ರವ । ವಸುಧಿ ಸುರರಿಗೆ ಪ್ರೇಮದಿಂ । ತಿಳಿಸೀ ನೇಸರನ ಕಾಂತಿಯೋಳೆಸೆದ । ಶ್ರೀ ಸುಯಮೀಂದ್ರ ಪಿತನೆ । ನೆನಿಸಿ ಎಸೆವ ಮಂತ್ರ ಗೃಹದಿ । ವಾಸನೆ ಸತತ । ಪೋಷಿಸಿ ದೋಷಗಳ ಓಡಿಸಿ ।। ಚರಣ ।।
ಭೀಕರತಿ ಕಾಮಾದಿ ದೈತ್ಯರ । ಬಾಧೆಯಲಿ ನೊಂದೇ । ನಾ । ನಾ ಕುಜನ ಸಂಗಮದಲಿ ।
ಭಾವವೆಂಬ ಅನಲದೊಳು ಬೆಂದೆ । ನಾಲ್ಕೈದು ಭಕ್ತಿಯ ಹರಿಯಲಿತ್ತು । ತ್ವರಿತ ರಕ್ಷಿಸೆಂದೆ ।
ಲಕುಮೀಶ ದೇವನ ನಿರುತ ಧ್ಯಾನಿಪ । ಬಾಗ್ಯ ನೀಡೆಂದೇ ಕೊಡುತ ತಂದೆ ।। ಚರಣ ।।
ಚಿತ್ರದುರ್ಗದ ಪ್ರಖ್ಯಾತ ಪಂಡಿತ ಪ್ರಕಾಂಡರೂ - ನ್ಯಾಯ ವೇದಾಂತ ವಿದ್ಯೆಯಲ್ಲಿ - ವಾದ ವಿದ್ಯೆಯಲ್ಲಿ - ಪಾಠ ಪ್ರವಚನಗಳಲ್ಲಿ ಅತ್ಯಂತ ವಿಖ್ಯಾತರಾಗಿ ಕೀರ್ತಿಗಳಿಸಿದ ಶ್ರೀ ಹುಲಿ ಹನುಮಂತಾಚಾರ್ಯರ ಜ್ಯೇಷ್ಠ ಪುತ್ರರೂ - ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮದಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರು ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುವ್ರತೀಂದ್ರತೀರ್ಥರು.
ಶ್ರೀ ಸುವ್ರತೀಂದ್ರ ಗುರುವರೇಣ್ಯರೇ! 
ನೀವು ಮಹಾ ಮಹಿಮರು. 
ನೀವು ವಿದ್ಯೆಗೆ ಮಾತೃ ಸ್ಥಾನವಾದ ದೇವತೆಗಳ ಸದ್ವಂಶದಲ್ಲಿ ಜನಿಸಿದವರು. 
ಅಂತೆಯೇ ನೀವು ಜಗದ್ವಿಖ್ಯಾತವಾದ ಶ್ರೀ ಸರ್ವಜ್ಞಾಚಾರ್ಯರ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯವೆಂದು ಪ್ರಸಿದ್ಧವಾದ ಶ್ರೀ ರಾಘವೇಂದ್ರಸ್ವಾಮಿಗಳ ವಿದ್ಯಾಮಠಕ್ಕೆ ಅಧಿಪತಿಗಳಾಗಿ ಕೀರ್ತಿಗಳಿಸಿರುವಿರಿ.
ನೀವು ಸದ್ಗುಣ ಸಾಗರರು ಮತ್ತು ಪರಮ ಶಾಂತ ಮೂರ್ತಿಗಳು. 
ಇಷ್ಟು ಮಾತ್ರವಲ್ಲ  -ನೀವು ಸಕಲ ವಿದ್ಯೆಗಳೂ - ವೈರಾಗ್ಯ - ಶ್ರೀ ಹರಿ ವಾಯು ಗುರುಗಳಲ್ಲಿ ಭಕ್ತಿ - ತಪಸ್ಸು ಮುಂತಾದ ಬೆಳಗುವ ಕಾಂತಿಯಿಂದ ಪೂರ್ಣರಾಗಿದ್ದೀರಿ.
ಆದುದರಿಂದಲೇ ನೀವು ಪಾಠ ಪ್ರವಚನಗಳಿಂದ ಅನೇಕ ಪಂಡಿತರನ್ನು ತಯಾರಿಸಿ ವಿದ್ಯೆಯನ್ನು ಸರ್ವದಾ ಅಭಿವೃದ್ಧಿ ಪಡಿಸಿ ಜಗನ್ಮಾನ್ಯತೆಯನ್ನು ಗಳಿಸಿದ್ದೀರಿ.
ಸ್ವಾಮೀ! 
ನೀವು ವಿದ್ಯಾ ವಿಶಾರದರೂ - ಪರಮ ಶಾಂತರೂ - ದರ್ಶನ ಮಾತ್ರದಿಂದ ಆಹ್ಲಾದಪ್ರದರೂ ಮತ್ತು ಸಜ್ಜನರ ಮನಸ್ಸಂತೋಷ ಪಡಿಸುವ ಮಹಾನುಭಾವರು.
ಶ್ರೀ ಸುವ್ರತೀಂದ್ರ ಪೂಜ್ಯಪಾದರೆ! 
ನೀವು ಯತಿಚಂದ್ರಮರಾಗಿರುವಿರಿ. 
ಚಂದ್ರನಲ್ಲಿರುವ ಎಲ್ಲಾ ಗುಣಗಳೂ ನಿಮ್ಮಲ್ಲಿಯೂ ಚೆನ್ನಾಗಿ ಕಂಗೊಳಿಸುತ್ತಿವೆ.
ಚಂದ್ರನು ದ್ವಿಜರಿಗೆ ( ನಕ್ಷತ್ರಗಳಿಗೆ ) ಸ್ವಾಮಿಯಾಗಿದ್ದಾನೆ!
ನೀವು ದ್ವಿಜರಿಗೆ ( ಬ್ರಾಹ್ಮಣರಿಗೆ ) ಪ್ರಭುವಾಗಿದ್ದೀರಿ!
ಚಂದ್ರನು ಸತ್ಕಲಾ ( ಕಲೆಗಳು ) ಯುಕ್ತನಾಗಿದ್ದಾನೆ!
ನೀವು ಸತ್ಕಲಾ ( ಶ್ರೇಷ್ಠ ದ್ವೈತ ವಿದ್ಯೆಗಳಿಂದ ) ಪೂರ್ಣರಾಗಿದ್ದೀರಿ!
ಚಂದ್ರನು ಕವಿಗಳಿಂದ ಗೇಗೇಯಮಾನ ಸಾಂದ್ರ ಕೀರ್ತಿ ಉಳ್ಳವನು!
ನೀವು ಜ್ಞಾನ - ಭಕ್ತಿ - ವೈರಾಗ್ಯಾದಿ ಕವಿಗಳು ವರ್ಣಿಸುವುದರಿಂದ ಸಾಂದ್ರ ಕೀರ್ತಿ ಉಳ್ಳವರಾಗಿದ್ದೀರಿ!
ಚಂದ್ರನು ಸತ್ಕುಮುದಕ್ಕೆ ( ಶ್ರೇಷ್ಠ ನೈದಿಲೆ ಪುಷ್ಪಗಳಿಗೆ ) ಆಹ್ಲಾದಕರನಾಗಿದ್ದಾನೆ!
ನೀವು ಸತ್ಕುಮುದ ಅಂದರೆ ಸಜ್ಜನರೆಂಬ ನೈದಿಲೆ ಪುಷ್ಪಗಳಿಗೆ ಆಹ್ಲಾದಕರರಾಗಿದ್ದೀರಿ!
ಚಂದ್ರನು ಬೆಲದಿಂಗಳಿನಿಂದ ಆಢ್ಯನಾಗಿದ್ದಾನೆ!
ನೀವು ಪ್ರಕಾಶಿಸುವ ತಪಸ್ಸೆಂಬ ಚಂದ್ರಿಕೆಯಿಂದ ಆಢ್ಯರಾಗಿರುವಿರಿ!
ಚಂದ್ರನು ಬುಧನಿಗೆ ಸ್ವಾಮಿಯಾಗಿದ್ದಾನೆ!
ನೀವು ಬುಧರಿಗೆ ( ಪಂಡಿತರಿಗೆ ಪ್ರಭುವಾಗಿದ್ದೀರಿ ಮತ್ತು ಸ್ವತಃ ಪಂಡಿತರಾಗಿದ್ದೀರಿ!
ಚಂದ್ರನು ವಿಷ್ಣು ಪಾದ ( ಆಕಾಶ ) ವನ್ನು ಆಶ್ರಯಿಸಿದ್ದಾನ!
ನೀವು ಸರ್ವದಾ ವಿಷ್ಣು ಪಾದ ( ಶ್ರೀ ಹರಿಯ ಪಾದ ) ವನ್ನೇ ಆಶ್ರಯಿಸಿರುವಿರಿ!
ಇಂಥಾ ಚಂದ್ರನಂತೆ ಬೆಡಗುಗೊಂಡಿರುವ ಶ್ರೀ ಸುವ್ರತೀಂದ್ರ ಯೆತಿ ಚಂದ್ರಮರೇ ನಮಗೆ ಆಶ್ರಯದಾತರಾಗಲಿ ಎಂದು ಪ್ರಾರ್ಥಿಸೋಣ....
" ಶ್ರೀ ಸುವ್ರತೀಂದ್ರತೀರ್ಥ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ಹುಲಿ ಕೃಷ್ಣಾಚಾರ್ಯರು 
ತಂದೆ : ಶ್ರೀ ಹುಲಿ ಹನುಮಂತಾಚಾರ್ಯರು
ದ್ವೈತ ವೇದಾಂತ ವಿದ್ಯಾ ಗುರುಗಳು : ಶ್ರೀ ಹುಲಿ ಹನುಮಂತಾಚಾರ್ಯರು
ನಾಯಶಾಸ್ತ್ರದ ವಿದ್ಯಾ ಗುರುಗಳು :
ತಿರುಪತಿಯ ವೆಂಕಟೇಶ್ವರ ಸಂಸ್ಕೃತ ಕಾಲೇಜಿನಲ್ಲಿ ನ್ಯಾಯಶಾಸ್ತ್ರದ ಪ್ರಧಾನಾಧ್ಯಾಪಕರಾದ ಶ್ರೀ ಕಪಿಸ್ಥಳಂ ದೇಶಿಕಾಚಾರ್ಯರು.
ಆಶ್ರಮ ಗುರುಗಳು : ಶ್ರೀ ಸುಶೀಲೇಂದ್ರತೀರ್ಥರು
ಆಶ್ರಮ ನಾಮ : ಶ್ರೀ ಸುವ್ರತೀಂದ್ರತೀರ್ಥರು
ಆಶ್ರಮ ಶಿಷ್ಯರು : ಶ್ರೀ ಸುಯಮೀಂದ್ರತೀರ್ಥರು
ಆಶ್ರಮ ಕಾಲ : ಕ್ರಿ ಶ 1926 - 1933
ಸಮಕಾಲೀನ ಹರಿದಾಸರು : ಶ್ರೀ ಶ್ಯಾಮಸುಂದರದಾಸರು ಮತ್ತು ಶ್ರೀ ಲಕುಮೀಶದಾಸರು
ಸಮಕಾಲೀನ ಪಂಡಿತರು :
ಎಳತ್ತೂರು ಶ್ರೀ ಕೃಷ್ಣಾಚಾರ್ಯರು - ಶ್ರೀ ವಿರೂಪಾಕ್ಷ ಶಾಸ್ತ್ರಿಗಳು ( ಮುಂದೆ ಶ್ರೀ ಕೂಡಲಿ ಶೃಂಗೇರಿ ಮಠದ ಸ್ವಾಮಿಗಳಾದವರು ) - ಅಭಿನವ ಬಾಣಭಟ್ಟ ಶ್ರೀ ಆರ್ ವಿ ಕೃಷ್ಣಾಚಾರ್ಯರು - ದೊಡ್ಡಬಳ್ಳಾಪುರಂ ಶ್ರೀ ವಾಸುದೇವಾಚಾರ್ಯರು - ತಿರುವಾದಿ ಶ್ರೀ ವಿಜಯೀಂದ್ರಾಚಾರ್ಯರು - ಶ್ರೀ ವೈದ್ಯನಾಥ ಶಾಸ್ತ್ರಿಗಳು, ಶ್ರೀ ಚಕ್ರವರ್ತಯ್ಯಂಗಾರು ಮೊದಲಾದ ವಿದ್ವಾಂಸರುಗಳು.
ಆರಾಧನೆ : ವೈಶಾಖ ಶುದ್ಧ ದ್ವಾದಶೀ
ಬೃಂದಾವನ ಸ್ಥಳ : ಮಂತ್ರಾಲಯ
ಸುಶೀಲೇಂದ್ರ ಕರಾಬ್ಜೋತ್ಥಂ 
ಸುಶಾಂತ್ಯಾದಿ ಗುಣಾರ್ಣವಂ ।
ಸುಧಾ ಪ್ರವಚನಾಸಕ್ತಂ 
ಸುವ್ರತೀಂದ್ರ ಗುರುಂಭಜೇ ।।
ಶ್ರೀ ಶ್ಯಾಮಸುಂದರದಾಸರು...
ರಾಗ : ಭೂಪ  ತಾಳ : ದೀಪಚಂದಿ
ಪೊಂದಿ ಭಜಿಸೊ ನಿರುತಾ ಮಾನವ ಮಹಿ ।
ವೃಂದಾರಕ ವ್ರಾತಾ ।। ಪಲ್ಲವಿ ।।
ವಂದಿತ ಶ್ರೀ ಸುಯಮೀಂದ್ರರ । ಹೃದಯಾರ ।
ವಿಂದ ಭಾಸ್ಕರ ಸುವ್ರತೀಂದ್ರರ ಪದಯುಗ ।। ಅ. ಪ ।।
ಧರೆಯೊಳು ದ್ವಿಜನಿಕರ ಉದ್ಧರಿಸಲು । ಗುರುವರ ಸುಶೀಲೇಂದ್ರರ । ಕರದಿ ತುರ್ಯಾಶ್ರಮ ಧರಿಸುತ । ಶ್ರೀ ಮೂಲ । ತರಣೆ ಕುಲೇಂದ್ರನ ಚರಣವ ಪೂಜಿಸಿ । ಮರುತ ಶಾಸ್ತ್ರದ ಭಕ್ತಿ ಪೂರ್ವಕ । ನಿರುತ ಪ್ರವಚನಗೈದು । ಶಿಷ್ಯರಿ । ಗೊರೆದು ಕರುಣದಿ ಪೊರೆವ ಪಾವನ ।
ಚರಿತರಡಿದಾವರೆಗಳ ಹರುಷದಿ ।। ಚರಣ ।।
ಸಲೆಭಕ್ತಿ ಸುವಿರಕುತಿ ಸುಶಾಂತ್ಯಾದಿ । ಹಲವು ಸದ್ಗುಣ ಪ್ರತತಿ । ಕಲಿಯೊಳಿಳೆಯೊಳು ಸ್ಥಳವ ಕಾಣದೆ ವಿಧಿ । ಬಳಿಗೆ ಬಿನ್ನೈಸಲು ನಳಿನಜ ಯೋಚಿಸಿ । ಇಳೆಯೊಳಗೆ ಸುವ್ರತೀಂದ್ರತೀರ್ಥರ । ಚಲುವ ಹೃದಯ ಸ್ಥಾನ ತೋರಲು । ಬಳಿಕ ಸುಗುಣಾವಳಿಗಳಿವರೊಳು । ನೆಲೆಸಿದವು ಇಂಥ ಮಹಿಮರ ।। ಚರಣ ।।
ಶಿರಿಮುಖ ವತ್ಸರದಿ ಸುವೈಶಾಖ । ವರ ಮಾಸ ಶಿತ ಪಕ್ಷದಿ । ಹರಿದಿನದಲಿ ಡಿವ ಮೂರನೆಯಾಮದಿ । ವರ ಮಂತ್ರ ಮಂದಿರ ಪರಮ ಸುಕ್ಷೇತ್ರದಿ । ಸಿರಿ ಮನೋಹರ ಶ್ಯಾಮಸುಂದರ । ಸರಸಿಜಾ೦ಘ್ರಿಯ ಸ್ಮರಿಸುತಲಿ ಶುಭ । ಕರ ಸುಲಯ ಚಿಂತನೆಗೈಯುತ । ಹರಿಪುರಕೆ ಪೊರಮೊಟ್ಟ ಗುರುಪದ ।। ಚರಣ ।।
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
*****
" ವಿದ್ಯಾ ಮಠದ ವಿದ್ಯಾ ವೈಭವ "
" ಶ್ರೀ ಸುವ್ರತೀಂದ್ರ ತೀರ್ಥರ ವಿದ್ಯಾ ವೈಭವ "
ಶ್ರೀ ಸುವ್ರತೀಂದ್ರ ತೀರ್ಥರು ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯವನ್ನು ಆಳಿದ್ದು ಕೇವಲ ಏಳು ವರ್ಷಗಳು. 
ಶ್ರೀ ಸುವ್ರತೀಂದ್ರ ತೀರ್ಥರಿಗೆ ಲೌಕಿಕ ವಿಚಾರದಲ್ಲಿ ಶ್ರೀ ಶ್ರೀನಿವಾಸಮೂರ್ತ್ಯಾಚಾರ್ಯರು ( ಶ್ರೀ ಸುಯಮೀ೦ದ್ರತೀರ್ಥರು ) ಬೆಂಬಲರಾಗಿ ನಿಂತು ಸಂಸ್ಥಾನದ ಕಾರ್ಯ ಭಾರವನ್ನು ನೆರವೇರಿಸುತ್ತಿದ್ದರು. 
ಶ್ರೀ ಶ್ರೀಗಳಲವ್ರು ತಾವಿದ್ದ ಏಳು ವರ್ಷಗಳೂ ಸಂಚಾರ ಮಾಡುತ್ತಲೇ ಇದ್ದರು. 
ಶ್ರೀಗಳವರು ಸಂಚಾರ ಕ್ರಮದಲ್ಲಿ ಒಮ್ಮೆ ಶ್ರೀ ಶ್ರೀಪಾದರಾಜರ ಮೂಲ ವೃಂದಾವನ - ಮುಳಬಾಗಿಲಿಗೆ ದಿಗ್ವಿಜಯ ಮಾಡಿಸಿದರು. 
ಶ್ರೀ ಶ್ರೀಪಾದರಾಜ ಮಠಾಧೀಶರಾದ ಶ್ರೀ ದಯಾನಿಧಿ ತೀರ್ಥರು ಶ್ರೀ ಶ್ರೀಗಳವರನ್ನು ವಿಶೇಷವಾಗಿ ಸತ್ಕರಿಸಿದರು. 
ಮುಳಬಾಗಿಲಿನಿಂದ ಶ್ರೀ ಶ್ರೀಗಳವರು ಶ್ರೀರಂಗಕ್ಕೆ ಬಂದರು. 
ಅಲ್ಲಿ ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು 
ಶ್ರೀ ಶ್ರೀರಂಗನಾಥನ ಸನ್ನಿಧಾನದಲ್ಲಿ ವಿಶೇಷ ಗೌರವ ಸತ್ಕಾರಗಳು ನಡೆದವು. 
" ಶ್ರೀ ವಿಜಯೀ೦ದ್ರತೀರ್ಥರ ಸನ್ನಿಧಾನದಲ್ಲಿ ವಿದ್ವತ್ಸಭೆ "
ಕುಂಭಕೋಣೆಯಲ್ಲಿ ನಡೆದ ಸಮೀರ ಸಮಯ ಸಂವರ್ಧಿನೀ ಸಭೆಯು ಮಹಾ ಸಂಸ್ಥಾನದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡುವಂಥಹುದು. 
ಸಂದರ್ಭ :
" ಪ್ರಾತಃಸ್ಮರಣೀಯ ಪರಮಪೂಜ್ಯ ಶ್ರೀ ಸುಶೀಲೇಂದ್ರ ತೀರ್ಥರ ಮಹಾ ಸಮಾರಾಧನಾ ಮಹೋತ್ಸವ "
ಕ್ರಿ ಶ  1930 ರಲ್ಲಿ ದಕ್ಷಿಣ ಭಾರತದಲ್ಲಿ ಸುಪ್ರಸಿದ್ಧ ಪಂಡಿತರೆಲ್ಲ ಆ ವಿದ್ವತ್ಸಭೆಯಲ್ಲಿ ಮಿಲಿತರಾಗಿದ್ದರು. 
ಶ್ರೀ ಎಲತ್ತೂರು ಕೃಷ್ಣಾಚಾರ್ಯರು, ಶ್ರೀ ಕಪಿಲಸ್ಥಂ ದೇಶಿಕಾಚಾರ್ಯರು, ಶ್ರೀ ವಿರೂಪಾಕ್ಷ ಶಾಸ್ತ್ರಿಗಳು ( ಮುಂದೆ ಕೂದಲಿ ಶೃಂಗೇರಿ ಮಠದ ಸ್ವಾಮಿಗಳಾದವರು ), ಶ್ರೀ ಅಭಿನವ ಬಾಣಭಟ್ಟ ಆರ್ ವಿ ಕೃಷ್ಣಮಾಚಾರ್ಯರು, ಶ್ರೀ ದೊಡ್ಡಬಳ್ಳಾಪುರಂ ವಾಸುದೇವಾಚಾರ್ಯರು, ಶ್ರೀ ತಿರುವಾದಿ ವಿಜಯೀ೦ದ್ರಾಚಾರ್ಯರು, ಶ್ರೀ ವೈದ್ಯನಾಥ ಶಾಸ್ತ್ರಿಗಳು, ಶ್ರೀ ಚಕ್ರವರ್ತಿ ಅಯ್ಯಂಗಾರ್ ಮೊದಲಾದ ವಿದ್ವಚ್ಛ್ರೇಷ್ಠರುಗಳು ಸಭೆಯನ್ನು ಅಲಂಕರಿಸಿದ್ದರು. 
ಸಭೆಯಲ್ಲಿ ಮೂರು ದಿನಗಳೂ  ನ್ಯಾಯಶಾಸ್ತ್ರದಲ್ಲಿ ವಿಶೇಷ ಚರ್ಚೆ ನಡೆಯಿತು. 
" ವ್ಯುತ್ಪತ್ತಿ ವಾದದಲ್ಲಿ " ಪಶುನಾ ಯಜೇತ " 
ಯೆಂಬ ವಾಕ್ಯ ವಾಕ್ಯಾರ್ಥ ವಿಷಯವಾಯಿತು. 
ಚರ್ಚೆ ಬಿಸಿಯಾದ ಸಂದರ್ಭದಲ್ಲಿ ಶ್ರೀ ಶ್ರೀಗಳವರು ಮಧ್ಯಸ್ಥಿಕೆ ವಹಿಸಿ ಸರಿಯಾಗಿ - ಸಮಂಜಸವಾಗಿ ಅನುವಾದ ಮಾಡಿದರು.   
ಶ್ರೀ ಶ್ರೀಗಳವರ ಆಮೋಘವಾದ ಗಂಭೀರವಾಣಿ - ಅನುವಾದ ಶೈಲಿಯನ್ನು ನೋಡಿ ಶ್ರೀ ಕಪಿಲಸ್ಥಂ ದೇಶಿಕಾಚಾರ್ಯರೂ ತಲೆದೂಗಿದರು. 
ಶ್ರೀ ಕಪಿಲಸ್ಥಂ ದೇಶಿಕಾಚಾರ್ಯರು ಶ್ರೀವೈಷ್ಣವರಲ್ಲಿ ಸ್ವಯಂ ಆಚಾರ್ಯ ಪುರುಷರಾದರೂ ಎದ್ದು ದೀರ್ಘದಂಡ ಪ್ರಣಾಮಗಳನ್ನು ಮಾಡಿ, ತಕ್ಷಣದಲ್ಲೇ... 
ಸೋಮಾತ್ ಸೌಮ್ಯ೦ ನಿಸರ್ಗತಾಂ ಸುರತರೋರೌದಾರ್ಯಮಂಭೋನಿಧೇರ್ಗಾಂಭೀರ್ಯ೦ 
ಮರುತಾಂ ಗುರೋಶ್ಚತುರರತಾ೦ ಸ್ಥೈರ್ಯ೦ ಹಿಮಾದ್ರೇರಪಿ । 
ಸಾರೋದ್ಧಾರಯೇನ ಸಾರಸಭುವಾಸಂಗೃಹ್ಯ ಸಂಮೋದತಃ । 
ಸೃಷ್ಟೋಯಂ ಜಗತೀತಲೇ ವಿಜಯತೇ ಶ್ರೀ ಸುವ್ರತೀಂದ್ರೋ ಗುರು: ।।
ಯೆಂಬ ಶ್ಲೋಕವನ್ನು ರಚಿಸಿ ಶ್ರೀ ಶ್ರೀಗಳವರಿಗೆ ಸಮರ್ಪಿಸಿದರು. 
ಸಭೆಯಲ್ಲ ಜಯ ಜಯಕಾರ ಮಾಡಿತು. 
ಶ್ರೀಗಳವರು ಇದನ್ನೆಲ್ಲಾ ಶ್ರೀ ರಾಯರ ಅಂತರ್ಯಾಮಿ ಶ್ರೀ ವಿಜಯೀ೦ದ್ರ ಗುರುಗಳ ಅಂತರ್ಯಾಮಿ ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀಮನ್ಮೂಲರಘುಪತಿ ವೇದವ್ಯಾಸೋsಭಿನ್ನ ಶ್ರೀ ಲಕ್ಷ್ಮೀ ನಾರಾಯಣರಿಗೆ ಸಮರ್ಪಿಸಿದರು. 
ರಚನೆ : ಶ್ರೀ ಕುರುಡಿ ರಾಘವೇಂದ್ರಾಚಾರ್ಯರು 
ಅಂಕಿತ : ಶ್ರೀ ಲಕುಮೀಶ 
ಧಾಟಿ : ನಮೋ ನಮೋ ಶ್ರೀ ರಾಘವೇಂದ್ರ 
ನಮಿಸುವೆನು ಸುವ್ರತೀಂದ್ರ 
ಯತಿಗಳಿಗೆ ಸತತ ।। ಪಲ್ಲವಿ ।।
ಭ್ರಮಿಸಿ ತ್ರಯ ಮೋಹದಲಿ ।
ಶ್ರಮಿಸಿ ಶ್ರೀ ಹರಿ ಪದವ ।    
ನಮಿಸಿ ನಾ ತುತಿಸದಲೆ -
ಕೆಟ್ಟೆ ಕೈಪಿಡಿಯೆಂದು ।। ಅ ಪ ।।
ಹುಲಿ ಹನುಮಂತರ 
ಚಲ್ವ ಭವರಿವರಲ್ಲಿ ।
ಸಲ್ಲಿಸುತ ವೇದಾಂತ ನ್ಯಾ
ಯಶಾಸ್ತ್ರದ ಕಲಿತೂ ।
ಕಲಿತನದಿ ತಿರುಪತಿಲಿ 
ಪ್ರೌಢಾಧ್ಯಾಪಕರಾಗಿ ।
ಇಳೆಯೊಳಗೆ ಬಹು ಕೀರ್ತಿ 
ಪಡೆದಂಥ ಮಹಿಮರಿಗೆ ।। ಚರಣ ।।
ಒಲುಮೆ ಗಳಿಸಿ ಶ್ರೀ ಸುಶೀಲೇಂದ್ರ 
ಯತಿಗಳಲಿ ।
ಹುಲಿ ಕೃಷ್ಣರಿವರೀಗ 
ಒಲಿದಾಶ್ರಮ ನೀಡಿ ।
ಬಲಗೊಂಡು ಶ್ರೀ ಮೂಲರಾಮಾದಿ 
ಪೂಜೆಯಲಿ ।
ನಲಿದು ದಕ್ಷಿಣ ಯಾತ್ರೆ 
ಹರುಷದಲಿ ಗೈದರಿಗೆ ।। ಚರಣ ।।
ಶ್ರೀ ಕುಂಭಕೋಣದಲಿ 
ಮಹಾ ಸಮಾರಾಧನೆಗೆ ।
ಜೋಕೆಯಲಿ ಸಮೀರಾ 
ಸಮಯ ಸಭದೀ ।
ಆ ಕೃಷ್ಣ ಎಲತ್ತೂರು 
ಕಪಿಸ್ಥಲಂ ದೇಶಿಕಾರ್ಯ ।
ಚಕ್ರವರ್ತಿ ಅಯ್ಯಂಗಾರ್ರಿವರ
ಬರ ಮಾಡ್ದರಿಗೆ ।। ಚರಣ ।\
ಕೂಡಲಿ ಶೃಂಗೇರಿ ಮಠದ 
ಸ್ವಾಮಿಯವರು ।
ಸಡಗರದಿ ಬಂದ 
ಅಭಿನವ ಭಟ್ಟಾರ್ಯರು ।
ದೊಡ್ಡ ಬಳ್ಳಾಪುರದ 
ವಾಸುದೇವಾಚಾರ್ಯರು ।
ಬಿಡದೆ ವಿರೂಪಾಕ್ಷ 
ಕೋವಿದರ್ಕರಿಸಿದರಿಗೆ ।। ಚರಣ ।।
ವೈದ್ಯನಾಥಶಾಸ್ತ್ರಿ 
ತಿರುವಾದಿ ವಿಜಯೀ೦ದ್ರ ।
ಮುದದಿಂದ ಬಂದ  
ಕೋವಿದ ಕೃಷ್ಣಮೂರ್ತಿ ।
ಒದಗೆ ವಾಕ್ಯಾರ್ಥ 
ಪಶೂನಾ ಯಜೇತಕ್ಕೆ ।
ತುದಿ ನಿರ್ಣಯ ನೀಡಿ 
ಗೆದ್ದಂತ ಯತಿಗಳಿಗೆ ।। ಚರಣ ।।
ದೇಶಿಕಾರ್ಯರು ಇವರ 
ಭಾಸುರ ವಿದ್ವತ್ತಿಗೆ ।
ಸೋಶಿಲಾಕ್ಷಣದಲ್ಲಿ 
ಕವನವನು ನೀಡೆ ।
ತೋಷದಲಿ ಪೂಜೆಗೈದು 
ವಿಜಯೀ೦ದ್ರರಡಿಗಿಟ್ಟು ।
ರಾಶಿ ಧನ ಕನಕಾದಿಗಳ 
ಪಂಡಿತರಿಗಿತ್ತಂಥ ।। ಚರಣ ।।
ವ್ಯಾಸತತ್ತ್ವಜ್ಞರ 
ದರ್ಶನಾದಿ ಗೈದು ।
ಸಂಸ್ಥಾನ ಗದ್ವಾಲಿನಲ್ಲಿ 
ಚಾತುರ್ಮಾಸ್ಯ ಕುಳಿತೂ ।
ಹಾಸದಲಿ ಆಶ್ರಮದಿ 
ಸುಯಮೀ೦ದ್ರರಿಗೆಯಿತ್ತು ।
ವಾಸ ಮಂತ್ರಾಲಯದಿ 
ಲಕುಮೀಶ್ನ ಧ್ಯಾನಿಪರ ।। ಚರಣ ।।
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
***

No comments:

Post a Comment