info is from sumadhwesha.com--->
Shri Vasudendra Theertharu
Ashrama Period – 1750-1761
parampare: rAyara maTa, #23pUrvAshrama Name: purushOtamAchArya
Ashrama gurugaLu: shri vAdIndra tIrtharu
Ashrama shishyaru: shri varadEndra tIrtharu
brindAvana: kenchanguDDa, near siruguppa, on the banks of tungbhadra
Aradhana: Ashwija bahula saptami
Vrundavana pravesha – Ashvayuja Bahula Saptami
ವಸುಧಾತಲವಿಖ್ಯಾತಂ ವೈರಾಗ್ಯಾದಿಗುಣಾರ್ಣವಂ|
ವೇದವೇದಾಂಗಚತುರಂ ವಸುಧೇಂದ್ರಗುರುಂ ಭಜೇ |
वसुधातलविख्यातं वैराग्यादिगुणार्णवं।
वेदवेदांगचतुरं वसुधेंद्रगुरुं भजे ।
vasudhaatalaviKyaatam vairaagyaadiguNaarNavam|
vEdavEdaangachaturam vasudhEMdragurum bhajE |
Sri Venugopalacharyaru is the Poorvashrama Brother of Vadeendraru.
Venugopalacharyaru had three sons, all the three became sanyasis of Rayara Mutt Parampare in different period. They are :
1. Purushottamacharyaru— Sri Vasudendra Thirtharu
2. Balaramacharyaru — Sri Varadendra Thirtharu
3. Lakshminarayanacharyaru — Sri Bhuvanendra Thirtharu
He has written vyakyaana for Gurugunastavana. He spent most of his tenure at Mantralaya. During his period Ramabhopala named landlord gave daana of Somanahalli village. Adavani Navab Sabduljang Bahadoor gave the paper documents of Mantralaya in favour of Mantralaya Rayara Mutt.
Route to Kenchanagudda – River Tunghabhadra is at her best at Kenchanagudda. To reach Kenchangudda, from Bellary take the road to Siruguppa.
Before entering proper Siruguppa, on the left (immediately besides petrol bunk), a road leads to Kenchanagudda which is about 4 Km away and the Vrindavana is 2 Km from there.
**********
1. First son purushOtamAchArya: shri vasudEndra tIrtharu, #23
2. Second son balarAmAchArya: shri varadEndra tIrtharu, #24
3. Third son lakshmInArAyaNAchArya: shri bhuvanEndra tIrtharu, #26
purushOtamAchArya took sanyAsa in 1746 and continued to serve his gurugaLu. He became pITAdhipati after his gurugaLu attained brindAvana in 1750.
During shri vasudEndra tIrthru's time, mantrAalaya was officially handed over to the maTa. Also there were other villages and properties that were gifted to the maTa during his time by various rulers.
He wrote a commentary on the "guruguNasthavana" work of his gurugaLu, shri vAdIndra tIrtharu. His other work is "tantra sAra".
shri jagannAtha dAsaru had composed a song on this saint - shri vasudEndra rAya….gana marutha.
******
info from madhwamrutha.org--->
Venugopalacharya, the poorvashrama younger brother of Sri Vadeendra Theertharu had three sons, Purushothamacharya was the eldest, Balaramacharya and Lakshminarayanacharya were his younger brothers. All the three brothers went on to adore the sarvajna peetha as the heads of the Moola Mahasamsthana and were named Sri Vasudhendra Theertha, Sri Varadendra Theertha and Sri Bhuvanendra Theertha respectively. Sri Vadeendra Theertharu gave sanyasashrama to Sri Vasudhendra Theertha in 1746. Sri Vasudhendra Theertharu used to accompany his Guru during sanchara and learnt lot of shastras under him.
Vasudhendra Theertha didn’t do much of sanchara during his period and used to stay in Mantralaya by performing japa, holding discourses and conducting paata to his sishyas. As his charma shloka says, Srigalu was very well versed in all the 4 vedas and a great ascetic. It was during his period that all the documents related to the village of Mantralaya were executed by Nawab Sabdaljung Bahadur, the administrator of Adoni. During his regime the manyaas at Kritigiri had gone into the hands of the Sarkar (British) and the saint spoke to the authorities and restored it to Sri Matha. A palegar by name Ramabhoopala gifted a village called Somanahalli to Srigalu during his regime.
Works of Sri Vasudhendra Theertha :
Below are the three works of Srigalu which are currently available to us
Tippani to Tantrasara Sangraha
Vyakhyana to GurugunaSthavana &
Gurustotra Dandaka
Gurustotra Danadaka is a unique work which outlines the greatness of all the yatis’s right from Sri Madhvacharyaru upto his Guru Sri Vadeendra Theertharu in few verses.
Sri Madhvam Padmanabham Narahari munipam Madhava Akshobya Theeerthou |
Vande Sri MadhJayaryam munivaramatha Vidyadhirajam Kavindram||
Vageesham Ramachandram shruthaguna Vibhudhendram Jitamitra varyam|
Raksha Shikshika dakshou Raghu(Nandana) tanaya Surendrou Jayeendra Sudheendram||
Sreshtam Sri Raghavendram skalaguna nidhim dheerayogendra theertham|
Surindram sadgunadyam Raghupathi charana dhyanadoothaghasangham||
Sri RamaVyasapoojamitamathi Sumatheendrabdhi samyameendram|
Bhaktya prasthoumyUpendram Guruvaramapi me prouda Vadeendravaryam||
Sri Vasudhendra Theertha gave ashrama to Balaramacharyaru and named him as Sri Varadeendra Theertharu. Vasudhendra Theertha attained Haripada on Ashweeja Krishna Saptami at Kenchangudda, a very picturesque place on the banks of TungaBhadra River, near Sirguppa in Bellary district. His sishya Sri Varadeendra Theertharu installed an Avataratraya Pranadevara Vigraha opposite to his Guru’s Brindavana. The uniqueness of this is idol, Hanuman is wearing the ornaments given to him by goddess Sita and on his right hand he his holding a Linga(Rudra devaru). Kenchangudda is also a very historical place; the currencies (nanyas) which were used during the Vijaynagar period were printed in this very place.
**********
info is from FB madhwanet--->
Dhyaana shloka:
vasudhAthakila vikhyAtam vairAgyAdi guNArNavam |
vEda vEdAnga chathuram vasudEndra gurum bhaje ||
shri vAdIndra tIrtharu's pUrvAshrama elder brother, vENugOpAlAchArya, had 3 sons. All of them adorned the pITa as follows.
1. First son purushOtamAchArya: shri vasudEndra tIrtharu, #23
2. Second son balarAmAchArya: shri varadEndra tIrtharu, #24
3. Third son lakshmInArAyaNAchArya: shri bhuvanEndra tIrtharu, #26
purushOtamAchArya took sanyAsa in 1746 and continued to serve his gurugaLu. He became pITAdhipati after his gurugaLu attained brindAvana in 1750.
During shri vasudEndra tIrthru's time, mantrAalaya was officially handed over to the maTa. Also there were other villages and properties that were gifted to the maTa during his time by various rulers.
He wrote a commentary on the "guruguNasthavana" work of his gurugaLu, shri vAdIndra tIrtharu. His other work is "tantra sAra".
shri jagannAtha dAsaru had composed a song on this saint - shri vasudEndra rAya….gana marutha.
shri vasudEndra tIrtha guruvantargata, bhArati ramaNa mukhyaprANAntargata, sItApate shri mUla rAma dEvara pAdAravindakke gOvinda, gOvinda...
shri krishNArpaNamastu...
ಶ್ರೀ ವಸುದೇಂಧ್ರ ತೀರ್ಥರ 257ನೇ ಆರಾಧನಾ ಮಹೋತ್ಸವ 30 oct 2018 - ರಾಜೀವ ಐರಣಿ. ಸಿರುಗುಪ್ಪ. ತಾಲೂಕಿನ ಕೆಂಚನಗುಡ್ಡ ಗ್ರಾಮದ ಹತ್ತಿರವಿರುವ ತುಂಗಭದ್ರ ನದಿತೀರದಲ್ಲಿ ಮಂತ್ರಾಲಯ ಯತಿ ಪರಂಪರೆಯ ಶ್ರೀವಸುದೇಂಧ್ರ ತೀರ್ಥರ ಮೂಲ ಬೃಂದಾವನ ಸನ್ನಿಧಾನದಲ್ಲಿ 2018 ಅ.30ರಂದು ಪೂರ್ವಾರಾಧನೆ, ಅ.31ರಂದು ಮಧ್ಯಾರಾಧನೆ, ನ.01ರಂದು ಉತ್ತರಾಧನೆಗಳು ಮಂತ್ರಾಲಯ ಪೀಠದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀಸುಬುದೇಂಧ್ರ ತೀರ್ಥರ ಮಾರ್ಗದರ್ಶನದಲ್ಲಿ ನಡೆಯಲಿವೆ.
ಶ್ರೀವಸುದೇಂದ್ರ ತೀರ್ಥರ ಸಂಕ್ಷಿಪ್ತ ಪರಿಚಯ: ಮಧ್ವಚಾರ್ಯರ ಪರಂಪರೆಯ 22ನೇ ಯತಿಗಳಾಗಿದ್ದು, ಶ್ರೀರಾಘವೇಂದ್ರ ತೀರ್ಥರ ನಂತರದ ಆರನೇ ಯತಿಗಳಾಗಿದ್ದಾರೆ. 1746ರಲ್ಲಿ ಆಶ್ರಮ ಗುರುಗಳಾದ ವಾದೀಂದ್ರ ತೀರ್ಥರು ಶ್ರೀ ಪುರುಷೋತ್ತಮ ಆಚಾರ್ಯ ಎನ್ನುವ ಹೆಸರನ್ನು ಶ್ರೀವಸುದೇಂಧ್ರ ತೀರ್ಥರು ಎಂದು ನಾಮಕರಣ ಮಾಡಿ ಸನ್ಯಾಸಾಶ್ರಮ ನೀಡಿ ಸರ್ವಜ್ಞ ಸಿಂಹಾಸನಕ್ಕೆ ಅದೀಷ್ಟಿತಗೊಳಿಸಿದರು. ಇವರು ನಾಲ್ಕು ವೇದಗಳಲ್ಲಿ ಹಾಗೂ ತರ್ಕಶಾಸ್ತ್ರದಲ್ಲಿ ಪರಿಣಿತರಾಗಿದ್ದು, ಅನೇಕ ದಾಸವರಣ್ಯರನ್ನು ತಮ್ಮ ಶಿಷ್ಯರನ್ನಾಗಿ ಹೊಂದಿದ್ದರು. ಇವರ ಕಾಲದಲ್ಲಿ ದಾಸ ಸಾಹಿತ್ಯದ ಕೃಷಿ ಹೆಚ್ಚಿನದಾಗಿತ್ತು. ವಿಜಯದಾಸರು, ಗೋಪಾಲದಾಸರು, ಅಯ್ಯಣ್ಣಾಚಾರ್ಯರು ಇವರ ಪ್ರಮುಖ ಶಿಷ್ಯರಾಗಿದ್ದರು. ಇವರು ಅನೇಕ ಗ್ರಂಥಗಳನ್ನು ರಚಿಸಿದ್ದು, ಅವುಗಳಲ್ಲಿ ಮೂರು ಗ್ರಂಥಗಳು ದೊರೆತಿದ್ದು, ಶ್ರೀಆನಂದ ತೀರ್ಥ ವಿರಚಿತ ತಂತ್ರಸಾರ, ಸಂಗ್ರಹ ಟಿಪ್ಪಣಿ, ಶ್ರೀವಾದೇಂಧ್ರ ತೀರ್ಥ ವಿರಚಿತ ಗುರುಗುಣ ಸ್ತಾವನ, ವ್ಯಾಖ್ಯಾನ, ಗುರುಸ್ತೋತ್ರ ದಂಡಕ, ಪ್ರಮುಖವಾಗಿವೆ. ಇವರ ಅವಧಿಯಲ್ಲಿ ಆದೋನಿ ನವಾಬ ಸಬ್ಜಲ್‍ಜಂಗ್ ಬಹೂದ್ದೂರ್ ಶ್ರೀಮಠದ ದಾಖಲೆಗಳನ್ನು ವಶಪಡಿಸಿಕೊಂಡಾಗ ಶ್ರೀಗಳು ನವಾಬರೊಂದಿಗೆ ಚರ್ಚಿಸಿ ಶ್ರೀಮಠಕ್ಕೆ ಪುನ: ದಾಖಲೆಗಳನ್ನು ಮರಳಿಸುವಂತೆ ಮಾಡಿದ್ದರು.
ರಾಮಭೂಪಾಲ ಎಂಬ ಪಾಳೆಯಗಾರ ಸೋಮನಹಳ್ಳಿ ಎಂಬ ಗ್ರಾಮವನ್ನು ಶ್ರೀಗಳಿಗೆ ದಾನವಾಗಿ ನೀಡಿದರು. ಶ್ರೀಗಳು ಪ್ರವಾಸದಲ್ಲಿರುವಾಗ ತಾಲೂಕಿನ ಕೆಂಚನಗುಡ್ಡ ಗ್ರಾಮದ ಪಾಳೆಯಗಾರರು ಹಾಗೂ ಆಡಳಿತಗಾರರು ಇವರಿಂದ ಆಶೀರ್ವಾದ ಹೊಂದಿದರು. ಆಶ್ವೀಜ ಕೃಷ್ಣ ಸಪ್ತಮಿಯಂದು ತುಂಗಾನದಿ ತೀರದಲ್ಲಿ ಬೃಂದಾವನಸ್ಥರಾದರು. ವರದೇಂದ್ರ ತೀರ್ಥರು ಇವರ ಆಶ್ರಮ ಶಿಷ್ಯರಾಗಿದ್ದರು. ಇದುವರೆಗೂ 256 ವರ್ಷಗಳಿಂದ ಬೃಂದಾವನಸ್ಥರಾಗಿ ಜಾಗೃತ ಸ್ಥಿತಿಯಲ್ಲಿದ್ದು, ಶಿಷ್ಯರ, ಭಕ್ತರ ಸಕಲ ಕೋರಿಕೆಗಳನ್ನು ಈಡೇರಿಸುತ್ತಾ ಬಂದಿರುವ ಶ್ರೀಗಳು ತಪಸ್ಸಿಗೆ ಇನ್ನೊಂದು ಹೆಸರು ಎನ್ನುವಂತೆ ತಪೋನಿಧಿಗಳಾಗಿದ್ದಾರೆ.
ಶ್ರೀ ವಸುದೇಂಧ್ರ ತೀರ್ಥರನ್ನು ಸ್ಮರಿಸುವಾಗ ಶುಚಿಯಿಂದ, ಭಕ್ತಿಭಾವದಿಂದ ಸ್ಮರಿಸಬೇಕು, ಆಚಾರ ವಿಚಾರ ಇಲ್ಲದವರು ವೃಂದಾವನ ಪೂಜೆಗೆ ಹೋದಾಗ ಸರ್ಪರೂಪದಲ್ಲಿ ಕಂಡು ಜಾಗೃತಿ ನೀಡಿದ್ದು, ಅನೇಕ ಭಕ್ತರ ಅನುಭವಕ್ಕೆ ಬಂದಿದೆ ಮತ್ತು ಬರುತ್ತಿದೆ.
ಶ್ರೀಮಠದಿಂದ ಪೀಠಾಧಿಪತಿಗಳು ಮೂರು ದಿನಗಳ ಕಾಲ ಆರಾಧನಾ ಮಹೋತ್ಸವವನ್ನು ಹಮ್ಮಿಕೊಂಡಿದ್ದಾರೆ.
ಚಿತ್ರ- ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡ ಗ್ರಾಮದ ಹತ್ತಿರವಿರುವ ತುಂಗಭದ್ರನದಿ ತೀರದಲ್ಲಿನ ಮಂತ್ರಾಲಯ ಯತಿ ಪರಂಪರೆಯ ಶ್ರೀವಸುದೇಂಧ್ರ ತೀರ್ಥರ ಮೂಲ ಬೃಂದಾವನ.
***
ಶ್ರೀ ವಸುಧೇಂದ್ರತೀರ್ಥ
ಪೂರ್ವಾಶ್ರಮ ಹೆಸರು : ಶ್ರೀಪುರುಷೋತ್ತಮಚಾರ್ಯ
ಕಲಾಮನ : ೧೭೫೦ - ೧೭೬೧
ಆಶ್ರಮ ಗುರುಗಳು : ಶ್ರೀವಾದೀಂದ್ರತೀರ್ಥರು
ಆಶ್ರಮ ಶಿಷ್ಯರು : ಶ್ರೀವರದೇಂದ್ರತೀರ್ಥರು
ವಸುಧಾತಲವಿಖ್ಯಾತಂ ವೈರಾಗ್ಯಾದಿಗುಣಾರ್ಣವಂ|
ವೇದವೇದಾಂಗಚತುರಂ ವಸುಧೇಂದ್ರಗುರುಂ ಭಜೇ |
वसुधातलविख्यातं वैराग्यादिगुणार्णवं।
वेदवेदांगचतुरं वसुधेंद्रगुरुं भजे ।
ಶ್ರೀ ವೇಣುಗೋಪಾಲಚಾರ್ಯರು ಶ್ರೀ ವಾದೀಂದ್ರ ತೀರ್ಥರ ಪೂರ್ವಾಶ್ರಮದ ಸಹೋದರರು.ಇವರಿಗೆ ಪುರುಷೋತ್ತಮಾಚಾರ್ಯ,ಬಲರಾಮಚಾರ್ಯ ಮತ್ತು ಲಕ್ಷ್ಮೀನಾರಾಯಣಾಚಾರ್ಯ ಎಂಬ ೩ ಜನ ಮಕ್ಕಳು. ವಿಶೇಷವೆಂದರೇ ಇವರೆಲ್ಲಾ ಹಂಸನಾಮಕ ಪರಮಾತ್ಮನ ಸಾಕ್ಷಾತ್ ಪರಂಪರೆಯಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಪೀಠದಲ್ಲಿ ವಿರಾಜಮಾನರಾಗಿದರೆ.
ಪುರುಷೋತ್ತಮಾಚಾರ್ಯ - ಶ್ರೀವಸುಧೇಂದ್ರತೀರ್ಥರು
ಬಲರಾಮಚಾರ್ಯ - ಶ್ರೀವರದೇಂದ್ರತೀರ್ಥರು ಲಕ್ಷ್ಮೀನಾರಾಯಣಾಚಾರ್ಯ - ಶ್ರೀಭುವನೇಂದ್ರತೀರ್ಥರು
ಜ್ಞಾನ ವೈರಾಗ್ಯ ಸಂಪನ್ನರಾದ ಶ್ರೀವಸುಧೇಂದ್ರತೀರ್ಥರು
***
" ದಿನಾಂಕ : 07.11.2020 ಶನಿವಾರ ಶ್ರೀ ವಸುಧೇಂದ್ರತೀರ್ಥರ ಆರಾಧನಾ ಮಹೋತ್ಸವ "
ಶ್ರೀ ಪ್ರಾಣೇಶದಾಸರು...
ಬಿಸಜನಾಭನ ದೂತ ।
ವಸುಧಿಯೊಳಗೆ ಖ್ಯಾತ ।
ಕಿಸಲಯೋಪಮ ಪಾದ ।
ವಸುಧೀಂದ್ರ ತೀರ್ಥ ।।
" ಶ್ರೀ ವಸುಧೇಂದ್ರತೀರ್ಥರ ಸಂಕ್ಷಿಪ್ತ ಮಾಹಿತಿ "
ಹೆಸರು :
ವೀಣಾ ಶ್ರೀ ಪುರುಷೋತ್ತಮಾಚಾರ್ಯರು
ತಂದೆ :
ವೀಣಾ ಶ್ರೀ ವೇಣುಗೋಪಾಲಾಚಾರ್ಯರು
ತಾತ :
ವೀಣಾ ಶ್ರೀ ಪುರುಷೋತ್ತಮಾಚಾರ್ಯರು
ಮುತ್ತಾತ :
ವೀಣಾ ಶ್ರೀ ಲಕ್ಷ್ಮೀನಾರಾಯಣಾಚಾರ್ಯರು
ವೃದ್ಧ ಪಿತಾಮಹ :
ವೀಣಾ ಶ್ರೀ ವೇಂಕಟನಾಥಾಚಾರ್ಯರು
( ಶ್ರೀ ರಾಘವೇಂದ್ರತೀರ್ಥರು )
ಶ್ರೀ ಜಗನ್ನಾಥದಾಸರು...
ಸೂರಿ ಕುಲೋತ್ತಮ ಶ್ರೀ ರಾಘವೇಂದ್ರ ।
ಗುರು ಸದ್ವಂಶ ಜಾತಗೆ ಮಂಗಳಾ ।
ನಾರದನುತ ಜಗನ್ನಾಥವಿಠ್ಠಲನ ।
ಕರುಣಾಪಾತ್ರ ಸಂಯಮಿವರಗೆ ।।
ಗೋತ್ರ :
ಗೌತಮ
ವಂಶ :
ಷಾಷ್ಟೀಕ
ಮನೆತನ :
ಬೀಗಮುದ್ರೆ
ಸಹೋದರರು :
ವೀಣಾ ಶ್ರೀ ಬಲರಾಮಾಚಾರ್ಯರು
( ಶ್ರೀ ವರದೇಂದ್ರತೀರ್ಥರು )
ವೀಣಾ ಶ್ರೀ ಲಕ್ಷ್ಮೀನಾರಾಯಣಾಚಾರ್ಯರು
( ಶ್ರೀ ಭುವನೇಂದ್ರತೀರ್ಥರು )
ಆಶ್ರಮ ಗುರುಗಳು :
ಶ್ರೀ ವಾದೀಂದ್ರತೀರ್ಥರು
ಆಶ್ರಮ ಶಿಷ್ಯರು :
ಶ್ರೀ ವರದೇಂದ್ರತೀರ್ಥರು
ವೇದಾಂತ ಸಾಮ್ರಾಜ್ಯಾಧಿಪತ್ಯ :
ಕ್ರಿ ಶ 1750 - 1761
ರಾಗ : ಕಲ್ಯಾಣಿ ತಾಳ : ತ್ರಿವಿಡಿ
ಶ್ರೀ ವಸುಧೀಂದ್ರರಾಯಾ
ಪಾವನಕಾಯಾ ।
ಕೋವಿದಜನ ಸುಪ್ರಿಯಾ ।
ಭೂವಾಲಯದೋಳತೀ
ತೀವಿದಾ ಅಘವನ ।
ಪಾವಕ ನತಜನ
ದೇವಾತರುವೆನಿಪಾ ।। ಪಲ್ಲವಿ ।।
ಜಿತ ಕ್ರೋಧಾ ಜಯಶೀಲಾ
ದುರ್ವ್ಯಸನ । ಪ ।
ರ್ವತ ವಜ್ರ ಹರಿಲೋಲಾ ।
ರತಿಪತಿ ಮಾರ್ಗಣಾ
ಮಥನಾ ಮೌನೀಶ । ವಾಂ ।
ಛಿತ ಫಲವಿತ್ತು ಸಂತತ
ಪಾಲೀಸುವೋದ್ಯಮ್ಮಾ ।।
ಪತಿತ ಪಾವನ ವಿತತ
ಕರುಣಾಮೃತ ರಸಾಂಚಿತ ।
ಸತತ ಸೇವಾ ಮಾತಿರತಾನತ ।
ಹಿತಕರಾಗಮತತಿ
ಪಾಯೋಜಾರ್ಕ್ಕತಿ ಮುದಾ ।। ಚರಣ ।।
ಭೂದೇವನುತ ಮಹಿಮಾ-
ಶಾತ್ತ್ರವಭೀಮಾ ।
ವೇಧಾ ಪೂಜಿತ
ರಾಮ ವೇದವ್ಯಾಸರ ।
ಪಾದ ಸಾದರದಲಿ
ನಿತ್ಯಾರಾಧಿಸುತಿಹ್ಯ । ಸುವಿ ।
ನೋದಾ ಚರಿತಾ ಗುರೂ ।।
ಮೋದತೀರ್ಥ ಮತಾಬ್ಧಿ
ಸೋಮ । ಕು ।
ವಾದಿ ಮತ ಮತ್ತೇಭಂಕುಶ-
ದ್ಯರಾಧರಾಟ್ ತವಾನುಗಳೇ ।
ನ್ನಾದರಿಸುವದಖಿಳ
ಗುಣಾ೦ಬುಧೇ ।। ಚರಣ ।।
ಸರಸಭಾಷೋಲ್ಲಾಸಾ
ವರ್ಜಿತ ದೋಷಾ ।
ಹರಿನಿಭ ಸಂಕಾಶಾ
ಶರೀರಾ ಸಜ್ಜನಗೇಯಾ ।
ಗುರು ವಾದೀಂದ್ರ ಕರ
ಸರಸೀರುಹ ಸಂಜಾತ ।
ನಿರುಪಮ ನಿರ್ಭೀತಾ
ಸುರುಚಿರಾಹಿಮ ।।
ಕಿರುಣ ತೇಜ ಸ್ಫುರಣ -
ಶ್ರೀ ಜಗನ್ನಾಥವಿಠ್ಠಲನ ।
ಚರಣ ಪಂಕೇರುಹ
ಯುಗಳ ಮಧು ।
ಕರ ದುರಿತ ಘನ
ಮಾರುತಾ ।। ಚರಣ ।।
" ಸಮಕಾಲೀನ ಶ್ರೀ ರಾಯರ ಮಠದ ಶಿಷ್ಯರಾದ ಹರಿದಾಸರು "
ಶ್ರೀ ವಿಜಯದಾಸರು, ಶ್ರೀ ಗೋಪಾಲದಾಸರು, ಶ್ರೀ ಗುರು - ಶ್ರೀ ವರದ - ಶ್ರೀ ತಂದೆ ಗೋಪಾಲದಾಸರು.
" ಸಮಕಾಲೀನ ಶ್ರೀ ರಾಯರ ಮಠದ ಶಿಷ್ಯರಾದ ವಿದ್ವಾಂಸರು "
ಶ್ರೀ ಐಜಿ ವೇಂಕಟರಾಮಾಚಾರ್ಯರು ( ಶ್ರೀ ವ್ಯಾಸತತ್ತ್ವಜ್ಞತೀರ್ಥರು ); ಶ್ರೀ ಶ್ರೀನಿವಾಸಾಚಾರ್ಯರು ( ಶ್ರೀ ಜಗನ್ನಾಥದಾಸರು )
ಗ್ರಂಥಗಳು :
1. ಗುರುಗುಣಸ್ತವನ ವ್ಯಾಖ್ಯಾನ
ಮ್ಮಂಗಳಾಚರಣೆ :
ಶ್ರೀಮದ್ವಾದೀಂದ್ರತೀರ್ಥ ಶ್ರೀಪಾದಂಗಳವರಿಂದ ರಚಿತವಾದ " ಗುರುಗುಣಸ್ತವನ " ಗ್ರಂಥಕ್ಕೆ ವ್ಯಾಖ್ಯಾನವನ್ನು ಪ್ರಾರಂಭಿಸಿ ಶ್ರೀ ವಸುಧೇಂದ್ರತೀರ್ಥ ಶ್ರೀಮಚ್ಚರಣರು ಹೀಗೆ ಮಂಗಳಾಚರಣವನ್ನು ಮಾಡಿದ್ದಾರೆ.
ವಾದೀಂದ್ರ ಗುರುಪಾದೋಕ್ತ
ಗುರುಸ್ತವನಮಾದರಾತ್ ।
ವ್ಯಾಖ್ಯಾಸತೇ ಮಯಾ ಬುದ್ಧಿ
ಶುದ್ಧೈ ನತ್ವಾ ರಮಾಪತಿಮ್ ।।
ಶ್ರೀ ಲಕ್ಷ್ಮೀವೆಂಕಟೇಶ್ವರಃ
ಪ್ರಸನ್ನೋ ಭೂಯಾತ್ ।
ಶ್ರೀಮದಾನಂದತೀರ್ಥ
ಭಗವತ್ಪಾದಾಚಾರ್ಯೋಭ್ಯೋ ನಮಃ ।
ಶ್ರೀ ವಿಜಯೀ೦ದ್ರ, ಶ್ರೀ ಸುಧೀಂದ್ರ,ಶ್ರೀ ರಾಘವೇಂದ್ರ, ಶ್ರೀ ವಾದೀಂದ್ರತೀರ್ಥ ಗುರುಭ್ಯೋ ನಮಃ ।। ಹರಿಃ ಓಂ ।।
2. ತಂತ್ರಸಾರ ಟೀಕಾ ( ತಂತ್ರಸಾರ ಸಂಗ್ರಹ ವ್ಯಾಖ್ಯಾನಮ್ )
3. ಗುರು ಪರಂಪರಾ ದಂಡಕಮ್
ಶ್ರೀ ಮಧ್ವಂ ಪದ್ಮನಾಭಂ ನರಹರಿಮುನಿಪ೦ ಮಾಧವಾ-ಕ್ಷೋಭ್ಯತೀರ್ತೌ ।
ವಂದೇ ಶ್ರೀಮಜ್ಜಯಾರ್ಯ೦ ಮುನಿವರಮಥ ವಿದ್ಯಾಧಿರಾಜಂ ಕವೀಂದ್ರಮ್ ।।
ವಾಗೀಶ೦ ರಾಮಚಂದ್ರಂ ಶೃತಗುಣ ವಿಭುದೇಂದ್ರ೦ ಜಿತಾಮಿತ್ರವರ್ಯಮ್ ।
ರಕ್ಷಾ ಶಿಕ್ಷ್ಯೈಕದಕ್ಷೌ ರಘುತನಯ ಸುರೇಂದ್ರೌ ಜಯೀ೦ದ್ರ೦ ಸುಧೀಂದ್ರಮ್ ।।
ಶ್ರೇಷ್ಠ೦ ಶ್ರೀ ರಾಘವೇಂದ್ರಂ ಸಕಲ ಗುಣನಿಧಿ೦ ಧೀರ ಯೋಗೀ೦ದ್ರತೀರ್ಥಮ್ ।
ಸೂರೀ೦ದ್ರ೦ ಸದ್ಗುಣಾಢ್ಯ೦ ರಘುಪತಿ ಚರಣ ಧ್ಯಾನಧೂತಾಘ ಸಂಘಮ್ ।।
ಶ್ರೀ ರಾಮವ್ಯಾಸಪೂಜಾಮಿತಮತಿಸುಮತೀಂದ್ರಾಭಿದಂ ಸಂಯಮೀ೦ದ್ರಂ ।
ಭಕ್ತ್ಯಾಪ್ರಸ್ತೌಮ್ಯುಪೇಂದ್ರ೦ ಗುರುವರಮತಿ ಮೇ ಪ್ರೌಢವಾದೀಂದ್ರವರ್ಯಮ್ ।।
ಆರಾಧನಾ ದಿನ :
ಆಶ್ವಯುಜ ಕೃಷ್ಣ ಸಪ್ತಮೀ
ಬೃಂದಾವನ ಸ್ಥಳ :
ಕೆಂಚನಗುಡ್ಡ ( ಸಿರಗುಪ್ಪ ತಾಲೂಕ - ಬಳ್ಳಾರಿ ಜಿಲ್ಲೆ )
ಶ್ರೀ ವರದೇಂದ್ರತೀರ್ಥರು.......
ವಸುಧಾತುಲವಿಖ್ಯಾತಂ
ವೈರಾಗ್ಯಾದಿ ಗುಣಾರ್ಣವಮ್ ।
ವೇದವೇದಾಂಗಚತುರಂ
ವಸುಧೇಂದ್ರ ಗುರು೦ಭಜೇ ।।
ಶ್ರೀ ಜಗನ್ನಾಥದಾಸರು...
ಮಂಗಳ ಗುರು ವಸುಧೇಂದ್ರಗೆ ಜಯ ।
ಮಂಗಳ ಕಲ್ಯಾಣ ಗುಣಸಾಂದ್ರಗೆ ।।
ವಾದೀಂದ್ರ ಗುರುವರ ಕುವರಗೆ ಮಂಗಳ ।
ಮೇದಿನಿ ಸುರವಿನುತಗೆ ಮಂಗಳ ।
ಸಾಧಿತ ಸಕಲ ಸುತತ್ತ್ವಗೆ ಮಂಗಳ ।
ವಾದಿವಾರಿದ ಚಂಡ ಪವಮಾನಗೆ ।।
ವರಾಹತನಯೇ ತೀರ ಧರಣಿಧರಾಂಹ್ವಯ ।
ಪುರದಿ ವಿರಾಜಿಸುವಗೆ ಮಂಗಳ ।
ವರದೇಂದ್ರ ಯತಿವರ ಕರಕಮಲಾರ್ಚಿತ ।
ಚರಣ ಪಂಕೇಜ ಯುಗ್ಮಗೆ ಮಂಗಳಾ ।।
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
*****
year 2021
ಶ್ರೀ ಶ್ರೀ ವಸುಧೇಂದ್ರತೀರ್ಥ ಗುರುಭ್ಯೋ ನಮಃ ||
ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ದಕ್ಷಿಣಾಧಿ ಕವೀಂದ್ರಮಠ ಈಗಿನ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ಶ್ರೀವಾದೀಂದ್ರತೀರ್ಥರು ವರಕುಮಾರರಾದವರು ಶ್ರೀ ವಸುಧೇಂದ್ರತೀರ್ಥರು ಆರಾಧನೆ, ಕೆಂಚನಗುಡ್ಡ
ಪೂರ್ವಾಶ್ರಮ ಹೆಸರು : ಶ್ರೀಪುರುಷೋತ್ತಮಚಾರ್ಯ
ಕಲಾಮನ : ೧೭೫೦ - ೧೭೬೧
ಆಶ್ರಮ ಗುರುಗಳು : ಶ್ರೀವಾದೀಂದ್ರತೀರ್ಥರು
ಆಶ್ರಮ ಶಿಷ್ಯರು : ಶ್ರೀವರದೇಂದ್ರತೀರ್ಥರು
ವಸುಧಾತಲವಿಖ್ಯಾತಂ ವೈರಾಗ್ಯಾದಿಗುಣಾರ್ಣವಂ|
ವೇದವೇದಾಂಗಚತುರಂ ವಸುಧೇಂದ್ರಗುರುಂ ಭಜೇ |
वसुधातलविख्यातं वैराग्यादिगुणार्णवं।
वेदवेदांगचतुरं वसुधेंद्रगुरुं भजे ।
ಶ್ರೀ ವೇಣುಗೋಪಾಲಚಾರ್ಯರು ಶ್ರೀ ವಾದೀಂದ್ರ ತೀರ್ಥರ ಪೂರ್ವಾಶ್ರಮದ ಸಹೋದರರು.ಇವರಿಗೆ ಪುರುಷೋತ್ತಮಾಚಾರ್ಯ,ಬಲರಾಮಚಾರ್ಯ ಮತ್ತು ಲಕ್ಷ್ಮೀನಾರಾಯಣಾಚಾರ್ಯ ಎಂಬ ೩ ಜನ ಮಕ್ಕಳು. ವಿಶೇಷವೆಂದರೇ ಇವರೆಲ್ಲಾ ಹಂಸನಾಮಕ ಪರಮಾತ್ಮನ ಸಾಕ್ಷಾತ್ ಪರಂಪರೆಯಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಪೀಠದಲ್ಲಿ ವಿರಾಜಮಾನರಾಗಿದರೆ.
ಪುರುಷೋತ್ತಮಾಚಾರ್ಯ - ಶ್ರೀವಸುಧೇಂದ್ರತೀರ್ಥರು
ಬಲರಾಮಚಾರ್ಯ - ಶ್ರೀವರದೇಂದ್ರತೀರ್ಥರು ಲಕ್ಷ್ಮೀನಾರಾಯಣಾಚಾರ್ಯ - ಶ್ರೀಭುವನೇಂದ್ರತೀರ್ಥರು
ಜ್ಞಾನ ವೈರಾಗ್ಯ ಸಂಪನ್ನರಾದ ಶ್ರೀವಸುಧೇಂದ್ರತೀರ್ಥರು ಬಹಳಷ್ಟು ದಿನಗಳಕಾಲ ತಮ್ಮ ಶಿಷ್ಯರಿಗೆ ಪಾಠ ಪ್ರವಚನ ನಿರತರಾಗಿ ಮಂತ್ರಾಲಯವೆ ಕಾರ್ಯಕ್ಷೇತ್ರವಾಗಿಸಿಕೊಂಡಿದರು.
ಶ್ರೀಗಳ ಕಾಲದಲ್ಲಿಯೇ ಆದೋನಿಯ ಆಡಳಿತಾಧಿಕಾರಿಯು ಶ್ರೀಮಠಕೆ ಅನುಕೂಲವಾಗುವಂತೆ ಮಂತ್ರಾಲಯ ಗ್ರಾಮದ ವ್ಯವಹಾರ ಪತ್ರಗಳು ಭದ್ರಮಾಡಿಸಿಕೊಂಡರು
ಅಂದಿನ ಸರ್ಕಾರದ ವಶವಾಗಿದ ಕಿರೀಟಗಿರಿವೆಂಬ ಗ್ರಾಮವು ಪುನಃ ಮಠಕ್ಕೆ ಸೇರಿತು. ಶ್ರೀಗಳ ಅನುಗ್ರಹಪಾತ್ರರಾದ ರಾಮಭೋಪಾಲನೆಂಬ ಪಾಳೆಗಳರ ಶ್ರೀಗಳಿಗೆ ಸೋಮನಹಳ್ಳಿ ಎಂಬ ಗ್ರಾಮ ದಾನಮಾಡಿದನು.
ಶ್ರೀಗಳು ತಮಿಳುನಾಡಿನ ಸಂಚಾರದಲ್ಲಿ ಇದ್ದಾಗ
ಆರಿಯಲೂರಿನ ನಾಯಕನಾದ ವಿಜಯವೋಪ್ಪುಳಮಲವರಾಯ ಶ್ರೀಗಳ ವಿಶೇಷ ರಾಜಮರ್ಯಾದೆಮಾಡಿ ಶ್ರೀಗಳ ವಿಶೇಷ ಅನುಗ್ರಹಿತನಾಗಿದಾನೆ.
ಮಹಾತಪಸ್ವಿಗಳಾದ ಶ್ರೀಗಳು ನಿತ್ಯದಲ್ಲಿ ಬಹುಕಾಲ ಜಪ ತಪ ಅನುಷ್ಠಾನದಲ್ಲಿ ನಿರತಾಗುತ್ತಿದರು. ಶ್ರೀಗಳು ಶ್ರೀವಾದೀಂದ್ರತೀರ್ಥ ಗುರುಸಾರ್ವಭೌಮರು ರಚಿಸಿರುವ ಗುರುಗುಣಸ್ತವನದ ವ್ಯಾಖ್ಯಾನ , ತಂತ್ರಸಾರ ಸಂಗ್ರಹಕ್ಕೆ ಟಿಪ್ಪಣಿ ಮತ್ತು ಗುರುಸ್ತೋತ್ರ ದಂಡಕ ರಚಿಸಿ ಶ್ರೀ ರಾಯರ ಹಾಗೂ ಶ್ರೀವಾದೀಂದ್ರತೀರ್ಥರ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದರೆ.
ಶ್ರೀಗಳು ಅಂದಿನ ಪಂಡಿತ ಶ್ರೇಷ್ಠರಾದ ಬಲರಾಮಚಾರ್ಯರಿಗೆ ಆಶ್ರಮ ನೀಡಿ ಶ್ರೀವರದೇಂದ್ರತೀರ್ಥರೆಂದು ನಾಮಕರಣ ಮಾಡಿ ಶ್ರೀಮಠದ ಜವಾಬ್ದಾರಿಯನ್ನು ನೀಡಿದರು.
ಶ್ರೀಗಳು ಆಶ್ವಿಜ ಮಾಸ ಕೃಷ್ಣಪಕ್ಷದ ಸಪ್ತಮಿಯಂದು ಸಿರುಗುಪ್ಪ ಹತ್ತಿರದ ಕೆಂಚನಗುಡ್ಡ ಗ್ರಾಮ ತುಂಗಾತಟ್ಟದಲ್ಲಿ ಬೃಂದಾವನ ಪ್ರವೇಶ ಮಾಡಿದಾರೆ.
ಶ್ರೀ ಇಭರಾಮಪುರಾಧೀಶ
ವಿಷ್ಣುತೀರ್ಥಾಚಾರ್ ಇಭರಾಮಪುರ
****
ಆಶ್ವಯುಜ ಕೃಷ್ಣ ಸಪ್ತಮಿ
ಗುರು ಪುಷ್ಯಾಮೃತ ಸುಸಂದರ್ಭದಲ್ಲಿ ಶ್ರೀ ಗುರುರಾಯರ ಅನುಗ್ರಹವಾಗಲೀ ಸದಾ...
ಹಾಗೆಯೇ..
ವಸುಧಾತಲವಿಖ್ಯಾತಮ್ ವೈರಾಗ್ಯಾದಿ ಗುಣಾರ್ಣವಮ್
ವೇದವೇದಾಂಗಚತುರಮ್ ವಸುಧೇಂದ್ರ ಗುರುಮ್ ಭಜೇ
ಶ್ರೀ ವಸುಧೇಂದ್ರ ತೀರ್ಥರ ಮಧ್ಯಾರಾಧನೆಯ ಶುಭವಂದನೆಗಳು
ಇವರ ಕುರಿತು ಹೋದ ವರ್ಷ ಶ್ರೀ ಪ್ರಭಂಜನಾಚಾರ್ಯ, ಬಳ್ಳಾರಿ ಬರೆದ ಲೇಖನ ಮಧ್ಯಾರಾಧನೆಯ ಸ್ಮರಣೆಯಾಗಿ...
👇🏽👇🏽👇🏽👇🏽👇🏽
ಮಹಾ ಜ್ಞಾನಿಗಳಾದ ಶ್ರೀವಸುಧೇಂದ್ರ ತೀರ್ಥರು ಲೌಕಿಕವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸದೆ ತಮ್ಮ ಪಾಠ, ಪ್ರವಚನ, ಜಪ ತಪಗಳಲ್ಲಿ ಹೆಚ್ಚಿನ ಸಮಯ ಮುಳುಗಿರುತ್ತಿದ್ದರು. ಅದರಲ್ಲೂ ಜಪ ತಪ ಮತ್ತು ವೃತಾಚರಣೆಗಳಲ್ಲಿ ಮತ್ತೂ ಹೆಚ್ಚಿನ ಆಸಕ್ತಿ. ಬಹುಷಃ ಅವರು ಆಚರಿಸದ ವೃತಗಳೇ ಇಲ್ಲವೇನೋ! ವಿಷ್ಣುಪಂಚಕ, ಭೀಷ್ಮಪಂಚಕ, ಚಾಂದ್ರಾಯಣಾದಿ ವೃತಗಳನ್ನು ಕೈಗೊಂಡಿದ್ದರು.
ಅವರ ಜಪ ತಪ, ಸದಾಚಾರ, ವೃತಗಳ ಪರಿಣಾಮ ಎಷ್ಟಿತ್ತೆಂದರೆ, ಅವರ ಕಾಲದಲ್ಲಿ ಅವರ ಮುಖವನ್ನು ಯಾರಿಗೂ ನೇರವಾಗಿ ದಿಟ್ಟಿಸಿ ನೋಡಲು ಆಗುತ್ತಿರಲಿಲ್ಲವಂತೆ.
ಹೆಚ್ಚಿನ ಕಾಲ ಮಂತ್ರಾಲಯದಲ್ಲೇ ಇದ್ದು, ರಾಯರ ಸೇವಾದಿಗಳನ್ನು ಮಾಡಿ ಅವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದರು.
ಶ್ರೀಗೋಪಾಲದಾಸರು ಒಂದು ಸುಳಾದಿಯಲ್ಲಿ ಶ್ರೀವಸುಧೇಂದ್ರ ತೀರ್ಥರು ತಮ್ಮ ಪರಂಪರಾ ಉಪಾಸ್ಯ ಮೂರ್ತಿ ಶ್ರೀಮನ್ಮೂಲರಾಮದೇವರನ್ನು ವರ್ಣಿಸುವಾಗ
ನಿರುತದಿ ನಮ್ಮ ವಸುಧೇಂದ್ರ ಮುನಿಯ ಚೆಲ್ವ ಕರಕಮಲದಲಿ ನಿಂದು ಮೆರೆವ ದಾತ, ಪರಮದಯಾಳು ರಾಮ ಗೋಪಾಲವಿಠಲ ನಿನ್ನ ದರುಶನವೇ ಇಂದಿನ ದಿನವೇ ಸುದಿನವು ಅಂತ ಹೇಳಿದ್ದಾರೆ.
ಶ್ರೀಮೂಲರಾಮದೇವರು ಶ್ರೀವಸುಧೇಂದ್ರರಿಗೆ ಒಲಿದಿದ್ದನ್ನು ಪಾದ ಸೋಕಿದ ಶಿಲೆಯ ಪಾವನ್ನ ಮಾಡಿದ , ಶ್ರೀಧರ ರಾಮ ಗೋಪಾಲವಿಠಲ, ವಾದೀಂದ್ರಸುತರಿಗೊಲಿದು ಮೆರೆವ ಪ್ರೀತ ಅಂತ ಹೇಳಿದ್ದಾರೆ.
ಸಕಲ ಋಷಿಗಳು, ದೇವತೆಗಳೂ ಬ್ರಹ್ಮದೇವರೂ ಒಂದೊಂದಂಶದಿಂ ಬಂದು ಪರಂಪರೆಯಲ್ಲಿ ಬರುವ ಪೀಠಾಧಿಪತಿಗಳಲ್ಲಿ ನೆಲೆಸಿ ಶ್ರೀಮೂಲರಾಮನ್ನು ಅರ್ಚಿಸಿ ಮಂದಬುದ್ಧಿಯುಳ್ಳ ಜಗವನ್ನು ರಕ್ಷಿಸುತ್ತಾರೆ. ಇದನ್ನೇ ದಾಸರು ಚೆಂದದಿ ಬೊಮ್ಮ ರುದ್ರ ಇಂದ್ರಾದಿಗಳು ಕುಂದದೆ ಸುರ ಋಷಿಗಂಧರ್ವಾದಿಗಳು, ಒಂದೊಂದಶದಿಂದ ಬಂದು ನಿನ್ನರ್ಚಿಸಿ ಮಂದ ಬುದ್ಧಿಗಳುಳ್ಳ ಜಗವ ಪಾಲಿಸುವರು. ಮಂದಮತಿಗಳು ಇವರ ಮನುಜರೆಂದರಿದರೆ ಪೊಂದುವುದು ಮಹದಾದಿ ನಿರಯದಲ್ಲಿ, ಸಂದರುಶನದಿಂದ ಸಕಲ ದೋಷದೂರ, ಇಂದಿರೆಯರಸನು ಇಪ್ಪುವ ಇವರಲ್ಲಿ. ಬಂದಬಂದವರ ಅಭೀಷ್ಟವ ಪೂರೈಸಿ, ನಿಂದು ಮೆರೆವ ವಸುಧೇಂದ್ರಮುನಿಯ ಮನಮಂದಿರದೊಪ್ಪುವ ರಾಮ ಗೋಪಾಲವಿಠಲ, ಬಂಧಮೋಚಕ ಮಾಳ್ಪ ಶಕ್ತ ಅಂತ ಹೇಳಿದ್ದಾರೆ.
ಹೀಗೆ ಇಡೀ ಸುಳಾದಿಯು ಮೂಲರಾಮದೇವರ ಗುಣಮಹಿಮೆಗಳನ್ನು ವರ್ಣಿಸುವುದರ ಜೊತೆ ಆ ದಿವ್ಯವಾದ ಮೂಲ ರಾಮನ ಉಪಾಸಕರಾದ ಶ್ರೀವಸುಧೇಂದ್ರ ತೀರ್ಥರ ಮಹಿಮೆ, ಸೊಬಗು, ಗುಣಗಳನ್ನೂ ವರ್ಣಿಸಿದ್ದಾರೆ.
ಘನ್ನ ಮಹಾಮಹಿಮ ಮೂಲರಾಮ, ನಿನ್ನ ಪರಿವಾರ ಸಹಿತ ಎನ್ನ ಗುರು ವಸುಧೇಂದ್ರ ಮುನ್ನೆ ನಿನ್ನರ್ಚಿಸುವ ಭಾಗ್ಯವೆಂತೊ, ಚಿನ್ಮಯ ಮೂರುತಿ ಗೋಪಾಲವಿಠಲ ನಿನ್ನ ಭಕುತರು ನಿನ್ನ ಮಹಿಮೆಗೆ ನಮೋ
ಪರಮಶೋಭಿತನಾಮ ಗೋಪಾಲವಿಠಲ, ನಿರುತ ವಸುಧೇಂದ್ರ ಮುನಿಯ ಮನದಿ ವಾಸ
ಮರ್ತ್ಯಲೋಕದಿ ಬಂದು ಈ ಪ್ರತಿಮೆ, ಅಂತರ್ಗತನಾಗಿ ಇದ್ದು ನಿತ್ಯ ಉತ್ಸವಗಳು, ಭಕ್ತರಿಂದಲಿ ಕೊಂಡು ಬಹು ಧರ್ಮದಿಂದಲಿ, ನಿತ್ಯ ವಸುಧೇಂದ್ರ ಹೃತ್ಕಮಲದಿ ತತ್ತಳಿಸುತ್ತ ಮೆರೆವ ಸಿರಿರಾಮ, ಮುಕ್ತಿಪ್ರದಾಯಕ ಗೋಪಾಲವಿಠಲ, ಚಿತ್ತ ಶುದ್ಧನ ಮಾಡು, ಭಕ್ತಿ ಜ್ಞಾನವ ನೀಡು
ಪರಮಪುಣ್ಯ ಪರಿಪೂರ್ಣ, ಸುರಾದಿವಿನುತ ಗೋಪಾಲವಿಠಲ, ಗುರುವಸುಧೇಂದ್ರ ಮುನಿಯ ಈಶ
ಗುರು ವಸುಧೇಂದ್ರರ ಕರಕಮಲದೊಳು ತೋರ್ಪ, ಸಿರಿರಾಮ ಗೋಪಾಲ ವಿಠಲ ಶರಣು ಶರಣು.
ಶ್ರೀ ರಾಘವೇಂದ್ರ ಗುರುಸಾರ್ವಭೌಮರ, ಶ್ರೀ ವಸುಧೇಂದ್ರತೀರ್ಥರ ಅನುಗ್ರಹ ಸದಾ ನಮ್ಮ ಸಮೂಹದಲಿ ಎಲ್ಲಾ ಸಜ್ಜನರಮೇಲೆ ಇರಲಿ ಎಂದು ಅವರಲ್ಲಿ, ಅವರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀರಾಮಚಂದ್ರನಲ್ಲಿ ಪ್ರಾರ್ಥನೆ ಮಾಡುತ್ತಾ....
ವಿಷ್ಣುತೀರ್ಥಾಚಾರ್ ಇಭರಾಮಪುರ
***
ಅಶ್ವೀಜ ಬಹುಳ ಸಪ್ತಮಿ ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರಸ್ವಾಮಿಗಳವರ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯಾಧಿಪತಿಗಳಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಾದೀಂದ್ರತೀರ್ಥರ ಕರ ಕಮಲ ಸಂಜಾತರಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಸುಧೇಂದ್ರತೀರ್ಥರ ಆರಾಧನಾ ಮಹೋತ್ಸವ, ಕೆಂಚನಗುಡ್ಡ, ಶಿರುಗುಪ್ಪ, ಬಲ್ಲಾರಿ ಜಿಲ್ಲೆ
ಜಗದ್ಗುರು ಶ್ರೀ ಮಧ್ವಾಚಾರ್ಯರಿಂದ 23ನೇ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ವರದಿಂದ 7ನೇ ಯತಿಗಳು
ಚರಮಶ್ಲೋಕ:
ವಸುಧಾತಲವಿಖ್ಯಾತಂ ವೈರಾಗ್ಯಾದಿಗುಣಾರ್ಣವಂ|
ವೇದವೇದಾಂಗಚತುರಂ ವಸುಧೇಂದ್ರಗುರುಂ ಭಜೇ |
ಶ್ರೀ ಜಗನ್ನಾಥದಾಸರು...
ಸೂರಿ ಕುಲೋತ್ತಮ ಶ್ರೀ ರಾಘವೇಂದ್ರ ।
ಗುರು ಸದ್ವಂಶ ಜಾತಗೆ ಮಂಗಳಾ ।
ನಾರದನುತ ಜಗನ್ನಾಥವಿಠ್ಠಲನ ।
ಕರುಣಾಪಾತ್ರ ಸಂಯಮಿವರಗೆ ।।
ಶ್ರೀ ಪ್ರಾಣೇಶದಾಸರು...
ಬಿಸಜನಾಭನ ದೂತ ।
ವಸುಧಿಯೊಳಗೆ ಖ್ಯಾತ ।
ಕಿಸಲಯೋಪಮ ಪಾದ ।
ವಸುಧೀಂದ್ರ ತೀರ್ಥ ।।
ಸಂಕ್ಷಿಪ್ತ ಪರಿಚಯ:
ಆಶ್ರಮ ಅವಧಿ: 1750 - 61
ಪೂರ್ವಾಶ್ರಮ ಹೆಸರು : ವೀಣಾ ಶ್ರೀಪುರುಷೋತ್ತಮಚಾರ್ಯ
ಆಶ್ರಮ ಗುರುಗಳು : ಶ್ರೀವಾದೀಂದ್ರತೀರ್ಥರು
ಆಶ್ರಮ ಶಿಷ್ಯರು : ಶ್ರೀವರದೇಂದ್ರತೀರ್ಥರು
ಸಹೋದರರು :
ವೀಣಾ ಶ್ರೀ ಬಲರಾಮಾಚಾರ್ಯರು
( ಶ್ರೀ ವರದೇಂದ್ರತೀರ್ಥರು )
ವೀಣಾ ಶ್ರೀ ಲಕ್ಷ್ಮೀನಾರಾಯಣಾಚಾರ್ಯರು
( ಶ್ರೀ ಭುವನೇಂದ್ರತೀರ್ಥರು )
ಆಶ್ರಮ ಗುರುಗಳಾದ ಶ್ರೀ ವಾದೀಂದ್ರ ತೀರ್ಥರು ಶ್ರೀ ಪುರುಷೋತ್ತಮ ಆಚಾರ್ಯರಿಗೆ ಆಶ್ರಮವನ್ನು ಕೂಟ್ಟು ಶ್ರೀವಸುದೇಂಧ್ರ ತೀರ್ಥರು ಎಂದು ನಾಮಕರಣ ಮಾಡಿ ಸರ್ವಜ್ಞ ಸಿಂಹಾಸನಕ್ಕೆ ಅದೀಷ್ಟಿತಗೊಳಿಸಿದರು. ಇವರು ನಾಲ್ಕು ವೇದಗಳಲ್ಲಿ ಹಾಗೂ ತರ್ಕಶಾಸ್ತ್ರದಲ್ಲಿ ಪರಿಣಿತರಾಗಿದ್ದು, ಅನೇಕ ದಾಸವರಣ್ಯರನ್ನು ತಮ್ಮ ಶಿಷ್ಯರನ್ನಾಗಿ ಹೊಂದಿದ್ದರು. ಇವರ ಕಾಲದಲ್ಲಿ ದಾಸ ಸಾಹಿತ್ಯದ ಕೃಷಿ ಹೆಚ್ಚಿನದಾಗಿತ್ತು. ಶ್ರೀ ವಿಜಯದಾಸರು, ಶ್ರೀ ಗೋಪಾಲದಾಸರು, ಶ್ರೀ ಅಯ್ಯಣ್ಣಾಚಾರ್ಯರು ಇವರ ಪ್ರಮುಖ ಶಿಷ್ಯರಾಗಿದ್ದರು. ಇವರು ಅನೇಕ ಗ್ರಂಥಗಳನ್ನು ರಚಿಸಿದ್ದು, ಅವುಗಳಲ್ಲಿ ಮೂರು ಗ್ರಂಥಗಳು ದೊರೆತಿದ್ದು, ಶ್ರೀಆನಂದ ತೀರ್ಥ ವಿರಚಿತ ತಂತ್ರಸಾರ, ಸಂಗ್ರಹ ಟಿಪ್ಪಣಿ, ಶ್ರೀವಾದೀಂಧ್ರ ತೀರ್ಥ ವಿರಚಿತ ಗುರುಗುಣ ಸ್ತಾವನ, ವ್ಯಾಖ್ಯಾನ, ಗುರುಸ್ತೋತ್ರ ದಂಡಕ, ಪ್ರಮುಖವಾಗಿವೆ. ಇವರ ಅವಧಿಯಲ್ಲಿ ಆದೋನಿ ನವಾಬ ಸಬ್ಜಲ್‍ಜಂಗ್ ಬಹೂದ್ದೂರ್ ಶ್ರೀಮಠದ ದಾಖಲೆಗಳನ್ನು ವಶಪಡಿಸಿಕೊಂಡಾಗ ಶ್ರೀಗಳು ನವಾಬರೊಂದಿಗೆ ಚರ್ಚಿಸಿ ಶ್ರೀಮಠಕ್ಕೆ ಪುನ: ದಾಖಲೆಗಳನ್ನು ಮರಳಿಸುವಂತೆ ಮಾಡಿದ್ದರು.
ರಾಮಭೂಪಾಲ ಎಂಬ ಪಾಳೆಯಗಾರ ಸೋಮನಹಳ್ಳಿ ಎಂಬ ಗ್ರಾಮವನ್ನು ಶ್ರೀಗಳಿಗೆ ದಾನವಾಗಿ ನೀಡಿದರು. ಶ್ರೀಗಳು ಪ್ರವಾಸದಲ್ಲಿರುವಾಗ ತಾಲೂಕಿನ ಕೆಂಚನಗುಡ್ಡ ಗ್ರಾಮದ ಪಾಳೆಯಗಾರರು ಹಾಗೂ ಆಡಳಿತಗಾರರು ಇವರಿಂದ ಆಶೀರ್ವಾದ ಹೊಂದಿದರು. ಆಶ್ವೀಜ ಕೃಷ್ಣ ಸಪ್ತಮಿಯಂದು ತುಂಗಾನದಿ ತೀರದಲ್ಲಿ ಬೃಂದಾವನಸ್ಥರಾದರು. ಶ್ರೀ ವರದೇಂದ್ರ ತೀರ್ಥರು ಇವರ ಆಶ್ರಮ ಶಿಷ್ಯರಾಗಿದ್ದರು. ಇದೂವರೆಗೂ ಬೃಂದಾವನಸ್ಥರಾಗಿ ಜಾಗೃತ ಸ್ಥಿತಿಯಲ್ಲಿದ್ದು, ಶಿಷ್ಯರ, ಭಕ್ತರ ಸಕಲ ಕೋರಿಕೆಗಳನ್ನು ಈಡೇರಿಸುತ್ತಾ ಬಂದಿರುವ ಶ್ರೀಗಳು ತಪಸ್ಸಿಗೆ ಇನ್ನೊಂದು ಹೆಸರು ಎನ್ನುವಂತೆ ತಪೋನಿಧಿಗಳಾಗಿದ್ದಾರೆ.
ಶ್ರೀ ವಸುದೇಂಧ್ರ ತೀರ್ಥರನ್ನು ಸ್ಮರಿಸುವಾಗ ಶುಚಿಯಿಂದ, ಭಕ್ತಿಭಾವದಿಂದ ಸ್ಮರಿಸಬೇಕು, ಆಚಾರ ವಿಚಾರ ಇಲ್ಲದವರು ವೃಂದಾವನ ಪೂಜೆಗೆ ಹೋದಾಗ ಸರ್ಪರೂಪದಲ್ಲಿ ಕಂಡು ಜಾಗೃತಿ ನೀಡಿದ್ದು, ಅನೇಕ ಭಕ್ತರ ಅನುಭವಕ್ಕೆ ಬಂದಿದೆ ಮತ್ತು ಬರುತ್ತಿದೆ.
ಇಂತಹ ಗುರುಗಳ ಅನುಗ್ರಹ ಸದಾ ನಮ್ಮ ಎಲ್ಲರ ಮೇಲಿರಲಿ ಎಂದು ಪ್ರಾರ್ಥನೆಮಾಡುತ್ತಾ.
ಶ್ರೀ ಕೃಷ್ಣಾರ್ಪಣಮಸ್ತು.
***
check pictures don't know they belong to this place (mostly yes)
************
No comments:
Post a Comment