Wednesday, 1 May 2019

supragnendra teertharu 1903 matha rayara mutt yati 32 nanjangud magha bahula shashti ಸುಪ್ರಜ್ಞೆಂದ್ರ ತೀರ್ಥರು suprajnendra






info from sumadhwaseva.com--->

Sri. Supragnendra Theertha

ಶ್ರೀ ಸುಪ್ರಜ್ಞೇಂದ್ರತೀರ್ಥರು (ನಂಜನಗೂಡು)

ಸುಧಾಜಿಜ್ಞಾಸಯಾ ಸರ್ವಸುಬುಧಾನಂದದಾಯಕಾನ್ |
ಸುಪ್ರಜ್ಞೇಂದ್ರಮುನೀನ್ ವಂದೇ ಸದಾ ವಿದ್ಯಾಗುರೂನ್ಮಮ |


श्री सुप्रज्ञेंद्रतीर्थरु (नंजनगूडु)
सुधाजिज्ञासया सर्वसुबुधानंददायकान् ।
सुप्रज्ञेंद्रमुनीन् वंदे सदा विद्यागुरून्मम ।

Aradhana Day : Magha Masa Krishna paksha Shasti
Parampare : Shri Rayara Mutt
Peetadhipathitwa Duration: 1884-1903
Ashrama GurugaLu : Sri Sugunendra Tirtha
Ashrama shishyaru: Sri Sukrutheendra Tirtha
Vrundavana : Nanjangud
Poorvashrama name : Gururajacharya

**********


ಶ್ರೀ ಸುಪ್ರಜ್ಞೆಂದ್ರ ತೀರ್ಥರ ಪು (ನಂಜನಗೂಡು).
1884 to 1903
aradhana on 25 feb 2019 SHRI SUPRAJNENDRA Teertharu;
POORVEDYU SHRAADDHA,

ಶ್ರೀಸುಪ್ರಜ್ಞೇಂದ್ರತೀರ್ಥರ ಆರಾಧನೆ , ನಂಜನಗೂಡು
ಶ್ರೀಮನ್ಮಧ್ವಾಚಾರ್ಯರಿಂದ 31ನೇಯವರು ಹಾಗೂ ಶ್ರೀರಾಘವೇಂದ್ರಗುರು ಸಾರ್ವಭೌಮರಿಂದ 15ನೇಯವರು 

ಶ್ರೀಗುರುಜಗನ್ನಾಥದಾಸರು ಇವರ ಅಭಿಮಾನೀ ಶಿಷ್ಯರು. ಇವರ ಮೇಲೆ ಸಂಸ್ಕೃತದಲ್ಲಿ ಸ್ತ್ರೋತ್ರ ಕೂಡ ಮಾಡಿದ್ದಾರೆ. 

ಶ್ರೀಚಾಮರಾಜ ಒಡೆಯರ್‌ರವರು ಇವರ ಪಾಂಡಿತ್ಯಕ್ಕೆ ಮನಸೋತು ಅರಮನೆಗೆ ಬರಮಾಡಿಕೊಂಡು ಸಂಸ್ಥಾನ ಪೂಜೆ ಮಾಡಿಸಿ ವಿಶೇಷ ಗೌರವ ಮಾಡಿಸಿದರು. ಇವರ ಆರಾಧನೆ ಮಾಘ ಬಹುಳ ಷಷ್ಠಿಯಂದು ಆಚರಿಸಲಾಗುತ್ತದೆ.

ಸುಧಾಜಿಜ್ಞಾಸಯಾ ಸರ್ವಸುಬುಧಾನಂದದಾಯಕಾನ್|
ಸುಪ್ರಜ್ಞೇಂದ್ರಮುನೀನ್ ವಂದೇ ಸದಾ ವಿದ್ಯಾಗುರೂನ್ಮಮ||
******


" ದಿನಾಂಕ : 04.03.2021 ಗುರುವಾರ ಶ್ರೀ ಸುಪ್ರಜ್ಞೇಂದ್ರತೀರ್ಥರ ಆರಾಧನಾ ಮಹೋತ್ಸವ "
" ಶ್ರೀ ಸುಕೃತೀಂದ್ರತೀರ್ಥರ ಮಾತಲ್ಲಿ... "
ಸುಧಾಜಿಜ್ಞಾಸಯಾ ಸರ್ವ 
ಸುಬುಧಾನಂದದಾಯಕಾನ್ ।
ಸುಪ್ರಜ್ಞೇಂದ್ರ ಮುನಿರ್ವಂದೇ 
ಸದಾ ವಿದ್ಯಾ ಗುರೂನ್ಮಮ ।।
ಶ್ರೀ ಸುಪ್ರಜ್ಞೇಂದ್ರತೀರ್ಥರು ಜ್ಞಾನ ಭಕ್ತಿ ವೈರಾಗ್ಯ ಪೂರ್ಣರಾದ - ಸಚ್ಛಾಸ್ತ್ರ ಪಾಠ ಪ್ರವಚನಕಾರರಾದ - ಸಜ್ಜನರಿಗೆ ಮಂಗಳಪ್ರದರಾದವರು.
ಶ್ರೀ ಸುಪ್ರಜ್ಞೇಂದ್ರತೀರ್ಥರು ಶ್ರೀ ವೇದವ್ಯಾಸರ " ಬ್ರಹ್ಮ ಸೂತ್ರ " ಗಳಿಗೆ ವಿವರಣಾ ರೂಪವಾದ ವೇದ ಪ್ರತಿಪಾದ್ಯ ಸತ್ತತ್ತ್ವಗಳಿಂದ ಶೋಭಿಸುವ ಶ್ರೀಮದಾಚಾರ್ಯರ " ಅನುವ್ಯಾಖ್ಯಾನ " ಕ್ಕೆ ಟೇಕೆಯಾದ ಶ್ರೀ ಜಯತೀರ್ಥ ಗುರುಪಾದರ ಜಗನ್ಮಾನ್ಯವಾದ " ಶ್ರೀಮನ್ನ್ಯಾಯಸುಧಾ " ಅದಕ್ಕೆ ವ್ಯಾಖ್ಯಾನವಾದ ಶ್ರೀ ಮಂತ್ರಾಲಯ ಪ್ರಭುಗಳ " " ಪರಿಮಳ " ಇದೇ ಮೊದಲಾದ " ತತ್ತ್ವವಾದ ಮತ " ದ ಸದ್ಗ್ರಂಥಗಳನ್ನು ಶಿಷ್ಯರಿಗೆ ಪಾಠ ಪ್ರವಚನ ದ್ವಾರಾ ಬೋಧಿಸಿದ ಮಹನೀಯರು ಮತ್ತು ಧಾರ್ಮಿಕ ಜನರಿಗೆ ಶ್ರೀ ಹರಿ ವಾಯು ತತ್ತ್ವಗಳನ್ನು ಉಪದೇಶಿಸಿ " ಸಾಧನಾ ಮಾರ್ಗ " ದಲ್ಲಿ ಕರೆದೊಯ್ದ ಕೃಪಾಳುಗಳು.
ಶ್ರೀ ಸುಪ್ರಜ್ಞೇಂದ್ರತೀರ್ಥರಿಗೆ ವೇದ ಮಂತ್ರಗಳ ಸಿದ್ಧಿಯಾಗಿತ್ತು ಮತ್ತು ತಾವು ಹೇಳುವ ಮಾತು ಸತ್ಯವಾಗುವಂತೆ ಮಾಡುವ ಸಿದ್ಧಿಯನ್ನು ಪಡೆದವರೆಂಬ ಮಾಹಾತ್ಮ್ಯೋಪತರಾಗಿಯೂ ಸನ್ಮಂಗಳ ಪ್ರದಾತರಾಗಿಯೂ ಇದ್ದರು ಹಾಗೂ ಸಮೀಚೀನವಾದ ಅಥವಾ ಸಜ್ಜನರಾದ ಪಂಡಿತರ ಕಾಮಿತಾರ್ಥಗಳನ್ನು ಕೊಡುವುದರಲ್ಲಿ ಪ್ರಸಿದ್ಧರಾದವರು ಶ್ರೀ ಸುಪ್ರಜ್ಞೇಂದ್ರತೀರ್ಥರು. 
" ಶ್ರೀ ಸುಪ್ರಜ್ಞೇಂದ್ರತೀರ್ಥರು ಸಂಕ್ಷಿಪ್ತ ಮಾಹಿತಿ "
ಹೆಸರು   :  ವಿದ್ವಾನ್ ಶ್ರೀ ಗುರುರಾಜಾಚಾರ್ಯರು
ತಂದೆ : ವಿದ್ವಾನ್ ಶ್ರೀ ರಾಜಗೋಪಾಲಾಚಾರ್ಯರು
ಆಶ್ರಮ ಗುರುಗಳು : ಶ್ರೀ ಸುಗುಣೇಂದ್ರತೀರ್ಥರು
ಆಶ್ರಮ ನಾಮ : ಶ್ರೀ ಸುಪ್ರಜ್ಞೇಂದ್ರತೀರ್ಥರು
ಆಶ್ರಮ ಶಿಷ್ಯರು : ಶ್ರೀ ಸುಕೃತೀಂದ್ರತೀರ್ಥರು
ಕಾಲ  : ಕ್ರಿ ಶ 1884 - 1903
ಆರಾಧನಾ : ಮಾಘ ಬಹುಳ ಷಷ್ಠಿ
ಬೃಂದಾವನ ಸ್ಥಳ : ನಂಜನಗೂಡು 
" ಶ್ರೀ ವರದೇಶವಿಠ್ಠಲರ ಮಾತಲ್ಲಿ.... "
ಸುಪ್ರಸಿದ್ಧ ಮುನಿ ವಿಪ್ರ ಸಮೂಹವ ।
ಕ್ಷಿಪ್ರದಿ ಪಾಲಿಪ ಸುಪ್ರಜ್ಞೇ೦ದ್ರಾಖ್ಯ ।।
****

No comments:

Post a Comment