shri gurubyO namaha...hari Om
chaitra bahuLa trithIya is the ArAdhane of shri subOdhEndra tIrtharu of rAyara maTa.
shri subOdhEndra tIrtharu:
ArAdhane: chaitra bahuLa trithIya
parampare: rAyara maTa
Ashrama Period: 1799 - 1807
gurugaLu: shri bhuvanEndra tIrtharu
shishyaru: shri sujanEndra tIrtharu
brindAvana: nanjangUdu 1835 check
ಸುಧಾಸೇವ ಸಮದ್ಭೂತ ಸುಖಸಂವಿತ್ಸಮಾಶ್ರಯಂ |
ಸುಜನಾಭೀಷ್ಟದಾತಾರಂ ಸುಭೋದೇಂದ್ರಗುರುಂ ಭಜೇ ||
सुधासेव समद्भूत सुखसंवित्समाश्रयं ।
सुजनाभीष्टदातारं सुभोदेंद्रगुरुं भजे ॥
shri subOdhEndra tIrtha guruvantargata, bhAratIramaNa mukhyaprAnantargata, sItA pate shri mUla rAma dEvara pAdaravindakke gOvindA, gOvindA...
shri krishnArpaNamastu...
*****
parampare: rAyara maTa
Period: 1799 - 1835
gurugaLu: shri bhuvanEndra tIrtharu
shishyaru: shri sujanEndra tIrtharu
brindAvana: nanjangUdu
***********
" ಗರಳಪುರಿ ವಾಸರೂ - ಶ್ರೀ ಸೂರ್ಯದೇವರ ಅಂಶ ಸಂಭೂತರಾದ ಶ್ರೀ ಸುಬೋಧೇಂದ್ರತೀರ್ಥರು "
" ಈದಿನ - > ದಿನಾಂಕ : 29.04.2021 ಗುರುವಾರ - ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರ ತೃತೀಯಾ - ಶ್ರೀ ಸುಬೋಧೇಂದ್ರತೀರ್ಥರ ಆರಾಧನಾ ಮಹೋತ್ಸವ., ನಂಜನಗೂಡು "
ರಾಗ : ಪೂರ್ವೀ ತಾಳ : ಏಕ
ಅಭಯವೀಗಲೇ ಬೇಡೆ । ಗುರು ।
ಸುಬೋಧೇಂದ್ರಾರ್ಯರ -
ನೋಡೆ ಸಖಿ ।। ಪಲ್ಲವಿ ।।
ಪಾಪ ಕಳೆವಳಾಕಾಶ -
ಗಂಗೆ । ಬಹು ।
ತಾಪ ಕಳೆವ ದ್ವಿಜನಾಥ ।
ಆ ಪಾದಪ ದೈನ್ಯ ಹರೀ -
ಸುಗುಣವು ।
ಈ ಪುರುಷರಿಗೊಪ್ಪುವುದಲ್ಲೇ -
ಸಖಿ ।। ಚರಣ ।।
ಮೀನಾ ಕೂರ್ಮ ದ್ವಿಜ -
ನೋಡಿ ಸ್ಮರಿಸಿ ಮುಟ್ಟಿ ।
ಸೂನುಗಳನು ಸಲಹುವ ತೆರದಿ ।
ಸು ನೋಟದಿ ನೆನೆದು -
ಪಾದಸ್ಪರ್ಶ । ವಿ ।
ತ್ತಾನುತರನು ಪೋರೆವರು -
ಬಿಡದೆ ಸಖಿ ।। ಚರಣ ।।
ಈ ಸಂಯಮಿಗಳ
ಕೃಪೆಯೊಂದಿರುತಿರೆ ।
ಏನು ಸಾಧನ ಇನ್ನೇತಕೆಲೆ ।
ನಾಶ ವೈಕುಂಠವೇ ಸರಿ । ಪ್ರಾ ।
ಣೇಶವಿಠ್ಠಲ ನಿವರಲ್ಲಿಹದಕೆ -
ಸಖಿ ।। ಚರಣ ।।
ಸ್ವಾಮೀ ಸುಬೋಧೇಂದ್ರತೀರ್ಥ ಗುರುವರ್ಯರೇ!
ನಿಮ್ಮ ಮಹಿಮೆಯು ಅಗಾಧವಾಗಿದೆ.
ನೀವು - ಕುತ್ಸಿತ ಪರವಾದಿ ವಿಬುಧ ಸಂಗವನ್ನು ನಿಮ್ಮ ವಾಗ್ವೈಖರಿ - ಚಾತುರ್ಯಗಳಿಂದ ವಾದದಲ್ಲಿ ಸುಲಭವಾಗಿ ಜಯಿಸಿ ದುರ್ವಾದಿಗಳ ಗರ್ವ ಪರಿಹಾರ ಮಾಡುವವರಾಗಿದ್ದೀರಿ.
ಅವೈದಿಕವಾದ ತಮ್ಮ ಮತವೇ ಆ ತತ್ತ್ವಗಳೇ ಶ್ರೇಷ್ಠವೆಂಬ ಅವರ ಛಲವನ್ನು ನಿಮ್ಮ ವಾದ ಚಾತುರ್ಯದಿಂದ ನಿವಾರಿಸಿದವರಾಗಿದ್ದೀರಿ.
ನಿಮ್ಮ ಪಾಠ ಪ್ರವಚನ ಉಪದೇಶಗಳನ್ನು ಕಂಡು ವಿದ್ವಜ್ಜನರು ಸದಾ ನಿಮ್ಮನ್ನು ಸೇವಿಸುತ್ತಾರೆ.
ಅಥವಾ
ಬುಧನಿಂದ ( ಪಂಡಿತರಿಂದ ಸೇವ್ಯರೂ ) ಪಂಡಿತ ಮಂಡಲಿಗೆ ( ಅಮರ ಸಂಘಕ್ಕೆ ) ಪ್ರಭು ( ಆಚಾರ್ಯ ) ಗಳಾದ ಶ್ರೀ ಬೃಹಸ್ಪತ್ಯಾಚಾರ್ಯರನ್ನು ನಿಮ್ಮ ವಿದ್ಯಾ ವೈಭವ ಉಪದೇಶ ವೈಖರಿಗಳಿಂದ ಸಂತೋಷ ಪಡಿಸುವವರಾಗಿದ್ದೀರಿ.
ಅಥವಾ
ಬುಧಾದಿ ಸೇವ್ಯನೂ - ಸುರ ನಿಕರಕ್ಕೆ ಪ್ರಭುವೂ ಆದ ಶ್ರೀ ಇಂದ್ರದೇವರನ್ನು ಅರ್ಥಾತ್ ಶ್ರೀ ಇಂದ್ರಾವತಾರಿಗಳಾದ ಶ್ರೀ ಜಯತೀರ್ಥರನ್ನು ನಿಮ್ಮ ಪಾಠ ಪ್ರವಚನ ಚಾತುರ್ಯದಿಂದ ಹರ್ಷಗೊಳಿಸಿದ್ದೀರಿ.
ಇಷ್ಟೇ ಅಲ್ಲ.....
ಯಾದವ - ಯಜ್ಞ ಸಂಭವನೂ - ಯಜ್ಞ ನಾಮಕನೂ ಆದ ಶ್ರೀ ಮೂಲರಾಮಚಂದ್ರ - ದೈತ್ಯ ದಂಡನಕಾರಿ ಶ್ರೀ ಕೃಷ್ಣ - ವಃ - ಶ್ರೇಷ್ಠರಾದ ಶ್ರೀ ವೇದವ್ಯಾಸದೇವರುಗಳ ಶತ್ರುಗಳಾದ ರಾವಣ - ಕುಂಭಕರ್ಣ - ಕಂಸ - ಜರಾಸಂಧ - ಶಿಶುಪಾಲ - ಮಣಿಮಂತ - ಕಾಲನೇಮಿ - ಕಲಿ ಮೊದಲಾದ ದೈತ್ಯರ ಗರ್ವ ಹಾರಕನಾದ ಶ್ರೀಮನ್ನಾರಾಯಣನ ಸನ್ಮತವಾದ ವೈದಿಕ ಸದ್ವೈಷ್ಣವ ಸಿದ್ಧಾಂತವನ್ನು ಪ್ರಸಾರ ಮಾಡುವವರಾಗಿದ್ದೀರಿ.
ಅಥವಾ
ಶ್ರೀ ರಾಮ - ಕೃಷ್ಣ ವೇದವ್ಯಾಸದೇವರ ರಿಪುಗಳಾದ ದೈತ್ಯರ ಮದವನ್ನು ಪರಿಹರಿಸುವ ಶ್ರೀ ಭೀಮಸೇನದೇವರಿಗೆ ಸಮ್ಮತವಾದ ಶ್ರೀ ಹರಿಸರ್ವೋತ್ತಮತ್ವ ಪ್ರತಿಪಾದಕ ದ್ವೈತ ಸಿದ್ಧಾಂತವನ್ನು ಪ್ರಸಾರ ಮಾಡುವವರಾಗಿದ್ದೀರಿ.
ಅಥವಾ
ಶ್ರೀ ರಾಮಚಂದ್ರ - ಶ್ರೀ ಕೃಷ್ಣ - ಶ್ರೀ ವೇದವ್ಯಾಸದೇವರು ಮತ್ತು ಅವರ ಭಕ್ತರಾದ ಶ್ರೀ ಹನುಮ - ಭೀಮ - ಮಧ್ವಾವತಾರರಾದ ಶ್ರೀ ವಾಯುದೇವರ ಶತ್ರುಗಳಾದ ರಾವಣ - ಕುಂಭಕರ್ಣ; ಕಂಸ - ಜರಾಸಂಧ - ಶಿಶುಪಾಲ - ಕೌರವ - ಮಣಿಮಂತ - ಕಾಲನೇಮಿ - ಕಲಿ ಮೊದಲಾದ ದೈತ್ಯರ ಅಹಂಕಾರವನ್ನು ಮುರಿಯುವ ಮೂಲರೂಪದ ಶ್ರೀ ನಾರಾಯಣ ಮತ್ತು ಶ್ರೀ ವಾಯುದೇವರುಗಳಿಗೆ ಪರಮ ಸಮ್ಮತವಾದ ವೈದಿಕ ಸದ್ವೈಷ್ಣವ ದ್ವೈತ ಸಿದ್ಧಾಂತ ತತ್ತ್ವಗಳನ್ನು ಚೆನ್ನಾಗಿ ಪ್ರಸಾರ ಮಾಡುತ್ತಿರುವವರು ಪ್ರಾತಃ ಸ್ಮರಣೀಯ ಪರಮ ಪೂಜ್ಯ ಶ್ರೀ ಸುಬೋಧೇಂದ್ರತೀರ್ಥರು!!
" ಶ್ರೀ ಸುಬೋಧೇಂದ್ರ ತೀರ್ಥರ ಪೂರ್ವೇತಿಹಾಸ "
ಶ್ರೀ ಸುಬೋಧೇಂದ್ರತೀರ್ಥರು ಇಂದಿನ ಪ್ರಖ್ಯಾತ ರಿತ್ತಿ ಮನೆತನದ ಪೂರ್ವಾಚಾರ್ಯರು.
ಶ್ರೀ ವಿಜಯೀಂದ್ರತೀರ್ಥರ ಪೂರ್ವಾಶ್ರಮ ತಮ್ಮಂದಿರ ಔರಸ ಸಂತತಿಯವರು.
" ಸ್ಮೃತಿ ಮುಕ್ತಾವಲೀ " ಗ್ರಂಥಕಾರರಾದ ಸಾಕ್ಷಾತ್ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ವಿದ್ಯಾ ಶಿಷ್ಯರಾದ ಶ್ರೀ ಕೃಷ್ಣಾಚಾರ್ಯರು ಇವರ ವಂಶದ ಪೂರ್ವೀಕರು.
ಶ್ರೀ ರಾಯರ ಪೂರ್ವಾಶ್ರಮ ಮರಿಮಕ್ಕಳಾದ ಶ್ರೀ ವಾದೀಂದ್ರತೀರ್ಥರ ಪೂರ್ವಾಶ್ರಮ ಮಕ್ಕಳಾದ ಶ್ರೀ ಜಯರಾಮಾಚಾರ್ಯ ( ಶ್ರೀ ಧೀರೇಂದ್ರ ತೀರ್ಥರ ) ರ ಅಳಿಯಂದಿರಾದ ಅಂದರೆ.....
ಅವರ ಪುತ್ರಿ ಸಾಧ್ವೀ ಕೃಷ್ಣಮ್ಮನವರ ಪತಿಗಳಾದ ಶ್ರೀ ರಾಜಗೋಪಾಲಾಚಾರ್ಯರ ದೊಡ್ದಪ್ಪಂದಿರು.
ಹೀಗೆ ಶ್ರೀ ವಿಜಯೀಂದ್ರತೀರ್ಥರ - ಶ್ರೀ ರಾಯರ - ಶ್ರೀ ಧೀರೇಂದ್ರ ತೀರ್ಥರ ವಂಶದಲ್ಲಿ ಬಂದ ಮಹನೀಯರು.
ಶ್ರೀ ಗುರುರಾಜರ ಪೀಠದಲ್ಲಿ ವಿರಾಜಿಸಿದ - ಸಕಲ ವಿದ್ಯಾ ಪಾರಂಗತರೂ - ನ್ಯಾಯ - ವೇದಾಂತ - ವ್ಯಾಕರಣ - ಮೀಮಾಂಸಾದಿ ಶಾಸ್ತ್ರಗಳಲ್ಲಿ ಶ್ರೀ ತ್ರ್ಯಂಬಕ ಶಾಸ್ತ್ರಿಗಳೇ ಮೊದಲಾದ ನೂರಾರು ಜನ ಪಂಡಿತ ಪರವಾದಿಗಳನ್ನು ಜಯಿಸಿ - " ದ್ವೈತ ಸಿದ್ಧಾಂತದ ವಿಜಯ ಪತಾಕೆ " ಯನ್ನು ಎಲ್ಲೆಡೆ ಮೆರೆಸಿದ - ನ್ಯಾಯ ವೇದಾಂತಾದಿ ಶಾಸ್ತ್ರಗಳ ಮೇಲೆ ಅನೇಕ ಗ್ರಂಥಗಳನ್ನು ರಚಿಸಿ ವಿದ್ವನ್ಮಂಡಲಿಯಿಂದ ಸೇವ್ಯರೂ - ಕರ್ನಾಟಕ - ಮಹಾರಾಷ್ಟ್ರ - ಹೈದರಾಬಾದ್ ಸಂಸ್ಥಾನಗಳ ರಾಜರುಗಳಿಂದ ಗ್ರಾಮ, ಭೂಮಿಗಳನ್ನೂ, ಬಿರುದಾವಳಿಗಳನ್ನೂ ಗಳಿಸಿ ಕೀರ್ತಿ ಶಾಲಿಗಳಾದ - ಮೈಸೂರಿನ ಧೊರೆ ಶ್ರೀ ಮುಮ್ಮುಡಿ ಕೃಷ್ಣರಾಜ ಒಡೆಯರಿಂದ ಅನೇಕ ಗ್ರಾಮ - ಭೂಮಿ - ತಾಮ್ರ ಶಾಸನ - ತಸ್ತೀಕು - ಮಠ ಮುಂತಾದ ಆಸ್ತಿಗಳನ್ನೂ; ಶ್ವೇತ ಛತ್ರ - ಹಗಲು ದೀವಟಿಕೆ - ಆನೆಯ ಮೇಲೆ ಅಂಬಾರಿ ಮುಂತಾದ ಅಸಾಧಾರಣ ಪ್ರಶಸ್ತಿ ಬಿರುದುಗಳನ್ನು ಶ್ರೀ ಮಹಾ ಸಂಸ್ಥಾನಕ್ಕೆ ಸಂಪಾದಿಸಿಕೊಟ್ಟು ಶ್ರೀಮದಾಚಾರ್ಯರ ಮಹಾ ಸಂಸ್ಥಾನದ ಕೀರ್ತಿ ಬೆಳಗುವಂತೆ ಮಾಡಿದ ಶ್ರೀ ಸುಜನೇಂದ್ರತೀರ್ಥರಂಥಹಾ ( ಶ್ರೀ ಸುಬೋಧೇಂದ್ರ ತೀರ್ಥರ ತಮ್ಮನ ಮಕ್ಕಳು ) ಜ್ಞಾನಿ ನಾಯಕರಾದ ಶಿಷ್ಯರನ್ನು ಮಹಾ ಸಂಸ್ಥಾನಕ್ಕೂ; ವಿದ್ವತ್ಪ್ರಪಂಚಕ್ಕೂ ನೀಡಿದ ಮಹನೀಯರು ನಮ್ಮ ಶ್ರೀ ಸುಬೋಧೇಂದ್ರತೀರ್ಥ ಶ್ರೀಪಾದಂಗಳವರು!
" ಶ್ರೀ ಸುಬೋಧೇಂದ್ರತೀರ್ಥರ ಸಂಕ್ಷಿಪ್ತ ಮಾಹಿತಿ "
ಹೆಸರು : ವಿದ್ವಾನ್ ಶ್ರೀ ಮುದ್ದು ಕೃಷ್ಣಾಚಾರ್ಯರು
ವಿದ್ಯಾ ಗುರುಗಳು : ಶ್ರೀ ವ್ಯಾಸತತ್ತ್ವಜ್ಞತೀರ್ಥರು
ಆಶ್ರಮ ಗುರುಗಳು : ಶ್ರೀ ಭುವನೇಂದ್ರತೀರ್ಥರು
ಆಶ್ರಮ ನಾಮ : ಶ್ರೀ ಸುಬೋಧೇಂದ್ರತೀರ್ಥರು
ಕಾಲ : ಕ್ರಿ ಶ 1799 - 1835
ಅಂಶ : ಶ್ರೀ ಸೂರ್ಯಾಂಶ
ಶಬರೀ ವಲ್ಲಭನಂಘ್ರಿ ।
ಅಬುಜಾಳಿ ಸೂರ್ಯ । ಸ ।
ನ್ನಿಭ ವಾದಿ ಗಜಸಿಂಹ ।
ಸುಬೋಧೇಂದ್ರ ತೀರ್ಥಾ ।।
ಕಕ್ಷೆ : 12
ರಾಗ : ಕಾಂಬೋಧಿ ತಾಳ : ಏಕ
ಪಾಹಿ ಪಾಹಿ ಜಿತಮಾರ ।
ಪಾಹಿ ಸುಬೋಧೇಂದ್ರ ಸಮೀರ ।
ಮಹಾ ಮತಾಬ್ದೀಂದು ದೀನಾಮರ ।
ಮಹಿಜ ಸುಹಿತ ಮಹಿತ ।। ಪಲ್ಲವಿ ।।
ನಿರ್ಮಲಾತ್ಮ ಸದ್ಗುರು ಧೀರ ।
ಕರ್ಮ ವಿಷಯಾಪೇಕ್ಷ ದೂರ ।
ಧರ್ಮಾಸಕ್ತ ಲೋಕೋದ್ಧಾರ ಶರ್ಮ । ಸು ।
ಶರ್ಮಾದ ಭರ್ಮಾಂಗ ಮರ್ಮಜ್ಞ ।। ಚರಣ ।।
ಅರ್ಕ ಮಹಿಮನೆ ಧೀಮಂತ ।
ಅರ್ಕಜನೋಲಿದಾನೀ ಶಾಂತ ।
ಮರ್ಕಟ ದುರ್ವಾದಿ ಧ್ವಾಂತ ಅರ್ಕ । ಕು ।
ತರ್ಕ ಸಂಪರ್ಕಾರ್ಹ ಅರ್ಕಾಭ ಪಾಹಿ ।। ಚರಣ ।।
ತೀರ್ಥ ಪಾಲಾ ಭಕ್ತಾಧೀನಾ ।
ತೀರ್ಥಾ೦ಗ್ರಿ ಪ್ರಾಣೇಶ ವಿಠ್ಠಲನ ।
ತೀರ್ಥ ದೂತ ನೀನಿದ್ದ ಸ್ಥಾನ ತೀರ್ಥವು ।
ತೀರ್ಥಪ ತೀರ್ಥಪ ತೀರ್ಥ ಮಾಂ ಪಾಹಿ ।। ಚರಣ ।।
ಆಶ್ರಮ ಶಿಷ್ಯರು : ಶ್ರೀ ಸುಜನೇಂದ್ರತೀರ್ಥರು
ಆರಾಧನೆ : ಚೈತ್ರ ಬಹುಳ ತೃತೀಯಾ
ಬೃಂದಾವನ ಸ್ಥಳ : ನಂಜನಗೂಡು
ವಿವರಣೆ :
ಜಿತಮಾರ = ಮನ್ಮಥನ ಗೆದ್ದವರು
ಅಮರ ಮಹಿ = ಕಲ್ಪವೃಕ್ಷ
ಶರ್ಮ = ಆನಂದ
ಸುಶರ್ಮದ = ಬ್ರಹ್ಮ ಜ್ಞಾನವನ್ನು ಕೊಡುವವ
ಭರ್ಮಾಂಗ = ಬಂಗಾರದಂತಹ ಕಾಂತಿಯುಳ್ಳ ಅಂಗ ಉಳ್ಳವರು
ಅರ್ಕ = ಸೂರ್ಯ
ಅರ್ಕ ಮಹಿಮಾ = ಅನಂತ ಮಹಿಮಾ
ಸಂಪರ್ಕಾಹ = ಮಿಥ್ಯಾವಾದದ ಸಂಪರ್ಕವನ್ನು ಹಾಳು ಮಾಡತಕ್ಕವರು
ತೀರ್ಥ ಪಾಲ = ಸದ್ಧರ್ಮಗಳನ್ನು ಪಾರಿಪಾಲಿಸುವವ
ತೀರ್ಥಾ೦ಘ್ರಿ = ಪಾದದಿಂದ ಗಂಗೆಯನ್ನು ಪಡೆದವನು
ತೀರ್ಥ ದೂತ = ಧರ್ಮ ದೂತ
ತೀರ್ಥವು = ಪುಣ್ಯ ಕ್ಷೇತ್ರ
ತೀರ್ಥಪ = ಶಾಸ್ತ್ರ ಪಾಲನ
ತೀರ್ಥಪ = ಯತಿ ಶ್ರೇಷ್ಠ
ತೀರ್ಥಮಾಂ = ನನ್ನನ್ನು ಪುನೀತನನ್ನಾಗಿ ಮಾಡು!!
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
*******
No comments:
Post a Comment