Wednesday 1 May 2019

sushameendra teertharu mantralaya 2009 matha rayara mutt yati 38 chaitra bahula dwiteeya ಸುಶಮೀಂದ್ರ ತೀರ್ಥರು


sushameendra teerthara stutih








sushameendra vidyapayonidhi vignananidhi

info from sumadhwaseva.com--->

shri sushamIndra tIrtharu:

ArAdhane: chaitra bahuLa dwitIya
parampare: rAyara maTa
Period: 1985 - 2009

Father: Sri Raja S Rajagopalacha

Mother: Smt Padmavathamma

Janma nama: Sri Suprajnendrachar

Birth place: Nanjanagud

Ashrama Sweekara: Sept 1985

Peetarohana: 12.02.1986

Vrundavana: 11.4.2009 @ Mantralaya

Ashrama Gurugalu: Sri Sujayeendra Tirtharu

Ashrama Shishyaru: Sri Suvidyendra Tirtharu

Ashrama Shishyaru: Sri Suyateendra Tirtharu


sudhIjanasumandaaram sudhIndrasutasupriyam |

sushamIndragurum vandE sujayIndrakarOdbhavam |


ಸುಧೀಜನಸುಮಂದಾರಂ ಸುಧೀಂದ್ರಸುತಸುಪ್ರಿಯಂ |
ಸುಶಮೀಂದ್ರಗುರುಂ ವಂದೇ ಸುಜಯೀಂದ್ರಕರೋದ್ಭವಂ |


सुधीजनसुमंदारं सुधींद्रसुतसुप्रियं ।
सुशमींद्रगुरुं वंदे सुजयींद्रकरोद्भवं ।



Sri Sushameendra Tirtharu is responsible for our Shakambari Nagar Rayara Mutt development.  He had done the Initial Shilaanyaasa and shankustapane for our Shakambari Nagara Rayara Mutt.

********



chaitra bahuLa dwitIya is the ArAdhane of shri sushamIndra tIrtharu of rAyara maTa.

shri sushamIndra tIrtha guruvantargata, bhAratIramaNa mukhyaprAnantargata, sItA pate shri mUla rAma dEvara pAdaravindakke gOvindA, gOvindA...

shri krishnArpaNamastu...


*****

info from madhwamrutha.org--->

ಶ್ರೀಸುಶಮೀಂದ್ರತೀರ್ಥರು
ಶ್ರೀರಾಘವೇಂದ್ರಗುರುಸಾರ್ವಭೌಮರ ನಂತರ ಅವರ ವೇದಾಂತ ಸಾಮ್ರಾಜ್ಯವನ್ನಾಳಿದ ಮಹಾತ್ಮರನೇಕರಲ್ಲಿ ಶ್ರೀಸುಮತೀಂದ್ರತೀರ್ಥರು, ಶ್ರೀವಾದೀಂದ್ರತೀರ್ಥರು, ಶ್ರೀವರದೇಂದ್ರತೀರ್ಥರು, ಶ್ರೀಧೀರೇಂದ್ರತೀರ್ಥರು, ಶ್ರೀಸುಜ್ಞಾನೇಂದ್ರತೀರ್ಥರು, ಶ್ರೀಸುಧರ್ಮೇಂದ್ರ ತೀರ್ಥರು ಮತ್ತು ಶ್ರೀಸುಗುಣೇಂದ್ರತೀರ್ಥರು ಪ್ರಮುಖರು.ಶ್ರೀಸುಜ್ಞಾನೇಂದ್ರತೀರ್ಥರಿಗೆ ಪೂರ್ವಾಶ್ರಮದಲ್ಲಿ ರಾಜಗೋಪಾಲಾಚಾರ್ಯರು ಮತ್ತು ವೆಂಕಟರಾಮಾಚಾರ್ಯರೆಂಬುವರು ಇಬ್ಬರು ಪುತ್ರರು. ರಾಜಗೋಪಾಲಾಚಾರ್ಯರು ಶ್ರೀ ಮಠದ ಆಡಳಿತದಲ್ಲಿ ಶ್ರೀಗಳವರಿಗೆ ಸಹಾಯಹಸ್ತರಾಗಿ ಗುರುರಾಜರ ಸೇವೆಯನ್ನು ಮಾಡಿದರು. ಇವರಿಂದಲೇ ಈ ಮನೆತನಕ್ಕೆ ‘ರಾಜಾ’ ಇಂಬ ಬಿರುದು ಬಂದದ್ದು.
ಶ್ರೀಯುತ ರಾಜಾ ರಾಜಗೋಪಾಲಾಚಾರ್ಯರಿಗೆ, ರಾಜಾ ವೆಂಕಟರಾಘವೇಂದ್ರ್ರಾಚಾರ್ಯ, ರಾಜಾ ಗುರುರಾಜಾಚಾರ್ಯ (ಶ್ರೀಸುಪ್ರಜ್ಞೇಂದ್ರತೀರ್ಥರು) ಹಾಗೂ ರಾಜಾ ಶ್ರೀನಿವಾಸಾಚಾರ್ಯರು ಮಕ್ಕಳು. ಹಿರಿಯರಾದಾ ರಾಜಾ ವೆಂಕಟರಾಘವೇಂದ್ರ್ರಾಚಾರ್ಯರಿಗೆ 1) ರಾಜಾ ವೇಣುಗೋಪಾಲಚಾರ್ಯರು (ಶ್ರೀ ಸುಕೃತೀಂದ್ರತೀರ್ಥರು), 2) ರಾಜಾ ಕೃಷ್ಣಾಚಾರ್ಯರು (ಶ್ರೀಸುಶೀಲೇಂದ್ರತೀರ್ಥರು), 3) ರಾಜಾ ಸುಜ್ಞಾನೇಂದ್ರ್ರಾಚಾರ್ಯರು ಎಂಬ ಮೂರು ಜನ ಮಕ್ಕಳು.
ಶ್ರೀಯುತ ರಾಜಾ ಸುಜ್ಞಾನೇಂದ್ರ್ರಾಚಾರ್ಯರಿಗೆ 1)ರಾಜಾ ರಾಜಗೋಪಾಲಾಚಾರ್ಯ 2) ರಾಜಾ ವೆಂಕಟರಾಘವೇಂದ್ರಾಚಾರ್ಯ 3) ಕೃಷ್ಣವೇಣಮ್ಮ ಎಂಬ ಮೂರು ಮಕ್ಕಳು. ಹಿರಿಯರಾದ ರಾಜಾ ರಾಜಗೋಪಾಲಾಚಾರ್ಯರ ಹಿರಿಯ ಪುತ್ರರೇ ಶ್ರೀಸುಪ್ರಜ್ಞೇಂದ್ರಾಚಾರ್ಯರು (ಶ್ರೀ ಸುಶಮೀಂದ್ರತೀರ್ಥರ ಪೂರ್ವಾಶ್ರಮನಾಮ). ರಾಜಾ ಸುಜ್ಞಾನೇಂದ್ರಾಚಾರ್ಯರು ತಮ್ಮ ಚಿಕ್ಕಪ್ಪನವರಾದ ರಾಜಾ ಗುರುರಾಜಾಚಾರ್ಯರಿಗೆ (ಶ್ರೀಸುಪ್ರಜ್ಷೇಂದ್ರತೀರ್ಥರು) ದತ್ತು ಹೋಗಿದ್ದರು. ಆ ಕಾರಣದಿಂದಲೇ ಇವರಿಗೆ ಸುಪ್ರಜ್ಞೇಂದ್ರ ಎಂಬ ನಾಮಕರಣವಾಯಿತು. ತಾಯಿ ಪದ್ಮಾವತಿಬಾಯಿ – ಶ್ರೀರಾಯರ ಮಠದ ಪೀಠಾಧೀಶರಾದ ಶ್ರೀಸುವ್ರತೀಂದ್ರತೀರ್ಥರ ಪೂರ್ವಾಶ್ರಮದ ಮಗಳು. ಸದಾ ಗುರುಹಿರಿಯರಲ್ಲಿ ಅತ್ಯಂತ ಶ್ರದ್ಧೆ, ಭಕ್ತಿಯಿಂದ ವರ್ತಿಸುತ್ತಿದ್ದ ಸದ್ಗುಣಿ.
ಪೂರ್ವಾಶ್ರಮ:
ಶ್ರೀಸುಪ್ರಜ್ಞೇಂದ್ರಾಚಾರ್ಯರು ಜನಿಸಿದ್ದು ಅಕ್ಷಯನಾಮ ಸಂವತ್ಸರದ ಅಧಿಕ ಚೈತ್ರ ಬಹುಳ ಪಂಚಮಿ, ಶನಿವಾರ, ನಂಜನಗೂಡಿನ ‘ದೊಡ್ಡಮನೆ’ಯಲ್ಲಿ. ಆಂಗ್ಲಕಾಲಮಾನದಲ್ಲಿ ದಿನಾಂಕ 03/04/1926ರಂದು. ಗೌತಮ ಗೋತ್ರದ, ಬೀಗಮುದ್ರೆ ಮನೆತನದಲ್ಲಿ, ರಾಯರ ಪೂರ್ವಾಶ್ರಮ ವಂಶದಲ್ಲಿ, ರಾಯರ ಅಂತರಂಗ ಭಕ್ತರ ಜನನ. ಈ ಘಳಿಗೆ ಜ್ಯೋತಿಷ್ಯಾಸ್ತ್ರದ ಲೆಕ್ಕಾಚಾರದಲ್ಲಿ ‘ಗಜಕೇಸರೀ’ ಯೋಗದಿಂದ ಕೂಡಿತ್ತು.
ಜಾತಕರ್ಮ, ನಾಮಕರಣಾದಿಗಳ ನಂತರ, ಆಗಿನ ಕಾಲದ ರಾಯರ ಮಠದ ಪೀಠಾಧಿಪತಿಗಳಾದ ಶ್ರೀಸುಶೀಲೇಂದ್ರತೀರ್ಥರಲ್ಲಿಗೆ ರಾಜಗೋಪಾಲಚಾರ್ಯ ದಂಪತಿಗಳು ಈ ಮಗುವನ್ನು ಆಶೀರ್ವಾದ ಪಡೆದುಕೊಳ್ಳುವ ಸಲುವಾಗಿ ಕರೆದೊಯ್ದರು.  ಆ ಮಗುವನ್ನು ಕಂಡ ಶ್ರೀಗಳು ಅತ್ಯಂತ ಹರ್ಷಚಿತ್ತರಾಗಿ ಶಿರದಲ್ಲಿ ಕೈಯಿಟ್ಟು ಹರಸಿ ಆಗಿನ ಕಾಲದಲ್ಲಿಯೇ ಒಂದು ಪಾವು ಬಂಗಾರವನ್ನು ಕೊಟ್ಟು ಮಗುವಿಗೆ ಆಭರಣ ಮಾಡಿಸಬೇಕೆಂದು ಆಜ್ಞಾಪಿಸಿದರು.
ಚೌಲ, ಉಪನಯನ ಸಂಸ್ಕಾರಗಳ ನಂತರ, ನಂಜನಗೂಡಿನ ವಿದ್ಯಾಪೀಠದಲ್ಲಿ ವೇದಾಧ್ಯಯನ, ಶಾಸ್ತ್ರಾಧ್ಯಯನ.
ಸುಪ್ರಜ್ಞೇಂದ್ರಾಚಾರ್ಯರು ತಮ್ಮ ಯೌವ್ವನಾವಸ್ಥೆಯಲ್ಲಿ ಮೈಸೂರಿನ ಸುಬ್ಬರಾಯನ ಕೆರೆ ಶ್ರೀರಾಯರ ಮಠದಲ್ಲಿ ಧರ್ಮಾಧಿಕಾರಿಯಾಗಿ ಸೇವೆ ಮಾಡಲಾರಂಭಿಸಿದ್ದರು. ಮತ್ತು ಅಲ್ಲಿಯೇ ತನ್ನ ಮಾವಂದಿರಾದ ಅರಮನೆಯ ಆಸ್ಥಾನ ವಿದ್ವಾನ್ ಮತ್ತು ಶ್ರೀಮಠದ ವ್ಯವಸ್ಥಾಪಕರಾದ ವಿದ್ವಾನ್ ಹುಲಿ ಶ್ರೀನಿವಾಸಾಚಾರ್ಯರಲ್ಲಿ ವೇದಾಂತ ಅಧ್ಯಯನವನ್ನು ಮಾಡುತ್ತಾ ತನ್ನ ತಂದೆಯಂತೆಯೇ ಶ್ರೀ ಮಠದ ಪದ್ಧತಿ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರುತ್ತಾ ಶ್ರೀಗುರುರಾಜರ ಸೇವೆಯನ್ನು ಮಾಡುತ್ತಿದ್ದರು.  ಆಚಾರ್ಯರು ಮೂವತ್ತಾರನೇ ವಯಸ್ಸಿನಲ್ಲಿರುವಾಗ ದಿನಾಂಕ 09-09-1962ರಲ್ಲಿ ತಂದೆ ರಾಜಗೋಪಾಲಾಚಾರ್ಯರು ದೈವಾಧೀನರಾದರು. ಪಿತೃ ವಿಯೋಗದಿಂದ ಬಹು ನೊಂದಿದ್ದ ಆಚಾರ್ಯರಿಗೆ ಚಿಕ್ಕಪ್ಪಂದಿರಾದ     ರಾಜಾ ವೆಂಕಟರಾಘವೇಂದ್ರಾಚಾರ್ಯರು ಮಾರ್ಗದರ್ಶಿಗಳಾದರು. ಒಂದು ವರ್ಷದ ನಂತರದಲ್ಲಿ (05-11-1963) ಚಿಕ್ಕಪ್ಪಂದಿರೂ ಕೂಡ ಪರಮಹಂಸಾಶ್ರಮವನ್ನು ಸ್ವೀಕರಿಸಿ ರಾಯರ ಮಠದ ಪರಂಪರೆಯಲ್ಲಿ ‘ಶ್ರೀಸುಜಯೀಂದ್ರತೀರ್ಥ’ರಾದರು.
ಮುಂದೆ ಶ್ರೀಸುಜಯೀಂದ್ರತೀರ್ಥರ ಹಾಗೂ ಹಿರಿಯರ ಆದೇಶದಂತೆ ಅಲ್ಲಿಯ ನಿವಾಸಿಗಳಾದ ಮಾನವಿ ಧೀರೇಂದ್ರಾಚಾರ್ಯ ಎಂಬುವರು ಇವರ ವಿನಯಶೀಲತೆ, ಭಕ್ತಿ, ಮುಗ್ಧತೆ ಮುಂತಾದ ಗುಣಗಳನ್ನು ಕಂಡು ಮಾರುಹೋಗಿ ತನ್ನ  ಮಗಳಾದ ಶಾಂತಾಬಾಯಿಯನ್ನು  ಸುಪ್ರಜ್ಞೇಂದ್ರ್ರಾಚಾರ್ಯರಿಗೆ ತಂದುಕೊಳ್ಳಬೇಕೆಂದು ಪ್ರಾರ್ಥಿಸಿದರು. ನಂಜನಗೂಡಿ ನಲ್ಲಿರುವ ಸುಪ್ರಜ್ಞೇಂದ್ರ್ರಾಚಾರ್ಯರ ಸ್ವಗೃಹದಲ್ಲಿ  ಅತಿ ವೈಭವದಿಂದ ಕ್ರೋಧಿನಾಮ ಸಂವತ್ಸರದ ಜ್ಯೇಷ್ಠ ಬಹುಳ ಚತುರ್ಥಿ ದಿನಾಂಕ 29/06/1964ರಂದು  ವಿವಾಹವು ನೆರವೇರಿತು. ಅಣ್ಣಂದಿರಾದ ರಾಜಾ ಎಸ್ ಗುರುರಾಜಾಚಾರ್ಯ ದಂಪತಿಗಳು ಹಸೆಮಣೆಯಲ್ಲಿ ಕೂತು ವಿವಾಹವನ್ನು ನಡೆಸಿದರು.
ಎಲ್ಲರನ್ನೂ ಪ್ರೀತಿಸುತ್ತಾ, ಎಲ್ಲರೊಂದಿಗೂ ಬೆರೆಯುತ್ತಾ, ಅಭಿಮಾನ-ಅಂತಃಕರಣದಿಂದ ವ್ಯವಹರಿಸುತ್ತಾ, ದೇವ-ಗುರುಗಳಲ್ಲಿ ಭಕ್ತಿಯಿಂದ ವರ್ತಿಸುತ್ತಾ ಸಾಗಿದ್ದ ಜೀವನ ಸುಪ್ರಜ್ಞೇಂದ್ರಾಚಾರ್ಯರದ್ದಾಗಿತ್ತು. ಪ್ರತಿ ಸೋಮವಾರ ಶ್ರೀಕಂಠೇಶ್ವರನ ದರ್ಶನ ತಪ್ಪುತ್ತಿರಲಿಲ್ಲ. ಪ್ರತಿ ಹುಣ್ಣಿಮೆ ಶ್ರೀಸತ್ಯನಾರಾಯಣದೇವರ ದರ್ಶನ ಪಡೆದು, ಪ್ರಸಾದವನ್ನು ಊರಿನ ಎಲ್ಲಾ ಸಂಬಂಧಿಕರ ಮನೆಗೆ ತಲುಪಿಸಿ ತಾವು ಮನೆಗೆ ವಾಪಾಸಾಗುತ್ತಿದ್ದರು. ಹೆಚ್ಚಿನ ತಮ್ಮ ಕೆಲಸಗಳನ್ನು ತಾವೇ ನಿರ್ವಹಿಸುತ್ತಿದ್ದರು. ಮಕ್ಕಳು ಮಡದಿಯೊಡನೆ ಮೃದು-ಮಧುರ ಮಾತುಗಳು, ವ್ಯವಹಾರದಲ್ಲಿ ಮುಗ್ಧತೆ, ಯಾರನ್ನೂ ನೋಯಿಸದೆ-ಎಲ್ಲರನ್ನೂ ಪ್ರೀತಿಸುವ ಕರುಣಾ ಹೃದಯ — ಇವುಗಳು ಆದರ್ಶ ಸಾಂಸಾರಿಕ ಜೀವನಕ್ಕೆ ನಿದರ್ಶನ.


ಸಂನ್ಯಾಸ:
ಮೈಸೂರಿನ ಸುಬ್ಬರಾಯನಕೆರೆ ರಾಯರ ಮಠದಲ್ಲಿ ಧರ್ಮಾಧಿಕಾರಿಗಳಾಗಿ ರಾಯರ ಸೇವೆ ಮಾಡುತ್ತಿದ್ದ ಶ್ರೀಸುಪ್ರಜ್ಞೇಂದ್ರಾಚಾರ್ಯರನ್ನು ಮಂತ್ರಾಲಯದ ರಾಯರ ಮೂಲಬೃಂದಾವನ ಸನ್ನಿಧಿಗೆ ಬರಮಾಡಿಕೊಂಡರು ಶ್ರೀಸುಜಯೀಂದ್ರತೀರ್ಥರು. ಶ್ರೀಪಾದಂಗಳವರ ಅನುಗ್ರಹ ರಕ್ಷೆಯಲ್ಲಿ, ತಾವು ತಿಳಿದಿದ್ದ ಶ್ರೀಮಠದ ಸಂಪ್ರದಾಯ ಪರಂಪರೆಯನ್ನು ಮತ್ತಷ್ಟು ವೃದ್ದಿಸಿಕೊಳ್ಳತೊಡಗಿದರು. ಶ್ರೀ ಮಠದ ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಆ ಮೂಲಕ ಶ್ರೀಮನ್ ಮೂಲರಾಮದೇವರ ಹಾಗೂ ಗುರುರಾಜರ ಸೇವೆಯನ್ನು ಮಾಡಲಾರಂಭಿಸಿದರು. ನಿಷ್ಕಲ್ಮಶವಾದ, ನಿರಂತರವಾದ, ನಮ್ರಭಕ್ತಿಪೂರ್ವಕವಾದ ಸೇವೆಯಾಗಿತ್ತು ಅದು. ನಿರಾಯಾಸವೂ, ಬೇಸರ ರಹಿತವೂ, ಆನಂದಭರಿತವೂ ಆಗಿತ್ತು ಆ ಸೇವೆ. ಮುಗ್ಧಮನಸ್ಸಿನ ಆಚಾರ್ಯರ ಈ ಸೇವೆ, ಸತತವಾಗಿ ನೆರವೇರುತ್ತಾ ಸುಮಾರು ಮೂರು ವರ್ಷ ಕಳೆಯಿತು. ಆಚಾರ್ಯರ ಸೇವೆಗೆ ಸಮರ್ಥವಾದ ಪ್ರತಿಫಲ ದೊರೆಯುವ ಕಾಲವು ಸಮೀಪಿಸಿತು. ಗುರುಗಳಾದ ಶ್ರೀಸುಜಯೀಂದ್ರತೀರ್ಥರಿಗೆ ಆಚಾರ್ಯರ ಈ ಸೇವಾಮನೋಭಾವವನ್ನು ಕಂಡು ಅತೀವ ಸಂತೋಷವಾಯಿತು. ಶ್ರೀಮಠದ ಪರಂಪರೆ, ಸಂಪ್ರದಾಯವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಯೋಗ್ಯ ಜೀವಿಯ ಹುಡುಕಾಟದ ಪ್ರಶ್ನೆಗೆ ಉತ್ತರ ದೊರಕಿದಂತಾಯಿತು.
ಈ ಸಂಧರ್ಭದಲ್ಲಿ ನಡೆದ ಒಂದು ಘಟನೆ ತುಂಬಾ ರೋಚಕ.
ಶ್ರೀಸುಪ್ರಜ್ಞೇಂದ್ರಾಚಾರ್ಯರು ತಮ್ಮ ಸೋದರತ್ತೆಯ ಮರಣ ವಾರ್ತೆಯನ್ನು ಕೇಳಿ ಗುರುಗಳ ಅನುಮತಿಯನ್ನು ಪಡೆದು, ಶೀಘ್ರವಾಗಿ ವಾಪಾಸಾಗಬೇಕೆಂಬ ಆದೇಶದೊಂದಿಗೆ ನಂಜನಗೂಡಿಗೆ ಬಂದರು. ವೈಕುಂಠ ಸಮಾರಾಧನೆ, ಶುಭ ಸ್ವೀಕಾರದ ದಿನದಂದು ಆಚಾರ್ಯರಿಗೆ ವಿಪರೀತ ಜ್ವರದ ಬಾಧೆಯಾಯಿತು. ಮರುದಿನವೂ ಜ್ವರ ಉಲ್ಬಣಾವಸ್ಥೆಯಲ್ಲಿದ್ದರೂ ಶೀಘ್ರವಾಗಿ ವಾಪಸಾಗಬೇಕೆಂಬ ಗುರುಗಳ ಆದೇಶವನ್ನು ಪರಿಪಾಲಿಸುವ ತುಡಿತ ಅವರಲ್ಲಿತ್ತು. ಸಾಮಾನ್ಯವಾಗಿ ಪ್ರಯಾಣದ ಮುನ್ನ ತಮ್ಮ ತಾಯಿಯವರ ಅಪ್ಪಣೆ ಪಡೆದು ಅವರಿಂದ ರಾಯರ ಮಂತ್ರಾಕ್ಷತೆಯ ರಕ್ಷೆಯನ್ನು ಪಡೆಯುವುದು ಆಚಾರ್ಯರ ವಾಡಿಕೆ. ಆದರೆ ಇಂದು ವಾಡಿಕೆಯಂತೆ ತಾಯಿಯನ್ನು ಭೇಟಿಯಾಗಿ ಪ್ರಯಾಣದ ಸುದ್ದಿ ತಿಳಿಸಿದರೆ, ಜ್ವರಾವಸ್ಥೆಯಲ್ಲಿರುವ ತಮ್ಮನ್ನು ಬೀಳ್ಕೊಡಲೊಲ್ಲರು ಎಂಬ ಯೋಚನೆ ಮನದಲ್ಲಿ ಮಾಡಿತು. ಗುರುಗಳ ಆದೇಶ ಒಂದೆಡೆಯಾದರೆ, ತಾಯಿಯ ಅಪ್ಪಣೆಯಿಲ್ಲದೆ ಪ್ರಯಾಣಿಸಬೇಕಿರುವ ಸಂಧರ್ಭ ಮತ್ತೊಂದೆಡೆ. ತಾಯಿಯೇ ಮೊದಲ ಗುರುವಾದರೂ, ಮೊದಲ ಗುರುವಿಗೂ ಮೊದಲು ಜಗದ್ಗುರುಗಳ ಪೀಠವನ್ನಲಂಕರಿಸಿದ ತಮ್ಮ ಗುರುಗಳ ಆದೇಶವೆಂದು ಮನ್ನಿಸಿ ಯಾರಿಗೂ ತಿಳಿಸದಲೆ ಮಂತ್ರಾಲಯಕ್ಕೆ ಹೊರಡುವ ನಿರ್ಧಾರವನ್ನು ಕೈಗೊಂಡರು. ಅದರಂತೆ ತಮ್ಮ ಸಾಮಗ್ರಿಗಳನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಸೇರಿಸಿ ಮೈಸೂರು ಮಾರ್ಗವಾಗಿ ಬೆಂಗಳೂರಿನೆಡೆಗೆ ಪ್ರಯಾಣ ಬೆಳೆಸಿದರು.
ಆಚಾರ್ಯರು ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಬಂದರು. ಅಲ್ಲಿಂದ ಮಂತ್ರಾಲಯದ ಕಡೆಗೆ ಹೊರಡುವ ವಾಹನಕ್ಕಾಗಿ ಕಾಯಬೇಕಾಯಿತು. ಆ ಸಂದರ್ಭದಲ್ಲಿ ಟಿಕೆಟ್ ಕೊಡಿಸುವ ನೆಪದಲ್ಲಿ ದುಷ್ಟರು ಮೋಸಮಾಡಿ ಆಚಾರ್ಯರ ಬಳಿ ಇದ್ದ ದುಡ್ಡು, ಪೆಟ್ಟಿಗೆಯನ್ನು ಕಳವು ಮಾಡಿದರು. ಬಹುಶಃ ಭವಬಂಧನದಿಂದ, ಈ ವಿಷಯ ಪದಾರ್ಥಗಳಿಂದ ಆಚಾರ್ಯರನ್ನು ವಿಮುಕ್ತಿಗೊಳಿಸುವ ರಾಯರ ಆಕಾಂಕ್ಷೆಯ ಸೂಚನೆ ಇದಾಗಿತ್ತು. ಭಗವಂತ, ರಾಯರು ಸುಪ್ರಜ್ಞೇಂದ್ರಾಚಾರ್ಯರಿಗೆ ತಮ್ಮ ಮುಂದಿನ ವೈರಾಗ್ಯಜೀವನಕ್ಕೆ ಅಣಿಯಾಗಲು ತೋರಿದ ಮೊದಲ ಹಂತವಾಗಿತ್ತು ಈ ಘಟನೆ.
ಅಂದು ರಕ್ತಾಕ್ಷಿ ನಾಮ ಸಂವತ್ಸರದ ಫಾಲ್ಗುಣ ಕೃಷ್ಣ ಪಕ್ಷದ ದ್ವಾದಶಿಯ ದಿನ. ರಾಯರ ಸಂಕಲ್ಪಕ್ಕೆ ಅನುಗುಣವಾಗಿ ಶ್ರೀಸುಜಯೀಂದ್ರತೀರ್ಥರು ಯೋಜಿಸಿದ್ದ ಮಹತ್ಕಾರ್ಯದ ಬೀಜ ಮೊಳಕೆಯೊಡೆಯಿತು. ರಾಯಚೂರಿನಲ್ಲಿ ಶ್ರೀಸುಪ್ರಜ್ಞೇಂದ್ರಾಚಾರ್ಯರಿಗೆ ಸನ್ಯಾಸಾಶ್ರಮ ಸ್ವೀಕಾರಕ್ಕಾಗಿ ಅನುಗ್ರಹ ಮಂತ್ರಾಕ್ಷತೆಯನ್ನು ನೀಡಿಯೇ ಬಿಟ್ಟರು ಶ್ರೀಸುಜಯೀಂದ್ರತೀರ್ಥರು.
ಗುರುರಾಜರ ಅಂತರಂಗ ಭಕ್ತರಾದ ಶ್ರೀಅಪ್ಪಣ್ಣಾಚಾರ್ಯರ ದಿವ್ಯ ಬಿಚ್ಛಾಲಿ ಕ್ಷೇತ್ರದಲ್ಲಿ, 1985ನೇ ಇಸವಿ ಮಾರ್ಚ್ 19ನೇ ತಾರೀಖು, ಫಾಲ್ಗುಣ ಕೃಷ್ಣ ಪಕ್ಷದ ತ್ರಯೋದಶಿ ಶುಭದಿನದಂದು ವೈದಿಕವಿಧಿಪೂರ್ವಕವಾಗಿ, ಶ್ರೀಮಠದ ಅನೂಚಾನ ಸಂಪ್ರದಾಯದಂತೆ ಎಲ್ಲಾ ಪ್ರಕ್ರಿಯೆಗಳು ನಡೆದು ಶ್ರೀಸುಪ್ರಜ್ಞೇಂದ್ರಾಚಾರ್ಯರು ಸಂನ್ಯಾಸಾಶ್ರಮವನ್ನು ಸ್ವೀಕರಿಸಿದರು. ಗುರುಗಳಾದ ಶ್ರೀಸುಜಯೀಂದ್ರತೀರ್ಥರು ಇವರನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ, “ಶ್ರೀಸುಶಮೀಂದ್ರತೀರ್ಥ” ರೆಂದು ನಾಮಕರಣಮಾಡಿ ಮಂತ್ರೋಪದೇಶವನ್ನು ನೀಡಿ ಹರಸಿದರು.
“ಶಮೋ ಮನ್ನಿಷ್ಠತಾ ಬುದ್ಧೇಃ” ಎಂಬ ಉತ್ಪತ್ತಿಯಂತೆ ಶಮವೆಂದರೆ ಮನಸ್ಸು ಸರ್ವದಾ ಭಗವನ್ನಿಷ್ಠವಾಗಿರುವುದು. ಎಲ್ಲಾ ಜೀವರಲ್ಲೂ ಭಗವಂತನು ನಲೆಸಿರುವನೆಂದರಿತು ಎಲ್ಲರಿಗೂ ಒಳಿತನ್ನೇ ಬಯಸುವುದು. ಅಂತಹ ಶಮಗುಣವನ್ನು ಪಡೆದವರು – ಶಮಿಗಳು. ಅಂತಹ ಸು-ಶ್ರೇಷ್ಠವಾದ ಶಮಗುಣವನ್ನು ಹೊಂದಿದವರಲ್ಲಿ ಅಗ್ರಗಣ್ಯರು “ಸುಶಮೀಂದ್ರರು” ಎನಿಸಿಕೊಳ್ಳುವರು. ಇಂಥಹ ಶ್ರೇಷ್ಠ ಅರ್ಥವುಳ್ಳ ಅವರಿಗೆ ಅನ್ವರ್ಥಕವಾದ ನಾಮ ಇದಾಗಿತ್ತು.
ಪೀಠಾಧಿಪತಿಗಳು:
ಶ್ರೀ ಸುಶಮೀಂದ್ರರು ಪೀಠವನ್ನಲಂಕರಿಸಿದ ಆರಂಭದ ದಿನಗಳಲ್ಲಿ ಶ್ರೀ ಮಂತ್ರಾಲಯ ಕ್ಷೇತ್ರದಲ್ಲಿದ್ದುಕೊಂಡು ತಮ್ಮ ಜಪತಪಾನುಷ್ಠಾನಗಳನ್ನು, ಶ್ರೀ ಮೂಲರಾಮನ ಪೂಜೆಯನ್ನು, ಶ್ರೀಗುರುರಾಜರ ಸೇವೆಯನ್ನು ಮಾಡುತ್ತ ತಮ್ಮ ಗುರುಗಳು ಆಜ್ಞಾಪಿಸಿದ್ದ ಅವರ ಕಾಲದ ಯೋಜನೆಗಳನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರುವುದರಲ್ಲಿಯೇ ತಮ್ಮನ್ನು ತೊಡಗಿಸಿಕೊಂಡರು. ದಿನ ದಿನಕ್ಕೂ ಮಂತ್ರಾಲಯ ಕ್ಷೇತ್ರ ಅಭಿವೃದ್ದಿ ಕಾಣತೊಡಗಿತು. ಭಕ್ತರ ಸಂಖ್ಯೆಯು ಅಪಾರವಾಗಲು ಶುರುವಾಯಿತು, ಹಾಗೆ ಬರುವ ಎಲ್ಲ ಭಕ್ತರಿಗೂ ಎಲ್ಲ ರೀತಿಯ ಅನುಕೂಲಗಳು ದೊರೆಯಲೆಂದು ಉದ್ದೇಶಿಸಿ ಅನೇಕ ನೂತನವಾದ ವಸತಿಗೃಹಗಳ ನಿರ್ಮಾಣ ಮಾಡಿಸಿದರು. ಭಕ್ತಾದಿಗಳಿಗೆ ಗುರುರಾಜರ ದರ್ಶನಕ್ಕೆ ಸರತಿಯಲ್ಲಿ ದರ್ಶನ ಮಾಡುವ ವ್ಯವಸ್ಥೆಯನ್ನು ಮಾಡಿಸಿ ಅನುಕೂಲ ಕಲ್ಪಿಸಿದರು. ಪ್ರದಕ್ಷಿಣೆ ಹಾಕುವ ಪ್ರಾಕಾರಕ್ಕೆ ಮೇಲ್ಚಾವಣಿ ಹಾಕಿಸಿದರು. ಪ್ರಕಾರದಲ್ಲಿಯೇ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿದರು. ನದಿತೀರದಲ್ಲಿ ಶೌಚಾಲಯವನ್ನು, ಸ್ನಾನಗೃಹವನ್ನು ನಿರ್ಮಿಸಿದರು. ಗುರುರಾಜರ ದರ್ಶನಕ್ಕೆಂದು ಬರುವ ಎಲ್ಲ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ವಿಚಾರಿಸಿ ಶ್ರೀಗುರುರಾಜರು ನಿಮಗೆ ಒಳ್ಳೆಯದನ್ನು ಮಾಡುತ್ತಾರೆ ಎಂದು ತಮ್ಮ ನಗುಮೊಗದಿಂದ ಅಭಯವನ್ನು ನೀಡುತ್ತಿದ್ದರು. ಶ್ರೀರಾಯರ ದರ್ಶನ ಪಡೆದು ಶ್ರೀಗಳಿಂದ ಮಂತ್ರಾಕ್ಷತೆಯನ್ನು ಪಡೆದು ಅವರ ನಗು ಮುಖದ ಸಾಂತ್ವನದ ನುಡಿಗಳನ್ನು ಕೇಳಿದೊಡನೆಯೇ ಭಕ್ತರ ಕಷ್ಟಗಳ ನಿವಾರಣೆಯಾಗಹತ್ತಿತು. ಶ್ರೀಗಳವರ ಕೀರ್ತಿಯು ರಾಯರ ಅನುಗ್ರಹದಿಂದ ಎಲ್ಲೆಡೆ ಹರಡಿತು. ತಮ್ಮ ಗುರುಗಳು ಹಾಕಿದ್ದ ಭದ್ರ ಬುನಾದಿಯೊಂದಿಗೆ ಸ್ಥಾಪಿಸಿದ್ಧ ಶ್ರೀಗುರುಸಾರ್ವಭೌಮ ವಿದ್ಯಾಪೀಠವನ್ನೂ ಯಶಸ್ವಿಯಾಗಿ ನಡೆಸುತ್ತಿದ್ದರು. ಶ್ರೀಗಳು ತಮ್ಮ ಆಶ್ರಮೋಚಿತವಾದ ಆಚರಣೆಗಳನ್ನೂ, ಸಂಪ್ರದಾಯವನ್ನೂ ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದುದೇ ಅಲ್ಲದೆ ಆಡಳಿತವ್ಯವಹಾರವನ್ನು ನಿರಾಯಸವಾಗಿ ನಡೆಸಿಕೊಂಡು ಬರುತ್ತಿದ್ದರೂ ಸಹ ಅದರ ಲೇಪವೇ ತಮಗೆ ಅಂಟದಂತೆ ‘ನಾವಲ್ಲ ರಾಯರು’ ನಮ್ಮಲ್ಲಿ ನಿಂತು ಆ ಕೆಲಸ ಮಾಡಿಸುತ್ತಿದ್ದಾರೆ ಎಂದು ಹೇಳುತ್ತಾ ನಿರ್ಲಿಪ್ತ್ತರಾಗುತ್ತಿದ್ದರು.
ದಿಗ್ವಿಜಯ ಸಂಚಾರ:
ಶ್ರೀಸುಶಮೀಂದ್ರತೀರ್ಥರು ಮಂತ್ರಾಲಯದ ಅಭಿವೃದ್ಧಿಯನ್ನು ಒಂದು ಹಂತಕ್ಕೆ ಏರಿಸಿ, ದೇಶದ ಉದ್ದಗಲಕ್ಕೂ ಇರುವ ಶ್ರಿಗುರುರಾಜರ ಭಕ್ತರನ್ನು ಅನುಗ್ರಹಿಸುವ ಸಲುವಾಗಿ ಧರ್ಮ ಪ್ರಚಾರ ಕಾರ್ಯಕ್ಕಾಗಿ ಆಸೇತುಹಿಮಾಚ¯ ಪರ್ಯಂತವಾಗಿ ದಿಗ್ವಿಜಯಸಂಚಾರ ಮಾಡಿದರು. ಈ ದಿಗ್ವಿಜಯ  ಸಂಚಾರದ ಪಕ್ಷಿನೋಟ ಇಲ್ಲಿದೆ.
ಗರಳಪರೀ, ದಕ್ಷಿಣಕಾಶಿ, ಗೌತಮಕ್ಷೇತ್ರವೆಂದೆನಿಸಿದ ಕಪಿಲಾನದೀತೀರದಲ್ಲಿರುವ, ಪರಶುರಾಮ ಕ್ಷೇತ್ರವಾದ, ಪಾರ್ವತೀಸಮೇತ ಶ್ರೀಕಂಠೇಶ್ವರ ಕ್ಷೇತ್ರ ಹಾಗೂ ಶ್ರೀಗುರುರಾಜರು ಪ್ರತೀಕ ರೂಪದಲ್ಲಿ ನೆಲೆಸಿರುವ ಏಕೈಕ ಮತ್ತು ಜಗೃತಸ್ಥಳವಾದ ನಂಜನಗೂಡು, ಶ್ರೀರಂಗ, ಕುಂಭಕೋಣ, ಶ್ರೀಮುಷ್ಣಂ, ಮಧುರೈ, ರಾಮೇಶ್ವರ, ಕನ್ಯಾಕುಮಾರಿ ಮುಂತಾದ ದಕ್ಷಿಣ ಭಾರತ ತೀರ್ಥಯಾತ್ರೆ.
ರಜತಪೀಠಪುರವೆನಿಸಿದ ಉಡುಪಿ, ಪಾಜಕ, ಫಲಿಮಾರು, ಧರ್ಮಸ್ಥಳ, ಸುಬ್ರಮಣ್ಯ, ಸೌತಡ್ಕ, ಕಟೀಲು, ಮುಲ್ಕಿ, ಸೋಂದಾ ಮುಂತಾದ ಮುಖ್ಯ ಕರಾವಳೀ ತೀರ್ಥಸ್ಥಳಗಳು.
ಇನ್ನೂ ತಿರುಪತಿ ತಿಮ್ಮಪ್ಪನ ದರ್ಶನಕ್ಕೆಂದು ತಿರುಮಲಕ್ಕೆ ಮತ್ತು ತಿರುಚಾನೂರಿಗೆ ನೀಡಿದ ಪ್ರವಾಸಗಳಂತೂ ಅಸಂಖ್ಯ.
ಪಂಡರಪುರದ ಪಾಂಡುರಂಗ ಶ್ರೀಗಳವರಿಗೆ ಅತ್ಯಂತ ಪ್ರೀತಿಪಾತ್ರನಾದ ರೂಪ. ಪಂಡರಪುರಕ್ಕೆ ಗುರುಗಳು ಅನೇಕ ಬಾರಿ ಭೇಟಿಕೊಟ್ಟು ವಿಠ್ಠಲನ ಕೃಪೆಗೆ ಪಾತ್ರರಾಗಿದ್ದಾರೆ. ಹಾಗೆಯೇ ಕೊಲ್ಲೂರಿಗೂ ಅನೇಕ ಸಲ ಭೇಟಿಕೊಟ್ಟು ಶ್ರೀಮಹಾಲಕ್ಷ್ಮಿಯ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಪುಣೆ, ಮುಂಬೈ, ಹೈದರಾಬಾದ್, ನಾಗಪುರ ಮುಂತಾದ ಪ್ರಮುಖ ನಗರಗಳ ಭೇಟಿಯಂತೂ ಅನೇಕ.
ಉತ್ತರಭಾರತದ ತೀರ್ಥಪ್ರವಾಸವನ್ನು ಕೈಗೊಂಡು, ದೆಹಲಿ-ಕುರುಕ್ಷೇತ್ರ-ಕಾಶಿ-ಮಥುರಾ-ಗಯಾ-ಹರಿದ್ವಾರಗಳನ್ನು ಸಂದರ್ಶಿಸಿ, ಪರಮ ಪುಣ್ಯತಮವಾದ ಬದರೀಕ್ಷೇತ್ರವನ್ನು ಸಂದರ್ಶಿಸಿದರು. ಹಾಗೆಯೇ ನೈಮಿಷಾರಣ್ಯ, ಅಯೋಧ್ಯಾ, ಗಯಾ, ಕಾಶೀ, ಪ್ರಯಾಗ ಮುಂತಾದ ತೀರ್ಥಕ್ಷೇತ್ರಗಳ ಯಾತ್ರೆ ಮಾಡುತ್ತಾ ಅಲ್ಲಿಯ ಭಕ್ತರನ್ನೂ ಅನುಗ್ರಹಿಸಿದ್ದಾರೆ. ಶ್ರೀಮಠದ ಇತಿಹಾಸದಲ್ಲಿ ಎರಡು ಬಾರಿ ಬದರೀಯಾತ್ರೆಯನ್ನು ಪೂರೈಸಿದ ಕೀರ್ತಿ ಶ್ರೀ ಸುಶಮೀಂದ್ರತೀರ್ಥರದ್ದು.
ಅಭಿವೃದ್ಧಿ ಕಾರ್ಯಗಳು:
ಶ್ರೀಸುಶಮೀಂದ್ರತೀರ್ಥ  ಶ್ರೀಪಾದಂಗಳವರು ಪೀಠಾಧಿಪತಿಗಳಾಗಿ ದಿವ್ಯ ಪೀಠವನ್ನಲಂಕರಿಸಿದ ಮೇಲೆ 1987 ರಿಂದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿರುತ್ತಾರೆ. ಸುಮಾರು 11 ಕೆ.ಜಿ. ಬಂಗಾರದಲ್ಲಿ ಶ್ರೀ ರಾಯರಿಗೆ ಬಂಗಾರದ ರಥ, ಶ್ರೀ ಮೂಲರಾಮದೇವರ ಪೂಜೆಗಾಗಿ ಸುಮಾರು ಇಪ್ಪತ್ತು ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿ 2 ಕೆ.ಜಿ. ಬಂಗಾರದಲ್ಲಿ ಶ್ರೀಮೂಲರಾಮದೇವರಿಗೆ ಸಿಂಹಾಸನದ ನಿರ್ಮಾಣ, ರಾಯರ ಮೂಲಪಾದುಕೆಗಳಿಗೆ ಬಂಗಾರದ ಕವಚ ನಿರ್ಮಾಣ, ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ 336ನೇ ಆರಧನಾ ಸಂದರ್ಭದಲ್ಲಿ ಉತ್ಸವಕ್ಕಾಗಿ ಸುಮಾರು ಹನ್ನೆರಡು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಬೆಳ್ಳಿಯ ಅಂಬಾರಿಯನ್ನು ನಿರ್ಮಾಣ, ಸುಮಾರು ಹದಿನೇಳು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನೂತನ ಮಹಾರಥದ ನಿರ್ಮಾಣ, ರಾಯರಿಗೆ ಅಂದಾಜು ಹತ್ತು ಕೆ.ಜಿ ಬಂಗಾರದ ಪಲ್ಲಕ್ಕಿಯ ನಿರ್ಮಾಣ, ಮಂತ್ರಾಲಯದ ರಾಯರ ಮೂಲಬೃಂದಾವನಕ್ಕೆ ಸಂಪೂರ್ಣವಾಗಿ ಬಂಗಾರದ ಕವಚದ ನಿರ್ಮಾಣ, ರಾಯರ ಗರ್ಭಗುಡಿಯ ಪ್ರಾಂಗಣದ ಸಂಪೂರ್ಣ ನವೀಕರಣ, ಪ್ರಾಚೀನವಾದ ಕಂಬಗಳಿಗೆ ಬೆಳ್ಳಿಯ ಕವಚಗಳ ನಿರ್ಮಾಣಗಳನ್ನು ಮಾಡಿಸಿದ್ದಾರೆ.
ಮಂತ್ರಾಲಯ ಮಹಾಪ್ರಾಕಾರದಲ್ಲಿ ಒಂದು ಕೋಟಿ ಇಪ್ಪತೈದು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಶ್ರೀಪೂರ್ಣಬೋಧ ಪೂಜಾಮಂದಿರವನ್ನು ನಿರ್ಮಾಣ ಮಾಡಿರುತ್ತಾರೆ. ಮಂತ್ರಾಲಯಕ್ಕೆ ಬರುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಇನ್ಫೋಸಿಸ್ ಸಹಯೋಗದಿಂದ ಸುಮಾರು ಒಂದು ಕೋಟಿ ಎಪ್ಪತ್ತು ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿ ಉತ್ತಮವಾದ ಅನ್ನಪೂರ್ಣ ಭೋಜನಶಾಲೆಯನ್ನು ನಿರ್ಮಾಣ ಮಾಡಿರುತ್ತಾರೆ. ಮಂತ್ರಾಲಯ ಕ್ಷೇತ್ರಕ್ಕೆ ರಾಯರ ದರ್ಶನಾಕಾಂಕ್ಷಿಗಳಾಗಿ ಬಂದ ಯಾತ್ರಿಕರಿಗೆ ಉಚಿತ ಭೋಜನದ ವ್ಯವಸ್ಥೆಯನ್ನು ಮಾಡಿರುತ್ತಾರೆ.
ಮಂತ್ರಾಲಯದ ಮಹಾಪ್ರಾಕಾರದ ಬಲಭಾಗದಲ್ಲಿ ಭಕ್ತರೊಬ್ಬರ ಸಹಾಯದಿಂದ ಸುಮಾರು 3 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿ ರಂಗಭವನ ಎನ್ನುವ ಭೋಜನ ಶಾಲೆಯ ನಿರ್ಮಾಣ, ಸುಸಜ್ಜಿತವಾದ 250 ಕ್ಕೂ ಹೆಚ್ಚು ವಸತಿಗೃಹಗಳು, ಹತ್ತಾರು ಕಲ್ಯಾಣಮಂಟಪಗಳು, ಆಧುನಿಕ ವ್ಯವಸ್ಥೆಯ ಗೋಶಾಲೆ, ಆರೋಗ್ಯಶಾಲೆ, ತುಂಗಭದ್ರಾನದೀ ತಟದಲ್ಲಿ ಸುರಕ್ಷಿತ ಸ್ನಾನದ ವ್ಯವಸ್ಥೆ – ಹೀಗೆ ಎಲ್ಲವೂ ರಾಯರ ಭಕ್ತರ ಅನುಕೂಲಕ್ಕಾಗೆ ಮೀಸಲಾಗಿದೆ.
ಚಿಪ್ಪಗಿರಿಯ ಶ್ರೀ ವಿಜಯದಾಸರ ಕಟ್ಟೆಗೆ ನಾಲ್ಕು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಂಪೂರ್ಣ ಬೆಳ್ಳಿಯ ಕವಚ ನಿರ್ಮಾಣ, ಪಾದಯಾತ್ರೆಯ ಮೂಲಕ ಹಣ ಸಂಗ್ರಹಿಸಿ, ಗುಜರಾತ್ ಭೂಕಂಪ ನಿಧಿಗೆ ನೀಡಿದ್ದು, ಸುನಾಮಿ ದುರಂತದ ಸಂದರ್ಭದಲ್ಲಿ ಶ್ರಿಮಠದಿಂದ ನಾಗಪಟ್ಟಣಮ್‍ನಲ್ಲಿ ಒಂದು ತಿಂಗಳ ಕಾಲ ಪ್ರತಿದಿನ ಐದು ಸಾವಿರ ಜನಕ್ಕೆ ಊಟದ ವ್ಯವಸ್ಥೆ, ಉಚಿತ ವೈದ್ಯಕೀಯ ವ್ಯವಸ್ಥೆ ಹಾಗೂ ಸೀರೆ ಪಂಚೆಗಳ ವಿತರಣೆ – ಹೀಗೆ ಸಾಮಾಜಿಕವಾಗಿ ಶ್ರೀಮಠ ತೊಡಗಿಕೊಂಡು ರಾಯರ ಅನುಗ್ರಹರಕ್ಷೆಯನ್ನು ಭಕುತರ ಮನ-ಮನೆಗಳಿಗೆ ತಲುಪಿಸಿದ ಕೀರ್ತಿ ಶ್ರೀಶ್ರೀಸುಶಮೀಂದ್ರತೀರ್ಥರದ್ದು.
ವಿದ್ಯಾಮಠ:
ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನವಾದ, ಶ್ರೀರಾಘವೇಂದ್ರಗುರುಸಾರ್ವಭೌಮರ ಮಠಕ್ಕೆ ಇರುವ ಮತ್ತೊಂದು ಹೆಸರು – ವಿದ್ಯಾಮಠ ಎಂದು. ಅದಕ್ಕೆ ತಕ್ಕಂತೆ ಈ ವೇದಾಂತಸಾಮ್ರಾಜ್ಯವನ್ನಾಳಿದ ಎಲ್ಲಾ ಯತೀರ್ಶವರರೂ ವೇದಾಂತವಿದ್ಯೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಶ್ರೀಶ್ರೀಸುಶಮೀಂದ್ರತೀರ್ಥರೂ ಸಹ ಈ ದಿಕ್ಕಿನಲ್ಲಿ ಅನೇಕ ರೀತಿಯಾದ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.
ಪ್ರಾಚೀನಕಾಲದಿಂದಲೂ ನಡೆದು ಬಂದ ಸಂಸ್ಕೃತ ಶಾಸ್ತ್ರಾಭ್ಯಾಸಕ್ಕಾಗಿ ಇರುವ ಶ್ರೀಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠಕ್ಕೆ 60 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಶಾಲಾ ಕೊಠಡಿಗಳನ್ನು ವಿದ್ಯಾರ್ಥಿ ನಿಲಯವನ್ನು ನಿರ್ಮಾಣ ಮಾಡಿ ಮುನ್ನೂರಕ್ಕೂ ಹೆಚ್ಚು  ವಿದ್ಯಾರ್ಥಿಗಳಿಗೆ ಸಂಸ್ಕೃತ ವಿದ್ಯಾಭ್ಯಾಸವನ್ನು ಮಾಡಲು ವ್ಯವಸ್ಥೆ ಮಾಡಿದರು. ಅಷ್ಟೇ ಅಲ್ಲದೆ, ರಾಷ್ಟ್ರದ ಮುಖ್ಯ ನಗರಗಳಾದ ಬೆಂಗಳೂರು, ಚೆನ್ನೈ, ಹೈದರಾಬಾದ್, ಪೂನಾ, ಬಾಂಬೆ ಮುಂತಾದ ಕಡೆಗಳಲ್ಲಿ ಈ ವಿದ್ಯಾಪೀಠದ ಶಾಖೆಗಳನ್ನು ಪ್ರೋತ್ಸಾಹಿಸಿ ನಡೆಸಿದರು.
ಪಂಡಿತಪೋಷಣೆ ಶ್ರೀಗಳವರಲ್ಲಿದ್ದ ಸ್ವಾಭಾವಿಕ ಗುಣ. ಪಂಡಿತರು ಕಂಡರೆ, ಅವರ ಶ್ರಮ-ಸಾಧನೆಗಳನ್ನು ಕೊಂಡಾಡುತ್ತಾ ಪಂಡಿತರ ಹಸ್ತ ತುಂಬುವಷ್ಟೂ ಸಂಭಾವನೆ ನೀಡುವುದು ಅವರ ಔದಾರ್ಯಕ್ಕೆ ಸಾಕ್ಷಿ.  ಪೀಠಾಧೀಶ್ವರರಾದರೂ ಇಂತಹ ಸರಳ ವ್ಯಕ್ತತ್ವ ಕಾಣುವುದು ಅಪರೂಪ.
ಶ್ರೀಸುಶೀಲೇಂದ್ರತೀರ್ಥರ ಕಾಲದಲ್ಲಾರಂಭವಾದ ಶ್ರೀಮತ್ಸಮೀರಸಮಯಸಂವರ್ಧಿನೀ ವಿದ್ವತ್ಸಭೆಯನ್ನು ಇನ್ನೂ ಹೆಚ್ಚಿನ ವೈಭವದಿಂದ ನೆರೆವೇರಿಸಲು ಆರಂಭಿಸಿದರು. ಚಾಚೂ ತಪ್ಪದೇ ಪ್ರತಿ ವರ್ಷವೂ ಈ ಸಭೆಯು ನಡೆದು – ತ್ರಿಮತಸ್ಥರಿಗೂ ಜ್ಞಾನಸುಧೆಯ ರಸದೌತಣವಾಗುತ್ತಿತ್ತು.
ಗ್ರಂಥಪ್ರಕಾಶನ:
ಶ್ರೀಸುಶಮೀಂದ್ರತೀರ್ಥರ ಕಾಲವು ಶ್ರೀಮಠದ ಇತಿಹಾಸದಲ್ಲೇ ಗ್ರಂಥಪ್ರಕಾಶನ ಕಾರ್ಯದಲ್ಲಿ ದಾಖಲೆಯನ್ನು ಬರೆದ ಕಾಲ. ಹಲವಾರು ಪ್ರಾಚೀನ ಹಸ್ತಪ್ರತಿ, ಗ್ರಂಥಗಳನ್ನು ಸಂಗ್ರಹಿಸಿ, ಪ್ರಕಟಿಸುವ ಯೋಜನೆಗಳನ್ನು ಮಾಡುತ್ತಾ ಸುಮಾರು 200ಕ್ಕೂ ಹೆಚ್ಚು ಗ್ರಂಥಗಳನ್ನು ಶ್ರೀಮಠವು ಪ್ರಕಟಗೊಳಿಸಿದೆ. 2004ರ ಶ್ರೀರಘುನಂದನತೀರ್ಥರ ಪಂಚಶತಮಾನೋತ್ಸವ ಆರಾಧನಾ ಮಹೋತ್ಸವದಂದು ಏಕಕಾಲಕ್ಕೆ 101 ಗ್ರಂಥಗಳನ್ನು ಪ್ರಕಟಗೊಳಿಸಿ ದಾಖಲೆಯನ್ನು ಬರೆದದ್ದು ಶ್ರೀಸುಶಮೀಂದ್ರತೀರ್ಥರ ನೇತೃತ್ವದಲ್ಲಿ. ಪ್ರಾಚೀನ ಸಂಸ್ಕøತ ಗ್ರಂಥಗಳ ಜೊತೆಗೆ, ದಾಸಸಾಹಿತ್ಯಕ್ಕೆ ಸಂಬಂಧಪಟ್ಟಂತಹ ಅನೇಕ ಕೃತಿಗಳನ್ನು ಹೊರತಂದಿದೆ. ಶ್ರೀಮಠದ ಪೂರ್ವೀಕ ಗುರುಗಳಾದ ಶ್ರೀಜಯತೀರ್ಥರಿಂದ ರಚಿತವಾದ ಶ್ರೀಮನ್ನ್ಯಾಯಸುಧಾ ಗ್ರಂಥಕ್ಕೆ ಸುಮಾರು ಇಪ್ಪತ್ತೈದು ಟಿಪ್ಪಣಿಗಳನ್ನೊಳಗೊಂಡ ಇಪ್ಪತ್ತೈದು ಸಂಪುಟಗಳನ್ನು ಮುದ್ರಿಸಿಲಾಗಿದೆ. ಅಷ್ಟೇ ಅಲ್ಲದೆ, ಶ್ರೀಗಳವರ ಆಜ್ಞೆಯಂತೆ, ಮಠಭೇಧ ವಿಲ್ಲದೆ ಯೋಗ್ಯ ಶಾಸ್ತ್ರಾಭ್ಯಾಸಿಗಳಿಗೆ ಈ ಬೃಹತ್ ಪುಸ್ತಕಗಳನ್ನು ಉಚಿತವಾಗಿ ನೀಡುವ ವ್ಯವಸ್ಥೆಯನ್ನು ಮಾಡಲಾಗಿತ್ತು.
34ವರ್ಷಗಳಿಂದ ಪ್ರಕಟಗೊಳ್ಳುತ್ತದ್ದ ಶ್ರೀ ಗುರುಸಾರ್ವಭೌಮ ಎನ್ನುವ ಕನ್ನಡ ಮಾಸಪತ್ರಿಕೆಗೆ ಹೊಸ ರೂಪವನ್ನು ಕೊಟ್ಟು 10 ಸಾವಿರಕ್ಕೂ ಹೆಚ್ಚು ಚಂದಾದಾರರನ್ನು ಹೊಂದುವಂತಾಯಿತು. ದಾಸಸಾಹಿತ್ಯಕ್ಕಾಗಿ ವಿಜಯಸಂಪದ ಎನ್ನುವ ಮಾಸಪತ್ರಿಕೆಯನ್ನು ಪ್ರಾರಂಭ ಮಾಡಿದ್ದರು ಶ್ರೀಸುಶಮೀಂದ್ರತೀರ್ಥ ಶ್ರೀಪಾದರು.
ರಾಯರ ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನೆ:
ಕಲಿಯುಗ ಕಲ್ಪತರು, ಕಾಮಧೇನು ಶ್ರೀ ರಾಘವೇಂದ್ರ ಗುರುಸಾರ್ವಭೌಮರು ಮಂತ್ರಾಲಯ ಕ್ಷೇತ್ರದಲ್ಲಿ ಸಜೀವ ವೃಂದಾವನರಸ್ಥರಾಗಿ ಇಂದಿಗೂ ಭಕುತಿಯಿಂದ ಬಂದ ಭಕುತರ ಆರಾಧಕರಾಗಿದ್ದಾರೆ. ಆ ಭಕುತರ ನೋವಿನ ನಿವಾರಕರಾಗಿದ್ದಾರೆ. ಇಷ್ಟಾರ್ಥ ಫಲದಾಯಕರಾಗಿದ್ದಾರೆ. ರಾಯರ ಭಕುತ ವೃಂದಗಣ ದೇಶದ ನಾನಾ ಭಾಗಗಳಲ್ಲಿ ವಾಸವಾಗಿದ್ದು ಎಲ್ಲರೂ ನಿರಂತರವಾಗಿ ಮಂತ್ರಾಲಯ ಕ್ಷೇತ್ರ ಯಾತ್ರೆ ಮಾಡಲು ಕಷ್ಟದ ವಿಚಾರ. ಈ ಸಮಸ್ಯೆಯನ್ನರಿತ, ರಾಯರ ಕರುಣೆಯ ಕಂದ ಶ್ರೀಸುಶಮೀಂದ್ರತೀರ್ಥರು ದೇಶದ ಉದ್ದಗಲಕ್ಕೆ ಸಂಚರಿಸಿ, ಭಕುತ ವೃಂದಗಳನ್ನು ಒಂದುಗೂಡಿಸಿ, ಅಲ್ಲಲ್ಲಿ ರಾಯರ ಮೃತ್ತಿಕಾ ವೃಂದಾವನಗಳನ್ನು ಪ್ರತಿಷ್ಠಾಪಿಸಿದ್ದಾರೆ. ಕರ್ನಾಟಕ, ತಮಿಳ್ನಾಡು, ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶವೇ ಮೊದಲಾಗಿ, ಉತ್ತರಭಾರತದಲ್ಲೂ ಸಹ ರಾಯರ ಅಧಿಷ್ಠಾನವನ್ನು ಪ್ರತಿಷ್ಠೆ ಮಾಡಿ, ಅಲ್ಲಲ್ಲಿನ ಭಕುತರು ರಾಯರನ್ನು ನಿತ್ಯದಲ್ಲೂ ಸೇವಿಸುವ, ರಾಯರ ಕರುಣಾಶ್ರಯದಲ್ಲಿರುವ ಅವಕಾಶವನ್ನು ಒದಗಿಸಿ ಸಮಾಜದ ಧರ್ಮ ಮಾರ್ಗ ನಡೆಗೆ ದಾರಿಯನ್ನು ತೋರಿಸಿದ್ದಾರೆ. ಈ ರೀತಿಯಾದ ರಾಯರ ಪ್ರತಿಷ್ಠಾಪನಾ ಪರ್ವವು ಶತಕವನ್ನು ಮುಟ್ಟಿರುವುದು ‘ನ ಭೂತೋ ನ ಭವಿಷ್ಯತಿ’ ಎಂಬ ದಾಖಲೆಯೇ ಸರಿ.
ಬೇಡಿದ್ದನ್ನು ಅನುಗ್ರಹಿಸುವ ರಾಯರ ಅನುಗ್ರಹ ಪಾತ್ರರು:
ಶ್ರೀಸುಶಮೀಂದ್ರತೀರ್ಥರು ರಾಯರ ಪರಮಭಕ್ತರು. ರಾಯರು ಇವರಿಗೆ ಆಪ್ತರು. ರಾಯರ ನಾಮಸ್ಮರಣೆಯೇ ಶ್ರೀಗಳ ಶಕ್ತಿ. ಮುಗ್ಧ ಮಂದಹಾಸ ಶ್ರೀಸುಶಮೀಂದ್ರರ ಚಿಹ್ನೆ. ಗುರುಗಳ ಮಂದಸ್ಮಿತ ವದನ ಎಲ್ಲ ಭಕುತರ ಕಷ್ಟಕಾರ್ಪಣ್ಯಗಳನ್ನು ಒಮ್ಮೆಲೇ ದೂರಗೊಳಿಸುವ ಸಾಧನ. ಹೀಗೆ ರಾಯರ ಅನುಗ್ರಹ ಬಲದಿಂದ ಶ್ರೀಗಳವರು ಅನುಗ್ರಹಿಸಿದ ಮಂತ್ರಾಕ್ಷತೆ, ಮಾಡಿದ ಆಶೀರ್ವಾದ ಫಲಪ್ರದ. ಅನೇಕ ಭಕ್ತರಿಗೆ ಮಂತ್ರಾಕ್ಷತಾಬಲದಿಂದ, ಗುರುಗಳು ನುಡಿದ ಆಶೀರ್ವಾದದ ಮಾತಿನಿಂದ ಆದ ಅನೇಕ ಅನುಭವಗಳುಂಟು. ಈ ಅನುಭವಗಳು ಜಾತಿ ಮತ ಭೇದವಿಲ್ಲದೆ ಎಲ್ಲಾ ಜನರಲ್ಲೂ ಆದದ್ದುಂಟು. ವಿಚಿತ್ರವಾದ ಈ ಅನುಭವಗಳೆಲ್ಲವನ್ನೂ ‘ಗುರುರಾಜರು ನಿಂತು ನಡೆಸಿದ್ದು’, `ರಾಯರು ಮಾಡಿಸಿದ್ದು’ ಎಂದೇ ಹೇಳುತ್ತಿದ್ದರು ಶ್ರೀ ಸುಶಮೀಂದ್ರ ಗುರುಗಳು.
ಅನುಗೃಹೀತರಾದ ಭಕುತರ ಪಟ್ಟಿಯನ್ನು ಹೇಳಬೇಕಾದರೆ, ಘಟನೆಗಳನ್ನು ತಿಳಿಸಬೇಕಾದರೆ, ಅದೇ ಒಂದು ಬೃಹತ್ ಗ್ರಂಥವಾದೀತು. ಒಟ್ಟಿನಲ್ಲಿ ಶ್ರೀಸುಶಮೀಂದ್ರತೀರ್ಥರು ಅನುಗ್ರಹಿಸಿದೆ ರಾಯರ ಮಂತ್ರಾಕ್ಷತಾ ಬಲದಿಂದ ಎಷ್ಟೋ ಭಕುತರ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಿವೆ, ಮದುವೆಯಾಗದಿದ್ದವರಿಗೆ ಮದುವೆಯಾಗಿದೆ, ಒಳ್ಳೆಯ ಸಂತಾನಾಪೇಕ್ಷೆಯುಳ್ಳವರಿಗೆ ಸಂತಾನವಾಗಿವೆ, ವ್ಯವಹಾರದಲ್ಲಿ ಸಮಸ್ಯೆ ಇದ್ದವರಿಗೆ ಅದರ ನಿವಾರಣೆಯಾಗಿ ಅಭಿವೃದ್ಧಿಯಾಗಿದೆ. ಅಷ್ಟೇ ಅಲ್ಲ, ಶ್ರೀಗಳ ಅಂತಃಸತ್ವವನ್ನರಿಯದ ಹಾಗೂ ಶ್ರೀಗಳವರನ್ನು ಪರೀಕ್ಷಿಸಲು ಬಂದ ಕೆಲವು ಮಂದಿಗಂತೂ ಬೂದಿ ಮುಚ್ಚಿದ ಕೆಂಡದಂತಿದ್ದ ಶ್ರೀಗಳ ನಿಜವಾದ ಪರಿಚಯವಾಗಿ, ಅವರ ದುರಹಂಕಾರ ಅಡಗಿದೆ.
ಮಳೆಇಲ್ಲದ ಕಡೆ ಶ್ರೀಗಳವರ ಪ್ರಾರ್ಥನೆಯಿಂದ ಉತ್ತಮ ಮಳೆಯಾದ ಹಾಗೂ ಕಾರ್ಯಕ್ರಮದ ಸಮಯದಲ್ಲಿ ಮಳೆರಾಯ ಅಡ್ಡಿಪಡಿಸುವ ಸಂಧರ್ಭಬಂದಾಗ ಶ್ರೀಗಳವರ ಪ್ರಾರ್ಥನೆಯಿಂದ ವರುಣದೇವ ಮಳೆಯನ್ನು ತಡೆಹಿಡಿದ ಘಟನೆಗಳು ಬೇಕಾದಷ್ಟಿವೆ. ಇದರಿಂದ ಭಕುತರು ಇವರನ್ನು ‘ಮಳೆಸ್ವಾಮಿ’ ಎಂತಲೇ ಕರೆಯುತ್ತಿದ್ದುದುಂಟು. 
ಮಠ-ಮಠಗಳ ಬಾಂಧವ್ಯ:`
ಶ್ರೀಸುಶಮೀಂದ್ರತೀರ್ಥರು ಸ್ವಾಭಾವಿಕವಾಗಿಯೇ ಪ್ರೀತಿ, ವಿಶ್ವಾಸ, ಅಭಿಮಾನ, ಅಂತಃಕರಣವುಳ್ಳಂತಹ ಸುಗುಣಶಾಲಿಗಳು. ತಮ್ಮ ಗುರುಗಳು ಹಾಕಿಕೊಟ್ಟ ಮಾರ್ಗವನ್ನೇ ಅನುಸರಿಸುತ್ತಾ ನಾಡಿನ ಎಲ್ಲಾ ಮಠಾಧೀಶರೊಂದಿಗೂ ಅನನ್ಯವಾದ ಸ್ನೇಹ, ಸೌಹಾರ್ದವನ್ನು ಹೊಂದಿದ್ದರು. ಶ್ರೀವ್ಯಾಸರಾಜ ಮಹಾ ಸಂಸ್ಥಾನದ ಶ್ರೀವಿದ್ಯಾಪಯೋನಿಧಿತೀರ್ಥರು, ಶ್ರೀವಿದ್ಯಾವಾಚಸ್ಪತಿತೀರ್ಥರೊಂದಿಗಿನ ಉತ್ತಮ ಬಾಂಧವ್ಯ ಅಣ್ಣತಮ್ಮಂದಿರಂತೆ ಇತ್ತು. ಶ್ರೀಪಾದರಾಜ ಮಠದ ಶ್ರೀವಿಜ್ಞಾನನಿಧಿತೀರ್ಥರಂತೂ ಶ್ರೀಸುಶಮೀಂದ್ರತೀರ್ಥರಿಗೆ ಅಚ್ಚುಮೆಚ್ಚು. ಮುಳಬಾಗಿಲ ಶ್ರೀಪಾದರಾಜ ಮಠ ಶ್ರೀಗಳವರಿಗೆ ತವರು ಮನೆಯಂತಿತ್ತು. ಉತ್ತರಾದಿ ಮಠದ ಶ್ರೀಸತ್ಯಪ್ರಮೋದ ತೀರ್ಥರು ಹಾಗೂ ಶ್ರೀಸತ್ಯಾತ್ಮತೀರ್ಥರಲ್ಲೂ ಉತ್ತಮ ಸಂಬಂಧವಿತ್ತು. ಶ್ರೀಗಳವರು ಉಡುಪಿಯ ಶ್ರೀಕೃಷ್ಣನ ಪ್ರೀತಿಪಾತ್ರರು, ಶ್ರೀಕೃಷ್ಣ ಶ್ರೀಗಳವರ ಭಕ್ತಿಪಾತ್ರ. ಆದ್ದರಿಂದ ಉಡುಪಿಯ ಅಷ್ಟಮಠಗಳ ಯತಿಗಳಿಗೂ ಶ್ರೀಸುಶಮೀಂದ್ರತೀರ್ಥರಲ್ಲಿ ಅತ್ಯತ್ತಮ ವಿಶ್ವಾಸ. ಹೆಚ್ಚಾಗಿ, ಜ್ಞಾನಿವರೇಣ್ಯರೆಂದೆನಿಸಿದ ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರಿಗೆ ಶ್ರೀಸುಶಮಿಂದ್ರತೀರ್ಥರೆಂದರೆ ಅತ್ಯಂತ ಪ್ರೀತಿ. ಒಮ್ಮೆ ಸಮಾರಂಭವೊಂದರಲ್ಲಿ, ಶ್ರೀವಿದ್ಯಾಮಾನ್ಯ ಶ್ರೀಪಾದರು ಶ್ರೀಸುಶಮೀಂದ್ರತೀರ್ಥರನ್ನೇ ದಿಟ್ಟಿಸಿ ನೋಡುತ್ತಿದ್ದರು. ಸಮಾರಂಭದ ಬಳಿಕ ಶಿಷ್ಯರು ಕೇಳದಾಗ, ಶ್ರೀವಿದ್ಯಾಮಾನ್ಯರು ಹೇಳಿದ್ದು ಹೀಗೆ – “ನಾನು ಇಂದು ಶ್ರೀಸುಶಮೀಂದ್ರರಲ್ಲಿ ರಾಯರನ್ನು ಕಾಣುತ್ತಿದ್ದೆ”. ಜ್ಞಾನಿಗಳ ಆಂತರ್ಯ ಜ್ಞಾನಿಗಳಗೆ ಮಾತ್ರ ಅರಿಯಲು ಸಾಧ್ಯ. ಶ್ರೀವಿದ್ಯಾಮಾನ್ಯ ಶ್ರೀಪಾದರು ತಮ್ಮ ಅಂತ್ಯಕಾಲದಲ್ಲಿ ಆರೋಗ್ಯಸರಿಯಿಲ್ಲದಿದ್ದಾಗ, ಶ್ರೀಸುಶಮೀಂದ್ರತೀರ್ಥರನ್ನು ನೋಡುವ ಹಂಬಲ ವ್ಯಕ್ತಪಡಿಸಿದರಂತೆ. ಅದರಂತೆ ಶ್ರೀಸುಶಮೀಂದ್ರತೀರ್ಥರು ಶ್ರೀವಿದ್ಯಾಮಾನ್ಯರನ್ನು ಭೇಟಿಯಾದಾಗ ಶ್ರೀಸುಶಮೀಂದ್ರರ ಹಸ್ತವನ್ನು ಹಿಡಿದು ತಮ್ಮ ಎದೆಗೆ ಸವರಿದರಂತೆ. ಜ್ಞಾನಿಗಳ ಈ ರೀತಿಯ ವರ್ತನೆಯ ಅಂತರಂಗ ಪಾಮರರಾದ ನಮಗೆ ಬಹಿರಂಗವಾಗುವುದ ಬಹಳವೇ ಕಷ್ಟ.
ವಾಮನರೂಪದ ತ್ರಿವಿಕ್ರಮ ಸಾಮಥ್ರ್ಯದ ಸನ್ಯಾಸಿಗಳು ಪೇಜಾವರಮಠಾಧೀಶರಾದ ಶ್ರೀವಿಶ್ವೇಶತೀರ್ಥಶ್ರೀಪಾದರು. ಇವರು ಮತ್ತು ಶ್ರೀಸುಶಮೀಂದ್ರತೀರ್ಥರಲ್ಲಿ ಅತ್ಯಂತವಾದ ಸ್ನೇಹ. ಉಭಯಶ್ರೀಪಾದರೂ ತಮ್ಮ ತಮ್ಮ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ತಪ್ಪದೇ ಉಪಸ್ಥಿತರಿರುತ್ತಿದ್ದುದೇ ಇದಕ್ಕೆ ಸಾಕ್ಷಿ. ಫಲಿಮಾರು ಮಠದ ಶ್ರೀವಿದ್ಯಾದೀಶ ತೀರ್ಥರು ಶ್ರೀಸುಶಮೀಂದ್ರತೀರ್ಥರ ಅತ್ಯಂತ ಅಭಿಮಾನಿ ಎಂದರೆ ತಪ್ಪಾಗಲಾರದು.
ಬೃಂದಾವನ ಪ್ರವೇಶ:
ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀರಾಘವೇಂದ್ರ ಸ್ವಾಮಿ ಮಠ ಜಾತಿ-ಮತ-ಪಂಥವಿಲ್ಲದಂತೆ ಎಲ್ಲರನ್ನೂ ಪೊರೆಯುತ್ತಾ ಬಂದಿರುವ, ಸಮಾಜಮುಖಿಯಾದ ವಿದ್ಯಾಮಠ. ಇಂತಹ ಮಠದ ಪೀಠಾಧೀಶ್ವರರಾಗುವುದ ಸಾಮಾನ್ಯದ ಸಂಗತಿಯೇನಲ್ಲ. ಹಾಗಿದ್ದರೂ ತಮ್ಮ 25 ವರುಷಗಳ ಸಂನ್ಯಾಸ ಜೀವನವನ್ನು ಭಗವಂತವನ ಪೂಜಾತ್ಮಕವಾಗಿ ಯಶಸ್ವಿಯಾಗಿ ನಿರ್ವಹಿಸಿದ ಸಾಧನೆ ಶ್ರೀಸುಶಮೀಂದ್ರತೀರ್ಥರದು.
ಶ್ರೀಸುಶಮಿಂದ್ರತೀರ್ಥರು ಶ್ರೀಮಠದ ಉತ್ತಮ ವಿದ್ವಾಂಸರಾದ, ಭಾಗವತಪ್ರವಚನಚತುರರಾದ, ಶ್ರೀಪೂರ್ಣಪ್ರಜ್ಞವಿದ್ಯಾಪೀಠದ ಅಧ್ಯಾಪಕರಾಗಿದ್ದ ವಿದ್ವಾನ್ ಗುರುವೇಂಕಾಟಾಚಾರ್ಯರಿಗೆ ಸನ್ಯಾಸಾಶ್ರಮವನ್ನು ಪ್ರದಾನ ಮಾಡಿ ಶ್ರೀಸುವಿದ್ಯೇಂದ್ರತೀರ್ಥರೆಂದು ನಾಮಕರಣ ಮಾಡಿದರು. ಶ್ರೀಸುವಿದ್ಯೇಂದ್ರತೀರ್ಥರು ತಮ್ಮ ಗುರುಗಳ ಸೇವೆಯನ್ನು ಮಾಡುತ್ತಾ, ಮಧ್ವಮತದ ಪ್ರಚಾರವನ್ನು ಮಾಡುತ್ತಾ, ಶ್ರೀಭಾಗವತ ಪ್ರವಚನವನ್ನು ಮಾಡುತ್ತಿರುವುದು ಒಂದು ದೊಡ್ಡ ದಾಖಲೆಯೇ ಸರಿ.
ಶ್ರೀಸುಶಮೀಂದ್ರತೀರ್ಥರಿಗೆ ತಮ್ಮ ವಯೋ ಸಹಜಧರ್ಮದಿಂದಾಗಿ ದೇಹಾಲಸ್ಯವಾದಾಗ, ಅವಿಚ್ಛಿನವಾದ ಪರಂಪರೆಗೂ ಶ್ರೀ ಮೂಲರಾಮರ ಪೂಜೆಗೂ ಕುಂದುಂಟಾಗಬಾರದೆಂದು ಯೋಚಿಸಿ ಶ್ರೀ ಗುರುರಾಜರಲ್ಲಿ ಪ್ರಾರ್ಥಿಸಿ, ಶ್ರೀರಾಯರ ಸೂಚನೆಯಂತೆ ತಮ್ಮ ಬಳಿಯಲ್ಲೇ ಇದ್ದುಕೊಂಡು ತಮ್ಮ ಆಜ್ಞಾನುಸಾರ ಶ್ರೀ ರಾಯರ ಸೇವೆಗೈಯುತ್ತಿದ್ದ ನಂಜನಗೂಡು ಸುಶೀಲೇಂದ್ರಾಚಾರ್ಯರಿಗೆ ಆಶ್ರಮ ಪ್ರದಾನ ಮಾಡಿ ಶ್ರೀಸುಯತೀಂದ್ರತೀರ್ಥರೆಂದು ನಾಮಕರಣ ಮಾಡಿ,  ಗುರೂಪದೇಶ, ಪ್ರಣವೋಪದೇಶವನ್ನು ನೀಡಿ ವೇದಾಂತಸಾಮ್ರಾಜ್ಯಪಟ್ಟಾಭಿಷೇಕವನ್ನು ಮಾಡಿ, ತಮ್ಮ ಉತ್ತರಾಧಿಕಾರಿಗಳೆಂದು ಘೋಷಿಸಿದರು.
ಕಾಲಕ್ರಮೇಣ ಭಗವಂತನ ಸಂಕಲ್ಪದಂತೆ ಶ್ರೀಗಳವರ ದೇಹಸ್ಥಿತಿಯು ಕ್ಷೀಣಿಸಿ ಚಿಕೆತ್ಸೆಗಾಗಿ ಬೆಂಗಳೂರಿಗೆ ಬರಬೇಕಾಯಿತು.   ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ನಡೆದ ಘ್ರಟನೆಗಳನ್ನು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರುಗಳು ಈಗಲೂ ಸಹ ಪುಳಕಿತರಾಗಿ ಸ್ಮರಿಸುತ್ತಾರೆ. ಶ್ರೀಗಳು ಒಮ್ಮೊಮ್ಮೆ ನಿದ್ರಾವಸ್ಥೆಯಲ್ಲಿದ್ದಂತೆ ಕಂಡರೂ ಅವರ ಕೈಗಳು ಏನನ್ನೋ ಅರ್ಚಿಸುತ್ತಿದ್ದವು; ನಂತರ ಮಂಗಳಾರತಿ ಮಾಡಿದರು; ಕೈಮುಗಿದರು; ಇದನ್ನು ಕಂಡ ವೈದ್ಯರಿಗೆ ಅಚ್ಚರಿ; ಹತ್ತಿರದಲ್ಲಿದ ಸಿಬ್ಬಂದಿ ಮಂತ್ರಾಲಯಕ್ಕೆ ದೂರವಾಣಿ ಕರೆಮಾಡಿ ವಿಚಾರಿಸಿದರೆ ಅಲ್ಲಿ ಶ್ರೀಸುಯತೀಂದ್ರರು ಶ್ರೀ ಮೂಲರಾಮನಿಗೆ ಅರ್ಚನೆ ಮಾಡುತ್ತಿದ್ದಾರೆ. ಮಂಗಳಾರತಿ ಮಾಡುತ್ತಿದ್ದಾರೆ. ಒಂದು ಕ್ಷಣವೂ ವ್ಯತ್ಯಾಸವಿಲ್ಲದಂತೆ ಈ ಕಾರ್ಯ ಜರುಗಿದೆ. ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ!
ಆ ದಿನ ಬಂದೇ ಬಿಟ್ಟಿತು. ಶ್ರೀ ಗುರುರಾಜರ ಕರುಣೆಯ ಕಂದ, ಮುಗ್ಧ ಮನಸ್ಸಿನ ಸಂತ, ತಮ್ಮ ನಗು ಮೊಗದಿಂದಲೇ ಭಕ್ತರ ಕಷ್ಟಗಳನ್ನು ಕಳೆದ ಯತಿ,  ಪರಿಶುದ್ಧ ಹೃದಯೀ, ಶುದ್ದಾಂತ ಕರುಣೀ,  ಶ್ರೀರಾಯರ ಆಜ್ಞೆಯಂತೆ ಸಮಾಜದ ಉನ್ನತಿಗಾಗಿ ತಮ್ಮ ತಪಃಶ್ಶಕ್ತಿಯೇ ಮೊದಲಾದ ಸರ್ವಸ್ವವನ್ನೂ ಧಾರೆ ಎರೆದ ಶ್ರೀ ಸುಶಮೀಂದ್ರರು ಧ್ಯಾನಾವಸ್ಥೆಯಲ್ಲಿದ್ದಾಗಲೇ   ವಿರೋಧೀನಾಮ ಸಂವತ್ಸರದ ಚೈತ್ರ ಬಹುಳ ಬಿದಿಗೆ ದಿನಾಂಕ 11-04-2009 ರಂದು ಹರಿಧ್ಯಾನ ಪರರಾದರು. ಕಾರ್ಮೋಡದಂತೆ ಭಕ್ತರ ಕಷ್ಟಕಾರ್ಪಣ್ಯಗಳನ್ನು ತಮ್ಮ ಮುಗ್ದನಗುವಿನ ಕಿರಣಗಳಿಂದಲೇ ಓಡಿಸುತ್ತಿದ್ದ ಶ್ರೀಸುಶಮೀಂದ್ರರೆಂಬ ದಿನಕರ ಅಸ್ತಂಗತನಾದನು.
ಮಂತ್ರಾಲಯದ ದಿವ್ಯ ಸನ್ನಿಧಾನದಲ್ಲಿ ಶ್ರೀಸುಶಮೀಂದ್ರತೀರ್ಥರ ತಾತ್ಕಾಲಿಕ ಬೃಂದಾವನ ಸ್ಥಾಪನೆಯನ್ನು ಮಾಡಿ, ಶ್ರೀಗಳ ಪ್ರಥಮ ಮಹಾಸಮಾರಾಧನೆಯನ್ನು ನೆರವೇರಿಸುತ್ತಾ ಅವರ ಶಿಷ್ಯರಾದ ಶ್ರೀಸುಯತೀಂದ್ರತೀರ್ಥರು ಶ್ರೀಗಳ ಮೇಲೆ ಚರಮಶ್ಲೋಕವನ್ನು ರಚನೆಮಾಡಿದರು.
ಸುಧೀಜನ ಸಮಂದಾರಂ ಸುಧೀಂದ್ರ ಸುತ ಸುಪ್ರಿಯಮ್ |
ಸುಶುಮೀಂದ್ರ ಗುರುಂ ವಂದೇ ಸುಜಯೀಂದ್ರ ಕರೋದ್ಭವಮ್ ||
ಇತ್ತ ಶ್ರೀಸುವಿದ್ಯೇಂದ್ರತೀರ್ಥರೂ ಸಹ ತಮ್ಮ ಗುರುಗಳ ಮೇಲೆ ಚರಮಶ್ಲೋಕವನ್ನು ರಚಿಸಿದರು.
ಸುಜಯೀಂದ್ರಾಬ್ಧಿಸಂಭೂತಮ್ ಸುಪ್ರಜಾತಾಪವಾರಣಮ್  |
ಸುಹಾಸಕಿರಣೋಪೇತಮ್ ಸುಶಮಿಂದ್ರವಿಧುಮ್ ಭಜೇ ||
ಕಳಾಕರ್ಷಣ:
ಕಳಾಕರ್ಷಣವೆಂದರೆ ಯತಿಗಳ ದೇಹಾಂತ್ಯವಾದ ಸಮಯದಲ್ಲಿ ತಾತ್ಕಾಲಿಕ ಬೃಂದಾವನವನ್ನು ಸ್ಥಾಪಿಸಿರುತ್ತಾರೆ. ಸ್ವಲ್ಪ ಕಾಲವಾದ ಮೇಲೆ ವಿಧಿಪೂರ್ವಕವಾಗಿ ಸ್ಥಿರ ಬೃಂದಾನವನ್ನು ಪ್ರತಿಷ್ಠಾಪಿಸಿ ಪೂಜಾದಿಗಳಿಗೆ ವ್ಯವಸ್ಥೆ ಮಾಡಲಾಗುತ್ತದೆ. ಸಂಪ್ರದಾಯದಂತೆ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತಿದ್ದಾಗ, ಇತಿಹಾಸದಲ್ಲೇ ಅಪರೂಪವಾದಂತಹ ಪ್ರವಾಹವು ಮಂತ್ರಾಲಯವನ್ನು ಅಪ್ಪಳಿಸಿತು. ಮೂರು ದಿನಗಳ ಕಾಲ ಸುಮಾರು 12-15 ಅಡಿಯಷ್ಟು ನೀರು ಮಠವನ್ನು ಆವರಿಸಿತ್ತು.  ಪವಾಡದ ವಿಚಾರವೆಂದರೆ ಯಾವ ಭಕ್ತರ ಪ್ರಾಣಹಾನಿಯೂ ಆಗಿರಿಲಿಲ್ಲ. ತಾತ್ಕಾಲಿಕ ಕಟ್ಟಡವಿದ್ದರೂ, ತಾತ್ಕಾಲಿಕ ಬೃಂದಾವನ ವಿದ್ದರೂ ಶ್ರೀಸುಶಮೀಂದ್ರತೀರ್ಥರ ದೇಹವನ್ನು ಭೂ ಸ್ಥಾಪನೆಗೈದ ಸ್ಥಳವಂತೂ ಯಾವ ವಿಕಾರವನ್ನೂ ಹೊಂದಿರಲಿಲ್ಲ. ಮುಂದೆ, ದಿನಾಂಕ 04-11-2009ರಂದು ಶುಭ ಮೂಹೂರ್ತದಲ್ಲಿ ಶ್ರೀ ಸುಶಮೀಂದ್ರತೀರ್ಥರ ಬೃಂದಾವನ ಕಳಾಕರ್ಷಣ ಮಹೋತ್ಸವವು ಪ್ರಾರಂಭವಾಯಿತು. ವೈದಿಕ ವಿಧಿ ವಿಧಾನ ಪೂರ್ವಕವಾಗಿ ಕುಂಭದಲ್ಲಿ ಶ್ರೀ ಸುಶಮೀಂದ್ರರ ಕಳೆಯನ್ನು ಆವಾಹನೆ ಮಾಡಲಾಯಿತು. ನಂತರ  ತಾತ್ಕಾಲಿಕ ಬೃಂದಾವನವನ್ನು ಅಗೆದು ಶ್ರೀ ಸುಶಮೀಂದ್ರರ ಪಾರ್ಥಿವ ದೇಹವನ್ನು ಹೊರತೆಗೆದು ಭಕ್ತರಿಗೆ ದರ್ಶನಮಾಡಿಸಲಾಗಿತ್ತು. ಅಲ್ಲಿ ಎಲ್ಲರಿಗೂ ಮತ್ತೊಮ್ಮೆ ಶ್ರೀ ಸುಶಮೀಂದ್ರರ ತಪಃ ಶಕ್ತಿಯ, ಸಿದ್ಧಿಯ ಅನುಭವವಾಗಿ ಪವಾಡವನ್ನು ಕಣ್ಣಾರೆ ಕಂಡರು. ಜಯಕಾರಗಳು  ಮುಗಿಲುಮುಟ್ಟಿದ್ದವು. ಪ್ರವಾಹದಲ್ಲಿ ಎರಡು ಮೂರು ದಿನ ಪೂರ್ತಿ ಮುಳುಗಿದ್ದರೂ ಸಹ,  ಭೂಸ್ಥಾಪನೆಯಾಗಿ ಹಲವು ಮಾಸಗಳೇ ಕಳೆದಿದ್ದರೂ ಸಹ, ಮತ್ತೇ ಹೊರತೆಗೆದಾಗ ಶ್ರೀ ಸುಶಮೀಂದ್ರರ ದೇಹವು ಹಿಂದಿನಂತೆಯೇ ದಿವ್ಯಕಾಂತಿಯಿಂದ ಹೊಳೆಯುತ್ತಿತ್ತು. ಹಚ್ಚಿದ ನಾಮ, ಧರಿಸಿದ್ದ ತುಳಸಿಮಾಲೆ ಒಂದಿಷ್ಟೂ ಬದಲಾಗಿದ್ದಿಲ್ಲ. ಈ ಸಂದರ್ಭವನ್ನು ರಿತ್ತಿರಾಯರೆಂದೇ ಪ್ರಸಿದ್ಧರಾದ ಶ್ರೀ ಧೀರೇಂದ್ರತೀರ್ಥರ ಕಳಾಕರ್ಷಣ ಸಮಯದಲ್ಲಿದ್ದಂತೆ ಎಂದು ಹಿರಿಯರು ಮಾತನಾಡಿಕೊಳ್ಳುತ್ತಿದ್ದರು.  ಮತ್ತೆ ಕೆಲವರು ಶ್ರೀ ಸುಶಮೀಂದ್ರತೀರ್ಥರನ್ನು ಅಭಿನವ ಜಿತಾಮಿತ್ರರೆಂದೇ ಹೇಳುತ್ತಿದ್ದರು.
ಇಂದಿಗೂ ಶ್ರೀಸುಶಮೀಂದ್ರತೀರ್ಥರ ಸನ್ನಿಧಾನ ಅವರ ದಿವ್ಯ, ಭವ್ಯ ಬೃಂದಾವನದಲ್ಲಿದೆ. ಆರಾಧನಾದಿನಗಳಂದು ವಿಶೇಷ ಅಭಿಷೇಕ, ಅಲಂಕಾರಾದಿಗಳು ಬಹು ವೈಭವದಿಂದ ನಡೆಯುತ್ತಿದೆ. ಇಂದಿಗೂ ಗುರುಗಳ ಆರಾಧನಾ ದಿನಗಳಂದು ತಿರುಪತಿ ತಿಮ್ಮಪ್ಪನ ಅನುಗ್ರಹರೂಪದಲ್ಲಿ ಶೇಷವಸ್ತ್ರ ಬೃಂದಾವನವನ್ನು ಅಲಂಕರಿಸುತ್ತಿದೆ. ಅಷ್ಟೇ ಅಲ್ಲ! ಭಕ್ತರ ಮೇಲೆ ಗುರುಗಳ ಅನುಗ್ರಹವೂ ಅದೇ ರೀತಿಯಲ್ಲಿ ನಡೆಯುತ್ತಿದೆ. ಇಲ್ಲಿ ಬಂದು ರಾಯರ ಜೊತೆಯ ಶ್ರೀಸುಶಮೀಂದ್ರರ ಸೇವೆ ಮಾಡುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.
ಶ್ರೀಸುಶಮೀಂದ್ರತೀರ್ಥರ ಕುರಿತಾಗಿ ಈಗಾಗಲೇ ಅನೇಕ ಪುಸ್ತಕಗಳು ಪ್ರಕಟಗೊಂಡಿವೆ. ಶ್ರೀಸುಶಮೀಂದ್ರಸೇವಾ ಪ್ರತಿಷ್ಠಾನದ “ಸುಮಂದಾರ” ಗುರುಗಳ ಜೀವನದ ಸಮಗ್ರಚಿತ್ರಣವನ್ನು ತೋರಿಸಿದೆ. ಶ್ರೀರಾಘವೇಂದ್ರಸ್ವಾಮಿ ಮಠ, ಮಂತ್ರಾಲಯದಿಂದ ಪ್ರಕಟವಾದ, ಡಾ||ವಾದಿರಾಜ ರಾ ಪಂಚಮುಖಿಯವರಿಂದ ವಿರಚಿತವಾದ “ಶ್ರೀಸುಶಮೀಂದ್ರತೀರ್ಥಾಭಿವಂದನಮ್” ಎಂಬ ಸಂಸ್ಕøತ ಕಾವ್ಯ, ಗುರುಗಳ ಜೀವನದ ಪ್ರಮುಖ ಘಟ್ಟಗಳನ್ನು ಸುಂದರ, ಸರಳ ಸಂಸ್ಕøತ ಶ್ಲೋಕಗಳಲ್ಲಿ ಸೆರೆ ಹಿಡಿದಿದೆ. ಶ್ರೀಪೂರ್ಣಪ್ರಜ್ಞವಿದ್ಯಾಪೀಠ, ಬೆಂಗಳೂರು ಇವರಿಂದ ಪ್ರಕಾಶನಗೊಂಡ “ಶ್ರೀಸುಶಮೀಂದ್ರ ವೈಭವ” ಕೃತಿಯು ನಾಡಿನ ಉತ್ತಮ ಪಂಡಿತರಿಂದ ಗುರುಗಳ ಮೇಲೆ ಬರೆಯಲ್ಪಟ್ಟ ಉತ್ತಮ ಲೇಖನಗಳ ಸಂಗ್ರಹವಾಗಿದೆ. ಅಷ್ಟೇ ಅಲ್ಲದೇ ನೂರಾರು ದಾಸರ ಪದಗಳು, ಸುಳಾದಿಗಳು ರಚನೆಯಾಗಿವೆ. “ಪರಿಮಳ” ಮಾಸಪತ್ರಿಕೆಯಂತೂ “ಶ್ರೀಸುಶಮೀಂದ್ರವಿಜಯವೈಜಯಂತೀ” ಎಂಬ ಸುಂದರವಾದ ವಿಶೇಷ ಸಂಚಿಕೆಯನ್ನು ಶ್ರೀಗಳವರ ಉಪಸ್ಥಿತಿಯಲ್ಲೇ ಹೊರತಂದಿದ್ದು, ಶ್ರೀಸುಶಮೀಂದ್ರತೀರ್ಥರ ಅಂಕಿತ-ಅನುಗ್ರಹ ದೊರೆತದ್ದು ತುಂಬಾ ವಿಶೇಷವಾದ ಸಂಗತಿ.
***********

ಸುಮಂದಾರ
ಸದಾ ಮುಗ್ಧತೆಯ ಮಂದಹಾಸ,
ಮೂಲರಾಮನ ಪೂಜಿಸುವ ಸೊಬಗು,
ಗುರುರಾಯರಿಗೆ ಸಲ್ಲಿಸಿದ ಅನವರತ ಸೇವೆ,
ತಮ್ಮ ಗುರುಗಳ ಮೇಲಿನ ಭಕ್ತಿ,
ಭಕ್ತರ ಮೇಲಿನ ಪ್ರೀತಿ ಮಮಕಾರ,
ಮಂತ್ರಾಲಯದ ಅಭಿವೃದ್ಧಿ,
ಪಂಡಿತ ಪಾಮರರ ಪೋಷಣೆ,
ಶಿಷ್ಯ ವಾತ್ಸಲ್ಯ,
ರಾಯರನ್ನು ಬೇಡಿ ಬಂದವರಿಗೆ 
ರಾಯರು ಇವರ ಮೂಲಕ ಅನುಗ್ರಹಿಸಿದ ಸಾವಿರಾರು ಸಾತ್ವಿಕ ಮಹಿಮೆಗಳು,
ಆಡಿತ ನುಡಿಮುತ್ತುಗಳೇ ವೇದ ವಾಕ್ಯಗಳು,
ಮಾತು ಕಡಿಮೆ ಆದರೆ‌ ಮಹಿಮೆ ಅಪಾರ,
ಮೂಲರಾಮನನ್ನು ಪೂಜಿಸುತ್ತಿದ್ದ ಬಗೆಯಂತು ಅವರ್ಣನೀಯ,
ಮೂಲರಾಮ ಮತ್ತು ಇವರು ಮಾತನಾಡುತ್ತಿದ್ದಾರೇನೊ‌ ಅನ್ನುವ ಭಕ್ತಿಯ ಪರಾಕಾಷ್ಠೆ ಭಕ್ತರಲ್ಲಿ,
ರಾಯರಂತು ಒಂದು ರೂಪದಲ್ಲಿ ಇವರಲ್ಲಿಯೇ ನೆಲಸಿದ್ದಾರೆನೋ ಅನ್ನುವ ಅತೀಶಯವಾದ ಶ್ರದ್ಧಾ ಭಕ್ತಿ ಸೋತ್ತಮರಲ್ಲಿ...
ನವಮಂತ್ರಾಲಯದ ನಿರ್ಮಾತೃಗಳು,
ಮಹಾ ಸಂಸ್ಥಾನಕ್ಕೆ ಉತ್ತಮ,ಧರ್ಮ ನಿಷ್ಠುರ, ಹಾಗೂ ಸಮರ್ಥ ಶಿಷ್ಯರಾದ
ಶ್ರೀ ಸುಯತೀಂದ್ರತೀರ್ಥರ ಕೊಡುಗೆ,
ಯತಿಕುಲ ಚಕ್ರವರ್ತಿಗಳಾಗಿ,
ಅಜಾತ‌ ಶತ್ರುಗಳಾಗಿ,
ಯತಿಕುಲಕ್ಕೆ ಮಾದರಿಯಾಗಿ,
ಸರ್ವಕಾಲಿಕ ಯತಿಶ್ರೇಷ್ಠರಾಗಿ,
ಶತಮಾನದ ಶಕಪುರುಷರಾಗಿ,
ಭಕ್ತರ ಮನಸ್ಸಿನಲ್ಲಿ ಅಚ್ಚಳೆಯದಲೆ ಇರುವವರು.....

ಅವರೇ ನಮ್ಮ‌ ನಡೆದಾಡುವ ರಾಯರು
ಸದಾ ನಗುಮೊಗದ ಸಂತ,
ಅಭಿನವ ಜಡಭರತರು,
ಅಭಿನವ ಶ್ರೀ ಜೀತಾಮಿತ್ರತೀರ್ಥರು
ಅವರೇ 
ಇಂದಿನ ಆರಾಧನಾ ನಾಯಕರಾದ
ಪ್ರಾತಃಸ್ಮರಣೀಯರಾದ
ಪರಮಪೂಜ್ಯ
ಶ್ರೀ ಶ್ರೀ ಸುಶಮೀಂದ್ರತೀರ್ಥಶ್ರೀಪಾದಂಗಳವರು...
ಅವರ ಮಹಿಮೆಯೆ ಅಪಾರ‌ ಹಾಗೂ ಜಗತ್ತಿಗೆ ತಿಳಿದ ವಿಷಯ...
ಅವರ ಆರಾಧನಾ ಶುಭದಿನ...
ಅವರ ಮೂಲಬೃಂದಾವನ ಸ್ಥಳವಾದ ಮಂತ್ರಾಲಯ ಮಹಾ ಕ್ಷೇತ್ರದಲ್ಲಿ
ಅವರ ಪ್ರಶಿಷ್ಯರಾದ 
ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥರ ನೇತೃತ್ವದಲ್ಲಿ ನಡೆಯುತ್ತಿದೆ....
ಇಂತಹ ಮಹಾನುಭಾವರ ಅನುಗ್ರಹ ಸದಾ ನಮ್ಮ ಮೇಲಾಗಲಿಯಂದು 
ಅವರ ಅಂತರ್ಯಾಮಿಯಾದ 
ಶ್ರೀ ರಾಘವೇಂದ್ರತೀರ್ಥ ಗುರುವಂತರ್ಗತ
ಭಾರತೀರಮಣ ಮುಖ್ಯಪ್ರಾಣಾಂತರ್ಗತ
ಶ್ರೀ ಮನ್ಮೂಲರಘುಪತಿವೇದವ್ಯಾಸದೇವರಲ್ಲಿ ಪ್ರಾರ್ಥಿಸೊಣ....

ಸುಜಯ್.ಜೋಶಿ
************


ಮುಗ್ದತೆಯ ಪ್ರತಿರೂಪ
ಸರಳತೆಯ ಸಾಕಾರ ಮೂರ್ತಿ
ಸದಾ ನಗುಮೊಗದ ಸಂತ
ರಾಯರ ಕರುಣೆಯ ಕೂಸು
ಮೂಲರಾಮನ ಮಮಕಾರದ ಮಗು
ನಡೆದಾಡುವ ನಮ್ಮ ರಾಯರ ಆರಾಧನಾ ಮಹೋತ್ಸವ...
ಹಂಸನಾಮಕ ಪರಮಾತ್ಮನ ಸಾಕ್ಷಾತ್ ಪರಂಪರೆಯನ್ನು ಬೆಳಗಿ,
ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲ ಮಹಾ ವೇದಾಂತ ಸಾಮ್ರಾಜ್ಯದ ಅಧಿಪತಿಗಳಾಗಿ
ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವೇದಾಂತ ದಿಗ್ವಿಜಯ ವಿದ್ಯಾಸಿಂಹಾಸನವನ್ನು ಸತತ 24‌‌ ವರ್ಷಗಳ ಕಾಲ ನಿರಂತರವಾಗಿ ಮುನ್ನಡೆಸಿದ ಮಹಾನುಭಾವರು ನಮ್ಮ ಶ್ರೀ ಸುಶಮೀಂದ್ರತೀರ್ಥರು..
ಇತಿಹಾಸ ಪ್ರಸಿದ್ಧ ಬಿಚ್ಚಾಲೆಯ ಪರಮಪವಿತ್ರ ನೆಲದಿ ಸಂನ್ಯಾಸ ದೀಕ್ಷೆ ಸ್ವೀಕರಿಸಿ,
ಶ್ರೀ ಸುಜಯೀಂದ್ರತೀರ್ಥರ ಕರಕಮಲ‌ ಸಂಜಾತರೆನಿಸಿ,
ಅನವರತ ಮೂಲರಾಮನ‌ ಸೇವೆಯ ಸಲ್ಲಿಸಿ,
ಅನುದಿನವೂ ಗುರುರಾಯರ ಸ್ಮರಣೆಯನ್ನು ತಮ್ಮ ಉಸಿರಂತೆ ಚಿಂತಿಸಿ,
ಮೂಲರಾಮನ ಗುರುರಾಯರ ಸ್ಮರಣೆಯನ್ನು ಮಾಡುತ್ತಲೇ ಬಂದ ಭಕ್ತರಿಗೆ ಮಂತ್ರಾಕ್ಷತೆಯ ಮೂಲಕ‌ ಅನುಗ್ರಹಿಸಿ,
ಶ್ರೀಮಠದ ಸರ್ವತೋಮುಖ ಅಭಿವೃದ್ಧಿಗೆ ಕಾರಣಿಭೂತರಾದವರು ಶ್ರೀ ಸುಶಮೀಂದ್ರತೀರ್ಥರು..
ಪಂಡಿತ ಪಾಮರ,ಬಡವ ಬಲ್ಲಿದ ಎಂಬ ಭೇದ ಭಾವನೆ ಇಲ್ಲದಲೇ ಎಲ್ಲರನ್ನೂ ಉದ್ಧರಿಸಿದ ಮಹಾ ತಪಸ್ವಿಗಳು ಶ್ರೀ ಸುಶಮೀಂದ್ರತೀರ್ಥರು...
ದಿಗ್ವಿಜಯ ಜಯ ಮೂಲರಾಮರತರಾಗಿ
ಗುರುರಾಯರ ಕರುಣಾಪಾತ್ರರಾಗಿ
ಮತಾತೀತವಾಗಿ ಮಠಾತೀತವಾಗಿ ಎಲ್ಲರಿಗೂ ಪ್ರೀತಿಪಾತ್ರರಾಗಿ
ನಡೆದಾಡುವ ಪ್ರತ್ಯಕ್ಷ ರಾಯರಾಗಿ ಕಂಗೋಳಿಸಿದವರು
ಶ್ರೀ ಸುಶಮೀಂದ್ರತೀರ್ಥರು...
ಇವರ ಆರಾಧನಾ ಶುಭದಿನ..
ಸುಜಯ್ ಜೋಶಿ
**************

ಶ್ರೀಹರಿ ವಾಯು ಗುರು ಸ್ಮರಣೆಗಳು.. 
ಶ್ರೀರಾಘವೇಂದ್ರ ಗುರುಭ್ಯೋ ನಮ :
ಶ್ರೀಸುಶಮೀಂದ್ರತೀರ್ಥ ಗುರುಭ್ಯೋ ನಮ:

ಶ್ರೀಸುಶಮೀಂದ್ರತೀರ್ಥರು ಮಾಡಿದ ಅನುಗ್ರಹ ಎಲ್ಲರಿಗೂ ಅನುಭವವೇದ್ಯ. 
ಯಥಾಮತಿ ಗುರುಭಕ್ತಿಪೂರ್ವಕ ಗುರು ಕಾರುಣ್ಯ ಸಿದ್ಧಿಗಾಗಿ ಕೆಲವು ತೊದಲು ನುಡಿಗಳಷ್ಟೆ.. 
ನಡೆದಾಡುವ ರಾಯರೆಂದೆ ಖ್ಯಾತಿಯ ಗುರುಗಳದು ಅಪಾರ ಮಾತೃವಾತ್ಸಲ್ಯ.. ಫಲಮಂತ್ರಾಕ್ಷತೆಗಾಗಿ ಅನುಗ್ರಹಕಾಗಿ ಹೋದಾಗ ಅವರು ಮಂತ್ರಾಕ್ಷತೆ ಕೊಡುವಾಗಲು ಹಳೆಯ ಪರಿಚಯ ಇದ್ದ ಹಾಗೆ ಎನ್ನುವ ಶಿಷ್ಯವಾತ್ಸಲ್ಯತೆಯಿಂದ ಇತ್ತು ಅನುಗ್ರಹಿಸುತ್ತಿದ್ದರು.. ಮುಖದಲ್ಲಿ ಯಾವಾಗಲೂ ಪ್ರಶಾಂತತೆ.. ಗಾಂಭೀರ್ಯತೆ ಕಾಣ್ತಾಯಿದ್ದವು.. ಅಂತರ್ಮುಖಿಗಳಾಗಿ ಶ್ರೀ ಗುರುರಾಜರ ಹಾಗೂ ಅಂತರ್ಗತ ಭಾರತೀರಮಣಾಂತರ್ಗತ ರಾಮಚಂದ್ರದೇವರ ಸ್ಮರಣೆಯನ್ನು ಮಾಡುತ್ತಿದ್ದರು.. 
ಸುಧೀಂದ್ರಸುತಪ್ರಿಯಮ್.. 
ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ 
ವೇದಾಂತ ಪೀಠದಲಿ ವಿರಾಜಮಾನ ಸಮಸ್ತ ಯತಿವೃಂದದಲಿ ಭೂಷಾಮಣಿಗಳಾದ... ಕ್ರಮೇಣ ಶ್ರೀವಿಜಯೀಂದ್ರರೆಂಬ ಅಜೇಯರ ಅನುಗ್ರಹದಿಂದ ಶ್ರೀ ಸುಧೀಂದ್ರತೀರ್ಥರ ಅನುಗ್ರಹದಿಂದ ಭಕ್ತಾಭೀಷ್ಟಸಂಕಲ್ಪವರದಾಯಕ ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಕರುಣಾಸಮುದ್ರ ಶ್ರೀರಾಘವೇಂದ್ರಗುರುಸಾರ್ವಭೌಮರು ಸತ್ಯ ನಾಮಕ ಧರ್ಮನಾಮಕ ಶ್ರೀಹರಿಯ ಪಾದಕಮಲಗಳಲಿ ನಿಷ್ಠರಾದ ಶ್ರೀವಾಯುದೇವರ ಪಾದಕಮಲಗಳಲಿ ಅತ್ಯಂತ ನಿಷ್ಠಾ ಭಕುತಿ ಉಳ್ಳವರು. 
ಭಕ್ತರ ಮನೋಭೀಷ್ಟಗಳನು ಕೊಡುತ ಐಕಮೇವ ಹರಿಭಕುತಿ ಮಾರ್ಗವ ತೋರುವವರು. 
ಅವರಿಗೆ ಪ್ರಿಯರು.. ಎಂದರೆ.. ಅವರು ತೋರಿದ ಮಾರ್ಗದಲ್ಲಿ ಭಕುತರಿಗೆಲ್ಲ ಸಂತಾಪದುರಿತ ಪರಿಹಾರ ತೋರುತ ಅಂತರ್ಗತ ಗುರುಗಳ ಅನುಗ್ರಹ ಆಗುವ ಹಾಗೆ ಮಾಡುವವರು.. 

ಗುರುಗಳ ಸಮಸ್ತ ಗುರುಗಳ ಶ್ರೀರಾಯರೇ ಮೊದಲಾದ ಸಮಸ್ತ ಗುರುವರೇಣ್ಯರ ಶ್ರೀ ಹನುಮಭೀಮಮಧ್ವನಾಮಕ ಶ್ರೀವಾಯುದೇವರ ಶ್ರೀ ಸೀತಾಪತಿ ರಾಮಚಂದ್ರದೇವರ ಅನುಗ್ರಹ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥನೆ .
********************

ಶ್ರೀಂ ಶ್ರೀ ಕಂ ಕಪಿಲಾಯ ನಮಃ

ಸುಧೀಜನ ಸುಮಂದಾರಂ ಸುಧೀಂದ್ರ ಸುತ ಸುಪ್ರಿಯಮ್ /
ಸುಶಮೀಂದ್ರ ಗುರುಂ ವಂದೇ ಸುಜಯೀಂದ್ರ ಕರೋದ್ಭವಮ್//

ಶ್ರೀ ರಾಯರ ಮಠದ ಪರಮ ಶ್ರೇಷ್ಠ ಯತಿಗಳು, ನಡೆದಾಡುವ ರಾಯರೆಂದೇ ಖ್ಯಾತರಾದ, ಸಜ್ಜನರಿಗೆ ಮಾರ್ಗದರ್ಶಕರಾಗಿ ನಿಂತಂತಹಾ ಶ್ರೀ ಸುಶಮೀಂದ್ರತೀರ್ಥ  ಗುರುಸಾರ್ವಭೌಮರ ಆರಾಧನಾ ಮಹೋತ್ಸವ ಇಂದು.. 

ಶ್ರೀ ಗುರುಗಳು ನಮ್ಮೆಲ್ಲರ ಮೇಲೆ ಸದಾ ಅನುಗ್ರಹ ಮಾಡಲಿ ಎಂದು ಪ್ರಾರ್ಥನೆ ಮಾಡುತ್ತಾ ..

ಶ್ರೀಗಳ ಕುರಿತು ಶ್ರೀ ಪ್ರಭಂಜನಾಚಾರ್ಯ , ಬಳ್ಳಾರಿ ಇವರ ಲೇಖನವನ್ನು ಸೇರಿಸುತ್ತಿದ್ದೇನೆ...

👇🏽👇🏽👇🏽👇🏽👇🏽

ನಮ್ಮ ಮತದ ಸತ್ಪರಂಪರೆಯಲ್ಲಿ ಸಾಕ್ಷಾತ್ ಪರಮಾತ್ಮನಿಂದ ಪ್ರಾರಂಭಿಸಿ ವಾಯುದೇವರ ಅವತಾರಿಗಳಾದ  ಶ್ರೀಮದಾಚಾರ್ಯರು,ಮೂರು ಲೋಕದ ಒಡೆಯರಾದ ಇಂದ್ರದೇವರ ಅವತಾರಿಗಳಾದ  ಶ್ರೀಜಯತೀರ್ಥರಂತಹ ಮಹನೀಯರಿಂದ ಮೊದಲುಗೊಂಡು ಅನೇಕ ದೇವತೆಗಳು, ಗಂಧರ್ವರು, ಋಷಿಗಳು ಬಂದು ಶ್ರೀಮದಾಚಾರ್ಯರ, ಮತ್ತು ಶ್ರೀವೇದವ್ಯಾಸದೇವರ ಅಪಾರ ಸೇವೆಯನ್ನು ಮಾಡಿ, ನಮ್ಮೆಲ್ಲರನ್ನು ಉದ್ಧಾರದ ಮಾರ್ಗದಲ್ಲಿ ನಡೆಸುತ್ತಿದ್ದಾರೆ. 
ಇಷ್ಟೆಲ್ಲಾ ದೊಡ್ಡ ದೇವತೆಗಳು ನಮ್ಮ ಪರಂಪರೆಯಲ್ಲಿ ಬಂದದ್ದಲ್ಲದೇ ಅವರದ್ದೇ ಆದ ವಿಶೇಷತೆಗಳು ಇವೆ. ಅದರಲ್ಲೂ ಭಗವಂತನ ಮತ್ತು ವಾಯುದೇವರ ವಿಶೇಷಾನುಗ್ರಹಕ್ಕೆ ಪಾತ್ರರಾದ, ಅವರಿಬ್ಬರ ನಿತ್ಯ ಸನ್ನಿಧಾನವುಳ್ಳ  ಶ್ರೀಪ್ರಹ್ಲಾದ ದೇವತೆಗಳ ಅವತಾರಿಗಳಾದ, ಕಲಿಯುಗದಲ್ಲಿ ಇವರನ್ನು ನಂಬಿದರೆ, ಅನುಸರಿಸಿದರೆ, ಭಕ್ತಿ ಮಾಡಿದರೆ ಮಾತ್ರ ನನ್ನನ್ನು ಸೇರಲಿಕ್ಕೆ ಸಾಧ್ಯ ಅಂತ ಶ್ರೀನರಸಿಂಹದೇವರಿಂದ ಅನುಗ್ರಹ ಪಡೆದುಕೊಂಡ ಮಂತ್ರಾಲಯ ಪ್ರಭುಗಳು ಸಕಲ ಭಕ್ತರ ಗುರುಗಳಾಗಿದ್ದಾರೆ. ಇವರ ಮಹಿಮೆಯನ್ನು ಯಾರಿಗೆ ತಾನೇ ಪೂರ್ಣವಾಗಿ ವರ್ಣಿಸಲು ಶಕ್ಯ! ಇಂತವರು ಒಬ್ಬ ಸಾಮಾನ್ಯ ಭಕ್ತರ  ಮೇಲೆ ಅನುಗ್ರಹಿಸಿದರೆ ಏನೆಲ್ಲಾ ಆಗುತ್ತವೆ ಅನ್ನುವುದನ್ನು ನೋಡೋಣ.

ಒಬ್ಬ ಸಾಮಾನ್ಯ ಮನುಷ್ಯ, ಶಾಸ್ತವಾಗಲಿ, ಲೌಕಿಕವಾಗಲೀ ಅಷ್ಟೇನೋ ಬಲ್ಲವನಲ್ಲ. ಆದರೆ ರಾಯರೆಂದರೆ, ನಮ್ಮ ಪರಂಪರೆ ಅಂದರೆ ಅದೇನೋ ಭಕ್ತಿ, ಶ್ರದ್ಧೆ.ತಕ್ಕ ಮಟ್ಟಿಗೆ ಸದಾಚಾರಿಗಳು.  ಒಂದು ರಾಯರ ಮಠದಲ್ಲಿ ಕಟ್ಟೆಯ ಮೇಲೆ ಕೂತು ಬಂದ ಭಕ್ತರಿಗೆ ತೀರ್ಥ ಮಂತ್ರಾಕ್ಷತೆ ಕೊಡುತ್ತಿದ್ದರು. ಮಠಕ್ಕೆ ಎಂದಿನಂತೆ ನಿತ್ಯ ಬರುವ ಭಕ್ತರಲ್ಲಿ ಒಬ್ಬ ಸದಾಚಾಯಾದ ಮುತ್ತೈದೆ ಬಂದು ರಾಯರಿಗೆ ನಮಸ್ಕರಿಸಿ, ಅಷ್ಟೇನೂ ಸದಾಚಾರಿಗಳಲ್ಲದ ಇವರಿಂದ ತೀರ್ಥ ಮಂತ್ರಾಕ್ಷತೆ  ಹೇಗೆ ಸ್ವೀಕರಿಸಬೇಕು ಅಂತ ಯೋಚಿಸಿ, ನಿಮ್ಮಿಂದ ನಾನೂ ತೀರ್ಥ ಸ್ವೀಕರಿಸುವುದಿಲ್ಲ ಅಂತ ಅವರಿಗೆ ಹೇಳಿಯೂ ಬಿಟ್ಟರು.(ಸಕಲವೂ ದೇವರ ಪ್ರೇರಣೆ). 
ಆಗ ಆವ್ಯಕ್ತಿಗೆ ಅದೇನು ಆವೇಶ ಬಂದಿತೋ ಅಥವಾ ಒಳಗೆ ರಾಯರೇ ನಿಂತು ತಮ್ಮ ಕೂಸಿನ ಮುಖಾರವಿಂದದಿಂದ ನುಡಸಿದರೋ ಏನೋ ಎಂಬಂತೆ "ನೀವು ಈದಿನ‌‌ ನನ್ನ ಕೈಯಿಂದ ತೀರ್ಥ ಸ್ವೀಕರಿಲ್ಲ ಅಂತ ಹೇಳಿದ್ರಿ, ಆದರೆ ಒಂದು ದಿನ ಇಡೀ ಭಕ್ತಾದಿಗಳಿಗೆ ತೀರ್ಥವನ್ನು ಕೊಡು ಯೋಗ್ಯತೆಯನ್ನು ರಾಯರು ನನಗೆ ಕರುಣಿಸುತ್ತಾರೆ, ನೀವೇ ಬಂದು ನನ್ನಿಂದ ತೀರ್ಥ ಸ್ವೀಕರಿಸುತ್ತೀರಿ ಅಂತ ಹೇಳಿದ ಆ ಸುಸಮಯದಲ್ಲಿ ಬಹುಷಃ ಮೇಲಿಂದ ಸಕಲ ದೇವತೆಗಳೂ ತತಾಸ್ತು ಅಂದಿರಬೇಕು. ಆ ಮುಗ್ಧ ಭಕ್ತಿಯನ್ನು ರಾಯರ ಮೇಲೆ ಹೊಂದಿದ್ದ ಆ ವ್ಯಕ್ತಿಯ ಮಾತನ್ನು ಸತ್ಯ ಮಾಡಲೆಂದು, ಆ ವ್ಯಕ್ತಿಯನ್ನು ರಾಯರು ತಾವು ಬಂದ ಹಂಸನಾಮಕನ ಪರಂಪರೆಯಲ್ಲೇ ಕೂಡಿಸಿ, ತಾವೇ ಅವರಲ್ಲಿ ನಿಂತು ಲಕ್ಷಾಂತರ ಭಕ್ತರನ್ನು ಅನುಗ್ರಹಿಸಿ ಉದ್ಧರಿಸಿದ್ದಾರೆ. ಆ ಸಾಮಾನ್ಯ ಭಕ್ತನೇ ಮುಂದೆ ಶ್ರೀಸುಜಯೀಂದ್ರ ತೀರ್ಥರ ಕರಕಮಲ ಸಂಜಾತರಾದ,ಪ್ರಸ್ತುತ ಆರಾಧನಾ ನಾಯಕರಾದ, ಲೋಕದಲ್ಲಿ ನಡೆದಾಡುವ ರಾಯರು ಅಂತಲೇ ಪ್ರಸಿದ್ಧರಾದ ಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರು.
ಮುಂದೆ ನಡೆದದ್ದೆಲ್ಲಾ ಇತಿಹಾಸ, ಎಲ್ಲರಿಗೂ ಗೊತ್ತಿರುವ ವಿಚಾರ. 
ಅವರು ನುಡಿದದ್ದೆಲ್ಲಾ ನಿಜವಾಯಿತು, ಮುಟ್ಟಿದ್ದೆಲ್ಲಾ ಬಂಗಾರವಾಯಿತು. ಅನುಗ್ರಹ ಪಡೆದವರೆಲ್ಲಾ ಮಹಾನ್ ವ್ಯಕ್ತಿಗಳಾದರು.ಅವರಿಂದ ಲೋಕಕ್ಕಾದ ಉಪಕಾರಗಳು ಎಷ್ಟು ಅಂತ ಹೇಳಲಿಕ್ಕೆ ಸಾಧ್ಯ! 
ಮಂತ್ರಾಕ್ಷತೆ ಅವರ ಕೈಯಿಂದ ಸಿಕ್ಕರೆ ಸಾಕು, ನಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಅನ್ನುವ ಭಕ್ತರ ನಂಬಿಕೆ, ಅದಕ್ಕೆಂದೇ ಭಕ್ತಾದಿಗಳು ಅವರನ್ನು ಎಲ್ಲಿಗೆ ಹೋದರೂ ಬಿಡದೇ, ಮಠ ಮತ್ತು ಮತಗಳನ್ನೂ ಲೆಕ್ಕಿಸದೇ ಮುಧ್ರಧಾರಣೆ, ಪಾದ ಪೂಜೆ, ಮಂತ್ರಾಕ್ಷತೆಗಾಗಿ ಕಾದು ಕುಳಿತಿರುತ್ತಿದ್ದರು. ಆ ಮಂದಹಾಸ, ಮುಖದಲ್ಲಿ ಸದಾ ಇದ್ದ ಮುಗ್ಧ ನಗು ಇವುಗಳನ್ನು ನೋಡಲು ಭಕ್ತರು ಸದಾ ಇಚ್ಛೆ ಪಡುತ್ತಿದ್ದರು. ಇನ್ನೂ ಅವರು ಮಾಡುತ್ತಿದ್ದ ಸಂಸ್ಥಾನ ಪೂಜೆಯಂತೂ ನಿಜಕ್ಕೂ ಪರಮಾದ್ಭುತ. ಶ್ರೀಮೂಲ, ದಿಗ್ವಿಜಯ ಮತ್ತು ಜಯರಾಮ ದೇವರ ಪೂಜಾ ವೈಭವ ವರ್ಣನಾತೀತ. ನೋಡಿದವರೇ ನಿಜಕ್ಕೂ ಧನ್ಯರು.🙏🏻
ಯಾವುದೇ ಸಭೆಯಾಗಲೀ ಅವರ ಉಪಸ್ಥಿತಿ ಇಲ್ಲದೇ ಪೂರ್ಣವಾಗುತ್ತಲೇ ಇರಲಿಲ್ಲ. ಅದು ಬೃಹತ್ ಯಾಗಗಳಾಗಿರಬಹುದು, ಸುಧಾಮಂಗಳವೇ ಆಗಿರಬಹುದು ಅಲ್ಲಿ ಶ್ರೀಸುಶಮೀಂದ್ರ ತೀರ್ಥರು ಇರಲೇಬೇಕು.
ಅವರ ಅನುಗ್ರಹದ ಕೃಪಾ ದೃಷ್ಟಿ ಆ ಸುಧಾ ಪರೀಕ್ಷೆ ಕೊಡುವ ಪಂಡಿತರ ಮೇಲೆ ಒಮ್ಮೆ ಬಿದ್ದರೂ ಸಾಕು ಆ ಪಂಡಿತರೇ ಧನ್ಯ. ಆ ಕೃಪಾ ದೃಷ್ಟಿಗೆ ಎಲ್ಲರೂ ಹಂಬಲಿಸುತ್ತಿದ್ದರು. 
ಅವರಿಂದ ಪ್ರತಿಷ್ಠಾಪಿಸಲ್ಪಟ್ಟ ರಾಯರ ಬೃಂದಾವನಗಳೂ ಸುಮಾರು ನೂರರ ಮೇಲಿವೆ, ಯಾವುದೇ ಊರಲ್ಲಾಗಲೀ, ಯಾವುದೇ ಬಡಾವಣೆಯಾಗಲೀ ರಾಯರ ಮಠವಾದರೆ ಅದು ಶ್ರೀಸುಶಮೀಂದ್ರರಿಂದಲೇ ಪ್ರತಿಷ್ಠಾಪನೆಗೊಳ್ಳಬೇಕು ಅನ್ನುವುದು ಎಲ್ಲರ ಆಸೆ. ಪ್ರಾರ್ಥಿಸಿದರೆ ಸಾಕು , ಸಂತೋಷದಿಂದ ಒಪ್ಪಿ, ಎಷ್ಟೇ ಕಷ್ಟವಾದರೂ ಬಂದು ಪ್ರತಿಷ್ಠಾಪನೆ ಮಾಡುತ್ತಿದ್ದರು. ನಮ್ಮ ಕಾಲದಲ್ಲಿ ಬಹುಷಃ ಎಲ್ಲರೂ ಒಂದಲ್ಲ ಒಂದು ರೀತಿ  ಅವರಿಂದ ಅನುಗ್ರಹ ಪಡೆದವರೇ ಆಗಿದ್ದೇವೆ. ಮುಂದೆ ಯಮಧೂತರು ನೀನು ಮಾಡಿದ ಸಾಧನೆ ಏನೂ ಅಂತ ಕೇಳಿದರೆ, ಏನಾದರೂ ಮಾಡಿದ್ದರೂ, ಮಾಡದಿದ್ದರೂ ಸಹ ನಾನು ಶ್ರೀಸುಶಮೀಂದ್ರತೀರ್ಥರ ದರ್ಶನ ಮಾಡಿದ್ದೇನೆ, ಅವರಿಂದ ಮಂತ್ರಾಕ್ಷತೆ ಸ್ವೀಕರಿಸಿದ್ದೇನೆ, ಇದೇ ನನ್ನ ಸಾಧನೆ ಅಂತ ಧೈರ್ಯವಾಗಿ ಹೇಳಿದರೆ ಸಾಕು, ಅಲ್ಲಿಯೂ ಅವರ, ರಾಯರ ವಿಶೇಷ ಅನುಗ್ರಹವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. 
ಅವರ ಬಗ್ಗೆ ಹೇಳುವುದು ಸಾಗರದಷ್ಟಿದೆ ಆದರೆ ಹೇಗೆ ಸಾಗರಕ್ಕೆ ಹೋಗಿ ಪೂರ್ತಿ ನೀರಲ್ಲಿ ಮುಳುಗುವುದಕ್ಕೆ ಸಾಧ್ಯವಿಲ್ಲವೋ ಹಾಗೆಯೇ ಇವರ ಬಗ್ಗೆ  ಹೇಳುವುದಕ್ಕೆ ಸಾಧ್ಯವಿಲ್ಲ. ಆದರೂ ಹೇಗೆ ಒಂದು ದಡದಲ್ಲಿ ನಿಂತು ಮುಳುಗಿದರೂ ಪೂರ್ತಿ ಸಮುದ್ರ ಸ್ನಾನದ ಫಲ ಸಿಗುತ್ತದೆಯೋ ಹಾಗೆಯೇ ಶ್ರೀಸುಶಮೀಂದ್ರರ ಬಗ್ಗೆ ಸ್ವಲ್ಪ ತಿಳಿದರೂ ಅವರ ಪೂರ್ಣ ಅನುಗ್ರಹವಾಗಿ , ಅವರ ಅಂತರ್ಯಾಮಿ ಶ್ರೀರಾಯರ, ಶ್ರೀಜಯತೀರ್ಥರ, ಶ್ರೀಮದಾಚಾರ್ಯರ , ಶ್ರೀಮನ್ಮೂಲರಾಮದೇವರ ಸಂಪೂರ್ಣ ಅನುಗ್ರಹ ಸಿಗುತ್ತದೆ. ಇಂತಹ ಶ್ರೀಸುಶಮಿಂದ್ರತೀರ್ಥರ ಸ್ಮರಣೆ ಜನ್ಮಜನ್ಮಗಳಲ್ಲೂ ಸಿಗಲಿ ಅಂತ ಅವರ ಅಂತರ್ಯಾಮಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸೋಣ. 
ಪ್ರಭಂಜನಾಚಾರ್ಯ, ಬಳ್ಳಾರಿ 
****

"ಶ್ರೀ ಶ್ರೀಪಾದರಾಜ ಮಠಾಧೀಶರಾದ ಶ್ರೀ ವಿಜ್ಞಾನನಿಧಿತೀರ್ಥರ ಕಣ್ಣಲ್ಲಿ ಶ್ರೀ ಸುಶಮೀ೦ದ್ರತೀರ್ಥರು "

ಸಂಖ್ಯಾ ಶಾಸ್ತ್ರದ ಪ್ರಕಾರ ಶ್ರೀ ಸುಶಮೀಂದ್ರತೀರ್ಥರ ಹೆಸರು 9 ಎಂಬ ಸಂಖ್ಯೆಗೆ ಒಳಪಟ್ಟಿರುತ್ತದೆ. ಇದರಿಂದಾಗಿ ಇವರು ತಮ್ಮ ಪೀಠಾರೋಹಣದಿಂದ ಇಲ್ಲಿಯ ವರೆಗೂ ಪರಮಾತ್ಮನಾದ ಶ್ರೀ ಮೂಲರಾಮದೇವರಲ್ಲಿ ಅನನ್ಯ ಭಕ್ತಿಯಿಂದ ಶರಣು ಹೊಂದಿ ಜನ ಸಾಮಾನ್ಯರಿಗೂ ಮತ್ತು ಪಂಡಿತರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.

" ಶ್ರೀ ಸು ಶ ಮೀ೦ ದ್ರ ತೀ ರ್ಥ "

( ಶ + ರ + ಈ ), ( ಸ + ಉ + ಶ  + ಮ  + ಈ + ಅಂ + ದ + ರ ), ( ತ + ಈ + ಥ + ಋ ).

( 1 + 2 + 4 = 7 ), ( 3 + 51 + 1 + 5 + 4 + 15 + 4 + 15 + 3 + 3 ) = 31 ಅಂದರೆ  3 + 1 = 4 ( 1 + 4 + 4 +

7 = 16 ಅಂದರೆ 1 + 6 = 7 ).

( 7 + 4 + 7 = 18 ಅಂದರೆ 1 + 8 = 9 ).

ಶಂ = ಶಂತಸಂವಿದ

ರ = ರಮು ಕ್ರೀಡಾಯಾಂ - ರಲಯೋರಭೇದಃ ಅಂದರೆ..

ಲ = ಲಕ್ಸ್ಮೀಪತಿ

ಈ = ಈಶಾನ - ಈಶಾನಃ ಜ್ಯೇಷ್ಠ ಶ್ರೇಷ್ಠಃ ಪ್ರಜಾಪತಿಃ ( ವಿಷ್ಣು ಸಹಸ್ರ ನಾಮ )

ಸ = ಸಾರಾತ್ಮ

ಉ = ಉತ್ಕೃಷ್ಟ - ಉಗ್ರಂ ವೀರಂ ಮಹಾವಿಷ್ಣುಂ

ಶ = ಶಂತಸಂವಿದ

ಮ = ಲಕ್ಷ್ಮೀದೇವಿ

ಈ = ಮಕಾರ - ಅಂದರೆ " ಪ " ಕಾರದ 4ನೇ ವರ್ಣ - ಚೇತನಾಭಿಮಾನಿ ಶೇಷದೇವರು

ಅಂ = ಅನಂತ - ಅಂತ್ಯವಿಲ್ಲದವನು

ದ = " ತ " ಕಾರದ 3ನೇ ಅಕ್ಷರ " ದ " ರೂಪದ ತತ್ತ್ವಕ್ಕೆ ವಿದ್ಯಾ ತತ್ತ್ವದಿಂದ ರೂಪ ಚಿಂತನೆ.

ರ = ರಮು ಕ್ರೀಡಾಯಾಂ - ತೀರ್ಥ ಅಂದರೆ " ಶಾಸ್ತ್ರ )

" ಮ " ಕಾರ " ದ " ಪ್ರಕೃತಿ ಸಂಬಂಧ ದೋಷ್ಗಗಳು - ಅರಿಷಡ್ವರ್ಗಗಳನ್ನು ದೂರೀಕರಿಸಿ

" ಉ " ಕಾರದಿಂದ - ಉಗ್ರಂ ವೀರಮ್ ಮಹಾ ವಿಷ್ಣುಂ

" ಉ " ಕಾರದಿಂದ " ವಿಷ್ಣು " ಅಂತ ತಿಳಿಸುತ್ತಾ ಅಂಥಹಾ ವಿಷ್ಣುವು " ಸ " ಕಾರದಿಂದ " ಸಾರತ್ವ " ವೆಂತಲೂ; " ಶ " ಕಾರದಿಂದ

" ಶಾಂತಸಂವಿದೆ " ಯೆಂತಲೂ; " ದ " - " ತ " ಕಾರದ 3ನೇ ವರ್ಣ " ಉಪೇಂದ್ರ " ರೋಪ.

" ಪಂಚ ಭೂತಗಳಲ್ಲೊಂದಾದ ರೂಪಕ್ಕೆ ಕಾರಣನಾದ ವಿದ್ಯಾಭಿಮಾನಿ ಅಂದರೆ " ಸುಶಮೀಂದ್ರ "

" ಸು " ಎಂದರೆ " ಸುಷ್ಟು " ಯೆಂತಲೂ..

" ಸುಷ್ಟು " ಎಂದರೆ " ಯಥಾರ್ಥ " ವೆಂತಲೂ; ಮಂತ್ರಾಲಯ ಪ್ರಭುಗಳ " ಮಂತ್ರಾರ್ಥ ಮಂಜರೀ " ಯಾ ವ್ಯಾಖ್ಯಾನದಲ್ಲಿ ತಿಳಿಸಿರುವಂತೆ " ಶ್ರೀ ಸುಶಮೀಂದ್ರತೀರ್ಥರು ಮೂಲರಾಮದೇವರ ರೂಪವನ್ನು ಚಿಂತಿಸುತ್ತಾ " ಪೂಜೆ ಮಾಡುವ ವೈಖರಿಗೆ ದ್ಯೋತಕವೆಂತ ತಿಳಿಸುತ್ತಾ..

" ದ " ಕಾರದಿಂದ " ರಮುಕ್ರೀಡಾಯಾಂ " ಯೆಂದರೆ ಆ ಮೂಲರಾಮ ರೂಪವನ್ನು ವೀಕ್ಷಿಸುತ್ತಾ, ಅದರಲ್ಲೇ ತಲ್ಲೀನರಾಗಿ ಆನಂದಿಸುವುದನ್ನು ಅವರು ಪೂಜೆ ಮಾಡುವ ಕಾಲದಲ್ಲಿ; ಭಾಗವಹಿಸಿ; ದೃಷ್ಟಿಯಿಂದ ನೋಡಿದವರ ಅನುಭವ.
ಅಂದ ಮೇಲೆ ಪರಮಾತ್ಮನ ರೂಪವನ್ನು ಕಂಡವರಿಗೆ ಪರಮಾತ್ಮನ ವಿಶೇಷ ಅನುಗ್ರಹವಿದೆ ಎಂತ ಹೇಳತಕ್ಕದ್ದೇನಿದೆ?"
*********************


'ಸಾರಸ್ವತ ಸಾನ್ನಿಧ್ಯ'ಲೇಖನ ಮಾಲೆಯ ತೊಂಬತ್ತಮೂರನೆಯ ಲೇಖನ- ಶ್ರೀಸುಶಮೀಂದ್ರತೀರ್ಥರು 
ಅಗಮ್ಯಮಹಿಮರಾದ ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರ ಮಹಿಮೆಗಳ ಪ್ರತ್ಯಕ್ಷ ಪ್ರತೀಕದಂತಿದ್ದವರು ಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರು. ಅಂತರ್ಯಾಮಿಯ ಅರಿವಿರದ ಶುಷ್ಕಪಾಂಡಿತ್ಯತುಂಬಿದ ಮಸ್ತಿಷ್ಕಕ್ಕಿಂತಲೂ, ನಿಷ್ಕಲ್ಮಶವಾದ ಹೃದಯ ಭಗವದಧಿಷ್ಠಾನವಾಗಬಲ್ಲದು ಎಂಬುದನ್ನು ತಿಳಿಸಲು ಇಳೆಗಿಳಿದವರು ಇವರು ಎಂಬಂತೆ ಇದ್ದ ಶ್ರೀಸುಶಮೀಂದ್ರತೀರ್ಥರು ತಮ್ಮ ಮುಗ್ಧತೆಯಿಂದಾಗಿ ಅವಧೂತರಂತೆ ಬದುಕಿದವರು. ಪೀಠಾಧಿಪತಿಗಳಾದರೂ ನಿರ್ಲಿಪ್ತತೆಯಿಂದ ಸಂತರಂತೆ, ತಮ್ಮ ಸರಳತೆಯಿಂದ,ಸಜ್ಜನಿಕೆಯಿಂದ ಸಂನ್ಯಾಸಾಶ್ರಮಕ್ಕೆ ಗೌರವವನ್ನು ತಂದಿತ್ತ ಶ್ರೀಸುಶಮೀಂದ್ರತೀರ್ಥರು ಜನಿಸಿದ್ದು 1926ರಲ್ಲಿ. ತಂದೆ ಶ್ರೀರಾಜಗೋಪಾಲಾಚಾರ್ಯರು ಹಾಗೂ ತಾಯಿ ಶ್ರೀಮತಿ ಪದ್ಮಾವತೀಬಾಯಿ. ಪೂರ್ವಾಶ್ರಮದ ನಾಮ ಶ್ರೀಸುಪ್ರಜ್ಞೇಂದ್ರಾಚಾರ್ಯರು. ಮಂತ್ರಾಲಯ ಶ್ರೀರಾಘವೇಂದ್ರಮಠಾಧೀಶರಾಗಿದ್ದ ಶ್ರೀಸುಪ್ರಜ್ಞೇಂದ್ರತೀರ್ಥರ ಪುಣ್ಯನಾಮವನ್ನೇ ಮಗನ ಹೆಸರನ್ನಾಗಿ ಶ್ರೀರಾಜಗೋಪಾಲಾಚಾರ್ಯರು ಇರಿಸಿದ್ದರು. ಪರಮಪೂಜ್ಯ ಶ್ರೀ ಸುಜಯೀಂದ್ರತೀರ್ಥರು ತಮ್ಮ ಪೂರ್ವಾಶ್ರಮದಲ್ಲಿ ಶ್ರೀಸುಪ್ರಜ್ಞೇಂದ್ರಾಚಾರ್ಯರಿಗೆ ಚಿಕ್ಕಪ್ಪನಾಗಬೇಕು. ಆಶ್ರಮಕ್ಕೆ ಪೂರ್ವದಲ್ಲಿ ಅನೇಕ ವರ್ಷಗಳ ಕಾಲ ಮೈಸೂರಿನ ಸುಬ್ಬರಾಯನಕೆರೆಯ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀರಾಘವೇಂದ್ರರ ಸೇವೆ. ಶ್ರೀಸುಪ್ರಜ್ಞೇಂದ್ರಾಚಾರ್ಯರು ಮೈಸೂರಿನ ಮಠದಲ್ಲಿ ಸಲ್ಲಿಸಿದ ನಿಷ್ಕಪಟಸೇವೆಗೆ ಒಲಿದ ಶ್ರೀಗುರುರಾಜರು ತಮ್ಮ ದಿವ್ಯವಾದ ಪೀಠವನ್ನು ಏರುವ, ಚತುರ್ಯುಗಮೂರ್ತಿ ಶ್ರೀಬ್ರಹ್ಮಕರಾರ್ಚಿತ, ಭಾವೀಬ್ರಹ್ಮ ಶ್ರೀಮಧ್ವಕರಾರ್ಚಿತ ದಿವ್ಯಮಂಗಳ ಮೂರುತಿಗಳನ್ನು ಪೂಜಿಸುವ ಮಹಾಭಾಗ್ಯವನ್ನು ಕರುಣಿಸಿದರು, ಮಾತ್ರವಲ್ಲ ತಮ್ಮ ಮಹಿಮಾತಿಶಯಗಳ ಅಭಿವ್ಯಕ್ತಿಗೆ ಮಾಧ್ಯಮವನ್ನಾಗಿ ಮಾಡಿಕೊಂಡರು. ಮಂತ್ರತುಲ್ಯವಾದ ಶ್ರೀರಾಘವೇಂದ್ರಸ್ತೋತ್ರವನ್ನು ರಚಿಸಿದ ಶ್ರೀಅಪ್ಪಣಾಚಾರ್ಯರ ಕರ್ಮಭೂಮಿ ಮಂತ್ರಾಲಯದ ಸಮೀಪದಲ್ಲಿನ ಬಿಚ್ಚಾಲೆಯಲ್ಲಿ ಶ್ರೀಸುಜಯೀಂದ್ರತೀರ್ಥ ಶ್ರೀಪಾದಂಗಳವರು 1985ರ ಮಾರ್ಚ್ 9ರಂದು ತಮ್ಮ ಉತ್ತರಾಧಿಕಾರಿಗಳನ್ನಾಗಿ ಶ್ರೀಸುಪ್ರಜ್ಞೇಂದ್ರಾಚಾರ್ಯರನ್ನು ನಿಯೋಜಿಸಿ, 'ಶ್ರೀಸುಶಮೀಂದ್ರತೀರ್ಥರು' ಎಂಬ ಆಶ್ರಮನಾಮದೊಂದಿಗೆ ವೇದಾಂತಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕಮಾಡಿದರು. ಶ್ರೀಸುಜಯೀಂದ್ರತೀರ್ಥರು ಶ್ರೀಹರಿಯ ಪಾದವನ್ನು ಸೇರಿದ ನಂತರ ಸಂಸ್ಥಾನ ನಿರ್ವಹಣೆಯ ಪೂರ್ಣಜವಾಬ್ದಾರಿಯನ್ನು ವಹಿಸಿದಕೊಂಡ ಶ್ರೀಸುಶಮೀಂದ್ರರು ಮಂತ್ರಾಲಯದ ಶ್ರೀರಾಘವೇಂದ್ರಮಠದ ಸರ್ವಾಂಗೀಣ ಅಭಿವೃದ್ದಿಯ ಹೊಸಶಕೆಯನ್ನೇ ಪ್ರಾರಂಭಿಸಿದರು. ಶ್ರೀಮೂಲರಾಮಚಂದ್ರದೇವರ ಪ್ರತಿನಿತ್ಯದಕನಕಾಭಿಷೇಕಕ್ಕೆ ಸುವರ್ಣಸಿಂಹಾಸನ, ಧ್ವಜಪತಾಕೆ,ಛತ್ರಚಾಮರಗಳು, ಸುವರ್ಣಮಯ ತಟ್ಟೆ,ಸುವರ್ಣಶ್ರೀಲಕ್ಷ್ಮೀಪ್ರತೀಕಗಳು ಶ್ರೀಗುರುರಾಜರಿಗೆ ಸುವರ್ಣರಥ, ಮೂಲ ಬೃಂದಾವನಕ್ಕೆ ಸುವರ್ಣಕವಚ, ಚಿನ್ನದ ಪಲ್ಲಕ್ಕಿ, ಮೊದಲಾದವುಗಳ ಸಮರ್ಪಣೆ ಒಂದೆಡೆಯಾದರೆ, ಅನ್ನಪೂರ್ಣ,ರಂಗಭವನ ಭೋಜನಶಾಲೆಗಳು, ರಂಗಸಭಾಂಗಣ, ನದಿಯಬಳಿ ಸ್ನಾನಘಟ್ಟ, ಮಾರಾಟಮಳಿಗೆಗಳು, ಶ್ರೀರಾಘವೇಂದ್ರಗುರುಸಾರ್ವಭೌಮವಿದ್ಯಾಪೀಠದ ಕಟ್ಟಡ, ಸಿಬ್ಬಂದಿ ವಸತಿಗೃಹ, ಗೋಶಾಲೆ, ಗಜಶಾಲೆ, ಶ್ರೀಸುಜಯೀಂದ್ರ ಆರೋಗ್ಯಶಾಲೆ, ಶ್ರೀವಿಜಯೀಂದ್ರನಗರದಲ್ಲಿ ಸಿಬ್ಬಂದಿ ವಸತಿಗೃಹ, ಪೂಜಾಮಂದಿರ ಹಾಗೂ ಧ್ಯಾನಮಂದಿರ, ಶ್ರೀರಾಘವೇಂದ್ರಸ್ವಾಮಿಗಳು ಪ್ರತಿಷ್ಠಾಪಿಸಿದ ಶ್ರೀವೇಂಕಟೇಶ್ವರ ದೇಗುಲದ ನವೀಕರಣ,ಅಸಂಖ್ಯವಸತಿಗೃಹಗಳ ನಿರ್ಮಾಣ ಮೊದಲಾದ ಕಾರ್ಯಗಳು ಮತ್ತೊಂದೆಡೆ. ಶ್ರೀರಾಘವೇಂದ್ರಗುರುಸಾರ್ವಭೌಮರು ಶ್ರೀಸುಶಮೀಂದ್ರತೀರ್ಥರಲ್ಲಿ ವಿಶೇಷವಾಗಿ ಸನ್ನಿಹಿತರಾಗಿದ್ದರು ಎಂಬುದಕ್ಕೆ ದ್ಯೋತಕವಾಗಿ ದೇಶದಾದ್ಯಂತ 82 ಕಡೆಗಳಲ್ಲಿ  ಶ್ರೀರಾಘವೇಂದ್ರರ ಮೃತ್ತಿಕಾ ಬೃಂದಾವನಗಳ ಪ್ರತಿಷ್ಠೆ, 8 ಕಡೆ ಬೃಂದಾವನಗಳ ಪುನರ್ ಪ್ರತಿಷ್ಠೆ. ವಿದ್ವಾಂಸರು, ವಿದ್ಯಾರ್ಥಿಗಳ ಬಗ್ಗೆ ಶ್ರೀಗಳಿಗೆ ವಿಶೇಷವಾದಂತಹ ಆದರ. ಶ್ರೀಗುರುಸಾರ್ವಭೌಮವಿದ್ಯಾಪೀಠಕ್ಕೆ ನೂತನ ಕಟ್ಟಡನಿರ್ಮಾನ, ವಿದ್ವಾಂಸರಿಗೆ ನಿವಾಸಗಳು, ವಿದ್ಯಾರ್ಥಿಗಳಿಗೆ ವಸತಿಸೌಕರ್ಯ ಒದಗಿಸುವುದರೊಂದಿಗೆ, ಶ್ರೀರಾಘವೇಂದ್ರಗುರುಸಾರ್ವಭೌಮರ ಆರಾಧನಾ ಸಂದರ್ಭದಲ್ಲಿ ವಾಙ್ಮಯಲೋಕಕ್ಕೆ ವಿಶಿಷ್ಟವಾದಂತಹ ಕೊಡುಗೆ ನೀಡಿದ ವಿದ್ವಾಂಸರನ್ನು ಗೌರವಿಸಲು' ಶ್ರೀರಾಘವೇಂದ್ರಾನುಗ್ರಹ' ಪ್ರಶಸ್ತಿ, ಹಾಗೆಯೆ ಶ್ರೀವಿಜಯೀಂದ್ರಪ್ರಶಸ್ತಿ, ಶ್ರೀರಘುನಂದನಪ್ರಶಸ್ತಿ, ಶ್ರೀಧೀರೇಂದ್ರಪ್ರಶಸ್ತಿ, ಶ್ರೀಕವೀಂದ್ರಪ್ರಶಸ್ತಿ, ಆಸ್ಥಾನವಿದ್ವಾನ್ ಪ್ರಶಸ್ತಿ, ಶ್ರೀಸುಜಯಶ್ರೀಪ್ರಶಸ್ತಿಗಳ ಸ್ಥಾಪನೆ. ಶ್ರೀರಘುನಂದನತೀರ್ಥರ ಪಂಚಶತಮಾನೋತ್ಸವ ಸಂದರ್ಭದಲ್ಲಿ ಏಕಕಾಲದಲ್ಲಿ 100 ಗ್ರಂಥಗಳಿಗೂ ಹೆಚ್ಚು ಗ್ರಂಥಗಳನ್ನು ಪ್ರಕಟಮಾಡಿದ್ದು ಚಾರಿತ್ರಿಕ ದಾಖಲೆಯೇ ಸರಿ. ದಾಸಸಾಹಿತ್ಯದ ಪ್ರಚಾರಕ್ಕಾಗಿ 'ವಿಜಯಸಂಪದ'ಮಾಸಪತ್ರಿಕೆಯನ್ನು ಪ್ರಾರಂಭಿಸಿದ್ದು ಶ್ರೀಗಳ ಮತ್ತೊಂದು ಮಹತ್ತರವಾದ ಕೊಡುಗೆ.104 ಗ್ರಂಥಗಳನ್ನು ರಚಿಸಿದ್ದ ಶ್ರೀವಿಜಯೀಂದ್ರರ ಪೀಠದಲ್ಲಿ ವಿರಾಜಮಾನರಾದ ಯತಿವರ್ಯರು ಮಾಡಿದ ಈ ಸಾಧನೆ ಶ್ರೀವಿಜಯೀಂದ್ರರು ಶ್ರೀಗಳನ್ನು ಹರಸಿದ ಪ್ರತೀಕವೇ ಸರಿ. 'ಧರ್ಮಶಾಸ್ತ್ರದರ್ಪಣ' 'ಸ್ತೋತ್ರಮುಕ್ತಾವಲಿ', 'ವ್ರತಮುಕ್ತಾವಲಿ', 'ಸದಾಚಾರ ಮುಕ್ತಾವಲೀ' ಮೊದಲಾದ ಕೃತಿಗಳನ್ನು ಅತ್ಯಂತ ಕಡಿಮೆಬೆಲೆಯಲ್ಲಿ ಸಜ್ಜನರಿಗೆ ಒದಗಿಸಿದ ಮಹದುಪಕಾರವನ್ನು ಮರೆಯುವರುಂಟೆ?
ಉಪಲಬ್ಧವಿರುವ ಸಕಲ ಟಿಪ್ಪಣಿಗಳೊಂದಿಗೆ  ಶ್ರೀಜಯತೀರ್ಥಗುರುಸಾರ್ವಭೌಮರ ವಿಶ್ವಮಾನ್ಯ ಕೃತಿ 'ಶ್ರೀಮನ್ನ್ಯಾಯಸುಧಾ'ಗ್ರಂಥವನ್ನು ಪ್ರಕಟಿಸಿದ್ದು ಶ್ರೀಗಳ ಕಾಲದ ಮಹೋನ್ನತ ದಾಖಲೆ. ಶ್ರೀಜಿತಾಮಿತ್ರರನ್ನು ನೆನಪಿಸುವಂತೆ ಲೌಕಿಕವ್ಯವಹಾರಗಳಿಂದ ವಿಮುಖರಾಗಿ, ಶ್ರೀಮೂಲರಾಮನ,ಮುಖ್ಯಪ್ರಾಣನ,ಗುರುರಾಜರನ್ನು ಆಂತರ್ಯದಲ್ಲಿ ಸದಾ ಧ್ಯಾನಿಸುವ ಅವಧೂತಶಿರೋಮಣಿಯಂತೆ ತಮ್ಮ ಜೀವನವನ್ನು ನಡೆಸಿದವರು ಶ್ರೀಸುಶಮೀಂದ್ರರು. ತಮ್ಮ ಆಶ್ರಮನಾಮಕ್ಕೆ ಅನ್ವರ್ಥವಾಗುವಂತೆ 'ಶಮಿ'ಗಳಾಗಿ, ತಮ್ಮಪೂರ್ವಾಶ್ರಮದ ನಾಮದಂತೆ 'ಸುಪ್ರಜ್ಞೆ'ಯನ್ನು ಸದಾ ಹೊಂದಿದ್ದ ಶ್ರೀಸುಶಮೀಂದ್ರರು ಶ್ರೀಮಠದ ಪೀಠಕ್ಕೆ ಸರ್ವರೀತಿಯಲ್ಲಿಯೂ ಯೋಗ್ಯರಾದ ಶ್ರೀಸುಶೀಲೇಂದ್ರಾಚಾರ್ಯರಿಗೆ ಆಶ್ರಮನೀಡಿ ಶ್ರೀಸುಯತೀಂದ್ರತೀರ್ಥರು ಎಂಬ ನಾಮಕರಣದೊಂದಿಗೆ ವೇದಾಂತಸಾಮ್ರಾಜ್ಯದಲ್ಲಿ ಅಭಿಷೇಚನಮಾಡಿದರು. 11-04-2009 ರ ವಿರೋಧಿನಾಮ ಸಂವತ್ಸರದ ಚೈತ್ರಬಹುಳ ದ್ವಿತೀಯ ಶ್ರೀಮೂಲರಾಮರಸಾನ್ನಿಧ್ಯಸೇರಿದ ಶ್ರೀಗಳ ಅನುಗ್ರಹ ಶ್ರೀಸುಯತೀಂದ್ರತೀರ್ಥರಲ್ಲಿ ಎಷ್ಟಿತ್ತೆಂದರೆ, ಮಂತ್ರಾಲಯ ಕ್ಷೇತ್ರ ಹಿಂದೆಂದೂ ಕಾಣದ ಪ್ರಕೃತಿಯ ವಿಕೋಪಕ್ಕೆ ಸಿಲುಕಿ, ಸಂಪೂರ್ಣಜಲಾವೃತವಾಗಿ, ಅಪಾರ ಪ್ರಮಾಣದ ಕಷ್ಟನಷ್ಟಗಳಿಗೆ ಸಿಲುಕಿದ ಸಂದರ್ಭದಲ್ಲಿಯೂ ಕೇವಲ ನಾಲ್ಕು-ಐದು ತಿಂಗಳುಗಳಲ್ಲಿ ಶ್ರೀಸುಯತೀಂದ್ರಶ್ರೀಗಳು ಮಂತ್ರಾಲಯದ ಪುನರ್ ನಿರ್ಮಾಣಕಾರ್ಯವನ್ನು ಸಾಧ್ಯಗೊಳಿಸಿದರು. ತಮ್ಮ ಗುರುಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿ, ಅಷ್ಟೇ ಸಮರ್ಥರಾದ ಉತ್ತರಾಧಿಕಾರಿಗಳಿಗೆ ಪೀಠ ಒಪ್ಪಿಸಿ ಬೃಂದಾವನಸ್ಥರಾದ ಶ್ರೀಸುಯತೀಂದ್ರತೀರ್ಥರಿಗೆ ಅನಂತ ನಮನಗಳು. ಶ್ರೀಸುಶಮೀಂದ್ರತೀರ್ಥರು ಶ್ರೀಹರಿಯ ಪಾದವನ್ನು ಸೇರುವುದಕ್ಕೆ ಕೆಲವೇ ದಿನಗಳ ಹಿಂದೆ ಅನುಗ್ರಹಿಸಿ ನೀಡಿದ ರಜತ ಪಂಚಪಾತ್ರೆಯನ್ನು ದೇವಪೂಜಾಸಂದರ್ಭದಲ್ಲಿ ಅಭಿಷೇಕಕ್ಕಾಗಿ ಬಳಸುವಾಗಲೆಲ್ಲಾ ಶ್ರೀಗಳ ನೆನಪಾಗುತ್ತದೆ.
ಶ್ರೀಸುಶಮೀಂದ್ರತೀರ್ಥರ ಮಹಾಸಾಧನೆಗೆ ಸಂಪೂರ್ಣವಾಗಿ ತಮ್ಮನ್ನು ಸಮರ್ಪಿಸಿಕೊಂಡ ಮತ್ತೊಬ್ಬ ಮಹಾನ್ ಚೇತನ ಶ್ರೀರಾಜಾ.ಎಸ್.ರಾಜಗೋಪಾಲಾಚಾರ್ಯರು. ಶ್ರೀಗಳ ಪೂರ್ವಾಶ್ರಮದ ಪುತ್ರರಾಗಿ, ನಂತರ ಶ್ರೀಗಳ ಆಪ್ತಕಾರ್ಯದರ್ಶಿಯಾಗಿ ಪೂಜ್ಯಶ್ರೀಸುಶಮೀಂದ್ರತೀರ್ಥರ ಪ್ರೇರಣೆ, ಅನುಗ್ರಹದಂತೆ ನಡೆದ ಸಕಲ ಕಾರ್ಯಗಳಲ್ಲಿಯೂ ನಿರಂತರ ಕ್ರಿಯಾಶೀಲರಾಗಿ, ಅತ್ಯುನ್ನತ ಮಟ್ಟದ ಸಂಘಟಕರಾಗಿ, ಚೈತನ್ಯದ ಚಿಲುಮೆಯಾಗಿ ಕಾರ್ಯನಿರ್ವಹಿಸಿದ ಶ್ರೀರಾಜಗೋಪಾಲಾಚಾರ್ಯರು ಶ್ರೀಗಳಿಗೆ ಬಲಗೈನಂತೆ ಇದ್ದವರು. ಅಕಾಲದಲ್ಲಿ, ಅನಿರೀಕ್ಷಿತವಾಗಿ ಶ್ರೀಹರಿಯ ಪಾದ ಸೇರಿದ ಶ್ರೀರಾಜಗೋಪಾಲಾಚಾರ್ಯರ ಉಪಕಾರವನ್ನು ಮಾಧ್ವಜನತೆ ಮರೆಯುವಂತಿಲ್ಲ. 
ಶ್ರೀಗುರುರಾಜರ ಅಂತರ್ಯಾಮಿ, ಶ್ರೀಮಧ್ವವಲ್ಲಭ ಶ್ರೀಮೂಲರಾಮ, ದಿಗ್ವಿಜಯರಾಮ,ಜಯರಾಮ,ವೇದವ್ಯಾಸಾಭಿನ್ನ ಶ್ರೀಕೃಷ್ಣ ಪ್ರೀತನಾಗಲಿ.
******************


🌻 ಶ್ರೀಸುಶಮೀಂದ್ರ ತೀರ್ಥರು 🌻

ಶ್ರೀ ಸುಶಮೀಂದ್ರ ತೀರ್ಥರು ಪೀಠದಲ್ಲಿ ವಿರಾಜಮಾನರಾಗಿದ್ದಾಗ ನಡೆದ ಸತ್ಯ ಘಟನೆ. 
ಶ್ರೀ ಸುಶಮೀಂದ್ರ ತೀರ್ಥರದು ಅವರ ಹೆಸರಿಗೆ ಹೇಳಿ ಮಾಡಿಸಿದ ವ್ಯಕ್ತಿತ್ವ. ಸದಾ ಮುಗುಳ್ನಗೆ ಬೀರುವ ಅವರ ಮಂದಹಾಸಪೂರಿತ ಮುಖಾರವಿಂದ ರಾಯರನ್ನೆ ಕಣ್ಣು ಮುಂದೆ ತರುತ್ತದೆ. ಇಂತಹದೇ ವ್ಯಕ್ತಿತ್ವವನ್ನು ಹೊಂದಿದವರು ಪಲಿಮಾರು-ಭಂಡಾಕಕೇರಿ ಮಠಾಧೀಶರಾದ ಶ್ರೀ ವಿದ್ಯಾಮಾನ್ಯ ತೀರ್ಥರು. 

ಈ ಇಬ್ಬರೂ ಯತೀಶ್ವರರಿಗೂ ಅವಿನಾಭಾವ ಸಂಬಂಧವಿತ್ತು. ಅವರಿಬ್ಬರೂ ಭೇಟಿಯಾದಾಗ ಅವರಿಬ್ಬರ ವ್ಯವಹಾರಗಳು ನೋಡುಗರಿಗೆ ಅರ್ಥವಾಗುತ್ತಲೇ ಇರಲಿಲ್ಲ. ಇವರ ಜೀವನದಲ್ಲಿ ನಡೆದ ಪ್ರಮುಖ ಘಟನೆಗಳು.

1) ಶ್ರೀಸುಶಮೀಂದ್ರ ತೀರ್ಥರು ಹಾಗೂ ಶ್ರೀ ವಿದ್ಯಾಮಾನ್ಯರು ಒಮ್ಮೆ ಒಂದು ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು. ಎಂದಿನಂತೆ ಶ್ರೀಸುಶಮೀಂದ್ರರು ಮಂದಹಾಸ ಬೀರುತ್ತ ವೇದಿಕೆ ಅಲಂಕರಿಸಿದರು. ಕಾರ್ಯಕ್ರಮದುದ್ದಕ್ಕೂ ಶ್ರೀವಿದ್ಯಾಮಾನ್ಯರು ಶ್ರೀಸುಶಮೀಂದ್ರರನ್ನೇ ದಿಟ್ಟಿಸಿ ನೋಡತೊಡಗಿದ್ದರು.ಅನಂತರ ಶ್ರೀಗಳವರು "ನಾನು ಇವತ್ತು ಶ್ರೀಸುಶಮೀಂದ್ರರಲ್ಲಿ ಸಾಕ್ಷಾತ್ ಗುರುಸಾರ್ವಭೌಮರನ್ನು ಕಂಡೆ" ಉದ್ಗಾರ ಎತ್ತಿದ್ದರು. ಅಂದಿನಿಂದ ಆ ಇಬ್ಬರು ಜ್ಞಾನಿಗಳು ಭೆಟಿಯಾದಾಗ ನೋಡುವದೇ ಒಂದು ಆನಂದ. 

2) ಶ್ರೀ ವಿದ್ಯಾಮಾನ್ಯತೀರ್ಥರ ಕೊನೆಗಾಲ ಸಮೀಪಿಸಿದಾಗ,  ಆವಾಗ ಅವರು ವ್ಯಕ್ತಪಡಿಸಿದ ಇಚ್ಛೆ ಅಶ್ಚರ್ಯ ಮೂಡಿಸುವದು. ಶ್ರೀಗಳು ಅನಾರೋಗ್ಯದಿಂದಿದ್ದರೂ "ನಮಗೆ ಶ್ರೀಸುಶಮೀಂದ್ರ ತೀರ್ಥರನ್ನು ನೋಡಬೇಕಾಗಿದೆ , ಅವರ ಭೇಟಿಯಾಗಬೇಕಿದೆ " ಎಂದರು. ಕೂಡಲೇ ರಾಯರ ಮಠಕ್ಕೆ ವಿಷಯ ಮುಟ್ಟಲು ಶ್ರೀಸುಶಮೀಂದ್ರರು ಒಡೋಡಿ ಬಂದರು. ಅಲ್ಲಿ ನಡೆದದ್ದು ಮಾತ್ರ ಇತಿಹಾಸ. ಶ್ರೀವಿದ್ಯಾಮಾನ್ಯರು ಅವರನ್ನು ನೋಡಿ ನಿಟ್ಟುಸಿರು ಬಿಟ್ಟು ಶ್ರೀಗಳ ಕೈಗಳನ್ನು ತೆಗೆದುಕೊಂಡು ತಮ್ಮ ಎದೆ ಮೇಲೆ ಕೈಯಾಡಿಸಿಕೊಂಡು ಈಗ ಸಮಾಧಾನ ಆಯ್ತು ಅಂದರಂತೆ!! ಇದು ಶ್ರೀಸುಶಮೀಂದ್ರ ತೀರ್ಥರ ಕಣ ಕಣದಲ್ಲಿ ತುಂಬಿದ್ದ ಶ್ರೀಗುರುಸಾರ್ವಭೌಮರ ಸನ್ನಿಧಾನವಿಶೇಷವಲ್ಲದೇ ಮತ್ತೇನು ? 

ಇಂತಹ ಸಹೃದಯತ್ವವನ್ನು , ಆ ಎರೆಡು ಶಿಶುಸ್ವಭಾವದ , ಶಮ-ದಮಾದಿಗುಣಗಳಿಗೆ ಹೆಸರಾದ , ಮಾಧ್ವರ ಮನೆಮಾತಾದ ಪೀಠಾಧೀಶರ ಈ ಅನನ್ಯ-ಅಲೌಕಿಕ ಬಾಂಧವ್ಯ ಕಂಡು ಪೂಜ್ಯ ಪಲಿಮಾರು ಮಾಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥರು ಉದ್ಗಾರ ತೆಗೆದದ್ದು ಹೀಗೆ.

"ಶ್ರೀ ಸುಶಮೀಂದ್ರತೀರ್ಥರ ಕಾಲ ನಾವು ಕಂಡ ಸುವರ್ಣಯುಗ. ಅವರು ಹರಿ-ಗುರುಗಳನ್ನು ಅನನ್ಯವಾಗಿ ಮೆಚ್ಚಿಕೊಂಡಿದ್ದರು. ಮುಗ್ಧ-ನಿಶ್ಕಲ್ಮಶರಾಗಿದ್ದ ಅವರು ನಮ್ಮ ಗುರುಗಳಿಗೆ ಅತ್ಯಂತಪ್ರೀತಿಪಾತ್ರರು. " ಸಮಾನಶೀಲವ್ಯಸನೇಷು ಸಖ್ಯಂ" ಎಂಬಂತೆ ಇಬ್ಬರ ಮನಸ್ಥಿತಿಯು ಒಂದೇ ಇದ್ದರಿಂದ ಪರಸ್ಪರ ಅತ್ಯಂತ ಪ್ರಿತಿಪಾತ್ರರಾಗಿದ್ದರು.ಇವರ ಆ ಸ್ವಭಾವವೇ ನಮ್ಮನ್ನು ಇವರತ್ತ ಆಕರ್ಷಿಸಿತು.ಜನತೆಯ ಸಂತೀಷಕ್ಕಾಗಿ ತೀರ್ಥ-ಪ್ರಸಾದ-ಮುದ್ರೆ-ಮಂತ್ರಾಕ್ಷತೆಗಳ ಮೂಲಕ ತಮ್ಮನ್ನ ಅರಸಿಬಂದ ಇಡಿ ಸಮಾಜವನ್ನು ಉದ್ಧಾರಮಾಡಿದವರು. ಪ್ರಕೃತ ಅವರು ವೃಂದಾವನಸ್ಥರಾಗಿದ್ದರೂ ಮಾಧ್ವರ ವೃಂದಗಳಲ್ಲಿ ಸದಾ ವಿರಾಜಮಾನರಾಗಿದ್ದಾರೆ. ಇಂತಹ ಶ್ರೀಸುಶಮೀಂದ್ರರು ನಮಗೆ ಸಿಗುವದು ಬಹಳ ಅಪರೂಪ. " 

ಇಂತಹ ಗುರುಗಳನ್ನು ಪಡೆದ ನಾವೇ ಧನ್ಯ.

ಸುಧೀಜನ ಸುಮಂದಾರಂ ಸುಧೀಂದ್ರಸುತಸುಪ್ರಿಯಂ
ಸುಶಮೀಂದ್ರಗುರುಂ ವಂದೇ 

ಸುಜಯೀಂದ್ರಕರೋದ್ಭವಮ್🙏🏻🙏🏻
****
ನಡೆದಾಡುವ ರಾಯರು ಶ್ರೀಸುಶಮೀಂದ್ರತೀರ್ಥರು
**********
ಶ್ರೀಸುಶಮೀಂದ್ರತೀರ್ಥರು ಶ್ರೀರಾಯರ ಮಠದ ಪರಂಪರೆಯಲ್ಲಿ ವೇದಾಂತ ಸಾಮ್ರಾಜ್ಯ ಸಿಂಹಾಸನಾಧೀಶ್ವರರಾಗಿ 21ವರ್ಷಗಳ ಕಾಲ
ಸರ್ವಜ್ಞಪೀಠವನ್ನಲಂಕರಿಸಿದ್ದ ಯತಿಗಳು.
ಇವರುಶ್ರೀಸುಜಯೀಂದ್ರತೀರ್ಥಶ್ರೀಪಾದಂಗಳವರಿಂದಸನ್ಯಾಸಾಶ್ರಮ ಸ್ವೀಕರಿಸಿದ ಯತಿಗಳು.
ಇವರ ಪೂರ್ವಾಶ್ರಮದ ಹೆಸರು ಸುಪ್ರಜ್ಞೇಂದ್ರಾ
ಚಾರ್ಯರು ಎಂದು.ಇವರು ಹುಟ್ಟಿದ್ದು ಶ್ರೀಕಂಠೇಶ್ವರನಸನ್ನಿಧಾನವಿರುವನಂಜನಗೂಡಿನಲ್ಲಿ.ಶ್ರೀಕಂಠೇಶ್ವರನಲ್ಲಿಅನನ್ಯಭಕ್ತಿಸುಪ್ರಜ್ಞೇಂದ್ರಾಚಾರ್ಯರಿಗೆ,ಪ್ರತಿ ಸೋಮವಾರ ಶ್ರೀಕಂಠೇಶ್ವರನ ದರ್ಶನ ಮಾಡುವುದನ್ನು ತಪ್ಪಿಸುತ್ತಿರಲಿಲ್ಲ.ಇವರು ಮಗುವಾಗಿದ್ದಾಗಲೇ ಇವರ ತಂದೆತಾಯಿಯರು ಅಂದಿನ ಶ್ರೀರಾಯರ ಮಠದಪೀಠಾಧಿಪತಿಗಳಾಗಿದ್ದ ಶ್ರೀಸುಶೀಲೇಂದ್ರತೀರ್ಥರಲ್ಲಿ ಆಶೀರ್ವಾದ ಮಾಡಿಸಿಕೊಂಡು ಬರಲು ಹೋದಾಗ ಮಗುವನ್ನು ನೋಡಿ ಶ್ರೀಗಳವರು ಬಹಳ ಸಂತೋಷದಿಂದ ತಲೆಯಮೇಲೆ ಕೈಯಿಟ್ಟು ಹರಸಿ ಮಗುವಿಗೆ ಚಿನ್ನದ ಆಭರಣವನ್ನುಕೊಟ್ಟುಆಶೀರ್ವದಿಸಿಕಳಿಸಿ
ಕೊಡುತ್ತಾರೆ.
ಇವರು ವಿದ್ವಾನ್ ಹುಲಿ ಶ್ರೀನಿವಾಸಾಚಾರ್ಯರಲ್ಲಿ
ವೇದಾಂತ ಶಾಸ್ತ್ರಾಧ್ಯಯನ ಮಾಡುತ್ತಾರೆ.ತಮ್ಮ
ತಂದೆಯವರು ನಡೆಸಿಕೊಂಡು ಬಂದಂತೆ ಶ್ರೀಗುರು
ರಾಜರಸೇವೆಯನ್ನುಮಾಡುತ್ತಿರುತ್ತಾರೆ.ಮೈಸೂರಿನಲ್ಲಿರುವ ಸುಬ್ಬರಾಯನಕೆರೆ ಶ್ರೀರಾಯರ ಮಠದಲ್ಲಿ ಧರ್ಮಾಧಿಕಾರಿಗಳಾಗಿ ಸೇವೆಸಲ್ಲಿಸುತ್ತಿರುತ್ತಾರೆ.
ಮುಂದೆ ಶ್ರೀರಾಯರಮಠದ ಪೀಠಾಧಿಪತಿಗಳಾಗಿದ್ದ ಶ್ರೀಸುಜಯೀಂದ್ರತೀರ್ಥರು ಇವರನ್ನು ಮಂತ್ರಾಲಯಕ್ಕೆ ಮೂಲರಾಯರ ಸನ್ನಿಧಿಗೇ ಕರೆಸಿಕೊಳ್ಳುತ್ತಾರೆ.ಮಂತ್ರಾಲಯಕ್ಕೆ ಬಂದಮೇಲೆ ಶ್ರದ್ಧಾಭಕ್ತಿಯಿಂದ ಶ್ರೀಗುರುರಾಯರಸೇವೆಯನ್ನು ಮಾಡುವುದರೊಂದಿಗೆ ಶ್ರೀಮಠದ ಧಾರ್ಮಿಕ ಕಾರ್ಯಗಳಲ್ಲಿಸಕ್ರಿಯವಾಗತೊಡಗಿಸಿಕೊಳ್ಳತೊಡಗಿದರು.ಮುಗ್ಧ ಮನಸ್ಸಿನ ಆಚಾರ್ಯರ ಸೇವಾ ಮನೋಭಾವನೆ ಶ್ರೀಸುಜಯೀಂದ್ರತೀರ್ಥಗುರುಗಳ ಗಮನವನ್ನೂ ಸೆಳೆಯಿತು.ಶ್ರೀಗಳವರ ಮನಸ್ಸಿನಲ್ಲಿ ತಮ್ಮನಂತರಸಂಸ್ಥಾನವನ್ನುಮುಂದುವರೆಸಿಕೊಂಡು ಹೋಗಲು ಆಚಾರ್ಯರು ಸೂಕ್ತ ವ್ಯಕ್ತಿ ಎಂದು
ತೀರ್ಮಾನಿಸಿದರು.ಶ್ರೀಗಳವರ ಮನಸ್ಸಿನಲ್ಲಿ ಬಂದ ಆಲೋಚನೆಯಂತೆಯೇ ಶ್ರೀಮೂಲರಾಮದೇವರು
ಮತ್ತು ಶ್ರೀರಾಯರು ಸುಜಯೀಂದ್ರತೀರ್ಥರಿಗೆಸ್ವಪ್ನ ಸೂಚನೆಯಮೂಲಕಅವರನ್ನುಉತ್ತರಾಧಿಕಾರಿಯಾಗಿಮಾಡಿಕೊಳ್ಳುವಂತೆತಿಳಿಸುತ್ತಾರೆ.1985ಇಸವಿ ಮಾರ್ಚ್19ನೆಯದಿನಾಂಕ,ಫಾಲ್ಗುಣಶುಕ್ಲಪಕ್ಷದ ತ್ರಯೋದಶಿಯಂದು ಶ್ರೀಸುಜಯೀಂದ್ರತೀರ್ಥರು
ಆಚಾರ್ಯರಿಗೆ ಸನ್ಯಾಸಾಶ್ರಮನ್ನು ಕೊಟ್ಟು ಶ್ರೀಸುಶ
ಮೀಂದ್ರತೀರ್ಥ ರೆಂದು ನಾಮಕರಣಮಾಡಿ ಸಂಸ್ಥಾನವನ್ನು ವಹಿಸಿಕೊಡುತ್ತಾರೆ.
ಶ್ರೀಸುಶಮೀಂದ್ರತೀರ್ಥರು ಪೀಠಾಧಿಪತಿಗಳಾದ ಮೇಲೆಅವರಗುರುಗಳಾದಶ್ರೀಸುಜಯೀಂದ್ರತೀರ್ಥರ ಅಪೇಕ್ಷೆಇದ್ದಂತೆ ಅವರ ಕಾಲದಯೋಜನೆಗಳನ್ನು ಹಂತಹಂತವಾಗಿ ಕಾರ್ಯರೂಪಕ್ಕೆ ತರುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.ದಿನದಿನಕ್ಕೂ ಮಂತ್ರಾಲಯ ಕ್ಷೇತ್ರ ಅಭಿವೃದ್ಧಿ ಕಾಣತೊಡಗಿತು.
ಗುರುರಾಜರ ದರ್ಶನಕ್ಕೆ ಬರುವ ಭಕ್ತರಿಗೆ ಅವರ 
ಕಷ್ಟ ಕಾರ್ಪಣ್ಯಗಳನ್ನು ವಿಚಾರಿಸಿ "ಗುರುರಾಜರು
ನಿಮಗೆ ಒಳ್ಳೆಯದನ್ನು ಮಾಡುತ್ತಾರೆ "ಎಂದು ತಮ್ಮ
ಹಸನ್ಮುಖದಿಂದ ಹೃದಯಾಂತರಾಳದಿಂದ ಆಶೀರ್ವದಿಸುತ್ತಿದ್ದರು.ಶ್ರೀಗಳವರು ಶ್ರೀರಾಯರನ್ನು ಪ್ರಾರ್ಥಿಸಿ ಭಕ್ತಾದಿಗಳಿಗೆ ಕೊಟ್ಟ ಅನುಗ್ರಹ ಮಂತ್ರಾ
ಕ್ಷತೆಯಿಂದ ಭಕ್ತರ ಕಷ್ಟಗಳು ನಿವಾರಣೆ
ಯಾಗುತ್ತಿರುವುದುಭಕ್ತರಿಂದಕೇಳಿಬರತೊಡಗಿತು.ಹೀಗೆ ಶ್ರೀಗಳ ಕೀರ್ತಿಯು ಎಲ್ಲಾಕಡೆಯೂ ಹರಡತೊಡಗಿತು.ತಮ್ಮ ಗುರುಗಳು ಸ್ಥಾಪಿಸಿದ್ದ ಶ್ರೀಗುರುಸಾರ್ವಭೌಮ ವಿದ್ಯಾಪೀಠವನ್ನು ಯಶಸ್ವಿಯಾಗಿನಡೆಸಿಕೊಂಡುಹೋಗುತ್ತಿದ್ದರು.
ಯಾರು ಕೇಳಿದರೂ ನಾವೇನೂ ಮಾಡುತ್ತಿಲ್ಲ,ಎಲ್ಲಾ ರಾಯರು ನಮ್ಮಲ್ಲಿ ಇದ್ದು ಕೆಲಸಗಳನ್ನು ಮಾಡಿಸುತ್ತಿದ್ದಾರೆ ಎಂದು ಹೇಳುತ್ತಿದ್ದರು ಶ್ರೀಸುಶಮೀಂದ್ರತೀರ್ಥರು.ಶ್ರೀಸುಶೀಲೇಂದ್ರತೀರ್ಥರ ಕಾಲದಲ್ಲಿ ಪ್ರಾರಂಭವಾದ ಶ್ರೀಮತ್ಸಮೀರ ಸಮಯ ಸಂವರ್ಧಿನೀ ವಿದ್ವತಸಭೆಯನ್ನು ಇನ್ನೂ ಹೆಚ್ಚಿನವೈಭವದಿಂದನಡೆಸುತ್ತಾಮುಂದುವರೆಸಿದರು
ಪಂಡಿತರನ್ನು ಗೌರವಿಸಿ ಮತ್ತು ಪೋಷಿಸಿದವರು
ಶ್ರೀಗಳವರು.ಶ್ರೀಗಳವರ ಕಾಲದಲ್ಲಿ ಹಲವಾರು ಗ್ರಂಥಗಳನ್ನು ಪ್ರಕಟಿಸಲಾಯ್ತು.
ಶ್ರೀಸುಶಮೀಂದ್ರತೀರ್ಥರು ದೇಶದ ಉದ್ದಗಲಕ್ಕೂ ಸಂಚರಿಸಿ,ಭಕ್ತವೃಂದವನ್ನು ಒಂದುಗೂಡಿಸಿ ಕೆಲವು
ಕಡೆಗಳಲ್ಲಿ ಶ್ರೀರಾಯರ ಮೃತ್ತಿಕಾವೃಂದಾವನವನ್ನು
ಪ್ರತಿಷ್ಠಾಪಿಸಿದ್ದಾರೆ.ಶ್ರೀಸುಶಮೀಂದ್ರತೀರ್ಥರು ನೀಡಿದಶ್ರೀರಾಯರಅನುಗ್ರಹಮಂತ್ರಾಕ್ಷತೆ,ಗುರುಗಳು ನುಡಿದ ಆಶೀರ್ವಾದದಮಾತುಗಳಿಂದ ಬಹಳಷ್ಟು ಜನರಿಗೆ ತಮ್ಮ ಇಷ್ಟಾರ್ಥಗಳು ಸಿದ್ಧಿಯಾಗಿವೆ.ಶ್ರೀಗಳವರುಪೀಠಾಧಿಪತಿಗಳಾದಮೇಲೆಶ್ರೀರಾಯರಅಪಾರಮಹಿಮೆಗಳುನಡೆದಿವೆ.ಮಳೆ ಇಲ್ಲದೆ ಕ್ಷಾಮ ಇದ್ದಪ್ರದೇಶದಲ್ಲಿ ಶ್ರೀಗಳವರ ಪ್ರಾರ್ಥನೆಯಿಂದ ಉತ್ತಮ ಮಳೆಯಾಗಿ ಕ್ಷಾಮ ಪರಿಹಾರವಾಯಿತೆಂದು ತಿಳಿದು ಬರುತ್ತದೆ.ಇವರು
ಪ್ರಾರ್ಥಿಸಿ ಕೊಟ್ಟ ಮಂತ್ರಾಕ್ಷತೆಯಿಂದ ಆರೋಗ್ಯ
ಹೊಂದಿದವರು,ವಿದ್ಯೆಯ ಕಲಿಕೆಗೆ ಅನುಕೂಲ ಪಡೆದವರು,ಕಷ್ಟಕಾರ್ಪಣ್ಯಗಳುನಿವಾರಣೆಯಾದವರು ,ಹೀಗೆ ಅನುಗ್ರಹಪಡೆದವರು ಬಹಳಷ್ಟು ಜನರಿದ್ದಾರೆ.
ಇವರನ್ನು ಭಕ್ತರು ನಡೆದಾಡುವ ರಾಯರೆಂದೇ
ಗೌರವಪೂರ್ವಕವಾಗಿ ಕರೆಯುತ್ತಿದ್ದರು.
ಶ್ರೀಗಳವರುತಮ್ಮಆಶ್ರಮಶಿಷ್ಯರಾದಶ್ರೀಸುಯತೀಂದ್ರತೀರ್ಥರಿಗೆಸಂಸ್ಥಾನವನ್ನುಒಪ್ಪಿಸಿವಿರೋಧಿನಾಮ ಸಂವತ್ಸರದ ಚೈತ್ರಬಹುಳ ಬಿದಿಗೆದಿನಾಂಕ 11/04/2009ರಂದು ಹರಿಪಾದವನ್ನು ಸೇರುತ್ತರೆ. ಇವರ ಮೂಲ ಬೃಂದಾವನ ಮಂತ್ರಾಲಯ ಕ್ಷೇತ್ರದಲ್ಲದೆ.ಶ್ರೀಗಳವರಆರಾಧನೆಯುಚೈತ್ರಬಹುಳ ದ್ವಿತೀಯದಂದು ಆಚರಿಸಲಾಗುತ್ತದೆ.
******
*********

" ಶ್ರೀ ರಾಯರ ಪ್ರೀತಿಯ ಕಂದ ಅವಧೂತ ಶಿರೋಮಣಿ  ಶ್ರೀ ಸುಶಮೀಂದ್ರತೀರ್ಥರು "
" ಈದಿನ - > ದಿನಾಂಕ : 28.04.2021 ಬುಧವಾರ -  ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರ ಬಹುಳ ದ್ವಿತೀಯಾ   - ಶ್ರೀ ಸುಶಮೀಂದ್ರತೀರ್ಥರ ಆರಾಧನಾ ಮಹೋತ್ಸವ  - ಶ್ರೀ ಕ್ಷೇತ್ರ ಮಂತ್ರಾಲಯ "
ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ.... 
ಗುರು ಸುಶಮೀ೦ದ್ರರ ಸ್ಮರಿಸಿರೋ ।
ಗುರು ಸುಧೀಂದ್ರ ಸುತ -
ಪ್ರಿಯ ಕಂದನಾ ।। ಪಲ್ಲವಿ ।।
ಸುಪ್ರಜ್ಞೇ೦ದ್ರ ನಾಮಾದಿ -
ಭುವಿಯೊಳು ಜನಿಸಿ ।
ಸುಪ್ಪಾಣಿ ಗುಣಗಳಿಂದ -
ಮೆರೆವೋರಾ । ಚರಣ ।।
ಸುಖಕ್ಕಿಂಬು ದಾತ -
ಪಂಡಿತ ಪೋಷಕ ।
ಸುಖಾತೀರ್ಥಾಬ್ಧಿಯೊಳುದಿಸಿದ -
ಸುಕಲಾನಿಧಿ ।। ಚರಣ ।।
ಚೈತ್ರ ಸಿತ ಪಕ್ಷ ದ್ವಿತೀಯಾದಲಿ ।
ಚಿತ್ತಜನಯ್ಯ ವೇಂಕಟನಾಥನ -
ಸಭೆ ಸೇರಿದ ಮುನಿವರ ।। ಚರಣ ।।
ಸುಪ್ಪಾಣಿ =  ಶ್ರೇಷ್ಠವಾದ ಗುಣ 
ಸುಖಕ್ಕಿಂಬುದಾತ = ಆನಂದಕ್ಕೆ ಆಶ್ರಯ ದಾತ 
ಸುಕಲಾನಿಧಿ = ಚಂದ್ರ 
" ಶ್ರೀ ಸುಶಮೀಂದ್ರತೀರ್ಥರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ಸುಪ್ರಜ್ಞೇ೦ದ್ರಾಚಾರ್ಯರು 
ತಂದೆ : ಶ್ರೀ ರಾಜಾ ರಾಜಗೋಪಾಲಾಚಾರ್ಯರು 
ತಾಯಿ : ಸಾಧ್ವೀ ಪದ್ಮಾವತಮ್ಮ 
ಜನ್ಮ ಸ್ಥಳ : ನಂಜನಗೂಡು 
ಜನನ : 
03.04.1926 
( ಅಕ್ಷಯ ನಾಮ ಸಂವತ್ಸರ ಅಧಿಕ ಚೈತ್ರ ಕೃಷ್ಣ ಪಂಚಮೀ )
" ಶ್ರೀ ಲಕುಮೀಶ ದಾಸರ ಕಣ್ಣಲ್ಲಿ ".... 
ಭೂಪರಾಜ ಶ್ರೀ ಗೋಪಾಲಾರ್ಯರ -
ಕುವರಾ । ಬಹು ಗಂಭೀರ ।
ಕೋಪಾದಿ ಗುಣ ಬಿಟ್ಟ -
ಶ್ರೀ ಸುಪ್ರಜ್ಞೇ೦ದ್ರಾಚಾರ್ಯ । 
ಇರುವಂಥ ಚರಿಯ ।
ತಾಪಸ ಸುಯಮೀಂದ್ರ -
ಸುಜಯೀಂದ್ರರ ಕೃಪೆ ।
ಶ್ರೀ ಪೋಷಿತನಾಗಿ ಮಹಿಷ -
ಪುರೀಲಿದ್ದ । ಭವ ಬಾಧೆ ಗೆದ್ದ ।।
ಗೋತ್ರ : ಗೌತಮ 
ವಂಶ : ಷಾಷ್ಟಿಕ 
ಮನೆತನ : ಬೀಗಮುದ್ರೆ 
 ವಿದ್ಯಾ ಗುರುಗಳು : 
ತಾತಂದಿರಾದ ಶ್ರೀ ಸುಜ್ಞಾನೇಂದ್ರಾಚಾರ್ಯರು ಹಾಗೂ ವಿದ್ವಾನ್ ಶ್ರೀ ದುರ್ಗದ ಗುಂಡಾಚಾರ್ಯರು - ಪಂ।। ಶಾ।। ಶ್ರೀ ಕೃಷ್ಣಮೂರ್ತಾಚಾರ್ಯರು - ವೇ।। ಬ್ರ।। ಶ್ರೀ ದಕ್ಷಿಣಾಮೂರ್ತಿ ನಾರಾಯಣಶಾಶಾಸ್ತ್ರಿಗಳು; ಶ್ರೀ ಗೊಲ್ಲೇ ಕೃಷ್ಣ ಶಾಸ್ತ್ರಿಗಳು. 
" ಬ್ರಹ್ಮೋಪದೇಶ "
ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಮೂಲ ವೃಂದಾವನದ ಪರಮ ಪವಿತ್ರವಾದ ಸ್ಥಳದಲ್ಲಿ - ಶ್ರೀ ರಾಯರ ಉತ್ತರಾರಾಧನಾ ಪರ್ವ ಕಾಲದಲ್ಲಿ - ವಿದ್ವಾನ್ ಶ್ರೀ ಜೋಯಿಸ್ ಹನುಮಂತಾಚಾರ್ಯರ ಪೌರೋಹಿತ್ಯದಲ್ಲಿ ಶ್ರೀ ರಾಜಾ ರಾಜಗೋಪಾಲಾಚಾರ್ಯ ಮತ್ತು ಸಾಧ್ವೀ ಪದ್ಮಾವತಮ್ಮ ಅವರು ತಮ್ಮ ಮುದ್ದು ಮಗನಿಗೆ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಯಮೀ೦ದ್ರತೀರ್ಥರ ಗುರೂಪದೇಶದೊಂದಿಗೆ ಅತ್ಯಂತ ವೈಭದಿಂದ ನೆರವೇರಿಸಿದರು. 
" ಅವಧೂತ ಚರ್ಯೆ "
ಶಮೋದಮಸ್ತಪಃ ಶೌಚಃ 
ಕ್ಷಾಂತಿರಾರ್ಜುನಮೇವಚ ।
ಜ್ಞಾನಂ ವಿಜ್ಞಾನಮಾಸ್ತಿಕ್ಯಂ 
ಬ್ರಾಹ್ಮಂ ಕರ್ಮ ಸ್ವಭಾವಜಂ ।।
ಯೆಂಬ ಗೀತಾ ವಾಕ್ಯದಂತೆ ಬ್ರಾಹ್ಮಣನ ಜನ್ಮ ಸ್ವಭಾವವಾದ ಶಮ - ದಮ - ತಪಸ್ಸು - ಶೌಚ - ತ್ರಿಕರಣ ಶುದ್ಧಿಯೇ ಮೊದಲಾದ ಸದ್ಗುಣಗಳನ್ನು ಅಳವಡಿಸಿಕೊಂಡು ಸದಾ ಅಂತರ್ಮುಖಿಗಳಾಗಿ ಅವಧೂತರಂತೆ ಇರುತ್ತಿದ್ದರು. 
ಈ ವಿಷಯವನ್ನು ಶ್ರೀ ಶ್ಯಾಮಸುಂದರದಾಸರ ಶಿಷ್ಯರಾದ ಶ್ರೀ ಲಕುಮೀಶಾ೦ಕಿತ ಶ್ರೀ ಕುರುಡಿ ರಾಘವೇಂದ್ರಚಾರ್ಯರು.... 
ರಾಗ : ನಾಟ  ತಾಳ : ರೂಪಕ 
ಗುರು ಶ್ರೀ ಸುಶಮೀಂದ್ರರ -
ಚರಣ ಕಮಲ ಭಜಿಪ ।
ನರನೆ ಧರೆಯೊಳು ಧನ್ಯನೋ ।। ಪಲ್ಲವಿ ।।
ಸುಜಯೀಂದ್ರರ ಕರ -
ಸರಸೀಜ ಜಾತ ।
ಧರೆಯಲ್ಲಿ ಮೆರೆಯುವ 
ಪರಮ ಸಾತ್ವಿಕರಾದ ।। ಅ. ಪ ।।
ರಾಜಾ ರಾಜಗೋಪಾಲಾಚಾರ್ಯ -
ಪದ್ಮಾಂಬೆಯಾರ ಜಾತ ।
ತೇಜ ಗುಣದಿ ರಾಜಿತಾ ।
ಮೋಜಿಲಿ ಶ್ರೀ ಸುಯಮೀಂದ್ರರ ಸೇವಿಸಿ ।।
ನೈಜ ಗುನಡಿ ಶ್ರೀ ಸುಜಯೀಂದ್ರರೊಲಿಸಿ ।
ರಾಜಿಲಿಂದ ಸಂನ್ಯಾಸ ವಹಿಸಿ ।
ಈ ಜಗದಲಿ ಮೆರೆದ ಸನ್ಮುನಿ ।। ಚರಣ ।।
ಇಷ್ಟ ಪ್ರದರಾದಂಥ ಶ್ರೇಷ್ಠ 
ಶ್ರೀ ರಾಘವೇಂದ್ರರ ।
ಅಷ್ಟಾಕ್ಷರ ಮಂತ್ರ ಜಪಿಸಿ ।
ನಿಷ್ಠೆಯಲಿ ಮೂಲರಾಮನಂಘ್ರಿಯ ।।
ಪಟ್ಟು ಸಂತತ ಸತತ ಪೂಜಿಸಿ ।
ಕಷ್ಟ ಸುಜನಕೆ ಬಿಡದೆ ಓಡಿಸಿ ।
ಶಿಷ್ಟ ಕವಿಗಳ ಸಂತತ ರಕ್ಷಿಪ ।। ಚರಣ ।।
ದಾನದಲಿ ಕರ್ಣರೆನಿಸಿ 
ಜ್ಞಾನಿ ಸುರಧೇನೆನಿಸಿ ।
ಮೌನೀ ಜನರಲಿ ರಾಜಿಸೀ ।
ಜಾನಕೀಶ ಲಕುಮೀಶನಂಘ್ರಿಯ ।।
ಧ್ಯಾನದಿಂದ ಅನೇಕ ಸ್ಥಳದಲೀ ।
ಮಾನಿತರಾಗಿ ತುಲಾಭಾರಗೊಂಡು ।
ತಾಣ ಮಂತ್ರಾಲಯದಿ ನೆಲಸಿಹ ।। ಚರಣ ।।
ಆಶ್ರಮ ಗುರುಗಳು : ಶ್ರೀ ಸುಜಯೀಂದ್ರತೀರ್ಥರು 
ಆಶ್ರಮ ನಾಮ : ಶ್ರೀ ಸುಶಮೀಂದ್ರತೀರ್ಥರು 
ಆಶ್ರಮ ಸ್ವೀಕಾರ : 1985 
[ ರಕ್ತಾಕ್ಷಿ ನಾಮ ಸಂವತ್ಸರ ಫಾಲ್ಗುಣ ಬಹುಳ ತ್ರಯೋದಶೀ -19.03.1985 ]
ಆಶ್ರಮ ಸ್ಥಳ : 
ಶ್ರೀ ಆಹ್ಲಾದಾಂಶ ಅಪ್ಪಣ್ಣಾಚಾರ್ಯರಿಂದ ಪ್ರತಿಷ್ಠಾಪನೆಗೊಂಡ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ವೃಂದಾವನ ಸಾನ್ನಿಧಾನ., ಬಿಚ್ಚಾಲೆ ( ಭಿಕ್ಷಾಲಯ )
" ಶ್ರೀ ಲಕುಮೀಶದಾಸರ ಕಣ್ಣಲ್ಲಿ ".... 
ಪತ್ನಿ ಸುತರಿಂದ ಗಾರ್ಹಸ್ತ್ಯದಲಿ -
ಸುಖಿಸೆ । ಇವರು ಕರಿಸೆ ।
ಯುಕ್ತವರಿತು ಶ್ರೀ ಸುಜಯೀಂದ್ರ-
ತೀರ್ಥರು ಪರಮ । ಹಂಸಾಶ್ರಮ ।
ರಕ್ತಾ ಫಾಲ್ಗುಣ ವದ್ಯ ತ್ರಯೋದಶೀ । 
ಇತ್ತ ಬಿಚ್ಚಾಲೆಯೋಳ್ -
ಮಂತ್ರೋಪದೇಶ । ಸುಜನಕೆ ಹರುಷ ।।
" ಶ್ರೀ ಸರ್ವೇಶ ವಿಠ್ಠಲ " 
ಭಿಕ್ಷಾಲಯ ಕ್ಷೇತ್ರ ಸುಧಾಮದಲಿ । 
ಆಶ್ರಮ ಪಡೆಯುತಲಿ ।
ಪಕ್ಷಿವಾಹನನ ಸ್ಮರಿಸುತಲಿ । 
ಪ್ರಣವ ಜಪಿಸುತಲಿ ।
ಸೂಕ್ಷ್ಮದಿ ಹರಿಯ ಕಾಣುತಲಿ । 
ಕುಣಿ ಕುಣಿದಾಡುತಲಿ ।
ಪಕ್ಷ ರಹಿತರಾಗಿ ರಕ್ಷಿಸಿ ಜನರನು । 
ಭಿಕ್ಷು ಪಂಕ್ತಿಯೊಳು ಲಕ್ಷದಿ ಮೆರೆದ ।।
" ಶ್ರೀ ಮೂಲರಾಮನಿಗೆ ಮತ್ತು ತಮ್ಮ ಪೂರ್ವೀಕ ಗುರುಗಳಿಗೆ ಸುವರ್ಣ - ರಜತ ಆಭರಣಗಳ ಸಮರ್ಪಣೆ "
ಪ್ರತಿ ವರ್ಷವೂ ಶ್ರೀ ಮೂಲರಾಮನಿಗೆ - ಶ್ರೀ ರಾಯರಿಗೆ ಮತ್ತು ಶ್ರೀ ರಾಯರ ಮಠದ ಪೂರ್ವೀಕ ಗುರುಗಳಿಗೆ ವಿಧ ವಿಧವಾದ ಆಭರಣಗಳನ್ನು ಸಮರ್ಪಿಸುತ್ತಿದ್ದರು. 
ಶ್ರೀ ಪದ್ಮನಾಭ - ಶ್ರೀ ಕವೀಂದ್ರ - ಶ್ರೀ ವಾಗೀಶ - ಶ್ರೀ ವಿಜಯೀಂದ್ರ - ಶ್ರೀ ಸುಧೀಂದ್ರ - ಶ್ರೀ ಯೋಗೀಂದ್ರ - ಶ್ರೀ ಸುಮತೀಂದ್ರ - ಶ್ರೀ ಉಪೇಂದ್ರ - ಶ್ರೀ ವಾದೀಂದ್ರ - ಶ್ರೀ ವಸುಧೇಂದ್ರ - ಶ್ರೀ ಧೀರೇಂದ್ರ - ಶ್ರೀ ಭುವನೇಂದ್ರ - ಶ್ರೀ ಸುಬೋಧೇಂದ್ರ - ಶ್ರೀ ಸುಜನೇಂದ್ರ - ಶ್ರೀ ಸುಜ್ಞಾನೇ೦ದ್ರ - ಶ್ರೀ ಸುಧರ್ಮೇಂದ್ರ - ಶ್ರೀ ಸುಗುಣೇಂದ್ರ - ಶ್ರೀ ಸುಪ್ರಜ್ಞೇ೦ದ್ರ - ಶ್ರೀ ಸುಕೃತೀಂದ್ರ - ಶ್ರೀ ಸುಶೀಲೇಂದ್ರ - ಶ್ರೀ ಸುವ್ರತೀಂದ್ರ - ಶ್ರೀ ಸುಯಮೀಂದ್ರ - ಶ್ರೀ ಸುಜಯೀಂದ್ರರೇ ಮೊದಲಾದ ವೃಂದಾವನಗಳಿಗೆ ರಜತ ಕವಚವನ್ನೂ - ರಜತಮಯಾ ಪಾತ್ರೆಗಳನ್ನು ಮಾಡಿಸುವುದರೊಂದಿಗೆ - ನಿತ್ಯ ಅನ್ನದಾನ ಮತ್ತು ಶಾಶ್ವತ ಸೇವೆ ನಡೆಯುವಂತೆ ಆಯಾ ಜ್ಞಾನಿಗಳ ಹೆಸರಲ್ಲಿ ಬ್ಯಾಂಕುಗಳಲ್ಲಿ ಠೇವಣಿಯನ್ನಿತ್ತು ಅದ್ಭುತವಾದ ಸೇವೆ ಸಲ್ಲಿಸಿದ್ದಾರೆ. 
ಶ್ರೀ ಮೂಲರಾಮನಿಗೆ ರಜತ ಮತ್ತು ಸುವರ್ಣ ಮಂಟಪಗಳನ್ನೂ - ಸಂಸ್ಥಾನದ ಪೂಜೆಗಾಗಿ ರಜತ - ಸುವರ್ಣ ಪಾತ್ರೆಗಳನ್ನೂ - ರತ್ನ ಖಚಿತ ಸುವರ್ಣ ಸಿಂಹಾಸನವನ್ನೂ ನಿರ್ಮಿಸಿ ಸಮರ್ಪಿಸಿದ್ದಾರೆ. 
ಶ್ರೀ ರಾಯರ ಮೂಲ ವೃಂದಾವನಕ್ಕೆ ರಜತ - ಸುವರ್ಣ ಕವಚಗಳನ್ನೂ; ಶ್ರೀ ಪ್ರಹ್ಲಾದರಾಜರಿಗೆ ಮುತ್ತು - ರತ್ನ - ವೈಢೂರ್ಯ - ಮಾಣಿಕ್ಯಗಳಿಂದ ಕೂಡಿದ ಸುವರ್ಣ ಹಾರಗಳನ್ನೂ ಮತ್ತು ಕವಚವನ್ನೂ - ಬಂಗಾರದ ರಥವನ್ನೂ - ರಜತಮಯ ಆನೆ - ಕುದುರೆ - ಸಿಂಹಗಳನ್ನೂ ಸಮರ್ಪಿಸಿದ್ದಾರೆ. 
ಶ್ರೀ ರಾಯರ ಮೂಲ ಬೃಂದಾವನ ಸನ್ನಿಧಿಯಲ್ಲಿ ಮಾತ್ರವಲ್ಲದೇ ದೇಶದ ನಾನಾ ಭಾಗಗಳಲ್ಲಿರುವ ಶ್ರೀ ರಾಯರ ಮೂಲ ಮೃತ್ತಿಕಾ ಬೃಂದಾವನಗಳಿಗೂ ರಜತ - ಸುವರ್ಣ ಕವಚಗಳನ್ನೂ - ಪೂಜಾ ಪರಿಕರಗಳನ್ನೂ ಮಾಡಿಸಿ ಸಮರ್ಪಿಸಿದ್ದಾರೆ. 
ಶ್ರೀ ವರದೇಂದ್ರತೀರ್ಥರಿಗೆ ಬಂಗಾರದ ಕವಚವನ್ನೂ - ಶ್ರೀ ವಿಜಯರಾಯರಿಗೆ ಮತ್ತು ಶ್ರೀ ಜಗನ್ನಾಥದಾಸರಿಗೆ ಬೆಳ್ಳಿ ಕವಚವನ್ನು ಮಾಡಿಸಿ ಸಮರ್ಪಿಸಿದ್ದಾರೆ. 
ವೇದಾಂತ ಸಾಮ್ರಾಜ್ಯಾಧಿಕಾರ : 
ಕ್ರಿ ಶ 1986 - 2009 ( 12.02.1986 ರಿಂದ 11.04.2009 )
ಆಶ್ರಮ ಶಿಷ್ಯರು : 
ಪರಮಪೂಜ್ಯ ಶ್ರೀ ಸುವಿದ್ಯೇಂದ್ರತೀರ್ಥರು 
ಪರಮಪೂಜ್ಯ ಶ್ರೀ ಸುಯತೀಂದ್ರತೀರ್ಥರು 
" ನಿರ್ಯಾಣ "
ಧೀರವಿಠ್ಠಲ ಮೂಲರಾಮನ ಧ್ಯಾನದಿ ।
ಧರಿಸಿ ಸಮಾಧಿಯ ಯೋಗದಿ ।
ವರಹಜೆ ತೀರದ ವರ ಮಂತ್ರಾಲಯದಲ್ಲಿ ।
ಸ್ಥಿರದಿದ್ದೆ ಪೊರೆಯಲು ಕರುಣಾಳು ಸದ್ಗುರು ।।
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಕರುಣೆಯ ಕಂದ - ಮುಗ್ಧ ಮನಸ್ಸಿನ ಸಂತ - ತಮ್ಮ ನಗುಮೊಗದಿಂದಲೇ ಭಕ್ತರ ಕಷ್ಟಗಳನ್ನು ಕಳೆದ ಯತಿ - ಪರಿಶುದ್ಧ ಹೃದಯ - ಶುದ್ಧಾಂತಃ ಕರುಣೀ - ಶ್ರೀ ಗುರುರಾಜರ ಆಜ್ಞೆಯಂತೆ ಸಮಾಜದ ಉನ್ನತಿಗಾಗಿ ತಮ್ಮ ತಪಃಶಕ್ತಿಯೇ ಮೊದಲಾದ ಸರ್ವಸ್ವವನ್ನೂ ಧಾರೆಯೆರೆದ ಶ್ರೀ ಸುಶಮೀಂದ್ರತೀರ್ಥರು ಧ್ಯಾನಾವಸ್ಥೆಯಲ್ಲಿದ್ದಾಗಲೇ "  ವಿರೋಧಿ ನಾಮ ಸಂವತ್ಸರ ಚೈತ್ರ ಬಹುಳ ಬಿದಿಗೆ ದಿನಾಂಕ : 11.04.2009 ರಂದು ವೃಂದಾವನಸ್ಥ " ರಾದರು!!
ಕಾರ್ಮೋಡದಂತೆ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ತಮ್ಮ ಮುಗ್ಧ ನಗುವಿನ ಕಿರಣಗಳಿಂದಲೇ ಓಡಿಸುತ್ತಿದ್ದ " ಶ್ರೀ ಸುಶಮೀಂದ್ರ " ರೆಂಬ " ದಿನಕರ " ಅಸ್ತಂಗತನಾದರು
ಶ್ರೀ ಸುಯತೀಂದ್ರತೀರ್ಥರು... 
ಸುಧೀ ಜನ ಸುಮಂದಾರಂ 
ಸುಧೀಂದ್ರ ಸುತ ಸುಪ್ರಿಯಂ ।
ಸುಶಮೀಂದ್ರ ಗುರುಂ ವಂದೇ 
ಸುಜಯೀಂದ್ರ ಕರೋದ್ಭವಮ್ ।।
ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ.... 
ಶಮ ದಮ ಗುಣ -
ಸಂಪನ್ನಾ । ಸು ।
ಶಮೀ೦ದ್ರ ಗುರುವರ್ಯ 
ಸಲಹೋ ।। ಪಲ್ಲವಿ ।।
ಸುಜಯೀ೦ದ್ರ -
ಕರಕಂಜ ಜಾತಾ ।
ಸುಶಮೀ೦ದ್ರ ನಾಮಾದಿ -
ಮೆರೆವಾ ।। ಚರಣ ।।
ರಾಘವೇಂದ್ರ 
ಕರುಣಾಭರಣ ।
ಅಘ ಪರಿಹರಿಸಿ 
ರಕ್ಷಿಸೋ  ।। ಚರಣ ।।
ಇಳೆಯೊಳಗೆ ನಮ್ಮ 
ಗುರುರಾಯರನು ।
ಕಾಲಕಾಲದಿ ಸ್ಥಾಪಿಸಿ 
ಪ್ರಖ್ಯಾತನಾದ ।। ಚರಣ ।।
ಮಧ್ವ ಶಾಸ್ತ್ರವನು 
ಮುದ್ರಿಸಿ ಪ್ರಕಟಿಸಿ ।
ಮಧ್ವ, ರಾಯರ ಕ-
ರುಣೆಗೆ ಪಾತ್ರನಾದ ।। ಚರಣ ।।
ವರ ಯಾಗಾದಿಗಳನು 
ಸಡಗರದಿ ತಾ ರಚಿಸಿ ।
ಗುರುಸಾರ್ವಭೌಮರಿಗೆ 
ವಿನಯದಲಿ ತಾ ಅರ್ಪಿಸಿ ।। ಚರಣ ।।
ರಾಜಾಧಿರಾಜ ಶ್ರೀ ಹರಿ -
ಪ್ರಿಯನಾದ । ನಾಗ ।
ರಾಜ ಶಯ್ಯ ವೇಂಕಟನಾಥನ  -
ವಿಶೇಷ ಸನ್ನಿಧಾನದಿ ಶೋಭಿಪಾ ।। ಚರಣ ।।
by ಆಚಾರ್ಯ ನಾಗರಾಜು ಹಾವೇರಿ, ಗುರು ವಿಜಯ ಪ್ರತಿಷ್ಠಾನ
****

2001ರ ವರ್ಷದ ಏಪ್ರಿಲ್ ತಿಂಗಳದು. ಮಂತ್ರಾಲಯದಲ್ಲಿ ನೀರಿನ ಬಹಳ ತೀವ್ರವಾದ ಸಮಸ್ಯೆಯು ಪ್ರಾರಂಭವಾಗಿತ್ತು. ಮಠದಲ್ಲಿ ಹಿಂದೆ ಯಾವುದೋ ಕಾರಣಗಳಿಂದ ಮುಚ್ಚಲ್ಪಟ್ಟಿದ್ದ ಬಾವಿಯೊಂದನ್ನು ಪೂಜ್ಯ ಶ್ರೀಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರು ಮತ್ತೆ ತೆಗೆಸುವ ಆಲೋಚನೆಯನ್ನು ಮಾಡಿದರು. ಆಗ ಮಠದ ಅನುಭವಿಗಳೊಂದಿಬ್ಬರು “ಆ ಬಾವಿಯನ್ನು ತೆಗೆಸುವುದು ಬೇಡ” ಎಂಬ ಸಲಹೆಯನ್ನಿತ್ತರು. ವಾಸ್ತು ದೋಷದಿಂದಾಗಿ ಅದನ್ನು ಮುಚ್ಚಲಾಗಿತ್ತು ಎಂದು ಅವರು ಕಾರಣವನ್ನಿತ್ತರು. ಆದರೆ  ಶ್ರೀಗಳವರು “ಈ ನೀರಿನ ಸಮಸ್ಯೆಯು ಈ ವರ್ಷಕ್ಕೆ ಮಾತ್ರ ಬಂದಿಲ್ಲ. ಇನ್ನು ಮುಂದೆ ಪ್ರತೀವರ್ಷವೂ ಬಿಸಿಲು ಮತ್ತು ನೀರಿನ ಸಮಸ್ಯೆ ಎರಡೂ ಇಡೀ ಜಗತ್ತಿನಲ್ಲೇ ಹೆಚ್ಚುತ್ತವೆ. ನದಿಯಲ್ಲಿ ನೀರೇ ಇಲ್ಲದಿರುವಾಗ ಬಾವಿಯು ಕೂಡ ಇಲ್ಲದಿದ್ದರೆ ಕಷ್ಟವಾದೀತು. ವಾಸ್ತುದೋಷಕ್ಕೆ ಶಾಂತಿಯನ್ನು ಏರ್ಪಡಿಸಿ. ಆದರೆ ಬಾವಿಯನ್ನು ಮೊದಲು ತೆಗೆಸಿ” ಎಂದು ಅಪ್ಪಣೆ ಮಾಡಿದರು.

ಅವರ ಮಾತು ಶಾಪ ಮತ್ತು ಅನುಗ್ರಹ ಎರಡೂ ರೀತಿಯಲ್ಲಿ ವರ್ತಿಸಬಲ್ಲದು ಎಂಬ ಅರಿವಿದ್ದ ಅಧಿಕಾರಿಗಳು ಮುಚ್ಚಿದ್ದ ಬಾವಿಯನ್ನು ಎರಡೇ ದಿನಗಳಲ್ಲಿ ತೆಗೆಸಿದರು. ಸುಮಾರು 25 ಅಡಿಗಳಷ್ಟು ಶುದ್ಧವಾದ ನೀರು ಆ ಬಾವಿಯಲ್ಲಿ ಕೆಲವೇ ಗಂಟೆಗಳಲ್ಲಿ ತುಂಬಿಕೊಂಡಿತು. ಮುಂದೆ ಕೆಲ ದಿನಗಳಲ್ಲಿಯೇ ಶ್ರೀಗಳ ಅಪ್ಪಣೆಯಂತೆ ವಾಸ್ತು ಶಾಂತಿ ಹಾಗು ಕೂಪಶಾಂತಿಗಳೆರಡೂ ನಡೆದವು.

ಆರ್.ಓ ಫಿಲ್ಟರ್ ಮಾಡಲಾಗಿದೆಯೆಂಬಷ್ಟು ತಿಳಿಯಾದ ನೀರು ಅದು. ಉತ್ಪ್ರೇಕ್ಷೆಯಲ್ಲ. ಆದರೆ ಒಂದು ಕೊರತೆ  ಉಳಿಯಿತು. ನೀರು ಸಮೃದ್ಧವಾಗಿ ಇದ್ದರೂ ರುಚಿಯು ಸಪ್ಪೆಯಾಗಿಯೇ ಇತ್ತು. ಇನ್ನೊಂದು ಕೆಲ ದಿನಗಳಲ್ಲಿ ಬಾವಿಯ ನೀರು ಸಿಹಿಯಾದೀತು ಎನ್ನುತ್ತಲೇ ಸುಮಾರು ಒಂದು ತಿಂಗಳು ಸಂದಿತು. ಒಂದು ದಿನ ಸಂಜೆ “ವಾಕಿಂಗ್ ಮಾಡಲು ಹೋಗುವಾ” ಎಂದು ಶ್ರೀಗಳು ಹೇಳಿದರು. ಅವರ ಸಹಾಯಕ್ಕಾಗಿ ಅಂದು ನಾನು ಮತ್ತು ಯೋಗೀಶ(ಈಗ ಮೈಸೂರಿನ ಶಾಖಾಮಠದಲ್ಲಿದ್ದಾನೆ) ಇದ್ದೆವು. ವಾಕಿಂಗ್ ಮುಗಿಸಿ ಮಠದ ಒಳಗೆ ಬರುತ್ತಿರುವಾಗ ಬಾವಿಯಲ್ಲಿ ಇಣುಕಿ ನೋಡಿ “ಸಿಹಿ ಆಯಿತೇ ನೀರು?” ಎಂದು ಕೇಳಿದರು. ನಾನು ’ಇಲ್ಲ’ ಎಂದು ಉತ್ತರಿಸಿದೆ. ಶ್ರೀಗಳವರು ಸ್ವಗತದಲ್ಲಿಯೇ “ಮಾಡೋಣ ಮಾಡೋಣ ಒಂದು ಕಥೆ ಇದಕ್ಕೆ” ಎಂದು ಹೇಳುತ್ತಾ ಮುನ್ನಡೆದರು.

ಇದಾಗಿ ಎರಡನೆಯ ದಿನದಂದು ದ್ವಾದಶಿ ಇತ್ತು. ಬೆಳಿಗ್ಗೆ ಭಿಕ್ಷೆಯನ್ನು ಮುಗಿಸಿಕೊಂಡು ಬರುವಾಗ, ಅವರ ಕೋಣೆಯ ಹಿಂಬದಿಯಲ್ಲಿ ನಿಂತಿದ್ದ ಒಂದು ಲಾರಿಯು ಶ್ರೀಗಳವರ ಗಮನಕ್ಕೆ ಬಂದಿತು. “ಅದು ಯಾವ ಲಾರಿ?” ಎಂದು ಕೇಳಿ, ಉತ್ತರಕ್ಕೆ ಕಾಯದೆ ಶ್ರೀಗಳವರು ಮುನ್ನಡೆದರು. ಮಧ್ಯಾಹ್ನ ಸುಮಾರು 2ರ ಹೊತ್ತಿಗೆ ನಮ್ಮನ್ನು ತಾವಾಗಿಯೇ ಆ ಲಾರಿಯ ಬಳಿ ಹೋಗಿ ಕರೆದೊಯ್ದರು. ಆಗಲೇ ನಮಗೆ ತಿಳಿದದ್ದು ಅದು ಸೌದೆಯರಾಶಿಯನ್ನು ಹೊತ್ತು ತಂದಿರುವ ಲಾರಿ ಎಂದು. ಸೌದೆ ಅಂದರೆ ಒಡೆದು ಹಾಕಿದ ಸೌದೆಯಲ್ಲ. ಅದರಲ್ಲಿ ಇದ್ದದ್ದು ದೊಡ್ಡ ದೊಡ್ಡ ಕಟ್ಟಿಗೆಗಳು(logs). ಶ್ರೀಗಳವರು ಸಂಬಂಧಪಟ್ಟವರನ್ನು ಕರೆಸಿ ತಕ್ಷಣವೇ ಆ ಲಾರಿಯಲ್ಲಿರುವ ಕಟ್ಟಿಗೆಯರಾಶಿಯನ್ನು ಕೆಳಗೆ ಹಾಕಿಸಲು ಹೇಳಿ, ತಾವು ಅಲ್ಲಿಯೇ ಕುರ್ಚಿ ತರೆಸಿಕೊಂಡು ಕುಳಿತರು. ಲಾರಿಯಲ್ಲಿ ಅರ್ಧದಷ್ಟು ದಿಮ್ಮಿಗಳು ಖಾಲಿಯಾದಾಗ ಶ್ರೀಗಳವರು ನಮ್ಮನ್ನು (ನಾವು ಇದ್ದದ್ದು ಮೂವರು. ತಂಬಿ ರಾಘವೇಂದ್ರ, ನಾನು ಮತ್ತು ಯೋಗಿ) ಕರೆದು ಲಾರಿಯನ್ನು ಹತ್ತಿ ಉಳಿದಿರುವ ಕಟ್ಟಿಗೆಯ ಮೇಲ್ಪದರವನ್ನು ತೋರುತ್ತಾ “ಆ ಎರಡು ದಿಮ್ಮಿನ ಕೆಳಗೆ ತನ್ನಿ” ಎಂದು ಸೂಚಿಸಿದರು. ಯೋಗಿಯು ತಾನೊಬ್ಬನೇ ಹತ್ತಿ ಅವೆರಡನ್ನೂ ಕೆಳಗೆ ಬೀಳಿಸಿದ. ಶ್ರೀಗಳವರು “ತೊಗೊಂಡು ಬನ್ನಿ ಇಲ್ಲಿ” ಎಂದು ಹೇಳಿ ತಾವು ಮುನ್ನಡೆದರು. ನಾವು ಅವನ್ನು ಹೊತ್ತುಕೊಂಡು ಅವರನ್ನು ಹಿಂಬಾಲಿಸಿದೆವು. ಶ್ರೀಗಳವರು ಹೊರಟಿದ್ದು ಬಾವಿಯ ಕಡೆಗೆ. ಅಲ್ಲಿಗೆ ಹೋದ ನಂತರ ಮೂರು ನಾಲ್ಕು ಬಕೆಟ್ಟ್ ನೀರಿನಿಂದ ಆ ಮೋಟು ದಿಮ್ಮಿಗಳನ್ನು ತೊಳೆಯಿಸಿ ಅವುಗಳನ್ನು ಬಾವಿಯೊಳಗೆ ಹಾಕಿಸಿದರು. ಆಮೇಲೆ “ಸಿಹಿ ಆಗುತ್ತೆ ನೀರು ಇನ್ನೊಂದು ಮೂರು ದಿನಗಳಲ್ಲಿ” ಎಂದು ಸ್ಪಷ್ಟವಾಗಿ ಹೇಳಿದರು.

ಸಂಜೆ ಸ್ನಾನಕ್ಕೆ ಬಂದ ಅರ್ಚಕ ವರ್ಗದವರು ಈ ಕಟ್ಟಿಗೆಗಳನ್ನು ನೋಡಿ ಹೆಚ್ಚು ತಲೆ ಕೆಡಿಸಿಕೊಂಡಿದ್ದಿಲ್ಲ. ಆದರೆ ಮಾರನೆಯ ದಿನ ಆಡುಗೆಯವರು ನೋಡಿ ಬಾವಿಯಲ್ಲಿ ಕಟ್ಟಿಗೆಗಳು ಬಿದ್ದಿವೆ ಎಂದು ಸಂಬಂಧಪಟ್ಟವರಿಗೆ ದೂರು ಹೇಳಿದರು. ಅವುಗಳನ್ನು ತೆಗೆಸಬೇಕೆಂಬ ಪ್ರಯತ್ನಗಳು ಮೊದಲಾದವು. ಶ್ರೀಗಳವರು ತಾವಾಗಿಯೇ ಆ ಕಟ್ಟಿಗೆಗಳನ್ನು ಹಾಕಿಸಿದ್ದನ್ನು ನೋಡಿದ್ದ ರಕ್ಷಣಾವಿಭಾಗದ ಇಬ್ಬರು ಆ ವಿಷಯವನ್ನು ವ್ಯವಸ್ಥಾಪಕರ ಗಮನಕ್ಕೆ ತಂದರು. ನಂತರ ಅದು ಎಲ್ಲರಿಗೂ ಗೊತ್ತಾಗಿ ವಿಷಯವನ್ನು ಬೆಳೆಸದೆ ಸುಮ್ಮನಾದರು. ಆದರೆ ಎಲ್ಲರಿಗೂ ಕುತೂಹಲ. ಯಾಕೆ ಹಾಕಿಸಿದ್ದಾರೆ? ಎಂದು. ಇದಕ್ಕೆ ಉತ್ತರ ಸಿಕ್ಕಿದ್ದು ನಂತರದ ದಿನ. ಅಂದು ಆತ್ಮಕೂರು ಆನಂದತೀರ್ಥ ಆಚಾರ್ಯರು ಮಂತ್ರಾಲಯಕ್ಕೆ ಬಂದಿದ್ದರು. ಅವರು ಕೂಡ ಅಲಂಕಾರ ಶಾಲೆಯಲ್ಲಿ ಊಟಕ್ಕೆ ಕೂತಿದ್ದರು. ಊಟಕ್ಕೆ ಕುಳಿತ ಅರ್ಚಕರೆಲ್ಲರೂ ಈ ಕಟ್ಟಿಗೆಗಳ ಬಗ್ಗೆ ಚರ್ಚೆ ನಡೆಸಿದ್ದರು. ಕೇಳುತ್ತಾ ಕೂತಿದ್ದ ಆನಂದತೀರ್ಥಾಚಾರ್ಯರು ” ಶ್ರೀಗಳವರು ಹಾಕಿಸಿರುವುದು ಉಸಿರಿಕಾಯಿ ಮದ್ದು. ಅದರಿಂದ ಸಪ್ಪಗಿದ್ದ ನೀರು ಕೂಡ ಸಿಹಿಯಾಗ್ತದ” ಎಂದು ನುಡಿದರು. ಉಸಿರಿಕಾಯಿ ಎಂದರೆ ಬೆಟ್ಟದ ನೆಲ್ಲಿಕಾಯಿ. ಕರ್ನೂಲು ಪ್ರಾಂತ್ಯದ ಕನ್ನಡದಲ್ಲಿ ಮದ್ದು ಎಂದರೆ ಮರದ ದಿಮ್ಮಿ ಎಂದರ್ಥ. ಈ ಸ್ವಾರಸ್ಯವನ್ನು ತಿಳಿದ ಎಲ್ಲರೂ ಅಂದು ಶ್ರೀಗಳವರ ಜ್ಞಾನದ ಬಗ್ಗೆ ಬಹಳ ಆಶ್ಚರ್ಯವನ್ನು ವ್ಯಕ್ತಪಡಿಸಿದರು. ಕೈತೊಳೆಯಲು ಹೋದ ಸಂದರ್ಭದಲ್ಲಿ ಎಲ್ಲರೂ ಇಣುಕಿ ನೋಡಿದ್ದೇ ನೋಡಿದ್ದು.

ವಿಶೇಷವೆಂದರೆ ಶ್ರೀಗಳವರು ಹೇಳಿದಂತೆಯೇ ಕೆಲವೇ ದಿನಗಳಲ್ಲಿ ಆ ಬಾವಿಯ ನೀರು ಸಿಹಿಯಾಗತೊಡಗಿತು ಕೂಡ. “ಬಾವಿಯ ನೀರನ್ನು ಸಿಹಿಯಾಗಿಸಿದರಂತೆ” ಎಂದು ’ಅಂತೆಗಳ’ ಮೂಲಕ ಈ ವಿಷಯವನ್ನು ಬಹಳ ಜನ ಕೇಳಿರಬಹುದು. ಇದು ಅಂತೆ ಕಂತೆ ಏನಲ್ಲ. ನಾನು ಪ್ರತ್ಯಕ್ಷವಾಗಿ ನೋಡಿದ ಘಟನೆ. ನೋಡಿದ ಅಲ್ಲ, ಅನುಭವಿಸಿದ ಘಟನೆ. ಗುರುಗಳ ಮಾತನ್ನು ಗುರುರಾಯರು ನಡೆಸುತ್ತಿದ್ದರು ಎಂಬುದಕ್ಕೆ ಉದಾಹರಣೆಯಲ್ಲವೇ?

ಆಧುನಿಕ ವಿಜ್ಞಾನವು ಇದರ ಬಗ್ಗೆ ಏನೇ ತಾರ್ಕಿಕ ಅಂಶವನ್ನು ಹೇಳಲಿ. ನನ್ನ ಮಟ್ಟಿಗೆ ಅಂತೂ ಇದು ಶ್ರೀಗಳವರಲ್ಲಿ ಹುದುಗಿದ್ದ ಪ್ರಾಚೀನ ವಿಜ್ಞಾನದ ಚಮತ್ಕಾರವೇ ಸರಿ. ನೆಲ್ಲಿಕಾಯಿ ಮರದ ಕಾಂಡಗಳನ್ನು ಹಾಕಿದರೆ ಬಾವಿಯ ನೀರು ಸಿಹಿಯಾಗುವುದು ಎಂಬ ವಿಷಯ ಬಾಯಿಂದ ಬಾಯಿಗೆ ಹರಡಿ ಅದು ಶ್ರೀಗಳವರಿಗೆ ಸಹ ತಿಳಿದಿತ್ತು ಎಂದುಕೊಳ್ಳುವಾ. ಆದರೆ

ಸಪ್ಪೆಯಾಗಿದ್ದ ನೀರನ್ನು ಸಿಹಿಯಾಗಿ ಮಾಡೋಣ ಎನ್ನುವ ದೃಢವಿಶ್ವಾಸ (Conviction)ಅವರಿಗೆ ಎಲ್ಲಿಂದ ಮೂಡಿತು?
ನಿಂತಿದ್ದ ಲಾರಿಯು ಕಟ್ಟಿಗೆಯದ್ದೇ ಎಂದು ಅವರಿಗೆ ಮೊದಲೇ ಹೇಗೆ ತಿಳಿಯಿತು?
ಅಷ್ಟೊಂದು ವಿಭಿನ್ನವಾದ ಕಟ್ಟಿಗೆಗಳ ರಾಶಿಯ ಮಧ್ಯ ನೆಲ್ಲಿಕಾಯಿಮರದ ಎರಡು ದಿಮ್ಮಿಗಳಿವೆ ಎಂದು ಅವರಿಗೆ ಮೊದಲೇ ಯಾರು ಹೇಳಿದ್ದರು?
ಆ ರಾಶಿಯ ಮಧ್ಯ ಅವರು ಆ ಎರಡು ಕಟ್ಟಿಗೆಗಳನ್ನೇ ಅಷ್ಟು ಕರಾರುವಾಕ್ಕಾಗಿ ಹೇಗೆ ಗುರುತಿಸಿದರು?
ಅವರ ಈ ಕೆಲಸಕ್ಕೆ ದೇವರು ಮತ್ತೊಬ್ಬ ವಿಜ್ಞಾನಿಯ ಮೂಲಕವೇ ಪ್ರಮಾಣವನ್ನು ಒದಗಿಸಿದ್ದು ಕೂಡ ಒಂದು ವಿಶೇಷ. ಮದ್ದು ಎಂದು ಆತ್ಮಕೂರು ಆಚಾರ್ಯರು ಹೇಳಿದ್ದರಲ್ಲೇ ಒಂದು ಸ್ವಾರಸ್ಯವುಂಟು. ಮದ್ದು ಎಂಬ ಶಬ್ದವನ್ನು ದಿಮ್ಮಿ ಎಂಬ ಅರ್ಥದಲ್ಲೂ, ಔಷಧದ ಉಪಚಾರ ಎಂಬ ಅರ್ಥದಲ್ಲೂ ಪರಿಗಣಿಸಬಹುದು. ಸಪ್ಪಗಿದ್ದ ನೀರಿನ ಸೆಲೆಗೆ ಶ್ರೀಗಳವರು ನೆಲ್ಲಿಕಾಯಿಯ ಔಷಧೋಪಚಾರ ಮಾಡಿ ಅದನ್ನು ಸಿಹಿಯಾಗಿಸಿದ್ದಾರೆ ಎಂದು ತಿಳಿಯಬಹುದಲ್ಲವೇ?

ಮತ್ತೊಂದು ಗಮನಿಸಬೇಕಾದ ವಿಷಯವೆಂದರೆ, ಬಿಸಿಲು ಹಾಗು ನೀರಿನ ಅಭಾವವನ್ನು ಕುರಿತು ಶ್ರೀಗಳವರು ಹೇಳಿದ ಮಾತು ಸಾರ್ವಕಾಲಿಕವಾಗಿ ಅನ್ವಯವಾಗುವಂತಹುದು. ಹೆಚ್ಚುತ್ತಲೇ ಹೋಗುತ್ತಿರುವ ಉಷ್ಣತೆ ಮತ್ತು ನೀರಿನ ಕೊರತೆ ಈ ಎರಡೂ ಸಮಸ್ಯೆಗಳು ಜಾಗತಿಕವಾದವುಗಳು. ಇದನ್ನು ಕುರಿತು ಅವರು ಅಂದೇ ಸ್ಪಷ್ಟವಾಗಿ ಹೇಳಿದ್ದರು. ಇದಕ್ಕೆ ತಕ್ಕ ಉಪಕ್ರಮಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಬೇಕು ಮತ್ತು ಅದಕ್ಕೆ ದೈವಕೃಪೆಯು ಕೂಡ ಬೇಕು ಎಂಬುದನ್ನು ಅವರು ಪ್ರಾಯೋಗಿಕವಾಗಿ ಮಾಡಿ ತೋರಿಸಿದರು.

ಮೌನಸಾಧಕರಿವರು ಸುಶಮೀಂದ್ರರು. ಅವಧೂತರ ಎಲ್ಲ ಲಕ್ಷಣಗಳು ಅವರಲ್ಲಿದ್ದವು. ಅಮಾಯಕನಂತೆ ಕಾಣುತ್ತಿದ್ದರೂ ಕೂಡ ಒಳಗೆ ಜ್ಞಾನವು ಜ್ವಲಿಸುತ್ತಲೇ ಇತ್ತು. ಲೌಕಿಕಾರ್ಥದ ಅಮಾಯಕರಾಗಿದ್ದಲ್ಲಿ ಈ ವೈಜ್ಞಾನಿಕ ಉಪಚಾರದ ಅರಿವಾದರೂ ಎಲ್ಲಿ ಇರುತ್ತಿತ್ತು? ಎಲ್ಲ ತಿಳಿದಿದ್ದೂ ಹಾರಾಡದೇ ಮಗುವಿನಂತೆ ಇದ್ದುಬಿಡುವುದು ಸಾಧಕರ ಲಕ್ಷಣ. ನಮ್ಮ ಅಜ್ಜಯ್ಯನು ಇದೇ ಸಾಲಿನ ಸಾಧಕರು.

ಅಂದ ಹಾಗೆ ಈ ಬಾವಿಯು ಇನ್ನೂ ನೀರಿನಿಂದ ಸಮೃದ್ಧವಾಗಿಯೇ ಇದೆ. ಮಂತ್ರಾಲಯಕ್ಕೆ ಹೋದಾಗ ನೋಡಬಹುದು. ಆದರೆ ದೂರದಿಂದಲೇ ನೋಡಿ. ಹತ್ತಿರ ಹೋಗಿ ಅಶುಚಿಯನ್ನು ಮಾಡದಿರಿ. ಇದು ಬರಿಯ ನೀರಲ್ಲ. ಶ್ರೀಹರಿವಾಯುಗುರುಗಳು ತಮ್ಮ ಮಹಿಮೆಯನ್ನು ತೋರಿದ ಪುಣ್ಯತೀರ್ಥವಿದು.
ಕೃಪೆ :- ವಾಟ್ಸಾಪ್ 
**
*ಇಂದು ನಡೆದಾಡುವ ರಾಯರೆಂದೇ ಖ್ಯಾತಿಗಳಿಸಿದ್ದ, ಸದಾ ನಗುಮೊಗದ ಮುಗ್ದ ಮನಸ್ಸಿನ 
 ಶ್ರೀ ಶ್ರೀಮತ್ ಸುಶಮೀಂದ್ರತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವ.*

ಸುಧೀಜನಸುಮಂದಾರಂ 
ಸುಧೀಂದ್ರ ಸುತಸುಪ್ರಿಯಮ್|
ಸುಶಮೀಂದ್ರಗುರುಂ ವಂದೇ
ಸುಜಯೀಂದ್ರಕರೋದ್ಭವಮ್||

  ಮಂತ್ರಾಲಯ ಪ್ರಭುಗಳಾದ ಶ್ರೀರಾಘವೇಂದ್ರಸ್ವಾಮಿಗಳನ್ನು ಭೌತಿಕವಾಗಿ ನೋಡುವ ಕಾಲಘಟ್ಟ ನಮ್ಮದಾಗಿರಲಿಲ್ಲ. ಆದರೆ ಗುರುಸಾರ್ವಭೌಮರನ್ನು ಯತಿಗಳೊಬ್ಬರಲ್ಲಿ ಕಂಡಿದ್ದೇವೆ ಎಂಬುದಂತು ಸತ್ಯ. ಅವರೇ ರಾಯರಲ್ಲಿ ಅನನ್ಯ ಭಕ್ತಿಯನ್ನು ಹೊತ್ತಿದ್ದ ನಡೆದಾಡುವ ರಾಯರು ಎನಿಸಿಕೊಂಡಿದ್ದ ಮಹಾನುಭಾವರಾದ ಶ್ರೀ ಶ್ರೀ ಸುಶಮೀಂದ್ರತೀರ್ಥರು.
   ಇಂತಹ ಮಗುವಿನ ಮನಸ್ಸಿನವರಾಗಿದ್ದ ನಮ್ಮ ಸ್ವರೂಪೋದ್ಧಾರಕರಾದ ಗುರುಗಳ ಆರಾಧನೆಯಂದು ಅವರನ್ನು ಮನಸಾ ಸ್ಮರಿಸೋಣ, ಶಿರಸಾ ನಮಿಸೋಣ...🙏🙏🙏

    ಗುರುಗಳು, ಪೂರ್ವಾಶ್ರಮದಲ್ಲಿ ನಂಜನಗೂಡಿನ ಶ್ರೀ ರಾಜಾ ರಾಜಗೋಪಾಲಾಚಾರ್ ಹಾಗೂ ಸಾಧ್ವಿ ಶ್ರೀಮತಿ ಪದ್ಮಾವತಿ ಬಾಯಿಯವರ ಸುಪುತ್ರರಾಗಿ 
 ಶ್ರೀಅಕ್ಷಯ ನಾಮ ಸಂವತ್ಸರ ಅಧಿಕ ಚೈತ್ರ ಬಹುಳ ಪಂಚಮಿ( 03-04-1926) ರಂದು ಜನಿಸಿದರು.
 ಗುರುಗಳ ಪೂರ್ವಾಶ್ರಮದ ಹೆಸರು ಶ್ರೀ ರಾಜಾ ಸುಪ್ರಜ್ಞೆಂದ್ರಾಚಾರ್ಯ. ಗೃಹಸ್ಥಾಶ್ರಮದಲ್ಲೂ ಮಗುವಿನ ಮನಸ್ಸು ಹೊಂದಿದ್ದ ಗುರುಗಳು, 
ಶ್ರೀರಕ್ತಾಕ್ಷಿ ನಾಮ ಸಂವತ್ಸರ ಫಾಲ್ಗುಣ ಬಹುಳ ತ್ರಯೋದಶಿ(19-03-1985)ಯಂದು ತುಂಗಭದ್ರಾ ನದೀ ತೀರದಲ್ಲಿರುವ ಶ್ರೀರಾಘವೇಂದ್ರಸ್ವಾಮಿಗಳಿಗೆ ಪ್ರಿಯಕರವಾಗಿದ್ದ ಬಿಚ್ಚಾಲೆಯಲ್ಲಿ ಸನ್ಯಾಸ ಸ್ವೀಕರಿಸಿದರು. 
  ಆಶ್ರಮ ನೀಡಿದ ಗುರುಗಳಾದ ಶ್ರೀ ಸುಜಯೀಂದ್ರ ತೀರ್ಥರು, ಶ್ರೀಸುಶಮೀಂದ್ರತೀರ್ಥ ಎಂಬ ತುರ್ಯಾಶ್ರಮ ನಾಮ ನೀಡಿ ಅನುಗ್ರಹಿಸಿದರು.

    ಶ್ರೀಮೂಲರಾಮದೇವರ ಅನುಜ್ಞೆಯೋ, ಪ್ರಾಣದೇವರ ಕೃಪೆಯೋ, ರಾಯರ ಅನುಗ್ರಹವೋ, ಶ್ರೀಸುಜಯೀಂದ್ರತೀರ್ಥರ ಸಂಕಲ್ಪವೋ ಅಥವಾ ಇವೆಲ್ಲವೂ ಮೂರ್ತಿವೆತ್ತಂತೆ ರೂಪಿತವಾದ ಮೂರ್ತಿಯೇ ಶ್ರೀಸುಶಮೀಂದ್ರತೀರ್ಥರು.

   ಶ್ರೀಸುಜಯೀಂದ್ರತೀರ್ಥರು ಯಾವ ಅಮೃತಗಳಿಗೆಯಲ್ಲಿ ಶ್ರೀಸುಶಮೀಂದ್ರತೀರ್ಥರೆಂಬ ಈ ಚೂಡಾಮಣಿಯನ್ನು ಹಂಸನಾಮಕ ಪರಮಾತ್ಮನ ಪರಂಪರೆಗೆ ಕೊಡುಗೆಯಾಗಿ ಕೊಟ್ಟರೋ ಗೊತ್ತಿಲ್ಲ. ಈ ಗಳಿಗೆಯಲ್ಲಿ ದೇವ ದುಂಧುಭಿ ಮೊಳಗಿರಬೇಕು. ಗಂಧರ್ವರು ವಾದ್ಯ ಸಂಗೀತ ಗೀತ ಗಾಯನ ಮಾಡಿರಬೇಕು. ಯಕ್ಷ ಕಿನ್ನರ ಕಿಂಪುರುಷರು ನೃತ್ಯಾದಿಗಳನ್ನು ಮಾಡಿರಬೇಕು. ಇಲ್ಲವೆಂದಾದರೆ ಶ್ರೀಸುಜಯೀಂದ್ರತೀರ್ಥರ ಕರಕಮಲ ಸಂಜಾತರು ಇಷ್ಟೊಂದು ಶಕ್ತಿ ಸಂಪನ್ನರಾಗುತ್ತಿರಲಿಲ್ಲ.

 ಸದಾ ನಗುಮೊಗ, ಯಾರೇ ಭಕ್ತರು ಬಂದು ಸ್ವಾಮಿ ಕಷ್ಟ ಎಂದು ಅರಿಕೆ ಮಾಡಿಕೊಂಡಾಕ್ಷಣ, ಅವರ ಬಾಯಲ್ಲಿ ಬರುತ್ತಿದ್ದುದು  ರಾಯರನ್ನು ನಂಬಿ ಪ್ರಾರ್ಥಿಸಿ ಎಂಬ ಒಂದೇ ನುಡಿ. ಬಹುಶಃ ರಾಯರು ಇವರ ಹೃತ್ಕಮಲದಲ್ಲಿ ನೆಲೆಸಿ ರಾಯರ ಹೆಸರಲ್ಲಿ ನೆಲೆ ನಿಂತ ಶ್ರೀರಾಘವೇಂದ್ರ ಎಂಬ ರಘುಕುಲ ತಿಲಕ ಲಲಾಮನ ನಾಮ ಜಪಿಸುತ್ತಿದ್ದರೇನೋ ಎಂಬಂತಿರುತ್ತಿತ್ತು ಅವರ ಧ್ವನಿ. 

  ರಾಯರಲ್ಲಿ ಬೇಡಿ ಬಂದವರನ್ನು ಎಂದಿಗೂ ಬರಿಗೈಯ್ಯಲ್ಲಿ ಕಳುಹಿಸದ ಶ್ರೀಸುಶಮೀಂದ್ರತೀರ್ಥರಿಗೆ ಭಕ್ತರ ಮೇಲೆ ಅಪಾರ ಪ್ರೀತಿ ಹಾಗೂ ಮಮಕಾರ. ನವ ಮಂತ್ರಾಲಯ ನಿರ್ಮಾಣದ ಜತೆ ಪಂಡಿತರನ್ನು ಪಾಮರರನ್ನೂ ಪೋಷಣೆ ಮಾಡಿದರು. ಗುರುಗಳು ನೀಡಿದ ಫಲ ಮಂತ್ರಾಕ್ಷತೆಯಿಂದ ಸಹಸ್ರಾರು ಮಂದಿ ಫಲ ಪಡೆದವರಿದ್ದಾರೆ. ಬದುಕು ಮುಗಿಯಿತು ಎಂದುಕೊಂಡು ನಿರಾಶರಾದ ಅನೇಕ ಮಂದಿ ಗುರುಕರುಣೆಯಿಂದ ಉತ್ತುಂಗದಷ್ಟು ಕೀರ್ತಿಗಳಿಸಿದವರಿದ್ದಾರೆ. 
  ಎಲ್ಲರನ್ನೂ ಪ್ರೀತಿಸುತ್ತಿದ್ದ ನಿಷ್ಕಲ್ಮಶ ಮನಸ್ಸಿನ, ಹಸುಗೂಸಿನಂತೆ ಶ್ರೀಮೂಲರಾಮರನ್ನು ಸೇವಿಸುತ್ತಿದ್ದ, ರಾಯರೇ ಜೀವಾಳವೆಂದು ನಿರೂಪಿಸಿದ್ದ ಪ್ರಾತಃಸ್ಮರಣೀಯರಾದ ಪರಮಪೂಜ್ಯ
ಶ್ರೀ ಶ್ರೀ ಸುಶಮೀಂದ್ರತೀರ್ಥಶ್ರೀಪಾದರೆಂಬ ಮಹಾಮಹಿಮರು, ಶ್ರೀಸುಯತೀಂದ್ರತೀರ್ಥರೆಂಬ ಶಿಷ್ಯರನ್ನು ಮಹಾ ಸಂಸ್ಥಾನಕ್ಕೆ ನೀಡಿ,  ಶ್ರೀವಿರೋಧಿ ನಾಮ ಸಂವತ್ಸರ ಚೈತ್ರ ಬಹುಳ ದ್ವಿತೀಯ(11-04-2009)
ದಂದು ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ವೃಂದಾವನಸ್ಥರಾದರು.

   ಪ್ರಾತಃಸ್ಮರಣೀಯರು, ಪರಮಪೂಜ್ಯರೂ ಆದ, ಶ್ರೀ ಶ್ರೀಮತ್ ಸುಶಮೀಂದ್ರತೀರ್ಥರ ಅನುಗ್ರಹ ಸದಾ ನಮ್ಮ ಮೇಲಿರಲೆಂದು ಅವರ ಅಂತರ್ಯಾಮಿ
ಶ್ರೀ ರಾಘವೇಂದ್ರತೀರ್ಥ ಗುರುವಾಂತರ್ಗತ
ಭಾರತೀರಮಣ ಮುಖ್ಯಪ್ರಾಣಾಂತರ್ಗತ
ಶ್ರೀ ಮನ್ಮೂಲ ರಘುಪತಿ ವೇದವ್ಯಾಸ ದೇವರಲ್ಲಿ ಪ್ರಾರ್ಥಿಸೋಣ....

ಅವರ ಸ್ಮರಣೆಯೇ ಪುಣ್ಯಕಾರಕ, ಅವರ ಅನುಗ್ರಹವೇ ಸ್ಫೂರ್ತಿದಾಯಕ....🙏🙏🙏🙏

ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.
***


No comments:

Post a Comment