info from sumadhwaseva.com--->
Sri. Sooreendra Theertharu
Vrundavana @ Madurai
Poorvashranama Naama – Vasudevacharya
Father – Venkatanarayanacharya
Period 1686 – 1692
Aradhana – Jyesta Shudda Dwiteeya
Vrundavana pravesha – Angeerasa Samvatsara
Vidyagurugalu – Raghavendra Swamigalu
Ashrama Gurugalu – Yogeendra Theeertharu
Ashrama Shishyaru – Sumatheendra Theertharu
राघवेंद्रार्पितधिये योगींद्रार्पितसूनवे ।
श्रीमत्सूरींद्रयतये सुतपो निधये नम: ॥
ರಾಘವೇಂದ್ರಾರ್ಪಿತಧಿಯೇ ಯೋಗೀಂದ್ರಾರ್ಪಿತಸೂನವೇ |
ಶ್ರೀಮತ್ಸೂರೀಂದ್ರಯತಯೇ ಸುತಪೋ ನಿಧಯೇ ನಮ: ||
Sri Sooreendra Theertharu is the son of Rayara Poorvashrama
brother of Rayaru Sri Venkatanarayanacharyaru.
Venkatanarayanacharyaru’s four sons – who became the
pontiffs of Rayara Mutt parampare after Rayaru are :
1. Sri Yogeendra Theertharu - Venkanna
2. Sri Sooreendra Theertharu – Vasudevacharya
3. Sri Sumatheendra Theertharu – Muddu Venkatakrishna
4. Sri Upendra Theertharu - Vijayendra
Rayaru had given the Ashrama to Sri Yogeendra Theertharu (He
is also the son of Venkatanarayanacharyaru) and instructed him
to give ashrama to Vasudevacharya.
Collection by : Narahari Sumadhwa (9916904341)
vAsudEvAchArya was the elder brother of shri yOgIndra tIrtharU in his pUrvAshrama. When sUrIndra tIrtharU was ready to nominate his successor, he gave Ashrama to another of his pUrvAshrama brothers. So, yOgIndra tIrtharu, sUrIndra tIrtharu and sumatIndra tIrtharU were all brothers. They were also the grandsons of shri rAyarU's elder brother in his pUrvAshrama.They were all direct disciples of rAyarU and it is believed that rAyarU had instructed that they all adorn the pITA in this order.
******
24 May 2020 - " ಸ್ಮರಣೆ "
" ಈದಿನ ಶ್ರೀ ಸೂರೀ೦ದ್ರತೀರ್ಥರ ಆರಾಧನಾ ಮಹೋತ್ಸವ "
ಶ್ರೀ ಪ್ರಾಣೇಶದಾಸರು..
ವೈರಾಗ್ಯ ಗುಣದಿಂದ ।
ಮಾರಾರೀಯಂದದಿ ।
ತೋರುವರನುದಿನ ।
ಸೂರೀಂದ್ರತೀರ್ಥಾ ।।
ಶ್ರೀ ಸೂರೀ೦ದ್ರತೀರ್ಥರು ಶ್ರೀ ಪೂರ್ವಾಶ್ರಮ ಅಣ್ಣಂದಿರಾದ ಶ್ರೀ ಗುರುರಾಜಾಚಾರ್ಯರ ಪುತ್ರರಾದ ಶ್ರೀ ವೆಂಕಟನಾರಾಯಣಾಚಾರ್ಯರಿಗೆ ಐದು ಜನ ಪುತ್ರರು.
ಅವರೆಲ್ಲರೂ ಶ್ರೀ ರಾಯರ ಆಜ್ಞಾನುಸಾರ ಶ್ರೀ ರಾಯರ ನಂತರ ಹಂಸನಾಮಕ ಪರಮಾತ್ಮನ ಪರಂಪರೆಯಲ್ಲಿ ಕ್ರಮವಾಗಿ ಪೀಠಾಧಿಪತಿಗಳಾಗಿ ವಿರಾಜಿಸಿದ್ದಾರೆ!!!
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಶ್ರೀ ಯೋಗೀಂದ್ರತೀರ್ಥರನ್ನು ಮಹಾಪೀಠದಲ್ಲಿ ಮಂಡಿಸಿ ಮುಂದೆ ಶ್ರೀ ಸೂರೀಂದ್ರರಿಗೆ; ಅವರು ಶ್ರೀ ಸುಮತೀಂದ್ರರಿಗೆ; ಅವರು ಶ್ರೀ ಉಪೇಂದ್ರರಿಗೆ ಕ್ರಮವಾಗಿ ಪರಮಹಂಸಾಶ್ರಮವಿತ್ತು ಮಹಾ ಸಂಸ್ಥಾನಾಧಿಪತಿಗಳಾಗಬೇಕೆಂದು ಅಜ್ಞಾಪಿಸಿದ್ದರು.
ಶ್ರೀ ಯೋಗೀಂದ್ರತೀರ್ಥರು ಶ್ರೀ ರಾಯರ ಆದೇಶದಂತೆ ತಮ್ಮ ಪೂರ್ವಾಶ್ರಮ ಸಹೋದರರಾದ ಶ್ರೀ ವಾಸುದೇವಾಚಾರ್ಯರಿಗೆ ಪರಮಹಂಸಾಶ್ರಮವಿತ್ತು " ಶ್ರೀ ಸೂರೀಂದ್ರತೀರ್ಥ " ರೆಂಬ ನಾಮಕರಣ ಪೂರ್ವಕ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ ಕುಳ್ಳಿರಿಸಿ " ಪಟ್ಟಾಭಿಷೇಕ " ಮಾಡಿ ಅನುಗ್ರಹಿಸಿದರು.
ಶ್ರೀ ಸೂರೀಂದ್ರತೀರ್ಥ ಯತಿಪುಂಗವರೇ!
ನೀವು ಸರ್ವದಾ ಶ್ರೀ ಗುರುಸಾರ್ವಭೌಮರ ಚರಣದಲ್ಲೇ ಮನಸ್ಸಿಟ್ಟಿರುವವರು.
ನೀವು ಶ್ರೀ ಯೋಗೀಂದ್ರತೀರ್ಥ ಕರಕಮಲ ಸಂಜಾತರು.
ಜ್ಞಾನ - ಭಕ್ತಿ - ತಪಸ್ಸು ಮುಂತಾದ ಸದ್ಗುಣ ವಿರಾಜಿತರು ಮತ್ತು ಮಹಾ ಮಹಿಮೋಪೇತರು!
ಶ್ರೀ ಸುಮತೀಂದ್ರತೀರ್ಥರ ಆಶ್ರಮ ಗುರುಗಳೂ ಮತ್ತು ಶ್ರೀ ಸುಮತೀಂದ್ರತೀರ್ಥರಿಗೆ ತಮ್ಮ ಸ್ವಹಸ್ತಗಳಿಂದ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ ಮಾಡಿದ ತಪೋನಿಧಿಗಳು!!
ರಚನೆ : ಶ್ರೀ ಕುರಡಿ ರಾಘವೇಂದ್ರಾಚಾರ್ಯರು
ಅಂಕಿತ : ಲಕುಮೀಶ
ಸೂರೀ೦ದ್ರ ಸೂರೀ೦ದ್ರ ।। ಪಲ್ಲವಿ ।।
ಸೂರಿ ಜನರಿಂದಾರಾಧಿತ ಶ್ರೀ ।। ಅ ಪ ।।
ಯೋಗೀ೦ದ್ರರಿಗೆ ಪೂರ್ವಾಶ್ರಮದಣ್ಣ ।
ಯೋಗೀ೦ದ್ರರಿಂದಲಿ
ಯೋಗಿ ನೀನಾದಂಥ ।। ಚರಣ ।।
ಖೂಳ ದುರ್ಮತ ಎದೆ
ಶೂಲ ನೀನೆನಿಸುತ ।
ಮೂಲರಾಮನ ಪೂಜೆ
ಕಾಲ ಕಾಲದಿಗೈದ ।। ಚರಣ ।।
ಸುಖಮುನಿ ಶಾಸ್ತ್ರ ಸ್ಥಿರ
ಸುಖಕೇ ಪಠಿಸುತ ।
ಲಕುಮೀಶ ಧ್ಯಾನದಿ ಮಧುರೆಲಿ
ನಿಂತ ಗುರು ।। ಚರಣ ।।
" ಶ್ರೀ ಸೂರೀಂದ್ರತೀರ್ಥ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ವಾಸುದೇವಾಚಾರ್ಯರು
ತಂದೆ : ಶ್ರೀ ವೆಂಕಟ ನಾರಾಯಣಾಚಾರ್ಯರು
ವಿದ್ಯಾ ಗುರುಗಳು :
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರುಆಶ್ರಮ
ಆಶ್ರಮ ಗುರುಗಳು : ಶ್ರೀ ಯೋಗೀಂದ್ರತೀರ್ಥರು
ಆಶ್ರಮ ನಾಮ : ಶ್ರೀ ಸೂರೀಂದ್ರತೀರ್ಥ
ರುಕಾಲ : ಕ್ರಿ ಶ : 1688 - 1692
ಬೃಂದಾವನ ಸ್ಥಳ : ಮಧುರೈ
ರಾಘವೇಂದ್ರಾರ್ಪಿತಧಿಯೇ
ಯೋಗೀಂದ್ರಾರ್ಪಿತ ಸೂನವೇ ।
ಶ್ರೀಮತ್ಸೂರೀಂದ್ರಯತಯೇ
ಸುತಪೋನಿಧಯೇ ನಮಃ ।।
" ವೆಂಕಟನಾಥ " ಮುದ್ರಿಕೆಯಲ್ಲಿ ಆಚಾರ್ಯ ನಾಗರಾಜು ಹಾವೇರಿ...
ಸೂರೀ೦ದ್ರ ಗುರುವೇ ನಮೋ ನಮಃ ।
ಗುರುರಾಯರ ಪೌತ್ರ ನಮೋ ನಮಃ ।।
ಗುರುಸಾರ್ವಭೌಮರ ವಿದ್ಯಾ
ಶಿಷ್ಯ ನಮೋ ನಮಃ ।
ಗುರು ಯೋಗೀ೦ದ್ರರ ಕರ
ಸಂಜಾತ ನಮೋ ನಮಃ ।।
ಸೂರಿ ಜನ ಕಲ್ಪದ್ರುಮವೇ
ಮಧುರೈ ವಾಸನೆ ನಮೋ ನಮಃ ।
ಗುರು ಸುಮತೀಂದ್ರ ಪಿತನೆ
ವೆಂಕಟನಾಥ ಮೂಲರಾಮಾರ್ಚಕ ನಮೋ ನಮೋ ।।
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
*****
No comments:
Post a Comment