Wednesday, 1 May 2019

sudheendra teertharu nava vrundavana 1621 matha rayara mutt yati 16 phalguna bahula dwiteeya ಸುಧೀಂದ್ರ ತೀರ್ಥರು



info from sumadhwaseva.com--->

Sri Sudheendra Tirtharu 
He is the Uttaradhikari of Sri Vijayeendra Tirtharu 
Vidya gurugalu – Sri Vijayeendra Tirtharu
Ashrama Shishyaru – Sri Yadavendra Tirtharu
Ashrama Shishyaru – Sri Raghavendra Tirtharu
Poorvashrama Name – Sri Narayanacharya
Aradhana                    –  Phalguna Bahula Dwiteeya
Ashrama Sweekara   – 1575AD  Yuva samvatsara Chaitra Shukla Chaturdashi
Vrundavana               –  Anegonde (Navavrundavana)
Mruttika Vrundavana of Sri Sudheendra Tirtharu @ Dakshina Mantralaya, Naganallur, Chennai
ಕುಶಾಗ್ರಮತಯೇ ಭಾನುದ್ಯುತಯೇ ವಾದಿಭೀತಯೇ |
ಆರಾಧಿತಶ್ರೀಪತಯೇ ಸುಧೀಂದ್ರಯತಯೇ ನಮ: |
कुशाग्रमतये भानुद्युतये वादिभीतये ।

आराधितश्रीपतये सुधींद्रयतये नम: ।

Sri Sudheendraru gave sanyasashrama to Yadavendra Tirtharu and Sri Raghavendra Tirtharu –
Initially Sri Sudheendra Tirtharu gave ashrama to Sri Yadavandra Tirtharu  on his request and gave him the vigraha of Sri Krishna, Lakshminarayana, few saligramas and Mukyaprana Vigrahas and sent him for Tirtha Yatre.  He was his poorvashrama nephew only.  Sri Yadavendra Tirtharu was not interested in Peetadhipathva, he was in for only sanyasa.  After taking sanyasa, he went to Theertha Yatra and toured the whole of India with prachara of Madhwa philosophy.  He returned only after Sri Sudheendra had appointed Rayaru as his uttaradhikari, and after Vrundavana pravesha of Sudheendraru.  Rayaru wished to handover the mathadhipathva to Yadavendraru as he was the senior, but he refused saying that he will do the pooja only for few days and would move for theertha yatre again.
Vaadi Nigraha – When he went to Gwalior on his way to Digvijaya, he had to counter the Dwaitha-Advaitha Vaagvaada with more than 10 people. He defeated all of them with authority and was honoured as “Rajaguru” by the Gwalior King. He toured and had digvijaya in Pandarapura, Bhagyanagara, Kolhapura, Tanjavore, etc.
Honour by renowned kings – He had the distinction of being honoured by various kings like, Mysore’s Nanjaraja Wodeyar, Karkala King Bhairava, King of Madurai, King of Anantashayana, Immadi Ramaraja, apart from Gwalior King. Samrat Venkatadhipathiraja did “Rathnabhisheka” to Sri Sudheendra Tirtharu.
Brought Rain in famine affected area – It was during the period of II Adilsha, the Sultan of Vijapur. The entire city was affected, as there was no rain at all and there was no crop. Sri Sudheendra Tirtharu did Japa – Tapa, Homa, Havana for seven days in that city and the city had such a rainfall which they had not seen before. The Kings treasury which was empty filled. The farmers enjoyed with the crop, all the rivers, wells, etc were filled with water. This pleased the King and he surrendered before the feat of Sri Sudheendra Tirtharu.
Sun hided for some time –
As the king was pleased, he asked his Shishya Ganashyama to surrender to Sri Sudheendra Tirtharu. But the wicked Ganashyama told that “bringing rain, defeating pundits is not a great thing. If at all I have to surrender, he shall hide the sun in the noon atleast for some time. If he does so, I will surrender before him with my entire family”. Sri Sudheendra Tirtharu prayed Srihari. After some time, to the surprise of all, the sun was hiding and the entire City was in dark, that too during mid noon. Srihari in his Krishnavatara done this to save Arjuna with his Sudarshana Chakra. Now, he did the same for the prayers of Sri Sudheendra Tirtharu, to prove that he will always support his bhakthaas. On seeing this, Ganashyama, a strong advaitee by birth and until now, surrendered, apologized, asked the seer to give him Madhwa Dheekshe. Sri Sudheendra Tirtharu gave him Madhwa Dheekshe with Mudradharana, Harisarvottamatva Vayujeevottamatva Tatva, Mantropadesha to Ganashyama. He gave a daana, a village named “Anehosore” which was in his name to the swamiji.
Contemporaries – Sri Vijayeendra Tirtharu, Sri Surendra Tirtharu, Sri Raghuvarya Tirtharu, Sri Raghuttama Tirtharu, Sri Raghavendra Tirtharu,  Sri Rama Tirtharu and Sri Lakshmi kantha Tirtharu of Vyasaraja Mutt,  Sri Sridhara Tirtharu of Sripadaraja Mutt, etc.   Immadi Ramaraja, Mysore Nanjaraja Wadayar,
Venkatanatha – higher education –
Sri Venkatanatha had earlier education from his brother in law. Already he had scholarly qualities. Sri Sudheendra Tirtharu taught him with Vyasaraja’s Tatparya Chandrika, Meemaamsa, Bhaamathi, Vyaakarana Mahaabhashya, etc granthas for nearly three years with Teekaa, Tippani , etc., and he did the samarpana to Srihari.
Granthas by Sri Sudheendra Tirtharu – He has written 18+ granthas.  They are :
  1. Sadyukthi Ratnakara
  2. Bhagavatha Dwiteeya Skanda Vyakyana
  3. Bhagavatha Ekadasha Skanda Vyakyana
  4. Alankara Manjari
  5. Alankara Nikasha
  6. Sahitya Samrajyam
  7. Subhadra Parinaya (Drama)
  8. Apastamba Shulpasutra Pradeepa
  9. Vairagya Taranga (Kavya)
  10. Dayalu Shatakam
  11. Amrutaharana (Drama)
  12. Sri Vyasarajabhyudaya (Kavya)
  13. Bhavaratna Mandana
  14. Omkara vaada
  15. Brahmasutra Nyaya sangraha
  16. Samasa shaktri nirnaya
  17. Pranavadarpana Kandanam
  18. Vijayeendra Yashobhushanam
Source : Kaliyuga Kalpataru, Sadachara Muktavali, Gurucharite
ಶ್ರೀ ಗುರುಭ್ಯೋನಮ:

ಶ್ರೀ ಕೃಷ್ಣಾರ್ಪಣಮಸ್ತು

*******

info from madhwamrutha.org--->


The credit of giving Sri Raghavendra Theertha who is regarded as Kaliyuga kamadhenu, kalpavruksha to this world goes to Sri Sudheendra Theertha. He comes in the direct lineage of Sri Madhwacharya. Below is his brief introduction.
Poorvashrama Name    – Sri Narayanacharya
Ashrama guru             – Sri Surendra Theertha check
Vidya guru                   – Sri Vijayeendra Theertha
Ashrama Shishyaru     – Sri Raghavendra Theertha and Sri Yadavendra Theertha
Aradhana                     – Phalguna Bahula Dwiteeya
Vrundavana Place        – Anegondi (Navavrundavana)
Sudheendratheertha who took sanyasa at the instance of Surendratheertha had the rare privilege of learning under his guru Vijayeendratheertha. He studied all Shastras under his guru only. He has mentioned that he attained knowledge only through the blessings of his guru.

 It is needless to speak about the excellence of learning when it is Vijayeendratheertha under whose guidance Sudheendratheertha had his learning. He acquired the knowledge of sixty four arts imparted by his guru in the traditional system. In all respects he proved to be a perfect disciple. Just as done by his guru, Sudheendratheertha also wrote books on all Shastras. Above all the misconception that Madhwas did not have even a bit of literary ability was completely dispelled. In the world of literature, the works of Sudheendratheertha brought about a revolution. He wrote plays, proses, poems and books on Alankara.
The following are the books written by Sudheendratheertha so far available.
  1. Sadyukthi Rathnakara (Tarkathandava Vyakhyana)
  2. Apastamba Shulbasootrapradepa
  3. Commentary on second, eleventh Skandas of Bhagavatha
Literary Books
  1. The play ‘Subhadra Parinaya’ (Commentary on Raghunatha Bhoopaleeya of Krishnadhwari)
  2. Vyasarajabhyudaya – Poetry –
  3. Amruthaharana – Drama –
  4. Dayalu Shathaka – Poetry –
  5. Vairagyatharanga – Poetry –
  6. Alankara Manjaree – Poetry –
  7. Alankara nishaka
  8. Sahitya Samrajya
  9. Subhadra Parinaya
  10. Apastamba Shulpasutra pradeepah
  11. Bhavaratnamandana
  12. Brahmasutra nyaya sangraha (Brahmasutradhikarana ratnamala)
  13. Samasashakti nirnayah
  14. Pranavadarpa khandanam
  15. Sri Vijayeendra Yashobhushanam – Poetry –
The swamiji’s logodaedaly is extremely pre-eminent. His words are meticulously woven to be very lucid and most intricate in perfect congruity with the context. Description, heart touching! It may be said that in the world of Sanskrit literature, his scholarship among great litterateurs has reached the tip of the spire. The swamiji’s play ‘Subhadra Parinaya’ is most impressive and enjoyable. He has skillfully narrated the story giving a graceful go bye to the incident of Arjuna sanyasa so that the image of the sanyasis remained unsullied. Madhuravani is a friend of Subhadra. Her character has been portrayed more impressively than that of Priyamvada. There is a wonderful mix of humor and horror in the dialogue between the demon couple. This conjures up the portrayal of Dravida Dharmika and description of Durga temple in the play ‘Kadambari’.
The coyness and other niceties usual to woman, Subhadra displays when she realises that she is in the company of Arjuna, have a wonderful touch of charm. Thus it may be said that the play ‘Subhadra Parinaya’ is a feast to the lovers of literature. The swamiji has shown his great scholarship through the words of Sootradhara when the Sootradhara speaks about him in the beginning of the play. That is not a mere muttering but this part extolling Vijayeendra, his guru is like a Dandaka. Though it is difficult to comprehend, it is delightful to read. Without exactly naming the play, he has enveloped it in a Chakrabandha. Such is the literary prowess of Sudheendratheertha. The swamiji had great reverence for his guru. It was his belief that he had achieved such great scholarship particularly through his blessings. Therefore whenever the occasion arose, he would not do without paying rich tributes to his guru. As does the king Prathaparudra become prominent in ‘Prathaparudrayashobhushana’, so only does the tributes to his guru Vijayeendra appear prominently in exemplifying each Alankara in Sudheendra’s ‘Alankara Manjaree’. The king Raghunatha of Tanjavoor was most predominant and a great scholar in the lineage of Nayakas. The poet Krishnayajva in his royal court composed a literary work ‘Raghunatha Bhoopaleeya’ on the king. Amazed by the unmatched scholarship in literature, eloquence, immense intellectual abilities of the swamiji, the poet Krishnayajva petitioned him to write a commentary on his book so that as does the maxim “the thread tastes the heaven through the flowers around” connote, so his book too can gain some prominence. Accedingly, did the swamiji write an elaborate commentary ‘Sahitya Samrajya’. Though by name this is a mere commentary, it overshadows the original like the commentaries ‘Kuvalayananda’ and ‘Dhwanyaloka’. A work superior to ‘Lochana’ and ‘Rasagangadhara’. Besides dealing with the aspects of Alankara, he has deeply reviewed rhetoric’s, method, voice, satire, equivocation, aptness, etc. He has narrated in his own special style the manner in which that literary work has produced the effect. This is like an encyclopedia for literature. Thus the benefit to the world of Sanskrit literature from the multifaceted intellect of the swamiji is unfathomable. The swamiji how erudite a scholar he was in Shastras, how imperial he was as a poet, so equally was he versed in mundane aspects. Some days after he was blessed with sanyasa by his guru under the aegis of his parama guru, he was greatly honored by Chevappanayaka, the popular nayak of Tanjavoor. Chevappa after taking the permission of the swamiji and his guru had requested his king Srirangaraya of Vijayanagar to accord special felicitation to Sudheendratheertha. In compliance, extending a royal welcome, Srirangaraya took the swamiji to his palace. Amidst special honors the king gifted the swamiji with the following villages on the auspicious day of Shivarathri corresponding to the thirteenth day of Magha Bahula in Yuva Samvatsara in the divine place of Pampavirupaksha.
  1. Bacchanahalu in Tamaragere region
  2. Khyada in Badami region
  3. Yadwala on the banks of the Malaapaha in Manvi region
  4. Chenchala down Sindhoosur
  5. Aralihalli down Tavudugundi
 (Mysore Archeological Report 1944. Note 22)

 Sudheendra’s renown spread far and wide like that of his guru. Venkatapathiraya, the ruler of Vijayanagar became his disciple and honored him with shower of gems at Penugonda.
 (Source: Gurugunastavana of Vadeendra Theertha)                                                
Venkatapathiraya did such honors to the swamiji on a number of occasions. Taking the cue king Raghunatha, the Nayak of Tanjavoor in all fervour had the swamiji visit his palace. He did special honors to the swamiji showering him with gold.
(Source: Raghavendra Vijaya)

Thus the swamiji receive honors and tributes from host of kings. The Mutt reached the pinnacle of glory through persistent endeavors of his paramaguru, guru and himself. Everywhere honor from kings began pouring in. The Mutt became the nucleus of learning. Even the rulers of small provinces would volunteer to do special honours to the swamiji with liberal gifts to Raghupathi’s coffer.

The research done on the basis of inscriptions reveals that the swamiji must have lived for a long time. All through his life as sanyasi, he held the flag of glory of the Mutt aloft everywhere. In 1620, a palegar by name Chenji Bhoopathi Vadiyaru gifted ‘Nonmon Deepanallur’ and ‘Kodikala’ villages to the swamiji at the Mutt on the banks of the Nityapushkarini at Srimushnakshetra, the abode of Aswathanarayana on the Parvakala (Kapilashasthi) of the sixth day of Bhadrapada Bahula in Raudri Samvatsara.
Brought Rain in Draught hit Area & Converting Day to Night:
During his long and momentous life the swamiji toured extensively. In the course of his one such tour, when he visited Bijapur it had been reeling under severe famine caused by drought for twelve years. A Smarta was the Dewan under the Nawab there. A Madhwa phobe, this Dewan hatched a conspiracy with malicious intentions to subject the swamiji to indignity and instigated the Nawab to urge him to invoke rain. The infatuated Nawab besides issuing such orders, sternly instructed the swamiji not to live the town. The swamiji caused the rainfall with his ascetic powers. The Dewan felt this to be a feat of magic. Throwing another gauntlet, he wanted the swamiji to convert the day into night. “This must be Sri Hari’s will” was how the swamiji felt. Accepting the challenge the swamiji prayed to Lord Hari. Like Lord Krishna eclipsing the Sun with his divine wheel to rescue Arjuna, right at the moment when the Sun was in his full glow just overhead, the day turned a dark night through swamiji’s mystic powers. The Sun turned invisible. Not only were the Nawab and Dewan astonished but also got frightened about the bravado of testing the swamiji without being aware of his prowess. The Nawab with all special felicitations to the swamiji gifted back ‘Anehosur’ a village which was earlier in the possession of the Mutt. Besides he conferred on the swamiji the title ‘Jagadguru’. The Dewan after Mudhradharana from the swamiji, himself turned swamiji’s close disciple. It was in his very same family that one Ghanashamaraya was born who earned a great fame.
The swamiji’s superhuman power did not confine itself to manifestation of his greatness. Many had fulfillment of whatever they sought through the blessings of swamiji. Giriyappa, the great grandson of Nagappa, a Shasthik Brahmin appointed as minister for Doddaballapura by Krishnadevaraya was suffering from the pangs of having no child for a very long time. When the swamiji in the course of his tour visited Doddaballapur, Giriyappa paying homage prayed the swamiji to bless him with the fortune of begetting a male child. The swamiji blessed him heartily. As a result Giriyappa begot seven children. One of them was Krishnaraya, a disciple of Jagannathadas. He was the most ardent devotee of God who authored the books Krishnakarnamrutha, Stuthisara, Bhagavathadashamaskandha, Yakshagana, and HarisarvottamasaraIt was how, Sudheendratheertha spent many years worshipping Moolarama, teaching and holding discourses, writing books, propagating and uplifting ‘Sanathana Dharma’ and having had honours and felicitations done by kings of many states, he left for the heavenly abode on the second day of Phalguna.
***********

Info from madhwasaints.wordpress.com--->
Hope everyone knows that Sri Sudheendra theertha is the guru of Sri Raghavendra swamy. He was initiated by the great saint Sri Vijayeendra theertha. His brindavana is the last to come up at Nava Brindavana, Anegondi, Hampi. The saint was well versed in the shaddarshana (Sankhya, Yoga, Nyaya, Vaiseshika, Purvamimaamsaa and Uttaramimaamsa) and hence called as Shaddarshanacharya. Since he was the recipient of various gifts and titles from a plethora of kings he was also addressed as Rajamanya. Apart from writing many works Sri Sudheendra theertha used to do elaborate puja to the holy dieties and idols of the matha and the Visraha used for His upasana (Garuda vahana Paramaathma) can still be seen adorning the residue of idols of Rayara matha. Sri Sudheendraru was blessed with the appearance of Sri Rama in his dream and was instructed to give the name “Sri Raghavendra theertha” to Venkatanatha. ***


info from wikipedia---> He was the Guru of Shri Raghavendra Swamy. He was also the “Shishya” given to Vijayeendra Theertha by Vyasa Raja himself. He was an unmatched scholar and he shared a close relationship with Vijayeendra Theertha. Some of the books written by him are: Sadukthi Rathnakara (Tarkathandava Vyakhya), Apastamba Shulbasootrapradepa,
Commentary on second and 11th Skandas of Bhagavatha Literary Books, Subhadra Parinaya, Vyasarajabhyudaya,
Amruthaharana, Dayalu Shathaka,
Vairagyatharanga, Alankara Manjaree,
Alankaranishaka and Sahitya Samrajya.
He was the Raja Guru of Raghunatha Bhoopala of Tanjore.
Raghavendra Swamy himself made arrangements for the Brindavana Pravesha of Sudhindra Theertha. His Aradhana Thithi is Phalguna Krishna Dvithiya (Feb-March).

Sudhindra Tirtha (c.1596 - c.1623) was a Dvaita philosopher of aesthetics, dramatist and the pontiff of the matha at Kumbakonam. Unlike his predecessors who mainly dealt with polemics and theology, most of his written works deal with Kavya (poetry), Alankara (figure of speech) and Nataka (drama), which is considered unique in history of Dvaita literature. He is also notable as a disciple of Vijayendra Tirtha and for mentoring Raghavendra Tirtha who subsequently succeeded him as the pontiff of the matha at Kumbakonam. Regarding his oeuvre in the context of Dvaita literature, Sharma notes "he was left us works of real merit, which stand out like oases in the dreary desert of theological writings". [1] His works are characterised by alliterations, elegance and simplicity.

Information about his life mainly comes from Raghavendra Vijaya by Narayanacharya. Nothing is known about his early life. He served as a disciple of Vijayendra Tirtha whom he later succeeded as the pontiff of the matha at Kumbakonam in 1596. The text speaks of Sudhindra receiving patronage by the rulers Venkatapati Raya of Vijayanagara and Raghunatha Nayaka of Tanjavur indicating his influence and respectability as a holy man. [2] There are records of him inducting Goud Saraswat Brahmin families of Cochin to the precepts of Dvaita and installing an idol of Venkateshwara for their utility, implying his popularity among the people of that particular sect. [3] Raghavendra Vijaya speaks of Sudhindra mentoring and grooming the young Venkatanatha (known later as Raghavendra Tirtha) to take up the mantle of sannyasa and succeed him as the pontiff. [4] Sudhindra died in 1623 and his mortal remains are enshrined in Navabrindavana in Hampi.

Among his non-extant works is a commentary on Vyasatirtha's Tarkatandava called Sadyuktiratnakara, a commentary on Bhagavata Purana and a work on aesthetics entitled Madhudhara[5] Alamkara Manjari is a manual of figures of speech and metaphors. In the context of Indian poetics, alamkara can be translated to "literary ornamentation". Sudhindra demonstrates the aspects of alamkara by making his guru, Vijayendra, the subject of ornamentation and praise. His Alamkara Nikasa is a work of similar nature of enumerating and expanding upon different alamkaras[6] Views of different philosophers on the elements of Indian aesthetics such as rasa and kavya are consolidated and expanded upon. Sahitya Samrajya is a commentary on the original by Krsna Yajvan, who was a philosopher of poetics in the Tanjore court. The work is unique in the history of Dvaita literature in that, Sharma notes, "a Madhva ascetic and pontiff of Sudhindra's standing, should have come forward to comment on the work of a layman and a Smartha, laying aside all considerations of pontifical prestige and religious difference". [7] Damaged fragments of a drama entitled Subhadra Dhananjya has been ascribed to him. [8]
*****


by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ

ಶ್ರೀ ಸುಧೀಂದ್ರತೀರ್ಥ - 1 "
" ದ್ವೈತ ವಿದ್ಯಾ ಸಾರ್ವಭೌಮ ಶ್ರೀ ಸುಧೀಂದ್ರತೀರ್ಥರು "
ಈದಿನ  - ದಿನಾಂಕ : 30.03.2021 ಮಂಗಳವಾರ  ಶ್ರೀ ಸುಧೀಂದ್ರತೀರ್ಥರ ಆರಾಧನಾ ಮಹೋತ್ಸವ., ಆನೆಗೊಂದಿ 
ರಚನೆ : ಶ್ರೀ ಪ್ರಸನ್ನ ಶ್ರೀನಿವಾಸ ದಾಸರು
ರಾಗ : ಸಾವೇರಿ ತಾಳ : ಆದಿ
ಶ್ರೀ ಸುಧೀಂದ್ರತೀರ್ಥ
ಯತಿರಾಜ ಚರಣ ।
ಬಿಸಜ ದ್ವಂದ್ವದಲಿ
ನಾ ಶರಣಾದೆ ಸತತ ।
ಅಸಮ ಗುಣವಾರಿನಿಧಿ
ಶ್ರೀ ರಾಮಚಂದ್ರ ।
ವ್ಯಾಸ ನರಹರಿ
ಕೃಷ್ಣಸೈಂಧವಾಸ್ಯ ಪ್ರಿಯ ।। ಪಲ್ಲವಿ ।।
ಅಶೇಷ ಗುಣಸಿಂಧು
ಶ್ರೀ ರಮಣ ಹಂಸನಿಗೆ ।
ಬಿಜಸ ಭವ ಸನಕಾದಿ
ಗುರು ಪರಂಪರೆಗೆ ।
ದಶ ಪ್ರಮತಿ ಪಾದಾಂಬುಜ
ಯುಗ್ಮಕೆ ಮನಸಾ ।
ನ ಸದಾ ಸನ್ನಮಿಸಿ
ಶರಣಾದೆ ಮುದದಿ ।। ಚರಣ ।।
ಅರವಿಂದನಾಭ ನರಹರಿ
ಮಾಧವತೀರ್ಥ ।
ಸೂರಿಕುಲ ತಿಲಕ
ಅಕ್ಷೋಭ್ಯ ಜಯತೀರ್ಥ ।
ಪರ ವಿದ್ಯಾ ಕುಶಲ
ಶ್ರೀ ವಿದ್ಯಾಧಿರಾಜೇಂದ್ರ ।
ಚರಣಂಗಳಲಿ
ಶರಣು ಶರಣಾದೆ ।। ಚರಣ ।।
ಕೋವಿದ ಶಿರೋಮಣಿ
ಕವೀಂದ್ರ ವಾಗೀಶರು ।
ಭಾವುಕಾಗ್ರಣಿ ರಾಮಚಂದ್ರ
ವಿಬುಧೇಂದ್ರ ।
ದೇವ ಹರಿಪ್ರಿಯ
ಜಿತಾಮಿತ್ರ ರಘುನಂದನ ।
ದೇವಿ ತುಳಸೀಪತಿ
ಒಲಿದಿಹ ಸುರೇಂದ್ರ ।। ಚರಣ ।।
ಈ ಸರ್ವ ಗುರುಗಳ
ಚರಣ ಕಮಲಗಳಲ್ಲಿ ।
ನಾ ಸರ್ವದಾ ಶರಣು
ಶರಣೆಂಬೆ ಮುದದಿ ।
ಶ್ರೀ ವ್ಯಾಸಮುನಿ ಮಿತ್ರ
ಶ್ರೀ ಸುರೇಂದ್ರರ । ಕರಸ ।
ರಸಿಜಜ ಶ್ರೀ ವಿಜಯೀಂದ್ರರಿಗೆ
ನಮಿಪೆ ।। ಚರಣ ।।
ತೋಯಜೇಕ್ಷನ ನಾರಾಯಣ
ಲಕ್ಷ್ಮೀಗೆ ಮುಖ್ಯ ।
ವಾಯುಗೆ ಭಾರತಿಗೆ
ಪ್ರಿಯತಮರು ।
ಜಯಶೀಲ ವಿಜಯೀಂದ್ರತೀರ್ಥರ
ಕರದಿಂದ । ಅಭ್ಯು ।
ದಯವಾದರು ಸುಧೀಂದ್ರ
ಯತಿವರರು ।। ಚರಣ ।।
ಬುದ್ಧಿ ತೀಕ್ಷಣ್ಯಯುತ
ಉದ್ಧಾಮ ಪಾಂಡಿತ್ಯ ।
ಮಾಧವ ಮಧ್ವಾನುಗ್ರಹ
ಪಾತ್ರತ್ವ ।
ಶ್ರೀದನಪರೋಕ್ಷ
ಯೋಗ್ಯತೆಯನ್ನ ಕಂಡು ।
ಸುಧೀಂದ್ರ ನಾಮವನು
ಇತ್ತರು ಗುರುಗಳು ।। ಚರಣ ।।
ಶ್ರೀ ವಿಜಯೀಂದ್ರರನುಗ್ರಹ
ಪೂರ್ಣ ಪಾತ್ರರು ।
ದೇವಾಂಶರು ಶ್ರೀ
ಸುಧೀಂದ್ರ ಯತಿಯು ।
ದಿಗ್ವಿಜಯದಲಿ ಇವರ
ಮಹಿಮೆಗಳ ಕಂಡು ।
ಸರ್ವರು ಎಲ್ಲೆಲ್ಲು
ಮಾಡಿದರು ಮರ್ಯಾದೆ ।। ಚರಣ ।।
ಸುಭದ್ರಾ ಪರಿಣಯದ
ಸೊಬಗು ರಸತರವು ।
ಈ ಭಾರಿ ಕವಿಗಳ
ಸಾಮರ್ಥ್ಯ ಯೇನೆಂಬೆ ।
ಗಂಭೀರ ಧಾಟಿಯಲಿ
ವ್ಯಾಸರಾಜಾಭ್ಯುದಯ ।
ಸದ್ಭಕ್ತಿ ವೈರಾಗ್ಯ
ಬೋಧಿಪ ಗ್ರಂಥಗಳು ।। ಚರಣ ।।
ವ್ಯಾಖ್ಯಾನ ಮಾಡಿದರು
ಶ್ರೀ ಭಾಗವತದ ।
ಏಕಾದಶ ಸ್ಕಂದ
ದ್ವಿತೀಯ ಸ್ಕಂದ ।
ತರ್ಕ ತಾಂಡವಕೆ
ವ್ಯಾಖ್ಯಾನ ಇನ್ನು ಬಹು । ಅ ।
ಲಂಕಾರಮಂಜರಿಯಾದಿ
ಗ್ರಂಥಗಳು ।। ಚರಣ ।।
ಸುಧೀಂದ್ರ ಗುರುಗಳಲಿ
ಪಾಠ ಓದುವುದಕ್ಕೆ ।
ಬಂದಿದ್ದರು ವೇಂಕಟ-
ನಾಥಾಚಾರ್ಯ ।
ಸಾಧು ಧೀಮಂತರು
ವಿನಯ ಸಂಪನ್ನರು ।
ಶ್ರೀದನಿಗೆ ಪ್ರಿಯತಮ
ಭಕ್ತ ವಿಜ್ಞಾನಿ ।। ಚರಣ ।।
ರಾಘವನ ಪ್ರೇರಣೆಯಿಂ
ಸಂನ್ಯಾಸವನಿತ್ತು ।
ರಾಘವೇಂದ್ರತೀರ್ಥಾಖ್ಯ
ನಾಮವ ಕೊಟ್ಟು ।
ಮುಖ್ಯ ವಿದ್ವಜ್ಜನ
ಭೂಪಾಲರ ಮುಂದೆ ।
ಶಂಖದಿ ಸುಧೀಂದ್ರರಭಿಷೇಕ
ಮಾಡಿದರು ।। ಚರಣ ।।
ತುಂಗಾ ತೀರದಲ್ಲಿ
ವೃಂದಾವನಗಳು ।
ಪಂಕಜನಾಭರು 
ಜಯತೀರ್ಥ ಕವೀಂದ್ರ ।
ವಾಗೀಶರು 
ವ್ಯಾಸರಾಯರು ಇಹರು ।
ತಾಕುಳಿತರಲ್ಲೇವೆ 
ಶ್ರೀ ಸುಧೀಂದ್ರಾರ್ಯ ।। ಚರಣ ।।
ಫಾಲ್ಗುಣ ಕೃಷ್ಣ
ದ್ವಿತೀಯಾ ಪುಣ್ಯದಿನ ।
ಳಾಳುಕನ ಸ್ಮರಿಸುತ
ಹರಿಪುರ ಐದಿ ।
ಇಲ್ಲಿ ವೃಂದಾವನದಿ
ಒಂದಂಶದಿ ಇಹರು ।
ಬಲು ಭಕ್ತಿಯಿಂ ನೆನೆಯೆ
ಒದಗುವರು ಬಂದು ।। ಚರಣ ।।
ಪದುಮಭವಪಿತ
ಶ್ರೀ ಪದುಮಾಲಯಪತಿ ।
ನಿರ್ದೋಷ ಗುಣನಿಧಿ
ಪ್ರಸನ್ನ ಶ್ರೀನಿವಾಸ ।
ಯದುಪತಿಗೆ ಪ್ರಿಯತಮ
ಸುಧೀಂದ್ರ ಗುರುವರ ನಿಮ್ಮ ।
ಪದುಮಾಂಘ್ರಿ ಯುಗ್ಮದಲಿ
ಶರಣು ಮಾಂ ಪಾಹಿ ।। ಚರಣ ।।
" ಶ್ರೀ ಸುಧೀಂದ್ರತೀರ್ಥರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ನಾರಾಯಣಾಚಾರ್ಯರು
ಕಾಲ : ಕ್ರಿ ಶ 1614 - 1623
ಆಶ್ರಮ ಗುರುಗಳು : ಶ್ರೀ ಸುರೇಂದ್ರತೀರ್ಥರು
" ಶ್ರೀ ವಾದೀಂದ್ರತೀರ್ಥರು ....."
ಸುರೇಂದ್ರಃ ಸಾಂಪ್ರದಾಯಾ=
ಪ್ತನ್ಯಾಸವಿಚ್ಛೇದ ಬೀರುಕಃ ।
ಸುಧೀಂದ್ರಂ ನ್ಯಾಸಯಿತ್ವಾ
ತ್ವಂ ವಿಜಯೀಂದ್ರಕರೇ ದದೌ ।।
ಆಶ್ರಮ ನಾಮ : ಶ್ರೀ ಸುಧೀಂದ್ರತೀರ್ಥರು
ವಿದ್ಯಾ ಗುರುಗಳು : ಶ್ರೀ ವಿಜಯೀಂದ್ರತೀರ್ಥರು
ಆಶ್ರಮ ಶಿಷ್ಯರು : ಶ್ರೀ ರಾಘವೇಂದ್ರತೀರ್ಥರು 
ಲಿಯುಗದ ಕಲ್ಪವೃಕ್ಷ - ಕಾಮಧೇನು; ಸರ್ವ ವಿದ್ಯಾ ಪ್ರವೀಣರಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರನ್ನು ಜಗತ್ತಿಗೆ ಕರುಣಿಸಿದ ಮಹಾ ಮಹಿಮರು ಶ್ರೀ ಸುಧೀಂದ್ರತೀರ್ಥರು.
ಬಾಲ್ಯದಲ್ಲಿಯೇ ಅಗಾಧ ಪಾಂಡಿತ್ಯ - ಪ್ರತಿಭೆಗಳಿಂದ ಪಂಡಿತ ಮಂಡಲಿಯ ಗಮನವನ್ನು ಸೆಳೆದರು.
ಶ್ರೀ ಸುರೇಂದ್ರತೀರ್ಥರ ಉತ್ತರಾಧಿಕಾರಿಗಳಾದ ಶ್ರೀ ವಿಜಯೀಂದ್ರತೀರ್ಥರಲ್ಲಿ ವಿಶೇಷವಾಗಿ  ಷಡ್ದರ್ಶನವನ್ನೂ - ಸಮಗ್ರ ದ್ವೈತ ವೇದಾಂತಾಧ್ಯಯನವನ್ನು ಮಾಡಿ; ಸದಾಚಾರ ಸಂಪನ್ನರಾದ ಇವರಿಗೆ ಶ್ರೀ ಸುರೇಂದ್ರತೀರ್ಥರು ತುರ್ಯಾಶ್ರಮ ನೀಡಿದರು.
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ವೇದಾಂತ ವಿದ್ಯಾ ಸಿಂಹಾಸನಾಧೀಶ್ವರರಾಗಿ ಕ್ರಿ ಶ 16 - 17 ನೇ ಶತಮಾನಗಳಲ್ಲಿ ಭಾರತಾದ್ಯಂತ ಸಂಚರಿಸಿ ಸಕಲ ದುರ್ವಾದಿಗಳನ್ನೂ ಜಯಿಸಿ - ದ್ವೈತ ವಿಜಯ ದುಂದುಭಿಯನ್ನು ಮೊಳಗಿಸಿ - ಸಕಲ ಶಾಸ್ತ್ರಗಳಲ್ಲಿ ಪ್ರೌಢ ಗ್ರಂಥಗಳನ್ನು ರಚಿಸಿ - ರಾಜ ಮಹಾರಾಜ ಚಕ್ರವರ್ತಿಗಳಿಂದ, ಪಂಡಿತ ಮಂಡಲಿಯವರಿಂದ, ಶಿಷ್ಯ - ಭಕ್ತ ಜನರಿಂದ ಸೇವಿತರಾಗಿ ಜಗನ್ಮಾನ್ಯರಾದವರು
ಶ್ರೀ ವಿಜಯೀಂದ್ರತೀರ್ಥರ ಪ್ರಿಯ ಶಿಷ್ಯರೂ, ಶ್ರೀ ರಾಘವೇಂದ್ರತೀರ್ಥರ ವಿದ್ಯಾ ಮತ್ತು ಆಶ್ರಮ ಗುರುಗಳೂ ಆದವರು ಶ್ರೀ ಸುಧೀಂದ್ರತೀರ್ಥರು.
ಶ್ರೀಮನ್ಮಧ್ವಾಚಾರ್ಯರ ದ್ವೈತ ಸಿದ್ಧಾಂತ, ಮೀಮಾಂಸಾ, ವ್ಯಾಕರಣ, ನ್ಯಾಯ ಶಾಸ್ತ್ರಗಳಲ್ಲೂ; ಕಾವ್ಯ - ನಾಟಕಾಲಂಕಾರಾದಿ ಸಾಹಿತ್ಯ ಶಾಸ್ತ್ರಗಳಲ್ಲೂ ಅನನ್ಯ ಸಾಧಾರಣ ಗ್ರಂಥಗಳನ್ನು ರಚಿಸಿ; ವಿಜಯ ನಗರ ಕನ್ನಡ ಸಾಮ್ರಾಟರೂ; ದಕ್ಷಿಣ ಭಾರತದ ತಂಜಾವೂರು - ಮಧುರೆ - ಕೇರಳ ರಾಜ್ಯಗಳ ಭೂಪತಿಗಳೂ; ಗ್ವಾಲಿಯರ್ ರಾಜ್ಯಾಧಿಪತಿಗಳೇ ಮೊದಲಾದವರಿಂದ ಕತ್ನಾಭಿಷೇಕ - ಕನಕಾಭಿಷೇಕ ಮುಂತಾದ ಗೌರವ ಸಮರ್ಪಣ ಪೂರ್ವಕವಾಗಿ ಸೇವಿತರಾದವರೂ; ಕಾಂತಿ ಸಂಪನ್ನರೂ; ಸಂಪದ್ಭರಿತರೂ ಆದವರು ಶ್ರೀ ಸುಧೀಂದ್ರತೀರ್ಥರು.
****

" ಶ್ರೀ ಸುಧೀಂದ್ರತೀರ್ಥ - 2 "
ಸ್ವಾಮೀ ಶ್ರೀ ಸುಧೀಂದ್ರತೀರ್ಥ ಗುರುವರ್ಯರೇ!
ಕ್ರಿ ಶ 16 - 17 ನೇ ಶತಮಾನಗಳಲ್ಲಿ ಭಾರತ ದೇಶದ ಸಾರಸ್ವತ ಪ್ರಪಂಚದಲ್ಲಿ ಅತ್ಯಂತ ಮನ್ನಣೆಗೆ ಪಾತ್ರರಾದ ತಾವು ತರ್ಕ - ವೇದಾಂತ - ಮೀಮಾಂಸಾ - ವ್ಯಾಕರಣ - ಅಲಂಕಾರ ಶಾಸ್ತ್ರವೇ ಮೊದಲಾದ ಶಾಸ್ತ್ರಗಳಲ್ಲಿ ತಮಗಿರುವ ಪಾಂಡಿತ್ಯಾತಿಶಯವನ್ನು ತಮ್ಮ ಕೃತಿಗಳೆಲ್ಲವೂ ಎತ್ತಿ ತೋರುವವು.
ಶ್ರೀ ಚಂದ್ರಿಕಾ ಚಾರ್ಯರ " ತರ್ಕ ತಾಂಡವ " ಕ್ಕೆ ವ್ಯಾಖ್ಯಾನವಾದ ತಮ್ಮ " ಸದ್ಯುಕ್ತಿ ರತ್ನಾಕರ "; ಸ್ವತಂತ್ರ ಮಹಾಕಾವ್ಯವಾದ " ಅಮೃತಾಹರಣ "; ಶುಲ್ಬ ಸೂತ್ರ ವ್ಯಾಖ್ಯಾನವಾದ " ಪ್ರದೀಪ "; ಅಲಂಕಾರ ಶಾಸ್ತ್ರದಲ್ಲಿ ಮೇರು ಕೃತಿಗಳಾದ " ಅಲಂಕಾರ ಮಂಜರೀ "; " ಸಾಹಿತ್ಯ ಸಾಮ್ರಾಜ್ಯಂ " ಮುಂತಾದ ಕೃತಿಗಳೂ; ಶ್ರೇಷ್ಠವಾದ " ಸುಭದ್ರಾ ಪರಿಣಯ " ನಾಟಕ ಮತ್ತು ಶ್ರೀ ಹರಿಯ ಕಾರುಣ್ಯವನ್ನು ಹೃದಯಂಗಮವಾಗಿ ಚಿತ್ರಿಸಿದ " ದಯಾಲು ಶತಕ " ಹಾಗೂ ವೈರಾಗ್ಯ ಬೋಧಕವಾದ " ವೈರಾಗ್ಯ ತರಂಗ " ಮುಂತಾದ ಪರಮ ಶ್ರೇಷ್ಠ ಗ್ರಂಥಗಳನ್ನು ರಚಿಸಿ ವಿದ್ವದ್ವ್ರುಂದದಿಂದ ಸ್ತುತ್ಯರಾದವರು ಶ್ರೀ ಸುಧೀಂದ್ರತೀರ್ಥ ಯತಿವರ್ಯರು!
ಶ್ರೀ ಮನ್ಮಧ್ವಾಚಾರ್ಯರ ಸಂಮತವಾದ " ತತ್ತ್ವವಾದ ಮತ " ದ ಅಥವಾ " ದ್ವೈತ ಮತ " ದ ದೀಕ್ಷಿತರಾದವರೂ; ಕರ್ನಾಟಕ - ಆಂಧ್ರ - ದ್ರಾವಿಡ ದೇಶದ ನರಪತಿಗಳಿಂದ ಸತತ ಪೂಜಿತರಾದವರೂ; ತಮ್ಮ ಜಗದ್ವಿಖ್ಯಾತ ಗ್ರಂಥಗಳಿಂದ ಪ್ರಭಾವಿತರಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಧೀಂದ್ರತೀರ್ಥರ ಆರಾಧನಾ ಮಹೋತ್ಸವದ ಶುಭ ಸಂದರ್ಭದಲ್ಲಿ ಅವರನ್ನು ಪರಿಚಯಿಸುವ ಚಿಕ್ಕ ಪ್ರಯತ್ನ ಇಲ್ಲಿದೆ. 
" ಶ್ರೀ ಸುಧೀಂದ್ರತೀರ್ಥರ ವಿದ್ಯಾ ವೈಭವ ಮತ್ತು ವಂಶ - ಪೂರ್ವೇತಿಹಾಸ "
ಷಾಷ್ಠಿಕ ಮನೆತನದ ಸ್ವರ್ಣ ಭಂಡಾರಿಗಳ ಕುಟುಂಬಕ್ಕೆ ಸೇರಿದ ಶ್ರೀ ನರಹರಿ ಆಚಾರ್ಯರು ಭಂಡಾರುಕೇರಿ ಪ್ರಾಂತ್ಯದ ಜಹಗೀರದಾರರಾಗಿದ್ದರು.
ಅವರಿಗೆ ಮೂರು ಜನ ಮಕ್ಕಳು.
ಶ್ರೀ ನಾರಾಯಣಾಚಾರ್ಯರು ( ಶ್ರೀ ಸುಧೀಂದ್ರತೀರ್ಥರು )
ಶ್ರೀ ಕೃಷ್ಣಾಚಾರ್ಯರು
ಶ್ರೀ ಶ್ರೀನಿವಾಸಾಚಾರ್ಯರು
ಶ್ರೀ ನರಹರಿ ಆಚಾರ್ಯರು ಬಿಜಾಪುರ ಆದಿಲಶಾಹನ ಸೈನ್ಯದೊಂದಿಗೆ ರಣರಂಗದಲ್ಲಿ ಕಾದಾಡಿ ಕಾಲಾಧೀನರಾದರು.
ಶ್ರೀ ನರಹರಿ ಆಚಾರ್ಯರ ಮರಣಾನಂತರ ಜಹಗೀರಿಯ ಆಡಳಿತವು ಸಡಿಲವಾಯಿತು.
ಮಹತ್ವಾಕಾಂಕ್ಷಿಯಾದ ಕೆಳದಿಯ ನಾಯಕರು ಈ ಸಂಧಿಯ ಉಪಯೋಗವನ್ನು ಪಡೆಯಲು ತಮ್ಮ ಸ್ವಾರ್ಥ ಸಾಧನೆಗಾಗಿ ಭಂಡಾರುಕೇರಿ ಪ್ರಾಂತವನ್ನು ಸ್ವಾಧೀನ ಪಡಿಸಿಕೊಂಡರು.
ಇದರಿಂದ ಶ್ರೀ ನರಹರಿ ಆಚಾರ್ಯರ ಮಕ್ಕಳು ಅನಾಥರಾದರು.
ಆ ಕೆಳದಿಯ ನಾಯಕರು ಆ ಬಾಲಕರನ್ನು ತಮ್ಮ ಬಳಿಗೆ ಬರ ಮಾಡಿಕೊಂಡು " ನಿಮ್ಮ ಜಹಗೀರು ನಮ್ಮ ವಶವಾಯಿತೆಂದು ನೀವು ಯೋಚಿಸಬೇಕಿಲ್ಲ ನಾವು ನಿಮಗೆ ಮಾಶಾಸನವನ್ನು ನಿಗದಿ ಮಾಡುತ್ತೇವೆ, ನೀವು ಇನ್ನುಮುಂದೆ ವಿದ್ಯಾಭ್ಯಾಸದಲ್ಲಿ ನಿರತರಾಗತಕ್ಕದ್ದು " ಯೆಂದು ಹೇಳಿದರು.
ಅದಕ್ಕೆ ಶ್ರೀ ನಾರಾಯಣಾಚಾರ್ಯರು......
ನಾವು ನಿಮ್ಮ ರಾಜ್ಯದಲ್ಲಿ ವಾಸ ಮಾಡಲು ಬಯಸುವುದಿಲ್ಲ. 
ನಾವು ಕಾಶೀ ಮಹಾಕ್ಷೇತ್ರಕ್ಕೆ ಹೋಗಿ ಅಲ್ಲಿ ಶಿಕ್ಷಣವನ್ನು ಪಡೆಯುತ್ತೇವೆ. 
ನಿಮ್ಮ ಮಾಶಾಸನವೆಂಬ ಪಾರತಂತ್ರ್ಯದ ಶೃಂಖಲೆಯಿಂದ ಯೆಂದಿಗೂ ನಾವು ಬಂಧಿತರಾಗುವುದಿಲ್ಲ " ವೆಂದು ಪ್ರತ್ಯುತ್ತರವನ್ನು ಕೊಟ್ಟರು.
ಆಗ ಕೆಳದಿಯ ನಾಯಕರು ಆ ಬಾಲಕರನ್ನು ವಿವಿಧೋಪಚಾರಗಳಿನ್ದ ಸತ್ಕರಿಸಿ " ನಿಮ್ಮ ಪ್ರಯಾಣದ ವೆಚ್ಛಕ್ಕೋಸ್ಕರವಾಗಿ ಈ ಅಲ್ಪ ಧನವನ್ನು ಸ್ವೀಕರಿಸಿ, ಮಾರ್ಗದಲ್ಲಿ ತಸ್ಕರರ ಬಾಧೆಯು ಹೆಚ್ಚಾಗಿದೆ ಇಲ್ಲವಾಗಿದ್ದರೆ ಇನ್ನೂ ಹೆಚ್ಚು ಧನವನ್ನು ನಿಮಗೆ ಹಿಂಜರಿಯುತ್ತಿರಲಿಲ್ಲ.
ನೀವು ನಿಮ್ಮ ವಿದ್ಯಾಭ್ಯಾಸವನ್ನು ಪೂರೈಸಿಕೊಂಡು ಕಾಶೀ ಕ್ಷೇತ್ರದಿಂದ ಹಿಂದಿರುಗಿದ ತರುವಾಯ ನಮ್ಮ ರಾಷ್ಟ್ರದ ಪ್ರಧಾನ ಪದವಿಯನ್ನು ಸ್ವೀಕರಿಸಬೇಕು " ಯೆಂದು ನುಡಿದು ಅವರನ್ನು ಅಲ್ಲಿಂದ ಬೀಳ್ಕೊಟ್ಟರು.
ಶ್ರೀ ನಾರಾಯಣಾಚಾರ್ಯರು ತಮ್ಮಂದಿರೊಡಗೂಡಿ ಒಂದು ವರ್ಷ ಪರ್ಯಂತ ಪ್ರಯಾಣ ಮಾಡಿ ಕಾಶೀ ಕ್ಷೇತ್ರವನ್ನು ತಲುಪಿದರು.
ಇವರು ಸಹೋದರನ್ನೊಡಗೊಂಡು ಪಾಪ ಹಾರಿಣಿಯಾದ ಗಂಗಾ ನದಿಯಲ್ಲಿ ಮಿಂದು ಮಡಿಯುಟ್ಟು ಭಕ್ತವತ್ಸಳನಾದ ಶ್ರೀ ಚಂದ್ರಮೌಳಿ ವಿಶ್ವನಾಥನ ಸಂದರ್ಶನದಿಂದ ವಿಗತಶ್ರಮರಾದರು.
ಶ್ರೀ ನಾರಾಯಣಾಚಾರ್ಯರಿಗೆ ಒಂದು ಕ್ಷಣವೂ ವ್ಯರ್ಥ ಮಾಡಲು ಇಷ್ಟ ಪಡಲಿಲ್ಲ.
ಅವರು ತತ್ ಕ್ಷಣವೇ ಕಾಶಿಯ ಪ್ರಖ್ಯಾತ ವಿದ್ವಾಂಸರಾದ " ಶ್ರೀ ಲೀಲಾಶರ್ಮ " ಯೆಂಬ ಪಂಡಿತೋತ್ತಮರನ್ನು ಕಂಡು ಅವರಿಗೆ ತಮ್ಮ ವೃತ್ತಾಂತವನ್ನು ತಿಳಿಸಿದರು.
ಆ ಪಂಡಿತೋತ್ತಮರು ಶ್ರೀ ನಾರಾಯಣಾಚಾರ್ಯ ಮತ್ತು ಅವರ ಸಹೋದರರ ವಿದ್ಯಾಭ್ಯಾಸದ ಗುರುತರವಾದ ಭಾರವನ್ನು ವಹಿಸಿಕೊಂಡರು.
ತೀಕ್ಷ್ಣಬುದ್ಧಿ ಮತ್ತು ಮೇಧಾವಿಗಳಾದ ಶ್ರೀ ನಾರಾಯಣಾಚಾರ್ಯರು ಕೆಲ ವರ್ಷಗಳಲ್ಲಿಯೇ ವೇದ - ವ್ಯಾಕರಣ - ಸಾಹಿತ್ಯ - ಅಲಂಕಾರ - ಕಾವ್ಯ ಮೊದಲಾದ ಶಾಸ್ತ್ರಗಳನ್ನು ಅಧ್ಯಯನ ಮಾಡುವುದರ ಜೊತೆಯಲ್ಲಿ ಹಿಂದಿ ಮತ್ತು ಉರ್ದು ಭಾಷೆಗಳಲ್ಲಿಯೂ ಉತ್ತಮ ಶಿಕ್ಷಣ ಪಡೆದರು.
ಅಲ್ಲದೇ ಶ್ರೀಮನ್ಮಧ್ವಾಚಾರ್ಯರಿಂದ ರಚಿತವಾದ " ಗೀತಾಭಾಷ್ಯ " ವನ್ನು ಉರ್ದೂ ಭಾಷೆಗೆ ತರ್ಜುಮೆ ಮಾಡಿದರು.
ಶ್ರೀ ನಾರಾಯಣಾಚಾರ್ಯರು ತಮ್ಮ ಈ ಗ್ರಂಥದಲ್ಲಿ ಮುಸಲ್ಮಾನರ ಪವಿತ್ರ ಗ್ರಂಥವಾದ " ಕುರಾನ್ " ನ ಮಹಾ ವಾಕ್ಯಗಳನ್ನು ಚೆನ್ನಾಗಿ ವಿಮರ್ಶೆ ಮಾಡಿ ಅವಗಳಿಗೂ, ಗೀತಾ ವಾಕ್ಯಗಳಿಗೂ ತಾತ್ಪರ್ಯ ವ್ಯತ್ಯಾಸವಿಲ್ಲವೆಂದು ಸಕಾರಣವಾಗಿ ತೋರಿಸಿಕೊಟ್ಟರು.
ಆಗ ಪ್ರಬಲರಾಗಿದ್ದ ಮುಸಲ್ಮಾನ್ ಮತಾಚಾರ್ಯರು ಶ್ರೀ ನಾರಾಯಣಾಚಾರ್ಯರ ಮೇಲೆ ಕುಪಿತರಾದರು.
ಇವರಿಗೆ ಯವನರ ಬಾಧೆಯೂ ಹೆಚ್ಚಾಯಿತು.
ಕಾಶೀ ಕ್ಷೇತ್ರದಲ್ಲಿ ಹೆಚ್ಚು ಕಾಲ ನೆಲೆಸುವುದು ಸಾಧ್ಯವಾಗಲಿಲ್ಲ.
ಇವರಿಗೆ ತಮ್ಮ ಸಮೀಪ ಬಂಧುವಾದ ರಾಯಭಾರಿ ನಾರಣಪ್ಪನು ದೆಹಲಿಯಲ್ಲಿರುವುದು ನೆನಪಿಗೆ ಬಂತು.
ಸ್ವಂತ ಊರಿಗೆ ಹಿಂದಿರುಗುವುದಕ್ಕೆ ಪೂರ್ವಭಾವಿಯಾಗಿ ಆತನ ಸಂದರ್ಶನ ಮಾಡಬೇಕೆಂಬ ಕುತೂಹಲ ಹೆಚ್ಚಿತು.
ಇವರು ತಕ್ಷಣವೇ ತಮ್ಮ ಸಹೋದರರಿಂದೊಡಗೂಡಿ ಕಾಶಿಯಿಂದ ದೆಹಲಿಗೆ ಹೊರಟರು.
***
" ಶ್ರೀ ಸುಧೀಂದ್ರತೀರ್ಥ - 3 "
ಬಿಜಾಪುರ ಸುಲ್ತಾನರ ರಾಯಭಾರಿ ನಾರಣಪ್ಪನ ತಂದೆ ವೆಂಕಣ್ಣವರು ಬಿಜಾಪುರ ಸುಲ್ತಾನರ ಬಳಿ ಮುಖ್ಯ ಪ್ರಧಾನಿಯಾಗಿದ್ದರು. 
ಚಕ್ರವರ್ತಿಯ ಹಿಂದೂ, ಮುಸಲ್ಮಾನ್ ಮತ್ತು ರಾಜಪೂತ ಮತಾನುಯಾಯಿ 6 ಮಂದಿ ಮಂತ್ರಿ ಶ್ರೇಷ್ಠರು ವೆಂಕಣ್ಣನನ್ನು ಸಹೋದರನಂತೆ ಪ್ರೀತಿಸುತಲಿದ್ದರು. 
ಆದುದರಿಂದ ತಮ್ಮ ಮಿತ್ರನ ಮಗನಾದ ರಾಯಭಾರಿ ನಾರಣಪ್ಪನನ್ನೂ ಸಾರ್ವಭೌಮನ ಎಲ್ಲಾ ಮಂತ್ರಿಗಳೂ ವಿಶ್ವಾಸದಿಂದ ಕಾಣುತ್ತಲಿದ್ದರು.
ನಾರಣಪ್ಪನ ವಾಸ ಸ್ಥಳವು ದೆಹಲಿಯ ಪ್ರಧಾನ ಬೀದಿಗಳಲ್ಲೊಂದರ ಮಧ್ಯದಲ್ಲಿತ್ತು. 
ಆತನು ವಾಸವಿದ್ದ ಭವ್ಯ ಮಂದಿರಕ್ಕೆ " ಹವೇಲಿ " ಯೆಂಬ ಹೆಸರಿದ್ದಿತು. 
ಈ ಕಾರಣ ಆತನ ವಂಶೀಯಾರಿಗೆ " ಹವೇಲಿಯವರು " ಎಂಬ ಹೆಸರು ಪ್ರಸಿದ್ಧವಾಯಿತು. 
ಶ್ರೀ ನಾರಾಯಣಚಾರ್ಯರು ಮತ್ತು ಅವರ ಸಹೋದರರು ನಾರಣಪ್ಪನ ಮನೆಗೆ ಹೋದರು. 
ಇವರು ಬಂದ ಸಮಾಚಾರವು ನಾರಣಪ್ಪನಿಗೆ ತಿಳಿದ ತಕ್ಷಣವೇ ಆತನು ಹೊರಗೆ ಬಂದನು. 
ದೀರ್ಘ ಕಾಲಾನಂತರ ಬಂಧುಗಳ ದರ್ಶನ ಲಾಭವು ದೊರೆತದ್ದಕ್ಕಾಗಿ ಆತನು ಸಂತೋಷ ಪಟ್ಟು ಅವರನ್ನು ಆದರದಿಂದ ಸ್ವಾಗತಿಸಿ ಮನೆಯೊಳಗೆ ಕರೆದೊಯ್ದನು. 
ಪರಸ್ಪರ ಕ್ಷೇಮ ಲಾಭಗಳ ವಿನಿಮಯವಾದ ನಂತರ ಎಲ್ಲರೂ ಸ್ನಾನ ಮಾಡಿ ನಿತ್ಯಕರ್ಮಾನುಷ್ಠಾನ ಪರರಾದರು. 
ನಾರಣಪ್ಪನು ಈ ಸಹೋದರರನ್ನು ವಿವಿಧೋಪಚಾರಗಳಿಂದ ಸಂತೋಷ ಪಡಿಸುತ್ತಲಿದ್ದನು. 
ಈ ರೀತಿ ಕೆಲ ದಿನಗಳು ಕಳೆದವು. ಒಂದುದಿನ ಶ್ರೀ ನಾರಾಯಣಾಚಾರ್ಯರು ತಮ್ಮಿಂದ ಉರ್ದು ಭಾಷೆಯಲ್ಲಿ ರಚಿತವಾಗಿದ್ದ " ಗೀತಾಭಾಷ್ಯ " ಗ್ರಂಥವನ್ನು ನಾರಣಪ್ಪನ ಮುಂದಿರಿಸಿದರು. 
ಆತನು ಆ ಗ್ರಂಥವನ್ನು ಆಮೂಲಾಗ್ರವಾಗಿ ಪರಿಶೀಲಿಸಿ ಶ್ರೀ ನಾರಾಯಣಾಚಾರ್ಯರ ಪಾಂಡಿತ್ಯವನ್ನು ಮನಸಾ ಕೊಂಡಾಡಿದನು. 
ನಾರಣಪ್ಪನು ಅಷ್ಟಕ್ಕೆ ತ್ರುಪ್ತನಾಗದೇ ಚಕ್ರವರ್ತಿಯ ಪ್ರಧಾನರಿಗೂ ತಿಳಿಸಿದನು. 
ಅವರು ಸಮಯವರಿತು ಶ್ರೀ ನಾರಾಯಣಾಚಾರ್ಯರ ಆಗಮನ ವೃತ್ತಾಂತವನ್ನೂ; ಆ ಗ್ರಂಥದ ಮಹಾತ್ಮೆಯನ್ನೂ ಚಕ್ರವರ್ತಿಗೆ ಅರಿಕೆ ಮಾಡಿದರು. 
ಪ್ರಭುವರ್ಯನಾದ ಅಕ್ಬರ್ ಮಹಾಶಯನು ಶ್ರೀ ನಾರಾಯಣಾಚಾರ್ಯರ ಭೇಟಿಗೆ ಅನುಮತಿಯನ್ನು ದಯಪಾಲಿಸಿದನು. 
ಇವರು ಗೊತ್ತಾದ ದಿನ ತಮ್ಮಂದಿರೊಂದಿಗೆ ತಮ್ಮಿಂದ ರಚಿತವಾದ ಗ್ರಂಥ ರತ್ನದೊಂದಿಗೆ ಸಾರ್ವಭೌಮನ ಭೇಟಿಗಾಗಿ ಅರಮನೆಗೆ ಹೋದರು
ಚಕ್ರವರ್ತಿಯು ಸಿಂಹಾಸನಾರೂಢನಾಗಿದ್ದನು. ಶ್ರೀ ನಾರಾಯಣಾಚಾರ್ಯರು ಮತ್ತು ಅವರ ಅನುಚರರು ರಾಜಾಸ್ಥಾನದ ಮಾರ್ಯಾದೆಗನುಗುಣವಾಗಿ ನಡೆದುಕೊಂಡರು. 
ಅಕ್ಬರ್ ಚಕ್ರವರ್ತಿ ಈ ಯುವಕರ ವಿನಯವನ್ನು ಕಂಡು ಸಂತೋಷ ಪಟ್ಟು ತಮಗೆ ಮೀಸಲಿಟ್ಟ ಆಸನಗಳಲ್ಲಿ ಕುಳಿತುಕೊಳ್ಳಲು ಹೇಳಿದನು. 
ಅನಂತರ ಶ್ರೀ ನಾರಾಯಣಾಚಾರ್ಯರು ಚಕ್ರವರ್ತಿಯ ಇಚ್ಛೆಯಂತೆ ತಮ್ಮ ವೃತ್ತಾಂತವನ್ನು ಹೇಳಲಾರಂಭಿಸಿದರು. 
" ಶ್ರೀ ಅಕ್ಷೋಭ್ಯ ತೀರ್ಥರಿಂದ ಪ್ರಾರಂಭವಾದ - ಷಾಷ್ಠಿಕ ವಂಶದ ಛಿನ್ನ ಭಂಡಾರಿ ಮನೆತನದ - ವಿವರ ಶ್ರೀ ಸುಧೀಂದ್ರ ತೀರ್ಥರ ನುಡಿಮುತ್ತುಗಳಲ್ಲಿ .... "
ನಾವು ಷಾಷ್ಟಿಕ ಕುಲ ಸಂಜಾತರು. 
ನಮ್ಮ ಪೂರ್ವೀಕರು ಕದಂಬ ಚಕ್ರವರ್ತಿಯ ಬಳಿ ಕೋಶಾಧ್ಯಕ್ಷರಾಗಿದ್ದರು. 
ಅನಂತರ ಷಾಷ್ಟಿಕ ಬಂಧುಗಳು ಯಾದವರ ರಾಜ್ಯಾಡಳಿತದಲ್ಲಿ ಅತ್ಯುನ್ನತ  ಸ್ಥಾನಗಳನ್ನಲಂಕರಿಸಿದ್ದರು. 
ನಮ್ಮವರಲ್ಲಿ ಕೆಲವರು ಮಾಂಡಲೀಕರಾಗಿಯೂ; ಹಲವರು ಪ್ರಧಾನರಾಗಿಯೂ; ಅನೇಕರು ದಂಡನಾಯಕರಾಗಿಯೂ ಇದ್ದುಕೊಂಡು ಚಕ್ರಾಧಿಪತ್ಯದ ಅಭಿವೃದ್ಧಿಗೆ ನಾನಾ ರೀತಿಯಲ್ಲಿ ಸೇವೆಯನ್ನು ಸಲ್ಲಿಸಿದರು. 
ನಮ್ಮ ಹಿರಿಯರಲ್ಲಿ ಜಮಖಂಡಿ ನಾಡಿನ ಮಾಂಡಲೀಕರೂ ಮತ್ತು ವಿದ್ವಾಂಸರಾದ ಶ್ರೀ ಗೋವಿಂದಭಟ್ಟರು ( ಶ್ರೀ ಅಕ್ಷೋಭ್ಯತೀರ್ಥರು - ಶ್ರೀ ಜಯತೀರ್ಥರ ಗುರುಗಳು ) ಒಳ್ಳೆಯ ತ್ಯಾಗಮೂರ್ತಿಗಳು. 
ಅವರು ತಮ್ಮ ಅರಸೊತ್ತಿಗೆಯನ್ನು ಚಿಕ್ಕ ತಂದೆ ಶ್ರೀ ಧುಂಡಿರಾಜರಿಗೆ ಒಪ್ಪಿಸಿ ಶ್ರೀಮನ್ಮಧ್ವಾಚಾರ್ಯರ ಮೇರು ವ್ಯಕ್ತಿತ್ವಕ್ಕೆ ಮಣಿದು ಅವರ ಶಿಷ್ಯರಾದರು. 
ಅಲ್ಲದೇ ಕಷ್ಟ ಸಾಧ್ಯವಾದ ಸಂನ್ಯಾಸಾಶ್ರಮವನ್ನು ಶ್ರೀಮದಾಚಾರ್ಯರಿಂದಲೇ ಸ್ವೀಕಾರ ಮಾಡಿ ದ್ವೈತ ವೇದಾಂತ ಸಾಮ್ರಾಜ್ಯಾಧಿಪತಿಗಳಾದರು. 
ಶ್ರೀ ಗೋವಿಂದ ಭಟ್ಟರ ಚಿಕ್ಕ ತಂದೆ ಶ್ರೀ ಧುಂಡಿರಾಜರ ಕಿರಿಯ ಪುತ್ರರೇ ಶ್ರೀ ಜಯತೀರ್ಥರು! ಇವರನ್ನು ಶ್ರೀ ಟೀಕಾಚಾರ್ಯರೆಂತಲೂ ಕರೆಯುತ್ತಾರೆ. 
ನಮ್ಮ ಬಂಧುಗಳಾದ " ಶ್ರೀ ವ್ಯಾಸರಾಜ ಗುರುಸಾರ್ವಭೌಮರ " ಕಾಲದಲ್ಲಿ ನಮ್ಮ ವಂಶೀಯರಿಗೆ " ಚಿನ್ನಭಂಡಾರಿ " ಗಳೆಂಬುವ ಅಂಕಿತ ಉಂಟಾಯಿತು.
ಶ್ರೀ ಜಯತೀರ್ಥರ ತಂಗಿಯ ಮಕ್ಕಳಾದ ಶ್ರೀ ರಾಜೇಂದ್ರತೀರ್ಥರು ಮತ್ತು ಶ್ರೀ ಜಯಧ್ವಜತೀರ್ಥರು ನಮ್ಮ ಮಾಧ್ವ ಪರಂಪರೆಯಲ್ಲಿ ಉನ್ನತ ಸ್ಥಾನಗಳನ್ನು ಗಳಿಸಿದರು. 
ಶ್ರೀ ಜಯತೀರ್ಥರ ಪೂರ್ವಾಶ್ರಮದ ಮತ್ತೊಬ್ಬ ಸಹೋದರಿಯನ್ನು ಬನ್ನೂರು ಪ್ರಾಂತದ ಮಾಂಡಲೀಕರಾಗಿದ್ದ ಶ್ರೀ ವಲ್ಲಭದೇವರಿಗೆ ಕೊಟ್ಟು ಮದುವೆ ಮಾಡಿದ್ದರು. 
ಈತನು ತನ್ನ ಮಗಳೊಬ್ಬಳನ್ನು ಬೆಟ್ಟದ ಮನೆತನದ ಶ್ರೀ ಶೇಷಗಿರಿ ಭಟ್ಟರಿಗೆ ಕೊಟ್ಟು ವಿವಾಹ ಮಾಡಿದರು. 
ಈಕೆಯ ಗರ್ಭಾಂಬುಧಿಯಲ್ಲಿ ಪಾಂಡುಪುತ್ರರು ಹೇಗೋ ಹಾಗೆ 5 ಜನ ಪುತ್ರ ರತ್ನಗಳು ಜನಿಸಿದರು. 
ಇವರೆಲ್ಲರೂ ಚತುರ್ಥಾಶ್ರಮವನ್ನು ಕೈಗೊಂಡರು. 
ಇವರಲ್ಲಿ ಹಿರಿಯರು ಶ್ರೀ ಪುರುಷೋತ್ತಮತೀರ್ಥರೆಂತಲೂ; ಎರಡನೆಯವರು ಶ್ರೀ ಬ್ರಹ್ಮಣ್ಯತೀರ್ಥರೆಂತಲೂ; ಮೂರನೆಯವರು ಶ್ರೀ ಸ್ವರ್ಣವರ್ಣತೀರ್ಥರೆಂತಲೂ; ನಾಲ್ಕನೆಯವರು ಶ್ರೀ ಶ್ರೀಪಾದರಾಜರೆಂತಲೂ ಮತ್ತು ಕೊನೆಯವರಿಗೆ ಶ್ರೀ ಸುರೇಂದ್ರತೀರ್ಥರೆಂಬ ಹೆಸರಿನಿಂದ ಪ್ರಸಿದ್ಧಿಯಾದರು. 
ಬನ್ನೂರಿನ ಶ್ರೀ ವಲ್ಲಭದೇವರ ಮಕ್ಕಳಾದ ಶ್ರೀ ರಾಮಾಚಾರ್ಯ ದಂಪತಿಗಳಿಗೆ ಶ್ರೀ ಬ್ರಹ್ಮಣ್ಯತೀರ್ಥರ ವರ ಪ್ರಸಾದದಿಂದ " ಶ್ರೀ ಯತಿರಾಜ " ರೆಂಬ ಸತ್ಪುತ್ರ ಜನಿಸಿದರು.
ಶ್ರೀ ಯತಿರಾಜರು ಶ್ರೀ ಬ್ರಹ್ಮಣ್ಯತೀರ್ಥರ ಪೋಷಣೆಯಲ್ಲಿ ಬೆಳೆದು ಅವರಿಂದಲೇ ಚತುರ್ಥಾಶ್ರಮವನ್ನು ಪಡೆದು " ಶ್ರೀ ವ್ಯಾಸರಾಜ ಗುರುಸಾರ್ವಭೌಮ " ರೆಂಬ ಹೆಸರಿನಿಂದ ಜಗತ್ಪ್ರಸಿದ್ಧರಾದರು. 
ಶ್ರೀ ವ್ಯಾಸರಾಜರ ಚಿಕ್ಕಪ್ಪನ ಮಕ್ಕಳೇ ಶ್ರೀ ವಿಷ್ಣುತೀರ್ಥರು ( ಶ್ರೀ ವಿಜಯೀಂದ್ರತೀರ್ಥರು ). 
ಅವರ ಜನ್ಮ ವೃತ್ತಾಂತವನ್ನು ಹೇಳುತ್ತಾ... ಶ್ರೀ ಜಯತೀರ್ಥರ ಸದ್ವಂಶದಲ್ಲಿ ಜನ್ಮ ತಾಳಿದರು. 
ಶ್ರೀ ವ್ಯಾಸರಾಜರು ಸಂಚಾರ ಕ್ರಮದಲ್ಲಿರುವಾಗ ಅವರ ತಂದೆಯವರು ಬಂದು ನನ್ನ ವಂಶ ನಿಲ್ಲುವ ಪ್ರಸಂಗ ಬಂದಿದೆ ಎಂದು ನಮ್ಮ ಪಾದದ ಮೇಲೆ ಬಿದ್ದು ಗೋಳಾಡಿದರು. 
ಶ್ರೀ ವ್ಯಾಸರಾಜರಿಗೆ ಅತೀವ ದುಃಖವಾಯಿತು. 
ಕ್ಷಣ ಕಾಲ ಯೋಚಿಸಿ, ಶ್ರೀ ಮೂಲ ಗೋಪಾಲಕೃಷ್ಣನು ನಮ್ಮಿಂದ ನುಡಿಸಿದ್ದಾನೆ. 
ನುಡಿಸಿದಂತೆ ನಡೆಸುವ ಹೊಣೆ ಅವನದೆಂದು ನಿರ್ಧರಿಸಿ ಶ್ರೀ ಹರಿಯನ್ನು ಸ್ಮರಿಸಿ ಆ ವೃದ್ಧ ಬ್ರಾಹ್ಮಣ ದಂಪತಿಗಳಿಗೆ ಪುನಃ ಆಶೀರ್ವದಿಸಿ ಶ್ರೀ ಕೃಷ್ಣ ನುಡಿಸಿದ್ದಾನೆ. 
ಅವನ ಕಾರುಣ್ಯದಿನ್ದ ಯಾವುದೂ ದುರ್ಲಭವಲ್ಲ. 
ನೀವು ಅಂಜದಿರಿ. ಅನುಗ್ರಹವಾಗುತ್ತದೆ. 
ನಿಮಗೆ ಒಬ್ಬ ಪುತ್ರನಲ್ಲ ಇಬ್ಬರು ಸತ್ಪುತ್ರರು ಜನಿಸುತ್ತಾರೆ. 
ಅದರಲ್ಲಿ ಜ್ಯೇಷ್ಠ ಪುತ್ರನನ್ನು ಮಾತ್ರ ನಮಗೆ ಕೊಡಬೇಕು.ಶ್ರೀ ಹರಿ ಕಲ್ಯಾಣ ಮಾಡುತ್ತಾನೆ ಎಂದು ನುಡಿದರು. 
ಶ್ರೀ ವ್ಯಾಸರಾಜರು ಪುನಃ ಸಂಚಾರ ಕ್ರಮದಲ್ಲಿ ಆ ಗ್ರಾಮಕ್ಕೆ ಬಂದಾಗ ಆ ವೃದ್ಧ ದಂಪತಿಗಳು ಬಂದು ಪಾದಕ್ಕೆರಗಿ ಭಕ್ತಿ ಶ್ರದ್ಧೆಗಳಿಂದ ಕೈ ಮುಗಿದು ಗುರುಗಳೇ ಜ್ಯೇಷ್ಠ ಪುತ್ರನಾದ ವಿಠ್ಠಲನನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸಿದರು. 
ಹರ್ಷ ಪುಳಕಿತರಾದ ಶ್ರೀ ವ್ಯಾಸರಾಜರು ಶ್ರೀಕೃಷ್ಣ ಪ್ರೀತನಾದ. 
ಈ ಮಗುವಿನಿಂದ ಪ್ರಪಂಚಕ್ಕೆ ಮಹದುಪಕಾರವಾಗಬೇಕಿದೆ. 
ನೀವು ಅವನ ಚಿಂತೆ ಬಿಡಿ. ಶ್ರೀಹರಿಯ ಕೂಸವನು. 
ಅವನ ಭಾರ ಭಗವಂತನದು ಎಂದು ಪ್ರೀತಿಯಿಂದ ಅವರ ಆತಿಥ್ಯವನ್ನು ಸ್ವೀಕರಿಸಿ ವಿಠ್ಠಲನೊಡನೆ ಸಂಚಾರಕ್ಕೆ ಹೊರಟರು. 
ಅಂದಿನಿಂದ ವಿಠ್ಥಲನು ಶ್ರೀ ವ್ಯಾಸರಾಜರ ಪ್ರೀತಿಯ ಮಗುವಾದ. 
ಸುಂದರನಾದ ವಿಠ್ಠಲನನ್ನು ನೋಡಿದೆಂತೆಲ್ಲ ಶ್ರೀ ವ್ಯಾಸರಾಜರಿಗೆ ಹೆಚ್ಚೆಚ್ಚು ಸಂತೋಷವಾಗುತ್ತಿತ್ತು. 
ಅವರು ಅವನನ್ನು ಪ್ರೀತಿಯಿಂದ ಸಾಕಿದರು.
ಅವನಿಗೆ ಚೌಲ, ಉಪನಯನವನ್ನು ಮಾಡಿಸಿ ಅಮೂಲಾಗ್ರವಾಗಿ ನ್ಯಾಯ, ತರ್ಕ, ವ್ಯಾಕರಣ, ಮೀಮಾಂಸಾ, ಸಾಹಿತ್ಯಾದಿ ಶಾಸ್ತ್ರಗಳನ್ನೂ, ವೇದ ವೇದಾಂತ ಶಾಸ್ತ್ರ ಪಾಠಗಳನ್ನೂ ಹೇಳಿದರು. - ನಂತರ ಆ ಶ್ರೀ ವಿಠ್ಠಲಾಚಾರ್ಯರ ವೈರಾಗ್ಯ ಭಕ್ತ್ಯಾದಿಗಳನ್ನು ಕಂಡು ಅವರಿಗೆ ಸಂನ್ಯಾಸವನ್ನು ಒಟ್ಟು ಚತುಃಷಷ್ಠಿ ಕಲೆಗಳನ್ನು ಉಪದೇಶಿಸಿದರು.
ಆ ಬಾಲ ಸಂನ್ಯಾಸಿಯೇ ಈ ಶ್ರೀ ವಿಷ್ಣುತೀರ್ಥರು. 
ಅವರೇ ಮುಂದೆ ಶ್ರೀ ವಿಜಯೀಂದ್ರತೀರ್ಥರಾದರು. 
ಷಾಷ್ಠಿಕ ವಂಶದವರು ಶ್ರೀಮದಾಚಾರ್ಯರ ಅವತಾರಕ್ಕೂ ಹಿಂದಿನಿಂದಲೂ ಪ್ರಸಿದ್ಧರಾಗಿದ್ದರು. 
ಷಾಷ್ಟಿಕ ಮನೆತನದ ಶ್ರೀ ರುದ್ರಭಟ್ಟರು ದ್ವಾರ ಸಮುದ್ರದ ವೀರ ಬಲ್ಲಾಳರಾಯನ ಮಂತ್ರಿಯಾಗಿದ್ದರು. 
ಇವರಿಂದ ರಚಿತವಾದ " ಜಗನ್ನಾಥವಿಜಯ " ವೆನ್ನುವ ಕನ್ನಡ ಚಂಪೂ ಕಾವ್ಯವು ಪಂಡಿತರ ಮನ್ನಣೆಗೆ ಪಾತ್ರವಾಗಿದೆ.
ಶ್ರೀ ರುದ್ರಭಟ್ಟರ ಅಣ್ಣಂದಿರಾದ ಶ್ರೀ ಭಾಸ್ಕರ ಭಟ್ಟರು ಜ್ಯೋತಿಷ್ಯ ಶಾಸ್ತ್ರ ನಿರ್ಣಾಯಕವಾದ " ಸಿದ್ಧಾಂತ ಶಿರೋಮಣಿ " ಯೆಂಬ ಮಹಾ ಗ್ರಂಥವನ್ನು ರಚಿಸಿದರು. 
ಇವರಿಗೆ " ಗಣಿತ ಶಾಸ್ತ್ರ ವಿಶಾರದ " ನೆಂಬ ಪ್ರಶಸ್ತಿ ಉಂಟು. 
ಈ ಶ್ರೀ ರುದ್ರಭಟ್ಟರ ಮೊಮ್ಮಗ ಶ್ರೀ ಗಂಗಾಧರಭಟ್ಟ. 
ಇವರು ನಮ್ಮ ಹಿರಿಯರಾದ ಶ್ರೀ ಅಕ್ಶೋಭ್ಯತೀರ್ಥರ ಪ್ರೀತಿಯ ಶಿಷ್ಯನಾಗಿದ್ದನು. 
ಇಂತಹಾ ಪ್ರಖ್ಯಾತ ವಂಶದಲ್ಲಿ ನಾವು ಹುಟ್ಟಿದ್ದೇವೆ. ಶ್ರೀ ನಾರಾಯಣಾಚಾರ್ಯರ ಅಸ್ಖಲಿತ ವಾಣಿಯಿಂದ ಹೊರಟ ಆಶ್ಚರ್ಯವೂ ಮತ್ತು ಅದ್ಭುತವಾದ ಈ ಇತಿಹಾಸವನ್ನು ಅಕ್ಬರ್ ಚಕ್ರವರ್ತಿ ಸಾವಧಾನ ಚಿತ್ತದಿಂದ ಕೇಳಿದನು.
ಅಲ್ಲದೇ ಅವರಿಗೆ ಅಮೂಲ್ಯವಾದ ರತ್ನಾಭರಣಗಳನ್ನೂ; ಉಡುಪುಗಳನ್ನೂ ಬಹುಮಾನವಾಗಿ ಕೊಟ್ಟು ಮರ್ಯಾದೆ ಮಾಡಿದನು. 
ಇವರ ಪ್ರಯಾಣದ ಸಲುವಾಗಿ ಎಲ್ಲಾ ಸೌಕರ್ಯಗಳನ್ನೂ ಒದಗಿಸಿ ಕೊಡುವಂತೆ ರಾಜ ಶಾಸನವನ್ನು ಹೊರಡಿಸಿದನು. 
ಅಕ್ಬರ್ ಚಕ್ರವರ್ತಿಯಿಂದ ಸನ್ಮಾನಿತರಾದ ಶ್ರೀ ನಾರಾಯಣಾಚಾರ್ಯರು ನೇರವಾಗಿ ತಮ್ಮ ಬಂಧುಗಳಾದ ಶ್ರೀ ವಿಜಯೀಂದ್ರತೀರ್ಥರಲ್ಲಿ ಬಂದು  ದ್ವೈತ ವೇದಾಂತ ಮತ್ತು ಉದ್ಗ್ರಂಥಗಳನ್ನು ಅಧ್ಯಯನ ಮಾಡಬೇಕೆಂಬ ಉತ್ಸಾಹದಿಂದ ಕುಂಭಕೋಣೆಗೆ ಬಂದು ಶ್ರೀ ಶ್ರೀಗಳವರ ಅಡಿದಾವರೆಗಳಲ್ಲಿ ತಮ್ಮ ಶಿರವನ್ನಿಟ್ಟು ಉದ್ಧರಿಸಬೇಕೆಂದು ಪ್ರಾರ್ಥಿಸಿಕೊಂಡರು.
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
*****

ಶ್ರೀಮದ್ರಾಘವೇಂದ್ರ ಗುರುಸಾರ್ವಭೌಮರಂತಹಾ ಮಹಾನ್ ವಜ್ರವನ್ನು ಸಜ್ಜನ ವರ್ಗಕ್ಕೆ ನೀಡಿದವರಾದ ಶ್ರೀಮತ್ಸುಧೀಂದ್ರತೀರ್ಥ ಗುರುಸಾರ್ವಭೌಮರ ಮಧ್ಯಾರಾಧನೆಯ ಶುಭವಂದನೆಗಳು.

ಅವರ ಕುರಿತು ಆತ್ಮೀಯರ ಲೇಖನ

👇🏽👇🏽👇🏽👇🏽👇🏽👇🏽👇🏽 

ನಮ್ಮ ಪರಂಪರೆಯಲ್ಲಿ  ಗುರುವಿನ ಸ್ಥಾನದಷ್ಟೇ ಶಿಷ್ಯ‌ರಸ್ಥಾನವೂ ಅತ್ಯಂತ ಮುಖ್ಯವಾದದ್ದು. ಯೋಗ್ಯ ಗುರುಗಳ ಸೇವೆಯಿಂದ ಆ ಗುರುಗಳಿಂದ ಪಡೆದ ವಿದ್ಯೆಯನ್ನು ಯೋಗ್ಯ ಶಿಷ್ಯರನ್ನು ಹುಡುಕಿ  ಅವರಿಗೆ ಧಾರೆ ಎರೆದು ಜ್ಞಾನಪರಂಪರೆಯನ್ನು ಮುಂದುವರೆಸಿಕೊಳ್ಳುವಂತೆ ಮಾಡುವುದು ಪ್ರತಿಯೊಬ್ಬ ಗುರುಗಳ ಮುಖ್ಯ ಕರ್ತವ್ಯ. 
ಯೋಗ್ಯ ಗುರುಗಳಿಗೆ ಯೋಗ್ಯ ಶಿಷ್ಯರು ಸಿಗುವುದು ಅತ್ಯಂತ ದುರ್ಲಭ. ನಮ್ಮ ಪರಂಪರೆಯಲ್ಲಿ ಪ್ರತಿಯೊಬ್ಬರು ಅವರವರ ಯೋಗ್ಯತೆಗೆ ತಕ್ಕಂತೆ ಗುರು ಶಿಷ್ಯರನ್ನು ಹೊಂದಿದ್ದರೂ, ಈದಿನದ ಆರಾಧನಾ ನಾಯಕರಾದ ನಮ್ಮ ಶ್ರೀಸುಧೀಂದ್ರತೀರ್ಥ ಶ್ರೀಪಾದಂಗಳವರಿಗೆ ಸಿಕ್ಕ ವಿಶೇಷ  ಭಾಗ್ಯ ಮತ್ಯಾರಿಗೂ ಸಿಗಲಿಲ್ಲ‌. 64 ವಿದ್ಯೆಗಳನ್ನು ಸಿದ್ಧಿಯ ರೂಪದಲ್ಲಿ ಶ್ರೀವ್ಯಾಸರಾಜರಿಂದ ಪಡೆದುದಲ್ಲದೇ 63 ವಿದ್ಯೆಗಳನ್ನೂ  ಪ್ರಕಟತ್ವ ಪಡಿಸಿ, ಜೊತೆಗೆ ಎಲ್ಲ ವಿದ್ಯೆಗಳಲ್ಲೂ, ಆಯಾ ವಿದ್ಯೆಗಳಲ್ಲಿ ಆ ಕಾಲದ ಅತ್ಯಂತ  ಪ್ರಸಿದ್ಧರಾದ ಪಂಡಿತರೊಂದಿಗೆ ವಿಜಯೋತ್ಸವ ಪಡೆದು ಸಕಲವನ್ನೂ ತಮ್ಮ ಪರಂಪರೆಯ ಗುರುಗಳ ಮೂಲಕ ತಮ್ಮ ಉಪಾಸ್ಯಮೂರ್ತಿ ಶ್ರೀ ಮನ್ಮೂಲರಾಮಚಂದ್ರ ದೇವರ ಪಾದಗಳಲ್ಲಿ ಅರ್ಪಿಸಿದರು. ಈ ರೀತಿಯ ವಿದ್ಯೆಗಳ ಪ್ರಕಟತ್ವ ಮತ್ತೇ ನಮ್ಮ ಪರಂಪರೆಯಲ್ಲಿ ಯಾವ ಯತಿಗಳಿಂದಲೂ ಆಗಲಿಲ್ಲ, ಶ್ರೀವಿಜಯೀಂದ್ರ ತೀರ್ಥರಿಂದ ಮಾತ್ರ ಸಾಧ್ಯವಾಯಿತು‌. ಇಂತಹ ಗುರುಗಳನ್ನು ಪಡೆದ ಶ್ರೀ ಸುಧೀಂದ್ರತೀರ್ಥರ ಭಾಗ್ಯವು ಇಷ್ಟಕ್ಕೇ ಮುಂದುವರೆಯದೇ ಕಲಿಯುಗ ಕಲ್ಪವೃಕ್ಷ ಕಾಮಧೇನುಗಳಾದ, ಇಂದಿಗೂ ಬೃಂದಾವನದಲ್ಲಿ ವಿರಾಜಮಾನರಾಗಿ ಜಾತಿ, ಮತ ಕುಲಗಳನ್ನೂ ಲೆಕ್ಕಿಸದೇ ಪ್ರತಿಯೊಬ್ಬ ಭಕ್ತರನ್ನು ಅನುಗ್ರಹಿಸುತ್ತಿರುವ, ನಮ್ಮ ಪರಂಪರೆಯಲ್ಲಿ ಇಬ್ಬರೇ ಇಬ್ಬರು ಸಶರೀರ ಬೃಂದಾವನ ಪ್ರವೇಶ ಮಾಡಿದವರಲ್ಲಿ ಎರಡನೆಯವರಾದ, ವಾಯುನಾಚ ಸಮಾವಿಷ್ಟರಾದ, ಪ್ರಹ್ಲಾದ ರಾಜರ  ಅವತಾರಿಗಳಾದ   ಯಾರನ್ನು ನಂಬಿದರೆ ಮಾತ್ರ ಸಜ್ಜನರಿಗೆ ಜ್ಞಾನ ಲಭಿಸಿ, ಭಗವಂತನ ವಿಶೇಷ ಅನುಗ್ರಹದ ಜೊತೆಗೆ( ತ್ವಾಂಚಮಾಂಚ ಸ್ಮರನ್ ನಿತ್ಯಂ ಕರ್ಮ ಬಂಧಾತ್ ವಿಮುಚ್ಯತೇ)  ಮತ್ತು ಭವಬಂಧನ ಬಿಡುಗಡೆಯಾಗಿ ಮೋಕ್ಷ ಸಿಗುತ್ತದೆಯೋ ಅಂತಹ ಶ್ರೀರಾಘವೇಂದ್ರತೀರ್ಥರನ್ನು ಶಿಷ್ಯರನ್ನಾಗಿ ಪಡೆದ ಶ್ರೀಸುಧೀಂದ್ರ ತೀರ್ಥರ ಸ್ಥಾನಮಾನ ಯಾರು ತಾನೇ ಪೂರ್ತಿಯಾಗಿ ಹೇಳಲು ಸಾಧ್ಯ!
ಅಂತೂ ನಮ್ಮ ರಾಯರನ್ನು ಸುಧೀಂದ್ರ ವರಪುತ್ರಕಃ ಅಂತ ಸ್ಮರಿಸಿದರೆ ಅವರು ಪ್ರಸನ್ನರಾಗುತ್ತಾರೆ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅಂತಹ ಭಾಗ್ಯ ಪಡೆದ ಶ್ರೀಸುಧೀಂದ್ರ ತೀರ್ಥರು ಸದ್ಯುಕ್ತಿ ರತ್ನಾಕರ (ತರ್ಕತಾಂಡವ ವ್ಯಾಖ್ಯಾನ),ಭಾಗವತ ಏಕಾದಶ ಮತ್ತು ದ್ವಿತೀಯ ಸ್ಕಂದಕ್ಕೆ ವ್ಯಾಖ್ಯಾನ,ಅಲಂಕಾರ ಮಂಜರಿ, ಅಲಂಕಾರ ನಿಕಷ,ಸಾಹಿತ್ಯ ಸಾಮ್ರಾಜ್ಯಮ್,ಸುಭದ್ರಾ ಪರಿಣಯಃ(ನಾಟಕ),ಆಪಸ್ತಂಬ ಶುಲ್ಪಸೂತ್ರ ಪ್ರದೀಪಃ,ವೈರಾಗ್ಯತರಂಗಃ(ಕಾವ್ಯ),ದಯಾಲು ಶತಕಮ್,ಅಮೃತಹರಣ(ನಾಟಕ),ಶ್ರೀವ್ಯಾಸರಾಜಾಭ್ಯುದಯ(ಕಾವ್ಯ),ಭಾವರತ್ನಮಂಡನ,ಓಂಕಾರ ವಾದಃ,ಬ್ರಹ್ಮಸೂತ್ರನ್ಯಾಯಸಂಗ್ರಹ,ಸನಾಸಶಕ್ತಿ ನಿರ್ಣಯಃ, ಪ್ರಣವದರ್ಪಣ ಖಂಡನಮ್, ಶ್ರೀವಿಜಯೀಂದ್ರ ಯಶೋಭೂಷಣಮ್ ಎನ್ನುವ    ಗ್ರಂಥಗಳನ್ನು ರಚಿಸಿದ್ದಾರೆ.
ಗ್ವಾಲಿಯರ್ ಸಂಸ್ಥಾನದ ಹತ್ತಾರು ಜನ ಪಂಡಿತರು ಶ್ರೀಗಳವರ ಜೊತೆ ವಾಗ್ವಾದಕ್ಕೆ ಬಂದಾಗ ಅವರನ್ನೆಲ್ಲಾ ಸೋಲಿಸಿ‌ ವಿಜಯ ಹೊಂದಿದಾಗ, ಇವರ ಜ್ಞಾನ  ಪ್ರಭಾವಕ್ಕೊಳಗಾದ ಗ್ವಾಲಿಯರ್ ದೊರೆ ಇವರನ್ನು ಗೌರವಿಸಿ ರಾಜಗುರುಗಳನ್ನಾಗಿ ಸ್ವೀಕರಿಸಿ, ಸುವರ್ಣ ಸಿಂಹಾಸನ, ಶ್ವೇತಛತ್ರ,ಚಾಮರಾದಿ ರಾಜಚಿಹ್ನೆಗಳನ್ನು ಕೊಟ್ಟು, ದ್ವಿಗ್ವಿಜಯ ಸಿಂಹಾಸನಾದೀಶ್ವರ ಅಂತ ಬಿರುದನ್ನಿತ್ತ.
ಜೊತೆಗೆ ಮೈಸೂರಿನ, ಕಾರ್ಕಳದ, ಮಧುರೆಯ, ಕೊಚ್ಚಿಯ ಹೀಗೆ ಅನೇಕ ರಾಜರುಗಳು ಶ್ರೀಸುಧೀಂದ್ರತೀರ್ಥರನ್ನು ಗೌರವಿಸಿ ಸನ್ಮಾನಿಸಿದ್ದಾರೆ. 
ವಿಜಾಪುರದಲ್ಲಿ ಭೀಕರ ಬರಗಾಲ ಬಂದಾಗ ಆಗಿನ ಸುಲ್ತಾನನು ಶ್ರೀಗಳವರನ್ನು ತಮ್ಮ ಆಸ್ಥಾನಕ್ಕೆ ಸ್ವಾಗತಿಸಿ ಸನ್ಮಾನಿಸಿ, ಪ್ರಾರ್ಥಿಸಲು, ಅಲ್ಲಿ ಶ್ರೀಸುಧೀಂದ್ರ ತೀರ್ಥರು ಏಳು ದಿನಗಳ ಕಾಲ ವಿಶೇಷ ಜಪ ತಪಗಳು, ಶ್ರೀಮನ್ಮೂಲ, ದಿಗ್ವಿಜಯ, ಜಯರಾಮಾದಿ ಪ್ರತಿಮಗೆಳ ಪೂಜೆ, ಜೊತೆಗೆ ತಮ್ಮ ಶಿಷ್ಯರಿಂದ  ಹೋಮ ಹವನ ಪಾರಾಯಣಾದಿಗಳನ್ನು ನೆರವೇರಿಸಿ, ಪ್ರಾರ್ಥಿಸಲು ಏಳುದಿನಗಳ ಪರ್ಯಂತ ಅಖಂಡವೃಷ್ಟಿಯಾಗಿ ಕ್ಷಾಮವು ಪರಿಹಾರವಾಯಿತು. 
ಮಂತ್ರಾಲಯ ಪ್ರಭುಗಳಿಗೂ ಮುಂಚೆ ಮತ್ತೊಬ್ಬ ಜ್ಞಾನಿಗಳಾದವರಿಗೆ ಸನ್ಯಾಸ ಆಶ್ರಮವಿತ್ತು ಶ್ರೀಯಾದವೇಂದ್ರ ತೀರ್ಥರೆಂದು ನಾಮಕರಣ ಮಾಡಿ, ಅವರಿಗೆ ವಿಶೇಷವಾಗಿ ಅನುಗ್ರಹಿಸಿದರು.
ಈ ವಿಷಯವನ್ನೇ ಇಟ್ಟುಕೊಂಡು ಜ್ಞಾನಿಗಳಾದ ಶ್ರೀಪ್ರಾಣೇಶದಾಸರು ವೀಂದ್ರವಾಹನ ಯಾದವೇಂದ್ರಾಂಘ್ರಿ ಭಜಿಸುವ/ಸಾಂದ್ರ ಭಕ್ತಿಯಲಿ ಸುಧೀಂದ್ರಾಖ್ಯ ಮುನಿಪ// ಅಂತ ಸ್ತುತಿಸಿದ್ದಾರೆ. 

ಶ್ರೀವಾದಿರಾಜರ ಒಡನಾಟಿಗಳಾಗಿದ್ದ ಶ್ರೀಸುಧೀಂದ್ರ ತೀರ್ಥರು ಅವರ ಬಗ್ಗೆ ಒಂದು ಸೊಗಸಾದ ಸ್ವಾರಸ್ಯಕರವಾದ ಶ್ಲೋಕ ರಚಿಸಿದ್ದಾರೆ. ಈ ಶ್ಲೋಕದ ರಚನೆಯನ್ನು ನೋಡಿದರೆ ಶ್ರೀಸುಧೀಂದ್ರ ತೀರ್ಥರ ಜ್ಞಾನದ, ಪಾಂಡಿತ್ಯದ ಆಳ ಎಷ್ಟಿರಬಹುದೆಂದು ತಿಳಿಯುತ್ತದೆ. 

ಕಾ ವಾsರ್ಧಾಂಗಂ ಪುರಾರೇಃ?/ ಕಿಟಿವರವಿಲಸದ್ದಂಷ್ಟ್ರಯಾsಧಾರಿ ಕಾ ವಾ/ಕೋ ವಾ ಶೇತೇsಂ ಬುರಾಶೌ ಯುಧಿ ಧರಣಿಧವೈಃ ಪ್ರಾಪ್ಯತೇ ಕೋ ನು ಶೂರೈಃ/ಕೋ ವಾ ನೈವಾಸ್ತಿ ಲಕ್ಷ್ಮೀದಿತಿಜಮಥನಯೋಃ ಕೋ ಗುರುರ್ನಿರಜರಾಣಾಂ/ಕೋ  ವಾ  ವಾಚ್ಯೋ ಧರಿತ್ರ್ಯಾಂ ಪ್ರತಿವಚನಗತೈಃ ಮಧ್ಯವರ್ಣೈಮುನೀಂದ್ರಃ//

ತ್ರಿಪುರವೈರಿಯಾದ ಈಶ್ವರನ ಅರ್ಧಾಂಗಿ ಯಾರು? (ಭವಾನಿ)

ವರಾಹರೂಪಿ ಹರಿಯಿಂದ ಕೋರೆದಾಡಿಗಳಲ್ಲಿ ಧರಸಲ್ಪಟ್ಟವಳು ಯಾರು? (ಮೇದಿನಿ)
ಸಮುದ್ರದಲ್ಲಿ ಮಲಗಿರುವವನು ಯಾರು? ( ಮುರಾರಿ)
ಶೂರರಾದ ರಾಜರು ಯುದ್ಧದಲ್ಲಿ ಏನನ್ನು ಗಳಿಸುತ್ತಾರೆ (ವಿಜಯ)
ಲಕ್ಷ್ಮೀನಾರಾಯಣರಿಗೆ ಪರಸ್ಪರ ಏನಿಲ್ಲ? ( ವಿಯೋಗ)
ದೇವತೆಗಳ ಗುರುಯಾರು ( ವಾಗೀಶ)
ಈ ಉತ್ತರಗಳ ಮಧ್ಯಮ ವರ್ಣಗಳನ್ನು ಕ್ರಮವಾಗಿ ಸೇರಿಸಿದಾಗ ಅದರಿಂದ ವಾಚ್ಯರಾಗುವ ಭೂಮಿಯ ಮೇಲಿನ ಮುನಿಶ್ರೇಷ್ಠರು ಯಾರು? ( ವಾದಿರಾಜಯೋಗಿ)

ಕ್ರಿ.ಶ. 1623ನೇ ರುಧಿರೋದ್ಗಾರಿ ಸಂವತ್ಸರ ಫಾಲ್ಗುಣ ಬಹುಳ ಬಿದಿಗೆ, ಶ್ರೀವಾದಿರಾಜ ಗುರುಸಾರ್ವಭೌಮರ ಪೂರ್ವಾರಾಧನೆಯಂದು ಹರಿ ವಾಯು ಗುರುಗಳನ್ನು ಧ್ಯಾನಿಸುತ್ತಾ ತಮ್ಮ ಭೌತಿಕ ದೇಹವನ್ನು ತ್ಯಜಿಸಿದರು‌. ಇವರ ವೃಂದಾವನ  ನವವೃಂದಾವನದಲ್ಲಿದೆ. ಕುಶಾಗ್ರಮತಯೇ ಭಾನುದ್ಯುತಯೇ ವಾದಿಭೀತಯೇ/ಆರಾಧಿತ ಶ್ರೀಪತಯೇ ಸುಧೀಂದ್ರ ಯತಯೇ ನಮಃ//

****


3 comments:

  1. where the books written by Sudheenra Tirtha will be available ? If any have address pl post .

    ReplyDelete
    Replies
    1. I don't have any details. Kindly contact Mantralayam office of rayara mutt.

      Delete
  2. where the books written by Sudheenra Tirtha will be available ? If any have address pl post .

    ReplyDelete