Wednesday 1 May 2019

sugunendra teertharu chittoor 1884 matha rayara mutt yati 31 margashira pournima ಸುಗುಣೇಂದ್ರ ತೀರ್ಥರು




info from FB madhwanet--->


Shri gurubyo namaha...
mArgashira shukla huNNime, is the ArAdhanE of shri sugunEndra tIrtharu of rAyara maTa.
shri sugunEndra tIrtharu
Sloka: 
Sanskrit :
सुधार्मॆंद्रकराब्जॊत्थं सुविद्वन्मणिराजितम् ।
सुमृष्टन्नप्रदातारं सुगुणॆंद्र गुरुं भजॆ ॥
Kannada :
ಸುಧರ್ಮೇಂದ್ರ ಕರಾಬ್ಜೋತ್ಥಂ ಸುವಿದ್ವನ್ಮಣಿರಾಜಿತಮ್ |
ಸುಮೃಷ್ಟನ್ನಪ್ರದಾತಾರಂ ಸುಗುಣೇಂದ್ರಗುರುಂ ಭಜೇ ||
Period: 1872 - 1884
parampare: shri rAyara maTa, #30
vidyA gurugaLu; shri subhOdEndra tIrtharu, shri sujanEndra tIrtharu, shri sujnAnEndra tIrtharu, shri sudharmEndra tIrtharu
Ashrama gurugaLu: shri sudharmEndra tIrtharu
Ashrama shishyaru: shri suprajnEndra tIrtharu
pUrvAshrama name: venkatramaNachArya
Aradhana: mArgashira shuddha huNNime
brindAvana: Chittoor, AP

He was the pUrvAshrama younger son of shri sujnAnEndra tIrtharu, the 28th pontiff in the parampare. He was a great scholar.
During his period a gruesome famine ‘Dhatu-Eshwara’ broke out in Mysore region and affected people in the area including Nanjangud. The people were very distressed. The swamiji provided the people of Nanjangud with food for a full year from the coffers of the maTa and rescued them. And due to his tapas Shakti, there was copious rainfall later and everyone was delighted.
When it was time to depart from this world, he anointed the son of his pUrvAshrama elder brother, rAjagOpAlAchArya, as his successor and named him suprajnEndra tIrtharu.
shri sugunEndra tIrtha guruvatargata, shri rAghavEndra tIrtha guruvantargata, shri maharudradEva guruvantargata, bhArati ramaNa mukhyaprANAntargata sItApatE shri mUla rAma dEvara pAdAravindakke gOvinda, gOvinda...
shri krishNArpaNamastu....
...Compiled from various sources on the Internet. Thanks to all the people who have posted these on the Internet...

*******

info from sumadhwaseva.com--->


Sri Sugunendra Theertha


sudharmEMdrakaraabjOtthaM suvidvanmaNiraajitam |

sumRuShTaannapradaataaraM suguNEMdraguruM bhajE |


Greamspet is on chittoor chennai road . Get down at Greamspet main road bus stop and take a turn.

At the end of the road is the spacious mutt.



********

ಶ್ರೀಂ ಶ್ರೀ ಕಂ ಕಪಿಲಾಯ ನಮಃ

ದತ್ತ ದತ್ತೆಂದು ತಾ ಆರ್ತ ಮಹಿಪತಿಯು/ 
ಬೆರ್ತ ನೋಡಿದ ಮನವು ಸುಮೂರ್ತಿಯು/ 
ಮರ್ತದೊಳಿದುವೆ ಸುಖ ವಿಶ್ರಾಂತಿಯು /
ಮರ್ತುಹೋಗುವದು ಮಾಯದ ಭ್ರಾಂತಿಯು// -

 ಶ್ರೀ ಮಹಿಪತಿರಾಯರು...

ದತ್ತ ಪ್ರಧಾನ ವಿದ್ಯಾ ಸಪ್ರದಾತಾ ಪಾರ -/
ತಂತ್ರರಹಿತ ವಿಜಯವಿಟ್ಠಲ ಪ್ರಜ್ಞಾ//  -   ಶ್ರೀ ವಿಜಯಪ್ರಭುಗಳು...

ಸಜ್ಜನರಿಗೆ ಜ್ಞಾನಪ್ರದಾನ ಮಾಡಲು
ಅತ್ರಿ ಅನಸೂಯೆರಿಗೆ ಮಗನಾಗಿ ಹುಟ್ಟಿಬಂದು  ಶ್ರೀ ದತ್ತನಾಮಕ ಪರಮಾತ್ಮನ ಅವತಾರದದಿನವಿಂದು. ಪರಮಾತ್ಮ ನಮ್ಮ ಅಜ್ಞಾನವನ್ನು ಕಳೆದು ಜ್ಞಾನವನ್ನು ನೀಡಿ ಸಲಹಲಿ... 

ದತ್ತ ಜಯಂತಿಯ ಶುಭವಂದನೆಗಳು 

ಹಾಗೆಯೇ 
 
ಸುಧರ್ಮೇಂದ್ರ ಕರಾಬ್ಜೋತ್ಥಂ ಸುವಿದ್ವನ್ಮಣಿರಾಜಿತಂ/ ಸುಮೃಷ್ಟಾನ್ನಪ್ರದಾತಾರಂ ಸುಗುಣೇಂದ್ರ ಗುರುಮ್ ಭಜೇ//

ಶ್ರೀ ಸುಭೋದೇಂದ್ರತೀರ್ಥರು, ಶ್ರೀ ಸುಜನೇಂದ್ರರು, ಶ್ರೀ ಸುಜ್ಞಾನೇಂದ್ರರು, ಶ್ರೀ ಸುಧರ್ಮೇಂದ್ರರೇ ಮೊದಲಾದ ಉತ್ತಮ ವಿದ್ಯಾಗುರುಗಳನ್ನು ಪಡೆದವರಾದ, ಶ್ರೀ ಸುಧರ್ಮೇಂದ್ರತೀರ್ಥರಿಂದ ಸಂನ್ಯಾಸಾಶ್ರಮವನ್ನು ಸ್ವೀಕಾರ ಮಾಡಿದವರಾದ ಶ್ರೀ  ಸುಗುಣೇಂದ್ರತೀರ್ಥ ಗುರುಸಾರ್ವಭೌಮರ ಆರಾಧನೆ ಇಂದಿನಿಂದ ಮೂರು ದಿನ ಚಿತ್ತೂರು, ಆಂಧ್ರಪ್ರದೇಶದಲ್ಲಿ... ಇಲ್ಲಿಯೇ ಶ್ರೀ ಸಂಕರ್ಷಣ ಒಡೆಯರು ಶ್ರೀಮದ್ಹರಿಕಥಾಮೃತಸಾರದ ಚರ್ಚೆ ನಡೆಸಿದರೆಂದು ಪ್ರತೀತಿ..

ಇವರು ಒಮ್ಮೆ ಆಂಧ್ರಪ್ರದೇಶದಲ್ಲಿ ಒಂದು ವರ್ಷದಿನ ಮಳೆ ಬಾರದಿದ್ದಾಗ , ಶ್ರೀ ರಾಯರ ಅಂತರ್ಗತ ಪರಮಾತ್ಮನ ಕುರಿತು ತಪಸ್ಸು ಮಾಡಿದವರಾಗಿದ್ದಾರೆ. ಆ ಕ್ಷಾಮದ ದಿನಗಳಲ್ಲಿ ಮಠದ ಸಂಪತ್ತನ್ನು ವೆಚ್ಚಿಸಿ ಜನರಿಗೆ ಬಹಳ ವರ್ಷಗಲ ಕಾಲ ಊಟವನ್ನು ಹಾಕಿದವರಾಗಿದ್ದಾರೆ. ಇದೇ ವಿಶೇಷ ಅವರ ಚರಮಶ್ಲೋಕವನ್ನು ನೋಡಿದರೆ ಅರಿವಾಗುತ್ತದೆ.... 

ಜೊತೆಗೆ ಶ್ರೀ ಕುರುಡಿ ರಾಘವೇಂದ್ರಾಚಾರ್ಯರ ಕೃತಿಯೊಂದರಲ್ಲಿ ಶ್ರೀಗಳವರ ಇಡೀ ಚರಿತ್ರೆಯ ಸ್ಮರೆಣೆಯೂ ಇದೆ. ಅದರ ಪಲ್ಲವಿ 👇🏽👇🏽

ಶ್ರೀ ಗುರು ಸುಗುಣೇಂದ್ರತೀರ್ಥರ ಪದಕಮಲ|ಬಾಗಿ ನಮಿಸುವೆ ಸತತ ಸದ್ಗುಣವೆ ಕರುಣಿಸಲಿ| ರಾಗ ಸಜ್ಜನದಿತ್ತು ತ್ಯಾಗಾದಿಗಳ ತಿಳಿಸಿ ವೇಗದಲಿ ಜನ್ಮಾದಿ ರೋಗಾದಿಗಳ ಓಡಿಸಲಿ -

ಶ್ರೀ ಲಕುಮೀಶರು  (ಶ್ರೀ  ಕುರುಡಿ ರಾಘವೇಂದ್ರಾಚಾರ್ಯರು)

ಶ್ರೀ ಸುಗುಣೇಂದ್ರ ತೀರ್ಥರ ಆರಾಧನೆಯ ಶುಭಸ್ಮರಣೆಗಳು

ಹಾಗೆಯೇ...

ಶ್ರೀಮತ್ಕೃಷ್ಣಪದಾಂಬೋಜಮಾನಸಂ ಕವಿಪುಂಗವಂ/
ಶ್ರೀಮದ್ವಿದ್ಯಾಪ್ರಸನ್ನಾಬ್ದಿಂ ಗುರುಂ ವಂದೇ ನಿರಂತರಂ//

ಶ್ರೀಮದ್ವ್ಯಾಸರಾಜ ಮಠದ ಪರಮ ಶ್ರೇಷ್ಠ ಯತಿಗಳೂ, ದಾಸ ಸಾಹಿತ್ಯಕ್ಕೆ ಬೆಲೆಕಟ್ಟಲಾರದ ಸೇವೆಯನ್ನು ಸಲ್ಲಿಸಿದವರೂ, ಅರ್ಚನೆಯಿಂದ,ಕೀರ್ತನೆಗಳಿಂದ ಪರಮಾತ್ಮನ ಒಲಿಸಿಕೊಳ್ಳಬಹುದು ಎನ್ನುವುದನ್ನು ಮತ್ತೆ ಮತ್ತೆ  ಕೃತಿ ರಚನೆಯ ಮೂಲಕ ನಮಗೆ ತಿಳಿಸಿ ಹೇಳಿದ, ಮೂಲಗೋಪಾಲಕೃಷ್ಣನ ಪ್ರೇಮದ ಪುತ್ರರಾದ, ಶ್ರೀಮದ್ ವಿದ್ಯಾರತ್ನಾಕರತೀರ್ಥರ ಪೂರ್ವಾಶ್ರಮದ ಪುತ್ರರೂ, ಶ್ರೀಮದ್ ವಿದ್ಯಾವಾರಿಧಿತೀರ್ಥರ ಕರಕಮಲಸಂಜಾತರಾದ,
ಶ್ರೀಮದ್ ವಿದ್ಯಾಪ್ರಸನ್ನತೀರ್ಥ ಗುರುಸಾರ್ವಭೌಮರ ಆರಾಧನೆ ಇಂದಿನಿಂದ ಮೂರು ದಿನ ,(ಸೋಸಲೆ, ತಿರುಮಕೂಡಲು ನರಸೀಪುರದಲ್ಲಿ) ... ದಾಸರ ಪದ ಹಾಡುವ ಪ್ರತಿಯೊಬ್ಬರೂ ಶ್ರೀಗಳ ಕೃತಿ ಹಾಡುವುದುಂಟು   ಅಂದರೇ ಅತಿಶಯೋಕ್ತಿಯಲ್ಲ.. ಅಂತಹಾ ಮಹಾನ್ ಯತಿಗಳು ನಡೆದ ಹಾದಿಯಲ್ಲಿ ನಡೆದು... ದಾಸ ಸಾಹಿತ್ಯದ ಸೇವೆಯಲ್ಲಿ ತಲ್ಲೀನರಾಗಿ, ತನ್ಮೂಲಕ ಹರಿವಾಯುಗುರುಗಳ ಸೇವೆಗೆ ಜೀವನವನ್ನು ಅರ್ಪಿಸೋಣ....

ಶ್ರೀ ಮಹಾನ್ ಯತಿಗಳ ಅನುಗ್ರಹ ನಮ್ಮ ಸಮೂಹದ ಸಜ್ಜನವರ್ಗದ ಮೇಲೆ  ಸದಾಕಾಲದಲ್ಲಿರಲೆಂದು ಅವರ ಪದಪದ್ಮಗಳಲ್ಲಿ ಭಕ್ತಿಯಿಂದ  ಬೇಡಿಕೊಳ್ಳುತ್ತಾ......

ಇವತ್ತಿನಿಂದ ಮೂರು ದಿನ ಪ್ರತ್ಯೇಕವಾಗಿ ಶ್ರೀ ವಿದ್ಯಾಪ್ರಸನ್ನತೀರ್ಥರ ಕೃತಿಗಳ ಸೇವೆ ನಮ್ಮಿಂದ ಆಗುವಂತಾಗಲಿ ಎಂದು ಅವರಲ್ಲಿ ಪ್ರಾರ್ಥನೆ ಮಾಡುತ್ತಾ......

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
***


" ದಿನಾಂಕ : 30.12.2020 ಬುಧವಾರ ಶ್ರೀ ಸುಗುಣೇಂದ್ರತೀರ್ಥರ ಆರಾಧನಾ ಮಹೋತ್ಸವ - ಚಿತ್ತೂರು "
ಶ್ರೀ ಸುಪ್ರಜ್ಞೇ೦ದ್ರತೀರ್ಥರು.... 
ಸುಧರ್ಮೇಂದ್ರ ಕರಾಬ್ಜೋತ್ಥ೦ 
ಸುವಿದ್ವನ್ಮಣಿರಾಜಿತಂ ।
 ಸುಮೃಷ್ಟಾನ್ನಪ್ರದಾತಾರಂ 
ಸುಗುಣೇಂದ್ರ ಗುರು೦ಭಜೇ ।।
ಶ್ರೀ ಸುಗುಣೇಂದ್ರತೀರ್ಥ ಮುನಿಪುಂಗವರು ದಯಾಶೀಲರಾದ ಮಹಾನುಭಾವರು. 
ಶ್ರೀ ಸುಗುಣೇಂದ್ರತೀರ್ಥರು ಶ್ರೀ ಸರ್ವಜ್ಞಾಚಾರ್ಯರ ವೇದಾಂತ ವಿದ್ಯಾ ಸಂಹಾಸನಾಧೀಶ್ವರರೂ; ಶ್ರೀಕಾಂತಿ ಸಂಪದ್ಭರಿತರೂ; ವಿದ್ಯಾ ಮತ್ತು ಮೃಷ್ಟಾನ್ನ ದಾನ ಮಾಡುವದರಲ್ಲಿ ಖ್ಯಾತರಾದವರೂ; ಶ್ರೀ ಗುರುಸಾರ್ವಭೌಮರು ವಿರಾಜಿಸಿದ ಮಹಾ ಪೀಠದಲ್ಲಿ ವಿರಾಜಿಸಿ " ಉಭಯ ವಂಶಾಬ್ಧಿ ಸುಧಾಕರ " ರೆಂದು ಖ್ಯಾತರಾಗಿ; ಉಭಯ ವಂಶ ವಿಭೂಷಿತರಾಗಿ ಜಗನ್ಮಾನ್ಯರಾದರು. 
ಶಾಸ್ತ್ರ ಪಾರಂಗತರಾದ ಶ್ರೀ ಸುಗುಣೇಂದ್ರತೀರ್ಥರು ಅನೇಕ ಶಿಷ್ಯರಿಗೆ ಪಾಠ ಹೇಳಿ ದ್ವೈತ ಸಿದ್ಧಾಂತ ಜ್ಞಾನವನ್ನೂ; ಸರ್ವರಿಗೂ ಮೃಷ್ಟಾನ್ನವನ್ನೂ ಕರುಣಿಸಿದ ಕರುಣಾಮೂರ್ತಿಗಳು ಶ್ರೀ ಸುಗುಣೇಂದ್ರತೀರ್ಥರು. 
ಉಭಯ ವಂಶಾಬ್ಧಿ ಸುಧಾರಕರೂ; ಶ್ರೀ ದುರ್ವಾಸ ಮುನಿಗಳ ಅಂಶ ಸಂಭೂತರೂ ಆದ ಶ್ರೀ ಸುಧರ್ಮೇಂದ್ರತೀರ್ಥರ ವರ ಪುತ್ರಕರಾದ ಶ್ರೀ ಸುಗುಣೇಂದ್ರತೀರ್ಥರ ಆರಾಧನಾ ಶುಭ ಸಂದರ್ಭದಲ್ಲಿ ಅವರ ಕಿರು ಪರಿಚಯದ ಪ್ರಯತ್ನ ಇಲ್ಲಿದೆ. 
ವಿಶೇಷ ವಿಚಾರ : - 
" ಉಭಯ ವಂಶಾಬ್ಧಿ " ಯೆಂದರೆ....
 " ವಿದ್ಯಾ ಮತ್ತು ದೇಹ ಸಂಬಂಧಿ " ಎಂದರ್ಥ. 
ಅಂದರೆ, 
ಶ್ರೀ ಸುಗುಣೇಂದ್ರತೀರ್ಥರು ದ್ವೈತ ವಿದ್ಯಾ ವಿಶಾರದರು. 
ಆದ್ದರಿಂದ ಶ್ರೀ ರಾಯರಿಗೆ " ವಿದ್ಯಾ ಸಂಬಂಧಿ " ಗಳು ಮತ್ತು " ಶ್ರೀ ರಾಯರ ವೇದಾಂತ ವಿದ್ಯಾ ಸಾಮ್ರಾಜ್ಯಾಧಿಪತಿಗಳು ಆದ್ದರಿಂದ ಶ್ರೀ ರಾಯರಿಗೆ ದೇಹ ಸಂಬಂಧಿಗಳಾಗಿದ್ದರೆ. 
ಉಭಯ ವಂಶ = ವಿದ್ಯಾ ವಂಶ ಮತ್ತು ಪರಮ ಹಂಸಾಶ್ರಮ ವಂಶ ಎಂದು ಅರ್ಥವೇ ಹೊರತು....
" ಉಭಯ ವಂಶ " ಎಂದರೆ..... 
ಅವರ ಪೂರ್ವಾಶ್ರಮ ವಂಶ ಎಂದು ಅರ್ಥ ಮಾಡಕೂಡದು. [ ಸಂನ್ಯಾಸಾಶ್ರಮ ಪೂರ್ವದಲ್ಲಿ ಮಾಡಿಕೊಳ್ಳುವ ಆತ್ಮ ಶ್ರಾದ್ಧ - ವಿರಜಾ ಹೋಮಾದಿಗಳಿಂದ ಪೂರ್ವಾಶ್ರಮದ ದೇಹ ಸಂಬಂಧ ಹೋಗಿ ಬಿಡುತ್ತದೆ ]
ಹಾಗೇನಾದರೂ ಅರ್ಥ ಮಾಡಿದರೆ " ರೌರವಾದಿ ನರಕ " ತಪ್ಪದು!! 
" ಶ್ರೀ ಸುಗುಣೇಂದ್ರತೀರ್ಥರ ಸಂಕ್ಷಿಪ್ತ ಚರಿತ್ರೆ " 
ಹೆಸರು : 
ಶ್ರೀ ವೆಂಕಟರಾಮಾಚಾರ್ಯರು 
ತಂದೆ : 
ಶ್ರೀ ರಾಘವೇಂದ್ರಾಚಾರ್ಯರು 
ಸಹೋದರ : 
ಶ್ರೀ ರಾಜಾ ರಾಜಗೋಪಾಲಾಚಾರ್ಯರು 
ವಿದ್ಯಾ ಗುರುಗಳು : 
ಶ್ರೀ ಸುಬೋಧೇಂದ್ರರು - ಶ್ರೀ ಸುಜನೇಂದ್ರರು - ಶ್ರೀ ಸುಜ್ಞಾನೇಂದ್ರರು - ಶ್ರೀ ಸುಧರ್ಮೇಂದ್ರರು 
ಶ್ರೀ ವೆಂಕಟರಾಮಾಚಾರ್ಯರು ಸಹೋದರರೊಂದಿಗೆ ಪ್ರಾಥಮಿಕ ವಿದ್ಯೆ , ಉದ್ಗ್ರಂಥಗಳನ್ನೂ; ಪುರಾಣ - ಇತಿಹಾಸಗಳನ್ನೂ; ಶ್ರೀ ಸುಭೋಧೇಂದ್ರ - ಶ್ರೀ ಸುಜನೇಂದ್ರ - ಶ್ರೀ ಸುಧರ್ಮೇಂದ್ರತೀರ್ಥರಲ್ಲಿ ವೇದ - ವೇದಾಂತ ಶಾಸ್ತ್ರಗಳನ್ನು ಅಧ್ಯಯನ ಮಾಡಿ ಪ್ರಕಾಂಡ ಪಂಡಿತರೆಂದು ಪ್ರಖ್ಯಾತಿಯನ್ನು ಪಡೆದರು. 
ಆಶ್ರಮ ಗುರುಗಳು : 
ಶ್ರೀ ಸುಧರ್ಮೇಂದ್ರತೀರ್ಥರು 
ಆಶ್ರಮ ನಾಮ :
ಶ್ರೀ ಸುಗುಣೇಂದ್ರತೀರ್ಥರು 
ಪಂಡಿತೋತ್ತಮರೂ; ವೈರಾಗ್ಯ ನಿಧಿಗಳೂ; ತಪಸ್ವಿಗಳೂ; ಉತ್ತಮ ವಾಗ್ಮಿಗಳೂ ಆದ ಶ್ರೀ ವೆಂಕಟರಾಮಾಚಾರ್ಯರಿಗೆ ಶ್ರೀಮದಾಚಾರ್ಯರ ಮೂಲ ಮಹಾ ಸಂಸ್ಥಾನದ ಸತಸಂಪ್ರದಾಯದಂತೆ ಶ್ರೀ ಸುಧರ್ಮೇಂದ್ರತೀರ್ಥರು ತುರ್ಯಾಶ್ರಮವನ್ನು ನೀಡಿ " ಶ್ರೀ ಸುಗುಣೇಂದ್ರತೀರ್ಥ " ರೆಂದು ನಾಮಕರಣ ಮಾಡಿ ತಮ್ಮ ಅಮೃತಮಯವಾದ ಹಸ್ತಗಳಿಂದ " ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ ಕುಳ್ಳಿರಿಸಿ ಪಟ್ಟಾಭಿಷೇಕ " ಮಾಡಿದರು. 
" ಮಹಿಮೆ " 
ಹಿಂದೊಮ್ಮೆ ಮೈಸೂರು ರಾಜ್ಯದಲ್ಲಿ ಒಂದು ವರ್ಷ ಕಾಲ ಮಳೆ, ಬೆಳೆಗಳಿಲ್ಲದೆ ಪ್ರಜೆಗಳೆಲ್ಲರೂ ದುರ್ಭಿಕ್ಷದ ಭವಣೆಗೊಳಗಾಗಿ ಕಷ್ಟ ಪಡುತ್ತಿದ್ದರು. 
ಈ ದುರ್ಭಿಕ್ಷದ ತಾಪದಿಂದ ನಂಜನಗೂಡಿನಲ್ಲಿಯೂ ಸಹಸ್ರಾರು ಜನರು ಬಹಳ ಕಷ್ಟ ಪಡುತ್ತಿದ್ದರು. 
ಅದನ್ನು ಕಂಡು ಕರುಣಾ ಸಮುದ್ರರಾದ ಶ್ರೀ ಸುಗುಣೇಂದ್ರತೀರ್ಥರು ಕ್ಷಾಮ ನಿವಾರಣೆಯಾಗಿ; ಮಳೆ ಬೆಳೆಗಳಿಂದ ದೇಶವು ಸುಭಿಕ್ಷವಾಗಿಯೂ; ಜನರು ಸುಖವಾಗಿಯೂ ಬಾಳುವಂತಾಗಬೇಕೆಂದು ಶ್ರೀ ಮೂಲರಾಮ - ಶ್ರೀ ದಿಗ್ವಿಜಯರಾಯ - ಶ್ರೀ ಜಯರಾಮ - ಶ್ರೀ ಭಾರತೀಶ - ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರನ್ನು ವಿಶೇಷಾಕಾರವಾಗಿ ತಪಸ್ಸಿನಿಂದ ಸಂತೋಷ ಪಡಿಸಿ; ಶ್ರೀ ಹರಿ ವಾಯು ಗುರುಸಾರ್ವಭೌಮರ ಪ್ರೇರಣೆಯಂತೆ ಶ್ರೀ ಮಠದ ಸಂಪತ್ತನ್ನು ವ್ಯಯ ಮಾಡಿ ನಂಜನಗೂಡಿನ ಜನರೆಲ್ಲರಿಗೂ ಒಂದು ವರ್ಷದ ಕಾಲ ಮೃಷ್ಟಾನ್ನವನ್ನು ದಾನ ಮಾಡಿ ಸಂರಕ್ಷಿಸಿದರು. 
ಒಂದು ವರ್ಷದಲ್ಲಿ ಶ್ರೀ ಶ್ರೀಗಳವರ ತಪಸ್ಸು ಫಲಿಸಿ ದೈವಾನುಗ್ರಹದಿಂದ ಚೆನ್ನಾಗಿ ಮಳೆ ಬೆಳೆಗಳಾಗಿ ಸುಭಿಕ್ಷರಾಗಿ ಸಮಸ್ತ ಜನರೂ ಸುಖ ಶಾಂತಿಯಿಂದ ಬಾಳುವಂತಾಯಿತು. 
ಇದು ಇತಿಹಾಸ ಪ್ರಸಿದ್ಧವಾದ ವಿಷಯವು! 
ತಮ್ಮ ಸಕಲ ಸಂಪತ್ತುಗಳನ್ನೂ ನಾಡಿನ ಜನರಿಗಾಗಿ ಧಾರೆಯೆರಿದ ಮಹಾ ಮಹಿಮಾನ್ವಿತರು ಶ್ರೀ ಸುಗುಣೇಂದ್ರತೀರ್ಥರು.
ಆಶ್ರಮ ಶಿಷ್ಯರು : 
ಸುಪ್ರಜ್ಞೇ೦ದ್ರತೀರ್ಥರು 
ವೇದಾಂತ ಸಾಮ್ರಾಜ್ಯಾಧಿಕಾರ : 
ಕ್ರಿ ಶ 1872 - 1884 
ಆರಾಧನೆ : 
ಮಾರ್ಗಶಿರ ಶುದ್ಧ ಪೌರ್ಣಿಮಾ 
ಬೃಂದಾವನ ಸ್ಥಳ : 
ಚಿತ್ತೂರು 
" ಉಪ ಸಂಹಾರ " 
ಕರುಣಾಸಮುದ್ರರೂ; ದಾನಿಗಳೂ; ಆಪತ್ಕಾಲ ಮಿತ್ರರೂ; ಮೃಷ್ಟಾನ್ನ ಪ್ರದಾತರೂ; ದ್ವೈತ ವಿದ್ಯಾದಾತರೂ; ತಪಸ್ವಿಗಳೂ; ಶ್ರೀ ಹರಿ ವಾಯು ಗುರುರಾಜರ ಅಂತರಂಗ ಭಕ್ತರೂ ಆದ ಶ್ರೀ ಸುಗುಣೇಂದ್ರತೀರ್ಥರು ಮಾರ್ಗಶಿರ ಶುದ್ಧ ಪೌರ್ಣಿಮಾ ತಿಥಿಯಂದು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಬೃಂದಾವನಸ್ಥರಾದರು!! 
ಶ್ರೀ ವರದೇಶವಿಠಲರು.. 
ಅಗಣಿತ ಮಹಿಮ ಮೂಜಗದೊಳು ಪ್ರಖ್ಯಾತ ।
ನಿಗಮಾಗಮಜ್ಞ ಸುಗುಣೇಂದ್ರತೀರ್ಥಾ ।।
by  ಆಚಾರ್ಯ ನಾಗರಾಜು ಹಾವೇರಿ
      ಗುರು ವಿಜಯ ಪ್ರತಿಷ್ಠಾನ
****


No comments:

Post a Comment