Wednesday, 1 May 2019

sukruteendra teertharu nanjangud 1912 matha rayara mutt yati 33 ashwija shukla dashami ಸುಕೃತೀಂದ್ರ ತೀರ್ಥರು






info from sumadhwaseva.com--->

Sri Sukruteendra Theertha
Period – 1903-1912
Vrundavana: Nanjangud
Aradhana – Ashwayuja Shudda Dashami
Ashrama Gurugalu –  Sri Supragnendra Thirtharu
Ashrama Shishyaru – Sri Susheelendra Thirtharu


ಸುವಿದ್ವತ್ಕಮಲೋಲ್ಲಾಸಮಾರ್ತಾಂಡಂ ಸುಗುಣಾಕರಂ
ಸಚ್ಚಾಶಾಸ್ತ್ರಸಕ್ತಹೃದಯಂ ಸುಕೃತೀಂದ್ರಗುರುಂ ಭಜೇ |
सुविद्वत्कमलोल्लासमार्तांडं सुगुणाकरं
सच्चाशास्त्रसक्तहृदयं सुकृतींद्रगुरुं भजे ।
suvidvatkamalōllāsamārtāṁḍaṁ suguṇākaraṁ
saccāśāstrasaktahr̥dayaṁ sukr̥tīṁdraguruṁ bhajē |

**********

" ಶ್ರೀ ಸುಕೃತೀಂದ್ರತೀರ್ಥರು "
ಈದಿನ : 26.10.2020 ಸೋಮವಾರ ಶ್ರೀ ಸುಕೃತೀಂದ್ರತೀರ್ಥರ ಆರಾಧನಾ ಮಹೋತ್ಸವ., ನಂಜನಗೂಡು 
ಶ್ರೀ ವರದೇಶವಿಠಲರು... 
ದೋಷ ವರ್ಜಿತ ಹರಿದಾಸ ಜನರ ಪ್ರಿಯ ।
ಶ್ರೀಶ ಪದಾರ್ಚಕ ಸುಕೃತೀಂದ್ರತೀರ್ಥಾ ।। 
ಶ್ರೀ ವೇಣುಗೋಪಾಚಾರ್ಯರ ಬಾಲ್ಯ ವಿದ್ಯಾಭ್ಯಾಸ ಅವರ ಹಿರಿಯರಲ್ಲೇ ಆಯಿತು. 
ಪ್ರಸಿದ್ಧ ಪಂಡಿತರಾದ ನ್ಯಾಮಗೊಂಡಲು ಶ್ರೀ ಶ್ಯಾಮಾಚಾರ್ಯರಲ್ಲಿ ನ್ಯಾಯಶಾಸ್ತ್ರ; ಆಪ್ತರೂ, ಅನುಬಂಧಿಗಳೂ ಆದ ಹುಲಿ ಶ್ರೀ ಹನುಮಂತಾಚಾರ್ಯರಲ್ಲಿ ವೇದಾಂತ ಶಾಸ್ತ್ರ ವ್ಯಾಸಂಗ ಮಾಡಿ ಚತುಃ ಶಾಸ್ತ್ರ ಪಂಡಿತರೆಂದು ವಿಖ್ಯಾತರಾದ ಸಾತ್ವಿಕ ಸದಾಚಾರ ಸಂಪನ್ನರು. 
ಶ್ರೀ ವೇಣುಗೋಪಾಚಾರ್ಯರು -  ಮುಂದೆ ಶ್ರೀ ರಾಯರ ಮಠದ ಶ್ರೀ ಸುಪ್ರಜ್ಞೇಂದ್ರತೀರ್ಥರಿಂದ ತುರ್ಯಾಶ್ರಮ ಸ್ವೀಕಾರ ಮಾಡಿ " ಶ್ರೀ ಸುಕೃತೀಂದ್ರತೀರ್ಥ " ರೆಂದು ಪ್ರಖ್ಯಾತರಾದರು. 
ಇವರ ಕಾಲದಲ್ಲಿ ಶ್ರೀ ರಾಯರ ಮಠವು ಸರ್ವತೋಮುಖ ಅಭಿವೃದ್ಧಿ ಹೊಂದಿತು. 
ಇವರು " ನ್ಯಾಯಬೋಧಿನೀ ಪರಿಚಯಮ್ " ಯೆಂಬ ಗ್ರಂಥವನ್ನು ರಚಿಸಿದ್ದು, ಇವರ ಕಾಲ ಕ್ರಿ. ಶ. 1903 - 1912. 
ಆಗಿನ ಕಾಲದ ಪ್ರಸಿದ್ಧ ಪಂಡಿತರಾದ ಶ್ರೀಮುಷ್ಣಂ ಗೋಪಾಲಾಚಾರ್ಯರು; ಶ್ರೀ ಸುಬ್ಬರಾಮಾಚಾರ್ಯರು; ಶ್ರೀ ಎಲತ್ತೂರು ಕೃಷ್ಣಾಚಾರ್ಯರು; ತೋತಾದ್ರಿ ಮಠದ ವಿದ್ವಾಂಸರೇ ಮೊದಲಾದವರು ಶ್ರೀ ಶ್ರೀಗಳವರ ವಿದ್ವತ್ತನ್ನು ಮೆಚ್ಚಿದ್ದರು. 
ಆಶ್ವಯುಜ ಶುದ್ಧ ದಶಮೀ ( ವಿಜಯದಶಮೀ ) ಶ್ರೀ ಸುಕೃತೀಂದ್ರತೀರ್ಥರ ಆರಾಧನಾ ಮಹೋತ್ಸವ!! 
ಶ್ರೀ ಸುಕೃತೀಂದ್ರತೀರ್ಥರ ಮೂಲ ವೃಂದಾವನ ನಂಜನಗೂಡಿನಲ್ಲಿದೆ. 
ಶ್ರೀ ಸುಶೀಲೇಂದ್ರತೀರ್ಥರು... 
ಸುವಿದ್ವತ್ಕಮಲೋಲ್ಲಾಸ 
ಮಾರ್ತಾಂಡಂ ಸುಗುಣಾಕರಮ್ ।
ಸಚ್ಚಾಸ್ತ್ರಾಸಕ್ತಹೃದಯಂ 
ಸುಕೃತೀಂದ್ರ ಗುರು೦ಭಜೇ ।।
ಶ್ರೀ ಲಕುಮೀಶಾಂಕಿತ ಕುರುಡಿ ರಾಘವೇಂದ್ರಾಚಾರ್ಯರು., ಮಂತ್ರಾಲಯ...... 
ಶ್ರೀ ಸುಕೃತೀಂದ್ರರ 
ನೀ ಸೇವಿಸೆ ವೈಕುಂಠ ।
ವಾಸುದೇವ ಒಲಿವ ।। ಪಲ್ಲವಿ ।।
ಹೇಸಿ ಭವ ಕ್ಲೇಶ ರಾಶಿ ಬಿಡಿಸಿ ।
ಶ್ರೀ ಸಮೀರರ ಶಾ
ಸ್ತ್ರ ಜ್ಞಾನವಿತ್ತು ।
ದೋಷಿ ಜನರ ಸಂಗ ಬಿಡಿಸುತ ।
ತೋಷದಿಂದಲಿ ಸತತ ರಕ್ಷಿಪ ।। ಅ ಪ ।।
ಮಧ್ವ ಶಾಸ್ತ್ರದ ಶ್ರೀ 
ಉದ್ಧಾಮ ಬುಧರೆನಿಸಿ ।
ಗೆದ್ದು ದುರ್ವಾದಿಗಳ ।
ಮುದ್ದು ವೇಣುಗೋಪಾಲಾರ್ಯರೆನ್ನಿ ।
ಶ್ರದ್ಧೆಯಲಿ ಶ್ರೀ ಸುಪ್ರಜ್ಞೇ೦ದ್ರರ ।
ಪದ್ಮಕರ ಸಂಭೂತರೆನಿಸುತ ।
ಗದ್ದುಗೆಯಲ್ಲಿ ಮೆರೆದು 
ಮಾನ್ಯರಾದ ।। ಚರಣ ।।
ಕ್ಷೇತ್ರ ಶ್ರೀಮುಷ್ಣ ಶ್ರೀರಂಗ 
ಕುಂಭಕೋಣ ।
ಯಾತ್ರಾದಿಗಳ ಚರಿಸಿ ।
ಸೂತ್ರಭಾಷ್ಯ ಸುಧೆಯ ಬೋಧಿಸಿ ।
ಸೂತ್ರನಾಮಕ ಒಲಿಮೆಗಳಿಸಿ ।
ಮೂರ್ತಿ ಮೂಲರಾಮನ್ನ ಅರ್ಚಿಸಿ ।
ಕೀರ್ತಿಯ ಪಡೆದು 
ಮಹಾತ್ಮರಾದ ।। ಚರಣ ।।
ಸಕಲ ವೈಭವದಿಂದ 
ಸುಶೀಲೇಂದ್ರತೀರ್ಥರಿಗೆ ।
ನಿಖಿಳ ವಿಧಿಲಿ ಪಟ್ಟಗಟ್ಟಿ ।
ಸಕಲ ವೈಷ್ಣವ ಮಂತ್ರ ಬೋಧಿಸಿ ।
ಮುಕುತಿಗಾಗಿ ಪಥವ ತೋರಿಸಿ ।
ಸುಖ ಮುನಿಯ ಹೃದಯವಾಸ ಶ್ರೀ -
ಲಕುಮೀಶನ ದಯದಿ 
ಬಾಳೆಂದು ।। ಚರಣ ।। 
 by ಆಚಾರ್ಯ ನಾಗರಾಜು ಹಾವೇರಿ
      ಗುರು ವಿಜಯ ಪ್ರತಿಷ್ಠಾನ
******


No comments:

Post a Comment